Tirupati Temple: ತಿರುಪತಿ ತಿರುಮಲ ದರ್ಶನ ಮಾಡಬೇಕೇ?: ಇಲ್ಲಿವೆ ಮಾಹಿತಿ - Vistara News

ಪ್ರವಾಸ

Tirupati Temple: ತಿರುಪತಿ ತಿರುಮಲ ದರ್ಶನ ಮಾಡಬೇಕೇ?: ಇಲ್ಲಿವೆ ಮಾಹಿತಿ

ಏಳುಮಲೆಗಳ ಮೇಲಿರುವ ಈ ದೇವಾಲಯದಲ್ಲಿ ಪವಡಿಸಿರುವ ಶ್ರೀ ವೆಂಕಟೇಶ್ವರನ ದರ್ಶನ ಈಗ ಅಂಥ ಕಷ್ಟದ್ದೇನಲ್ಲ. ನಿತ್ಯವೂ ಸಾವಿರಗಟ್ಟಲೆ ಭಕ್ತಾದಿಗಳು ತಿರುಪತಿ ದರ್ಶನ ಬಯಸುವುದರಿಂದ ಸುಲಭವಾಗಿ ಎಲ್ಲರಿಗೂ ದರ್ಶನ ಪ್ರಾಪ್ತಿಯಾಗಲು ದೇವಸ್ಥಾನ ಟ್ರಸ್ಟ್‌ ಸಾಕಷ್ಟು ಏರ್ಪಾಡುಗಳನ್ನೂ ಮಾಡಿದೆ.

VISTARANEWS.COM


on

tirupathi balaji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರವಾಸದಲ್ಲಿ ಆಸಕ್ತಿ ಇರಲಿ ಇಲ್ಲದಿರಲಿ, ಬಹಳಷ್ಟು ಮಂದಿಗೆ ಎಲ್ಲಿಗೆ ಹೋಗಲು ಸಾಧ್ಯವಾಗದಿದ್ದರೂ ತಿರುಪತಿಯ ಬಾಲಾಜಿ (Tirupati Temple) ದರ್ಶನವನ್ನಾದರೂ ಮಾಡಿ ಬರಬೇಕೆಂಬ ಆಸೆಯಿರುತ್ತದೆ. ಈಗಷ್ಟೇ ಕೆಲಸಕ್ಕೆ ಸೇರಿ ದುಡಿಯಲು ಶುರು ಮಾಡಿದ ಮಕ್ಕಳಿಗೆ ತಮ್ಮ ಹೆತ್ತವರನ್ನೊಮೆ ತಿರುಪತಿ ದರ್ಶನ ಮಾಡಿಸಿ ಬರುವ ಮೂಲಕ ತಮ್ಮ ಹೆತ್ತವರ, ಹಿರಿಯ ಜೀವಗಳ ಮುಖದಲ್ಲಿ ನಗು ನೋಡುವಾಸೆ ಇರುತ್ತದೆ. ಹಲವರಿಗೆ ಪ್ರವಾಸ, ಧಾರ್ಮಿಕ ಕ್ಷೇತ್ರಗಳ ದರ್ಶನದ ಆಸೆಯಿದ್ದರೂ, ಜೀವನದ ಹಲವಾರು ಒತ್ತಡಗಳ ನಡುವಲ್ಲಿ ವರ್ಷಾನುಗಟ್ಟಲೆ ಪ್ರವಾಸ ಮಾಡಲೂ ಸಾಧ್ಯವಾಗಿರುವುದಿಲ್ಲ. ಮಧ್ಯಮ, ಕೆಳ ಮಧ್ಯಮ ವರ್ಗದ ಮಂದಿ ಜೀವನದ ಜಂಜಡದಲ್ಲಿ ಇಂತಹ ಸಣ್ಣ ಸಣ್ಣ ಖುಷಿಗಳು ಮರೆತೇ ಹೋಗಿರುತ್ತವೆ. ಇಂತಹ ಸಮಯದಲ್ಲಿ ಕಡೇಪಕ್ಷ ತಿರುಪತಿ ಬಾಲಾಜಿ ದರ್ಶನ ಎಂಬುದು ಹಲವರ ಕನಸು. ಹಾಗಾದರೆ ಬನ್ನಿ, ತಿರುಪತಿಗೆ ಹೇಗೆ ಹೋಗಿ ಬರಬಹುದು ಎಂಬುದನ್ನು ನೋಡೋಣ.

ತಿರುಪತಿ ಬಾಲಾಜಿ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು. ವರ್ಷದ ಎಲ್ಲ ಋತುಗಳಲ್ಲಿಯೂ ಜನನಿಬಿಡವಾಗಿ ಇರುವ ದೇವಸ್ಥಾನಗಳಲ್ಲಿಯೂ ಇದು ಪ್ರಮುಖ ಸ್ಥಾನದಲ್ಲಿಯೇ ನಿಲ್ಲುತ್ತದೆ. ಪ್ರತಿದಿನವೂ ತಿರುಪತಿ ಬಾಲಾಜಿಯ ದರ್ಶನಕ್ಕೆ ಬರುವ ಮಂದಿ ಅಂದಾಜು ಸರಾಸರಿ 50,000ದಿಂದ ಒಂದು ಲಕ್ಷದವರೆಗೆ!  ಹೀಗಾಗಿ ಇಷ್ಟು ಅಪಾರ ಸಂಖ್ಯೆಯಲ್ಲಿ ಈ ದೇವಾಲಯದ ದರ್ಶನ ಮಾಡಬಯಸುವ ಭಕ್ತಾದಿಗಳಿಗೆ ದೇವಸ್ಥಾನದ ಟ್ರಸ್ಟ್‌ ಟಿಟಿಡಿ ಸಾಕಷ್ಟು ಸಿದ್ಧತೆಗಳನ್ನೂ, ಸೌಲಭ್ಯಗಳನ್ನೂ ವ್ಯವಸ್ಥೆ ಮಾಡಿದೆ. ಹಾಗಾಗಿ, ಯಾವ ಗಡಿಬಿಡಿ, ಗೊಂದಲಗಳೂ ಇಲ್ಲದಂತೆ ಸಾವಕಾಶವಾಗಿ ದರ್ಶನ ಪಡೆದುಕೊಂಡು ಬರಬಹುದು.

Tirupati

ಆಂಧ್ರಪ್ರದೇಶದ ತಿರುಪತಿ ಎಂಬ ಬೆಟ್ಟ ಪ್ರದೇಶದಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ಈ ಸನ್ನಿಧಿ ಇದೆ. ಏಳುಮಲೆಗಳ ಮೇಲಿರುವ ಈ ದೇವಾಲಯದಲ್ಲಿ ಪವಡಿಸಿರುವ ಶ್ರೀ ವೆಂಕಟೇಶ್ವರನ ದರ್ಶನ ಅಂಥ ಕಷ್ಟದ್ದೇನಲ್ಲ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದಲೂ ಜನರು ಸುಲಭವಾಗಿ ಸಾರ್ವಜನಿಕ ವಾಹನಗಳ ಮೂಲಕವೂ ಬಂದು ದರ್ಶನ ಮಾಡಿಕೊಂಡು ಹೋಗಬಹುದು. ಬಸ್‌, ರೈಲು ಹಾಗೂ ವಿಮಾನ ಸೇವೆಗಳನ್ನು ಹತ್ತಿರದಲ್ಲೇ ಹೊಂದಿರುವುದರಿಂದ ಭಕ್ತಾದಿಗಳಿಗೆ ತಿರುಪತಿ ದರ್ಶನ ಈಗ ಸರಳವಾಗಿದೆ.

ದೇವಸ್ಥಾನ ತಿರುಪತಿ ಪಟ್ಟಣದಿಂದ 22 ಕಿಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಪಯಣಿಸಲು ಸಾಕಷ್ಟು ಜೀಪುಗಳೂ ದೊರೆಯುತ್ತವೆ. ಆಗಾಗ ಬಸ್‌ ಸೌಲಭ್ಯವೂ ಇವೆ. ದೇಶದ ಎಲ್ಲ ಪ್ರಮುಖ ನಗರಗಳಿಂದಲೂ ತಿರುಪತಿಗೆ ಬಸ್‌ ಸೌಲಭ್ಯದ ವ್ಯವಸ್ಥೆ ಇದೆ. ರೈಲಿನಲ್ಲಿ ತಿರುಪತಿಗೆ ಪ್ರಯಾಣ ಬಯಸುವವರಿಗೂ ಚೆನ್ನೈ, ಬೆಂಗಳೂರು, ಮಧುರೈ, ವಿಶಾಖಪಟ್ಟಣ, ಮುಂಬೈ ಮತ್ತಿತರ ದೇಶದ ಪ್ರಮುಖ ನಗರಗಳಿಂದಲೂ ಸಂಪರ್ಕ ಕಲ್ಪಿಸುತ್ತದೆ. ತಿರುಪತಿ ಬಾಲಾಜಿ ದೇವಸ್ಥಾನ ತಿರುಪತಿ ರೈಲ್ವೇ ಸ್ಟೇಷನ್‌ನಿಂದ 22 ಕಿಮೀ ದೂರದಲ್ಲಿದೆ. ಅಷ್ಟೇ ಅಲ್ಲ, ಸಿಕಂದರಾಬಾದ್‌ನಿಂದ ನೂತನ ವಂದೇ ಭಾರತ್‌ ರೈಲು ಕೂಡ ತಿರುಪತಿಗೆ ಸಂಪರ್ಕ ಕಲ್ಪಿಸಿದೆ. ಇನ್ನು, ವಿಮಾನದಲ್ಲಿ ಹೋಗುವವರಿಗೆ ತಿರುಪತಿ ಏರ್‌ಪೋರ್ಟ್‌/ ರೇಣಿಗುಂಟ ಏರ್‌ಪೋರ್ಟ್‌ ಸೌಲಭ್ಯವೂ ಇದೆ.

ನಿತ್ಯವೂ ಸಾವಿರಗಟ್ಟಲೆ ಭಕ್ತಾದಿಗಳು ತಿರುಪತಿ ದರ್ಶನ ಬಯಸುವುದರಿಂದ ಸುಲಭವಾಗಿ ಎಲ್ಲರಿಗೂ ದರ್ಶನ ಪ್ರಾಪ್ತಿಯಾಗಲು ದೇವಸ್ಥಾನ ಟ್ರಸ್ಟ್‌ ಸಾಕಷ್ಟು ಏರ್ಪಾಡುಗಳನ್ನೂ ಮಾಡಿದೆ. ವಿವಿಧ ವಿಭಾಗಗಳ ದರ್ಶನ ಸೇವೆಗಳು ಲಭ್ಯವಿದ್ದು, ಅವರವರ ಅನುಕೂಲಕ್ಕೆ ಅನುಗುಣವಾಗಿ ದೇವರ ದರ್ಶನ ಮಾಡಬಹುದು. ಇವುಗಳ ಪೈಕಿ ಧರ್ಮ ದರ್ಶನ, ಶೀಘ್ರದರ್ಶನ, ಸರ್ವದರ್ಶನ ಹಾಗೂ ದಿವ್ಯ ದರ್ಶನ ಎಂಬ ನಾಲ್ಕು ಬಗೆಯ ದರ್ಶನಗಳಿವೆ. ಭಾರತದ ಮೂಲೆ ಮೂಲೆಯಲ್ಲಿರುವ ಟಿಟಿಡಿ ಕೌಂಟರ್‌ಗಳ ಮೂಲಕ ಹಾಘೂ ಆನ್‌ಲೈನ್‌ ಮೂಲಕ ದರ್ಶನವನ್ನು ನಿಮಗೆ ಬೇಕಾದ ದಿನಕ್ಕೆ ಕಾದಿರಿಸಬಹುದು. ದೇವರ ದರ್ಶನಕ್ಕೆ ಕಡಿಮೆ ಎಂದರೂ ಮೂರು ಗಂಟೆಗಳು ಹಿಡಿಯಬಹುದಾಗಿದ್ದು, ಹೆಚ್ಚೆಂದರೆ 10 ಗಂಟೆಗಳೂ ಆಗಬಹುದು. ಹಾಗಾಗಿ ಒಂದು ದಿನವಿಡೀ ದರ್ಶನಕ್ಕೆ ಮೀಸಲಿಡುವುದು ಉತ್ತಮ. 

ಇದನ್ನೂ ಓದಿ: Tirupati Temple: ಮಾರ್ಚ್ 1ರಿಂದ ತಿರುಪತಿ ದೇಗುಲದಲ್ಲಿ ಫೇಸ್‌ ರಿಕಗ್ನೇಷನ್ ವ್ಯವಸ್ಥೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Travel Time: ಸಮುದ್ರದಲ್ಲೇ ಜೀವನ; ಹೊಸ ಬಗೆಯ ಅಲೆಮಾರಿ ಪ್ರವಾಸಿ ದಂಪತಿ ಇವರು!

ಈ ಜೋಡಿ ಸಮುದ್ರದಲ್ಲೇ ಜೀವಿಸುವ ಹೊಸ ಅಪರೂಪದ (Travel Time) ಆಯ್ಕೆಯನ್ನೇ ತನ್ನ ಜೀವನವನ್ನಾಗಿ ಮಾಡಿಕೊಂಡು, ಪ್ರವಾಸದ ಸಾಧ್ಯತೆಗಳನ್ನು ಇನ್ನೂ ವಿಸ್ತರಿಸಿದೆ. ಈ ಕುರಿತ ಕುತೂಹಲಕಾರಿ ವರದಿ ಇದು.

VISTARANEWS.COM


on

Monica Brzoska and her husband, Jorell Conley
Koo

ಎಲ್ಲರಂತೆ ಬೆಳಗ್ಗೆ ಎದ್ದು ಒಂಬತ್ತಕ್ಕೆ ಕಚೇರಿಗೆ ಹೋಗಿ ರಾತ್ರಿ ಮನೆಗೆ ಬರುವ ಏಕತಾನತೆಯ (Travel Time) ವೃತ್ತಿಯಿಂದ ಬೇಸತ್ತು ಇತ್ತೀಚೆಗೆ ಯುವಜನತೆ, ಬೇರೆಯೇ ಮಾದರಿಯ ವೃತ್ತಿಗಳತ್ತ ಹೊರಳುವುದನ್ನು ನೀವು ಕೇಳಿರಬಹುದು. ತಮ್ಮ ಇಷ್ಟ, ಆಸಕ್ತಿಗಳನ್ನೇ ವೃತ್ತಿಯನ್ನಾಗಿ, ಅಥವಾ ಆಸಕ್ತಿಯ ಜೊತೆಜೊತೆಗೇ ವೃತ್ತಿಯನ್ನು ಕೊಂಡೊಯ್ಯಬಲ್ಲ ಆಯ್ಕೆಗಳನ್ನು ಇತ್ತೀಚೆಗೆ ಅನೇಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಊರೂರು ಸುತ್ತುತ್ತಾ, ಜೊತೆಗೆ ಕೆಲಸ ಮಾಡುತ್ತಾ, ಒಂದು ನಿರ್ದಿಷ್ಟ ಸ್ಥಳಕ್ಕೆ ಅಂಟಿಕೊಳ್ಳದೇ, ಅಲೆಮಾರಿತನವನ್ನೇ ಜೀವನವನ್ನಾಗಿ ಆಯ್ಕೆ ಮಾಡಿ ಖುಷಿಯಿಂದ ಇರುವ ಕತೆಗಳು ಇಂದು ಸಾಮಾನ್ಯ. ಆದರೆ, ಇಲ್ಲೊಂದು ಇನ್ನೂ ಆಸಕ್ತಿಕರ ಕತೆ ಇದೆ. ಈ ಜೋಡಿ, ಸಮುದ್ರದಲ್ಲೇ ಜೀವಿಸುವ ಹೊಸ ಅಪರೂಪದ ಆಯ್ಕೆಯನ್ನೇ ತನ್ನ ಜೀವನವನ್ನಾಗಿ ಮಾಡಿಕೊಂಡು, ಪ್ರವಾಸದ ಸಾಧ್ಯತೆಗಳನ್ನು ಇನ್ನೂ ವಿಸ್ತರಿಸಿದೆ.

Travel Time

ಹೊಸ ಜೀವನಶೈಲಿ

ಅಮೆರಿಕದ ಮೋನಿಕಾ ಬ್ರೋಸ್ಕಾ ಹಾಗೂ ಆಕೆಯ ಪತಿ ಜೋರೆಲ್‌ ಕೋನ್‌ಲೇ ಎಂಬ ಜೋಡಿ, ಈ ಬಗೆಯ ಹೊಸ ಜೀವನಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಇವರು ತಮ್ಮ ಏಕತಾನತೆಯ ಉದ್ಯೋಗವನ್ನು ಬಿಟ್ಟು ಸಮುದ್ರವನ್ನೇ ಮನೆಯನ್ನಾಗಿಸಿದ್ದಾರೆ. ಕ್ರೂಸ್‌ ಹಡಗಿನಲ್ಲೇ ತಮ್ಮ ಜೀವನ ನಿರ್ವಹಿಸುತ್ತಿದ್ದು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಐಷಾರಾಮಿ ಜೀವನ

ಇವರಿಬ್ಬರ ಜೀವನಶೈಲಿ ಬಹಳ ಐಷಾರಾಮಿ. ಪ್ರತಿದಿನವೂ ಹಡಗಿನಲ್ಲೇ ಈಜುಕೊಳದ ಬಳಿ ಆರಾಮವಾಗಿ ಕೂತು, ಈಜುತ್ತಾ, ಸ್ಪಾ ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಾರೆ! ಅಷ್ಟೇ ಅಲ್ಲ, ಹಲವು ತಿಂಗಳುಗಳಿಂದ ಈಕೆ ಕಿಚನ್‌ಗೆ ಹೋಗಿಲ್ಲವಂತೆ. ದಿನವೂ ಎದ್ದು ತನ್ನ ಮನೆಯಂತೆ ಇಲ್ಲಿ ಕಿಚನ್‌ಗೆ ಹೋಗಿ ಅಡುಗೆ ಮಾಡುವ ಕೆಲಸವಿಲ್ಲ. ಕ್ರೂಸ್‌ನ ಶೇಫ್‌ಗಳು ಅಡುಗೆ ಮಾಡಿ ಬಡಿಸುವಾಗ ಆ ಚಿಂತೆ ಯಾಕೆ ಎನ್ನುತ್ತಾರೆ ಮೋನಿಕಾ. ಬಟ್ಟೆ ತೊಳೆಯುವುದು, ಪಾತ್ರೆ ತೊಳೆಯುವುದು ಸೇರಿದಂತೆ, ಯಾವೊಂದು ಕೆಲಸವೂ ಇಲ್ಲದೆ, ದಿನ ಕಳೆಯುತ್ತಿದ್ದಾರೆ.

ಅಡುಗೆ ಕಾರ್ಯ

ಪ್ರತಿದಿನ ಅಡುಗೆ ಮಾಡಿ ಬಡಿಸುತ್ತಾರೆ, ಹಡಗಿನ ಕೆಲಸದ ಮಂದಿ ನನ್ನ ಬೆಡ್‌ನ ಬಟ್ಟೆಗಳನ್ನು ನಿತ್ಯವೂ ಬದಲಿಸಿಕೊಡುತ್ತಾರೆ. ಕ್ಯಾಬಿನ್‌ ಸ್ವಚ್ಛಗೊಳಿಸುತ್ತಾರೆ. ಅಡುಗೆಯೂ ಅವರೇ ಮಾಡಿ ಬಡಿಸುತ್ತಾರೆ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಇತ್ಯಾದಿ ಕೆಲಸಗಳೂ ಇಲ್ಲ ಎಂದು ಹೇಳುವ ಈಕೆ, ಇದೊಂದು ಬಗೆಯ ವಿಚಿತ್ರ ಸ್ವಾತಂತ್ರ್ಯ ನೀಡುತ್ತಿದೆ. ಆದರೆ, ಹೊರ ಜಗತ್ತಿಗೆ ಐಷಾರಾಮಿಯಾಗಿ ಕಾಣುವ ಈ ಬಗೆಯ ಬದುಕಿನಲ್ಲೂ ಸಮಸ್ಯೆಗಳು, ಸವಾಲುಗಳು ಸಾಕಷ್ಟಿವೆ ಎನ್ನುತ್ತಾರೆ. ಕುಟುಂಬದಿಂದ ದೂರ ಇರುವಾಗ, ಆಗಾಗ ಕುಟುಂಬದ ನೆನಪು ಕಾಡುತ್ತದೆ. ಇವೆಲ್ಲ ಇದ್ದಾಗ್ಯೂ ಈ ಜೀವನದಲ್ಲಿ ಒಂದು ಬಗೆಯ ಖುಷಿಯಿದೆ ಎನ್ನುತ್ತಾರೆ ಅವರು.

ಹೇಗೆ ಸಾಧ್ಯ?

ಹಾಗಾದರೆ, ಇವೆಲ್ಲ ಸಾಧ್ಯವಾಗುವುದು ಹೇಗೆ? ಇಂತಹ ಜೀವನಕ್ಕೆ ದುಡ್ಡು ಹೇಗೆ ಎಂದರೆ, ಈ ಮೊದಲು ಟೀಚರ್‌ ಆಗಿ ಕೆಲಸ ಮಾಡಿ ಅದಕ್ಕೆ ವಿದಾಯ ಹೇಳಿ ಬಂದಿರುವ ಮೋನಿಕಾ ಹೇಳುತ್ತಾರೆ, ವಾರ್ಷಿಕವಾಗಿ ಹೀಗೆ ಕ್ರೂಸ್‌ನಲ್ಲಿರುವ ನಮ್ಮ ಜೀವನಶೈಲಿಗೆ ನಮಗೆ ಸುಮಾರು 10,000 ಡಾಲರ್‌ಗಳು ಖರ್ಚಾಗುತ್ತವೆ. ಕ್ರೂಸ್‌ನಿಂದ ಸಾಕಷ್ಟು ಡಿಸ್ಕೌಂಟ್‌ ಕೂಡ ಸಿಕ್ಕಿರುವುದರಿಂದ ವರ್ಕೌಟ್‌ ಆಗುತ್ತಿದೆ ಎನ್ನುತ್ತಾರೆ.

ಕೋವಿಡ್‌ ವೇಳೆ ಉಳಿತಾಯ

ಕೋವಿಡ್‌ ಸಮಯದಲ್ಲಿ ಕೆಲಸ ಮಾಡಿ ಉಳಿತಾಯ ಮಾಡಿದ ಹಣದಲ್ಲಿ ನಾವಿಬ್ಬರೂ ಎಂಟು ತಿಂಗಳ ಕ್ರೂಸ್‌ ಅನ್ನು ಬುಕ್‌ ಮಾಡಿದೆವು. ಇದ್ದುದರಲ್ಲಿ ಅತ್ಯಂತ ಕಡಿಮೆ ದರದ ಕ್ರೂಸ್‌ ಕ್ಯಾಬಿನ್‌ ಅನ್ನು ನಾವು ಆಯ್ಕೆ ಮಾಡಿಕೊಂಡೆವು. ಇದಕ್ಕೆ 9,989 ಡಾಲರ್‌ ನೀಡಿದ್ದೆವು ಎನ್ನುತ್ತಾರೆ.
ಅಷ್ಟೇ ಅಲ್ಲ, ಇವರ ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು ಬಂದಿರುವ ಇವರು, ಹಡಗಿನಲ್ಲಿ ದಿನ ಕಳೆಯುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ನಿತ್ಯವೂ ಅದ್ಭುತ ಜಾಗಗಳಿಗೆ ಪಯಣಿಸುತ್ತಾ, ಪ್ರವಾಸದ ಸುಖ, ಸಾಹಸ, ಇತ್ಯಾದಿಗಳೆಲ್ಲವನ್ನೂ ಅನುಭವಿಸುತ್ತಿದ್ದು, ಜೀವನದಲ್ಲಿ ಇಂತಹ ಅನುಭವಗಳು ಬೇಕು ಎನ್ನುತ್ತಾರೆ.

Continue Reading

ದಕ್ಷಿಣ ಕನ್ನಡ

Pilikula Zoo : ಪಿಲಿಕುಳ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡ ಬೃಹತ್ ಕಾಳಿಂಗ‌ ಸರ್ಪ!

Mangaluru Pilikula Zoo: ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ಬೃಹತ್ ಕಾಳಿಂಗ‌ ಸರ್ಪವೊಂದು (King Cobra) ತಪ್ಪಿಸಿಕೊಂಡು ರಸ್ತೆ ದಾಟಿ ವಿಜ್ಞಾನ ಕೇಂದ್ರ ದತ್ತ ಸಾಗಿದ ಘಟನೆ ನಡೆದಿದೆ.

VISTARANEWS.COM


on

By

Pilikula Biological Park Cobra
Koo

ಮಂಗಳೂರು: ಮಂಗಳೂರಿನ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದಿಂದ (Pilikula Zoo) ಬೃಹತ್ ಕಾಳಿಂಗ‌ ಸರ್ಪವೊಂದು (King Cobra) ತಪ್ಪಿಸಿಕೊಂಡಿದೆ. ಜೈವಿಕ ಉದ್ಯಾನವನದ ಟಿಕೆಟ್ ಕೌಂಟರ್ ಬಳಿ ಬಂದ ಕಾಳಿಂಗ‌ ಸರ್ಪವು ರಸ್ತೆ ದಾಟಿ ವಿಜ್ಞಾನ ಕೇಂದ್ರ ದತ್ತ ಸಾಗಿದೆ.

ಟಿಕೆಟ್‌ ಕೌಂಟರ್‌ ಬಳಿ ಬಂದ ಕಾಳಿಂಗ‌ ಸರ್ಪವನ್ನು ಕಂಡೊಡನೆ ಸಿಬ್ಬಂದಿ ಹಾಗೂ ಪ್ರವಾಸಕ್ಕೆ ಬಂದಿದ್ದ ಜನರು ಹೌಹಾರಿದರು. ಅಧಿಕಾರಿಗಳ ನಿರ್ಲಕ್ಷದಿಂದಲೇ ಕಾಳಿಂಗ ಸರ್ಪ ತಪ್ಪಿಸಿಕೊಂಡಿದೆ ಎಂಬ ಆರೋಪಗಳಿವೆ. ಸದ್ಯ ಕಾಳಿಂಗ‌ ಸರ್ಪ ಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: Elephant Attack : ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕೊಂದ ಒಂಟಿ ಸಲಗ

ಕಾಳಿಂಗ ಸರ್ಪ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣ

ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನವು 2004ರಲ್ಲಿ ಉದ್ಘಾಟನೆಗೊಂಡಿತ್ತು. ಪಿಲಿಕುಳ ಮೃಗಾಲಯ ಸೇರಿ ಪಿಲಿಕುಳದ ಜೈವಿಕ ಉದ್ಯಾನ, ಲೇಕ್‌ ಗಾರ್ಡನ್‌, ಸಂಸ್ಕೃತಿ ಗ್ರಾಮ ಹಾಗೂ ಗುತ್ತು ಮನೆ ಎಲ್ಲವೂ ಪ್ರವಾಸಿಗರ ಗಮನ ಸೆಳೆದಿದೆ.

ಪ್ರಾಣಿಗಳ ವಂಶಾಭಿವೃದ್ಧಿಯಲ್ಲಿ ದೇಶದ 17 ಮೃಗಾಲಯಗಳಲ್ಲಿ ಪಿಲಿಕುಳ ಮೃಗಾಲಯವು ಮೊದಲ ಸ್ಥಾನದಲ್ಲಿದೆ. ಪಿಲಿಕುಳ ಜೈವಿಕ‌ ಉದ್ಯಾನವನದಲ್ಲಿ 120ಕ್ಕೂ ಹೆಚ್ಚು ವಿವಿಧ ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 40 ಪ್ರಾಣಿಪಕ್ಷಿಗಳು ಅಳಿವಿನಂಚಿನಲ್ಲಿರುವ ಜೀವಿಗಳಾಗಿವೆ. ಇತರ ಮೃಗಾಲಯಗಳಿಗೆ ಹೋಲಿಸಿದರೆ ಇಲ್ಲಿ ಹುಲಿ, ಚಿರತೆ, ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ. ಅದರಲ್ಲಿಯೂ ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಇಲ್ಲಿ ಮಾತ್ರ ಆಗುತ್ತಿದೆ. ಕಾಳಿಂಗ ಸರ್ಪವನ್ನು ವೈಜ್ಞಾನಿಕವಾಗಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಈಗಾಗಲೇ 180 ಮರಿಗಳಾಗಿದೆ. ಹೆಚ್ಚುವರಿ ಕಾಳಿಂಗ ಮರಿಗಳನ್ನು ಕಾಡಿಗೆ ಬಿಡಲಾಗಿದೆ. ಸಂತಾನಾಭಿವೃದ್ಧಿ ಹೆಚ್ಚಲು ಪಿಲಿಕುಳದಲ್ಲಿರುವ ವಾತವರಣ, ಆರೈಕೆ ಮುಖ್ಯವಾಗಿದೆ. ಇಲ್ಲಿ ಅವುಗಳಿಗೆ ಕಾಡಿನಲ್ಲಿ ಇರುವ ವಾತವರಣ ನಿರ್ಮಾಣ ಮಾಡಲಾಗಿದೆ.

ಇತ್ತೀಚೆಗೆ ಅಳಿವಿನಂಚಿನಲ್ಲಿರುವ ತೋಳಗಳು ಪಿಲಿಕುಳ ಉದ್ಯಾನವನಕ್ಕೆ ಸೇರ್ಪಡೆಯಾಗಿತ್ತು. ಪ್ರಾಣಿ ವಿನಮಯ ಯೋಜನೆ ಮೂಲಕ ಆಂಧ್ರದ ವಿಶಾಖಪಟ್ಟಣದ ಮೃಗಾಲಯದಿಂದ ತರಿಸಲಾಗಿತ್ತು. ಹೊಸ ಜಗತ್ತಿನ ಮಂಗಗಳೆಂದು ಕರೆಯುವ ನಾಲ್ಕು ಜತೆ ಅಳಿಲು ಮಂಗವು ಇಲ್ಲಿವೆ. ಮಧ್ಯ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರವಾಸ

Summer Travel Tips: ಬೇಸಿಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡಬೇಕೇ? ಇಲ್ಲಿವೆ ನೋಡಿ ಪರ್ಫೆಕ್ಟ್‌ ತಾಣಗಳು!

ಶಾಂತವಾದ, ತಂಪಾದ ವಿದೇಶೀ (Summer Travel Tips) ನೆಲದಲ್ಲೊಂದಿಷ್ಟು ದಿನ ಸುತ್ತು ಹಾಕಿ ಬರುವ ಆಸಕ್ತಿಯಿರುವ ಮಂದಿಗೆ ಟಾಪ್‌ ಐದು ಜಾಗಗಳು ಇಲ್ಲಿವೆ.

VISTARANEWS.COM


on

Summer Travel
Koo

ಬೇಸಿಗೆ ಬಂದಾಕ್ಷಣ (Summer Travel Tips) ಪ್ರವಾಸಗಳ ಸುಗ್ಗಿ. ಬೇಸಿಗೆಯಲ್ಲಿ ಬಿಸಿಲ ಝಳವನ್ನು ತಪ್ಪಿಸಿ, ನಿತ್ಯದ ಅದೇ ಜಂಜಾಟವನ್ನು ಮರೆತು ಒಂದಿಷ್ಟು ದಿನ ಎಲ್ಲಾದರೂ ಹೋಗಿ ಬರೋಣ ಎಂದು ಎಲ್ಲರಿಗೂ ಅನಿಸುವುದುಂಟು. ಮಕ್ಕಳು ಮರಿಗಳಿರುವ ಹೆತ್ತವರಿಗೆ ಬೇಸಿಗೆ ರಜೆಯಲ್ಲಿ ಎಲ್ಲಾದರೂ ಹೋಗಿ ಬರುವ ತವಕ. ಹೀಗೆ ಬಹುತೇಕ ಎಲ್ಲರೂ ಪ್ರವಾಸ ಬಯಸುವ ಕಾಲ ಎಂದರೆ ಅದು ಬೇಸಿಗೆ ಕಾಲ. ಇಂಥ ಬೇಸಿಗೆಯಲ್ಲಿ ವಿದೇಶೀ ಪ್ರವಾಸವೂ ಕೂಡ ಸಾಕಷ್ಟು ಮಂದಿಯ ಕನಸು. ಶಾಂತವಾದ, ತಂಪಾದ ವಿದೇಶೀ ನೆಲದಲ್ಲೊಂದಿಷ್ಟು ದಿನ ಸುತ್ತು ಹಾಕಿ ಬರುವ ಆಸಕ್ತಿಯಿರುವ ಮಂದಿಗೆ ಟಾಪ್‌ ಐದು ಜಾಗಗಳು ಇಲ್ಲಿವೆ. ಇವೆಲ್ಲವೂ ಬೇಸಿಗೆಯಲ್ಲಿ ಹೋಗಿ ಬರಬಹುದಾದ ಪರ್ಫೆಕ್ಟ್‌ ತಾಣಗಳು.

Zermatt, Switzerland

ಝರ್ಮಾಟ್‌, ಸ್ವಿಜರ್‌ಲ್ಯಾಂಡ್

ಝರ್ಮಾಟ್‌ ಎಂಬ ಪುಟ್ಟ ಪಟ್ಟಣ ಸ್ವಿಜರ್‌ಲ್ಯಾಂಡಿನ ಆಲ್ಫ್ಸ್‌ ಪರ್ವತ ಶ್ರೇಣಿಗಳ ಮಧ್ಯದಲ್ಲಿದೆ. ಹಾಗಾಗಿಯೇ ಈ ಪಟ್ಟಣ ಸ್ಕೀಯಿಂಗ್‌, ಚಾರಣ, ಕೇಬಲ್‌ ಕಾರ್‌ ಪಯಣ ಸೇರಿದಂತೆ ಹಲವು ಸಾಹಸಮಯ ಚಟುವಟಿಕೆಗಳಿಗೆ ಪ್ರಸಿದ್ಧ ತಾಣ. ಮನಮೋಹಕ ಹುಲ್ಲುಗಾವಲು, ಹಿಮಪರ್ವತ ಸಾಲು, ಪಟ್ಟಣದ ಜೀವನಕ್ರಮ, ಸುಮ್ಮನೆ ನಡೆಯಲು ಬೇಕಾದಷ್ಟು ಜಾಗ ಎಲ್ಲವೂ ಈ ಪಟ್ಟಣವನ್ನು ಪ್ರವಾಸಿಗರ ಕನಸಿನ ತಾಣವನ್ನಾಗಿಸಿದೆ. ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ಇಲ್ಲಿಗೆ ಭೇಟಿ ಕೊಡಲು ಪ್ರಶಸ್ತ ಸಮಯ. ಝೂರಿಚ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಜಿನೀವಾ ವಿಮಾನ ನಿಲ್ದಾಣದಿಂದ ಇಲ್ಲಿಗೆ ರೈಲಿನಲ್ಲಿ ಹೋಗಬಹುದು. ವೆಚ್ಚ (ಉಳಿದುಕೊಳ್ಳಲು ಹಾಗೂ ಊಟೋಪಚಾರ): ಸುಮಾರು 1.8 ಲಕ್ಷ ರೂಪಾಯಿಗಳು (ಒಂದು ವಾರದ ಪ್ರವಾಸಕ್ಕೆ)

Bali, Indonesia

ಬಾಲಿ, ಇಂಡೋನೇಷ್ಯಾ

ಹನಿಮೂನಿಗರ ಸ್ವರ್ಗ ಎಂದೇ ಪ್ರಸಿದ್ಧವಾಗಿರುವ ಬಾಲಿ ಬೇಸಿಗೆಯಲ್ಲಿ ಪಯಣಿಸಬಹುದಾದ ಅತ್ಯಂತ ಸುಂದರ ತಾಣ. ಇಂಡೋನೇಷ್ಯಾದ ಪ್ರಕೃತಿ ಸೌಂದರ್ಯ, ದೇವಾಲಯಗಳು, ಸಾಂಸ್ಕೃತಿ ಉತ್ಸವಗಳು ಎಲ್ಲವೂ ಪ್ರವಾಸಿಗರ ಕಣ್ಣಿಗೆ ಹಬ್ಬ. ಸಾವಿರಾರು ಮಂದಿ ಇಲ್ಲಿನ ಸ್ಪಾ ಟ್ರೀಟ್‌ಮೆಂಟ್‌ಗಳಿಗಾಗಿಯೂ ಬರುತ್ತಾರೆ. ಬಾಲಿ ಸಫಾರಿ, ಮರೈನ್‌ ಪಾರ್ಕ್‌ ಭೇಟಿ, ಬಗೆಬಗೆಯ ಜಲಕ್ರೀಡೆಗಳು ಇಲ್ಲಿನ ಪ್ರವಾಸದ ಪ್ರಮುಖ ಆಕರ್ಷಣೆಗಳು. ಮೇ ತಿಂಗಳಿಂದ ಜುಲೈವರೆಗೆ ಇಲ್ಲಿಗೆ ಭೇಟಿ ಕೊಡಲು ಸಕಾಲ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಟ 35,000 ರೂಪಾಯಿಗಳು ಖರ್ಚಾಗಬಹುದು.

Pokhara, Nepal

ಪೊಖಾರಾ, ನೇಪಾಳ

ನೇಪಾಳದ ಅದ್ಭುತ ಸೌಂದರ್ಯದ ಊರುಗಳಲ್ಲಿ ಪೊಖಾರಾ ಕೂಡಾ ಒಂದು. ಇಲ್ಲಿಂದ ಕಾಣುವ ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಬೌದ್ಧಸ್ತೂಪಗಳು, ದೇವಾಲಯಗಳು ಹೀಗೆ ನೇಪಾಳದ ಸಂಸ್ಕೃತಿಯನ್ನು ಕಾಣಲು ಪೊಖಾರಾ ಉತ್ತಮ ಜಾಗ. ಇಲ್ಲಿನ ಪ್ಯೂ ಸರೋವರದಲ್ಲಿ ಬೋಟಿಂಗ್, ಮಚುಪುಚರೇ ಶಿಖರ ದರ್ಶನ, ಝಿಪ್‌ ಲೈನಿಂಗ್‌, ಹಿಮಾಲಯದಲ್ಲಿ ಚಾರಣ, ಬಂಜೀ ಜಂಪಿಂಗ್ ಇತ್ಯಾದಿಗಳನ್ನೂ ಸಮಯವಿದ್ದರೆ ಮಾಡಬಹುದು. ಏಪ್ರಿಲ್‌ನಿಂದ ಜೂನ್‌ ತಿಂಗಳಲ್ಲಿ ಇಲ್ಲಿಗೆ ಭೇಟಿ ಕೊಡಬಹುದು.‌ ಒಬ್ಬರಿಗೆ ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಸುಮಾರು ಕನಿಷ್ಠ 10,000 ರೂಪಾಯಿಗಳು ಖರ್ಚಾಗಬಹುದು.

Hamburg, Germany

ಹ್ಯಾಂಬರ್ಗ್‌, ಜರ್ಮನಿ

ಜರ್ಮನಿಯ ಹ್ಯಾಂಬರ್ಗ್‌ ನಗರ ಪ್ರಸಿದ್ಧ ಬೇಸಿಗೆಯ ಪ್ರವಾಸೀ ತಾಣಗಳ ಪೈಕಿ ಒಂದಾಗಿದೆ. 19ನೇ ಶತಮಾನದಲ್ಲಿ ನಿರ್ಮಾಣವಾದ ಈ ನಗರದ ವಾಸ್ತುಶಿಲ್ಪ, ಬೀದಿಗಳು, ಸಂಸ್ಕೃತಿ ಎಲ್ಲವೂ ಕೂಡಾ ಹೊಸ ಪರಿಚಯವನ್ನೇ ಮಾಡಿಸುತ್ತದೆ. ಮುಖ್ಯವಾಗಿ ಇಲ್ಲಿನ ಬೀಯರ್‌ಗಳು, ಅವುಗಳನ್ನು ತಯಾರು ಮಾಡುವ ಮನೆಗಳು, ಉದ್ಯಮ ಎಲ್ಲವೂ ನೋಡಬೇಕಾದಂಥದ್ದೇ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 52,000 ರೂಪಾಯಿಗಳು ಖರ್ಚಾಗಬಹುದು.

Whistler, Canada

ವಿಸ್ಲರ್‌, ಕೆನಡಾ

ಸಮುದ್ರ ತೀರದ ಈ ಪಟ್ಟಣ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವ ಮಂದಿಗೆ ಹೇಳಿ ಮಾಡಿಸಿದ ಪಟ್ಟಣ. ಬೆಟ್ಟಗುಡ್ಡಗಳಲ್ಲಿ ಚಾರಣ, ವನ್ಯಧಾಮಗಳಲ್ಲಿ ಸಫಾರಿ, ಕಲೆ ಸಂಸ್ಕೃತಿಗಳ ಪರಿಚಯ ಇತ್ಯಾದಿಗಳನ್ನು ನೋಡಿ ಅನುಭವಿಸಲು ಇಷ್ಟವಿರುವ ಮಂದಿ ಈ ಊರನ್ನು ತುಂಬಾ ಇಷ್ಟಪಡಬಹುದು. ಜೂನ್‌ನಿಂದ ಆಗಸ್ಟ್‌ ತಿಂಗಳ ಸಮಯ ಇಲ್ಲಿಗೆ ಭೇಟಿ ಕೊಡಲು ಅತ್ಯಂತ ಪ್ರಶಸ್ತ. ಒಂದು ಶಿಖರದಿಂದ ಇನ್ನೊಂದಕ್ಕೆ ಇರುವ ಗೊಂಡೋಲಾ ರೈಡ್‌, ಆರ್ಟ್‌ ಮ್ಯೂಸಿಯಂಗಳು, ಪುರಾತನ ಕಟ್ಟ್ಡಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಇಲ್ಲಿ ಸಮಯ ಕಳೆಯಬಹುದು. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 60,000 ರೂಪಾಯಿಗಳು ಖರ್ಚಾಗಬಹುದು.

Continue Reading

ಪ್ರಮುಖ ಸುದ್ದಿ

Insurance Claim : ಕಾರಿಗೆ ಆಫ್ಟರ್ ಮಾರ್ಕೆಟ್​ ಆಕ್ಸೆಸರಿ ಹಾಕಿಸುತ್ತೀರಾ? ಗಾಡಿಗೇನಾದರೂ ಆದರೆ ಇನ್ಶುರೆನ್ಸ್​​ ಸಿಗುವುದಿಲ್ಲ!

Insurance Claim : ಕಾರುಗಳಿಗೆ ಆಫ್ಟರ್ ಮಾರ್ಕೆಟ್ ಆಕ್ಸೆಸರಿಗಳನ್ನು ಹಾಕಿ ತೊಂದರೆ ಆದರೆ ಅದಕ್ಕೆ ಉತ್ಪಾದಕರು ಹಾಗೂ ವಿಮಾ ಕಂಪನಿ ಹೊಣೆಗಾರಿಕೆ ವಹಿಸುವುದಿಲ್ಲ.

VISTARANEWS.COM


on

Thar Jeep
Koo

ಬೆಂಗಳೂರು: ಭಾರತದಲ್ಲಿ ವಾಹನಗಳಿಗೆ ಬೆಂಕಿ ಬೀಳುವ ಘಟನೆಗಳ ಸಾಮಾನ್ಯವಾಗುತ್ತಿವೆ. ಅದಕ್ಕೆ ನಾನಾ ಕಾರಣಗಳಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ವರದಿಗಳನ್ನು ನಾವು ಹೆಚ್ಚಾಗಿ ನೋಡುವುದಾದರೂ ಪೆಟ್ರೋಲ್​ ವಾಹನಗಳೂ ಬೆಂಕಿಗೆ ಆಹುತಿಯಾದ ಸಾಕಷ್ಟು ಪ್ರಕರಣಗಳಿವೆ. ಬೆಂಕಿ ಬಿದ್ದಾಗ ಸಾಮಾನ್ಯವಾಗಿ ವಿಮಾ ಕಂಪನಿಗಳು ಅದಕ್ಕೆ ಪರಿಹಾರ ನೀಡುತ್ತವೆ. ಆದರೆ, ಹರಿಯಾಣದಲ್ಲಿ ವ್ಯತಿರಿಕ್ತ ಪ್ರಕರಣವೊಂದು ನಡೆದಿದೆ. ಅಲ್ಲಿ ಕೆಲವೇ ತಿಂಗಳುಗಳ ಹಳೆಯದಾದ ಮಹೀಂದ್ರಾ ಥಾರ್ ಬೆಂಕಿಗೆ ಆಹುತಿಯಾಗಿದೆ. ಅಚ್ಚರಿಯೆಂದರೆ ವಿಮಾ ಕಂಪನಿ (Insurance Claim) ಮತ್ತು ತಯಾರಕರು ಅವನ ನಷ್ಟಕ್ಕೆ ಪರಿಹಾರ ಒದಗಿಸಿಲ್ಲ. ಅದಕ್ಕೆ ಕಾರಣವೇನು ಗೊತ್ತೇ? ಅನಧಿಕೃತವಾಗಿ ಕಾರಿಗೆ ಆಕ್ಸೆಸರಿ ಅಳವಡಿಸಿರುವುದು.

ಘಟನೆಯನ್ನು ಪ್ರತೀಕ್ ಸಿಂಗ್ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಮಾಲೀಕರು 2023ರ ಡಿಸೆಂಬರ್​​ನಲ್ಲಿ ಮಹೀಂದ್ರಾ ಥಾರ್​ ಕಾರನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಕಾರನ್ನು ಸುಮಾರು 700 ಕಿ.ಮೀ ಓಡಿಸಿದ್ದರು ಮತ್ತು ಅದನ್ನು ಮೊದಲ ಸರ್ವಿಸ್​​ಗಾಗಿ ಶೋರೂಮ್​ಗೆ ಇಟ್ಟಿದ್ದರು. ಕಾರನ್ನು ಬಿಡುವಾಗ, 50-60 ಕಿ.ಮೀ.ಗಿಂತ ಹೆಚ್ಚು ದೂರ ಓಡಿಸಿದ ನಂತರ ಕಾರನ್ನು ನಿಲ್ಲಿಸಿದಾಗಲೆಲ್ಲಾ ಕ್ಯಾಬಿನ್ ಒಳಗೆ ಸುಟ್ಟ ವಾಸನೆ ಬರುತ್ತಿದೆ ಎಂದು ಸಿಬ್ಬಂದಿಗೆ ತಿಳಿಸಿದ್ದರು.

ಸರ್ವಿಸ್​ನಿಂದ ಕಾರನ್ನು ವಾಪಸ್​​ ತೆಗೆದುಕೊಳ್ಳಲು ಹಿಂತಿರುಗಿದಾಗ, ಅಲ್ಲಿನ ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದರು. ಅಲ್ಲದೆ, ಸುಟ್ಟ ವಾಸನೆ ಹೊಸ ಕಾರುಗಳಲ್ಲಿ ಸಾಮಾನ್ಯ ಎಂದೂ ನಂಬಿಸಿದ್ದರು. ಮಾಲೀಕರು ತಂತ್ರಜ್ಞರ ಮಾತನ್ನು ನಂಬಿ ಕಾರು ವಾಪಸ್​ ತೆಗೆದುಕೊಂಡು ಹೋಗಿದ್ದರು.

ಕೆಲವು ದಿನಗಳ ಬಳಿಕ ಮಾಲೀಕರು ತಮ್ಮ ಕುಟುಂಬದೊಂದಿಗೆ ತಮ್ಮ ಮನೆಯಿಂದ 200 ಕಿ.ಮೀ ದೂರದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿ ಕಾರು ಪಾರ್ಕ್ ಮಾಡುವಾಗ ಕಾರಿನೊಳಗೆ ಸುಟ್ಟ ವಾಸನೆ ಜೋರಾಗಿತ್ತು. ಸರ್ವಿಸ್​ ಸಿಬ್ಬಂದಿ ಮಾತು ಕೇಳಿ ವಾಸನೆಯನ್ನು ನಿರ್ಲಕ್ಷಿಸಿ ಹೊರಟಿದ್ದರು. ಅವರು ಹೊರಬಂದ ಕೆಲವು ನಿಮಿಷಗಳ ನಂತರ ಥಾರ್ ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಭಸ್ಮವಾಗಿತ್ತು.

ಇದನ್ನೂ ಓದಿ : Tata Motors : ಸನಂದ್ ಘಟಕದಲ್ಲಿ 10 ಲಕ್ಷ ಕಾರು ಉತ್ಪಾದಿಸಿದ ಟಾಟಾ ಮೋಟಾರ್ಸ್

ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮಾಲೀಕರು ಘಟನೆಯ ಬಗ್ಗೆ ವಿಮೆ ಮತ್ತು ಡೀಲರ್ ಇಬ್ಬರಿಗೂ ಮಾಹಿತಿ ನೀಡಿದ್ದರು. ವಿಮಾ ಕಂಪನಿಯು ತನಿಖೆ ನಡೆಸಲು ಕಾರ್ಯನಿರ್ವಾಹಕರನ್ನು ಕಳುಹಿಸಿತು ಮತ್ತು ಉತ್ಪಾದನಾ ದೋಷದಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಡೀಲರ್ ಜೊತೆ ಹೋಗಿ ಮಾತನಾಡಬೇಕೆಂದು ಮಾಲೀಕರಿಗೆ ತಿಳಿಸಿತು. ಅಂತೆಯೇ ಅವರು ಶೋರೂಮ್​ಗೆ ಮಾಹಿತಿ ನೀಡಿದ್ದರು. ಈ ವೇಳೆ ಅವರಿಗೆ ಆಘಾತ ಎದುರಾಯಿತು.

ಕುತ್ತು ತಂದ ರಿಯರ್​ ಕ್ಯಾಮೆರಾ

ಈ ಕಾರಿನಲ್ಲಿ ಆಫ್ಟರ್ ಮಾರ್ಕೆಟ್ ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಶೋ ರೂಮ್ ಸಿಬ್ಬಂದಿ ಹೇಳಿದ್ದಾರೆ. ಕಾರಿನಲ್ಲಿ ಬಾಹ್ಯ ಫಿಟ್ಮೆಂಟ್ ಕಂಡುಬಂದಿದ್ದರಿಂದ ಕ್ಲೈಮ್ ಅನ್ನು ತಿರಸ್ಕರಿಸಿದ್ದಾರೆ. ಈ ಮೂಲಕ ವಿಮೆ ಹಾಗೂ ಮಹೀಂದ್ರಾ ಕಂಪನಿ ಎರಡೂ ಸಮಸ್ಯೆಯಿಂದ ನುಣಚಿಕೊಂಡಿದೆ. ಆದರೆ, ಕ್ಯಾಮೆರಾವನ್ನು ಅಳವಡಿಸಿರುವುದು ಡೀಲರ್​ಶಿಪ್​ ಕಡೆಯಿಂದ ಎಂಬುದಾಗಿ ಥಾರ್ ಮಾಲೀಕರು ಹೇಳಿಕೊಂಡಿದ್ದಾರೆ. ಅಲ್ಲದೆ ಸೋಶಿಯಲ್​ ಮೀಡಿಯಾಗಳಲ್ಲಿ ಬೆಂಕಿ ಬಿದ್ದ ಸುದ್ದಿಯಾದ ಬಳಿಕ ಅವರು ಬಾಹ್ಯ ದೋಷದಿಂದ ಘಟನೆ ಸಂಭವಿಸಿದೆ ಎಂದು ವರದಿ ನೀಡಿದೆ.

ತಯಾರಕರು ಮತ್ತು ವಿಮಾ ಕಂಪನಿ ಎರಡೂ ಅವನಿಗೆ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ. ಹೀಗಾಗಿ ಕಾರಿ ಮಾಲೀಕರಲ್ಲಿ ಈಗ ಸುಟ್ಟ ಕಾರು ಹೊರತುಪಡಿಸಿ ಬೇರೇನೂ ಇಲ್ಲ. ಮಾಲೀಕರು ಅಸ್ತಿತ್ವದಲ್ಲಿಲ್ಲದ ಕಾರಿಗೆ ಇಎಂಐ ಪಾವತಿ ಮಾಡಬೇಕಾಗುತ್ತದೆ.

ತಯಾರಕರು ಶೀಘ್ರದಲ್ಲೇ ಪರಿಹಾರದೊಂದಿಗೆ ಬರುತ್ತಾರೆ ಮತ್ತು ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ. ಸುಟ್ಟ ವಾಸನೆ ಬಗ್ಗೆ ಹೇಳಿದಾಗ ಸರ್ವಿಸ್ ಸ್ಟೇಷನ್​ ಸಿಬ್ಬಂದಿ ಪ್ರತಿಕ್ರಿಯಿಸಿರಲಿಲ್ಲ. ಅವರು ಕೆಲಸ ಮಾಡಿದ್ದರೆ ಸಮಸ್ಯೆ ಆಗುತ್ತಿಲ್ಲ ಎಂದು ಕಾರಿನ ಮಾಲೀಕರು ಹೇಳಿದ್ದಾರೆ.

Continue Reading
Advertisement
Women Slapped
ಪ್ರಮುಖ ಸುದ್ದಿ2 mins ago

Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್​ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ

Tata Ace vehicle overturned Two persons dead five seriously injured
ಕರ್ನಾಟಕ16 mins ago

Road Accident: ಟಾಟಾ ಏಸ್ ವಾಹನ ಪಲ್ಟಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

Xiaomi Car in China
ಪ್ರಮುಖ ಸುದ್ದಿ55 mins ago

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

viral video
ವೈರಲ್ ನ್ಯೂಸ್1 hour ago

Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ʼಪಾಠʼ ಕಲಿಸಿದ ವಿದ್ಯಾರ್ಥಿಗಳು; ಹೇಗೆಂದು ನೀವೇ ನೋಡಿ

BJP State Vice President Malavika Avinash latest statement
ಬೆಂಗಳೂರು1 hour ago

Bengaluru News: ಭಯೋತ್ಪಾದನೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಮಾಳವಿಕಾ ಅವಿನಾಶ್ ಟೀಕೆ

Lok Sabha Election 2024 Prajwal Revanna gets Rs 40 crore worth asset
Lok Sabha Election 20241 hour ago

Lok Sabha Election 2024: ಪ್ರಜ್ವಲ್‌ ರೇವಣ್ಣ 40 ಕೋಟಿ ರೂ. ಒಡೆಯ; ಇದೆ ಕೆಜಿಗಟ್ಟಲೆ ಚಿನ್ನ!

Uttara Kannada Lok Sabha constituency Congress candidate Dr Anjali Nimbalkar latest statement
ಉತ್ತರ ಕನ್ನಡ1 hour ago

Uttara Kannada News: ಚುನಾವಣೆಯನ್ನು ಸುಲಭವಾಗಿ ಪರಿಗಣಿಸದಿರಿ: ನಿಂಬಾಳ್ಕರ್

Rameswaram cafe bomb blast case
ಬೆಂಗಳೂರು2 hours ago

Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

Rajasthan Royals
ಪ್ರಮುಖ ಸುದ್ದಿ2 hours ago

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

SBI Debit Cards
ವಾಣಿಜ್ಯ2 hours ago

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20249 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202410 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ17 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌