Travel Destinations: ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆದ ವಿಶ್ವದ ಟಾಪ್‌ 10 ದೇಶಗಳಿವು! - Vistara News

ಪ್ರವಾಸ

Travel Destinations: ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆದ ವಿಶ್ವದ ಟಾಪ್‌ 10 ದೇಶಗಳಿವು!

ವಿಶ್ವ ಪ್ರವಾಸೋದ್ಯಮ ದಿನದ (World tourism Day) ಅಂಗವಾಗಿ ಬಿಡುಗಡೆ ಮಾಡಲಾದ ಪಟ್ಟಿಯ ಪ್ರಕಾರ, ಪ್ರಪಂಚದಲ್ಲೇ ಅತೀ ಹೆಚ್ಚು ಭೇಟಿ ಕೊಟ್ಟ ದೇಶಗಳ ಪೈಕಿ ಟಾಪ್‌ 10 ದೇಶಗಳ (Travel destinations) ಪಟ್ಟಿ ಇಲ್ಲಿದೆ.‌

VISTARANEWS.COM


on

travel destination
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರವಾಸ ಎಂಬುದು ಪ್ರತಿಯೊಬ್ಬರನ್ನೂ ಸೆಳೆಯುವ ಸೂಜಿಗಲ್ಲು. ಅದಕ್ಕಾಗಿಯೇ ಇಂದು ವಿಶ್ವದಲ್ಲಿ ಪ್ರವಾಸೋದ್ಯಮ ಕಂಡರಿಯದ ರೀತಿಯಲ್ಲಿ ಬೆಳೆಯುತ್ತಿದೆ. ಎಲ್ಲ ದೇಶಗಳೂ ತಮ್ಮ ದೇಶದ ಪ್ರವಾಸೋದ್ಯಮವನ್ನು ವಿಶ್ವಮಟ್ಟದಲ್ಲಿ ಅಭಿವೃದ್ಧಿಗೊಳಿಸಲು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಈ ಬಾರಿಯ ಸೆಪ್ಟೆಂಬರ್‌ 27ರಂದು ಆಚರಿಸಲಾದ ವಿಶ್ವ ಪ್ರವಾಸೋದ್ಯಮ ದಿನದ (World tourism Day) ಅಂಗವಾಗಿ ಬಿಡುಗಡೆ ಮಾಡಲಾದ ಪಟ್ಟಿಯ ಪ್ರಕಾರ, ಪ್ರಪಂಚದಲ್ಲೇ ಅತೀ ಹೆಚ್ಚು ಭೇಟಿ ಕೊಟ್ಟ ದೇಶಗಳ ಪೈಕಿ ಟಾಪ್‌ 10 ದೇಶಗಳ (Travel destinations) ಪಟ್ಟಿ ಇಲ್ಲಿದೆ.‌

Paris France Honeymoon Spots

1. ಫ್ರಾನ್ಸ್‌; ಈ ಬಾರಿ ಮೊದಲ ಸ್ಥಾನ ಫ್ರಾನ್ಸ್‌ನದ್ದು. 2023ರಲ್ಲಿ ಈವರೆಗೆ ಅತ್ಯಂತ ಹೆಚ್ಚು ಪ್ರವಾಸಿಗರು ಬಂದಿದ್ದು ಫ್ರಾನ್ಸ್‌ಗೆ. 89.4 ಮಿಲಿಯನ್‌ ಮಂದಿ ಜಗತ್ತಿನಾದ್ಯಂತ ಪ್ರಾನ್ಸ್‌ಗೆ ಪ್ರವಾಸ ಮಾಡಿದ್ದು, ಫ್ರಾನ್ಸ್‌ನ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ. ಯುರೋಪ್‌ ದೇಶಗಳ ಪೈಕಿ ತನ್ನ ಐತಿಹಾಸಿಕ ಸ್ಥಳಗಳು ಹಾಗೂ ಪ್ರಕೃತಿ ಸೌಂದರ್ಯದ ಮೂಲಕ ಗಮನ ಸೆಳೆಯುತ್ತಿರುವ ಫ್ರಾನ್ಸ್‌ ತನ್ನಲ್ಲಿರುವ ಐಫೆಲ್‌ ಟವರ್‌ ಮೂಲಕವೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Spain Most Visited Countries

2. ಸ್ಪೈನ್:‌ ಫ್ರಾನ್ಸ್‌ ನಂತರದ ಸ್ಥಾನದಲ್ಲಿರುವುದು ಸ್ಪೈನ್.‌ ತನ್ನ ಇತಿಹಾಸ ಹಾಗೂ ಪ್ರಕೃತಿ ಸೌಂದರ್ಯದ ಮೂಲಕ ವಿಶ್ವ ಪ್ರವಾಸೋದ್ಯಮದಲ್ಲಿ ಹೆಸರು ಮಾಡುತ್ತಿರುವ ಮತ್ತೊಂದು ದೇಶ ಸ್ಪೈನ್.‌ ಬಾರ್ಸಿಲೋನಾ ಹಾಗೂ ಮ್ಯಾಡ್ರಿಡ್‌ ನಗರಗಳು ಪ್ರವಾಸಿಗರನ್ನು ಇನ್ನಿಲ್ಲದಂತೆ ಮೋಡಿ ಮಾಡುತ್ತಿದೆ. ಈವರೆಗೆ ಈ ವರ್ಷ ಇಲ್ಲಿಗೆ ಭೇಟಿ ಕೊಟ್ಟ ಪ್ರವಾಸಿಗರ ಸಂಖ್ಯೆ 83.5 ಮಿಲಿಯನ್.‌

USA

3. ಯುನೈಟೆಡ್‌ ಸ್ಟೇಟ್ಸ್‌: ಯುಎಸ್‌ ಕೂಡಾ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ವರ್ಷ ಇಲ್ಲಿಗೆ ಭೇಟಿಕೊಟ್ಟ ಪ್ರವಾಸಿಗರ ಸಂಖ್ಯೆ 79.3 ಮಿಲಿಯನ್.‌ ಯುಎಸ್‌ನ ಸಂಸ್ಕೃತಿ, ವಾತಾವರಣ, ಕಾಸ್ಮೋಪಾಲಿಟನ್‌ ನಾಗರೀಕತೆ ಸೇರಿದಂತೆ ಯುಎಸ್‌ ಬಗೆಗೆ ಪ್ರವಾಸಿಗರ ಕುತೂಹಲ ಹೆಚ್ಚು. ಹೀಗಾಗಿ ಯುಎಸ್‌ ಕೂಡಾ ಪ್ರವಾಸೀ ನೆಲೆಯಲ್ಲೂ ಹಿಂದೆ ಬಿದ್ದಿಲ್ಲ.

China

೪. ಚೈನಾ: ಚೈನಾದ ಇತಿಹಾಸ, ಸ್ಮಾರಕಗಳು ಹಾಗೂ ತನ್ನದೇ ಆದ ಅಪರೂಪದ ಸಂಸ್ಕೃತಿಯೂ ಸೇರಿದಂತೆ ಶಾಂಘೈ, ಬೀಜಿಂಗ್‌ನಂತಹ ಮುಂದುವರಿದ ನಗರಗಳು ಬೇರೆಬೇರೆ ಮಾದರಿಯ ಪ್ರವಾಸಿಗರನ್ನು ಕೈಬೀಸಿ ಕರೆದಿದೆ. ಹೀಗಾಗಿ, ಇದು ನಾಲ್ಕನೇ ಸ್ಥಾನದಲ್ಲಿದ್ದು 65.7 ಮಿಲಿಯನ್‌ ಮಂದಿಯನ್ನು ತನ್ನತ್ತ ಸೆಳೆದಿದೆ.

italy

5. ಇಟಲಿ: ಐದನೇ ಸ್ಥಾನದಲ್ಲಿರುವ ಇಟಲಿ 64.7 ಮಿಲಿಯನ್‌ ಮಂದಿ ಪ್ರವಾಸಿಗರನ್ನು ಈ ಬಾರಿ ಕಂಡಿದೆ. ಇಟಲಿಯು ಕೂಡಾ ತನ್ನದೇ ಆದ ಸಂಸ್ಕೃತಿ, ಭೌಗೋಳಿಕ ಪರಿಸರ, ವಾಸ್ತುಶಿಲ್ಪಗಳ ಮೂಲಕ ವಿಶ್ವ ಪ್ರವಾಸೋದ್ಯಮದಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ.

Mausoleum at Halicarnassus - Turkey Ancient World Wonders The Mausoleum was a monumental tomb built for Mausolus, a satrap (governor) of the ancient city of Halicarnassus. It was adorned with intricate sculptures and considered a marvel of architecture.

6. ಟರ್ಕಿ: 51.2 ಮಿಲಿಯನ್‌ ಪ್ರವಾಸಿಗರನ್ನು ತನ್ನೆಡೆಗೆ ಸೆಳೆದುಕೊಂಡು ಆರನೇ ಸ್ಥಾನದಲ್ಲಿರುವ ಟರ್ಕಿ, ತನ್ನಲ್ಲಿರುವ ಅಪರೂಪದ ಬೀಚುಗಳು, ನ್ಯಾಶನಲ್‌ ಪಾರ್ಕುಗಳು, ಜಲಪಾತಗಳೂ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ.

Mexico Most Visited Countries

7. ಮೆಕ್ಸಿಕೋ: 45 ಮಿಲಿಯನ್‌ ಮಂದಿ ಪ್ರವಾಸಿಗರು ಈವರೆಗೆ ಈ ವರ್ಷ ಇಲ್ಲಿಗೆ ಭೇಟಿ ನೀಡಿದ್ದು, ಇಲ್ಲಿನ ಅಪರೂಪದ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳ ಮೇಲೆ ಕುತೂಹಲಗೊಂಡು ಈ ದೇಶದತ್ತ ಮುಖ ಮಾಡುತ್ತಿದ್ದಾರೆ.

thailand

8. ಥಾಯ್ಲೆಂಡ್‌: ಯಾವಾಗಲೂ ಪ್ರವಾಸಿಗರ ವಿಚಾರದಲ್ಲಿ ಮುಂಚೂಣಿಯಲ್ಲೇ ಇರುವ ಥಾಯ್ಲೆಂಡ್‌ ಈ ಬಾರಿ ಎಂಟನೇ ಸ್ಥಾನದಲ್ಲಿದೆ. 39.8 ಮಿಲಿಯನ್‌ ಮಂದಿ ಇಲ್ಲಿಗೆ ಭೇಟಿ ಕೊಟ್ಟಿದ್ದು, ಇಲ್ಲಿನ ದೇವಾಲಯಗಳು, ಸಮುದ್ರ ತೀರಗಳು, ಜಲಪಾತಗಳು, ಪ್ರಕೃತಿಯ ರಮ್ಯ ತಾಣಗಳು ಪ್ರವಾಸಿಗರ ವಿಚಾರದಲ್ಲಿ ಸದಾ ಮುಂದು.

germany

9. ಜರ್ಮನಿ: 39.6 ಮಿಲಿಯನ್‌ ಮಂದಿಯನ್ನು ತನ್ನತ್ತ ಆಕರ್ಷಿಸಿರುವ ಜರ್ಮನಿ ಕೂಡಾ, ಯುರೋಪ್‌ನ ಪ್ರಮುಖ ಪ್ರವಾಸೀ ದೇಶಗಳ ಪೈಕಿ ಒಂದು. ಇಲ್ಲಿನ ಸಂಸ್ಕೃತಿ, ವಾಸ್ತುಶಿಲ್ಪ, ಆಧುನಿಕತೆ ಪ್ರವಾಸಿಗರ ಆಸಕ್ತಿಯನ್ನು ಕೆರಳಿಸುತ್ತವೆ.

Bank of England

10. ಇಂಗ್ಲೆಂಡ್‌: 39.4 ಮಿಲಿಯನ್‌ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮೂಲಕ ಹತ್ತನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ ಸದಾ ಪ್ರವಾಸಿಗರ ಪಾಲಿಗೊಂದು ಕುತೂಹಲಕರ ದೇಶ. ಇಲ್ಲಿನ ಆಧುನೀಕತೆ, ಗಗನಚುಂಬಿ ನಗರಗಳು ಪುರಾತನ ಮ್ಯೂಸಿಯಂಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: Solo Travel: ಮೊದಲ ಬಾರಿಗೆ ಸೋಲೋ ಹೊರಟರೆ ಇವು ಭಾರತದ ಟಾಪ್‌ 5 ಸುರಕ್ಷಿತ ಪ್ರವಾಸಿ ತಾಣಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರವಾಸ

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Porbandar Tour: ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿರುವ ಪೋರ್ ಬಂದರ್ ಇತಿಹಾಸದ ಹಿನ್ನಲೆಯಿರುವ ಸ್ಥಳವಾಗಿದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ ಭೇಟಿ ನೀಡಿ. ಪೋರ್ ಬಂದರ್ ನ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

Porbandar Tour
Koo

ಗುಜರಾತ್: ಕರಾವಳಿ ನಗರವಾದ ಪೋರ್ ಬಂದರ್ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿದೆ. ಇತಿಹಾಸದ ಹಿನ್ನೆಲೆಯಿರುವ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ (Porbandar Tour) ಭೇಟಿ ನೀಡಿ. ಇಲ್ಲಿನ ಅದ್ಭುತ ಸ್ಥಳಗಳನ್ನು ಆನಂದಿಸಿ.

Porbandar Tour

ಕೀರ್ತಿ ಮಂದಿರ

ಇದು ರಾಷ್ಟ್ರಪಿತ ಮಹಾತ್ಮಗಾಂಧಿಯವರ ನೆನಪಿಗಾಗಿ ನಿರ್ಮಿಸಿದ ಸ್ಮಾರಕವಾಗಿದೆ. ಇದು ಪೋರ್ ಬಂದರಿನಲ್ಲಿದೆ. ಇದು ಪೋರ್ ಬಂದರಿನ ಮೊದಲ ಹೆಗ್ಗುರುತಾಗಿದೆ. ಗಾಂಧೀಜಿಯವರ ಸೋದರಳಿಯನಿಂದ ನಿರ್ಮಿಸಲ್ಪಟ್ಟ ಈ ಸ್ಮಾರಕದಲ್ಲಿ ಗಾಂಧಿಯವರ ಅಸಾಧಾರಣ ಜೀವನವನ್ನು ವಿವರಿಸುವ ವಸ್ತು ಸಂಗ್ರಹಾಲಯ, ದೇವಾಲಯ, ಉದ್ಯಾನಗಳನ್ನು ಹೊಂದಿದೆ.

Porbandar Tour

ಪೋರ್ ಬಂದರ್ ಬೀಚ್

ವಿಶ್ರಾಂತಿ ಪಡೆಯಲು ಬಯಸುವವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಲ್ಲಿ ಚಿನ್ನದಂತೆ ಹೊಳೆಯುವ ಮರಳುಗಳು, ಸೌಮ್ಯವಾದ ಅಲೆಗಳು ಮತ್ತು ಕಣ್ಮನ ಸೆಳೆಯುವ ಸೂರ್ಯೋದಯವನ್ನು ಇಲ್ಲಿ ಆನಂದಿಸಬಹುದು. ಇಲ್ಲಿ ನಡೆದಾಡುವ ಮೂಲಕ ತಾಜಾ ಗಾಳಿಯನ್ನು ಉಸಿರಾಡಬಹುದು. ಹಾಗೇ ಇಲ್ಲಿ ಮೀನುಗಾರರು, ಒಂಟೆಗಳು ಸುತ್ತಾಡುತ್ತಿರುತ್ತದೆ. ಡೌನ್ ಚೌಪಟ್ಟಿರಸ್ತೆಯ ಮಾದರಿ ಖಾದ್ಯಗಳಾದ ಮೆಥಿ ಗೋಟಾ ಬಜ್ಜಿಗಳನ್ನು ಬಣ್ಣ ಬಣ್ಣದ ಬಲ್ಪ್ ಗಳಿಂದ ಅಲಂಕರಿಸಿದ ಸ್ಟಾಲ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

Porbandar Tour

ಸುದಾಮ ಮಂದಿರ

ಪೋರ್ ಬಂದರಿನ ಸಿಟಿ ಸೆಂಟರ್ ನಲ್ಲಿ ಕಂಡುಬರುವ ಈ ಪುರಾತನ ದೇವಾಲಯದಲ್ಲಿ ಹಿಂದೂ ದೇವರಾದ ಕೃಷ್ಣನ ಜೊತೆ ಆತನ ಬಾಲ್ಯದ ಸ್ನೇಹಿತ ಸುದಾಮನನ್ನು ಪೂಜಿಸಲಾಗುತ್ತದೆ. ಹಾಗೇ ಇಲ್ಲಿ ಕೃಷ್ಣ ಆತನ ಪತ್ನಿ ರುಕ್ಮಿಣಿ , ಸ್ನೇಹಿತ ಸುದಾಮ ಮತ್ತು ಸಹೋದರ ಬಲರಾಮನನ್ನು ಗೌರವಿಸಲಾಗುತ್ತದೆ. ಗುರುಕುಲದಲ್ಲಿ ಕೃಷ್ಣ –ಸುದಾಮರು ಒಟ್ಟಿಗೆ ಕಳೆದ ಸಮಯವನ್ನು ಚಿತ್ರಿಸುವ ಭಿತ್ತಿ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗಿದೆ.

Porbandar Tour

ಪೋರ್ ಬಂದರ್ ಚೌಪಟ್ಟಿ

ರೋಮಾಂಚಕವಾದ ಚೌಪಟ್ಟಿ ಬೀಚ್ ನಲ್ಲಿ ವಾಯು ವಿಹಾರ ಮಾಡುವಾಗ ಸ್ಥಳೀಯ ಖಾದ್ಯಗಳ ರುಚಿ ಮತ್ತು ಹಬ್ಬದ ಸಂಭ್ರಮವನ್ನು ನೀವು ಆನಂದಿಸದೆ ಇರಲಾಗುವುದಿಲ್ಲ. ದೀಪಗಳಿಂದ ಅಲಂಕಾರಗೊಂಡ ಮಳಿಗೆಗಳಲ್ಲಿ ಧೋಕ್ಲಾಗಳು, ಖಾಂಡ್ವಿಗಳು ಮತ್ತು ಹುರಿದ ಮಸಾಲೆಯುಕ್ತ ತಿಂಡಿಗಳಂತಹ ಪ್ರಮುಖ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಚೌಪಟ್ಟಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ವಿಶೇಷವಾಗಿ ಇಲ್ಲಿ ಗಾಳಿಪಟವನ್ನು ಹಾರಿಸುವ ಉತ್ಸವ ನಡೆಯುತ್ತದೆ.

ತಾರಾ ಮಂದಿರ ತಾರಾಲಯ

1972ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ಈ ತಾರಾಲಯವನ್ನು ಉದ್ಘಾಟಿಸಿದರು. ಇಲ್ಲಿ ಖಗೋಳಶಾಸ್ತ್ರ, ಪ್ರದರ್ಶನದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಲಾಗುತ್ತದೆ. ಇಲ್ಲಿ ಗ್ರಹಣದಿಂದ ನಕ್ಷತ್ರ ಪುಂಜಗಳವರೆಗೆ ಕಾಸ್ಮಿಕ್ ವಿದ್ಯಮಾನಗಳನ್ನು ವಿವರಿಸುವ ಪ್ರದರ್ಶನಗಳನ್ನು ಡಿಜಿಟಲ್ ಆಗಿ ಪ್ರದರ್ಶಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

Porbandar Tour

ಭಾರತ್ ಮಂದಿರ

19ನೇ ಶತಮಾನದ ಈ ದೇವಾಲಯವು ಭಾರತವನ್ನು ಗೌರವಿಸುತ್ತದೆ. ಪುರಾಣಗಳಲ್ಲಿ ಭಗವಾನ್ ರಾಮನ ಸದ್ಗುಣಗಳನ್ನು ಕಂಡು ಹಿಂದೂಗಳು ರಾಮನನ್ನು ಆದರ್ಶವಾಗಿ ಕಾಣುತ್ತಾರೆ. ಹಾಗಾಗಿ ಈ ದೇವಾಲಯದಲ್ಲಿ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಇಲ್ಲಿ ಸ್ವರ್ಣ ಲೇಪಿತ ಗುಮ್ಮಟಗಳು, ಲ್ಯಾಟಿಸ್ಡ್ ಗೋಡೆಗಳು ಮತ್ತು ಸ್ತಂಭದ ಮಂಟಪ ಸಭಾಂಗಣಗಳು ದೂರ ದೂರದಿಂದ ಭಕ್ತರನ್ನು ಆಕರ್ಷಿಸುತ್ತದೆ.

Porbandar Tour

ನೆಹರು ತಾರಾಲಯ

ಖಗೋಳಶಾಸ್ತ್ರದ ಬಗ್ಗೆ ಮನೋರಂಜನೆಯನ್ನು ನೀಡುವಂತಹ ಪೋರ್ ಬಂದರ್ ನ ಈ ತಾರಾಲಯ ನಕ್ಷತ್ರಾಕಾರದಲ್ಲಿದೆ. ಇಲ್ಲಿ ಭೂಮಿಯ ಆಚೆಗಿನ ರಹಸ್ಯಗಳನ್ನು ಅನ್ವೇಷಿಸುವ ಹೈಟೆಕ್ ಪ್ರದರ್ಶನಗಳನ್ನು ನೀಡುತ್ತದೆ. ಆಧುನಿಕ ಗ್ಯಾಜೆಟ್ರಿಯೊಂದಿಗೆ ಸುಸಜ್ಜಿತವಾದ 40 ಅಡಿಗಳ ಅರ್ಧಗೋಳದ ಥಿಯೇಟರ್ ಒಳಗೆ ಡಿಜಿಟೈಸ್ಡ್ ಆಕಾಶದಲ್ಲಿ ಶೂಟಿಂಗ್ ಸ್ಟಾರ್ ಗಳು ಪ್ರಜ್ವಲಿಸುತ್ತಿರುವುದನ್ನು ಇಲ್ಲಿ ನೋಡಬಹುದು.

Porbandar Tour

ಪೋರ್ ಬಂದರ್ ಪಕ್ಷಿಧಾಮ

ಅಪರೂಪದ ಜಲವಾಸಿಗಳನ್ನೊಳಗೊಂಡ ಈ ಅಭಯಾರಣ್ಯಕ್ಕೆ ಪ್ರಕೃತಿ ಪ್ರೇಮಿಗಳು ಭೇಟಿ ನೀಡಬಹುದು. ಪೋರ್ ಬಂದರ್ ನಿಂದ ಕೇವಲ 2ಕಿಮೀ ದೂರದಲ್ಲಿರುವ ಇದು ಮ್ಯಾಂಗ್ರೋವ್ ಗಳನ್ನು ರಕ್ಷಣೆ ನೀಡುತ್ತದೆ ಮತ್ತು ವರ್ಷದಲ್ಲಿ ಸುಮಾರು 200 ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆ. ಇಲ್ಲಿ ಸುಂದರವಾದ ಭೂದೃಶ್ಯಗಳು ಮತ್ತು ತಾಜಾ ಗಾಳಿಯು ನಿಮಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.

Continue Reading

ಕರ್ನಾಟಕ

Wonderla Bengaluru: ಬೇಸಿಗೆ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾದಲ್ಲಿ ʼಸಮ್ಮರ್‌ಲಾ ಫಿಯೆಸ್ಟಾ-2024ʼ: ಭರಪೂರ ಆಫರ್ಸ್‌

VISTARANEWS.COM


on

Wonderla Bengaluru
Koo

ಬೆಂಗಳೂರು: ಈ ಬೇಸಿಗೆಯ ಮಜವನ್ನು ಇನ್ನಷ್ಟು ಹೆಚ್ಚಿಸಲು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ (Wonderla Bengaluru) ಬೆಂಗಳೂರು ಪಾರ್ಕ್‌ನಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ (Summer Fiesta 2024) ನಡೆಸುತ್ತಿದ್ದು, ಮೇ 31 ರವರೆಗೂ ಇರಲಿದೆ. ಸಮ್ಮರ್‌ಲಾ ಫಿಯೆಸ್ಟಾದಲ್ಲಿ ಸಾಕಷ್ಟು ಆಫರ್‌ಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿದ್ದು, ಅನೇಕ ಮೋಜಿನ ರೈಡ್‌, ವಾಟರ್‌ ಗೇಮ್‌ಗಳು, ಫುಡ್‌-ಫೆಸ್ಟಿವಲ್‌, ಡಿಜೆ ಮ್ಯೂಸಿಕ್‌ ಸೇರಿದಂತೆ ಅನೇಕ ವಿಶೇಷತೆಗಳು ಈ ಸಮ್ಮರ್‌ಲಾದಲ್ಲಿ ಇರಲಿವೆ. ಇದಲ್ಲದೆ, ಡೊಳ್ಳು ಕುಣಿತ, ಚಿಂಗಾರಿ ಮೇಳಗಳಂತಹ ವಿಶೇಷ ಸಾಂಸ್ಕೃತಿಕ ಪ್ರದರ್ಶನ ಹಾಗೂ ಮೆರವಣಿಗೆ ಇರಲಿವೆ. ವಾರಾಂತ್ಯದಲ್ಲಿ ನಿಮ್ಮನ್ನು ಇನ್ನಷ್ಟು ಉತ್ಸಾಹಿಗಳನ್ನಾಗಿ ಮಾಡಲು ಡಿಜೆ ಮ್ಯೂಸಿಕ್‌ ಸಹ ಆಯೋಜಿಸಲಾಗುತ್ತಿದೆ.

ಇನ್ನು ಭಾನುವಾರದಂದು ವಂಡರ್‌ಲಾ ರೆಸಾರ್ಟ್‌ನಲ್ಲಿ ಬೇಸಿಗೆಯ ಬ್ರಂಚ್‌ ಸಹ ಇರಲಿದೆ. ಈ ಎಲ್ಲಾ ಮನರಂಜನೆಗಳ ಮೇಲೂ ಸಾಕಷ್ಟು ರಿಯಾಯಿತಿ ಹಾಗೂ ಆಫರ್‌ಗಳು ಇದ್ದು, ಆಸಕ್ತರು ಭಾಗಿಯಾಗಿ ಈ ಬೇಸಿಗೆ ರಜೆಯನ್ನು ಇನ್ನಷ್ಟು ಸಂತಸದಿಂದ ಕಳೆಯಬಹುದು. ಈ ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಲ್ಲಿ ಲಭ್ಯವಿರಲಿದೆ. ಪಾರ್ಕ್‌ನಲ್ಲಿ ಈಗ ಲಭ್ಯವಿರುವ ಹೊಸ ವಿಶೇಷ ಪಾನೀಯ ಕೌಂಟರ್‌ಗಳೊಂದಿಗೆ ಈ ಬೇಸಿಗೆಯ ಶಾಖವನ್ನು ತಣಿಸಲು ತಾಜಾ ಹಣ್ಣಿನ ಜ್ಯೂಸ್‌ಗಳು, ಋತುವಿನ ಅತ್ಯುತ್ತಮ ಆಮ್ರಾಸ್‌, ತಂಪಾದ ಮಜ್ಜಿಗೆ ಮತ್ತು ಬೇಸಿಗೆಯ ಪಾನೀಯಗಳು ಲಭ್ಯವಿರಲಿದೆ.

ಇದನ್ನೂ ಓದಿ | E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

ಆಫರ್‌ಗಳ ವಿವರ ಇಲ್ಲಿದೆ

  • ವಂಡರ್‌ಲಾಗೆ ಭೇಟಿ ನೀಡಲು ಬಯಸುವವರಿಗೆ Early Bird ಹೆಸರಿನಲ್ಲಿ ಶೇ. 10ರಷ್ಟು ರಿಯಾಯಿತಿ ಸಿಗಲಿದೆ. ಈ ಕೊಡುಗೆ(Offer) ಪಡೆಯಲು ಮೂರು ದಿನಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿಕೊಳ್ಳಬೇಕು.
  • ಜನ್ಮದಿನದ ಆಫರ್‌, ವಿಶೇಷವಾಗಿ ಮೇ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವವರಿಗೆ 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ.
  • ಇನ್ನು, ವಿದ್ಯಾರ್ಥಿಗಳಿಗಾಗಿ ಹಾಲ್ ಟಿಕೆಟ್ ಆಫರ್ ಸಹ ಚಾಲ್ತಿಯಲ್ಲಿದೆ. 2023-2024ರ ಶೈಕ್ಷಣಿಕ ವರ್ಷದ 10ನೇ, 11ನೇ ಮತ್ತು 12ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ಪ್ರಸ್ತುತಪಡಿಸಿ ಪಾರ್ಕ್ ಪ್ರವೇಶ ಟಿಕೆಟ್‌ಗಳ ಮೇಲೆ ಶೇ. 35ರಷ್ಟು ರಿಯಾಯಿತಿಯನ್ನು ಪಡೆಯಬಹುದು.
  • ವಂಡರ್‌ಲಾ ಕಾಲೇಜು ವಿದ್ಯಾರ್ಥಿಗಳಿಗೆ (16-24 ವರ್ಷ ವಯಸ್ಸಿನವರು) ತಮ್ಮ ಕಾಲೇಜು ಐಡಿ ಕಾರ್ಡ್‌ಗಳನ್ನು ಪ್ರಸ್ತುತಪಡಿಸಿದರೆ ಶೇ. 25ರಷ್ಟು ರಿಯಾಯಿತಿ ಪಡೆಯಲಿದ್ದಾರೆ, ಜೊತೆಗೆ, ವಿದ್ಯಾರ್ಥಿಗಳು ಆಹಾರ ಆಯ್ಕೆಗಳನ್ನು ಒಳಗೊಂಡಿರುವ ಕಾಂಬೊ ಪ್ಯಾಕೇಜ್‌ಗಳನ್ನು ಸಹ ಪಡೆಯಬಹುದು. ಆರಂಭಿಕ ಅರ್ಲಿ ಬರ್ಡ್‌ ಕೊಡುಗೆಯನ್ನು ಹೊರತುಪಡಿಸಿ, ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತವೆ. ಅತಿಥಿಗಳು ತಮ್ಮ ವಂಡರ್ಲಾ ಸಮ್ಮರ್ಲಾ ಫಿಯೆಸ್ಟಾ ಭಾಗವಾಗಿ ಮೇ 31 ರವರೆಗೆ ಪ್ರತಿ ಶನಿವಾರ ನಡೆಯುವ ವಂಡರ್ಲಾ ವಿಶೇಷ ಪೂಲ್ ಪಾರ್ಟಿಗಳೊಂದಿಗೆ ಭಾಗವಹಿಸಬಹುದು.

ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ, ಬೇಸಿಗೆ ರಜೆಯನ್ನು ಇನ್ನಷ್ಟು ಉತ್ಸಾಹ ಭರಿತವನ್ನಾಗಿದಲು ವಂಡರ್‌ಲಾ “ಸಮ್ಮರ್ಲಾ ಫಿಯೆಸ್ಟಾ’ ಆಯೋಜಿಸಿದೆ. ಈ ಸಮ್ಮರ್ಲಾದಲ್ಲಿ ಇಡೀ ಕುಟುಂಬಗಳು, ಕಾಲೇಜು ಸ್ನೇಹಿತರು, ಮಕ್ಕಳು ಎಲ್ಲರೂ ತಮ್ಮ ಪ್ರೀತಿಪಾತ್ರರೊಂದಿಗೆ ಆಗಮಿಸಿ, ಆನಂದಿಸಬಹುದು.

ಸಮ್ಮರ್‌ಲಾ ಭಾಗವಾಗಿ ಫುಡ್‌ಫೆಸ್ಟಿವಲ್‌, ಸಾಂಸ್ಕೃತಿಕ ಮೆರವಣಿಗೆ, ಡಿಜೆ ಮ್ಯೂಸಿಕ್‌ ಸೇರಿದಂತೆ ಇನ್ನೂ ಅನೇಕ ಮನರಂಜನೆಗಳು ಇರಲಿವೆ. ಈ ಎಲ್ಲಾ ಮನರಂಜನೆಯೊಂದಿಗೆ ನಿಮ್ಮ ಸವಿನೆನಪನ್ನು ಅಚ್ಚಳಿಯದಂತೆ ಮಾಡುವುದೇ ನಮ್ಮ ವಂಡರ್‌ಲಾದ ಪ್ರಮುಖ ಉದ್ದೇಶ ಎಂದು ಹೇಳಿದರು.

ವಂಡರ್‌ಲಾ ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ ಮಾಡುವ ಮೂಲಕ ಸಮ್ಮರ್ಲಾವನ್ನು ಆನಂದಿಸಿ.

ಇದನ್ನೂ ಓದಿ | Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್‌ಗಳಿಗಾಗಿ, www.wonderla.com ಗೆ ಭೇಟಿ ನೀಡಿ ಅಥವಾ +91 80372 30333, +91 80350 73966 ಅನ್ನು ಸಂಪರ್ಕಿಸಿ.

Continue Reading

ಪ್ರವಾಸ

Summer Tour: ಕಾಶ್ಮೀರ ಪ್ರವಾಸ ಮಾಡಲೊಂದು ಚಾನ್ಸ್! ಐ ಆರ್ ಸಿ ಟಿ ಸಿಯಿಂದ ವಿಶೇಷ ಪ್ಯಾಕೇಜ್

Summer Tour: ಕಾಶ್ಮೀರಕ್ಕೆ ಭೇಟಿ ನೀಡಲು ಈಗ ಸೂಕ್ತ ಸಮಯ. ಹಿಮದಿಂದ ಆವೃತವಾದ ಸುಂದರ ಭೂದೃಶ್ಯಗಳನ್ನು ಈಗ ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ಐಆರ್ ಟಿಸಿ ಯು ‘ಕಾಶ್ಮೀರ್ ಹೆವೆನ್ ಆನ್ ಅರ್ಥ್ ಎಕ್ಸ್ ಮುಂಬೈ’ ಪ್ಯಾಕೇಜ್ ಘೋಷಿಸಿದೆ. ಆಸಕ್ತರು ಇದರ ಪ್ರಯೋಜನವನ್ನು ಪಡೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Summer Tour
Koo

ಧರೆಯ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರಕ್ಕೆ (kashmir) ಪ್ರವಾಸ (tour) ಹೊರಡಲು ಈಗ ಸೂಕ್ತ ಸಮಯ. ಬೇಸಿಗೆಯ ಬಿಸಿಲಿನಿಂದ (Summer Tour) ಕಂಗೆಟ್ಟ ಜನರು ತಂಪಾದ ಪ್ರದೇಶದಲ್ಲಿ ಹೋಗಿ ಕೆಲ ಕಾಲ ಇದ್ದು ಬರಬೇಕು ಎಂದು ಬಯಸಿದರೆ ಐಆರ್ ಟಿಸಿ (IRTC) ವತಿಯಿಂದ ಟೂರ್ ಪ್ಯಾಕೇಜ್ ಘೋಷಣೆಯಾಗಿದೆ. ಆಸಕ್ತರು ಬ್ಯಾಗ್ ಪ್ಯಾಕ್ ,ಮಾಡಿ ಹೊರಡಲು ಸಿದ್ಧತೆ ನಡೆಸಬಹುದು.

ಇತ್ತೀಚೆಗೆ ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತವು ಕಣಿವೆ ಪ್ರದೇಶಕ್ಕೆ ಸಂಪೂರ್ಣವಾಗಿ ಬಿಳಿ ಬಣ್ಣ ಎರಕ ಹೊಯ್ದಂತೆ ಮಾಡಿದೆ. ಇದು ಪ್ರವಾಸೋದ್ಯಮ ಕ್ಷೇತ್ರದ ಉತ್ಸಾಹವನ್ನು ಪುನರುಜ್ಜೀವನಗೊಳಿಸಿದೆ. ಈಗಾಗಲೇ ಅನೇಕ ಪ್ರವಾಸಿಗರು ಕಾಶ್ಮೀರಕ್ಕೆ ಹೊರಡುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಮೋಡಿ ಮಾಡುವ ಭೂದೃಶ್ಯಗಳನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರ ಆಗಮನಕ್ಕೆ ಕಾಶ್ಮೀರವೂ ಕಾಯುವಂತಿದೆ.

ಪ್ರವಾಸಿಗರ ಉತ್ಸಾಹವನ್ನು ಹೆಚ್ಚಿಸಲು ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)ವು ‘ಕಾಶ್ಮೀರ್ ಹೆವೆನ್ ಆನ್ ಅರ್ಥ್ ಎಕ್ಸ್ ಮುಂಬೈ’ ಎಂಬ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಹೊರತಂದಿದೆ.


ಇದನ್ನೂ ಓದಿ: Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

ಈ ಪ್ಯಾಕೇಜ್ ಕಾಶ್ಮೀರದ ರಮಣೀಯ ಸೌಂದರ್ಯವನ್ನು ಅನ್ವೇಷಿಸಲು ಬಯಸುವವರಿಗೆ ಹೇಳಿ ಮಾಡಲ್ಪಟ್ಟಿದೆ. ಐದು ರಾತ್ರಿ ಮತ್ತು ಆರು- ದಿನಗಳ ಸಮಗ್ರ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಮೊದಲಾದ ಪ್ರಸಿದ್ಧ ಸ್ಥಳಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ ನಲ್ಲಿ ವಿಮಾನ ಟಿಕೆಟ್‌ಗಳು, ಹೊಟೇಲ್ ವಸತಿ, ಊಟ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿದೆ. ಪ್ರಯಾಣಿಕರ ಸಂಖ್ಯೆ ಮತ್ತು ಅವರೊಂದಿಗೆ ಬರುವ ಮಕ್ಕಳ ವಯಸ್ಸನ್ನು ಪರಿಗಣಿಸಿ ವಿಭಿನ್ನ ಪ್ರಯಾಣದ ಅನುಭವಕ್ಕೆ ಸರಿಹೊಂದಿಸಲು ಬೆಲೆಗಳನ್ನು ನಿಗದಿಪಡಿಸಲಾಗಿದೆ.


ಪ್ರವಾಸದ ದಿನ

ಮೇ ತಿಂಗಳಲ್ಲಿ 11, 15, 18, 25 ಜೂನ್ ತಿಂಗಳಲ್ಲಿ 1, 9, 15, 23, 26ರಂದು ಪ್ರವಾಸ ಹೊರಡುವ ಯೋಜನೆ ರೂಪಿಸಿಕೊಳ್ಳಬಹುದು. ಹೊಟೇಲ್ ವಾಸ್ತವ್ಯ ನಾಲ್ಕು ರಾತ್ರಿ ಶ್ರೀನಗರದಲ್ಲಿ ಮತ್ತು ಒಂದು ರಾತ್ರಿ ಪಹಲ್ಗಾಮ್ ನಲ್ಲಿ.

ದರ ಇಂತಿದೆ

ಒಬ್ಬರಿಗೆ 63,400 ರೂ., ಇಬ್ಬರಿಗೆ ಪ್ಯಾಕೇಜ್ ನಡಿಯಲ್ಲಿ ತಲಾ 54,100, ಮೂವರಿಗೆ ತಲಾ 50,700, 5 ರಿಂದ 11 ವರ್ಷದ ಒಳಗಿನ ಪ್ರತಿ ಮಕ್ಕಳಿಗೆ 48,400 ರೂ. ನಿಗದಿಪಡಿಸಲಾಗಿದೆ.

ಪ್ರವಾಸಿ ತಾಣಗಳು

ಟೂರ್ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಸುಪ್ರಸಿದ್ದ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಪಹಲ್ಗಾಮ್ , ಬೇತಾಬ್ ವಾಲಿ, ಅರು ವಾಲಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮೊದಲ ದಿನ ಭೇಟಿ ನೀಡಲಾಗುತ್ತದೆ. ಎರಡನೇ ದಿನ ದಾಲ್ ಸರೋವರದ ದಡದಲ್ಲಿರುವ ಹಾಜ್ರತ್ ಬಾಲ್ ಶ್ರೀನಿ ಗೆ ಭೇಟಿ ನೀಡಲಾಗುತ್ತದೆ. ಮೂರನೇ ದಿನ ಅವಂತೀಪುರ್, ಮೊಘಲ್ ಗಾರ್ಡನ್, ಶಂಕರಾಚಾರ್ಯ ಟೆಂಪಲ್, ಶಿಖರ ರೈಡ್ ಅನ್ನು ಒಳಗೊಂಡಿರುತ್ತದೆ. ನಾಲ್ಕನೇ ದಿನ ದೂದ್ ಪೆಟ್ರಿಯಲ್ಲಿ , ಐದನೇ ದಿನ ಗುಲ್ಮಾರ್ಗ್ ನಲ್ಲಿ ಕಳೆಯಲಾಗುತ್ತದೆ. ಆರನೇ ದಿನ ವಿಮಾನದಲ್ಲಿ ಮುಂಬಯಿ ತಲುಪುವುದರೊಂದಿಗೆ ಪ್ರವಾಸ ಕೊನೆಗೊಳ್ಳುತ್ತದೆ.

Continue Reading

ಪ್ರವಾಸ

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Jammu Tour: ಸೆಕೆಯ ತಾಪದಿಂದ ಒಂದೊಂದು ದಿನಕಳೆಯುವುದು ಕಷ್ಟ ಎನ್ನುವವರು ಜುಮ್ಮುವಿನ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮ ಕಣ್ಮನ ಸೆಳೆಯುವುದಂತೂ ಗ್ಯಾರಂಟಿ. ಈ ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Jammu Tour
Koo

ಬೆಂಗಳೂರು: ಎತ್ತರದ ಹಿಮಾಲಯದ ತಪ್ಪಲಿನಲ್ಲಿರುವ ಜಮ್ಮು ತುಂಬಾ ಚಳಿಯಿಂದ ಕೂಡಿದ ಪ್ರದೇಶವಾಗಿದೆ. ಹಾಗಾಗಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಬೆಂದು ಹೋದವರು ಎಸಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಈ ಸ್ಥಳಕ್ಕೆ ಪ್ರಯಾಣ ಬೆಳೆಸಬಹುದು. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮನ್ನು ಮೋಡಿ ಮಾಡುವುದಂತು ಸತ್ಯ. ಹಾಗಾಗಿ ಜಮ್ಮುವಿಗೆ ಪ್ರಯಾಣ (Jammu Tour) ಬೆಳೆಸುವವರು ಈ ಸ್ಥಳಗಳಿಗೆ ಭೇಟಿ ನೀಡಿ ಮತ್ತು ಈ ವಿಚಾರಗಳನ್ನು ತಿಳಿದುಕೊಂಡಿರಿ.

ಆಧ್ಯಾತ್ಮಿಕ ಸಾರ

ಅನೇಕ ಧರ್ಮಗುರುಗಳ ತವರೂರಾದ ಜಮ್ಮು ತನ್ನ ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ಇಸ್ಲಾಮಿಕ್ ದರ್ಗಾಗಳು ಮತ್ತು ಸಿಖ್ ಗುರುದ್ವಾರಗಳ ಜೊತೆಗೆ ಪ್ರಸಿದ್ಧ ಹಿಂದೂ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ರಘುನಾಥ ದೇವಾಲಯದ ಸಂಕೀರ್ಣವು ಉತ್ತರ ಭಾರತದ ಅತಿದೊಡ್ಡ ದೇವಾಲಯದ ಸಂಕೀರ್ಣಗಳಲ್ಲಿ ಒಂದಾಗಿದೆ. ಇದು ಎತ್ತರದ ಗೋಪುರಗಳನ್ನು ಹೊಂದಿದೆ. ಅಲ್ಲದೇ ಇಲ್ಲಿನ ಬಾವೆ ವಾಲಿ ಮಾತಾ ದೇವಸ್ಥಾನ ಮತ್ತು ಪೀರ್ ಬಾಬಾ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ.

Vaishno Devi Yatra Jammu

ದೈವಿಕ ವೈಷ್ಣೋದೇವಿ ಯಾತ್ರೆ

ತ್ರಿಕೂಟ ಬೆಟ್ಟ ಗಳಲ್ಲಿರುವ ಮಾತಾ ವೈಷ್ಣೋದೇವಿಯ ಪವಿತ್ರ ಗುಹೆಯ ದೇಗುಲಕ್ಕೆ ಚಾರಣ ಮಾಡುವುದು ಭಾರತದ ಅತ್ಯಂತ ಪೂಜ್ಯ ತೀರ್ಥಯಾತ್ರೆಗಳಲ್ಲಿ ಒಂದು ಎನ್ನಬಹುದು. ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಜನರು ಬಂದು ತಮ್ಮ ದೀರ್ಘ ಪ್ರಯಾಣದ ಮೂಲಕ ಭಕ್ತಿಯನ್ನ ಸಾರುತ್ತಾರೆ. ತೀರ್ಥಯಾತ್ರೆಯ ಸಮಯದಲ್ಲಿ ಈ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗುವುದನ್ನು ತಡೆಯಲು ಅಧಿಕಾರಿಗಳನ್ನು ನೀಮಿಸಲಾಗುತ್ತದೆ. ಅವರು ಭದ್ರತಾ ಕ್ರಮಗಳನ್ನು ನೋಡಿಕೊಳ್ಳುತ್ತಾರೆ.

Jammu navaratri

ಸಂಸ್ಕೃತಿ ಮತ್ತು ಹಬ್ಬಗಳು

9 ದಿನಗಳ ನವರಾತ್ರಿ ಉತ್ಸವವನ್ನು ಜಮ್ಮುವಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮೇಳಗಳನ್ನು ನಡೆಸಲಾಗುತ್ತದೆ. ಸ್ಥಳೀಯ ನೃತ್ಯಗಳು, ಸಂಗೀತ ಮತ್ತು ಕರಕುಶಲ ವಸ್ತುಗಳ ಪ್ರದರ್ಶನೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನವೆಂಬರ್ ನಲ್ಲಿ ಕಲಾಕೇಂದ್ರವು ವಾರ್ಷಿಕ ಜಮ್ಮು ಉತ್ಸವವನ್ನು ಆಯೋಜಿಸುತ್ತದೆ.

Kesar Fenni

ಫ್ಯೂಷನ್ ಆಹಾರ

ಜಮ್ಮುವಿನ ಪಾಕಪದ್ಧತಿಯು ಪಂಜಾಬ್, ಕಾಶ್ಮೀರ ಮತ್ತು ದಕ್ಷಿಣ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳ ರುಚಿಗಳನ್ನು ಹೊಂದಿರುತ್ತದೆ. ನೀವು ಇಲ್ಲಿಗೆ ಭೇಟಿ ನೀಡಿದರೆ ರಾಜ್ಮಾ-ಅಕ್ಕಿ, ಚೋಲೆ-ಪುರಿಮತ್ತು ಕುಲ್ಚಾದಂತಹ ವಿಶೇಷ ತಿಂಡಿಗಳ ರುಚಿ ಸವಿಯುವುದನ್ನು ಮರೆಯಬೇಡಿ. ಇದಲ್ಲದೇ ಫಿರ್ನಿ(ಅಕ್ಕಿ ಕಡುಬು), ಗುಡ್ ಪಾಪ್ಡಿ ಮತ್ತು ಕಳಾರಿಯಂತಹ ಭಕ್ಷ್ಯಗಳನ್ನು ಕೇಸರ್ ಗುಲ್ಶನ್‌ನ ಪ್ರಸಿದ್ಧ ಕೇಸರಿ ಚಹಾ ಅಥವಾ ಕಾಶ್ಮೀರಿ ಕಹ್ವಾದೊಂದಿಗೆ ಸವಿಯಿರಿ.

ಪ್ರಕೃತಿಯ ಅದ್ಭುತ

ಜಮ್ಮುವಿನ ಸಮೀಪದಲ್ಲಿರುವ ಪಟ್ನಿಟಾಪ್ ಗಿರಿಧಾಮವು ಬೇಸಿಗೆಯಲ್ಲಿ ಅಥವಾ ಚಳಿಗಾಲದಲ್ಲಿ ಪ್ರವಾಸಿಗರಿಗೆ ಕಾಲ ಕಳೆಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೀಯಿಂಗ್ ನಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಇಲ್ಲಿನ ಸನ್ಸಾರ್ ಮತ್ತು ಮನ್ಸಾರ್ ಸರೋವರದಲ್ಲಿ ನೀವು ಕ್ಯಾಂಪಿಂಗ್ ಮತ್ತು ಬೋಟಿಂಗ್ ಮಾಡಬಹುದು.

Badamwari Garden in Srinagar, Jammu and Kashmir

ಐತಿಹಾಸಿಕ ತಾಣಗಳು

ತಾವಿ ನದಿಯ ಮೇಲಿರುವ ಬಹು ಕೋಟೆಯು ಜಮ್ಮುವಿನ ವಿಶೇಷವಾದ ಐತಿಹಾಸಿಕ ತಾಣವಾಗಿದೆ. ಇಲ್ಲಿ ಹಲವಾರು ಹಿಂದೂ ದೇವಾಲಯಗಳಿವೆ. ಜೊತೆಗೆ ಸ್ಮಾರಕ, ಆಹಾರ ಪದಾರ್ಥಗಳವರೆಗೆ ಎಲ್ಲವನ್ನೂ ಮಾರಾಟ ಮಾಡುವಂತಹ ಅಂಗಡಿಗಳನ್ನ ಹೊಂದಿದೆ. ಇಲ್ಲಿ ಪಾಳು ಬಿದ್ದಿರುವ ಸಿಮ್ಥಾನ್ ಶಿಖರವನ್ನು ಏರಿದರೆ ಜಲಚರಗಳು ಮತ್ತು ಕಲ್ಲಿನ ಕಟ್ಟಡಗಳನ್ನು ನೋಡಬಹುದು.

Jammu

ಟ್ರಾವೆಲ್ ಪಾಯಿಂಟರ್ಸ್

ಜಮ್ಮುವಿಗೆ ಪ್ರಯಾಣಿಸಲು ಬಯಸುವವರು ದೆಹಲಿ , ಶ್ರೀನಗರ, ಮುಂಬೈ ಮತ್ತು ಅಮೃತಸರದಂತಹ ಪ್ರಮುಖ ನಗರಗಳಿಂದ ನೇರ ವಿಮಾನಗಳ ವ್ಯವಸ್ಥೆಯಿದೆ. ಹಾಗೇ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರವಾಣಿಸುವವರಿಗೆ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆ ಇದ್ದು, ಇವು ಹಿಮಾಚಲ ಪ್ರದೇಶದ ಹತ್ತಿರದ ಪ್ರವಾಸಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Travel Time: ಸಮುದ್ರದಲ್ಲೇ ಜೀವನ; ಹೊಸ ಬಗೆಯ ಅಲೆಮಾರಿ ಪ್ರವಾಸಿ ದಂಪತಿ ಇವರು!

ಜಮ್ಮುವಿಗೆ ಪ್ರಯಾಣಿಸುವವರು ನೆನಪಿಡಬೇಕಾದ ವಿಷಯಗಳು

ನೀವು ಜಮ್ಮುವಿಗೆ ಪ್ರಯಾಣ ಬೆಳೆಸುವಾಗ ನಿಮ್ಮ ಐಡಿ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಿ. ಹಾಗೇ ರಾತ್ರಿಯ ಸಮಯದಲ್ಲಿ ಪ್ರಯಾಣಿಸುವವರು ನಿರ್ಜನ ಪ್ರದೇಶದಲ್ಲಿ ಮತ್ತು ಮಂದ ಬೆಳಕಿರುವ ಕಾಲುದಾರಿಗಳಲ್ಲಿ ಸಾಗುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ಸಾಧಾರಣ ಉಡುಪುಗಳನ್ನು ಧರಿಸಿ. ಇಲ್ಲಿನ ಪವಿತ್ರ ಸ್ಥಳಗಳಿಗೆ ಪ್ರವೇಶಿಸುವಾಗ ನಿಮ್ಮ ಪಾದರಕ್ಷೆಗಳನ್ನು ಹೊರಗೆ ಬಿಚ್ಚಿಡಿ. ಹಾಗೇ ಯಾವುದೇ ಸ್ಥಳೀಯ ಅಥವಾ ಅಧಿಕೃತ /ಮಿಲಿಟರಿ ಸಂಸ್ಥೆಗಳ ಫೋಟೊಗಳನ್ನು ಕ್ಲಿಕ್ಕಿಸುವ ಮುನ್ನ ಅನುಮತಿ ಪಡೆಯಿರಿ.

Continue Reading
Advertisement
Porbandar Tour
ಪ್ರವಾಸ3 seconds ago

Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

hd revanna prajwal revanna case
ಪ್ರಮುಖ ಸುದ್ದಿ21 mins ago

Prajwal Revanna Case: ಕಾಣದಂತೆ ಮಾಯವಾದ ಎಚ್‌ಡಿ ರೇವಣ್ಣ ! ಇಂದು ಜಾಮೀನು ಸಿಗದೇ ಹೋದರೆ….

Cocoa Price
ಕೃಷಿ24 mins ago

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

IPL 2024 POINTS TABLE
ಕ್ರೀಡೆ42 mins ago

IPL 2024 POINTS TABLE: ಕೆಕೆಆರ್​ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

prajwal revanna case hassan MP home
ಕ್ರೈಂ50 mins ago

Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

Robbery Case
ಕ್ರೈಂ55 mins ago

Robbery Case: ಕಾರು ತಪಾಸಣೆ ನೆಪದಲ್ಲಿ ಸುಲಿಗೆ; ಪೊಲೀಸರ ವಿರುದ್ಧವೇ ಕೇಳಿ ಬಂತು ಗಂಭೀರ ಆರೋಪ

Food Cleaning Tips Kannada
ಲೈಫ್‌ಸ್ಟೈಲ್1 hour ago

Food Cleaning Tips Kannada: ಹಣ್ಣು, ತರಕಾರಿಗಳಿಂದ ರಾಸಾಯನಿಕ ಅಂಶ ಸ್ವಚ್ಛಗೊಳಿಸುವ 5 ವಿಧಾನಗಳಿವು

Viral Video
ವೈರಲ್ ನ್ಯೂಸ್1 hour ago

Viral Video: ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

Salaar Movie Fails To Get Expected TRP Star Suvarna
ಸಿನಿಮಾ1 hour ago

Salaar Movie: ಕಿರುತೆರೆಯಲ್ಲಿ ‘ಸಲಾರ್’ಗೆ ಕಡಿಮೆ ಟಿಆರ್‌ಪಿ: ಪ್ಲಾಪ್‌ ಆಗಲು ಕಾರಣವೇನು?

RCB vs GT
ಕ್ರಿಕೆಟ್1 hour ago

RCB vs GT: ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ; ಮೆಟ್ರೋ ಸೇವೆ ವಿಸ್ತರಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ18 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌