Offbeat news: ಆಹಾ ಎಂಥ ಕಲೆ! ಉಪ್ಪಿನಕಾಯಿ ಕಲೆಗೆ ₹ 4.9 ಲಕ್ಷ! - Vistara News

ವೈರಲ್ ನ್ಯೂಸ್

Offbeat news: ಆಹಾ ಎಂಥ ಕಲೆ! ಉಪ್ಪಿನಕಾಯಿ ಕಲೆಗೆ ₹ 4.9 ಲಕ್ಷ!

ʻಕಲೆʼ ಎಲ್ಲಿ ಬೇಕಾದರೂ ಮೂಡಬಹುದು. ಹಾಲ್‌ನ ಗೋಡೆಯಲ್ಲಿ ಮಗು ಗೀಚುವುದೂ ಕಲೆಯೇ. ಆದರೆ ಅದನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವುದಕ್ಕೆ ಮಾತ್ರ ಬೇರೆಯೇ ಜಾಣ್ಮೆ ಬೇಕು!

VISTARANEWS.COM


on

pickle art
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆಯಿದೆ. ಹಾಗಾಯಿತು ಈ ಕಥೆಯೂ. ಗೋಡೆಗೆ ಅಂಟಿದ ಉಪ್ಪಿನಕಾಯಿಯ ಕಲೆಯೂ ಇಲ್ಲಿ ʻಆರ್ಟ್‌ ಪೀಸುʼ ಎಂದು ೪.೯ ಲಕ್ಷ ರೂಪಾಯಿಗಳಿಗೆ ಮಾರಲು ಹೊರಟಿದ್ದಾರೆ!

ಸಾಂಪ್ರದಾಯಿಕ ಕಲೆಗೆ ಇಂದು ಇರುವ ಬೇಡಿಕೆಯಂತೆಯೇ ಸಮಕಾಲೀನ ಹೊಸ ಬಗೆಯ ಕಲೆಗೂ ಭಾರೀ ಬೇಡಿಕೆಯಿದೆ. ಏನು ಮಾಡಿದರೂ ಕಲೆ ಎಂದು ನೋಡುವ ದೃಷ್ಟಿಕೋನದ ಮಂದಿ ಈಗಿದ್ದಾರೆ. ನಿರ್ಧಿಷ್ಟ ಆಕಾರ, ಬಣ್ಣ, ರೂಪು ಇಲ್ಲದಿದ್ದರೂ ಹೊಸ ಹೊಸ ಕ್ರೇಜಿ ಐಡಿಯಾಗಳೇ ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತವೆ. ಇದೂ ಇಂಥದ್ದೇ ಒಂದು ಪ್ರಕರಣ. ಇಲ್ಲೊಬ್ಬ ಕಲಾಕಾರರಿಗೆ ಉಪ್ಪಿನಕಾಯಿ ಮೂಡಿಸಿದ ಕಲೆಯೂ ಕಲೆಯಾಗಿ ಕಂಡಿದೆ.

ಸಿಡ್ನಿಯ ಆರ್ಟ್‌ ಗ್ಯಾಲರಿಯೊಂದರಲ್ಲಿ ಮೆಕ್‌ ಡೋನಾಲ್ಡ್‌ನ ಚೀಸ್‌ ಬರ್ಗರಿನೊಳಗಿದ್ದ ಉಪ್ಪಿನಕಾಯಿಯ ತುಂಡೊಂದು ಹಾರಿ ಗೋಡೆಯ ಮೇಲೆ ತನ್ನ ಮುದ್ರೆಯನ್ನೊತ್ತಿದಂತಹ ಕಲಾಕೃತಿ ಪ್ರದರ್ಶನ ಕಾಣುತ್ತಿದ್ದು, ಸದ್ಯಕ್ಕಿದು ಇಂಟರ್ನೆಟ್‌ನಲ್ಲಿ ಭಾರೀ ವೈರಲ್‌ ಆಗಿದೆ.

ʻಪಿಕ್ಕಲ್‌ʼ ಹೆಸರಿನ ಈ ಕಲಾಕೃತಿ ಸದ್ಯಕ್ಕೀಗ ಮ್ಯಾಥ್ಯೂ ಗ್ರಿಫಿನ್‌ ಎಂಬ ಕಲಾಕಾರನ ಸೊತ್ತಾಗಿದ್ದು, ಈತ ಇದನ್ನು ಸುಮಾರು ೪.೯೩ ಲಕ್ಷ ರೂಪಾಯಿಗಳಿಗೆ ಮಾರಲು ಹೊರಟಿದ್ದಾನೆ. ಈತನ ಈ ಪಿಕ್ಕಲ್‌ ಹೆಸರಿನ ಕಲಾಕೃತಿ ಸಿಡ್ನಿಯ ಮೈಕೆಲ್‌ ಲೆಟ್‌ ಗ್ಯಾಲರಿಯಲ್ಲಿ ಈತನದೇ ನಾಲ್ಕು ಕಲಾಕೃತಿಗಳ ಪೈಕಿ ಒಂದಾಗಿ ಪ್ರದರ್ಶನಗೊಂಡಿದ್ದು, ಇದರ ಬೆಲೆ ೧೦,೦೦೦ ನ್ಯೂಜಿಲ್ಯಾಂಡ್‌ ಡಾಲರ್‌ಗಳು ಅಂದರೆ ಸುಮಾರು ೪.೯೩ ಲಕ್ಷ ರೂಪಾಯಿಗಳು ಎಂದು ನಿಗದಿಪಡಿಸಲಾಗಿದೆ.

ಈ ಕಲಾಕೃತಿಯ ಕೆಳಗೆ ಆತನೇ ಬರೆದ ತಲೆಬರಹವ ವಿವರಣೆಯಲ್ಲಿ, “ಮೆಕ್‌ ಡೊನಾಲ್ಡ್ಸ್‌ ಚೀಸ್‌ ಬರ್ಗರ್‌ನ ಉಪ್ಪಿನಕಾಯಿಯ ತುಂಡೊಂದು ಗೋಡೆಯ ಮೇಲೆ ಹಾರಿದಾಗ” ಎಂದಿದೆ. ಕಲಾಕೃತಿಯ ಚಿತ್ರವನ್ನು ನೋಡಿದ ಇಂಟರ್ನೆಟ್‌ ಜನತೆ ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಹಲವರು ಇದಕ್ಕೆ ಕಾಮೆಂಟುಗಳನ್ನು ಮಾಡುತ್ತಿದ್ದು, ಕೆಲವರು ʻಜೀನಿಯಸ್‌ʼ, ʻಬ್ರಿಲಿಯಂಟ್‌ʼ ಎಂದೆಲ್ಲಾ ಈ ಕಲಾಕಾರನ ಐಡಿಯಾವನ್ನು ಬಣ್ಣಿಸಿದ್ದಾರೆ. ಇನ್ನೂ ಕೆಲವರು ʻನನ್ನ ಜೀವನದಲ್ಲೇ ನೋಡಿದ ಅದ್ಭುತ ಕಲಾಕೃತಿಯಿದುʼ ಎಂದು ನಗೆಯಾಡಿದ್ದಾರೆ. ಇನ್ನೂ ಕೆಲವರು, ʻಕಲೆ ಸತ್ತು ಹೋಗಿದೆ, ಸ್ಟುಪಿಡ್‌, ಯೂಸ್ಲೆಸ್‌ʼ ಎಂದು ನೇರವಾಗಿ ಬೈದಿದ್ದಾರೆ.

ಇದನ್ನೂ ಓದಿ: ಆನೆಯಲ್ಲ, ಆಮೆಗಾಗಿ ಒಂದೂವರೆ ಗಂಟೆ ನಿಂತ ರೈಲು!

ಇನ್ನೊಬ್ಬ, ನಾನೂ ಹಿಂದೆ ಸಣ್ಣವನಿದ್ದಾಗ ಮೆಕ್‌ ಡೊನಾಲ್ಡ್ಸ್‌ನಲ್ಲಿ ಉಪ್ಪಿನಕಾಯಿ ತುಂಡೊಂದನ್ನು ಹೀಗೆಯೇ ಹಾರಿಸಿದ್ದೆ, ಆದರೆ ನನ್ನನ್ನು ಬೈದು ಹೊರಗಟ್ಟಿದ್ದರು, ಈಗ ನೋಡಿದರೆ ಇದು ಕಲೆ!” ಎಂದು ತಮಾಷೆ ಮಾಡಿದ್ದಾರೆ.

ಸಿಡ್ನಿಯ ಆರ್ಟ್‌ ಗ್ಯಾಲರಿಯ ನಿರ್ದೇಶಕ ರ್ಯಾನ್‌ ಮೂರ್‌ ಮಾತನಾಡುತ್ತಾ, ʻಜನ ತಮಾಷೆ ಮಾಡಿ ನಗುವುದು ಸಹಜವೇ. ಯಾಕೆಂದರೆ ಈ ಕಾನ್ಸೆಪ್ಟ್‌ ತುಂಬ ತಮಾಷೆಯಾಗಿದೆʼ ಎಂದಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಕಲೆ ಯಾವುದೆಂದು ಕಲಾಕಾರರು ನಿರ್ಧಾರ ಮಾಡುವುದಿಲ್ಲ. ಸಮಾಜ ಯಾವುದನ್ನು ಕಲೆ ಎಂದು ಮಾತಾಡುತ್ತದೋ ಅದು ನಿಜವಾಗಿಯೂ ಕಲೆಯಾಗುತ್ತದೆ. ಈಗ ಈ ಕಲಾಕೃತಿಯೂ ಕೂಡಾ, ಗೋಡೆಗಂಟಿದ ಉಪ್ಪಿನಕಾಯಿಯಂತೆ ಕಾಣುವುದರಿಂದ ಇದೂ ಕಲಾಕೃತಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಹೇಳಿದ್ದಾರೆ.

ಸದ್ಯ ಈ ಕಲಾಕೃತಿ ೧೦,೦೦೦ ನ್ಯೂಜಿಲ್ಯಾಂಡ್‌ ಡಾಲರ್ಸ್‌ ಎಂಬ ಮುಖಬೆಲೆಯನ್ನು ಹೊತ್ತು ಪ್ರದರ್ಶನಗೊಳ್ಳುತ್ತಿದೆ. ಇದನ್ನು ಕೊಳ್ಳುವವರು ಇದಲ್ಲದೆ ಪ್ರತ್ಯೇಕ ೪.೪೪ ನ್ಯೂಜಿಲ್ಯಾಂಡ್‌ ಡಾಲರ್‌ಗಳನ್ನೂ ನೀಡಿ ಚೀಸ್‌ ಬರ್ಗರ್‌ ಕೂಡಾ ಕೊಳಳಬೇಕಾಗುತ್ತದೆ. ಯಾಕೆಂದರೆ, ಕೊಂಡವರಿಗೆ ಚೀಸ್‌ ಬರ್ಗರ್‌ನಿಂದ ಉಪ್ಪಿನಕಾಯಿ ಹಾರಿಸುವುದು ಹೇಗೆ ಎಂಬ ಪ್ರಾತ್ಯಕ್ಷಿಕೆಯನ್ನೂ ಇಲ್ಲಿ ತೋರಿಸಿಕೊಡಲಾಗುತ್ತಿದೆಯಂತೆ!

ಸದ್ಯಕ್ಕೆ, ಎಲ್ಲರೂ ಉಪ್ಪಿನಕಾಯಿಯನ್ನು ಗೋಡೆಗೆ ಹಾರಿಸಿ ಕಲಾಕಾರರಾಗುವ ಲಕ್ಷಣ ತೋರಿಸುತ್ತಿದ್ದಾರಂತೆ!

ಇದನ್ನೂ ಓದಿ: Viral Video | ಗೋವಿಗೆ ಅಮ್ಮ ಎಂದು ಸುಮ್ಮನೆ ಹೇಳೋಲ್ಲ; ಈ ದೃಶ್ಯಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಹಾವೇರಿ

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

assault case : ಪತಿ- ಪತ್ನಿ ನಡುವಿನ ಜಗಳಕ್ಕೆ ಅಡಿಕೆ ಗಿಡಗಳು ಬಲಿಯಾಗಿವೆ. ಪತ್ನಿ ಮನೆಗೆ ಬಾರದ್ದಕ್ಕೆ ಕೋಪಗೊಂಡ ಅಳಿಯ ಮಾವನ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾನೆ.

VISTARANEWS.COM


on

By

assault case
Koo

ಹಾವೇರಿ : ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲ ಎಂದು ಮಾವನ ಮೇಲೆ ಸಿಟ್ಟಾದ ಅಳಿಯನೊಬ್ಬ, ಅಡಕೆ ತೋಟ ನಾಶಪಡಿಸಿದ್ದಾನೆ. ಮಾವ ಬೆಳೆಸಿದ್ದ 106 ಅಡಿಕೆ ಗಿಡಗಳನ್ನು ಕಡಿದು ಸಿಟ್ಟು (Assault Case) ಹೊರಹಾಕಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಸಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

assault case
assault case

ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರಗೆ ಸೇರಿದ ಅಡಿಕೆ ತೋಟವನ್ನು ಅಳಿಯ ಬಸವರಾಜ್ ಎಂಬಾತ ಅಡಿಕೆ ಬೆಳೆ ನಾಶ ಮಾಡಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಬಸವರಾಜ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಪತ್ನಿ ಜತೆಗೆ ನಿತ್ಯವು ಜಗಳವಾಡುತ್ತಿದ್ದ. ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ತವರು ಮನೆ ಸೇರಿದ್ದಳು. ಮೂರು ತಿಂಗಳಿನಿಂದ ಪತ್ನಿ ತವರು ಮನೆಯಲ್ಲಿ ಇದ್ದಿದ್ದಕ್ಕೆ ಸಿಟ್ಟಾದ ಬಸವರಾಜ್‌, ಅಡಿಕೆ ತೋಟವನ್ನು ನಾಶ ಮಾಡಿದ್ದಾನೆ. ಪತಿ- ಪತ್ನಿ ನಡುವಿನ ಜಗಳಕ್ಕೆ ಅಡಕೆ ಗಿಡಗಳು ಬಲಿಯಾಗಿವೆ.

ಇದನ್ನೂ ಓದಿ: Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ

ಬೆಳಗಾವಿ: ಕಂಠ ಪೂರ್ತಿ ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ ಬಿದ್ದಿದೆ. ನಡುಬೀದಿಯಲ್ಲೇ ಕುಡುಕ ಅಳಿಯನ ಹಿಡಿದು ಅತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಹೋಗಲು ಪತ್ನಿ, ಅತ್ತೆ ಹರಸಾಹಸ ಪಡುತ್ತಿದ್ದರು. ಮನೆಗೆ ಬರಲು ಹಿಂದೇಟ್ಟು ಹಾಕುತ್ತಿದ್ದ ಕುಡುಕ ಅಳಿಯನಿಗೆ ಕಪಾಳಮೋಕ್ಷ ಮಾಡಿ ಹಿಗ್ಗಾಮುಗ್ಗಾ ಥಳಿಸಿದರು. ಕುಡುಕನ ಅವಾಂತರಕ್ಕೆ ಸ್ಥಳೀಯರು ಹೈರಾಣಾದರು. ಜತೆಗೆ ಅಲ್ಲಿದ್ದವರೇ ವಿಡಿಯೊ ಮಾಡಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು ಗ್ರಾಮಾಂತರ

Viral News : ದೊಡ್ಡಬಳ್ಳಾಪುರದಲ್ಲಿ ಮಂಗನಾಟ; ಮನೆಯೊಳಗೆ ನುಗ್ಗಿ ತಿಂಡಿ ಸಿಗದ್ದಕ್ಕೆ ಐಫೋನ್‌ ಹೊತ್ತೊಯ್ದ ಕೋತಿ!

VISTARANEWS.COM


on

By

Monkey enters house in Doddaballapura takes away iPhone
Koo

ದೊಡ್ಡಬಳ್ಳಾಪುರ: ಮಹಿಳೆಯ ಐಫೋನ್ ಹೊತ್ತೊಯ್ದ ಕೋತಿಯೊಂದು ಟವರ್ ಏರಿದ ಘಟನೆ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ (Viral News) ನಡೆದಿದೆ. ತುಳಸಿ ಎಂಬುವವರ ಮನೆಗೆ ನುಗ್ಗಿದ ಮಂಗವೊಂದು ತಿಂಡಿಗಾಗಿ ಹುಡುಕಾಡಿದೆ. ತಿಂಡಿ ಸಿಗದೆ ಇದ್ದಾಗ, ಚಾರ್ಜಿಂಗ್‌ ಹಾಕಿದ್ದ ಐಫೋನ್‌ ಕಂಡಿದೆ. ಕ್ಷಣಾರ್ಧದಲ್ಲೆ ಐಫೋನ್‌ ಹೊತ್ತೊಯ್ದು ಟವರ್ ಏರಿದಿದೆ. ಹೀಗಾಗಿ ಮೊಬೈಲ್‌ ವಾಪಸ್‌ ಪಡೆಯಲು ಮಹಿಳೆ ಹಾಗೂ ಸ್ಥಳೀಯರು ಹರಸಾಹಸ ಪಟ್ಟರು. ತಿಂಡಿ ಕೊಡುತ್ತೇವೆ ಎಂದರು ಮೊಬೈಲ್‌ ಕೊಡದೆ ಮಂಗನಾಟಕ್ಕೆ ಜನರು ಸುಸ್ತ್‌ ಆದರು.

ಜಿಂಕೆ ಬೇಟೆಯಾಡಿದ ಕಿಡಿಗೇಡಿಗಳು, ಕರೆಂಟ್‌ ಶಾಕ್‌ಗೆ ಕೋತಿ ಸಾವು

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಹೆದ್ದಾರಿ ಬದಿಯಲ್ಲಿ ಜಿಂಕೆಯ ಶವ ಪತ್ತೆಯಾಗಿದೆ. ಕಿಡಿಗೇಡಿಗಳು ಮುಂಜಾನೆ ಜಿಂಕೆಯನ್ನು ಕೊಂದು ಹೆದ್ದಾರಿ ಬದಿಯಲ್ಲಿ ಬಿಸಾಡಿದ್ದಾರೆ. ಬೆಳಗ್ಗೆ ಕೆಲವರು ವಾಕಿಂಗ್ ಹೋದಾಗ ಜಿಂಕೆ‌ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಜಿಂಕೆಯನ್ನು ಬೇಟೆಯಾಡಿ ತಂದು ಬಿಸಾಕಿ ಹೋಗಿರುವ ಶಂಕೆ ಇದೆ. ಜಿಂಕೆ ಮೃತದೇಹ ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ವಿದ್ಯುತ್‌ ತಗುಲಿ ಮಂಗ ಸಾವು

ವಿದ್ಯುತ್ ತಗುಲಿ ಮಂಗವೊಂದು ಮೃತಪಟ್ಟಿದೆ. ಹೀಗಾಗಿ ಗ್ರಾಮಸ್ಥರು ಹಿಂದೂ ವಿಧಿವಿಧಾನದಂತೆ ಅಂತ್ಯಕ್ರಿಯೆ ನೇರವೆರಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನುಷ್ಯರಿಗೆ ಅಂತ್ಯಕ್ರಿಯೆ ಮಾಡುವ ರೀತಿಯಲ್ಲಿ ಮಂಗನಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಊರು ತುಂಬಾ ಮೆರವಣಿಗೆ ಮಾಡಿ ಶವಸಂಸ್ಕಾರ ನೆರವೇರಿಸಿದ್ದಾರೆ.

ಇದನ್ನೂ ಓದಿ: Acid attack: ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಯುವಕನ ಮೇಲೆ ಆ್ಯಸಿಡ್ ದಾಳಿ!

ಚಾಮುಂಡಿ ಬೆಟ್ಟದಲ್ಲಿ ಹೆಬ್ಬಾವು ಪ್ರತ್ಯಕ್ಷ

ಚಾಮುಂಡಿ ಬೆಟ್ಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷಗೊಂಡಿದೆ. ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ತಡರಾತ್ರಿ ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟುತ್ತಿರುವುದನ್ನು ಕಂಡು ವಾಹನ ಸವಾರರು ಗಾಬರಿಗೊಂಡಿದ್ದಾರೆ. ಹೆಬ್ಬಾವು ಅರಣ್ಯ ಪ್ರದೇಶದೊಳಗೆ ತೆರಳುವವರೆಗೆ ಕೆಲಕಾಲ ಅಲ್ಲೇ ನಿಂತು ವೀಕ್ಷಣೆ ಮಾಡಿದ ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಮಲೆನಾಡಿನಲ್ಲಿ ಕಾಡಾನೆ ಹಾವಳಿ

ಮಲೆನಾಡಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಯಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ತಡರಾತ್ರಿ ಎರಡು ಕಾಡಾನೆಗಳು ದಾಳಿ ಮಾಡಿದೆ. ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ, ನಾಗರಾಜ್ ಎಂಬುವರ ತೋಟ-ಹೊಲದಲ್ಲಿರುವ ಬೆಳೆ ನಾಶವಾಗಿದೆ. ಅಡಿಕೆ ಹಾಗೂ ತೆಂಗಿನ ಮರಗಳನ್ನು ಬುಡಮೇಲು ಮಾಡಿದೆ. ಜೋಳ ಹಾಗೂ ಕಬ್ಬನ್ನು ನಾಶ ಮಾಡಿರುವುದರಿಂದ ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಆನೆಗಳ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ರೈತರ ಆಕ್ರೋಶಿಸಿದ್ದಾರೆ.

ಹಾಸನದಲ್ಲಿ ಬೀಟಮ್ಮ ಗ್ಯಾಂಗ್‌ ಹಾವಳಿ

ಹಾಸನ ಜಿಲ್ಲೆಯಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಮುಂದುವರಿದಿದೆ. ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಾಸನದ ಬೇಲೂರು ತಾಲೂಕಿನ, ತಾವರೆಕೆರೆ ಗ್ರಾಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡಿದೆ. ಭತ್ತ, ಕಾಫಿ, ಬಾಳೆ, ನಾಟಿ ಮಾಡಿದ ಭತ್ತ ಸೇರಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ. ಬೀಟಮ್ಮ ಗ್ಯಾಂಗ್‌ನ ಹಾವಳಿಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Drowned In Water : ಬೆಂಗಳೂರಿನಲ್ಲಿ ರೀಲ್ಸ್ ಮಾಡಲು ಕೆರೆಗೆ ಹಾರಿದವನು ನಾಪತ್ತೆ! ಮೈಸೂರಿನಲ್ಲಿ ನದಿಗೆ ಜಿಗಿದು ಯುವಕ ಸೂಸೈಡ್‌

Drowned In Water : ಬೆಂಗಳೂರಿನಲ್ಲಿ ರೀಲ್ಸ್ ಮಾಡಲು ಕೆರೆಗೆ ಹಾರಿದ ಯುವಕ ನಾಪತ್ತೆಯಾಗಿದ್ದರೆ, ಮೈಸೂರಿನಲ್ಲಿ ಯುವಕನೊಬ್ಬ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

VISTARANEWS.COM


on

By

Drowned in water
Koo

ಬೆಂಗಳೂರು: ಬೆಂಗಳೂರಿನ ಮಾರತಹಳ್ಳಿ ಪಣತ್ತೂರು ಕೆರೆಗೆ ಇಳಿದ (Drowned In Water) ಯುವಕನೊರ್ವ ನಾಪತ್ತೆ ಆಗಿದ್ದಾನೆ. ರೀಲ್ಸ್ ಮಾಡಲು ಮೂವರು ಸ್ನೇಹಿತರು ಕೆರೆ ಬಳಿ ಬಂದಿದ್ದರು. ಈ ವೇಳೆ ರೀಲ್ಸ್ ಮಾಡಲು ಇಬ್ಬರು ಕೆರೆ ಇಳಿದು ಈಜಿಕೊಂಡು ಹೋಗಿದದರು. ಇತ್ತ ದಡದಲ್ಲಿ ನಿಂತು ಒಬ್ಬ ವಿಡಿಯೋ ಮಾಡುತ್ತಿದ್ದ.

ಈಜಲು ಹೋದ ಇಬ್ಬರಲ್ಲಿ ಓರ್ವ ನೋಡು ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾನೆ. ನಿನ್ನೆ ಭಾನುವಾರ ಸಂಜೆ 4.20ಕ್ಕೆ ಘಟನೆ ನಡೆದಿದೆ. ಇಬ್ಬರು ಯುವಕರು ಒಟ್ಟಿಗೆ ನೀರಿಗೆ ಹಾರಿ ಈಜುತ್ತಾ ಹೋಗಿದ್ದಾರೆ. ಕೆರೆ ಮಧ್ಯದಲ್ಲಿ ಹೋದಾಗ ಯುವಕನಿಗೆ ಈಜಲು ಕಷ್ಟವಾಗಿದೆ. ವಾಪಸ್‌ ಹಿಂದಿರುಗಲು ಪ್ರಯತ್ನಿಸಿದ್ದಾನೆ. ಆದರೆ ಏಕಾಏಕಿ ನೀರಿನಲ್ಲಿ ಮುಳುಗಿದ್ದಾನೆ. ಮತ್ತೊಬ್ಬ ಈಜಿ ದಡ ದಾಟಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Road Accident : ಬೈಕ್‌ಗೆ ಕಾರು ಡಿಕ್ಕಿ; ಪೋಷಕರ ಕಣ್ಣೆದುರೆ ಹಾರಿ ಬಿದ್ದ 5 ವರ್ಷದ ಮಗು ದಾರುಣ ಸಾವು

ಮೈಸೂರಿನಲ್ಲಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ನದಿಗೆ ಹಾರಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಘಟನೆ ನಡೆದಿದೆ. ನರಸೀಪುರ ಪಟ್ಟಣದ ಕಬಿನಿ ಮೇಲ್ಸೇತುವೆ ಬಳಿ ಕೇತಳ್ಳಿಗ್ರಾಮದ ಮಲ್ಲಿಕಾರ್ಜುನ್ ನದಿಗೆ ಹಾರಿದವರು.

ಕೇತಳ್ಳಿ ಗ್ರಾಮದ ಮಲ್ಲೇಶ್ ಎಂಬುವರ ಪುತ್ರ ಮಲ್ಲಿಕಾರ್ಜುನ್‌ ಮೊಬೈಲ್, ಬಟ್ಟೆಯನ್ನು ಸೇತುವೆ ಮೇಲೆ ಇಟ್ಟು ನದಿಗೆ ಹಾರಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ನುರಿತ ಈಜುಗಾರರಿಂದ ಯುವಕನ ಶವಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾವಣಿಯ ಸಿಮೆಂಟ್‌ ಬಿದ್ದು ಅಂಗನವಾಡಿ ಮಕ್ಕಳಿಗೆ ಗಾಯ

ಅಂಗನವಾಡಿ ಚಾವಣಿಯ ಸಿಮೆಂಟ್ ಬಿದ್ದು ನಾಲ್ಕು ಮಕ್ಕಳಿಗೆ ಗಾಯವಾಗಿದೆ. ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳದ ಗಂಗಾವತಿಯ 6 ನೇ ವಾರ್ಡ್‌ನ ಮಹೆಬೂಬ್ ನಗರದ 11 ನೇ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದೆ. ಅಂಗನವಾಡಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಇದ್ದರು.

ಇದರಲ್ಲಿ ನಾಲ್ವರ ತಲೆ ಮತ್ತು ಕಾಲುಗಳಿಗೆ ಗಾಯವಾಗಿದೆ. ಅಮನ್, ಮನ್ವಿತ್, ಮರ್ದಾನ್ ಹಾಗೂ ಸುರಕ್ಷಾ ಗಾಯಗೊಂಡ ಮಕ್ಕಳು. ಗಂಗಾವತಿ ತಾಲೂಕು ಆಸ್ಪತ್ರೆಗೆ ನಗರಸಭೆ ಅಧ್ಯಕ್ಷ ಮತ್ತು ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗನವಾಡಿ ಕಟ್ಟಡ ನಿರ್ಮಿಸಿ 7 ವರ್ಷದಲ್ಲೇ ಚಾವಣಿ ಉದುರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bengaluru News : ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದ ನಾರ್ಥಿ ಲೇಡಿ; ʻತೊಲಗ್ರೋ ಮೊದಲುʼಎಂದು ಅಭಿಯಾನ ಶುರು

Bengaluru News : ಇತ್ತೀಚೆಗೆ ಹೊರರಾಜ್ಯದಿಂದ ಬಂದವರು ಬೆಂಗಳೂರು ಹಾಗೂ ಬೆಂಗಳೂರಿಗರ ಕುರಿತು ಹಾಗೂ ಕನ್ನಡ ಭಾಷೆಯ ಸಂಬಂಧ ಕೀಳಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದು ಲೇವಡಿ ಮಾಡಿ ಮಾತನಾಡಿದ ನಾರ್ಥಿ ಲೇಡಿಗೆ ನೆಟ್ಟಿಗರು ಬಿಸಿಮುಟ್ಟಿಸುತ್ತಿದ್ದಾರೆ. ʻತೊಲಗ್ರೋ ಮೊದಲುʼಎಂದು ಅಭಿಯಾನ ಕೂಡ ಶುರುವಾಗಿದೆ.

VISTARANEWS.COM


on

By

Bad comment from North Indian woman on Bengaluru city Quit First campaign started
Koo

ಬೆಂಗಳೂರು: ಅತಿಥಿ ದೇವೋ ಭವ ಎಂಬ ಶಬ್ಧ ನಮ್ಮ ದೇಶದ ಘೋಷ ವಾಕ್ಯ . ಅದು ರಾಜ್ಯದ ಮಟ್ಟಕ್ಕೂ ಅನ್ವಯವಾಗುತ್ತದೆ. ಮೂಲ ನಿವಾಸಿಗಳಿಗೆ ಹೊರಗಿಂದ ಬಂದವರು ಗೌರವ ಕೊಡಬೇಕು. ಆದರೆ ಬೆಂಗಳೂರು ನಗರದಲ್ಲಿ (Bengaluru News) ಆ ತರಹ ವಾತಾವರಣ ಇಲ್ಲದಂತಾಗಿದೆ. ಮತ್ತೊಮ್ಮೆ ಉತ್ತರ ಭಾರತದ ಮಹಿಳೆ ಬೆಂಗಳೂರು ನಗರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ʻತೊಲಗ್ರೋ ಮೊದಲುʼ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಅಭಿಯಾನ ಶುರುವಾಗಿದೆ.

ಮೊದಲನೇದಾಗಿ ನಾರ್ತ್, ಸೌತ್‌, ಈಸ್ಟ್ , ವೆಸ್ಟ್ ಇಂಡಿಯಾ ಎಂಬುದೆಲ್ಲ ಗುರುತಿಗಾಗಿ ಅಷ್ಟೆ ಇರುವುದು. ಆದರೆ ಕೆಲ ವ್ಯಕ್ತಿಗಳು ಡಿವೈಡ್ ಮಾಡಿ ಕೀಳಾಗಿ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಉತ್ತರ ಭಾರತದ ಮಹಿಳೆಯೊಬ್ಬಳು ಬೆಂಗಳೂರಿನ ಬಗ್ಗೆ ರೀಲ್ಸ್ ಮಾಡಿ ಅವಮಾನ ಮಾಡುವಂತೆ ಮಾತನಾಡಿದ್ದಾಳೆ.

ಕಾಮೆಂಟ್‌ ಮೂಲಕವೇ ಬಿಸಿ ಮುಟ್ಟಿಸಿದ ಸ್ಯಾಂಡಲ್‌ವುಡ್‌

ಈ ಹಿಂದೆ ಆಟೋ ಚಾಲಕನ ಜತೆ ಕಿರಿಕ್ ಮಾಡಿಕೊಂಡಿದ್ದ ಮಹಿಳೆಯೊಬ್ಬಳು, ಬೆಂಗಳೂರಿನವರಿಗೆ ಡೀಸೆನ್ಸಿ ಇಲ್ಲ ಎಂದು ವಿಡಿಯೊ ಮಾಡಿದ್ದಳು. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಾನು ಹಾಗೇ ಹೇಳಿಲ್ಲ, ಮಾತಿನಿಂದ ನೋವು ಆಗಿದ್ದರೆ ಕ್ಷಮಿಸಿ ಅಂತ ಸಮಜಾಯಿಷಿ ನೀಡಲು ಮುಂದಾಗಿದ್ದಳು. ಅದರ ಬೆನ್ನಲ್ಲೆ ಈಗ ಮತ್ತೊಬ್ಬ ಮಹಿಳೆ ತನ್ನ ಮನಸ್ಸಿನ ವಿಕಾರತೆಯನ್ನು ಹೊರಹಾಕಿದ್ದಾಳೆ.

ಮಹಿಳೆಯೊಬ್ಬಳು ವಿಡಿಯೋದಲ್ಲಿ ನಾವೆಲ್ಲ ನಾರ್ಥಿಗಳು ಬೆಂಗಳೂರು ಬಿಟ್ಟರೆ, ಎಲ್ಲ ನಗರದ ಪಿಜಿಗಳು ಖಾಲಿ ಖಾಲಿಯಾಗಿರುತ್ತದೆ. ಕೋರಮಂಗಲದ ಪಬ್‌ಗಳು ಬಿಕೋ ಎನ್ನುತ್ತಿರುತ್ತೆ ಎಂದು ವಿಡಿಯೋ ಮಾಡಿದ್ದಾಳೆ. ಅಂದರೆ ನಾರ್ಥ್‌ ಇಂಡಿಯನ್‌ಗಳಿಂದ ಮಾತ್ರ ಬೆಂಗಳೂರು ಉದ್ದಾರ ಆಗಿದೆ ಎಂಬ ಭ್ರಮೆಯಲ್ಲಿರುವುದು ಇಲ್ಲಿ ಸ್ಪಷ್ಟವಾಗಿದೆ. ಇನ್ನೂ ಈ ವಿಡಿಯೊಗೆ ಸಾರ್ವಜನಿಕರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದ ಕೂಡ ಆಕ್ರೋಶ ವ್ಯಕ್ತವಾಗಿದೆ.

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ʻಪ್ಲೀಸ್ ಲೀವ್ʼ ಎಂದರೆ, ನಟಿ ಚೈತ್ರಾ ಆಚಾರ್ ಬೇಗ ಇಲ್ಲಿಂದ ಹೊರಡಿ ನಾವು ಡ್ಯಾನ್ಸರ್‌ಗಳಿಲ್ಲದ ಪಬ್‌ಗಳನ್ನು ನೋಡಬಹುದು . ಮೊದಲು ಇಲ್ಲಿಂದ ತೊಲಗಿ ಎಂಬರ್ಥದಲ್ಲಿ ಕಾಮೆಂಟ್‌ಗೆ ರಿಪ್ಲೇ ಕೊಟ್ಟಿದ್ದಾರೆ. ಅಷ್ಟೇಲ್ಲದೆ ನಿರೂಪಕಿ ಕಂ ನಟಿ ಅನುಪಮ ಗೌಡ , ರೂಪೇಶ್ ರಾಜಣ್ಣ ಸೇರಿ ಹಲವು ಮಂದಿ ಖಡಕ್ ಉತ್ತರ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಹ್ಯಾಷ್ ಟ್ಯಾಗ್ ಹಾಕಿ ತೊಲಗ್ರೋ ಬೇಗ ಎಂಬ ಅಭಿಯಾನವೂ ಶುರುವಾಗಿದೆ. ಬೆಂಗಳೂರಿನಲ್ಲಿದ್ದುಕೊಂಡು ಪದೆ ಪದೇ ನಗರವನ್ನು ತುಚ್ಛವಾಗಿ ಮಾತನಾಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ವಿಚಾರ ಕೈ ಮೀರಿ ಹೋಗುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Siddeshwara Temple
ಬೆಂಗಳೂರು13 ಗಂಟೆಗಳು ago

Siddheshwar Temple : ಸೊಲ್ಲಾಪುರದ ಸಿದ್ದೇಶ್ವರ ದೇಗುಲದ ಆವರಣದಲ್ಲಿ ವಚನಕಾರ ಸಿದ್ದರಾಮನ ವಚನಗಳ ಅಳವಡಿಕೆಗೆ ಕಸಾಪ ಆಗ್ರಹ

school admission
ಬೆಂಗಳೂರು13 ಗಂಟೆಗಳು ago

School Admissions : ಗಲ್ಲಿಗೊಂದು ಹುಟ್ಟಿಕೊಂಡ ಖಾಸಗಿ ಶಾಲೆಗಳು; ವಿದ್ಯಾರ್ಥಿಗಳ ಆಡ್ಮಿನ್‌ಗಾಗಿ ಹೊಸ ತಂತ್ರ

karnataka weather Forecast
ಮಳೆ19 ಗಂಟೆಗಳು ago

Karnataka Weather : ಕರಾವಳಿ ಸೇರಿ ಉತ್ತರ ಒಳನಾಡಿನ ಈ ಭಾಗದಲ್ಲಿ ಭರ್ಜರಿ ಮಳೆ; ಯೆಲ್ಲೊ ಅಲರ್ಟ್‌ ಘೋಷಣೆ

Dina Bhavishya
ಭವಿಷ್ಯ19 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ಅನಿರೀಕ್ಷಿತ ಲಾಭವು ದುಪ್ಪಟ್ಟು ಖುಷಿ ಸಿಗಲಿದೆ

Murder case
ಬೆಂಗಳೂರು1 ದಿನ ago

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

assault case
ಹಾವೇರಿ1 ದಿನ ago

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

Murder case
ದಾವಣಗೆರೆ1 ದಿನ ago

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

new serial
ಬೆಂಗಳೂರು1 ದಿನ ago

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

World Retinal Day 2024
ಪ್ರಮುಖ ಸುದ್ದಿ1 ದಿನ ago

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

MUda Scam
ರಾಜಕೀಯ2 ದಿನಗಳು ago

Muda Scam : ಸಿದ್ದರಾಮಯ್ಯ ರಾಜೀನಾಮೆಗೆ ಹೆಚ್ಚಾದ ಒತ್ತಡ; ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ ಪ್ರತಿಭಟನೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌