Viral Video : ಆಫೀಸಿನಲ್ಲಿ ಭಾಂಗ್ರಾ ಸುಗ್ಗಿ! ಕೆಲಸ ಮಾಡೋದು ಬಿಟ್ಟು ಡ್ಯಾನ್ಸ್‌ ಮಾಡಲಾರಂಭಿಸಿದ ಸಿಬ್ಬಂದಿ - Vistara News

ವೈರಲ್ ನ್ಯೂಸ್

Viral Video : ಆಫೀಸಿನಲ್ಲಿ ಭಾಂಗ್ರಾ ಸುಗ್ಗಿ! ಕೆಲಸ ಮಾಡೋದು ಬಿಟ್ಟು ಡ್ಯಾನ್ಸ್‌ ಮಾಡಲಾರಂಭಿಸಿದ ಸಿಬ್ಬಂದಿ

ಆಫೀಸೊಂದರಲ್ಲಿ ಸಿಬ್ಬಂದಿಗೆ ವ್ಯಕ್ತಿಯೊಬ್ಬರು ಪಂಜಾಬ್‌ನ ಭಾಂಗ್ರಾ ನೃತ್ಯವನ್ನು ಹೇಳಿಕೊಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ ಆಗಿದೆ.

VISTARANEWS.COM


on

bhangra in office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯಾವುದೇ ಕಚೇರಿಯಾದರೂ ಅಲ್ಲಿ ಅಲ್ಪಸ್ವಲ್ಪವಾದರೂ ಮನರಂಜನೆ ಇರಲೇಬೇಕು. ಅದಿಲ್ಲದೇ ಹೋದರೆ ಆಫೀಸು ತೀರಾ ಬೋರ್‌ ಎನಿಸಿ ಬಿಡುತ್ತದೆ. ಅದಕ್ಕೆಂದೇ ಹಲವಾರು ಕಂಪನಿಗಳಲ್ಲಿ ವಾರದಲ್ಲಿ ಒಮ್ಮೆ ಅಥವಾ 15 ದಿನಗಳಿಗೊಮ್ಮೆ ಮನರಂಜನಾ ಕಾರ್ಯಕ್ರಮಗಳನ್ನು ಇರಿಸಿಕೊಳ್ಳಲಾಗುತ್ತದೆ. ಬೇರೆ ಬೇರೆ ಕಲಾವಿದರನ್ನು ಕರೆಸಿ ಅವರ ಕಲೆ ಪ್ರದರ್ಶನ ಮಾಡಿಸಿ, ಸಿಬ್ಬಂದಿಗೆ ಕೆಲಸ ಮಾಡುವುದಕ್ಕೆ ಉತ್ತೇಜನ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಆಫೀಸೊಂದರಲ್ಲಿ ಸಿಬ್ಬಂದಿಯೆಲ್ಲರೂ ಪಂಜಾಬಿ ಭಾಂಗ್ರಾ ಮಾಡುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈ ವಿಡಿಯೊವನ್ನು ಶಾಹಿಲ್‌ ಶರ್ಮಾ ಹೆಸರಿನವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದಾರೆ. ಹೈಪ್‌ ಜಿಮ್‌ನ ಸಿಬ್ಬಂದಿ ಮತ್ತು ಕಲಾವಿದರಾಗಿರುವ ಶಾಹಿಲ್‌ ಅವರು ಆಫೀಸೊಂದರ ಸಿಬ್ಬಂದಿಗೆ ಭಾಂಗ್ರಾ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ. ಅವರು ಹೇಳಿಕೊಟ್ಟಂತೆಯೇ ಸಿಬ್ಬಂದಿ ಅತ್ಯಂತ ಉತ್ಸುಕತೆಯಿಂದ ಭಾಂಗ್ರಾ ಹೆಜ್ಜೆಗಳನ್ನು ಹಾಕುತ್ತಾರೆ. ಪಂಜಾಬಿನ ಪ್ರಸಿದ್ಧ ಗುಪ್ಜ್‌ ಸೆಹ್ರಾ ಅವರ ಲೇಬಲ್‌ ಬ್ಲಾಕ್‌ ಹಾಡಿಗೆ ಎಲ್ಲರೂ ಒಟ್ಟಾಗಿ ಭಾಂಗ್ರಾ ಹೆಜ್ಜೆಗಳನ್ನು ಹಾಕಿದ್ದಾರೆ. ನೃತ್ಯ ಮಾಡುವಾಗ ಎಲ್ಲರೂ ಎನರ್ಜಿಟಿಕ್‌ ಆಗಿ ಕುಣಿದಿರುವುದನ್ನು ನೀವು ಕಾಣಬಹುದು.

ಇದನ್ನೂ ಓದಿ: Viral News : ಇದರಲ್ಲಿರುವ ಮುತ್ತನ್ನು 30 ಸೆಕೆಂಡುಗಳೊಳಗೆ ಹುಡುಕಿ ನೋಡೋಣ!
ಈ ವಿಡಿಯೊವನ್ನು ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 29 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್‌ಗಳನ್ನು ಮಾಡಿದ್ದಾರೆ. ನೂರಾರು ಮಂದಿ ವಿಡಿಯೊವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ನೂರಾರು ಮಂದಿ ವಿಡಿಯೊಗೆ ಮೆಚ್ಚುಗೆಯ ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

“ಅಬ್ಬಾ, ಸೂಪರ್‌ ಡ್ಯಾನ್ಸ್‌”, “ಪ್ರತಿ ಆಫೀಸಿನಲ್ಲೂ ಈ ರೀತಿ ದಿನಕ್ಕೆ ಒಂದು ಬಾರಿ ಡ್ಯಾನ್ಸ್‌ ಮಾಡಿಸುವುದಾದರೆ ಎಷ್ಟು ಚೆನ್ನಾಗಿರುತ್ತಿತ್ತು”, “ಐಟಿ ಆಫೀಸಲ್ಲಿ ಪಂಜಾಬಿ ಭಾಂಗ್ರಾ, ಮಸ್ತ್‌ ಕಾಂಬಿನೇಶನ್‌”, “ಹೀಗೆ ಮನರಂಜನೆ ಇದ್ದರೆ ಸಿಬ್ಬಂದಿಗೆ ಕೆಲಸ ಮಾಡುವುದಕ್ಕೂ ಉತ್ಸಾಹವಿರುತ್ತದೆ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅವಷ್ಟೇ ಅಲ್ಲದೆ “ವಾವ್‌”, “ಸೂಪರ್‌” ಎನ್ನುವಂತಹ ಕಮೆಂಟ್‌ಗಳನ್ನೂ ನೀವು ನೋಡಬಹುದು.

ಇದನ್ನೂ ಓದಿ: Viral Video : ಫೇರ್‌ವೆಲ್‌ ದಿನದಂದು ಸೀರೆಯುಟ್ಟು ಹುಚ್ಚೆಬ್ಬಿಸುವಂತೆ ಕುಣಿದ ಯುವತಿಯರು!
ಈ ವಿಡಿಯೊಗೂ ಮೊದಲು ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ತಮ್ಮ ಫೇರ್‌ವೆಲ್‌ ದಿನದಂದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಸೀರೆಯುಟ್ಟಿದ್ದ ಇಬ್ಬರು ಯುವತಿಯರು ಬಾಲಿವುಡ್‌ನ ಚಮ್ಮಕ್‌ ಚಲ್ಲೋ, ತಾರೆ ಗಿನ್‌ ಗಿನ್‌ ಸೇರಿ ಹಲವಾರು ಹಾಡುಗಳ ಮ್ಯಾಷ್‌ಅಪ್‌ಗೆ ನೃತ್ಯ ಮಾಡಿದ್ದರು. ಇಬ್ಬರು ಒಬ್ಬರಿಗೊಬ್ಬರು ಸಾಥ್‌ ಕೊಟ್ಟುಕೊಂಡು ಮಾಡಿದ್ದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ನೋಡಿದ ಜನರು ಅವರಿಬ್ಬರ ನೃತ್ಯಕ್ಕೆ ಫಿದಾ ಆಗಿದ್ದಾಗಿ ಕಾಮೆಂಟ್‌ಗಳನ್ನು ಮಾಡಿದ್ದರು. ಆ ವಿಡಿಯೊ ಕೂಡ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: 17 ವರ್ಷದ ಯುವತಿ ಎರಡು ಬಾರಿ ಗರ್ಭಿಣಿ; ಪೋಷಕರು ಸೇರಿ 16 ಜನರ ವಿರುದ್ಧ ಕೇಸ್‌

Viral News:2021ರಲ್ಲಿ 23ವರ್ಷದ ಅನ್ಯಧರ್ಮೀಯ ಯುವಕನೋರ್ವನನ್ನು ನಂಬಿ ಯುವತಿ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಳು. ತಕ್ಷಣ ಆಕೆಯ ಪೋಷಕರು ಕಾಲೇಜು ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬಳ ಸಹಾಯದಿಂದ ಬಾಲಕಿಯನ್ನು ಮುಂಬೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಹೆರಿಗೆ ಮಾಡಿಸಿದ್ದರು. ಆ ಮಗುವನ್ನು ಪೋಷಕರು ಸಾಮಾಜಿಕ ಕಾರ್ಯಕರ್ತೆಗೆ ಒಪ್ಪಿಸಿದ್ದರು. ಅಲ್ಲಿಂದ ಆ ಮಗುವನ್ನು ಮಾರಾಟ ಮಾಡಿದ್ದಾರೆ

VISTARANEWS.COM


on

Viral News
Koo

ಮಹಾರಾಷ್ಟ್ರ: 17 ವರ್ಷದ ಯುವತಿಯೊಬ್ಬಳು(Viral News) ಮದುವೆಗೂ ಮುನ್ನ ಎರಡು ಬಾರಿ ಗರ್ಭಿಣಿ(Pregnant) ಯಾಗಿ, ಹೆತ್ತ ಮಗುವನ್ನು ಮರಾಟ ಮಾಡಿರುವ ಘಟನೆ ಮಹಾರಾಷ್ಟ್ರ(Maharashtra)ದ ಪಾಲ್ಗಾರ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಸೇರಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯನ್ನು ನಂಬಿಸಿ ಅನ್ಯಧರ್ಮೀಯ ಯುವಕ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ್ದ. ಈ ವಿಚಾರ ತಿಳಿದ ಆಕೆಯ ಪೋಷಕರು ಆಗಷ್ಟೇ ಜನಿಸಿದ ಮಗುವನ್ನು ಮಾರಾಟ ಮಾಡಿದ್ದು, ಯುವತಿ ದೂರಿನ ಮೇಲೆ ಒಟ್ಟು 16 ಜನರ ವಿರುದ್ಧ ಎಫ್‌ಐಆರ್‌(FIR) ದಾಖಲಿಸಲಾಗಿದೆ.

ಘಟನೆ ವಿವರ:

2021ರಲ್ಲಿ 23ವರ್ಷದ ಅನ್ಯಧರ್ಮೀಯ ಯುವಕನೋರ್ವನನ್ನು ನಂಬಿ ಯುವತಿ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಳು. ಆಕೆಗೆ 3 ತಿಂಗಳಾಗುತ್ತಿದಂತೆ ಆಕೆ ಪೋಷಕರಿಗೆ ಈ ವಿಚಾರ ತಿಳಿದಿದೆ. ತಕ್ಷಣ ಆಕೆಯ ಪೋಷಕರು ಕಾಲೇಜು ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬಳ ಸಹಾಯದಿಂದ ಬಾಲಕಿಯನ್ನು ಮುಂಬೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಹೆರಿಗೆ ಮಾಡಿಸಿದ್ದರು. ಅಲ್ಲಿ ವಕೀಲರು ಕೆಲವೊಂದು ದಾಖಲೆ ಪತ್ರಗಳಿಗೆ ಯುವತಿ ಕೈಯಿಂದ ಸಹಿ ಮಾಡಿಸಿಕೊಂಡಿದ್ದಾರೆ. 2021ರ ಸೆ.24ರಂದು ಬಾಲಕಿಗೆ ಹೆರಿಗೆ ಆಗಿದ್ದು, ಆ ಮಗುವನ್ನು ಪೋಷಕರು ಸಾಮಾಜಿಕ ಕಾರ್ಯಕರ್ತೆಗೆ ಒಪ್ಪಿಸಿದ್ದರು. ಅಲ್ಲಿಂದ ಆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಇದಾದ ಏಳು ತಿಂಗಳ ಬಳಿಕ ಯುವತಿ ಆ ಯುವಕನನ್ನು ಸಂಪರ್ಕಿಸಿದಾದ ಆತ ಸಾಮಾಜಿಕ ಕಾರ್ಯಕರ್ತೆಗೆ 4.5ಲಕ್ಷ ರೂ. ನೀಡಿರುವ ವಿಚಾರ ತಿಳಿದಿತ್ತು. ಯುವತಿಯ ಪೋಷಕರು ಮತ್ತು ಆಕೆಯ ಮಾವ ತಲಾ 1.5 ಲಕ್ಷ ರೂ. ಪಡೆದಿದ್ದರು. ಈ ವಿಚಾರ ತಿಳಿದು ಯುವತಿ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ಬಲವಂತವಾಗಿ ಅಜ್ಜಿ ಮನೆಗೆ ಕಳುಹಿಸಿ ಅಲ್ಲಿ ಬೇರೆ ಯುವಕನ ಜೊತೆ ಆಕೆಯ ಮದುವೆ ತಯಾರಿ ನಡೆಸಲಾಗಿತ್ತು. ಮದುವೆ ನಿಗದಿಯಾಗಿದ್ದ ಯುವಕನೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮವಾಗಿ ಆಕೆ ಮತ್ತೊಮ್ಮೆ ಗರ್ಭಿಣಿ ಆದಳು. ಅದೇ ಸಂದರ್ಭದಲ್ಲಿ ಈ ಹಿಂದೆಯೂ ಆಕೆ ಗರ್ಭಿಣಿಯಾಗಿದ್ದ ವಿಚಾರ ಆ ವ್ಯಕ್ತಿಗೆ ತಿಳಿದು ಆತ ಮದುವೆಗೆ ನಿರಾಕರಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

ಕೊನೆಗೆ ದಿಕ್ಕೆಟ್ಟಿದ್ದ ಯುವತಿ ಪೋಷಕರ ಮನೆಗೆ ಮರಳಿದ್ದಳು. ಅಲ್ಲಿ ಆಕೆ ಎರಡನೇ ಬಾರಿ ಮಗುವಿಗೆ ಜನ್ಮ ನೀಡಿದ್ದಳು. ಈ ಬಾರಿ ಆಕೆಯ ಮಗುವನ್ನು ಮಾರಾಟ ಮಾಡಲು ಪೋಷಕರು ಒತ್ತಾಯಿಸಿದ್ದರು. ಅಲ್ಲದೇ ಮಾರಾಟಕ್ಕೆ ಎಲ್ಲಾ ಸಿದ್ದತೆ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಯುವತಿಯನ್ನು ವಿಚಾರಣೆ ನಡೆಸಿದಾಗ ಎಲ್ಲಾ ವಿಚಾರಗಳನ್ನು ಆಕೆ ಬಾಯ್ಬಿಟ್ಟಿದ್ದಾಳೆ. ಇದೀಗ ಘಟನೆ ಸಂಬಂಧ ಯುವತಿಯ ಪೋಷಕರು, ಪ್ರಾಂಶುಪಾಲ, ಇಬ್ಬರು ವೈದ್ಯೆಯರು, ಸಾಮಾಜಿಕ ಕಾರ್ಯಕರ್ತೆ ಸೇರಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Continue Reading

ಹಾಸನ

Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

Prajwal Revanna Case‌: ಜೆಡಿಎಸ್‌ ನಾಯಕಿ ತಮ್ಮ ಮೇಲೆ ಯಾವಾಗ ಅತ್ಯಾಚಾರ ನಡೆದಿದೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಬಗ್ಗೆ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಳಿ ಮಾತನಾಡಲು ಹೋದಾಗ ತಮ್ಮ ಮೇಲೆರಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ತಾವು ನಿರಾಕರಣೆ ಮಾಡಿದಾಗ ಗನ್‌ ಹಿಡಿದು ಹೆದರಿಸಿ ಬಲಾತ್ಕಾರ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಹಾಸನದಲ್ಲಿರುವ ಸಂಸದರ ಬಂಗಲೆಯ ಮಹಡಿ ರೂಮ್‌ನಲ್ಲೇ ರೇಪ್ ಮಾಡಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

VISTARANEWS.COM


on

Prajwal Revanna Case I was raped at gunpoint JDS women leader files complaint against Prajwal
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ದಾಖಲಾಗಿರುವ ರೇಪ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ನೇರವಾಗಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೊಟ್ಟ ದೂರಿನಲ್ಲಿ ಭಯಾನಕ ಸತ್ಯಗಳು ಹೊರಬಂದಿದ್ದು, ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಜೆಡಿಎಸ್‌ ನಾಯಕಿ, ಸಂತ್ರಸ್ತೆ ದೂರಿನಲ್ಲಿ ತನಗಾದ ಅನ್ಯಾಯವನ್ನು ಹಾಗೂ ಅತ್ಯಾಚಾರದ ಸಂಗತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಮಾತಿಗೆ ಹೋದಾಗ ರೇಪ್‌?

ಜೆಡಿಎಸ್‌ ನಾಯಕಿ ತಮ್ಮ ಮೇಲೆ ಯಾವಾಗ ಅತ್ಯಾಚಾರ ನಡೆದಿದೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಬಗ್ಗೆ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಳಿ ಮಾತನಾಡಲು ಹೋದಾಗ ತಮ್ಮ ಮೇಲೆರಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ತಾವು ನಿರಾಕರಣೆ ಮಾಡಿದಾಗ ಗನ್‌ ಹಿಡಿದು ಹೆದರಿಸಿ ಬಲಾತ್ಕಾರ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಹಾಸನದಲ್ಲಿರುವ ಸಂಸದರ ಬಂಗಲೆಯ ಮಹಡಿ ರೂಮ್‌ನಲ್ಲೇ ರೇಪ್ ಮಾಡಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಗಂಡನ ಬಗ್ಗೆ ಬೆದರಿಸಿ ಬಲಾತ್ಕಾರ

ದೈಹಿಕ ಸಂಪರ್ಕ ಬೆಳೆಸಲು ಪ್ರಜ್ವಲ್‌ ಮುಂದಾಗುತ್ತಿದ್ದಂತೆ ನಾನು ನಿರಾಕರಣೆ ಮಾಡಿದೆ. ಆಗ “ನಿನ್ನ ಗಂಡನನ್ನು ನಾನು ಬಿಡಲ್ಲ” ಎಂದು ಹೆದರಿಸಿ ದೌರ್ಜನ್ಯ ನಡೆಸಿದರು ಎಂದು ಎಸ್‌ಐಟಿಗೆ ಸಂತ್ರಸ್ತೆ ನೀಡಿದ್ದ ದೂರು ಆಧಾರದಲ್ಲಿ ಸಿಐಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್‌ 376 (2) (ಎನ್‌) ಹಾಗೂ ಐಟಿ ಆ್ಯಕ್ಟ್‌ನಲ್ಲಿ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ. ಹೇಗೆಲ್ಲ ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ರೇವಣ್ಣ ಮೇಲಿನ ಮತ್ತೊಂದು ಕೇಸ್‌ ಎಸ್‌ಐಟಿಗೆ ವರ್ಗ; ಭವಾನಿಗೂ ನೋಟಿಸ್‌!

ರೇಪ್‌ ಮತ್ತು ಚಿತ್ರೀಕರಣ ಆರೋಪ

ತಮ್ಮ ಮೇಲೆ ಬಲಾತ್ಕಾರ ಮಾಡಿದ್ದಲ್ಲದೆ, ಅದನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಬಾಯಿ ಬಿಟ್ಟರೆ ಸೋಷಿಯಲ್‌ ಮೀಡಿಯಾದಲ್ಲಿ ನಿನ್ನ ವಿಡಿಯೊವನ್ನು ಬಿಡುತ್ತೇನೆ ಎಂಧು ಬೆದರಿಕೆ ಒಡ್ಡಿದ್ದಾರೆ. ನಾನು ಕರೆದಾಗೆಲ್ಲ ನೀನು ಬರಬೇಕು. ಇಲ್ಲದಿದ್ದರೆ ನನ್ನ ಬಳಿ ಇರುವ ವಿಡಿಯೊವನ್ನು ಹರಿಬಿಡುತ್ತೇನೆ ಎಂದು ಬೆದರಿಸಿ ಕಳುಹಿಸಿದ್ದಾರೆ. ಇಷ್ಟೇ ಅಲ್ಲದೆ, ಪದೇ ಪದೆ ವಿಡಿಯೊ ಕಾಲ್‌ ಮಾಡಿ ಬೆತ್ತಲೆಯಾಗು ತಾನು ನೋಡಬೇಕು ಎಂದು ಕಿರುಕುಳ ಕೊಟ್ಟು ನಗ್ನತೆಯನ್ನು ನೋಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ‌ಅಲ್ಲದೆ, ಪದೇ ಪದೆ ತಮಗೆ ಬ್ಲ್ಯಾಕ್‌ಮೇಲ್‌ ಮಾಡಿ ಬಲಾತ್ಕಾರ ಮಾಡುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಎಲ್ಲ ಖುಷಿಯನ್ನು ಯಾಕೆ ಮನುಷ್ಯ ಮಾತ್ರ ಅನುಭವಿಸಬೇಕು? ಸ್ಮಿಮ್ಮಿಂಗ್‌ ಪೂಲ್‌ಗೆ ಲಗ್ಗೆ ಇಟ್ಟ ಮಂಗಗಳು

Viral Video: ದೇಶದಲ್ಲಿ ಹೆಚ್ಚುತ್ತಿರುವ ಬಿಸಲಿ ಬೇಗೆಗೆ ಎಲ್ಲರೂ ಹೈರಾಣಾಗಿದ್ದಾರೆ. ಕೆಲವು ದಿನಗಳ ಹಿಂದೆ ಮಕ್ಕಳನ್ನು ಸೆಕೆಯಿಂದ ಪಾರು ಮಾಡಲು ತರಗತಿ ಕೋಣೆಗೆ ಎರಡು ಅಡಿ ನೀರು ತುಂಬಿಸಿ ಈಜುಕೊಳವನ್ನಾಗಿ ಪರಿವರ್ತಿಸಿದ ವಿಡಿಯೊ ವೈರಲ್‌ ಆಗಿತ್ತು. ಇದೀಗ ಸುಡುವ ಬಿಸಿಲಿನಿಂದ ಪಾರಾಗಲು ಮಂಗಗಳ ಗುಂಪು ಸ್ವಿಮ್ಮಿಂಗ್‌ ಪೂಲ್‌ಗೆ ಲಗ್ಗೆ ಇಟ್ಟಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೊವನ್ನು ನೀವೂ ನೋಡಿ.

VISTARANEWS.COM


on

Viral Video
Koo

ನವದೆಹಲಿ: ದೇಶದೆಲ್ಲೆಡೆ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಈ ವೇಳೆ ಕೊಳ, ನದಿ ಕಂಡರೆ ಸಾಕು ಹೋಗಿ ಈಜಾಡೋಣ ಎನಿಸುತ್ತದೆ. ಈ ಪರಿಯ ಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಕಂಗಾಲಾಗಿವೆ. ಈ ಮಧ್ಯೆ ಮನುಷ್ಯರು ಮಾತ್ರ ಯಾಕೆ ನಾವೂ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿ ತಂಪು ಮಾಡಿಕೊಳ್ಳುತ್ತೇವೆ ಎಂಬಂತಿದೆ ಈ ಮಂಗಗಳ ವರ್ತನೆ. ಹೌದು, ಮುಂಬೈಯ ವಸತಿ ಸಂಕೀರ್ಣದ ಈಜುಕೊಳಕ್ಕೆ ಲಗ್ಗೆ ಇಟ್ಟ ಮಂಗಗಳ ಗುಂಪು ನೀರಾಟವಾಡುವ ಮೂಲಕ ಮೈ ಮನಸ್ಸು ಹಗುರ ಮಾಡಿಕೊಂಡಿವೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಮುಂಬೈಯ ಬೋರಿವಾಲಿ ಪ್ರದೇಶದಲ್ಲಿರುವ ವಸತಿ ಸಂಕೀರ್ಣದೊಳಗೆ ಕಂಡುಬಂದ ಈ ದೃಶ್ಯವನ್ನು ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿದೆ. ಅದು ಪರಸ್ಪರ ಸಂಪರ್ಕ ಹೊಂದಿರುವ ಎರಡು ಈಜು ಕೊಳಗಳು. ಮೊದಲ ವಿಡಿಯೊದಲ್ಲಿ ಕೊಳದಲ್ಲಿ ಮಂಗಗಳು ಈಜುತ್ತಿರುವುದು ಕಂಡು ಬಂದರೆ ಎರಡನೇ ವಿಡಿಯೊದಲ್ಲಿ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಮಂಗಗಳು ನೆಗೆಯುತ್ತಿರುವುದು ಕಾಣಿಸುತ್ತಿದೆ. ʼಮಂಗಗಳು ಈಜು ಕೊಳಕ್ಕೆ ಮರಳಿವೆ. ಈ ಬೇಸಿಗೆಯ ದಿನವನ್ನು ಸಿಮ್ಮಿಂಗ್‌ ಪೂಲ್‌ನಲ್ಲಿ ಕಳೆಯುತ್ತಿವೆʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ನೆಟ್ಟಿಗರು ಏನಂದ್ರು?

ಸದ್ಯ ಮಂಗಗಳ ಈ ನೀರಾಟ ನೆಟ್ಟಿಗರ ಗಮನ ಸೆಳೆದಿದೆ. ಈಗಾಗಲೇ ಸಾವಿರಾರು ಮಂದಿ ನೋಡಿ ಮನಸ್ಸು ಹಗುರ ಮಾಡಿಕೊಂಡಿದ್ದಾರೆ. ʼʼಈ ಬಿಸಿಲಿನ ಬೇಗೆಯಿಂದ ಪಾರಾಗಲು ಇದು ಅತ್ಯುತ್ತಮ ಮಾರ್ಗʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಸೂಪರ್‌. ಈ ಭೂಮಿ ಎಲ್ಲರಿಗಾಗಿ ಎನ್ನುವ ಮಾತನ್ನು ಈ ವಿಡಿಯೊ ನಿಜವಾಗಿಸಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼವಾವ್‌. ಈ ಕೋತಿಗಳ ಆಟ ನೋಡಲು ಖುಷಿಯಾಗುತ್ತಿದೆʼʼ ಎಂದು ಮತ್ತೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ʼʼಜೀವನ ಎಂದರೆ ಇದುʼʼ ಎನ್ನುವ ಉದ್ಘಾರ ಮಗದೊಬ್ಬರದ್ದು. ʼʼಈ ಕೋತಿಗಳು ಕೊಳದಲ್ಲಿ ಮಲ ವಿಸರ್ಜನೆ ಮಾಡದಿರುವವರೆಗೆ ಈಜುವುದು ಸ್ವೀಕಾರಾರ್ಹʼʼ ಎಂದು ಇನ್ನು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ದೇಶಾದ್ಯಂತ ಅನುಭವಕ್ಕೆ ಬರುತ್ತಿರುವ ಬಿಸಿಲಿನ ಝಳದ ಗಂಭೀರತೆಯನ್ನು ತೆರೆದಿಟ್ಟಿದೆ. ಜತೆಗೆ ನೋಡುಗರ ತುಟಿಯಂಚಿನಲ್ಲಿ ಕಿರುನಗೆ ಅರಳಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

ಮಂಗಗಳು ಈಜುಕೊಳದಲ್ಲಿ ಈ ರೀತಿ ನೀರಾಟವಾಡುತ್ತಿರುವ ಪ್ರಸಂಗ ಇದು ಮೊದಲೇನಲ್ಲ. ಹಿಂದೆಯೂ ಇದೇ ರೀತಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಮನೆಯೊಂದರ ಬಾಲ್ಕನಿಯಲ್ಲಿ ಮಂಗವೊಂದು ಕುಳಿತಿರುತ್ತದೆ. ಸ್ವಲ್ಪ ಹೊತ್ತು ಆಚೆ-ಈಚೆ ನೋಡುವ ಅದು ಬಳಿಕ ಆ ಕಟ್ಟಡದ ಕೆಳಭಾಗದಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ಗೆ ಜಿಗಿದು ಈಜಾಡುತ್ತದೆ. ʼಯಾಕೆ ಎಲ್ಲ ಸಂತೋಷವನ್ನು ಮನುಷ್ಯ ಮಾತ್ರ ಅನುಭವಿಸಬೇಕು? ಪ್ರಾಣಿಗಳಿಗೂ ಈಜಲು ಬರುತ್ತೆʼ ಎನ್ನುವ ಅರ್ಥಪೂರ್ಣ ಕ್ಯಾಪ್ಶನ್‌ ನೀಡಿ ಈ ವಿಡಿಯೊವನ್ನು ಶೇರ್‌ ಮಾಡಲಾಗಿತ್ತು. ಇದು ಕೂಡ ಲಕ್ಷಾಂತರ ಮಂದಿಯ ಗಮನ ಸೆಳೆದಿತ್ತು. ಮಂಗನ ಬುದ್ಧಿವಂತಿಕೆಗೆ ಹಲವರು ತಲೆದೂಗಿದ್ದರು.

Continue Reading

ಕ್ರೀಡೆ

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

MS Dhoni: ಧೋನಿಯ(MS Dhoni) ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಕೊನೆಗೂ ತಮ್ಮ ಬಯಕೆಯಂತೆ ಧೋನಿ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಧೋನಿ ಈ ಶತಾಯುಷಿ ಅಭಿಮಾನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

VISTARANEWS.COM


on

MS Dhoni
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಾಗೂ ಮಹೇಂದ್ರ ಸಿಂಗ್​ ಧೋನಿಯ(MS Dhoni) ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಕೊನೆಗೂ ತಮ್ಮ ಬಯಕೆಯಂತೆ ಧೋನಿ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಧೋನಿ ಈ ಶತಾಯುಷಿ ಅಭಿಮಾನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಕೆಲವು ದಿನಗಳ ಹಿಂದೆ ಎಸ್ ರಾಮದಾಸ್ ಅವರು ಮಗನ ಬಳಿ ಮಾತನಾಡುವ ವೇಳೆ, ಚೆನ್ನೈ ಸೂಪರ್ ಕಿಂಗ್ಸ್​ನ ಪಂದ್ಯ ಮತ್ತು ಧೋನಿಯನ್ನು ನೋಡಲು ರಾಜಧಾನಿ ದೆಹಲಿಯವರೆಗೂ ನಡೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದರು. ಧೋನಿಯನ್ನು ಮತ್ತು ಚೆನ್ನೈ ಪಂದ್ಯವನ್ನು ನೋಡುವ ಅಪ್ಪನ ಈ ಬಯಕೆಯನ್ನು ಈಡೇರಿಸುವುದಾಗಿ ಮಗ ಮಾತು ಕೊಟ್ಟಿದ್ದರು. ಚೆನ್ನೈನಲ್ಲಿ ನಡೆಯುವ ಪಂದ್ಯದ ಟಿಕೆಟ್​ ಖರೀದಿಸಿ ಪಂದ್ಯ ತೋರಿಸುತ್ತೇನೆ ಎಂದು ಹೇಳಿದ್ದರು. ಕೊಟ್ಟ ಮಾತಿನಂತೆ ಮಗ ಅಪ್ಪನಿಗೆ ಚೆಪಾಕ್​ನಲ್ಲಿ ನಡೆದ ಚೆನ್ನೈ ಮತ್ತು ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ.

ಪಂದ್ಯ ಮುಕ್ತಾಯಕ ಬಳಿಕ ಈ ವಿಶೇಷ ಅಭಿಮಾನೊಯನ್ನು ಧೋನಿ ಡ್ರೆಸ್ಸಿಂಗ್​ ರೋಮ್​ನಲ್ಲಿ ಭೇಟಿಯಾಗಿದ್ದಾರೆ. ಧೋನಿ ತಮ್ಮ ಜೆರ್ಸಿಯಲ್ಲಿ “ನಿಮ್ಮ ಈ ಬೆಂಬಲಕ್ಕೆ ಧನ್ಯವಾದಗಳು ತಾತ” ಎಂದು ಬರೆದು ತಮ್ಮ ಹಸ್ತಾಕ್ಷರ ಹಾಕಿ ಜೆರ್ಸಿಯನ್ನು ರಾಮದಾಸ್​ಗೆ ನೀಡಿದ್ದಾರೆ. ಇದೇ ವೇಳೆ ರಾಮದಾಸ್ ನಿಮ್ಮನ್ನು ನೋಡಿ ತುಂಬಾ ಖಷಿಯಾಯಿತು. ನೀವೊಬ್ಬರು ಗ್ರೇಟ್​ ಕ್ರಿಕೆಟರ್​ ಎಂದು ಹಾರೈಸಿದರು. ರಾಮ್​ದಾಸ್​ ಜತೆ ಅರ ಪತ್ನಿಯೂ ಜತೆಗಿದ್ದರು. ಚೆನ್ನೈ ಫ್ರಾಂಚೈಸಿ ವತಿಯಿಂದ ರಾಮದಾಸ್ 103 ಎಂದು ಬರೆದ ಚೆನ್ನೈ ತಂಡದ ಜೆರ್ಸಿಯನ್ನು ವಿಶೇಷ ಉಡುಗೊರೆಯಾಗಿ ನೀಡಲಾಯಿತು.

ಇದನ್ನೂ ಓದಿ IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

ಬ್ರಿಟಿಷ್ ಮಿಲಿಟರಿಯ ಸೈನ್ಯದ ಭಾಗವಾಗಿದ್ದ ರಾಮದಾಸ್ ಕ್ರಿಕೆಟ್ ಆಡಲು ಹೆದರುತ್ತಿದ್ದರಂತೆ. ಆದರೆ ಸಿಎಸ್‌ಕೆ ಜರ್ಸಿ ಧರಿಸಿ ಟಿವಿ ಮುಂದೆ ಕುಳಿತು ಐಪಿಎಲ್ ಆಟವನ್ನು ನೋಡಲು ಇಷ್ಟಪಡುತ್ತೇನೆ. ಒಮ್ಮೆಯಾದರೂ ಧೋನಿಯನ್ನು ಭೇಟಿಯಾಗಬೇಕು ಎಂದು ಹೇಳಿದ್ದ ವಿಡಿಯೊವನ್ನು ಕೂಡ ಚೆನ್ನೈ ಫ್ರಾಂಚೈಸಿ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿತ್ತು.

ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

Continue Reading
Advertisement
Viral News
ವೈರಲ್ ನ್ಯೂಸ್23 mins ago

Viral News: 17 ವರ್ಷದ ಯುವತಿ ಎರಡು ಬಾರಿ ಗರ್ಭಿಣಿ; ಪೋಷಕರು ಸೇರಿ 16 ಜನರ ವಿರುದ್ಧ ಕೇಸ್‌

Gratuity
ದೇಶ33 mins ago

Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Prajwal Revanna Case I was raped at gunpoint JDS women leader files complaint against Prajwal
ಹಾಸನ34 mins ago

Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

icc men's test team rankings
ಕ್ರೀಡೆ48 mins ago

ICC Men’s Test Team Rankings: ಅಗ್ರಸ್ಥಾನದಿಂದ ಕುಸಿತ ಕಂಡ ಭಾರತ; ವಿಶ್ವ ಚಾಂಪಿಯನ್​ ಆಸೀಸ್​ ನಂ.1

Bengaluru Rains
ಮಳೆ52 mins ago

Bengaluru Rains : ಬೆಂಗಳೂರಲ್ಲಿ ಶುರುವಾಯ್ತು ಮಳೆಗಾಲ; ಕವಿದ ಕಾರ್ಮೋಡ, ಭಯಂಕರ ವರ್ಷಧಾರೆ

Press Freedom Day
Latest59 mins ago

Press Freedom Day: ಇಂದು ಪತ್ರಿಕಾ ಸ್ವಾತಂತ್ರ್ಯ ದಿನ; ಏನಿದರ ಮಹತ್ವ?

Job Alert
ಉದ್ಯೋಗ1 hour ago

Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Prajwal Revanna Case Another case against Revanna transferred to SIT Notice to Bhavani
ಕ್ರೈಂ2 hours ago

Prajwal Revanna Case: ರೇವಣ್ಣ ಮೇಲಿನ ಮತ್ತೊಂದು ಕೇಸ್‌ ಎಸ್‌ಐಟಿಗೆ ವರ್ಗ; ಭವಾನಿಗೂ ನೋಟಿಸ್‌!

Narendra Modi
Lok Sabha Election 20242 hours ago

Narendra Modi: ಅಮೇಥಿ ಬದಲು ರಾಯ್‌ ಬರೇಲಿಯಿಂದ ರಾಹುಲ್‌ ಗಾಂಧಿ ಸ್ಪರ್ಧೆ; ಓಡಬೇಡಿ ಎಂದು ವ್ಯಂಗ್ಯವಾಡಿದ ಮೋದಿ

Helicopter Crash
ದೇಶ2 hours ago

Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ21 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌