Viral Video | ಮದುಮಗಳ ಫೋಟೋಶೂಟ್​; ನೀರು ತುಂಬಿದ ರಸ್ತೆಗುಂಡಿಯೇ ಸುಂದರ ತಾಣ ಈ ವಧುವಿಗೆ - Vistara News

ವೈರಲ್ ನ್ಯೂಸ್

Viral Video | ಮದುಮಗಳ ಫೋಟೋಶೂಟ್​; ನೀರು ತುಂಬಿದ ರಸ್ತೆಗುಂಡಿಯೇ ಸುಂದರ ತಾಣ ಈ ವಧುವಿಗೆ

ಕೆಂಪು ಬಣ್ಣದ ಸೀರೆಯುಟ್ಟು, ಮೈತುಂಬ ಒಡವೆ ಧರಿಸಿ ಕೆಸರು ನೀರಿನ ಮಧ್ಯೆ ಹೆಜ್ಜೆ ಹಾಕುವ ವಧುವಿನ ಫೋಟೋಶೂಟ್​ ನೋಡಿದ ನೆಟ್ಟಿಗರು ಫನ್ನಿ ಕಮೆಂಟ್ ಮಾಡಿದ್ದಾರೆ.

VISTARANEWS.COM


on

Kerala Bride
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈಗೇನಿದ್ದರೂ ಪ್ರಿವೆಡ್ಡಿಂಗ್‌ ಫೋಟೋಶೂಟ್‌ ಕಾಲ. ಮದುವೆಗೂ ಮೊದಲೇ ಫೋಟೋಗ್ರಾಫರ್‌ಗಳಿಗೆ ಕೆಲಸ ಶುರುವಾಗುತ್ತದೆ. ಇನ್ನು ಮದುವೆಯ ದಿನದ ಕತೆ ಬೇರೆಯೇ. ಎಷ್ಟು ಕ್ರಿಯೇಟಿವ್‌ ಆಗಿದ್ದರೂ ಸಾಲದು. ವೆಡ್ಡಿಂಗ್‌ ಫೋಟೋಗ್ರಫಿಗೆ ಈಗಿರುವ ಭಾರೀ ಬೇಡಿಕೆ ಹಾಗೂ ಆ ರಂಗದಲ್ಲಿರುವ ಸಿಕ್ಕಾಪಟ್ಟೆ ಸ್ಪರ್ಧೆಯಿಂದಾಗಿ ಛಾಯಾಗ್ರಾಹಕರು ಕ್ರಿಯಾಶೀಲರಾಗಿ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಫೋಟೋ, ವಿಡಿಯೋ ತೆಗೆಯುತ್ತಾರೆ. ಕೆಲವೊಂದು ಫೋಟೋಗಳು ವೈರಲ್‌ ಆಗುವ ಮೂಲಕ ಛಾಯಾಗ್ರಾಹಕರು ತೆರೆಯ ಹಿಂದಿನ ಹೀರೋಗಳಾಗಿ ಮಿಂಚಿ ತಮ್ಮ ಬೇಡಿಕೆ ಕುದುರಿಸಿಕೊಳ್ಳುತ್ತಾರೆ.

ಇದೂ ಅಂಥದ್ದೇ ಒಂದು ಕತೆ. ಇಲ್ಲಿ ಛಾಯಾಗ್ರಾಹಕ ಅದ್ಭುತ ಲೊಕೇಶನ್‌ ಹುಡುಕಿಕೊಂಡು ಹೋಗಿಲ್ಲ. ಇರುವ ಜಾಗದಲ್ಲೇ ಅದ್ಭುತವನ್ನು ತೋರಿಸಿದ್ದಾರೆ. ಚಂದದ ಫೋಟೋ ಜೊತೆಗೆ ಸಮಸ್ಯೆಯನ್ನೂ ಎತ್ತಿ ತೋರಿಸಿ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.

ಇಲ್ಲಿ ಮದುಮಗಳು, ಯಾವ ಭಿಡೆಯೂ ಇಲ್ಲದೆ, ಹೊಂಡಗಳಿಂದ ಆವೃತವಾಗಿರುವ, ಮಳೆಯಿಂದಾಗಿ ಆ ಹೊಂಡಗಳೆಲ್ಲ ಕೆನ್ನೀರಿನಿಂದ ತುಳುಕಾಡುತ್ತಿರುವ, ಹೊಂಡ ಎಲ್ಲಿದೆ ರಸ್ತೆ ಎಲ್ಲಿದೆ ಎಂದು ಸಂದೇಹ ಬರುವಷ್ಟರಮಟ್ಟಿಗಿನ ಪರಿಸ್ಥಿತಿ ಇರುವ ಸಾಮಾನ್ಯ ರಸ್ತೆಯೊಂದರಲ್ಲಿ ನಡೆದು ಬರುತ್ತಾಳೆ. ಎಲ್ಲರೂ ಗಡಿಬಿಡಿಯಲ್ಲಿ ಅವರವರದೇ ಕೆಲಸಗಳಿಗಾಗಿ ಓಡಾಡಿಕೊಂಡಿರುವ, ಹೊಂಡಕ್ಕೆ ಬೀಳದಂತೆ ಬ್ಯಾಲೆನ್ಸ್‌ ಮಾಡಿಕೊಂಡು ಗಾಡಿ ಓಡಿಸುವ ಚಾಲಕರುಗಳೇ ಈ ಫೋಟೋಶೂಟ್‌ನ ಪ್ರಮುಖ ಹಿನ್ನೆಲೆಯಾಗಿದೆ. ಹಾಗಾಗಿಯೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನದೀತೀರ, ಚಂದನೆಯ ಹೂದೋಟ, ಗದ್ದೆ ಬಯಲು, ನೀಲಾಕಾಶ ಇವುಗಳೇ ಹಿನ್ನೆಲೆಯಾಗಿ ಫೋಟೋ ತೆಗೆಯಬೇಕೆಂದು ನಿಯಮವೇನಾದರೂ ಇದೆಯಾ? ಚಂದದ ಹಿನ್ನೆಲೆಯೇ ಬೇಕೆಂದು ಹೇಳಿದ್ಯಾರು? ಇರೋದನ್ನು ಇರೋ ಹಾಗೆ ತೋರಿಸ್ತೀವಪ್ಪ ಎಂದು ಹಲವರು ಇಂಥ ಪ್ರಯತ್ನಗಳಿಗೆ ಕೈ ಹಾಕಿದ್ದುಂಟು. ಈ ಛಾಯಾಗ್ರಾಹಕ ಕೂಡಾ ಅಂಥದ್ದೇ ವಾದವನ್ನು ಮುಂದಿಟ್ಟಿದ್ದಾರೆ. ನಮ್ಮ ರಸ್ತೆಗಳೆಲ್ಲಾ ಅಂಕುಡೊಂಕು. ರಸ್ತೆ ಪೂರ್ತಿ ಹೊಂಡಗಳು. ಹೊಂಡಗಳ ತುಂಬ ಕೆಸರು ನೀರು. ರಸ್ತೆಯೆಲ್ಲಿದೆ ಹೊಂಡವೆಲ್ಲಿದೆ ಎಂದು ನೋಡಬೇಕಾದ ಪರಿಸ್ಥಿತಿ ಇದೆ. ಕೆಂಪಾದ ಸೀರೆಯುಟ್ಟ ನೀರೆ, ಇಂತಹ ಕೆಂಪಾದ ನೀರಿನ ರಸ್ತೆಯಲ್ಲಿ ನಡೆಯುತ್ತಾ ಬಂದರೆ ಎಷ್ಟು ಚೆನ್ನಾಗಿ ಕಾಣುತ್ತಾಳೆ ನೋಡಿ ಎಂದು ಛಾಯಾಗ್ರಾಹಕನೇ ಹೇಳಿದ ಹಾಗಿದೆ. ಆ ಮೂಲಕ ಮಲಗಿರುವ ಸರ್ಕಾರವೇ, ಇಲ್ಲೊಮ್ಮೆ ರಸ್ತೆ ನೋಡಿ ಎಂದೂ ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: Viral video| ಅಂಗಡಿಗೆ ನುಗ್ಗಿ ಎರಡು ಚಾಕೊಲೇಟ್‌ ಎಗರಿಸಿ ಓಡಿದ ಕರಡಿ!

ಹೊಂಡಗಳಾದ ರಸ್ತೆಗಳನ್ನು ಸರಿಪಡಿಸಲು ಎಷ್ಟೇ ಮನವಿ ಮಾಡಿದರೂ, ಅದೇ ರಸ್ತೆಯಲ್ಲಿ ಪ್ರಯಾಣಿಸುವ ರಾಜಕಾರಣಿಗಳು ಅಧಿಕಾರಿಗಳಿದ್ದರೂ ಅವರ್ಯಾರೂ ಕಣ್ಣು ತೆರೆಯದೆ ಇದ್ದಾಗ, ಕ್ರಿಯಾತ್ಮಕವಾಗಿ ಹೊಂಡಗಳನ್ನೇ ಬಳಸಿಕೊಂಡು ಚಿತ್ರ ಬಿಡಿಸಿ ಗಮನ ಸೆಳೆಯಲು ಪ್ರಯತ್ನಿಸಿದ ಉದಾಹರಣೆಗಳಿವೆ. ಇದೂ ಅಂಥದ್ದೇ ಒಂದು ಉದಾಹರಣೆಯೂ ಹೌದು. ಕಲೆಯನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದಕ್ಕೆ ಇಂತಹುಗಳೇ ನಿದರ್ಶನ.

ಆರೋ ವೆಡ್ಡಿಂಗ್‌ ಕಂಪನಿ ಹೆಸರಿನಲ್ಲಿ ಇದನ್ನು ಪೋಸ್ಟ್‌ ಮಾಡಲಾಗಿದ್ದು, ಈ ಫೋಟೋಶೂಟ್‌ ನೋಡಿ ಹಲವರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಹಲವರು ರಸ್ತೆಯ ಸ್ಥಿತಿಯ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. ಇದು ರಸ್ತೆಯಲ್ಲ, ಕೆರೆ ಎಂದಿದ್ದಾರೆ. ಇನ್ನೂ ಕೆಲವರು ಇದು ರಸ್ತೆಯಾ? ಇಲ್ಲಿ ಒಂದಿಷ್ಟು ಮೀನುಗಳನ್ನು ಹಾಕಿ ಮೀನುಗಾರಿಕೆ ಮಾಡಬಹುದು ಎಂದು ಸಲಹೆಯನ್ನೂ ಕೊಟ್ಟಿದ್ದಾರೆ. ಕೇರಳದಲ್ಲಿ ಸದ್ಯ ರಸ್ತೆಗಳ ಸ್ಥಿತಿಗತಿಯ ಕುರಿತು ಭಾರೀ ಚರ್ಚೆಗಳಾಗುತ್ತಿರುವ ಕಾರಣ ಈ ವಿಡಿಯೋ ಕೂಡಾ ಸಾಕಷ್ಟು ಸದ್ದು ಮಾಡುತ್ತಿದೆ. ಇಂತದ್ದೊಂದು ಕ್ರಿಯೇಟಿವ್‌ ಐಡಿಯಾ ಮಾಡಿ ಫೋಟೋ ತೆಗೆದ ಛಾಯಾಗ್ರಾಹಕನಿಗೂ, ಯಾವ ತಲೆಬಿಸಿಯೂ ಇಲ್ಲದೆ, ಮದುವೆ ಸೀರೆ ಏನಾದೀತು ಎಂಬ ಚಿಂತೆಯೂ ಇಲ್ಲದೆ, ಹೊಂಡಗಳ ಕೆನ್ನೀರಿನ ಮಧ್ಯೆ ಕೆಂದಾವರೆಯ ಹಾಗೆ ಹೆಜ್ಜೆ ಹಾಕಿದ ಮದುಮಗಳಿಗೂ ಎಲ್ಲರೂ ಶಹಬ್ಬಾಸ್‌ಗಿರಿ ಕೊಡುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್‌ ಮಾಡುವಂತೆ ಸವಾಲು ಹಾಕಿದ್ದೇಕೆ?

Jyoti Rai: ಸದ್ಯ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ನಕಲಿ ಅಶ್ಲೀಲ ವಿಡಿಯೊ ವೈರಲ್‌ ಆಗಿದೆ. ಈ ಬಗ್ಗೆ ನಟಿ ಸೈಬರ್‌ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಈ ಘಟನೆಯಿಂದ ತೀವ್ರವಾಗಿ ನೊಂದುಕೊಂಡಿರುವ ಅವರು ಇದೀಗ ನೋವಿನ ನಡುವೆಯೂ ಹಿರಿಯ ಗಾಯಕ ಮೊಗಿಲಯ್ಯ ಅವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾದರಿಯಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಮೊಗಿಲಯ್ಯ ಅವರಿಗೆ ಜ್ಯೋತಿ ರೈ ಅವರು ಅಕ್ಷಯ ತೃತೀಯದಂದು 50 ಸಾವಿರ ರೂ. ಧನ ಸಹಾಯ ಮಾಡಿದ್ದಾರೆ.

VISTARANEWS.COM


on

Jyoti Rai
Koo

ಹೈದರಾಬಾದ್‌: ಸದ್ಯ ಕಿರುತೆರೆ ನಟಿ, ಬಹುಭಾಷಾ ಕಲಾವಿದೆ, ಕನ್ನಡ ಮೂಲದ ಜ್ಯೋತಿ ರೈ (Jyoti Rai) ಕುರಿತಾದ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದೇ ಇದಕ್ಕೆ ಕಾರಣ. ಈ ಪ್ರಕರಣದಿಂದ ಆಘಾತಕ್ಕೊಳಗಾದ ಅವರು ತೀವ್ರ ಬೇಸರದ ನಡುವೆಯೂ ಜನಪದ ಗಾಯಕರೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿಯಾಗಿದ್ದಾರೆ.

ತೆಲುಗಿನ ಜನಪ್ರಿಯ ಜನಪದ ಗಾಯಕ ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ (Darshanam Mogilaiah) ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ತನ್ನ ನೋವನ್ನು ನುಂಗಿ ಜ್ಯೋತಿ ರೈ ಅವರು ಈ ಹಿರಿಯ ಕಲಾವಿದರ ನೆರವಿಗೆ ಧಾವಿಸಿದ್ದಾರೆ.

ಧನ ಸಹಾಯ

ಅಕ್ಷಯ ತೃತೀಯ ದಿನ (ಶುಕ್ರವಾರ)ದಂದು ಜ್ಯೋತಿ ರೈ ಅವರು ಮೊಗಿಲಯ್ಯ ಅವರಿಗೆ 50 ಸಾವಿರ ರೂ. ಧನ ಸಹಾಯ ನೀಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ʼʼಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತುʼʼ ಎಂದು ಜ್ಯೋತಿ ರೈ ಹೇಳಿದ್ದಾರೆ.

ಮುಂದುವರಿದು, ʼʼಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಮೂಡಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹೀಗಾಗಿ ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ನೆರವಾಗೋಣʼʼ ಎಂದು ಕರೆ ನೀಡಿದ್ದಾರೆ.

ಸವಾಲು

ಇದರ ಜತೆಗೆ ತಮ್ಮದು ಎನ್ನಲಾದ ನಕಲಿ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗಳಿಗೆ ಸವಾಲು ಹಾಕಿದ್ದಾರೆ. ʼʼಈ ವಿಡಿಯೊ (ಮೊಗಿಲಯ್ಯ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ವಿಡಿಯೊ)ವನ್ನು ವೈರಲ್‌ ಮಾಡುವ ತಾಕತ್ತು ನಿಮ್ಮಲ್ಲಿ ಇದೆಯಾ? ಇದು ನಿಜವಾದುದು. ಈ ಕೆಳಗಿನ ಸಾಲುಗಳು ಕೆಲಸ ಇಲ್ಲದವರಿಗೆ, ಬುದ್ಧಿ ಇಲ್ಲದವರಿಗಾಗಿ. ಜಗತ್ತು ನನ್ನೆಡೆಗೆ ಅಂಧಕಾರವನ್ನು ದೂಡಿದಾಗ ನನ್ನೊಳಗಿನ ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನನ್ನೊಳಗಿನ ಬೆಳಕು ಉರಿಯಲು ಇಂತಹ ಕತ್ತಲೇ ಇಂಧನ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏಳುತ್ತದೆ. ನಕಾರಾತ್ಮಕ ಶಕ್ತಿಯು ಮೆಟ್ಟಿಲು; ನಾನು ಅದರ ಮೇಲೆ ಹತ್ತಿ ಸಕಾರಾತ್ಮಕತೆಯ ದಿಗಂತದ ಕಡೆಗೆ ಸಾಗುತ್ತೇನೆʼʼ ಎಂದು ಜ್ಯೋತಿ ರೈ ಬರೆದುಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್‌ ವೈರಲ್‌ ಆಗಿದೆ. ಅಭಿಮಾನಿಗಳು ಅವರ ಈ ದಿಟ್ಟತನವನ್ನು, ಮಾನವೀಯತೆಯ ಗುಣವನ್ನು ಮೆಚ್ಚಿದ್ದಾರೆ.

ಇದನ್ನೂ ಓದಿ: Jyothi Rai: ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದ್ರೆ ಜ್ಯೋತಿ ರೈ ವಿಡಿಯೊ ಅಪ್‌ಲೋಡ್‌ ಮಾಡ್ತೀನಿ ಎಂದ ಕಿಡಿಗೇಡಿ!

ಇತ್ತೀಚೆಗೆ ಜ್ಯೋತಿ ರೈ ಅವರದ್ದು ಎನ್ನಲಾದ ಮೂರು ಅಶ್ಲೀಲ ವಿಡಿಯೊ ಹಾಗೂ ಕೆಲವು ಫೋಟೊಗಳು ವೈರಲ್ ಆಗಿದ್ದವು. ಬಳಿಕ ನಟಿ ಈ ಬಗ್ಗೆ ಸುದೀರ್ಘವಾಗಿ ಪತ್ರವನ್ನು ಬರೆದು ಸ್ಪಷ್ಟನೆ ನೀಡಿದ್ದರು. ʻʻನಾನು ಅಪರಿಚಿತ ವ್ಯಕ್ತಿಗಳಿಂದ ಕೆಲವು ಸಂದೇಶಗಳನ್ನು ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ಸರಿ ಮಾಡಲು ಸಾಧ್ಯವಾದಂತಹ ಡ್ಯಾಮೇಜ್ ಆಗಲಿದೆ. ನಿಮ್ಮ ತನಿಖೆಗೆ ಅನುಕೂಲವಾಗುವಂತೆ ಯೂಸರ್ ಐಡಿಗಳನ್ನು ಪೋಸ್ಟ್‌ ಮಾಡಿದ್ದೇನೆʼʼ ಎಂದು ಹೇಳಿಕೊಂಡಿದ್ದರು. ಜತೆಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದರು.

Continue Reading

ಕಲಬುರಗಿ

Assault Case : ಹಣಕ್ಕಾಗಿ ಕಿಡ್ನ್ಯಾಪ್‌; ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್‌!

Assault Case : ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಕ್ಷೇತ್ರದಲ್ಲೇ ಹೇಯ ಕೃತ್ಯವೊಂದು ನಡೆದಿದೆ. ಹಣಕ್ಕಾಗಿ ಕಾರು ವ್ಯಾಪಾರಿ ಸೇರಿ ಮತ್ತಿಬ್ಬರನ್ನು ಮನೆಯೊಂದರಲ್ಲಿ ಕೂಡಿ ಹಾಕಿದ ದುರ್ಷಮಿಗಳು, ಅವರನ್ನು ಬೆತ್ತಲೆ ಮಾಡಿ, ಕರೆಂಟ್‌ ಶಾಕ್‌ ಕೊಟ್ಟು ಹಲ್ಲೆ ಮಾಡಿ ಟಾರ್ಚರ್‌ ಮಾಡಿದ್ದಾರೆ.

VISTARANEWS.COM


on

By

Assault case in kalaburagi
ಆರು ಮಂದಿ ಬಂಧಿತ ಆರೋಪಿಗಳು ಹಾಗೂ ಮಧ್ಯ ಭಾಗದಲ್ಲಿ ಕಿಡ್ನ್ಯಾಪ್‌ ಆಗಿದ್ದ ಅರ್ಜುನ್‌
Koo

ಕಲಬುರಗಿ: ಹಣಕ್ಕಾಗಿ‌ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರಿ ಮತ್ತು ಆತನ ಸ್ನೇಹಿತರಿಬ್ಬರನ್ನು ಅಪಹರಿಸಿರುವ (Kidnap Case) ಘಟನೆ ನಡೆದಿದೆ. ರೂಮಿನಲ್ಲಿ ಮೂವರನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಟಾರ್ಚರ್ ನೀಡಿ, ಹಣವನ್ನು ಲಪಟಾಯಿಸಿರುವ ಘಟನೆ (Assault Case) ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿ ಅರ್ಜುನ್‌ ಮಡಿವಾಳ ಎಂಬಾತನಿಗೆ ಹಲ್ಲೆ ನಡೆಸಲಾಗಿದೆ. ಅರ್ಜುನ್‌ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಮೇ 5ರಂದು ಪರಿಚಯಸ್ಥನಾಗಿದ್ದ ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರು ತೋರಿಸಲು ಅರ್ಜುನ್‌ ತನ್ನಿಬ್ಬರು ಸ್ನೇಹಿತರಾದ ಎಂ.ಡಿ ಸಮೀರೊದ್ದಿನ್, ಅಬ್ದುಲ್ ರಹೇಮಾನ್ ಜತೆಗೆ ಹೋಗಿದ್ದರು.

ಇದನ್ನೂ ಓದಿ: Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್‌

ಈ ವೇಳೆ ಆರೋಪಿ ರಮೇಶ್‌ ಕಾರಿನ ಟೆಸ್ಟ್‌ ಡ್ರೈವ್‌ ಮಾಡಿ, ಕಾರಿಗೆ ಹಣ ನೀಡುವವರು ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿ ಇದ್ದಾರೆ. ಅಲ್ಲಿಗೆ ಹೋಗೋಣಾ ಎಂದು ಮೂವರನ್ನು ಕರೆದುಹೋಗಿದ್ದಾರೆ. ನಂತರ ಯಾವುದೋ ಮನೆ ಬಳಿ ಕಾರು ನಿಲ್ಲಿಸಿದಾಗ ಸುಮಾರು ಹತ್ತಾರು ಮಂದಿ ಅರ್ಜುನ್‌ ಹಾಗೂ ಮತ್ತಿಬ್ಬರನ್ನು ಬಲವಂತದಿಂದ ಎಳೆದುಹೋಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ರಮೇಶ್‌ ಸೇರಿ ಇಮ್ರಾನ್ ಪಟೇಲ್, ಮಹಮ್ಮದ್ ಮತೀನ್ ಸೇರಿ ಹಲವರು ಹಲ್ಲೆ ನಡೆಸಿದ್ದಾರೆ.

ಕಿರಾತಕರು ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ನಡೆಸಿದ್ದಾರೆ. ಕರೆಂಟ್ ಶಾಕ್ ಬಳಿಕ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿ ಹಣ ಹಾಕಿಸಿಕೊಂಡು, ಬಳಿಕ ಪ್ರತಿ ಬಾರಿ ಕಾರು ಮಾರಾಟ ಮಾಡಿದಾಗ ಕಮಿಷನ್‌ ರೂಪದಲ್ಲಿ ಒಂದು ಲಕ್ಷ ರೂ. ಹಣ ಕೊಡಬೇಕು ಎಂದಿದ್ದಾರೆ. ಕೊಡದೆ ಹೋದರೆ ಮನೆಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

Viral News: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಲೇಟೆಸ್ಟ್‌ ಉದದಾಹರಣೆ ಈ ಘಟನೆ. ಹಾಡ ಹಗಲೇ ರಸ್ತೆಯ ಪಕ್ಕ ನಿಂತಿದ್ದ ಯುವತಿಗೆ ಇಬ್ಬರು ಮುಸ್ಲಿಂ ಯುವಕರು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ಬಿ.ಟಿ.ಎಂ‌. ಲೇ ಔಟ್‌ನಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral News
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರಿ ಬಿಡಿ ಹಗಲಿನಲ್ಲೇ ಮಹಿಳೆಯರು, ಯುವತಿಯರು, ಮಕ್ಕಳು ಓಡಾಡಲು ಭಯಪಡುವಂತಾಗಿದೆ. ಇದಕ್ಕೆ ಲೇಟೆಸ್ಟ್‌ ಉದದಾಹರಣೆ ಈ ಘಟನೆ. ಹಾಡ ಹಗಲೇ ರಸ್ತೆಯ ಪಕ್ಕ ನಿಂತಿದ್ದ ಯುವತಿಗೆ ಇಬ್ಬರು ಮುಸ್ಲಿಂ ಯುವಕರು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ರಸ್ತೆ ಬದಿಯಲ್ಲಿ ಸ್ಕೂಟಿ‌ ನಿಲ್ಲಿಸಿಕೊಂಡು ನಿಂತಿದ್ದ ಯುವತಿ ಬಳಿಗೆ ಬಂದ ಸ್ಕೂಟರ್‌ನಲ್ಲಿದ್ದ ಇಬ್ಬರು ಯುವಕರು ಹಿಂದಿಯಲ್ಲಿ ನಿಂದಿಸಿದ್ದಾರೆ. ಇದು ಬಿ.ಟಿ.ಎಂ‌. ಲೇ ಔಟ್‌ನಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ರಸ್ತೆಯ ಪಕ್ಕ ಸ್ಕೂಟಿ ನಿಲ್ಲಿಸಿ ಯುವತಿ ತಮ್ಮ ಪಾಡಿಗೆ ತಾವು ನಿಂತಿದ್ದರು. ಅಲ್ಲಿಗೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸ್ಲಿಂ ಯುವಕರು, ʼʼಕುಡಿದ ನಶೆಯಲ್ಲಿ ರೋಡ್ ಶೋ ಮಾಡುತ್ತೀಯಾ?ʼʼ ಎಂದು ಬೈದಿದ್ದಾರೆ. ಯುವಕರ ಅವಾಚ್ಯ ನಿಂದನೆಯಿಂದ ಒಂದು ಕ್ಷಣ ಗಾಬರಿಗೊಳಗಾದ ಯುವತಿ ಬಳಿಕ ಅವರನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅವರನ್ನೇ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಪುಂಡರು ಅಶ್ಲೀಲ ಪದಗಳಿಂದ ಯುವತಿಯನ್ನು ಹಿಂದಿಯಲ್ಲಿ ನಿಂದಿಸಿದ್ದಾರೆ. ಹೀಗೆ ಯುವಕರು ಕೆಲಕಾಲ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗೆ ಅನುಚಿತವಾಗಿ ವರ್ತಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ನಡುಬೀದಿಯಲ್ಲಿ ಲೈಂಗಿಕ ಕಿರುಕುಳ

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲೇ ಬಿಹಾರ ಮೂಲದ ದಂಪತಿಗೆ ಲೈಂಗಿಕ ಕಿರುಕುಳದ ಕರಾಳ ಅನುಭವ ಆಗಿದ್ದು, ಅದರಿಂದ ಪಾರಾಗಲು ಇಬ್ಬರೂ ಒದ್ದಾಡಿದ್ದಾರೆ. ನಗರದಲ್ಲಿ ಪದೇ ಪದೆ ಬೆಳಕಿಗೆ ಬರುತ್ತಿರುವ ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಇದೂ ಒಂದು ಸೇರ್ಪಡೆ. ರಾತ್ರಿ ಸಮಯದಲ್ಲಿ ಯುವತಿಯೊಬ್ಬಳಿಗೆ ಪುಂಡರು ಲೈಂಗಿಕ ಕಿರುಕುಳ ನೀಡಿದ್ದಾರೆ. ನಡು ರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ. ಕೊಡಿಗೆಹಳ್ಳಿಯ ವಿರೂಪಾಕ್ಷಪುರದಲ್ಲಿ ಒಂದು ವಾರದ ಹಿಂದೆ 10:30ರ ಸುಮಾರಿಗೆ ನಡೆದ ಘಟನೆ ಇದು.

ಜತೆಗಿದ್ದ ದಂಪತಿಯ ಬಳಿ ಬಂದ ಮೂರ್ನಾಲ್ಕು ಪುಂಡರು, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಯುವತಿಗೆ ಒತ್ತಾಯ ಮಾಡಿದ್ದಾರೆ. ಒಪ್ಪದಿದ್ದಾಗ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದಾರೆ. ಈ ದಂಪತಿ ಬಿಹಾರ ಮೂಲದವರಾಗಿದ್ದು, ಈ ದಂಪತಿಗೆ ನಿನ್ನೆ ರಾತ್ರಿ ಕರಾಳ ಅನುಭವವಾಗಿದೆ. ಹೆಂಡತಿಯನ್ನು ಕಳಿಸುವಂತೆ ಪುಂಡರು ಗಂಡನಿಗೆ ಬೆದರಿಕೆ ಹಾಕಿದ್ದಾರೆ. ಗಂಡನ ಸ್ನೇಹಿತನಿಂದಲೇ ಕೃತ್ಯ ನಡೆದಿದೆ. ಹೀಗಾಗಿ ಸದ್ಯ ಬೆಂಗಳೂರಿಗರು ಒಬ್ಬರೇ ಓಡಾಡಲು ಭಯಪಡುವಂತಾಗಿದೆ.

ಇದನ್ನೂ ಓದಿ: Physical Abuse: ನಡುಬೀದಿಯಲ್ಲಿ ಲೈಂಗಿಕ ಕಿರುಕುಳ, ಹೆಂಡತಿಯನ್ನು ಕಳಿಸುವಂತೆ ಗಂಡನಿಗೆ ಬೆದರಿಕೆ

Continue Reading

ವೈರಲ್ ನ್ಯೂಸ್

Viral News: ಕುಡಿದ ಮತ್ತಿನಲ್ಲಿ ಪೊಲೀಸ್‌ ಪೇದೆಯ ಕೈ ಕಚ್ಚಿ, ಬಟ್ಟೆ ಹರಿದು ಹಲ್ಲೆ ಮಾಡಿದ ಮಹಿಳೆಯರು

Viral News:ಬಾರ್ ಅಂಡ್ ರೆಸ್ಟೊರೆಂಟ್‌ನ ಹೊರಗೆ ಮೂವರು ಯುವತಿಯರು ಪರಸ್ಪರ ಗಲಾಟೆ ಮಾಡುತ್ತಿದ್ದರು. ಇದರಿಂದ ಕಿರಿ ಕಿರಿ ಅನುಭವಿಸಿದ್ದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ತಕ್ಷಣ ಬರುವಂತೆ ಮನವಿ ಮಾಡಿದ್ದರು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಯುವತಿಯರನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ. ಮತ್ತು ತಕ್ಷಣ ಅಲ್ಲಿಂದ ತೆರಳುವಂತೆ ಸೂಚಿಸುತ್ತಾರೆ. ಆಗ ಕೋಪಗೊಂಡ ಯುವತಿಯರು ಪೊಲೀಸರಿಗೇ ಆವಾಜ್‌ ಹಾಕಿದ್ದಾರೆ. ಸಾಲದೆಂಬುದಕ್ಕೆ ಪೊಲೀಸ್‌ ಪೇದೆಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

VISTARANEWS.COM


on

Viral News
Koo

ಮುಂಬೈ: ಬಾರ್‌ನಲ್ಲಿ ತಡರಾತ್ರಿ ಪಾರ್ಟಿ(Mumbai Bar) ಮುಗಿಸಿ ಮೂವರು ಯುವತಿಯ ಮಾರಾಮಾರಿ ನಡೆದಿದ್ದು, ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ನಶೆಯಲ್ಲಿ ತೂರಾಡುತ್ತಿದ್ದ ಯುವತಿಯರ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಭಾರೀ ವೈರಲ್(Viral News) ಆಗಿದೆ. ಪಾರ್ಟಿಯ ಮೂಡಿನಲ್ಲಿದ್ದ ಯುವತಿಯರನ್ನು ಕೊನೆಗೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಮುಂಬೈನ ವಿರಾರ್ ಪ್ರದೇಶದ ಗೋಕುಲ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ.

ಘಟನೆ ವಿವರ:

ಬಾರ್ ಅಂಡ್ ರೆಸ್ಟೊರೆಂಟ್‌ನ ಹೊರಗೆ ಮೂವರು ಯುವತಿಯರು ಪರಸ್ಪರ ಗಲಾಟೆ ಮಾಡುತ್ತಿದ್ದರು. ಇದರಿಂದ ಕಿರಿ ಕಿರಿ ಅನುಭವಿಸಿದ್ದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ತಕ್ಷಣ ಬರುವಂತೆ ಮನವಿ ಮಾಡಿದ್ದರು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಯುವತಿಯರನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ. ಮತ್ತು ತಕ್ಷಣ ಅಲ್ಲಿಂದ ತೆರಳುವಂತೆ ಸೂಚಿಸುತ್ತಾರೆ. ಆಗ ಕೋಪಗೊಂಡ ಯುವತಿಯರು ಪೊಲೀಸರಿಗೇ ಆವಾಜ್‌ ಹಾಕಿದ್ದಾರೆ. ಸಾಲದೆಂಬುದಕ್ಕೆ ಪೊಲೀಸ್‌ ಪೇದೆಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಕಿಡಿದ ನಶೆಯಲ್ಲಿ ಪೊಲೀಸರನ್ನು ಅಚಾಚ್ಯ ಶಬ್ಧಗಳಿಂದ ನಿಂದಿಸಿದ ಯುವತಿಯರು, ಮಹಿಳಾ ಪೊಲೀಸ್ ಪೇದೆಯೊಬ್ಬರ ಕೈ ಕಚ್ಚಿದ್ದಲ್ಲದೆ, ಆಕೆಯ ಸಮವಸ್ತ್ರವನ್ನೂ ಹರಿದಿದ್ದಾರೆ. ಮತ್ತೊಬ್ಬ ಕಾನ್ ಸ್ಟೇಬಲ್ ತಲೆಗೆ ಬಕೆಟ್ ನಿಂದ ಹೊಡೆದಿದ್ದಾನೆ. ಅವರ ಕೈಯನ್ನೂ ಕಚ್ಚಿದ್ದಾರೆ. ಪೊಲೀಸರು ಆರೋಪಿಗಳನ್ನು ಕಾವ್ಯ, ಅಶ್ವಿನಿ ಮತ್ತು ಪೂಣಂ ಎಂದು ಗುರುತಿಸಿದ್ದಾರೆ. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

ಕೆಲವು ತಿಂಗಳ ಹಿಂದೆ ಕಲಬುರಗಿಯಲ್ಲೂ ಇಂತಹದ್ದೇ ಒಂದಿ ಘಟನೆ ನಡೆದಿತ್ತು. ಪರೀಕ್ಷೆ ವೇಳೆ ಕಾಪಿ ಮಾಡಲು ಅವಕಾಶ ನೀಡಲಿಲ್ಲ ಎಂದು ಇಬ್ಬರು ವ್ಯಕ್ತಿಗಳು ಪೊಲೀಸ್ ಮುಖ್ಯ ಪೇದೆ ಮೇಲೆ ಹಲ್ಲೆ ನಡೆಸಿದ್ದರು. ಲಾಠಿ ಕಸಿದು, ಕಲ್ಲಿನಿಂದ ಹೊಡೆದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 20ರಂದು ಹಲ್ಲೆ ಮಾಡಿದ ಆರೋಪಿಗಳ ಪೈಕಿ ಒಬ್ಬರ ಸಹೋದರಿಯ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಈ ಆಕೆಯ ಅಣ್ಣ ತಾನು ತಂಗಿಗೆ ಸಹಾಯ ಮಾಡಲು ಮುಂದಾಗಿದ್ದ. ಈ ವೇಳೆ ಆತನನ್ನು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ತಡೆದಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಸಹೋದರ ಪೋಲಸ್ ಅಂತಲೂ ನೋಡದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಂಗಿ ಪರವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಯುವಕ ತಕರಾರು ಎತ್ತಿದ್ದ. ಅದಕ್ಕೆ ಒಪ್ಪದೇ ಇದ್ದಾಗ ಆರೋಪಿ ಹಲ್ಲೆ ಮಾಡಿದ್ದಾನೆ.

Continue Reading
Advertisement
Morning Tips
ಲೈಫ್‌ಸ್ಟೈಲ್18 mins ago

Morning Tips: ಬೆಳಗ್ಗೆ 7 ಗಂಟೆಯೊಳಗೆ ನೀವು ಈ 7 ಕೆಲಸಗಳನ್ನು ಮಾಡುತ್ತೀರಾ?

Karnataka Weather Forecast
ಮಳೆ48 mins ago

Karnataka Weather : ಮೇ 13ರ ತನಕ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಯಂಕರ ಮಳೆ; ಬಿರುಗಾಳಿಯು ಸಾಥ್‌

Solar
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

Protein Supplements
ಆರೋಗ್ಯ2 hours ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ2 hours ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

International Nurses’s Day
ಆರೋಗ್ಯ2 hours ago

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

Dina Bhavishya
ಭವಿಷ್ಯ2 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

IPL 2024
ಪ್ರಮುಖ ಸುದ್ದಿ6 hours ago

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

car catches fire
ಕ್ರೈಂ7 hours ago

Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

jay Shah
ಪ್ರಮುಖ ಸುದ್ದಿ8 hours ago

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು16 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌