Viral Video | ಚಾವಣಿ ಹಿಡಿದು ನೇತಾಡುತ್ತಿದ್ದ ಅಮ್ಮ ಬೀಳದಂತೆ ಕಾಪಾಡಿದ ಮಗು; ಪ್ರಯಾಸ ಆಗುತ್ತಿದ್ದರೂ ಬಿಡದ ಬಾಲಕ - Vistara News

ವೈರಲ್ ನ್ಯೂಸ್

Viral Video | ಚಾವಣಿ ಹಿಡಿದು ನೇತಾಡುತ್ತಿದ್ದ ಅಮ್ಮ ಬೀಳದಂತೆ ಕಾಪಾಡಿದ ಮಗು; ಪ್ರಯಾಸ ಆಗುತ್ತಿದ್ದರೂ ಬಿಡದ ಬಾಲಕ

ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ ಎಂಬುವರು 43 ಸೆಕೆಂಡ್​​ಗಳ ಈ ವಿಡಿಯೊವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡು, ಮಗುವನ್ನು ಪ್ರಶಂಸಿಸಿದ್ದಾರೆ.

VISTARANEWS.COM


on

Child Protect His mother
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಮ್ಮನಾದವಳಿಗೆ ತನ್ನ ಮಗುವಿನ ರಕ್ಷಣೆ, ಕಾಳಜಿ, ಆರೈಕೆಯೇ ಪ್ರಥಮ ಆದ್ಯತೆಯಾಗಿರುತ್ತದೆ. ತನ್ನ ಮಗುವಿಗೆ ಯಾವೊಂದು ಮಾರ್ಗದಲ್ಲೂ ಅಪಾಯ ಬಾರದಂತೆ ಆಕೆ ಕಾಪಾಡಿಕೊಳ್ಳುತ್ತಾಳೆ. ಹಾಗೇ, ಮಕ್ಕಳೂ ಕೂಡ ಅಮ್ಮನ ಬಗ್ಗೆ ಅಪಾರ ಕಾಳಜಿ ಹೊಂದಿರುತ್ತಾರೆ. ಅಮ್ಮಂಗೆ ಸ್ವಲ್ಪ ಏನಾದರೂ ಆದರೂ ಮಕ್ಕಳು ಸಹಿಸಿಕೊಳ್ಳಲಾರರು. ಅಮ್ಮಂಗೆ ಒಂದು ಚಿಕ್ಕ ಗಾಯವಾದರೂ ತಾವೇ ಅಳುವ ಮಕ್ಕಳನ್ನೂ ನಾವು ನೋಡಿದ್ದೇವೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಬಾಲಕನೊಬ್ಬ ತನ್ನ ತಾಯಿಯನ್ನು ಅಪಾಯದಿಂದ ಕಾಪಾಡಿದ ವಿಡಿಯೊವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭರ್ಜರಿ ಮೆಚ್ಚುಗೆಗೆ ಪಾತ್ರವಾಗಿದೆ.

ಐಪಿಎಸ್​ ಅಧಿಕಾರಿ ದೀಪಾಂಶು ಕಬ್ರಾ ಎಂಬುವರು 43 ಸೆಕೆಂಡ್​​ಗಳ ಈ ವಿಡಿಯೊವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡು, ‘ತಾಯಿಯನ್ನು ಅಪಾಯದಿಂದ ಪಾರು ಮಾಡಿದ ಈ ಪುಟ್ಟ ಮಗುವಿನ ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಎಷ್ಟು ಪ್ರಶಂಸಿಸಿದರೂ ಸಾಕಾಗುವುದಿಲ್ಲ’ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಡಿ.23ರಂದು ಶೇರ್​ ಆಗಿರುವ ವಿಡಿಯೊ 2 ಲಕ್ಷಕ್ಕೂ ಅಧಿಕ ವೀವ್ಸ್​ ಕಂಡಿದೆ. ‘ಈ ಬಾಲಕ ಒಬ್ಬ ಹೀರೋ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ’ ‘ಮಕ್ಕಳು ದೇವರ ಉಡುಗೊರೆ ಎಂದು ಹೇಳುವುದು ಇದಕ್ಕೇ’ ಎಂದೂ ಹಲವರು ಹೇಳಿದ್ದಾರೆ.

ಏನಿದೆ ವಿಡಿಯೊದಲ್ಲಿ?
ರಸ್ತೆ ಪಕ್ಕದಲ್ಲಿರುವ ಗ್ಯಾರೇಜ್​​ವೊಂದರಲ್ಲಿ ನಡೆದ ಘಟನೆ ಇದು. ಅದರ ದ್ವಾರದ ಚಾವಣಿ ಮೇಲೆ ಇಟ್ಟ ಯಾವುದೋ ವಸ್ತುವನ್ನು ತೆಗೆಯುವ ಸಲುವಾಗಿ ಮಹಿಳೆಯೊಬ್ಬರು ಮರದ ಏಣಿಯನ್ನು ಹಾಕಿಕೊಂಡು ಅದರ ಮೇಲೆ ನಿಂತಿದ್ದರು. ಅದೇನೋ ಸಮತೋಲನ ತಪ್ಪಿದಂತಾಗಿ ಏಣಿ ಕೆಳಗೆ ಬಿದ್ದುಹೋಯಿತು. ಅಷ್ಟರಲ್ಲಿ ಮಹಿಳೆ ಥಟ್ಟನೆ ಆ ಚಾವಣಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ನೇತಾಡಲು ಶುರು ಮಾಡಿದರು. ನೆಲ ತುಂಬ ಕೆಳಗೆ ಇರುವುದರಿಂದ ಆಕೆ ಜಂಪ್​ ಮಾಡಿದರೂ ಗಾಯಗೊಳ್ಳುತ್ತಾರೆ. ಬಿದ್ದರೂ ಗಂಭೀರ ಏಟು ಆಗುತ್ತದೆ. ಆದರೆ ಎಷ್ಟೊತ್ತು ಅವರು ಹೀಗೆ ಚಾವಣಿಗೆ ನೇತಾಡುತ್ತ ಇರಲು ಸಾಧ್ಯ? ಇಂಥ ಪರಿಸ್ಥಿತಿ ಅಲ್ಲಿ ಎದುರಾಗಿತ್ತು.

ಇದೆಲ್ಲವನ್ನೂ ಅಲ್ಲೊಂದು ಮಗು ನಿಂತು ನೋಡುತ್ತಿತ್ತು. ಪುಟ್ಟ ಬಾಲಕ ಅವನು. ತನ್ನಮ್ಮ ಅಪಾಯದಲ್ಲಿದ್ದಾಳೆ ಎಂಬುದು ಅವನಿಗೆ ಗೊತ್ತಾಯಿತು. ಎರಡು-ಮೂರು ಸೆಕೆಂಡ್​ ಆ ಬಾಲಕ ಹಾಗೇ ನಿಂತು ನೇತಾಡುತ್ತಿದ್ದ ಅಮ್ಮನನ್ನು ನೋಡಿದ. ತಕ್ಷಣವೇ ಅವನಿಗೆ ತಾನೇನು ಮಾಡಬೇಕು ಎಂಬುದು ಮನಸಿಗೆ ಹೊಳೆಯಿತು. ಓಡಿ ಹೋಗಿ ಆ ಏಣಿಯನ್ನು ತನ್ನ ಪುಟ್ಟ ಕೈಗಳಿಂದ, ಪ್ರಯಾಸ ಪಡುತ್ತ ಎತ್ತಿದ. ಅಮ್ಮನ ಕಾಲು ಎಟಕುವ ಜಾಗದಲ್ಲಿ ಸರಿಯಾಗಿ ನಿಲ್ಲಿಸಿದ. ಮಹಿಳೆ ಆ ಏಣಿಯ ಮೇಲೆ ನಿಂತು ಸುಧಾರಿಸಿಕೊಂಡರು. ಇತ್ತ ಬಾಲಕ ಮತ್ತೆ ಏಣಿ ಬೀಳದೆ ಇರಲಿ ಎಂದು ಅದನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದ. ತನಗಿರುವ ಯುಕ್ತಿ ಮತ್ತು ಪುಟ್ಟ ಶಕ್ತಿಯಿಂದ ಅಮ್ಮನನ್ನು ಅಪಾಯದಿಂದ ಪಾರು ಮಾಡಿದ್ದಾನೆ. ನೀವೊಮ್ಮೆ ವಿಡಿಯೊ ನೋಡಿ, ಇದು ನಿಮ್ಮ ಹೃದಯವನ್ನೂ ಸ್ಪರ್ಶಿಸುತ್ತದೆ..

ಇದನ್ನೂ ಓದಿ:Viral Video | ಏರ್​ಪೋರ್ಟ್​​ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ; ಮತ್ತೆ ಉಸಿರುಕೊಟ್ಟು ಅಪಾಯದಿಂದ ಪಾರು ಮಾಡಿದ ಸೈನಿಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Darshanam Mogulaiah: 2 ವರ್ಷದ ಹಿಂದೆ ಪದ್ಮಶ್ರೀ ಪಡೆದ ಸಾಧಕ ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕ!

Darshanam Mogulaiah: ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ನಿರ್ಣಾಯಕವಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2022ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದೇ ವರ್ಷ ದೇಶಾದ್ಯಂತ ಸುದ್ದಿಯಾದ ಇವರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನವೂ ದೊರೆತಿತ್ತು. ಆದರೆ, ಈಗ ದರ್ಶನಂ ಮೊಗುಳಯ್ಯ ಅವರು ಕೂಲಿ ಕಾರ್ಮಿಕರಾಗಿ ದುಡಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

VISTARANEWS.COM


on

Darshanam Mogulaiah
Koo

ಹೈದರಾಬಾದ್: ಭಾರತದಲ್ಲಿ ಕಲಾವಿದರಿಗೆ, ಸಾಧಕರಿಗೆ ಒಂದೋ ಅತಿಯಾದ ಗೌರವ ಸಿಗುತ್ತದೆ. ಇಲ್ಲದಿದ್ದರೆ, ಅವರ ಜೀವನವೇ ಸಂಕಷ್ಟಕ್ಕೆ ಸಿಲುಕಿದರೂ ಅವರು ಮುಖ್ಯವಾಹಿನಿಯಲ್ಲಿ ಇರುವುದಿಲ್ಲ. ಅವರಿಗೆ ಸಹಾಯಹಸ್ತ ಚಾಚುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಎರಡು ವರ್ಷಗಳ ಹಿಂದಷ್ಟೇ ಪದ್ಮಶ್ರೀ ಪ್ರಶಸ್ತಿ (Padma Shri Award) ಪಡೆದ ತೆಲಂಗಾಣದ (Telangana) ಸಾಧಕ ದರ್ಶನಂ ಮೊಗುಳಯ್ಯ (Darshanam Mogulaiah) ಅವರು ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಈ ಫೋಟೊಗಳು ಹಾಗೂ ವಿಡಿಯೊಗಳು (Viral News) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಹೌದು, ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ನಿರ್ಣಾಯಕವಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2022ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆಗ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್‌ ಅವರು ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದಾದ ಬಳಿಕ ಇವರು ಭಾರತದಾದ್ಯಂತ ಸುದ್ದಿಯಾಗಿದ್ದರು. ಜನರಿಂದಲೂ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತ್ತು.

ಈಗ ದಿನಗೂಲಿ ಕಾರ್ಮಿಕ

ಪದ್ಮಶ್ರೀ ಪ್ರಶಸ್ತಿ ಪಡೆದ ದರ್ಶನಂ ಮೊಗುಳಯ್ಯ ಅವರು ಈಗ ಅಂದರೆ 73ನೇ ವಯಸ್ಸಿನಲ್ಲಿ ಹೈದರಾಬಾದ್ ಬಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬಕ್ಕೆ ಇವರೇ ಆಧಾರ ಸ್ತಂಭವಾಗಿದ್ದು, ಮೂರು ಹೊತ್ತಿನ ಊಟಕ್ಕಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ, ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸಾಧಕ ಇಳಿ ವಯಸ್ಸಿನಲ್ಲಿ ಊಟಕ್ಕಾಗಿ ಕೂಲಿ ಕೆಲಸ ಮಾಡಬೇಕಾ ಎಂದು ಜನ ಪ್ರಶ್ನಿಸಿದ್ದಾರೆ.

ಸರ್ಕಾರ ಕೊಟ್ಟ ಕೋಟಿ ರೂ. ಏನಾಯ್ತು?

ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಲೇ ತೆಲಂಗಾಣ ಸರ್ಕಾರವು ಅವರಿಗೆ ಒಂದು ಕೋಟಿ ರೂ. ಪ್ರೋತ್ಸಾಹ ಧನ ನೀಡಿತ್ತು. ಆಗ ಸಿಎಂ ಆಗಿದ್ದ ಕೆ.ಚಂದ್ರಶೇಖರ್‌ ರಾವ್‌ ಅವರು ಇವರಿಗೆ ಒಂದು ನಿವೇಶನವನ್ನೂ ಮಂಜೂರು ಮಾಡಿದ್ದರು. ಆದರೆ, ಸರ್ಕಾರ ಕೊಟ್ಟ ಪ್ರೋತ್ಸಾಹಧನದಲ್ಲಿ ಒಂದಷ್ಟು ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿದ ಅವರು, ಉಳಿದ ಹಣವನ್ನು ಸಾಲ ತೀರಿಸಲು, ಕುಟುಂಬದ ತುರ್ತು ಸಂದರ್ಭಗಳಿಗೆ ಬಳಸಿದ್ದಾರೆ. ಹಾಗಾಗಿ, ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ, ಇಂತಹ ಸಾಧಕನಿಗೆ ಸರ್ಕಾರವು ನೆರವು ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Lok Sabha Election: ತರಕಾರಿ ಮಾರಿ ಪದ್ಮಶ್ರೀ ಪುರಸ್ಕೃತ ಅಭ್ಯರ್ಥಿ ಚುನಾವಣೆ ಪ್ರಚಾರ! ಯಾರಿವರು?

Continue Reading

ವೈರಲ್ ನ್ಯೂಸ್

Viral Video: ಪ್ರಿನ್ಸಿಪಾಲ್ ಆದರೇನು, ಟೀಚರ್ ಆದರೇನು? ಹೆಂಗಸರ ಬಡಿದಾಟ ಇರೋದೇ ಹೀಗೆ! ವಿಡಿಯೊ ನೋಡಿ

Viral Video: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾಲೆಯೊಂದರಲ್ಲಿ, “ನನ್ನ ನೀನು ಗೆಲ್ಲಲಾರೆ” ಎಂಬ ಧೋರಣೆಯಲ್ಲಿ ನುಗ್ಗಿದ ಪ್ರಾಂಶುಪಾಲೆಯು, ಶಿಕ್ಷಕಿಯ ಕೆನ್ನೆಗೆ ತಿವಿದಿದ್ದಾರೆ. ಇದಕ್ಕೆ ಶಿಕ್ಷಕಿಯೂ, “ನಾ ನಿನ್ನ ಬಿಡಲಾರೆ” ಎಂಬಂತೆ ಅವರ ಬಟ್ಟೆ ಎಳೆದು ಸೇಡು ತೀರಿಸಿಕೊಂಡಿದ್ದಾರೆ. ಶಾಲೆಯಲ್ಲಿಯೇ ಶಿಕ್ಷಕಿಯರು ಹೀಗೆ ಬಡಿದಾಡಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral Video
Koo

ಲಖನೌ: ”ಎರಡು ಜಡೆಗಳು ಒಟ್ಟಿಗೆ ಸೇರಲ್ಲ” ಎಂಬ ಮಾತಿದೆ. ಇನ್ನು ಸರ್ಕಾರಿ ಬಸ್‌ಗಳು, ಅಕ್ಕಪಕ್ಕದ ಮನೆಗಳಲ್ಲಿ ಹೆಣ್ಣುಮಕ್ಕಳು ಬಡಿದಾಡಿಕೊಳ್ಳುವ, ಹಿಗ್ಗಾಮುಗ್ಗ ಬೈದು ಜಗಳವಾಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ವೈಷಮ್ಯ, ಜಗಳ, ಸುತ್ತಮುತ್ತಲಿನವರ ಬಗ್ಗೆ ಗಾಸಿಪ್‌ ಮಾಡುವ ಕಾರಣಕ್ಕಾಗಿಯೇ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ಚಾಲ್ತಿಗೆ ಬಂದಿರಬೇಕು. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿರುವ (Agra) ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿ ಮಧ್ಯೆ ಶಾಲೆಯಲ್ಲಿಯೇ ಮಾರಾಮಾರಿ ನಡೆದಿದೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿಯು ಬಡಿದಾಡಿಕೊಂಡಿದ್ದಾರೆ. ಇಬ್ಬರೂ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಿದ್ದಾರೆ. ಅಷ್ಟೇ ಅಲ್ಲ, ಪ್ರಾಂಶುಪಾಲೆಯು, ನಾನು ಯಾವುದಕ್ಕೂ ಏನು ಕಡಿಮೆ ಇಲ್ಲ ಎಂಬಂತೆ, ಶಿಕ್ಷಕಿಯ ಕೆನ್ನೆಗೆ ತಿವಿದಿದ್ದಾರೆ. ಶಿಕ್ಷಕಿಯೂ ರೊಚ್ಚಿಗೆದ್ದು, ಪ್ರಾಂಶುಪಾಲೆಯ ಬಟ್ಟೆ ಹಿಡಿದು ಎಳೆದಿದ್ದಾರೆ. ಇಬ್ಬರ ನಡುವಿನ ಈ ಜಂಗಿಕುಸ್ತಿಯು ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಾನು ಇವಳನ್ನು ಬಿಡಲ್ಲ ಎಂಬ ರೀತಿ ಪ್ರಾಂಶುಪಾಲೆ ಮುನ್ನುಗ್ಗಿದರೆ, ಕುರ್ಚಿ ಮೇಲೆಯೇ ಕುಳಿತ ಶಿಕ್ಷಕಿಯು ತಿರುಗೇಟು ನೀಡಿದ್ದಾರೆ. ಇವರ ಸಹೋದ್ಯೋಗಿಗಳು ಎಷ್ಟು ಜಗಳ ಬಿಡಿಸಿದರೂ ಇಬ್ಬರ ನಟುವಿನ ಜಟಾಪಟಿ ಮಾತ್ರ ನಿಂತಿಲ್ಲ. ನಿಮ್ಮಿಬ್ಬರದ್ದು ಇದೇ ಆಯಿತು, ವಿಡಿಯೊ ಮಾಡಿ ಅಪ್‌ಲೋಡ್‌ ಮಾಡುತ್ತೇನೆ, ನಿಮ್ಮ ಘನತೆಗೆ ತಕ್ಕಂತೆ ನೀವು ವರ್ತಿಸುತ್ತಿಲ್ಲ ಎಂಬುದಾಗಿ ವಿಡಿಯೊ ಮಾಡುವವರು ಹೇಳಿದರೂ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯು ಪಟ್ಟಿಗೆ ಬಿದ್ದು ಜಗಳವಾಡಿದ್ದಾರೆ.

“ಶಾಲೆಯಲ್ಲಿ ಹೇಗೆ ವರ್ತಿಸಬೇಕು ಎಂಬುದೇ ಗೊತ್ತಿರದ ಇವರು, ಮಕ್ಕಳಿಗೆ ಯಾವ ಶಿಕ್ಷಣ ನೀಡುತ್ತಾರೆ? ಇಬ್ಬರನ್ನೂ ವಜಾಗೊಳಿಸಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು, “ಇಂತಹ ಶಿಕ್ಷಕರ ಕೈಯಲ್ಲಿ ಕಲಿತ ಮಕ್ಕಳು ಕೂಡ ಹಾಳಾಗುತ್ತಾರೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯದ ಬಗ್ಗೆ ಮರುಕವಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ. ಹೀಗೆ, ನೂರಾರು ಜನ ಪ್ರತಿಕ್ರಿಯಿಸಿ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇವರ ವಿರುದ್ಧ ಕ್ರಮ ತೆಗೆದುಕೊಂಡಿರುವ ಕುರಿತು, ನೋಟಿಸ್‌ ನೀಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಇದನ್ನೂ ಓದಿ: Asaduddin Owaisi: ಅಸಾದುದ್ದೀನ್‌ ಓವೈಸಿಯ ಭರ್ಜರಿ ಬೈಕ್‌ ರೈಡ್‌;ವಿಡಿಯೋ ವೈರಲ್‌

Continue Reading

ಮಳೆ

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Bengaluru Rains: ಬೆಂಗಳೂರು ಸುತ್ತಮುತ್ತ ಗಾಳಿ ಜತೆಗೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ದೇವಸ್ಥಾನ ಜೀರ್ಣೋದ್ಧಾರದಲ್ಲಿ ಊಟ ಮಾಡುತ್ತಿದ್ದಾಗ ದಿಢೀರ್‌ ಮಳೆಯಿಂದ ಜನರು ಊಟ ಬಿಟ್ಟು ಓಡಿ ಹೋದರು. ಟೇಬಲ್ ಮೇಲಿನ ಊಟವೆಲ್ಲ ನೀರುಪಾಲಾಗಿತ್ತು‌. ಕೆಲವೆಡೆ ಮಳೆ ಅನಾಹುತಗಳು ಸಂಭವಿಸಿವೆ.

VISTARANEWS.COM


on

By

Bengaluru Rains
Koo

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ (Karnataka Rains) ಬಿರುಗಾಳಿ ಸಹಿತ ಮಳೆ ಬಂದು ಹೋಯಿತು. ಆದರೆ ರಾಜಧಾನಿ ಬೆಂಗಳೂರಲ್ಲಿ ಒಂದು ಸಣ್ಣ ಹನಿಯು (Karnataka weather Forecast) ಬೀಳಲಿಲ್ಲ. ಬೆಂಗಳೂರು ಕರಗ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಆದರೂ ಮಳೆ ಬಂದೇ ಬರುತ್ತೆ ಎಂಬ ನಂಬಿಕೆ ಇದೆ. ಆದರೆ ಆಗಲೂ ಮಳೆಯು ಕಾಣಲಿಲ್ಲ. ಇದೀಗ ಬಿಸಿಲ ಧಗೆಯಿಂದ ಸುಸ್ತಾಗಿದ್ದ ಮಂದಿಗೆ ಮಳೆಯು ತನ್ನ ಭರ್ಜರಿ ಪ್ರದರ್ಶನ (Bengaluru Rains) ತೋರಿದೆ.

ಲೇಟ್‌ ಆದರೂ ಲೇಟೆಸ್ಟ್‌ ಆಗಿ ಮಳೆರಾಯ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾನೆ. ಇದರಿಂದಾಗಿ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್ ಎಂದು ಬೆಂಗಳೂರಿಗರಿಗೆ ವಿಷ್‌ ಮಾಡಿದ್ದಾರೆ. ಜತೆಗೆ ಟ್ವಿಟರ್‌, ಇನ್ಸ್ಟಾಗ್ರಾಂನಲ್ಲಿ Bengaluru rains ಹ್ಯಾಶ್‌ ಟ್ಯಾಗ್‌ ಹಾಕಿ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೂ-ಇಂತೂ ಬೆಂಗಳೂರಲ್ಲಿ ಮಳೆ ಬಂತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು.

Bengaluru Rains

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

ಇನ್ನೂ ಬೆಂಗಳೂರಿನ ಆರ್‌.ಟಿ‌ ನಗರದಲ್ಲಿ ಮರವು ಉರುಳಿ ಬಿದ್ದಿತ್ತು. ಇನೋವಾ ಹಾಗೂ ಓಮಿನಿ ಕಾರು ಜಖಂಗೊಂಡಿತ್ತು. ರವೀಂದ್ರನಾಥ್ ಠಾಗೋರ್ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿತ್ತು. ಅದೃಷ್ಟವಶಾತ್‌ ಕಾರಿನಲ್ಲಿ ಇದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ದೌಡಾಯಿಸಿದ್ದು, ಮರ ತೆರವು ಮಾಡುತ್ತಿದ್ದಾರೆ. ಇತ್ತ ಕೊತ್ತನೂರು ಬಳಿ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಕಾರಿನ ಬ್ಯಾನೆಟ್ ಹಾಳಾಗಿತ್ತು. ವಿದ್ಯುತ್‌ ಕಂಬ ಕಳಚಿ ಬಿದ್ದ ಕಾರಣ ಕರೆಂಟ್‌ ಕಟ್ಟ್‌ ಆಗಿತ್ತು.

Bengaluru Rains

ಮೈಸೂರು, ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ

ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗುತ್ತಿದೆ. ಹಲವು ದಿನಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಮಂಡ್ಯ ಜನರು ಖುಷಿಯಾಗಿದ್ದಾರೆ. ಭಾರಿ ಶಬ್ಧದೊಂದಿಗೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಮೈಸೂರಿನಲ್ಲಿ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣ ಸಿಂಚನವಾಗಿದೆ. ತಿ.ನರಸೀಪುರ ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಜೋರು ಗಾಳಿ ನಡುವೆ ಆಲಿಕಲ್ಲು ಮಳೆಯಾಗಿದೆ.

ಟ್ರಾನ್ಸ್ ಫಾರ್ಮರ್ ಸ್ಫೋಟ

ಬೆಂಗಳೂರಿನ ಐಟಿಐ ಲೇಔಟ್‌ನಲ್ಲಿ ಮಳೆಗೆ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಗಾಳಿ ಮಳೆಗೆ ಮರಗಳ ಎಲೆ ತಾಗಿ ಟ್ರಾನ್ಸ್ ಫಾರ್ಮನರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬ್ಲಾಸ್ಟ್‌ ಆಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರಾನ್ಸ್‌ಫಾರ್ಮನರ್‌ ಸ್ಫೋಟದಿಂದಾಗಿ ವಿದ್ಯುತ್‌ ಕಡಿತವಾಗಿದೆ.

ಹೊಸಕೋಟೆಯಲ್ಲೂ ಬಿರುಗಾಳಿ ಮಳೆ

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ. ವರ್ಷದ ಮೊದಲ ಮಳೆ ಕಂಡು ಜನರು ಸಂತಸಗೊಂಡಿದ್ದಾರೆ. ಇನ್ನೂ ಗಾಳಿ ಸಹಿತ ಮಳೆಯಿಂದಾಗಿ ದೇವಸ್ಥಾನ ಜೀರ್ಣೋದ್ಧಾರದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್ ಎಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಊಟ ಮಾಡುತ್ತಿದ್ದವರೆಲ್ಲೂ ಎಲೆ ಬಿಟ್ಟು, ಓಡಿ ಹೋದರು. ಟೇಬಲ್ ಮೇಲಿನ ಊಟವೆಲ್ಲ ನೀರುಪಾಲಾಗಿತ್ತು‌. ಹೊಸಕೋಟೆ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಾಮರಾಜನಗರದಲ್ಲೂ ಮಳೆಯ ಸಿಂಚನ

ಚಾಮರಾಜನಗರದಲ್ಲೂ ವರುಣ ಭೂ ಸ್ಪರ್ಶಿಸಿದ್ದಾನೆ. ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ, ಚೆನ್ನಪ್ಪಪುರ, ಅರಕಲವಾಡಿ ವೆಂಕಟಯ್ಯನ ಛತ್ರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬೇಸಿಗೆಯಿಂದ ಬೇಸತ್ತಿದ್ದ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ. ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ, ಉಡಿಗಾಲ, ಕೆಂಗಾಕಿ, ಕುಮಚಹಳ್ಳಿ ಗ್ರಾಮದಲ್ಲಿ ಗಾಳಿಯ ಅಬ್ಬರದೊಂದಿಗೆ ಮಳೆಯಾಗಿದೆ.

ರಾಮನಗರದಲ್ಲೂ ತಂಪೆರೆದ ಮಳೆ

ಬರಗಾಲದಿಂದ ಬೇಸತ್ತಿದ್ದ ರೇಷ್ಮೆನಾಡು ರಾಮನಗರ ಜಿಲ್ಲೆಯಲ್ಲೂ ಹಲವೆಡೆ ವರುಣ ದರ್ಶನ ಕೊಟ್ಟಿದ್ದಾನೆ. ಗುಡುಗು ಸಹಿತ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪೂರ್ವಜರ ನಂಬಿಕೆಯಂತೆ ಭರಣಿ ಮಳೆ ಆಗಮಿಸಿದೆ. ಭರಣಿ ಮಳೆ ಬಂದರೆ ರೈತರ ಕೃಷಿ ಚುಟುವಟಿಕೆ ಆರಂಭಿಸಲು ಯಶಸ್ವಿ ಎಂಬ ನಂಬಿಕೆ ಇದೆ. ಸದ್ಯ ಭರಣಿ ಮಳೆಯ ಸಿಂಚನದಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.

ಆಲಿಕಲ್ಲು ಸಹಿತ ಮಳೆಯಾರ್ಭಟ

ಇನ್ನೂ ರಾಜ್ಯ ಗಡಿ ಡೆಂಕಣಿಕೋಟೆ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ತಮಿಳುನಾಡಿನ ಡೆಂಕಣಿಕೋಟೆ, ಹೊಸೂರು, ಸೂಲಗಿರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ ಸೇರಿದಂತೆ ಜೋರು ಮಳೆಯಾಗುತ್ತಿದೆ.

Bengaluru rains

ಬ್ಯಾರಿಕೇಟ್‌ ಹಾಕಿ ಅಂಡರ್‌ಪಾಸ್‌ ಕ್ಲೋಸ್‌

ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ನದಿಯಂತಾಗಿತ್ತು. ವಿಧಾನಸೌಧ ಪಕ್ಕದಲ್ಲಿರುವ ಎಂ.ಎಸ್ ಬಿಲ್ಡಿಂಗ್ ಸುತ್ತಮುತ್ತಲಿನ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಎಂಎಸ್‌ ಬಿಲ್ಡಿಂಗ್‌ ಸಮೀಪವೇ ಇರುವ ಅಂಡರ್ ಪಾಸ್‌ಗಳಿಗೆ ಬ್ಯಾರಿಕೇಟ್ ಹಾಕಿ ಕ್ಲೋಸ್ ಮಾಡಲಾಗಿದೆ.

ಧರೆಗೆ ಬಿದ್ದ ಮರಗಳು

ಮಳೆಯಿಂದ ಬೆಂಗಳೂರು ನಗರದಲ್ಲಿ ಮೂರು ಕಡೆ ಬೃಹತ್ ಗಾತ್ರದ ಮರ ಧರೆಗೆ ಬಿದ್ದಿದೆ. ಕೆ.ಆರ್.ಪುರಂನ ಕಸ್ತೂರಿ ನಗರ, ಆರ್‌ಟಿ ನಗರದಲ್ಲಿ ಮಳೆಗೆ ಮರ ಬಿದ್ದಿದೆ. ಇನ್ನೂ ನಾರಾಯಣಪುರದಲ್ಲಿ ಮರ ಬಿದ್ದು, ಕಾರು, ಬೈಕ್ ಜಖಂಗೊಂಡಿದೆ. ಸದ್ಯ ರಸ್ತೆಗೆ ಬಿದ್ದಿದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದ ಎಟಿಎಂ (ATM) ಕೊಠಡಿಗೆ ಮಳೆ ನೀರು ನುಗ್ಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral News: 17 ವರ್ಷದ ಯುವತಿ ಎರಡು ಬಾರಿ ಗರ್ಭಿಣಿ; ಪೋಷಕರು ಸೇರಿ 16 ಜನರ ವಿರುದ್ಧ ಕೇಸ್‌

Viral News:2021ರಲ್ಲಿ 23ವರ್ಷದ ಅನ್ಯಧರ್ಮೀಯ ಯುವಕನೋರ್ವನನ್ನು ನಂಬಿ ಯುವತಿ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಳು. ತಕ್ಷಣ ಆಕೆಯ ಪೋಷಕರು ಕಾಲೇಜು ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬಳ ಸಹಾಯದಿಂದ ಬಾಲಕಿಯನ್ನು ಮುಂಬೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಹೆರಿಗೆ ಮಾಡಿಸಿದ್ದರು. ಆ ಮಗುವನ್ನು ಪೋಷಕರು ಸಾಮಾಜಿಕ ಕಾರ್ಯಕರ್ತೆಗೆ ಒಪ್ಪಿಸಿದ್ದರು. ಅಲ್ಲಿಂದ ಆ ಮಗುವನ್ನು ಮಾರಾಟ ಮಾಡಿದ್ದಾರೆ

VISTARANEWS.COM


on

Viral News
Koo

ಮಹಾರಾಷ್ಟ್ರ: 17 ವರ್ಷದ ಯುವತಿಯೊಬ್ಬಳು(Viral News) ಮದುವೆಗೂ ಮುನ್ನ ಎರಡು ಬಾರಿ ಗರ್ಭಿಣಿ(Pregnant) ಯಾಗಿ, ಹೆತ್ತ ಮಗುವನ್ನು ಮರಾಟ ಮಾಡಿರುವ ಘಟನೆ ಮಹಾರಾಷ್ಟ್ರ(Maharashtra)ದ ಪಾಲ್ಗಾರ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಸೇರಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯನ್ನು ನಂಬಿಸಿ ಅನ್ಯಧರ್ಮೀಯ ಯುವಕ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ್ದ. ಈ ವಿಚಾರ ತಿಳಿದ ಆಕೆಯ ಪೋಷಕರು ಆಗಷ್ಟೇ ಜನಿಸಿದ ಮಗುವನ್ನು ಮಾರಾಟ ಮಾಡಿದ್ದು, ಯುವತಿ ದೂರಿನ ಮೇಲೆ ಒಟ್ಟು 16 ಜನರ ವಿರುದ್ಧ ಎಫ್‌ಐಆರ್‌(FIR) ದಾಖಲಿಸಲಾಗಿದೆ.

ಘಟನೆ ವಿವರ:

2021ರಲ್ಲಿ 23ವರ್ಷದ ಅನ್ಯಧರ್ಮೀಯ ಯುವಕನೋರ್ವನನ್ನು ನಂಬಿ ಯುವತಿ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಳು. ಆಕೆಗೆ 3 ತಿಂಗಳಾಗುತ್ತಿದಂತೆ ಆಕೆ ಪೋಷಕರಿಗೆ ಈ ವಿಚಾರ ತಿಳಿದಿದೆ. ತಕ್ಷಣ ಆಕೆಯ ಪೋಷಕರು ಕಾಲೇಜು ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬಳ ಸಹಾಯದಿಂದ ಬಾಲಕಿಯನ್ನು ಮುಂಬೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಹೆರಿಗೆ ಮಾಡಿಸಿದ್ದರು. ಅಲ್ಲಿ ವಕೀಲರು ಕೆಲವೊಂದು ದಾಖಲೆ ಪತ್ರಗಳಿಗೆ ಯುವತಿ ಕೈಯಿಂದ ಸಹಿ ಮಾಡಿಸಿಕೊಂಡಿದ್ದಾರೆ. 2021ರ ಸೆ.24ರಂದು ಬಾಲಕಿಗೆ ಹೆರಿಗೆ ಆಗಿದ್ದು, ಆ ಮಗುವನ್ನು ಪೋಷಕರು ಸಾಮಾಜಿಕ ಕಾರ್ಯಕರ್ತೆಗೆ ಒಪ್ಪಿಸಿದ್ದರು. ಅಲ್ಲಿಂದ ಆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಇದಾದ ಏಳು ತಿಂಗಳ ಬಳಿಕ ಯುವತಿ ಆ ಯುವಕನನ್ನು ಸಂಪರ್ಕಿಸಿದಾದ ಆತ ಸಾಮಾಜಿಕ ಕಾರ್ಯಕರ್ತೆಗೆ 4.5ಲಕ್ಷ ರೂ. ನೀಡಿರುವ ವಿಚಾರ ತಿಳಿದಿತ್ತು. ಯುವತಿಯ ಪೋಷಕರು ಮತ್ತು ಆಕೆಯ ಮಾವ ತಲಾ 1.5 ಲಕ್ಷ ರೂ. ಪಡೆದಿದ್ದರು. ಈ ವಿಚಾರ ತಿಳಿದು ಯುವತಿ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ಬಲವಂತವಾಗಿ ಅಜ್ಜಿ ಮನೆಗೆ ಕಳುಹಿಸಿ ಅಲ್ಲಿ ಬೇರೆ ಯುವಕನ ಜೊತೆ ಆಕೆಯ ಮದುವೆ ತಯಾರಿ ನಡೆಸಲಾಗಿತ್ತು. ಮದುವೆ ನಿಗದಿಯಾಗಿದ್ದ ಯುವಕನೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮವಾಗಿ ಆಕೆ ಮತ್ತೊಮ್ಮೆ ಗರ್ಭಿಣಿ ಆದಳು. ಅದೇ ಸಂದರ್ಭದಲ್ಲಿ ಈ ಹಿಂದೆಯೂ ಆಕೆ ಗರ್ಭಿಣಿಯಾಗಿದ್ದ ವಿಚಾರ ಆ ವ್ಯಕ್ತಿಗೆ ತಿಳಿದು ಆತ ಮದುವೆಗೆ ನಿರಾಕರಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

ಕೊನೆಗೆ ದಿಕ್ಕೆಟ್ಟಿದ್ದ ಯುವತಿ ಪೋಷಕರ ಮನೆಗೆ ಮರಳಿದ್ದಳು. ಅಲ್ಲಿ ಆಕೆ ಎರಡನೇ ಬಾರಿ ಮಗುವಿಗೆ ಜನ್ಮ ನೀಡಿದ್ದಳು. ಈ ಬಾರಿ ಆಕೆಯ ಮಗುವನ್ನು ಮಾರಾಟ ಮಾಡಲು ಪೋಷಕರು ಒತ್ತಾಯಿಸಿದ್ದರು. ಅಲ್ಲದೇ ಮಾರಾಟಕ್ಕೆ ಎಲ್ಲಾ ಸಿದ್ದತೆ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಯುವತಿಯನ್ನು ವಿಚಾರಣೆ ನಡೆಸಿದಾಗ ಎಲ್ಲಾ ವಿಚಾರಗಳನ್ನು ಆಕೆ ಬಾಯ್ಬಿಟ್ಟಿದ್ದಾಳೆ. ಇದೀಗ ಘಟನೆ ಸಂಬಂಧ ಯುವತಿಯ ಪೋಷಕರು, ಪ್ರಾಂಶುಪಾಲ, ಇಬ್ಬರು ವೈದ್ಯೆಯರು, ಸಾಮಾಜಿಕ ಕಾರ್ಯಕರ್ತೆ ಸೇರಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Continue Reading
Advertisement
Rain News
ಕರ್ನಾಟಕ4 hours ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ನವ ವಿವಾಹಿತ ಸಾವು, ಕಾರ್ಮಿಕನ ಸ್ಥಿತಿ ಗಂಭೀರ

ಪ್ರಮುಖ ಸುದ್ದಿ4 hours ago

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

Nijjar Killing
ವಿದೇಶ4 hours ago

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Rohith Vemula
ದೇಶ5 hours ago

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rinku Singh
ಪ್ರಮುಖ ಸುದ್ದಿ5 hours ago

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

honour killing
ವಿಜಯಪುರ5 hours ago

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Pakistan
ವಿದೇಶ5 hours ago

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

T20 World Cup
ಪ್ರಮುಖ ಸುದ್ದಿ5 hours ago

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

Health Tips Kannada
ಆರೋಗ್ಯ6 hours ago

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Meeting with representatives of various political parties about MLC election in Hosapete
ವಿಜಯನಗರ6 hours ago

Vijayanagara News: ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ; ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ12 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ23 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20246 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌