Christmas celebration | ಕ್ರಿಸ್‌ಮಸ್‌ಗಾಗಿ ನೂರು ಬೀದಿನಾಯಿಗಳಿಗೆ ಹಬ್ಬದಡುಗೆ ಮಾಡಿ ಬಡಿಸಿದ! - Vistara News

ವೈರಲ್ ನ್ಯೂಸ್

Christmas celebration | ಕ್ರಿಸ್‌ಮಸ್‌ಗಾಗಿ ನೂರು ಬೀದಿನಾಯಿಗಳಿಗೆ ಹಬ್ಬದಡುಗೆ ಮಾಡಿ ಬಡಿಸಿದ!

ಥಾಯ್ಲೆಂಡಿನ ಶೆಫ್‌ ಒಬ್ಬರು ಕ್ರಿಸ್‌ಮಸ್‌ ಹಬ್ಬಕ್ಕಾಗಿ ಸುಮಾರು ನೂರು ಬೀದಿನಾಯಿಗಳಿಗಾಗಿಯೇ ವಿಶೇಷ ಅಡುಗೆ ಮಾಡಿ ಬಡಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

VISTARANEWS.COM


on

Christmas celebration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕ್ರಿಸ್‌ಮಸ್‌ ಬಂತೆಂದರೆ ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡುತ್ತದೆ. ಯಾವುದೇ ಹಬ್ಬವಾದರೂ ಮನೆಯಲ್ಲೇ ಕೆಲವೊಂದು ತಿಂಡಿಗಳನ್ನು ಮಾಡಿ ಕುಟುಂಬಸ್ಥರೊಂದಿಗೆ ನೆರೆಹೊರೆಯವರೊಂದಿಗೆ ಹಂಚಿ ತಿನ್ನುವುದು ವಾಡಿಕೆ. ಹಬ್ಬದ ಹೆಸರಿನಲ್ಲಿ ಎಲ್ಲರೂ ಸೇರಿ ಮಾತುಕತೆ ನಗು ವಿನಿಮಯ ಎಲ್ಲ ಧರ್ಮಗಳ ಮೂಲಮಂತ್ರ. ಆದರೆ, ಪ್ರಾಣಿಗಳ ಬಗ್ಗೆ ಈ ಸಂದರ್ಭ ಯಾರಾದರೂ ಯೋಚನೆ ಮಾಡುತ್ತಾರಾ? ಆದರೆ, ಇಲ್ಲೊಂದು ಇದಕ್ಕೆ ಅಪವಾದವೆಂಬಂತ ಕತೆಯಿದೆ. ಥಾಯ್ಲೆಂಡಿನ ಶೆಫ್‌ ಒಬ್ಬರು ಕ್ರಿಸ್‌ಮಸ್‌ ಹಬ್ಬಕ್ಕಾಗಿ ಸುಮಾರು ನೂರು ಬೀದಿನಾಯಿಗಳಿಗಾಗಿಯೇ ವಿಶೇಷ ಅಡುಗೆ ಮಾಡಿ ಬಡಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಥಾಯ್ಲೆಂಡಿನಲ್ಲಿರುವ ನಾಯಿಪ್ರೇಮಿ ಶೆಫ್‌ ನಿಯಾಲ್‌ ಹರ್ಬಿಸನ್‌ ತನ್ನೂರಿನ ನೂರು ಬೀದಿನಾಯಿಗಳಿಗಾಗಿ ಅಡುಗೆ ಮಾಡಿದ್ದು ಪ್ರಾಣಿಗಳಿಗೂ ಕ್ರಿಸ್‌ಮಸ್‌ ಸಡಗರವನ್ನು ಹಂಚಿದ್ದಾರೆ. ʻಬೀದಿನಾಯಿಗಳ ಜೀವನವೇ ಪ್ರಪಂಚದೆಲ್ಲೆಡೆ ಬಹಳ ದುಸ್ತರವಾದದ್ದು. ಆದರೆ, ಈ ನೂರು ಬೀದಿನಾಯಿಗಳಿಗೆ ಇಂದು ಹಬ್ಬ. ಬೆಳಗ್ಗೆ ೪.೩೦ಕ್ಕೆ ಎದ್ದು, ಈ ಬೀದಿನಾಯಿಗಳಿಗೆಂದೇ ಸ್ವಾದಿಷ್ಟವಾದ ಭೋಜನವನ್ನು ನಾನೇ ಕೈಯಾರೆ ಅಡುಗೆ ಮಾಡಿ ಬಡಿಸಿದ್ದೇನೆ. ನನ್ನ ನಾಯಿ ಪ್ರೀತಿಯನ್ನು ಕಂಡು ಅನೇಕರು ನನಗೆ ನಾಯಿಗಳಿಗಾಗಿ ಇರುವ ಆಟಿಕೆಗಳನ್ನು ಕಳುಹಿಸುತ್ತಿದ್ದಾರೆ. ಈ ನಾಯಿಗಳೆಲ್ಲ ಆಟಿಕೆಗಳ್ನು ನೋಡಿಯೇ ಇಲ್ಲ. ಅವಕ್ಕಾಗಿ ಈಗ ಪುಷ್ಕಳ ಭೋಜನದ ಜೊತೆಗೆ ಆಟಿಕೆಯೂ ಸಿಕ್ಕಿದೆʼ ಎಂದು ಶೆಫ್‌ ಹರ್ಬಿಸನ್‌ ತನ್ನ ಜಾಲತಾಣದ ಪುಟದಲ್ಲಿ ಬರೆದುಕೊಂಡು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Christmas 2022 | ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂತಸದ ಕ್ಷಣ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ

 ಬೀದಿನಾಯಿಗಳಿಗೆ ಇಂದು ಎಲ್ಲ ಜೀವಿಗಳಂತೆಯೇ ಔಷಧಿ, ಬೆಚ್ಚನೆಯ ಪ್ರೀತಿ, ಉತ್ತಮ ಪೋಷಕಾಂಶಯುಕ್ತ ಆಹಾರ ಇವೆಲ್ಲವುಗಳ ಅಗತ್ಯವಿದೆ. ನಾವು ನಾಯಿಗಳಿಗೆ ಇದೆಲ್ಲ ಯಾಕೆ ಬೇಖು ಎಂಬಂತೆ ಅವುಗಳ ಬಗೆಗೆ ತಾತ್ಸಾರ ವಹಿಸುತ್ತೇವೆ. ಈ ನಿಟ್ಟಿನಲ್ಲಿ ನನ್ನದು ಇದೊಂದು ಪುಟ್ಟ ಹೆಜ್ಜೆ. ನೂರು ನಾಯಿಗಳು ನಾನು ಅಡುಗೆ ಮಾಡಿದ ಹಬ್ಬದೂಟವನ್ನು ಬಹಳ ಸಂಭ್ರಮದಿಂದ ತಿಂದವು. ಬಹಳ ಸಂತೃಪ್ತಿಯಿಂದ ತಿಂದು ಖುಷಿ ವ್ಯಕ್ತಪಡಿಸಿದವು. ನನಗೂ ತೃಪ್ತಿಯಾಯಿತು. ನನಗನಿಸುವ ಹಾಗೆ ಈ ನಾಯಿಗಳು ನನ್ನನ್ನು ಈ ಜನ್ಮದಲ್ಲಿ ಮರೆಯುವುದಿಲ್ಲ ಎಂದು ಈತ ಬರೆದುಕೊಂಡಿದ್ದಾನೆ.

ಈ ವಿಡಿಯೋಗೆ ಲಕ್ಷಗಟ್ಟಲೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇದು ನಿಜವಾದ ಮಾನವೀಯತೆ. ಹಬ್ಬದೂಟ ನಮಗೆ ಮಾತ್ರವಲ್ಲ, ಪ್ರಾಣಿಗಳಿಗೂ ಬೇಕು. ಅವಗಳೂ ಸಂಭ್ರಮ ಪಡಬೇಕು. ಇದು ನಿಮ್ಮ ಅತ್ಯುತ್ತಮ ಅಂತಃಕರಣದ ನಡೆ. ಇದು ನಮಗೆ ಅತ್ಯಂತ ಖುಷಿ ನೀಡಿದ ವಿಡಿಯೋ ಎಂದು ಕೆಲವರು ಈತನ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಕೆಲವು ನಾಯಿಪ್ರೇಮಿಗಳು, ನಿಜವಾಗಿಯೂ ಈ ವಿಡಿಯೋ ನೋಡಿ ಕಣ್ಣಿರು ಬಂತು. ಬಹಳ ಒಳ್ಳೆಯ ಕೆಲಸ ಎಂದಿದ್ದಾರೆ. ಇನ್ನೂ ಕೆಲವರು, ನೀವು ಇಂತಹ ಕೆಲಸ ಮಾಡಿದ್ದಕ್ಕಾಗಿ ನಿಮಗೆ ವಿಶೇಷ ಅಭಿನಂದನೆಗಳು, ನಮ್ಮ ಹೃದಯಾಂತರಾಳದಿಂದ ಎಂದು ಪ್ರತಿಕ್ರಿಯೆ ಬರೆದಿದ್ದಾರೆ.

ಇದನ್ನೂ ಓದಿ | Christmas Celebrations | ರಾಜ್ಯಾದ್ಯಂತ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ; ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Killer Python: ಮಹಿಳೆಯನ್ನು ಜೀವಂತವಾಗಿ ನುಂಗಿದ ಹೆಬ್ಬಾವು! ಹೊಟ್ಟೆ ಸೀಳಿ ಹೊರ ತೆಗೆದರು!

45 ವರ್ಷದ ಮಹಿಳೆಯೊಬ್ಬರನ್ನು ಸುಮಾರು 16 ಅಡಿ ಉದ್ದದ ಹೆಬ್ಬಾವು (Killer Python) ಜೀವಂತವಾಗಿ ನುಂಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಮಹಿಳೆ ಮನೆಗೆ ಹಿಂದಿರುಗದೇ ಇದ್ದಾಗ ಅನುಮಾನಗೊಂಡ ಪತಿ ಗ್ರಾಮಸ್ಥರ ನೆರವಿನಿಂದ ಮಹಿಳೆಯ ಹುಡುಕಾಟದಲ್ಲಿ ತೊಡಗಿದ್ದರು.

VISTARANEWS.COM


on

By

Killer Python
Koo

ಇಂಡೋನೇಷ್ಯಾ: ನಾಪತ್ತೆಯಾದ 45 ವರ್ಷದ ಮಹಿಳೆಯೊಬ್ಬರು (women) ಶವವಾಗಿ ಮೂರು ದಿನಗಳ ಬಳಿಕ ಹೆಬ್ಬಾವಿನ (Killer Python) ಹೊಟ್ಟೆಯೊಳಗೆ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ (Indonesian) ನಡೆದಿದೆ. ಮಹಿಳೆಯ ಪತಿ ಸೇರಿದಂತೆ ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಸುಮಾರು 16 ಅಡಿ ಉದ್ದದ ಹೆಬ್ಬಾವಿನೊಳಗೆ (python) ಮಹಿಳೆ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಮಧ್ಯ ಇಂಡೋನೇಷ್ಯಾದಲ್ಲಿ ಹೆಬ್ಬಾವು 45 ವರ್ಷದ ಫರೀದಾ ಅವರನ್ನು ಸಂಪೂರ್ಣವಾಗಿ ನುಂಗಿತ್ತು. ಅದರ ಹೊಟ್ಟೆಯಲ್ಲಿ ಫರೀದಾ ಅವರ ಶವ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನಾಲ್ಕು ಮಕ್ಕಳ ತಾಯಿಯಾಗಿರುವ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಪತಿ ಮತ್ತು ಮಕ್ಕಳು ಸಾಕಷ್ಟು ಹುಡುಕಾಡಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥ ಸುರ್ದಿ ರೋಸಿ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ನಾಪತ್ತೆಯಾದ ಸ್ಥಳದಲ್ಲಿ ಮಹಿಳೆಯ ವಸ್ತುಗಳು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಆಕೆಯ ಪತಿ ಮತ್ತು ಗ್ರಾಮಸ್ಥರು ಆ ಪ್ರದೇಶವನ್ನು ಹುಡುಕಿದರು. ಆಗ ಅವರಿಗೆ ದೊಡ್ಡ ಹೊಟ್ಟೆಯ ಹೆಬ್ಬಾವೊಂದು ಕಂಡು ಬಂದಿದೆ.

ಅವರು ಹೆಬ್ಬಾವಿನ ಹೊಟ್ಟೆಯನ್ನು ಸೀಳಿದಾಗ ತಕ್ಷಣ ಫರೀದಾ ಅವರ ತಲೆ ಗೋಚರಿಸಿದೆ ಮತ್ತು ಹಾವಿನೊಳಗೆ ಫರೀದಾ ಸಂಪೂರ್ಣ ಬಟ್ಟೆ ಧರಿಸಿದ ಸ್ಥಿತಿಯಲ್ಲೇ ಇರುವುದು ಕಂಡುಬಂದಿದೆ. ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳು ಹಲವಾರು ಜನರನ್ನು ಸಂಪೂರ್ಣ ನುಂಗಿರುವ ಪ್ರಕರಣಗಳು ನಡೆದಿವೆ.

ಕಳೆದ ವರ್ಷ ಆಗ್ನೇಯ ಸುಲವೆಸಿಯ ಟಿನಾಂಗ್ಜಿಯಾ ಜಿಲ್ಲೆಯ ನಿವಾಸಿಗಳು ಎಂಟು ಮೀಟರ್ ಹೆಬ್ಬಾವನ್ನು ಕೊಂದಾಗ ಅದು ಹಳ್ಳಿಯೊಂದರಲ್ಲಿ ರೈತರೊಬ್ಬರನ್ನು ಕತ್ತು ಹಿಸುಕಿ ತಿಂದಿರುವುದು ಕಂಡುಬಂದಿದೆ.

ಇದನ್ನೂ ಓದಿ: Road Accident : ವಾಕಿಂಗ್‌ ಹೊರಟಿದ್ದ ವೃದ್ಧೆಗೆ ಬೈಕ್‌ ಡಿಕ್ಕಿ; ಕ್ಷಣದಲ್ಲೇ ಹಾರಿಹೋಯ್ತು ಪ್ರಾಣ

2018 ರಲ್ಲಿ ಆಗ್ನೇಯ ಸುಲವೆಸಿಯ ಮುನಾ ಪಟ್ಟಣದಲ್ಲಿ 54 ವರ್ಷದ ಮಹಿಳೆ ಏಳು ಮೀಟರ್ ಹೆಬ್ಬಾವಿನೊಳಗೆ ಶವವಾಗಿ ಪತ್ತೆಯಾಗಿದ್ದರು. ಅದಕ್ಕೂ ಮೊದಲು ಪಶ್ಚಿಮ ಸುಲವೆಸಿಯ ರೈತರೊಬ್ಬರು ತಾಳೆ ಎಣ್ಣೆ ತೋಟದಲ್ಲಿ ಕಾಣೆಯಾಗಿದ್ದು, ನಾಲ್ಕು ಮೀಟರ್ ಉದ್ದದ ಹೆಬ್ಬಾವು ಅವರನ್ನು ಜೀವಂತವಾಗಿ ನುಂಗಿತ್ತು.

ದೇವರ ದರ್ಶನ ಮಾಡಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನ; ಒಬ್ಬನ ಸಾವು

ಕೌಟುಂಬಿಕ ಸಮಸ್ಯೆಯಿಂದಾಗಿ ಒಂದೇ ಕುಟುಂಬದ ನಾಲ್ವರು ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ತೀವ್ರ ಅಸ್ವಸ್ಥಗೊಂಡಿದ್ದರು. ಈ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ತಾಳಬೆಟ್ಟದಲ್ಲಿ ಘಟನೆ ನಡೆದಿದೆ.

ಚಂದಗಾಲು ಗ್ರಾಮದ ಮಹದೇವನಾಯಕ (65) ಮೃತರು. ಅಸ್ವಸ್ಥಗೊಂಡ ಮಹದೇವನಾಯಕನ ಪತ್ನಿ ಗೌರಮ್ಮ(60), ರಿಷಿತಾ (21), ಲೀಲಾವತಿ (45) ಎಂಬವರನ್ನು ಮೈಸೂರಿನ ಕೆಆರ್‌ನಗರ ತಾಲೂಕಿನ ಚಂದಗಾಲು ಗ್ರಾಮಸ್ಥರು ಎಂದು ತಿಳಿದು ಬಂದಿದೆ.

ಮಹದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹದೇವನಾಯಕ ವಿಷ ಸೇವಿಸಿದ ಕೂಡಲೇ ಒದ್ದಾಡಿ ಮೃತಪಟ್ಟಿದ್ದಾರೆ. ಇತ್ತ ಗೌರಮ್ಮ, ಲೀಲಾವತಿ, ರಿಷಿತಾ ವಿಷ ಸೇವನೆ ಮಾಡಿದ್ದಾರೆ. ಆದರೆ ದೇಹದಲ್ಲಿ ಉರಿ ಕಾಣಿಸಿಕೊಂಡು ಜೋರಾಗಿ ಕೂಗಿಕೊಂಡು ನರಳಾಡಿದ್ದಾರೆ.

ಈ ವೇಳೆ ತಾಳ ಬೆಟ್ಟದಲ್ಲಿದ್ದ ಸ್ಥಳೀಯರು ಕೂಡಲೇ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಮೂವರು ಮಹಿಳೆಯರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಕುರಿತು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Continue Reading

ಕ್ರೈಂ

Viral Video: ಹೋಟೆಲ್‌ನೊಳಗೆ ಪಿಜ್ಜಾ ತಿನ್ನುತ್ತಿರುವಾಗಲೇ ಮಹಿಳೆಯ ಸರ ಅಪಹರಣ!

ಸ್ನೇಹಿತರೊಂದಿಗೆ ಪಿಜ್ಜಾ ಸೇವಿಸುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 20 ಗ್ರಾಂ ನ ಚಿನ್ನವನ್ನು ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಕಸಿದುಕೊಂಡು ಓಡಿ ಹೋಗಿರುವ ಸಂಪೂರ್ಣ ದೃಶ್ಯ ಪಿಜ್ಜಾ ಗ್ಯಾಲರಿಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಪಾಣಿಪತ್: ಸರಗಳ್ಳರು (Chain Snatcher ) ನಿರ್ಭೀತರಾಗಿರುವುದರಿಂದ ಅಂಗಡಿಗಳಿಗೆ ನುಗ್ಗಿ ಜನರ ಚಿನ್ನಾಭರಣ ದೋಚುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪಿಜ್ಜಾ ತಿನ್ನುತ್ತಾ ಮೂವರು ಮಹಿಳೆಯರು ಕುಳಿತು ಮಾತನಾಡುತ್ತಿರುವಾಗಲೇ ವ್ಯಕ್ತಿಯೊಬ್ಬ ಮಹಿಳೆಯ ಚಿನ್ನದ ಸರವನ್ನು ಕಸಿದುಕೊಂಡು ಓಡಿ ಹೋದ ಘಟನೆ ಹರಿಯಾಣದ (Haryana) ಪಾಣಿಪತ್ ನಲ್ಲಿ (Panipat) ನಡೆದಿದೆ. ಇದರ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಸಾಕಷ್ಟು ಹೊತ್ತು ತನ್ನ ಸ್ನೇಹಿತರೊಂದಿಗೆ ಪಿಜ್ಜಾ ಸೇವಿಸುತ್ತಿದ್ದ ಮಹಿಳೆಯ ಮೇಲೆ ನಿಗಾ ವಹಿಸುತ್ತಿದ್ದ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಚೈನ್ ಕಸಿದುಕೊಂಡು ಓಡಿ ಹೋಗಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಇದು ಈಗ ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ವ್ಯಕ್ತಿಯೊಬ್ಬ ಆರ್ಡರ್ ಸಂಗ್ರಹಿಸುವ ನೆಪದಲ್ಲಿ ಪಾಣಿಪತ್ ನಗರದ ತಹಸೀಲ್ ಕ್ಯಾಂಪ್ ರಸ್ತೆಯಲ್ಲಿರುವ ಪಿಜ್ಜಾ ಗ್ಯಾಲರಿಗೆ ಬಂದಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚೈನ್ ಸ್ನ್ಯಾಚರ್ ಬಹಳಷ್ಟು ಹೊತ್ತು ಅಲ್ಲೇ ಕುಳಿತು ಪಿಜ್ಜಾ ತಿನ್ನುತ್ತಿದ್ದ ಮಹಿಳೆಯರ ಮೇಲೆ ಗಮನವಿಟ್ಟಿದ್ದ. ಆತ ಮಹಿಳೆಯ ಸರ ​​ಕಿತ್ತುಕೊಂಡು ಪರಾರಿಯಾದಾಗ ಪಿಜ್ಜಾ ಗ್ಯಾಲರಿ ಸ್ಟಾಫ್ ಯಾರೂ ಅಲ್ಲಿ ಇರಲಿಲ್ಲ.


ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಂಡು ಪಿಜ್ಜಾ ಅಂಗಡಿಯಿಂದ ಹೊರಗೋಡಿದ ಆತನನ್ನು ಇನ್ನೊಬ್ಬ ಮಹಿಳೆ ಹಿಂಬಾಲಿಸಲು ಯತ್ನಿಸಿದ್ದಾನೆ. ಆದರೆ ದರೋಡೆಕೋರರು ತಪ್ಪಿಸಿಕೊಂಡ. ಪಿಜ್ಜಾ ಅಂಗಡಿಯ ಸಿಬ್ಬಂದಿಯೊಬ್ಬರು ಆತನನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: Viral Video: ಹೋಟೆಲ್ ಕಾರಿಡಾರ್​ನಲ್ಲಿ ಗಾಲ್ಫ್ ಆಡಿದ ಪಂತ್​-ಸೂರ್ಯಕುಮಾರ್​

ಈ ಘಟನೆಯು ಜೂನ್ 8ರಂದು ಶನಿವಾರ ಮಧ್ಯಾಹ್ನ 3.40 ರ ಸುಮಾರಿಗೆ ಸಂಭವಿಸಿದೆ ಎಂದು ವೈರಲ್ ವಿಡಿಯೋದ ಸಮಯ ತೋರಿಸುತ್ತದೆ. ಮಹಿಳೆಯ ಸರ ಸುಮಾರು 20 ಗ್ರಾಂನದ್ದು ಎಂದು ಹೇಳಲಾಗಿದೆ. ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕನಿಗೆ ಟಿಎಂಸಿ ಶಾಸಕನಿಂದ ಕಪಾಳಮೋಕ್ಷ

ಕೋಲ್ಕತ್ತಾದ ರೆಸ್ಟೋರೆಂಟ್ ಮಾಲೀಕರಿಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಶಾಸಕ ಕಪಾಳಮೋಕ್ಷ ಮಾಡುವ ಮೂಲಕ ದಾಂಧಲೆ ಎಬ್ಬಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ನಟ, ಟಿಎಂಸಿ ಶಾಸಕ ಸೋಹಮ್‌ ಚಕ್ರವರ್ತಿ ರೆಸ್ಟೋರೆಂಟ್‌ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಕೋಲ್ಕತ್ತಾ ಡಿಲೈಟ್‌ ಎಂಬ ರೆಸ್ಟೋರೆಂಟ್‌ ಮಾಲೀಕ ಅನಿಸುರ್‌ ಆಲಂ ಮತ್ತು ಶಾಸಕ ಸೋಹಮ್‌ ನಡುವೆ ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಈ ವೇಳೆ ಆಲಂ ಟಿಎಂಸಿ ಪಕ್ಷ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂಬ ಕಾರಣಕ್ಕೆ ಸೋಹಮ್‌ ಆತನಿಗೆ ಕಪಾಳ ಮೋಕ್ಷ ಮಾಡಿ ಥಳಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೋಹಮ್‌, ರೆಸ್ಟೋರೆಂಟ್‌ ಮಾಲೀಕನ ಮೇಲೆ ಹಲ್ಲೆ ನಡೆಸಿರುವುದು ನಿಜ. ಕೆಳಗೆ ಮಾರಾಮಾರಿ ಸದ್ದು ಕೇಳಿ ಧಾವಿಸಿ ಬಂದೆ. ಮಾಲೀಕರು ನನ್ನ ಸಿಬ್ಬಂದಿಯನ್ನು ನಿಂದಿಸುತ್ತಿರುವುದನ್ನು ನಾನು ನೋಡಿದೆ. ಅವರು ನನ್ನನ್ನು ಮತ್ತು ಅಭಿಷೇಕ್ ಬ್ಯಾನರ್ಜಿಯನ್ನು ನಿಂದಿಸಿದ್ದಾರೆ. ನಾನು ನನ್ನ ತಾಳ್ಮೆ ಕಳೆದುಕೊಂಡೆ ಮತ್ತು ಅವನಿಗೆ ಕಪಾಳಮೋಕ್ಷ ಮಾಡಿದ್ದೇನೆ ಎಂದು ಹೇಳಿದರು.

ಇನ್ನು ಸೋಹಮ್‌ ಒಬ್ಬ ಸೋಶಿಯಲ್‌ ಮೀಡಿಯಾ ಇನ್‌ಫ್ಲೂವೆನ್ಶಿಯಲ್‌. ಅವರು ಶೂಟಿಂಗ್‌ಗಾಗಿ ಹೊಟೇಲ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಸೋಹಮ್ ಸೆಕ್ಯುರಿಟಿಯವರು ಕೂಡ ನಮ್ಮನ್ನು ಥಳಿಸಿದ್ದಾರೆ. ನಾವು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೊಟೇಲ್‌ ಮ್ಯಾನೇಜರ್ ಹೇಳಿದ್ದಾರೆ.

Continue Reading

ಧಾರವಾಡ

Dharwad News : ಅಗ್ನಿ ಸ್ಪರ್ಶ ಮಾಡುವಾಗಲೇ ಶವದ ಮೇಲೆ ಹಾರಿ ಕುಳಿತ ಮಂಗ! ಮುಂದೇನಾಯಿತು?

Heart Attack : ಹೃದಯಾಘಾತದಿಂದ ಮೃತಪಟ್ಟಿದ್ದ ಯುವಕನ ಅಂತ್ಯ ಸಂಸ್ಕಾರ ನಡೆಯುತ್ತಿರುವಾಗಲೇ ಮಂಗವೊಂದು ಪ್ರತ್ಯಕ್ಷವಾಗಿತ್ತು. ಇನ್ನೇನು ಅಗ್ನಿ ಸ್ಪರ್ಶ ಮಾಡಬೇಕು ಎಂದಾಗ ಶವದ ಮೇಲೆ ಕುಳಿತುಕೊಂಡು ಅಚ್ಚರಿಯನ್ನು (Dharwad News) ಮೂಡಿಸಿತ್ತು. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್‌ ಆಗುತ್ತಿದೆ.

VISTARANEWS.COM


on

By

Dharwad News The monkey sat on the corpse during the funeral
Koo

ಧಾರವಾಡ: ಯುವಕನೊರ್ವ ಚಿಕ್ಕ ವಯಸ್ಸಿಗೆ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದ. ಆ ಕುಟುಂಬದವರು ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದರು. ಮಗನ ಅಗಲಿಕೆಯ ನೋವಿನಲ್ಲೇ ಬಂಧು-ಬಾಂಧವರು ಅಂತಿಮ ವಿಧಿವಿಧಾನ ಮುಗಿಸಿ, ಇನ್ನೇನು ಯುವಕನ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಬೇಕು ಎಂದಾಗ ಅಚ್ಚರಿಯೊಂದು ಕಾದಿತ್ತು. ಎಲ್ಲಿಂದಲ್ಲೋ ಬಂದ ಮಂಗವೊಂದು ಶವದ ಮೇಲೆ ಕುಳಿತುಕೊಂಡಿತ್ತು. ಧಾರವಾಡ ಜಿಲ್ಲೆಯ (Dharwad News) ನವಲಗುಂದ ಪಟ್ಟಣದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.

ನವಲಗುಂದ ಪಟ್ಟಣದ ಬಸವೇಶ್ವರ ನಗರದ ನಿವಾಸಿ ರವಿ ಮಾಗ್ರೆ (35) ಎಂಬುವವರು ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಶುಕ್ರವಾರ ಮಧ್ಯಾಹ್ನ ಕುಟುಂಬಸ್ಥರು ಅಂತಿಮ ವಿಧಿವಿಧಾನ ಕಾರ್ಯದಲ್ಲಿ ತೊಡಗಿದ್ದರು. ಇದೇ ವೇಳೆ ಪ್ರತ್ಯಕ್ಷವಾದ ಮಂಗವೊಂದು ಅಂತ್ಯಕ್ರಿಯೆ ನಡೆಯುವಾಗ ಶವದ ಮೇಲೆ ಕೂತು ಅಚ್ಚರಿ ಮೂಡಿಸಿತು.

ಇತ್ತ ದುಃಖದಲ್ಲಿದ್ದ ಕುಟುಂಬಸ್ಥರಿಗೆ ಇದು ಯಾವ ತರಹದ ಬಾಂಧವ್ಯ ಎಂದು ಆಶ್ಚರ್ಯಗೊಂಡರು. ಮೃತಪಟ್ಟ ರವಿಗೂ ಈ ಮಂಗಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಅಂತ್ಯಕ್ರಿಯೆಗೆ ಸಮಯ ಮೀರುತ್ತಿದ್ದ ಕಾರಣಕ್ಕೆ ಮಂಗನನ್ನು ಓಡಿಸಲು ಜನರು ಮುಂದಾದರು. ಆದರೂ ಮಂಗ ಮಾತ್ರ ಮೃತದೇಹವನ್ನು ಬಿಟ್ಟು ಕೆಳಗೆ ಇಳಿಯಲೇ ಇಲ್ಲ.

ಎಲ್ಲರಿಗೂ ಮಂಗನ ವರ್ತನೆಯು ಕುತೂಹಲವನ್ನು ಮೂಡಿಸಿತ್ತು. ಮಂಗ ಇಳಿಯದೇ ಇದ್ದಾಗ ಕೊನೆಗೆ ರವಿ ಕುಟುಂಬಸ್ಥರು ಮೃತದೇಹಕ್ಕೆ ಅಗ್ನಿ ಸ್ಪರ್ಶಿಸಿದಾಗ ಕೆಳಗೆ ಇಳಿದಿದೆ. ಮೃತದೇಹಕ್ಕೆ ಬೆಂಕಿ ಹಚ್ಚಿದ ನಂತರವೂ ಅಲ್ಲಿಯೇ ಕುಳಿತು ನೋಡುತ್ತಿತ್ತು. ಮಂಗನ ಈ ಎಲ್ಲ ನಡೆಗಳನ್ನು ಅಲ್ಲಿದ್ದ ಜನರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದರು.

ಇದನ್ನೂ ಓದಿ: Karnataka Rain : ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಹೊರ ಬಂತು ಸವಾರನ ಕರುಳು! ಮತ್ತಿಬ್ಬರು ಗಂಭೀರ

ಅಯ್ಯೋ..ಇದೆಂಥಾ ಹುಚ್ಚಾಟ! ಬಿಜೆಪಿ ಗೆಲ್ಲಲ್ಲಿ ಎಂದು ಬೆರಳನ್ನೇ ಕತ್ತರಿಸಿಕೊಂಡ ಭೂಪ

ಛತ್ತೀಸ್‌ಗಡ: ಚುನಾವಣೆ(Election) ಅಂದ್ರೆನೇ ಹಾಗೆಯೇ ಅದೊಂದು ತರಹ ಯುದ್ಧದ ರೀತಿಯೇ ಭಾಸವಾಗುತ್ತದೆ. ತಮ್ಮ ತಮ್ಮ ನೆಚ್ಚಿನ ಪಕ್ಷಗಳು, ನಾಯಕರ ಗೆಲುವಿಗೆ ನೂರಾರು ಕಾರ್ಯಕರ್ತರು, ಬೆಂಬಲಿಗರು ಹಂಬಲಿಸೋದು ಸಹಜ. ಕೆಲವೊಮ್ಮೆ ಕಾರ್ಯಕರ್ತರ ಪಕ್ಷದ ಬಗೆಗಿನ ಒಲವು ಅತಿರೇಕಕ್ಕೆ ತಿರುಗಿದಾಗ ಅನೇಕ ಅವಘಡಗಳು ಸಂಭವಿಸುತ್ತಿರುತ್ತವೆ. ಅಂತಹದ್ದೇ ಒಂದು ಘಟನೆ(Viral News) ಛತ್ತೀಸ್‌ಗಡದಲ್ಲಿ ನಡೆದಿದ್ದು, ಎನ್‌ಡಿಎ(NDA) ಬಹುಮತದೊಂದಿಗೆ ಗೆಲವು ಸಾಧಿಸಿರುವ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾನೆ.

ಏನಿದು ಘಟನೆ?

ಛತ್ತೀಸ್‌ಗಡದ ಬಾಲರಾಮ್‌ಪುರದಲ್ಲಿ ಈ ಘಟನೆ ನಡೆದಿದ್ದು, ದುರ್ಗೇಶ್‌ ಪಾಂಡೆ ಎಂಬಾತನೇ ಬಿಜೆಪಿ ಬೆಂಬಲಿಗ. ಜೂ.4ರಂದು ಚನಾವಣಾ ಫಲಿತಾಂಶ ಹೊರಬಿದ್ದಾಗ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದಂತೆ ತೀವ್ರ ಬೇಸರಗೊಂಡಿದ್ದನಂತೆ. ಈ ಬಾರಿ ಅಧಿಕಾರ ಎನ್‌ಡಿಎ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕಕ್ಕೆ ಬಿದ್ದ ದುರ್ಗೇಶ್‌, ಕಾಳಿ ಮಂದಿರಕ್ಕೆ ತೆರಳಿ ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾನೆ. ಅಲ್ಲದೇ ತನ್ನ ಒಂದು ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ.

ಇನ್ನು ಬೆರಳು ಕತ್ತರಿಸಿಕೊಂಡ ದುರ್ಗೇಶ್‌ ಪಾಂಡೆ, ಬಟ್ಟೆಯನ್ನು ಕಟ್ಟಿ ಸುರಿಯುತ್ತಿದ್ದ ರಕ್ತವನ್ನು ತಡೆಯಲು ಯತ್ನಿಸಿದ್ದಾನೆ. ಆದರೆ ರಕ್ತ ಮಾತ್ರ ನಿಲ್ಲಲೇ ಇಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಆತನ ಕುಟುಂಬಸ್ಥರು ಆತನನ್ನು ತಕ್ಷಣ ಸಮಾರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಆತನನ್ನು ಅಂಬಿಕಾಪುರದ ಮೆಡಿಕಲ್‌ ಕಾಲೇಜಿಗೆ ರವಾನಿಸಲಾಗಿತ್ತು. ಬಹಳ ಹೊತ್ತಾದ ಕಾರಣ ನಜ್ಜುಗುಜ್ಜಾಗಿದ್ದ ಆತನ ಬೆರಳನ್ನು ಮತ್ತೆಜೋಡಿಸಲು ಸಾಧ್ಯವಾಗಿಲ್ಲ. ಅದ್ಯ ಚಿಕಿತ್ಸೆ ಮುಂದುವರೆದಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ದುರ್ಗೇಶ್‌ ಪಾಂಡೆ, ಆರಂಭಿಕ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವುದನ್ನು ಕಂಡು ನಾನು ವಿಚಲಿತನಾದೆ. ಮತ್ತೊಂದೆಡೆ ಕಾಂಗ್ರೆಸ್ ಬೆಂಬಲಿಗರು ಕೂಡ ಉತ್ಸಾಹದಲ್ಲಿದ್ದರು. ಇಡೀ ಗ್ರಾಮವು ನಂಬಿರುವ ಕಾಳಿ ದೇವಸ್ಥಾನಕ್ಕೆ ನಾನು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಿಜೆಪಿ ಗೆಲುವಿಗೆ ಬೆರಳು ಕೊಡುವುದಾಗಿ ಪ್ರತಿಜ್ಞೆ ಮಾಡಿದ್ದೆ. ಅಂದು ಸಂಜೆ ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ, ನಾನು ದೇವಸ್ಥಾನಕ್ಕೆ ಹೋಗಿ, ನನ್ನ ಬೆರಳು ಕತ್ತರಿಸಿ ಅದನ್ನು ಅರ್ಪಿಸಿದೆ, ಬಿಜೆಪಿ ಈಗ ಸರ್ಕಾರ ರಚಿಸುತ್ತದೆ, ಆದರೆ ಅವರು (ಎನ್‌ಡಿಎ) 400 ರ ಗಡಿ ದಾಟಿದರೆ ನನಗೆ ಹೆಚ್ಚು ಸಂತೋಷವಾಗುತ್ತಿತ್ತು ಎಂದಿದ್ದಾನೆ.

ಕೆಲವು ದಿನಗಳ ಹಿಂದೆ ಆಪ್‌ ನಾಯಕ, ನವದೆಹಲಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸೋಮನಾಥ್‌ ಭಾರ್ತಿ, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ” ಎಂದಿದ್ದರು. ಜೂನ್‌ 4ರಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ತಪ್ಪು ಎಂಬುದು ಸಾಬೀತಾಗಲಿದೆ. ಖಂಡಿತವಾಗಿಯೂ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ದೆಹಲಿಯ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲೂ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇನ್ನು, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ, ನಾನು ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ” ಎಂಬುದಾಗಿ ಮತಗಟ್ಟೆ ಸಮೀಕ್ಷೆಗಳ ವರದಿಗಳ ಬಳಿಕ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Assault case : ಮೊದಲನೇ ಹೆಂಡ್ತಿ ಮಕ್ಕಳೊಂದಿಗೆ ಬಂದು 2ನೇ ಹೆಂಡ್ತಿಗೆ ರಕ್ತ ಬರುವಂತೆ ಬಾರಿಸಿದ ಭೂಪ

Assault case : ಮೊದಲನೇ ಹೆಂಡತಿ ಹಾಗೂ ಮಕ್ಕಳೊಂದಿಗೆ ಸೇರಿ ಪತಿರಾಯನೊಬ್ಬ ಎರಡನೇ ಹೆಂಡತಿಗೆ ರಕ್ತ ಬರುವಂತೆ ಬಾರಿಸಿದ್ದಾರೆ. ಮಾರಣಾಂತಿಕ ಹಲ್ಲೆಯಿಂದಾಗಿ ಮಹಿಳೆ ಆಸ್ಪತ್ರೆ ಪಾಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

VISTARANEWS.COM


on

By

assault Case in Bengaluru
Koo

ಬೆಂಗಳೂರು: ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತಮ್ಮ ಸ್ವಂತ ಪತಿಯಿಂದಲೇ ಮಾರಣಾಂತಿಕ ಹಲ್ಲೆಗೆ (Assault case) ಒಳಗಾಗಿದ್ದಾರೆ. ಸರಸ್ವತಿ (40) ಹಲ್ಲೆಗೊಳಗಾದವರು.

ಸರಸ್ವತಿ ಅವರು 20 ವರ್ಷದ ಹಿಂದೆ ಸುರೇಶ್ ಎಂಬಾತನನ್ನು ಎರಡನೇ ಮದುವೆಯಾಗಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳು ಇದ್ದಾರೆ. ಸರಸ್ವತಿ ಅವರು ಪತಿ ಸುರೇಶ್ ಹಾಗೂ ಆತನ ಮೊದಲನೇ ಪತ್ನಿ ಲಕ್ಷ್ಮಿ ಕಾಟಕ್ಕೆ ಬೇಸತ್ತಿದ್ದರು. ಹೀಗಾಗಿ ಒಂದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿ, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಗಾಗ ಮನೆ ಬಳಿ ಈ ದಂಪತಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.

ಜೂನ್‌ 7ರ ತಡರಾತ್ರಿ ಸರಸ್ವತಿ ಮನೆ ಬಳಿ ಬಂದ ಸುರೇಶ್ ಹಾಗೂ ಮೊದಲನೇ ಹೆಂಡತಿ ಮಕ್ಕಳು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮನೆ ಮುಂದೆ ಕೂಗಾಡುತ್ತಿದ್ದನ್ನು ಸರಸ್ವತಿ ಹಾಗೂ ಅವರ ಮಕ್ಕಳು ಪ್ರಶ್ನಸಿದ್ದಕ್ಕೆ ರಾಡ್‌ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ.

ಈ ಹಲ್ಲೆಯಿಂದ ಸರಸ್ವತಿ ಅವರ ಮೂಗು ಮುರಿದಿದ್ದು, ಕುಸಿದು ಬಿದ್ದಿದ್ದಾರೆ. ಕೂಡಲೇ ಮಕ್ಕಳಿಬ್ಬರು ಸರಸ್ವತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪತಿ ಸುರೇಶ್‌ ಹಾಗೂ ಆತನ ಮೊದಲನೇ ಹೆಂಡತಿ ವಿರುದ್ಧ ಸರಸ್ವತಿ ಮತ್ತು ಅವರ ಮಕ್ಕಳು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Shivamogga Accident : ತಿರುವಿನಲ್ಲಿ ಖಾಸಗಿ ಬಸ್‌ ಪಲ್ಟಿ; ಉರುಳಿ ಬಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ

ಶವವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಬಿಸಾಡಿದ ಹಂತಕ!

ಬೆಂಗಳೂರು: ರಾಜಧಾನಿ ಬೆಂಗಳೂರಿ‌ನಲ್ಲಿ (Bengaluru News) ಭಯಂಕರ ಕೊಲೆ (Bengaluru Murder) ಪ್ರಕರಣವನ್ನು ಸಂಪಿಗೇಹಳ್ಳಿ ಪೊಲೀಸರು ಬಯಲು ಮಾಡಿದ್ದಾರೆ. ಮನೆಗೆ ಬಂದಿದ್ದ ವ್ಯಕ್ತಿಗೆ ಜಾಕ್‌ ರಾಡ್‌ನಿಂದ ಹೊಡೆದು ಕೊಂದು, ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದಿದ್ದಾನೆ. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Murder case) ಈ ಕೃತ್ಯ ನಡೆದಿದೆ. ಕೆ.ವಿ.ಶ್ರೀನಾಥ್ (34) ಕೊಲೆಯಾದವನು. ಮಾಧವ ರಾವ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.

ಥಣಿಸಂದ್ರದ ಅಂಜನಾದ್ರಿ ಲೇಔಟ್ ನಿವಾಸಿಯಾದ ಕೆ.ವಿ. ಶ್ರೀನಾಥ್‌ ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚಿಟ್‌ ಫಂಡ್‌ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ. ಹೀಗಿರುವಾಗ ಕಳೆದ ಮೇ.28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್‌ ವಾಪಸ್ ಆಗಿರಲಿಲ್ಲ. ಇದರಿಂದ ಹೆದರಿದ ಶ್ರೀನಾಥ್‌ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ್ದರು.

ದೂರು ದಾಖಲಿಸಿಕೊಂಡು ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಆರೋಪಿ ಮಾಧವರಾವ್ ಮನೆಗೆ ಹೋಗಿದ್ದು ಗೊತ್ತಾಗಿತ್ತು. ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಮಾಧವರಾವ್ ಮನೆಗೆ ಶ್ರೀನಾಥ್‌ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಒಳಗೆ ಹೋದವನು ಹೊರಗೆ ಬಂದಿರಲಿಲ್ಲ. ಜತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ವು. ಇದರಿಂದ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ.

ಬಳಿಕ ಆತನ ಮೊಬೈಲ್‌ ಲೋಕೇಶನ್‌ ಪತ್ತೆ ಮಾಡಿದ ಪೊಲೀಸರಿಗೆ ಆರೋಪಿ ಆಂಧ್ರಪ್ರದೇಶದಲ್ಲಿಇದ್ದಾನೆ ಎಂದು ಗೊತ್ತಾಗಿತ್ತು. ನಂತರ ಮಾಧವರಾವ್‌ನನ್ನು ಕರೆತಂದು ಪೊಲೀಸರು ವಿಚಾರಣೆಯನ್ನು ನಡೆಸಿದಾಗ ಅಸಲಿ ಕಥೆಯನ್ನು ತೆರೆದಿಟ್ಟಿದ್ದ.

Bengaluru  Murder
ತುಂಡು ತುಂಡಾಗಿ ಕತ್ತರಿಸಿದ ದೇಹಕ್ಕಾಗಿ ಹುಡುಕಾಟ

ಇದನ್ನೂ ಓದಿ: Self Harming : ಮಗಳ ನಗ್ನ ಫೋಟೊ ತೋರಿಸಿ ಪ್ರಿಯಕರ ಬ್ಲ್ಯಾಕ್‌ಮೇಲ್‌; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಕುಟುಂಬಸ್ಥರು

ಅಕ್ರಮ ಸಂಬಂಧದ ಶಂಕೆ

ಮಾಧವರಾವ್ ಮತ್ತು ಕೆ.ವಿ.ಶ್ರೀನಾಥ್‌ ಇಬ್ಬರು ಎರಡು ವರ್ಷದಿಂದ ಪರಿಚಯಸ್ಥರಾಗಿದ್ದರು. ಕೆ.ವಿ.ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂ. ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಶ್ರೀನಾಥ್‌ ಒತ್ತಾಯ ಮಾಡುತ್ತಿದ್ದ. ಅಷ್ಟಲ್ಲದೇ ಮಾಧವರಾವ್‌ ಪತ್ನಿ ಜತೆ ಶ್ರೀನಾಥ್‌ ಅಕ್ರಮ ಸಂಬಂಧವನ್ನು ಹೊಂದಿದ್ದನಂತೆ.

ಹೀಗಿರುವಾಗ ಮೇ 28ರಂದು ಬೆಳಗ್ಗೆ ಮಾಧವರಾವ್ ಮನೆಗೆ ಶ್ರೀನಾಥ್‌ ಬಂದಿದ್ದ. ಈ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಲ್ಲಿ ಮಾಧವರಾವ್ ಮನೆಯಲ್ಲಿದ್ದ ಜಾಕ್ ರಾಡ್‌ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದ. ಕುಸಿದು ಬಿದ್ದ ಶ್ರೀನಾಥ್‌ನ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದ.

ಬಳಿಕ ಸಾಕ್ಷಿ ನಾಶ ಮಾಡಲು ಶ್ರೀನಾಥ್‌ನ ಮೃತದೇಹವನ್ನು ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ. ಮೊದಲಿಗೆ ಒಂದು ಬ್ಯಾಗ್ ನಂತರ ಎರಡು ಬ್ಯಾಗ್‌ಗಳಲ್ಲಿ ಮೃತದೇಹದ ತುಂಡುಗಳನ್ನು ತುಂಬಿಕೊಂಡು ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಹಾಕಿದ್ದ. ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಆಂಧ್ರಪ್ರದೇಶಕ್ಕೆ ಎಸ್ಕೇಪ್ ಆಗಿದ್ದ.

ಸದ್ಯ ಕೊಲೆ ಪ್ರಕರಣವನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ರಾಮಮೂರ್ತಿನಗರ ಪೊಲೀಸರು ಕೊಲೆ (302) ಮತ್ತು ಸಾಕ್ಷಿ ನಾಶ(201)ರಡಿ ಕೇಸ್ ದಾಖಲು ಮಾಡಿಕೊಂಡು, ಶ್ರೀನಾಥ್‌ ಮೃತದೇಹದ ತುಂಡುಗಳಿಗೆ ಕಳೆದ ಮೂರು ದಿನದಿಂದ ಹುಡುಕಾಡುತ್ತಿದ್ದಾರೆ. ಸದ್ಯಕ್ಕೆ ಮೋರಿಯಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದ್ದು, ಮಂಗಳೂರಿನಿಂದ ನುರಿತರನ್ನು ಕರೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Fake CBI Gang
ಕ್ರೈಂ1 min ago

Fake CBI Gang: ನಿವೃತ್ತ ಅಧಿಕಾರಿಯ 85 ಲಕ್ಷ ರೂ. ಎಗರಿಸಿದ ನಕಲಿ ಸಿಬಿಐ ಗ್ಯಾಂಗ್!

Kannada New Movie Chilli Chicken Official Trailer
ಸ್ಯಾಂಡಲ್ ವುಡ್15 mins ago

Kannada New Movie: ‘ಚಿಲ್ಲಿ ಚಿಕನ್​’ ಟ್ರೈಲರ್‌ ಔಟ್‌; ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ!

IND vk PAK
ಕ್ರಿಕೆಟ್15 mins ago

IND vs PAK : ​ ವಿರಾಟ್​ ಕೊಹ್ಲಿಯ ಚಪ್ಪಲಿಗೂ ಸಮವಲ್ಲ ಬಾಬರ್ ಅಜಂ; ಪಾಕಿಸ್ತಾನದ ಮಾಜಿ ಆಟಗಾರನ ಟೀಕೆ

Champions Trophy 2025
ಕ್ರೀಡೆ19 mins ago

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಮುಹೂರ್ತ ಫಿಕ್ಸ್​; ಪಾಕ್​ಗೆ ತೆರಳಲಿದೆಯೇ ಭಾರತ?

Killer Python
ಕ್ರೈಂ21 mins ago

Killer Python: ಮಹಿಳೆಯನ್ನು ಜೀವಂತವಾಗಿ ನುಂಗಿದ ಹೆಬ್ಬಾವು! ಹೊಟ್ಟೆ ಸೀಳಿ ಹೊರ ತೆಗೆದರು!

Dupatta Selection Tips
ಫ್ಯಾಷನ್26 mins ago

Dupatta Selection Tips: ಪರ್ಫೆಕ್ಟ್ ದುಪಟ್ಟಾ ಸೆಲೆಕ್ಷನ್‌ಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

Viral Video
ಕ್ರೈಂ27 mins ago

Viral Video: ಹೋಟೆಲ್‌ನೊಳಗೆ ಪಿಜ್ಜಾ ತಿನ್ನುತ್ತಿರುವಾಗಲೇ ಮಹಿಳೆಯ ಸರ ಅಪಹರಣ!

Dharwad News The monkey sat on the corpse during the funeral
ಧಾರವಾಡ27 mins ago

Dharwad News : ಅಗ್ನಿ ಸ್ಪರ್ಶ ಮಾಡುವಾಗಲೇ ಶವದ ಮೇಲೆ ಹಾರಿ ಕುಳಿತ ಮಂಗ! ಮುಂದೇನಾಯಿತು?

Kalki 2898 AD Deepika Padukone looks poster
South Cinema36 mins ago

Kalki 2898 AD: ʼಕಲ್ಕಿ 2898 ಎಡಿʼ ಚಿತ್ರದಿಂದ ಹೊಸ ಪೋಸ್ಟರ್‌ ಔಟ್; ಗಾಬರಿ ಲುಕ್‌ನಲ್ಲಿ ದೀಪಿಕಾ!

VK Pandian
ದೇಶ1 hour ago

VK Pandian: ಉತ್ತರಾಧಿಕಾರಿ ವದಂತಿ ಬೆನ್ನಲ್ಲೇ ವಿ.ಕೆ.ಪಾಂಡಿಯನ್‌ ರಾಜಕೀಯ ನಿವೃತ್ತಿ; ಬಿಜೆಡಿ ಸೋಲಿಗೆ ಹೊಣೆ ಹೊತ್ತು ವಿದಾಯ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌