Viral Video | ಒದ್ದು, ಬಾಲ ಹಿಡಿದು ಎಳೆದ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡಿದ ಹಸು; ಗೋಮಾತೆ ಕ್ರೋಧ ನೋಡಿ ಜನ ಫುಲ್​ ಖುಷ್​ - Vistara News

ವೈರಲ್ ನ್ಯೂಸ್

Viral Video | ಒದ್ದು, ಬಾಲ ಹಿಡಿದು ಎಳೆದ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡಿದ ಹಸು; ಗೋಮಾತೆ ಕ್ರೋಧ ನೋಡಿ ಜನ ಫುಲ್​ ಖುಷ್​

ಹೇಳಿಕೇಳಿ ಹಸು ಶಾಂತ ಸ್ವಭಾವದ ಪ್ರಾಣಿ. ಆದರೆ ಈ ಗೋವು ವಿಪರೀತ ಕೆರಳಿದ್ದನ್ನು ವಿಡಿಯೋದಲ್ಲಿ ನೋಡಬಹುದು. ನೆಟ್ಟಿಗರಂತೂ ಸಿಕ್ಕಾಪಟೆ ಖುಷಿಯಲ್ಲಿ ಕಮೆಂಟ್ ಮಾಡಿದ್ದಾರೆ.

VISTARANEWS.COM


on

Cow Mercilessly Attacked on Man Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗೋವು ಅಷ್ಟು ಬೇಗ ಕೆರಳುವುದಿಲ್ಲ. ಮನುಷ್ಯರ ಮೇಲೆ ಗೂಳಿ ದಾಳಿ ಮಾಡುವುದು ಸಾಮಾನ್ಯ ಆದರೆ ಹಸು ದಾಳಿ ಅದರಲ್ಲೂ ವ್ಯಘ್ಯವಾಗಿ ದಾಳಿ ಮಾಡುವುದು ತೀರ ಅಪರೂಪ. ಆದರೆ ಇಲ್ಲೊಂದು ಹಸು, ತನಗೆ ತೊಂದರೆ ಕೊಟ್ಟವನ ನೀರಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿದ ಜನ, ‘ಆ ವ್ಯಕ್ತಿಗೆ ತಕ್ಕ ಶಾಸ್ತಿ’ ಆಯಿತು ಎಂದಿದ್ದಾರೆ.

ಅಲ್ಲೊಂದು ದೊಡ್ಡದಾದ ಕಲ್ಲಿನ ಗೋಡೆ ಬಳಿ ಹಸುವೊಂದು ನಿಂತಿದೆ. ಆ ಹಸುವಿನ ನಾಲ್ಕೂ ಕಾಲುಗಳಿಗೆ ಹಗ್ಗ ಕಟ್ಟಿ, ಅದನ್ನು ಒಬ್ಬ ವ್ಯಕ್ತಿ ಹಿಡಿದುಕೊಂಡಿದ್ದಾನೆ. ಆತ ದಾರ್ಷ್ಟ್ಯದಿಂದ ತನ್ನ ಚಪ್ಪಲಿ ಇರುವ ಕಾಲಿನಿಂದ ಹಸುವಿನ ಹೊಟ್ಟೆಗೆ ಒದ್ದು, ಅದರ ಬಾಲವನ್ನು ಸುರುಳಿ ಸುತ್ತಿ ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ಆ ಹಸು ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತದೆ. ಕೂಡಲೇ ತಿರುಗಿ ಅವನ ಮೇಲೆ ದಾಳಿ ಮಾಡುತ್ತದೆ. ಆ ವ್ಯಕ್ತಿಯನ್ನು ನೆಲಕ್ಕೆ ಕೆಡವಿ, ಅವನಿಗೆ ತನ್ನ ಕೊಂಬಿನಲ್ಲಿ ಹಾಯ್ದಿದ್ದಲ್ಲದೆ ನೆಲಕ್ಕೆ ಬಿದ್ದ ಅವನನ್ನು ಸರಿಯಾಗಿ ತುಳಿದುಹಾಕಿದೆ. @gharkekalesh ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್​ ಆದ ವಿಡಿಯೊ 74,000 ವೀವ್ಸ್​ ಪಡೆದುಕೊಂಡಿದ್ದರೆ, 3400ಕ್ಕೂ ಹೆಚ್ಚು ಜನ ಲೈಕ್ಸ್​ ಮಾಡಿದ್ದಾರೆ.

ಹಸು ಪ್ರಾರಂಭದಲ್ಲಿ ಶಾಂತವಾಗಿಯೇ ಇತ್ತು. ಯಾವಾಗ ಆ ವ್ಯಕ್ತಿ ಅದರ ಬಾಲವನ್ನು ಗಟ್ಟಿಯಾಗಿ ಹಿಡಿದು, ಸುರುಳಿ ಸುತ್ತಿದನೋ, ಆಗ ಅದು ಕ್ರೋಧಗೊಂಡಿದೆ. ನೆಟ್ಟಿಗರಂತೂ ಸಖತ್​ ಖುಷಿಪಟ್ಟಿದ್ದಾರೆ. ಅವನ ಯೋಗ್ಯತೆಗೆ ತಕ್ಕ ಪಾಠ ಕಲಿತ. ಹಸು ಮಾಡಿದ ಕೆಲಸದಿಂದ ನಮಗೆ ಸಂತೋಷವಾಯಿತು, ತೃಪ್ತಿಯಾಯಿತು ಎಂದೇ ಅನೇಕರು ಕಮೆಂಟ್ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Andre Russell Dance: ಬಾಲಿವುಡ್ ನಟಿ ಅನನ್ಯಾ ಪಾಂಡೆ ಜತೆ ‘ಲುಟ್ ಪಟ್ ಗಯಾ’ ಹಾಡಿಗೆ ಡ್ಯಾನ್ಸ್​ ಮಾಡಿದ ಆ್ಯಂಡ್ರೆ ರಸೆಲ್​

Andre Russell Dance: ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ(Shah Rukh Khan) ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

VISTARANEWS.COM


on

Andre Russell Dance:
Koo

ಮುಂಬಯಿ: ಭಾನುವಾರ(ಮೇ 26) ನಡೆದಿದ್ದ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಗೆಲುವಿನ ಬಳಿಕ ಕೆಕೆಆರ್​ ತಂಡ ಪಬ್​ನಲ್ಲಿ ಪಾರ್ಟಿ ಮಾಡಿತ್ತು. ಇದೇ ವೇಳೆ ಆ್ಯಂಡ್ರೆ ರಸೆಲ್(Andre Russell Dance)​ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ(Ananya Pandey) ಜತೆ ಶಾರೂಖ್ ಖಾನ್ ಅಭಿನಯದ ಡಂಕಿ ಚಿತ್ರದ​ ‘ಲುಟ್ ಪಟ್ ಗಯಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ(Shah Rukh Khan) ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ವೆಸ್ಟ್​ ಇಂಡೀಸ್​ ತಂಡ ಸ್ಫೋಟಕ ಬ್ಯಾಟರ್​ ರಸೆಲ್(Andre Russell) ಬಾಲಿವುಡ್​ ನಟಿ ಅವಿಕಾ ಗೋರ್(Avika Gor) ಜತೆ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ವಿಡಿಯೊ ಕೂಡ ಕೆಲವು ದಿನಗಳ ಹಿಂದೆ ವೈರಲ್​ ಆಗಿತ್ತು. ​’ಲಡ್ಕಿ ತು ಕಮಲ್ ಕಿ’ ಎನ್ನುವ ಹಾಡಿಗೆ ರೆಸೆಲ್ ಅವಿಕಾ ಸೇರಿ ಹೆಜ್ಜೆ ಹಾಕಿರುವ ಈ ಹಾಡು ಯೂಟ್ಯೂಬ್​ನಲ್ಲಿ ಮೇ 9 ರಂದು ಬಿಡುಗಡೆಯಾಗಿತ್ತು.

ಈ ಹಾಡಿನಲ್ಲಿ ರಸೆಲ್​ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚುವ ಜತೆಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಅವಿಕಾ ಗೋರ್ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸುತ್ತಾರೆ.

ಇದನ್ನೂ ಓದಿ IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

ಮೂರನೇ ಟ್ರೋಫಿ ಗೆದ್ದ ಕೆಕೆಆರ್​


ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಅತ್ಯಂತ ನೀರಸ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ತಂಡ 18.3 ಓವರ್​ಗಳಲ್ಲಿ 113 ರನ್​ಗೆ ಸರ್ವಪತನ ಕಂಡಿತು. ಈ ಅಲ್ಪ ಮೊತ್ತವನ್ನು ಚೇಸಿಂಗ್​ ನಡೆಸಿದ ಕೆಕೆಆರ್​ ಕೇವಲ 10.3 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 114 ರನ್​ ಬಾರಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಇದು ಕೆಕೆಆರ್​ಗೆ ಒಲಿದ ಮೂರನೇ ಐಪಿಎಲ್​ ಟ್ರೋಫಿ.

Continue Reading

ಕ್ರೀಡೆ

Rishabh Pant Video Calls: ನ್ಯೂಯಾರ್ಕ್​ನಿಂದ ವಿಡಿಯೊ ಕಾಲ್​ ಮಾಡಿ ರಿಂಕು ಸಿಂಗ್​ಗೆ ಅಭಿನಂದಿಸಿದ ಪಂತ್​

Rishabh Pant Video Calls: ರಿಂಕು ಸಿಂಗ್(Rinku Singh)​ ಅವರಿಗೆ ರಿಷಭ್​ ಪಂತ್(Rishabh Pant)​ ನ್ಯೂಯಾರ್ಕ್​ನಿಂದ ವಿಡಿಯೊ ಕಾಲ್(Rishabh Pant Video Calls)​ ಮಾಡಿ ಅಭಿನಂದಿಸಿದ್ದಾರೆ. ಇದೇ ವೇಳೆ ರಿಂಕು ತಾನು ಮೇ 28ರಂದು ನ್ಯೂಯಾರ್ಕ್​ಗೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

VISTARANEWS.COM


on

Rishabh Pant Video Calls
Koo

ಚೆನ್ನೈ: ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯನ್ನಾಡಲು ಟೀಮ್​ ಇಂಡಿಯಾದ ಮೊದಲ ಬ್ಯಾಚ್​ ಈಗಾಗಲೇ ನ್ಯೂಯಾರ್ಕ್​ ತಲುಪಿದೆ. ಆಟಗಾರರು ನ್ಯೂಯಾರ್ಕ್​ಗೆ ತಲುಪಿದ ವಿಚಾರವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ದ್ವಿತೀಯ ಬ್ಯಾಚ್​ ಇಂದು(28) ಪ್ರಯಾಣ ಬೆಳೆಸಲಿದೆ. ಮೇ 26ರಂದು ನಡೆದಿದ್ದ ಐಪಿಎಲ್​ ಫೈನಲ್​ನಲ್ಲಿ ಕೆಕೆಆರ್​ ತಂಡ ಹೈದರಾಬಾದ್​ ತಂಡವನ್ನು ಮಣಿಸಿ ಕಪ್​ ಗೆದ್ದಿತ್ತು. ಈ ಗೆಲುವಿನ ಬಳಿಕ ರಿಂಕು ಸಿಂಗ್(Rinku Singh)​ ಅವರಿಗೆ ರಿಷಭ್​ ಪಂತ್(Rishabh Pant)​ ನ್ಯೂಯಾರ್ಕ್​ನಿಂದ ವಿಡಿಯೊ ಕಾಲ್(Rishabh Pant Video Calls)​ ಮಾಡಿ ಅಭಿನಂದಿಸಿದ್ದಾರೆ. ಇದೇ ವೇಳೆ ರಿಂಕು ತಾನು ಮೇ 28ರಂದು ನ್ಯೂಯಾರ್ಕ್​ಗೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ವಿಡಿಯೊ ಕಾಲ್​ ಮೂಲಕ ರಿಂಕು ಸಿಂಗ್​ ಮಾತ್ರವಲ್ಲದೆ ನಿತೇಶ್​ ರಾಣಾ ಕೂಡ ಪಂತ್​ ಜತೆ ಮಾತನಾಡಿದ್ದಾರೆ. ರಿಂಕು ಅವರು ಟಿ20ಯಲ್ಲಿ ಮೀಸಲು ಆಟಗಾರನಾಗಿ ಅವಕಾಶ ಪಡೆದಿದ್ದಾರೆ. ಭಾರತ ಜೂನ್​ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ತಂಡದ ನಾಯಕ ರೋಹಿತ್​, ಶರ್ಮ, ಕೋಚ್ ರಾಹುಲ್​ ದ್ರಾವಿಡ್​, ರವೀಂದ್ರ ಜಡೇಜಾ, ಕುಲ್​ದೀಪ್​ ಯಾದವ್​, ಮೊಹಮ್ಮದ್ ಸಿರಾಜ್​ ಸೇರಿ ಹಲವು ಆಟಗಾರರು ಮತ್ತು ಕೋಚಿಂಗ್​ ಸಿಬ್ಬಂದಿಗಳು ಶನಿವಾರದಂದು  ಮುಂಬೈ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದರು.

ಇದನ್ನೂ ಓದಿ IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

ವಿರಾಟ್​ ಕೊಹ್ಲಿ ಅವರು ಮೇ 30ಕ್ಕೆ ಏಕಾಂಗಿಯಾಗಿ ನ್ಯೂಯಾರ್ಕ್​ಗೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ, ಜತೆಗೆ ಜೂನ್​ 1ರಂದು ನಡೆಯುವ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಕೊಹ್ಲಿ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. “ಕೊಹ್ಲಿ ಅವರು ತಡವಾಗಿ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಮಗೆ ಮೊದಲೇ ತಿಳಿಸಿದ್ದರು. ಇದೇ ಕಾರಣಕ್ಕೆ ಬಿಸಿಸಿಐ ಅವರ ವೀಸಾವನ್ನು ಕಾಯ್ದಿರಿಸಿದೆ. ಅವರು ಮೇ 30 ರ ಮುಂಜಾನೆ ನ್ಯೂಯಾರ್ಕ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಅವರ ಮನವಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕೊಹ್ಲಿ ಅಲ್ಲದೆ, ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಡವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ದುಬೈನಲ್ಲಿ ವೈಯಕ್ತಿಕ ಕೆಲಸದ ನಿಮಿತ್ತ ತಂಡ ಸೇರಲು ತಡವಾಗಲಿದೆ ಎಂದು ಸಂಜು ಈಗಾಗಲೇ ಬಿಸಿಸಿಐಗೆ ತಿಳಿಸಿರುವ ಕಾರಣ ಬಿಸಿಸಿಐ ಸ್ಯಾಮ್ಸನ್​ಗೆ ತಡವಾಗಿ ತಂಡ ಸೇರಲು ಅವಕಾಶ ನೀಡಿದೆ.

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ವೈರಲ್ ನ್ಯೂಸ್

Viral Video: ನಡು ರಸ್ತೆಯಲ್ಲಿ ಪಿಸ್ತೂಲ್‌ ತೋರಿಸಿ ವ್ಯಕ್ತಿ ಮೇಲೆ ಹಲ್ಲೆ; ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ನಿಂದ ದಾಂಧಲೆ

Viral Video:ಲಕ್ನೋದಲ್ಲಿರುವ ವೆಬ್‌ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಿಸ್ತೂಲ್‌ ಶೂಟರ್‌ ವಿನೋದ್‌ ಮಿಶ್ರಾ ರಂಜೀತ್‌ ಎಂಬ ಕಾರು ಚಾಲಕನ ಶರ್ಟ್‌ನ ಕಾಲರ್‌ ಹಿಡಿದು ಎಳೆದಾಡಿದ್ದಾನೆ. ಅಷ್ಟೇ ಅಲ್ಲದೇ ಪಿಸ್ತೂಲ್‌ನಲ್ಲಿ ಆತನ ಹೊಟ್ಟೆ, ತಲೆಗೆ ಹಲ್ಲೆ ಮಾಡಿದ್ದಾನೆ. ರಂಜೀತ್‌ನನ್ನು ಕಾರಿನತ್ತ ತಳ್ಳಿದ ಮಿಶ್ರಾ ಪಿಸ್ತೂಲ್‌ ಹಿಂಬಾಗದಿಂದ ಆತನ ಭುಜ, ತಲೆ, ಹೊಟ್ಟೆಗೆ ಹೊಡೆಯುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಲಕ್ನೋ: ಉತ್ತರಪ್ರದೇಶ(Uttar Pradesh)ದಲ್ಲಿ ಯೋಗಿ ಆದಿತ್ಯಾನಾಥ್‌(Yogi Adityanath) ನೇತೃತ್ವದ ಸರ್ಕಾರ ಬಂದ ಮೇಲೆ ಪುಡಿರೌಡಿಗಳ ಅಟ್ಟಹಾಸಕ್ಕೆ ಬ್ರೇಕ್‌ ಬಿದ್ದಿರೋದಂತೂ ನಿಜ. ಬುಲ್ಡೋಜರ್‌ ಬಾಬಾನ ಭಯದಿಂದ ಮನೆಯಿಂದ ಹೊರ ಬರೋದಿಕ್ಕೂ ಹೆದರುತ್ತಾರೆ ಅನ್ನೋ ಮಾತಿದೆ. ಅಷ್ಟಾಗಿಯೂ ಅಲ್ಲೊಂದು ಇಲ್ಲೊಂದು ಅನ್ನೋ ಹಾಗೆ ರೌಡಿಗಳು ಬಾಲ ಬಿಚ್ಚುತ್ತಲೇ ಇರುತ್ತಾರೆ. ಅಂತಹದ್ದೇ ಒಂದು ಘಟನೆ ಇದೀಗ ವರದಿ ಆಗಿದೆ. ಅಂತಾರಾಷ್ಟ್ರೀಯ ಮಟ್ಟದ ಪಿಸ್ತೂಲ್‌ ಶೂಟರ್‌ ಒಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಪಿಸ್ತೂಲ್‌ ಹಿಡಿದು ಮತ್ತೋರ್ವನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ವೈರಲ್‌(Viral Video) ಆಗಿದೆ.

ಲಕ್ನೋದಲ್ಲಿರುವ ವೆಬ್‌ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಿಸ್ತೂಲ್‌ ಶೂಟರ್‌ ವಿನೋದ್‌ ಮಿಶ್ರಾ ರಂಜೀತ್‌ ಎಂಬ ಕಾರು ಚಾಲಕನ ಶರ್ಟ್‌ನ ಕಾಲರ್‌ ಹಿಡಿದು ಎಳೆದಾಡಿದ್ದಾನೆ. ಅಷ್ಟೇ ಅಲ್ಲದೇ ಪಿಸ್ತೂಲ್‌ನಲ್ಲಿ ಆತನ ಹೊಟ್ಟೆ, ತಲೆಗೆ ಹಲ್ಲೆ ಮಾಡಿದ್ದಾನೆ. ರಂಜೀತ್‌ನನ್ನು ಕಾರಿನತ್ತ ತಳ್ಳಿದ ಮಿಶ್ರಾ ಪಿಸ್ತೂಲ್‌ ಹಿಂಬಾಗದಿಂದ ಆತನ ಭುಜ, ತಲೆ, ಹೊಟ್ಟೆಗೆ ಹೊಡೆಯುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಪೊಲೀಸರು ಹೇಳೋದೇನು?

ಘಟನೆ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಕುಮಾವತ್‌ ಪ್ರತಿಕ್ರಿಯಿಸಿದ್ದು,ರಂಜೀತ್‌ ತನ್ನ ವ್ಯಾಗನರ್‌ ಕಾರಿನಲ್ಲಿ ಭೂತ್‌ನಾಥ್‌ಗೆ ತೆರಳುತ್ತಿದ್ದರು. ಮಿಶ್ರಾ ಅಲ್ಲಿಂದ ತಮ್ಮ ಟಾಟಾ ಸಫಾರಿ ಕಾರಿನಲ್ಲಿ ವಾಪಾಸಾಗುತ್ತಿದ್ದರು. ಈ ವೇಳೆ ಎರಡೂ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮಿಶ್ರಾ ತನ್ನ ಪಿಸ್ತೂಲನ್ನು ತೆಗೆದು ಮೂರು ಬಾರಿ ಹಲ್ಲೆ ನಡೆಸಿದ್ದಾನೆ. ಆಗ ರಂಜೀತ್‌ ಎಷ್ಟೇ ಕ್ಷಮೆ ಕೇಳಿದರೂ ಮಿಶ್ರಾ ಮಾತ್ರ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಹಿಂಬದಿ ಇದ್ದ ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಘಟನೆ ವಿಡಿಯೋ ರೆಕಾರ್ಡ್‌ ಆಗಿದೆ. ರಂಜಿತ್‌ ಎಫ್‌ಐಆರ್‌ ದಾಖಲಿಸಿದ್ದು, ಮಿಶ್ರಾನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಆತನಿಂದ ಲೈಸೆನ್ಸ್‌ ಪಿಸ್ತೂಲ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇನ್ನು ಮಿಶ್ರಾ ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ ಆಗಿದ್ದು, ಶೂಟಿಂಗ್‌ ತರಬೇತುದಾರನಾಗಿ ಕಾರ್ಯನಿರ್ಹಿಸುತ್ತಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:SBI Warning: ನಕಲಿ ಸಂದೇಶಗಳ ಬಗ್ಗೆ ಎಚ್ಚರ‌ ಇರಲಿ; ಗ್ರಾಹಕರಿಗೆ ಎಸ್ ಬಿ ಐ ಸೂಚನೆ

Continue Reading

ದೇಶ

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

ಮೌಂಟ್ ಎವರೆಸ್ಟ್ ನಲ್ಲಿ ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು,ಈ ಬಗ್ಗೆ ಭಾರತದ ಪರ್ವತಾರೋಹಿ ರಾಜನ್ ದ್ವಿವೇದಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video)ಆಗಿದೆ. ಅಲ್ಲೇಕೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ? ಈ ಕುರಿತ ಕುತೂಹಲಕರ ವರದಿ ಇಲ್ಲಿದೆ.

VISTARANEWS.COM


on

By

Viral Video
Koo

ಮೌಂಟ್ ಎವರೆಸ್ಟ್ ನಲ್ಲಿ (Mount Everest) ಪರ್ವತಾರೋಹಿಗಳು (climber) ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಆರೋಹಿಗಳ ಉದ್ದನೆಯ ಸರತಿಯ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ (Instagram) ಭಾರತದ (indian) ಪರ್ವತಾರೋಹಿ ರಾಜನ್ ದ್ವಿವೇದಿ (Rajan Dwivedi) ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ.

ಮೌಂಟ್ ಎವರೆಸ್ಟ್ ನಲ್ಲಿ ಮಂಗಳವಾರ ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬ್ರಿಟಿಷ್ ಪರ್ವತಾರೋಹಿ ಮಾರ್ ಪ್ಯಾಟರ್ಸನ್ (39) ಮತ್ತು ನೇಪಾಳಿ ಶೆರ್ಪಾ ಪಾಸ್ತೆಂಜಿ (23) ಅವರು ಹಿಲರಿ ಹಂತವನ್ನು ಹತ್ತುವಾಗ ಕುಸಿದು ಬಿದ್ದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಮೇ 20ರಂದು ರಾಜನ್ ದ್ವಿವೇದಿ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋ ಅವರ ಹಿಂದೆ ಇರುವ ಆರೋಹಿಗಳ ಗುಂಪಿನ ಚಿತ್ರಣವನ್ನು ತೋರಿಸಿದೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ದ್ವಿವೇದಿ ಅವರು ಮೌಂಟ್ ಎವರೆಸ್ಟ್ ಅನ್ನು ಏರುವಾಗ ಎದುರಾಗುವ ಸವಾಲುಗಳ ಬಗ್ಗೆ ಹೇಳಿದ್ದಾರೆ. ಒಂದೇ ಹಗ್ಗವನ್ನು ಹಿಡಿದುಕೊಂಡು ನಾವೆಲ್ಲ ಜೊತೆಯಾಗಿ ಸಾಗುತ್ತಿದ್ದೇವೆ. ಪರ್ವತ ಏರಲು, ಇಳಿಯಲು ಟ್ರಾಫಿಕ್ ತೊಂದರೆ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಹವಾಮಾನ. ಆರೋಹಿಗಳ ದೊಡ್ಡ ಸಾಲು ಬರುತ್ತಿರುವುದನ್ನು ನೋಡುವಾಗ ನನಗೆ ಕೆಳಗೆ ಬರುವುದು ಒಂದು ದುಃಸ್ವಪ್ನದಂತೆ ಕಂಡಿತ್ತು ಮತ್ತು ತೀವ್ರವಾಗಿ ದಣಿದಿದ್ದೆ ಎಂದು ಹೇಳಿದ್ದಾರೆ.


ದ್ವಿವೇದಿ ಆರೋಹಣದ ಮೂರು ನಿರ್ದಿಷ್ಟ ಪ್ರಯಾಸಕರ ವಿಭಾಗಗಳನ್ನು ಏರಿದ್ದಾರೆ. ಖುಂಬು ಐಸ್‌ಫಾಲ್ಸ್, ಕ್ಯಾಂಪ್ 3 ರಿಂದ ಕ್ಯಾಂಪ್ 4 ಕ್ಕೆ ಆರೋಹಣ. ಕ್ಯಾಂಪ್ 4 ರಿಂದ ಶಿಖರದ ಅಂತಿಮ ವಲಯ ಸಾವಿನ ವಲಯ ವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ರಾತ್ರಿಯ ಸಮಯದಲ್ಲಿ ಹೆಪ್ಪುಗಟ್ಟಿದ ತಾಪಮಾನದ ನಡುವೆ ಪ್ರವಾಸ ಕೈಗೊಳ್ಳಲಾಗುತ್ತದೆ.

ಮೌಂಟ್ ಎವರೆಸ್ಟ್ ಏರುವುದು ಒಂದು ತಮಾಷೆಯ ಸಂಗತಿ ಅಲ್ಲ ಮತ್ತು ವಾಸ್ತವವಾಗಿ ಅದು ಗಂಭೀರ ಆರೋಹಣ ಎಂದು ದ್ವಿವೇದಿ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಶಿಖರದಿಂದ ಇಳಿಯುವುದು ಸವಾಲಿನ ಕಾರ್ಯವಾಗುತ್ತಿದೆ. ವಿಶೇಷವಾಗಿ ಹವಾಮಾನ ವೈಪರೀತ್ಯದ ನಡುವೆಯೂ ಹೆಚ್ಚಿನ ಸಂಖ್ಯೆಯ ಆರೋಹಿಗಳು ಮೇಲೆ ಏರುತ್ತಿದ್ದಾರೆ ಎಂದು ದ್ವಿವೇದಿ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಸುಮಾರು 500 ಆರೋಹಿಗಳು, ಹವ್ಯಾಸಿಗಳು ಮತ್ತು ಅನನುಭವಿಗಳು ಇದನ್ನು ಏರಲು ಪ್ರಯತ್ನಿಸುತ್ತಾರೆ. ಬಹುಶಃ 250- 300 ಮಂದಿ ಮಾತ್ರ ಯಶಸ್ವಿಯಾಗುತ್ತಾರೆ. ಅನೇಕರು ಗಾಯಗೊಂಡು ಪ್ರವಾಸವನ್ನು ಕೊನೆಗೊಳಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ದ್ವಿವೇದಿ ಹಂಚಿಕೊಂಡಿರುವ ವಿಡಿಯೋವು ಒಂದು ಹಗ್ಗದ ಸಾಲಿನಲ್ಲಿ ದೀರ್ಘ ಕಾಯುವಿಕೆ ಮತ್ತು ಟ್ರಾಫಿಕ್ ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್‌ನಲ್ಲಿ ಇಂಟರ್‌ಚೇಂಜ್‌ಗಳ ಮಾತುಕತೆಗಳನ್ನು ತೋರಿಸುತ್ತದೆ.

ಇದನ್ನೂ ಓದಿ: Snake Bite : ಮುಳ್ಳು ಚುಚ್ಚಿದೆ ಎಂದು ನಿದ್ರೆಗೆ ಜಾರಿದವನ ಮೈ ಸೇರಿತು ಹಾವಿನ ವಿಷ! ಬೆಳಗಾಗುವಷ್ಟರಲ್ಲಿ ಮೃತ್ಯು


ಉದ್ದನೆಯ ಸರದಿಯ ಮತ್ತೊಂದು ವಿಡಿಯೋ ವನ್ನು ಹಂಚಿಕೊಂಡ ಮಾಸ್ಸಿಮೊ ಎಕ್ಸ್ ನಲ್ಲಿ ಟ್ರಾಫಿಕ್ ಜಾಮ್‌ಗಳ ಕಾರಣಗಳು, ತಾಪಮಾನದಲ್ಲಿ ತೀವ್ರ ಕುಸಿತ, ಹಗ್ಗಗಳನ್ನು ಸರಿಪಡಿಸಿದ ದಿನಾಂಕ ಮತ್ತು ನಿಧಾನ ಪ್ರಯಾಣ, ಅನನುಭವಿ ಆರೋಹಿಗಳ ಕುರಿತು ಹೇಳಿಕೊಂಡಿದ್ದಾರೆ.

ಅನೇಕ ಪರಿಸರವಾದಿಗಳು ಮತ್ತು ಆರೋಹಿಗಳು ಎವರೆಸ್ಟ್‌ನಲ್ಲಿ ಜನಸಂದಣಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪರ್ವತದ ಮೇಲೆ ಅನೇಕ ಅಪಘಾತಗಳು ಮತ್ತು ಸಾವುಗಳ ಹೊರತಾಗಿಯೂ ನೂರಾರು ಜನರು ವಿಶ್ವದ ಅತಿ ಎತ್ತರದ ಶಿಖರವನ್ನು ಏರಲು ತಯಾರಾಗುತ್ತಾರೆ.

Continue Reading
Advertisement
Road Accident in Anekal
ಕ್ರೈಂ21 mins ago

Road Accident : ತಿರುವಿನಲ್ಲಿದ್ದ ಜವರಾಯ; ಸ್ಪೀಡಾಗಿ ಬಂದು ಫೆನ್ಸಿಂಗ್ ಕಂಬಕ್ಕೆ ಡಿಕ್ಕಿ, ಬೈಕ್‌ ಸವಾರ ಸಾವು

T20 World Cup 2024
ಕ್ರೀಡೆ22 mins ago

T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು

Human trafficking
ದೇಶ31 mins ago

Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Stone Quarry Collapses
ದೇಶ35 mins ago

Stone Quarry Collapses: ಕಲ್ಲಿನ ಗಣಿ ಕುಸಿದು 10 ಮಂದಿ ಜೀವಂತ ಸಮಾಧಿ; ರಕ್ಷಣಾ ಕಾರ್ಯಾಚರಣೆಗೆ ಭೀಕರ ಮಳೆ ಅಡ್ಡಿ

tumkur murder
ತುಮಕೂರು49 mins ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

deep fake case
ಕ್ರೈಂ1 hour ago

Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

Rashmika Mandanna
South Cinema1 hour ago

Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವ ಕಪ್​ನಲ್ಲಿ ಟೀಮ್​ ಇಂಡಿಯಾದ ಮುಂದಿರುವ ಸವಾಲುಗಳೇನು?

murder case belagavi news
ಕ್ರೈಂ2 hours ago

Murder Case: ಎಮ್ಮೆ ಮಾರಿ ಬಂದ ಕಾಸಿನಿಂದ ಕುಡಿದ; ಆಕ್ಷೇಪಿಸಿದ ಹೆಂಡತಿಯ ಕೊಂದು ನೇಣು ಹಾಕಿಕೊಂಡ

Pune Porsche Accident
ದೇಶ2 hours ago

Pune Porsche Accident: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ಲಂಚ ಪಡೆದಿದ್ದ ವೈದ್ಯರು; ಆಸ್ಪತ್ರೆ ಜವಾನ ಅರೆಸ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ18 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌