ವೈರಲ್ ನ್ಯೂಸ್
Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ವಿಡಿಯೊದಲ್ಲೋ, ಫೋಟೋದಲ್ಲೋ ನಾವು ವಿವಿಧ ಬಗೆಯ ಖಾದ್ಯಗಳನ್ನು ನೋಡಿದರೆ ಸಾಕು ನಮ್ಮ ಬಾಯಲ್ಲೂ ನೀರೂರುತ್ತದೆ. ನಮಗೂ ತಿಂದುಬಿಡಬೇಕು ಎನ್ನಿಸುತ್ತದೆ. ಹಾಗೇ, ಈ ನಾಯಿಗೂ ಅನ್ನಿಸಿತು.
ಸಾಕಿದ ನಾಯಿಗಳ ಆಟ-ತುಂಟಾಟ, ಮುಗ್ಧತೆಯನ್ನೆಲ್ಲ ಪ್ರಸ್ತುತ ಪಡಿಸುವ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಮನೆಯಲ್ಲಿ ಸಾಕುವ ಶ್ವಾನಗಳು ಮನೆ ಸದಸ್ಯರಂತೆ ಆಗಿಬಿಡುತ್ತವೆ. ಮನೆಯಲ್ಲಿ ಎಲ್ಲ ಕಡೆ ಓಡಾಡಿಕೊಂಡು, ಸೋಫಾ-ಬೆಡ್ ಮೇಲೆ ಮಲಗುತ್ತ, ಟಿವಿ ನೋಡಿಕೊಂಡು ಸಖತ್ ಎಂಜಾಯ್ ಮಾಡಿಕೊಂಡಿರುತ್ತವೆ.
ಈಗ ಲ್ಯಾಬ್ರಡರ್ ನಾಯಿಯೊಂದು ಟಿವಿಯಲ್ಲಿ ಕಾಣಿಸುವ ತಿಂಡಿ ನಿಜವೆಂದು ಭಾವಿಸಿ, ಓಡಿ ಹೋಗಿ ಟಿವಿ ಸ್ಕ್ರೀನ್ಗೆ ಬಾಯಿ ಹಾಕಿದ ಕ್ಯೂಟ್ ವಿಡಿಯೊವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲೋ, ಫೋಟೋದಲ್ಲೋ ನಾವು ವಿವಿಧ ಬಗೆಯ ಖಾದ್ಯಗಳನ್ನು ನೋಡಿದರೆ ಸಾಕು ನಮ್ಮ ಬಾಯಲ್ಲೂ ನೀರೂರುತ್ತದೆ. ನಮಗೂ ತಿಂದುಬಿಡಬೇಕು ಎನ್ನಿಸುತ್ತದೆ. ತಿಂಡಿ/ತಿನಿಸು ಚಿತ್ರ-ವಿಡಿಯೊ ಕಂಡಾಕ್ಷಣ ಅದನ್ನು ಬಾಯಿಗೆ ಹಾಕಿಕೊಳ್ಳಬೇಕು ಎಂದೆನಿಸುವುದು ಸಹಜವಾದರೂ, ನಾವು ಮನುಷ್ಯರಿಗೆ ಅದು ಫೋಟೋ/ವಿಡಿಯೊ ಎಂದು ಗೊತ್ತಿರುತ್ತದೆ. ಆದರೆ ನಾಯಿಗಳು ಹಾಗಲ್ಲ. ಅದು ನಿಜವಲ್ಲ ಎಂಬುದು ಅವಕ್ಕೆ ತಕ್ಷಣಕ್ಕೇ ಗೊತ್ತಾಗುವುದಿಲ್ಲ.
ಇದನ್ನೂ ಓದಿ: Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!
ಹಾಗೇ ಈ ನಾಯಿ ಕೂಡ. ತನ್ನ ಸಾಕಿದ ಮನೆಯಲ್ಲಿ ಅಳವಡಿಸಲಾಗಿರುವ ದೊಡ್ಡದಾದ ಟಿವಿಯಲ್ಲಿ ಬರುತ್ತಿರುವ ದೃಶ್ಯ ನಿಜವೆಂದೇ ಭಾವಿಸಿಬಿಟ್ಟಿತು. ಟಿವಿಯಲ್ಲಿ ಒಂದು ಹೋಟೆಲ್ನ ಸನ್ನಿವೇಶ ಬರುತ್ತಿತ್ತು. ಅಲ್ಲಿ ಹಲವರು ಕುಳಿತು ತಿಂಡಿ ತಿನ್ನುತ್ತಿದ್ದಾರೆ. ಅದರಲ್ಲಿ ಒಬ್ಬ ಹುಡುಗ ಒಂದು ಕೈಯಲ್ಲಿ ಆಹಾರ ಸೇವಿಸುತ್ತ, ಎಡಗೈಯಲ್ಲಿ ಅದ್ಯಾವುದೋ ತಿಂಡಿಯನ್ನು ಹಿಡಿದುಕೊಂಡಿದ್ದಾನೆ. ಅಷ್ಟೊತ್ತು ಟಿವಿ ನೋಡುತ್ತಿದ್ದ ನಾಯಿ, ಹುಡುಗ ಎಡಗೈಯಲ್ಲಿ ತಿನಿಸನ್ನು ಹಿಡಿದು, ಸ್ವಲ್ಪವೇ ಚಾಚುತ್ತಿದ್ದಂತೆ ಓಡಿ ಹೋಗಿ ಅಲ್ಲಿ ಬಾಯಿ ಹಾಕಿದೆ. ಟಿವಿ ಸ್ಕ್ರೀನ್ನ್ನು ನಾಲಿಗೆಯಿಂದ ನೆಕ್ಕಿದೆ. ಹೀಗೆ ಎರಡು ಬಾರಿ ಮಾಡಿದ ನಂತರ ಅದು ಮುಖದಲ್ಲಿ ಬೇಸರದ ಭಾವ ಹೊತ್ತು, ಮರಳಿ ಬಂದು ಕುಳಿತಿದೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.
ವಿಡಿಯೋಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
ದೇಶ
Kshama Bindu: ತನ್ನನ್ನು ತಾನೇ ಮದುವೆ ಆಗಿದ್ದ ಯುವತಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಹೇಗಿತ್ತು ಜರ್ನಿ?
Kshama Bindu: ಕಳೆದ ವರ್ಷದ ಜೂನ್ 9ರಂದು ಕ್ಷಮಾ ಬಿಂದು ತಮ್ಮನ್ನು ತಾವೇ ಮದುವೆಯಾಗಿದ್ದರು. ನನಗೆ ವರ ಬೇಡ, ಸ್ವಯಂ ಮದುವೆಯಾಗುತ್ತೇನೆ ಎಂದು, ತಮಗೆ ತಾವೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಅವರ ಸ್ವಯಂ ವಿವಾಹಕ್ಕೆ ಮೊದಲ ವಾರ್ಷಿಕೋತ್ಸವದ ಸಂಭ್ರಮ.
ಗಾಂಧಿನಗರ: ಕಳೆದ ವರ್ಷ ಗುಜರಾತ್‌ನಲ್ಲಿ ತನ್ನನ್ನು ತಾನೇ ಮದುವೆಯಾಗುವ (Sologamy) ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಕ್ಷಮಾ ಬಿಂದು (Kshama Bindu) ಅವರು ಮೊದಲ ವರ್ಷದ ಸ್ವಯಂ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಒಂದು ವರ್ಷದ ವೈವಾಹಿಕ ಜೀವನದ ಕುರಿತು ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರ ವಿವಾಹ ವಾರ್ಷಿಕೋತ್ಸವ ಜರ್ನಿಯ ವಿಡಿಯೊ ಈಗ ವೈರಲ್ ಆಗಿದೆ.
ಕ್ಷಮಾ ಬಿಂದು ಅವರು ಕಳೆದ ವರ್ಷ ತಮ್ಮನ್ನು ತಾವೇ ಮದುವೆಯಾಗಿದ್ದು, ಮದುವೆಯಾದ ಸುಂದರ ಕ್ಷಣಗಳು, ಸ್ವಯಂ ಮದುವೆಯ ಮೊದಲ ವಾರ್ಷಿಕೋತ್ಸವದ ಆಚರಣೆ, ಒಂದು ವರ್ಷದಲ್ಲಿ ಮಾಡಿದ ಪ್ರವಾಸ, ಅನುಭವಿಸಿದ ಮಧುರ ಕ್ಷಣಗಳು ಇರುವ ವಿಡಿಯೊವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಸ್ವಯಂ ವಿವಾಹವಾದ ಒಂದು ವರ್ಷದಲ್ಲಿ ಹೇಗೆ ಬದುಕನ್ನು ಖುಷಿಯಿಂದ ಕಳೆದೆ ಎಂಬುದನ್ನು ಅವರು ವಿಡಿಯೊ ಮೂಲಕ ಜನರ ಎದುರಿಟ್ಟಿದ್ದಾರೆ. ಇದಕ್ಕೆ ಜನ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕ್ಷಮಾ ಬಿಂದು ಅವರು ತಮಗೆ ತಾವೇ “Happy Anniversary” ಎಂದು ವಿಶ್ ಮಾಡಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೊ
ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾಗಿ 24 ಗಂಟೆಯಲ್ಲೇ ವಿಚ್ಛೇದನ ಪಡೆದ ಯುವತಿ; ಒಂದಿನವೂ ಕಳೆಯಲಾಗಲಿಲ್ಲವಂತೆ!
ಕ್ಷಮಾ ಬಿಂದು 2022 ಜೂ.11 ರಂದು ಗುಜರಾತ್‌ನ ದೇವಸ್ಥಾನವೊಂದರಲ್ಲಿ ನನ್ನನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ಬಿಜೆಪಿ ನಾಯಕಿ ಸುನೀತಾ ಶುಕ್ಲಾ, ʼಇಂಥ ಸ್ವಯಂ ಮದುವೆಗಳಿಗೆ ನನ್ನ ವಿರೋಧವಿದೆ. ಇದರಿಂದ ಹಿಂದು ಜನಸಂಖ್ಯೆ ಕಡಿಮೆಯಾಗುತ್ತದೆ. ಕ್ಷಮಾ ಬಿಂದು ಯಾವುದೇ ದೇವಸ್ಥಾನದಲ್ಲೂ ಸ್ವಯಂ ವಿವಾಹವಾಗಲು ನಾವು ಅವಕಾಶ ಕೊಡುವುದಿಲ್ಲʼ ಎಂದು ಹೇಳಿದ್ದರು. ಇವರಷ್ಟೇ ಅಲ್ಲ, ಕಾಂಗ್ರೆಸ್‌ನ ಕೆಲವು ರಾಜಕಾರಣಿಗಳೂ ಇದನ್ನು ವಿರೋಧಿಸಿದ್ದರು. ತಮ್ಮ ಸೋಲೊಗಮಿಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಕ್ಷಮಾ ಬಿಂದು ಜೂನ್ 9ರಂದೇ ತಮ್ಮನ್ನು ತಾವು ವರಿಸಿದ್ದರು. ಇದು ದೇಶದ ಮೊದಲ ಸ್ವಯಂ ಮದುವೆ ಎಂದು ಕೂಡ ಖ್ಯಾತಿಯಾಗಿತ್ತು.
ಗುಜರಾತ್‌ನ ಗೋತ್ರಿ ಏರಿಯಾದಲ್ಲಿರುವ ತಮ್ಮ ಮನೆಯಲ್ಲಿಯೇ ಕ್ಷಮಾ ಮದುವೆಯಾಗಿದ್ದರು. ಸುಮಾರು 40 ನಿಮಿಷಗಳ ಕಾಲ ವಿವಾಹ ಕಾರ್ಯಕ್ರಮ ನಡೆದಿತ್ತು. ಇನ್ನೊಂದು ಬಹುಮುಖ್ಯ ಅಂಶವೆಂದರೆ ಪುರೋಹಿತರೂ ಇರಲಿಲ್ಲ. ಆದರೆ ಕ್ಷಮಾ ಇಚ್ಛೆಯೇ ಹಾಗಿತ್ತು. ಅವರಿಗೆ ವರನೇ ಬೇಕಾಗಿಲ್ಲ ಎಂದ ಮೇಲೆ ಪುರೋಹಿತರು ಬಂದೇನು ಮಾಡುತ್ತಾರೆ? ಇಷ್ಟೆಲ್ಲ ಆದ ಮೇಲೆ ತನ್ನನ್ನು ತಾನು ವಿವಾಹಿತ ಮಹಿಳೆ ಎಂದೇ ಕ್ಷಮಾ ಬಿಂದು ಕರೆದುಕೊಂಡಿದ್ದರು. ಮತ್ತು ಹೀಗೆ ಕರೆದುಕೊಳ್ಳಲು ಸಂತೋಷವಾಗುತ್ತಿದೆ ಎಂದೂ ತಿಳಿಸಿದ್ದರು. ಅದರಂತೆ, ಅವರು ಒಂದು ವರ್ಷವನ್ನು ಸಂತಸದಿಂದ ಕಳೆದಿದ್ದಾರೆ.
ವೈರಲ್ ನ್ಯೂಸ್
Viral News: ಇದು ಮೂಗಿನಿಂದ ಬಂದ ಕೊಳಲ ನಾದ! ಸರ್ಕಾರಿ ಶಾಲೆಯ ಶಿಕ್ಷಕನ ಕಲೆ ನೋಡಿ ಬೆಕ್ಕಸ ಬೆರಗಾದ ಜನ
ರಾಜಸ್ಥಾನದ ಬಿಕಾನೇರ್‌ನ ಬಸಂತ್ ಕುಮಾರ್ ಹೆಸರಿನ ಸರ್ಕಾರಿ ಶಾಲಾ ಶಿಕ್ಷಕ ಮೂಗಿನ ಮೂಲಕ ಕೊಳಲು ವಾದನ ಮಾಡುತ್ತಾರೆ. ಅವರ ಈ ಪ್ರತಿಭೆ ಸಾಕಷ್ಟು (Viral News)ಸುದ್ದಿಯಲ್ಲಿದೆ.
ಜೈಪುರ: ಭಾರತದವು ಕಲೆಗಳ ನಾಡು. ಇಲ್ಲಿ ಅದ್ಭುತ ಕಲೆಯಿಂದಲೇ ಪ್ರಸಿದ್ಧರಾದವರು ಸಾಕಷ್ಟು ಮಂದಿಯಿದ್ದಾರೆ. ಅದೇ ರೀತಿಯಲ್ಲಿ ರಾಜಸ್ಥಾನದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಇದೀಗ ತಮ್ಮ ಕಲೆಯ ಮೂಲಕವೇ ಸುದ್ದಿಯಲ್ಲಿದ್ದಾರೆ. ಎಲ್ಲರೂ ಬಾಯಿಯಿಂದ ಕೊಳಲನ್ನು ನುಡಿಸಿದರೆ ಇವರು ಮಾತ್ರ ತಮ್ಮ ಮೂಗಿನಿಂದಲೇ ಕೊಳಲನ್ನು ನುಡಿಸಿ ಸೈ (Viral News) ಎನಿಸಿಕೊಂಡಿದ್ದಾರೆ.
ರಾಜಸ್ಥಾನದ ಬಿಕಾನೇರ್ ನಗರದ ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಬಸಂತ್ ಕುಮಾರ್ ಓಜಾ ಈ ರೀತಿಯ ಪ್ರತಿಭೆ ಇರುವ ವ್ಯಕ್ತಿ. ಅವರು ಕಳೆದ 32 ವರ್ಷಗಳಿಂದ ಕೊಳಲು ವಾದನ ಮಾಡುತ್ತಿದ್ದಾರೆ. ಅದರಲ್ಲಿ ಕಳೆದ 12 ವರ್ಷಗಳಿಂದ ಮೂಗಿನಲ್ಲೇ ಕೊಳಲು ಬಾರಿಸಿ ಕಲಾಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಮೂಗಿನಿಂದಲೂ ಕೊಳಲು ವಾದನ ಮಾಡಬಹುದು ಎನ್ನುವುದು ಬಸಂತ್ ಅವರಿಗೇ ತಿಳಿದಿರಲಿಲ್ಲವಂತೆ.
ಇದನ್ನೂ ಓದಿ: Viral News: ಬೆನ್ನತ್ತಿಕೊಂಡು ಬಂದವನಿಗೆ ಚಪ್ಪಲಿ ಏಟು ಕೊಟ್ಟ ವಿದ್ಯಾರ್ಥಿನಿ
ಬಿಕಾನೇರ್‌ನಲ್ಲಿ ಅಂತಾರಾಷ್ಟ್ರೀಯ ಒಂಟೆ ಉತ್ಸವದಲ್ಲಿ ಭಾಗವಹಿಸಲೆಂದು ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ತಮಾಷೆಗೆಂದು ಮೂಗಿನಿಂದ ಕೊಳಲು ವಾದಿಸಿದರಂತೆ. ಆಗ ಅದ್ಭುತವಾಗಿ ನಾದ ಮೂಡಿಬಂದಿದೆ. ಅದನ್ನು ಕಂಡ ಅವರ ಸ್ನೇಹಿತರು ವೇದಿಕೆಯ ಮೇಲೆ ನೀನು ಮೂಗಿನಲ್ಲೇ ಕೊಳಲು ವಾದನ ಮಾಡು ಎಂದು ಒತ್ತಾಯಿಸಿದ್ದಾರೆ. ಅದರಂತೆ ಬಸಂತ್ ಮಾಡಿದ್ದು, ಅದು ಅಲ್ಲಿದ್ದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬಸಂತ್ ಕುಮಾರ್ ಅವರು ತಮ್ಮ ಮೂಗಿನ ಮೂಲಕ ಅರೆ-ಶಾಸ್ತ್ರೀಯ, ರಾಜಸ್ಥಾನಿ ಜಾನಪದ ಮತ್ತು ಚಲನಚಿತ್ರ ಮಧುರಗಳಂತಹ ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ನುಡಿಸುತ್ತಾರೆ. ಇದಲ್ಲದೆ, ಅವರು ಹಲವಾರು ಇತರ ಸಂಗೀತ ವಾದ್ಯಗಳನ್ನು ನುಡಿಸುವಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ. ಕೊಳಲು ನುಡಿಸುವಲ್ಲೇ ವಿಶ್ವ ದಾಖಲೆ ಮಾಡಬೇಕು ಎನ್ನುವುದು ಅವರ ಕನಸಾಗಿದೆ. ಸದ್ಯ ಅವರು 15 ವಿದ್ಯಾರ್ಥಿಗಳಿಗೆ ಕೊಳಲು ವಾದನವನ್ನು ಹೇಳಿಕೊಡುತ್ತಿದ್ದಾರೆ.
ಕರ್ನಾಟಕ
Video Viral: ಅಮಾಯಾಕರೇ ಇವರ ಟಾರ್ಗೆಟ್; ನಕಲಿ ಮಂತ್ರವಾದಿಗಳಿಗೆ ಭೂತ ಬಿಡಿಸಿದ ಜನ!
Video Viral: ಗುಜರಿ ಕೆಲಸ ಮಾಡಿಕೊಂಡಿದ್ದ ಅವರಿಬ್ಬರು ಮಂತ್ರವಾದಿಗಳ (black magic) ಸೋಗಿನಲ್ಲಿ ಬಂದು ಜನರಿಗೆ (Fraud Case) ವಂಚಿಸುತ್ತಿದ್ದರು. ಆದರೆ ಅವರ ಗ್ರಹಚಾರ ಕೆಟ್ಟಿತ್ತು, ನಕಲಿ ಮಂತ್ರವಾದಿಗಳಿಗೆ ಜನರೇ ಕೂಡಿ ಹಾಕಿ ಭೂತ ಬಿಡಿಸಿದ್ದಾರೆ.
ಮಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೆ ಇರುತ್ತಾರೆ. ಜನರ ಅಸಹಾಯಕತೆ, ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ನಯವಂಚಕರು, ನಾನಾ ವೇಷಗಳನ್ನು ಧರಿಸಿ (Fraud Case) ವಂಚಿಸುತ್ತಾರೆ. ಹೀಗೆ ವಂಚಿಸಲು ಮುಂದಾದ ನಕಲಿ ಮಂತ್ರವಾದಿಗಳನ್ನು (black magic) ಹಿಡಿದು ಥಳಿಸಿ ನೀರಿಳಿಸಿರುವ ವಿಡಿಯೊ ವೈರಲ್ (Video Viral) ಆಗಿದೆ.
ದಕ್ಷಿಣ ಕನ್ನಡದ ಕಡಬ ತಾಲೂಕಿನ ವಳಾಲು ಎಂಬಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಕುಟುಂಬವೊಂದು ತಮ್ಮ ಮಗುವಿಗೆ ಅನಾರೋಗ್ಯ ಎಂದು ಆಸ್ಪತ್ರೆಗೆ ಅಲೆದಾಡಿದರು. ಆದರೆ ಮಗುವಿನ ಆರೋಗ್ಯ ಮಾತ್ರ ಕೊಂಚವೂ ಸುಧಾರಿಸಿರಲಿಲ್ಲ. ಹೀಗಾಗಿ ತಲೆಕೆಡಿಸಿಕೊಂಡ ಮುಸ್ಲಿಂ ಕುಟುಂಬವು ಮಂತ್ರವಾದಿಗಳ ಸಂಪರ್ಕ ಮಾಡಿತ್ತು. ಮನೆಗೆ ಬಂದಿದ್ದ ಮಂತ್ರವಾದಿಗಳು ಮಗುವಿಗೆ ಕಪ್ಪು ನೂಲು ಮಂತ್ರಿಸಿ ಕಟ್ಟಿ ಹೋಗಿದ್ದರು.
ಆದರೆ ವಾರ ಕಳೆದರೂ ಆ ಮಗುವಿಗೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿರಲಿಲ್ಲ. ಈ ಮಧ್ಯೆ ಮತ್ತೊಮ್ಮೆ ಮಂತ್ರಿವಾದಿಗಳಿಬ್ಬರು ಮಗುವಿನ ಮನೆಗೆ ಬಂದಿದ್ದರು. ಈ ವೇಳೆ ಆ ಕುಟುಂಬಸ್ಥರಿಗೂ, ನಕಲಿ ಮಂತ್ರವಾದಿಗಳಿಗೂ ಪರಿಚಯವಿದ್ದ ವ್ಯಕ್ತಿಯೊಬ್ಬರು ಆ ಸಮಯಕ್ಕೆ ಬಂದಿದ್ದರು. ಈ ಮಂತ್ರವಾದಿಗಳ ಕಂಡೊಡನೆ ಆ ವ್ಯಕ್ತಿ ಶಾಕ್ ಆಗಿದ್ದರೆ, ಈ ನಕಲಿ ವೇಷಧಾರಿಗಳು ತಬ್ಬಿಬ್ಬಾಗಿದ್ದರು.
ಗುಜರಿ ಕೆಲಸ ಮಾಡುತ್ತಿದ್ದವರು ಮಂತ್ರವಾದಿಗಳಾದರು
ಗುಜರಿ ವ್ಯವಹಾರ ಮಾಡುತ್ತಿದ್ದ ಈ ಇವರಿಬ್ಬರು ಮಂತ್ರವಾದಿಯ ಸೋಗಿನಲ್ಲಿ ಬಂದು ವಂಚನೆ ಮಾಡುತ್ತಿರುವುದು ತಿಳಿದು ಬಂದಿದೆ. ಇದರಿಂದ ಸಿಟ್ಟಾದ ಆ ವ್ಯಕ್ತಿ ಮನೆಯಲ್ಲೇ ಕೂಡಿ ಹಾಕಿ ನಕಲಿ ಮಂತ್ರವಾದಿಗಳಿಗೆ ಥಳಿಸಿದ್ದಾರೆ. ಯುವಕರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ನಕಲಿ ಮಂತ್ರಿವಾದಿಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ: Viral News: ತೊಪ್ಪೆಯಾಗುವಂತೆ ಮಳೆ ಹೊಯ್ಯಲೆಂದು ಕಪ್ಪೆಗಳ ಕಟ್ಟಿಕೊಂಡು ಬಂದು ತಾಳಿ ಕಟ್ಟಿದ ಗ್ರಾಮಸ್ಥರು!
ಸದ್ಯ ಪ್ರಕರಣವು ಠಾಣೆಯ ಮೆಟ್ಟಿಲೇರಿದ್ದು, ಆ ಬಳಿಕ ಮಾತುಕತೆಯ ಮೂಲಕ ಬಗೆಹರಿದಿದೆ ಎನ್ನಲಾಗಿದೆ. ಆರೋಗ್ಯ ಸಮಸ್ಯೆ ಎಂದು ತಂತ್ರ ಮಂತ್ರದ ಬಳಿ ಹೋಗುವ ಮುನ್ನ ಎಚ್ಚರವಾಗಿ ಇರಿ. ಇಲ್ಲದಿದ್ದರೆ ಇಂತಹ ವಂಚಕರು ನಿಮ್ಮನ್ನು ಸುಲಿಗೆ ಮಾಡಿಬಿಡುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ವೈರಲ್ ನ್ಯೂಸ್
Viral News: ಹಜ್ ಯಾತ್ರೆಗೆಂದು 8,600 ಕಿ.ಮೀ. ನಡೆದ ಕೇರಳಿಗ! ಅಲ್ಲಿಗೆ ಹೋಗಲು ತೆಗೆದುಕೊಂಡ ಟೈಮ್ ಎಷ್ಟು?
ಕೇರಳದ ವ್ಯಕ್ತಿಯೊಬ್ಬ ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲೇ ಹೋಗಿದ್ದಾನೆ. 8,600 ಕಿ.ಮೀ. ನಡೆದ ಅವರ ಕಥೆ ಎಲ್ಲೆಡೆ ವೈರಲ್ (Viral News) ಆಗಿದೆ.
ತಿರುವನಂತಪುರಂ: ಧರ್ಮಸ್ಥಳ ಸೇರಿ ಕರ್ನಾಟಕದ ಅನೇಕ ಪುಣ್ಯಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಯಾತ್ರೆ ಹೋಗುವವರನ್ನು ನೋಡಿರುತ್ತೀರಿ. ಆದರೆ ಕೇರಳದ ಈ ಒಬ್ಬ ವ್ಯಕ್ತಿ 8,600 ಕಿ.ಮೀ. ದೂರದ ಹಜ್‌ಗೆ ಪಾದಯಾತ್ರೆ ನಡೆಸಿದ್ದಾನೆ. ಬರೋಬ್ಬರಿ ಒಂದು ವರ್ಷದ ಕಾಲ ನಡೆದು ಇದೀಗ ಹಜ್ (Viral News) ತಲುಪಿದ್ದಾನೆ.
ಕೇರಳದ ಮಲಪ್ಪುರಂನ ವಲಂಚೇರಿಯ ನಿವಾಸಿಯಾಗಿರುವ ಯೂಟ್ಯೂಬರ್ ಶಿಹಾಬ್ ಚೋಟ್ಟೂರ್ ಈ ರೀತಿ ಸಾಹಸ ಮಾಡಿರುವ ವ್ಯಕ್ತಿ. ಆತ ಕಳೆದ ವರ್ಷ ಜೂನ್ 2ರಂದು ಮನೆಯಿಂದ ಕಾಲ್ನಡಿಗೆ ಆರಂಭಿಸಿದ್ದಾನೆ. ಭಾರತ, ಪಾಕಿಸ್ತಾನ, ಇರಾನ್ ಮತ್ತು ಕುವೈತ್ ಮಾರ್ಗವಾಗಿ ಸೌದಿ ಅರೇಬಿಯಾ ತಲುಪಿದ್ದಾನೆ. ಒಟ್ಟಾರೆಯಾಗಿ 8,640ಕಿ.ಮೀ. ದೂರ ನಡೆದಿದ್ದಾನೆ.
ಇದನ್ನೂ ಓದಿ: Viral Video: ಎಸ್ಎಸ್ಎಲ್ಸಿಯಲ್ಲಿ ಶೇ. 35 ಅಂಕ ಪಡೆದ ಮಗ; ಭರ್ಜರಿ ಖುಷಿಯಿಂದ ಸಂಭ್ರಮಿಸಿದ ಅಪ್ಪ-ಅಮ್ಮ
ಶಿಹಾಬ್ ಈ ವರ್ಷದ ಮೇ ತಿಂಗಳ ಎರಡನೇ ವಾರದಲ್ಲಿ ಕುವೈತ್ ಗಡಿ ದಾಟಿ ಸೌದಿ ಅರೇಬಿಯಾಕ್ಕೆ ತೆರಳಿದ್ದಾನೆ. ಅಲ್ಲಿ ಇಸ್ಲಾಂನ ಎರಡನೇ ಪವಿತ್ರ ನಗರ ಮತ್ತು ಪ್ರವಾದಿ ಮುಹಮ್ಮದ್ ಅವರ ಸಮಾಧಿ ಇರುವ ಮದೀನಾಕ್ಕೆ ತೆರಳಿದ್ದಾನೆ. ಅದಾದ ನಂತರ 21 ದಿನ ಬಿಟ್ಟು ಮೆಕ್ಕಾದತ್ತ ಹೆಜ್ಜೆ ಹಾಕಲಾರಂಭಿಸಿದ್ದಾನೆ. ಮದೀನಾದಿಂದ ಮೆಕ್ಕಾಗಿರು 440ಕಿ.ಮೀ ಅನ್ನು ಕೇವಲ 9 ದಿನಗಳಲ್ಲಿ ನಡೆದಿದ್ದಾನೆ. ಮೆಕ್ಕಾ ತಲುಪಿರುವ ಆತ ಅಲ್ಲಿಗೆ ಕೇರಳದಿಂದ ತನ್ನ ತಾಯಿ ಜೈನಾಬಾ ಬರುವುದನ್ನು ಕಾಯುತ್ತಿದ್ದಾನೆ. ತಾಯಿ ಬಂದ ಮೇಲೆ ಅವರು ಹಜ್‌ನ ಅಂತಿಮ ಯಾತ್ರೆ ನಡೆಸಲಿದ್ದಾರೆ.
ಶಿಹಾಬ್ ತನ್ನ ಪಾದಯಾತ್ರೆ ಕುರಿತಾಗಿ ಯೂಟ್ಯೂಬ್‌ನಲ್ಲಿ ಬ್ಲಾಗ್‌ಗಳನ್ನು ಹಾಕಿದ್ದಾನೆ. ಅದರಲ್ಲಿ ಅವನು ಹೇಳಿರುವ ಪ್ರಕಾರ ಪಾಕಿಸ್ತಾನದಲ್ಲಿ ಆತನಿಗೆ ವೀಸಾ ಸಮಸ್ಯೆ ಉಂಟಾಗಿದೆ. ರಾಯಭಾರ ಕಚೇರಿಯಿಂದ ಅವರ ವೀಸಾವನ್ನು ನಿರಾಕರಿಸಲಾಗಿತ್ತು. ವೀಸಾ ಕೊಡುವುದಕ್ಕೆ ಲಾಹೋರ್ ಹೈಕೋರ್ಟ್ ಕೂಡ ಒಪ್ಪಿಗೆ ನೀಡಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ವೀಸಾಕ್ಕೆ ಅನುಮತಿ ನೀಡಲಾಗಿದ್ದು, ಅವರು ಫೆಬ್ರವರಿಯಲ್ಲಿ ಪಾಕಿಸ್ತಾನದಿಂದ ಮೆಕ್ಕಾದತ್ತ ಹೊರಟರು.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ16 hours ago
Horoscope Today: ಈ ರಾಶಿಯವರು ಸಾಲ ಕೊಟ್ಟಿದ್ದರೆ ಇಂದು ಹಣ ಹಿಂದಿರುಗುತ್ತದೆ!
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಪಠ್ಯ ಪುಸ್ತಕ ಪರಿಷ್ಕರಣೆ ಆಟ, ವಿದ್ಯಾರ್ಥಿಗಳಿಗೆ ಸಂಕಟ
-
ಕರ್ನಾಟಕ23 hours ago
Bellary News: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
-
ಅಂಕಣ15 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ದೇಶ24 hours ago
ಒಡಿಶಾ ರೈಲು ದುರಂತದ ಶವಗಳನ್ನು ಇರಿಸಿದ್ದ ಶಾಲೆಗೆ ಬರಲು ಹೆದರಿದ ಮಕ್ಕಳು; ಕಟ್ಟಡ ನೆಲಸಮ
-
ಕ್ರಿಕೆಟ್12 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕರ್ನಾಟಕ23 hours ago
300ರಿಂದ 1800 ರೂ.ಗೆ ಜಂಪ್; ಕರೆಂಟ್ ಬಿಲ್ ಕಟ್ಟೋದಿಲ್ಲ, ಏನಾದ್ರೂ ಆಗ್ಲಿ ಎಂದ ಮಹಿಳೆಯರು!