ವೈರಲ್ ನ್ಯೂಸ್
Viral Video : ಇದು ಹುಡುಗಿಯಲ್ಲ ಸ್ವಾಮಿ! ಈ ಬೈಕ್‌ನಲ್ಲಿರುವವರು ತುಂಬಾನೇ ವಿಶೇಷ, ಯಾರಿವರು?
ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯೊಂದಿಗೆ ಬೈಕ್‌ನಲ್ಲಿ ರೈಡ್ ಹೋಗುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral Video) ಆಗಿದೆ.
ಚೆನ್ನೈ: ಬೈಕ್ ಪ್ರಯಾಣ ಮಾಡುವಾಗ ಮುಂಬದಿ ಸವಾರ ಹಾಗೂ ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸಿರಬೇಕು ಎನ್ನುವ ನಿಯಮವಿದೆ. ಆದರೆ ಆ ನಿಯಮವನ್ನು ಗಾಳಿಗೆ ತೂರಿ ದಂಡ ಹಾಕಿಸಿಕೊಳ್ಳುವವರ ಅನೇಕರು. ಆದರೆ ತಮಿಳುನಾಡಿನ ಚೆನ್ನೈನಲ್ಲಿ ಒಬ್ಬರು ವಿಶೇಷವಾದವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪ್ರಯಾಣ ಮಾಡಿದ್ದಾರೆ. ಹೆಲ್ಮೆಟ್ ಹಾಕಿಕೊಂಡು, ನಿಯಮ ಮುರಿಯದೆ ಪ್ರಯಾಣಿಸಿರುವ ಅವರ ವಿಡಿಯೊ ಸಕತ್ ವೈರಲ್ (Viral Video) ಆಗಿದೆ.
ಅಂದ ಹಾಗೆ ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಹಿಂಬದಿಯಲ್ಲಿರುವುದು ಬೇರಾರೂ ಅಲ್ಲ, ಒಂದು ನಾಯಿ. ಹೌದು. ಕಪ್ಪು ಬಣ್ಣದ ನಾಯಿಯನ್ನೇ ಅದರ ಮಾಲೀಕ ಬೈಕ್‌ನಲ್ಲಿ ರೈಡ್ ಕರೆದುಕೊಂಡು ಹೋಗುತ್ತಿದ್ದಾನೆ. ನಾಯಿ ಮನುಷ್ಯರ ರೀತಿಯಲ್ಲೇ ಎರಡು ಕಾಲುಗಳನ್ನು ಕೆಳಗೆ ಹಾಕಿಕೊಂಡು ಇನ್ನೆರೆಡು ಕಾಲುಗಳನ್ನು ಚಾಲಕನ ಹೆಗಲ ಮೇಲೆ ಇಟ್ಟುಕೊಂಡು ಅರಾಮಾವಾಗಿ ಕುಳಿತುಕೊಂಡಿದೆ. ಮುಂದಿನ ದಾರಿ ನೋಡುತ್ತಾ ಇದೆ ಕೂಡ.
ಇದನ್ನೂ ಓದಿ: Viral Photo : ನಾಯಿಗಳ ಗ್ರೂಪ್ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ
ಈ ಸವಾರಿಯಲ್ಲಿ ಇಬ್ಬರೂ ಹೆಲ್ಮೆಟ್ ಧರಿಸಿ ರೈಡ್ ಮಾಡಿರುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೊವನ್ನು ಮೊಹಮದ್ ನಯೀಮ್ ಹೆಸರಿನವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೊ ಈಗಾಗಲೇ ಸಾವಿರಾರು ಜನರಿಂದ ವೀಕ್ಷಣೆ ಪಡೆದುಕೊಂಡಿದೆ.
Rule is rule..😜#WhatsApp #instagramdown #TamilNadu pic.twitter.com/g47mB5mEfY
— Mohammed Nayeem (@PMN2463) May 23, 2023
ಈ ವಿಡಿಯೊವನ್ನು ಸಾವಿರಾರು ಜನರು ಲೈಕ್ ಮಾಡಿದ್ದು, ತಮ್ಮ ವಾಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. “ಉದ್ದ ಕೂದಲು ನೋಡಿ ಯಾವುದೋ ಹುಡುಗಿ ಕುಳಿತಿರಬೇಕು ಎಂದುಕೊಂಡಿದ್ದೆ. ಆದರೆ ಹತ್ತಿರ ಹೋದ ಮೇಲೇ ತಿಳಿಯಿತು, ಅದು ನಾಯಿ ಎಂದು” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. “ರೂಲ್ ಈಸ್ ರೂಲ್. ನಾಯಿಗೂ ಹೆಲ್ಮೆಟ್ ಹಾಕಿರುವುದು ವಿಶೇಷ” ಎಂದು ಕೆಲವರು ಹೇಳಿದ್ದಾರೆ, “ನೀವು ಪ್ರೀತಿಸುವವರು ಯಾರೇ ಆದರೂ ಅವರ ಬಗ್ಗೆ ಕೇರ್ ತೆಗೆದುಕೊಳ್ಳುತ್ತೀರಿ ಎನ್ನುವುದಕ್ಕೆ ಇದುವೇ ಸಾಕ್ಷಿ” ಎಂದು ಕೆಲವರು ಹೇಳಿದ್ದಾರೆ.
ವೈರಲ್ ನ್ಯೂಸ್
Viral Video : ವೇದಿಕೆ ಮೇಲೆ ಧೂಳೆಬ್ಬಿಸಿದ ಭಲೇ ಜೋಡಿ; ಸಕತ್ ಆಗಿದೆ ಈ ಸೆನೋರಿಟಾ ಡ್ಯಾನ್ಸ್
ವೃದ್ಧ ಜೋಡಿ ವೇದಿಕೆ ಮೇಲೆ ಸೆನೋರಿಟಾ ಹಾಡಿಗೆ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಮದುವೆ ಕಾರ್ಯಕ್ರಮ ಎಂದ ಮೇಲೆ ಅಲ್ಲಿ ಸಂಭ್ರಮವೋ ಸಂಭ್ರಮ. ಮನೆಯ ಪ್ರತಿಯೊಬ್ಬ ಸದಸ್ಯರೂ ಹಾಡಿ, ಕುಣಿದು, ಕುಪ್ಪಳಿಸುವುದಕ್ಕೆ ಸಿಗುವ ಅವಕಾಶವೇ ಮದುವೆ. ಈ ಸಂಭ್ರಮದ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು (Viral Video) ಮಾಡುತ್ತಿದೆ.
ವೇದಿಕೆಯ ಮೇಲೆ ವೃದ್ಧ ದಂಪತಿ ನಿಂತಿದ್ದಾರೆ. ಹಿಂದಿನಿಂದ 2011ರ ಜಿಂದಗಿ ನಾ ಮಿಲೇಗಿ ದುಬಾರಾ ಸಿನಿಮಾದ ಸೆನೋರಿಟಾ ಹಾಡು ತೇಲಿಬರುತ್ತಿದೆ. ಈ ಹಾಡು ತಮ್ಮದೇ ಎನ್ನುವ ರೀತಿಯಲ್ಲಿ ವೇದಿಕೆ ಮೇಲಿದ್ದ ಜೋಡಿ ಕುಣಿಯಲಾರಂಭಿಸುತ್ತದೆ. ಒಂದು ಸೆಕೆಂಡ್ ಕೂಡ ಬಿಡುವು ಕೊಡದೆ ಇಬ್ಬರೂ ಹೊಂದಾಣಿಕೆಯೊಂದಿಗೆ ಹಾಡಿಗೆ ಹೆಜ್ಜೆ ಹಾಕುತ್ತಾರೆ.
ಇದನ್ನೂ ಓದಿ: Viral News: ಪಲ್ಟಿಯಾದ ಬಿಯರ್ ತುಂಬಿದ ಲಾರಿ, ಸಿಕ್ಕಿದ್ದೇ ಚಾನ್ಸು ಅಂತ ಬಾಟಲಿ ಎತ್ತಿಕೊಂಡು ಕುಡುಕರು ಪರಾರಿ
ಈ ರೀತಿಯಲ್ಲಿ ಜೋಡಿ ಯುವಕರೂ ನಾಚುವಂತೆ ಹೆಜ್ಜೆ ಹಾಕುತ್ತಿದ್ದರೆ ವೇದಿಕೆಯ ಕೆಳಗಿರುವ ಜನರು ಜೋರಾಗಿ ಚೀರುತ್ತಾ, ಚಪ್ಪಾಳೆ ತಟ್ಟುತ್ತಾ ಜೋಡಿಗೆ ಪ್ರೋತ್ಸಾಹಿಸುತ್ತಾರೆ. ಕ್ಯಾಮರಾಮೆನ್ ಕೂಡ ಎಲ್ಲ ರೀತಿಯ ಭಂಗಿಯಲ್ಲಿ ಈ ಜೋಡಿಯ ನೃತ್ಯವನ್ನು ಸೆರೆಹಿಡಿದಿದ್ದಾನೆ.
ಈ ವಿಡಿಯೊವನ್ನು sikhlens ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೇ 16ರಂದು ಹಂಚಿಕೊಳ್ಳಲಾದ ಈ ವಿಡಿಯೊ ಈಗಾಗಲೇ 2.1 ಮಿಲಿಯನ್‌ಗೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಹಾಗೆಯೇ ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಯೇ ವಿಡಿಯೊಗೆ ಸುರಿದಿದೆ.
ಇದನ್ನೂ ಓದಿ: Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!
“ಅಬ್ಬಾ, ಲವ್ಲಿ ಜೋಡಿಯಿದು. ಇವರು ಹಲವಾರು ಕಾರ್ಯಕ್ರಮಗಳಲ್ಲಿ ಕುಣಿದಿರುವ ವಿಡಿಯೊವನ್ನು ನಾನು ನೋಡಿದ್ದೇನೆ”, “ಇದು ಅತ್ಯದ್ಭುತ ವಿಡಿಯೊ”, “ಇವರು ನಿಜವಾಗಿಯೂ ಸಾಕಷ್ಟು ಜನರಿಗೆ ಸ್ಫೂರ್ತಿ” ಎನ್ನುವ ಹಲವಾರು ಕಾಮೆಂಟ್‌ಗಳು ಈ ವಿಡಿಯೊಗೆ ಬಂದಿವೆ.
ದೇಶ
Viral Video: ಟಾರ್ಗೆಟ್ ರೀಚ್ ಆಗದ್ದಕ್ಕೆ ಸಹೋದ್ಯೋಗಿಗೆ ಬೈದ ಎಚ್‌ಡಿಎಫ್‌ಸಿ ಅಧಿಕಾರಿ ಸಸ್ಪೆಂಡ್
Viral Video: ಟಾರ್ಗೆಟ್ ರೀಚ್ ಆಗಿಲ್ಲ ಎಂದು ಕೋಲ್ಕೊತಾ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಕಿರಿಯ ಸಹೋದ್ಯೋಗಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದರು. ಈ ವಿಡಿಯೊ ವೈರಲ್ ಆಗಿ, ಜನರಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಅಧಿಕಾರಿಯನ್ನು ಎಚ್‌ಡಿಎಫ್‌ಸಿ ಅಮಾನತುಗೊಳಿಸಿದೆ.
ಕೋಲ್ಕೊತಾ: ಯಾವುದೇ ಕಂಪನಿ ಇರಲಿ, ಬಾಸ್‌ಗಳಿಂದ ಸಹೋದ್ಯೋಗಿಗಳು ಬೈಗುಳ ತಿನ್ನುವುದು ಸಹಜ. ಅದರಲ್ಲೂ, ಬ್ಯಾಂಕ್‌ಗಳಲ್ಲಿ, ಮೆಡಿಕಲ್ ರೆಪ್ರೆಸೆಂಟೇಟಿವ್ ಸೇರಿ ಟಾರ್ಗೆಟ್ ಇರುವ ಕ್ಷೇತ್ರಗಳಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಯ ಸಹೋದ್ಯೋಗಿಗಳಿಗೆ ಬೈಗುಳ ಫ್ರೀ. ಹೀಗೆ, ಆನ್‌ಲೈನ್ ಮೀಟಿಂಗ್‌ನಲ್ಲಿ ಕಿರಿಯ ಸಹೋದ್ಯೋಗಿಗೆ ಬಾಯಿಗೆ ಬಂದಂತೆ ಬೈದ ಹಿರಿಯ ಸಹೋದ್ಯೋಗಿಯನ್ನು ಎಚ್‌ಡಿಎಫ್‌ಸಿ (Viral Video) ವಜಾಗೊಳಿಸಿದೆ.
ಹೌದು, ಕಿರಿಯ ಸಹೋದ್ಯೋಗಿಗೆ ಎಲ್ಲರ ಎದುರು ಅವಮಾನವಾಗುವ ರೀತಿ ಬೈದ, ಕೋಲ್ಕೊತಾ ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ಅಧಿಕಾರಿ ಸೌಮಿ ಚಕ್ರವರ್ತಿ ಅವರನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಅಮಾನತುಗೊಳಿಸಿದೆ. ಟಾರ್ಗೆಟ್ ರೀಚ್ ಆಗದ ಹಿನ್ನೆಲೆಯಲ್ಲಿ ಆನ್‌ಲೈನ್ ಮೀಟಿಂಗ್‌ನಲ್ಲಿ ಕಿರಿಯ ಸಹೋದ್ಯೋಗಿ ಮೇಲೆ ರೇಗಾಡಿದ, ಕಿರಿಯ ಸಹೋದ್ಯೋಗಿ ಮಾತನಾಡಲು ಕೂಡ ಬಿಡದಂತೆ ಕಿರುಚಾಡಿದ ವಿಡಿಯೊ ವೈರಲ್ ಆಗಿತ್ತು. ವಿಡಿಯೊ ವೈರಲ್ ಆಗುತ್ತಲೇ ಎಚ್‌ಡಿಎಫ್‌ಸಿ ಕ್ರಮ ತೆಗೆದುಕೊಂಡಿದೆ.
ಇಲ್ಲಿದೆ ನೋಡಿ ವಿಡಿಯೊ
An HDFC Bank Senior VP is seen shouting at his employees for not meeting targets
— CA Kanan Bahl (@BahlKanan) June 5, 2023
Confirmed from a friend who understands Bengali, he is asking his junior to sell 75 insurance policies in a day🤯
Is this why these bank employees missell us policies and investment products? pic.twitter.com/SGNabDZinR
ಬ್ಯಾಂಕ್ ಸೇವೆಗಳನ್ನು ಮಾಡಿಸದ ಹಾಗೂ ಹೆಚ್ಚಿನ ಜನರಿಂದ ವಿಮೆ ಪಾಲಿಸಿಗಳನ್ನು ಮಾಡಿಸದ ಕಾರಣ ಸೌಮಿ ಚಕ್ರವರ್ತಿಯು ಆನ್‌ಲೈನ್ ಮೀಟಿಂಗ್ ವೇಳೆ ಸಹೋದ್ಯೋಗಿಗಳಿಗೆ ಬೆಂಗಾಲಿ ಭಾಷೆಯಲ್ಲಿ ಬೈದಿದ್ದರು. “ನೀನು ಕಳೆದ ಎರಡು ದಿನದಲ್ಲಿ ಎಷ್ಟು ಸೇವಿಂಗ್ ಹಾಗೂ ಕರೆಂಟ್ ಅಕೌಂಟ್ ಓಪನ್ ಮಾಡಿಸಿದ್ದೀಯಾ” ಎಂದು ಒಬ್ಬರಿಗೆ ಕೇಳುತ್ತಾರೆ. ಆಗ ಅವರು ಉತ್ತರಿಸುವ ಮೊದಲೇ ಮತ್ತೊಬ್ಬ ಸಹೋದ್ಯೋಗಿಗೆ ಬೈಯುತ್ತಾರೆ. “ನೀನು 15 ಖಾತೆ ಓಪನ್ ಮಾಡಿಸಬೇಕಿತ್ತು. ಕೇವಲ ಐದು ಮಾಡಿಸಿದ್ದೀಯಾ” ಎಂದು ಜೋರಾಗಿ ಕಿರುಚಿದ್ದಾರೆ.
ಇದನ್ನೂ ಓದಿ: Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು
ಸಹೋದ್ಯೋಗಿಗಳಿಗೆ ಬೈದ, ಜೋರಾಗಿ ಕಿರುಚಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಿರುವ ಕುರಿತು ಎಚ್‌ಡಿಎಫ್‌ಸಿ ಮಾಹಿತಿ ನೀಡಿದೆ. “ಸಹೋದ್ಯೋಗಿಗಳ ಜತೆ ವಿಚಿತ್ರವಾಗಿ ವರ್ತಿಸಿದ, ಅವರಿಗೆ ಅವಮಾನವಾಗುವ ರೀತಿ ಬೈದ ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಹಾಗೆಯೇ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ” ಎಂದು ಎಚ್‌ಡಿಎಫ್‌ಸಿ ಸರ್ವಿಸ್ ಮ್ಯಾನೇಜರ್ ಅಜಯ್ ಮಾಹಿತಿ ನೀಡಿದ್ದಾರೆ.
ದೇಶ
Viral Video: ಒಬ್ಬಳ ಕೈಯಲ್ಲಿ ಚಪ್ಪಲಿ, ಮತ್ತೊಬ್ಬಳ ಕೈಯಲ್ಲಿ ಬಾಟಲ್; ಮೆಟ್ರೋದಲ್ಲಿ ಜಡೆಜಗಳ
Viral Video: ದೆಹಲಿ ಮೆಟ್ರೋದಲ್ಲಿ ಸಹ ಪ್ರಯಾಣಿಕರು ಎಷ್ಟು ಜಗಳ ಬಿಡಿಸಿದರೂ ಇಬ್ಬರು ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ. ಇದರ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ರೈಲುಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಇತ್ತೀಚೆಗೆ, ಯುವಕತಿ-ಯುವತಿ ಲಿಪ್ ಲಾಕ್ ಮಾಡಿದ, ಯುವಕನೊಬ್ಬ ಎಲ್ಲರೆದುರೇ ಹಸ್ತಮೈಥುನ ಮಾಡಿಕೊಂಡ ವಿಡಿಯೊಗಳು ವೈರಲ್ ಆಗಿವೆ. ಈತ ಇಂತಹದ್ದೇ ಪ್ರಸಂಗ ನಡೆದಿದೆ. ಇಬ್ಬರು ಹೆಣ್ಣುಮಕ್ಕಳು ದೆಹಲಿ ಮೆಟ್ರೋದಲ್ಲಿ ಜಗಳವಾಡಿದ್ದು, ಈ ವಿಡಿಯೊ (Viral Video) ಈಗ ಭಾರಿ ವೈರಲ್ ಆಗಿದೆ.
ಹೌದು, ಚಲಿಸುತ್ತಿರುವ ಮೆಟ್ರೋದಲ್ಲಿಯೇ ಇಬ್ಬರು ಹೆಣ್ಣುಮಕ್ಕಳು ಜಗಳವಾಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಮಧ್ಯೆ ವಾಗ್ವಾದದೊಂದಿಗೆ ಜಗಳ ಆರಂಭವಾಗಿದೆ. ವಾಗ್ವಾದ ಅತಿರೇಕಕ್ಕೆ ಹೋಗಿದೆ. ಆಗ ಒಬ್ಬರು ಚಪ್ಪಲಿ ಕೈಗೆತ್ತಿಕೊಂಡಿದ್ದಾರೆ. ಇನ್ನೊಬ್ಬ ಮಹಿಳೆಯು ನೀರಿನ ಬಾಟಲ್ ಹಿಡಿದು ಎದುರಾಳಿಗೆ ಆವಾಜ್ ಹಾಕಿದ್ದಾರೆ. ಚಲಿಸುವ ರೈಲಿನಲ್ಲಿ ಹೀಗೆ ಇಬ್ಬರ ಮಧ್ಯೆ ಜಗಳವಾಗುತ್ತಿದ್ದರೆ, ಒಂದಷ್ಟು ಮಹಿಳೆಯರು ಜಗಳ ಬಿಡಿಸಲು ಯತ್ನಿಸಿದ್ದಾರೆ. ಮತ್ತೊಂದಿಷ್ಟು ಸ್ತ್ರೀಯರು ಸುಮ್ಮನೆ ಜಗಳ ನೋಡಿ ಮಜಾ ತೆಗೆದುಕೊಂಡಿದ್ದಾರೆ.
ಜಗಳದ ವಿಡಿಯೊ ಇಲ್ಲಿದೆ
After porn, Delhi Metro's has become a battleground 😂 pic.twitter.com/vNwHWsXOAY
— Hasna Zaroori Hai 🇮🇳 (@HasnaZarooriHai) June 5, 2023
“ಮೊದಲು ನೀನೇ ಜಗಳ ಶುರು ಮಾಡಿದ್ದು” ಎಂದು ಒಬ್ಬ ಮಹಿಳೆ ಎಂದರೆ, “ನಿನ್ನಿಂದಲೇ ಇದೆಲ್ಲ ಆಗಿದ್ದು” ಎಂದು ಮತ್ತೊಬ್ಬರು ಆರೋಪ ಮಾಡಿದ್ದಾರೆ. ಇದೇ ವೇಳೆ ಒಬ್ಬರು, ಮೈಕ್ ಮೂಲಕ ರೈಲು ಸಿಬ್ಬಂದಿಗೆ ಮತ್ತೊಬ್ಬ ಮಹಿಳೆ ಬಗ್ಗೆ ದೂರು ನೀಡಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳೆಯು, ತನ್ನ ಎದುರಾಳಿಯ ತಾಯಿ ಬಗ್ಗೆ ಅವಾಚ್ಯವಾಗಿ ಬೈದಿದ್ದಾರೆ. ಇದಕ್ಕೂ ಮತ್ತೊಬ್ಬ ಮಹಿಳೆ ಬೈಗುಳದ ಮೂಲಕವೇ ತಿರುಗೇಟು ನೀಡಿದ್ದಾರೆ. ಇನ್ನೂ ಸಿಟ್ಟು ಹೆಚ್ಚಾಗಿ, ಮಹಿಳೆಯು ನೀರು ಎರಚುವ ಮೂಲಕ ಸಿಟ್ಟು ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral News : ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್ ವಿಡಿಯೊ
ಹೀಗೆ, ಪುಟ್ಟ ಮಕ್ಕಳಂತೆ ಮೆಟ್ರೋದಲ್ಲಿ ಇಬ್ಬರು ಮಹಿಳೆಯರು ಜಗಳವಾಡಿದ ವಿಡಿಯೊ ವೈರಲ್ ಆಗುತ್ತಲೇ, ಜನ ತರಹೇವಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಹೀಗೆ ಮೆಟ್ರೋದಲ್ಲಿ ಜಗಳವಾಡುವುದು ಸರಿಯಲ್ಲ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು, “ಫುಲ್ ವಿಡಿಯೊ ನೋಡಿದೆ. ಇಬ್ಬರು ಹೆಣ್ಣುಮಕ್ಕಳು ಜಗಳ ಆಡುವುದು ನೋಡಿ ಮಜಾ ಬಂತು” ಎಂದು ಮತ್ತೊಬ್ಬರು ಹೇಳಿದ್ದಾರೆ. “ಜಗಳ ಮನರಂಜನೆಯಿಂದ ಕೂಡಿದೆ” ಎಂದೂ ಕೂಡ ಯುವತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ, ದೆಹಲಿ ಮೆಟ್ರೋದಲ್ಲಿ ಕಿಸ್ಸಿಂಗ್, ಫೈಟಿಂಗ್‌ನಂತಹ ಘಟನೆಗಳು ಜಾಸ್ತಿಯಾಗುತ್ತಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕ
Video Viral: ವಿರೋಧಿಗಳ ಒಂದು ಪತ್ರಕ್ಕೂ ಸಹಿ ಹಾಕಲ್ಲ ಎಂದ ಚಲುವರಾಯಸ್ವಾಮಿ; ಸಚಿವರ ಎಡವಟ್ಟು, ಸರ್ಕಾರಕ್ಕೆ ಇಕ್ಕಟ್ಟು!
N Chaluvarayaswamy: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ ಎನ್. ಚಲುವರಾಯಸ್ವಾಮಿ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಡೆದ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಮತದಾರರ ವಿರೋಧಿಗಳ ಯಾವ ಪತ್ರಕ್ಕೂ ಸಹಿ ಹಾಕುವುದಿಲ್ಲ ಹೇಳಿದ್ದಾರೆ.
ಮಂಡ್ಯ: ಕೃಷಿ ಸಚಿವ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಚಲುವರಾಯಸ್ವಾಮಿ ಅವರು ವಿವಾದಗಳ ಮೇಲೆ ವಿವಾದದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಗ್ಯಾರಂಟಿ (Congress Guarantee) ಯೋಜನೆಗಳನ್ನು ಚೀಪ್ ಗಿಮಿಕ್ ಎಂದು ನೀಡಿದ್ದ ಹೇಳಿಕೆ ವೈರಲ್ ಆಗಿರುವ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿರೋಧಿಗಳ ಒಂದು ಪತ್ರಕ್ಕೂ ನಾನು ಪೆನ್ನು ಹಿಡಿದು ಸಹಿ ಹಾಕಲ್ಲ ಎಂದು ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೊ ಸಹ ಈಗ ವೈರಲ್ (Video Viral) ಆಗಿದೆ.
ನಾಗಮಂಗಲ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಎನ್. ಚಲುವರಾಯಸ್ವಾಮಿ, ನನ್ನ ಬಳಿ ಕಾಮಗಾರಿಗಳ ಪಟ್ಟಿ ಹಿಡಿದು ಬರುವವರನ್ನು ನಗುತ್ತಾ ಮಾತನಾಡಿಸಿ ಕಳಿಸುತ್ತೇನೆ. ನಿಮ್ಮ ನಿಮ್ಮ ಊರಿನಲ್ಲಿ ಮುಂದಿನ ಯೋಜನೆಗಳ ಕುರಿತು ಯಾವುದು ಉತ್ತಮ ಎಂದು ನೀವೇ ನಿರ್ಧಾರ ಮಾಡಿ ಹೇಳಿ. ನಿಮ್ಮ ಗ್ರಾಮ ಪಂಚಾಯಿತಿಗೆ ಏನು ಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ. ನಾನು ಯಾವುದಕ್ಕೂ ತಲೆ ಹಾಕುವುದಿಲ್ಲ. ನಿಮ್ಮ ಅಭಿಪ್ರಾಯದ ಹೊರತು ಪೆನ್ನು ಹಿಡಿದು ಒಂದು ಪತ್ರಕ್ಕೂ ಸಹಿ ಹಾಕಲ್ಲ. ಈ ಬಗ್ಗೆ ನಿಮಗೆ ಆತಂಕವೂ ಬೇಡ, ಬೇಸರವೂ ಬೇಡ ಎಂದು ಹೇಳಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
ವೈರಲ್ ಆಗಿದ್ದ ಚೀಪ್ ಗಿಮಿಕ್ ವಿಡಿಯೊ!
ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ? ಇಂಥ ಚೀಪ್ ಗಿಮಿಕ್‌ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಹೇಳಿಕೆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲೀಗ ಹರಿದಾಡುತ್ತಿದೆ.
ವಿಡಿಯೊದಲ್ಲಿ ಏನಿದೆ?
“ಈ ಹಿಂದೆಯೂ ಸಹ ಹಲವಾರು ಉಚಿತ ಯೋಜನೆಗಳನ್ನು ನಾವೇ ವಿರೋಧ ಮಾಡಿಕೊಂಡು ಬಂದಿದ್ದೇವೆ. ಇದು ದೇಶದಲ್ಲಿಯೇ ಚರ್ಚೆ ಆಗಿರುವ ವಿಚಾರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮುಂದೆ ಫ್ರೀ.. ಫ್ರೀ.. ಎಂದು ಹೋದರೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ನಾವೂ ಚರ್ಚೆ ಮಾಡಿದ್ದೇವೆ. ಈಗ ನಾವುಗಳೂ ಅದೇ ಲೈನ್‌ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್ ಎಲ್ಲವೂ ಮುಖ್ಯವಾಗುತ್ತದೆ. ಸರ್ಕಾರ ಬಂದರೆ ತಾನೇ ನಾವೂ ಏನಾದರೂ ಮಾಡುವುದಕ್ಕೆ ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ಕೆಲಸ ಮಾಡುವುದಕ್ಕೆ ಆಗುವುದು ಎನ್ನುವ ದೃಷ್ಟಿ ಬಂದಾಗ ಅಂದು ಫಲಿತಾಂಶವೇ ಅನಿವಾರ್ಯ ಆಗುತ್ತದೆ. ಹಾಗಾಗಿ ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ (ಗ್ಯಾರಂಟಿ) ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಪಲ್ಲದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ, ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ?
ಇಲ್ಲಿ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆಯಲ್ಲಿ, “ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ” ಎಂದು ಹೇಳಿರುವುದು ಸಹ ಈಗ ಚರ್ಚೆಯ ಭಾಗವಾಗಿದೆ. ಅಂದರೆ, ಈ ರೀತಿಯ ಉಚಿತ ಗ್ಯಾರಂಟಿ ಘೋಷಣೆಯು ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ? ಚುನಾವಣೆ ಗೆಲ್ಲುವುದಕ್ಕೋಸ್ಕರ ಅನಿವಾರ್ಯವಾಗಿ ಘೋಷಣೆ ಮಾಡಿದರೇ? ಅಥವಾ ಹೈಕಮಾಂಡ್ ನಿರ್ಧಾರಕ್ಕೆ ಅವರು ತಲೆ ಬಾಗಬೇಕಾಯಿತೇ? ಎಂಬ ಬಗ್ಗೆಯೂ ಈಗ ಚರ್ಚೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್?
ಚುನಾವಣಾ ಪೂರ್ವ ಹೇಳಿಕೆ?
ಇದು ಚುನಾವಣೆ ನಡೆಯುವುದಕ್ಕಿಂತ ಮೊದಲು ಮಾಡಿದ ವಿಡಿಯೊ ಇರಬಹುದು ಎಂದೂ ಹೇಳಲಾಗುತ್ತಿದ್ದು, ಈ ಬಗ್ಗೆ ಈಗಿನ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ18 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ24 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?