ಮರ್ಲಿನ್‌ ಮನ್ರೋ | ನಟಿಗೆ ಸೇರಿದ ಖಾಸಗಿ ಪತ್ರ ಹರಾಜಿಗೆ! ಬೆಲೆ ಎಷ್ಟು ಗೊತ್ತೆ? - Vistara News

ವೈರಲ್ ನ್ಯೂಸ್

ಮರ್ಲಿನ್‌ ಮನ್ರೋ | ನಟಿಗೆ ಸೇರಿದ ಖಾಸಗಿ ಪತ್ರ ಹರಾಜಿಗೆ! ಬೆಲೆ ಎಷ್ಟು ಗೊತ್ತೆ?

ಮನ್ರೋ ತೀರಿಕೊಂಡು 60 ವರ್ಷಗಳೇ ಕಳೆದರೂ, ಆಕೆ ಬಳಸಿದ ವಸ್ತುಗಳ್ಯಾವುವೂ ತಮ್ಮ ಬೆಲೆ ಕಳೆದುಕೊಂಡಿಲ್ಲ. ಬದಲಾಗಿ ಹೆಚ್ಚಿಸಿಕೊಂಡು, ಬೇಡಿಕೆಯನ್ನೂ ಕುದುರಿಸಿಕೊಂಡು ಈಗ ಇದೇ ಡಿಸೆಂಬರ್‌ ತಿಂಗಳಲ್ಲಿ ಹರಾಜಾಗಲಿವೆ.

VISTARANEWS.COM


on

Marilyn Monroe letter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತನ್ನ ಮಾದಕ ಸೌಂದರ್ಯದಿಂದ ಜನಮಾನಸದಲ್ಲಿ ಶಾಶ್ವತ ನೆಲೆ ಗಿಟ್ಟಿಸಿ ದಂತಕತೆಯಾಗಿ ಹೋದ ಹಾಲಿವುಡ್‌ ತಾರೆ ಮಲ್ರಿನ್‌ ಮನ್ರೋಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಹುದಾದ ಸಮಯವೀಗ ಬಂದಿದೆ. ಮನ್ರೋ ಬಳಸಿದ ವಸ್ತುಗಳು ಹರಾಜಿಗೆ ಬರುವ ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಮೂಡಿಸುವ ಮೂಲಕ ಆಕೆ ಮತ್ತೆ ಸುದ್ದಿಯಲ್ಲಿದ್ದಾರೆ.

ಎಲ್ಲ ವಸ್ತುಗಳೂ ಬಳಸಿದ ಮೇಲೆ ತನ್ನ ಬೆಲೆಯನ್ನು ಕಳೆದುಕೊಂಡರೆ, ಸೆಲೆಬ್ರಿಟಿಗಳ ಕೈಗೆ ಸಿಗುವ ವಸ್ತುಗಳು ಮಾತ್ರ ಇದಕ್ಕೆ ವೈರುಧ್ಯವೆನಿಸುತ್ತವೆ. ಯಾಕೆಂದರೆ, ಸೆಲೆಬ್ರಿಟಿಗಳೆಂದರೆ ಸುಮ್ನೇನಾ, ಅವರೇನು ಬಳಸಿದರೂ ಆ ವಸ್ತು ತನ್ನ ಬೆಲೆಯನ್ನು ಏರಿಸಿಕೊಂಡುಬಿಡುತ್ತದೆ. ಈ ಬಾರಿ, ಈ ಸರದಿ ಮನ್ರೋಳದ್ದು. ಮನ್ರೋ ತೀರಿಕೊಂಡು ೬೦ ವರ್ಷಗಳೇ ಕಳೆದರೂ, ಆಕೆ ಬಳಸಿದ ವಸ್ತುಗಳ್ಯಾವುವೂ ತನ್ನ ಬೆಲೆ ಕಳೆದುಕೊಂಡಿಲ್ಲ. ಬದಲಾಗಿ ಹೆಚ್ಚಿಸಿಕೊಂಡು, ಬೇಡಿಕೆಯನ್ನೂ ಕುದುರಿಸಿಕೊಂಡು ಈಗ ಇದೇ ಡಿಸೆಂಬರ್‌ ತಿಂಗಳಲ್ಲಿ ಹರಾಜಾಗಲಿವೆ.

ದಿ ನ್ಯೂಯಾರ್ಕ್‌ ಪೋಸ್ಟ್‌ ಪ್ರಕಾರ, ಮನ್ರೋ ಬಳಸಿದ ಸುಮಾರು ೧೭೫ಕ್ಕೂ ಹೆಚ್ಚು ವಸ್ತುಗಳು ಹರಾಜಿಗೆ ಲಭ್ಯವಿದ್ದು, ಇದರಲ್ಲಿ ಆಕೆಗೆ ಸಂಬಂಧಿದ ಸಾಕಷ್ಟು ಖಾಸಗಿ ವಸ್ತುಗಳಿವೆ. ಆಕೆಯ ಅಪ್ಪ ಚಾರ್ಲ್ಸ್‌ ಸ್ಟ್ಯಾನ್ಲಿ ಜಿಫೋರ್ಡ್‌ ಆಕೆಗೆ ಬರೆದ ಪತ್ರವೂ ಇದ್ದು, ಈ ಪತ್ರದ ಜೊತೆಗೆ ಆತನ ಕೈಬರಹವಿರುವ ಗ್ರೀಟಿಂಗ್‌ ಕಾರ್ಡ್‌ ಕೂಡಾ ಇದೆ. ಈ ಪತ್ರವೊಂದೇ ಸುಮಾರು ೨೦೦೦ದಿಂದ ೩೦೦೦ ಡಾಲರ್‌ಗಳಿಗೆ ಬಿಕರಿಯಾಗಬಹುದು ಎಂದು ಅಂದಾಜಿಸಲಾಗಿದೆ.

Marilyn Monroe

ಗಿಫೋರ್ಡ್‌ ಹಾಗೂ ಮಗಳು ಮನ್ರೋ ನಡುವಿನ ಬಾಂಧವ್ಯಕ್ಕೆ ಸಂಬಂಧಿಸಿ ದೊರೆತ ಒಂದೇ ಒಂದು ವಸ್ತು ಇದಾಗಿದೆ. ಯಾಕೆಂದರೆ, ಮನ್ರೋ ತಂದೆ ಈತನೆಂಬ ಸತ್ಯ ಇತ್ತೀಚೆಗಷ್ಟೇ ಡಿಎನ್‌ಎ ಪರೀಕ್ಷೆಗಳ ಮೂಲಕ ಬಯಲಾಗಿತ್ತು. ಹಾಗಾಗಿ ಈ ಪತ್ರವೊಂದೇ ಆಕೆ ಹಾಗೂ ಆಕೆಯ ನಿಜವಾದ ತಂದೆಯ ನಡುವಿನ ಬಾಂಧವ್ಯಕ್ಕೆ ಕುರುಹಾಗಿದೆ ಎಂಬ ಕಾರಣಕ್ಕೆ ಇದು ಮಹತ್ವ ಪಡೆದುಕೊಂಡಿದೆ. ಈ ಪತ್ರ ಮನ್ರೋ ಆಸ್ಪತ್ರೆಯಲ್ಲಿದ್ದಾಗ ಕಳುಹಿಸಿದ್ದಾಗಿದ್ದು, ಇದರಲ್ಲಿ ದಿನಾಂಕ ಸರಿಯಾಗಿ ನಮೂದಾಗಿಲ್ಲ ಎಂದು ಹೇಳಲಾಗಿದೆ. ಆದರೂ, ಆಕೆಗೆ ಸೇರಿದ ವಸ್ತುಗಳ ಪೈಕಿ ಈ ಪತ್ರ ಭಾರೀ ಸುದ್ದಿಯಲ್ಲಿದೆ.

ಹರಾಜು ನಡೆಸಲಿರುವ ಜೂಲಿಯನ್ಸ್‌ ಆಕ್ಷನ್ಸ್‌ ಸಂಸ್ಥೆಯ ಪ್ರಕಾರ, ಈ ಗ್ರೀಟಿಂಗ್‌ ಕಾರ್ಡನ್ನು ಖುದ್ದು ಆಕೆಯ ಅಪ್ಪನೇ ಆಕೆಗೆ ಕೊಟ್ಟು ಹೋಗಿರವುದರಿಂದ ಇದು ಆಕೆಯ ಜೀವನ ಚರಿತ್ರೆಯ ಮುಖ್ಯ ಭಾಗವಾಗಿದೆ. ಬೇಗ ಗುಣಮುಖಳಾಗು ಎಂದು ಹೇಳುವ ಪುಟಾಣಿ ಕಾರ್ಡು, ಆಕೆಯ ಬಗೆಗೆ ಅಪ್ಪನಿಗಿದ್ದ ಕಾಳಜಿ ಪ್ರೀತಿಯನ್ನು ಹೇಳುತ್ತದೆ. ಹಾಗಾಗಿ ಇದು ಆಕೆಯ ಜೀವನ ಚರಿತ್ರೆಯ ಬಹುಮುಖ್ಯವಾದ ಅಧ್ಯಾಯ ಎಂದು ಅದು ಹೇಳಿದೆ.

ಇದನ್ನೂ ಓದಿ | Britain Royal Family | ಬ್ರಿಟನ್ ರಾಯಲ್ ಫ್ಯಾಮಿಲಿಯ ಸ್ಟೋರಿಗಳು ಸಖತ್ ಇಂಟರೆಸ್ಟಿಂಗ್‌!

ಮನ್ರೋ ವಸ್ತುಗಳು ಹರಾಜಿಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ಮೊದಲೂ ನಡೆದಿದ್ದು, ಹರಾಜು ಸಂಸ್ಥೆಗಳು ಈಕೆಯ ವಸ್ತುಗಳನ್ನಿಟ್ಟುಕೊಂಡು ಭಾರೀ ಲಾಭ ಮಾಡಿಕೊಂಡಿವೆ. ಆಕೆ ೧೯೫೬ರಲ್ಲಿ ಧರಿಸಿದ ಕಪ್ಪು ಬಣ್ಣದ ಸ್ಯಾಟಿನ್‌ ಬ್ಲೌಸ್‌ ನೆಕ್‌ಟೈ ಜೊತೆಗೆ ೪೩,೭೫೦ ಡಾಲರ್‌ಗಳಿಗೆ ಅಂದರೆ ೩೧.೪೦ ಲಕ್ಷ ರೂಪಾಯಿಗಳಿಗೆ ಮಾರಾಟವಾಗಿತ್ತು ಎಂದರೆ ಊಹಿಸಿ. ಇನ್ನು, ೧೯೬೧ರಲ್ಲಿ ಮನ್ರೋಗೆ ದಕ್ಕಿದ ಪ್ರತಿಷ್ಟಿತ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ೨೫೦,೦೦೦ ಡಾಲರ್‌ಗೆ ಅಂದರೆ ಅಂದಾಜು ೧.೭೫ ಕೋಟಿ ರೂಪಾಯಿಗಳಿಗೆ ೨೦೧೮ರಲ್ಲಿ ಮಾರಾಟವಾಗಿತ್ತು. ಆಕೆಯ ೧೯೫೬ರ ರೇವನ್‌ ಬ್ಲ್ಯಾಕ್‌ ಫೋರ್ಡ್‌ ಥಂಡರ್ಬರ್ಡ್‌ ೪೯೦,೦೦೦ ಡಾಲರ್‌ಗಳಿಗೆ ಅಂದರೆ ೩.೫೧ ಕೋಟಿ ರೂಪಾಯಿಗಳಿಗೆ ಮಾರಾಟ ಕಂಡಿತ್ತು.

ಮನ್ರೋ ೧೯೬೨ರಲ್ಲಿ ಮರಣ ಹೊಂದಿದ್ದು, ಆಕೆಯ ಸಿನಿಮಾಗಳು ೨೦೦ ಮಿಲಿಯನ್‌ ಡಾಲರ್‌ಗಳಷ್ಟು ದುಡ್ಡನ್ನು ಕೊಳ್ಳೆಹೊಡೆದಿವೆ. ಅಂದಿನ ಕಾಲದ ಅತ್ಯಂತ ಹೆಚ್ಚು ಸಂಬಾವನೆ ಪಡೆಯುತ್ತಿದ್ದ ನಾಯಕಿ ನಟಿ ಈಕೆಯಾಗಿದ್ದು, ಜಗತ್ತಿನಾದ್ಯಂತ ಮನೆಮಾತಾದ ನಟಿ. ೧೯೯೯ರ ಹಾಲಿವುಡ್‌ ಗೋಲ್ಡನ್‌ ಏಜ್‌ ಪಟ್ಟಿಯಲ್ಲಿ ದಂತಕತೆಯಾದ ನಾಯಕಿಯರ ಪಟ್ಟಿಯಲ್ಲಿ ಮನ್ರೋ ಅಗ್ರಗಣ್ಯೆ.

ಇದನ್ನೂ ಓದಿ | Star Winter Fashion | ಪರಿಸರ ಸ್ನೇಹಿ ಕ್ಯಾಲೆಂಡರ್‌ ಡ್ರೆಸ್‌ನಲ್ಲಿ ನಟಿ ಸೋನಂ ಕಪೂರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

Viral Video: ಜನರಿಗೆ ಆಸ್ಪತ್ರೆ ಎಂದರೆ ಒಂದು ನಂಬಿಕೆ ಇರುತ್ತದೆ. ಇಲ್ಲಿ ನಮ್ಮ ಆರೋಗ್ಯ ಸಮಸ್ಯೆ ನಿವಾರಣೆಯಾಗಿ ಖುಷಿಯಿಂದ ಮನೆಗೆ ಹೋಗಬಹುದು ಎಂದು. ಆದರೆ ಈಗ ವ್ಯವಸ್ಥೆ ಬದಲಾಗಿದೆ. ಆಸ್ಪತ್ರೆ ಎಂದರೆ ಹೆದರುವ ಕಾಲ ಬಂದಿದೆ. ಇಂತಹದೊಂದು ಘಟನೆ ಇತ್ತೀಚೆಗೆ ನಡೆದಿದೆ.ಆಸ್ಪತ್ರೆಗೆ ದಾಖಲಾದ ವೃದ್ಧ ರೋಗಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಹಲ್ಲೆ ಮಾಡಿದ್ದಾನೆ.. ಈ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕಿಡಿಕಾರಿದ್ದಾರೆ.

VISTARANEWS.COM


on

Viral Video
Koo

ಆಸ್ಪತ್ರೆಗಳೆಂದರೆ ನೋವು, ಸಾವನ್ನು ದೂರ ಮಾಡುವಂತಹ ಸ್ಥಳವೆಂದು ಜನರು ಭಾವಿಸುತ್ತಾರೆ. ಹಾಗಾಗಿ ತಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಳ್ಳಲು ಜನರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಆಸ್ಪತ್ರೆಯೊಳಗೆ ಕಾಲಿಟ್ಟಾಗ ಆತಂಕವಿದ್ದರೂ ಕೂಡ ನಮ್ಮ ನೋವು ಇಲ್ಲಿ ದೂರವಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಇಂತಹ ಆಸ್ಪತ್ರೆಗಳಲ್ಲಿ ಜನರನ್ನು ಸರಿಯಾಗಿ ನೋಡಿಕೊಳ್ಳದೆ ಅವರ ನೋವಿನ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡಿದರೆ ಜನರು ಹೋಗುವುದಾರೂ ಎಲ್ಲಿಗೆ? ಅಂತಹದೊಂದು ಘಟನೆ ಇದೀಗ ಆಸ್ಪತ್ರೆಯೊಂದರಲ್ಲಿ ನಡೆದಿದೆ. ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ವೈರಲ್ (Viral Video )ಆಗಿದೆ.

ಆಸ್ಪತ್ರೆಗೆ ದಾಖಲಾದ ವೃದ್ಧ ರೋಗಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಹಲ್ಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಈ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕಿಡಿಕಾರಿದ್ದಾರೆ.

ಈ ವಿಡಿಯೊ ಜೂನ್ 24ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಜೂನ್ 19ರಂದು ಘಟನೆ ನಡೆದಿರುವುದಾಗಿ ಸಿಸಿಟಿವಿ ದೃಶ್ಯವಾಳಿಗಳು ತೋರಿಸುತ್ತಿದೆ. ಹಾಗಾಗಿ ಆಸ್ಪತ್ರೆಯ ಹೆಸರು, ಸ್ಥಳ ನಿಖರವಾಗಿ ತಿಳಿದುಬಂದಿಲ್ಲ. ಆದರೆ ವಿಡಿಯೊದಲ್ಲಿ ಆಸ್ಪತ್ರೆಯ ಸಮವಸ್ತ್ರ ಧರಿಸಿರುವ ವಯೋವೃದ್ಧ ರೋಗಿ ಒಬ್ಬರು ಹಾಸಿಗೆಯ ಮೇಲೆ ಮಲಗಿದ್ದರು. ಅಲ್ಲಿಗೆ ಪರದೆ ಸರಿಸುತ್ತಾ ಬಂದ ಸಿಬ್ಬಂದಿ ಪರದೆಯನ್ನು ಮುಚ್ಚಿ ಆ ವೃದ್ಧನ ಹೊಟ್ಟೆಗೆ ಮೊಣಕೈಯಿಂದ ಹೊಡೆದಿದ್ದಾರೆ. ನಂತರ ಸಿಸಿಟಿವಿ ಕ್ಯಾಮರಾವನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಆ ದುಷ್ಟ ಸಿಬ್ಬಂದಿಯ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ:Viral Video: ಶಾಪಿಂಗ್‌ ಮಾಲ್‌ನ ಆಟಿಕೆ ರೈಲು ಪಲ್ಟಿಯಾಗಿ ಬಾಲಕ ಸಾವು

ಆದರೆ ಈ ವಿಡಿಯೊವನ್ನು ಪ್ರೊ. ಸುಧಾಂಶು ತ್ರಿವೇದಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, “ಜನರು ವೈದ್ಯರಿಗೆ ದೇವರ ಸ್ಥಾನ ನೀಡಿದ್ದಾರೆ. ಆದರೆ ಇಲ್ಲಿ ವೈದ್ಯರು ದೆವ್ವದ ರೂಪದಲ್ಲಿದ್ದಾರೆ ನೋಡಿ” ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ. ಇದು ಪೋಸ್ಟ್ ಆಗುತ್ತಿದ್ದಂತೆ ಹಲವು ಜನರು ಸಿಬ್ಬಂದಿಯ ಅಮಾನವೀಯ ಕೃತ್ಯದ ವಿರುದ್ಧ ಕಿಡಿಕಾರಿದ್ದಾರೆ. ಮತ್ತು ಇದು ವೈದ್ಯರಲ್ಲ ಆಸ್ಪತ್ರೆ ಸಿಬ್ಬಂದಿ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ಹಾಗೇ ಇನ್ನೊಬ್ಬರು ಎಲ್ಲಾ ವೈದ್ಯರು ದೇವರಲ್ಲ, ಅವರಲ್ಲಿ ಕೆಟ್ಟವರಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಕೆಲಸದಿಂದ ತೆಗೆಯಬೇಕು. ಅವರು ದೆವ್ವಗಳೆಂದು ಕರೆಸಿಕೊಳ್ಳಲು ಅರ್ಹರು ಎಂದು ಕಿಡಿಕಾರಿದ್ದಾರೆ.ಇನ್ನೂ ಕೆಲವರು ಇದು ವೈದ್ಯರಲ್ಲ, ಸರಿಯಾಗಿ ತಿಳಿಯದೆ ವೈದ್ಯರನ್ನು ನಿಂದಿಸುವುದು ತಪ್ಪಾಗುತ್ತೆ ಎಂದು ತಿಳಿಸಿದ್ದಾರೆ.

Continue Reading

ದೇಶ

Rahul Gandhi: ಸಂಸತ್‌ ಅಧಿವೇಶನದಲ್ಲಿ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಚಕ್ಕರ್?

Rahul Gandhi: ಸಂಸತ್‌ ಅಧಿವೇಶನ ಆರಂಭವಾಗುವ ಮೊದಲು ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡುವುದು ವಾಡಿಕೆ. ಆದರೆ, ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ರಾಷ್ಟ್ರಗೀತೆ ಹಾಡುವಾಗ ರಾಹುಲ್‌ ಗಾಂಧಿ ಅವರು ಗೈರಾಗಿದ್ದರು ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಕುರಿತ ವಿಡಿಯೊ ವೈರಲ್‌ ಆಗಿದೆ. ಇದಕ್ಕೆ ಕಾಂಗ್ರೆಸ್‌ ನಾಯಕರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

VISTARANEWS.COM


on

Rahul Gandhi
Koo

ನವದೆಹಲಿ: ಸೋಮವಾರದಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Session 2024) ಆರಂಭವಾಗಿದ್ದು, ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ 280 ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು, ನರೇಂದ್ರ ಮೋದಿ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಂವಿಧಾನದ ಪ್ರತಿಯನ್ನು ತೋರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಸಂಸತ್‌ ಅಧಿವೇಶನದ ವೇಳೆ ರಾಷ್ಟ್ರಗೀತೆ ಹಾಡುವಾಗ ರಾಹುಲ್‌ ಗಾಂಧಿ ಗೈರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಹೌದು, ಸಂಸತ್‌ ಅಧಿವೇಶನ ಆರಂಭವಾಗುವ ಮೊದಲು ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡುವುದು ವಾಡಿಕೆ. ಆದರೆ, ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ರಾಷ್ಟ್ರಗೀತೆ ಹಾಡುವಾಗ ರಾಹುಲ್‌ ಗಾಂಧಿ ಅವರು ಗೈರಾಗಿದ್ದರು ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆಂಧ್ರಪ್ರದೇಶ ಬಿಜೆಪಿ ಉಪಾಧ್ಯಕ್ಷ ವಿಷ್ಣು ಕುಮಾರ್‌ ರೆಡ್ಡಿ ಅವರು ವಿಡಿಯೊ ಒಂದನ್ನು ಪೋಸ್ಟ್‌ ಮಾಡಿದ್ದು, “ರಾಹುಲ್‌ ಗಾಂಧಿ ಅವರು ಭಾರತದ ರಾಷ್ಟ್ರಗೀತೆಗಿಂತ ದೊಡ್ಡವರು ಎಂಬುದಾಗಿ ಭಾವಿಸಿದ್ದಾರೆ. ರಾಷ್ಟ್ರಗೀತೆ ಮುಗಿದ ಬಳಿಕ ಅವರು ಸಂಸತ್‌ಗೆ ತಡವಾಗಿ ಬಂದಿದ್ದಾರೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದ್ದಾರೆ.

ರಾಹುಲ್‌ ಗಾಂಧಿ ಅವರು ಸಂಸತ್‌ ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ಹಾಡುವಾಗ ಇರಲಿಲ್ಲ ಎಂಬ ಆರೋಪ ಕೇಳಿಬಂದು, ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ರಾಹುಲ್‌ ಗಾಂಧಿ ಅವರು ರಾಷ್ಟ್ರಗೀತೆ ಹಾಡುವ ಉಪಸ್ಥಿತರಿದ್ದರು. ಅವರು ಕೂಡ ಎದ್ದು ನಿಂತು ರಾಷ್ಟ್ರಗೀತೆ ಹಾಡಿ, ಗೌರವ ನೀಡಿದ್ದಾರೆ. ಇದೆಲ್ಲ ಬಿಜೆಪಿ ನಾಯಕರು, ಐಟಿ ಸೆಲ್‌ ಹರಡಿಸುತ್ತಿರುವ ಸುಳ್ಳು ಸುದ್ದಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದಕ್ಕೆ ಹೀಗೆ ಸುಳ್ಳು ಅನುಭವಿಸುತ್ತಿದ್ದಾರೆ” ಎಂದು ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರು ಬಿಳಿ ಟಿ ಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಧರಿಸಿ ಸಂಸತ್‌ ಅಧಿವೇಶನಕ್ಕೆ ಹಾಜರಾಗಿದ್ದರು. ಅವರು ರಾಷ್ಟ್ರಗೀತೆ ಹಾಡುವಾಗ ಉಪಸ್ಥಿತರಿದ್ದರು. ಸಂಸತ್‌ ಟಿವಿ ಲೋಗೊ ರಾಹುಲ್‌ ಗಾಂಧಿ ಅವರ ಮುಖದ ಮೇಲೆ ಇರುವುದರಿಂದ ವೈರಲ್‌ ಆಗಿರುವ ವಿಡಿಯೊದಲ್ಲಿ ರಾಹುಲ್‌ ಗಾಂಧಿ ಕಾಣಿಸುತ್ತಿಲ್ಲ. ಬಿಜೆಪಿ ಐಟಿ ಸೆಲ್‌ ಹರಡಿಸುವ ಸುಳ್ಳು ಸುದ್ದಿಗಳನ್ನು ಜನ ನಂಬುವುದಿಲ್ಲ ಎಂಬುದಾಗಿ ಫೋಟೊ ಸಮೇತ ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Continue Reading

Latest

Viral Video: ಶಾಪಿಂಗ್‌ ಮಾಲ್‌ನ ಆಟಿಕೆ ರೈಲು ಪಲ್ಟಿಯಾಗಿ ಬಾಲಕ ಸಾವು

Viral Video: ಮಕ್ಕಳ ಚಿಕ್ಕಪುಟ್ಟ ಖುಷಿಯಾಗಿ ತಂದೆ-ತಾಯಂದಿರೂ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಆದರೆ ಇದು ಅವರ ಪ್ರಾಣಕ್ಕೆ ಒಮ್ಮೊಮ್ಮೆ ಕುತ್ತು ತಂದೊಡ್ಡಬಹುದು. ಚಂಡೀಗಢ್ ನ ಮಾಲ್ ನಲ್ಲಿ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಬಾಲಕ ಆಟಿಕೆ ರೈಲಿನ ಬೋಗಿ ಉರುಳಿಬಿದ್ದು ಸಾವನಪ್ಪಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video )ಆಗಿದೆ. ಆತ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಇಷ್ಟಕ್ಕೇ ಅನಾಹುತ ಸಂಭವಿಸಿದೆ.

VISTARANEWS.COM


on

Viral Video
Koo

ಚಂಡೀಗಢ: ಸಾಮಾನ್ಯವಾಗಿ ಪೋಷಕರು ಮಕ್ಕಳ ಮನೋರಂಜನೆಗಾಗಿ ಮಾಲ್‌ಗಳಿಗೆ ಹೋಗಿ ಅಲ್ಲಿ ಆಟಿಕೆಗಳ ಜೊತೆ ಮಕ್ಕಳನ್ನು ಆಟವಾಡಿಸುತ್ತಾರೆ. ಆದರೆ ಈ ಆಟಿಕೆಗಳು ಕೆಲವೊಮ್ಮೆ ಮಕ್ಕಳ ಜೀವಕ್ಕೆ ಆಪತ್ತು ತರಬಹುದು. ಅಂತಹದೊಂದು ಘಟನೆ ಇದೀಗ ಚಂಡೀಗಢ್ ನ ಮಾಲ್‌ನಲ್ಲಿ ನಡೆದಿದೆ. ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಟಿಕೆ ರೈಲಿನ ಬೋಗಿ ಉರುಳಿಬಿದ್ದು 10 ವರ್ಷದ ಬಾಲಕ ಸಾವನಪ್ಪಿದ ಘಟನೆ ಚಂಡೀಗಢದ ಮಾಲ್ ವೊಂದರಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video )ಆಗಿದೆ.

ಶಹಬಾಜ್ (10 ವರ್ಷ) ಸಾವನಪ್ಪಿದ ಬಾಲಕ. ಈತ ಶನಿವಾರ ಜೂನ್ 22ರಂದು ರಾತ್ರಿ ತನ್ನ ಕುಟುಂಬದವರ ಜೊತೆ ಎಲಾಂಟೆ ಮಾಲ್ ಗೆ ಬಂದಿದ್ದಾನೆ. ಅಲ್ಲಿ ಆತ ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಆಗ ರೈಲಿನ ಬೋಗಿ ಪಲ್ಟಿಯಾಗಿ ಬಾಲಕ ಸಾವನಪ್ಪಿದ್ದಾನೆ. ಆತನ ಜೊತೆ ಕುಳಿತಿದ್ದ ಆತನ ಸೋದರ ಸಂಬಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕ ಕೊನೆಯ ಕಂಪಾರ್ಟ್ ಮೆಂಟ್ ನಲ್ಲಿ ಕುಳಿತಿದ್ದು, ಆತ ಕಿಟಕಿಯಿಂದ ಹೊರಗೆ ವಾಲಿದ್ದಾನೆ. ಆಗ ರೈಲು ತಿರುವು ಪಡೆಯುತ್ತಿದ್ದಾಗ ಪಲ್ಟಿಯಾಗಿ ಬಿದ್ದು ಬಾಲಕನ ತಲೆಗೆ ತೀವ್ರವಾದ ಪೆಟ್ಟಾಗಿದೆ. ಇದರಿಂದ ಆತ ಸಾವನಪ್ಪಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

ಈ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿ ರೈಲಿನ ಚಾಲಕನನ್ನು ಬಂಧಿಸಿದ್ದಾರೆ ಹಾಗೂ ಆಟಿಕೆ ರೈಲನ್ನು ವಶಕ್ಕೆ ಪಡೆದಿದ್ದಾರೆ. ಹಾಗೇ ಮಾಲ್ ನ ಆಡಳಿತ ಮಂಡಳಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

ದೇಶ

Divorce: ತೂಕ ಇಳಿಸಿಕೊಳ್ಳಲು ನೆರವಾಗದ ‘ಜಿಮ್‌ ಟ್ರೇನರ್‌’ ಗಂಡನಿಗೆ ಮಹಿಳೆ ಡಿವೋರ್ಸ್‌!

Divorce: ಮಹಿಳೆ ಹಾಗೂ ಜಿಮ್‌ ಟ್ರೇನರ್‌ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೆಂಡತಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಜಿಮ್‌ ಟ್ರೇನರ್‌ ಹರಸಾಹಸ ಪಟ್ಟಿದ್ದಾರೆ. ಪತ್ನಿಯನ್ನು ಜಿಮ್‌ಗೆ ಕರೆಸಿಕೊಂಡು ಟ್ರೇನಿಂಗ್‌ ಕೊಟ್ಟಿದ್ದಾರೆ. ಜಿಮ್‌ನಲ್ಲಿ ಕಸರತ್ತು ನಡೆಸಿದರೂ ಮಹಿಳೆಯ ತೂಕವು 75 ಕೆ.ಜಿಯೇ ಇದೆ. ಮಾತು ಉಳಿಸಿಕೊಳ್ಳಲು ಆಗದ ಪತಿಯ ಜತೆ ಸಂಸಾರ ಮಾಡಬಾರದು, ಆತನಿಂದ ದೂರವಾಗಬೇಕು ಎಂಬುದಾಗಿ ಮಹಿಳೆ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Divorce
ಸಾಂದರ್ಭಿಕ ಚಿತ್ರ.
Koo

ಲಖನೌ: ಭಾರತ ಸೇರಿ ಜಗತ್ತಿನಾದ್ಯಂತ ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಗಳಿಗೆ ಭಿನ್ನಾಭಿಪ್ರಾಯ ಉಂಟಾಗಿ, ವಿಚ್ಛೇದನ (Divorce) ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಿಳೆಯೊಬ್ಬರು ತೂಕ ಇಳಿಸಿಕೊಳ್ಳಲು ನೆರವಾಗಲಿಲ್ಲ, ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಜಿಮ್‌ ಟ್ರೇನರ್‌ ಆಗಿರುವ ಪತಿಯಿಂದ ವಿಚ್ಛೇದನ ಬಯಸಿದ್ದಾರೆ. ವಿಚ್ಛೇದನ ಬಯಸಿ ಅವರು ಆಗ್ರಾದಲ್ಲಿರುವ ಕೌಟುಂಬಿಕ ಸಮಾಲೋಚನಾ ಕೇಂದ್ರಕ್ಕೆ (Family Counselling Centre) ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆಯು ಸ್ವಲ್ಪ ದಪ್ಪಗಿದ್ದು, ಅವರು ಜಿಮ್‌ ಟ್ರೇನರ್‌ನನ್ನೇ ಮದುವೆಯಾಗಿದ್ದರು. ಜಿಮ್‌ ಟ್ರೇನರ್‌ ಕಟ್ಟುಮಸ್ತಾದ ದೇಹಕ್ಕೆ ಮರುಳಾಗಿ ಅವರು ಮದುವೆಯಾಗಿದ್ದರು. ಮದುವೆಯಾಗುವ ವೇಳೆ ಜಿಮ್‌ ಟ್ರೇನರ್‌ಗೆ ಅವರು ಒಂದು ಕಂಡಿಷನ್‌ ಹಾಕಿದ್ದರು. ಮದುವೆಯಾದ ಬಳಿಕ ನಾನು ತೆಳ್ಳಗಾಗಲು ಸಹಕರಿಸಬೇಕು, ಜಿಮ್‌ನಲ್ಲಿ ತರಬೇತಿ ನೀಡಬೇಕು ಎಂಬುದಾಗಿ ಅವರು ಷರತ್ತು ಹಾಕಿದ್ದರು. ಮದುವೆಗೂ ಮುನ್ನ ಜಿಮ್‌ ಟ್ರೇನರ್‌ ಇದೇನ್‌ ಮಹಾ ಎಂದು ಒಪ್ಪಿಕೊಂಡಿದ್ದರು. ಆದರೆ, ಮದುವೆಯಾದ ಬಳಿಕ ತೂಕ ಇಳಿಸಿಕೊಳ್ಳಲು ಪತಿ ನೆರವು ನೀಡುತ್ತಿಲ್ಲ ಎಂಬುದು ಮಹಿಳೆಯ ಆರೋಪವಾಗಿದೆ.‌

Lawyer Got Divorce In Gujarat

ಮದುವೆ ಬಳಿಕ ನಡೆದಿದ್ದೇನು?

ಮಹಿಳೆ ಹಾಗೂ ಜಿಮ್‌ ಟ್ರೇನರ್‌ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೆಂಡತಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಜಿಮ್‌ ಟ್ರೇನರ್‌ ಹರಸಾಹಸ ಪಟ್ಟಿದ್ದಾರೆ. ಪತ್ನಿಯನ್ನು ಜಿಮ್‌ಗೆ ಕರೆಸಿಕೊಂಡು ಟ್ರೇನಿಂಗ್‌ ಕೊಟ್ಟಿದ್ದಾರೆ. ಜಿಮ್‌ನಲ್ಲಿ ಕಸರತ್ತು ನಡೆಸಿದರೂ ಮಹಿಳೆಯ ತೂಕವು 75 ಕೆ.ಜಿಯೇ ಇದೆ. ಮದುವೆಗೆ ಮುನ್ನ ಎಷ್ಟು ಕೆ.ಜಿ ಇದ್ದರೋ, ಈಗಲೂ ಅಷ್ಟೇ ಇದ್ದಾರೆ. ಇದರಿಂದ ಕುಪಿತಗೊಂಡ ಅವರು ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ನನ್ನ ಆಸೆಯನ್ನು ಈಡೇರಿಸುವಲ್ಲಿ, ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಪತಿ ವಿಫಲನಾಗಿದ್ದಾನೆ. ಹಾಗಾಗಿ ನನಗೆ ವಿಚ್ಛೇದನ ಬೇಕಾಗಿದೆ ಎಂಬುದಾಗಿ ಅವರು ಕೌಟುಂಬಿಕ ಸಮಾಲೋಚನಾ ಕೇಂದ್ರದಲ್ಲಿ ಹೇಳಿಕೆ ನೀಡಿದ್ದಾರೆ.

“ಇದೇನು ದೊಡ್ಡ ವಿಷಯವಲ್ಲ. ಮಾತನಾಡಿ ಬಗೆಹರಿಸಿಕೊಳ್ಳಿ” ಎಂಬುದಾಗಿ ಕೌಟುಂಬಿಕ ಸಮಾಲೋಚನಾ ಕೇಂದ್ರದಲ್ಲಿ ಸಮಾಲೋಚಕರು ಸಲಹೆ ನೀಡಿದರೂ ಮಹಿಳೆಯು ಅದಕ್ಕೆ ಒಪ್ಪಿಲ್ಲ. “ನನಗೆ ಕೊಟ್ಟ ಮಾತನ್ನು ಗಂಡ ಉಳಿಸಿಕೊಂಡಿಲ್ಲ. ಇಂತಹ ಮನಸ್ಥಿತಿ ಇರುವ ಪತಿಯ ಜತೆ ಸಂಸಾರ ಮಾಡಲು ನನಗೆ ಇಷ್ಟವಿಲ್ಲ” ಎಂಬುದಾಗಿ ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಇನ್ನು. ಆಕೆಯ ಪತಿಯು, “ನಾನು ಪತ್ನಿಯ ಜತೆ ಸಂಸಾರ ಮಾಡಲು ಯಾವುದೇ ತೊಂದರೆ ಇಲ್ಲ. ವಿಚ್ಛೇದನ ಕೊಡಲು ಮನಸ್ಸಿಲ್ಲ” ಎಂದಿದ್ದಾರೆ. ಇನ್ನೊಂದು ಸಲ ಸಮಾಲೋಚನೆ ನಡೆಸಲು ಸಮಾಲೋಚಕರು ಮತ್ತೊಂದು ದಿನ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆಗಲಾದರೂ ಪತ್ನಿಯು ಮನಸ್ಸು ಬದಲಿಸಬಹುದೇನೋ ಎಂಬ ನಿರೀಕ್ಷೆಯಲ್ಲಿ ಜಿಮ್‌ ಟ್ರೇನರ್‌ ಇದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Niveditha Gowda: ಡಿವೋರ್ಸ್‌ ಬಳಿಕ ಹೊಸ ರೀಲ್ಸ್‌ ಹಂಚಿಕೊಂಡ ನಿವೇದಿತಾ: ಲೈಕ್ಸ್‌ ಸುರಿಮಳೆ!

Continue Reading
Advertisement
cm siddaramaiah DK Shivakumar power fight
ಪ್ರಮುಖ ಸುದ್ದಿ4 mins ago

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

Viral Video
Latest6 mins ago

Viral Video: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

LeT Associate killed
ದೇಶ13 mins ago

LeT Associate killed: ಪ್ರಚೋದನಕಾರಿ ಧರ್ಮ ಪ್ರಚಾರಕ ಖ್ವಾರಿ ಇದ್ರಿಸ್‌ ಹತ್ಯೆ; ವಿಷಪೂರಿತ ಸೂಜಿಯಿಂದ ದಾಳಿ!

Udhayanidhi Stalin
ಕರ್ನಾಟಕ40 mins ago

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

AFG vs BAN
ಕ್ರೀಡೆ44 mins ago

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

Mamata Banerjee
ದೇಶ1 hour ago

Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

physical abuse mandya
ಕ್ರೈಂ1 hour ago

Physical Abuse: ಅಪ್ರಾಪ್ತ ಮಗಳನ್ನು ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ

Paris Olympics 2024
ಕ್ರೀಡೆ2 hours ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

Hunger Strike
ದೇಶ2 hours ago

Hunger Strike: ಉಪವಾಸ ಸತ್ಯಾಗ್ರಹ ಮಾಡ್ತಿದ್ದ ದಿಲ್ಲಿ ಸಚಿವೆ ಆಸ್ಪತ್ರೆಗೆ ದಾಖಲು

Suraj Revanna Case
ಪ್ರಮುಖ ಸುದ್ದಿ2 hours ago

Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌