Video: ಸತ್ತು ಹೋದ ಮರಿಯನ್ನು ಎಚ್ಚರಗೊಳಿಸಲು ಅಮ್ಮ ಆನೆಯ ಹರಸಾಹಸ; ಮನ ಮಿಡಿಯುವ ದೃಶ್ಯ - Vistara News

ವೈರಲ್ ನ್ಯೂಸ್

Video: ಸತ್ತು ಹೋದ ಮರಿಯನ್ನು ಎಚ್ಚರಗೊಳಿಸಲು ಅಮ್ಮ ಆನೆಯ ಹರಸಾಹಸ; ಮನ ಮಿಡಿಯುವ ದೃಶ್ಯ

ವಿಡಿಯೊ ಅಸ್ಸಾಂನ ಕಾಡೊಂದರಲ್ಲಿ ಚಿತ್ರೀಕರಣವಾಗಿದ್ದು. ಸಣ್ಣದಾದ ತೊರೆ ಹರಿಯುತ್ತಿದೆ. ಅಲ್ಲಿ ಎರಡು ಆನೆಗಳು ಇದ್ದಾವೆ. ಹಾಗೆ ಪುಟ್ಟ ಮರಿ ಆನೆಯೊಂದು ಶವವಾಗಿ ಬಿದ್ದಿದೆ. ಅದನ್ನು ಎಬ್ಬಿಸಲು ಅಮ್ಮ ಆನೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ.

VISTARANEWS.COM


on

Mother Elephant Tries To Revive Dead Calf
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಮ್ಮನ ಜೀವ ಅದರ ಮಕ್ಕಳಲ್ಲೇ ಇರುತ್ತದೆ. ಮಾತೃ ಹೃದಯವೆಂದರೆ ಅದು ಬಹುಶಃ ಮನುಷ್ಯರಿಗೆ ಮಾತ್ರ ಇರುವಂಥದ್ದಲ್ಲ. ಪ್ರಾಣಿಗಳಿಗೂ ತಮ್ಮ ಮಕ್ಕಳ ಬಗ್ಗೆ ಪ್ರೀತಿ, ಮಮಕಾರ, ವಾತ್ಸಲ್ಯ ಇದ್ದೇ ಇರುತ್ತದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಆನೆಯ ವಿಡಿಯೊ ನೋಡಿದರೆ, ಪ್ರಾಣಿಗಳು ತಮ್ಮ ಮರಿ/ಕರುಗಳಿಗಾಗಿ ಹೇಗೆಲ್ಲ ಮಿಡಿಯುತ್ತವೆ ಎಂಬುದು ಗೊತ್ತಾಗುತ್ತದೆ.

ಈ ವಿಡಿಯೊ ಅಸ್ಸಾಂನ ಕಾಡೊಂದರಲ್ಲಿ ಚಿತ್ರೀಕರಣವಾಗಿದ್ದು. ಸಣ್ಣದಾದ ತೊರೆ ಹರಿಯುತ್ತಿದೆ. ಅಲ್ಲಿ ಎರಡು ಆನೆಗಳು ಇದ್ದಾವೆ. ಹಾಗೆ ಪುಟ್ಟ ಮರಿ ಆನೆಯೊಂದು ಶವವಾಗಿ ಬಿದ್ದಿದೆ. ಅದನ್ನು ಎಬ್ಬಿಸಲು ಅಮ್ಮ ಆನೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಮುದ್ದಾದ ಆನೆ ಮರಿ ಜೀವವಿಲ್ಲದೆ ಬಿದ್ದಿರುವುದು, ಅದನ್ನು ಹೇಗಾದರೂ ಎಚ್ಚರ ಗೊಳಿಸಲು ಅಮ್ಮ ಆನೆ ಕಣ್ತುಂಬಿಕೊಂಡು ಪ್ರಯತ್ನ ಮಾಡುತ್ತಿರುವುದನ್ನು ನೋಡಿ ಅನೇಕ ನೆಟ್ಟಿಗರು ಕಂಬನಿಮಿಡಿದಿದ್ದಾರೆ. ಆನೆ ಮರಿ ನೀರಿನಲ್ಲಿಯೇ ಬಿದ್ದಿದೆ. ಆದರೂ ಅದರ ಅಮ್ಮ ತನ್ನ ಸೊಂಡಿಲಲ್ಲಿ ಸ್ವಲ್ಪ ನೀರನ್ನು ತೆಗೆದು, ಅದರ ಮೈಮೇಲೆ ಸಿಂಪಡಿಸುತ್ತದೆ. ಎಚ್ಚರ ತಪ್ಪಿ ಬಿದ್ದಿದ್ದರೆ ಅದು ಏಳಲಿ ಎಂಬ ಆಸೆ, ಆ ತಾಯಿ ಜೀವಕ್ಕೆ.
ಈ ವಿಡಿಯೊವನ್ನು ಭಾರತದ ಅರಣ್ಯಾಧಿಕಾರಿ ಸುಸಾಂತಾ ನಂದಾ ಅವರು ಶೇರ್ ಮಾಡಿಕೊಂಡಿದ್ದಾರೆ.

ಆನೆ ಮರಿ ಸತ್ತು ಒಂದು ದಿನವೇ ಕಳೆದಿದ್ದರೂ, ಅದು ಬದುಕಿ ಬರಲೆಂಬ ಆಸೆ ಅಮ್ಮ ಆನೆಗೆ ತೀರುತ್ತಿಲ್ಲ. ಅದರ ಮೃತದೇಹವನ್ನು ಬಿಟ್ಟು ಕದಲುತ್ತಿಲ್ಲ. ಆನೆ ಮರಿ ಮೃತಪಟ್ಟಿದ್ದು ಬೇರೆ ಜಾಗದಲ್ಲಿ. ಅದನ್ನು ಅಮ್ಮ ಆನೆ ಎರಡು ಕಿಮೀ ದೂರ ತೆಗೆದುಕೊಂಡು ಬಂದು ಈ ತೊರೆಯ ಬಳಿ ಹಾಕಿಕೊಂಡಿದೆ. ಅದನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸುಸಾಂತಾ ನಂದಾ ತಿಳಿಸಿದ್ದಾರೆ. ‘ಈ ದೃಶ್ಯ ನನ್ನ ಹೃದಯವನ್ನೇ ಮರುಗಿಸಿತು. ಮರಿ ಮೃತಪಟ್ಟಿದೆ, ಆದರೆ ಅಮ್ಮ ಅದನ್ನು ಬಿಟ್ಟು ಹೋಗುತ್ತಿಲ್ಲ’ ಎಂದಿದ್ದಾರೆ. ವಿಡಿಯೊ ನೋಡಿದ ನೆಟ್ಟಿಗರು ಕೂಡ ಬೇಸರ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

ಆಂಧ್ರಪ್ರದೇಶದಲ್ಲಿ 3 ಆನೆಗಳ ಸಾವು
ಆಂಧ್ರಪ್ರದೇಶದ ಚಿತ್ತೂರ್​ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಟ್ರಕ್​ ಡಿಕ್ಕಿಯಾಗಿ ಮೂರು ಆನೆಗಳು ಮೃತಪಟ್ಟಿವೆ. ಚಿತ್ತೂರ್​-ಪಾಲಾಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಜಗಮರ್ಲಾ ಎಂಬಲ್ಲಿ ಆನೆಗಳು ರಸ್ತೆ ದಾಟುತ್ತಿದ್ದವು. ಇದೇ ವೇಳೆ ಜೋರಾಗಿ ಬಂದ ಲಾರಿ ಆನೆಗಳಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯ ಡ್ರೈವಿಂಗ್​​ನಿಂದಾಗಿ ಮೂಕಪ್ರಾಣಿಗಳ ಜೀವ ಹೋಗಿದೆ. ನಾವು ಕೇಸ್​ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

Viral News: ಗಂಡ-ಹೆಂಡತಿಯ ಸಂಬಂಧ ಚೆನ್ನಾಗಿದ್ದರೆ ಮನೆಯಲ್ಲಿ ಸುಖ ಶಾಂತಿ ಇರುತ್ತದೆ ಎನ್ನುತ್ತಾರೆ.ಇದು ಗಂಡಸಿನ ವೃತ್ತಿ ಜೀವನದ ಮೇಲೂ ಪ್ರಭಾವ ಬೀರುತ್ತದೆ. ಕೆಲವರು ಹೆಂಡತಿಯನ್ನು ಕಾಲ ಕಸದ ರೀತಿ ನೋಡಿದರೆ ಇನ್ನು ಕೆಲವರು ಶಿವನ ಹಾಗೇ ಹೆಂಡತಿಯೇ ಸರ್ವಸ್ವ ಅನ್ನುತ್ತಾರೆ. ಹೌದು ಹೆಂಡತಿಯನ್ನು ಅತೀಯಾಗಿ ಪ್ರೀತಿಸುವ ಗಂಡಂದಿರ ಪಟ್ಟಿ ಇಲ್ಲಿದೆ.

VISTARANEWS.COM


on

Viral News
Koo

ಎಷ್ಟೋ ಸಿನಿಮಾಗಳಲ್ಲಿ ಹೀರೊ ತಮ್ಮ ಕುಟುಂಬದವರ ಜೊತೆ ಅನ್ಯೋನ್ಯವಾಗಿರುವುದನ್ನು ನಾವು ನೋಡಿರುತ್ತೇವೆ ಮತ್ತು ಹೀರೊ ತನ್ನ ಪತ್ನಿ ಮತ್ತು ಮಕ್ಕಳ ಬಗ್ಗೆ ತೋರುವ ಕಾಳಜಿ ಕಂಡು ನಾವು ಖುಷಿ ಪಡುತ್ತೇವೆ. ಆದರೆ ಅದೇ ಜೋಡಿ ನಿಜ ಜೀವನದಲ್ಲಿ ದಂಪತಿಯಾದರೆ ಅದರ ನಡುವೆ ಅಷ್ಟೊಂದು ಅನ್ಯೋನ್ಯತೆ ಇರುವುದಿಲ್ಲ. ಅದು ನಮಗೆಲ್ಲರಿಗೂ ಗೊತ್ತು. ಯಾಕೆಂದರೆ ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಜನರ ಮನಗೆದ್ದ ಜೋಡಿಗಳಲ್ಲಿ ಕೆಲವು ನಿಜ ಜೀವನದಲ್ಲಿ ಬೇರೆಯಾಗಿದ್ದಾರೆ. ಆದರೆ ಎಲ್ಲಾ ಜೋಡಿ ಹಾಗಿಲ್ಲ. ಕೆಲವು ಸೆಲೆಬ್ರಿಟಿಗಳು ತಮ್ಮ ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಅಂತಹ ಸೆಲೆಬ್ರಿಟಿಗಳ ಬಗ್ಗೆ ಮಾಹಿತಿ ವೈರಲ್‌ (Viral News) ಆಗಿದೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ಜೂನ್ 29ರಂದು ಭಾರತ ಕ್ರಿಕೆಟ್ ತಂಡವು 17 ವರ್ಷಗಳ ನಂತರ ಐಸಿಸಿಟಿ 20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಈ ವೇಳೆ ಸಂಭ್ರಮಾಚರಣೆ ಬಹಳ ಅವಿಸ್ಮರಣೀಯವಾಗಿತ್ತು. ಆದರೆ ಆ ಕ್ಷಣ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಮತ್ತು ಹಾಗೂ ಮಗಳಿಗೆ ವಿಡಿಯೊ ಕರೆ ಮಾಡಿ ಗೆಲುವನ್ನು ಹಂಚಿಕೊಂಡರು. ಇದು ಲಕ್ಷಾಂತರ ಜನರ ಮನಸ್ಸನ್ನು ಸೆಳೆಯಿತು.

ಇನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಟ್ರೋಫಿಯನ್ನು ಅನುಷ್ಕಾಗೆ ಅರ್ಪಿಸಿ ಈ ದಂಪತಿ ನಡುವೆ ಪ್ರೀತಿ ಎಷ್ಟಿದೆ ಎಂಬುದನ್ನು ತೋರಿಸಿದ್ದಾರೆ.

ರಣವೀರ್ ಸಿಂಗ್ – ದೀಪಿಕಾ ಪಡುಕೋಣೆ

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್ ಚಿತ್ರರಂಗದ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಅವರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಜೋಡಿ ಹಕ್ಕಿಗಳ ಹಾಗೇ ಇರುತ್ತಾರೆ.

ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ರಣವೀರ್ ಸಿಂಗ್ ದೀಪಿಕಾ ಬಗ್ಗೆ ತಮ್ಮ ಭಾವನೆಗಳು ಮತ್ತು ಪ್ರೀತಿಯನ್ನು ಬಹಿರಂಗಪಡಿಸಿದಾಗ ಅವರು ಒಬ್ಬ ಉತ್ತಮ ಪತಿ ಎಂಬುದು ತಿಳಿಯುತ್ತದೆ. ಅವರು ತಮ್ಮ ಪತ್ನಿ ದೀಪಿಕಾ ಬಗ್ಗೆ ಮಾತನಾಡುವಾಗ ತಮಗೆ ಅವಳೊಬ್ಬಳೆ ಸಾಕು ಎಂಬ ರೀತಿಯಲ್ಲಿ ಮಾತನಾಡಿ ಎಲ್ಲರ ಹೃದಯವನ್ನು ಗೆದ್ದಿದ್ದರು.

Viral News

ವಿಕ್ಕಿ ಕೌಶಲ್- ಕತ್ರಿನಾ ಕೈಫ್

ವಿಕ್ಕಿ ಕೌಶಲ್ ಅವರು ಸಂದರ್ಶನವೊಂದರಲ್ಲಿ ತಮ್ಮ ಫೋನ್‌ನಲ್ಲಿರುವ ವಾಲ್ಪೇಪರ್ ಮೇಲೆ ಕತ್ರಿನಾ ಕೈಫ್ ಅವರ ಬಾಲ್ಯದ ಪೋಟೊ ಹಾಕಿಕೊಂಡಿದ್ದರು. ಆದರೆ ಅದು ಯಾರು ಎಂದು ಯಾರಿಗೂ ಮೊದಲು ತಿಳಿದಿರಲಿಲ್ಲ.

ಹಾಗಾಗಿ ಅವರು ಅದು ತಮ್ಮ ಪತ್ನಿ ಕತ್ರಿನಾ ಕೈಫ್ ಅವರ ಬಾಲ್ಯದ ಪೋಟೊ ಎಂದು ಹೇಳುವುದರ ಮೂಲಕ ಇವರು ಪತ್ನಿಯನ್ನು ಪ್ರೀತಿಸುವ ಪತಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಸೋನಾಕ್ಷಿ ಸಿನ್ಹಾ -ಜಹೀರ್ ಇಕ್ಬಾಲ್

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಇತ್ತೀಚೆಗೆ ವಿವಾಹವಾಗಿದ್ದು, ಆ ಮೂಲಕ ಬಾಲಿವುಡ್‌ನ ಹೊಸ ಜೋಡಿ ಎನಿಸಿಕೊಂಡಿದ್ದಾರೆ.

ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಜಹೀರ್ ತನ್ನ ಹಿಮ್ಮಡಿಗಳನ್ನು ಹಿಡಿದುಕೊಂಡು ಮಾಲ್‌ನಲ್ಲಿ ಕರೆದುಕೊಂಡು ಹೋಗುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಜಹೀರ್ ಇಕ್ಬಾಲ್, ಸೋನಾಕ್ಷಿ ಸಿನ್ಹಾ ಅವರಿಗೆ ಉತ್ತಮ ಪತಿ ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

ನಿಕ್ ಜೊನಾಸ್ ಮತ್ತು ಪ್ರಿಯಾಂಕಾ ಚೋಪ್ರಾ

ನಿಕ್ ಜೊನಾಸ್ ವಿದೇಶಿಗರಾದರೂ ಕೂಡ ತನ್ನ ಹೆಂಡತಿ ಮತ್ತು ಅವಳ ಸಂಸ್ಕೃತಿಯ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.

ನಿಕ್‌ ಕೂಡ ತಮ್ಮ ಪತ್ನಿಯ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಪ್ರೀತಿ, ಗೌರವ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಆ ಮೂಲಕ ಅವರು ಕೂಡ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಮುದ್ದಿನ ಗಂಡನಾಗಿದ್ದಾರೆ.

Continue Reading

ದೇಶ

Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Sudha Murty: ಭಾರತದಲ್ಲಿ ಪ್ರವಾಸೋದ್ಯಮಕ್ಕೆ‌ ಇನ್ನಷ್ಟು ಆದ್ಯತೆ ನೀಡಬೇಕು. ದೇಶದಲ್ಲಿ ಅಜಂತಾ, ಎಲ್ಲೋರ, ಬೃಹದೀಶ್ವರ, ತಾಜ್‌ಮಹಲ್‌ ನೋಡಬೇಕು ಎಂಬ ಮಾತಿದೆ. ಆದರೆ, ಭಾರತದಲ್ಲಿ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್‌ ಲಿಸ್ಟ್‌ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದರು.

VISTARANEWS.COM


on

Sudha Murty
Koo

ನವದೆಹಲಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಇನ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾ ಮೂರ್ತಿ (Sudha Murty) ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. “ನಾನು ರಾಜಕಾರಣಿ ಅಲ್ಲ. ನನಗೆ ಹೆಚ್ಚು ಮಾತನಾಡಲು ಬರುವುದಿಲ್ಲ” ಎನ್ನುತ್ತಲೇ ಭಾಷಣ ಆರಂಭಿಸಿದ ಅವರು ಗರ್ಭಕಂಠ ಕ್ಯಾನ್ಸರ್‌ಗೆ (Cervical Cancer) ಲಸಿಕೆ ಹಾಗೂ ಕರ್ನಾಟಕ (Karnataka) ಸೇರಿ ದೇಶದ ಪ್ರವಾಸೋದ್ಯಮದ ಏಳಿಗೆಯ ಕುರಿತು ಸದನದ ಗಮನಕ್ಕೆ ತಂದರು. ಕರ್ನಾಟಕ ಪ್ರವಾಸೋದ್ಯಮದ ಕುರಿತೂ ಅವರು ಹೆಚ್ಚು ಗಮನ ಸೆಳೆದರು.

“ಗರ್ಭಕಂಠದ ಕ್ಯಾನ್ಸರ್‌ ಈಗ ಮಾರಣಾಂತಿಕವಾಗಿದೆ. ಒಬ್ಬ ತಾಯಿ ಮೃತಪಟ್ಟರೆ ಮಕ್ಕಳು ಅನಾಥರಾಗುತ್ತಾರೆ. ಒಬ್ಬ ವ್ಯಕ್ತಿಗೆ ಹೆಂಡತಿ ತೀರಿಕೊಂಡರೆ ಮತ್ತೊಬ್ಬ ಪತ್ನಿ ಸಿಗುತ್ತಾಳೆ. ಆದರೆ, ಮಕ್ಕಳಿಗೆ ತಾಯಿ ತೀರಿಕೊಂಡರೆ, ಜೀವನಪೂರ್ತಿ ಅವರು ಅನಾಥರಾಗುತ್ತಾರೆ. ಹಾಗಾಗಿ, ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈಗ ಲಸಿಕೆಗೆ 1,300-1,400 ರೂ. ಆಗುತ್ತದೆ. ಸರ್ಕಾರ ಮಧ್ಯಪ್ರವೇಶಿಸಿದರೆ ಅದನ್ನು 800 ರೂಪಾಯಿಗೆ ಹೆಣ್ಣುಮಕ್ಕಳಿಗೆ ಲಸಿಕೆ ಕೊಡಿಸಬಹುದು” ಎಂದರು. ಆಗ ಸಭಾಧ್ಯಕ್ಷರು, “ಈ ಕುರಿತು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಅವರ ಗಮನಕ್ಕೆ ತನ್ನಿ” ಎಂದರು.

ಪ್ರವಾಸೋದ್ಯಮದ ಕುರಿತು ಹೇಳಿದ್ದಿಷ್ಟು…

“ಭಾರತದಲ್ಲಿ ಪ್ರವಾಸೋದ್ಯಮಕ್ಕೆ‌ ಇನ್ನಷ್ಟು ಆದ್ಯತೆ ನೀಡಬೇಕು. ದೇಶದಲ್ಲಿ ಅಜಂತಾ, ಎಲ್ಲೋರ, ಬೃಹದೀಶ್ವರ, ತಾಜ್‌ಮಹಲ್‌ ನೋಡಬೇಕು ಎಂಬ ಮಾತಿದೆ. ಆದರೆ, ಭಾರತದಲ್ಲಿ 42 ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್‌ ಲಿಸ್ಟ್‌ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕದ ಶ್ರವಣಬೆಳಗೋಳದಲ್ಲಿರುವ ಬಾಹುಬಲಿಯ ಮೂರ್ತಿ, ಮಧ್ಯಪ್ರದೇಶದ ಮಾಂಡು, ದೇಶದ ಗುಹೆಗಳು, ಬಾದಾಮಿ, ಐಹೊಳೆ, ಲಿಂಗರಾಜ ದೇವಾಲಯಗಳು ದೇಶದ ಸಂಸ್ಕೃತಿಯ ತಾಣಗಳಾಗಿವೆ. ಇವುಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು” ಎಂದರು.

“ತ್ರಿಪುರದಲ್ಲಿರುವ ಉನಾಕೋಟಿ, ಮಿಜೋರಾಂನಲ್ಲಿ ನೈಸರ್ಗಿಕ ಸೇತುವೆಗಳಿವೆ. ಇವುಗಳನ್ನು ನೋಡಲು ವಿದೇಶಕ್ಕೆ ಹೋಗುವವರಿದ್ದಾರೆ. ತಂಜಾವೂರಿನ ಬೃಹದೇಶ್ವರ ದೇವಾಲಯ, ಶ್ರೀರಂಗಂ, ಕಾಶ್ಮೀರದಲ್ಲಿರುವ ಮೊಘಲ್‌ ಗಾರ್ಡನ್‌ಗಳು ಜಗತ್ತಿನ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇಲ್ಲ. ಇವುಗಳನ್ನು ಪಟ್ಟಿಗೆ ಸೇರಿಸುವುದರಿಂದ ಆ ಸ್ಥಳಗಳಿಗೆ ಜನರನ್ನು ಸೆಳೆಯಲು ಪ್ಯಾಕೇಜ್‌ಗಳನ್ನು ಘೋಷಿಸಲಾಗುತ್ತದೆ. ಇದರಿಂದ ಪ್ರವಾಸೋದ್ಯಮದ ಆದಾಯ ಹೆಚ್ಚಾಗುತ್ತದೆ. ಹತ್ತಾರು ಅವಕಾಶಗಳು ಸೃಷ್ಟಿಯಾಗುತವೆ” ಎಂದು ಹೇಳಿದರು.

ಇದನ್ನೂ ಓದಿ: Narendra Modi: ನನ್ನ ದನಿಯೂ ಗಟ್ಟಿಯಿದೆ, ಸಂಕಲ್ಪವೂ; ಈ ಮೋದಿ ಯಾರಿಗೂ ಹೆದರಲ್ಲ, ಬಗ್ಗಲ್ಲ: ಸಂಸತ್‌ನಲ್ಲಿ ಪ್ರಧಾನಿ ಅಬ್ಬರ

Continue Reading

ಪ್ರಮುಖ ಸುದ್ದಿ

Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Mahua Moitra: “ಸ್ಪೀಕರ್‌ ಸರ್‌, ನೀವು ಚುನಾವಣೆ ಪ್ರಚಾರ ಮಾಡುವಾಗ ನೀವು ಎರಡು ಬಾರಿ ನನ್ನ ಕ್ಷೇತ್ರಕ್ಕೆ ಬಂದಿದ್ರಿ. ನನ್ನ ಮಾತು ಕೇಳಿಸಿಕೊಳ್ಳಿ” ಎಂದು ಮಹುವಾ ಮೊಯಿತ್ರಾ ಮಾತನಾಡುತ್ತಿದ್ದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡಲು ಎದ್ದು ನಿಂತರು. ಆಗ, ಮೊಹಿತ್ರಾ ಅವರು, “ರಾಹುಲ್‌, ಕುಳಿತುಕೊಳ್ಳಿ” ಎಂದು ಸೂಚಿಸಿದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Mahua Moitra
Koo

ನವದೆಹಲಿ: ಸಂಸತ್‌ನ ವಿಶೇಷ ಅಧಿವೇಶನದಲ್ಲಿ (Parliament Session 2024) ಪ್ರತಿಪಕ್ಷಗಳು ನೀಟ್‌ ಅಕ್ರಮ, ಮಣಿಪುರ ಹಿಂಸಾಚಾರ ಸೇರಿ ಹಲವು ವಿಷಯಗಳ ಕುರಿತು ಚರ್ಚೆ, ಗಲಾಟೆ, ವಾಗ್ವಾದ, ಆರೋಪ ಮಾಡಿವೆ. ಯಾವುದೇ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷವು ಆರೋಪ, ಗಲಾಟೆ, ಪ್ರತಿಭಟನೆ ಮಾಡುವುದು ಸಹಜ. ಇನ್ನು ಸೋಮವಾರ (ಜುಲೈ 1) ಸಂಸತ್‌ನಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಮಾತನಾಡುವಾಗ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೇ ಕುಳಿತುಕೊಳ್ಳಿ ಎಂಬುದಾಗಿ ಸೂಚಿಸಿದ್ದಾರೆ.

“ಸ್ಪೀಕರ್‌ ಸರ್‌, ನೀವು ಚುನಾವಣೆ ಪ್ರಚಾರ ಮಾಡುವಾಗ ನೀವು ಎರಡು ಬಾರಿ ನನ್ನ ಕ್ಷೇತ್ರಕ್ಕೆ ಬಂದಿದ್ರಿ. ನನ್ನ ಮಾತು ಕೇಳಿಸಿಕೊಳ್ಳಿ” ಎಂದು ಮಹುವಾ ಮೊಯಿತ್ರಾ ಮಾತನಾಡುತ್ತಿದ್ದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡಲು ಎದ್ದು ನಿಂತರು. ಆಗ, ಮೊಹಿತ್ರಾ ಅವರು, “ರಾಹುಲ್‌, ಕುಳಿತುಕೊಳ್ಳಿ” ಎಂದು ಸೂಚಿಸಿದರು. ಆಗ ಆಡಳಿತ ಪಕ್ಷದ ಸದಸ್ಯರು ಗೇಲಿ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮಹುವಾ ಮೊಯಿತ್ರಾ, “ಅವರು ನಮ್ಮ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರು ಅರ್ಥ ಮಾಡಿಕೊಳ್ಳುತ್ತಾರೆ” ಎಂದು ತಿರುಗೇಟು ನೀಡಿದರು.

ಇದೇ ವೇಳೆ ಆಡಳಿತ ಪಕ್ಷದ ವಿರುದ್ಧ ಟಿಎಂಸಿ ಸಂಸದೆ ಹರಿಹಾಯ್ದರು. “ಸಂಸತ್‌ನಲ್ಲಿ ನಾನು ಪ್ರಶ್ನೆ ಕೇಳಲು, ಮಾತನಾಡಲು ಬಿಡಲಿಲ್ಲ. ನಾನು ಸಂಸತ್‌ನಲ್ಲಿ ಮಾತನಾಡಲು ಎದ್ದು ನಿಂತಾಗ, ನನ್ನ ಧ್ವನಿಯನ್ನು ಹುದುಗಿಸಲಾಯಿತು. ಆದರೆ, ಚುನಾವಣೆ ವೇಳೆ ಏನಾಯಿತು? ಆಡಳಿತ ಪಕ್ಷದ ಸದಸ್ಯ ಬಲವು 303ರಿಂದ 240ಕ್ಕೆ ಇಳಿಸಲಾಯಿತು. ಟಿಎಂಸಿ ಸಂಸದೆಯಾದ ನನ್ನನ್ನು ಕುಳಿತುಕೊಳ್ಳುವಂತೆ ಮಾಡಿದರು. ಆದರೆ, ಬಿಜೆಪಿಯ 63 ಸಂಸದರನ್ನು ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ದೇಶದ ಜನ ಮಾಡಿದರು” ಎಂಬುದಾಗಿ ಹೇಳಿದರು.

ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಮೋದಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು “ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: Narendra Modi: ನೀಟ್‌ ಅಕ್ರಮ ಕುರಿತು ಸಂಸತ್‌ನಲ್ಲಿ ಮೋದಿ ಪ್ರಸ್ತಾಪ; ವಿದ್ಯಾರ್ಥಿಗಳಿಗೆ ಅವರು ಹೇಳಿದ್ದಿಷ್ಟು

Continue Reading

Latest

Viral Video: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

Viral Video: ಪಾಕಿಸ್ತಾನದಲ್ಲಿ ಟಿವಿ ವರದಿಗಾರ್ತಿಯೊಬ್ಬಳು ಗೂಳಿ ದಾಳಿಗೆ ಒಳಗಾದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವರದಿಗಾರ್ತಿ ಗೂಳಿ ಮಾಲೀಕರ ಬಳಿ ಅವುಗಳ ದರಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಳು. ಆಗ ಹಿಂದಿನಿಂದ ಬಂದ ಗೂಳಿಯೊಂದು ಆಕೆಯನ್ನು ಗುದ್ದಿದೆ. ಇದರಿಂದ ಆಕೆ ಕಿರುಚುತ್ತಾ ಓಡಿದ್ದಾಳೆ. ಅವಳ ಕೈಯಲ್ಲಿದ್ದ ಮೈಕ್ ಗೂಳಿಯ ಕೊಂಬಿನಲ್ಲಿ ಸಿಲುಕಿಕೊಂಡಿದ್ದು, ನಂತರ ಅದನ್ನು ಒಬ್ಬ ವ್ಯಕ್ತಿಯೊಬ್ಬರು ತೆಗೆದು ಕೊಟ್ಟಿದ್ದಾರೆ!

VISTARANEWS.COM


on

Viral Video
Koo

ಇತ್ತೀಚಿನ ದಿನಗಳಲ್ಲಿ ಗೂಳಿಗಳು, ಹಸುಗಳು ಮುಂತಾದ ಪ್ರಾಣಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುವಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಭಾರತದಲ್ಲಿ ಎಮ್ಮೆ ಮತ್ತು ಹಸುವಿನ ದಾಳಿಗೆ ಮಹಿಳೆಯರು ಗಾಯಗೊಂಡಿದ್ದರು. ಇದೀಗ ಪಾಕಿಸ್ತಾನದಲ್ಲಿ ಟಿವಿ ವರದಿಗಾರ್ತಿಯೊಬ್ಬಳು ಗೂಳಿ ದಾಳಿಗೆ ಒಳಗಾಗಿದ್ದಾಳೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಡಿಯೊದಲ್ಲಿ ಪಾಕಿಸ್ತಾನದ ಟಿವಿ ವರದಿಗಾರ್ತಿ ಲೈವ್ ಪ್ರಸಾರದ ವೇಳೆ ಗೂಳಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ ಅಲ್ಲಿದ್ದ ಗೂಳಿ ಮಾಲೀಕರ ಬಳಿ ಅವುಗಳ ದರಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಳು. ಆಗ ಹಿಂದಿನಿಂದ ಬಂದ ಗೂಳಿಯೊಂದು ಆಕೆಯನ್ನು ಗುದ್ದಿದೆ. ಇದರಿಂದ ಆಕೆ ಕಿರುಚುತ್ತಾ ಓಡಿದ್ದಾಳೆ. ಅವಳ ಕೈಯಲ್ಲಿದ್ದ ಮೈಕ್ ಗೂಳಿಯ ಕೊಂಬಿನಲ್ಲಿ ಸಿಲುಕಿಕೊಂಡಿದ್ದು, ನಂತರ ಅದನ್ನು ಒಬ್ಬ ವ್ಯಕ್ತಿಯೊಬ್ಬರು ತೆಗೆದು ಕೊಟ್ಟಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಇದಕ್ಕೆ 2,89,000ಕ್ಕೂ ಹೆಚ್ಚು ವೀವ್ಸ್ ಬಂದಿದೆ. ಈ ವೀಡಿಯೊ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅನಿರೀಕ್ಷಿತ ಘಟನೆಯಾಗಿದ್ದು, ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ವರದಿಗಾರ್ತಿ ಸಂಯಮ ಕಾಪಾಡಿಕೊಂಡಿದ್ದಕ್ಕೆ ನೆಟ್ಟಿಜನ್ ಒಬ್ಬರು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇನ್ನೊಬ್ಬರು ಇಷ್ಟಾದರೂ ಕ್ಯಾಮೆರಾ ಮ್ಯಾನ್ ಸಹಾಯಕ್ಕೆ ಬರಲಿಲ್ಲವೆಂದು ಆತನ ಬಗ್ಗೆ ಟೀಕೆ ಮಾಡಿದ್ದಾರೆ. ಈ ವಿಡಿಯೊದಲ್ಲಿ ಮಾಹಿತಿ ಸಿಗುತ್ತದೆ ಎಂದು ನೋಡಿದರೆ ಅಲ್ಲಿ ದೊಡ್ಡ ತಿರುವು ಎದುರಾಗಿದೆ ಎಂದು ಇನ್ನೊಬ್ಬ ನೆಟ್ಟಿಜನ್ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

ಗೂಳಿಗಳ ಆಕ್ರಮಣ ಪ್ರಕರಣ ಇತ್ತೀಚೆಗೆ ಕೆಲವು ಕಡೆ ಕಂಡುಬರುತ್ತಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಗೂಳಿಯೊಂದು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಾಲಕ್ಷ್ಮಿ ಲೇಔಟ್ ಈಜುಕೊಳ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಪ್ರದರ್ಶನಕ್ಕಾಗಿ ಅಲಂಕರಿಸಿದ್ದ ಗೂಳಿ ಬೈಕ್ ಸವಾರನ ಮೇಲೆ ದಾಳಿ ಮಾಡಿದೆ. ಗೂಳಿಯ ಹೊಡೆತದಿಂದ ವ್ಯಕ್ತಿ ಟ್ರಕ್‌ನ ಚಕ್ರಗಳ ಅಡಿಯಲ್ಲಿ ಬಿದ್ದಿದ್ದರು. ಅದೃಷ್ಟವಶಾತ್, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದರು. ಹಾಗೇ ಈ ಹಿಂದೆ ಜೂನ್ 16ರಂದು ಗುಜರಾತ್ ನ ಮೊದಸಾದಲ್ಲಿ ಬೈಕ್ ನಲ್ಲಿ ಪತಿಯ ಜೊತೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬೀಡಾಡಿ ಹಸುವೊಂದು ಬೆನ್ನಟ್ಟಿ ಗುದ್ದಿತ್ತು. ಆಕೆಗೆ ಗಂಭೀರ ಗಾಯಗಳಾಗಿದ್ದವು.

Continue Reading
Advertisement
high beam lights
ಕರ್ನಾಟಕ1 min ago

High Beam Lights‌: ರಾತ್ರಿ ಹೈ ಬೀಮ್‌ ಲೈಟ್‌ ಹಾಕಿಕೊಂಡು ವಾಹನ ಚಲಾಯಿಸುತ್ತೀರಾ? ಕೇಸು ಬೀಳುತ್ತೆ ಎಚ್ಚರ!

Cheetah Safari
ಪರಿಸರ20 mins ago

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Viral News
Latest20 mins ago

Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

Hathras Stampede
ಪ್ರಮುಖ ಸುದ್ದಿ35 mins ago

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

krishna river drowned death
ಕ್ರೈಂ50 mins ago

Drowned: ಪೊಲೀಸರಿಂದ ತಪ್ಪಿಸಿಕೊಳ್ಳಹೋಗಿ ನೀರುಪಾಲು; ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 1 ಸಾವು, ಇಬ್ಬರ ರಕ್ಷಣೆ, ಇನ್ನೂ ಐವರು ನಾಪತ್ತೆ

IPS transfer
ಪ್ರಮುಖ ಸುದ್ದಿ1 hour ago

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

karnataka weather Forecast
ಮಳೆ2 hours ago

Karnataka Weather : ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ

Dharamshala Tour
ಪ್ರವಾಸ2 hours ago

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

Vastu Tips
ಧಾರ್ಮಿಕ2 hours ago

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

Sour Curd
ಆರೋಗ್ಯ3 hours ago

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ13 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌