40 ವರ್ಷಗಳ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತು; 88ನೇ ವರ್ಷದಲ್ಲಿ 5 ಕೋಟಿ ರೂ. ಲಾಟರಿ ಹಣ ಪಡೆದು ಶ್ರೀಮಂತನಾದ ಅಜ್ಜ! - Vistara News

ವೈರಲ್ ನ್ಯೂಸ್

40 ವರ್ಷಗಳ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತು; 88ನೇ ವರ್ಷದಲ್ಲಿ 5 ಕೋಟಿ ರೂ. ಲಾಟರಿ ಹಣ ಪಡೆದು ಶ್ರೀಮಂತನಾದ ಅಜ್ಜ!

ತಂದೆಗೆ 5 ಕೋಟಿ ರೂಪಾಯಿ ಹಣ ಬಂದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಪುತ್ರ ನರೇಂದ್ರ ಕುಮಾರ್​ ಶರ್ಮಾ, ಈ ಸಲ ನನ್ನ ತಂದೆ ಅವರಾಗಿಯೇ ಹೋಗಿ ಲಾಟರಿ ಟಿಕೆಟ್​ ಖರೀದಿ ಮಾಡಿಲ್ಲ, ಮೊಮ್ಮಗನಿಗೆ ದುಡ್ಡು ಕೊಟ್ಟು ಕಳಿಸಿದ್ದರು ಎಂದು ಹೇಳಿದ್ದಾರೆ.

VISTARANEWS.COM


on

old man Wins 5 crore in Lottery in Punjab
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಏನೇ ಆದರೂ ಪ್ರಯತ್ನ ಬಿಡಬಾರದು, ಒಂದಲ್ಲ ಒಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ದೊಡ್ಡವರು ಒಂದು ಮಾತು ಹೇಳುತ್ತಾರೆ. ಆ ಮಾತು ಪಂಜಾಬ್​​ನ 88 ವರ್ಷದ ವೃದ್ಧನ ವಿಷಯದಲ್ಲಿ ಸತ್ಯವಾಗಿದೆ. ಕಳೆದ 35-40 ವರ್ಷಗಳಿಂದ ನಿರಂತರವಾಗಿ ಲಾಟರಿ ಟಿಕೆಟ್​ ಖರೀದಿಸುತ್ತಿದ್ದ ಮಹಾಂತ ದ್ವಾರಕಾ ದಾಸ್​ ಎಂಬುವರಿಗೆ ಈಗ 88ನೇ ವರ್ಷದಲ್ಲಿ ಅದೃಷ್ಟ ಮನೆಬಾಗಿಲಿಗೆ ಬಂದಿದೆ. ಲೊಹ್ರಿ ಮಕರ ಸಂಕ್ರಾಂತಿ ನಿಮಿತ್ತ ದ್ವಾರಕಾ ದಾಸ್​ ಖರೀದಿಸಿದ್ದ ಲಾಟರಿಗೆ ಪ್ರಥಮ ಬಹುಮಾನ ಲಭಿಸಿದ್ದು, ಬರೋಬ್ಬರಿ 5 ಕೋಟಿ ರೂಪಾಯಿ ಹಣ ಬಂದಿದೆ.

ದ್ವಾರಕಾ ದಾಸ್ ಅವರು ಕುಟುಂಬ ಸಹಿತ, 1947ರಲ್ಲಿ ಪಾಕಿಸ್ತಾನದಿಂದ ವಲಸೆ ಬಂದು ಪಂಜಾಬ್​​ನಲ್ಲಿ ನೆಲೆಸಿದ್ದಾರೆ. ಕಳೆದ 35-40 ವರ್ಷಗಳಿಂದಲೂ ಅವರು ಲಾಟರಿ ಟಿಕೆಟ್​ ಖರೀದಿ ಮಾಡುತ್ತಲೇ ಇದ್ದಿದ್ದರು. ಆದರೆ ಹಣವೇನೂ ಬಂದಿರಲಿಲ್ಲ. ಮರಳಿ ಪ್ರಯತ್ನ ಮಾಡುತ್ತಲೇ ಇದ್ದವರು ಈಗ ಇಳಿವಯಸ್ಸಿನಲ್ಲಿ ಕೋಟ್ಯಧಿಪತಿಯಾಗಿದ್ದಾರೆ. ನಾನು ಈ ಹಣವನ್ನು ನನ್ನಿಬ್ಬರು ಮಕ್ಕಳಿಗೆ ಕೊಡುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯವಾಗಿ ಅವರೊಂದು ಡೇರಾ (ಸಾಮಾಜಿಕ-ಧಾರ್ಮಿಕ ಸಂಸ್ಥೆ)ವನ್ನು ನಡೆಸುತ್ತಿದ್ದು, ಅದಕ್ಕಾಗಿಯೂ ಹಣ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ತಂದೆಗೆ 5 ಕೋಟಿ ರೂಪಾಯಿ ಹಣ ಬಂದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಪುತ್ರ ನರೇಂದ್ರ ಕುಮಾರ್​ ಶರ್ಮಾ ‘ಈ ಸಲ ನನ್ನ ತಂದೆ ಅವರಾಗಿಯೇ ಹೋಗಿ ಲಾಟರಿ ಟಿಕೆಟ್​ ಖರೀದಿ ಮಾಡಿಲ್ಲ. ಬದಲಿಗೆ ಮೊಮ್ಮಗನಿಗೆ ದುಡ್ಡು ಕೊಟ್ಟು, ಟಿಕೆಟ್​ ತರುವಂತೆ ಹೇಳಿದ್ದರು. ಫಲಿತಾಂಶ ಬಂದಾಗ ಅವರಿಗೆ ಮೊದಲ ಬಹುಮಾನ ಲಭಿಸಿತ್ತು. ನಮಗೆಲ್ಲರಿಗೂ ಇದು ತುಂಬ ಖುಷಿಯಾಗಿದೆ’ ಎಂದು ಹೇಳಿದ್ದಾರೆ.

ಮಹಾಂತ ದ್ವಾರಕಾ ದಾಸ್ ಅವರಿಗೆ 5 ಕೋಟಿ ರೂಪಾಯಿ ಲಾಟರಿ ಹಣ ಬಂದಿದ್ದರೂ, ಅವರೇನೂ ಸಂಪೂರ್ಣ ಹಣ ಪಡೆಯುವುದಿಲ್ಲ. ಶೇ.30ರಷ್ಟು ತೆರಿಗೆ ಹಣ ಕಡಿತಗೊಂಡು ಉಳಿದ ಹಣ ಅವರ ಕೈ ಸೇರುತ್ತದೆ. ಅದೇನೆ ಇದ್ದರೂ ಕೋಟಿಗೇನೂ ಮೋಸವಾಗುವುದಿಲ್ಲ. 88ನೇ ವರ್ಷದಲ್ಲಿ ಕೋಟ್ಯಧಿಪತಿಯಾದ ಈ ಅಜ್ಜನಿಗೀಗ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.

ಇದನ್ನೂ ಓದಿ: Viral Video: ಕಾಶ್ಮೀರದ ಚಳಿಗೆ ನಡುಗಿದ ರಾಹುಲ್ ಗಾಂಧಿ; ಕೊನೆಗೂ ಜಾಕೆಟ್​ ಧರಿಸಿಯೇ ಪಾದಯಾತ್ರೆ ನಡೆಸಿದರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿ ಬೆರಗುಗೊಳಿಸಿದ ಅತ್ಯಂತ ಕಿರಿಯ ಸಂಸದೆ!

Viral Video: ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಹೆಚ್ಚಾಗಿ ಎಲ್ಲಾ ಮಂತ್ರಿಗಳು, ಸಂಸದರು ತಮ್ಮ ಮುಂದೆ ಪೇಪರ್ ಇಟ್ಟುಕೊಂಡು ಅದನ್ನು ನೋಡಿಕೊಂಡೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಇಲ್ಲೊಬ್ಬರು ಸಂಸದೆ ಪೇಪರ್ ನೋಡದೇ ಎದುರಿಗಿದ್ದ ಸಭೆಯನ್ನು ನೋಡುತ್ತಾ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲೆಡೆ ವೈರಲ್ ಆಗಿದೆ. ಅಂದಹಾಗೇ, ಆ ಸಂಸದೇ ಮತ್ಯಾರು ಅಲ್ಲ 26 ವರ್ಷದ ಶಾಂಭವಿ ಚೌಧರಿ. ಇವರ ಬಗ್ಗೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

VISTARANEWS.COM


on

Viral Video
Koo

ನವದೆಹಲಿ : ಜನಪ್ರತಿನಿಧಿಗಳು ಸಾಮಾನ್ಯವಾಗಿ ಪೇಪರ್ ನೋಡಿಕೊಂಡೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಅತ್ಯಂತ ಕಿರಿಯ ಸಂಸದೆ ಒಬ್ಬರು ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸುದ್ದಿ ವೈರಲ್ (Viral Video) ಆಗಿದೆ.

ಅತ್ಯಂತ ಕಿರಿಯ ಸಂಸದೆ ಎಂದು ಕರೆಸಿಕೊಂಡ ಶಾಂಭವಿ ಚೌಧರಿ ಅವರು ಪೇಪರ್ ನೋಡದೆ ತಮ್ಮ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. 26 ವರ್ಷ ವಯಸ್ಸಿನ ಇವರು ಸಂಸತ್ತಿನಲ್ಲಿ ಸಂಸದೆಯಾಗಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಎಲ್ಲರೂ ಸಂಸದೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಶಾಂಭವಿಯವರು ಬಿಳಿ ಬಣ್ಣದ ಸೀರೆ ಧರಿಸಿ ಪೇಪರ್ ನೋಡದೆ ಸಭೆಯನ್ನು ನೋಡಿಕೊಂಡೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಲೋಕ ಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ)ದ ಅಭ್ಯರ್ಥಿಯಾಗಿ ಬಿಹಾರದ ಸಮಸ್ತಿಪುರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸನ್ನಿ ಹಜಾರಿ ಅವರನ್ನು 1,87,251 ಮತಗಳಿಂದ ಸೋಲಿಸಿದ್ದಾರೆ. ಆ ಮೂಲಕ ಇವರು ಸಮಸ್ತಿಪುರದ ಮೊದಲ ಮಹಿಳಾ ಸಂಸದೆ ಎನಿಸಿಕೊಂಡಿದ್ದಾರೆ.
ಶಾಂಭವಿ ಚೌಧರಿ ಅವರು ಜೆಡಿಯು ನಾಯಕರಾದ ಅಶೋಕ್ ಚೌಧರಿ ಅವರ ಪುತ್ರಿ. ಅಶೋಕ್ ಚೌಧರಿ ಅವರು ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಅತ್ಯಂತ ಪ್ರಭಾವಶಾಲಿ ಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಇವರು ಮೊದಲಿಗೆ ಕಾಂಗ್ರೆಸ್ ನಲ್ಲಿದ್ದು ನಂತರ ಜೆಡಿಯು ಪಕ್ಷಕ್ಕೆ ಸೇರಿಕೊಂಡರು. ಅಲ್ಲದೇ ಶಾಂಭವಿ ಚೌಧರಿ ಅವರ ಅಜ್ಜ ದಿ.ಮಹಾವೀರ್ ಚೌಧರಿ ಕೂಡ ಕಾಂಗ್ರೆಸ್ ಸದಸ್ಯರಾಗಿದ್ದರು. ಅವರು ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ: ಸಾನಿಯಾ ಮಿರ್ಜಾ ಗೊತ್ತು, ಆಕೆಯ ತಂಗಿ ಅನಮ್ ಮಿರ್ಜಾ ಗೊತ್ತಾ?

ಹಾಗಾಗಿ ಮೂರನೇ ತಲೆಮಾರಿನ ರಾಜಕಾರಣಿಯಾದ ಶಾಂಭವಿ ಅವರಿಗೆ ರಾಜಕೀಯ ವಿಚರದಲ್ಲಿ ಆಸಕ್ತಿ ಇತ್ತು ಎನ್ನಲಾಗಿದೆ. ಶಾಂಭವಿ ಅವರು ಪ್ರತಿಷ್ಠಿತ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ‘ಮಾಸ್ಟರ್ಸ್ ಆಫ್ ಆರ್ಟ್ಸ್’ ಪದವಿ ಪಡೆದಿದ್ದಾರೆ. ಹಾಗೇ ಶಾಂಭವಿ ಅವರು ಮಾಜಿ ಐಪಿಎಸ್ ಅಧಿಕಾರಿ ಆಚಾರ್ಯ ಕಿಶೋರ್ ಕುನಾಲ್ ಅವರ ಮಗ ಸಾಯನ್ ಕುನಾಲ್ ಅವರನ್ನು ವಿವಾಹವಾಗಿದ್ದಾರೆ.

Continue Reading

Latest

Viral Video : ‘ಅಲ್ಲಾಹು ಅಕ್ಬರ್’ ಎನ್ನದ ಹಿಂದೂ ಬಾಲಕನಿಗೆ ಎಂಜಲು ನೆಕ್ಕಲು ಹೇಳಿದ ಮುಸ್ಲಿಂ ಯುವಕರು

Viral Video: ಧರ್ಮ ಧರ್ಮದ ನಡುವೆ ಸಾಮರಸ್ಯ ಬೆಳೆದರೆ ದೇಶ ಕೂಡ ಸುಭಿಕ್ಷವಾಗಿರುತ್ತದೆ. ಆದರೆ ಪದೇ ಪದೇ ಒಂದು ಧರ್ಮದವರು ಇನ್ನೊಂದು ಧರ್ಮದ ಮೇಲೆ ಕಿಡಿಕಾರುತ್ತಲೇ ಇರುತ್ತಾರೆ. ಇಂತಹದ್ದೊಂದು ಅಮಾನವೀಯ ಘಟನೆಯೊಂದು ಬಿಹಾರದ ಮೋತಿಪುರ್ ಪಟ್ಟಣದ ಬಟ್ರಾಲ್ ಗ್ರಾಮದಲ್ಲಿ ನಡೆದಿದೆ. ಮುಸ್ಲಿಂ ಯುವಕರ ಗುಂಪೊಂಡು 15 ವರ್ಷದ ಹಿಂದೂ ಬಾಲಕನ್ನು ಕೋಣೆಯೊಂದರಲ್ಲಿ ಬಂಧಿಸಿ ಹಲ್ಲೆ ಮಾಡಿದ್ದು ಅಲ್ಲದೇ, ‘ಅಲ್ಲಾಹು ಅಕ್ಬರ್’ ಮತ್ತು ‘ಮಿಯಾನ್ ಸಾಹೇಬ್ ಜಿಂದಾಬಾದ್’ ಎಂದು ಇಸ್ಲಾಮಿಕ್ ಧರ್ಮದ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ ಹಾಗೇ ಪಾದಕ್ಕೆ ಎಂಜಲು ಉಗುಳಿ ಅದನ್ನು ನೆಕ್ಕುವಂತೆ ಬಾಲಕನಿಗೆ ಹಿಂಸೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo

ಬಿಹಾರ : ಬಿಹಾರದ ಮೋತಿಪುರ್ ಪಟ್ಟಣದ ಬಟ್ರಾಲ್ ಗ್ರಾಮದಲ್ಲಿ ಹಿಂದೂ ಅಪ್ರಾಪ್ತ ಬಾಲಕನ್ನು ವಶಕ್ಕೆ ಪಡೆದ ಮುಸ್ಲಿಂ ಯುವಕರು ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video ) ಆಗಿದೆ.

ವಿಡಿಯೊದಲ್ಲಿ 15 ವರ್ಷದ ಬಾಲಕನ್ನು ಕೋಣೆಯೊಂದರಲ್ಲಿ ಬಂಧಿಸಿ ಗೋಣಿ ಚೀಲದ ಮೇಲೆ ಕೂರಿಸಿ ಅದರಲ್ಲಿ ಒಬ್ಬ ದುಷ್ಕರ್ಮಿ ಕೋಲು ಹಿಡಿದು ಆತನ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದಾನೆ. ಮತ್ತೊಬ್ಬ ‘ಅಲ್ಲಾಹು ಅಕ್ಬರ್’ ಮತ್ತು ‘ಮಿಯಾನ್ ಸಾಹೇಬ್ ಜಿಂದಾಬಾದ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಹಾಗೇ ಅದರ ಜೊತೆಗೆ ದುಷ್ಕರ್ಮಿಗಳು ಅವರ ಪಾದಕ್ಕೆ ಎಂಜಲು ಉಗುಳಿ ಅದನ್ನು ನೆಕ್ಕುವಂತೆ ಬಾಲಕನಿಗೆ ಹಿಂಸೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೊಲೀಸರು ಈ ಘಟನೆಯ ಬಗ್ಗೆ ಮಾಹಿತಿ ಪಡೆದು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮೊಹಮ್ಮದ್ ಮುನ್ನಾ ಮತ್ತು ಸಾಹಿಲ್ ಹಾಗೂ ಮತ್ತೊಬ್ಬ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ ಎನ್ನಲಾಗಿದೆ. ಆದರೆ ಉಳಿದವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ವಿಡಿಯೊವನ್ನು ಆರೋಪಿಗಳೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಉದ್ವಿಗ್ಧ ಪರಿಸ್ಥಿತಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಮದುವೆ ಲವ್ ಜಿಹಾದ್?; ಶತ್ರುಘ್ನ ಸಿನ್ಹಾ ಹೇಳಿದ್ದೇನು?

ಈ ಬಗ್ಗೆ ಸಂತ್ರಸ್ತ ಬಾಲಕನ ತಂದೆ ದೂರು ದಾಖಲಿಸಿದ್ದಾರೆ. ಈ ಘಟನೆಯಲ್ಲಿ ಬಾಲಕನ ಕೈಗೆ ಪೆಟ್ಟಾಗಿದೆ ಎಂಬುದಾಗಿ ತಿಳಿದುಬಂದಿದೆ. ಬಿಹಾರದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಕಾನೂನು ಸುವ್ಯವಸ್ಥೆ ಕಾಪಾಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳೀಯ ಅಧಿಕಾರಿಗಳು, ಪೊಲೀಸರು ಹೆಣಗಾಡುತ್ತಿದ್ದಾರೆ.

Continue Reading

Latest

Bansuri Swaraj: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ

Bansuri Swaraj: ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ತಾಯಿಯ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಸುಷ್ಮಾ ಸ್ವರಾಜ್ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ ತಾಯಿಯಂತೆ ಮಗಳು’ ಎಂಬ ಶೀರ್ಷಿಕೆಯಡಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುಷ್ಮಾ ಸ್ವರಾಜ್ ಹಾಗೂ ಬಾನ್ಸುರಿ ಸ್ವರಾಜ್ ಇಬ್ಬರೂ ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ವೀಡಿಯೋವನ್ನು ಸಂಯೋಜಿಸಲಾಗಿದೆ.

VISTARANEWS.COM


on

Bansuri Swaraj
Koo


ದೆಹಲಿ: ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ (Bansuri Swaraj) ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ತಾಯಿಯ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ, ತಾಯಿ ಸುಷ್ಮಾ ಸ್ವರಾಜ್ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.

“ತಾಯಿಯಂತೆ ಮಗಳು’ ಎಂಬ ಶೀರ್ಷಿಕೆಯಡಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುಷ್ಮಾ ಸ್ವರಾಜ್ ಹಾಗೂ ಬಾನ್ಸುರಿ ಸ್ವರಾಜ್ ಇಬ್ಬರೂ ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ವೀಡಿಯೋವನ್ನು ಸಂಯೋಜಿಸಲಾಗಿದೆ. ದಿವಂಗತ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಅಲ್ಲಿ ಅವರು ಎದುರಾಳಿ ಎಎಪಿಯ ಸೋಮನಾಥ್ ಭಾರ್ತಿ ಅವರನ್ನು 78,370 ಮತಗಳ ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

1975ರ ತುರ್ತು ಪರಿಸ್ಥಿತಿ ಹೇರಿಕೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಕಟ್ಟುನಿಟ್ಟಿನ ಮನವಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನಡುವೆ ಮಾತಿನ ಚಕಮಕಿ ನಡೆಯುವ ಮೂಲಕ 18ನೆಯ ಲೋಕಸಭೆಯ ಮೊದಲ ದಿನ ಅಂತ್ಯಗೊಂಡಿತು. ಪ್ರಧಾನಿ ಸೇರಿದಂತೆ ಹೊಸದಾಗಿ ಚುನಾಯಿತರಾದ ಒಟ್ಟು 262 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

Continue Reading

Latest

Viral Video: ನಡೆದು ಹೋಗುತ್ತಿದ್ದ ಹುಡುಗಿಯ ಎದುರು ಹಸ್ತಮೈಥುನ ಮಾಡಿಕೊಂಡ ವಿಕೃತ ಯುವಕ!

Viral Video: ಪಶ್ಚಿಮ ಬಂಗಾಳದ ಬಸಿರ್ಹರ್ತ ಜಿಲ್ಲೆಯ ಗ್ರಾಮಾಂತರ ರಸ್ತೆಯಲ್ಲಿ ಹುಡುಗಿಯೊಬ್ಬಳು ನಡೆದುಕೊಂಡು ಹೋಗುವ ಸಂದರ್ಭ ವ್ಯಕ್ತಿಯೊಬ್ಬ ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಳ್ಳುವ ಅಸಹ್ಯಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅಸಹ್ಯಕರ ವಿಡಿಯೋವನ್ನು ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ನೆಟಿಜನ್ ಗಳು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
Koo

ಜನ ಶೈಕ್ಷಣಿಕವಾಗಿ ಮೇಲ್ದರ್ಜೆಗೆ ಏರುತ್ತಿದ್ದಂತೆ ಸಾಮಾಜಿಕವಾಗಿ ಎಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಮನುಷ್ಯನ ವಿಕೃತ ಮುಖವನ್ನು ವಿಜೃಂಭಿಸುತ್ತದೆ. ನಡುರಸ್ತೆಯಲ್ಲಿ ನಾಚಿಕೆ ಬಿಟ್ಟ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವಿಡಿಯೊವೊಂದು ವೈರಲ್‌ (Viral Video) ಆಗಿದೆ.

ಪಶ್ಚಿಮ ಬಂಗಾಳದ ಬಸಿರ್ಹರ್ತ ಜಿಲ್ಲೆಯ ಗ್ರಾಮಾಂತರ ರಸ್ತೆಯಲ್ಲಿ ಹುಡುಗಿಯೊಬ್ಬಳು ನಡೆದುಕೊಂಡು ಹೋಗುವ ಸಂದರ್ಭ ವ್ಯಕ್ತಿಯೊಬ್ಬ ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಳ್ಳುವ ಅಸಹ್ಯಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅಸಹ್ಯಕರ ವಿಡಿಯೋವನ್ನು ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ನೆಟಿಜನ್ ಗಳು ಹಂಚಿಕೊಂಡಿದ್ದಾರೆ.

ಬೈಕ್ ನಲ್ಲಿ ಸಂಚರಿಸುವ ವ್ಯಕ್ತಿ ಇದ್ದಕ್ಕಿಂದ್ದಂತೆ ಬೈಕ್ ನಿಲ್ಲಿಸುತ್ತಾನೆ ಹಾಗೂ ಹಿಂತಿರುಗಿ ನೋಡುತ್ತಾನೆ. ಈ ವೇಳೆ ಇನ್ನೊಂದು ಬೈಕ್ ಅವನ ಹತ್ತಿರದಿಂದ ಹಾದು ಹೋಗುತ್ತದೆ. ಬಳಿಕ ಇನ್ನಾವುದೇ ವಾಹನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಆತ ತನ್ನ ಖಾಸಗಿ ಅಂಗವನ್ನು ಪದೇಪದೇ ಮುಟ್ಟಿಕೊಳ್ಳುತ್ತ ಹಸ್ತಮೈಥುನ ಆರಂಭಿಸುತ್ತಾನೆ.

ಆಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅದೇ ದಾರಿಯಲ್ಲಿ ತೆರಳುತ್ತಾಳೆ. ಆಗ ಬೈಕ್ ಬಿಟ್ಟು ಹುಡುಗಿಯನ್ನೇ ನೋಡಿಕೊಳ್ಳುತ್ತಾ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಒಂದು ಹಂತದಲ್ಲಿ ಆಕೆಯನ್ನು ಆತ ಬೆನ್ನಟ್ಟಲು ಪ್ರಯತ್ನಿಸಿ, ಇನ್ನೊಂದು ವಾಹನ ಕಣ್ಣಿಗೆ ಬೀಳುತ್ತಿದ್ದಂತೆ ತನ್ನ ಬೈಕ್ ಏರಿ ಓಡಿ ಹೋದ ದೃಶ್ಯಗಳೂ ಕಾಣಸಿಗುತ್ತವೆ.

ಇದನ್ನೂ ಓದಿ: Nita Ambani: ಕಾಶಿಯಲ್ಲಿ ಮದುವೆ ಆಮಂತ್ರಣ ಪೂಜೆ; ಚಾಟ್‌ ಅಂಗಡಿಗೂ ಭೇಟಿ ನೀಡಿದ ನೀತಾ ಅಂಬಾನಿ

ಇದು ಹೀಗೆ ಮುಂದುವರಿದರೆ ಸಾರ್ವಜನಿಕ ರಸ್ತೆಗಳು ಸುರಕ್ಷಿತವಲ್ಲ ಎಂಬ ಭಾವನೆ ನಾಗರಿಕರಿಗೆ ಬರಬಹುದು, ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನೆಟಿಜನ್‌ಗಳು ಪೊಲೀಸರನ್ನು ಒತ್ತಾಯಿಸಿದ್ದಾರೆ.

Continue Reading
Advertisement
PGCET 2024
ಕರ್ನಾಟಕ3 mins ago

PGCET 2024: ಪಿಜಿಸಿಇಟಿ ಪರೀಕ್ಷೆ ಮುಂದೂಡಿಕೆ; ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

Liquor Price karnataka
ಕರ್ನಾಟಕ5 mins ago

Liquor Price Karnataka: ಶ್ರೀಮಂತರಿಗೆ ಮತ್ತು, ಬಡವರಿಗೆ ಕುತ್ತು! ಪ್ರೀಮಿಯಂ ಮದ್ಯ ದರ ಇಳಿಕೆ, ಬಡವರ ಎಣ್ಣೆ ರೇಟ್‌ ಏರಿಕೆ?

Lok Sabha Speaker
ದೇಶ20 mins ago

Lok Sabha Speaker: ಎರಡನೇ ಬಾರಿ ಸ್ಪೀಕರ್‌ ಆದ ಓಂ ಬಿರ್ಲಾಗೆ ಮೋದಿ, ರಾಹುಲ್‌ ಅಭಿನಂದನೆ

Tharun Sudhir and sonal monteiro love story support By Darshan
ಸ್ಯಾಂಡಲ್ ವುಡ್24 mins ago

Tharun Sudhir: ದರ್ಶನ್‌ ತಮಾಷೆಯಿಂದಲೇ ಹುಟ್ಟಿತು ತರುಣ್‌- ಸೋನಲ್‌ ಪ್ರೀತಿ? ಇಬ್ಬರ ಲವ್ ಸ್ಟೋರಿ ಶುರುವಾಗಿದ್ದೇಗೆ?

Kenya Violence
ವಿದೇಶ32 mins ago

Kenya Violence: ಕೀನ್ಯಾದಲ್ಲಿ ಭುಗಿಲೆದ್ದ ಹಿಂಸಾಚಾರ; ಭಾರತೀಯರಿಗೆ ಎಚ್ಚರಿಕೆ ನೀಡಿದ ಹೈಕಮಿಷನ್

ಕಥೆಕೂಟ literature meet
ಕಲೆ/ಸಾಹಿತ್ಯ39 mins ago

ಕಥೆ ನಿಜ, ಕಥೆಗಾರ ಸುಳ್ಳು: ಕಥೆಕೂಟ ಸಮಾವೇಶದಲ್ಲಿ ಟಿಎನ್‌ ಸೀತಾರಾಮ್‌

CM Siddaramaiah
ಕರ್ನಾಟಕ42 mins ago

CM Siddaramaiah: ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿರೋದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದ ಸಿಎಂ

Jayam Ravi's wife Aarti Ravi removes all her Instagram photos
ಕಾಲಿವುಡ್45 mins ago

Jayam Ravi: ಜಯಂ ರವಿ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್‌ ಹಾದಿಯಲ್ಲಿ ಮತ್ತೊಂದು ಸ್ಟಾರ್‌ ಜೋಡಿ!

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಕ್ರೀಡೆ1 hour ago

IND vs ENG Semi Final: ಆಂಗ್ಲರನ್ನು ಸದೆಬಡಿದು ಫೈನಲ್​ ಪ್ರವೇಶಿಸಲಿ ಭಾರತ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌