Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ - Vistara News

ವೈರಲ್ ನ್ಯೂಸ್

Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ

ಇಷ್ಟು ದಿನಗಳವರೆಗೆ ಪೆಟ್ರೋಲ್​ ಬಂಕ್​ಗಳಲ್ಲಿ ಈ 2000 ರೂಪಾಯಿ ನೋಟು ಸ್ವೀಕೃತವಾಗಿತ್ತು. ಆದರೆ ಅದು ಚಲಾವಣೆ ಇನ್ನು ಇರುವುದಿಲ್ಲ ಎಂದು ಗೊತ್ತಾದ ಮೇಲೆ ಕೆಲವು ಪೆಟ್ರೋಲ್​ ಬಂಕ್​​ಗಳೂ ಸ್ವೀಕರಿಸುತ್ತಿಲ್ಲ.

VISTARANEWS.COM


on

Petrol pump attendant retrieves petrol out of scooter For giving 2000 RS note in Uttar Pradesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2000 ರೂಪಾಯಿ ನೋಟನ್ನು ಆರ್​​ಬಿಐ ಹಿಂಪಡೆದ ಬೆನ್ನಲ್ಲೇ, ಎಲ್ಲರೂ ತಮ್ಮ ಬಳಿ ಇರುವ ನೋಟನ್ನು ಹೇಗಾದರೂ ದಾಟಿಸಬೇಕು ಎಂದೇ ಪ್ರಯತ್ನ ಮಾಡುತ್ತಿದ್ದಾರೆ. 2000 ರೂಪಾಯಿ ನೋಟನ್ನು (Rs 2,000 Notes) ಬದಲಿಸಿಕೊಳ್ಳಲು/ಬ್ಯಾಂಕ್​​ನಲ್ಲಿ ಡಿಪೋಸಿಟ್ ಇಡಲು ಆರ್​​ಬಿಐ ಸೆಪ್ಟೆಂಬರ್​ 30ರವರೆಗೆ ಸಮಯ ನೀಡಿದೆ. ಆದರೂ ಕೆಲವರು ಅಂಗಡಿಗಳಲ್ಲೋ, ಪೆಟ್ರೋಲ್ ಬಂಕ್​ಗಳಲ್ಲೋ ಅದನ್ನು ನಿಧಾನವಾಗಿ ದಾಟಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ ಈ ಉಪಾಯ ಮಾಡಲು ಹೋದವನೊಬ್ಬನಿಗೆ ಪೆಟ್ರೋಲ್ ಬಂಕ್​ ಸಿಬ್ಬಂದಿಯೊಬ್ಬ ತಿರುಗೇಟು ನೀಡಿದ ಘಟನೆ ಉತ್ತರ ಪ್ರದೇಶದ ಜಲೌನ್​ ಜಿಲ್ಲೆಯಲ್ಲಿ ನಡೆದಿದೆ.

ಜಲೌನ್​​ನಲ್ಲಿರುವ ಪೆಟ್ರೋಲ್​ ಬಂಕ್ ಒಂದಕ್ಕೆ ತನ್ನ ಸ್ಕೂಟರ್ ತೆಗೆದುಕೊಂಡು ಹೋದವನೊಬ್ಬ ಪೆಟ್ರೋಲ್ ಹಾಕಿಸಿದ್ದಾನೆ. ಪೆಟ್ರೋಲ್ ಹಾಕಿಯಾದ ಬಳಿಕ 2000 ರೂಪಾಯಿ ನೋಟು ಕೊಡಲು ಯತ್ನಿಸಿದ. ಆದರೆ ಅದನ್ನು ತೆಗೆದುಕೊಳ್ಳಲು ಪೆಟ್ರೋಲ್​ ಬಂಕ್​​ನಲ್ಲಿದ್ದ ಪರಿಚಾರಕ ನಿರಾಕರಿಸಿದ. ಆದರೆ ಈತ ನನ್ನ ಬಳಿ ಬೇರೆ ಹಣವೇ ಇಲ್ಲ ಎಂದು ವಾದಿಸಿದ. ಆಗ ಪೆಟ್ರೋಲ್ ಬಂಕ್​ ಪರಿಚಾರಕ ಅವನನ್ನು ತಡೆದಿದ್ದಲ್ಲದೆ, ಆತನ ಸ್ಕೂಟರ್​ಗೆ ಆಗಷ್ಟೇ ಹಾಕಿದ್ದ ಪೆಟ್ರೋಲ್​​ನ್ನು ವಾಪಸ್ ತೆಗೆದಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಅದನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Shivamogga News: ಪೆಟ್ರೋಲ್ ಟ್ಯಾಂಕರ್ ಪಲ್ಟಿ; 29 ಸಾವಿರ ಲೀಟರ್ ಪೆಟ್ರೋಲ್ ಮಣ್ಣುಪಾಲು

ಮೊದಲಿನಿಂದಲೂ ಹೀಗೊಂದು ಕ್ರಮ ಇದೆ. ದೊಡ್ಡಮೊತ್ತದ ನೋಟುಗಳಿಗೆ ಚಿಲ್ಲರೆ ಬೇಕು ಎಂದರೆ ಪೆಟ್ರೋಲ್​ ಬಂಕ್​​ನಲ್ಲಿ ಕೊಡಬೇಕು ಎಂದು. ಇಷ್ಟು ದಿನಗಳವರೆಗೆ ಪೆಟ್ರೋಲ್​ ಬಂಕ್​ಗಳಲ್ಲಿ ಈ 2000 ರೂಪಾಯಿ ನೋಟು ಸ್ವೀಕೃತವಾಗಿತ್ತು. ಆದರೆ ಅದು ಚಲಾವಣೆ ಇನ್ನು ಇರುವುದಿಲ್ಲ ಎಂದು ಗೊತ್ತಾದ ಮೇಲೆ ಕೆಲವು ಪೆಟ್ರೋಲ್​ ಬಂಕ್​​ಗಳೂ ಸ್ವೀಕರಿಸುತ್ತಿಲ್ಲ. ಇನ್ನೊಂದೆಡೆ ಮುಂಬಯಿ, ಬೆಂಗಳೂರು, ಕೋಲ್ಕತ್ತ ಮತ್ತು ಇತರ ಮಹಾನಗರದಗಳ ಹಲವು ಪೆಟ್ರೋಲ್​ಬಂಕ್​​ಗಳಲ್ಲಿ ಈಗ ಜನರು 2000 ರೂಪಾಯಿ ನೋಟು ಪಾವತಿಸಲು ಮುಂದಾಗುತ್ತಿದ್ದಾರೆ. 200-300 ರೂಪಾಯಿ ಪೆಟ್ರೋಲ್ ಹಾಕಿಸಿ, 2000 ರೂ.ಕೊಡುತ್ತಿದ್ದಾರೆ. ಕೆಲವು ಪೆಟ್ರೋಲ್​ ಬಂಕ್​ಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ವಾಪಸ್ ಚಿಲ್ಲರೆ ಕೊಡುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉಡುಪಿ

Udupi News : ಇವನೆಂಥ ಅಪ್ಪ.. ಮಗಳ ಪ್ರೀತಿಗೆ ವಿರೋಧಿಸಿ ಅಶ್ಲೀಲ ವಿಡಿಯೊ ಹರಿಬಿಟ್ಟ ನೀಚ

Love case : ಉಡುಪಿಯ ಪಡುಬಿದ್ರಿಯಲ್ಲಿ (Udupi News) ವಿಲಕ್ಷಣ ಘಟನೆಯೊಂದು ನಡೆದಿದೆ. ಮಗಳು ಪ್ರೀತಿ ವಿಷಯ ತಿಳಿದ ತಂದೆಯೊಬ್ಬ ವಿಡಿಯೊವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ, ವಾಟ್ಸ್‌ ಆ್ಯಪ್‌ ಗ್ರೂಪ್‌ವೊಂದಕ್ಕೆ ವೈರಲ್‌ ಮಾಡಿದ್ದಾನೆ. ಇತ್ತ ತಂದೆ ಕೃತ್ಯಕ್ಕೆ ಮನನೊಂದು ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

VISTARANEWS.COM


on

By

Udupi News
Koo

ಉಡುಪಿ: ಮಗಳ ಪ್ರೀತಿ ವಿಷಯ (Love Case) ತಿಳಿದು ಸಿಟ್ಟಾದ ತಂದೆಯೊಬ್ಬ ನೀಚ ಕೆಲಸಕ್ಕೆ ಕೈಹಾಕಿದ್ದಾನೆ. ಮಗಳ ಅಶ್ಲೀಲ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ. ಉಡುಪಿಯ (Udupi News) ಪಡುಬಿದ್ರಿಯಲ್ಲಿ ವಿಲಕ್ಷಣ ಘಟನೆ ನಡೆದಿದೆ. ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಮಾತು ಈ ಸಮಾಜ ಸೇವಕನಿಗೆ ಸರಿಯಾಗಿ ಒಪ್ಪುತ್ತೆ. ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ಆಸಿಫ್, ಆಪದ್ಬಾಂಧವ ಮೊಹಮ್ಮದ್ ಆಸಿಫ್ ಎಂದೇ ಹೆಸರು ಪಡೆದಿದ್ದಾನೆ. ಒಳ್ಳೆ ಹೆಸರು ಪಡೆದಿರುವ ಆಸಿಫ್‌ ಅನಾಚಾರಗಳನ್ನು ಪತ್ನಿ ಶಬನಮ್‌ ಹೊರಗೆಳೆದಿದ್ದಾರೆ.

ಮನೆಯೊಳಗೆ ಸಮಾಜ ಸೇವಕನ ಮೃಗೀಯ ವರ್ತನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗಳ ಪ್ರೀತಿ ವಿಚಾರ ಗೊತ್ತಾಗಿದ್ದಕ್ಕೆ ಕಾಲಿನಲ್ಲಿ ತುಳಿದು ಹಲ್ಲೆ ನಡೆಸಿದ್ದಾನೆ. ಮಗಳ ಮೇಲಿನ ಹಲ್ಲೆ ತಪ್ಪಿಸಲು ಹೋದ ಪತ್ನಿಗೂ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ. ಇಷ್ಟು ಮಾತ್ರವಲ್ಲ ಆಫಿಸ್‌ ನೀಚತನ ಎಷ್ಟಿದೆ ಎಂದರೆ ತನ್ನ ಮಗಳ ವಿಡಿಯೋವನ್ನು ಎಡಿಟ್ ಮಾಡಿ ಹರಿಬಿಟ್ಟಿದ್ದಾನೆ.

ಇದನ್ನೂ ಓದಿ: Physical Abuse : ಬಸ್​​ನಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟವನಿಗೆ ಮಹಿಳೆಯರಿಂದ ಗೂಸಾ

ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ

ಅಪ್ಪನ ಕೃತ್ಯಕ್ಕೆ ಬೇಸತ್ತ ಮಗಳು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಆಫಿಸ್‌ ಮಗಳು ಸಂಬಂಧಿ ಹುಡುಗನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಮಗಳ ಹಾಗೂ ಆ ಹುಡುಗನ ಫೋಟೊ, ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವಾಟ್ಸ್‌ ಆ್ಯಪ್‌ ಗ್ರೂಪ್‌ವೊಂದಕ್ಕೆ ವೈರಲ್‌ ಮಾಡಿದ್ದಾನೆ.

ಡ್ರಗ್ಸ್‌ ವ್ಯಸನಿ

ಶಬನಮ್ ತನ್ನ ಪತಿ ಆಸಿಫ್‌ನ ಅಸಲಿ ಮುಖ ತೆರೆದಿಟ್ಟಿದ್ದಾರೆ. ನನ್ನ ಪತಿ ಡ್ರಗ್ಸ್ ವ್ಯಸನಿಯಾಗಿದ್ದು, ಬ್ರೌನ್ ಶುಗರ್ ತೆಗೆದುಕೊಂಡು ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ವೃದ್ಧರಿಗೆ, ವಿಶೇಷ ಚೇತನರಿಗೆ ಮೈಮುನಾ ಫೌಂಡೇಶನ್ ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದ ಆಸಿಫ್, ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಎಂದಿದ್ದಾರೆ.

ಸಮಾಜಮುಖಿ ಕಾರ್ಯದಿಂದ ಆಸಿಫ್ ಪೊಲೀಸರ ಜತೆಗೆ ಉತ್ತಮ ಸಖ್ಯ ಹೊಂದಿದ್ದಾನೆ. ಹೀಗಾಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಉಡುಪಿಯಲ್ಲಿ ಆಸಿಫ್ ಪತ್ನಿ ಶಬನಮ್ ಆರೋಪಿಸಿದ್ದಾರೆ. ಸದ್ಯ ಪಡುಬಿದ್ರಿ ಠಾಣೆಯಲ್ಲಿ ಹಲ್ಲೆ, ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಲೇ ಆರೋಪಿ ಆಸಿಫ್ ತಲೆಮರೆಸಿಕೊಂಡಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ಕಲ್ಲಂಗಡಿ ಹಣ್ಣಿನ ತಂದೂರಿ ಚಿಕನ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವಿಶಿಷ್ಟವಾದ ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿಯ ವಿಡಿಯೋವು ಆಹಾರಪ್ರಿಯರ ಗಮನವನ್ನು ಸೆಳೆದಿದೆ. ಎರಡೂ ಪದಾರ್ಥಗಳನ್ನು ಪ್ರತ್ಯೇಕವಾಗಿ ತಿಂದರೆ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಆದರೆ ಕಲ್ಲಂಗಡಿ ಒಳಗೆ ಕೋಳಿ ಹುರಿಯುವುದೇ? ಸರಿ, ಅದು ಸಂಪೂರ್ಣವಾಗಿ ಅಸಾಂಪ್ರದಾಯಿಕವೆಂದು ತೋರುತ್ತದೆ. ಈ ಬಗ್ಗೆ ನೆಟ್ಟಿಗರು ಏನು ಹೇಳಿದ್ದಾರೆ ಗೊತ್ತೇ? ಈ ಕುತೂಹಲಕರ ವಿಡಿಯೊ ನೋಡಿ.

VISTARANEWS.COM


on

By

Viral Video
Koo

ಯಾರೂ ಮಾಡದ, ಹೆಸರೇ ಕೇಳದ ಚಿತ್ರವಿಚಿತ್ರ ಆಹಾರಗಳು ಸಾಮಾಜಿಕ ಜಾಲತಾಣದಲ್ಲಿ (social media) ಕೆಲವೊಮ್ಮೆ ಎಲ್ಲರ ಗಮನ ಸೆಳೆಯುತ್ತದೆ. ಅಂತಹವುಗಳಲ್ಲಿ ಈಗ ಕಲ್ಲಂಗಡಿ (Watermelon) ಹಣ್ಣಿನ ತಂದೂರಿ (Tandoori Chicken) ಚಿಕನ್ ವಿಡಿಯೋ ವೈರಲ್ (Viral Video) ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಸಿದೆ.

ವಿಲಕ್ಷಣ ಆಹಾರ ಸಂಯೋಜನೆಗಳು ಮತ್ತು ಅಸಾಮಾನ್ಯ ಪಾಕಶಾಲೆಯ ಪ್ರಯೋಗಗಳು ಎಲ್ಲರನ್ನೂ ಆಶ್ಚರ್ಯಗೊಳ್ಳುವಂತೆ ಮಾಡುತ್ತದೆ. ಇದರ ರುಚಿ ಹೇಗಿರುತ್ತದೆ ಎಂಬುದನ್ನು ಮಾಡಿದವರು, ತಿಂದವರೇ ಹೇಳಬಹುದು. ಆದರೆ ಇಂತಹ ಪ್ರಯೋಗಗಳು ಕೆಲವೊಮ್ಮೆ ಭಯ ಹುಟ್ಟುವಂತೆ ಮಾಡಿದರೆ ಇನ್ನು ಕೆಲವೊಮ್ಮೆ ನಮ್ಮನ್ನು ದಂಗಾಗಿ ಬಿಡುವಂತೆ ಮಾಡುತ್ತದೆ.

ಇದೇ ರೀತಿಯಲ್ಲಿ ಈಗ ವಿಶಿಷ್ಟವಾದ ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿಯ ವಿಡಿಯೋವು ಆಹಾರಪ್ರಿಯರ ಗಮನವನ್ನು ಸೆಳೆದಿದೆ. ಎರಡೂ ಪದಾರ್ಥಗಳನ್ನು ಪ್ರತ್ಯೇಕವಾಗಿ ತಿಂದರೆ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಆದರೆ ಕಲ್ಲಂಗಡಿ ಒಳಗೆ ಕೋಳಿ ಹುರಿಯುವುದೇ? ಸರಿ, ಅದು ಸಂಪೂರ್ಣವಾಗಿ ಅಸಾಂಪ್ರದಾಯಿಕವೆಂದು ತೋರುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹೆಚ್ಚಾಗಿ ಅಪರಿಚಿತ ವಿಧಾನವನ್ನು ಬಳಸಿಕೊಂಡು ಇಡೀ ಕೋಳಿಯನ್ನು ಸಿದ್ಧಪಡಿಸುತ್ತಿದ್ದಾರೆ. ವಿಡಿಯೋ ಕ್ಲಿಪ್ ನಲ್ಲಿ ಅವರು ಕಲ್ಲಂಗಡಿಯ ಮೇಲಿನ ಭಾಗವನ್ನು ಕತ್ತರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಒಂದು ಲೋಟವನ್ನು ಬಳಸಿ ಅದರಲ್ಲಿರುವ ರಸಭರಿತವಾದ ಕೆಂಪು ಮಾಂಸವನ್ನು ಹೊರಹಾಕುತ್ತಾರೆ ಮತ್ತು ತುಂಡುಗಳನ್ನು ಪ್ರತ್ಯೇಕ ಬಟ್ಟಲಿನಲ್ಲಿ ಇಡುತ್ತಾಳೆ.

ವೈರಲ್ ವಿಡಿಯೋದಲ್ಲಿ ಪಿಂಕ್ ತಂದೂರಿ ಚಿಕನ್ ಅನ್ನು ತೋರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇದನ್ನು “ಬಾರ್ಬಿ-ಕ್ಯೂ ಚಿಕನ್” ಎಂದು ಕರೆದಿದ್ದಾರೆ.

ಮಹಿಳೆ ಸಂಪೂರ್ಣವಾಗಿ ಚರ್ಮದ ಚಿಕನ್ ಅನ್ನು ನೀರಿನಲ್ಲಿ ತೊಳೆದು ಮಾಂಸದ ಮೇಲೆ ಮೂರು ನಿಖರವಾದ ಕಡಿತಗಳನ್ನು ಮಾಡಿದ್ದಾಳೆ. ಮತ್ತೊಂದು ಬಟ್ಟಲಿನಲ್ಲಿ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಅನ್ನು ಸೇರಿಸಿದ್ದಾಳೆ. ಅನಂತರ ಮಸಾಲೆಗಳನ್ನು ಸೇರಿಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ಹಿಂಡಿ ಮಿಶ್ರಣಕ್ಕೆ ನೀರು ಬೆರೆಸಿ ಚಿಕನ್ ಅನ್ನು ಅದರೊಳಗೆ ಕಲಸುತ್ತಾರೆ.

ಬಳಿಕ ಚಿಕನ್ ಅನ್ನು ಮರದ ಕೋಲಿನ ಮೇಲೆ ಇಡಲಾಗುತ್ತದೆ. ಟೊಳ್ಳಾದ ಕಲ್ಲಂಗಡಿಯೊಳಗೆ ಮುಚ್ಚಲಾಗುತ್ತದೆ. ಮಾಂಸವನ್ನು ಹುರಿಯಲು ತೆಂಗಿನ ಸಿಪ್ಪೆ ಮತ್ತು ಕಡ್ಡಿಗಳನ್ನು ಬಳಸಲಾಗುತ್ತದೆ. ಬೆಂಕಿ ಕಡಿಮೆಯಾದ ಅನಂತರ ಗೋಲ್ಡನ್ ಬ್ರೌನ್ ಮತ್ತು ಸ್ವಲ್ಪ ಸುಟ್ಟ ಕೋಳಿಯನ್ನು ತೆಗೆಯಲಾಗುತ್ತದೆ. ಇದರೊಂದಿಗೆ ಕಲ್ಲಂಗಡಿ ಚಿಕನ್ ಬಡಿಸಲು ಸಿದ್ಧವಾಗುತ್ತದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಭಕ್ಷ್ಯದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೋಳಿಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಜಗತ್ತಿನಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ಇದು ಸಸ್ಯಾಹಾರಿ ಅಥವಾ ಮಾಂಸಾಹಾರವೇ ಎಂದು ಪ್ರಶ್ನಿಸಿದ್ದಾರೆ.


ಬಹುಶಃ ಈ ಖಾದ್ಯದಿಂದ ಅಸಹ್ಯಗೊಂಡಿರುವ ಒಬ್ಬ ಬಳಕೆದಾರ, ಸಸ್ಯಾಹಾರಿಯಾಗಲು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

ಇದು ನಿಜವಾಗಿಯೂ ಚೆನ್ನಾಗಿತ್ತು, ನಾನು ಅದನ್ನು ಇಷ್ಟಪಟ್ಟೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಲವ್ಲಿ ಸ್ಟೈಲ್ ಆಫ್ ಅಡುಗೆ ಎಂದು ಇನ್ನೊಬ್ಬರು ಹೊಗಳಿದ್ದಾರೆ.

ಈ ವಿಡಿಯೋ 25 ಮಿಲಿಯನ್‌‌ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Continue Reading

ವೈರಲ್ ನ್ಯೂಸ್

Viral video: ಮೌಂಟ್ ಎವರೆಸ್ಟ್ ಸೌಂದರ್ಯ ಸೆರೆ ಹಿಡಿದ ಡ್ರೋನ್; ಈ ವಿಡಿಯೊ ನೋಡಿದರೆ ಪರ್ವತ ಏರಿದ ಅನುಭವ!

ಮೌಂಟ್ ಎವರೆಸ್ಟ್‌ನಲ್ಲಿರುವ ಕಠಿಣ ಪರಿಸ್ಥಿತಿಯ ನಡುವೆ ಎತ್ತರದ ಶಿಖರದಲ್ಲಿ ಉನ್ನತ ದರ್ಜೆಯ ಡ್ರೋನ್ ಅನ್ನು ಕಳುಹಿಸಿ ಅದನ್ನು ಟ್ರ್ಯಾಕ್ ಮಾಡುವುದು ಸುಲಭವೇನಲ್ಲ. ಈ ಎಲ್ಲ ಪರಿಸ್ಥಿತಿಗಳ ನಡುವೆಯು ಚೀನಾದ ಡ್ರೋನ್ ತಯಾರಕ ಡಿಜೆಐ ತಯಾರಿಸಿದ ಡಿಜೆಐ ಮಾವಿಕ್ 3 ವಿಡಿಯೋ (Viral Video) ಸೆರೆ ಹಿಡಿದಿದ್ದು. ಈ ವಿಡಿಯೊ ನೋಡಿದರೆ ಹಿಮ ಪರ್ವತವನ್ನು ಸ್ವತಃ ನೋಡಿದ ಅನುಭವ ಆಗುತ್ತದೆ!

VISTARANEWS.COM


on

By

Viral video
Koo

ವಿಶ್ವದ ಅತಿ ಎತ್ತರದ ಪರ್ವತದ ಶಿಖರವಾದ ಮೌಂಟ್ ಎವರೆಸ್ಟ್ ನ (Mount Everest) ಬೇಸ್ ಕ್ಯಾಂಪ್‌ನಿಂದ 3,500 ಮೀಟರ್‌ ಎತ್ತರದಲ್ಲಿ ಮೇಲೆ ಚೀನಾದ (china) ಡ್ರೋನ್ (drone ) ಹಾರುತ್ತಿರುವ ಅಪರೂಪದ ವೈಮಾನಿಕ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ (Viral video) ಆಗಿದೆ. ಆದರೆ ಇದನ್ನು ಚೀನಾ ನಿರಾಕರಿಸಿದೆ.

ಡಿಜೆಐ ಮಾವಿಕ್ 3 ಡ್ರೋನ್, 8ಕೆಆರ್ ಡಬ್ಲ್ಯೂ ಸಹಯೋಗದೊಂದಿಗೆ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನಿಂದ ಶಿಖರದವರೆಗೆ ಬೆರಗುಗೊಳಿಸುವ ವೈಮಾನಿಕ ದೃಶ್ಯಗಳನ್ನು ಸೆರೆಹಿಡಿದಿದೆ.

ಮೌಂಟ್ ಎವರೆಸ್ಟ್‌ನಲ್ಲಿರುವ ಕಠಿಣ ಪರಿಸ್ಥಿತಿಯ ನಡುವೆ ಎತ್ತರದ ಶಿಖರದಲ್ಲಿ ಉನ್ನತ ದರ್ಜೆಯ ಡ್ರೋನ್ ಅನ್ನು ಕಳುಹಿಸಿ ಅದನ್ನು ಟ್ರ್ಯಾಕ್ ಮಾಡುವುದು ಸುಲಭವೇನಲ್ಲ. ಈ ಎಲ್ಲ ಪರಿಸ್ಥಿತಿಗಳ ನಡುವೆಯು ಚೀನಾದ ಡ್ರೋನ್ ತಯಾರಕ ಡಿಜೆಐ ತಯಾರಿಸಿದ ಡಿಜೆಐ ಮಾವಿಕ್ 3 ವಿಡಿಯೋ ಸೆರೆ ಹಿಡಿದಿದೆ ಎನ್ನಲಾಗಿದೆ.

ಬೇಸ್ ಕ್ಯಾಂಪ್‌ನಿಂದ 3,500 ಮೀಟರ್‌ ಗಳಿಗಿಂತಲೂ ಎತ್ತರದಲ್ಲಿ ಡ್ರೋನ್ ಈ ವಿಡಿಯೋವನ್ನು ಸೆರೆ ಹಿಡಿದಿದೆ. ಅತ್ಯದ್ಭುತ ವೈಮಾನಿಕ ನೋಟವನ್ನು ಇದು ಸೆರೆ ಹಿಡಿದಿದೆ. ಡಿಜೆಐ ಮಾವಿಕ್ 3ನ ಸಾಮರ್ಥ್ಯವನ್ನು ಇದು ಪ್ರದರ್ಶಿಸಿದೆ. ಚೈನೀಸ್ ಫೋಟೋಗ್ರಫಿ ಪ್ಲಾಟ್‌ಫಾರ್ಮ್ 8ಕೆಆರ್ ಎಡಬ್ಲ್ಯೂ ಸಹಯೋಗದೊಂದಿಗೆ ಈ ಸಾಧನೆಯನ್ನು ಮಾಡಲಾಗಿದೆ ಎನ್ನಲಾಗಿದೆ.


ಎಕ್ಸ್ ನಲ್ಲಿ @yicaichina ಎಂಬ ಹೆಸರಿನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಡ್ರೋನ್ ಎವರೆಸ್ಟ್‌ನ ಹಿಮದಿಂದ ಆವೃತವಾದ ಶಿಖರಗಳ ಮೇಲೆ ಸಂಚರಿಸಿದೆ. ಸ್ಪಷ್ಟವಾದ ನೀಲಿ ಆಕಾಶವನ್ನು ಸೆರೆ ಹಿಡಿಯಲಾಗಿದೆ. ಪರ್ವತಾರೋಹಿಗಳು ಕಾಣಿಸುತ್ತಾರೆ. ಕೆಮರಾವು ಬೇಸ್ ಕ್ಯಾಂಪ್‌ ನ ಸುತ್ತ ಸುತ್ತಿದೆ. ಡೇರೆಗಳು ಭೂದೃಶ್ಯವನ್ನು ತೋರಿಸಿದೆ .

ಇದನ್ನೂ ಓದಿ: Viral News: ಮೃತ ಇಂಜಿನಿಯರ್‌ನನ್ನು ಟ್ರಾನ್ಸ್‌ಫರ್‌ ಮಾಡಿದ ನಗರಾಭಿವೃದ್ಧಿ ಇಲಾಖೆ!

ಬೆರಗುಗೊಳಿಸುವ ದೃಶ್ಯಗಳನ್ನು ಸೆರೆ ಹಿಡಿದಿರುವ ಈ ವಿಡಿಯೋ 192.4 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದು, ನಾನು ಎವರೆಸ್ಟ್ ಶಿಖರವನ್ನು ಹತ್ತಿದ ಅನುಭವವನ್ನು ಇದು ಕೊಟ್ಟಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಬಳಕೆದಾರರು ಇದು ನಂಬಲಾಗದ್ದು ಎಂದು ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಊಟದಲ್ಲಿ ಮೀನು-ಮಾಂಸ ಮಿಸ್ಸಿಂಗ್;‌ ನೋಡ ನೋಡ್ತಿದ್ದಂತೆ ಮದುವೆ ಮನೆ ರಣರಂಗ-ಇಲ್ಲಿದೆ ನೋಡಿ ವಿಡಿಯೋ

Viral Video: ಊಟದಲ್ಲಿ ಮೀನು ಮಾಂಸ ಇಲ್ಲವೆಂದು ತಿಳಿಯುತ್ತಿದ್ದಂತೆ ಕೆಂಡಾಮಂಡಲವಾದ ಅಭಿಷೇಕ್‌ ತಂದೆ ಹಾಗೂ ಕುಟುಂಬಸ್ಥರು ಗಲಾಟೆ ಶುರುಮಾಡಿದ್ದಾರೆ. ಸಾಲದೆನ್ನುವಂತೆ ವಧುವಿನ ಕಡೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಕುರ್ಚಿ, ಟೇಬಲ್‌, ಕೋಲನ್ನು ಎಸೆದು ದಾಂಧಲೆ ಎಬ್ಬಿಸಿದ್ದಾರೆ. ವಧುವಿನ ತಂದೆಯನ್ನು ಥಳಿಸಿದ್ದಾರೆ.

VISTARANEWS.COM


on

Viral Video
Koo

ಲಖನೌ: ಮದುವೆ ಎಂಬುವುದೇ ಒಂದು ರೀತಿಯ ಸಂಭ್ರಮ. ಖರ್ಚು-ವೆಚ್ಚಗಳ ತಲೆಬಿಸಿ ಒಂದು ಕಡೆಯಾದ್ರೆ ಖುಷಿ, ಸಂಭ್ರಮ ಮತ್ತೊಂದು ಕಡೆ ಇದ್ದೇ ಇರುತ್ತದೆ. ಇಂತಹ ಸಂಭ್ರಮ ಕೆಲವೊಮ್ಮೆ ಸಣ್ಣ ಕಾರಣಕ್ಕಾಗಿ ಕೊನೇ ಕ್ಷಣದಲ್ಲಿ ದುಃಖದಲ್ಲಿ ಕೊನೆಯಾಗುವುದು ಇದೆ. ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಮದುವೆ ಅಂದ ಮೇಲೆ ಕೇಳಬೇಕೆ? ಎರಡೂ ಕಡೆಗಳ ನೆಂಟರು, ಬಂಧುಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರಸ್ಪರ ಸಂತಸ ಸಂಭ್ರಮದಿಂದ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಏಕಾಏಕಿ ಗಲಾಟೆ ಶುರುವಾಗಿತ್ತು. ಎರಡೂ ಕುಟುಂಬಸ್ಥರು ಪರಸ್ಪರ, ಖುರ್ಚಿ, ಕೋಲು ಹೀಗೆ ಕೈಗೆ ಸಿಕ್ಕಿದರಲ್ಲಿ ಹೊಡೆದಾಡಿಕೊಳ್ಳಲು ಶುರು ಮಾಡಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಫಿರೋಜಾಬಾದ್‌ನ ಆನಂದ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಅಭಿಷೇಕ್‌ ಮತ್ತು ಸುಷ್ಮಾ ಎಂಬ ಜೋಡಿಯ ಮದುವೆ ನಿಶ್ಚಯಿಸಲಾಗಿತ್ತು. ವಧುವಿನ ಕಡೆಯಲ್ಲೇ ಮದುವೆ ಆಯೋಜಿಸಿದ್ದ ಕಾರಣ ತನ್ನ ಪರಿವಾರದೊಂದಿಗೆ ಅಭಿಷೇಕ್‌ ಆಗಮಿಸಿದ್ದ. ಎಲ್ಲವೂ ಚೆನ್ನಾಗೇ ನಡೆಯುತ್ತಿತ್ತು. ವರಮಾಲಾ ಕೂಡ ನಡೆದಿತ್ತು. ಇನ್ನು ಮದುವೆ ಊಟ ಅಂದ್ರೆ ಕೇಳಬೇಕೆ? ಲಕ್ಷಾಂತರ ರೂ. ಖರ್ಚು ಮಾಡಿ ಸುಷ್ಮಾ ಮನೆಯವರು ವಿವಿಧ ಭಕ್ಷ್ಯ ಭೋಜನಗಳನ್ನು ಮಾಡಿದ್ದರು. ಸಾಲದೆನ್ನುವುದಕ್ಕೆ 5ಲಕ್ಷ ರೂ. ವರದಕ್ಷಿಣೆಯನ್ನೂ ನೀಡಿದ್ದರು. ಇಷ್ಟೆಲ್ಲಾ ತಯಾರಿ ನಡುವೆ ಎರಡು ವಿಚಾರಗಳು ಮಿಸ್‌ ಆಗಿದ್ದವು. ಮದುವೆ ಊಟದಲ್ಲಿ ಮೀನು ಮತ್ತು ಮಾಂಸ ಇರಲಿಲ್ಲ. ಕೇವಲ ಸಸ್ಯಾಹಾರ ಡಿಶ್‌ಗಳನ್ನು ಸರ್ವ್‌ ಮಾಡಲಾಗಿತ್ತು.

ಇನ್ನೇನು ಅಭಿಷೇಕ್‌ ಸುಷ್ಮಾಳಿಗೆ ತಾಳಿ ಕಟ್ಟಬೇಕೆನ್ನುವ ಹೊತ್ತಿಗೆ ಈ ವಿಚಾರ ವರನ ಕಡೆಯವರಿಗೆ ತಿಳಿದಿತ್ತು. ಊಟದಲ್ಲಿ ಮೀನು ಮಾಂಸ ಇಲ್ಲವೆಂದು ತಿಳಿಯುತ್ತಿದ್ದಂತೆ ಕೆಂಡಾಮಂಡಲವಾದ ಅಭಿಷೇಕ್‌ ತಂದೆ ಹಾಗೂ ಕುಟುಂಬಸ್ಥರು ಗಲಾಟೆ ಶುರುಮಾಡಿದ್ದಾರೆ. ಸಾಲದೆನ್ನುವಂತೆ ವಧುವಿನ ಕಡೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಕುರ್ಚಿ, ಟೇಬಲ್‌, ಕೋಲನ್ನು ಎಸೆದು ದಾಂಧಲೆ ಎಬ್ಬಿಸಿದ್ದಾರೆ. ವಧುವಿನ ತಂದೆಯನ್ನು ಥಳಿಸಿದ್ದಾರೆ.

ಐದು ಲಕ್ಷ ವರದಕ್ಷಿಣೆ, ಉಂಗುರ ಗಿಫ್ಟ್‌

ಇನ್ನು ಘಟನೆಗೆ ಸಂಬಂಧಿಸಿದ್ದಂತೆ ಸುಷ್ಮಾ ಅವರ ತಂದೆ ದಿನೇಶ್‌ ಶರ್ಮಾ ದೂರು ನೀಡಿದ್ದಾರೆ. ದೂರಿನಲ್ಲಿ ತಾವು ಸುರೇಂದ್ರ ಶರ್ಮಾ ಅವರ ಪುತ್ರ ಅಭಿಷೇಕ್‌ ಶರ್ಮಾಗೆ ಸುಮಾರು ಐದು ಲಕ್ಷ ವರದಕ್ಷಿಣೆ ನೀಡಿದ್ದೇನೆ. ಅದೂ ಅಲ್ಲದೇ 20,000 ರೂ. ಮೌಲ್ಯದ ಚಿನ್ನದ ಉಂಗೂರ ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

Continue Reading
Advertisement
Assembly Session
ರಾಜಕೀಯ10 mins ago

Assembly Session: ನಾಳೆಯಿಂದ ಮಳೆಗಾಲದ ಅಧಿವೇಶನ: ಹೇಗಿದೆ ಸರ್ಕಾರ, ಪ್ರತಿಪಕ್ಷಗಳ ತಯಾರಿ?

Udupi News
ಉಡುಪಿ21 mins ago

Udupi News : ಇವನೆಂಥ ಅಪ್ಪ.. ಮಗಳ ಪ್ರೀತಿಗೆ ವಿರೋಧಿಸಿ ಅಶ್ಲೀಲ ವಿಡಿಯೊ ಹರಿಬಿಟ್ಟ ನೀಚ

Murder Case
ಕರ್ನಾಟಕ27 mins ago

Murder Case: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬಾಲಕಿ ಶವ ಪತ್ತೆ ಕೇಸ್‌; ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದಳಾ 5 ವರ್ಷದ ಪುತ್ರಿ?

Ninagagi Kannada Serial entry by Pooja Gandhi
ಕಿರುತೆರೆ1 hour ago

Ninagagi Kannada Serial: ಕಿರುತೆರೆಗೆ ಎಂಟ್ರಿ ಕೊಟ್ಟ ಮಳೆ ಹುಡುಗಿ ಪೂಜಾ ಗಾಂಧಿ!

Cauvery Dispute
ರಾಜಕೀಯ1 hour ago

Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

haveri News
ಹಾವೇರಿ1 hour ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಕರ್ನಾಟಕ1 hour ago

Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Bhavana Ramanna hoovu foundation Varna Spardhe Bharathanatya Competition
ಸಿನಿಮಾ2 hours ago

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Road Accident
ಬೆಂಗಳೂರು ಗ್ರಾಮಾಂತರ2 hours ago

Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

Gold Rate Today
ಚಿನ್ನದ ದರ2 hours ago

Gold Rate Today: ಮತ್ತೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ; ಆಭರಣ ಕೊಳ್ಳುವ ಮುನ್ನ ದರ ಗಮನಿಸಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ19 hours ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ1 day ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ5 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ5 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ6 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

ಟ್ರೆಂಡಿಂಗ್‌