Shah Rukh Khan: ಕೇವಲ ಸ್ಮಾರ್ಟ್‌ ಫೋನ್‌ ಬಳಸಿ ʻಜವಾನ್‌ʼ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್; ಶಾರುಖ್‌ ಫಿದಾ! Vistara News

ಬಾಲಿವುಡ್

Shah Rukh Khan: ಕೇವಲ ಸ್ಮಾರ್ಟ್‌ ಫೋನ್‌ ಬಳಸಿ ʻಜವಾನ್‌ʼ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್; ಶಾರುಖ್‌ ಫಿದಾ!

Shah Rukh Khan: ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್‌ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್‌ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Shah Rukh Khan YouTuber Zarmatics scene
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಾರುಖ್ ಖಾನ್ (Shah Rukh Khan) ಅವರು ತಮ್ಮ ಇತ್ತೀಚಿನ ಬ್ಲಾಕ್‌ಬಸ್ಟರ್‌ ‘ಜವಾನ್’ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಸಿನಿಮಾ ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಫ್ಯಾನ್ಸ್‌ ಬೆಂಬಲಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಶಾರುಖ್‌ ಆಗಾಗ ಟ್ವಿಟರ್‌ನಲ್ಲಿ ಸೇಷನ್‌ ಏರ್ಪಡಿಸಿ ಮಾತನಾಡುತ್ತಿದ್ದಾರೆ.

ಇತ್ತೀಚಿನ ಪೋಸ್ಟ್‌ನಲ್ಲಿ ಶಾರುಖ್ ಖಾನ್ ಅವರು ಯೂಟ್ಯೂಬರ್, ಜರ್ಮಾಟಿಕ್ಸ್ (zarmatics) ರಚಿಸಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್‌ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್‌ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬರ್‌ ಜವಾನ್‌ ಸಿನಿಮಾದ ದೃಶ್ಯವೊಂದನ್ನು ಮರುಸೃಷ್ಟಿ ಮಾಡಿರುವ ಬಗ್ಗೆ ಶಾರುಖ್‌ ಇದೀಗ ʻʻತುಂಬಾ ಮಾಸ್‌ ಆಗಿದೆ, ಅದ್ಭುತʼʼ ಎಂದು ಹೊಗಳಿದ್ದಾರೆ. ಶಾರುಖ್ ಖಾನ್ ಅವರ ‘ಜವಾನ್’ ಸೆಪ್ಟೆಂಬರ್ 7ರಂದು ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮಾಡುತ್ತಿದೆ. ಈಗಾಗಲೇ 1000 ಕೋಟಿ ರೂ. ಗಡಿ ದಾಟತಿದೆ. ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

2023 ಬಾದ್‌ಷಾ ವರ್ಷ 

ಈ ಬಾರಿ ಶಾರುಖ್‌ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ʼಡಂಕಿʼ ಸಿನಿಮಾವನ್ನು ಫ್ಯಾನ್ಸ್‌ಗೆ ಗಿಫ್ಟ್‌ ಆಗಿ ನೀಡಲಿದ್ದಾರೆ. ʼಡಂಕಿʼ ಚಿತ್ರಕ್ಕೆ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬೆಂಬಲ ನೀಡಿವೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿಯ ಹೊರತಾಗಿ ಬೊಮನ್ ಇರಾನಿ ಕೂಡ ನಟಿಸಲಿದ್ದಾರೆ.

ಇದನ್ನೂ ಓದಿ: Jawan box office collection: 9 ತಿಂಗಳಲ್ಲೇ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್‌; ʻಜವಾನ್‌ʼ ಹೊಸ ದಾಖಲೆ!

ʼಬಾಲಿವುಡ್​ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ (Dunki Movie) ಚಿತ್ರದ ಒಟಿಟಿ (Dunki OTT) ಹಕ್ಕುಗಳು ಸೇಲ್​ ಆಗಿವೆ. ಅದು ಕೂಡ ಬರೋಬ್ಬರಿ 155 ಕೋಟಿ ರೂ. ಎಂದು ಹೇಳಲಾಗುತ್ತಿದೆ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.ಕ್ಲಾಸ್​ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್​ ಎಂಬಿಬಿಎಸ್​​’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜತೆ ರಾಜ್​ಕುಮಾರ್​ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

Animal Movie: ‘ಅನಿಮಲ್’ 600 ಕೋಟಿ ರೂ. ಗಳಿಕೆ; ಗಲ್ಲಾಪೆಟ್ಟಿಗೆಯಲ್ಲಿ ಮುಂದುವರಿದ ಕಮಾಲ್!

Animal Movie: ಕೇವಲ 8 ದಿನಗಳಲ್ಲಿ ಈ ಚಿತ್ರವು ರಣಬೀರ್‌ ಕಪೂರ್‌ ನಟನೆಯ ಈ ಹಿಂದಿನ ʼಸಂಜುʼ ಚಿತ್ರದ ಲೈಫ್‌ ಟೈಮ್‌ ಕಲೆಕ್ಷನ್‌ ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿದೆ.

VISTARANEWS.COM


on

animal cinema
Koo

ಡಿಸೆಂಬರ್‌ 1ರಂದು ತೆರೆಕಂಡ ಬಾಲಿವುಡ್‌ ಚಿತ್ರ ಅನಿಮಲ್‌ (Animal Movie) ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 60 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು. ಇದೀಗ ಚಿತ್ರ ಬಿಡುಗಡೆಗೊಂಡು 1 ವಾರ ಕಳೆದಿದ್ದು, ಸುಮಾರು 600 ಕೋಟಿ ರೂ. ಗಳಿಸಿದೆ. ರಣಬೀರ್‌ ಕಪೂರ್‌ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿ ತೆರೆ ಹಂಚಿಕೊಂಡಿರುವ ಈ ಚಿತ್ರಕ್ಕೆ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಅನಿಮಲ್‌’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್‌ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದೆ. ಕೇವಲ 8 ದಿನಗಳಲ್ಲಿ ಈ ಚಿತ್ರವು ರಣಬೀರ್‌ ಕಪೂರ್‌ ನಟನೆಯ ಈ ಹಿಂದಿನ ʼಸಂಜುʼ ಚಿತ್ರದ ಲೈಫ್‌ ಟೈಮ್‌ ಕಲೆಕ್ಷನ್‌ ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿದೆ. ಆ ಮೂಲಕ ರಣಬೀರ್ ಕಪೂರ್ ಅವರ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಲಿದೆ. ಎರಡನೇ ವಾರದ ಆರಂಭದಲ್ಲಿಯೇ 400 ಕೋಟಿ ರೂ.ಗಳ ಕ್ಲಬ್‌ಗೆ ಪ್ರವೇಶಿಸಲಿದೆ ಎಂದು ಬಾಲಿವುಡ್‌ ಪಂಡಿತರು ಲೆಕ್ಕ ಹಾಕಿದ್ದಾರೆ.

ಅನಿಮಲ್ ತನ್ನ ಮೊದಲ ವಾರದಲ್ಲಿ ವಿಶ್ವಾದ್ಯಂತ 563 ಕೋಟಿ ರೂ. ಗಳಿಸಿತು ಮತ್ತು ಎರಡನೇ ಶುಕ್ರವಾರ ವಿಶ್ವಾದ್ಯಂತ 600.67 ಕೋಟಿ ವ್ಯಾಪಾರ ಮಾಡಿದೆ.

ಐದು ದಿನಗಳಲ್ಲಿ ಈ ಚಿತ್ರವು ರಣಬೀರ್ ಅವರ ಎರಡನೇ ಅತಿದೊಡ್ಡ ಹಿಟ್ ಆಗಿದ್ದ ʼಬ್ರಹ್ಮಾಸ್ತ್ರ: ಪಾರ್ಟ್ ಒನ್-ಶಿವʼ ಸಿನಿಮಾದ ಕಲೆಕ್ಷನ್‌ ಹಿಂದಿಕ್ಕಿದೆ. ಆ ಚಿತ್ರ ಸುಮಾರು 282.96 ಕೋಟಿ ರೂ.ಗಳನ್ನು ಗಳಿಸಿತ್ತು. ಆರೇ ದಿನಗಳಲ್ಲಿ ʼಅನಿಮಲ್‌ʼ 300 ಕೋಟಿ ರೂ. ಕ್ಲಬ್ ಪ್ರವೇಶಿಸಿತ್ತು. ಗುರುವಾರ (ಡಿಸೆಂಬರ್‌ 7)ರಂದು ಈ ಸಿನಿಮಾ 25.50 ಕೋಟಿ ರೂ. ಗಳಿಸಿದೆ. ಸದ್ಯ ಚಿತ್ರದ ಒಟ್ಟು ಕಲೆಕ್ಷನ್‌ 338.35 ಕೋಟಿ ರೂ. ಆಗಿದೆ. ʼಸಂಜುʼ ಸಿನಿಮಾ ಭಾರತದಲ್ಲಿ 342 ಕೋಟಿ ರೂ. ಗಳಿಸಿತ್ತು. ಶುಕ್ರವಾರದ ಮುಂಗಡ ಬುಕಿಂಗ್ ಪ್ರಕಾರ, ಸುಮಾರು 5 ಕೋಟಿ ರೂ. ಕಲೆಕ್ಷನ್‌ ಆಗಿದೆ. ಅಂದರೆ ʼಅನಿಮಲ್‌ʼ 343 ಕೋಟಿ ರೂ. ಗಳಿಸಿದಂತಾಗುತ್ತದೆ.

ಇದನ್ನೂ ಓದಿ: Animal Movie: ರಣಬೀರ್‌ ಕಪೂರ್‌ ವೃತ್ತಿ ಜೀವನದ ಅತೀ ಹೆಚ್ಚು ಕಲೆಕ್ಷನ್‌ ಮಾಡಿದೆ ʼಅನಿಮಲ್‌ʼ!

ಇನ್ನು ಐದು ದಿನಗಳಲ್ಲಿ ʼಅನಿಮಲ್‌ʼ ಚಿತ್ರವು ವಿಶ್ವಾದ್ಯಂತ 481 ಕೋಟಿ ರೂ.ಗಳಿಸಿದೆ. ಈಗಾಗಲೇ ಜಾಗತಿಕವಾಗಿ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದೆ. ‘ಜವಾನ್’, ‘ಪಠಾಣ್‌’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ. ಶಾರುಖ್ ಖಾನ್ ಅವರ ‘ಜವಾನ್’ ಭಾರತದಲ್ಲಿ 643.87 ಕೋಟಿ ರೂ. ಗಳಿಸಿದರೆ, ‘ಪಠಾಣ್’ 543.05 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ 525.45 ಕೋಟಿ ರೂ. ಗಳಿಕೆ ಮಾಡಿದೆ.

ʼಅನಿಮಲ್‌ʼ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಂದೆ-ಮಗನ ನಡುವಿನ ಸಂಕೀರ್ಣ ಸಂಬಂಧದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.

Continue Reading

ಬಾಲಿವುಡ್

Amitabh Bachchan: ಐಶ್ವರ್ಯಾ ರೈ ಇನ್‌ಸ್ಟಾ ಅನ್‌ಫಾಲೋ ಮಾಡಿದ ಅಮಿತಾಭ್‌ ಬಚ್ಚನ್!

Amitabh Bachchan: ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವಿರಾಟ್ ಕೊಹ್ಲಿ, ಶ್ವೇತಾ ಬಚ್ಚನ್ ನಂದಾ ಮತ್ತು ನವ್ಯಾ ನವೇಲಿ ನಂದಾ ಸೇರಿದಂತೆ ಅಮಿತಾಭ್ ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 74 ಜನರನ್ನು ಫಾಲೋ ಮಾಡುತ್ತಿದ್ದರು. ಇದೀಗ ಏಕಾಏಕಿ ಅನ್‌ಫಾಲೋ ಮಾಡುತ್ತಿದ್ದಾರೆ.

VISTARANEWS.COM


on

Amitabh Bachchan Unfollows Aishwarya
Koo

ಬೆಂಗಳೂರು; ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಡಿವೋರ್ಸ್‌ ವದಂತಿ ಬೆನ್ನಲ್ಲೇ ಅಮಿತಾಭ್‌ ಬಚ್ಚನ್ (Amitabh Bachchan) ತಮ್ಮ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಇನ್‌ಸ್ಟಾಗ್ರಾಮ್‌ ಅನ್‌ಫಾಲೋ ಮಾಡಿದ್ದಾರೆ. ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವಿರಾಟ್ ಕೊಹ್ಲಿ, ಶ್ವೇತಾ ಬಚ್ಚನ್ ನಂದಾ ಮತ್ತು ನವ್ಯಾ ನವೇಲಿ ನಂದಾ ಸೇರಿದಂತೆ ಅಮಿತಾಭ್ ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 74 ಜನರನ್ನು ಫಾಲೋ ಮಾಡುತ್ತಿದ್ದರು. ಇದೀಗ ಏಕಾಏಕಿ ಅನ್‌ಫಾಲೋ ಮಾಡುತ್ತಿದ್ದಾರೆ. ಐಶ್ವರ್ಯಾ ಕೂಡ ಅಭಿಷೇಕ್ ಬಚ್ಚನ್ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ಮುಂಬೈನಲ್ಲಿ ನಡೆದ ಅಗಸ್ತ್ಯ ನಂದಾ ಅವರ ಚೊಚ್ಚಲ ಚಲನಚಿತ್ರ ʻದಿ ಆರ್ಚೀಸ್‌ʼ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬ ಭಾಗಿಯಾಗಿತ್ತು. ಮೂಲಗಳ ಪ್ರಕಾರ ಅಗಸ್ತ್ಯ ನಂದಾ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಡುವಾಗ ಐಶ್ವರ್ಯಾ ರೈ ಅವರು ಅಗಸ್ತ್ಯ ಅವರಿಗೆ ನಗುತ್ತಲೇ ಟೀಕೆ ಮಾಡಿದ್ದರಂತೆ. ‘ನೀನು ಕ್ಯಾಮೆರಾ ಫೇಸ್ ಮಾಡೋದು ಕಲಿಯಬೇಕು’ ಎಂದು ಹೇಳಿದ್ದರು. ಈ ವಿಡಿಯೊ ಸಾಕಷ್ಟು ವೈರಲ್ ಆಗಿತ್ತು. ಈ ಕಾರಣದಿಂದಲೇ ಅಮಿತಾಭ್ ಅವರು ಐಶ್ವರ್ಯಾ ಅವರನ್ನು ಅನ್​ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ.

ಅತ್ತೆ, ನಾದಿನಿ ಕ್ರಾಪ್‌ ಮಾಡಿ ಫೋಟೊ ಹಂಚಿಕೊಂಡಿದ್ದ ಐಶ್ವರ್ಯಾ ರೈ!

ಅಕ್ಟೋಬರ್ 11ರಂದು (Aishwarya Rai) ಅಮಿತಾಭ್‌ ಬಚ್ಚನ್ ತಮ್ಮ 81ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಮಧ್ಯರಾತ್ರಿಯೇ ಸಂಭ್ರಮಾಚರಣೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಭಾಗಿಯಾಗಿ ವಿಶಸ್‌ ಕೂಡ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಜಯಾ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅಮಿತಾಭ್‌ ಅವರ ಜತೆ ಇರುವ ಫೋಟೊ ಕೂಡ ಶೇರ್‌ ಮಾಡಿಕೊಂಡಿದ್ದರು. ಇದೇ ಫೋಟೊವನ್ನು ಅಕ್ಟೋಬರ್ 12ರಂದು ಐಶ್ವರ್ಯಾ ರೈ ಫೋಟೊ ಹಂಚಿಕೊಂಡಿದ್ದರು. ಆದರೆ ಅತ್ತೆ ಜಯಾ ಬಚ್ಚನ್‌, ನವ್ಯಾ ನವೇಲಿ ನಂದಾ ಅವರನ್ನು ಹೊರಗಿಟ್ಟು, ಅಮಿತಾಭ್​ ಬಚ್ಚನ್​ ಜತೆ ಆರಾಧ್ಯಾ ಬಚ್ಚನ್ ಮಾತ್ರ ಕಾಣುವಂತೆ ಕ್ರಾಪ್‌ ಮಾಡಿ ಫೋಟೊ ಪೋಸ್ಟ್‌ ಮಾಡಿದ್ದರು.  ʻʻಐಶ್ವರ್ಯಾ ಬೇಕು ಅಂತಲೇ ಫೋಟೊ ಕ್ರಾಪ್‌ ಮಾಡಿದ್ದಾರೆʼʼ ಎಂದು ನೆಟ್ಟಿಗರು ಕಮೆಂಟ್‌ ಕೂಡ ಮಾಡಿದ್ದರು.

ಇದನ್ನೂ ಓದಿ: Amitabh Bachchan: 50 ಕೋಟಿ ರೂ. ಮೌಲ್ಯದ ಬಂಗಲೆ ಗಿಫ್ಟ್‌ ಕೊಟ್ಟ ಅಮಿತಾಭ್‌; ಮಗ, ಸೊಸೆಗೆ ಅಲ್ಲ!

ಪ್ಯಾರಿಸ್ ಫ್ಯಾಷನ್ ವೀಕ್‌ ಪೋಸ್ಟ್‌

ಪ್ಯಾರಿಸ್ ಫ್ಯಾಶನ್ ವೀಕ್‌ ಫೋಟೊವನ್ನು ಈ ಹಿಂದೆ ನವ್ಯಾ ನವೇಲಿ ನಂದಾ ಹಂಚಿಕೊಂಡಿದ್ದರು. ಅದರಲ್ಲಿ ಐಶ್ವರ್ಯಾ ಕೂಡ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ನವ್ಯಾ ಮತ್ತು ಅವರ ತಾಯಿ ಶ್ವೇತಾ ಬಚ್ಚನ್​ ಅವರು ಅದೇ ಇವೆಂಟ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಫೋಟೊ ಶೇರ್‌ ಮಾಡುವಾಗ ಐಶ್ವರ್ಯಾ ಅವರನ್ನು ಟ್ಯಾಗ್‌ ಮಾಡಿರಲಿಲ್ಲ. ಹೀಗಾಗಿ ಐಶ್ವರ್ಯಾ ಅವರು ಶೀಘ್ರದಲ್ಲೇ ಅಭಿಷೇಕ್ ಬಚ್ಚನ್ ಅವರಿಗೆ ಡಿವೋರ್ಸ್‌ ಕೊಡಲಿದ್ದಾರೆ ಎಂಬ ವದಂತಿಗಳು ಶುರುವಾದವು.

Continue Reading

ಬಾಲಿವುಡ್

Fighter Teaser: ಫೈಟರ್‌ ಟೀಸರ್‌ ಔಟ್‌; ಹೃತಿಕ್‌- ದೀಪಿಕಾ ಪಡುಕೋಣೆ ಇಂಟಿಮೇಟ್‌ ಸೀನ್‌ ಹೈಲೈಟ್‌!

Fighter Teaser:  ವರದಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 3D ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪಠಾಣ್‌ ಮೂಲಕ 1000 ಕೋಟಿಯ ಹಿಟ್‌ ಸಿನಿಮಾ ನೀಡಿರುವ ಸಿದ್ಧಾರ್ಥ್‌ ಆನಂದ್‌, ಫೈಟರ್‌ ಮೂಲಕ ಮತ್ತೊಂದು ಹಿಟ್‌ ಸಿನಿಮಾ ನೀಡಲಿದ್ದಾರೆ.

VISTARANEWS.COM


on

Hrithik Roshan, Deepika Padukone Intimate Scene
Koo

ಬೆಂಗಳೂರು; ದೀಪಿಕಾ ಪಡುಕೋಣೆ (Deepika Padukone) ಮತ್ತು ಹೃತಿಕ್ ರೋಷನ್ (Hrithik Roshan) ಒಟ್ಟಿಗೆ ತೆರೆ ಹಂಚಿಕೊಂಡಿರುವ ʻಫೈಟರ್‌ʼ ಸಿನಿಮಾದ ಟೀಸರ್‌ ಬಿಡುಗಡೆಗೊಂಡಿದೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಫೈಟರ್ ಟೀಸರ್‌ನಲ್ಲಿ, ಜೆಟ್‌ ವಿಮಾನವೇರಿ ಸಾಹಸ ಪ್ರದರ್ಶಿಸಿದ್ದಾರೆ ಹೃತಿಕ್‌ ಮತ್ತು ದೀಪಿಕಾ. ಇದಕ್ಕೂ ಮೀರಿ ಈ ಜೋಡಿಯ ಅವರ ಕೆಲವು ಇಂಟಿಮೇಟ್‌ ಸೀನ್‌ಗಳು ಹೈಲೈಟ್‌ ಆಗಿವೆ.

ವರದಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 3D ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪಠಾಣ್‌ ಮೂಲಕ 1000 ಕೋಟಿಯ ಹಿಟ್‌ ಸಿನಿಮಾ ನೀಡಿರುವ ಸಿದ್ಧಾರ್ಥ್‌ ಆನಂದ್‌, ಫೈಟರ್‌ ಮೂಲಕ ಮತ್ತೊಂದು ಹಿಟ್‌ ಸಿನಿಮಾ ನೀಡಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಂದು ನಿಮಿಷ 10 ಸೆಕೆಂಡ್‌ನ ಟೀಸರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್‌ ಸಿನಿಮಾ ನಂತರ ಈ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆಗಿದ್ದಾರೆ.

ಈ ಸಿನಿಮಾಗೆ ಹೃತಿಕ್‌ ರೋಷನ್‌ 85 ಕೋಟಿ ರೂ. ಸಂಭಾವನೆ ಪಡೆದರೆ, ದೀಪಿಕಾ ಚಿತ್ರಕ್ಕೆ 20 ಕೋಟಿ ರೂ. ಪಡೆಯುತ್ತಿದ್ದಾರೆ ಎಂದೂ ವರದಿಯಾಗಿದೆ. ಸಿದ್ಧಾರ್ಥ್ ಆನಂದ್‌ ಅವರು ದೀಪಿಕಾಗಿಂತ ಹೆಚ್ಚು, ಅಂದರೆ 40 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ದೀಪಿಕಾಗಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Fighter Jets In India: India’s Most Powerful Fighter Jets

ʻʻಉಳಿದ ಸೆಲೆಬ್ರಿಟಿಗಳು 15 ಕೋಟಿ ರೂ. ಪಡೆದುಕೊಳ್ಳುತ್ತಿದ್ದು, ಸಂಭಾವನೆ ಮೊತ್ತವೇ 160 ಕೋಟಿ ರೂ. ತಲುಪಲಿದೆ’ ಎಂದು ಕಮಾಲ್​ ಆರ್​. ಖಾನ್ ಈ ಹಿಂದೆ​ ಟ್ವೀಟ್​ ಮಾಡಿದ್ದರು. 350 ಕೋಟಿ ರೂ. ಬಜೆಟ್‌ ಈಗಾಗಲೆ ಮೀರಿದೆ. ಹೃತಿಕ್​ ರೋಷನ್​ ಜತೆ ಸಿದ್ಧಾರ್ಥ್‌ ಆನಂದ್‌ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ ಜತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

Continue Reading

ಬಾಲಿವುಡ್

Animal Movie: ರಣಬೀರ್‌ ಕಪೂರ್‌ ವೃತ್ತಿ ಜೀವನದ ಅತೀ ಹೆಚ್ಚು ಕಲೆಕ್ಷನ್‌ ಮಾಡಿದೆ ʼಅನಿಮಲ್‌ʼ!

Animal Movie: ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಅನಿಮಲ್‌ʼ ಚಿತ್ರ ಕಮಾಲ್‌ ಮಾಡಿದೆ. ಒಂದು ವಾರದಲ್ಲಿ 300 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ.

VISTARANEWS.COM


on

animal new
Koo

ಮುಂಬೈ: ಡಿಸೆಂಬರ್‌ 1ರಂದು ತೆರೆಕಂಡ ಬಾಲಿವುಡ್‌ ಚಿತ್ರ ಅನಿಮಲ್‌ (Animal Movie) ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 60 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು. ಇದೀಗ ಚಿತ್ರ ಬಿಡುಗಡೆಗೊಂಡು 1 ವಾರ ಕಳೆದಿದ್ದು, ಸುಮಾರು 337 ಕೋಟಿ ರೂ. ಗಳಿಸಿದೆ. ರಣಬೀರ್‌ ಕಪೂರ್‌ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿ ತೆರೆ ಹಂಚಿಕೊಂಡಿರುವ ಈ ಚಿತ್ರಕ್ಕೆ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಅನಿಮಲ್‌’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್‌ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದೆ. ಕೇವಲ 8 ದಿನಗಳಲ್ಲಿ ಈ ಚಿತ್ರವು ರಣಬೀರ್‌ ಕಪೂರ್‌ ನಟನೆಯ ಈ ಹಿಂದಿನ ʼಸಂಜುʼ ಚಿತ್ರದ ಲೈಫ್‌ ಟೈಮ್‌ ಕಲೆಕ್ಷನ್‌ ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿದೆ. ಆ ಮೂಲಕ ರಣಬೀರ್ ಕಪೂರ್ ಅವರ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮಲಿದೆ. ಎರಡನೇ ವಾರದ ಆರಂಭದಲ್ಲಿಯೇ 400 ಕೋಟಿ ರೂ.ಗಳ ಕ್ಲಬ್‌ಗೆ ಪ್ರವೇಶಿಸಲಿದೆ ಎಂದು ಬಾಲಿವುಡ್‌ ಪಂಡಿತರು ಲೆಕ್ಕ ಹಾಕಿದ್ದಾರೆ.

ಐದು ದಿನಗಳಲ್ಲಿ ಈ ಚಿತ್ರವು ರಣಬೀರ್ ಅವರ ಎರಡನೇ ಅತಿದೊಡ್ಡ ಹಿಟ್ ಆಗಿದ್ದ ʼಬ್ರಹ್ಮಾಸ್ತ್ರ: ಪಾರ್ಟ್ ಒನ್-ಶಿವʼ ಸಿನಿಮಾದ ಕಲೆಕ್ಷನ್‌ ಹಿಂದಿಕ್ಕಿದೆ. ಆ ಚಿತ್ರ ಸುಮಾರು 282.96 ಕೋಟಿ ರೂ.ಗಳನ್ನು ಗಳಿಸಿತ್ತು. ಆರೇ ದಿನಗಳಲ್ಲಿ ʼಅನಿಮಲ್‌ʼ 300 ಕೋಟಿ ರೂ. ಕ್ಲಬ್ ಪ್ರವೇಶಿಸಿತ್ತು. ಗುರುವಾರ (ಡಿಸೆಂಬರ್‌ 7)ರಂದು ಈ ಸಿನಿಮಾ 25.50 ಕೋಟಿ ರೂ. ಗಳಿಸಿದೆ. ಸದ್ಯ ಚಿತ್ರದ ಒಟ್ಟು ಕಲೆಕ್ಷನ್‌ 338.35 ಕೋಟಿ ರೂ. ಆಗಿದೆ. ʼಸಂಜುʼ ಸಿನಿಮಾ ಭಾರತದಲ್ಲಿ 342 ಕೋಟಿ ರೂ. ಗಳಿಸಿತ್ತು. ಶುಕ್ರವಾರದ ಮುಂಗಡ ಬುಕಿಂಗ್ ಪ್ರಕಾರ, ಸುಮಾರು 5 ಕೋಟಿ ರೂ. ಕಲೆಕ್ಷನ್‌ ಆಗಿದೆ. ಅಂದರೆ ʼಅನಿಮಲ್‌ʼ 343 ಕೋಟಿ ರೂ. ಗಳಿಸಿದಂತಾಗುತ್ತದೆ.

ಇನ್ನು ಐದು ದಿನಗಳಲ್ಲಿ ʼಅನಿಮಲ್‌ʼ ಚಿತ್ರವು ವಿಶ್ವಾದ್ಯಂತ 481 ಕೋಟಿ ರೂ.ಗಳಿಸಿದೆ. ಈಗಾಗಲೇ ಜಾಗತಿಕವಾಗಿ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದೆ. ‘ಜವಾನ್’, ‘ಪಠಾಣ್‌’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ. ಶಾರುಖ್ ಖಾನ್ ಅವರ ‘ಜವಾನ್’ ಭಾರತದಲ್ಲಿ 643.87 ಕೋಟಿ ರೂ. ಗಳಿಸಿದರೆ, ‘ಪಠಾಣ್’ 543.05 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ 525.45 ಕೋಟಿ ರೂ. ಗಳಿಕೆ ಮಾಡಿದೆ.

ʼಅನಿಮಲ್‌ʼ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಂದೆ-ಮಗನ ನಡುವಿನ ಸಂಕೀರ್ಣ ಸಂಬಂಧದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.

ಇದನ್ನೂ ಓದಿ: Animal Movie: 150 ಕೋಣೆಯ ಅರಮನೆಯಲ್ಲಿ ʻಅನಿಮಲ್‌ʼ ಶೂಟಿಂಗ್‌; ಇದು ಯಾರ ಬಂಗಲೆ ನೋಡಿ!

Continue Reading
Advertisement
Dina Bhavishya
ಪ್ರಮುಖ ಸುದ್ದಿ41 mins ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ41 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ6 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ6 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ7 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ7 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ7 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Nat Sciver-Brunt celebrates dismissing Harmanpreet Kaur
ಕ್ರಿಕೆಟ್7 hours ago

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

Farmers Protest
ಕರ್ನಾಟಕ7 hours ago

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Muslim woman beaten up for voting bjp
ದೇಶ8 hours ago

ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಗೆ ಮನೆಯವರಿಂದಲೇ ಹಲ್ಲೆ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ41 mins ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ2 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌