Viral News: ಅಂಗಡಿ ಮುಂದೆ ರಾರಾಜಿಸಿದ ʼಸತ್ತಗುರುʼ ಬೋರ್ಡ್‌: ಇದೇನ್‌ ಗುರು ಎಂದು ತಲೆ ಕೆರೆದುಕೊಂಡ ಗ್ರಾಹಕ - Vistara News

ವೈರಲ್ ನ್ಯೂಸ್

Viral News: ಅಂಗಡಿ ಮುಂದೆ ರಾರಾಜಿಸಿದ ʼಸತ್ತಗುರುʼ ಬೋರ್ಡ್‌: ಇದೇನ್‌ ಗುರು ಎಂದು ತಲೆ ಕೆರೆದುಕೊಂಡ ಗ್ರಾಹಕ

Viral News: ರಾಜ್ಯಾದ್ಯಂತ ಎಲ್ಲ ಅಂಗಡಿ, ವಾಣಿಜ್ಯ ಮಳಿಗೆ, ಶಾಪಿಂಗ್ ಮಾಲ್‌, ಆಸ್ಪತ್ರೆ, ಖಾಸಗಿ ಕಚೇರಿ ಹಾಗೂ ಕಂಪೆನಿಗಳ ನಾಮಫಲಕಗಳನ್ನು ಕಡ್ಡಾಯವಾಗಿ ಶೇ. 60ರಷ್ಟು ಕನ್ನಡದ ದೊಡ್ಡ ಅಕ್ಷಗಳಲ್ಲಿ ಬರೆಯಬೇಕು ಎನ್ನುವ ಆದೇಶವಿದೆ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಈ ಆದೇಶವನ್ನು ಅವಸರದಿಂದ ಪಾಲಿಸಲು ಹೋಗಿ ಅನೇಕರು ದೊಡ್ಡ ಎಡವಟ್ಟು ಮಾಡಿಕೊಳ್ಳುತ್ತಾರೆ. ಬೆಳಗಾವಿಯ ಬಟ್ಟೆ ಮಳಿಗೆಯ ಮಾಲೀಕನೂ ಇಂತಹದ್ದೊಂದು ತಪ್ಪು ಮಾಡಿ ಟ್ರೋಲ್‌ಗೆ ಗುರಿಯಾಗಿದ್ದ. ಸದ್ಯ ಆತ ತಪ್ಪಾದ ಬೋರ್ಡ್‌ ಬದಲಾಯಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಆ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

Viral news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ರಾಜ್ಯದಲ್ಲಿನ ಅಂಗಡಿಗಳ ನಾಮ ಫಲಕ (ಬೋರ್ಡ್) ಕನ್ನಡದಲ್ಲಿ ಇರಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರವೂ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆದೇಶವನ್ನು ಪಾಲಿಸಲು ಮುಂದಾದ ಅನೇಕರು ಭಾಷಾಂತರಕ್ಕೆ ಗೂಗಲ್‌ ಟ್ರಾನ್ಸ್‌ಲೇಟ್‌ ಮೊರೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಗೂಗಲ್‌ ಟ್ರಾನ್ಸ್‌ಲೇಟ್‌ ಮಾಡಿದ್ದನ್ನು ಯಥಾ ಪ್ರಕಾರ ಅಂತೆಯೇ ಅಳವಡಿಸಿ ಪೇಚಿಗೆ ಸಿಲುಕಿದವರೂ ಇದ್ದಾರೆ. ಜತೆಗೆ ಅನರ್ಥ ಭಾಷಾಂತರದ ಕಾರಣಕ್ಕೆ ಟ್ರೋಲಿಗರಿಗೆ ಆಹಾರವಾಗುವ ಜತೆಗೆ ಭಾಷಾ ಪ್ರೇಮಿಗಳ ಆಕ್ರೋಶಕ್ಕೂ ತುತ್ತಾಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಬೆಳಗಾವಿಯೊಂದರ ಮಳಿಗೆ. ಇದೀಗ ಎಡವಟ್ಟನ್ನು ಮನದಟ್ಟು ಮಾಡಿಕೊಂಡ ಮಳಿಗೆಯ ಅಧಿಕೃತರು ಬೋರ್ಡ್‌ ಬದಲಾಯಿಸಿದ್ದಾರೆ. ಹಾಗಾದರೆ ಮೊದಲು ಬೋರ್ಡ್‌ನಲ್ಲಿ ಏನು ಬರೆಯಲಾಗಿತ್ತು? ಬೋರ್ಡ್‌ ವೈರಲ್‌ ಆಗಿದ್ದೇಕೆ? ಮೊದಲಾದ ವಿವರ ಇಲ್ಲಿದೆ (Viral News).

ಸತ್ತಗುರು !

ಅರೇ ಇದೇನಿದು? ಎಂದು ಅಚ್ಚರಿಗೊಳಗಾಗಬೇಡಿ. ಯಾಕೆಂದರೆ ಬೆಳಗಾವಿಯ ಮಳಿಗೆಯೊಂದರ ಬೋರ್ಡ್‌ನಲ್ಲಿ ರಾರಾಜಿಸುತ್ತಿದ್ದ ಹೆಸರಿದು. ಈ ಬಟ್ಟೆ ಅಂಗಡಿಯ ಹೆಸರು ಇಂಗ್ಲಿಷ್‌ನಲ್ಲಿ SATGURU ಎಂದಿದೆ. ಫಲಕ ಕನ್ನಡದಲ್ಲಿಯೂ ಇರಬೇಕು ಎನ್ನುವ ಅವರಸರಕ್ಕೆ ಮಾಲೀಕ ಇದನ್ನು ಗೂಗಲ್‌ ಟ್ರಾನ್ಸ್‌ಲೇಟ್‌ ಮಾಡಿದ್ದಾನೆ. ಆಗ ಅದು ‌ʼಸತ್ತಗುರುʼ ಎಂದು ತೋರಿಸಿದೆ. ಹಿಂದೆ ಮುಂದೆ ನೋಡದ ಮಾಲೀಕ ಅದನ್ನೇ ದೊಡ್ಡದಾಗಿ ಬರೆಸಿ ಅಂಗಡಿ ಮುಂದೆ ಅಳವಡಿಸಿ ತನ್ನ ಕರ್ತವ್ಯ ಮುಗಿಯಿತು ಎಂಬಂತೆ ನಿಟ್ಟುಸಿರು ಬಿಟ್ಟಿದ್ದಾನೆ.

ಟ್ರೋಲ್‌ಗಳ ಸುರಿಮಳೆ

ಬಳಿಕ ಈ ʼಸತ್ತಗುರುʼ ಬೋರ್ಡ್‌ ಸೋಷಿಯಲ್‌ ಮೀಡಿಯಾ ತುಂಬ ಹರಿದಾಡಿದೆ. ಕನ್ನಡ ಅಕ್ಷರಗಳ ಕಗ್ಗೊಲೆ ಆಗಿರುವ ಜತೆಗೆ ಕೆಟ್ಟ ಅರ್ಥ ಬರುವ ಪದಗಳ ಬಳಕೆ ಆಗಿದ್ದರಿಂದ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಫಲಕ ಕಡ್ಡಾಯ ಎನ್ನುವ ನೆಪದಲ್ಲಿ ಇಂತಹ ಎಡವಟ್ಟು ಎಷ್ಟು ಸರಿ? ಕನಿಷ್ಠ ಬೋರ್ಡ್‌ ಅಳವಡಿಸುವ ಮುನ್ನ ಭಾಷೆ ತಿಳಿದಿರುವವರ ಗಮನಕ್ಕೆ ತರಬಾರದೆ? ಎಂದು ಅನೇಕರು ಪ್ರಶ್ನಿಸಿದ್ದರು. ಜತೆಗೆ ಅನೇಕರು ಅಂಗಡಿ ಮಾಲೀಕರ ಈ ನಡೆಯನ್ನು ಕಟುವಾದ ಶಬ್ದಗಳಿಂದ ಟೀಕಿಸಿದ್ದರು.

ಕೊನೆಗೂ ಬದಲಾಯ್ತು ಬೋರ್ಡ್‌

ವ್ಯಾಪಕ ಟೀಕೆಗಳ ನಂತರ ಕೊನೆಗೂ ಅಂಗಡಿ ಮಾಲೀಕ ಅಂಗಡಿ ಬೋರ್ಡ್‌ ಅನ್ನು ಬದಲಾಯಿಸಿ ಸರಿಯಾದ ನಾಮ ಫಲಕ ಅಳವಡಿಸಿದ್ದಾನೆ. ಸದ್ಯ ಅಂಗಡಿ ಮುಂದೆ ʼಸತ್‌ಗುರುʼ ಎನ್ನುವ ಹೆಸರು ರಾರಾಜಿಸುತ್ತಿದೆ.

ಸೆಕ್ಸ್‌ಹೌಸ್‌!

ನಾಮ ಫಲಕದ ವಿಚಾರದಲ್ಲಿ ನಡೆಯುತ್ತಿರುವ ಎಡವಟ್ಟು ಒಂದೆರಡಲ್ಲ. ಇದು ಕೇವಲ ಸಣ್ಣ ಉದಾಹರಣೆಯಷ್ಟೇ. ಒಂದು ಕಡೆ SPEXHOUSE ಇದ್ದ ಬೋರ್ಡ್‌ ಅನ್ನು ಭಾಷಾಂತರಗೊಳಿಸಿ ʼಸೆಕ್ಸ್‌ಹೌಸ್‌ʼ ಮಾಡಲಾಗಿದೆ ! ಇನ್ನೊಂದು ಕಡೆ ʼನಮ್ಮ ಗೋಲ್‌ಗಪ್ಪೆ ಅಂಡ್‌ ಫಲೂದಾ ಪಾಯಿಂಟ್‌ʼ ಬೋರ್ಡ್‌ ಕೂಡ ಕಣ್ಣಿಗೆ ರಾಚಿದೆ. ಹೋಟೆಲ್‌ ಒಂದರಲ್ಲಿ ಕಂಡ ʼಊತ್ತ ಅ‍ಣ್ಣಾಸಂಬರ್‌, ರೈಸ್‌ ಬಾತ್‌, ಇಡಲಿ ವದ, ದೋಷ ಸೆಟ್‌, ಮಸಾಲಾ ದೋಷʼ ಮೆನು ಓದಿ ತಲೆ ತಿರುಗುವೊಂದು ಬಾಕಿ ಎಂದು ಕನ್ನಡಿಗರೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡದ ನಾಮ ಫಲಕ ಅಳವಡಿಸುವ ಜತೆಗೆ ಸರಿಯಾದ ಭಾಷೆ ಬಳಸುವಂತೆಯೂ ಕಾನೂನು ಜಾರಿಗೊಳಿಸಬೇಕು ಎನ್ನುವುದು ಬಹುತೇಕರ ಆಗ್ರಹ.

ಇದನ್ನೂ ಓದಿ: ಹೋಳಿ ಸಂಭ್ರಮಾಚರಣೆ ನಡುವೆಯೂ ಕರ್ತವ್ಯ ಪ್ರಜ್ಞೆ ಜಾಗೃತ; ಲಕ್ಷಾಂತರ ಮಂದಿ ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟು ಕೊಟ್ಟಿದ್ದು ಹೀಗೆ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Viral News: ಜೈಲಿಂದ ಹೊರಬಂದ ಖುಷಿಗೆ ರೌಡಿಯ ಬೃಹತ್ ಮೆರವಣಿಗೆ; ಮತ್ತೆ ಜೈಲಿಗೇ ಕಳುಹಿಸಿದ ಪೊಲೀಸರು!

Viral News ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಹರ್ಷದ್ ಪಟಾಂಕರ್ ಅನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್ ರ‍್ಯಾಲಿಯನ್ನು ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

VISTARANEWS.COM


on

Viral News
Koo

ಮಹಾರಾಷ್ಟ್ರ : ಮದುವೆ, ದೇವಸ್ಥಾನದ ಪ್ರತಿಷ್ಠಾಪನೆ ಸಮಾರಂಭದ ವೇಳೆ ಬೃಹತ್ ಮೆರವಣಿಗೆಯನ್ನು ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರದ ಕುಖ್ಯಾತ ರೌಡಿನೊಬ್ಬನನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್‌ ರ‍್ಯಾಲಿಯನ್ನು  ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3:30 ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗಿದೆ. ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್‌ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು.

ವರದಿ ಪ್ರಕಾರ, ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಟಾಂಕರ್ ಅವರನ್ನು ಈ ಹಿಂದೆ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವಾರು ಅಪರಾಧಗಳಿಗಾಗಿ ಬಂಧಿಸಲಾಗಿತ್ತು ಮತ್ತು ಜೈಲಿಗೆ ಹಾಕಲಾಗಿತ್ತು.

ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ಒಂದು ವರ್ಷದ ಹಿಂದೆ ಎಂಪಿಡಿಎ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಸಂಭ್ರಮಾಚರಣೆಯ ರ‍್ಯಾಲಿಯಿಂದಾಗಿ ಪೊಲೀಸ್ ಕ್ರಮಕೈಗೊಂಡು ಈಗ ಅವರನ್ನು ಮತ್ತೆ ಜೈಲಿಗೆ ತಳ್ಳಿದೆ ಎನ್ನಲಾಗಿದೆ. ಅವರ ಆರು ಸಹಚರರನ್ನು ಗೋಪಾಲ್ ನಾಗೋರ್ಕರ್, ವೇದಾಂತ್ ಚಾಲ್ಡೆ, ಶಾನ್ ಮೈಕೆಲ್, ಜಾಯ್ ಮೈಕೆಲ್, ರಾಬಿನ್ಸನ್ ಬ್ಯಾಟಿಸ್, ವೈಭವ್ ಖಂಡ್ರೆ ಮತ್ತು ವಿಕಾಸ್ ನೇಪಾಳಿ ಎಂದು ಗುರುತಿಸಲಾಗಿದೆ.

Continue Reading

Latest

Viral Video: ಕೈದಿಗೆ ಕೈಕೋಳ ಹಾಕಿ ತಾಜ್ ಮಹಲ್‌ ತೋರಿಸಲು ಹೋಗಿದ್ದ ಪೊಲೀಸರು! ವಿಡಿಯೊ ನೋಡಿ

Viral Video: ಇತ್ತೀಚೆಗೆ ಕೈಕೋಳ ಧರಿಸಿದ ಕೈದಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಾಜ್ ಮಹಲ್‌ಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೈಕೋಳ ತೊಡಿಸಿದ್ದರಿಂದ ಕೈದಿಗೆ ತಾಜ್ ಮಹಲ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ತಿಳಿಸಿದೆ. ಈ ಘಟನೆ ಈಗ ರಾಜಸ್ಥಾನದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Viral Video
Koo


ಆಗ್ರಾ: ಕೈಗೆ ಬೇಡಿ ಹಾಕಿದ ಎಂದ ಮೇಲೆ ಅವರು ಕೈದಿಯಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಕೈದಿ ಜೈಲಿನಲ್ಲಿರಬೇಕು. ಅವರನ್ನು ಮನಬಂದಂತೆ ಹೊರಗಡೆ ಬಿಡುವ ಹಾಗಿಲ್ಲ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಕೈದಿಗಳನ್ನು ಕರೆದುಕೊಂಡು ಬರುವಂತಿಲ್ಲ. ಆದರೆ ಇತ್ತೀಚೆಗೆ ಕೈಕೋಳ ಧರಿಸಿದ ಕೈದಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಾಜ್ ಮಹಲ್‍ಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಕೈಕೋಳ ತೊಡಿಸಿದ್ದರಿಂದ ಕೈದಿಗೆ ತಾಜ್ ಮಹಲ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ತಿಳಿಸಿದೆ. ತಾಜ್ ಮಹಲ್‌ ಬಳಿ ರಕ್ಷಣೆಗೆ ನಿಯೋಜಿಸಲಾಗಿರುವ ಸಹಾಯಕ ಪೊಲೀಸ್ ಆಯುಕ್ತ ಸೈಯದ್ ಆರೀಬ್ ಅಹ್ಮದ್ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೊ ಹಳೆಯದು ಎಂದು ತಿಳಿಸಿದ್ದಾರೆ. ಅಲ್ಲದೇ ಕೈದಿಯ ಜೊತೆಗಿದ್ದ ಪೊಲೀಸ್ ಅಧಿಕಾರಿಯನ್ನು ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ನಿಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಹಿಮಾಚಲ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಮತ್ತು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜ್ ಮಹಲ್‍ನಿಂದ 500 ಮೀಟರ್ ದೂರದಲ್ಲಿ ಬಿಳಿ ಪೊಲೀಸ್ ಜೀಪ್ ನಿಲ್ಲಿಸಲಾಗಿತ್ತು ಮತ್ತು ಅಲ್ಲಿ ರಕ್ಷಣೆಗೆ ನಿಯೋಜಿಸಲಾದ ಸ್ಥಳೀಯ ಪೊಲೀಸರು ಹಿಮಾಚಲ ಪ್ರದೇಶದ ಅಧಿಕಾರಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಡುವಂತೆ ಕೇಳಿಕೊಂಡರು. ಇದರ ನಂತರ, ಒಬ್ಬ ಅಧಿಕಾರಿ ಕೈದಿಯೊಂದಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಎಎಸ್ಐ ಸಿಬ್ಬಂದಿ ಅವರನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ಸ್ಥಳೀಯರು ಈ ಘಟನೆಯನ್ನು ವಿಡಿಯೊದಲ್ಲಿ ಸೆರೆಹಿಡಿದಿದ್ದು, ಇದರಲ್ಲಿ ಕೈಕೋಳ ಧರಿಸಿದ ಕೈದಿ ಮತ್ತು ಅವರ ಬೆಂಗಾವಲಿಗೆ ಇದ್ದ ಅಧಿಕಾರಿಯನ್ನು ತೋರಿಸಿದ್ದಾರೆ. ಅಲ್ಲದೇ ವಿಡಿಯೊ ತೆಗೆಯದಂತೆ ಅಧಿಕಾರಿಗಳು ಆಕ್ಷೇಪ ಮಾಡುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

Continue Reading

ದೇಶ

Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್‌ ಭೇಟಿ ನೀಡಿ, ಚಪ್ಪಲಿ ಹೊಲಿದ ರಾಹುಲ್‌ ಗಾಂಧಿ; Video ಇಲ್ಲಿದೆ

Rahul Gandhi: ಉತ್ತರ ಪ್ರದೇಶದ ವಿಧಾಯಕ ನಗರದಲ್ಲಿರುವ ಚಮ್ಮಾರನ ಅಂಗಡಿಯೊಂದಕ್ಕೆ ರಾಹುಲ್‌ ಗಾಂಧಿ ಅವರು ಭೇಟಿ ನೀಡಿದರು. ಇದೇ ವೇಳೆ, ಚಮ್ಮಾರರ ಸಮಸ್ಯೆಗಳನ್ನು ಆಲಿಸಿದ ಅವರು, ಚಪ್ಪಲಿಯನ್ನೂ ಹೊಲಿದರು. ಚಪ್ಪಲಿ ಹೊಲಿಯುವುದು ಹೇಗೆ ಎಂಬುದನ್ನು ಅಂಗಡಿ ಮಾಲೀಕ ಹೇಳಿಕೊಟ್ಟರು.

VISTARANEWS.COM


on

Rahul Gandhi
Koo

ಲಖನೌ: ದೇಶಾದ್ಯಂತ ಸಂಚರಿಸುವ ಭಾರತ್‌ ಜೋಡೋ ಯಾತ್ರೆಯ (Bharat Jodo Yatra) ಹೊರತಾಗಿಯೂ ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದಾರೆ. ರೈತರು, ಕುಶಲಕರ್ಮಿಗಳು, ಯುವಕರೊಂದಿಗೆ ಬೆರೆಯುವ ಮೂಲಕ ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ರಾಹುಲ್‌ ಗಾಂಧಿ ಅವರು ಶುಕ್ರವಾರ (ಜುಲೈ 26) ಉತ್ತರ ಪ್ರದೇಶದಲ್ಲಿ ಚಪ್ಪಲಿ ಅಂಗಡಿಯೊಂದಕ್ಕೆ (Cobbler Shop) ದಿಢೀರನೆ ಭೇಟಿ ನೀಡಿ, ಅಲ್ಲಿ ಚಪ್ಪಲಿ ಹೊಲಿಯುವ ಮೂಲಗ ಗಮನ ಸೆಳೆದಿದ್ದಾರೆ.

ರಾಹುಲ್‌ ಗಾಂಧಿ ಅವರು ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ಹಾಜರಾದರು. ಕೋರ್ಟ್‌ಗೆ ಹಾಜರಾದ ಬಳಿಕ ಲಖನೌಗೆ ವಾಪಸಾಗುವ ವೇಳೆ ವಿಧಾಯಕ ನಗರದಲ್ಲಿರುವ ಚಮ್ಮಾರನ ಅಂಗಡಿಗೆ ತೆರಳಿದ ಅವರು, ಮಾತುಕತೆ ನಡೆಸುವ ಜತೆಗೆ ಚಪ್ಪಲಿ ಹೊಲಿದರು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

2023ರ ಸೆಪ್ಟೆಂಬರ್‌ನಲ್ಲಿ ರಾಹುಲ್‌ ಗಾಂಧಿ ಅವರು ದೆಹಲಿಯ ಕೀರ್ತಿ ನಗರ ಫರ್ನಿಚರ್‌ ಮಾರುಕಟ್ಟೆಗೆ ತೆರಳಿದ್ದರು. ಆಗ ಅವರು ಹಲವು ಮೇಜುಗಳನ್ನು ತಯಾರಿಸಿದ್ದರು. ಕಾರ್ಪೆಂಟರ್‌ಗಳ ಜತೆಗೂಡಿ ರಾಹುಲ್‌ ಗಾಂಧಿ ಅವರು ಮೇಜುಗಳನ್ನು ತಯಾರಿಸಿದ್ದರು. ಈ ಮೇಜುಗಳನ್ನು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಹಾಗೂ ಕಾರ್ಪೆಂಟರ್‌ಗಳು ಜತೆಗೂಡಿ ಪ್ರಮೀಳಾ ಬಾಯಿ ಚವ್ಹಾಣ್ ಶಾಲೆಗೆ ದೇಣಿಗೆಯಾಗಿ ನೀಡಿದ್ದರು. ಕಾರ್ಕರ್‌ಡೂಮಾದಲ್ಲಿರುವ ಶಾಲೆಗೆ ಮೇಜುಗಳನ್ನು ದೇಣಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಮಾಹಿತಿ ನೀಡಿತ್ತು.

ಬೈಕ್‌ ರಿಪೇರಿ ಮಾಡಿದ್ದ ರಾಹುಲ್‌ ಗಾಂಧಿ

2023ರ ಜೂನ್‌ನಲ್ಲಿ ರಾಹುಲ್‌ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ ಬೈಕ್‌ ರಿಪೇರಿ ಮಾಡಿದ್ದರು. “ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ, ನಾನೂ ವ್ರೆಂಚ್‌ಗಳನ್ನು ತಿರುಗಿಸಿದೆ. ಅವರಿಂದ ಬೈಕ್‌ ರಿಪೇರಿ ಮಾಡುವುದನ್ನು ಕಲಿತೆ. ಬೈಕ್‌ ರಿಪೇರಿ ಮಾಡುವ ಇಂತಹ ಕೈಗಳೇ ಭಾರತವನ್ನು ನಿರ್ಮಿಸಿವೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಾನು ಮತ್ತೆ ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದೇನೆ” ಎಂದು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Acharya Pramod Krishnam: ರಾಹುಲ್‌ ಗಾಂಧಿಯನ್ನು ‘ರಾಷ್ಟ್ರೀಯ ಸಮಸ್ಯೆ’ ಎಂದ ಆಚಾರ್ಯ ಪ್ರಮೋದ್‌ ಕೃಷ್ಣಂ!

Continue Reading

ದೇಶ

Acharya Pramod Krishnam: ರಾಹುಲ್‌ ಗಾಂಧಿಯನ್ನು ‘ರಾಷ್ಟ್ರೀಯ ಸಮಸ್ಯೆ’ ಎಂದ ಆಚಾರ್ಯ ಪ್ರಮೋದ್‌ ಕೃಷ್ಣಂ!

Acharya Pramod Krishnam: ಪಂಜಾಬ್‌ ಮಾಜಿ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್‌ಪಾಲ್ ಸಿಂಗ್‌ ಪರವಾಗಿ ಮಾತನಾಡಿದ್ದನ್ನು ಕೂಡ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಟೀಕಿಸಿದರು. ಇನ್ನು, ದೇಶದಲ್ಲಿ ರಾಜಕೀಯ ಇರಬೇಕು, ಆದರೆ, ರಾಜಕೀಯಕ್ಕಾಗಿ ದೇಶವನ್ನು ಬಿಟ್ಟುಕೊಡಬಾರದು ಎಂದು ಕೂಡ ಹೇಳಿದರು.

VISTARANEWS.COM


on

Acharya Pramod Krishnam
Koo

ನವದೆಹಲಿ: ಕಾಂಗ್ರೆಸ್‌ ಮಾಜಿ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಅವರು ರಾಹುಲ್‌ ಗಾಂಧಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್‌ನಿಂದ (Congress) ಉಚ್ಚಾಟನೆಗೊಂಡಿರುವ, ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಅವರು, ಇಂಡಿಯಾ ಡೈಲಿ ಲೈವ್‌ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತ, “ರಾಹುಲ್‌ ಗಾಂಧಿ (Rahul Gandhi) ಅವರು ಈಗ ರಾಷ್ಟ್ರೀಯ ಸಮಸ್ಯೆ” ಎಂಬುದಾಗಿ ಹೇಳಿದ್ದಾರೆ.

“ರಾಹುಲ್‌ ಗಾಂಧಿ ಅವರು ಇದುವರೆಗೆ ಕಾಂಗ್ರೆಸ್‌ನ ಸಮಸ್ಯೆಯಾಗಿದ್ದರು. ಈಗ ಅವರು ರಾಷ್ಟ್ರೀಯ ಸಮಸ್ಯೆಯಾಗಿ ಬದಲಾಗಿದ್ದಾರೆ” ಎಂದು ಟೀಕಿಸಿದರು. ಇನ್ನು, ಪಂಜಾಬ್‌ ಮಾಜಿ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್‌ಪಾಲ್ ಸಿಂಗ್‌ ಪರವಾಗಿ ಮಾತನಾಡಿದ್ದನ್ನು ಕೂಡ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಟೀಕಿಸಿದರು. ಇನ್ನು, ದೇಶದಲ್ಲಿ ರಾಜಕೀಯ ಇರಬೇಕು, ಆದರೆ, ರಾಜಕೀಯಕ್ಕಾಗಿ ದೇಶವನ್ನು ಬಿಟ್ಟುಕೊಡಬಾರದು ಎಂದು ಕೂಡ ಹೇಳಿದರು.

ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕೆಲ ದಿನಗಳ ಹಿಂದಷ್ಟೇ ರಾಹುಲ್‌ ಗಾಂಧಿ ಕುರಿತು ಮಾತನಾಡಿದ್ದರು. “ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ” ಎಂದು ಹೇಳಿದ್ದರು. ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಜೈ ಪ್ಯಾಲೆಸ್ತೀನ್‌ ಎಂದು ಅಸಾದುದ್ದೀನ್‌ ಓವೈಸಿ ಘೋಷಣೆ ಕೂಗಿದ ಕುರಿತು ಪ್ರತಿಕ್ರಿಯಿಸಿದ್ದ ಅವರು, “ಇದು ಭಾರತ ಸಂಸತ್ತು. ಭಾರತದ ಸಂಸತ್‌ನಲ್ಲಿ ಹಾಗೆ ಘೋಷಣೆ ಕೂಗುವುದು ಸರಿಯಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದರು.

ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಾಂಗ್ರೆಸ್‌ ನಾಯಕರೂ ಆಗಿದ್ದರು. ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಇವರನ್ನು ಕೆಲವು ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿತ್ತು. ಇದಾದ ಬಳಿಕ ನರೇಂದ್ರ ಮೋದಿ ಅವರು ಕಲ್ಕಿ ದೇವಾಲಯಕ್ಕೆ ಭೇಟಿ ನೀಡಿ, ಆಚಾರ್ಯ ಪ್ರಮೋದ್‌ ಕೃಷ್ಣಂ ಅವರನ್ನು ಹೊಗಳಿದ್ದರು.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ಭೇಟಿಯಾದ ರೈತರು; ಆ.15ರಂದು ದೇಶಾದ್ಯಂತ ರ‍್ಯಾಲಿಗೆ ನಿರ್ಧಾರ!

Continue Reading
Advertisement
puneeth kerehalli dog meat
ಕ್ರೈಂ5 mins ago

Dog Meat: ನಾಯಿ ಮಾಂಸದ ಗಲಾಟೆ, ಪುನೀತ್‌ ಕೆರೆಹಳ್ಳಿ ಪೊಲೀಸ್‌ ಠಾಣೆಯಲ್ಲೇ ತೀವ್ರ ಅಸ್ವಸ್ಥ

Family Drama Film Review
ಸಿನಿಮಾ18 mins ago

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Michel Phelps ರಾಜಮಾರ್ಗ ಅಂಕಣ
ಅಂಕಣ43 mins ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ56 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ1 hour ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ2 hours ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ2 hours ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ2 hours ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ13 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ14 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ15 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ16 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌