ಬಸ್‌ ಹತ್ತಿದ ಪ್ರಯಾಣಿಕರಿಗೆ ಈ ಕಂಡಕ್ಟರ್‌ ಮೊದಲು ಕೊಡೋದು ಏನನ್ನ? ನೆಟ್ಟಿಗರ ಮನ ಗೆದ್ದವರಿವರು!

ವೈರಲ್ ನ್ಯೂಸ್

ಬಸ್‌ ಹತ್ತಿದ ಪ್ರಯಾಣಿಕರಿಗೆ ಈ ಕಂಡಕ್ಟರ್‌ ಮೊದಲು ಕೊಡೋದು ಏನನ್ನ? ನೆಟ್ಟಿಗರ ಮನ ಗೆದ್ದವರಿವರು!

Viral News: ಇವರು ಉಳಿದ ಕಂಡಕ್ಟರ್‌ಗಳಂತೆ ಮೊದಲು ಟಿಕೆಟ್‌ ಕೊಡುವುದಿಲ್ಲ. ಅದಕ್ಕೂ ಮೊದಲು ಆತ್ಮೀಯತೆಯಿಂದ ನಗುತ್ತ ಪ್ರಯಾಣಿಕರನ್ನು ಉಪಚರಿಸುತ್ತಾರೆ.

VISTARANEWS.COM


on

Bus conductor
ಹರ್ಯಾಣ ಬಸ್‌ ಕಂಡಕ್ಟರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹರ್ಯಾಣ: ಬಸ್‌ ಹತ್ತಿದ ತಕ್ಷಣ ಕಂಡಕ್ಟರ್‌ ಮೊದಲು ಕೇಳುವುದು ʼಎಲ್ಲಿಗೆʼ ಎಂಬ ಪ್ರಶ್ನೆ. ನಾವು ಉತ್ತರಿಸಿದ ಕೂಡಲೇ ಅವರು ಟಿಕೆಟ್‌ ಕೊಡುತ್ತಾರೆ. ನಾವದಕ್ಕೆ ಹಣ ಕೊಡುತ್ತೇವೆ. ಆದರೆ ಹರ್ಯಾಣದಲ್ಲಿ ಒಬ್ಬ ಬಸ್‌ ಕಂಡಕ್ಟರ್‌ ಇದ್ದಾರೆ. ಅವರು ಪ್ರಯಾಣಿಕರಿಗೆ ಟಿಕೆಟ್‌ ಕೊಡುವುದಕ್ಕೂ ಮೊದಲು ಬೇರೊಂದನ್ನು ಕೊಡುತ್ತಾರೆ. ಯಾವುದೇ ಸ್ಟಾಪ್‌ನಲ್ಲಿ ಹತ್ತುವ ಪ್ರಯಾಣಿಕರೆಡೆಗೆ ನಗುತ್ತ ಬರುವ ಅವರ ಕೈಯಲ್ಲಿ ಇರುವ ವಸ್ತುವನ್ನು ನೋಡಿ ನೆಟ್ಟಿಗರು ಫುಲ್‌ ಖುಷಿಯಾಗಿದ್ದಾರೆ. ಐಎಎಸ್‌ ಅಧಿಕಾರಿ ಅವನೀಶ್‌ ಶರಣ್‌ ಅವರು ಈ ಕಂಡಕ್ಟರ್‌ ಕತೆಯನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ಫೋಟೋವನ್ನೂ ಶೇರ್‌ ಮಾಡಿದ್ದಾರೆ.

ಬಸ್‌ ಕಂಡಕ್ಟರ್‌ ಹೆಸರು ಸುರೇಂದ್ರ ಶರ್ಮಾ. ರೋಹ್ಟಕ್‌ ನಿವಾಸಿಯಾಗಿರುವ ಇವರು ಹರ್ಯಾಣ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಬಸ್‌ ಹತ್ತುವ ಪ್ರಯಾಣಿಕರಿಗೆ ಮೊಟ್ಟಮೊದಲು ಒಂದು ಗ್ಲಾಸ್‌ ನೀರನ್ನು ಕೊಟ್ಟು ಉಪಚರಿಸುತ್ತಾರೆ. ಸುಮಾರು 12 ವರ್ಷಗಳಿಂದಲೂ ಹೀಗೆ ಮಾಡುತ್ತಿದ್ದಾರಂತೆ. ಬಾಯ್ತುಂಬ ನಗುತ್ತ, ನೀರು ಹಿಡಿದು ಪ್ರಯಾಣಿಕರ ಬಳಿ ಹೋಗುವ ಕಂಡಕ್ಟರ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಮನೆಗೆ ಬಂದ ಅತಿಥಿಗಳಿಗೆ ಮೊದಲು ನೀರು ಕೊಟ್ಟು ನಮಸ್ಕರಿಸುವ ಪದ್ಧತಿ ಹಿಂದೂ ಧರ್ಮದಲ್ಲಿದೆ. ಇವತ್ತಿಗೂ ಅನೇಕ ಮನೆಗಳಲ್ಲಿ ಈ ಆಚರಣೆ ನಡೆಯುತ್ತದೆ. ಅದೇ ರೀತಿ ಕಂಡಕ್ಟರ್‌ ಕೂಡ ಬಸ್‌ ಹತ್ತಿದ ತಕ್ಷಣ ಆ ಪ್ರಯಾಣಿಕನಿಗೆ ನೀರು ಕೊಡುತ್ತಾರೆ. ನಂತರ ಟಿಕೆಟ್‌ ನೀಡುತ್ತಾರೆ. ಇದನ್ನು ನೋಡಿದ ಸೋಷಿಯಲ್‌ ಮೀಡಿಯಾ ಬಳಕೆದಾರರು ಧಾರ್ಮಿಕ ಪದ್ಧತಿಯ ಆಚರಣೆ ಜತೆ, ಪ್ರಯಾಣಿಕನ ಸುಸ್ತು ನೀಗಿಸದಂತೆಯೂ ಆಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ʼಇವರೆಲ್ಲ ಭಾರತದ ನಿಜವಾದ ಹಿರೋಗಳುʼ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು, ʼಹೌದು, ಈ ಕಂಡಕ್ಟರ್‌ ಬಗ್ಗೆ ನನಗೂ ಗೊತ್ತು. ನಾನವರನ್ನು ನೋಡಿದ್ದೇನೆʼ ಎಂದು ತಿಳಿಸಿದ್ದಾರೆ. ʼದಯೆ ಯಾವಾಗಲೂ ಗೆಲ್ಲುತ್ತದೆ, ದೇವರು ಅವರಿಗೆ ಒಳೆಯದು ಮಾಡಲಿʼ ಎಂದು ಹಲವರು ಹಾರೈಸಿದ್ದಾರೆ.

ಇದನ್ನೂ ಓದಿ: ಪುಟ್ಟ ಮಗನಿಗೆ ಈಜು ಕಲಿಸಲು ಯತ್ನಿಸಿದ ತಾಯಿಗೆ ಏನಾಯ್ತು?-ಫನ್ನಿ ವಿಡಿಯೋ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

Viral Video:ಬೂದು ಬಣ್ಣದ ಈ ಗಿಳಿ ಜೊತೆಗಿದ್ದ ವ್ಯಕ್ತಿ ಹೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸುವುದನ್ನು ಕಾಣಬಹುದಾಗಿದೆ. ಮೈಕ್‌ ನಲ್ಲಿ ಮಾತನಾಡನಾಡುವ ಗಿಳಿ ವಿವಿಧ ಶಬ್ಧಗಳನ್ನು ಮಾಡುತ್ತದೆ. ಇನ್ನು ಸ್ವತಃ ತಾನೇ ಮೈಕ್‌ ಅನ್ನು ಎಳೆದು ಮಾತನಾಡುವುದು ವಿಶೇಷವಾಗಿ ಗಮನಸೆಳೆಯುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು @birdslover212 ಎಂಬವರು ಶೇರ್‌ ಮಾಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ಈಗ ಪ್ರಾಣಿ-ಪಕ್ಷಿಗಳು ಮನುಷ್ಯರಿಗಿಂತ ಹೆಚ್ಚು ಟ್ಯಾಲೆಂಟೆಡ್‌ ಆಗಿರುತ್ತವೆ. ಸಾಮಾನ್ಯವಾಗಿ ನಾಯಿ, ಬೆಕ್ಕು, ಪಾಂಡಾ ಹೀಗೆ ಕೆಲವು ಪ್ರಾಣಿಗಳು ತಮ್ಮ ವಿಶೇಷ ಕಲೆ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ.ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಈ ವಿಡಿಯೋದಲ್ಲಿ ಗಿಣಿ(Parrot)ಯೊಂದು ಇಂಗ್ಲಿಷ್‌ನಲ್ಲಿ ಮಾತನಾಡೋದು ಮಾತ್ರ ಅಲ್ಲ, ಬೇರೆ ಬೇರೆ ಶಬ್ದಗಳನ್ನು ಮಿಮಿಕ್ರಿಯನ್ನೂ ಮಾಡುವುದನ್ನು ಕಾಣಬಹುದಾಗಿದೆ.

ಬೂದು ಬಣ್ಣದ ಈ ಗಿಳಿ ಜೊತೆಗಿದ್ದ ವ್ಯಕ್ತಿ ಹೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸುವುದನ್ನು ಕಾಣಬಹುದಾಗಿದೆ. ಮೈಕ್‌ ನಲ್ಲಿ ಮಾತನಾಡನಾಡುವ ಗಿಳಿ ವಿವಿಧ ಶಬ್ಧಗಳನ್ನು ಮಾಡುತ್ತದೆ. ಇನ್ನು ಸ್ವತಃ ತಾನೇ ಮೈಕ್‌ ಅನ್ನು ಎಳೆದು ಮಾತನಾಡುವುದು ವಿಶೇಷವಾಗಿ ಗಮನಸೆಳೆಯುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು @birdslover212 ಎಂಬವರು ಶೇರ್‌ ಮಾಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಂಥಾ ಅಮೇಜಿಂಗ್‌ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಈ ಗಿಣಿಯ ವಿಶೇಷತೆ ಏನು?

ಕಾಗೆ, ರಾವೆನ್‌ ಮತ್ತು ಜೇ ಹಕ್ಕಿಗಳಂತೆ ಬುದ್ಧಿವಂತ ಪಕ್ಷಿ ಆಫ್ರಿಕಾದ ಬೂದು ಬಣ್ಣದ ಗಿಳಿ. ಇದರ ವೈಜ್ಞಾನಿಕ ಹೆಸರು ಪಿಟ್ಟಾಕಸ್‌ ಎರಿಥಕಸ್‌ (95112005 61118605). ಆಫ್ರಿಕಾದಲ್ಲಿರುವ ಈ ಗಿಳಿ ಮಾತ್ರ ಬೂದು ಬಣ್ಣದಲ್ಲಿರುತ್ತದೆ. ಇದರಲ್ಲಿ ಈವರೆಗೆ ಎರಡು ತಳಿಗಳನ್ನು ಗುರುತಿಸಲಾಗಿದೆ. ಅವೆಂದರೆ ಕಾಂಗೊ ಆಫ್ರಿಕನ್‌ ಗ್ರೇ ಮತ್ತು
ಟಮ್‌ನೆ ಅಪ್ರಿಕನ್‌ ಗ್ರೇ. ಇದರ ದೇಹವು ಬೂದು ಬಣ್ಣದ ಗರಿಗಳಿಂದ ಅವೃತವಾಗಿರುತ್ತದೆ. ಇದರ ರೆಕ್ಕೆಗಳೂ ಕಪ್ಪು
ಮಿಶ್ರಿತ ಬೂದು ಬಣ್ಣದಲ್ಲಿ ಇರುತ್ತವೆ. ಬಾಲದ ಪುಕ್ಕಗಳು ಕೆಂಪು ಬಣ್ಣದಲ್ಲಿರುತ್ತವೆ. ಬಾಗಿದ ಕೊಕ್ಕು, ಹಳದಿ ಬಣ್ಣದ
ಕಣ್ಣಾಲಿಗಳನ್ನು ಹೊಂದಿರುತ್ತದೆ. ಆಫ್ರಿಕಾ ದೇಶಗಳ ಅರಣ್ಯಗಳು, ಹುಲ್ಲುಗಾವಲು, ಕೃಷಿ ಭೂಮಿ ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಇದನ್ನೂ ಓದಿ: Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

ಸಾಮಾನ್ಯವಾಗಿ ಈ ಗಿಳಿಗಳು ಮಾನವ ದ್ವನಿಯನ್ನು ಅನುಕರಿಸಬಲ್ಲವು. ಈ ಗಿಳಿ ಕೂಡಾ ಸಣ್ಣಪದ ಹಾಗೂ ಸರಳ
ವಾಕ್ಕಗಳನ್ನು ನುಡಿಯಬಲ್ಲದು. ಇದು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಇತರೆ ಪಕ್ಷಿಗಳಿಗೆ ಹೋಲಿಸಿದರೆ ಇದರ ಜೀವಿತಾವಧಿ ಸುದೀರ್ಘವಾಗಿರುತ್ತದೆ. ತಳಿಗಳಲ್ಲಿ ಅತಿ ಚಾಣಾಕ್ಷ ಪಕ್ಷಿ ಎಂದು ಇದನ್ನು ಪರಿಗಣಿಸಲಾಗಿದೆ. ಮನುಷ್ಯರ ಮಾತುಗಳನ್ನು ಅರ್ಥಮಾಡಿಕೊಳ್ಳುವ, ದ್ವನಿಯನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ.ಕೆಲವು
ಗಿಳಿಗಳು ವಸ್ತುಗಳನ್ನು ಗುರುತಿಸುವ, ವಿವರಿಸುವ ಹಾಗೂ ಎಣಿಸುವ ಸಾಮರ್ಥ್ಯವನ್ನೂ ಹೊಂದಿರುವುದು ವಿಶೇಷ.

Continue Reading

ವೈರಲ್ ನ್ಯೂಸ್

Viral Video: ಮದುವೆಗೆ ಬಂದ ಮಾಜಿ ಪ್ರಿಯಕರ; ಆಮೇಲೆ ನಡೆದಿದ್ದೇ ಬೇರೆ- ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್‌ ಎಂದ ನೆಟ್ಟಿಗರು

Viral Video: ನೂತನ ಜೋಡಿ ಜೊತೆಗೆ ಫೋಟೋ ತೆಗೆಸಿಕೊಳ್ಳಲೆಂದು ವೇದಿಕೆಗೆ ಬಂದಿದ ಮಾಜಿ ಪ್ರಿಯಕರ ಏಕಾಏಕಿ ವರನ ಮೇಲೆ ಹಲ್ಲೆ ನಡೆಸುತ್ತಾನೆ. ಮೂಖಾಮೂತಿ ನೋಡದೇ ವರನನ್ನು ಚಚ್ಚಿದ ಆ ಯುವಕನನ್ನು ಕಂಡು ಒಂದು ಕ್ಷಣಕ್ಕೆ ಎಲ್ಲರು ಗರ ಬಡಿದಂತೆ ನಿಂತಿದ್ದರು. ತಕ್ಷಣ ವಧು ಹಾಗೂ ಸಂಬಂಧಿಕರು ವರನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ.

VISTARANEWS.COM


on

Viral Video
Koo

ರಾಜಸ್ಥಾನ: ಸಾಮಾನ್ಯವಾಗಿ ಟಿವಿ ಸೀರಿಯಲ್‌ಗಳಲ್ಲಿ ತ್ರಿಕೋನ ಪ್ರೇಮಕಥೆಗಳು, ಇನ್ನೇನು ತಾಳಿ ಕಟ್ಟಬೇಕೆನ್ನುವ ವೇಳೆ ಮಾಜಿ ಪ್ರೇಯಸಿಯೋ ಅಥವಾ ಪ್ರಿಯಕರನೋ ಬಂದು ಮದುವೆ ನಿಲ್ಲಿಸೋದು ಹೀಗೆ ಚಿತ್ರ ವಿಚಿತ್ರ ಹೈಡ್ರಾಮಾಗಳನ್ನು ನೋಡಿರ್ತೇವೆ. ಇಂತಹದ್ದೇ ಒಂದು ಘಟನೆ ಇದೀಗ ರಾಜಸ್ಥಾನ(Rajasthan)ದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮದುವೆಗೆ ಹೋಗಿ ದಾಂಧಲೆ ಎಬ್ಬಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌(Viral Video) ಆಗಿದ್ದು, ಹಲವು ರೀತಿಯಲ್ಲಿ ಕಮೆಂಟ್‌ಗಳು ಬಂದಿವೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ಘರ್‌ ಕೇ ಕಲೇಶ್‌ ಎಂಬ ಸೋಶಿಯಲ್‌ ಮೀಡಿಯಾ ಹ್ಯಾಂಡ್ಲರ್‌ ಈ ವಿಡಿಯೋ ಶೇರ್‌ ಮಾಡಿದ್ದು, ಮದುವೆಯಲ್ಲಿ ಬಾಲಿವುಡ್‌ ಸಿನಿಮಾದಂತಹ ಟ್ವಿಸ್ಟ್‌ ಎಂದು ಬರೆದುಕೊಂಡಿದ್ದಾರೆ. ನೂತನ ಜೋಡಿ ಜೊತೆಗೆ ಫೋಟೋ ತೆಗೆಸಿಕೊಳ್ಳಲೆಂದು ವೇದಿಕೆಗೆ ಬಂದಿದ ಮಾಜಿ ಪ್ರಿಯಕರ ಏಕಾಏಕಿ ವರನ ಮೇಲೆ ಹಲ್ಲೆ ನಡೆಸುತ್ತಾನೆ. ಮೂಖಾಮೂತಿ ನೋಡದೇ ವರನನ್ನು ಚಚ್ಚಿದ ಆ ಯುವಕನನ್ನು ಕಂಡು ಒಂದು ಕ್ಷಣಕ್ಕೆ ಎಲ್ಲರು ಗರ ಬಡಿದಂತೆ ನಿಂತಿದ್ದರು. ತಕ್ಷಣ ವಧು ಹಾಗೂ ಸಂಬಂಧಿಕರು ವರನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ.

ಈ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಬಾಯ್‌ಫ್ರೆಂಡ್‌ ಮತ್ತು ವರನ ನಡುವೆ ಕಬೀರ್‌ ಸಿಂಗ್‌ನಂತಹ ಜಗಳ ರಾಜಸ್ಥಾನ ಬಿಲ್ವಾರಾದಲ್ಲಿ ಮದುವೆ ವೇದಿಕೆಯಲ್ಲಿ ನಡೆದಿದೆ ಎಂಬ ಬರಹದೊಂದಿಗೆ ಈ ವಿಡಿಯೋ ಶೇರ್‌ ಮಾಡಲಾಗಿದೆ. ಕೆಲವರು ಆ ವ್ಯಕ್ತಿಯನ್ನು ಹೇಡಿ ಎಂದು ಕಮೆಂಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ರೀತಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಮದುವೆ ಮಂಟಪದಲ್ಲೇ ವರನಿಗಾಗಿ ಇಬ್ಬರು ಯುವತಿಯರ ನಡುವೆ ಮಾರಾಮಾರಿ ನಡೆದಿದ್ದು, ಈ ಫೈಟ್‌ ಯಾವ WWFಗೂ ಕಡಿಮೆಯಿಲ್ಲ. ಈ ವೈರಲ್‌(Viral Video) ಆಗಿರುವ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡಿದ್ದರು.

ಅನಿತಾ ಸುರೇಶ್‌ ಶರ್ಮಾ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ಇಬ್ಬರು ಯುವತಿಯರು ವೇದಿಕೆಯಲ್ಲೇ ಯುವಕನಿಗಾಗಿ ಹೊಡೆದಾಟ ನಡೆಸಿದ್ದಾರೆ. ಇಲ್ಲಿ ಮಧು ಮತ್ತು ವರನ ಪ್ರೇಯಸಿ ನಡುವೆ ಮಾರಾಮಾರಿ ನಡೆದಿದೆ. ಒಬ್ಬರನೊಬ್ಬರು ಬೈದಾಡಿಕೊಂಡು ಇಬ್ಬರು ಜುಟ್ಟು ಹಿಡಿ ಹೊಡೆದಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಯುವಕ ಇನ್ನೇನು ತಾಳಿ ಕಟ್ಟಬೇಕೆನ್ನುವ ಹೊತ್ತಲ್ಲಿ ಮದುವೆ ಮಂಟಪಕ್ಕೆ ಬಂದಿದ್ದ ಆತನ ಪ್ರೇಯಸಿ ತಕರಾರು ಮಾಡಿದ್ದಾಳೆ. ಆಗ ವೇದಿಕೆಯಲ್ಲಿದ್ದ ವಧು ಕೂಡ ಆಕೆಯ ಜೊತೆ ಜಗಳಕ್ಕಿಳಿದಿದ್ದಾಳೆ. ಇನ್ನು ಇಬ್ಬರು ಯುವತಿಯರೂ ಕೆಂಪು ಬಣ್ಣ ಮದುವೆ ಲೆಹಂಗಾ ತೊಟ್ಟಿದ್ದು, ಎಲ್ಲರೆದುರೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ನಡುವಲ್ಲಿದ್ದ ವರ ಇಬ್ಬರನ್ನೂ ತಡೆಯಲು ಪ್ರಯತ್ನಿಸಿದ್ದನಾದರೂ ಯುವತಿಯರಿಬ್ಬರು ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇನ್ನು ಮದುವೆ ಆಗಮಿಸಿದ ಅತಿಥಿಗಳಲ್ಲಿ ಒಬ್ಬರು ಈ ಘಟನೆ ವಿಡಿಯೋ ಮಾಡಿದ್ದು, ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಐದು ದಿನಗಳ ಹಿಂದೆ ಇನ್‌ಸ್ಟಾ ಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, 1ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ಇದನ್ನೂ ಓದಿ: Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Continue Reading

ಕೊಡಗು

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Love Case : ಮಗಳನ್ನು ಪ್ರೀತಿಸುತ್ತಿದ್ದ ಯುವಕ ಮನೆಗೆ ಬಂದಿದ್ದಕ್ಕೆ ಮುಖಕ್ಕೆ ಬಿಸಿ ನೀರು ಎರಚಿ ಯುವತಿ ತಂದೆ ವಿಕೃತಿ ಮೆರೆದಿದ್ದಾರೆ. ಸುಟ್ಟ ಗಾಯಗಳಿಂದ ಯುವ ಪ್ರೇಮಿ ಆಸ್ಪತ್ರೆ ಪಾಲಾಗಿದ್ದಾನೆ.

VISTARANEWS.COM


on

By

Love Case Father throws hot water on man who loved his daughter for coming home
Koo

ಕೊಡಗು: ಮಗಳನ್ನು ಪ್ರೀತಿಸುತ್ತಿದ್ದ (Love Case) ಯುವಕನಿಗೆ ಬಿಸಿ ನೀರು ಎರಚಿ ಯುವತಿ ತಂದೆ ವಿಕೃತಿ ಮೆರೆದಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ಘಟನೆ ನಡೆದಿದೆ. ಗಣಪತಿ ಬೀದಿ ನಿವಾಸಿ ಸುಹೇಲ್ ಎಂಬಾತ ಆಸ್ಪತ್ರೆಗೆ ದಾಖಲಾದ ಪ್ರೇಮಿಯಾಗಿದ್ದಾನೆ.

ಸುಹೇಲ್‌ಗೆ ಮದೆನಾಡಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಕೈ-ಕೈ ಹಿಡಿದು ಊರೆಲ್ಲ ಓಡಾಡಿದ್ದರು. ಇವರಿಬ್ಬರ ಪ್ರೀತಿ ವಿಚಾರವು ಯುವತಿ ಮನೆಯವರಿಗೆ ತಿಳಿದುಹೋಗಿತ್ತು. ಇವರಿಬ್ಬರ ಪ್ರೀತಿಗೆ ನಿರಾಕರಿಸಿದ್ದರು. ಇತ್ತ ಯುವತಿ ಸುಹೇಲ್‌ಗೆ ಫೋನ್‌ ಮಾಡಿ ಮನೆಯಲ್ಲಿ ಹಿಂಸೆಯಾಗುತ್ತಿದೆ. ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗು ಎಂದಿದ್ದಾಳೆ.

ಪ್ರೀತಿಸಿದವಳು ಈ ಪರಿ ಹಿಂಸೆ ಪಡುತ್ತಿರುವ ವಿಷಯ ತಿಳಿದ ಸುಹೇಲ್‌ ಗಟ್ಟಿ ಮನಸ್ಸು ಮಾಡಿ, ಆಕೆಯ ಮನೆಗೆ ಹೋಗಿದ್ದಾನೆ. ಸುಹೇಲ್‌ ಮನೆಯೊಳಗೆ ಕಾಲಿಡುತ್ತಿದ್ದಂತೆ ಸಿಟ್ಟಾದ ಯುವತಿ ತಂದೆ ಏಕಾಏಕಿ ಕೊತ ಕೊತ ಅಂತ ಕುದಿಯುತ್ತಿದ್ದ ನೀರನ್ನು ಎರಚಿದ್ದಾರೆ. ಬಿಸಿ ನೀರು ಎರಚಿದ್ದರಿಂದ ಸುಹೇಲ್‌ನ ಮುಖ ಹಾಗೂ ಕುತ್ತಿಗೆ ಭಾಗವೆಲ್ಲ ಸುಟ್ಟು ಹೋಗಿದೆ.

ಸದ್ಯ ಸುಹೇಲ್‌ಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಾಶತ್‌ ಸುಹೇಲ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಟ್ಟುಗಾಯಗಳಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Murder Case : ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಶವದ ಪಕ್ಕದಲ್ಲೇ ನಿದ್ರೆಗೆ ಜಾರಿದ ಕುಡುಕ ಪತಿ

ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌

ಉತ್ತರಪ್ರದೇಶ: ಸೊಸೆ ಮೇಲೆ ಅತ್ತೆ ಮತ್ತು ನಾದಿನಿ ಸೇರಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶ(Uttar Pradesh)ದ ಇಟಾ ಪ್ರದೇಶದಲ್ಲಿ ನಡೆದಿದೆ. ವಿಚಿತ್ರವೆಂದರೆ ಮಹಿಳೆಯ ಪತಿ, ತನ್ನ ತಾಯಿ ಮತ್ತು ತಂಗಿಯನ್ನು ತಡೆಯುವ ಬದಲು ವಿಡಿಯೋ ರೆಕಾರ್ಡ್‌(Video record) ಮಾಡಿದ್ದಾನೆ. ಬಿಟ್ಟು ಬಿಡುವಂತೆ ಎಷ್ಟೇ ಗೋಗರೆದರೂ ಕೇಳದೆ ಮಹಿಳೆ ಮೇಲೆ ಬಹಳ ಕ್ರೂರವಾಗಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌(Viral Video) ಆಗಿದೆ.

ಇಟಾದಲ್ಲಿ ಈ ಘಟನೆ ನಡೆದಿದ್ದು, ಸೊಸೆಯನ್ನು ಅತ್ತೆ ಮತ್ತು ನಾದಿನಿ ಸೇರಿಕೊಂಡು ಚೆನ್ನಾಗಿ ಥಳಿಸಿದ್ದು, ಬಳಿಕ ಆಕೆಯನ್ನು ನೆಲದಲ್ಲಿ ಎಳೆದಾಡಿದ್ದಾರೆ. ಅಲ್ಲೇ ಇದ್ದ ಪತಿ ಮತ್ತು ಮಾವನ ಬಳಿ ಸಹಾಯಕ್ಕಾಗಿ ಆಕೆ ಎಷ್ಟೇ ಅಂಗಲಾಚಿದರೂ ಆಕೆ ಮೇಲೆ ನಡೆಯುತ್ತಿದ್ದ ಮಾರಣಾಂತಿಕ ಹಲ್ಲೆ ಮಾತ್ರ ನಿಲ್ಲುವುದೇ ಇಲ್ಲ. ಮಹಿಳೆಯ ಜೋರಾಗಿ ಕಿರುಚಿಕೊಂಡು ಬಿಟ್ಟು ಬಿಡಿ ಎಂದು ಬೇಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಕೈಹಿಡಿದು ರಕ್ಷಿಸಬೇಕಿದ್ದ ಪತಿಯೇ ಆಕೆಯ ಸಹಾಯಕ್ಕೆ ಬಾರದೇ ಬರೀ ವಿಡಿಯೋ ಮಾಡುತ್ತಾ ನಿಂತಿದ್ದ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ. ಇಂತಹ ಕ್ರೂರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಸ್ವಯಂಪ್ರೇರಿತರಾಗಿ ದೂರ ದಾಖಲಿಸಿಕೊಂಡು ಆರೋಪಿಗಳನ್ನು ತಕ್ಷಣ ಅರೆಸ್ಟ್‌ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Viral Video: ತೆಲಂಗಾಣದ ಪೆಟ್ರೋಲ್‌ ಬಂಕ್‌ನಲ್ಲಿ ಲಾರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಕೂಡಲೇ ಸಿಬ್ಬಂದಿ ಏಕಾಂಗಿಯಾಗಿ ನಂದಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಿಬ್ಬಂದಿಯ ಸಮಯೋಚಿತ ನಿರ್ಧಾರವನ್ನು, ಧೈರ್ಯವನ್ನು ಹಲವರು ಮುಕ್ತಕಂಠದಿಂದ ಹೊಗಳಿದ್ದಾರೆ. ಈತನೇ ನಿಜವಾದ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.

VISTARANEWS.COM


on

Viral Video
Koo

ಹೈದರಾಬಾದ್‌: ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಇತ್ತೀಚೆಗೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ತಾಪಮಾನ ಗಣನೀಯವಾಗಿ ಕಡಿಮೆಯಾಗುತ್ತಿಲ್ಲ. ಅತ್ಯಧಿಕ ಉಷ್ಣಾಂಶದ ಕಾರಣದಿಂದ ದೇಶದ ಹಲವೆಡೆ ನಿಲ್ಲಿಸಿದ್ದ, ಚಲಿಸುತ್ತಿರುವ ವಾಹನಗಳು ಬೆಂಕಿಗಾಹುತಿಯಾಗುವ ಘಟನೆ ಪದೇ ಪದೆ ಘಟಿಸುತ್ತಲೇ ಇದೆ. ಸದ್ಯ ಅಂತಹದ್ದೇ ಒಂದು ದುರಂತ ತೆಲಂಗಾಣದಲ್ಲಿ ನಡೆದಿದ್ದು, ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬರ ಸಮಯಪ್ರಜ್ಞೆಯಿಂದ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಸಿಬ್ಬಂದಿ ಬೆಂಕಿ ನಂದಿಸಲು ಏಕಾಂಗಿಯಾಗಿ ನಡೆಸುತ್ತಿರುವ ಪ್ರಯತ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸದ್ಯ ವೈರಲ್‌ ಆಗಿದೆ (Viral Video).

ತೆಲಂಗಾಣದ ಯಾದಾದ್ರಿ ಭುವನಗಿರಿಯ ಉಪನಗರದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಇಂಧನ ಹಾಕಿಸಿಕೊಳ್ಳಲು ಟ್ರಕ್ಕೊಂದು ಪೆಟ್ರೋಲ್‌ ಬಂಕ್‌ ಪ್ರವೇಶಿಸುತ್ತದೆ. ಬಿಸಿಲಿನ ಝಳಕ್ಕೆ ಇದ್ದಕ್ಕಿದ್ದಂತೆ ಟ್ರಕ್‌ನ ಇಂಧನ ಟ್ಯಾಂಕ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಳ್ಳುತ್ತದೆ. ಚಾಲಕ ಮತ್ತು ನಿರ್ವಾಹಕ ಕೂಡಲೇ ಟ್ರಕ್‌ನಿಂದ ಜಿಗಿದು ಪಾರಾಗುತ್ತಾರೆ.

ಸ್ಫೋಟದ ಶಬ್ದಕ್ಕೆ ಎಲ್ಲರೂ ದಂಗಾಗಿ ನಿಲ್ಲುತ್ತಾರೆ. ಈ ವೇಳೆ ಕೂಡಲೆ ಎಚ್ಚೆತ್ತುಕೊಳ್ಳುವ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯೋರ್ವರು ಧೈರ್ಯದಿಂದ ಮುನ್ನುಗ್ಗಿ ಅಗ್ನಿಶಾಮಕ ಯಂತ್ರ (Fire extinguisher)ವನ್ನು ಹಿಡಿದು ಉರಿಯುತ್ತಿರುವ ಟ್ರಕ್ ಕಡೆಗೆ ಧಾವಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಾರೆ.

ಅವರ ಆರಂಭಿಕ ಪ್ರಯತ್ನಗಳ ಹೊರತಾಗಿಯೂ, ಅಗ್ನಿಶಾಮಕ ಸಿಲಿಂಡರ್ ಖಾಲಿಯಾದ ನಂತರ ಬೆಂಕಿ ಮತ್ತೆ ಹೊತ್ತಿಕೊಂಡಿತು. ಕೂಡಲೇ ಅವರು ಮತ್ತೊಂದು ಅಗ್ನಿಶಾಮಕವನ್ನು ತಂದು ಬೆಂಕಿಯನ್ನು ನಿಯಂತ್ರಿಸುವ ಸಾಹಸವನ್ನು ಮುಂದುವರಿಸಿದರು. ಅವರ ಧೈರ್ಯದಿಂದ ಪ್ರೇರಿತರಾಗಿ ಬಂಕ್‌ನಲ್ಲಿದ್ದ ಇತರರು ಸಹ ಕೈ ಜೋಡಿಸತೊಡಗಿದರು. ಎಲ್ಲರ ಪ್ರಯತ್ನದ ಫಲವಾಗಿ, ಸತತ ಹೋರಾಟದ ನಂತರ ಬೆಂಕಿ ನಿಯಂತ್ರಣಕ್ಕೆ ಬಂತು. ಈ ಮೂಲಕ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿತು. ಅದು ಪೆಟ್ರೋಲ್‌ ಬಂಕ್‌ ಆಗಿರುವ ಕಾರಣ ತುಸು ಹೆಚ್ಚು ಕಡಿಮೆಯಾಗಿದ್ದರೂ ಬಹು ದೊಡ್ಡ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು. ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದಾಗಿ ಆಪತ್ತು ಕೂದಲೆಳೆ ಅಂತರದಲ್ಲಿ ತಪ್ಪಿತು.

ನೆಟ್ಟಿಗರಿಂದ ಮೆಚ್ಚುಗೆ

ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಪ್‌ಲೋಡ್‌ ಅದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಹಲವು ಲೈಕ್‌ ಬಟನ್‌ ಒತ್ತಿದರೆ ಇನ್ನು ಕೆಲವರು ಸಿಬ್ಬಂದಿಯ ಸಮಯೋಚಿತ ನಿರ್ಧಾರವನ್ನು, ಧೈರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ʼʼಬೆಂಕಿ ನಂದಿಸಲು ಏಕಾಂಗಿಯಾಗಿ ಹೋರಾಡಿದ ಸಿಬ್ಬಂದಿಗೆ ಅತ್ಯಂತ ಶೂರ ಎನ್ನುವ ಅವಾರ್ಡ್‌ ಕೊಡಬೇಕು. ಒಂದು ವೇಳೆ ಸ್ಥಳದಲ್ಲಿ ನಾನು ಇದ್ದಿದ್ದರೆ ಇತರರಂತೆ ಓಡಿ ಹೋಗುತ್ತಿದ್ದೆʼʼ ಎಂದು ಒಬ್ಬರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ʼʼಈ ಸಿಬ್ಬಂದಿಯ ಧೈರ್ಯಕ್ಕೆ ಹ್ಯಾಟ್ಸಾಫ್‌ʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼಬೆಂಕಿ ಆಕಸ್ಮಿಕದಿಂದ ಪಾರಾಗುವುದು ಹೇಗೆ ಎನ್ನುವ ಬಗ್ಗೆ ಈತನಿಗೆ ತರಬೇತಿ ಸಿಕ್ಕಿರಬೇಕು. ಅದಕ್ಕೆ ಆತ ಧೈರ್ಯವಾಗಿ ಮುನ್ನುಗ್ಗಿದ್ದಾನೆʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಆತನ ಧೈರ್ಯಕ್ಕೆ ಪ್ರಶಸ್ತಿ ಕೊಡಲೇಬೇಕುʼʼ ಎಂದು ಮಗದೊಬ್ಬರು ಆಗ್ರಹಿಸಿದ್ದಾರೆ. ಈತನೇ ನಿಜವಾದ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:Weight Lose: ತೂಕ ಇಳಿಸಲು ಬಯಸುವಿರಾ? ಈ ಸಂಗತಿ ತಿಳಿದಿರಲಿ

Continue Reading
Advertisement
Self Harming
ಕರ್ನಾಟಕ20 mins ago

Self Harming: ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಜೋಡಿ; ಅನೈತಿಕ ಸಂಬಂಧ ಶಂಕೆ

HD Kumaraswamy attack on DK Shivakumar and he gives reason for Devaraje Gowda fears for his life in jail
ರಾಜಕೀಯ44 mins ago

HD Kumaraswamy: ದೇವರಾಜೇಗೌಡರಿಗೆ ಜೈಲಲ್ಲಿ ಜೀವ ಭಯ ಇದೆ; ಕಾರಣ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ

Wedding Fashion
ಫ್ಯಾಷನ್1 hour ago

Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

Sambit Patra
ದೇಶ1 hour ago

‘ಪುರಿ ಜಗನ್ನಾಥನೇ ಮೋದಿಯ ಭಕ್ತ’ ಹೇಳಿಕೆ; ಪ್ರಾಯಶ್ಚಿತ್ತವಾಗಿ ಸಂಬಿತ್‌ ಪಾತ್ರಾ 3 ದಿನ ಉಪವಾಸ!

2024 Bajaj Pulsar F250
ಪ್ರಮುಖ ಸುದ್ದಿ1 hour ago

2024 Bajaj Pulsar F250 : ಬೆಲೆ ಏರಿಕೆ ಮಾಡದೇ ಹೊಸ ಪಲ್ಸರ್​ 250 ರಸ್ತೆಗಿಳಿಸಲಿದೆ ಬಜಾಜ್​​

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Cauvery Dispute
ಕರ್ನಾಟಕ2 hours ago

Cauvery Dispute: ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು CWMA ಸೂಚನೆ

Brand Bangalore and BJP Slams DK Shivakumar and Congress Government
ರಾಜಕೀಯ2 hours ago

Brand Bangalore: ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ; ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಕುಟುಕಿದ ಬಿಜೆಪಿ

Eye Care Tips
ಆರೋಗ್ಯ2 hours ago

Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

Turbulence
ಪ್ರಮುಖ ಸುದ್ದಿ2 hours ago

Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು8 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌