Viral News: ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ? - Vistara News

ವೈರಲ್ ನ್ಯೂಸ್

Viral News: ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

Viral News:ಮಗುವಿನ ತಾಯಿ ರಮ್ಯಾ ತೀರ ಖಿನ್ನತೆಗೊಳಗಾಗಿದ್ದರು. ತನ್ನ ಅಜಾಗುರೂಕತೆಯಿಂದ ದುರಂತ ಸಂಭವಿಸಿದೆ ಎಂಬುದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಇನ್ನು ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ಎಲ್ಲರೂ ರಮ್ಯಾಳ ಅಜಾಗುರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದರು.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಯಂಬತ್ತೂರ್‌: ಕಳೆದ ತಿಂಗಳು ಅಪಾರ್ಟ್‌ಮೆಂಟ್‌(Apartment)ನ ಕಿಟಕಿಯಿಂದ ವಿಂಡೋ ಪೋರ್ಚ್‌(Window Porch) ಮೇಲೆ ಬಿದ್ದು, ಪವಾಡ ಸದೃಶ್ಯವಾಗಿ ಬದುಕಿ ಬಂದ ಏಳು ತಿಂಗಳ ಮಗುವಿನ(Toddler) ತಾಯಿ ಇದೀಗ ಆತಹತ್ಯೆಗೆ ಶರಣಾಗಿದ್ದಾಳೆ(Viral News). ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ಮಗು ಅದೃಷ್ಟವಶಾತ್‌ ಅಲ್ಲೇ ನೇತಾಡಿಕೊಂಡು ಸ್ಥಳೀಯರ ಸಹಾಯದಿಂದ ಬದುಕುಳಿದಿತ್ತು.

ಈ ಘಟನೆ ಬಳಿಕ ಮಗುವಿನ ತಾಯಿ ರಮ್ಯಾ ತೀರ ಖಿನ್ನತೆಗೊಳಗಾಗಿದ್ದರು. ತನ್ನ ಅಜಾಗುರೂಕತೆಯಿಂದ ದುರಂತ ಸಂಭವಿಸಿದೆ ಎಂಬುದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಇನ್ನು ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ಎಲ್ಲರೂ ರಮ್ಯಾಳ ಅಜಾಗುರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ರಮ್ಯಾ ಖಿನ್ನತೆಗೊಳಗಾಗಿದ್ದರು. ಇದನ್ನು ಗಮನಿಸಿದ ಆಕೆಯ ಪತಿ ವೆಂಕಟೇಶ್‌ ಕೊಯಂಬತ್ತೂರ್‌ನಲ್ಲಿರುವ ಆಕೆಯ ತವರು ಮನೆಗೆ ಕರೆದುಕೊಂಡು ಬಂದಿದ್ದರು.

ಭಾನುವಾರ ರಮ್ಯಾಳನ್ನು ಒಬ್ಬಳೇ ಮನೆಯಲ್ಲಿ ಬಿಟ್ಟು ಎಲ್ಲರೂ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ವಾಪಸ್‌ ಮನೆಗೆ ಬಂದಾಗ ರಮ್ಯಾ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ಇನ್ನು ಆಕೆಯ ಸಾವಿಗೆ ಕಾರಣ ಏನೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಆಕೆ ಏನಾದರೂ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಏ.28ರಂದು ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಮಗುವಿನ ರಕ್ಷಣೆಗೆ ಧಾವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಂಡೋ ಪೋರ್ಚ್‌ ಮೇಲೆ ಬಿದ್ದಿ ಮಗುವಿನ ರಕ್ಷಣೆಗೆ ದೌಡಾಯಿಸಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತೊಂದು ಕಿಟಕಿಯಿಂದ ಹೊರಬಂದು ಮಗುವನ್ನು ರಕ್ಷಿಸಿಲು ಹರಸಾಹನ ಪಟ್ಟರು. ನಾಲ್ಕೈದು ಜನ ಕಿಟಕಿಯ ಹೊರ ಭಾಗದಲ್ಲಿರುವ ಸಣ್ಣ ಜಾಗದಲ್ಲಿ ನಿಂತು ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಕ್ಷಿಸಿದ್ದಾರೆ. ಇನ್ನು ಕೆಳಗೆ ಅನೇಕ ಜನ ದೊಡ್ಡ ಬಟ್ಟೆಯೊಂದು ಹಿಡಿದು ಮಗುವಿನ ರಕ್ಷಣೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು, ಅಚಾನಕ್ಕಾಗಿ ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದಿದ್ದ 7 ತಿಂಗಳಿನ ಮಗುವನ್ನು ಬಹಳ ಜಾಣ್ಮೆಯಿಂದ ರಕ್ಷಿಸಿದ್ದಾರೆ. ಅವರ ಕಾರ್ಯಕ್ಕೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಸಲಿಂಗ ಪ್ರೇಮ ಪ್ರಕರಣ; ಯುವತಿಯನ್ನು ಮೆಚ್ಚಿ ಮದುವೆಯಾದ ಟಿವಿ ನಟಿ!

Viral Video: ಒಂದು ಗಂಡು ಒಂದು ಹೆಣ್ಣು ಹೇಗೋ ಏನೋ ಹೊಂದಿಕೊಂಡು ಬಾಳುವುದು ಕೇಳಿದ್ದೀರಿ. ಆದರೆ ಈಗ ಒಂದು ಹೆಣ್ಣು ಇನ್ನೊಂದು ಹೆಣ್ಣನ್ನು ಪ್ರೀತಿಸುವುದು, ಒಂದು ಗಂಡು ಇನ್ನೊಂದು ಗಂಡನ್ನು ವಿವಾಹ ಆಗುವಂತಹ ಪ್ರಕರಣಗಳು ನಡೆಯುತ್ತಿವೆ. ಇಂಥದ್ದೇ ಒಂದು ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಅಂಜು ಶರ್ಮಾ ಎಂಬ ಯುವತಿ ಫತೇಹಾಬಾದ್‌ನ ಕವಿತಾ ಟಿಪ್ಪು ಎಂಬ ಯುವತಿಯನ್ನು ಮದುವೆಯಾಗಿದ್ದಾರೆ. ಇವರ ಮದುವೆ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮದುವೆಗೆ ಇಬ್ಬರ ಕುಟುಂಬಸ್ಥರು ಮೊದಲು ವಿರೋಧ ವ್ಯಕ್ತಪಡಿಸಿದ್ದರು ಆದರೆ ಈಗ ಇಬ್ಬರ ಕುಟುಂಬದವರು ಸಮ್ಮತಿ ನೀಡಿದ ಕಾರಣ ಬಂಧು ಬಳಗದವರ ಸಮ್ಮುಖದಲ್ಲಿ ಗುರುಗ್ರಾಮದ ಮದನಪುರಿ ಪ್ರದೇಶದ ಪಂಚಾಯತ್ ಧರ್ಮಸಾಲೆಯಲ್ಲಿ ಹಸೆಮಣೆ ಏರಿದ್ದಾರೆ ಎನ್ನಲಾಗಿದೆ.

VISTARANEWS.COM


on

Viral Video
Koo

ಗುರುಗ್ರಾಮ: ಸಾಮಾನ್ಯವಾಗಿ ಯುವತಿಯರು ಯುವಕನನ್ನು ಮದುವೆಯಾಗುವುದು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಯುವತಿ ಯುವತಿಯನ್ನೇ ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದಾಳಂತೆ. ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ತಿಳಿದರೂ ಕೂಡ ಇವರು ಮದುವೆಯಾಗಿದ್ದು, ಈ ಸುದ್ದಿ ವೈರಲ್ (Viral Video )ಆಗಿದೆ.

ಗುರುಗ್ರಾಮದ ಅಂಜುಶರ್ಮಾ ಅವರು ವರನ ರೂಪದಲ್ಲಿ ಫತೇಹಾಬಾದ್ ನ ಕವಿತಾ ಟಿಪ್ಪು ಅವರನ್ನು ವಧುವಿನ ರೂಪದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಮದುವೆಗೆ ಇಬ್ಬರ ಕುಟುಂಬಸ್ಥರು ಮೊದಲು ವಿರೋಧ ವ್ಯಕ್ತಪಡಿಸಿದ್ದರು ಆದರೆ ಈಗ ಇಬ್ಬರ ಕುಟುಂಬದವರು ಸಮ್ಮತಿ ನೀಡಿದ ಕಾರಣ ಬಂಧು ಬಳಗದವರ ಸಮ್ಮುಖದಲ್ಲಿ ಗುರುಗ್ರಾಮದ ಮದನಪುರಿ ಪ್ರದೇಶದ ಪಂಚಾಯತ್ ಧರ್ಮಸಾಲೆಯಲ್ಲಿ ಹಸೆಮಣೆ ಏರಿದ್ದಾರೆ ಎನ್ನಲಾಗಿದೆ. ಇವರಲ್ಲಿ ಅಂಜುಶರ್ಮಾ ಪತಿಯಾಗಿ ಕವಿತಾ ಟಿಪ್ಪು ಪತ್ನಿಯಾಗಿ ದಾಂಪತ್ಯ ಜೀವನ ನಡೆಸಲಿದ್ದಾರೆ ಎನ್ನಲಾಗಿದೆ.

ಕವಿತಾ ಅವರಿಗೆ ಪೋಷಕರು ಇರದ ಕಾರಣ ಸೋದರ ಮಾವನ ಆಶ್ರಯದಲ್ಲಿದ್ದರು. ಇವರ ತಂಗಿಗೆ ಮದುವೆಯಾಗಿದೆ. ಅಂಜು ಶರ್ಮಾ ಅವರು ಟಿವಿ ಧಾರಾವಾಹಿ ನಟಿಯಾಗಿದ್ದರು. ಕೋವಿಡ್ ಸಮಯದಲ್ಲಿ ಕಾರ್ಯಕ್ರಮವೊಂದರ ಸಲುವಾಗಿ ಅಂಜು ಶರ್ಮಾ ಅವರಿಗೆ ಮೇಕಪ್ ಮಾಡಲು ಕವಿತಾ ಅವರು ಬಂದಿದ್ದಾರೆ.

ಆ ವೇಳೆ ಇಬ್ಬರೂ ಭೇಟಿಯಾಗಿದ್ದರು. ಮತ್ತು ಅವರಿಬ್ಬರು 22 ದಿನಗಳ ಕಾಲ ಜೊತೆಯಲ್ಲಿ ಇದ್ದರು. ಆ ವೇಳೆ ಅವರಿಬ್ಬರು ಪ್ರೀತಿಸಲು ಶುರುಮಾಡಿದ್ದರು. ಹಾಗಾಗಿ ಮುಂದೆ ಮದುವೆಯಾಗಲು ನಿರ್ಧರಿಸಿ ಇದೀಗ ನಾಲ್ಕು ವರ್ಷಗಳ ಬಳಿಕ ಮದುವೆಯಾಗಿದ್ದಾರೆ. ಈ ಮದುವೆಗೆ ಕವಿತಾ ಸೋದರ ಮಾವ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಇಬ್ಬರು ದಂಪತಿ ಸಂದರ್ಶನವೊಂದರಲ್ಲಿ ತಮ್ಮ ಪ್ರೇಮಕಥೆಯ ಬಗ್ಗೆ ಹಂಚಿಕೊಂಡಿದ್ದಾರೆ. ಮತ್ತು ತಾವಿಬ್ಬರು ಬಹಳ ಸಂತೋಷವಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಅವರು ಮಗುವನ್ನು ದತ್ತು ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ

ಅಕ್ಟೋಬರ್ 2023ರಲ್ಲಿ ಭಾತರದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಸಲಿಂಗ ವಿವಾಹಗಳನ್ನು ಕಾನೂನು ಬದ್ಧಗೊಳಿಸಲು ಸಾಧ್ಯವಿಲ್ಲ ಮತ್ತು ವಿಶೇಷ ವಿವಾಹ ಕಾಯ್ದೆಯನ್ನು ಬದಲಾಯಿಸಲು ಬಯಸುತ್ತದೆಯೇ ಅಥವಾ ಇಲ್ಲವೇ ಎಂಬ ಜವಾಬ್ದಾರಿಯನ್ನು ಸಂಸತ್ತಿನ ಮೇಲೆ ಹಾಕುತ್ತೇವೆ ಎಂದು ತಿಳಿಸಿದ್ದರು. ಹಾಗಾಗಿ ಈ ವಿಶೇಷ ಮದುವೆಗೂ ಇನ್ನೂ ಕಾನೂನಿನಲ್ಲಿ ಮಾನ್ಯತೆ ಸಿಕ್ಕಿಲ್ಲ. ಈ ನಡುವೆ ಇವರಿಬ್ಬರು ಸಲಿಂಗ ವಿವಾಹವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಚರ್ಚೆಗೆ ಕಾರಣವಾಗಿದೆ.

Continue Reading

ವೈರಲ್ ನ್ಯೂಸ್

Viral Video: ಐಸ್‌ ಕ್ರೀಂನಲ್ಲಿ ಮನುಷ್ಯನ ಬೆರಳು! ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ

Viral Video: ಮಲಾಡ್‌ ನಿವಾಸಿಯಾಗಿರುವ 26 ವರ್ಷದ ಓರ್ಲೆಂ ಬ್ರೆಂಡನ್‌ ಸೆರಾವೋ ಜೂ.12ರಂದು ತನ್ನ ಸಹೋದರಿ ಆರ್ಡರ್‌ ಮಾಡಿದ್ದ ಬಟರ್‌ಸ್ಕಾಚ್‌ ಅನ್ನು ತಿನ್ನುತ್ತಿದ್ದ. ಹಾಗೆಯೇ ತಿನ್ನುತ್ತಾ ಇರುವಾಗ ಆತನ ಬಾಯಿಗೆ ಏನೋ ಸಿಕ್ಕಿಕೊಂಡ ಹಾಗೆ ಫೀಲ್‌ ಆಗುತ್ತದೆ. ಬಾಯಿಯಿಂದ ತೆಗೆದು ನೋಡಿದಾಗ ಅಲ್ಲಿ ಮನುಷ್ಯ ಬೆರಳು ಪತ್ತೆ ಆಗಿತ್ತು. ಅದನ್ನು ಕಂಡು ಹೌಹಾರಿದ ಓರ್ಲೆಂ, ತಕ್ಷಣ ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದೂ ಅಲ್ಲದೇ ಐಸ್‌ಕ್ರೀಂ ಕಂಪನಿಗೂ ದೂರು ಸಲ್ಲಿಸಿದ್ದರು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

VISTARANEWS.COM


on

Viral Video
Koo

ಮುಂಬೈ: ಐಸ್‌ ಕ್ರೀಂ(Ice Cream) ಕೋನ್‌ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪುಣೆಯ ಫಾರ್ಚೂನ್‌ ಕಂಪನಿಯ ಸಹಾಯಕ ಆಪರೇಟರ್‌ ಮ್ಯಾನೇಜರ್‌ ಓಂಕಾರ್‌ ಪೋಟೆಯ ಬೆರಳು ಇದಾಗಿದೆ ಎಂಬುದು ಡಿಎನ್‌ಎ(DNA) ಪರೀಕ್ಷೆಯಲ್ಲಿ(Viral Video) ಬಯಲಾಗಿದೆ. ಸಂಸ್ಥೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಘಟನೆ ವಿವರ:

ಮಲಾಡ್‌ ನಿವಾಸಿಯಾಗಿರುವ 26 ವರ್ಷದ ಓರ್ಲೆಂ ಬ್ರೆಂಡನ್‌ ಸೆರಾವೋ ಜೂ.12ರಂದು ತನ್ನ ಸಹೋದರಿ ಆರ್ಡರ್‌ ಮಾಡಿದ್ದ ಬಟರ್‌ಸ್ಕಾಚ್‌ ಅನ್ನು ತಿನ್ನುತ್ತಿದ್ದ. ಹಾಗೆಯೇ ತಿನ್ನುತ್ತಾ ಇರುವಾಗ ಆತನ ಬಾಯಿಗೆ ಏನೋ ಸಿಕ್ಕಿಕೊಂಡ ಹಾಗೆ ಫೀಲ್‌ ಆಗುತ್ತದೆ. ಬಾಯಿಯಿಂದ ತೆಗೆದು ನೋಡಿದಾಗ ಅಲ್ಲಿ ಮನುಷ್ಯ ಬೆರಳು ಪತ್ತೆ ಆಗಿತ್ತು. ಅದನ್ನು ಕಂಡು ಹೌಹಾರಿದ ಓರ್ಲೆಂ, ತಕ್ಷಣ ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದೂ ಅಲ್ಲದೇ ಐಸ್‌ಕ್ರೀಂ ಕಂಪನಿಗೂ ದೂರು ಸಲ್ಲಿಸಿದ್ದರು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಇದಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬೆರಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಈ ಪರೀಕ್ಷೆಯ ವರದಿಯ ಬಂದಿದ್ದು, ಪುಣೆಯ ಫಾರ್ಚೂನ್‌ ಕಂಪನಿಯ ಸಹಾಯಕ ಆಪರೇಟರ್‌ ಮ್ಯಾನೇಜರ್‌ ಓಂಕಾರ್‌ ಪೋಟೆಯ ಬೆರಳು ಇದಾಗಿದೆ ಎಂಬುದು ಡಿಎನ್‌ಎ(DNA) ಪರೀಕ್ಷೆಯಲ್ಲಿ ಬಯಲಾಗಿದೆ.

ಮಲಾಡ್ ಪಿಎಸ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಅದಾನೆ ಈ ಬಗ್ಗೆ ಮಾಹಿತಿ ನೀಡಿದ್ದು, ಐಸ್‌ಕ್ರೀಮ್‌ನಲ್ಲಿ ಪತ್ತೆಯಾದ ಬೆರಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಶಂಕಿತ (ಕಂಪನಿಯ ಸಹಾಯಕ ನಿರ್ವಾಹಕ ವ್ಯವಸ್ಥಾಪಕ) ಡಿಎನ್‌ಎ ಸಹ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡೂ ಡಿಎನ್‌ಎ ಮಾದರಿಗಳು ಹೊಂದಾಣಿಕೆಯಾಗುತ್ತಿವೆ. ಈಗ , ಈ ವಿಷಯದಲ್ಲಿ ಯಾರ ನಿರ್ಲಕ್ಷ್ಯ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಐಪಿಸಿ ಸೆಕ್ಷನ್ 272, 273, ಮತ್ತು 336 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Viral Video: ಹಸು, ನಾಯಿ, ಮೇಕೆ ಮೇಲೆ ಕಿಡಿಗೇಡಿಯಿಂದ ಹೇಯಕೃತ್ಯ; ವಿಡಿಯೋ ವೈರಲ್‌-ಸಿಎಂ ಯೋಗಿಗೆ ಪತ್ರ

Continue Reading

ದೇಶ

Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

Rahul Gandhi: ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸಂಸತ್ತಿನಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡುವಾಗ ಸ್ಪೀಕರ್‌ ಓಂ ಬಿರ್ಲಾ ಅವರು ಏಕೆ ಮೈಕ್‌ಅನ್ನು ಆಫ್‌ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ವಿಡಿಯೊವನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Rahul Gandhi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಬಳಿಕ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಂಸತ್ತಿನ ಮೊದಲ ವಿಶೇಷ ಅಧಿವೇಶನ ನಡೆಯುತ್ತಿದೆ. ಆಡಳಿತ ಪಕ್ಷಕ್ಕೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸವಾಲೊಡ್ಡುತ್ತಿದ್ದಾರೆ. ಇದರ ಬೆನ್ನಲ್ಲೇ, ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅವರು ನೀಟ್‌ ಅಕ್ರಮದ ಕುರಿತು ಮಾತನಾಡುವಾಗ ಅವರ ಮೈಕ್‌ ಆಫ್‌ ಆಗಿದ್ದು, ಸ್ಪೀಕರ್‌ ಓಂ ಬಿರ್ಲಾ (Om Birla) ಅವರೇ ಮೈಕ್‌ ಆಫ್‌ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ಸ್ಪೀಕರ್‌ ಸರ್‌, ನನಗೆ ಮೈಕ್‌ ಕೊಡಿ ಎಂದಿದ್ದಾರೆ. ಆಗ ಸ್ಪೀಕರ್‌, “ನನ್ನ ಬಳಿ ಯಾವುದೇ ಬಟನ್‌ ಇಲ್ಲ” ಎಂದಿದ್ದಾರೆ. ಇದಕ್ಕೂ ಮೊದಲು ರಾಹುಲ್‌ ಗಾಂಧಿ ಅವರು ಮಾತನಾಡಿದರು. “ದೇಶದ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಕಡೆಯಿಂದ ಜಂಟಿ ಸಂದೇಶ ನೀಡಲು ಬಯಸುತ್ತೇವೆ. ಹಾಗೆಯೇ, ವಿದ್ಯಾರ್ಥಿಗಳಿಗೆ ಗೌರವ ನೀಡುವ ದಿಸೆಯಲ್ಲಿ ಸಂಸತ್ತಿನಲ್ಲಿ ನಾವು ನೀಟ್‌ ಕುರಿತು ಗಂಭೀರವಾಗಿ ಚರ್ಚಿಸೋಣ” ಎಂದರು. ಇದೇ ವೇಳೆ ರಾಹುಲ್‌ ಗಾಂಧಿ ಅವರ ಮೈಕ್‌ ಆಫ್‌ ಆಗಿದ್ದು, ಪ್ರತಿಪಕ್ಷಗಳು ಗಲಾಟೆ ಮಾಡಿವೆ. ಆಗ ಸ್ಪೀಕರ್‌ ಅವರು ನನ್ನ ಬಳಿ ಬಟನ್‌ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಆಕ್ರೋಶ

“ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸಂಸತ್ತಿನಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡುವಾಗ ಸ್ಪೀಕರ್‌ ಓಂ ಬಿರ್ಲಾ ಅವರು ಏಕೆ ಮೈಕ್‌ಅನ್ನು ಆಫ್‌ ಮಾಡಿದ್ದಾರೆ” ಎಂದು ಕೇರಳ ಕಾಂಗ್ರೆಸ್‌ ಘಟಕದ ಎಕ್ಸ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ಅಲ್ಲದೆ, ರಾಹುಲ್‌ ಗಾಂಧಿ ಅವರು ಮಾತನಾಡುವಾಗಲೇ ಮೈಕ್‌ ಆಫ್‌ ಆಗುವ ವಿಡಿಯೊವನ್ನು ಕೂಡ ಹಲವು ಕಾಂಗ್ರೆಸ್‌ ನಾಯಕರು ಹಂಚಿಕೊಂಡಿದ್ದಾರೆ. ಹಾಗೆಯೇ, ಸ್ಪೀಕರ್‌ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ದೀಪೆಂದರ್‌ ಸಿಂಗ್‌ ಹೂಡಾ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಕ್ಷಿಪ್ರವಾಗಿ ನೀಟ್‌ ವಿಷಯದ ಕುರಿತು ಚರ್ಚೆ ಮಾಡೋಣ ಎಂದು ಬೇಡಿಕೆ ಇಟ್ಟೆವು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡುತ್ತಿದ್ದರು. ಆಗ ಮೈಕ್‌ ಆಫ್‌ ಆಗಿದೆ. ಇದು ನಮ್ಮ ಆಕ್ರೋಶವನ್ನು ಕೆರಳಿಸಿತು” ಎಂದಿದ್ದಾರೆ. ಜುಲೈ 24 ರಂದು ಸಂಸತ್‌ ವಿಶೇಷ ಅಧಿವೇಶನ ಆರಂಭವಾಗಿದ್ದು, ಜುಲೈ 3ರವರೆಗೆ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Continue Reading

ಪ್ರಮುಖ ಸುದ್ದಿ

ಮದುವೆಗೆ ಹೋದವರಿಗೆ 66 ಸಾವಿರ ರೂ. ನಗದು, ಭರ್ಜರಿ ಗಿಫ್ಟ್‌ ಕೊಟ್ಟ ದಂಪತಿ; ಎಲ್ಲಿ ಅಂತೀರಾ…?‌

ಚೀನಾದಲ್ಲಿ ನಡೆದ ಶ್ರೀಮಂತರ ಮದುವೆಗೆ ಜಗತ್ತಿನ ಮೂಲೆ ಮೂಲೆಯಿಂದ ಸಾವಿರಾರು ಜನ ಮದುವೆಗೆ ಹಾಜರಾಗಿದ್ದಾರೆ. ಮದುವೆಗೆ ಬರುವವರಿಗೆ ಎಲ್ಲರಿಗೂ ವಿಮಾನದ ಟಿಕೆಟ್‌ ಬುಕ್‌ ಮಾಡಲಾಗಿದೆ. ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅದ್ಧೂರಿ ಮದುವೆಯ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Rich Wedding
Koo

ಬೀಜಿಂಗ್‌: ಸಂಬಂಧಿಕರು, ಸ್ನೇಹಿತರು, ಹಿತೈಷಿಗಳ ಮದುವೆಗೆ ಹೋದರೆ ಮುಯ್ಯಿ ಮಾಡಿ ಬರುವುದು, ಉಡುಗೊರೆ ನೀಡಿ, ಶುಭ ಹಾರೈಸಿ ಬರುವುದು ವಾಡಿಕೆ. ಆದರೆ, ಮದುವೆಗೆ ಹೋದವರಿಗೇ ಯಾರೂ ಉಡುಗೊರೆ ಕೊಡುವುದಿಲ್ಲ. ಶ್ರೀಮಂತರ ಮದುವೆಯಾದರೆ ಸಣ್ಣ-ಪುಟ್ಟ ಉಡುಗೊರೆ ನೀಡುತ್ತಾರೆ. ಆದರೆ, ಚೀನಾದಲ್ಲಿ (China) ಹಾಗಲ್ಲ. ಶ್ರೀಮಂತ ಯುವಕ-ಯುವತಿಯು ಅದ್ಧೂರಿಯಾಗಿ (Rich Wedding) ಮದುವೆಯಾಗಿದ್ದು, ಮದುವೆಗೆ ಹಾಜರಾದವರಿಗೇ 66 ಸಾವಿರ ರೂ. ನಗದು ಉಡುಗೊರೆ ಸೇರಿ ಹಲವು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ.

ಪ್ರವಾಸಿ ಇನ್‌ಫ್ಲುಯೆನ್ಸರ್‌ ಆಗಿರುವ ದಾನಾ ಚಾಂಗ್‌ ಅವರು ಶ್ರೀಮಂತರ ಮದುವೆಯೊಂದರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಏಷ್ಯಾದ ಅದ್ಧೂರಿ ಮದುವೆಯು ಅದ್ಧೂರಿಯಾಗಿದೆ. ನಾನು ನನ್ನ ಜೀವನದಲ್ಲಿಯೇ ಇಂತಹ ಅದ್ಧೂರಿ ಮದುವೆಯನ್ನು ನೋಡಿಲ್ಲ” ಎಂದು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಆದರೆ, ಅದು ಯಾರ ಮದುವೆ? ಯುವಕ-ಯುವತಿಯ ತಂದೆ-ತಾಯಿ ಯಾರು? ಅವರು ಎಷ್ಟು ಶ್ರೀಮಂತರು ಎಂಬುದು ಸೇರಿ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.

ಮದುವೆಗೆ ಹಾಜರಾಗುವವರಿಗೆ ಏನೆಲ್ಲ ಸೌಲಭ್ಯ?

ಜಗತ್ತಿನ ಮೂಲೆ ಮೂಲೆಯಿಂದ ಸಾವಿರಾರು ಜನ ಮದುವೆಗೆ ಹಾಜರಾಗಿದ್ದಾರೆ. ಮದುವೆಗೆ ಬರುವವರಿಗೆ ಎಲ್ಲರಿಗೂ ವಿಮಾನದ ಟಿಕೆಟ್‌ ಬುಕ್‌ ಮಾಡಲಾಗಿದೆ. ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇನ್ನು, ಫೈವ್‌ ಸ್ಟಾರ್‌ ಹೋಟೆಲ್‌ನಿಂದ ಮದುವೆ ನಡೆಯುವ ಸ್ಥಳಕ್ಕೆ ರೋಲ್ಸ್‌ ರಾಯ್ಸ್‌ ಕಾರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು, ಮದುವೆ ಮಂಟಪದಲ್ಲಿ ಊಟ-ತಿಂಡಿ, ಐಸ್‌ಕ್ರೀಮ್‌ಗಳ ವೈವಿಧ್ಯತೆಗಂತೂ ಲೆಕ್ಕವೇ ಇರಲಿಲ್ಲ ಎಂದು ತಿಳಿದುಬಂದಿದೆ.

ಭಾರತದಲ್ಲೂ ಮುಕೇಶ್‌ ಅಂಬಾನಿ ಅವರಂತಹ ಶ್ರೀಮಂತರು ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ವಿರಾಟ್‌ ಕೊಹ್ಲಿ, ರಣವೀರ್‌ ಸಿಂಗ್‌ ಅವರಂತಹ ಸೆಲೆಬ್ರಿಟಿಗಳು ಇಟಲಿ ಸೇರಿ ಬೇರೆ ದೇಶಗಳಲ್ಲಿ ಅದ್ಧೂರಿಯಾಗಿ ಮದುವೆಯಾಗಿ, ಭಾರತದಲ್ಲಿ ರೆಸೆಪ್ಶನ್‌ ಇಟ್ಟುಕೊಳ್ಳುತ್ತಾರೆ. ಆದರೆ, ಯಾರೂ ಮದುವೆಗೆ ಬಂದವರಿಗೆ ಸಾವಿರಾರು ರೂ. ನಗದು, ದುಬಾರಿ ಉಡುಗೊರೆ ಕೊಡುವುದಿಲ್ಲ. ಕೊಡಬೇಕು ಎಂಬ ಸಂಪ್ರದಾಯ ಇಲ್ಲದಿದ್ದರೂ ಚೀನಾದಲ್ಲಿ ಮಾತ್ರ ಶ್ರೀಮಂತ ಯುವಕ-ಯುವತಿಯು ಉಡುಗೊರೆ ಕೊಟ್ಟು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: Sapthami Gowda: ʻಯುವʼ ಹೇಳಿದ್ದಕ್ಕೆ ಮುಂದುವರಿದೆ, ನನ್ನದೂ ತಪ್ಪಿದೆ; ಸಪ್ತಮಿ ಗೌಡ ಆಡಿಯೊ ವೈರಲ್!

Continue Reading
Advertisement
Vikram Misri
ಪ್ರಮುಖ ಸುದ್ದಿ5 mins ago

Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Prajwal Revanna Case
ಕರ್ನಾಟಕ10 mins ago

Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Vasavi Condiments owner attempts suicide by consuming sleeping pills
ಬೆಂಗಳೂರು14 mins ago

vasavi condiments : ವಾಸವಿ ಕಾಂಡಿಮೆಂಟ್ಸ್‌ಗೆ ಬೀಗ; ನಿದ್ರೆ ಮಾತ್ರೆ ಸೇವಿಸಿ ಮಾಲಕಿ ಗೀತಾ ಆತ್ಮಹತ್ಯೆಗೆ ಯತ್ನ

Dengue Prevention
ಆರೋಗ್ಯ21 mins ago

Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಕ್ರೀಡೆ33 mins ago

IND vs SA: ಗೆದ್ದು ಬಾ ಭಾರತ; ನಾಳೆ ಟಿ20 ವಿಶ್ವಕಪ್​ ಫೈನಲ್​

CM Siddaramaiah
ಕರ್ನಾಟಕ46 mins ago

CM Siddaramaiah: ನಿತಿನ್‌ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ; ಪ್ರಮುಖ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ

Dhanya Ramkumar heroine in choukidaar cinema
ಸ್ಯಾಂಡಲ್ ವುಡ್55 mins ago

Dhanya Ramkumar: ʻದಿಯಾʼ ಹೀರೊಗೆ ಜೋಡಿಯಾದ ದೊಡ್ಮನೆ ಬ್ಯೂಟಿ!

Road Accident A huge tree fell on the bike Riders are serious
ಉತ್ತರ ಕನ್ನಡ57 mins ago

Road Accident : ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದ ದಂಪತಿ ಮೇಲೆ ಮುರಿದು ಬಿದ್ದ ಬೃಹತ್‌ ಮರ!

Viral Video
Latest1 hour ago

Viral Video: ಸಲಿಂಗ ಪ್ರೇಮ ಪ್ರಕರಣ; ಯುವತಿಯನ್ನು ಮೆಚ್ಚಿ ಮದುವೆಯಾದ ಟಿವಿ ನಟಿ!

US Presidential Election
ವಿದೇಶ1 hour ago

US Presidential Election: ನೀಲಿ ಚಿತ್ರ ತಾರೆ ಜತೆ ಡೊನಾಲ್ಡ್‌ ಟ್ರಂಪ್‌ ಸೆಕ್ಸ್;‌ ಚರ್ಚೆ ವೇಳೆ ಬೈಡೆನ್‌ ಆರೋಪ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌