61ನೇ ಹುಟ್ಟುಹಬ್ಬಕ್ಕೆ ಸಿಹಿಗುಂಬಳದ ಮೇಲೆ ಕೂತು 61 ಕಿಮೀ ಹುಟ್ಟುಹಾಕಿ ದಾಖಲೆ ಬರೆದ! - Vistara News

ವೈರಲ್ ನ್ಯೂಸ್

61ನೇ ಹುಟ್ಟುಹಬ್ಬಕ್ಕೆ ಸಿಹಿಗುಂಬಳದ ಮೇಲೆ ಕೂತು 61 ಕಿಮೀ ಹುಟ್ಟುಹಾಕಿ ದಾಖಲೆ ಬರೆದ!

ಆ ವ್ಯಕ್ತಿಗೆ 61ನೇ ವರ್ಷದ ಹುಟ್ಟುಹಬ್ಬ. ಆತನಿಗೆ ವಿಚಿತ್ರ ದಾಖಲೆಯ ಹುಮ್ಮಸ್ಸು ಹುಟ್ಟಿತು. ಸಿಹಿಗುಂಬಳ ಕೊರೆದು ಅದರೊಳಗೆ ಕೂತು 61 ಕಿಲೋಮೀಟರ್‌ ಹುಟ್ಟು ಹಾಕಿಯೇ ಬಿಟ್ಟ!

VISTARANEWS.COM


on

pumpkin boat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನಸ್ಸಿದ್ದರೆ ಮಾರ್ಗ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ಆಗಾಗ ಈ ಗಾದೆಗೆ ನೂರಾರು ಉದಾಹರಣೆಗಳು ಸಿಕ್ಕಿ ಕಳೆಗುಂದಿದ ಜೀವನಕ್ಕೆ ಹೊಸ ಮಿಂಚಿನ ಸಂಚಾರವನ್ನು ಮಾಡಿಸುತ್ತವೆ. ಇಲ್ಲಿ ೬೦ರ ಇಳಿವಯಸ್ಸಿನಲ್ಲೊಬ್ಬ ದಾಖಲೆ ಬರೆಯಲು ೬೧ ಕಿಮೀ ದೂರವನ್ನು ಸಿಹಿಗುಂಬಳವನ್ನೇ ದೋಣಿ ಮಾಡಿ ಅದರ ಮೇಲೆ ಕೂತು ನದಿಯಲ್ಲಿ ಸಾಗಿದ್ದಾನೆ!

ಯುಎಸ್‌ನ ನೆಬ್ರಾಸ್ಕಾದ ಡ್ಯೂನ್‌ ಹಾನ್ಸೇನ್‌ ಎಂಬಾತ ತನ್ನ ೬೦ನೇ ಜನ್ಮದಿನದ ಪ್ರಯುಕ್ತ ದೈತ್ಯಗಾತ್ರದ ಸಿಹಿಗುಂಬಳಕ್ಕೆ ತಾನು ಕೂರಬಹುದಾದಷ್ಟು ದೊಡ್ಡದೊಂದು ತೂತು ಕೊರೆದು ಅದನ್ನೇ ಸೀಟಾಗಿಸಿ ಕೂತು ತನ್ನೂರಿನ ಮಝೂರಿ ನದಿಯಲ್ಲಿ ಹುಟ್ಟು ಹಾಕುತ್ತಾ ೬೧ ಕಿಮೀ ಪ್ರಯಾಣ ಮಾಡಿದ್ದಾನೆ. ಇದು ಸಿಟಿ ಆಫ್‌ ಬೆಲ್ಲೇವ್‌ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಸಾರವೂ ಕಂಡಿದ್ದು, ಜನರು ಈತನ ಉತ್ಸಾಹಕ್ಕೆ ಹಾಗೂ ಜೀವನ ಪ್ರೀತಿಗೆ ಫಿದಾ ಆಗಿದ್ದಾರೆ.

ಈ ಸಿಹಿಗುಂಬಳಕಾಯಿ ಎಷ್ಟು ದೊಡ್ಡದಿತ್ತೆಂದರೆ, ೩೮೪ ಕೆಜಿ ಇದರ ತೂಕವಂತೆ! ಇಂಥದ್ದೊಂದು ಬೃಹತ್‌ ಸಿಹಿಗುಂಬಳವನ್ನು ತನ್ನ ಪ್ರಯಾಣಕ್ಕೆ ಯೋಗ್ಯವಾಗುವಂತೆ ಕೊರೆದು ದೋಣಿಯಂತೆ ಅದರಲ್ಲೇ ಕೂತು ನದಿಯಲ್ಲಿ ಸಾಗುವುದೆಂದರೆ ತಮಾಷೆಯ ಮಾತಾ ಹೇಳಿ!

ಡ್ಯೂನ್‌ ಹಾನ್ಸೇನ್‌ಗೆ ಸಿಹಿಗುಂಬಳವನ್ನು ಬೆಳೆಯುವುದೇ ಒಂದು ಹವ್ಯಾಸವಂತೆ. ಈತ ತನ್ನ ತೋಟದಲ್ಲಿ ಬೃಹತ್‌ ಗಾತ್ರದ ಸಿಹಿಗುಂಬಳಗಳನ್ನು ಬೆಳೆದು ಖುಷಿ ಪಡುತ್ತಾನಂತೆ. ಇತ್ತೀಚೆಗೆ ೩೦ ಕಿಮೀ ಇಂತಹ ಸಿಹಿಗುಂಬಳದ ಮೇಲೆ ನದಿಯಲ್ಲಿ ಸಾಗಿ ಗಿನ್ನಿಸ್‌ ದಾಖಲೆ ಬರೆದಾತನೊಬ್ಬನ ಬಗ್ಗೆ ಕೇಳಿ ತಿಳಿದುಕೊಂಡಾಗ ತಾನೂ ಯಾಕೆ ಈ ಪ್ರಯತ್ನ ಮಾಡಬಾರದು ಎಂದು ಆತನಿಗೆ ಅನಿಸಿತಂತೆ. ಅಷ್ಟರವರೆಗೆ ಇಂಥದ್ದೊಂದು ಯೋಚನೆಯನ್ನೂ ಮಾಡಿರದ, ಈ ಬಗ್ಗೆ ಪ್ರಯತ್ನವನ್ನೂ ಮಾಡದ ಡ್ಯೂನ್‌ ಹಾನ್ಸೇನ್‌ ಸೀದಾ ತನ್ನ ೬೦ನೇ ಹುಟ್ಟುಹಬ್ಬದ ದಿನದಂದೇ ಸಾಂಕೇತಿಕವಾಗಿ ೬೧ ಕಿಮೀ ಹುಟ್ಟು ಹಾಕಿಯೇ ತೀರುತ್ತೇನೆ ಎಂಬ ಯೋಚನೆ ಬಂದಿದ್ದೇ ತಡ ಈ ಪ್ರಯತ್ನಕ್ಕೆ ಮುಂದಾಗಿದ್ದಾನೆ.

ಇದನ್ನೂ ಓದಿ | ಎಂಟು ತಿಂಗಳ ಊಟಕ್ಕೆ 426 ಬಗೆಯ ತಿನಿಸು ಮಾಡಿ ಶೇಖರಿಸಿಟ್ಟ ಸೂಪರ್‌ ಅಮ್ಮ!

ಹೀಗೆ ಬೆಳಗ್ಗೆ ಸುಮಾರು ೭.೩೦ರ ಹೊತ್ತಿಗೆ ತನ್ನದೇ ತೋಟದಲ್ಲಿ ಬೆಳೆದ ಬೃಹತ್‌ ಗಾತ್ರದ ಸಿಹಿಗುಂಬಳ ಹಿಡಿದು ಮಝೂರಿ ನದಿಯ ತೀರಕ್ಕೆ ಬಂದ ಆತ ತನ್ನ ೩೮೪ ಕೆಜಿ ತೂಕದ ಸಿಹಿಗುಂಬಳದ ಮೇಲೆ ಕೂತು ಪ್ರಯಾಣ ಆರಂಭಿಸಿದ್ದಾನೆ. ಈತನ ಈ ಕ್ರೇಜಿ ಐಡಿಯಾಕ್ಕೆ ಈತನ ಹೆಂಡತಿ ಹಾಗೂ ಬಂಧುಮಿತ್ರರೂ ಸಾಥ್‌ ನೀಡಿದ್ದು, ಅವರೂ ಈತನ ಸಿಹಿಗುಂಬಳದ ದೋಣಿಯ ಹಿಂದೆಯೇ ಬಂದು ವಿಡಿಯೋ ಮಾಡುವುದಕ್ಕೂ ಹಾಗೂ, ಯಾವುದೇ ದುರ್ಘಟನೆ ನಡೆಯದಿರುವಂತೆ ನೋಡಿಕೊಳ್ಳಲು ಸಹಾಯ ಮಾಡಿದ್ದಾರೆ. ಸಂಜೆ ಸುಮಾರು ೬.೩೦ಕ್ಕೆ ಈತನ ಪಯಣ ಅಂತ್ಯಗೊಂಡಿದೆ. ಸುಮಾರು ೩೮ ಮೈಲಿ ಅಂದರೆ ೬೧ ಕಿಮೀ ಕ್ರಮಿಸಿರುವ ಇವರು ನೆಬ್ರಾಸ್ಕಾ ನಗರಕ್ಕೆ ಬಂದು ಸೇರುವ ಮೂಲಕ ತನ್ನ ಇಡೀ ದಿನದ ಪಯಣಕ್ಕೆ ಮಂಗಳ ಹಾಡಿದ್ದಾರೆ.

ಹಾನ್ಸೇನ್‌ ಇದೀಗ ಈವರೆಗೆ ಇದ್ದ ವಿಶ್ವದಾಖಲೆ ಮುರಿದು ತಾನು ದಾಖಲೆ ಬರೆದಿದ್ದಾರೆ. ಸಿಹಿಗುಂಬಳದ ಮೇಲೆ ಅತೀ ಹೆಚ್ಚು ದೂರ ಕ್ರಮಿಸಿದ ವ್ಯಕ್ತಿ ಎಂಬ ಹೆಸರಿನಡಿ ಈ ಹಿಂದೆ ರಿಕ್‌ ಸ್ವೆನ್ಸನ್‌ ಅವರ ಹೆಸರಿತ್ತು. ಅವರು ೪೧.೦೩೮ ಕಿಮೀ ದೂರವನ್ನು ೨೦೧೮ರಲ್ಲಿ ಉತ್ತರ ಡಕೋಟಾದಲ್ಲಿ ಸಿಹಿಗುಂಬಳದ ದೋಣಿಯಲ್ಲಿ ಕ್ರಮಿಸಿದ್ದರು. ಇದೀಗ ಆ ಹೆಸರಿನ ದಾಖಲೆ ಹಾನ್ಸೇನ್‌ ಮುಡಿಗೇರಿದೆ. ಹಲವರು ಈ ಇಳಿ ವಯಸ್ಸಿನಲ್ಲಿ ಈತನ ಸಾಧನೆ ಕಂಡು, ʻಕೇಳಲು ಮಜವಾಗಿದೆ. ಆದರೆ, ಆತ ಮಾಡಿದ್ದು ನೋಡಿ ಖುಷಿಯಾಯಿತು. ಇದು ಏನನ್ನೂ ಯಾವ ವಯಸ್ಸಿನಲ್ಲೂ ಮಾಡಬಹುದು ಎಂಬುದಕ್ಕೆ ಸಾಕ್ಷಿ ಹಾಗೆಯೇ ಸ್ಪೂರ್ತಿ ಕೂಡಾʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | viral news | ದಿನಕ್ಕೆ 10 ಬಾರಿ ಮೂರ್ಛೆ ಹೋಗುವ ಈ ಲೇಡಿಗೆ ಗುರುತ್ವಾಕರ್ಷಣೆಯೇ ಅಲರ್ಜಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Shreyanka Patil: ನಟ ಸಮರ್ಜಿತ್ ಲಂಕೇಶ್ ಜತೆ ಮಸ್ತ್​ ಸ್ಟೆಪ್ಸ್ ಹಾಕಿದ ಆರ್​ಸಿಬಿ ಆಟಗಾರ್ತಿ ಶ್ರೇಯಾಂಕಾ; ವಿಡಿಯೊ ವೈರಲ್​

Shreyanka Patil: ಆರ್​ಸಿಬಿ(RCB) ತಂಡದ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಅವರು ಗೌರಿ(Gowri) ಸಿನಿಮಾದ ಸಾಂಗ್​ ರಿಲೀಸ್​ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್(Samarjit Lankesh) ಜತೆ ಮಸ್ತ್​ ಸ್ಟೆಪ್ಸ್​ ಹಾಕಿದ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Shreyanka Patil
Koo

ಬೆಂಗಳೂರು: ಟೀಮ್​ ಇಂಡಿಯಾದ ಹಾಗೂ ಆರ್​ಸಿಬಿ(RCB) ತಂಡದ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಅವರು ಗೌರಿ(Gowri) ಸಿನಿಮಾದ ಸಾಂಗ್​ ರಿಲೀಸ್​ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್(Samarjit Lankesh) ಜತೆ ಮಸ್ತ್​ ಸ್ಟೆಪ್ಸ್(shreyanka patil dance)​ ಹಾಕಿದ ವಿಡಿಯೊವೊಂದು ವೈರಲ್​ ಆಗಿದೆ.

ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದ ಸಿನಿಮಾದ ಸಾಂಗ್​ ರಿಲೀಸ್​ ಕಾರ್ಯಕ್ರಮದಲ್ಲಿ ಶ್ರೇಯಾಂಕಾ ಪಾಟೀಲ್ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಅವರು ಸಮರ್ಜಿತ್ ಲಂಕೇಶ್ ಜತೆ ʻಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಶ್ರೇಯಾಂಕಾ ಪಾಟೀಲ್ ಹುಕ್ ಸ್ಟೆಪ್ ಹಾಕಿ ಮಿಂಚಿದರು. ಶ್ರೇಯಾಂಕಾ ಮತ್ತು ಸಮರ್ಜಿತ್ ಡ್ಯಾನ್ಸ್‌ಗೆ ವಿದ್ಯಾರ್ಥಿಗಳು ಕೂಡಾ ಫಿದಾ ಆಗಿದ್ದರು.

ಈ ನೃತ್ಯದ ವಿಡಿಯೊವನ್ನು ಸಮರ್ಜಿತ್ ಲಂಕೇಶ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಧನ್ಯವಾದ ಕೂಡ ತಿಳಿಸಿದ್ದಾರೆ. “ನಮ್ಮ ಚಿತ್ರದ ಟೀಸರ್ ಬಿಡುಗಡೆಗೆ ತುಂಬಾ ಶಕ್ತಿ ತಂದಿದ್ದಕ್ಕಾಗಿ. ಮೈದಾನದಲ್ಲಿ ಮತ್ತು ಹೊರಗೆ ಅದ್ಭುತವಾದ ಪ್ರದರ್ಶನ ತೋರಿದ್ದಕ್ಕೆ ಈ ನರ್ತಕಿಯನ್ನು ಮರೆಯಬಾರದು… ನಮ್ಮ RCB ರಾಣಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಚಿತ್ರ ಇದಾಗಿದೆ. ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು ಈ ಹಿಂದೆ ಉತ್ತರ ನೀಡಿದ್ದರು.


ʻʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆʼʼಎಂದಿದ್ದರು. ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಿದ್ದಾರೆ. ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದು, ಬಿ ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಕೆ ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

21 ವರ್ಷದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

Continue Reading

ಕ್ರೈಂ

Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ 50 ವರ್ಷದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕನನ್ನು (Teenage Boy Arrested) ಬಂಧಿಸಲಾಗಿದೆ.

VISTARANEWS.COM


on

By

Teenage boy arrested
Koo

ಉತ್ತರಪ್ರದೇಶ: ಅತ್ಯಾಚಾರಿಯನ್ನು (rapist) ಕೊಂದ ಹದಿಹರೆಯದ ಬಾಲಕನನ್ನು (Teenage Boy Arrested) ಉತ್ತರಪ್ರದೇಶದ (Uttar Pradesh) ಮುಜಾಫರ್‌ನಗರದಲ್ಲಿ (Muzaffarnagar) ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 302 (Murder) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ 50 ವರ್ಷದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಮೇ 20ರಂದು ಬಾಲಕನ ಮನೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಪೊಲೀಸ್ ತನಿಖೆಯ ಅನಂತರ ಹದಿಹರೆಯದವರನ್ನು ಶನಿವಾರ ಬಂಧಿಸಲಾಯಿತು.

ವ್ಯಕ್ತಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ಅನಂತರ ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಎಸ್ಪಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಅವರು, ವಾರಗಳ ಹಿಂದೆ ಮೃತರು ಅಪ್ರಾಪ್ತ ವಯಸ್ಕನನ್ನು ಅಶ್ಲೀಲ ವಿಡಿಯೋ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದರು. ಬಾಲಕನಿಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಮತ್ತು ಪದೇ ಪದೇ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು.

ಸೋಮವಾರ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ ಅನಂತರ, ವ್ಯಕ್ತಿ ತನ್ನ ಮನೆಗೆ ಬರುವಂತೆ ಬಾಲಕನಿಗೆ ಒತ್ತಾಯಿಸಿದ್ದನು. ಆತ ಕಿರುಕುಳ ನೀಡುತ್ತಿದ್ದುದರಿಂದ ಹುಡುಗ ತನ್ನ ಪಕ್ಕದಲ್ಲಿದ್ದ ಹರಿತವಾದ ವಸ್ತುವನ್ನು ಎತ್ತಿಕೊಂಡು ಹೋಗಿ ವ್ಯಕ್ತಿಯ ತಲೆ ಮತ್ತು ಗಂಟಲಿನ ಮೇಲೆ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಆತನ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರೀತಿಗೆ ವಿರೋಧ; ಯುವಕ ಆತ್ಮಹತ್ಯೆ

ಪ್ರೀತಿಸಿದ ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಮನನೊಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಲಸೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಅಜಯ್ ಮನೋಹರ ಸೂರ್ಯವಂಶಿ (22) ಮೃತ ವ್ಯಕ್ತಿ. ಕೆಲವು ವರ್ಷಗಳಿಂದ ಈತ ಯುವತಿಯೊಬ್ಬಳನ್ನು ಪ್ರೀತಿಸುತಿದ್ದ, ಆದರೆ ತನ್ನ ತಂಗಿಯನ್ನು ಮರೆತು ಬಿಡುವಂತೆ ಆಕೆಯ ಅಣ್ಣ ಯುವಕನಿಗೆ ಧಮ್ಕಿ ಹಾಕಿದ್ದ. ಹೀಗಾಗಿ ಆತನ ಭಯಕ್ಕೆ ಹೆದರಿ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೊಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ಹಿಟ್‌ ಆ್ಯಂಡ್‌ ರನ್‌: ಪಾದಚಾರಿ ಸಾವು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅರೇಪುರ ಗೇಟ್ ಬಳಿ ಹಿಟ್‌ ಆ್ಯಂಡ್‌ ರನ್‌ಗೆ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಹಿಂಬದಿಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಮಧ್ಯೆ ಹಾರಿ ಬಿದ್ದ ವ್ಯಕ್ತಿ ಮೇಲೆ ಮತ್ತೊಂದು ವಾಹನ ಹರಿದಿದೆ ಎನ್ನಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳೀಯ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕ್ರೀಡೆ

Hardik Pandya: ಬ್ರೇಕ್ ಅಪ್ ಕುರಿತು ರಹಸ್ಯ ಪೋಸ್ಟ್​ ಮಾಡಿದ ಹಾರ್ದಿಕ್ ಪಾಂಡ್ಯ ಪತ್ನಿ

Hardik Pandya: ನತಾಶಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಾಂಡ್ಯ ಹೆಸರನ್ನು ಮತ್ತು ಅವರ ಜತೆಗಿರುವ ಫೋಟೊವನ್ನು ಅಳಿಸಿಹಾಕಿದ ಬಳಿಕ ವಿಚ್ಛೇದನಕ್ಕೆ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಈ ವದಂತಿಗಳ ಬಗ್ಗೆ ಪಾಂಡ್ಯ ಅಥವಾ ನಾತಾಶಾ ಪ್ರತಿಕ್ರಿಯಿಸದಿದ್ದರೂ ಕೂಡ, ಶನಿವಾರ ರಾತ್ರಿ ನತಾಶಾ ಕುರಿಮರಿಯೊಂದಿಗೆ ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Hardik Pandya
Koo

ಲಂಡನ್​: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರ ವಿವಾಹ ಮುರಿದು ಬಿದ್ದಿದೆಯೇ?, ಈ ಜೋಡಿ ವಿಚ್ಛೇದನಕ್ಕೆ ಪಡೆಯಲಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ನತಾಶಾ ರಹಸ್ಯ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ ನೋಡುವಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿದೆ.

ನತಾಶಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಾಂಡ್ಯ ಹೆಸರನ್ನು ಮತ್ತು ಅವರ ಜತೆಗಿರುವ ಫೋಟೊವನ್ನು ಅಳಿಸಿಹಾಕಿದ ಬಳಿಕ ವಿಚ್ಛೇದನಕ್ಕೆ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಈ ವದಂತಿಗಳ ಬಗ್ಗೆ ಪಾಂಡ್ಯ ಅಥವಾ ನಾತಾಶಾ ಪ್ರತಿಕ್ರಿಯಿಸದಿದ್ದರೂ ಕೂಡ, ಶನಿವಾರ ರಾತ್ರಿ ನತಾಶಾ ಕುರಿಮರಿಯೊಂದಿಗೆ ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿದೆ. ಈ ಫೋಟೊವನ್ನು ಅವರು ತಮ್ಮ ಮುಂದಿನ ಜೀವನದ ಅರ್ಥ ಕಲ್ಪಿಸುವ ನಿಟ್ಟಿನಲ್ಲಿಯೇ ಹಾಕಿದಂತಿದೆ.


ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್​ಫ್ರೆಂಡ್​ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಸಾರ್ವಜನಿಕಗಾಗಿ ಹೋಗುತ್ತಿರುವ ವಿಡಿಯೊ ವೈರಲ್ ಆಗಿದ್ದು ಪಾಪರಾಜಿಗಳು (ಕ್ಯಾಮೆರಾಮನ್​ಗಳು) ಅವರಿಬ್ಬರ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ನಟಿ ದಿಶಾ ಪಠಾಣಿ ಅವರ ವದಂತಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ಲಿಕ್​ ಮತ್ತು ನತಾಶಾ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳಿಂದ ಸಾಕಷ್ಟು ವಿನಂತಿಗಳನ್ನು ಪಡೆದ ನಂತರ ನತಾಶಾ ಪೋಸ್ ನೀಡಿದ್ದಾರೆ. ಹೀಗಾಗಿ ಪಾಂಡ್ಯಾ ಜತೆಗಿನ ಡೈವೋರ್ಸ್​ ಪ್ರಕರಣವನ್ನು ಇನ್ನಷ್ಟು ಆಸಕ್ತಿದಾಯಕವಾಗಿದೆ. ಐಪಿಎಲ್ 2024 ರಲ್ಲಿ ಹಾರ್ದಿಕ್ ತಮ್ಮ ಉನ್ನತ ನಿರೀಕ್ಷೆಗಳಿಗೆ ತಕ್ಕ ಹಾಗೆ ಆಡಿಲ್ಲ. ಪತಿ ಸೋಲುತ್ತಿದ್ದರೂ ಒಂದೇ ಒಂದು ಬಾರಿಯೂ, ನತಾಶಾ ತಮ್ಮ ಪತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ಟ್ಯಾಂಡ್​ಗಳಿಗೆ ಬಂದಿರಲಿಲ್ಲ.

ಇದನ್ನೂ ಓದಿ Hardik Pandya: ಪತ್ನಿಗೆ ಶೇ.70ರಷ್ಟು ಆಸ್ತಿ ವರ್ಗಾಯಿಸಲು ಮುಂದಾದ ಹಾರ್ದಿಕ್​ ಪಾಂಡ್ಯ; ಶೀಘ್ರದಲ್ಲೇ ವಿಚ್ಛೇದನ!

ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್​ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರನ್ನು ಪಾಂಡ್ಯ ಗರ್ಭಿಣಿ ಮಾಡಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

Continue Reading

ದೇಶ

ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ಚೇಸ್‌ ಮಾಡಿ ಹಾಲಿವುಡ್ ಸಿನಿಮಾ ಸ್ಟೈಲಲ್ಲಿ ಕಳ್ಳತನ; ರೋಚಕ Video ಇಲ್ಲಿದೆ!

ಮಧ್ಯಪ್ರದೇಶದ ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ ಟ್ರಕ್‌ ಒಂದು ಚಲಿಸುತ್ತಿರುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸುತ್ತದೆ. ಇದೇ ವೇಳೆ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ಭೋಪಾಲ್‌: ಚಲಿಸುತ್ತಿರುವ ವಾಹನದಿಂದಲೇ ಕಳ್ಳತನ ಮಾಡುವುದು, ಸಿಸಿಟಿವಿ, ಸೆಕ್ಯುರಿಟಿ ಇದ್ದರೂ ಬ್ಯಾಂಕ್‌ ದರೋಡೆ ಮಾಡುವುದು ಸೇರಿ ಹಲವು ಭೀಕರ ಕಳ್ಳತನಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಹಾಲಿವುಡ್‌ ಸಿನಿಮಾ ರೀತಿಯಲ್ಲಿಯೇ ಮೂವರು ಕಳ್ಳರು ಚಲಿಸುತ್ತಿದ್ದ ಟ್ರಕ್‌ನಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಚಲಿಸುತ್ತಿದ್ದ ಟ್ರಕ್‌ಅನ್ನು ಬೈಕ್‌ ಮೇಲೆಯೇ ಚೇಸ್‌ ಮಾಡಿದ ಕಳ್ಳರು ಭಾರಿ ಪ್ರಮಾಣದ ವಸ್ತುಗಳನ್ನು ಕದ್ದಿದ್ದಾರೆ. ಸಿನಿಮೀಯ ರೀತಿಯ ಕಳ್ಳತನದ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ. ‌

ಹೌದು, ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ ಟ್ರಕ್‌ ಒಂದು ಚಲಿಸುತ್ತಿರುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸುತ್ತದೆ. ಇದೇ ವೇಳೆ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಸ್ವಲ್ಪ ಸಮತೋಲನ ತಪ್ಪಿದರೂ ಬಿದ್ದು ಮೃತಪಡುವ ಸಾಧ್ಯತೆಗಳು ಜಾಸ್ತಿ ಇದ್ದರೂ ಸಿನಿಮೀಯ ರೀತಿಯಲ್ಲಿ ಮೂವರು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ನೂರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. “ಯಾವ ಸಿನಿಮಾದ ದೃಶ್ಯ ಇದು” ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಅವರ ಬ್ಯಾಲೆನ್ಸ್‌, ಧೈರ್ಯ, ಚಾಣಾಕ್ಷತನವನ್ನು ಖಂಡಿತವಾಗಿಯೂ ಮೆಚ್ಚಬೇಕು. ಇವರ ಕೌಶಲಗಳು ಎಲ್ಲರಿಗೂ ಬರುವುದಿಲ್ಲ” ಎಂದು ಮತ್ತೊಬ್ಬರು ಕಳ್ಳರ ಸಾಹಸವನ್ನು ಕೊಂಡಾಡಿದ್ದಾರೆ. “ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಇಂತಹ ಕಳ್ಳರು ಅಪಾಯಕಾರಿ. ಮೂವರನ್ನೂ ಒದ್ದು ಒಳಗೆ ಹಾಕಬೇಕು” ಎಂಬುದಾಗಿ ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ, ಕಳ್ಳರ ಸಾಹಸವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ಟ್ರಕ್‌ನಿಂದ ಯಾವೆಲ್ಲ ವಸ್ತುಗಳನ್ನು ಎಗರಿಸಿದರು ಎಂಬುದರ ಕುರಿತು ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಹೆದ್ದಾರಿಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ತುಂಬಿಕೊಂಡು ಸಾವಿರಾರು ಟ್ರಕ್‌ಗಳು ಚಲಿಸುತ್ತಲೇ ಇರುತ್ತವೆ. ಹೀಗೆ, ಸಿನಿಮಾ ರೀತಿಯಲ್ಲಿ ಸ್ಟಂಟ್‌ ಮಾಡಿ, ಆ ವಸ್ತುಗಳನ್ನು ಕಳ್ಳತನ ಮಾಡಿದರೆ, ಯಾರೂ ಟ್ರಕ್‌ಗಳ ಮೂಲಕ ವಸ್ತುಗಳನ್ನು ಸಾಗಿಸಲು ಧೈರ್ಯ ಮಾಡುವುದಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗ ಪರಿಗಣಿಸಿ, ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಇದನ್ನೂ ಓದಿ: Viral Video: ಚಲಿಸುವ ಬೈಕ್​ನಲ್ಲಿ ಆಲಿಂಗನ, ಬಿಸಿ ಚುಂಬನ; ಲಜ್ಜೆಯಿಲ್ಲದ ಜೋಡಿಯ ಸ್ಟಂಟ್​ ವಿಡಿಯೊ ವೈರಲ್​

Continue Reading
Advertisement
Road Accident
ಕರ್ನಾಟಕ5 mins ago

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Porsche Car Crash
ದೇಶ5 mins ago

Porsche Crash: ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಬಾಲಕನಿಗೆ ಪೋರ್ಶೆ ಕಾರು ಸಿಕ್ಕಿದ್ದು ʼಬರ್ತ್‌ಡೇ ಗಿಫ್ಟ್‌ʼ!

Electric Scooters
ಪ್ರಮುಖ ಸುದ್ದಿ5 mins ago

Electric Scooters : ದೊಡ್ಡ ಬೂಟ್​ ಸ್ಪೇಸ್ ಇರುವಂಥ 5 ಎಲೆಕ್ಟ್ರಿಕ್​ ಸ್ಕೂಟರ್​ಗಳು ಇವು

Shreyanka Patil
ಕ್ರೀಡೆ12 mins ago

Shreyanka Patil: ನಟ ಸಮರ್ಜಿತ್ ಲಂಕೇಶ್ ಜತೆ ಮಸ್ತ್​ ಸ್ಟೆಪ್ಸ್ ಹಾಕಿದ ಆರ್​ಸಿಬಿ ಆಟಗಾರ್ತಿ ಶ್ರೇಯಾಂಕಾ; ವಿಡಿಯೊ ವೈರಲ್​

Kendall Jenner American model flaunted
ಬಾಲಿವುಡ್36 mins ago

Kendall Jenner: ತಿಂಗಳಲ್ಲಿ ಎರಡು ಬಾರಿ ಟಾಪ್‌ಲೆಸ್‌ ಆದ ಹಾಲಿವುಡ್‌ ಬ್ಯೂಟಿ ಕೆಂಡಲ್‌ ಜೆನ್ನರ್‌!

How To Get Rid Of Cockroaches
ಲೈಫ್‌ಸ್ಟೈಲ್39 mins ago

How To Get Rid Of Cockroaches: ಜಿರಳೆಗಳು ಮನೆಯೊಳಗೆ ಬರದಂತೆ ಮಾಡುವ ಈ ಉಪಾಯಗಳು ನಿಮಗೆ ತಿಳಿದಿದೆಯೆ?

Lockup Death
ಕರ್ನಾಟಕ42 mins ago

Lockup Death: ಚನ್ನಗಿರಿ ಆದಿಲ್ ಸಾವು ಪ್ರಕರಣ ಸಿಐಡಿಗೆ ವರ್ಗಾವಣೆ

theft Case in Raichur
ರಾಯಚೂರು42 mins ago

Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Swati Maliwal
ದೇಶ48 mins ago

Swati Maliwal case: “ರೇಪ್‌, ಕೊಲೆ ಮಾಡೋದಾಗಿ ಬೆದರಿಕೆ ಬರ್ತಿದೆ”- ಸ್ವಾತಿ ಮಲಿವಾಲ್‌ ಮತ್ತೊಂದು ಆರೋಪ

India Head Coach
ಕ್ರಿಕೆಟ್58 mins ago

India Head Coach: ಕೋಚ್​ ಹುದ್ದೆಗೆ ನಾನು ರೆಡಿ; ಆದರೆ ಒಂದು ಷರತ್ತು ಎಂದ ಗಂಭೀರ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 week ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 week ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌