ವೈರಲ್ ನ್ಯೂಸ್
Viral News: ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ತಂದೆ; ತಮ್ಮ ಜೀಪ್‌ನಲ್ಲೇ ವಿದ್ಯಾರ್ಥಿನಿಯನ್ನು ಕೇಂದ್ರಕ್ಕೆ ಕರೆದೊಯ್ದ ಪೊಲೀಸ್
ತಂದೆಯ ತಪ್ಪಿನಿಂದಾಗಿ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದ ವಿದ್ಯಾರ್ಥಿನಿಯನ್ನು ಪೊಲೀಸ್ ಸಿಬ್ಬಂದಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.
ಗಾಂಧಿನಗರ: ಪರೀಕ್ಷೆ ಎಂದರೆ ವಿದಾರ್ಥಿಗಳಲ್ಲಿ ಒಂದು ರೀತಿಯ ಭಯವಿರುತ್ತದೆ. ಅದರಲ್ಲೂ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಹೋಗುವುದು, ಅಲ್ಲಿ ತಮ್ಮ ಸೀಟನ್ನು ಹುಡುಕಿ ಕುಳಿತುಕೊಳ್ಳುವುದು ವಿದ್ಯಾರ್ಥಿಗಳ ದೊಡ್ಡ ಜವಾಬ್ದಾರಿಯಾಗಿಬಿಟ್ಟಿರುತ್ತದೆ. ಆದರೆ ಗುಜರಾತ್‌ನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ತಂದೆ ಮಾಡಿದ ತಪ್ಪಿನಿಂದಾಗಿ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ತೆರಳಿ (Viral News) ಒದ್ದಾಡುವಂತಾಗಿತ್ತು. ಆದರೆ, ಪೊಲೀಸರು ಆಕೆಯ ನೆರವಿಗೆ ಧಾವಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Viral Video: ಗಾಯಕ ಸ್ನೇಹದೀಪ್ರ ಕೇಸರಿಯಾ ಹಾಡಿಗೆ ಪ್ರಧಾನಿ ಮೋದಿ ಫಿದಾ; ವೈವಿಧ್ಯತೆಯಲ್ಲಿ ಏಕತೆಯ ಪ್ರತಿಬಿಂಬ ಎಂದು ಟ್ವೀಟ್
ಗುಜರಾತ್‌ನ ಭುಜ್ ಪ್ರದೇಶದಲ್ಲಿ ವಿದ್ಯಾರ್ಥಿನಿ ಇತ್ತೀಚೆಗೆ ಪಬ್ಲಿಕ್ ಪರೀಕ್ಷೆ ಬರೆಯುವುದಕ್ಕೆ ಸಿದ್ಧಳಾಗಿದ್ದಳು. ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೊರಟ ತಂದೆ ಗಡಿಬಿಡಿಯಲ್ಲಿ ತಪ್ಪಾದ ಪರೀಕ್ಷಾ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ. ವಿದ್ಯಾರ್ಥಿನಿ ಅಲ್ಲಿ ತನ್ನ ರೋಲ್ ನಂಬರ್‌ಗಾಗಿ ಹುಡುಕಿದಾಗ ಅದು ಸಿಕ್ಕಿಲ್ಲ. ಇದರಿಂದಾಗಿ ಆಕೆ ಗಾಬರಿಗೊಂಡಿದ್ದಾಳೆ.
ಆಕೆಯನ್ನು ಗಮನಿಸಿದ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಏನಾಯಿತು ಎಂದು ವಿಚಾರಿಸಿದ್ದಾರೆ. ಹಾಲ್ ಟಿಕೆಟ್‌ನಲ್ಲಿ ನೋಡಿದಾಗ ಆಕೆಯ ಪರೀಕ್ಷಾ ಕೇಂದ್ರ 20ಕಿ.ಮೀ. ದೂರದಲ್ಲಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸ್ ಸಿಬ್ಬಂದಿ ಆಕೆಯನ್ನು ತನ್ನ ಜೀಪ್‌ನಲ್ಲಿ ಕೂರಿಸಿಕೊಂಡು ಸರಿಯಾದ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಹೋಗಬೇಕೆಂದು ಜೀಪಿಗೆ ಸೈರನ್ ಹಾಕಿಕೊಂಡೇ ಹೋಗಿದ್ದರು ಎಂದು ವರದಿಯಾಗಿದೆ.
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ವೈರಲ್ ಆಗಿದೆ. ಈ ರೀತಿ ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಜೆ.ವಿ.ಧೋಲು ಎಂದು ಗುರುತಿಸಲಾಗಿದೆ. ಅವರು ವಿದ್ಯಾರ್ಥಿನಿಯನ್ನು ಕರೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ ಫೋಟೋ ಎಲ್ಲೆಡೆ ಹರಿದಾಡಿದೆ.
ಕರ್ನಾಟಕ
Viral Video: ಅರ್ಧ ರಾತ್ರೀಲಿ ಮಧ್ಯ ರಸ್ತೇಲಿ ಮೊಬೈಲ್ ಹಿಡಿದು ನಿಂತಿದ್ದ ಇನ್ಫ್ಲುಯೆನ್ಸರ್; ಮುಂದಾಗಿದ್ದೇನು?
Viral Video: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು (social media influencers) ಎಲ್ಲೆಂದರಲ್ಲಿ ಮೊಬೈಲ್ ಹಿಡಿದು ವಿಡಿಯೊ ಮಾಡುವ ಮುನ್ನ ಹುಷಾರಾಗಿ ಇರಬೇಕು ಎಂದು ಸಾರುತ್ತಿದೆ ಈ ಘಟನೆ.
ಬೆಂಗಳೂರು: ನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿದೆ. ಸ್ಕೂಟರ್‌ನಲ್ಲಿ ಬಂದ ಕಳ್ಳರಿಬ್ಬರು ಮೊಬೈಲ್ ಕಸಿದು ಪರಾರಿ ಆಗಲು ಯತ್ನಿಸಿದ್ದಾರೆ. ರೆಸ್ಟೋರೆಂಟ್ ಬಳಿ ನಿಂತು ವಿಡಿಯೊ ಮಾಡುತ್ತಿದ್ದ ಇನ್ಫ್ಲುಯೆನ್ಸರ್‌ವೊಬ್ಬರ ಮೊಬೈಲ್ ಎಗರಿಸಲು ಬಂದ ಕಳ್ಳರ ಕೃತ್ಯದ ವಿಡಿಯೊ ಬೆಂಗಳೂರು 360 ಎಂಬ ಟ್ವಿಟರ್ ಪೇಜ್‌ನಲ್ಲಿ ವೈರಲ್ (viral video) ಆಗಿದೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ರುಚಿಕಾ ಎಂಬುವರು ರೆಸ್ಟೋರೆಂಟ್‌ವೊಂದರ ಕಂಟೆಂಟ್ ಕ್ರಿಯೆಟ್ ಮಾಡಲು ಮುಂದಾಗಿದ್ದರು. ಮೊದಲಿಗೆ ಇಬ್ಬರು ಹುಡುಗಿಯರು Ever tried Gufha Restaurant? ಎನ್ನುತ್ತಾ ಮತ್ತಿಬ್ಬರು ಹುಡುಗಿಯರತ್ತ ಕ್ಯಾಮೆರಾ ತಿರುಗಿಸಿದರು. ಅಷ್ಟರಲ್ಲಿ ಸ್ಕೂಟರ್‌ನಲ್ಲಿ ಬಂದ ಇಬ್ಬರು ಖದೀಮರು ಮೊಬೈಲ್ ಎಗರಿಸಲು ಮುಂದಾದರು.
ವಿಡಿಯೊ ಸಮೇತ ತಮ್ಮ ಅನುಭವ ಹಂಚಿಕೊಂಡಿರುವ ರುಚಿಕಾ, ನಾವು ಕಂಟೆಂಟ್ ಕ್ರಿಯೇಟರ್‌ಗಳಾಗಿರುವುದರಿಂದ ರೆಸ್ಟೋರೆಂಟ್‌ವೊಂದರ ಕಂಟೆಂಟ್ ಶೂಟಿಂಗ್ ಮಾಡುತ್ತಿದ್ದೆವು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಹುಡುಗರು ನಮ್ಮ ಕೈನಲ್ಲಿದ್ದ ನನ್ನ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಅದೃಷ್ಟವಶಾತ್ ನಾನು ಆ ಸಮಯದಲ್ಲಿ ನನ್ನ ಫೋನ್ ಅನ್ನು ಕೆಳಗೆ ಮಾಡಿದ್ದರಿಂದ ಕಳ್ಳತನ ಆಗುವುದು ತಪ್ಪಿತು ಎಂದಿದ್ದಾರೆ.
ಮೊಬೈಲ್ ಕಸಿಯಲು ಬಂದ ಕಳ್ಳರು
ರಾತ್ರಿ 11.15ರ ಸುಮಾರಿಗೆ ಜಯನಗರದಲ್ಲಿರುವ ರೆಸ್ಟೋರೆಂಟ್ ಹೊರಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಈ ಘಟನೆ ನಡೆಯುವ ಮುನ್ನ ಈ ಯುವತಿಯರು ಕನಿಷ್ಠ 20 ನಿಮಿಷಗಳ ಕಾಲ ಅಲ್ಲೆ ವಿಡಿಯೊ ರೆಕಾರ್ಡ್ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಇದೆನ್ನಲ್ಲ ದೂರದಿಂದಲೇ ಗಮನಿಸಿ ಕಳ್ಳರು ಫೋನ್ ಎಗರಿಸುವ ಕೃತ್ಯಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಘಟನೆಯ ವಿವರ ಹಾಗೂ ದೂರುದಾರರ ಫೋನ್ ನಂಬರ್ ನೀಡುವಂತೆ ತಿಳಿಸಿದ್ದಾರೆ.
ತಮಗೂ ಹೀಗೆಲ್ಲ ಆಗಿದೆ ಎಂದು ಕಮೆಂಟ್
ಯುವತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದೇ ರೀತಿಯ ಅನುಭವ ತಮಗೂ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು ತಾನು ರಾತ್ರಿ 8.30ರ ಸುಮಾರಿಗೆ ಕೋರಮಂಗಲ 1ನೇ ಬ್ಲಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆಟೊದಲ್ಲಿ ಹಿಂಬಾಲಿಸಿ ಕೆಲವರು ಫೋನ್ ಕಸಿದುಕೊಳ್ಳಲು ಪ್ರಯತ್ನಸಿದರು. ಆದರೆ ಫೋನ್ ಗಟ್ಟಿಯಾಗಿ ಹಿಡಿದಿದ್ದರಿಂದ ಅದು ಸಾಧ್ಯವಾಗಲಿಲ್ಲ. ನಿತ್ಯವೂ ಈ ದಾರಿಯಲ್ಲೆ ಮನೆಗೆ ಹೋಗಿ ಬರಬೇಕಾಗಿರುವುದರಿಂದ ಭೀತಿಯಲ್ಲೆ ಓಡಾಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರು ಸೇರಿ ಇಲ್ಲೆಲ್ಲ ವರ್ಷಧಾರೆ
ಬೆಂಗಳೂರು ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣಗಳು ವರದಿ ಆಗುತ್ತಿದ್ದು, ಪೊಲೀಸರ ಕಾರ್ಯವೈಖರಿ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಸರಗಳ್ಳತನದಿಂದ ಹಿಡಿದು ಮೊಬೈಲ್ ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ ಚಪ್ಪಲಿ, ಶೂ ಕಳ್ಳತನ ಮಾತ್ರವಲ್ಲದೆ ಮನೆಯ ಮುಂದೆ ಇಟ್ಟಿರುವ ಹೂ ಕುಂಡಗಳನ್ನೂ ಕಳ್ಳತನ ಮಾಡುವ ಖರ್ತಾನಕ್ ಕಳ್ಳರ ಹಾವಳಿ ಹೆಚ್ಚಿದೆ.
ಕ್ರೈಂ
Viral News : ಅಪ್ಪ ಓದಿಕೋ ಎಂದಿದ್ದೇ ತಪ್ಪಾಯ್ತು; ನೇಣು ಬಿಗಿದುಕೊಂಡು ಮೃತಳಾದ 9 ವರ್ಷದ ಇನ್‌ಸ್ಟಾ ಕ್ವೀನ್!
ಅಪ್ಪ ಓದಿಕೊಳ್ಳುವುದಕ್ಕೆ ಹೇಳಿದರು ಎನ್ನುವ ಕಾರಣಕ್ಕೇ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.
ಚೆನ್ನೈ: ಮಕ್ಕಳೆಂದ ಮೇಲೆ ಆಟ, ಪಾಠ ಇರಲೇಬೇಕು. ಓದದೆ ಆಟವನ್ನೇ ಆಡುತ್ತಿದ್ದರೆ ತಂದೆ ತಾಯಿ ಬೈಯುವುದು, ಹೊಡೆಯುವುದು ಸಾಮಾನ್ಯವೇ. ಆದರೆ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ತನ್ನ ತಂದೆ ಓದಿಕೊಳ್ಳುವುದಕ್ಕೆ ಹೇಳಿದರು ಎನ್ನುವ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿದ್ದ ಆ ಬಾಲಕಿಯ ಸಾವು ಇದೀಗ ಎಲ್ಲೆಡೆ ವೈರಲ್ (Viral News) ಸುದ್ದಿಯಾಗಿದೆ. ಈ ಬಾಲಕಿ ಇನ್‌ಸ್ಟಾ ಕ್ವೀನ್ ಎಂದೇ ಖ್ಯಾತಳಾಗಿದ್ದಳು.
ಇದನ್ನೂ ಓದಿ: Viral Video: ಐಸ್ ಕ್ರೀಂ ತಯಾರಿಸೋಕೆ ಫ್ರಿಜ್ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ
ತಮಿಳುನಾಡಿನ ತಿರವಲ್ಲೂರು ನಿವಾಸಿ ಶಿವಮೂರ್ತಿ ಅವರ ಮಗಳು ಪ್ರತೀಕ್ಷಾ ಈಗಿನ್ನೂ 9ನೇ ವರ್ಷದಲ್ಲಿದ್ದಳು. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್, ಪೋಸ್ಟ್‌ಗಳನ್ನು ಹಾಕುತ್ತಿದ್ದ ಪ್ರತೀಕ್ಷಾ ಊರಲೆಲ್ಲ ತುಂಬ ಪ್ರಸಿದ್ಧಳಾಗಿದ್ದಳಂತೆ. ಊರವರೆಲ್ಲರೂ ಆಕೆಗೆ ಇನ್‌ಸ್ಟಾ ಕ್ವೀನ್ ಎಂದೇ ಕರೆಯುತ್ತಿದ್ದರಂತೆ. ಸೋಮವಾರದಂದು ಆಕೆ ಶಿವಮೂರ್ತಿ ಅವರ ಮಾವನ ಮನೆ ಬಳಿ ಆಟವಾಡುತ್ತಿದ್ದಳು. ಅದನ್ನು ಕಂಡ ಶಿವಮೂರ್ತಿ ಆಟವಾಡಿದ್ದು ಸಾಕು, ಮನೆಗೆ ಹೋಗಿ ಓದಿಕೋ ಎಂದು ಹೇಳಿದ್ದಾರೆ. ಹಾಗೆಯೇ ಮನೆಯ ಕೀಯನ್ನು ಆಕೆಯ ಕೈಗೆ ಕೊಟ್ಟಿದ್ದಾರೆ.
ಮಗಳಿಗೆ ಕೀ ಕೊಟ್ಟ ಶಿವಮೂರ್ತಿ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲೆಂದು ತೆರಳಿದ್ದಾರೆ. ರಾತ್ರಿ 8.15ರ ವೇಳೆಗೆ ಮನೆಗೆ ವಾಪಸು ಬಂದಿದ್ದಾರೆ. ಆಗ ಮನೆ ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕರೆದರೂ ಮಗಳು ಬಂದು ಬಾಗಿಲು ತೆರೆದಿಲ್ಲ. ಗಾಬರಿಗೊಂಡ ಶಿವಮೂರ್ತಿ ಮನೆಯ ಕಿಟಕಿಯೊಂದನ್ನು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಪ್ರತೀಕ್ಷಾ ಟವಲ್ ಒಂದರಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಆಕೆಯ ಜೀವ ಹೋಗದೆ ಒದ್ದಾಡುತ್ತಿದ್ದ ಹಿನ್ನೆಲೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ವೈರಲ್ ನ್ಯೂಸ್
Viral Video: ಐಸ್ ಕ್ರೀಂ ತಯಾರಿಸೋಕೆ ಫ್ರಿಜ್ ಬೇಡ್ವೇ ಬೇಡ; ಸೀಲಿಂಗ್ ಫ್ಯಾನ್ ಇದ್ದರೂ ಸಾಕು ಎನ್ನುತ್ತಿದ್ದಾರೆ ಈ ಮಹಿಳೆ
ಮಹಿಳೆ ಮೊದಲು ಹಾಲನ್ನು ಕಾಯಿಸಿಕೊಂಡು, ಐಸ್ಕ್ರೀಂ ಮಾಡಲು ಹಾಕಬೇಕಾದ ಪದಾರ್ಥಗಳನ್ನೆಲ್ಲ ಅದಕ್ಕೆ ಹಾಕಿ, ಗ್ಯಾಸ್ ಸ್ಟವ್ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆ ಮಿಶ್ರಣವನ್ನು ಒಂದು ಚಿಕ್ಕ ಸ್ಟೀಲ್ ಕ್ಯಾನ್ಗೆ ಸುರಿಯುತ್ತಾರೆ. ಆಮೇಲೆ ಏನು ಮಾಡಿದರು ಎಂಬುದನ್ನು ಕೆಳಗಿನ ವಿಡಿಯೊದಲ್ಲೇ ನೋಡಿ !
ಮೊದಲು ಐಸ್ಕ್ರೀಂ ಎಂದರೆ ಅದು ಹೊರಗೆ ಅಂಗಡಿಗಳಲ್ಲಿ ಮಾತ್ರ ಸಿಗುತ್ತದೆ ಎಂಬ ಕಾಲವಿತ್ತು. ಆದರೆ ಈಗ ಫ್ರಿಜ್ ಇರುವ ಮನೆಗಳಲ್ಲೆಲ್ಲ ಸಾಮಾನ್ಯವಾಗಿ ಐಸ್ಕ್ರೀಂ ತಯಾರಿ ಮಾಡುತ್ತಾರೆ. ಅದೇನೇ ಇದ್ದರೂ, ಐಸ್ಕ್ರೀಂ ಮಾಡಲು ಫ್ರಿಜ್ ಅಂತೂ ಬೇಕೇಬೇಕು. ಆದರೆ ಫ್ರಿಜ್ ಇಲ್ಲದೆಯೂ ನಾನು ಐಸ್ಕ್ರೀಂ ತಯಾರಿ ಮಾಡುತ್ತೇನೆ ಎನ್ನುತ್ತಾರೆ ಈ ಮಹಿಳೆ. ಈಕೆಯ ಐಡಿಯಾ ನೋಡಿ ನೆಟ್ಟಿಗರು ಅಚ್ಚರಿಯಿಂದ ಹುಬ್ಬೇರಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ವಿಡಿಯೊ ಶೇರ್ (Viral Video) ಮಾಡಿಕೊಂಡಿದ್ದಾರೆ. ನೀವು ಒಮ್ಮೆ ನೋಡಿಬಿಡಿ.
ಮಹಿಳೆ ಮೊದಲು ಹಾಲನ್ನು ಕಾಯಿಸಿಕೊಂಡು, ಐಸ್ಕ್ರೀಂ ಮಾಡಲು ಹಾಕಬೇಕಾದ ಪದಾರ್ಥಗಳನ್ನೆಲ್ಲ ಅದಕ್ಕೆ ಹಾಕಿ, ಗ್ಯಾಸ್ ಸ್ಟವ್ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾರೆ. ಆ ಮಿಶ್ರಣವನ್ನು ಒಂದು ಚಿಕ್ಕ ಸ್ಟೀಲ್ ಕ್ಯಾನ್ಗೆ ಸುರಿಯುತ್ತಾರೆ. ಇಷ್ಟಾದ ಮೇಲೆ ಆಕೆ ಆ ಕ್ಯಾನ್ಗೆ ಮುಚ್ಚಲು ಹಾಕಿ, ಮತ್ತೊಂದು ದೊಡ್ಡದಾದ ಅಲ್ಯೂಮೀನಿಯಂ ಪಾತ್ರೆಯಲ್ಲಿ ಅದನ್ನು ಇಡುತ್ತಾರೆ ಮತ್ತು ಹಾಲಿನ ಮಿಶ್ರಣ ಇರುವ ಕ್ಯಾನ್ಗೆ ಇರುವ ಹಿಡಿಕೆಗೆ ಒಂದು ಹಗ್ಗ ಕಟ್ಟುತ್ತಾರೆ. ಇದಾದ ಮೇಲೆ ಆಕೆ ಅಲ್ಯೂಮಿನಿಯಂ ಪಾತ್ರೆಯಲ್ಲಿ, ಸ್ಟೀಲ್ ಕ್ಯಾನ್ ಸುತ್ತಲೂ ದೊಡ್ಡದೊಡ್ಡ ಐಸ್ ತುಂಡುಗಳನ್ನು ಹಾಕುತ್ತಾರೆ. ಅಷ್ಟಾದ ಮೇಲೆ ಫ್ಯಾನ್ ಸ್ವಿಚ್ ಆನ್ ಮಾಡುತ್ತಾರೆ. ಅರೆ, ಅವರೇಕೆ ಫ್ಯಾನ್ ಆನ್ ಮಾಡುತ್ತಾರೆ ಎಂದು ನಿಮಗೆ ಅನ್ನಿಸಬಹುದು. ಅಲ್ಲೇ ಇರುವುದು ಟ್ವಿಸ್ಟ್…!
ಸ್ಟೀಲ್ ಕ್ಯಾನ್ ಹಿಡಿಕೆಗೆ ಕಟ್ಟಿರುವ ಹಗ್ಗದ ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್ಗೆ ಕಟ್ಟಲಾಗಿರುತ್ತದೆ. ಫ್ಯಾನ್ ತಿರುಗುತ್ತಿದ್ದಂತೆ ಇತ್ತ ಅಲ್ಯೂಮೀನಿಯಂ ಪಾತ್ರೆಯಲ್ಲಿರುವ ಸ್ಟೀಲ್ ಕ್ಯಾನ್ ಗಿರಗಿರನೆ ತಿರುಗುತ್ತದೆ. ಐಸ್ ತುಂಡುಗಳ ಮಧ್ಯೆ ಅದು ತಿರುಗುತ್ತಿದ್ದಂತೆ, ಅದರೊಳಗೆ ಇರುವ ಹಾಲಿನ ಮಿಶ್ರಣ ಐಸ್ಕ್ರೀಂ ಆಗಿ ಬದಲಾಗುತ್ತದೆ. ಮಹಿಳೆ ಕೆಲ ಹೊತ್ತು ಕ್ಯಾನ್ಗೆ ಮುಚ್ಚಳವನ್ನು ಹಾಕಿ ತಿರುಗಿಸಿ, ಮತ್ತೆ ಕೆಲ ನಿಮಿಷಗಳ ಕಾಲ ಮುಚ್ಚಳವನ್ನು ತೆಗೆದು ತಿರುಗಲು ಬಿಡುತ್ತಾರೆ. ಬಳಿಕ ಅದನ್ನು ಅಲ್ಲಿಂದ ತೆಗೆದು, ಐಸ್ ಕ್ರೀಂ ಎಂದು ಸರ್ವ್ ಮಾಡುತ್ತಾರೆ.
ವಿಡಿಯೊ ಶೇರ್ ಮಾಡಿಕೊಂಡ ಆನಂದ್ ಮಹೀಂದ್ರಾ ಅವರು, ‘ಮನಸ್ಸಿದ್ದಲ್ಲಿ ಮಾರ್ಗ. ಇದು ಹ್ಯಾಂಡ್ ಮೇಡ್ ಮತ್ತು ಫ್ಯಾನ್ ಮೇಡ್ ಐಸ್ ಕ್ರೀಂ. ಇದೆಲ್ಲ ಸಾಧ್ಯವಾಗುವುದು ಭಾರತದಲ್ಲಿ ಮಾತ್ರ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಾರ್ಚ್ 29ರಂದು ಈ ವಿಡಿಯೊವನ್ನು ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದು, ಇಲ್ಲಿಯವರೆಗೆ 1.1 ಮಿಲಿಯನ್ಗಳಷ್ಟು ವೀವ್ಸ್ ಬಂದಿದೆ. ಸಾವಿರಾರು ಜನರು ಲೈಕ್ಸ್ ಕೊಟ್ಟಿದ್ದಾರೆ. ವಿಶ್ವದಲ್ಲೇ ಅತ್ಯುತ್ತಮವಾದ ಐಸ್ಕ್ರೀಂ ತಯಾರಿಸುವ ವಿಧಾನ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬರು, ಮಹಿಳೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ವೈರಲ್ ನ್ಯೂಸ್
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
ಇಂಥ ಹೊಸ ಮಾದರಿಯ, ವಿಭಿನ್ನ ಆಟೋದ ವಿಡಿಯೊ ಶೇರ್ ಆಗಿದ್ದು autorikshaw_kerala ಎಂಬ ಇನ್‌ಸ್ಟಾಗ್ರಾಂನಲ್ಲಿ. ಈಗಾಗಲೇ ಮಿಲಿಯನ್ಗಳಷ್ಟು ವೀವ್ಸ್ ಕಂಡಿದೆ. ಸಿಕ್ಕಾಪಟೆ ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕಸದಿಂದ ರಸ ತಯಾರಿಸುವಲ್ಲಿ ನಾವು ಭಾರತೀಯರು ನಿಸ್ಸೀಮರು. ಹಳೇ ಯಾವುದೋ ವಸ್ತುವನ್ನು ಮಾರ್ಪಡಿಸಿ, ಬೇರೆ ಯಾವುದೋ ಕೆಲಸಕ್ಕೆ ಬಳಸಿಕೊಳ್ಳುವುದೆಲ್ಲ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಂಥ ಹತ್ತು ಹಲವು ಉದಾಹರಣೆಗಳನ್ನು ನಾವು ನೋಡುತ್ತಿರುತ್ತೇವೆ. ನೀವು ನಿಮ್ಮ ಮನೆಯಲ್ಲಿ ಇಂಥ ಪ್ರಯೋಗಗಳನ್ನೆಲ್ಲ ಮಾಡಿರಬಹುದಲ್ಲ..!
ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ. ಈ ಆಟೋ ಚಾಲಕ ತನ್ನ ಆಟೋವನ್ನು ರೋಲ್ಸ್-ರಾಯ್ಸ್ ಕಾರಿನಂತೆ ಮಾಡಿದ್ದಾನೆ. ಇಡೀ ಆಟೋಕ್ಕೆ ಗುಲಾಬಿ ಬಣ್ಣದ ಪೇಂಟಿಂಗ್ ಮಾಡಿರುವ ಆತ ಐಷಾರಾಮಿ ಸೀಟುಗಳನ್ನು ಹಾಕಿದ್ದಾನೆ. ಅದೂ ಕೂಡ ಬಿಳಿ-ಗುಲಾಬಿ ಮಿಶ್ರಿತ ಸೀಟ್. ನೋಡಲು ಸಿಕ್ಕಾಪಟೆ ಚೆಂದವಾಗಿದೆ. ಅದೆಲ್ಲದರ ಜತೆ ಆಟೋದ ಬಗ್ಗೆ ವಿಶೇಷವಾಗಿ ಗಮನಸೆಳೆಯುವುದು ಅದರ ಮೇಲ್ಭಾಗ. ನೀವು ರೋಲ್ಸ್ ರಾಯ್ಸ್ ಕಾರನ್ನು ನೋಡಿದ್ದೀರಲ್ಲ. ಅದರಲ್ಲಿ ಮೇಲ್ಮುಚ್ಚು ಇಲ್ಲದಿರುವ ಕಾರುಗಳೂ ಇವೆ. ಇನ್ನು ಕೆಲವು ಆಧುನಿಕ ಕಾರುಗಳಿಗೆ ಒಂದು ಬಟನ್ ಒತ್ತಿದರೆ ಸಾಕು, ಕಾರಿನ ರೂಫ್ ತೆರೆದುಕೊಳ್ಳುವ ಆಯ್ಕೆ ಇರುತ್ತದೆ. ಈಗ ಈ ಚಾಲಕ ತನ್ನ ಆಟೋವನ್ನೂ ಹೀಗೆ ಮಾರ್ಪಾಡು ಮಾಡಿದ್ದಾನೆ. ಆಟೋದ ಸ್ಟೀರಿಂಗ್ ಬಳಿ ಇರುವ ಬಟನ್ ಒತ್ತಿದರೆ, ಆ ಆಟೋದ ಮೇಲ್ಭಾಗ ತೆರೆದುಕೊಳ್ಳುವುದನ್ನು ವಿಡಿಯೊದಲ್ಲಿ ನೋಡಬಹುದು.
ಇಂಥ ಹೊಸ ಮಾದರಿಯ, ವಿಭಿನ್ನ ಆಟೋದ ವಿಡಿಯೊ ಶೇರ್ ಆಗಿದ್ದು autorikshaw_kerala ಎಂಬ ಇನ್‌ಸ್ಟಾಗ್ರಾಂನಲ್ಲಿ. ಈಗಾಗಲೇ ಮಿಲಿಯನ್ಗಳಷ್ಟು ವೀವ್ಸ್ ಕಂಡಿದೆ. ಸಿಕ್ಕಾಪಟೆ ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಇದನ್ನು ರೋಲ್ಸ್ ರಾಯ್ಸ್ ಆಫ್ ಆಟೋ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಇದು ನಿಜಕ್ಕೂ ಜೋಕ್ ಎನ್ನುತ್ತಿದ್ದಾರೆ. ಹಾಗೇ, ಕಾರಿನ ಸೌಂದರ್ಯಕ್ಕೆ ಹಲವರು ಮಾರುಹೋಗಿದ್ದಾರೆ.
ಇದನ್ನೂ ಓದಿ: Viral Video : ಒಡೆದ ಮೊಟ್ಟೆಯಲ್ಲೇ ಮರಿ ಮಾಡಿಸಿದ ವ್ಯಕ್ತಿ! ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ ನೋಡಿ
ಹೀಗೆ ಮಾರ್ಪಾಡಿತ ಆಟೋ ರಿಕ್ಷಾಗಳ ವಿಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಉದ್ಯಮಿ ಹರ್ಷ ಗೋಯೆಂಕಾ ಅವರು, ಐಷಾರಾಮಿ ಕಾರಿನ ಮಾದರಿಯಲ್ಲೇ ರೂಪಿಸಲಾಗಿದ್ದ ಆಟೋ ರಿಕ್ಷಾವೊಂದರ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು. ಹಾಗೇ, ಕಳೆದ ವರ್ಷ ದೆಹಲಿಯಲ್ಲಿ ಒಬ್ಬ ಚಾಲಕ ತಮ್ಮ ಆಟೋದ ಮೇಲ್ಭಾಗದಲ್ಲಿ ಸಣ್ಣ ಉದ್ಯಾನವನವನ್ನೇ ಸೃಷ್ಟಿಸಿಕೊಂಡಿದ್ದು ಸುದ್ದಿಯಾಗಿತ್ತು. ಸೆಖೆಯಿಂದ ಪಾರಾಗಲು ಅವರು ಹೀಗೆ ಮಾಡಿದ್ದರು.
-
ಕರ್ನಾಟಕ16 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್17 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್14 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ15 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ15 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!