ವೈರಲ್ ನ್ಯೂಸ್
Viral Video : ಮೊಸಳೆಯನ್ನೇ ಅಪ್ಪಿಕೊಳ್ಳಲು ಹೋದ ಅಜ್ಜ, ಮುಂದೇನಾಯ್ತು ನೋಡಿ
Viral Video: ಮೊಸಳೆಯೊಂದರ ಜತೆ ಆಟವಾಡಲು ಅಜ್ಜನೊಬ್ಬ ಹೋಗುತ್ತಾನೆ. ಅಪಾಯಕಾರಿ ಪ್ರಾಣಿ ಜತೆ ಸರಸವಾಡಲು ಹೋದ ಅಜ್ಜನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಖತ್ ವೈರಲ್ ಆಗಿದೆ.
ಬೆಂಗಳೂರು: ಮೊಸಳೆ ನಿಜಕ್ಕೂ ಅಪಾಯಕಾರಿ ಪ್ರಾಣಿ. ಅದು ಕಚ್ಚಿದರೆ ಅದರ ಬಾಯಿಯಿಂದ ಬಿಡಿಸಿಕೊಳ್ಳುವುದು ತುಂಬಾನೇ ಕಷ್ಟ. ಹಾಗಾಗಿಯೇ ಮೊಸಳೆಯೊಂದಿಗೆ ಆಟವಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಲಾಗುತ್ತಿರುತ್ತದೆ. ಆದರೆ ಇಲ್ಲಿ ಅಜ್ಜನೊಬ್ಬ ಮೊಸಳೆಯೊಂದಿಗೇ ಸರಸ ಆಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಮೊಸಳೆಯನ್ನು ತಬ್ಬಿಕೊಳ್ಳಲು ಹೋದ ಅಜ್ಜನ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ಲೋಹದ ಬೇಲಿಯನ್ನೇ ಮುರಿದು, ನುಗ್ಗಿತು ಬೃಹತ್ ಮೊಸಳೆ; ಇಷ್ಟೊಂದು ಶಕ್ತಿಶಾಲಿಯಾ ಈ ಸರೀಸೃಪ?!
ಮೊಸಳೆಯೊಂದು ನೀರಿನಲ್ಲಿ ಸುಮ್ಮನೆ ಮಲಗಿರುತ್ತದೆ. ಅಲ್ಲಿಗೆ ಬರುವ ಅಜ್ಜ ಹಾಗೂ ಆತನ ಸ್ನೇಹಿತರು ಆ ಮೊಸಳೆಗೆ ಏನಾದರೂ ಮಾಡಬೇಕೆಂದು ನಿರ್ಧರಿಸುತ್ತಾರೆ. ಒಂದು ಬಿಳಿ ಬಟ್ಟೆ ತೆಗೆದುಕೊಂಡು ಅದನ್ನು ದೂರದಿಂದಲೇ ಮೊಸಳೆಯ ಮುಖದ ಮೇಲೆ ಹಾಕುತ್ತಾರೆ. ಮೊಸಳೆಯ ಕಣ್ಣುಗಳೂ ಕೂಡ ಬಟ್ಟೆಯಲ್ಲಿ ಮುಚ್ಚಿಕೊಳ್ಳುತ್ತದೆ. ಆಗ ನಿಧಾನವಾಗಿ ಮೊಸಳೆಯ ಹಿಂದೆ ಬರುವ ಅಜ್ಜ, ಅದನ್ನು ಹಿಂದಿನಿಂದ ತಬ್ಬಿಕೊಳ್ಳಲು ಯತ್ನಿಸುತ್ತಾನೆ. ತಕ್ಷಣಕ್ಕೆ ಎಚ್ಚೆತ್ತುಕೊಳ್ಳುವ ಮೊಸಳೆ ಹಿಂದೆ ತಿರುಗಿ ಅಜ್ಜನ ಕೈಯನ್ನು ಕಚ್ಚಿಬಿಡುತ್ತದೆ. ಅಲ್ಲೇ ಕೆಳಗೆ ಬೀಳುವ ಅಜ್ಜ ಕಾಲಿನಿಂದ ಜೋರಾಗಿ ಮೊಸಳೆಗೆ ಒದೆಯುತ್ತಾನೆ. ಆ ಹೊಡೆತದಿಂದಾಗಿ ಮೊಸಳೆ ಅಜ್ಜನ ಕೈಯನ್ನು ಬಿಟ್ಟು ಸುಮ್ಮನಾಗುತ್ತದೆ. ಆಗ ಅಜ್ಜ ಅಲ್ಲಿಂದ ಕಾಲ್ಕೀಳುತ್ತಾನೆ.
ಇಂಥದ್ದೊಂದು ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮಾರ್ಚ್ 15ರಂದು ಪೋಸ್ಟ್ ಮಾಡಲಾದ ಈ 36 ಸೆಕೆಂಡುಗಳ ವಿಡಿಯೊವನ್ನು ಈಗಾಗಲೇ 5 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಜ್ಜನ ದುಸ್ಸಾಹಸದ ಬಗ್ಗೆ ನೆಟ್ಟಿಗರು ಹಲವು ರೀತಿಯಲ್ಲಿ ಚರ್ಚೆ ನಡೆಸಲಾರಂಭಿಸಿದ್ದಾರೆ. “ಅಜ್ಜ ಮೊಸಳೆಗೆ ಜಾಕೆಟ್ ಹಾಕೋದಕ್ಕೆ ಹೋದರು, ಆದರೆ ಪಾಪ ಆ ಮೊಸಳೆಗೆ ಜಾಕೆಟ್ ಇಷ್ಟವಿರಲಿಲ್ಲ”, “ಮೊಸಳೆ ಮುಖದ ಮೇಲೆ ಬಟ್ಟೆ ಇದ್ದಿದ್ದಕ್ಕೆ ಅಜ್ಜ ಬಚಾವ್. ಇಲ್ಲದಿದ್ದರೆ ಅಜ್ಜನ ಕಥೆ ಕಷ್ಟವಿತ್ತು” ಎನ್ನುವ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.
ದೇಶ
Shama Sikander: ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ, ಬಿಕಿನಿ ಹಾಟ್ ಫೋಟೊ ಫುಲ್ ಹವಾ
Shama Sikander: ನಟಿ ಶಮಾ ಸಿಕಂದರ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಅದರಲ್ಲೂ ಇನ್‌ಸ್ಟಾದಲ್ಲಿ ಅವರು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ. ಬಿಕಿನಿಯಲ್ಲಿರುವ ಎರಡು ಫೋಟೋಗಳು ಈಗ ಸಖತ್ ವೈರಲ್ ಆಗಿವೆ.
ನವದೆಹಲಿ: ನಟಿ ಶಮಾ ಸಿಕಂದರ್ (Shama Sikander) ಇಂಟರ್ನೆಟ್ ಹಾಟ್ ಫೇವರಿಟ್. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಹೊಂದಿರುವ ಶಮಾ, ಅವರ ಒಂದೊಂದು ಫೋಟೋ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿವೆ. ಈಗ ಸದ್ಯ ತನ್ನ ಸ್ನೇಹಿತರೊಂದಿಗೆ ಬೇಸಿಗೆ ರಜೆಯನ್ನು ಬೀಚ್‌ನಲ್ಲಿ ಕಳೆಯುತ್ತಿದ್ದು, ಬಿಕಿನಿ ಉಡುಪಿನಲ್ಲಿರುವ ಫೋಟೋಗಳನ್ನು ಇನ್‌ಸ್ಟಾದಲ್ಲಿ ಅಪ್‌ಲೋಡ್ ಮಾಡಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿವೆ(Viral Photo).
ಸೋಷಿಯಲ್ ಮೀಡಿಯಾಗಳಲ್ಲಿ ಶಮಾ ಅವರು ಬಿಕಿನಿ ಲುಕ್ ಪ್ರದರ್ಶಿಸುವ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಮಾ ಅವರು ಕಿತ್ತಳೆ ಬಣ್ಣದ ಬಿಕಿನಿಯಲ್ಲಿ, ಬೀಚಿನ ಮರಳಿನಲ್ಲಿ ಪೋಸ್ ನೀಡುತ್ತಿರುವ ಫೋಟೋ ಅದ್ಭುತವಾಗಿದೆ.
ಇನ್‌ಸ್ಟಾದಲ್ಲಿ ಈ ಬಿಕಿನಿ ಫೋಟೋಗಳು ಅಪ್‌ಲೋಡ್ ಆಗುತ್ತಿದ್ದಂತೆ ಸಾವಿರಾರು ಜನರು ಲೈಕ್ಸ್ ಮಾಡಿದ್ದು, ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಹೃತ್ಪೂರ್ವಕ ಕಾಮೆಂಟ್‌ಗಳು ಮತ್ತು ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ಫುಲ್ ಮಾಡಿದ್ದಾರೆ. ಈ ಪೈಕಿ ಒಬ್ಬರು Beautyyyyy ಎಂದು ಬರೆದಿದ್ದಾರೆ. ನೀವು ತುಂಬಾ ಸುಂದರವಾಗಿ ಕಾಣುತ್ತೀರಿ ಎಂದು ಮತ್ತೊಬ್ಬ ಬಳೆಕದಾರರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ ಅದ್ಭುತ ಎಂದು ಕಮೆಂಟ್ ಮಾಡಿದ್ದಾನೆ. ಮತ್ತೊಬ್ಬರು, ಬೀಚ್‌ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತೀದ್ದಿರಿ ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ: Shama Sikander | ಶಮಾ ಸಿಕಂದರ್‌ಳ ಗ್ಲಾಮರ್ ಲೋಕ!
ನಟಿ ಶಮಾ ಸಿಕಂದರ್ ಈ ರೀತಿಯ ಹಾಟ್ ಫೋಟೋ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲ್ಲ. ಈ ಹಿಂದೆಯೂ ಅನೇಕ ಬಾರಿ, ಈ ರೀತಿಯ ಫೋಟೋಗಳನ್ನು ಹಾಕಿ ಇಂಟರ್ನೆಟ್‌ಗೆ ಕಿಚ್ಚು ಹತ್ತಿಸಿದ್ದಾರೆ. ಶಮಾ ಕೊನೆಯದಾಗಿ 2019ರ ಬೈಪಾಸ್ ರೋಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದು ನಾಮ ನಿತಿನ್ ಮುಖೇಶ್ ನಿರ್ದೇಶನದ ಥ್ರಿಲ್ಲರ್-ಡ್ರಾಮಾ ಚಿತ್ರವಾಗಿದೆ. ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್ ಮತ್ತು ಅದಾ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಕ್ ತಿಜೋರಿ ಅವರ ಟಿಪ್ಪಪ್ಸಿಯಲ್ಲಿ ರಾಯ್ ಲಕ್ಷ್ಮಿ, ಇಶಾ ಗುಪ್ತಾ, ಡೈಸಿ ಶಾ ಮತ್ತು ಕೈನಾತ್ ಅರೋರಾ ಅವರೊಂದಿಗೆ ಶಮಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೇಶ
Nowruz 2023: ಪರ್ಷಿಯನ್ ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸಂಭ್ರಮಿಸಿದ ಗೂಗಲ್
Nowruz 2023: ಮಾರ್ಚ್ 21ರಂದು ನೌರುಜ್ ದಿನವನ್ನಾಗಿ ಆಚರಿಸಲಾಗುತ್ತದೆ. ನೌರುಜ್ ಎಂದರೆ ಇರಾನಿಯನ್ ಅಥವಾ ಪರ್ಷಿಯನ್ ಹೊಸ ವರ್ಷ ಎಂದರ್ಥ. ವಿಶ್ವಾದ್ಯಂತ ಕೋಟ್ಯಂತರ ಜನರು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ(Persian New Year).
ನವದೆಹಲಿ: ಮಾರ್ಚ್ 21, ಮಂಗಳವಾರ ಇರಾನಿಯನ್ ಅಥವಾ ಪರ್ಷಿಯನ್ ಹೊಸ ವರ್ಷ(Persian New Year) ಎಂದು ಆಚರಿಸಲಾಗುತ್ತದೆ. ಇದನ್ನು ನೌರುಜ್(Nowruz 2023) ಎಂದೂ ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗೂಗಲ್(Google), ವಿಶಿಷ್ಟ ಡೂಡಲ್(Doodle) ಮೂಲಕ ಪರ್ಷಿಯನ್ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡಿದೆ. ನೌರುಜ್ ಪರಿಕಲ್ಪನೆಯನ್ನು ಪ್ರತಿನಿಧಿಸುವ ಡೂಡಲ್ ಟುಲಿಪ್ಸ್, ಹೈಸಿಂತ್ಸ್, ಡ್ಯಾಫಡಿಲ್‌ಗಳು ಮತ್ತು ಬೀ ಆರ್ಕಿಡ್‌ಗಳಂಥ ವಸಂತ ಋತು ಕಾಲದ ಹೂವುಗಳನ್ನು ಒಳಗೊಂಡಿದೆ(Viral News).
ಪರ್ಷಿಯನ್ ಹೊಸ ವರ್ಷವನ್ನು ದಿನಗಳು ದೀರ್ಘವಾಗಲು ಪ್ರಾರಂಭವಾಗುವ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ವಿದ್ಯಮಾನವನ್ನು ವಸಂತ ವಿಷುವತ್ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ, ಹಬ್ಬವು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್ 21ರ ಸುಮಾರಿಗೆ ಸಂಭವಿಸುತ್ತದೆ.
ಚಳಿಗಾಲವು ಅಳಿಯುತ್ತಿದ್ದಂತೆ, ಉತ್ತರ ಗೋಳಾರ್ಧವು ಕರಗಲು ಪ್ರಾರಂಭಿಸಿದಾಗ, ನೌರುಜ್ ಆಚರಿಸುವ ಸಮಯ ಸನ್ನಿಹಿತವಾಗುತ್ತದೆ. ಇಂದಿನ ಡೂಡಲ್ ವಸಂತಕಾಲದ ಆರಂಭವನ್ನು ಗುರುತಿಸುವ ಈ ಪುರಾತನ ರಜಾದಿನದ ಮಹತ್ವವನ್ನು ಸಾರುತ್ತದೆ. ಪುನರ್ಜನ್ಮದ ಋತುವನ್ನು ಆಚರಿಸಲು ಪ್ರತಿ ವರ್ಷ ಈ ದಿನದಂದು ಪ್ರಪಂಚದಾದ್ಯಂತ 300 ದಶಲಕ್ಷಕ್ಕೂ ಹೆಚ್ಚು ಜನರು ಸಂಭ್ರಮಿಸುತ್ತಾರೆಂದು ಗೂಗಲ್ ಬರೆದುಕೊಂಡಿದೆ. ಇದೇ ವೇಳೆ, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ರಜಾದಿನಗಳ ಪಟ್ಟಿಯಲ್ಲಿ ನೌರುಜ್ ಕೂಡ ಸೇರ್ಪಡೆಯಾಗಿದೆ ಎಂಬ ಮಾಹಿತಿಯನ್ನು ಗೂಗಲ್ ಒದಗಿಸಿದೆ.
ಇದನ್ನೂ ಓದಿ: Ugadi 2023 : ಜಗದ ಆದಿ ಈ ಯುಗಾದಿ!
ಭಾರತದ ಪಾರ್ಸಿ ಸಮುದಾಯದಲ್ಲಿಯೂ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸಂತೋಷದಾಯಕ ಮತ್ತು ಪವಿತ್ರ ಸಂದರ್ಭವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಸಾಮಾನ್ಯ ಸಂಪ್ರದಾಯಗಳ ರೀತಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಸ್ನೇಹಿತರು ಮತ್ತು ನೆರೆಹೊರೆಯವರನ್ನು ಭೇಟಿ ಮಾಡುತ್ತಾರೆ. ವಿಶೇಷ ಸಿಹಿತಿಂಡಿಗಳು, ಮೂಲಿಕೆ ಅಕ್ಕಿ ಮತ್ತು ಹುರಿದ ಮೀನುಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಿ, ಸೇವಿಸುತ್ತಾರೆ
ದೇಶ
Serial kisser: ಪೊಲೀಸ್ ಬಲೆಗೆ ಬಿದ್ದ ಸರಣಿ ಕಿಸ್ಸರ್ ಮೊಹಮ್ಮದ್ ಅಕ್ರಮ್; ಮಹಿಳೆಗೆ ಲಿಪ್ಲಾಕ್ ಮಾಡಿದವ ಈಗ ಜೈಲಲ್ಲಿ ಲಾಕ್!
ಮಾರ್ಚ್ 13ರಂದು ಮಹಿಳೆಗೆ ಈತ ಸಾರ್ವಜನಿಕ ಪ್ರದೇಶದಲ್ಲಿ ಮುತ್ತಿಟ್ಟಿದ್ದ ವಿಡಿಯೊ ವೈರಲ್ ಆಗಿತ್ತು. ಆ ಮಹಿಳೆ ಬಿಹಾರದ ಸಾದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದವರು, ಅಲ್ಲೇ ಆಸ್ಪತ್ರೆ ಆವರಣದಲ್ಲಿ ನಿಂತು ಫೋನ್ನಲ್ಲಿ ಮಾತನಾಡುತ್ತಿದ್ದರು. ಹಿಂಬದಿಯಿಂದ ಬಂದ ಈತ ಏಕಾಏಕಿ ಆಕೆಯನ್ನು ತಬ್ಬಿಕೊಂಡು ಬಲವಂತದಿಂದ ಅವರ ಬಾಯಿಗೆ ಮುತ್ತುಕೊಟ್ಟಿದ್ದ.
ಪಾಟ್ನಾ: ಇತ್ತೀಚೆಗೆ ಬಿಹಾರದ ಸಾದರ್ ಆಸ್ಪತ್ರೆ ಆವರಣದಲ್ಲಿ ಫೋನ್ನಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ, ಯುವಕನೊಬ್ಬ ಬಲವಂತದಿಂದ ಚುಂಬಿಸಿ, ಓಡಿಹೋಗಿದ್ದ ಘಟನೆ ನಡೆದಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅವನ ಹೆಸರು ಮೊಹಮ್ಮದ್ ಅಕ್ರಮ್ ಎಂದು ಗೊತ್ತಾಗಿದೆ. ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಕಳ್ಳತನ ಮಾಡುವ ಗ್ಯಾಂಗ್ನ ಮುಖ್ಯಸ್ಥ ಈತ ಎಂದು ಪೊಲೀಸರು ಹೇಳಿದ್ದಾರೆ. ಮೊಹಮ್ಮದ್ ಅಕ್ರಮ್ನೊಂದಿಗೆ, ಅವನ ಗ್ಯಾಂಗ್ನ ಇನ್ನೂ ನಾಲ್ವರನ್ನು ಬಂಧಿಸಿದ್ದಾರೆ.
ಅಕ್ರಮ್ ಮತ್ತು ಅವನ ಗ್ಯಾಂಗ್ ಹಲವು ತಿಂಗಳುಗಳಿಂದಲೂ ಬಿಹಾರದ ಜಮುಯಿ ಜಿಲ್ಲೆ ಮತ್ತು ಇತರ ಹಲವು ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಈಗಾಗಲೇ ಅನೇಕ ಮಹಿಳೆಯರಿಗೆ ಈತ ಹೀಗೆ ಮುತ್ತಿಟ್ಟಿದ್ದಾನೆ. ಅಷ್ಟೇ ಅಲ್ಲ, ಸರಗಳ್ಳತನವನ್ನೂ ಇವರು ಮಾಡುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಹೆಣ್ಮಕ್ಕಳು/ಮಹಿಳೆಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾರ್ಚ್ 13ರಂದು ಮಹಿಳೆಗೆ ಈತ ಸಾರ್ವಜನಿಕ ಪ್ರದೇಶದಲ್ಲಿ ಮುತ್ತಿಟ್ಟಿದ್ದ ವಿಡಿಯೊ ವೈರಲ್ ಆಗಿತ್ತು. ಆ ಮಹಿಳೆ ಬಿಹಾರದ ಸಾದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದವರು, ಅಲ್ಲೇ ಆಸ್ಪತ್ರೆ ಆವರಣದಲ್ಲಿ ನಿಂತು ಫೋನ್ನಲ್ಲಿ ಮಾತನಾಡುತ್ತಿದ್ದರು. ಹಿಂಬದಿಯಿಂದ ಬಂದ ಈತ ಏಕಾಏಕಿ ಆಕೆಯನ್ನು ತಬ್ಬಿಕೊಂಡು ಬಲವಂತದಿಂದ ಅವರ ಬಾಯಿಗೆ ಮುತ್ತುಕೊಟ್ಟಿದ್ದ. ಮಹಿಳೆ 2015ರಿಂದಲೂ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಈ ವ್ಯಕ್ತಿ ಯಾರೆಂದು ತನಗೆ ಗೊತ್ತಿಲ್ಲ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಕೆಲವು ಪ್ರಮುಖ ಮಾಧ್ಯಮಗಳಲ್ಲಿ ಕೂಡ ಸುದ್ದಿ ವರದಿಯಾಗಿತ್ತು. ಮೊಹಮ್ಮದ್ ಅಕ್ರಮ್ ಮಾರ್ಚ್ 10ಕ್ಕೂ ಪೂರ್ವ ಹಲವು ಮಹಿಳೆಯರಿಗೆ ಹೀಗೆ ಕಿಸ್ ಕೊಟ್ಟಿದ್ದಾನೆ ಎಂದೂ ಹೇಳಲಾಗಿತ್ತು. ಆರೋಗ್ಯ ಕಾರ್ಯಕರ್ತೆಯ ದೂರು ಮತ್ತು ಮಾಧ್ಯಮಗಳ ವರದಿ ಆಧರಿಸಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.
ಘಟನೆ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆರೋಗ್ಯ ಕಾರ್ಯಕರ್ತೆ, ’ಆತ ನನಗೆ ಅಪರಿಚಿತ. ಒಮ್ಮೆಲೇ ಹಿಂದಿನಿಂದ ಬಂದು ನನ್ನನ್ನು ಅಪ್ಪಿದ ಮತ್ತು ಬಾಯಿಗೆ ಮುತ್ತುಕೊಟ್ಟ. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ, ಆದರೆ ಆಗಲಿಲ್ಲ. ಮುತ್ತು ಕೊಟ್ಟು ಅವನು ಓಡಿಯೇ ಹೋದ. ಅವನ್ಯಾಕೆ ಬಂದ? ಯಾಕೆ ಚುಂಬಿಸಿದ? ನನಗೇನೂ ಗೊತ್ತಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ‘ನಾನು ಜೋರಾಗಿ ಕೂಗಿಕೊಂಡೆ. ಸಹಾಯಕ್ಕಾಗಿ ಆಸ್ಪತ್ರೆ ಸಿಬ್ಬಂದಿಯನ್ನು ಕರೆದೆ. ಆದರೆ ಕಾಂಪೌಂಡ್ ಸಣ್ಣ ಇರುವುದರಿಂದ ಅವನಿಗೆ ತಪ್ಪಿಸಿಕೊಳ್ಳಲು ಸುಲಭವಾಯಿತು’ ಎಂದೂ ತಿಳಿಸಿದ್ದಾರೆ.
ವೈರಲ್ ಆಗಿದ್ದ ವಿಡಿಯೊ:
ಆಟೋಮೊಬೈಲ್
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
ಮ್ಯೂಸಿಕ್ಗೆ ತಕ್ಕ ಹಾಗೆ ಕಾರಿನ ಎಲ್ಲ ಲೈಟ್ಗಳನ್ನು ಫ್ಲ್ಯಾಶ್ ಮಾಡುವ ಪ್ರೋಗ್ರಾಮ್ ಮೂಲಕ ಟೆಸ್ಲಾ ಕಾರುಗಳ ಲೈಟ್ ಶೋ ನೀಡಿದೆ.
ನ್ಯೂಜೆರ್ಸಿ: ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ಹಾಡು ನಾಟು ನಾಟು ಹಾಡು, 2023ನೇ ಅವೃತ್ತಿಯ ಆಸ್ಕರ್ನ (Oscar 2023) ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಆರ್ಆರ್ಆರ್ ಸಿನಿಮಾದ ಹಾಗೂ ನಾಟುನಾಟು ಹಾಡಿನ ಖ್ಯಾತಿ ಜಗದಗಲಕ್ಕೆ ಹರಡಿದೆ. ಆ ಹಾಡಿನ ಎನರ್ಜಿ ಹಾಗೂ ಟೆಂಪೊಗೆ ಮೆಚ್ಚಿದ ಮಂದಿ ಮ್ಯೂಸಿಕ್ ಕೇಳಿದ ತಕ್ಷಣ ಹೆಜ್ಜೆ ಹಾಕುತ್ತಿದ್ದಾರೆ. ಅಭಿಮಾನಿಗಳು ಹೆಜ್ಜೆ ಹಾಕೊದೇನೋ ಸರಿ. ಈ ಹಾಡು ಕೇಳಿದ ತಕ್ಷಣ ಕಾರುಗಳು ಡಾನ್ಸ್ ಮಾಡಲು ಶುರು ಮಾಡಿದರೆ ಹೇಗಿರಬಹುದು. ಕಣ್ಣಿಗೆ ಹಬ್ಬ ಗ್ಯಾರಂಟಿ. ಈ ರೀತಿಯಾಗಿ ನಾಟು ನಾಟು ಹಾಡಿಗೆ ಡಾನ್ಸ್ ಮಾಡಿದ್ದು ಸ್ವಯಂ ಚಾಲನೆ (ಸೆಲ್ಫ್ ಡ್ರೈವ್) ಮಾಡುವ ಸಾಮರ್ಥ್ಯ ಹೊಂದಿರುವ ಟೆಸ್ಲಾ ಕಾರು.
ಆರ್ಆರ್ಆರ್ ಮೂವಿ ತಂಡ ವಿಡಿಯೊವನ್ನು ಶೇರ್ ಮಾಡಿದೆ
ಹೌದು, ಅಮೆರಿಕದ ನ್ಯೂಜೆರ್ಸಿಯಲ್ಲಿ ಹಲವು ಕಾರುಗಳು ಒಟ್ಟಿಗೆ ನಾಡು ನಾಟು ಹಾಡಿಗೆ ಗೌರವ ಸಲ್ಲಿಸಿದೆ. ಆದರೆ, ಕಾರುಗಳು ಎದ್ದು ನಿಂತು ಡಾನ್ಸ್ ಮಾಡಿಲ್ಲ. ಬದಲಾಗಿ ಲೈಟುಗಳನ್ನು ಮಿಟುಕಿಸುವ ಮೂಲಕ ಹಾಡನ್ನು ಸಿಂಕ್ ಮಾಡಿದೆ. ಹಲವಾರು ಕಾರುಗಳು ಏಕಕಾಲಕ್ಕೆ ಹಾಡಿನ ಅಬ್ಬರಕ್ಕೆ ತಕ್ಕಂತೆ ಲೈಟ್ ಬೆಳಗಿಸುವುದು ಆಕರ್ಷಕವಾಗಿ ಕಂಡಿದೆ.
ಇದನ್ನೂ ಓದಿ : Naatu Naatu: ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿ ಡಾನ್ಸ್, ಮೋದಿ ಶ್ಲಾಘನೆ
ಆರ್ಆರ್ಆರ್ ಮೂವಿ ತಂಡ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿಗೆ ಆಭಾರಿ ಎಂದು ಹೇಳಿದೆ. ಅಂದ ಹಾಗೆ ವಿಡಿಯೊಕ್ಕೆ ಸಿಕ್ಕಾಪಟ್ಟೆ ಲೈಕ್ಸ್ಗಳು ಬಂದಿವೆ. ಕೆಲವರು ಇದಕ್ಕೆ ರೋಮಾಂಚನ ಎಂದು ಕಾಮೆಂಟ್ ಬರೆದಿದ್ದಾರೆ.
ಟೆಸ್ಲಾ ಟಾಯ್ಬಾಕ್ಸ್ ಫೀಚರ್ (Tesla Toybox)
ಟೆಸ್ಲಾ ಕಾರಿನಲ್ಲಿ ಟಾಯ್ ಬಾಕ್ಸ್ (Tesla Toybox) ಎಂಬ ಫೀಚರ್ ಇದೆ. ಇದರ ಮೂಲಕ ಲೈಟ್ ಶೋ ಮೂಲಕ ಚಾಲಕರಿಗೆ ವಿಭಿನ್ನ ಅನುಭವ ಪಡೆಯುವ ಅವಕಾಶ ನೀಡಲಾಗಿದೆ. ಈ ಫೀಚರ್ ಆಕ್ಟಿವೇಟ್ ಮಾಡಿದರೆ ಕಾರಿನ ಹೆಡ್ಲೈಟ್, ಟೈಲ್ ಲೈಟ್, ಇಂಡಿಕೇಟರ್ಗಳು ಹಾಗೂ ಇಂಟೀರಿಯರ್ ಲೈಟ್ಗಳು ಮ್ಯೂಸಿಕ್ಗೆ ತಕ್ಕ ಹಾಗೆ ಫ್ಲ್ಯಾಶ್ ಆಗುತ್ತವೆ. ಜತೆಗೆ ಬಣ್ಣವನ್ನೂ ಬದಲಿಸುತ್ತವೆ.
ಅದೇ ರೀತಿ ಟೆಸ್ಲಾದ ಸೌಂಡ್ ಸಿಸ್ಟಮ್ ಪ್ರೋಗ್ರಾಮ್ನ ಮೂಲಕವೂ ಸಂಪೂರ್ಣ ಆಡಿಯೊ ವಿಷುವಲ್ ಅನುಭವ ಪಡೆಯಲು ಸಾಧ್ಯವಿದೆ. ಮಾಡೆಲ್ ಎಕ್ಸ್, ಮಾಡೆಲ್ ಎಸ್ ಹಾಗೂ ಮಾಡೆಲ್ 3ಯಲ್ಲಿ ಈ ಫಿಚರ್ ಇದೆ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ7 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ