Viral News: ಮದುವೆ ಮೆರವಣಿಗೆ ಮನೆಗೆ ತಲುಪುವಷ್ಟರಲ್ಲಿ ವರನಿಗೆ ತಲುಪಿತು ವಧುವಿನ ನಗ್ನ ವಿಡಿಯೋ; ಮುಂದೇನಾಯ್ತು? - Vistara News

ವೈರಲ್ ನ್ಯೂಸ್

Viral News: ಮದುವೆ ಮೆರವಣಿಗೆ ಮನೆಗೆ ತಲುಪುವಷ್ಟರಲ್ಲಿ ವರನಿಗೆ ತಲುಪಿತು ವಧುವಿನ ನಗ್ನ ವಿಡಿಯೋ; ಮುಂದೇನಾಯ್ತು?

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆ ವಿಧಿವಿಧಾನಗಳು ಇನ್ನೇನು ಮುಕ್ತಾಯವಾಗುವ ಹಂತದಲ್ಲಿ ಇತ್ತು. ಆದರೆ ಈ ನಡುವೆ ವಧುವಿನ ಪ್ರೇಮಿ ವರನಿಗೆ ತಮ್ಮಿಬ್ಬರ ಸಂಬಂಧದ ವಿಚಾರವಾಗಿ ಹೇಳಿದ್ದಾನೆ. ಜೊತೆಗೆ ಸಾಕ್ಷಿಯಾಗಿ ತಾವಿಬ್ಬರೂ ನಿಕಟವಾಗಿರುವ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದಾನೆ. ಅನಂತರ ವರನು ಮದುವೆಯನ್ನು ನಿಲ್ಲಿಸಿದ್ದಾನೆ. ಆಕೆಯೊಂದಿಗೆ ಜೀವನ ನಡೆಸಲು ನಿರಾಕರಿಸಿದ್ದಾನೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮದುವೆಯ ವಿಧಿ ವಿಧಾನಗಳು ಮುಗಿಯುತ್ತಿದ್ದಂತೆ ವರನಿಗೆ ವಧುವಿನ ಪ್ರೇಮಿ ಕರೆ ಮಾಡಿ ಬೆದರಿಕೆ ಹಾಕಿರುವುದು ಮಾತ್ರವಲ್ಲ ತಮ್ಮಿಬ್ಬರ ಖಾಸಗಿ ಫೋಟೋಗಳನ್ನು ಕಳುಹಿಸಿದ್ದರಿಂದ ವಾರ ಮದುವೆಯನ್ನು ರದ್ದುಗೊಳಿಸಿರುವ (Wedding Cancel) ಘಟನೆ ಉತ್ತರಪ್ರದೇಶದ (uttarpradesh) ಅಮ್ರೋಹಾದಲ್ಲಿ (Amroha) ನಡೆದಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆ ವಿಧಿವಿಧಾನಗಳು ಇನ್ನೇನು ಮುಕ್ತಾಯವಾಗುವ ಹಂತದಲ್ಲಿ ಇತ್ತು. ಆದರೆ ಈ ನಡುವೆ ವಧುವಿನ ಪ್ರೇಮಿ ವರನಿಗೆ ತಮ್ಮಿಬ್ಬರ ಸಂಬಂಧದ ವಿಚಾರವಾಗಿ ಹೇಳಿದ್ದಾನೆ. ಜೊತೆಗೆ ಸಾಕ್ಷಿಯಾಗಿ ತಾವಿಬ್ಬರೂ ನಿಕಟವಾಗಿರುವ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದಾನೆ. ಅನಂತರ ವರನು ಮದುವೆಯನ್ನು ನಿಲ್ಲಿಸಿದನು.

ಏನಾಗಿತ್ತು?

ವರನ ಮೊಬೈಲ್ ಫೋನ್‌ಗೆ ವಧುವಿನ ಪ್ರೇಮಿ ಕರೆ ಮಾಡಿದ ಬಳಿಕ ಮದುವೆ ಕೊನೆ ಕ್ಷಣದಲ್ಲಿ ರದ್ದಾಗಿದೆ.
ಮದುವೆಯ ವಿಧಿ ವಿಧಾನಗಳು ಮುಗಿಯುತ್ತಿದ್ದಂತೆ ವಧುವಿನ ಪ್ರಿಯಕರ ವರನ ಮೊಬೈಲ್ ಫೋನ್‌ಗೆ ಕರೆ ಮಾಡಿದ್ದಾನೆ. ಅನಂತರ ವರನು ಮದುವೆಯನ್ನು ರದ್ದುಗೊಳಿಸಿದನು. ತಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದರಿಂದ ವಧುವನ್ನು ಬಿಟ್ಟು ಹೋಗುವಂತೆ ಪ್ರೇಮಿ ಮೊದಲಿಗೆ ಬೆದರಿಕೆ ಹಾಕಿದ್ದಾನೆ.

ಇದಕ್ಕೆ ವರ ಪುರಾವೆ ಕೇಳಿದ್ದಾನೆ. ಅನಂತರ ವ್ಯಕ್ತಿಯು ವಧುವಿನ ಅನೇಕ ವಿಡಿಯೋ ಮತ್ತು ಫೋಟೋಗಳನ್ನು ವರನ ಫೋನ್ ಗೆ ಕಳುಹಿಸಿದನು. ಫೋಟೋ ಮತ್ತು ವೀಡಿಯೊಗಳನ್ನು ನೋಡಿದ ವರನು ಮದುವೆಯ ವಿಧಿವಿಧಾನಗಳನ್ನು ಮುಂದುವರಿಸಲು ನಿರಾಕರಿಸಿದನು.

ಮದುವೆ ಮೆರವಣಿಗೆ ಹಿಂತಿರುಗುತ್ತಿದ್ದಂತೆ ಕಮಲ್ ಸಿಂಗ್ ಎಂದು ಗುರುತಿಸಲಾಗಿರುವ ಕರೆ ಮಾಡಿದ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಅಮ್ರೋಹಾದ ಆಡಂಪುರಕ್ಕೆ ಮದುವೆಗೆ ಹುಡುಗಿ ಮನೆಗೆ ವರನ ಕಡೆಯವರು ಮೆರವಣಿಗೆಯಲ್ಲಿ ಆಗಮಿಸಿದ್ದರು. ಮದುವೆಗೆ ಬಂದಿದ್ದ ಅತಿಥಿಗಳು ತಮ್ಮ ಊಟವನ್ನು ಮುಗಿಸಿದರು. ಸಪ್ತಪದಿ ಮತ್ತು ವಧುವನ್ನು ಕಳುಹಿಸಿಕೊಡುವ ಆಚರಣೆ ಮಾತ್ರ ಉಳಿದಿತ್ತು. ಅಷ್ಟರಲ್ಲಿ ವರನ ಮೊಬೈಲ್‌ಗೆ ಕರೆ ಬಂದಿದ್ದು, ಅತ್ತ ಕಡೆಯ ವ್ಯಕ್ತಿ ತಾನು ಕಮಲ್ ಸಿಂಗ್ ಎಂದು ಹೇಳಿದ್ದಾನೆ. ವರ ಮದುವೆಯಾಗಲಿರುವ ಹುಡುಗಿ ತನ್ನ ಗೆಳತಿಯಾಗಿದ್ದು, ಆಕೆಯನ್ನು ಮದುವೆಯಾಗುವುದು ಒಳ್ಳೆಯದಲ್ಲ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: Viral Video: ಬೆಂಗಳೂರಿನ ಹೋಟೆಲ್‌ನಲ್ಲಿ ಫ್ಯಾನ್‌ ಬದಲು ಪುರಾತನ ಕಾಲದ ಬೀಸಣಿಕೆ! ವಿಡಿಯೊ ನೋಡಿ

ವರನು ಪುರಾವೆ ಕೇಳಿದಾಗ, ಕಮಲ್ ಸಿಂಗ್ ತನ್ನೊಂದಿಗೆ ವಧು ಇರುವ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದಾನೆ. ಕೆಲವು ವಿಡಿಯೋಗಳಲ್ಲಿ ಹೊಟೇಲ್ ಕೊಠಡಿಗಳಲ್ಲಿ ಮತ್ತು ಇತರರಲ್ಲಿ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆತ್ಮೀಯ ಕ್ಷಣಗಳ ವಿಡಿಯೋ ನೋಡಿದ ವರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದು, ತನ್ನ ಸಂಬಂಧಿಕರೊಂದಿಗೆ ಅಲ್ಲಿಂದ ಮರಳಿದ್ದಾರೆ.

ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Ambani Video: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

Ambani Video: ಮುಂಬೈನ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಅಂಬಾನಿ ಕುಟುಂಬ ಹಾಜರಿತ್ತು. ಈ ಸಂದರ್ಭದಲ್ಲಿ ನೀತಾ ಅಂಬಾನಿ ಮೂರು ವರ್ಷದ ಮೊಮ್ಮಗ ಪೃಥ್ವಿಯನ್ನು ವೇದಿಕೆಗೆ ಕರೆಮದರು. ಆಗ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡುತ್ತಾ ವೇದಿಕೆ ಬಂದ ಪೃಥ್ವಿ ಕಾಲು ಜಾರಿ ಬಿದ್ದ. ಆದರೆ ಸಾವರಿಸಿಕೊಂಡು ಎದ್ದು “ಜೈ ಶ್ರೀ ಕೃಷ್ಣ” ಎನ್ನುತ್ತ ಅತಿಥಿಗಳ ಮನ ಗೆದ್ದಿದ್ದಾನೆ.

VISTARANEWS.COM


on

Ambani Video
Koo


ಮುಂಬೈ: ಮುಖೇಶ್‌ ಅಂಬಾನಿ ಅವರ ಪುತ್ರ (Ambani Video) ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ವಿವಾಹ ಸಮಾರಂಭದಾಚರಣೆಗಳು ಬಹಳ ಭರ್ಜರಿಯಿಂದ ನಡೆದಿವೆ. ಇದೀಗ ಮುಖೇಶ್ ಮತ್ತು ನೀತಾ ಅಂಬಾನಿ (Ambani Family )ಸೋಮವಾರ ಸಂಜೆ ಮತ್ತೊಂದು ಸುತ್ತಿನ ಆರತಕ್ಷತೆಯನ್ನು ಆಯೋಜಿಸಿದ್ದರು. ಈ ವೇಳೆ ಅವರ ಹಿರಿಯ ಮೊಮ್ಮಗ ಮೂರು ವರ್ಷದ ಪೃಥ್ವಿ ಅಂಬಾನಿ ತಮ್ಮ ಚಿಕ್ಕಪ್ಪ ಅನಂತ್ ಅಂಬಾನಿ ಅವರ ವಿವಾಹ ಆರತಕ್ಷತೆಯಲ್ಲಿ ತನ್ನ ಮುದ್ದು ಮುದ್ದಾದ ಮಾತಿನಲ್ಲಿ ಭಾಷಣ ಮಾಡಿ ಅತಿಥಿಗಳಿಗೆ ಮನೋರಂಜನೆ ನೀಡಿದೆ! ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಧು ರಾಧಿಕಾ ಮರ್ಚೆಂಟ್ ಅವರ ಕುಟುಂಬ ಸೇರಿದಂತೆ ಇಡೀ ಅಂಬಾನಿ ಕುಟುಂಬ ಹಾಜರಿತ್ತು. ನೀತಾ ಅಂಬಾನಿ ಮೂರು ವರ್ಷದ ಪೃಥ್ವಿಯನ್ನು ಪರಿಚಯಿಸಿ ವೇದಿಕೆಗೆ ಬರುವಂತೆ ಆಹ್ವಾನಿಸಿದರು. “ನಮ್ಮ ಅತ್ಯಂತ ಪ್ರೀತಿಯ ಪೃಥ್ವಿ ಕೂಡ ಇಲ್ಲಿದ್ದಾನೆ, ಪೃಥ್ವಿ, ಬಾ” ಎಂದರು. ಆಗ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡುತ್ತಾ ವೇದಿಕೆ ಬಂದ ಪೃಥ್ವಿ ಕಾಲು ಜಾರಿ ಉರುಳಿ ಬಿದ್ದ! ನಂತರ ಎದ್ದು ನೀತಾ ಅಂಬಾನಿಯಿಂದ ಮೈಕ್ರೊಫೋನ್ ತೆಗೆದುಕೊಂಡು, ಪ್ರೇಕ್ಷಕರನ್ನು ಆತ್ಮವಿಶ್ವಾಸದಿಂದ “ಹಲೋ” ಎಂದು ಸ್ವಾಗತಿಸಿದ. ನಂತರ “ಜೈ ಶ್ರೀ ಕೃಷ್ಣ” ಎಂದು ಹೇಳಿದ. ಪ್ರೇಕ್ಷಕರು ಪ್ರತಿಯಾಗಿ “ಜೈ ಶ್ರೀ ಕೃಷ್ಣ” ಎಂದು ಒಕ್ಕೊರಲಿನಿಂದ ಪ್ರತಿಕ್ರಿಯಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪೃಥ್ವಿ ಅಂಬಾನಿ ಶ್ಲೋಕಾ ಮೆಹ್ತಾ ಮತ್ತು ಆಕಾಶ್ ಅಂಬಾನಿಯವರ ಪುತ್ರ. ಇವನಿಗೆ ವೇದಾ ಎಂಬ ಸಹೋದರಿ ಕೂಡ ಇದ್ದಾಳೆ. ಪೃಥ್ವಿ 2020ರ ಡಿಸೆಂಬರ್‌ನಲ್ಲಿ ಜನಿಸಿದರೆ, ವೇದಾ ಈ ವರ್ಷದ ಮೇ ತಿಂಗಳಲ್ಲಿ ಒಂದು ವರ್ಷ ಪೂರೈಸಿದ್ದಾಳೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಆಚರಣೆಗಳ ನಡುವೆ ಯುರೋಪಿನ ಐಷಾರಾಮಿ ಕ್ರೂಸ್ ಹಡಗಿನಲ್ಲಿ ವೇದಾಳ ಮೊದಲ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು.

ಇದನ್ನೂ ಓದಿ: ಅಂಬಾನಿ ಮದುವೆ ಸಮಾರಂಭದೊಳಗೆ ನುಸುಳಿದ್ದ ಇಬ್ಬರು ʼನಕಲಿ ಅತಿಥಿʼಗಳ ಬಂಧನ!

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕಳೆದ ಶುಕ್ರವಾರ ಅದ್ಧೂರಿಯಾಗಿ ವಿವಾಹವಾದರು. ವಿವಿಧ ಕ್ಷೇತ್ರಗಳ ಉನ್ನತ ಜಾಗತಿಕ ಮತ್ತು ಭಾರತೀಯ ಪ್ರಸಿದ್ಧ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ನಡೆದ “ಶುಭ ಆಶೀರ್ವಾದ್” ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತರನ್ನು ಆಶೀರ್ವದಿಸಿದ್ದರು.

Continue Reading

ಪ್ರಮುಖ ಸುದ್ದಿ

Pooja Khedkar: ಐಎಎಸ್‌ಗಾಗಿ ನಕಲಿ ಜಾತಿ, ಕಡಿಮೆ ವಯಸ್ಸು, ದರ್ಪ; ಪೂಜಾ ಖೇಡ್ಕರ್‌ ಕಳ್ಳಾಟ ಒಂದೆರಡಲ್ಲ!

Pooja Khedkar: ಟ್ರೈನಿ ಐಎಎಸ್‌ ಅಧಿಕಾರಿಯಾಗಿದ್ದಾಗಲೇ ಖಾಸಗಿ ವಾಹನಕ್ಕೆ ಕೆಂಪು ಗೂಟ ಅಳವಡಿಸಿಕೊಂಡು, ಅಧಿಕಾರ ದುರುಪಯೋಗದ ಆರೋಪ ಹೊತ್ತಿರುವ ಪೂಜಾ ಖೇಡ್ಕರ್‌ ಅವರ ಕಳ್ಳಾಟಗಳು ಬಯಲಾಗುತ್ತಿವೆ. ಅವರ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್‌ ಡಾಕ್ಯುಮೆಂಟ್‌ ಮಾಡಿಸಿರುವುದು ಸೇರಿ ಅವರ ವಿರುದ್ಧ ಹತ್ತಾರು ಆರೋಪಗಳು ಕೇಳಿಬರುತ್ತಿವೆ.

VISTARANEWS.COM


on

Pooja Khedkar
Koo

ಮುಂಬೈ: ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್‌ (Pooja Khedkar) ಅವರ ಒಂದೊಂದೇ ಕಳ್ಳಾಟಗಳು ಬಯಲಾಗುತ್ತಿವೆ. ತಮ್ಮ ಖಾಸಗಿ ಕಾರಿಗೆ ‘ಕೆಂಪು ಗೂಟ’ ಅಳವಡಿಸಿದ್ದು ಸೇರಿ ಹಲವು ರೀತಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಪೂಜಾ ಖೇಡ್ಕರ್‌ ಅವರು ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್‌ ಡಾಕ್ಯುಮೆಂಟ್‌ ತಯಾರಿಸಿದ ಆರೋಪಗಳನ್ನೂ ಎದುರಿಸುತ್ತಿದ್ದಾರೆ.

ನಿಯಮಿತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪುಣೆಯಿಂದ (ಅಸಿಸ್ಟಂಟ್‌ ಕಲೆಕ್ಟರ್)‌ ವಾಶಿಂಗೆ ವರ್ಗಾವಣೆಗೊಂಡಿರುವ 34 ವರ್ಷದ ಅಧಿಕಾರಿಯು, ಒಬಿಸಿ ಜಾತಿ ಪ್ರಮಾಣಪತ್ರ ಲಗತ್ತಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಆದರೆ, ಅವರು ಒಬಿಸಿ ಜಾತಿ ಪ್ರಮಾಣಪತ್ರದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ವಿಶೇಷ ಚೇತನ ಎಂಬುದಾಗಿಯೂ ಫೇಕ್‌ ಡಾಕ್ಯುಮೆಂಟ್‌ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಡಿಕಲ್‌ ಟೆಸ್ಟ್‌ ಪ್ರಕಾರ ಪೂಜಾ ಖೇಡ್ಕರ್‌ ಅವರು ಫಿಟ್‌ ಇದ್ದಾರೆ ಎಂದು ಹೇಳಲಾಗುತ್ತಿದೆ.‌ 2007ರಲ್ಲಿ ಅವರು ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸಿದಾಗ ದೈಹಿಕವಾಗಿ ಫಿಟ್‌ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಯಸ್ಸಿನ ಕುರಿತೂ ಸುಳ್ಳು ದಾಖಲೆ

ಜಾತಿ, ವಿಶೇಷ ಚೇತನ ಪ್ರಮಾಣಪತ್ರದ ಜತೆಗೆ ಪೂಜಾ ಖೇಡ್ಕರ್‌ ಅವರು ವಯಸ್ಸಿನ ಕುರಿತು ಕೂಡ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2020ರಿಂದ 2023ರ ಅವಧಿಯಲ್ಲಿ ಅವರು ಸಲ್ಲಿಸಿದ ದಾಖಲೆಗಳ ಪ್ರಕಾರ, ಮೂರು ವರ್ಷದಲ್ಲಿ ಅವರ ವಯಸ್ಸು ದಾಖಲೆಯಲ್ಲಿ ಒಂದೇ ವರ್ಷ ಹೆಚ್ಚಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಯಸ್ಸಿನ ಮಿತಿ ಇರುವ ಕಾರಣ ಅವರು ವಯಸ್ಸಿನ ಕುರಿತು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ.

27 ಸಾವಿರ ರೂ. ದಂಡ ಬಿದ್ದಿದ್ದೇಕೆ?

ಅಧಿಕಾರದ ದುರುಪಯೋಗ, ನಕಲಿ ದಾಖಲೆ ಸೃಷ್ಟಿ ಜತೆಗೆ ಸಂಚಾರ ದಟ್ಟಣೆ ನಿಯಮಗಳ ಉಲ್ಲಂಘನೆಯಲ್ಲೂ ಮುಂದಿದ್ದಾರೆ. ವಾಶಿಂ ಮಹಿಳಾ ಪೊಲೀಸರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಪೂಜಾ ಖೇಡ್ಕರ್‌ ಅವರು ಎರಡು ತಾಸು ಚರ್ಚಿಸಿದ್ದಾರೆ. ಯಾವ ವಿಷಯದ ಕುರಿತು ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗದಿದ್ದರೂ, ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 27 ಸಾವಿರ ರೂ. ದಂಡ ವಿಧಿಸಲಾಗಿದ್ದು, ಅದರ ನೋಟಿಸ್‌ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಪೂಜಾ ಖೇಡ್ಕರ್‌ ಪ್ರತಿಕ್ರಿಯೆ ಏನು?

ನಕಲಿ ದಾಖಲೆ, ಅಧಿಕಾರ ದುರುಪಯೋಗ ಸೇರಿ ಹಲವು ಆರೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಮೊದಲ ಬಾರಿಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಯಾರೇ ಆಗಲಿ, ಆರೋಪ ಸಾಬೀತಾಗುವವರೆಗೆ ಅವರು ಆರೋಪಿಯೇ. ಮಾಧ್ಯಮಗಳ ವರದಿಗಳು, ತೀರ್ಪುಗಳು ನಾನು ಏನೆಂಬುದನ್ನು ತೀರ್ಮಾನಿಸುವುದಿಲ್ಲ. ತನಿಖೆಗೆ ರಚನೆಯಾಗಿರುವ ಸಮಿತಿಯ ತೀರ್ಮಾನದ ಬಳಿಕವೇ ಸತ್ಯ ಏನೆಂಬುದು ಗೊತ್ತಾಗುತ್ತದೆ. ಮಾಧ್ಯಮಗಳು ಅಥವಾ ಜನರು ನನ್ನನ್ನು ತೀರ್ಮಾನಿಸುವುದಿಲ್ಲ” ಎಂದು ಮಾಧ್ಯಮಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್

Continue Reading

Latest

Viral Video : ಡ್ಯಾನ್ಸ್‌ ಆಯ್ತು, ಹೊಡೆದಾಟವಾಯ್ತು, ಈಗ ಹುಡುಗಿಯರ ಮೇಕಪ್‌ಗೂ ಸಾಕ್ಷಿಯಾಯ್ತು ದೆಹಲಿ ಮೆಟ್ರೊ! ವಿಡಿಯೊ ನೋಡಿ

Viral Video: ಮಹಿಳೆಯರಿಗೆ ಮೇಕಪ್ ಎಂದರೆ ತುಂಬಾ ಇಷ್ಟ. ತಾವು ಮಾಡಿದ ಮೇಕಪ್ ಸ್ವಲ್ಪ ಹಾಳಾದರೂ ಎಲ್ಲೆಂದರಲ್ಲಿ ಕುಳಿತು ತಮ್ಮ ಮುಖಕ್ಕೆ ಮತ್ತಷ್ಟು ಮೇಕಪ್ ಬಡಿದುಕೊಳ್ಳುತ್ತಾರೆ. ಅಂದಹಾಗೇ ದೆಹಲಿ ಮೆಟ್ರೋದಲ್ಲಿ ಕೂಡ ಇಬ್ಬರು ಮಹಿಳೆಯರು ಪ್ರಯಾಣಿಸುವಾಗ ಮುಖಕ್ಕೆ ಮೇಕಪ್ ಬಡಿದುಕೊಳ್ಳುತ್ತಿರುವುದರಲ್ಲಿ ತಲ್ಲೀನರಾಗಿರುವುದು ಕಂಡುಬಂದಿದೆ. ಇದನ್ನು ವ್ಯಕ್ತಿಯೊಬ್ಬರು ವಿಡಿಯೊ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ದೆಹಲಿ ಮೆಟ್ರೋ ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ದೆಹಲಿ ಮೆಟ್ರೋದಲ್ಲಿ ನಡೆದ ಘಟನೆಗಳನ್ನು ಜನರು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಡ್ಯಾನ್ಸ್ ಮಾಡಿದ್ದು, ಇಬ್ಬರು ವ್ಯಕ್ತಿಗಳು ಹೊಡೆದಾಡಿದ್ದು ಮುಂತಾದ ವಿಚಾರಕ್ಕೆ ಅದು ಸುದ್ದಿಯಾಗಿತ್ತು. ಇದೀಗ ದೆಹಲಿ ಮೆಟ್ರೋದಲ್ಲಿ ನಡೆದ ಮತ್ತೊಂದು ಘಟನೆ ಬಹಳ ವೈರಲ್ (Viral Video) ಆಗುತ್ತಿದೆ.

ಮಹಿಳೆಯರಿಗೆ ಮೇಕಪ್ ಎಂದರೆ ತುಂಬಾ ಇಷ್ಟ. ತಾವು ಮಾಡಿದ ಮೇಕಪ್ ಸ್ವಲ್ಪ ಹಾಳಾದರೂ ಎಲ್ಲೆಂದರಲ್ಲಿ ಕುಳಿತು ತಮ್ಮ ಮುಖಕ್ಕೆ ಮತ್ತಷ್ಟು ಮೇಕಪ್ ಬಡಿದುಕೊಳ್ಳುತ್ತಾರೆ. ಅಂದಹಾಗೇ ದೆಹಲಿ ಮೆಟ್ರೋದಲ್ಲಿ ಕೂಡ ಇಬ್ಬರು ಮಹಿಳೆಯರು ಪ್ರಯಾಣಿಸುವಾಗ ಮುಖಕ್ಕೆ ಮೇಕಪ್ ಬಡಿದುಕೊಳ್ಳುತ್ತಿರುವುದರಲ್ಲಿ ತಲ್ಲೀನರಾಗಿರುವುದು ಕಂಡುಬಂದಿದೆ. ಇದನ್ನು ವ್ಯಕ್ತಿಯೊಬ್ಬರು ವಿಡಿಯೊ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ, ಮಹಿಳೆಯರು ಮೆಟ್ರೋ ಒಳಗೆ ಕುಳಿತಿರುವುದನ್ನು ಕಾಣಬಹುದು, ಮತ್ತು ಅಲ್ಲಿ ಹೆಚ್ಚು ಜನರು ಕಾಣುತ್ತಿಲ್ಲ. ಹಾಗಾಗಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಅವರು ಮೇಕಪ್ ಹಚ್ಚಲು ಪ್ರಾರಂಭಿಸಿದ್ದಾರೆ. ಇದು ಅಂತರ್ಜಾಲದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೆಚ್ಚಿನ ಜನರಿಗೆ ಈ ವಿಡಿಯೊವನ್ನು ತಮಾಷೆಯಾಗಿ ಕಂಡುಬಂದರೆ, ಕೆಲವರು ಇದನ್ನು ಮಾಡುವುದಕ್ಕಿಂತ ಈ ಸಮಯದಲ್ಲಿ ಸ್ವಲ್ಪ ನಿದ್ರೆ ಮಾಡಬಹುದಿತ್ತು ಎಂದು ಬರೆದಿದ್ದಾರೆ. ಕೆಲವರು ಹುಡುಗಿಯರು ಯಾರಿಗೂ ಹಾನಿ ಮಾಡದೆ ಅವರ ಪಾಡಿಗೆ ಅವರಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

“ಅವರಿಗೆ ಮೆಟ್ರೋ ಪಾಸ್‍ನೊಂದಿಗೆ ಮೇಕಪ್ ಕಿಟ್ ಅನ್ನು ಉಚಿತವಾಗಿ ನೀಡಬೇಕು” ಎಂದು ಮತ್ತೊಬ್ಬರು ಹೇಳಿದ್ದಾರೆ. ಮೆಟ್ರೋ ಅಥವಾ ಸಾರಿಗೆ ಮಾಧ್ಯಮವು ಈ ಎಲ್ಲದಕ್ಕೂ ಸಮಯವನ್ನು ಪಡೆಯುವ ಏಕೈಕ ಸ್ಥಳವಾಗಿದೆ”ಎಂದು ಮತ್ತೊಬ್ಬರು ತಿಳಿಸಿದ್ದಾರೆ. “ಈ ಹುಡುಗಿಯರು ತುಂಬಾ ಮುಗ್ಧರಾಗಿ ತಮ್ಮ ಮನೆಯಿಂದ ಹೊರಬರುತ್ತಾರೆ, ನಂತರ ಅವರು ತಮ್ಮ ನಿಜವಾದ ಮುಖವನ್ನು ತೋರಿಸುತ್ತಾರೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಈ ಘಟನೆಯ ದಿನಾಂಕ ಮತ್ತು ನಿಖರವಾದ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾ‌ರ್ಮ್ ಇನ್ಸ್ಟಾಗ್ರಾಂನಲ್ಲಿ ‘ದೆಹಲಿ ಮೇರಿ ಜಾನ್’ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ “ದೆಹಲಿ ಹುಡುಗಿಯರು” ಎಂದು ಶೀರ್ಷಿಕೆ ನೀಡಲಾಗಿದೆ.

Continue Reading

Latest

Model Arrest: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

Model Arrest: ಬ್ರೆಜಿಲ್‌ನ ಮಾಜಿ ರೂಪದರ್ಶಿ ಕ್ಯಾಟ್ ಟೊರೆಸ್ ಅನ್ನು ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವಳೊಂದಿಗೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಎಫ್ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆ ತನ್ನ ಫಾಲೋವರ್ಸ್‌ಗಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿ ಅವರನ್ನು ತನ್ನ ಗುಲಾಮರಂತೆ ಇರಿಸಿಕೊಳ್ಳುತ್ತಿದ್ದಳು ಎಂಬುದಾಗಿ ತಿಳಿದು ಬಂದಿದೆ.

VISTARANEWS.COM


on

Model Arrest
Koo

ಬ್ರೆಜಿಲ್‌ನ ಮಾಜಿ ರೂಪದರ್ಶಿ ಮತ್ತು ಅಮೆರಿಕ ಮೂಲದ ವೆಲ್ನೆಸ್ ಇನ್ಫ್ಲುಯೆನ್ಸರ್ ಕ್ಯಾಟ್ ಟೊರೆಸ್‌ ಎಂಬುವಳನ್ನು ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ (Model Arrest) ವಿಧಿಸಲಾಗಿದೆ. ಅವಳೊಂದಿಗೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆ ತನ್ನ ಫಾಲೋವರ್ಸ್‌ಗಳನ್ನು ಲೈಂಗಿಕ ಕೆಲಸದಲ್ಲಿ ತೊಡಗುವಂತೆ ಒತ್ತಾಯಿಸಿ ಅವರನ್ನು ತನ್ನ ಗುಲಾಮರಂತೆ ಇರಿಸಿಕೊಳ್ಳುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.

ಆಕೆಯಿಂದ ಗುಲಾಮಗಿರಿಗೆ ಒಳಗಾದ ಆ ಮಹಿಳೆಯರು ಆಕೆಯೊಂದಿಗೆ ವಾಸವಿದ್ದಾಗ ಅನುಭವಿಸಿದ ಭಯಾನಕ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತ್ರಸ್ತ ಮಹಿಳೆಯರು, ಆಕೆ ಮರುಳು ಮಾಡುವಂತೆ ಮಾತನಾಡುತ್ತಿದ್ದಳು. ಅವಳು ಹೇಳುವ ಮಾತನ್ನು ಕೇಳಿ ಆಕರ್ಷಿತರಾದೆವು. ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ಒಂದು ಕಾಲದಲ್ಲಿ ವದಂತಿಗಳಿದ್ದ ಟೊರೆಸ್, ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಬಳಸಿಕೊಂಡು ಭವಿಷ್ಯ ನುಡಿಯಬಹುದು ಎಂದು ಪ್ರಸಿದ್ಧ ಬ್ರೆಜಿಲಿಯನ್ ಟಿವಿ ಕಾರ್ಯಕ್ರಮಗಳಲ್ಲಿ ಹೇಳಿದ್ದಳು. ಅಲ್ಲದೇ ಅವಳು ಮ್ಯಾಗಜೀನ್‌ಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಳು. ಹಾಲಿವುಡ್‌ ನಟ ಲಿಯೊನಾರ್ಡೊ ಡಿಕಾಪ್ರಿಯೊ ಅವರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡಳು. ಹಾಗಾಗಿ ಆಕೆ ಹೇಳುವುದನ್ನು ತಾವು ನಂಬಿರುವುದಾಗಿ ಮಹಿಳೆಯರು ತಿಳಿಸಿದ್ದಾರೆ.

Model Arrest

ಆಕೆ ವೆಲ್‍ನೆಸ್ ವೆಬ್‍ಸೈಟ್‍ ಮತ್ತು ಚಂದಾದಾರಿಕೆ ಸೇವೆಯನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಸಂಬಂಧಗಳು, ಯೋಗಕ್ಷೇಮ, ಸಂಮೋಹನ, ಧ್ಯಾನ ಮತ್ತು ವ್ಯಾಯಾಮ ಕಾರ್ಯಕ್ರಮಗಳು ಸೇರಿದಂತೆ ವ್ಯವಹಾರ ಯಶಸ್ಸಿನ ಬಗ್ಗೆ ಸಲಹೆ ನೀಡುವ ಸ್ವ-ಸಹಾಯ ವೀಡಿಯೊಗಳನ್ನು ಸಹ ಮಾಡುತ್ತಿದ್ದಳು. ಹಾಗೇ ವಿಡಿಯೋ ಸಮಾಲೋಚನೆಗಳ ಮೂಲಕ ಮುಖಾಮುಖಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಳು.

ಹಾಗಾಗಿ ಆ ಮಹಿಳೆಯರು 2019ರಲ್ಲಿ ಟೊರೆಸ್ ಅವರ ಲೈವ್-ಇನ್ ಸಹಾಯಕರಾಗಿ ಕೆಲಸ ಮಾಡಲು ನ್ಯೂಯಾಕ್‌ಗೆ ತೆರಳಿದರು. ಅಲ್ಲಿ ಅವಳ ಮನೆಕೆಲಸ ಹಾಗೂ ಪ್ರಾಣಿಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ನಿರತಳಾಗಿದ್ದರು. ಆದರೆ ಆಕೆ ಸಂಬಳ ಸರಿಯಾಗಿ ನೀಡುತ್ತಿರಲಿಲ್ಲ. ನಂತರ ಸ್ಥಳೀಯ ಸ್ಟ್ರಿಪ್ ಕ್ಲಬ್‍ನಲ್ಲಿ ಕೆಲಸ ಮಾಡುವಂತೆ ಅವರ ಮೇಲೆ ಒತ್ತಡ ಹೇರಿದ್ದಳು. ಇದಕ್ಕೆ ಅವರು ಒಪ್ಪದಿದ್ದಾಗ ಅವರನ್ನು ಯಾಮಾರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡಿದ್ದಳು.

ಇದನ್ನೂ ಓದಿ: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ನಂತರ ಇಬ್ಬರು ಮಹಿಳೆಯರ ಸ್ನೇಹಿತರು ಮತ್ತು ಕುಟುಂಬವು ಅವರನ್ನು ಹುಡುಕಲು ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ಪ್ರಾರಂಭಿಸಿತು. ಮಾಧ್ಯಮಗಳ ಗಮನದಿಂದ ತಪ್ಪಿಸಿಕೊಳ್ಳಲು, ಟೊರೆಸ್ ಆ ಮಹಿಳೆಯರಿಗೆ ತಾವು ಆರಾಮವಾಗಿ ಇದ್ದೀವಿ ಎಂದು ವಿಡಿಯೊ ಪೋಸ್ಟ್ ಮಾಡುವಂತೆ ಒತ್ತಾಯಿಸಿದ್ದಳು. ಈ ರೀತಿ ಆಕೆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. 20 ಕ್ಕೂ ಹೆಚ್ಚು ಮಹಿಳೆಯರು ಟೊರೆಸ್‌ನಿಂದ ವಂಚನೆಗೊಳಗಾದ ಅಥವಾ ಶೋಷಣೆಗೊಳಗಾದ ಬಗ್ಗೆ ತಿಳಿಸಿದ್ದಾರೆ. ಅವರು ಅನುಭವಿಸಿದ ಮತ್ತು ಅನುಭವದಿಂದ ಚೇತರಿಸಿಕೊಳ್ಳಲು ಅವರು ಇನ್ನೂ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

Continue Reading
Advertisement
Ambani Video
ಪ್ರಮುಖ ಸುದ್ದಿ2 mins ago

Ambani Video: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

Money Guide
ಮನಿ-ಗೈಡ್2 mins ago

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Muharram 2024 Man dies in fire during
ರಾಯಚೂರು12 mins ago

Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

hit and run case
ದೇಶ14 mins ago

Hit And Run Case: ಮುಂಬೈ ಹಿಟ್‌ ಆ್ಯಂಡ್‌ ರನ್‌ ಕೇಸ್‌; ತನಗೆ ಕುಡಿಯುವ ಅಭ್ಯಾಸ ಇದೆ ಎಂದು ಒಪ್ಪಿಕೊಂಡ ಆರೋಪಿ

Assembly Session
ಕರ್ನಾಟಕ19 mins ago

Assembly Session: ವಾಲ್ಮೀಕಿ ನಿಗಮ ಅಕ್ರಮ ದಲಿತರಿಗೆ ಮಾಡಿರೋ ಅನ್ಯಾಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

Paris Olympics 2024
ಪ್ರಮುಖ ಸುದ್ದಿ37 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

BMTC staff commits suicide at headquarters
ಬೆಂಗಳೂರು54 mins ago

BMTC staff : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

ಪ್ರಮುಖ ಸುದ್ದಿ59 mins ago

Uttara Kannada Rain: ಭಾರಿ ಮಳೆಗೆ ತತ್ತರಿಸಿದ ಉತ್ತರ ಕನ್ನಡ; ಭೂಕುಸಿತಕ್ಕೆ 11 ಸಾವು, ರಸ್ತೆಗಳೇ ಮಾಯ, ತೋಟ ಗದ್ದೆ ಮುಳುಗಡೆ

Pooja Khedkar
ಪ್ರಮುಖ ಸುದ್ದಿ60 mins ago

Pooja Khedkar: ಐಎಎಸ್‌ಗಾಗಿ ನಕಲಿ ಜಾತಿ, ಕಡಿಮೆ ವಯಸ್ಸು, ದರ್ಪ; ಪೂಜಾ ಖೇಡ್ಕರ್‌ ಕಳ್ಳಾಟ ಒಂದೆರಡಲ್ಲ!

Viral Video
Latest1 hour ago

Viral Video : ಡ್ಯಾನ್ಸ್‌ ಆಯ್ತು, ಹೊಡೆದಾಟವಾಯ್ತು, ಈಗ ಹುಡುಗಿಯರ ಮೇಕಪ್‌ಗೂ ಸಾಕ್ಷಿಯಾಯ್ತು ದೆಹಲಿ ಮೆಟ್ರೊ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ23 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌