Viral photo: ಅದೃಷ್ಟಶಾಲಿ ಅಳಿಯ: ಮಾವನ ಮನೆಯಲ್ಲಿ 379 ಭಕ್ಷ್ಯಗಳ ಸಂಕ್ರಾಂತಿ ಊಟ! - Vistara News

ವೈರಲ್ ನ್ಯೂಸ್

Viral photo: ಅದೃಷ್ಟಶಾಲಿ ಅಳಿಯ: ಮಾವನ ಮನೆಯಲ್ಲಿ 379 ಭಕ್ಷ್ಯಗಳ ಸಂಕ್ರಾಂತಿ ಊಟ!

379 ಬಗೆಬಗೆಯ ಅಡುಗೆಗಳಿದ್ದ ಭಾರೀ ಭೂರೀ ಭೋಜನದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದು ಅಳಿಯನಿಗೆ ಮಾವನ ಮನೆ ನೀಡಿದ ದಾಖಲೆಯ ಸಂಕ್ರಾಂತಿ ಮೃಷ್ಟಾನ್ನ ಭೋಜನ.

VISTARANEWS.COM


on

viral photo sankranthi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಸಂಬಂಧದ ಪೈಕಿ ಅಳಿಯನಿಗೆ ವಿಶೇಷ ಸ್ಥಾನ. ಹಬ್ಬಹರಿದಿನಗಳಲ್ಲಿ ಅಳಿಯನನ್ನು ಮನೆಗೆ ಕರೆದು ಳಗಮಿಗೀ ಅಳಿಯನಿಗೂ ವಿಶೇಷ ಮರ್ಯಾದೆಯಿಂದ ಊಟ ಹಾಕುವುದೂ ಬಹುತೇಕ ಎಲ್ಲ ಜಾತಿ ಧರ್ಮಗಳಲ್ಲೂ ಇರುವ ಸಂಪ್ರದಾಯ. ಸಿಹಿ ಖಾರ ಸೇರಿದಂತೆ ಹಬ್ಬದಡುಗೆ ಮಾಡಿ ಬಡಿಸಿ ಸಂಭ್ರಮಿಸಿ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸುವುದು ಈ ಸಂಪ್ರದಾಯದ ಹೈಲೈಟು. ಹೀಗೆ ಅಳಿಯನಿಗೂ ಮಾವನಮನೆಗೂ ಇರುವ ಸಂಬಂಧದ ಝಲಕ್‌ ಸಾಹಿತ್ಯದಲ್ಲೂ ಸಾಕಷ್ಟು ಬಂದುಹೋಗಿವೆ. ಕೆ ಎಸ್‌ ನರಸಿಂಹಸ್ವಾಮಿಯವರ ರಾಯರು ಬಂದರು ಮಾವನ ಮನೆಗೆ ಕವಿತೆಯೂ ಕೂಡಾ ಇದಕ್ಕೆ ಒಂದು ಉದಾಹರಣೆ.

ಗಂಡುಮಕ್ಕಳ ಮನಸ್ಸನ್ನು ಗೆಲ್ಲಬೇಕಾದರೆ ಅವರ ಹೊಟ್ಟೆಯ ಮೂಲಕವಾಗಿ ಸಾಗಬೇಕು ಎಂಬ ಪುರಾತನ ನಾಣ್ಣುಡಿಯಿದೆ. ಆದರೆ ಇಲ್ಲಿ ಈ ನಾಣ್ಣುಡಿಯನ್ನು ಮಾವನ ಮನೆಯವರು ಗಂಭೀರವಾಗಿ ಪರಿಗಣಿಸಿದಂತಿದೆ. ಇದೀಗ ಮಾವನಮನೆಯ ಆತಿಥ್ಯ ಪಡೆಯುವ ಅಳಿಯಂದಿರ ಪೈಕಿ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಈ ಅಳಿಯನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲ ಎಂಬ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯಾಕೆಂದರೆ ಈ ಬಾರಿಯ ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಮಾವನ ಮನೆಗೆ ವಿಶೇಷ ಆಹ್ವಾನಿತನಾಗಿ ಹೋದರೆ ಆತನ ಎದುರು ಹಾಸಿದ ಎಲೆಯಲ್ಲಿದ್ದುದ್ದು ಬರೋಬ್ಬರಿ ೩೭೯ ಭಕ್ಷ್ಯಗಳು. ಯಾರಿಗುಂಟು ಯಾರಿಗಿಲ್ಲ ಈ ಯೋಗ ಅಂತೀರಾ!

೩೭೯ ಬಗೆಬಗೆಯ ಅಡುಗೆಗಳಿದ್ದ ಭಾರೀ ಭೂರೀ ಭೋಜನದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದು ಅಳಿಯನಿಗೆ ಮಾವನ ಮನೆ ನೀಡಿದ ದಾಖಲೆಯ ಸಂಕ್ರಾಂತಿ ಮೃಷ್ಟಾನ್ನ ಭೋಜನವಾಗಿದ್ದು, ಈ ಹಿಂದೆ ಈ ದಾಖಲೆ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರಂನ ಒಂದು ಕುಟುಂಬ ಹೊಂದಿತ್ತು. ಅವರು ೩೬೫ ಬಗೆಯ ಅಡುಗೆಗಳನ್ನು ಸಂಕ್ರಾಂತಿಗಾಗಿ ತಮ್ಮ ಅಳಿಯನಿಗೆ ಮಾಡುವ ಮೂಲಕ ದಾಖಲೆ ಬರೆದಿದ್ದರು. ಈಗ ಅದಕ್ಕಿಂತಲೂ ಹೆಚ್ಚು ಅಂದರೆ ೩೬೯ ಬಗೆಯ ಭಕ್ಷ್ಯಗಳನ್ನು ತಯಾರು ಮಾಡುವ ಮೂಲಕ ಸಂಕ್ರಾಂತಿಯಂದು ಈ ಕುಟುಂಬ ಹಳೆ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ | Viral Video: ಲಂಡನ್​ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಬಾವುಟ ಪ್ರದರ್ಶಿಸಿದ ಬೀದರ್​ ಹುಡುಗ; ಕನ್ನಡಿಗರು ಫುಲ್​ ಖುಷ್​​

ಕುಸುಮ್‌ ರಾವ್‌ ಹಾಗೂ ಬುದ್ಧ ಮುರಳೀಧರ್‌ ನವ ದಂಪತಿಗಳಿಗಾಗಿ ಮಾಡಿದ ಸಂಕ್ರಾಂತಿಯ ವಿಶೇಷ ಅಡುಗೆ ಇದಾಗಿದ್ದು, ಅಳಿಯ ಮುರಳೀಧರ್‌ ಈ ಇಷ್ಟು ಬಗೆಯ ಅಡುಗೆಯನ್ನು ನೋಡಿ ಥ್ರಿಲ್ಲಾಗಿದ್ದಾರೆ. ಮುರಳೀಧರ್‌ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ʻನಮ್ಮ ಮೊದಲ ಸಂಕ್ರಾಂತಿಗೆ ಮಾವನ ಮನೆಯಲ್ಲಿ ಭರ್ಜರಿ ಭೋಜನ ಉಂಡು ಬಂದೆ. ಒಟ್ಟು ೩೭೯ ಬಗೆಯ ಭಕ್ಷ್ಯಗಳು ಇದ್ದ ಈ ಸಂಕ್ರಾಂತಿ ಹಬ್ಬ ಅದ್ಭುತವಾಗಿತ್ತು. ಇದರಲ್ಲಿ ೪೦ ಬಗೆಯ ಪಲಾವು ಹಾಗೂ ರೈಸ್‌ಬಾತ್‌ಗಳು, ೨೦ ಬಗೆಯ ಚಟ್ನಿಗಳು, ೪೦ ಬಗೆಯ ಕರಿಗಳು, ೪೦ ಕರಿದ ತಿಂಡಿಗಳು, ೯೦ರಿಂದ ೧೦೦ ಬಗೆಯ ಸಿಹಿತಿಂಡಿಗಳು, ೭೦ ಬಿಸಿಬಿಸಿ ಪದಾರ್ಥಗಳು, ಜ್ಯೂಸುಗಳು ಹಾಗೂ ಪೇಯಗಳು ಇದರಲ್ಲಿತ್ತು. ನನ್ನ ಸುತ್ತ ಇಂತಹ ಅದ್ಭುತ ಜನರನ್ನು ಪಡೆಯಲು ನನ್ನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲʼ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮುರಳೀಧರ್‌ ಅವರ ಮಾವನ ಮನೆಯವರು ಈ ಭಾರೀ ಮೃಷ್ಟಾನ್ನ ಭೋಜನ ತಯಾರಿಗೆ ಸುಮಾರು ೧೦ ದಿನಗಳ ಕಾಲ ತೆಗೆದುಕೊಂಡಿದ್ದರೆನ್ನಲಾಗಿದ್ದು, ಎಲ್ಲ ಅಡುಗೆಯನ್ನೂ ಈ ಅವಧಿಯಲ್ಲೇ ಮಾಡಲಾಗಿದೆ. ತಮ್ಮ ಅಳಿಯ ಎಲ್ಲ ೩೭೯ ಬಗೆಯನ್ನೂ ತಿಂದು ರುಚಿ ನೋಡಿದ್ದು, ಇದರಿಂದ ಸಂತುಷ್ಟರಾಗಿದ್ದೇವೆ. ಆತನಿಗೆ ಆಹಾರದ ಬಗೆಗೆ ಒಳ್ಳೆಯ ಅಭಿರುಚಿ ಇದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ | Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಕುರ್ಕುರೆ ಪ್ಯಾಕ್‌ ತರದೇ ಹೋದ ಗಂಡನಿಗೆ ಡೈವೋರ್ಸ್!‌

Viral News: ಪತ್ನಿಯ ಈ ವ್ಯಸನ ಪ್ರತಿದಿನ ದಂಪತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಪತಿ ಮನೆಗೆ ಪ್ಯಾಕೆಟ್‌ ತರಲು ಮರೆತಾಗ ಈ ವಿವಾದ ಉಲ್ಬಣಗೊಂಡಿದೆ. ಇದು ತಾರಕಕ್ಕೆ ಹೋಗಿದೆ. ತನ್ನ ದೈನಂದಿನ ಆಸ್ವಾದವನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಪತ್ನಿ, ಗಂಡನ ಮನೆಯನ್ನು ತೊರೆದು ಹೆತ್ತವರ ಮನೆಗೆ ಹೋಗಿದ್ದಾಳೆ.

VISTARANEWS.COM


on

kurkure divorce viral news
Koo

ಲಖನೌ: ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬಳು, ಕುರ್ಕುರೆ (Kurkure) ಪ್ಯಾಕೆಟ್‌ ತರಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಪತಿಯಿಂದ ವಿಚ್ಛೇದನ (Divorce) ಬಯಸಿದ್ದಾಳೆ! ಇದು ನಿಜ. ಪ್ರತಿನಿತ್ಯ ಪತಿಯಿಂದ ಕುರ್ಕುರೆ ತರಿಸಿಕೊಂಡು ತಿನ್ನುತ್ತಿದ್ದ ಈಕೆ, ಒಂದು ದಿನ ಅದನ್ನು ತರಲು ಪತಿ ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ದಾಂಪತ್ಯವನ್ನೇ ಬರ್ಬಾದ್‌ ಮಾಡಿದ್ದಾಳೆ. ಈ ಸುದ್ದಿ ಈಗ ವೈರಲ್‌ (Viral news) ಆಗಿದೆ.

5 ರೂಪಾಯಿ ಚಿಲ್ಲರೆ ಬೆಲೆಯ ಕುರ್ಕುರೆ ಪ್ಯಾಕೆಟ್ ಇವರ ದಾಂಪತ್ಯ ವಿಚ್ಛೇದನಕ್ಕೆ ಕಾರಣವಾಗಿದ್ದು, ಈ ಮಹಿಳೆಯ ಹೆಸರು ಬಹಿರಂಗಪಡಿಸಲಾಗಿಲ್ಲ. ಪತ್ನಿಯ ಈ ವ್ಯಸನ ಪ್ರತಿದಿನ ದಂಪತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಪತಿ ಮನೆಗೆ ಪ್ಯಾಕೆಟ್‌ ತರಲು ಮರೆತಾಗ ಈ ವಿವಾದ ಉಲ್ಬಣಗೊಂಡಿದೆ. ಇದು ತಾರಕಕ್ಕೆ ಹೋಗಿದೆ. ತನ್ನ ದೈನಂದಿನ ಆಸ್ವಾದವನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಪತ್ನಿ, ಗಂಡನ ಮನೆಯನ್ನು ತೊರೆದು ಹೆತ್ತವರ ಮನೆಗೆ ಹೋಗಿದ್ದಾಳೆ. ಬಳಿಕ ಪತಿಯಿಂದ ವಿಚ್ಛೇದನ ಕೋರಿ ಪೊಲೀಸರ ಮೊರೆ ಹೋಗಿದ್ದಾಳೆ.

ಕಳೆದ ವರ್ಷ ವಿವಾಹವಾದ ದಂಪತಿಯನ್ನು ಆಗ್ರಾದ ಶಹಾಗಂಜ್ ಪೊಲೀಸರು ಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಪತಿ, ತನ್ನ ಹೇಳಿಕೆಯಲ್ಲಿ, ತನ್ನ ಹೆಂಡತಿಯ ಕುರ್ಕುರೆ ಗೀಳಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾನೆ. ಇದು ಅವರ ನಡುವಿನ ವಿವಾದದ ಬಿಂದುವಾಗಿದೆ. ಮತ್ತೊಂದೆಡೆ, ಪತಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರಿಂದ ಆತನ ಮನೆಯನ್ನು ತೊರೆಯಬೇಕಾಯಿತು ಎಂದು ಪತ್ನಿ ಆರೋಪಿಸಿದ್ದಾಳೆ. ಈ ಆರೋಪದ ಹಿಂದಿನ ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಗ್ರಾ ಇನ್ನೊಂದು ದಂಪತಿ ಕೂಡ ಈ ವರ್ಷದ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. “ತುಂಬಾ ಜನಪ್ರಿಯತೆ” ಗಳಿಸಿದ ಹೆಂಡತಿಯ ರಾಜಕೀಯ ಚಟುವಟಿಕೆಗಳು ಪತಿಗೆ ಕಿರಿಕಿರಿ ಉಂಟುಮಾಡಿದ್ದು, ಜೊತೆಗೆ ಇರಲಾರೆ ಎಂದು ಗಂಡ ಹೇಳಿದ್ದ. ಪರಿಸ್ಥಿತಿ ಪೊಲೀಸರಿಗೆ ತಲುಪಿತ್ತು. ಅಪರಿಚಿತರೊಂದಿಗೆ ತನ್ನ ಹೆಂಡತಿ ಮುಖಾಮುಖಿ ಭೇಟಿಯಾಗುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಗಂಡ ಹೇಳಿದ್ದ. ನಂತರ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಇಲ್ಲಿ ಪತಿ ಸಿಕಂದರಾ ಮೂಲದವರಾಗಿದ್ದರೆ, ಮಹಿಳೆ ನ್ಯೂ ಆಗ್ರಾದ ಠಾಣಾದವರು. ಅವರಿಗೆ ಮದುವೆಯಾಗಿ ಎರಡು ವರ್ಷವಾಗಿತ್ತು. ಪತ್ನಿ ರಾಜಕೀಯದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದ್ದು, ಅದನ್ನು ತ್ಯಜಿಸಲು ಸಿದ್ಧರಿರಲಿಲ್ಲ. ಅವಳು ರಾಜಕೀಯ ಕ್ಷೇತ್ರವನ್ನು ಬಿಡದಿದ್ದರೆ ತಾನು ಅವಳ ಜೊತೆಗೆ ಇರುವುದಿಲ್ಲ ಎಂದು ಪತಿ ಹಠ ಹಿಡಿದಿದ್ದ.

ಇದನ್ನೂ ಓದಿ: Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

Continue Reading

ವೈರಲ್ ನ್ಯೂಸ್

Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

Viral video: ಗುಜರಾತ್​ ಟೈಟಾನ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ಮುಖಾಮುಖಿ ನೋಡಲು ಬಂದಿದ್ದ ಅಭಿಮಾನಿಯೊಬ್ಬ ಪಂದ್ಯದ ಬಾಲ್ ಕದಿಯಲು ಯತ್ನಿಸಿದ ವೇಳೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದು ಸರಿಯಾಗಿ ಗೂಸಾ ತಿಂದ ಘಟನೆ ಸೋಮವಾರ ನಡೆದಿದೆ.

VISTARANEWS.COM


on

Viral video
Koo

ಅಹಮದಾಬಾದ್:​ ಕ್ರಿಕೆಟ್​ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ನೋಡಲು ಮೈದಾನಕ್ಕೆ ಬರುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ಕೆಕೆಆರ್​(Kolkata Knight Riders) ಮತ್ತು ಗುಜರಾತ್​ ಟೈಟಾನ್ಸ್​(Gujarat Titans) ನಡುವಣ ಪಂದ್ಯದ ವೇಳೆ ಚೆಂಡನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ಬಳಿಕ ಪೊಲೀಸರಿಂದ ಈತನಿಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video)​ ಆಗಿದೆ.

ಸೋಮವಾರದ ಐಪಿಎಲ್​ ಪಂದ್ಯದಲ್ಲಿ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಮುಖಾಮುಖಿಯಾಗಬೇಕಿತ್ತು. ಇದೇ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಯೊಬ್ಬ ರಿಂಕು ಸಿಂಗ್(Rinku Singh)​ ಜೆರ್ಸಿ ತೊಟ್ಟು, ಆಟಗಾರರು ಪಂದ್ಯಕ್ಕೂ ಮುನ್ನ ನಡೆಸುತ್ತಿದ್ದ ಅಭ್ಯಾಸವನ್ನು ನೋಡುತ್ತಿದ್ದ. ಇದೇ ವೇಳೆ ಅಲ್ಲಿದ್ದ ಪಂದ್ಯದ ಬಾಲ್ ಕದಿಯಲು ಪ್ರಯತ್ನಿಸಿದ್ದಾನೆ. ಚೆಂಡು ಕದ್ದು ತನ್ನ ಪ್ಯಾಂಟ್​ನ ಒಳಗಡೆ ಬಚ್ಚಿಟ್ಟಿದ್ದ. ಇದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಆತನನ್ನು ವಿಚಾರಿಸಿದಾಗ ಆತ ಪ್ಯಾಂಟ್​ನ ಒಳಗಡೆ ಬಚ್ಚಿಟ್ಟ ಚೆಂಡನ್ನು ಹಿಂದಿರುಗಿಸಿದ್ದಾನೆ. ಕಳ್ಳತನ ಮಾಡಿದ ತಪ್ಪಿಗಾಗಿ ಭದ್ರತಾ ಸಿಬ್ಬಂದಿ ಆತನಿಗೆ ಸರಿಯಾಗಿ 2 ಗೂಸಾ ಕೊಟ್ಟಿದ್ದಾರೆ.

ಈ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಪರಿಣಾಮ ಗುಜರಾತ್​ ಟೈಟಾನ್ಸ್​ ಟೂರ್ನಿಯಿಂದ ಹೊರ ಬಿದ್ದ ಸಂಕಟಕ್ಕೆ ಸಿಲುಕಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

ಇದನ್ನೂ ಓದಿ IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

ಗುಜರಾತ್​ ಟೈಟಾನ್ಸ್ ಪ್ಲೇಆಫ್​ನಲ್ಲಿ ಸ್ಥಾನ ಪಡೆಯುವ ರೇಸ್​​ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​139319 (+1.428)
ರಾಜಸ್ಥಾನ್​ ರಾಯಲ್ಸ್​​​128416 (+0.349)
ಚೆನ್ನೈ​​137614 (+0.528)
ಹೈದರಾಬಾದ್​127514 (+0.406)
ಆರ್​ಸಿಬಿ136712 (+0.387)
ಡೆಲ್ಲಿ136712 (-0.482)
ಲಕ್ನೋ126612 (-0.769)
ಗುಜರಾತ್​135711 (-1.063)
ಮುಂಬೈ13498 (-0.271)
ಪಂಜಾಬ್​​12488 (-0.423)
Continue Reading

Latest

Viral Video: ಇಲ್ಲಿ ಸಿಗೋದು ಡಿಸೇಲ್ ಪರಾಠಾ!

Viral Video: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಜನಪ್ರಿಯ ಭಾರತೀಯ ಉಪಾಹಾರ ಖಾದ್ಯವಾದ ಪರಾಠವನ್ನು ತಯಾರಿಸಲು ಡಿಸೇಲ್ ಹಾಕಿರುವುದನ್ನು ತೋರಿಸಲಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

VISTARANEWS.COM


on

By

Viral Video
Koo

ಬೀದಿ ಬದಿ ಆಹಾರದಲ್ಲಿ (street food) ಸಿಗುವ ರುಚಿ ಬೇರೆ ಯಾವ ದೊಡ್ಡ ರೆಸ್ಟೋರೆಂಟ್ ಗಳಲ್ಲೂ ಸಿಗುವುದಿಲ್ಲ. ಬೀದಿ ಬದಿ ಆಹಾರವನ್ನು ಇಷ್ಟ ಪಡುವ ಒಂದು ವರ್ಗವೇ ಇದೆ. ಹೀಗಾಗಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇರುತ್ತದೆ. ಆದರೆ ಆರೋಗ್ಯ (health) ಕಾಪಾಡಲು, ಆಹಾರದ ಸುರಕ್ಷತೆ (Food safety), ಸ್ವಚ್ಛತೆ (clean) ಬಗ್ಗೆ ಗಮನ ಕೊಡುವವರು ಬೀದಿಬದಿ ವ್ಯಾಪಾರಿಗಳು ಯಾವ ರೀತಿ ಆಹಾರ ತಯಾರಿಸುತ್ತಾರೆ ಎಂಬುದನ್ನು ನೋಡಿ ತಿನ್ನುವುದು ಒಳ್ಳೆಯದು.

ಆರೋಗ್ಯದ ವಿಷಯದಲ್ಲಿ ಹೆಚ್ಚಿನವರು ಜಾಗ್ರತರಾಗಿರಬೇಕು. ಸ್ಥಿರವಾದ ಕೊಲೆಸ್ಟ್ರಾಲ್ ಮಟ್ಟ ಮತ್ತು ನಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ನಾವು ಹೆಚ್ಚಾಗಿ ಎಣ್ಣೆಯುಕ್ತ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಆದರೆ ಇಲ್ಲೊಂದು ವೈರಲ್ ವಿಡಿಯೋ (Viral Video) ಮಾತ್ರ ಭಯ ಹುಟ್ಟಿಸುತ್ತದೆ. ಬೀದಿ ಬದಿಯ ಆಹಾರ ಬೇಡವೇ ಬೇಡ ಎನ್ನುವಂತೆ ಮಾಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಜನಪ್ರಿಯ ಭಾರತೀಯ ಉಪಹಾರ ಖಾದ್ಯವಾದ ಪರಾಠವನ್ನು ತಯಾರಿಸಲು ಡಿಸೇಲ್ ಹಾಕಿರುವುದನ್ನು ತೋರಿಸಲಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆತ ಪರಾಠಾ ತಯಾರಿಸಲು ಡಿಸೇಲ್ ಬಳಕೆ ಮಾಡಿರುವುದನ್ನು ವ್ಯಕ್ತಿಯೊಬ್ಬ ಆತನಿಗೆ ಗೊತ್ತಾಗದಂತೆ ಕೆಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.


ಡಿಸೇಲ್ ನಲ್ಲಿ ತಯಾರಿಸಿದ ಪರಾಠಾವನ್ನು ಗ್ರಾಹಕರಿಗೆ ಬಡಿಸುವ ಆತ “ಎಸ್ಕೊ ಖಕ್ರ್ ಕಚೋರಿ ಕಾ ಟೇಸ್ಟ್ ಆತಾ ಹೈ (ಇದು ಕಚೋರಿಯಂತೆ ರುಚಿಯಾಗಿದೆ) ಎನ್ನುತ್ತಾನೆ. ಪರಾಠಾವನ್ನು ಹುರಿಯಲು ಟಿನ್ ಕ್ಯಾನ್‌ನಿಂದ ಡೀಸೆಲ್ ಸುರಿಯುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

ಕ್ಯಾನ್ಸರ್‌ಗೆ ನಿಜವಾದ ಪಾಕವಿಧಾನ (ಪೆಟ್ರೋಲ್ ಡೀಸೆಲ್ ವಾಲಾ ಪರಾಠ) ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ. ಚಂಡೀಗಢದ ಬಬ್ಲು ಧಾಬಾ: ಈ ಡೀಸೆಲ್-ಫ್ರೈಡ್ ಪರಾಠವನ್ನು ಎಲ್ಲಿ ತಯಾರಿಸಲಾಗುತ್ತದೆ ಎಂಬುದನ್ನು ಈ ವಿಡಿಯೋ ಬಹಿರಂಗಪಡಿಸುತ್ತದೆ.
ಆನ್ ಲೈನ್ ನಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ನನ್ನ ಹೊಸ ಅನಾರೋಗ್ಯಕರ ಅಡುಗೆ ಎಣ್ಣೆಗಳ ಪಟ್ಟಿ ಡಿಸೇಲ್ ಪೆಟ್ರೋಲ್ ಬೀಜದ ಎಣ್ಣೆಗಳು ಎಂದು ಬಳಕೆದಾರನೊಬ್ಬ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರೆ, ಇನ್ನೊಬ್ಬ ಅವನು ಶೀಘ್ರದಲ್ಲೇ ಫೆರಾರಿಯನ್ನು ಖರೀದಿಸುತ್ತಾನೆ ಮತ್ತು ಅವನ ಗ್ರಾಹಕರು ಶೀಘ್ರದಲ್ಲೇ ತಮ್ಮ ಮನೆ ಮತ್ತು ಕಾರುಗಳನ್ನು ಮಾರಾಟ ಮಾಡಲಿದ್ದಾರೆ ಕ್ಯಾನ್ಸರ್ ಚಿಕಿತ್ಸೆಗಾಗಿ ಎಂದು ಹೇಳಿದ್ದಾನೆ.

ಮತ್ತೊಬ್ಬರು ಕನಿಷ್ಠ ಅವರು ತಲೆಯ ಮೇಲೆ ಕ್ಯಾಪ್ ಧರಿಸಿದ್ದರು. ಆದ್ದರಿಂದ ಕ್ಯಾನ್ಸರ್ ಪರಾಠದಲ್ಲಿ ಕೂದಲು ಇಲ್ಲ ಹೇಳಿದ್ದು, ಡಿಸೇಲ್ ಬಳಕೆಯ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ಹೊತ್ತಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದು ಬಹುಶಃ ಕೇವಲ ಹಳೆಯ ಎಣ್ಣೆ. ಡಿಸೇಲ್ ಸುಮಾರು 200ಸಿಗೆ ಬೆಂಕಿಯನ್ನು ಹಿಡಿಯುತ್ತದೆ. ಅಡುಗೆ ಮಾಡುವಾಗ ಥಾವಾ ತಾಪಮಾನವು ಸುಲಭವಾಗಿ 250- 300ಸಿ ತಲುಪುತ್ತದೆ. ಆ ದ್ರವವು ಬೆಂಕಿಯನ್ನು ಹಿಡಿಯದಿದ್ದರೆ ಅದು ಕೇವಲ ಎಣ್ಣೆ ಎಂದು ಅರ್ಥ ಎಂದು ಮತ್ತೊಬ್ಬರು ಹೇಳಿದ್ದು, ಇದು ಡೀಸೆಲ್‌ನಂತೆ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

ಇದು ಖಂಡಿತವಾಗಿಯೂ ಆರೋಗ್ಯಕರವಲ್ಲ. ಆದರೆ ಇದು ಡಿಸೇಲ್ ಕೂಡ ಅಲ್ಲ.. ಎಂದು ಮತ್ತೊಬ್ಬರು ಹೇಳಿದ್ದಾರೆ.
ಭಾರತದಲ್ಲಿ ಬೀದಿ ಆಹಾರಗಳಿಗೆ ಯಾವುದೇ ರೀತಿಯ ಆಹಾರ ಸುರಕ್ಷತಾ ನಿಯಮಗಳು ಇಲ್ಲವೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

Continue Reading

ದಾವಣಗೆರೆ

Davanagere News : ಇಳಿ ವಯಸ್ಸಿನಲ್ಲಿ ಕೂಡಿ ಬಂದ ಕಂಕಣ ಭಾಗ್ಯ; ದೂರಾಯಿತು ಒಂಟಿತನ

Davanagere News : ಇತ್ತೀಚೆಗೆ ಯುವಜನತೆ ಮದುವೆಗೆ ವರ ಸಿಗುತ್ತಿಲ್ಲ, ವಧು ಸಿಗುತ್ತಿಲ್ಲ ಅಂತ ಪೆಚಾಡುತ್ತಿದ್ದರೆ, ಇತ್ತ ದಾವಣಗೆರೆಯಲ್ಲಿ ಇಳಿ ವಯಸ್ಸಿನಲ್ಲಿ (Marriage at an early age) ಕಂಕಣ ಭಾಗ್ಯ ಕೂಡಿ ಬಂದಿದ್ದು, ಜೋಡಿಯ ಒಂಟಿತನವು ದೂರಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲೇ ಸರಳ ಮದುವೆ ಕಾರ್ಯವು ನೆರವೇರಿದೆ.

VISTARANEWS.COM


on

By

Davanagere News Marriage at an early age
Koo

ದಾವಣಗೆರೆ: ಆ ಗ್ರಾಮದಲ್ಲಿ ನಡೆದ ಮದುವೆಯು (Marriage) ಸಂಭ್ರಮದೊಂದಿಗೆ ವಿಶೇಷವಾಗಿಯೂ ಇತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನಿಗೆ 61 ಆದರೆ ವಧುವಿಗೆ 56 ವರ್ಷ.. ಈ ಹಿರಿಯರ ಮದುವೆಗೆ ಕುಟುಂಬಸ್ಥರು ಸೇರಿ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಇಳಿ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದ್ದು, ಕೊನೆಗಾಲದಲ್ಲಿ ಆಸರೆಯಾಗಿರಲು ಇಳಿ ವಯಸ್ಸಿನ ‌ವಧು-ವರ (Marriage at an early age) ಒಂದಾಗಿದ್ದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಈ ವಿಶೇಷ ಮದುವೆ ನಡೆದಿದೆ. 56 ವರ್ಷದ ರುಕ್ಮಿಣಿ ಹಾಗೂ 61 ವರ್ಷದ ನಿವೃತ್ತ ಶಿಕ್ಷಕ ನಾಗರಾಜ್‌ ಎಂಬುವವರು ಸತಿಪತಿಗಳಾದ ಜೋಡಿ.

ಶಾಲಾ‌ ಶಿಕ್ಷಕರಾಗಿ ನಿವೃತ್ತಿ ‌ಹೊಂದಿದ್ದ ನಾಗರಾಜ್, ಪತ್ನಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು. ಇತ್ತ ರುಕ್ಮಿಣಿ ಮದುವೆಯಾಗದೇ ತವರು ಮನೆಯಲ್ಲೇ ಆಶ್ರಯ ಪಡೆದಿದ್ದರು. ಒಂಟಿ ಜೀವಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ನಾಗರಾಜ್‌ ಅವರು ಒಬ್ಬಂಟಿಯಾಗಿದ್ದ ರುಕ್ಮಿಣಿಯವರ ಕೈಹಿಡಿದಿದ್ದಾರೆ.

ಇನ್ನೂ ಇವರಿಬ್ಬರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಮುದ್ರೆ ಒತ್ತಿದ್ದಾರೆ. ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ಎರಡು ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನೆರವೇರಿದೆ.

Davanagere News Marriage at an early age

ಇದನ್ನೂ ಓದಿ: Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

Abdu Rozik: ತನಗಿಂತ ತುಂಬಾ ಎತ್ತರದ ಹುಡುಗಿ ಜತೆ ಬಿಗ್‌ ಬಾಸ್‌ ಸ್ಪರ್ಧಿಯ ಮದುವೆ!

ಸಾಮಾಜಿಕ ಜಾಲತಾಣದಲ್ಲಿ (social media) ಸಕ್ರಿಯರಾಗಿರುವ ಮತ್ತು ಬಿಗ್ ಬಾಸ್ 16 (Bigg Boss 16) ಖ್ಯಾತಿಯ ಅಬ್ದು ರೋಝಿಕ್ (Abdu Rozik) ಇತ್ತೀಚೆಗಷ್ಟೇ ಅಮಿರಾ ಅವರೊಂದಿಗೆ ಮದುವೆ ನಿಶ್ಚಿತಾರ್ಥವನ್ನು (engagement) ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಮುಂದಿನ ಜುಲೈನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಬಾಲಿವುಡ್ ನಟ (Bollywood actor) ಸಲ್ಮಾನ್ ಖಾನ್ (Salman Khan) ಪಾಲ್ಗೊಳ್ಳಲಿದ್ದಾರೆ ಎಂದು ಅಬ್ದು ತಿಳಿಸಿದ್ದಾರೆ.

20 ವರ್ಷದ ಗಾಯಕ (singer) ಅಬ್ದು ರೋಝಿಕ್ ಅವರು ಅಮೀರಾ ಅವರನ್ನು ಆಹಾರ ಉತ್ಸವದಲ್ಲಿ ಭೇಟಿಯಾಗಿದ್ದರು. ಮೊದಲ ನೋಟದಲ್ಲೇ ಇಬ್ಬರಿಗೂ ಪ್ರೀತಿಯಾಗಿತ್ತು ಎಂದು ಅಬ್ದು ತಿಳಿಸಿದರು.

ಅಬ್ದು ಅವರ ನಿಶ್ಚಿತಾರ್ಥವು ಯಾವುದೇ ಪ್ರಚಾರವಲ್ಲ ಎಂದು ಅಬ್ದು ಸ್ಪಷ್ಟಪಡಿಸಿದ್ದು, ನನ್ನಂತಹ ಸಣ್ಣ ವ್ಯಕ್ತಿ ಪ್ರೀತಿಯನ್ನು ಕಂಡುಕೊಂಡಿದ್ದಾನೆ ಎಂದು ಜನರು ನಂಬಲು ಕಷ್ಟವಾಗಬಹುದು ಎಂದು ತಿಳಿಸಿದರು.
ಅಮೀರಾಗಿಂತ ಚಿಕ್ಕವನಾಗಿರುವ ತನ್ನ ಎತ್ತರದ ವ್ಯತ್ಯಾಸವು ನಮ್ಮ ಪ್ರೀತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳಿದರು.


ಅಬ್ದು ಅವರು 115 ಸೆಂ ಮತ್ತು ಅಮೀರಾ 155 ಸೆಂ.ಮೀ. ಎತ್ತರವಿದ್ದಾರೆ. ಅವರಿಬ್ಬರೂ ಕಡಿಮೆ ಎತ್ತರದಿಂದಾಗಿ ತಮ್ಮ ಸಂಗಾತಿಯನ್ನು ಹುಡುಕುವ ಬಗ್ಗೆ ಚಿಂತಿತರಾಗಿದ್ದರು. ಆದರೆ ಅಮೀರಾ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಕೃತಜ್ಞರಾಗಿರುತ್ತೇನೆ. ಅಮೀರಾ ತನಗಿಂತ ಎತ್ತರವಾಗಿದ್ದರೂ ಅದು ನಮ್ಮ ಸಂಬಂಧದ ನಡುವೆ ಎಂದಿಗೂ ಬಂದಿಲ್ಲ ಎಂದು ತಿಳಿಸಿದರು.


ಕೆಲವು ದಿನಗಳ ಹಿಂದೆ ಅಬ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಅಮೀರಾ ಅವರ ಮುಖವನ್ನು ಬಹಿರಂಗಪಡಿಸಲಿಲ್ಲ, ಆದರೆ ಹೃದಯದ ಆಕಾರದ ವಜ್ರದ ಉಂಗುರದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸುದ್ದಿಯನ್ನು ಹಂಚಿಕೊಂಡ ಅವರು, “ಜುಲೈ 7 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸುವುದಾಗಿ ಹೇಳಿದ್ದು, ನನ್ನನ್ನು ಗೌರವಿಸುವ ಪ್ರೀತಿಯನ್ನು ಪಡೆಯುವ ಅದೃಷ್ಟಶಾಲಿ ಎಂದು ನಾನು ನನ್ನ ಜೀವನದಲ್ಲಿ ಎಂದಿಗೂ ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
T20 World Cup 2024
ಕ್ರೀಡೆ12 mins ago

T20 World Cup 2024: 20 ತಂಡಗಳ ಪೈಕಿ 19 ತಂಡ ಪ್ರಕಟ; ಪಾಕಿಸ್ತಾನ ಮಾತ್ರ ಬಾಕಿ

Job News
ಉದ್ಯೋಗ56 mins ago

Job News: ಅಟೆನ್ಷನ್‌ ಪ್ಲೀಸ್‌; ಸರ್ಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದು, ನಾಳೆ ಕೊನೆಯ ದಿನ

kurkure divorce viral news
ವೈರಲ್ ನ್ಯೂಸ್57 mins ago

Viral News: ಕುರ್ಕುರೆ ಪ್ಯಾಕ್‌ ತರದೇ ಹೋದ ಗಂಡನಿಗೆ ಡೈವೋರ್ಸ್!‌

Supriya Sule
ದೇಶ1 hour ago

Supriya Sule: ಇವಿಎಂ ಇದ್ದ ಸ್ಟ್ರಾಂಗ್‌ ರೂಂ ಸಿಸಿಟಿವಿ ಕ್ಯಾಮೆರಾ ಸ್ವಿಚ್‌ ಆಫ್‌; ಸುಪ್ರಿಯಾ ಸುಳೆ ಗಂಭೀರ ಆರೋಪ, EC ರಿಯಾಕ್ಟ್‌

Road Accident
ಕ್ರೈಂ1 hour ago

Road Accident: ಸ್ಕೂಟರ್‌ಗೆ ಟ್ರಕ್‌, ಲಾರಿಗೆ ಬಸ್‌, ಡಿವೈಡರ್‌ಗೆ ಕಾರು ಡಿಕ್ಕಿ; ಅಪಾಯದಿಂದ ಜಸ್ಟ್‌ ಮಿಸ್‌

HD Revanna released from jail Revanna Go straight to HD Deve Gowda house
ಕ್ರೈಂ2 hours ago

HD Revanna Released: ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು

Viral video
ವೈರಲ್ ನ್ಯೂಸ್2 hours ago

Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

Vaishnavi Gowda
ಕಿರುತೆರೆ2 hours ago

Vaishnavi Gowda: ನಟಿ ವೈಷ್ಣವಿ ಗೌಡಗೆ ನೋಟಿಸ್‌ ಕೊಟ್ಟ ಟ್ರಾಫಿಕ್‌ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

pm narendra modi nomination
ಪ್ರಮುಖ ಸುದ್ದಿ2 hours ago

PM Narendra Modi: ಪಿಎಂ ಮೋದಿ ನಾಮಪತ್ರ ಅನುಮೋದಿಸಿದ ನಾಲ್ವರ ಹಿನ್ನೆಲೆ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು4 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ10 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ20 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ21 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ21 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ21 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ22 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಟ್ರೆಂಡಿಂಗ್‌