Viral post | ಬೆಂಗಳೂರು ಆಟೋ ಡ್ರೈವರ್‌ ಟೆಕ್‌ ಜ್ಞಾನಕ್ಕೆ ಸಾಫ್ಟ್‌ವೇರ್‌ ಮಂದಿ ಫಿದಾ! - Vistara News

ವೈರಲ್ ನ್ಯೂಸ್

Viral post | ಬೆಂಗಳೂರು ಆಟೋ ಡ್ರೈವರ್‌ ಟೆಕ್‌ ಜ್ಞಾನಕ್ಕೆ ಸಾಫ್ಟ್‌ವೇರ್‌ ಮಂದಿ ಫಿದಾ!

ತನ್ನ ಆಟೋದಲ್ಲಿ ದುಬಾರಿ ಏರ್‌ಪಾಡ್‌ ಮರೆತು ಬಿಟ್ಟುಹೋದ ವ್ಯಕ್ತಿಯನ್ನು ಪತ್ತೆಹಚ್ಚಲು ಆಟೋ ಡ್ರೈವರ್‌ ಅನುಸರಿಸಿದ ಟೆಕ್‌ ಜ್ಞಾನವೇ ಈಗ ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

VISTARANEWS.COM


on

auto driver
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು ಹೇಳಿ ಕೇಳಿ ಐಟಿ ಸಿಟಿ. ಇಲ್ಲಿರುವ ಹಲವಾರು ಐಟಿ ಕಂಪೆನಿಗಳಿಂದಾಗಿ, ಸಾಫ್ಟ್‌ವೇರ್‌ ಜಗತ್ತಿನಿಂದಾಗಿ ಬೆಂಗಳೂರಿಗರೂ ಯಾವಾಗಲೂ ಟೆಕ್ನಾಲಜಿಯಲ್ಲೂ ಮುಂದು. ಇಂಥ ಟೆಕ್‌ ಸಿಟಿಯಲ್ಲೊಂದು ನಡೆದ ಘಟನೆಯೊಂದು ಇದೀಗ ಎಲ್ಲರ ಗಮನ ಸೆಳೆದಿದೆ. ಬೆಂಗಳೂರಿನ ಆಟೋವಾಲಾಗಳ ಬಗೆಗೆ ಯಾವಾಗಲೂ ಇರುವ ದೂರುಗಳಿಗೆ ವೈರುಧ್ಯದ ಕಥೆ ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಟೋ ಡ್ರೈವರ್‌ ಬಗೆಗೆ ಮೆಚ್ಚುಗೆಯ ನುಡಿಗಳು ಕೇಳಿ ಬರುತ್ತಿವೆ. ಜೊತೆಗೆ ಆಟೋ ಡ್ರೈವರುಗಳು ಇಂದು ಹೆಚ್ಚು ಹೆಚ್ಚು ಟೆಕ್ನಾಲಜಿಯ ಬಳಕೆಯ ಬಗ್ಗೆ ಅರಿವು ಹೊಂದುತ್ತಿರುವುದಕ್ಕೆ ಇದೊಂದು ಉದಾಹರಣೆಯಾಗಿಯೂ ನಿಂತಿದೆ.

ಶಿದಿಕಾ ಎಂಬ ಐಟಿ ಉದ್ಯೋಗಿ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಘಟನೆಯೊಂದರ ವಿವರವನ್ನು ಪೋಸ್ಟ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆಕೆಯ ಪೋಸ್ಟ್‌ ಪ್ರಕಾರ, ʻಆಟೋನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಾನು ನನ್ನ ಏರ್‌ಪಾಡ್‌ಗಳನ್ನು ಕಳೆದುಕೊಂಡೆ. ಅರ್ಧ ಗಂಟೆ ಬಳಿಕ ನನ್ನನ್ನು ಎಲ್ಲಿ ಬಿಟ್ಟಿದ್ದನೋ ಅಲ್ಲಿಗೆ ಬಂದ ನಾನು ಪ್ರಯಾಣಿಸಿದ ಆಟೋ ಡ್ರೈವರ್‌ ನನ್ನ ದುಬಾರಿ ಬೆಲೆಯ ಆಪಲ್‌ ಕಂಪನಿಯ ಏರ್‌ಪಾಡ್‌ಗಳನ್ನು ವಾಪಾಸ್‌ ಕೊಟ್ಟು ಹೋಗಿದ್ದಾನೆʼ ಎಂದು ಖುಷಿಯಿಂದ ತನ್ನ ಅನುಭವ ಹಂಚಿಕೊಂಡಿದ್ದಾರೆ.

ʻನಾನು ಕಚೇರಿ ತಲುಪಿ ಅರ್ಧ ಗಂಟೆ ಕಳೆದ ಮೇಲೆ ನನಗೆ ಸೆಕ್ಯೂರಿಟಿಯಿಂದ ಕರೆ ಬಂತು. ಏನೆಂದು ನೋಡಲು ಹೋದರೆ ನನಗೇ ಆಶ್ಚರ್ಯವಾಯ್ತು. ಯಾಕೆಂದರೆ ಆಟೋ ಡ್ರೈವರ್‌ ನಾನು ಕಳೆದುಕೊಂಡ ಏರ್‌ಪಾಡ್‌ ಕೊಟ್ಟು ಹೋಗಲು ಬಂದಿದ್ದರು. ನಿಜಕ್ಕೂ ಇದು ನನ್ನ ಬೆಂಗಳೂರು ದಿನಗಳ ಅತ್ಯಂತ ಖುಷಿಯ ದಿನಗಳುʼ ಎಂದಾಕೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Viral Video | ಬಾಲಿಯಲ್ಲಿ ಸಾಂಪ್ರದಾಯಿಕ ಸಂಗೀತ ಸಾಧನ ಬಾರಿಸಿದ ಮೋದಿ, ಇಲ್ಲಿದೆ ವಿಡಿಯೊ

ಕೇವಲ ಇಷ್ಟೇ ಆಗಿದ್ದರೆ, ಆಟೋ ಡ್ರೈವರ್‌ನ ಪ್ರಾಮಾಣಿಕತೆಯಷ್ಟೆ ಇಲ್ಲಿ ಮುಖ್ಯವಾಗಿ ಕಾಣುತ್ತಿತ್ತು. ಆದರೆ, ಪ್ರಾಮಾಣಿಕತೆಯ ಜೊತೆಗೆ ಆತ ಆಕೆಯ ಏರ್‌ಪಾಡ್‌ ಯಾರದ್ದೆಂದು ಕಂಡುಹಿಡಿಯಲು ಅನುಸರಿಸಿದ ತಂತ್ರ ಎಲ್ಲರನ್ನೂ ಸೆಳೆದಿದೆ. ಯಾಕೆಂದರೆ, ಆತನಿಗೂ ಈ ಏರ್‌ಪಾಡ್‌ ಯಾರದ್ದೆಂದು ಕಂಡುಹಿಡಿಯುವುದು ಸುಲಭವಾಗಿರಲಿಲ್ಲ. ಆತ ಇದನ್ನು ತನ್ನ ಫೋನ್‌ಗೆ ಕನೆಕ್ಟ್‌ ಮಾಡಿಕೊಂಡು ಹೆಸರಿನ ವಿವರ ತಿಳಿದುಕೊಂಡು, ತನ್ನ ಫೋನ್‌ಪೇ ವ್ಯವಹಾರಗಳ ಮೂಲಕ ಈಕೆಯ ಬಗೆಗೆ ತಿಳಿದುಕೊಂಡು ಕೊನೆಗೆ ಆಕೆಯ ಕಚೇರಿಗೆ ಬಂದು ಕೊಟ್ಟು ಹೋಗಿದ್ದಾರೆ ಎಂದು ಆಕೆ ವಿವರಿಸಿದ್ದಾರೆ.

ಸಂತೋಷದ ಕಣ್ಣೀರಿನ ಇಮೋಜಿ ಹಾಕಿಕೊಂಡು ಆಕೆ ಈ ವಿಚಾರವನ್ನು ಶೇರ್‌ ಮಾಡಿದ್ದು ಆಟೋ ರಿಕ್ಷಾ ಡ್ರೈವರ್‌ನ ಈ ನಡತೆಯಿಂದ ತನಗೆ ಹೃದಯ ತುಂಬಿ ಬಂದಿದೆ ಎಂದು ಹೇಳಿಕೊಂಡಿದ್ದಾಳೆ.

ಈಕೆಯ ಪೋಸ್ಟ್‌ಗೆ ಸಾವಿರಾರು ಮಂದಿ ಲೈಕ್‌ ಮಾಡಿದ್ದು ಕಾಮೆಂಟ್‌ ಕೂಡಾ ಮಾಡಿದ್ದಾರೆ. ಬಹಳಷ್ಟು ಮಂದಿ ಆಟೋ ರಿಕ್ಷಾ ಡ್ರೈವರನ ಟೆಕ್ನಾಲಜಿ ಬಳಕೆಯ ಜ್ಞಾನಕ್ಕೆ ಫಿದಾ ಆಗಿದ್ದಾರೆ. ಆತ ಇದು ಯಾರದ್ದು ಎಂದು ಕಂಡು ಹಿಡಿಯಲು ಮಾಡಿದ ತಂತ್ರಕ್ಕೆ ಮನಸೋತಿದ್ದಾರೆ. ಆಟೋ ಡ್ರೈವರ್‌ ಬಹಳ ಸ್ಮಾರ್ಟ್‌ ಎಂದು ಅನೇಕರು ಪ್ರತಿಕ್ರಿಯಿಸಿದ್ದು, ಕೆಲವರು ಬೆಂಗಳೂರಿನಲ್ಲಿ ಎಂಜಿನಿಯರ್‌ಗಳೂ ಟೆಕ್ನಾಲಜಿ ಪ್ರಿಯರೋ, ಅಥವಾ ಆಟೋವಾಲಾಗಳೋ ಎಂದಿದ್ದಾರೆ. ಇನ್ನೂ ಒಬ್ಬರು, ಬಹಳ ಸಾರಿ ನಮಗಿಂತ ಬೆಂಗಳೂರಿನ ಆಟೋವಾಲಾಗಳೇ ಟೆಕ್ನಾಲಜಿಯ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿದ್ದಾರೆ ಎಂದಿದ್ದಾರೆ. ಪ್ರಾಮಾಣಿಕತೆಯೊಂದಿಗೆ ಕಾಲಕ್ಕೆ ತಕ್ಕಂತೆ ಸ್ಮಾರ್ಟ್‌ ಆಗಿರುವ ಕಾರಣದಿಂದ ಬಹುಬೇಗನೆ ಕಳೆದ ವಸ್ತುವೂ ಮರಳಿ ಸಿಕ್ಕಿರುವುದು ಇಲ್ಲಿನ ವಿಶೇಷ.

ಬೆಂಗಳೂರಿನ ಆಟೋ ಡ್ರೈವರುಗಳ ಇಂಥ ಟೆಕ್‌ ಜ್ಞಾನ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಾ ಜನಮನ ಸೆಳೆಯುತ್ತಿರವುದು ವಿಶೇಷ.

ಇದನ್ನೂ ಓದಿ | Viral video | ಚಿಕಾಗೋನಲ್ಲಿ ಭಾರತೀಯನ ಮದುವೆಗೆ ಸೀರೆಯುಟ್ಟು ಬಿಂದಿಯಿಟ್ಟು ಬಂದ ಗೆಳೆಯರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

ಛತ್ತೀಸ್‌ಗಢದ ಬಲರಾಮ್‌ಪುರದಲ್ಲಿ ದುರ್ಗೇಶ್‌ ಪಾಂಡೆ ಎಂಬ 30 ವರ್ಷದ ವ್ಯಕ್ತಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆದ ಹಿನ್ನೆಲೆಯಲ್ಲಿ ದೇವಾಲಯ ತೆರಳಿ, ಕಾಳಿ ದೇವಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಬೆರಳು ಕತ್ತರಿಸಿಕೊಂಡ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಲೂ ಆತ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

VISTARANEWS.COM


on

Narendra Modi
Koo

ರಾಯ್‌ಪುರ: ಜಗತ್ತಿನಲ್ಲೇ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ಅನುಯಾಯಿಗಳು, ಹಿಂಬಾಲಕರು ಭಾರತದಲ್ಲಿಯೇ ಇರಬಹುದೇನೋ! ಅದರಲ್ಲೂ, ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ, ಆರಾಧಿಸುವ, ಅವರ ಪರವಾಗಿ ವಾದ ಮಾಡುವ, ಸಮಯ ಬಂದರೆ ಜಗಳಕ್ಕೂ ನಿಲ್ಲುವ ‘ಭಕ್ತರು’ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಛತ್ತೀಸ್‌ಗಢದಲ್ಲಿ (Chhattisgarh) ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ದೇವರಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಆ ಮೂಲಕ ಆತ ಅಭಿಮಾನ ಮೆರೆದಿದ್ದಾನೆ.

ಹೌದು, ಛತ್ತೀಸ್‌ಗಢದ ಬಲರಾಮ್‌ಪುರದಲ್ಲಿ ದುರ್ಗೇಶ್‌ ಪಾಂಡೆ ಎಂಬ 30 ವರ್ಷದ ವ್ಯಕ್ತಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆದ ಹಿನ್ನೆಲೆಯಲ್ಲಿ ದೇವಾಲಯ ತೆರಳಿ, ಕಾಳಿ ದೇವಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್‌ 4ರಂದೇ ಆತನು ಕಾಳಿ ದೇವಸ್ಥಾನಕ್ಕೆ ತೆರಳಿ, ತನ್ನ ಎಡಗೈ ಬೆರಳನ್ನು ಕತ್ತರಿಸಿ ದೇವತೆಗೆ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 290 ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರ ಖುಷಿ ತಾಳದೆ ಆತ ಬೆರಳು ಕತ್ತರಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ.

Lok Sabha Election 2024 PM Narendra Modi roadshow on April 14 route map is ready

ದೇವಸ್ಥಾನದಲ್ಲಿ ಬೆರಳು ಕತ್ತರಿಸಿಕೊಂಡ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿದೆ. ಇದರಿಂದ ಆತಂಕಕ್ಕೀಡಾದ ಕುಟುಂಬಸ್ಥರು ವ್ಯಕ್ತಿಯನ್ನು ಸಮಾರಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಹೋಗಿ ಎಂದು ಸೂಚಿಸಿದ್ದಾರೆ. ಅದರಂತೆ, ದುರ್ಗೇಶ್‌ ಪಾಂಡೆ ಅವರನ್ನು ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಿದ್ದಾರೆ. ಸದ್ಯ, ದುರ್ಗೇಶ್‌ ಪಾಂಡೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ನಾಳೆ ಮೋದಿ ಪ್ರಮಾಣವಚನ

ನರೇಂದ್ರ ಮೋದಿ ಅವರು ಭಾನುವಾರ (ಜೂನ್‌ 9) ಸಂಜೆ 7.15ಕ್ಕೆ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Mamata Banerjee: 15 ದಿನಗಳಲ್ಲೇ ಮೋದಿ ಸರ್ಕಾರ ಪತನ; ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ!

Continue Reading

ವೈರಲ್ ನ್ಯೂಸ್

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಹಣ ಹಿಂತಿರುಗಿಸಲು ತೆಲಂಗಾಣ ಸಿಎಂಗೆ ಪತ್ರ ಬರೆದ ಕನ್ನಡಿಗರು

Valmiki Corporation Scam: ನಿಮ್ಮ ನಾಯಕ ರಾಹುಲ್ ಗಾಂಧಿ ಆಣತಿಯಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಹಣ ಸಾಗಿಸಿದೆ. ಹೀಗಾಗಿ ಹಣವನ್ನು ಹಿಂತಿರುಗಿಸಬೇಕು ಎಂದು ಪತ್ರದಲ್ಲಿ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಗೆ ಮನವಿ ಮಾಡಲಾಗಿದೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ (Valmiki Corporation Scam) ಕೋಟ್ಯಂತರ ರೂಪಾಯಿ ತೆಲಂಗಾಣ ಕಂಪನಿಗಳಿಗೆ ವರ್ಗಾವಣೆಯಾಗಿದೆ ಎಂಬ ಆರೋಪಗಳು ಕೇಳಿಬಂದಿರುವುದರಿಂದ ಹಣ ವಾಪಸ್ ನೀಡುವಂತೆ ನೆರೆ ರಾಜ್ಯದ ಸಿಎಂಗೆ ಕನ್ನಡಿಗರು ಪತ್ರ ಬರೆದಿರುವುದು ಕಂಡುಬಂದಿದೆ. ಕರ್ನಾಟಕದ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಲಾಗಿದೆ. ಹೀಗಾಗಿ ಅಕ್ರಮವಾಗಿ ವರ್ಗಾವಣೆಯಾದ ಹಣವನ್ನು ಹಿಂತಿರುಗಿಸಬೇಕು ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರಿಗೆ ಮನವಿ ಮಾಡಲಾಗಿದೆ.

ತೆಲಂಗಾಣ ಸಿಎಂಗೆ ಕನ್ನಡಿಗರ ಹೆಸರಿನಲ್ಲಿ ಪತ್ರ ಬರೆದಿರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್‌ ಹಂಚಿಕೊಂಡಿದೆ. ಕರ್ನಾಟಕದ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾಗಿದ್ದ ಸುಮಾರು 187 ಕೋಟಿ ರೂ. ಹಣವನ್ನು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಆಣತಿಯಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಸಚಿವ ನಾಗೇಂದ್ರ ಅವರ ಮೂಲಕ ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಸಾಗಿಸಿದ್ದಾರೆ.

ಇದನ್ನೂ ಓದಿ | Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

ನಿಮ್ಮಲ್ಲಿ ಕನ್ನಡಿಗರು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂತಿರುಗಿಸಿ ಕೊಡಿ. ಈ ಹಣ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಬಳಕೆ ಆಗಬೇಕಿತ್ತು ಈ ನೀಚ ಸರ್ಕಾರ ಉಂಡು ಹೋದ ಕೊಂಡು ಹೋದ ಎಂಬಂತೆ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಲೂಟಿ ಹೊಡೆದದ್ದಲ್ಲದೆ, ಮಿಕ್ಕ ಹಣವನ್ನೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಖರ್ಚಿಗೆ ಸಾಗಿಸಿದ್ದಾರೆ.

ಗುಂಡಿಗೆ ಹೋದ ಹೆಣ, ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ನಮಗೆ ತಿಳಿದಿದೆ ಆದ್ರೆ ಕೊನೆ ಪ್ರಯತ್ನವಾಗಿ ನಿಮ್ಮಲ್ಲಿ ಈ ಮನವಿ ಮಾಡುತ್ತಿದ್ದೇವೆ, ಹಣ ಹಿಂತಿರುಗಿಸಿ ವಿಶ್ವಾಸ ಉಳಿಸಿಕೊಳ್ಳಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ | ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣದಲ್ಲಿ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಹೆಸರು; ಡಾ. ಜಿ.ಪರಮೇಶ್ವರ್‌ ಹೇಳಿದ್ದೇನು?

ತೆಲಂಗಾಣ ಸಹಕಾರ ಬ್ಯಾಂಕ್‌ ಅಧ್ಯಕ್ಷನನ್ನು ಬಂಧಿಸಿದ್ದ ಎಸ್‌ಐಟಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಸಹಕಾರ ಬ್ಯಾಂಕ್‌ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಎಂಬುವವರನ್ನು ಸಿಐಡಿ ಎಸ್‌ಐಟಿ ಜೂನ್‌ 4ರಂದು ಬಂಧಿಸಿತ್ತು. ಆರೋಪಿ ಸತ್ಯನಾರಾಯಣ ಹೈದರಾಬಾದ್‌ನ ನಲ್ಲಕುಂಟ ಪ್ರದೇಶದಲ್ಲಿರುವ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕರಾಗಿದ್ದಾರೆ.

ವಾಲ್ಮೀಕಿ ನಿಗಮದ 94.73 ಕೋಟಿ ರೂ. ಅಕ್ರಮ ವರ್ಗಾವಣೆಯಲ್ಲಿ ಸತ್ಯನಾರಾಯಣ ಪ್ರಧಾನ ಸೂತ್ರಧಾರ ಆರೋಪಿಯಾಗಿದ್ದಾರೆ. ಯೂನಿಯನ್‌ ಬ್ಯಾಂಕ್‌ನಲ್ಲಿರುವ ವಾಲ್ಮೀಕಿ ನಿಗಮದ ಖಾತೆಯಿಂದ 18 ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಆಗಿತ್ತು. ತನಿಖೆ ವೇಳೆ ಫೈನಾನ್ಸ್‌ ಕಂಪನಿ ಸತ್ಯನಾರಾಯಣ ಅವರೇ 18 ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಹೀಗಾಗಿ ಅವರನ್ನು ಎಸ್‌ಐಟಿ ಬಂಧಿಸಿತ್ತು.

Continue Reading

ವೈರಲ್ ನ್ಯೂಸ್

Viral Video: ಹೊಟೇಲ್‌ ಮಾಲೀಕನನ್ನು ಮುಖಾಮೂತಿ ನೋಡದೆ ಚಚ್ಚಿದ ಶಾಸಕ; ವಿಡಿಯೋ ಫುಲ್‌ ವೈರಲ್‌

Viral Video:ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ಮಾಜಿ ನಟ, ಟಿಎಂಸಿ ಶಾಸಕ ಸೋಹಮ್‌ ಚಕ್ರವರ್ತಿ ರೆಸ್ಟೋರೆಂಟ್‌ ಮಾಲಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಲ್ಕತ್ತಾ ಡಿಲೈಟ್‌ ಎಂಬ ರೆಸ್ಟೋರೆಂಟ್‌ ಮಾಲೀಕ ಅನಿಸುರ್‌ ಆಲಂ ಮತ್ತು ಶಾಸಕ ಸೋಹಮ್‌ ನಡುವೆ ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಈ ವೇಳೆ ಆಲಂ ಟಿಎಂಸಿ ಪಕ್ಷ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂಬ ಕಾರಣಕ್ಕೆ ಸೋಹಮ್‌ ಆತನಿಗೆ ಕಪಾಳ ಮೋಕ್ಷ ಮಾಡಿ ಥಳಿಸಿದ್ದಾರೆ.

VISTARANEWS.COM


on

Viral Video
Koo

ಕೋಲ್ಕತ್ತಾ: ಎರಡು ದಿನಗಳ ಹಿಂದೆ ಭದ್ರತಾ ಸಿಬ್ಬಂದಿ ನೂತನ ಸಂಸದೆ ಕಂಗನಾ ರಣಾವತ್‌(Kangana Ranaut)ಗೆ ಕಪಾಳಮೋಕ್ಷ ಮಾಡಿರುವ ಸುದ್ದಿ ಮಾಸುವ ಮುನ್ನವೇ ಶಾಸಕನೋರ್ವ ಇದೀಗ ಸುದ್ದಿಯಾಗಿದ್ದಾರೆ. ಪಶ್ಚಿಮ ಬಂಗಾಳ(West Bengal)ದ ತೃಣಮೂಲ ಕಾಂಗ್ರೆಸ್‌(TMC) ಶಾಸಕ ರೆಸ್ಟೋರೆಂಟ್‌ವೊಂದರ ಮಾಲಿಕರಿಗೆ ಕಪಾಳಮೋಕ್ಷ ಮಾಡುವ ಮೂಲಕ ದಾಂಧಲೆ ಎಬ್ಬಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌(Viral Video) ಆಗುತ್ತಿದೆ.

ವೈರಲ್‌ ವಿಡಿಯೋದಲ್ಲೇನಿದೆ?

ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ನಟ, ಟಿಎಂಸಿ ಶಾಸಕ ಸೋಹಮ್‌ ಚಕ್ರವರ್ತಿ ರೆಸ್ಟೋರೆಂಟ್‌ ಮಾಲಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಲ್ಕತ್ತಾ ಡಿಲೈಟ್‌ ಎಂಬ ರೆಸ್ಟೋರೆಂಟ್‌ ಮಾಲೀಕ ಅನಿಸುರ್‌ ಆಲಂ ಮತ್ತು ಶಾಸಕ ಸೋಹಮ್‌ ನಡುವೆ ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಈ ವೇಳೆ ಆಲಂ ಟಿಎಂಸಿ ಪಕ್ಷ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂಬ ಕಾರಣಕ್ಕೆ ಸೋಹಮ್‌ ಆತನಿಗೆ ಕಪಾಳ ಮೋಕ್ಷ ಮಾಡಿ ಥಳಿಸಿದ್ದಾರೆ.

ನ್ಯೂಟೌನ್ ಪ್ರದೇಶದಲ್ಲಿರುವ ಈ ಕೋಲ್ಕತ್ತಾ ಡಿಲೈಟ್‌ ರೆಸ್ಟೋರೆಂಟ್‌ನ ಪಾರ್ಕಿಂಗ್‌ ಪ್ರದೇಶದಲ್ಲಿ ಶಾಸಕರ ಬೆಂಬಲಿಗನೊಬ್ಬ ತನ್ನ ವಾಹನ ನಿಲ್ಲಿಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಲಂ ಆ ವಅಹನವನ್ನು ತೆರವುಗೊಳಿಸುವಂತೆ ಹಾಗೂ ಅದು ತಮ್ಮ ಗ್ರಾಹಕರಿಗೆ ಮೀಸಲಿಟ್ಟಿರುವ ಪಾರ್ಕಿಂಗ್‌ ಜಾಗ ಎಂದು ಹೇಳಿದ್ದ. ಆಗ ಆತ ತಾನು ಶಾಸಕನ ಸ್ನೇಹಿತ ಎಂದು ಹೇಳಿದ್ದಾನೆ. ಅದಕ್ಕೆ ಆಲಂ ನೀನು ಯಾರಾದರೆ ನನಗೇನು? ಪ್ರಧಾನಿಯ ಸ್ನೇಹಿತನಾಗಿದ್ದರೂ ವಾಹನ ತೆರವುಗೊಳಿಸಲೇಬೇಕು ಎಂದು ಹೇಳಿದ್ದಾನೆ. ಆಗ ಸ್ಥಳಕ್ಕೆ ಬಂದ ಶಾಸಕ ಸೋಹಮ್‌ ಆಲಂ ಮುಖಾಮೂತಿ ನೋಡದೇ ಚಚ್ಚಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವಸೋಹಮ್‌, ರೆಸ್ಟೋರೆಂಟ್‌ ಮಾಲೀಕನ ಮೇಲೆ ಹಲ್ಲೆ ನಡೆಸಿರುವುದು ನಿಜ. ಕೆಳಗೆ ಮಾರಾಮಾರಿ ಸದ್ದು ಕೇಳಿ ಧಾವಿಸಿ ಬಂದೆ. ಮಾಲೀಕರು ನನ್ನ ಸಿಬ್ಬಂದಿಯನ್ನು ನಿಂದಿಸುತ್ತಿರುವುದನ್ನು ನಾನು ನೋಡಿದೆ. ಅವರು ನನ್ನನ್ನು ಮತ್ತು ಅಭಿಷೇಕ್ ಬ್ಯಾನರ್ಜಿಯನ್ನು ನಿಂದಿಸಿದ್ದಾರೆ. ನಾನು ನನ್ನ ತಾಳ್ಮೆ ಕಳೆದುಕೊಂಡೆ ಮತ್ತು ಅವನಿಗೆ ಕಪಾಳಮೋಕ್ಷ ಮಾಡಿದ್ದೇನೆ ಎಂದು ಹೇಳಿದರು.

ಇನ್ನು ಸೋಹಮ್‌ ಒಬ್ಬ ಸೋಶಿಯಲ್‌ ಮೀಡಿಯಾ ಇನ್‌ಫ್ಲೂವೆನ್ಶಿಯಲ್‌. ಅವರು ಶೂಟಿಂಗ್‌ಗಾಗಿ ಹೊಟೇಲ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಹೆಚ್ಚುವರಿ ಕಾರುಗಳನ್ನು ತೆಗೆಯುವಂತೆ ಆಲಂ ಹೇಳಿದ ನಂತರ ಸೋಹಮ್ ನಮ್ಮ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಸೆಕ್ಯುರಿಟಿಯವರು ಕೂಡ ನಮ್ಮನ್ನು ಥಳಿಸಿದ್ದಾರೆ. ನಾವು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೊಟೇಲ್‌ ಮ್ಯನೇಜರ್‌ ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಪ್ರಮಾಣವಚನಕ್ಕೆ 7 ವಿದೇಶಿ ನಾಯಕರು; 8000 ಅತಿಥಿಗಳು

Continue Reading

ಚಾಮರಾಜನಗರ

Self Harming : ಮಗಳ ನಗ್ನ ಫೋಟೊ ತೋರಿಸಿ ಪ್ರಿಯಕರ ಬ್ಲ್ಯಾಕ್‌ಮೇಲ್‌; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಕುಟುಂಬಸ್ಥರು

Self Harming : ದುಷ್ಟನೊಬ್ಬ ಮಗಳ ನಗ್ನ ಫೋಟೋ ತೋರಿಸಿ ಬೆದರಿಸುತ್ತಿದ್ದ ಎಂದು ಹೆದರಿ ಮರ್ಯಾದೆಗೆ ಅಂಜಿದ ಕುಟುಂಬವೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಕುಟುಂಬದ ಯಜಮಾನ ಮೃತಪಟ್ಟರೆ, ಉಳಿದ ಮೂವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

VISTARANEWS.COM


on

By

Self Harming
Koo

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ (MM Hills) ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ (Self Harming) ಯತ್ನಿಸಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಚಂದಗಾಲು ಗ್ರಾಮದ ಮಹದೇವನಾಯಕ (65) ಅವರ ಪುತ್ರಿ ರಿಷಿಕಾ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಇತ್ತೀಚೆಗೆ ಆತನಿಂದ ಅಂತರ ಕಾಯ್ದುಕೊಂಡಾಗ ರಿಷಿಕಾಳ ಜತೆಗಿದ್ದ ನಗ್ನ ವಿಡಿಯೊ ಹಾಗೂ ಫೋಟೋ ಇಟ್ಟುಕೊಂಡು ಬೆದರಿಕೆ (Black mail Case) ಹಾಕುತ್ತಿದ್ದ ಎನ್ನಲಾಗಿದೆ.

ಈ ವಿಚಾರವಾಗಿ ಅನೇಕ ಬಾರಿ ಯುವಕನ ಹಾಗು ರಿಷಿಕಾ ಕುಟುಂಬದ ಜತೆ ಗಲಾಟೆ ಸಹ ಆಗಿದೆ. ಈತನ ಕಾಟಕ್ಕೆ ಬೇಸತ್ತ ಕುಟುಂಬ, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ವಿಷ ಸೇವಿಸಿ ಅಸ್ವಸ್ಥಳಾಗಿದ್ದ ರಿಷಿಕಾಳನ್ನು ಹನೂರು ತಾಲೂಕಿನ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ತಾಯಿ ಗೌರಮ್ಮ ಹಾಗೂ ಲೀಲಾವತಿಗೆ ಹೆಚ್ಚಿನ ಚಿಕಿತ್ಸೆಗೆಂದು ಕೊಳ್ಳೇಗಾಲದಿಂದ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯಲ್ಲಿ ರಿಷಿಕಾ ತಂದೆ ಮಹದೇವನಾಯಕ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Love‌ Torture : ಪ್ರೀತ್ಸೆ ಅಂತ ಪ್ರಾಣ ತಿಂದ; ಒಪ್ಪದೇ ಇದ್ದಾಗ ಯುವತಿಯ ಖಾಸಗಿ ಫೋಟೋ ಹರಿಬಿಟ್ಟ ಪಾಗಲ್‌ ಪ್ರೇಮಿ

MM Hills

ಮಾದಪ್ಪನ ದರ್ಶನ ಮಾಡಿ ವಿಷ ಸೇವಿಸಿದ ಕುಟುಂಬ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ನಾಲ್ವರು ವಿಷ ಸೇವಿಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟರೆ, ಮೂವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮಲೆಮಹದೇಶ್ವರ ಬೆಟ್ಟ (MM Hills) ವ್ಯಾಪ್ತಿಯ ತಾಳಬೆಟ್ಟದಲ್ಲಿ ಘಟನೆ ನಡೆದಿತ್ತು.

ಚಂದಗಾಲು ಗ್ರಾಮದ ಮಹದೇವನಾಯಕ (65) ಮೃತ ದುರ್ದೈವಿ. ಅಸ್ವಸ್ಥಗೊಂಡ ಮಹದೇವನಾಯಕನ ಪತ್ನಿ ಗೌರಮ್ಮ(60), ರಿಷಿತಾ (21), ಲೀಲಾವತಿ (45) ಎಂಬುವವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮೈಸೂರಿನ ಕೆಆರ್‌ನಗರ ತಾಲೂಕಿನ ಚಂದಗಾಲು ಗ್ರಾಮಸ್ಥರು ಎಂದು ತಿಳಿದು ಬಂದಿದೆ.

ಮಹದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹದೇವನಾಯಕ ವಿಷ ಸೇವಿಸಿದ ಕೂಡಲೇ ಒದ್ದಾಡಿ ಮೃತಪಟ್ಟಿದ್ದಾರೆ. ಇತ್ತ ಗೌರಮ್ಮ, ಲೀಲಾವತಿ, ರಿಷಿತಾ ವಿಷ ಸೇವನೆ ಮಾಡಿದ್ದಾರೆ. ಆದರೆ ದೇಹದಲ್ಲಿ ಉರಿ ಕಾಣಿಸಿಕೊಂಡು ಜೋರಾಗಿ ಕೂಗಿಕೊಂಡು ನರಳಾಡಿದ್ದಾರೆ.

ಈ ವೇಳೆ ತಾಳ ಬೆಟ್ಟದಲ್ಲಿದ್ದ ಸ್ಥಳೀಯರು ಪರಿಶೀಲನೆ ನಡೆಸಿದಾಗ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಕಂಡು ಬಂದಿದೆ. ಕೂಡಲೇ ಅಲ್ಲಿದ್ದವರು ನಾಲ್ವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಹದೇವನಾಯಕರಿಗೆ ವಿಷ ದೇಹದೊಳಗೆ ಸೇರಿದ್ದರಿಂದ ಅದಾಗಲೇ ಉಸಿರು ಚೆಲ್ಲಿದ್ದರು. ಸದ್ಯ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Narendra Modi
ದೇಶ6 seconds ago

Narendra Modi: ಮೋದಿ ಪ್ರಮಾಣವಚನ; ಇಂದಿನ ಕಾರ್ಯಕ್ರಮ ಏನೇನು? ಹೇಗಿದೆ ಭದ್ರತೆ, ಸಿದ್ಧತೆ?

Narendra Modi
ದೇಶ30 mins ago

Narendra Modi: 3ನೇ ಬಾರಿ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವಗುರುತನಕದ ಜೀವನ ಚಿತ್ರಣ

5:2 Diet
ಆರೋಗ್ಯ31 mins ago

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

IND vs PAK
ಕ್ರೀಡೆ1 hour ago

IND vs PAK: ಇಂದು ಇಂಡೋ-ಪಾಕ್​ ರೋಚಕ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಭಾರತ

Dina Bhavishya
ಭವಿಷ್ಯ2 hours ago

Dina Bhavishya : ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಇರಲಿ ಎಚ್ಚರಿಕೆ

NED vs RSA
T20 ವಿಶ್ವಕಪ್7 hours ago

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

Karnataka police
ಕರ್ನಾಟಕ9 hours ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

French Open Final 2024
ಪ್ರಮುಖ ಸುದ್ದಿ9 hours ago

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

Govt Employees
ಕರ್ನಾಟಕ9 hours ago

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Kisan Samman Nidhi
ಪ್ರಮುಖ ಸುದ್ದಿ9 hours ago

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌