Viral Story: ಬ್ರೇಕಪ್‌ ನಂತರ ಮರಳಿ ಬಾ ಎಂದು ಹುಡುಗಿಗಾಗಿ ಮಂಡಿಯೂರಿ 21 ಗಂಟೆ ಕಾಲ ಚಳಿಮಳೆಯಲ್ಲಿ ಕಾದ ಯುವಕ! - Vistara News

ವೈರಲ್ ನ್ಯೂಸ್

Viral Story: ಬ್ರೇಕಪ್‌ ನಂತರ ಮರಳಿ ಬಾ ಎಂದು ಹುಡುಗಿಗಾಗಿ ಮಂಡಿಯೂರಿ 21 ಗಂಟೆ ಕಾಲ ಚಳಿಮಳೆಯಲ್ಲಿ ಕಾದ ಯುವಕ!

ಇಲ್ಲೊಬ್ಬ ಚೀನೀ ಯುವಕ ತನ್ನ ಪ್ರೀತಿಗಾಗಿ ಏನು ಮಾಡಲೂ ಸಿದ್ಧ ಎಂಬುದನ್ನು ಮಾಡಿ ತೋರಿಸಿದ್ದಾನೆ. 21 ಗಂಟೆಗಳ ಕಾಲ ಮೊಣಕಾಲಿನ ಮೇಲೆ ಮಳೆಯಲ್ಲೇ ನಿಂತು ತನ್ನ ಹುಡುಗಿಯ ಬಳಿ ಬಿಟ್ಟು ಹೋಗಬೇಡ ಎಂದು ಮೌನವಾಗಿ ಗೋಗರೆದಿದ್ದಾನೆ. ಅವನ ತಪಸ್ಸು ಫಲಿಸಿತೇ?

VISTARANEWS.COM


on

love failure
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರೀತಿ ಎಂಬ ಮಾಯೆಯಲ್ಲಿ ಬಿದ್ದವರಿಗೆ ದೂರವಾಗುವ ನೋವು ಗೊತ್ತಿರುತ್ತದೆ. ಇಬ್ಬರೂ ಸೇರಿ ನಿರ್ಧರಿಸಿದ್ದೇ ಇರಬಹುದು ಅಥವಾ ಕೆಲವು ಘಟನೆಗಳು ಇಬ್ಬರನ್ನು ದೂರಾಗಿಸಿದ್ದಿರಬಹುದು, ಏನೇ ಇರಲಿ, ದೂರವಾಗುವುದೆಂದರೆ ನೋವಿನ ವಿಚಾರವೇ. ಪ್ರೀತಿಸಿದ ವ್ಯಕ್ತಿ ತನ್ನ ಜೀವನವನ್ನು ರೂಪಿಸಿಕೊಳ್ಳಲು ಬಿಟ್ಟು ತಾನು ತನ್ನ ದಾರಿ ಹಿಡಿಯುವುದು ಕೂಡಾ ಸಂಕಟವೇ. ಈ ನೋವಿನಿಂದ ಹೊರಬರಲು ಎಲ್ಲರಿಗೂ ಒಂದಿಷ್ಟು ಕಾಲ ಬೇಕಾಗುತ್ತದೆ. ಆದರೆ ಚೀನಾದಲ್ಲಿ ಯಾವುದೋ ಮನಸ್ತಾಪದಿಂದ ತನ್ನ ಪ್ರೀತಿಗೆ ಗುಡ್‌ಬೈ ಹೇಳಿ ಹೋದ ತನ್ನ ಪ್ರಿಯತಮೆಯನ್ನು ಬಿಡಲಾಗದೆ, ಆಕೆಯ ಬಳಿ ಕ್ಷಮೆ ಕೋರಿ ಯುವಕನೊಬ್ಬ ತಪಸ್ಸನ್ನೇ ಮಾಡಿದ್ದಾನೆ!

ಹೌದು, ಈ ಕಲಿಯುಗದಲ್ಲೂ ತಪಸ್ಸೇ ಎಂದು ಹುಬ್ಬೇರಿಸಬೇಡಿ. ಈಗ ಪ್ರೀತಿ ಗೀತಿಗೆಲ್ಲ ಹೆಚ್ಚು ಅರ್ಥವಿಲ್ಲ ಎಂದು ಸಿನಿಕತನದ ಮಾತಾಡಬೇಡಿ. ಇಲ್ಲೊಬ್ಬ ಚೀನೀ ಯುವಕ ತನ್ನ ಪ್ರೀತಿಗಾಗಿ ಏನು ಮಾಡಲೂ ಸಿದ್ಧ ಎಂಬುದನ್ನು ಮಾಡಿ ತೋರಿಸಿದ್ದಾನೆ. 21 ಗಂಟೆಗಳ ಕಾಲ ಮೊಣಕಾಲಿನ ಮೇಲೆ ಮಳೆಯಲ್ಲೇ ನಿಂತು ತನ್ನ ಹುಡುಗಿಯ ಬಳಿ ಬಿಟ್ಟು ಹೋಗಬೇಡ ಎಂದು ಮೌನವಾಗಿ ಗೋಗರೆದಿದ್ದಾನೆ. ಆದರೂ ಅವನ ತಪಸ್ಸು ಫಲಿಸಿಲ್ಲ. ಆತನ ಹುಡುಗಿ ಮರಳಲಿಲ್ಲ.

ಡಾಝೋ ಎಂಬಲ್ಲಿನ ಕಟ್ಟಡವೊಂದರ ಹೊರಗಡೆ ಈತ 21 ಗಂಟೆಗಳ ಕಾಲ ಚಳಿ ಮಳೆಯೆನ್ನದೆ ಮೊಣಕಾಲೂರಿ ತನ್ನ ಬಿಟ್ಟುಹೋದ ಹುಡುಗಿಗಾಗಿ ಹೂಗುಚ್ಛವನ್ನು ಹಿಡಿದು ಯುವಕನೊಬ್ಬ ಕಾದಿದ್ದು ಇದೀಗ ಭಾರೀ ಸುದ್ದಿಯಾಗಿದೆ. ಮಾರ್ಚ್‌ 28ರಂದು ಮಧ್ಯಾಹ್ನ ಒಂದು ಗಂಟೆಗೆ ಹೀಗೆ ಕೂತವನು ಮಾರನೇ ದಿನ 10 ಗಂಟೆಯವರೆಗೆ ಅದೇ ಭಂಗಿಯಲ್ಲಿ ಮೊಣಕಾಲಿನಲ್ಲೇ ನಿಂತಿದ್ದಾನೆ. ತನ್ನ ಹುಡುಗಿ ಮನಸ್ಸು ಬದಲಾಯಿಸಿ ಮತ್ತೆ ತನ್ನ ಬಳಿಗೆ ಬಂದೇ ಬರುತ್ತಾಳೆ ಎಂಬ ನಂಬಿಕೆಯಲ್ಲಿ ಈತ ಕಾದಿದ್ದನಂತೆ!

ಇದನ್ನೂ ಓದಿ: Viral Science: ಪುರುಷರ ಆಯುಸ್ಸು 141 ವರ್ಷಗಳಾದರೆ, ಮಹಿಳೆಯರದ್ದು 130 ವರ್ಷವಂತೆ!

ಈತನ ಈ ಅವತಾರ ನೋಡಿ ಸುತ್ತಮುತ್ತಲ ಜನರೆಲ್ಲ ಈತನ ಬಳಿ ನೆರೆದಿದ್ದಾರೆ. ಇಂತಹ ಕೆಲಸ ಎಲ್ಲ ಮಾಡಬೇಡ ಎಂದು ಕಿವಿ ಮಾತು ಹೇಳಿದ್ದಾರೆ. ಆದರೂ ಆತ ತನ್ನ ಪ್ರಯತ್ನ ಬಿಡಲು ಒಪ್ಪಲೇ ಇಲ್ಲ. ಬಹಳಷ್ಟು ಮಂದಿ ಈತನ ಜೊತೆ ಮಾತನಾಡಿ, ಮಂಡಿಯೂರಿ ಇಷ್ಟೆಲ್ಲ ಪ್ರಯತ್ನ ಮಾಡಬೇಡ. ನಿಮ್ಮ ಹುಡುಗಿ ಈ ಕಡೆ ತಿರುಗಿ ನೋಡೂ ಇಲ್ಲ. ನೀವು ಸುಮ್ಮನೆ ಇಲ್ಲಿ ಹೀಗೆಲ್ಲ ಕಷ್ಟಪಟ್ಟಿದ್ದಕ್ಕೆ ಕನಿಷ್ಟ ಗೌರವವೂ ಆಕೆ ಕೊಡುವುದಿಲ್ಲ ಎಂದಾದ ಮೇಲೆ ಹೀಗೆಲ್ಲ ಮಾಡಿ ಫಲವೇನು ಎಂದು ಈತನಿಗೆ ಕೆಲವರು ಸ್ಥಳದಲ್ಲಿ ಬುದ್ಧಿವಾದ ಹೇಳಿದ್ದಾರೆ. ಆದರೆ ಆತ ಯಾರ ಬುದ್ಧಿ ಮಾತಿಗೂ ಕಿವಿ ಕೊಡದೆ ಏಕೋಧ್ಯಾನದಲ್ಲಿ ಹೂಗುಚ್ಛ ಹಿಡಿದು ಮಂಡಿಯೂರಿ ಚಳಿ ಮಳೆಯೆನ್ನದೆ 21 ಗಂಟೆಗಳ ಕಾಲ ನಿಂತಿದ್ದಾನೆ. ಇಷ್ಟೆಲ್ಲ ಆದರೂ ಆತನ ಹುಡುಗಿ ಆತನೆಡೆಗೆ ನೋಡಲೂ ಇಲ್ಲವಂತೆ.

ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದರಿತ ಜನರು ಈ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಆದರೆ, ಪೊಲೀಸರ ಮನವಿಗೂ ಈತ ಜಗ್ಗಲಿಲ್ಲ. ಇವನ್ನೆಲ್ಲ ಬಿಟ್ಟುಬಿಡಿ ಎಂದ ಪೊಲೀಸರ ಬಳಿ ಈತ, ನನ್ನ ಈ ಕೆಲಸ ಅಪರಾಧವೇ? ಅಪರಾಧವಲ್ಲ ಎಂದರೆ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಎಂದಿದ್ದನಂತೆ.

ಈತ ಹಾಗೂ ಈತನ ಗರ್ಲ್‌ ಫ್ರೆಂಡ್‌ ಕೆಲವು ದಿನಗಳ ಹಿಂದಷ್ಟೇ ಯಾವುದೋ ಮನಸ್ತಾಪಕ್ಕೆ ಬ್ರೇಕಪ್‌ ಮಾಡಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಆತ ಆಕೆಯ ಬಳಿ ತನ್ನನ್ನು ಕ್ಷಮಿಸಿ ಮತ್ತೆ ಬಾ ಎಂದು ಹೂಗುಚ್ಛ ಹಿಡಿದು ಮಂಡಿಯೂರಿ 21 ಗಂಟೆಗಳ ಕಾಲ ನಿಂತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಆದರೆ, ಚಳಿ, ಮಳೆಯ ಕಾರಣದಿಂದ ಈತನಿಗೆ ಹೆಚ್ಚು ಹೊತ್ತು ನಿಲ್ಲಲಾಗದೆ, ವಾಪಾಸು ಮರಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: Viral Video: ಬಿಜೆಪಿ ಶಾಸಕನನ್ನು ಎತ್ತಿಕೊಂಡು ಹೋಗಿ, ವಿಧಾನಸಭೆಯ ಹೊರಗೆ ಬಿಟ್ಟ ಮಾರ್ಷಲ್​​ಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಛೇ..ಇವನೆಂಥಾ ಪಾಪಿ..! ನಾಯಿ ಮೇಲೆ ಪದೇ ಪದೇ ಹಲ್ಲೆ ನಡೆಸಿ ವಿಕೃತಿ

Viral Video:ಗೋಲ್ಡನ್‌ ರಿಟ್ರೀವರ್‌ ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ವ್ಯಕ್ತಿಯೊಬ್ಬ ಲಿಫ್ಟ್‌ನಲ್ಲಿ ನಾಯಿಯ ಮುಖಕ್ಕೆ ಪದೇ ಪದೇ ಕೈಯಲ್ಲಿದ್ದ ಕೋಲಿನಂತಹ ಸಾಧನದಿಂದ ಹೊಡೆದಿದ್ದಾರೆ. ಬಳಿಕ ಕೈಯಿಂದಲೂ ನಾಯಿ ಬೆನ್ನಿಗೂ ಏಟು ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನಾಯಿಯ ಮಾಲೀಕರು ಯಾವುದೇ ದೂರು ನೀಡಿಲ್ಲ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆತ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿಲ್ಲ.

VISTARANEWS.COM


on

Viral Video
Koo

ಗುರುಗ್ರಾಮ: ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ಕೆಲಸದವನು ಅದರ ಮೇಲೆ ಮಾರಣಾಂತಿಕ ಹಲ್ಲೆ(Thrashing pet) ನಡೆಸಿರುವ ಘಟನೆ ಗುರುಗ್ರಾಮ(Gurugram)ದಲ್ಲಿ ನಡೆದಿದೆ. ಅಪಾರ್ಟ್‌ಮೆಂಟ್‌ನ ಲಿಫ್ಟ್‌ವೊಂದರಲ್ಲಿ ಈ ಭೀಕರ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಕಿಡಿಗೇಡಿಯ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.

ಆರ್ಚಿಡ್‌ ಗಾರ್ಡನ್ಸ್‌ ಸೊಸೈಟಿಯ ಸೆಕ್ಟರ್‌ 54ರಲ್ಲಿ ಈ ಘಟನೆ ನಡೆದಿದ್ದು, ಗೋಲ್ಡನ್‌ ರಿಟ್ರೀವರ್‌ ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ವ್ಯಕ್ತಿಯೊಬ್ಬ ಲಿಫ್ಟ್‌ನಲ್ಲಿ ನಾಯಿಯ ಮುಖಕ್ಕೆ ಪದೇ ಪದೇ ಕೈಯಲ್ಲಿದ್ದ ಕೋಲಿನಂತಹ ಸಾಧನದಿಂದ ಹೊಡೆದಿದ್ದಾರೆ. ಬಳಿಕ ಕೈಯಿಂದಲೂ ನಾಯಿ ಬೆನ್ನಿಗೂ ಏಟು ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನಾಯಿಯ ಮಾಲೀಕರು ಯಾವುದೇ ದೂರು ನೀಡಿಲ್ಲ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆತ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ:Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

ಇಂತಹದ್ದೇ ಒಂದು ಘಟನೆ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿತ್ತು. ನಾಯಿ ಬೊಗಳಿದ್ದಕ್ಕೆ ನೆರೆಮನೆಯ ವ್ಯಕ್ತಿಯೊಬ್ಬ ನಾಯಿ ಹಾಗೂ ಅದರ ಮಾಲೀಕನಿಗೆ ಕಬ್ಬಿಣದ ರಾಡ್​ನಿಂದ ಹೊಡೆದ ಆಘಾತಕಾರಿ ಘಟನೆ ದೆಹಲಿಯ ಪಶ್ಚಿಮ ವಿಹಾರ್​ ಪ್ರದೇಶದಲ್ಲಿ ನಡೆದಿತ್ತು. ಪಶ್ಚಿಮ ವಿಹಾರ್ ಏರಿಯಾದಲ್ಲಿರುವ ನಿವಾಸಿಯೊಬ್ಬರು ನಾಯಿಯನ್ನು ಸಾಕಿದ್ದರು. ಅದೇ ಏರಿಯಾದಲ್ಲಿದ್ದ ಪಕ್ಕದ ಮನೆಯ ವ್ಯಕ್ತಿಯೊಬ್ಬ ನಾಯಿ ಬೊಗಳುತ್ತೆ ಎಂಬ ಕಾರಣಕ್ಕೆ ನೇರವಾಗಿ ಬಂದು ನಾಯಿಯ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದಾನೆ. ಈ ವೇಳೆ ತಡೆಯಲು ಬಂದ ನಾಯಿಯ ಮಾಲೀಕನಿಗೂ ರಾಡ್​ನಿಂದ ಹೊಡೆದಿದ್ದಾನೆ. ಇನ್ನು ರಾಡ್​ನಿಂದ ಗಂಭೀರ ಗಾಯಗೊಂಡ ನಾಯಿ ಹಾಗೂ ಆತನ ಮಾಲೀಕ ನೆಲದ ಮೇಲೆ ಕುಸಿದು ಬಿದ್ದಿದ್ದರು.. ತಕ್ಷಣವೇ ಮತ್ತೊಬ್ಬ ಇದನ್ನು ತಡೆಯಲು ಬಂದಿದ್ದಾನೆ. ತುಂಬಾ ಸಮಯದವರೆಗೂ ಗಲಾಟೆ ನಡೆದಿದೆ. ಈ ವೇಳೆ ತಡೆಯಲು ಬಂದ ಮತ್ತೊಬ್ಬ ವ್ಯಕ್ತಿಯ ತಲೆಗೂ ಗಂಭೀರವಾಗಿ ಹಲ್ಲೆ ಮಾಡಿದ್ದ.

ಘಟನೆ ನಡೆದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಇನ್ನು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ನಾಯಿ ಹಾಗೂ ಅದರ ಮಾಲೀಕರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಸಂಬಂಧ ನಾಯಿಯ ಮಾಲೀಕ ರಕ್ಷಿತ್ ಎಂಬುವವರು ಪಶ್ಚಿಮ ವಿಹಾರ್​ ಪೊಲೀಸ್​ ಠಾಣೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ದೂರು ನೀಡಿದ್ದರು. ದೂರಿನನ್ವಯ ಹಲ್ಲೆ ಮಾಡಿದ ವ್ಯಕ್ತಿ ಮೇಲೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Continue Reading

ದೇಶ

Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

Viral News:ಕಳೆದ ತಿಂಗಳು ಹೈದರಾಬಾದ್‌ನಿಂದ ದಿಲ್ಲಿಗೆ ವಿಮಾನಯಾನ ನಡೆಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ 7ಲಕ್ಷ ಮೌಲ್ಯದ ಚಿನ್ನ ಕಳುವಾಗಿತ್ತು. ಇದಾದ ಬೆನ್ನಲ್ಲೇ ಅಮೆರಿಕ ಮೂಲಕದ ವ್ಯಕ್ತಿಯೊಬ್ಬ ಕೂಡ ತನ್ನ ಬ್ಯಾಗ್‌ನಲ್ಲಿದ್ದ 20ಲಕ್ಷ ರೂ. ಕಳುವಾಗಿದೆ ಎಂದು ದೂರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ದಿಲ್ಲಿ, ಅಮೃತಸರ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾಜೇಶ್‌ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಆತನನ್ನು ಅರೆಸ್ಟ್‌ ಮಾಡಿದಾಗ ಈತನ ಕೈಚಳಕದ ಬಗ್ಗೆ ಮಾಹಿತಿ ಹೊರಬಿದ್ದಿದೆ.

VISTARANEWS.COM


on

Viral News
Koo

ನವದೆಹಲಿ: ಈತ ಒಂದೇ ವರ್ಷದಲ್ಲಿ 200 ವಿಮಾನ(200 Flights) ಗಳನ್ನು ಹತ್ತಿ ಇಳಿದಿದ್ದಾನೆ. ಸಾವಿರಾರು ಕಿಲೋಮೀಟರ್‌ ವಿಮಾನದಲ್ಲೇ ದೇಶದೊಳಗೆ ಪ್ರಯಾಣ ಬೆಳೆಸಿದ್ದಾನೆ. ಸುಮಾರು ನೂರಕ್ಕೂ ಅಧಿಕ ದಿನಗಳ ಕಾಲ ವಿಮಾನಯಾನವನ್ನೇ ಮಾಡಿದ್ದಾನೆ. ಅಬ್ಬಾ.. ಹಾಗಾದ್ರೆ ಈತ ದೊಡ್ಡ ಉದ್ಯಮಿ ಅಥವಾ ಟ್ರಾವೆಲರ್ ಆಗಿರಲೇಬೇಕು ಎಂದು ನಾವು ಭಾವಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಈತ ವಿಮಾನ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ ದೋಚುವ ಹೈ ಟೆಕ್‌ ಕಳ್ಳ(Viral News) ವಿಮಾನದಲ್ಲೇ ಪ್ರಯಾಣಿಸುವ ಈತ ಕಳ್ಳತನವೇ ಈತನ ಫುಲ್‌ ಟೈಂ ಜಾಬ್‌ ಆಗಿದೆ. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ರಾಜೇಶ್‌ ಕಪೂರ್‌(Rajesh Kapoor) ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ದಿಲ್ಲಿಯ ಪಹಾರ್‌ಗಂಜ್‌ ಇಂದ ಅರೆಸ್ಟ್‌ ಮಾಡಲಾಗಿದೆ.

ಖತರ್ನಾಕ್‌ ಕಳ್ಳ ಬಲೆಗೆ ಬಿದ್ದಿದ್ದು ಹೇಗೆ?

ಕಳೆದ ತಿಂಗಳು ಹೈದರಾಬಾದ್‌ನಿಂದ ದಿಲ್ಲಿಗೆ ವಿಮಾನಯಾನ ನಡೆಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ 7ಲಕ್ಷ ಮೌಲ್ಯದ ಚಿನ್ನ ಕಳುವಾಗಿತ್ತು. ಇದಾದ ಬೆನ್ನಲ್ಲೇ ಅಮೆರಿಕ ಮೂಲಕದ ವ್ಯಕ್ತಿಯೊಬ್ಬ ಕೂಡ ತನ್ನ ಬ್ಯಾಗ್‌ನಲ್ಲಿದ್ದ 20ಲಕ್ಷ ರೂ. ಕಳುವಾಗಿದೆ ಎಂದು ದೂರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ದಿಲ್ಲಿ, ಅಮೃತಸರ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾಜೇಶ್‌ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಆತನನ್ನು ಅರೆಸ್ಟ್‌ ಮಾಡಿದಾಗ ಈತನ ಕೈಚಳಕದ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಕಳ್ಳತನ ಹೇಗೆ ಮಾಡುತ್ತಿದ್ದ?

ದಿಲ್ಲಿ ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಉಷಾ ರಂಗ್ರಾಣಿ ಪ್ರತಿಕ್ರಿಯಿಸಿದ್ದು, ರಾಜೇಶ್‌ ವಿಚಾರಣೆ ವೇಳೆ ತನ್ನ ಕುಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅವರು ಹೇಗೆ ಕಳ್ಳತನ ಮಾಡುತ್ತಿದ್ದ, ಹೇಗೆ ಎಸ್ಕೇಪ್‌ ಆಗುತ್ತಿದ್ದ ಎಂಬ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಿದರು. ಅವರು ಹೇಳುವ ಪ್ರಕಾರ ಆತ ಕನೆಕ್ಟಿಂಗ್‌ ಫ್ಲೈಟ್ಸ್‌ ಅಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ. ಆ ಮಹಿಳೆ ಏಪ್ರಿಲ್‌ನಲ್ಲಿ ಹೈದರಾಬಾದ್‌ನಿಂದ ದಿಲ್ಲಿಗೆ ಬಂದು, ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಳು. ಅದೇ ರೀತಿ ಅಮೆರಿಕ ಮೂಲದ ಆ ವ್ಯಕ್ತಿಯೂ ಅಮೃತಸರದಿಂದ ದಿಲ್ಲಿಗೆ ಬಂದು ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ. ಇಂತವರನ್ನೇ ಗುರಿಯನ್ನಾಗಿಸಿಕೊಳ್ಳುವ ರಾಜೇಶ್‌, ಪ್ರಯಾಣಿಕರ ಚಲನವಲನ, ವರ್ತನೆ ಮೇಲೆ ತೀವ್ರ ನಿಗಾ ಇರಿಸಿಕೊಳ್ಳುತ್ತಾನೆ. ಅವರ ಬ್ಯಾಗ್‌ ಮೇಲಿರುವ ಸ್ಲಿಪ್‌ನಿಂದಾಗಿ ಅವನಿಗೆ ಅವರ ಬ್ಯಾಗ್‌ನಲ್ಲಿ ಏನಿದೆ ಎಂಬುದು ತಿಳಿಯುತ್ತಿತ್ತು. ಬೋರ್ಡಿಂಗ್‌ ಗೇಟ್‌ ಬಳಿ ಈತ ಅವರ ಜೊತೆ ಮಾತುಕತೆ ನಡೆಸುತ್ತಾನೆ. ಇದಾದ ಬಳಿಕ ವಿಮಾನದಲ್ಲಿ ತನ್ನ ಸೀಟು ಬಲಿಸಿಕೊಡುವಂತೆ ವಿಮಾನ ಸಿಬ್ಬಂದಿಯನ್ನು ಕೇಳುತ್ತಾನೆ. ಹೇಗಾದರೂ ಮಾಡಿ ತಾನು ಟಾರ್ಗೆಟ್‌ ಮಾಡಿರುವ ವ್ಯಕ್ತಿಯ ಪಕ್ಕವೇ ಸೀಟು ಸಿಗುವಂತೆ ಮಾಡುತ್ತಾನೆ. ಆಗ ತನ್ನ ಕೈಚಳಕ ತೋರಿಸಿ ಚಿನ್ನ, ನಗದು ದೋಚಿದ್ದಾನೆ.

ಇದನ್ನೂ ಓದಿ: Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬಹುತೇಕ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ ಈತ ಪಹಾರ್‌ಗಂಜ್‌ನಲ್ಲಿ ಸ್ವಂತ ಗೆಸ್ಟ್‌ ಹೌಸ್‌ವೊಂದನ್ನು ಹೊಂದಿದ್ದಾನೆ. ಅಲ್ಲದೇ ಮನಿ ಎಕ್ಸ್‌ಚೇಂಜ್‌ ಉದ್ಯಮ ಮತ್ತು ಮೊಬೈಲ್‌ ಅಂಗಡಿಗಳನ್ನು ಈತ ಹೊಂದಿದ್ದಾನೆ ಎನ್ನಲಾಗಿದೆ. ಇನ್ನು ತಾನು ಕದ್ದ ಚಿನ್ನಾಭರಣಗಳನ್ನು ಸ್ಥಳೀಯ ಚಿನ್ನದ ಅಂಗಡಿ ಮಾಲೀಕ ಶರದ್‌ ಜೈನ್‌ಗೆ ಮಾರುತ್ತಿದ್ದ ಎನ್ನಲಾಗಿದೆ.

Continue Reading

ದೇಶ

Viral Video: ಜೊತೆಗಿದ್ದ ಬೆಂಬಲಿಗನನ್ನೇ ವೇದಿಕೆಯಿಂದ ತಳ್ಳಿದ ಲಾಲೂ ಪುತ್ರ; ಎಲ್ಲೆಡೆ ಭಾರೀ ಖಂಡನೆ

Viral Video:ಇಂದು ನಾಮಪತ್ರ ಸಲ್ಲಿಸಿದ್ದ ಮೀಸಾ ತಮ್ಮ ಸಹೋದರ ತೇಜ್‌ ಪ್ರತಾಪ್‌ ಜೊತೆಗೆ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಹಸಿರು ಕ್ಯಾಪ್‌ ಧರಿಸಿದ ಅನೇಕ ಕಾರ್ಯಕರ್ತರು ಅವರನ್ನು ಸುತ್ತುವರಿದರು. ಆಗ ಕೋಪಗೊಂಡ ತೇಜ್‌ ಪ್ರತಾಪ್‌ ಯಾದವ್‌, ತನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯನ್ನು ತಳ್ಳಿ ಬೀಳಿಸಿದ್ದಾರೆ. ತಕ್ಷಣ ಅಲ್ಲಿದ್ದ ಜನ ಆತನನ್ನು ವೇದಿಕೆಯಿಂದ ಕರೆದೊಯ್ದಿದ್ದಾರೆ. ಪಕ್ಕದಲ್ಲೇ ಇದ್ದ ಮೀಸಾ , ತೇಜ್‌ ಪ್ರತಾಪ್‌ನನ್ನು ಸಮಾಧಾನಪಡಿಸಿದರು.

VISTARANEWS.COM


on

Viral Video
Koo

ನವದೆಹಲಿ: ರಾಷ್ಟ್ರೀಯ ಜನತಾ ದಳ(RJD) ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ಪುತ್ರ ತೇಜ್‌ ಪ್ರತಾಪ್‌ ಯಾದವ್‌(Tej Pratap Yadav) ಮತ್ತೆ ವಿವಾದಕ್ಕೀಡಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ(Lok Sabha Election 2024)ಪಾಟಲೀಪುರದಿಂದ ಕಣಕ್ಕಿಳಿಸಿರುವ ಸಹೋದರಿ ಮೀಸಾ ಭಾರತಿ ಪರ ಪ್ರಚಾರಕ್ಕೆಂದು ಆಗಮಿಸಿದ್ದ ತೇಜ್‌ ಪ್ರತಾಪ್‌ ಯಾದವ್‌ ಜೊತೆಗಿದ್ದ ಬೆಂಬಲಿಗನನ್ನು ವೇದಿಕೆಯಿಂದ ತಳ್ಳುವ ಮೂಲಕ ದರ್ಪ ಮೆರೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಏನಿದೆ?

ಇಂದು ನಾಮಪತ್ರ ಸಲ್ಲಿಸಿದ್ದ ಮೀಸಾ ತಮ್ಮ ಸಹೋದರ ತೇಜ್‌ ಪ್ರತಾಪ್‌ ಜೊತೆಗೆ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಹಸಿರು ಕ್ಯಾಪ್‌ ಧರಿಸಿದ ಅನೇಕ ಕಾರ್ಯಕರ್ತರು ಅವರನ್ನು ಸುತ್ತುವರಿದರು. ಆಗ ಕೋಪಗೊಂಡ ತೇಜ್‌ ಪ್ರತಾಪ್‌ ಯಾದವ್‌, ತನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯನ್ನು ತಳ್ಳಿ ಬೀಳಿಸಿದ್ದಾರೆ. ತಕ್ಷಣ ಅಲ್ಲಿದ್ದ ಜನ ಆತನನ್ನು ವೇದಿಕೆಯಿಂದ ಕರೆದೊಯ್ದಿದ್ದಾರೆ. ಪಕ್ಕದಲ್ಲೇ ಇದ್ದ ಮೀಸಾ , ತೇಜ್‌ ಪ್ರತಾಪ್‌ನನ್ನು ಸಮಾಧಾನಪಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ತೇಜ್‌ ಪ್ರತಾಪ್‌ ವರ್ತನೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಪ್ರೀತಿ ಗಾಂಧಿ, ತೇಜ್‌ ಪ್ರತಾಪ್‌ ಯಾವುದಕ್ಕೂ ಅರ್ಹನಲ್ಲ. ಸ್ವಪಕ್ಷ ಕಾರ್ಯಕರ್ತನ ಮೇಲೆಯೇ ಬಹಳ ಕ್ರೂರವಾಗಿ ಹಲ್ಲೆ ಮಾಡುತ್ತಾರೆ. ಇದು ಮಾತು ಮತ್ತು ಕೃತಿಗಿರುವ ವ್ಯತ್ಯಾಸ ಎಂದು ಕಿಡಿ ಕಾರಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ತೆನಾಲಿ ಮತಗಟ್ಟೆಯಲ್ಲಿ ಮತ ಚಾಲಾಯಿಸಲೆಂದು ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಅಭ್ಯರ್ಥಿ, ತೆನಾಲಿ ಕ್ಷೇತ್ರದ ಶಾಸಕ ಅನ್ನಬತುನಿ ಶಿವಕುಮಾರ್ ಎಂಬುವವರು ಕಪಾಳಮೋಕ್ಷ ಮಾಡಿದ್ದಾರೆ. ಶಾಸಕ ಶಿವಕುಮಾರ್ ಇಂದು ಮತದಾನಕ್ಕೆಂದು ಮತಗಟ್ಟೆಗೆ ಆಗಮಿಸಿದ್ದರು. ಈ ವೇಳೆ ನೂರಾರು ಜನ ಸಾಲಿನಲ್ಲಿ ನಿಂತಿದ್ದರೂ ಅದನು ಲೆಕ್ಕಿಸದೇ ಸಾಲು ತಪ್ಪಿಸಿ ನೇರವಾಗಿ ಮತಗಟ್ಟೆಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಇದನ್ನು ಕಂಡ ಮತದಾರನೊಬ್ಬ ಶಾಸಕರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಲಿನಲ್ಲೇ ನಿಂತು ಮತ ಚಲಾಯಿಸುವಂತೆ ಆತ ಒತ್ತಾಯಿಸಿದ್ದ. ಇದರಿಂದ ಆಕ್ರೋಶಗೊಂಡ ಶಾಸಕ ಶಿವಕುಮಾರ್ ನೋಡ ನೋಡುತ್ತಲೇ ಪ್ರಶ್ನಿಸಿದ ಮತದಾರನ ಕಪಾಳಕ್ಕೆ ಹೊಡೆದಿದ್ದಾರೆ.

ಇದನ್ನೂ ಓದಿ:Viral Video: ವಂದೇ ಭಾರತ್ ರೈಲಿನಡಿ ಸಿಲುಕಿದರೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ?

ಏಟು ಬೀಳುತ್ತಿದ್ದಂತೆ ಮತದಾರನೂ ತಿರುಗಿ ಶಾಸಕನ ಕಪಾಳಕ್ಕೆ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರು ಹಿಂದೆ ಮುಂದೆ ನೋಡದೆ ಮತದಾರನ ಮೇಲೆ ಮುಗಿಬಿದ್ದು ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮತದಾರನನ್ನು ಹೊರಗೆ ಎಳೆದೊಯ್ದಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ನಿಯಂತ್ರಿಸಿದ್ದಾರೆ. ಸ್ಥಳದಲ್ಲಿ ಕೆಲಹೊತ್ತು ಭಾರೀ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

Continue Reading

ದೇಶ

Madhavi Latha: ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ ಐಡಿ ಕಾರ್ಡ್‌ ಚೆಕ್‌ ಮಾಡಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ!

Madhavi Latha:ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಲತಾ, ಇಂದು ಅಜಂಪುರದಲ್ಲಿರುವ ಅಮೃತ ವಿದ್ಯಾಲಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ವಿವಿಧ ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಕಾದು ಕುಳಿತಿದ್ದ ಮುಸ್ಲಿಂ ಮಹಿಳೆಯ ಬಳಿ ಬಂದ ಲತಾ, ಮುಖಕ್ಕೆ ಧರಿಸಿದ್ದ ಹಿಜಾಬ್‌ ತೆಗೆಯುವಂತೆ ಹೇಳಿ ಅವರ ಗುತುತಿನ ಚೀಟಿ ಪರಿಶೀಲನೆ ಮಾಡಿದರು. ಅದೂ ಅಲ್ಲದೇ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆದ ಬಳಿಕಷ್ಟೇ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಅಲ್ಲಿನ ಅಧಿಕಾರಿಗಳಿಗೆ ಆಕೆ ಸೂಚಿಸಿದ್ದಾರೆ. ಇನ್ನು ಇದೇ ವೇಳೆ ಮತಪಟ್ಟಿಯಲ್ಲಿ ಮತದಾರರ ಹೆಸರು ಮಿಸ್‌ ಆಗಿವೆ ಎಂದು ಹೇಳಿದ್ದಾರೆ.

VISTARANEWS.COM


on

Madhavi Latha
Koo

ಹೈದರಾಬಾದ್‌: ಲೋಕಸಭಾ ಚುನಾವಣೆ(Lok Sabha Election 2024)ಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಈ ನಡುವೆ ಕೆಲವೊಂದು ಕಡೆ ಅಭ್ಯರ್ಥಿಗಳಿಂದ ಎಡವಟ್ಟುಗಳೂ ನಡೆದಿವೆ. ಹೈದರಾಬಾದ್‌ ಬಿಜೆಪಿ ಲೋಕಸಭಾ ಅಭ್ಯರ್ಥಿ ಮಾಧವಿ ಲತಾ(Madhavi Latha) ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ್ದ ಮತದಾರರ ಗುರುತಿನ ಚೀಟಿ ಪರಿಶೀಲನೆ ಮಾಡಿ ವಿವಾದಕ್ಕೀಡಾಗಿದ್ದಾರೆ. ಈ ವಿಡಿಯೋ ವೈರಲ್‌(Viral Video) ಆಗಿದ್ದು, ಪ್ರತಿಸ್ಪರ್ಧಿ ಎಐಎಂಐಎಂ ಪಕ್ಷ(AIMIM) ಮುಖಂಡ ಅಸಾದುದ್ದೀನ್‌ ಓವೈಸಿ(Asaduddin Owaisi) ಚುನಾವಣಾ ಆಯೋಗಕ್ಕೆ (Election Commission of India) ದೂರು ನೀಡಿದ್ದಾರೆ.

ಘಟನೆ ವಿವರ:

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಲತಾ, ಇಂದು ಅಜಂಪುರದಲ್ಲಿರುವ ಅಮೃತ ವಿದ್ಯಾಲಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ವಿವಿಧ ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಕಾದು ಕುಳಿತಿದ್ದ ಮುಸ್ಲಿಂ ಮಹಿಳೆಯ ಬಳಿ ಬಂದ ಲತಾ, ಮುಖಕ್ಕೆ ಧರಿಸಿದ್ದ ಹಿಜಾಬ್‌ ತೆಗೆಯುವಂತೆ ಹೇಳಿ ಅವರ ಗುತುತಿನ ಚೀಟಿ ಪರಿಶೀಲನೆ ಮಾಡಿದರು. ಅದೂ ಅಲ್ಲದೇ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆದ ಬಳಿಕಷ್ಟೇ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಅಲ್ಲಿನ ಅಧಿಕಾರಿಗಳಿಗೆ ಆಕೆ ಸೂಚಿಸಿದ್ದಾರೆ. ಇನ್ನು ಇದೇ ವೇಳೆ ಮತಪಟ್ಟಿಯಲ್ಲಿ ಮತದಾರರ ಹೆಸರು ಮಿಸ್‌ ಆಗಿವೆ ಎಂದು ಹೇಳಿದ್ದಾರೆ.

ಮಾಧವಿ ಲತಾ ಅವರು ವಿವಾದಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದ ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿರುವ ಸಿದ್ದಿಯಂಬರ್ ಬಜಾರ್ ಮಸೀದಿಯತ್ತ ಮಾಧವಿ ಲತಾ ಅವರು ಬಾಣ ಬಿಟ್ಟಂತೆ ಸನ್ನೆ ಮಾಡುವ ಮೂಲಕ ಸುದ್ದಿಯಾಗಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಮಾಧವಿ ಲತಾ ಅವರು ಕೇಸರಿ ಶಾಲು ಧರಿಸಿ ವಾಹನವೊಂದರ ಮೇಲೆ ನಿಂತು ಮಸೀದಿಯತ್ತ ಬಾಣ ಬಿಟ್ಟಂತೆ ಸನ್ನೆ ಮಾಡಿರುವುದು ಮತ್ತು ಸುತ್ತಲು ಕೇಸರಿ ಧ್ವಜ ಹಿಡಿದು ನಿಂತಿದ್ದ ನೂರಾರು ಜನರು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮೊಳಗಿಸಿದ್ದು ವೈರಲ್ ವಿಡಿಯೋದಲ್ಲಿತ್ತು.

ಇದನ್ನೂ ಓದಿ: Viral Video: ಸಾಲಿನಲ್ಲಿ ಬನ್ನಿ ಅಂದಿದ್ದೇ ತಪ್ಪಾಯ್ತಾ? ಮತದಾರನಿಗೆ MLA ಕಪಾಳಮೋಕ್ಷ

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಲೇ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಸ್ಪಷ್ಟನೆ ನೀಡಿದ್ದು, ‘ತಪ್ಪು ಭಾವನೆ ಮೂಡಿಸಲು ನನ್ನ ವಿಡಿಯೋವೊಂದನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಅಪೂರ್ಣ ವಿಡಿಯೋ ಎಂಬುವುದನ್ನು ನಾನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ. ಈ ವಿಡಿಯೋದಿಂದ ಯಾರ ಭಾವನೆಗಾದರು ಧಕ್ಕೆಯಾಗಿದ್ದರೆ, ನಾನು ಎಲ್ಲರನ್ನು ಗೌರವಿಸುವವಳಾಗಿ ಕ್ಷಮೆ ಯಾಚಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

Continue Reading
Advertisement
pm narendra modi nomination varanasi
ಪ್ರಮುಖ ಸುದ್ದಿ8 mins ago

PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

karnataka Rain Effected
ಬೆಂಗಳೂರು16 mins ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Viral Video
ವೈರಲ್ ನ್ಯೂಸ್18 mins ago

Viral Video: ಛೇ..ಇವನೆಂಥಾ ಪಾಪಿ..! ನಾಯಿ ಮೇಲೆ ಪದೇ ಪದೇ ಹಲ್ಲೆ ನಡೆಸಿ ವಿಕೃತಿ

Salman Khan
ಬಾಲಿವುಡ್27 mins ago

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; 6ನೇ ಆರೋಪಿಯ ಬಂಧನ

RCB Vs CSK
ಕ್ರೀಡೆ29 mins ago

RCB vs CSK: ಆರ್​ಸಿಬಿ ಪ್ಲೇ ಆಫ್​ ಹಾದಿಗೆ ಕೊಳ್ಳಿ ಇಡಲಿದೆಯೇ ಮಳೆ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

bomb hoax bengaluru
ಕ್ರೈಂ59 mins ago

Bomb Hoax: ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್, ತಪಾಸಣೆ

Team India Coach
ಕ್ರಿಕೆಟ್1 hour ago

Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

Job Alert
ಉದ್ಯೋಗ1 hour ago

Job Alert: ಎಚ್ಎ‌ಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Narendra Modi
ದೇಶ2 hours ago

Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

HD Deve gowda prajwal revanna case
ಪ್ರಮುಖ ಸುದ್ದಿ2 hours ago

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effected
ಬೆಂಗಳೂರು16 mins ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ7 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ17 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ17 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ18 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ18 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ18 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

ಟ್ರೆಂಡಿಂಗ್‌