Viral Video: ಹುಲಿ-ಮೊಸಳೆ ಮಧ್ಯೆ ರಣ ರೋಚಕ ಕದನ; ಕೊನೆಯಲ್ಲಿ ಗೆದ್ದವರು ಯಾರು? - Vistara News

ವೈರಲ್ ನ್ಯೂಸ್

Viral Video: ಹುಲಿ-ಮೊಸಳೆ ಮಧ್ಯೆ ರಣ ರೋಚಕ ಕದನ; ಕೊನೆಯಲ್ಲಿ ಗೆದ್ದವರು ಯಾರು?

Viral Video: ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಹುಲಿ ಮತ್ತು ಮೊಸಳೆಯ ಕದನ ಸೆರೆಯಾಗಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

tiger
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: ವನ್ಯ ಜೀವಿಗಳ ಜೀವನ ಶೈಲಿ, ಆಹಾರ ಪದ್ಧತಿ ಸದಾ ಕುತೂಹಲ ಹುಟ್ಟಿಸುವಂತಹದ್ದು. ಅದರಲ್ಲೂ ಬೇಟೆಯಾಡುವ ಶೈಲಿ, ಬಲಿಷ್ಠ ಪ್ರಾಣಿಗಳು ಪರಸ್ಪರ ಕಾದಾಡುವ ರೀತಿ ರೋಚಕತೆಯಿಂದ ಕೂಡಿರುತ್ತದೆ. ಕೆಲವೊಮ್ಮೆ ಅಂತಹ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡಿ ಸದ್ದು ಮಾಡುತ್ತವೆ. ಇದೀಗ ಹುಲಿ ಮತ್ತು ಮೊಸಳೆಯೊಂದರ ಹೋರಾಟದ ವಿಡಿಯೊ ವೈರಲ್‌ ಆಗಿದೆ (Viral Video).

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ (Ranthambore National Park) ಭೇಟಿ ನೀಡಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಹುಲಿ ಮತ್ತು ಮೊಸಳೆಯ ಕದನ ಸೆರೆಯಾಗಿದೆ. ಈ ವನ್ಯಜೀವಿ ಮೀಸಲು ಪ್ರದೇಶದಲ್ಲಿ ಹಲವು ಪ್ರಾಣಿಗಳು, ಪಕ್ಷಿಗಳು ವಾಸವಾಗಿವೆ. ಅದರಲ್ಲೂ ಹುಲಿಗಳು ಮತ್ತು ಚಿರತೆಗಳು ಇಲ್ಲಿನ ಆಹಾರ ಸರಪಳಿಯಲ್ಲಿ ಪ್ರಾಬಲ್ಯ ಹೊಂದಿದ್ದರೆ, ಕಾಡಿನಾದ್ಯಂತ ಹರಡಿರುವ ಸರೋವರಗಳಲ್ಲಿ ಅನೇಕ ದೊಡ್ಡ ಮೊಸಳೆಗಳನ್ನೂ ಕಾಣಬಹುದು.

ವಿಡಿಯೊದಲ್ಲೇನಿದೆ?

ಪ್ರವಾಸಿಗರು ಸಫಾರಿ ಹೋಗುತ್ತಿದ್ದಾಗ ಹುಲಿ ರಿದ್ಧಿ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಸರೋವರದ ಕಡೆಗೆ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು. ದಡದಲ್ಲಿ ಮಲಗಿದ್ದ ಮೊಸಳೆಯನ್ನು ಬೇಟೆಯಾಡುವುದು ಕೂಡ ರಿದ್ಧಿಯ ಯೋಜನೆಯಾಗಿತ್ತು. ಹುಲಿ ಸಮೀಪ ಬರುತ್ತಿದ್ದಂತೆ ಮೊಸಳೆ ಮರು ದಾಳಿ ನಡೆಸಲು ಮುಂದಾಯಿತು. ಆದರೆ ಸ್ವಲ್ಪವೂ ವಿಚಲಿತವಾಗದ ರಿದ್ಧಿ ಮತ್ತೊಮ್ಮೆ ಆಕ್ರಮಣ ಮಾಡಲು ಪ್ರಯತ್ನಿಸಿತು. ಇದರಿಂದ ಬೆದರಿದ ಮೊಸಳೆ ಸರೋವರದ ಕಡೆಗೆ ಕಡೆಗೆ ಓಡಿ ಹೋಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದ ನಿರಾಸೆಯಲ್ಲಿ ರಿದ್ಧಿ ಮರಳಿತು.

ಪ್ರವಾಸಿಗರೊಬ್ಬರು ಈ ರೋಚಕ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೊವನ್ನು ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. “ರೋಚಕ ಕದನ: ರಿದ್ಧಿ ಹುಲಿ ಮೊಸಳೆ ಮೇಲೆ ದಾಳಿ ಮಾಡಿದ ಕ್ಷಣ” ಎಂಬ ಕ್ಯಾಪ್ಶನ್‌ನೊಂದಿಗೆ ವಿಡಿಯೊ ಶೇರ್‌ ಮಾಡಲಾಗಿದೆ. ಸದ್ಯ ಈ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ನೆಟ್ಟಿಗರು ಏನಂದ್ರು?

ರಿದ್ಧಿಯ ಈ ಸಾಹಸ ಪ್ರವೃತ್ತಿ ಅನೇಕರಿಗೆ ಅದರ ಮುತ್ತಜ್ಜಿ ಮಚಾಲಿಯನ್ನು ನೆನಪಿಸಿತು. ತನ್ನ ಬೇಟೆಯ ಕಾರಣದಿಂದಲೇ ಮಚಾಲಿ ಜನಪ್ರಿಯವಾಗಿತ್ತು. ಇದೇ ಉದ್ಯಾನವನದಲ್ಲಿ ವಾಸವಿದ್ದ ಮಚಾಲಿ ʼಕ್ರೊಕಡೈಲ್‌ ಕಿಲ್ಲರ್‌ʼ, ʼಲೇಡಿ ಆಫ್ ದಿ ಲೇಕ್ʼ ಎಂದೇ ಹೆಸರು ಗಳಿಸಿತ್ತು. ಇದೀಗ ರಿದ್ಧಿಯ ಆಕ್ರಮಣ ಮನೋಭಾವವನ್ನು ನೋಡಿದ ನೆಟ್ಟಿಗರೊಬ್ಬರು, “ಮಚಾಲಿಯ ವಂಶ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಇವಳು ಕೂಡ ತನ್ನ ಮುತ್ತಜ್ಜಿ ಮಚಾಲಿಯಂತೆ ಧೈರ್ಯಶಾಲಿ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಈ ಹಸು, ಮಗುವಿನದ್ದು ಜನ್ಮ ಜನ್ಮದ ಅನುಬಂಧ; ಮುದ್ದಾದ ವಿಡಿಯೊಕ್ಕೆ ಮನಸೋತ ನೆಟ್ಟಿಗರು

2021ರ ಜೂನ್‌ನಲ್ಲಿ ಎರಡೂವರೆ ವರ್ಷದ ರಿದ್ಧಿ ಗಂಭೀರ ಗಾಯಗೊಂಡಿತ್ತು. ತನ್ನ ಸಹೋದರಿಯೊಂದಿಗೆ ನಡೆದ ಜಗಳದಿಂದ ಗಾಯಗೊಂಡಿದ್ದ ರಿದ್ಧಿ ಸದ್ಯ ಚೇತರಿಸಿಕೊಂಡಿದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಸ್ತುತ 80ಕ್ಕೂ ಹೆಚ್ಚು ಹುಲಿಗಳಿವೆ. ಜಿಮ್ ಕಾರ್ಬೆಟ್ ಮತ್ತು ಕಾಜಿರಂಗಾ ನಂತರ ಇದು ಭಾರತದ ಮೂರನೇ ಅತ್ಯಂತ ಹೆಚ್ಚು ಹುಲಿ ಹೊಂದಿರುವ ಹುಲಿ ಮೀಸಲು ಪ್ರದೇಶ ಎನಿಸಿಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Hardik Pandya : ಪತ್ನಿ ಜತೆ ವಿಚ್ಛೇದನ ಸುದ್ದಿ ನಡುವೆ ರಷ್ಯನ್ ಮಾಡೆಲ್​ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಯಾರವರು?

Hardik Pandya: ರಷ್ಯಾದ ರೂಪದರ್ಶಿ ಮತ್ತು ನಟಿ ಎಲೆನಾ ತುತೇಜಾ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಲೆನಾ ತುತೇಜಾ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​​ನಲ್ಲಿ ಹಂಚಿಕೊಂಡಿದ್ದಾರೆ. ಅವರು ‘ವಿಶೇಷ ಟಿಪ್ಪಣಿ’ ಬರೆದು ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಫೋಟೋಶೂಟ್​ ಎಂದು ಬರೆದುಕೊಂಂಡಿದ್ದಾರೆ.

VISTARANEWS.COM


on

Hardik Pandya
Koo

ನವದೆಹಲಿ: ಭಾರತೀಯ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ವಿಶ್ವಕಪ್ 2024 ರಲ್ಲಿ ತಮ್ಮ ಕ್ರಿಕೆಟ್ ಸಾಧನೆಗಳಿಂದ ಸುದ್ದಿಯಾಗಿದ್ದರು. ಅದಕ್ಕಿಂತ ಮೊದಲು ಅವರು ವೈಯಕ್ತಿಕ ಜೀವನ ಮತ್ತು ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ವದಂತಿಗಳಿಂದಾಗಿಯೂ ಸುದ್ದಿಯಲ್ಲಿದ್ದರು. ಅನಂತ್​ ಅಂಬಾನಿ ಜತೆ ಮದುವೆಯ ಪಾರ್ಟಿಯಲ್ಲೂ ಹಾರ್ದಿಕ್ ಪಾಂಡ್ಯ ಜತೆ ನತಾಶ ಕಾಣಿಸಿಕೊಂಡಿಲ್ಲ. ಏಕಾಂಗಿಯಾಗಿ ಬಂದು ಕುಣಿದು ಕುಪ್ಪಳಿಸಿದ್ದರು.

ಹಾರ್ದಿಕ್ ಪಾಂಡ್ಯ ವೆಸ್ಟ್​ ಇಂಡೀಸ್​​ನ ಬಾರ್ಬಡೋಸ್​​ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್​ನ ಅಂತಿಮ ಓವರ್ ಎಸೆದು ಡೇವಿಡ್ ಮಿಲ್ಲರ್ ಅವರ ಪ್ರಮುಖ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹಲವರು ಕಾರಣಗಳಿಂದ ಸುದ್ದಿಯಲ್ಲಿರುವ ಅವರೀಗ ರಷ್ಯಾದ ರೂಪದರ್ಶಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ರಷ್ಯಾದ ರೂಪದರ್ಶಿ ಮತ್ತು ನಟಿ ಎಲೆನಾ ತುತೇಜಾ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಲೆನಾ ತುತೇಜಾ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​​ನಲ್ಲಿ ಹಂಚಿಕೊಂಡಿದ್ದಾರೆ. ಅವರು ‘ವಿಶೇಷ ಟಿಪ್ಪಣಿ’ ಬರೆದು ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಫೋಟೋಶೂಟ್​ ಎಂದು ಬರೆದುಕೊಂಂಡಿದ್ದಾರೆ.

“ಭಾರತವು ತಮ್ಮ ಚಾಂಪಿಯನ್​ಗಳ ಬಗ್ಗೆ ತುಂಬಾ ಹೆಮ್ಮೆಪಡುತ್ತಿರುವಾಗ, ಅವರಲ್ಲಿ ಒಬ್ಬರೊಂದಿಗಿನ ನನ್ನ ಫೋಟೋಶೂಟ್​​ ನಡೆಸಿಕೊಳ್ಳುವುದಕ್ಕೆ ನಾನು ನಿರ್ಧರಿಸಿದೆ . ಬಾಡಿ ಎಕ್ಸ್ ಬ್ರಾಂಡ್​ನ ಫೋಟೊ ಶೂಟ್​​. ಅವರ ತಂಡದೊಂದಿಗೆ ನಮಗೆ ಹೆಮ್ಮೆ ಯಿದೆ ಎಂದು ಬರೆದುಕೊಂಡಿದ್ದಾರೆ.

ಎಲೆನಾ ತುತೇಜಾ ಯಾರು?

ಎಲೆನಾ ಟುತೇಜಾ ರಷ್ಯಾದ ರೂಪದರ್ಶಿ ಮತ್ತು ನಟಿ ಮಾಸ್ಕೋದಲ್ಲಿ ಜನಿಸಿದ್ದಾರೆ. ನಟನೆ ಮತ್ತು ಮಾಡೆಲಿಂಗ್​​ನಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಲು ಅವರು ಮುಂಬೈಗೆ ಸ್ಥಳಾಂತರಗೊಂಡಿದ್ದರು. ಅವರು ಮಿಸೆಸ್ ಇಂಡಿಯಾ ಅರ್ಥ್ ಸ್ಪರ್ಧೆಯಲ್ಲಿ ಭಾಗವಹಿಸುವವರಲ್ಲಿ ಒಬ್ಬರಾಗಿದ್ದರು. 2017 ರಲ್ಲಿ 2 ನೇ ರನ್ನರ್ ಅಪ್ ಆಗಿದ್ದರು.

ಇದನ್ನೂ ಓದಿ: Wimbledon 2024 : ಜೊಕೊವಿಕ್ ಮಣಿಸಿದ 2ನೇ ವಿಂಬಲ್ಡನ್​ ಟ್ರೋಫಿ ಗೆದ್ದ ಕಾರ್ಲೋಸ್ ಅಲ್ಕರಾಜ್

ಟಿವಿ ಸರಣಿ ‘ಪಾರ್ಟ್ನರ್ಸ್’ ಮೂಲಕ ಭಾರತದಲ್ಲಿ ತಮ್ಮ ನಟನಾ ವೃತ್ತಿಜೀವನ ಪ್ರಾರಂಭಿಸಿದ್ದರು. 2020 ರಲ್ಲಿ, ಅವರು ‘ಕೆಹ್ತಾ ಹೈ ಯೇ ದಿಲ್’ ಎಂಬ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ‘ಸಾವಧಾನ್ ಇಂಡಿಯಾ’ ಟಿವಿ ಸರಣಿಯ ಭಾಗವಾಗಿದ್ದರು. ಇತ್ತೀಚಿನ ಟಿವಿ ಸರಣಿ ‘ಬದ್ದಮೀಜ್ ದಿಲ್’ ನಲ್ಲಿ ಅವರು 2023 ರಲ್ಲಿ ಬಿಡುಗಡೆಯಾದ ‘ಕರಣ್ಸ್​ ಗರ್ಲ್​ಫ್ರೆಂಡ್ ಚಿತ್ರದಲ್ಲಿ ಪಾತ್ರ ವಹಿಸಿದ್ದರು.

Continue Reading

ಪ್ರಮುಖ ಸುದ್ದಿ

Fidias Panayiotou: ನಮ್ಮ ಮೆಟ್ರೊದೊಳಗೆ ಅಕ್ರಮವಾಗಿ ನುಸುಳಿದವನು ಈಗ ಯುರೋಪ್ ಸಂಸದನಾಗಿ ಆಯ್ಕೆ!

Fidias Panayiotou: ಕೇವಲ 24 ವರ್ಷದವರಾದ, ಜಗತ್ತನ್ನು ಸುತ್ತುತ್ತ, ಆ ದೇಶವನ್ನು ಪರಿಚಯ ಮಾಡುತ್ತ, ಯುಟ್ಯೂಬ್‌ ಸೇರಿ ಸಾಮಾಜಿಕ ಜಾಲತಾಣಗಳ ವಿಡಿಯೊಗಳ ಮೂಲಕವೇ ಖ್ಯಾತಿ ಗಳಿಸಿರುವ ಫೀಡಿಯಸ್‌ ಪನಾಯಿಯೋಟೊ ಅವರು ಯುರೋಪ್‌ನ ಸಿಪ್ರಸ್‌ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರು 2023ರಲ್ಲಿ ನಮ್ಮ ಮೆಟ್ರೋದಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿ ಚರ್ಚೆಗೆ ಕಾರಣರಾಗಿದ್ದರು.

VISTARANEWS.COM


on

Fidias Panayiotou
Koo

ಬ್ರುಸ್ಸೆಲ್ಸ್: ಆಧುನಿಕ ಕಾಲಘಟ್ಟದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಈಗ ಚೆಲ್ಲು ಚೆಲ್ಲು ಆಗಿ ವರ್ತಿಸುವವರು ಮುಂದೊಂದು ದಿನ ಮಹತ್ವದ ಸಾಧನೆ ಮಾಡಬಹುದು. ಲಾಸ್ಟ್‌ ಬೆಂಚ್‌ ವಿದ್ಯಾರ್ಥಿಯಾಗಿದ್ದವ ಯುಟ್ಯೂಬರ್‌ ಆಗಿ ಖ್ಯಾತಿ, ಹಣ ಗಳಿಸಬಹುದು. ಫೇಲ್‌ ಆದವನು ಯಶಸ್ವಿ ಉದ್ಯಮಿಯಾಗಬಹುದು. ಇದಕ್ಕೆ ನಿದರ್ಶನ ಎಂಬಂತೆ, 2023ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದೊಳಗೆ (Namma Metro) ಅಕ್ರಮವಾಗಿ ನುಸುಳಿ ಕಪಿಚೇಷ್ಟೆ ಮಾಡಿದ್ದ ಯುಟ್ಯೂಬರ್‌ ಫೀಡಿಯಸ್‌ ಪನಾಯಿಯೋಟೊ (Fidias Panayiotou) ಅವರೀಗ ಯುರೋಪ್‌ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದಾರೆ.

ಹೌದು, ಕೇವಲ 24 ವರ್ಷದವರಾದ, ಜಗತ್ತನ್ನು ಸುತ್ತುತ್ತ, ಆ ದೇಶವನ್ನು ಪರಿಚಯ ಮಾಡುತ್ತ, ಯುಟ್ಯೂಬ್‌ ಸೇರಿ ಸಾಮಾಜಿಕ ಜಾಲತಾಣಗಳ ವಿಡಿಯೊಗಳ ಮೂಲಕವೇ ಖ್ಯಾತಿ ಗಳಿಸಿರುವ ಫೀಡಿಯಸ್‌ ಪನಾಯಿಯೋಟೊ ಅವರು ಯುರೋಪ್‌ನ ಸಿಪ್ರಸ್‌ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಯುರೋಪ್‌ ಸಂಸತ್‌ ಪ್ರವೇಶಿಸಿದ್ದಾರೆ. ಇವರೀಗ ಸಿಪ್ರಸ್‌ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ನಮ್ಮ ಮೆಟ್ರೋದಲ್ಲಿ ಮಾಡಿದ್ದ ಕಪಿಚೇಷ್ಟೆ

2023ರಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಫೀಡಿಯಸ್‌ ಪನಾಯಿಯೋಟೊ, ನಮ್ಮ ಮೆಟ್ರೋವನ್ನು ಅಕ್ರಮವಾಗಿ ಪ್ರವೇಶಿಸಿ, ಟಿಕೆಟ್‌ ಇಲ್ಲದೆ ಪ್ರಯಾಣಿಸಿ, ಆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮೆಟ್ರೋ ರೈಲು ನಿಲ್ದಾಣದ ಪ್ರವೇಶಿಸಿದ್ದ ಫೀಡಿಯಸ್‌ ಪನಾಯಿಯೋಟೊ , ಗೇಟ್‌ಗಳಿಂದ ಜಿಗಿದು, ಮೆಟ್ರೋ ರೈಲಿನಲ್ಲಿ ಅಕ್ರಮವಾಗಿ ಪ್ರಯಾಣ ಮಾಡಿದ್ದರು. ಅಲ್ಲದೆ, “ಭಾರತದಲ್ಲಿ ಹೇಗೆ ಉಚಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸಬಹುದನ್ನು ನಿಮಗೆ ತೋರಿಸುತ್ತೇನೆ” ಎಂದು ವಿಡಿಯೊದಲ್ಲಿ ಹೇಳಿದ್ದರು. ಇದಕ್ಕೆ ಬಿಎಂಆರ್‌ಸಿಎಲ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಇಂತಹ ಕುಚೇಷ್ಟೆ ಬುದ್ಧಿಯ ಫೀಡಿಯಸ್‌ ಪನಾಯಿಯೋಟೊ ಈಗ ಸಂಸತ್‌ ಸದಸ್ಯರಾಗಿದ್ದಾರೆ. “ನಾನು ಬೇಕಂತಲೇ ತಪ್ಪು ಮಾಡುತ್ತೇನೆ, ತಪ್ಪು ಮಾಡುವುದೇ ನನ್ನ ಗುರಿ (ಪ್ರೊಫೇಷನಲ್‌ ಮಿಸ್ಟೇಕ್‌ ಮೇಕರ್)‌” ಎಂದೆಲ್ಲ ಕರೆದುಕೊಳ್ಳುವ ಫೀಡಿಯಸ್‌ ಪನಾಯಿಯೋಟೊ ತುಂಬ ದೇಶಗಳನ್ನು ಸುತ್ತಿದ್ದಾರೆ. ಯುಟ್ಯೂಬ್‌ನಲ್ಲಿ ಇವರಿಗೆ ಸುಮಾರು 26 ಲಕ್ಷ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಇವರು ಕುಚೇಷ್ಟೆ ಮಾಡುತ್ತ ಸೆರೆ ಹಿಡಿದ ವಿಡಿಯೊಗಳು ಲಕ್ಷಾಂತರ ಜನರನ್ನು ಸೆಳೆದಿವೆ.

ಇದನ್ನೂ ಓದಿ: John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

Continue Reading

ಕ್ರೀಡೆ

Hardik Pandya : ಅಂಬಾನಿ ಮನೆಯ ಮದುವೆಯಲ್ಲಿ ಡಾನ್ಸ್​ ಮಾಡುತ್ತಾ ಮದ್ಯಕ್ಕೆ ಆರ್ಡರ್ ಮಾಡಿದ ಪಾಂಡ್ಯ, ವಿಡಿಯೊ ವೈರಲ್​

Hardik Pandya :ಟಕಿಲಾ (Tequila) ಎಂಬುದು ನೀಲಿ ವೆಬರ್ ಅಗವೆಯಿಂದ ತಯಾರಿಸಿದ ಮದ್ಯ. ಮೆಕ್ಸಿಕೊದಲ್ಲಿ ಉತ್ಪಾದಿಸಲಾದ ಡಿಸ್ಟಿಲ್ಡ್ ಆಲ್ಕೋಹಾಲ್ ಇದು. ಇದು 35ರಿಂದ 40 ಪ್ರತಿಶತ ಆಲ್ಕೋಹಾಲ್ ಹೊಂದಿರುತ್ತದೆ. ಇದು ಮದ್ಯಗಳ ಸಾಲಿನಲ್ಲಿ ಅತ್ಯಂತ ಪ್ರಬಲವಾಗಿದೆ. ಸಾಮಾನ್ಯವಾಗಿ ಈ ಮದ್ಯವನ್ನು ಕುಡಿದವರು ಬೇಗ ಮತ್ತೇರಿಸಿಕೊಳ್ಳುತ್ತಾರೆ. ಇಂಥ ಮದ್ಯವನ್ನು ಪಾಂಡ್ಯ ಕೇಳಿರುವುದು ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Hardik Pandya
Koo

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಈ ಹಿಂದೆಯೂ ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಹೆಣ್ಣು ಮಕ್ಕಳ ಕುರಿತ ಹೇಳಿಕೆ ಸೇರಿದಂತೆ ಅವರು ಅನೇಕ ಬಾರಿ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಕುಡಿಯಲು ಎರಡು ಟಕಿಲಾಗಳನ್ನು (ಮದ್ಯ) ಆರ್ಡರ್ ಮಾಡಿದ ವಿಡಿಯೊವೊಂದು ವೈರಲ್ ಆಗಿದೆ. ಡಾನ್ಸ್ ಮಾಡುತ್ತಲೇ ಅವರು ಎಣ್ಣೆ ಕೊಡಿ ಎಂದು ಕೇಳಿದ್ದು ಕೆಲವರಿಗೆ ಖುಷಿ ಕೊಟ್ಟರೆ ಇನ್ನೂ ಕೆಲವರಿಗೆ ಪಾಂಡ್ಯ ವರ್ತನೆ ಇಷ್ಟವಾಗಿಲ್ಲ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜಾಗತಿಕವಾಗಿ ಚರ್ಚೆಯಾದ ಮದುವೆ ಕಾರ್ಯಕ್ರಮ. ಅನೇಕ ಕ್ರಿಕೆಟಿಗರು ಮತ್ತು ಬಾಲಿವುಡ್ ತಾರೆಯರು ಕಾಣಿಸಿಕೊಂಡು ಇಲ್ಲಿ ಕುಣಿದು ಕುಪ್ಪಳಿಸಿದ್ದರು. ಅಂತೆಯೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯ ಸಮಾರಂಭದಲ್ಲಿ ಎರಡು ಟಕಿಲಾಗಳನ್ನು ಆರ್ಡರ್ ಮಾಡಿದ್ದಾರೆ. ಹಿನ್ನೆಲೆ ಸಂಗೀತಗಳ ನಡುವೆಯೂ ಅವರು ಟಕಿಲಾ ಕೊಡಿ ಎಂದು ಕೇಳಿದ್ದು ಸ್ಪಷ್ಟವಾಗಿ ವಿಡಿಯೊದಲ್ಲಿ ದಾಖಲಾಗಿದೆ.

ಟಕಿಲಾ (Tequila) ಎಂಬುದು ನೀಲಿ ವೆಬರ್ ಅಗವೆಯಿಂದ ತಯಾರಿಸಿದ ಮದ್ಯ. ಮೆಕ್ಸಿಕೊದಲ್ಲಿ ಉತ್ಪಾದಿಸಲಾದ ಡಿಸ್ಟಿಲ್ಡ್ ಆಲ್ಕೋಹಾಲ್ ಇದು. ಇದು 35ರಿಂದ 40 ಪ್ರತಿಶತ ಆಲ್ಕೋಹಾಲ್ ಹೊಂದಿರುತ್ತದೆ. ಇದು ಮದ್ಯಗಳ ಸಾಲಿನಲ್ಲಿ ಅತ್ಯಂತ ಪ್ರಬಲವಾಗಿದೆ. ಸಾಮಾನ್ಯವಾಗಿ ಈ ಮದ್ಯವನ್ನು ಕುಡಿದವರು ಬೇಗ ಮತ್ತೇರಿಸಿಕೊಳ್ಳುತ್ತಾರೆ. ಇಂಥ ಮದ್ಯವನ್ನು ಪಾಂಡ್ಯ ಕೇಳಿರುವುದು ಚರ್ಚೆಗೆ ಕಾರಣವಾಗಿದೆ.

ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ರಣವೀರ್ ಸಿಂಗ್, ಸಲ್ಮಾನ್ ಖಾನ್, ಆಲಿಯಾ ಭಟ್, ಕೃತಿ ಸನೋನ್, ಮಾಧುರಿ ದೀಕ್ಷಿತ್ ಮತ್ತು ಇತರ ಅನೇಕ ತಾರೆಯರು ಕಾಣಿಸಿಕೊಂಡಿದ್ದರು. ಕ್ರಿಕೆಟಿಗರಲ್ಲಿ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಎಂಎಸ್ ಧೋನಿ ಮತ್ತು ಶಿಖರ್ ಧವನ್ ಮದುವೆಯಲ್ಲಿದ್ದರು.

2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪಾತ್ರ

2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಆಲ್ರೌಂಡರ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅಗತ್ಯ ಕೊಡುಗೆಗಳನ್ನು ನೀಡಿದ್ದರು. 11 ವರ್ಷಗಳ ಬಳಿಕ ಭಾರತವನ್ನು ಮೊದಲ ಬಾರಿಗೆ ಐಸಿಸಿ ಟ್ರೋಫಿ ಕಡೆಗೆ ಮುನ್ನಡೆಸಿದ್ದರು.

2024 ರ ಟಿ 20 ವಿಶ್ವಕಪ್​​ನಲ್ಲಿ ಹಾರ್ದಿಕ್ 8 ಪಂದ್ಯಗಳಲ್ಲಿ 48 ಸರಾಸರಿ ಮತ್ತು 151.57 ಸ್ಟ್ರೈಕ್ ರೇಟ್​ನಲ್ಲಿ 144 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಅವರ ಅರ್ಧ ಶತಕಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕವಾಗಿದ್ದವು.

ಇದನ್ನೂ ಓದಿ: KL Rahul : ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಕ್ರಿಕೆಟಿಗ ಕೆ. ಎಲ್​ ರಾಹುಲ್​ ದಂಪತಿ ಭೇಟಿ

ಪಾಂಡ್ಯ ಅವರು ಮೂರನೇ ವೇಗದ ಬೌಲರ್ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದರು. ಅವರು 8 ಪಂದ್ಯಗಳಲ್ಲಿ 11 ವಿಕೆಟ್​​ಗಳನ್ನು ಪಡೆದಿದ್ದಾರೆ. ಫೈನಲ್ ಪಂದ್ಯದ ಕೊನೆಯ ಓವರ್​​ನಲ್ಲಿ ಹಾರ್ದಿಕ್ 16 ರನ್​ಗಳನ್ನು ಯಶಸ್ವಿಯಾಗಿ ರಕ್ಷಿಸಿ ಭಾರತವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದಿದ್ದರು.. ಫೈನಲ್​​ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ 20 ರನ್​ಗೆ 3 ವಿಕೆಟ್ ಪಡೆದರು.

Continue Reading

ವೈರಲ್ ನ್ಯೂಸ್

Viral Video: ದಾರಿಹೋಕರ ಲೂಟಿ ಮಾಡಲು ಬಂದಿದೆ ತುರಿಕೆ ಗ್ಯಾಂಗ್! ವಿಡಿಯೊ ನೋಡಿ

Viral Video: ಜನ ನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನಿಮಗೆ ತುರಿಕೆ ಶುರುವಾಗುತ್ತದೆ. ತುರಿಕೆ ಶುರುವಾಯಿತೆಂದು ಕೈಯಲ್ಲಿದ್ದ ವಸ್ತುಗಳನ್ನು ಬದಿಯಲ್ಲಿಟ್ಟು ತುರಿಸಲು ಶುರುಮಾಡಿದರೆ ಈ ಈ ಕಳ್ಳರ ತಂಡ ಕಣ್ಣು ಮಿಟುಕಿಸುವುದರೊಳಗೆ ನಿಮ್ಮ ವಸ್ತುಗಳನ್ನು ಕಣ್ಮರೆಯಾಗುವಂತೆ ಮಾಡುತ್ತದೆ. ಈ ಗ್ಯಾಂಗ್ ಅತ್ಯಂತ ಜಾಣತನದಿಂದ ಜನರ ಹಿಂಬದಿಯ ಮೇಲೆ ತುರಿಕೆ ಪುಡಿ ಎರಚುತ್ತದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Viral Video
Koo

ಹೊಸದಿಲ್ಲಿ: ಇತ್ತೀಚೆಗೆ ಉಡುಪಿಯಲ್ಲಿ ಮನೆ ಮನೆ ಲೂಟಿ ಮಾಡುತ್ತಿದ್ದ ಚಡ್ಡಿ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿತ್ತು. ಇದೀಗ ರಾಷ್ಟ್ರ ರಾಜಧಾನಿಯಲ್ಲೂ ಇಂತಹದ್ದೇ ಒಂದು ಕಳ್ಳರ ಗ್ಯಾಂಗ್‌ ಸಕ್ರಿಯವಾಗಿದೆ(Viral Video). ಈ ಕಳ್ಳರ ಗ್ಯಾಂಗ್‌ನ ಹೆಸರು ಖುಜ್ಲಿ ಗ್ಯಾಂಗ್‌ ಅಂದರೆ ತುರಿಕೆ ಗ್ಯಾಂಗ್‌(Khujli Gang). ದೆಹಲಿಯಲ್ಲಿ ವಾಸಿಸುತ್ತಿದ್ದರೆ ಮತ್ತು ಆಗಾಗ್ಗೆ ಜನನಿಬಿಡ ಸ್ಥಳಗಳಿಗೆ ಹೋಗುತ್ತಿದ್ದರೆ ನೀವು ಜಾಗರೂಕರಾಗಿರಬೇಕು. ಏಕಾಏಕಿ ನಿಮಗೆ ತುರಿಕೆ ಅನುಭವವಾಗುತ್ತಿದೆ ಎಂದೆನಿಸಿದರೆ ಅದು ಕಳ್ಳತನದ ಸಂಕೇತವೂ ಆಗಿರಬಹುದು. ಅಥವಾ ನೀವು ಕಳ್ಳರ ಟಾರ್ಗೆಟ್‌ನಲ್ಲಿದ್ದೀರಿ ಎಂದರ್ಥ. ಇಚ್ಚ್‌ ಗ್ಯಾಂಗ್‌, ಖುಜ್ಲಿ ಗ್ಯಾಂಗ್‌ ಅಂತಾನೆ ಕುಖ್ಯಾತಿ ಪಡೆದಿರುವ ಈ ಗ್ಯಾಂಗ್‌ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ಸಕ್ರಿಯವಾಗಿದೆ.

ಜನ ನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನಿಮಗೆ ತುರಿಕೆ ಶುರುವಾಗುತ್ತದೆ. ತುರಿಕೆ ಶುರುವಾಯಿತೆಂದು ಕೈಯಲ್ಲಿದ್ದ ವಸ್ತುಗಳನ್ನು ಬದಿಯಲ್ಲಿಟ್ಟು ತುರಿಸಲು ಶುರುಮಾಡಿದರೆ ಈ ಈ ಕಳ್ಳರ ತಂಡ ಕಣ್ಣು ಮಿಟುಕಿಸುವುದರೊಳಗೆ ನಿಮ್ಮ ವಸ್ತುಗಳನ್ನು ಕಣ್ಮರೆಯಾಗುವಂತೆ ಮಾಡುತ್ತದೆ. ಈ ಗ್ಯಾಂಗ್ ಅತ್ಯಂತ ಜಾಣತನದಿಂದ ಜನರ ಹಿಂಬದಿಯ ಮೇಲೆ ತುರಿಕೆ ಪುಡಿ ಎರಚುತ್ತದೆ ಎಂದು ಹೇಳಲಾಗುತ್ತಿದೆ.

‘ಖುಜ್ಲಿ ಗ್ಯಾಂಗ್’ ಬಗ್ಗೆ ಎಚ್ಚರ!

‘ಖುಜ್ಲಿ ಗ್ಯಾಂಗ್’ ಈ ಪುಡಿ ವ್ಯಕ್ತಿಯ ಮೈಗೆ ಬೀಳುತ್ತಿದ್ದಂತೆ ವ್ಯಕ್ತಿಗೆ ಇದ್ದಕ್ಕಿದ್ದಂತೆ ಬಹಳಷ್ಟು ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅವನ ಇಡೀ ದೇಹದಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ತುರಿಕೆ ತುಂಬಾ ತೀವ್ರವಾಗಿರುತ್ತದೆ, ಕೆಲವೊಮ್ಮೆ ಬಟ್ಟೆಯನ್ನೂ ತೆಗೆಯಬೇಕಾಗುತ್ತದೆ. ಈ ಸಮಯದಲ್ಲಿ, ಅವನು ತನ್ನ ವಸ್ತುಗಳನ್ನು ಪಕ್ಕಕ್ಕೆ ಇಡುತ್ತಾನೆ ಮತ್ತು ಈ ಗ್ಯಾಂಗ್‌ನಲ್ಲಿ ಭಾಗಿಯಾಗಿರುವ ಅಪರಾಧಿಗಳು ಇದರ ಲಾಭವನ್ನು ಪಡೆದುಕೊಂಡು ಬೆಲೆಬಾಳುವ ವಸ್ತುಗಳನ್ನು ಎಗರಿಸಿ ಪರಾರಿಯಾಗುತ್ತಾರೆ.

ನೀವು ಜನಸಂದಣಿ ಇರುವ ಸ್ಥಳಗಳಿಗೆ ಅಥವಾ ಅಂತಹ ಯಾವುದೇ ಮಾರುಕಟ್ಟೆಗೆ ಹೋದರೆ, ನಂತರ ಸಂಪೂರ್ಣವಾಗಿ ಜಾಗರೂಕರಾಗಿರಿ.. ಅದೇ ಸಮಯದಲ್ಲಿ, ಈ ಗ್ಯಾಂಗ್‌ನಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ದುಷ್ಕೃತ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಅದೇ ಸಮಯದಲ್ಲಿ, ಅನೇಕರು ಇದನ್ನು ಹಂಚಿಕೊಂಡಿದ್ದಾರೆ ಮತ್ತು ಪೊಲೀಸರಿಂದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇನ್ನು ಇಂತಹ ಘಟನೆ ಇದೇ ಮೊದಲಲ್ಲ ಎಂದು ಪೊಲೀಸರು ಹೇಳುತ್ತಾರೆ. ಇಂತಹ ಹಲವು ಘಟನೆಗಳು ನಡೆದಿವೆ. ಮತ್ತೊಂದೆಡೆ ಇಂತಹ ಘಟನೆಗಳಿಂದ ಜನ ಸಾಮಾನ್ಯರಷ್ಟೇ ಅಲ್ಲ, ವ್ಯಾಪಾರಸ್ಥರಲ್ಲೂ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

Continue Reading
Advertisement
Terrorist Attack
ಪ್ರಮುಖ ಸುದ್ದಿ14 mins ago

Terrorist Attack: ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದ ಸೇನೆ

karnataka weather Forecast
ಮಳೆ21 mins ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Noodles Side Effect
ಆರೋಗ್ಯ51 mins ago

Noodles Side Effect: ಇನ್‌ಸ್ಟಂಟ್‌ ನೂಡಲ್‌‌ಗಳನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದಿರಿ

NSUI
ದೇಶ7 hours ago

NSUI: ದೆಹಲಿ ವಿವಿಯಲ್ಲಿ ಗಲಾಟೆ ಮಾಡಿ, ರಾಮನ ಮೂರ್ತಿ ಒಡೆದ ಕಾಂಗ್ರೆಸ್‌ ವಿದ್ಯಾರ್ಥಿ ಘಟಕದ ಸದಸ್ಯರು; ಭಾರಿ ವಿವಾದ!

Yashasvi Jaiswal
ಕ್ರಿಕೆಟ್7 hours ago

Yashasvi Jaiswal : ಇನಿಂಗ್ಸ್​​ನ ಮೊದಲ ಎಸೆತಕ್ಕ 13 ರನ್​, ವಿನೂತನ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

MUDA Scam
ಕರ್ನಾಟಕ7 hours ago

MUDA Scam: ಮುಡಾ ಕೇಸ್ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ ರಾಜ್ಯ ಸರ್ಕಾರ; ಅಧಿವೇಶನಕ್ಕೂ ಮುನ್ನವೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನ

Hardik Pandya
ಕ್ರೀಡೆ8 hours ago

Hardik Pandya : ಪತ್ನಿ ಜತೆ ವಿಚ್ಛೇದನ ಸುದ್ದಿ ನಡುವೆ ರಷ್ಯನ್ ಮಾಡೆಲ್​ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಯಾರವರು?

Anant Ambani Wedding
ದೇಶ8 hours ago

ಅನಂತ್‌ ಅಂಬಾನಿ ಮದುವೆಯಲ್ಲಿ ಶಂಕರ್‌ ಮಹಾದೇವನ್‌, ಶ್ರೇಯಾ ಘೋಷಾಲ್ ಗಾಯನಕ್ಕೆ ಮನಸೋತ ಗಣ್ಯರು; Video ಇದೆ

Carlos Alcaraz
ಪ್ರಮುಖ ಸುದ್ದಿ9 hours ago

Wimbledon 2024 : ಜೊಕೊವಿಕ್ ಮಣಿಸಿದ 2ನೇ ವಿಂಬಲ್ಡನ್​ ಟ್ರೋಫಿ ಗೆದ್ದ ಕಾರ್ಲೋಸ್ ಅಲ್ಕರಾಜ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 mins ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ13 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ14 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ18 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ19 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌