Viral Video : ಸಿಂಹಿಣಿಯನ್ನು ಹೆದರಿಸಿ ಓಡಿಸಿದ ಆನೆಯ ವಿಡಿಯೊ ಭಾರೀ ವೈರಲ್ Vistara News

ವೈರಲ್ ನ್ಯೂಸ್

Viral Video : ಸಿಂಹಿಣಿಯನ್ನು ಹೆದರಿಸಿ ಓಡಿಸಿದ ಆನೆಯ ವಿಡಿಯೊ ಭಾರೀ ವೈರಲ್

ಆನೆಯೊಂದು ಸಿಂಹಿಣಿಗೆ ನೀರು ಹಾಕಿ, ಹೆದರಿಸಿ ಓಡಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಿಂಹ, ಸಿಂಹಿಣಿ ಕಂಡಾಕ್ಷಣ ಎಲ್ಲ ಪ್ರಾಣಿಗಳೂ ಹೆದರುತ್ತವೆ. ಆದರೆ ಈ ವಿಡಿಯೊದಲ್ಲಿ ಸಿಂಹಿಣಿಯನ್ನು ಕಂಡು ಆನೆ ಹೆದರಿಲ್ಲ, ಬದಲಾಗಿ ಆನೆಯನ್ನು ಕಂಡು ಸಿಂಹಿಣಿಯೇ ಹೆದರಿ ಓಡಿದೆ. ಅಂಥದ್ದೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral News : 14 ಕೋಟಿ ರೂ. ಮೌಲ್ಯದ 45 ವೈನ್‌ ಬಾಟಲ್‌ ಕದ್ದಿದ್ದ ಜೋಡಿಗೆ ಜೈಲು ಶಿಕ್ಷೆ
ಸಿಂಹಿಣಿಯೊಂದು ಬಾವಿಯ ಹಿಂದೆ ಮಲಗಿಕೊಂಡಿರುತ್ತದೆ. ಅದೇ ವೇಳೆ ಆನೆಯು ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ನೀರು ಕುಡಿಯುವುದಕ್ಕೆಂದು ಬಾವಿಯ ಹತ್ತಿರ ಬರುತ್ತದೆ. ಸಿಂಹಿಣಿ ಆನೆಯನ್ನು ನೋಡುವಷ್ಟರಲ್ಲಿ ಆನೆ ಬಾವಿಯ ಹತ್ತಿರ ಬಂದಿರುತ್ತದೆಯಾದ್ದರಿಂದ, ಆನೆ ನೀರು ಕುಡಿದು ಹೋದ ಮೇಲೆ ಇಲ್ಲಿಂದ ಬೇರೆಡೆಗೆ ಹೋಗೋಣವೆಂದು ಸಿಂಹಿಣಿ ಬಾವಿಯ ಹಿಂದೆ ಅಡಗಿಕೊಳ್ಳುತ್ತದೆ.

ಸ್ವಲ್ಪ ನೀರು ಕುಡಿದ ಆನೆಗೆ ಅಲ್ಲಿ ಸಿಂಹಿಣಿ ಅಡಗಿರುವುದು ಗೊತ್ತಾಗುತ್ತದೆ. ಸುಮ್ಮನಾಗದ ಅದು ಸೊಂಡಿಲಿನಲ್ಲಿ ನೀರು ತುಂಬಿಕೊಂಡು, ಸಿಂಹಿಣಿಯತ್ತ ಹಾರಿಸುತ್ತದೆ. ಸಿಂಹಿಣಿ ಗಾಬರಿಯಿಂದ ಓಡಲಾರಂಭಿಸುತ್ತದೆ. ಆನೆ ಕೂಡ ತಾನು ಬೆನ್ನಟ್ಟಿಕೊಂಡು ಬರುವಂತೆ ಸಿಂಹಿಣಿ ಹಿಂದೆ ಸ್ವಲ್ಪ ದೂರ ಓಡಿದಂತೆ ಮಾಡಿ ಆಮೇಲೆ ಸುಮ್ಮನಾಗುತ್ತದೆ.
ಈ ದೃಶ್ಯಗಳಿರುವ ವಿಡಿಯೊವನ್ನು ಲೇಟೆಸ್ಟ್‌ ಸೈಟಿಂಗ್ಸ್‌ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. “ಆನೆ ಬೃಹದಾಕಾರದ ಪ್ರಾಣಿ ಮಾತ್ರವಲ್ಲ, ಚಾಣಾಕ್ಷ ಪ್ರಾಣಿ ಕೂಡ” ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ. “ಕಾಡಿನ ರಾಣಿಗೇ ಹೆದರಿಸುವ ಧೈರ್ಯ ಆನೆಗಿದೆ” ಎಂದು ಕೆಲವರು ಕಾಮೆಂಟ್‌ನಲ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ತೆರಿಗೆಗಳ್ಳರ ಮೇಲೆ ಐಟಿ ದಾಳಿ; ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!

IT Raids: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಲಿಕ್ಕರ್ ವ್ಯಾಪಾರಿಗಳ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ನಗದನ್ನು ವಶಪಡಿಸಿಕೊಂಡಿದ್ದಾರೆ.

VISTARANEWS.COM


on

IT raids on liquor traders across Odisha and Jharkhand
Koo

ನವದೆಹಲಿ: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ (Odisha and Jharkhand) ಕಾರ್ಯಾಚರಣೆ ನಡೆಸುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಕಂಪನಿಯ (Boudh Distilleries Private Limited) ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ(IT Raids). ಕಂಪನಿಯ ಆವರಣದಲ್ಲಿ ಬೃಹತ್ ಪ್ರಮಾಣದಲ್ಲಿ ಕರೆನ್ಸಿ ನೋಟುಗಳನ್ನು (Currency Notes) ಜಪ್ತಿ ಮಾಡಿದೆ. ಅಂದಾಜು 150 ಕೋಟಿ ರೂ.ಗೂ ಅಧಿಕ ಹಣವನ್ನು ಸೀಜ್ ಮಾಡಲಾಗಿದೆ. ಅಂದ ಹಾಗೆ, ಈ ಕಂಪನಿಯು ಕಾಂಗ್ರೆಸ್ ಸಂಸದ (Congress MP) ಧೀರಜ್‌ ಸಾಹು ಅವರೊಂದಿಗೆ ನಂಟು ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಶ್ಚರ್ಯಕರ ಸಂಗತಿ ಎಂದರೆ, ಜಪ್ತಿ ಮಾಡಲಾದ ಹಣವನ್ನು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗಳು (Counting Machine) ಕೂಡ ಕೆಟ್ಟು ಹೋಗಿವೆ!

ಒಡಿಶಾ ಟಿವಿ ವರದಿಯ ಪ್ರಕಾರ, ದೇಶದ ಅತಿದೊಡ್ಡ ಪಶ್ಚಿಮ ಒಡಿಶಾದ ಮದ್ಯ ತಯಾರಿಕೆ ಮತ್ತು ಮಾರಾಟ ಸಂಸ್ಥೆಗಳಲ್ಲಿ ಒಂದಾದ ಬಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳ ಬೋಲಂಗಿರ್ ಕಚೇರಿಯಲ್ಲಿ ದಾಳಿಯ ಸಮಯದಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಾಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳು ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನ ಪಾಲುದಾರಿಕೆ ಸಂಸ್ಥೆಯಾಗಿದೆ ಎಂದು ವರದಿಯಾಗಿದೆ.

ಆರೋಪಿತ ಕಂಪನಿಗಳು ತೆರಿಗೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮ ವ್ಯಾಪಾರ ವಹಿವಾಟದ ಸಂಪೂರ್ಣ ಮಾಹಿತಿಯನ್ನು ನೀಡುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಕಂಪನಿಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಪುರುನಾಕಟಕದ ಉದ್ಯಮಿ ಅಶೋಕ್ ಕುಮಾರ್ ಅಗರ್ವಾಲ್ ಅವರ ನಿವಾಸದ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೋಲಂಗಿರ್‌ನಲ್ಲಿ ವಶಪಡಿಸಿಕೊಂಡ ಹಣವನ್ನು ಸಾಗಿಸಲು ಐಟಿ ಸಿಬ್ಬಂದಿ ಬ್ಯಾಗ್‌‌ಗಳಿಗೆ ಸಾಕಾಗಾಲಿಲ್ಲ. ನಗದು ಕಟ್ಟುಗಳನ್ನು ತುಂಬಲು ಖಾಲಿ ಚೀಲಗಳನ್ನು ತರಲಾಯಿತು. ಬುಧವಾರ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದರಿಂದ, 150 ಕ್ಕೂ ಹೆಚ್ಚು ಚೀಲಗಳು ಮತ್ತು ಚೀಲಗಳಲ್ಲಿ ಹಣವನ್ನು ಬೋಲಂಗಿರ್‌ನಲ್ಲಿರುವ ಎಸ್‌ಬಿಐ ಶಾಖೆಗೆ ತರಲಾಯಿತು ಮತ್ತು ಹಣದ ಎಣಿಕೆಯನ್ನು ಮುಂದುರಿಸಲಾಗುತ್ತದೆ ಎಂದು ವರದಿಯಾಗಿದೆ.

ಬೌಧ್ ಡಿಸ್ಟಿಲರೀಸ್ ಜೊತೆಗೆ ಜಾರ್ಖಂಡ್‌ನ ಖ್ಯಾತ ಉದ್ಯಮಿ ರಾಮಚಂದ್ರ ರುಂಗ್ಟಾ ಅವರ ಕಚೇರಿಗಳಲ್ಲೂ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ. ಇಂದು ಬೆಳಿಗ್ಗೆಯಿಂದ ಆದಾಯ ತೆರಿಗೆ ಇಲಾಖೆಯು ರಾಮಗಢ, ರಾಂಚಿ ಮತ್ತು ಇತರ ಸ್ಥಳಗಳಲ್ಲಿ ಅವರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ವರದಿಗಳ ಪ್ರಕಾರ, ರಾಮಗಢ ಮತ್ತು ರಾಂಚಿಯ ರುಂಗ್ಟಾಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ. ಸಿಆರ್‌ಪಿಎಫ್ ಸಿಬ್ಬಂದಿ ಆದಾಯ ತೆರಿಗೆ ಅಧಿಕಾರಿಗಳಿಗೆ ಭದ್ರತೆ ಒದಗಿಸುತ್ತಿದ್ದಾರೆ. ರಾಮ್‌ಗಢ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಮೀಪವಿರುವ ರಾಮಚಂದ್ರ ರುಂಗ್ಟಾ ಅವರ ವಸತಿ ಕಚೇರಿಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: IT Raids | ಡೋಲೋ 650 ಮಾತ್ರೆ ತಯಾರಿ ಕಂಪನಿಗೆ ಐಟಿ ದಾಳಿಯ ಡೋಸ್‌!

Continue Reading

ವಿದೇಶ

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Shotgun: ಶಾಲೆಗೆ ಶಾಟ್‌ಗನ್ ತಂದಿದ್ದ ಬಾಲಕಿ, ಮೊದಲು ಒಬ್ಬಳ ಮೇಲೆ ಶೂಟ್ ಮಾಡಿ ಕೊಂದಿದ್ದಾಳೆ. ಮತ್ತೆ ಇನ್ನು ಐವರ ಮೇಲೆ ಗುಂಡು ಹಾರಿಸಿದ್ದಾಳೆ.

VISTARANEWS.COM


on

A girl shoots her classmate and herself with shotgun
Koo

ಮಾಸ್ಕೋ: ರಷ್ಯಾ ಶಾಲೆಯೊಂದರಲ್ಲಿ (Russian School) ವಿದ್ಯಾರ್ಥಿಯೊಬ್ಬಳು (14 Year Girl) ಶಾಟ್‌ಗನ್‌ನಿಂದ (Shotgun) ಯದ್ವಾ ತದ್ವಾ ಗುಂಡು ಹಾರಿಸಿದ ಪರಿಣಾಮ ಒಬ್ಬ ಸಹಪಾಠಿ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಆರೋಪಿ ವಿದ್ಯಾರ್ಥಿನಿ ಕೂಡ ಕೊನೆಗೆ ಗುಂಡು ಹೊಡೆದುಕೊಂಡ ಮೃತಪಟ್ಟಿರುವ ಘಟನೆ ರಷ್ಯಾದ ಬ್ರಿಯಾನ್ಸ್ಕ್ (Russia Bryansk) ಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ. ಈ ಗುಂಡಿನ ದಾಳಿಯ ಕ್ಷಣಗಳನ್ನು ಹೊಂದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಹಾಗೆ ನೋಡಿದರೆ, ಗನ್‌ಗಳ ಕುರಿತಾದ ಕಠಿಣ ನಿಯಮ ಜಾರಿಯಲ್ಲಿರುವುದರಿಂದ ಶಾಲೆಗಳಲ್ಲಿ ಶೂಟೌಟ್ ನಡೆಯುವುದು ತಂಬಾ ವಿರಳ. ಹಾಗಿದ್ದೂ, ಇತ್ತೀಚಿನ ವರ್ಷಗಳಲ್ಲಿ ಆಗಾಗ ಈ ರೀತಿಯ ಘಟನೆಗಳು ವರದಿಯಾಗುತ್ತಿವೆ. 14 ವರ್ಷದ ಬಾಲಕಿಯೊಬ್ಬಳು ಶಾಲೆಗೆ ಪಂಪ್ ಆ್ಯಕ್ಷನ್ ಶಾಟ್‌ಗನ್ ತಂದಿದ್ದಳು ಮತ್ತು ತನ್ನ ಸಹಪಾಠಿಗಳಿಗೆ ಶೂಟ್ ಮಾಡಿದ್ದಾಳೆ. ಪರಿಣಾಮ ಸ್ವತಃ ಆಕೆಯ ಸಾಯುವುದು ಮಾತ್ರವಲ್ಲದೇ ಮತ್ತೊಬ್ಬ ಸಹಾಪಾಠಿಯನ್ನು ಕೊಂದಿದ್ದಾಳೆ. ಉಳಿದ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತನಿಖಾ ಸಮಿತಿಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶೂಟರ್ ಹೆಸರನ್ನು ರಷ್ಯನ್ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದರೂ, ಆಕೆ ಬ್ರಿಯಾನ್ಸ್ಕ್ ಉಪನಗರದಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ಹುಡುಗಿಯಾಗಿದ್ದಾಳೆ ಎಂದು ಹೇಳಿದ್ದಾರೆ. “ಅಪರಾಧದ ಹಿಂದಿನ ಉದ್ದೇಶಗಳು ಮತ್ತು ಎಲ್ಲಾ ಸಂದರ್ಭಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ತನಿಖಾ ಸಮಿತಿ ತಿಳಿಸಿದೆ.

ಗಾಯಗೊಂಡ ಐವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಹುಡುಗಿಯ ತಂದೆಯನ್ನು ಅವರು ವಾಸವಿರುವ ಅಪಾರ್ಟ್‌ಮೆಂಟ್‌ನಿಂದ ಕರೆ ತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾ ಸಮಿತಿ ಹೇಳಿದೆ.

ಬ್ರಿಯಾನ್ಸ್ಕ್ ಪ್ರದೇಶದ ಗವರ್ನರ್ ಅಲೆಕ್ಸಾಂಡರ್ ಬೊಗೊಮಾಜ್ ಅವರು ಗುಂಡಿನ ದಾಳಿಯನ್ನು “ಭಯಾನಕ ದುರಂತ” ಎಂದು ಕರೆದಿದ್ದಾರೆ. ಗಾಯಗೊಂಡ ಐವರು ಅಪ್ರಾಪ್ತರಾಗಿದ್ದು, ಅವರನ್ನು ಸ್ಥಳೀಯ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಇಬ್ಬರಿಗೆ ಲಘು ಗಾಯಗಳಾಗಿದ್ದು, ಉಳಿದ ಮೂವರಿಗೆ ಮಧ್ಯಮ ಗಾತ್ರದ ಗಾಯಗಳಾಗಿವೆ. ಬಾಲಕಿ ಶೂಟರ್ ಕೈಯಲ್ಲಿ ಸಾವನ್ನಪ್ಪಿದ ಬಾಲಕಿಯ ಪೋಷಕರಿಗೆ ನನ್ನ ಪ್ರಾಮಾಣಿಕ ಸಂತಾಪ. ಇದು ತುಂಬಲಾರದ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್ ಸಮೀಪದ ಬ್ರಿಯಾನ್ಸ್ಕ್ ನಗರದ ಮಧ್ಯಭಾಗದಲ್ಲಿರುವ ಜಿಮ್ನಾಷಿಯಂನಲ್ಲಿ ಈ ಶೂಟಿಂಗ್ ನಡೆದಿದೆ. ಬ್ರಿಯಾನ್ಸ್ಕ್ ನಗರವು ನೈಋತ್ಯ ರಷ್ಯಾದಲ್ಲಿದ್ದು, ಸುಮಾರು 370,000 ಜನರು ಇಲ್ಲಿ ವಾಸವಾಗಿದ್ದಾರೆ. ಉಕ್ರೇನ್‌ಗೆ ಹತ್ತಿರ ಇರುವುದಿರಂದ ಇಲ್ಲಿ ಆಗಾಗ ಗುಂಡಿನ ದಾಳಿಯನ್ನು ಕಾಣಬಹುದು. ಕೆಲವೊಮ್ಮೆ ಶೆಲ್ಲಿಂಗ್ ದಾಳಿ ಕೂಡ ನಡೆಯುತ್ತದೆ.

ಈ ಸುದ್ದಿಯನ್ನೂ ಓದಿ: ಅಮೆರಿಕ ಅಧ್ಯಕ್ಷ ಬೈಡೆನ್ ಮೊಮ್ಮಗಳ ಕಾರ್ ಮೇಲೆ ದಾಳಿ! ಗುಂಡು ಹಾರಿಸಿದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್!

Continue Reading

ಕ್ರಿಕೆಟ್

ಜಗಳಗಂಟ ಗಂಭೀರ್​ ಕರಾಳ ಮುಖ ತೆರೆದಿಟ್ಟ ಶ್ರೀಶಾಂತ್‌; ವಿಡಿಯೊ ವೈರಲ್​ 

ನೀನೊಬ್ಬ ಫಿಕ್ಸರ್​ ಎಂದು ಪದೇಪದೆ ಹೇಳುವ ಜತೆಗೆ ಅವಾಚ್ಯ ಪದಗಳಿಂದ ಗಂಭೀರ್​ ನಿಂದಿಸಿದ್ದಾರೆ ಎಂದು ಶ್ರೀಶಾಂತ್​ ಲೈವ್​ ವಿಡಿಯೊದಲ್ಲಿ ಹೇಳಿದ್ದಾರೆ.

VISTARANEWS.COM


on

sreesanth and gambhir
Koo

ಸೂರತ್: ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಪಂದ್ಯದಲ್ಲಿ ಮೈದಾನದಲ್ಲೇ ಮಾಜಿ ಟೀಮ್​ ಇಂಡಿಯಾದ ಆಟಗಾರರಾದ ಗೌತಮ್​ ಗಂಭೀರ್(Gautam Gambhir)​ ಮತ್ತು ಎಸ್​.ಶ್ರೀಶಾಂತ್(S. Sreesanth)​ ಅವರು ಕಿತ್ತಾಟ ನಡೆಸಿದ ವಿಡಿಯೊ ಈಗಾಗಲೇ ಎಲ್ಲಡೆ ಭಾರಿ ಸುದ್ದು ಮಾಡುತ್ತಿದೆ. ಇದೀಗ ಈ ಘಟನೆ ನಡೆಯಲು ನಿಜವಾದ ಕಾರಣ ಏನೆಂಬುದನ್ನು ಶ್ರೀಶಾಂತ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಲೈವ್​ ವಿಡಿಯೊ ಮೂಲಕ ರಿವಿಲ್​ ಮಾಡಿದ್ದಾರೆ.

ಸೂರತ್‌ನಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯಾ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (LLC 2023- ಎಲ್‌ಎಲ್‌ಸಿ 2023) ಎಲಿಮಿನೇಟರ್ ಪಂದ್ಯದಲ್ಲಿ ಶ್ರೀಶಾಂತ್ ಮತ್ತು ಗೌತಮ್‌ ಗಂಭೀರ್ ನಡುವೆ ಜಗಳ ನಡೆದಿತ್ತು. ಇವರಿಬ್ಬರ ಈ ಜಗಳದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಭಾರಿ ವೈರಲ್​ ಆಗುವುದರ ಜತೆಗೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಕ್ಯಾಪಿಟಲ್ಸ್ ನಾಯಕ ಗಂಭೀರ್, ಶ್ರೀಶಾಂತ್ ಅವರ ಬಾಲ್‌ಗಳಿಗೆ ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ಉತ್ತರಿಸಿದರು. ಇದರಿಂದ ಹತಾಶೆಗೀಡಾದ ಶ್ರೀಶಾಂತ್ ಗಂಭೀರ್‌ ಕಡೆಗೆ ತೀಕ್ಷ್ಣವಾಗಿ ನೋಡುತ್ತಾ ಸ್ಲೆಡ್ಜಿಂಗ್‌ ಮಾಡಿದ್ದಾರೆ. ಪ್ರತಿಯಾಗಿ ಗಂಭೀರ್ ಕೂಡ ಏನನ್ನೋ ಗೊಣಗುತ್ತಾ ಶ್ರೀಶಾಂತ್‌ ಅವರನ್ನು ಗುರಾಯಿಸಿದರು. ವಿರಾಮದ ಸಮಯದಲ್ಲಿ ಕೂಡ ಅವರಿಬ್ಬರೂ ಬೈಗುಳ ವಿನಿಮಯ ಮಾಡಿಕೊಂಡಿದ್ದಾರೆ.

ಜಗಳಕ್ಕೆ ಕಾರಣವೇನು?

ಆರಂಭದಲ್ಲಿ ಇದು ಶ್ರೀಶಾಂತ್​ ಮಾಡಿದ ಕಿತಾಪತಿ ಎನ್ನಲಾಗಿತ್ತು. ಇದೇ ಕಾರಣಕ್ಕೆ ಗಂಭೀರ್​ ಅವರು ಕೆರಳಿದ್ದು ಎಂದು ಹೇಳಲಾಗಿತ್ತು. ಆದರೆ ಇದೀಗ ನೈಜ ವಿಚಾರವನ್ನು ಶ್ರೀಶಾಂತ್​ ಬಹಿರಂಗಪಡಿಸಿದ್ದಾರೆ. ಲೈವ್​ ವಿಡಿಯೊ ಮೂಲಕ ಮಾತನಾಡಿದ ಶ್ರೀಶಾಂತ್, ನಾನು ಗಂಭೀರ್​ ಅವರಿಗೆ ಒಂದು ಸಣ್ಣ ಕಟ್ಟ ಪದ ಬಳಸಿಯೂ ಬೈದಿಲ್ಲ. ಈ ವಿಚಾರ ಫೀಲ್ಡ್​ ಅಂಪೈರ್​ಗೂ ತಿಳಿದಿದೆ. ಅವರೇ ನನ್ನನ್ನು ನೋಡಿ ನೀನೊಬ್ಬ ಫಿಕ್ಸರ್​ ಎಂದು ಪದೇಪದೆ ಹೇಳುವ ಮೂಲಕ ನನ್ನನ್ನು ಹೀಯಾಳಿಸಿದರು. ಆಗ ನಾನು ಅವರ ಬಳಿ ಪ್ರಶ್ನೆ ಮಾಡಿ ಏನು ಇನ್ನೊಮ್ಮೆ ಈ ಮಾತನ್ನು ಹೇಳಿ ಎಂದು ಹೇಳುತ್ತ ಅವರ ಬಳಿಗೆ ಬಂದೆ ಈ ವೇಳೆ ಸಹ ಆಟಗಾರರ ತಡೆದರು. ನಾನು ನಿಜವಾಗಿಯೂ ಯಾವುದೇ ಕಿರಿಕ್​ ಮಾಡಿಲ್ಲ” ಎಂದು ಶ್ರೀಶಾಂತ್​ ಈ ವಿಡಿಯೊದಲ್ಲಿ ಹೇಳಿದ್ದಾರೆ.

“ಗಂಭೀರ್​ ನನ್ನನ್ನು ಫೀಕ್ಸರ್​ ಎಂದು ಕರೆಯುವ ಜತೆಗೆ ಇನ್ನೂ ಕೆಲ ಅವಾಚ್ಯ ಪದಗಳಿಂದ ನಿಂದಿಸಿದರು. ನಾನ್ನ ಮೇಲಿದ್ದ ಫಿಕ್ಸಿಂಗ್ ಆರೋಪ ಸುಳ್ಳು ಎನ್ನುವುದು ಈಗಾಗಕಲೇ ಸಾಭೀತಾಗಿದೆ. ನಾನು ನನ್ನ ಕುಟುಂಬದ ಜತೆ ಮಾನ್ಯವಾಗಿ ಜೀವಿಸುವ ವ್ಯಕ್ತಿಯಾಗಿದ್ದೇನೆ” ಎಂದು ಶ್ರೀಶಾಂತ್​ ಹೇಳಿದ್ದಾರೆ.

ಇದನ್ನೂ ಓದಿ Gautam Gambhir: ʼಯಾಕೋ ಗುರಾಯಿಸ್ತೀಯಾ?ʼ ಕ್ರೀಡಾಂಗಣದಲ್ಲಿ ಶ್ರೀಶಾಂತ್-‌ ಗಂಭೀರ್ ಕಿರಿಕ್‌

ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್‌, ಐಪಿಎಲ್ ಪಂದ್ಯದ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪಕ್ಕೆ ಗುರಿಯಾದ ಬಳಿಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಕೆಲವು ವರ್ಷಗಳ ಹಿಂದೆ ನ್ಯಾಯಾಲಯ ಈ ನಿಷೇಧವನ್ನು ತೆಗೆದುಹಾಕಿದ್ದು, ಶ್ರೀಶಾಂತ್ ನಂತರ ವಿವಿಧ ಲೀಗ್‌ಗಳನ್ನು ಆಡುತ್ತಿದ್ದಾರೆ. ಪಂದ್ಯದ ವೇಳೆ ಗಂಭೀರ್ ತನಗೆ ನಿಖರವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸುವುದಾಗಿ ಶ್ರೀಶಾಂತ್‌ ಹೇಳಿದ್ದು, ಈ ಮಾತುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ನೋವುಂಟು ಮಾಡಿದೆ ಎಂದಿದ್ದಾರೆ.

ಗಂಭೀರ್​ ಅವರು ಸಹ ಆಟಗಾರರೊಂದಿಗೆ ಈ ರೀತಿ ಕಿರಿಕ್​ ಮಾಡುತ್ತಿರುವುದು ಇದೇ ಮೊದಲೇನಲ್ಲ. ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಜತೆ ಹಲವು ಬಾರಿ ಮೈದಾನದಲ್ಲಿ ಇದೇ ರೀತಿಯ ಕಿರಿಕ್​ ಮಾಡಿದ್ದಾರೆ. ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಗಂಭೀರ್​ ಅವರು ನವೀನ್​ ಉಲ್​ ಹಕ್​ ವಿಚಾರವಾಗಿ ಕೊಹ್ಲಿ ಜತೆ ಅನಗತ್ಯವಾಗಿ ಜಗಳವಾಡಿದ್ದರು.

Continue Reading

ಕರ್ನಾಟಕ

Love failure: ಪ್ರೀತಿಸಿ ಕೈಬಿಟ್ಟಳು; ನೊಂದು ಬೆಂಕಿ ಹಚ್ಚಿಕೊಂಡ ಪ್ರೇಮಿ!

Love failure : ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದವಳು ಏಕಾಏಕಿ ಬಿಟ್ಟು ಹೋಗಿದ್ದಕ್ಕೆ ಮನನೊಂದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾನೆ.

VISTARANEWS.COM


on

By

Rakesh Youth commits suicide by pouring petrol on himself
Koo

ಬೆಂಗಳೂರು: ಪ್ರೀತಿಸಿದ ಹುಡುಗಿ ಏಕಾಏಕಿ ಪ್ರೀತಿಯನ್ನು ನಿರಾಕರಿಸಿ (Love failure) ಬಿಟ್ಟು ಹೋಗಿದ್ದಕ್ಕೆ ಮನನೊಂದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ರಾಕೇಶ್ ಮೃತ ದುರ್ದೈವಿ. ರಾಕೇಶ್‌ ಐದಾರು ವರ್ಷದಿಂದ‌ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಇಬ್ಬರು ಪಾರ್ಕ್‌, ಸಿನಿಮಾ ಎಂದು ಊರು ಊರು ತಿರುಗಿದ್ದರು. ಆದರೆ ಇತ್ತೀಚೆಗೆ ರಾಕೇಶ್‌ನನ್ನು ಯುವತಿ ಅವಾಯ್ಡ್‌ ಮಾಡಲು ಶುರು ಮಾಡಿದ್ದಳು.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳು ಏಕಾಏಕಿ ದೂರಾಗಿದ್ದಳು. ಮಸೇಜ್‌, ಫೋನ್‌ ಕಾಲ್‌ಗೂ ರೆಸ್ಪಾನ್ಸ್‌ ಮಾಡುತ್ತಿರಲಿಲ್ಲ. ಈ ನಡುವೆ ಬೇರೆ ಯುವಕನ ಜತೆ ಮದುವೆಗೆ ಸಿದ್ಧತೆಯನ್ನು ನಡೆಸಿದ್ದಳು. ಈ ವಿಷಯ ತಿಳಿದು ನಿನ್ನೆ ಬುಧವಾರ ರಾಕೇಶ್ ನೇರ ಯುವತಿ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ. ಈ ವೇಳೆ ರಾಕೇಶ್ ಹಾಗೂ ಯುವತಿ ನಡುವೆ ಗಲಾಟೆ ಆಗಿತ್ತು.

ಪ್ರೀತಿಸಿದವಳು ಮೋಸ ಮಾಡಿಬಿಟ್ಟಳೆಂದು ಮನನೊಂದಿದ್ದ ರಾಕೇಶ್‌, ಮನೆಗೆ ಬಂದವನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಗಾಯಾಳು ರಾಕೇಶ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬೆಂಕಿ ತೀವ್ರತೆಗೆ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿಯೇ ಮೃತಪಟ್ಟಿದ್ದಾನೆ. ರಾಕೇಶ್ ಕುಟುಂಬಸ್ಥರು ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಂದದ ಹುಡುಗಿ ಅಂತ ಆಸೆಪಟ್ಟು ರೂಮಿಗೆ ಹೋದರೆ ಅಲ್ಲಿ ಕಂಡಿದ್ದೇ ಬೇರೆ!

ಬೆಂಗಳೂರು: ಅವರು ಸೂರತ್‌ ಮೂಲದ ಒಬ್ಬ ನಿವೃತ್ತ ಅಧಿಕಾರಿ (Retired officer). ಗಜೆಟೆಡ್‌ ಹುದ್ದೆಯಲ್ಲಿದ್ದವರು. ಬೆಂಗಳೂರಿಗೆ ಯಾವುದೋ ಟ್ರಿಪ್‌ ಮೇಲೆ (Officer came on trip to Bangalore) ಬಂದಿದ್ದರು. ಊರು ಬಿಟ್ಟು ಬೆಂಗಳೂರಿಗೆ ಬಂದ ಅವರು ಸ್ವಲ್ಪ ಮೈ ಚಳಿ ಬಿಟ್ಟು ಸುತ್ತಾಡಿದ್ದರು. ಆಗ ಅವರಿಗೆ ಚರ್ಚ್‌ ಸ್ಟ್ರೀಟ್‌ನಲ್ಲಿ (Church Street) ಒಬ್ಳು ಸುಂದರವಾದ ಹುಡುಗಿ ಸಿಗ್ತಾಳೆ (A Beautiful Girl). ಅದೂ ಇದೂ ಮಾತಾಡೋ ಹೊತ್ತಿಗೆ 61ರ ವಯಸ್ಸಿನಲ್ಲಿ 16ರ ಕಾಮನೆ ಕೆರಳಿಬಿಡುತ್ತದೆ ಈ ರಿಟೈರ್ಡ್‌ ಆಫೀಸರ್‌ಗೆ. ಚಂದದ ಹುಡುಗಿ, ಬೆಂಗಳೂರಿನ ಹಿತವಾದ ವಾತಾವರಣ, ಚರ್ಚ್‌ ಸ್ಟ್ರೀಟ್‌ನ ಹಿತವಾದ ಜಾಗ. ಇದಕ್ಕಿಂತ ಬೇರೆ ಬೇಕಾ ಎಂದು ಮಾತನಾಡುತ್ತಲೇ ಹುಡುಗಿಯನ್ನು ಸೆಟ್‌ ಮಾಡಿಕೊಂಡರು. ಆಕೆಯೋ ಮೊದಲೇ ಪಳಗಿದ ಹುಡುಗಿ. ಇವರು ನಾನ್‌ ರೆಡಿ ಎಂದ ಕೂಡಲೇ ಆಟೋ ಅಂತ ಕೂಗಿ ಕರೆದಳು. ಅವರಿಬ್ಬರು ಹೋಗಿದ್ದು ಒಂದು ಮನೆಗೆ!

ಅದುಮಿಟ್ಟಿದ್ದ ಆಕಾಂಕ್ಷೆಗಳನ್ನು ಬೆಂಗಳೂರಿನಲ್ಲಿ ಪೂರ್ಣವಾಗಿ ತೆರೆದಿಡುವ ಉತ್ಸಾಹದಲ್ಲಿ ಹೋಗಿದ್ದ ನಿವೃತ್ತ ಅಧಿಕಾರಿಗೆ ಅಲ್ಲಿ ಒಬ್ಬಳಲ್ಲ, ಇಬ್ಬರು ಸುಂದರಿಯರು ಸಿಕ್ಕರು. ಒಂದಕ್ಕೆ ಒಂದು ಫ್ರೀ ಎಂದು ಖುಷಿಯಲ್ಲಿದ್ದ ಅವರ ಉತ್ಸಾಹ ಕೆಲವೇ ಕ್ಷಣಗಳಲ್ಲಿ ಇಳಿದುಹೋಯಿತು. ಹಾಗಿದ್ದರೆ ಅಲ್ಲಿ ನಡೆದಿದ್ದೇನು? (Fraud Case) ಇದು ಯಾರೋ ಹೇಳಿದ ಕಥೆಯಲ್ಲ, ಸ್ವತಃ ಆ ವ್ಯಕ್ತಿಯೇ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ಗೆ ಬಂದು ವಿವರಿಸಿದ ರೋಚಕ ಕಹಾನಿ.

ನಾನು ಹಿಮವತ್‌ (ಹೆಸರು ಬದಲಿಸಿದೆ) ಅಂತ. ಸೂರತ್‌ ನನ್ನ ಊರು, ನಿವೃತ್ತ ಅಧಿಕಾರಿ. ಬೆಂಗಳೂರಿಗೆ ಒಂದು ಕೆಲಸದಲ್ಲಿ ಬಂದಿದ್ದೆ. ಇಲ್ಲೇ ಒಂದು ಹೋಟೆಲ್‌ನಲ್ಲಿ ರೂಮ್‌ ಮಾಡಿದ್ದೆ. ನನಗೆ ಒಂದು ಬ್ಯಾಗ್‌ ಬೇಕಿತ್ತು. ಹಾಗಾಗಿ ನಾನು ನವೆಂಬರ್‌ 29ರಂದು ಸಂಜೆ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಅಲ್ಲಿ ಮಲ್ಟಿನ್ಯಾಷನಲ್‌ ಕಾಫಿ ಚೈನ್‌ನ ಒಂದು ಔಟ್‌ ಲೆಟ್‌ ಎದುರು ನಿಂತಿದ್ದಾಗ ಒಬ್ಬ ಹುಡುಗಿ ಪರಿಚಯ ಆದ್ಳು. ನಾವಿಬ್ಬರೂ ಮಾತನಾಡಿಕೊಂಡೆವು.

ನಾನೂ ಸೂರತ್‌ ನಿಂದ ಬಂದಿದ್ದೆ. ಬೆಂಗಳೂರಿನ ಹುಡುಗಿಯರು ಹೇಗೆ ಅಂತ ನೋಡುವ ಆಸೆ ಆಯಿತು. ಇಬ್ಬರೂ ಒಪ್ಪಿಕೊಂಡು ಒಂದು ಸುತ್ತಿನ ಸುಖ ಪಡೆಯುವುದು ಎಂದು ತೀರ್ಮಾನ ಮಾಡಿದೆವು. ಇದು ಸೆಕ್ಸ್‌ ಫಾರ್‌ ಮನಿ ಡೀಲ್‌. ಅಷ್ಟೆಲ್ಲ ಆಗುವಾಗ ರಾತ್ರಿ 9.35 ಆಗಿತ್ತು. ಆಕೆ ಒಂದು ಆಟೊವನ್ನು ಕರೆದು ನನ್ನನ್ನು ಇಂದಿರಾನಗರದ ಒಂದು ಕೋಣೆಗೆ ಕರೆದುಕೊಂಡು ಹೋದಳು. ಅಲ್ಲಿ ಹೋಗಿ ನೋಡಿದರೆ ಅಲ್ಲಿ ಇನ್ನೊಬ್ಬಳಿದ್ದಳು. ನಾವು ಇಬ್ಬರೂ ಸೇವೆಗೆ ಸಿದ್ಧ ಎಂದು ಅವರು ಹೇಳಿದರು. ನಂಗೂ ಖುಷಿಯಾಯಿತು. ಕೆಲವು ನಿಮಿಷ ಮಾತನಾಡಿ ನಾನು ನನ್ನ ಖುಷಿಯ ಕ್ಷಣಗಳನ್ನು ಪಡೆಯುವ ಉದ್ದೇಶದಿಂದ ಸಿದ್ಧನಾಗುತ್ತಿದ್ದರೆ, ಅವರಿಬ್ಬರೂ ರೆಡಿ ಆದರು. ಆದರೆ, ನಾನು ಅವರಿಬ್ಬರನ್ನೂ ನೋಡಿ ಬೆಚ್ಚಿ ಬಿದ್ದೆ. ಯಾಕೆಂದರೆ, ಅವರಿಬ್ಬರು ಹುಡುಗಿಯರಾಗಿರಲೇ ಇಲ್ಲ. ಇಬ್ಬರೂ ತೃತೀಯ ಲಿಂಗಿಗಳಾಗಿದ್ದರು.

ಯಾಕೆ ಹೀಗೆ ಮೋಸ ಮಾಡಿದೆ ಎಂದು ನಾನು ಜಗಳ ಮಾಡಿದೆ. ಆಗ ನನ್ನನ್ನು ಕರೆದುಕೊಂಡು ಬಂದವಳು, ನಿನಗೆ ವಯಸ್ಸಾಗಿದೆ, ಇದರಲ್ಲೇ ಅಜಸ್ಟ್‌ ಮಾಡಿಕೋ ಎಂದು ಹೇಳಿದಳು. ನಾನು ಆಕೆ ಮೋಸ ಮಾಡಿದ್ದಕ್ಕೆ ಬೈದೆ. ಆಗ ಅವರಿಬ್ಬರೂ ಸೇರಿ ನನ್ನ ಮೇಲೆ ಮುಗಿಬಿದ್ದರು. ನನ್ನ ಕೈಯಲ್ಲಿದ್ದ 10,00೦ ರೂ. ಭಾರತೀಯ ಕರೆನ್ಸಿ ಮತ್ತು 9500 ರೂ. ಮೌಲ್ಯದ 4000 ಥಾಯ್‌ ಬಹ್ತ್‌ ಕಿತ್ತುಕೊಂಡರು. ನನಗೆ ಬೆದರಿಕೆ ಹಾಕಿ ನನ್ನ ಮೊಬೈಲನ್ನು ಕಿತ್ತುಕೊಂಡರು. ನನ್ನ ಡಿಜಿಟಲ್‌ ಪೇಮೆಂಟ್‌ ಆಪ್‌ನ ಪಾಸ್‌ ವರ್ಡ್‌ ಕೂಡಾ ಬೆದರಿಸಿ ಪಡೆದುಕೊಂಡರು. ಅದರಿಂದ 30,000 ರೂ.ವನ್ನು ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡರು.

ಯಾರಿಗಾದರೂ ಈ ವಿಷಯ ಹೇಳಿದರೆ ಹುಷಾರ್‌ ಎಂದು ಹೆದರಿಸಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ನಾನು ಸಿಕ್ಕಿದ ರಿಕ್ಷಾ ಹಿಡಿದುಕೊಂಡು ನನ್ನ ರೂಮಿಗೆ ಬಂದೆ. ಮಾರನೇ ದಿನ ಮತ್ತೆ ಅದೇ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಆಕೆ ಅಲ್ಲೇ ಬರಬಹುದಾ ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ಆಕೆ ಬಂದಿರಲಿಲ್ಲ. ನಂತರ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ಗೆ ಹೋಗಿ ದೂರು ನೀಡಿದೆ. ಬೆಂಗಳೂರಿನಲ್ಲಿ ಪುರುಷರನ್ನು ಈ ರೀತಿಯಲ್ಲಿಯೂ ಯಾಮಾರಿಸುತ್ತಾರೆ ಎಂದು ಹೇಳಿದೆ.

ಇದಿಷ್ಟು ಹಿಮವತ್‌ ಅಲ್ಲಿ ನಡೆದುದನ್ನು ಹೇಳಿದ್ದು. ಈಗ ದೂರು ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಪೊಲೀಸರು ಏನು ಹೇಳುತ್ತಾರೆ ಕೇಳಿ..

ಆ ನಿವೃತ್ತ ಅಧಿಕಾರಿ ಆ ಕೋಣೆಗೆ ಹೋಗಿದ್ದು ನಿಜ ಇರಬಹುದು. ಆದರೆ, ಅವರು ಹೆಣ್ಣು ಎಂದುಕೊಂಡೇ ಹೋಗಿದ್ದರಾ ಅಥವಾ ತೃತೀಯ ಲಿಂಗಿ ಎಂದು ಗೊತ್ತಿದ್ದೇ ಹೋಗಿದ್ದಾರಾ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಅವರು ನೀಡಿದ ಗುರುತಿನ ಆಧಾರದಲ್ಲಿ ಪತ್ತೆ ಹಚ್ಚಿ ವಿಚಾರಣೆ ನಡೆಸುತ್ತೇವೆ. ಬಳಿಕ ವಿಷಯ ಸ್ಪಷ್ಟವಾಗಲಿದೆ.

ಇಷ್ಟು ಹೇಳಿದ ಮೇಲೆ ಒಂದು ವಿಷಯ ಹೇಳಲೇಬೇಕು: ನೀವು ಅಪರಿಚಿತ ಹೆಣ್ಮಕ್ಕಳ ಜತೆ ವ್ಯವಹರಿಸುವಾಗ ಎಚ್ಚರವಾಗಿರಿ. ಮೋಸ ಹೋಗಬೇಡಿ. ಇದು ಪೊಲೀಸರ ಸಲಹೆಯೂ ಹೌದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Vistara News impact, Governmet to scrap 7 d rule of SCSP and TSP act
ಕರ್ನಾಟಕ5 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್5 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್6 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ6 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check7 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20237 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Inauguration of Hulleshwar Jnana vikas Center at Yakshi Village
ಶಿವಮೊಗ್ಗ7 hours ago

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

14 Medium and Large Irrigation Projects Completed in Kalyana Karnataka says Minister Ramalinga reddy
ಕರ್ನಾಟಕ7 hours ago

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

More than a hundred people from Kiravatti have joined the Congress party
ಉತ್ತರ ಕನ್ನಡ7 hours ago

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

Vistara Top 10 News 7-12
ಕರ್ನಾಟಕ8 hours ago

VISTARA TOP 10 NEWS : ಮೌಲ್ವಿ ಐಸಿಸ್‌ ಸಂಪರ್ಕ ನಿಜವೇ? ಹಳೆಪಿಂಚಣಿ ಮರುಜಾರಿ ಖಚಿತವೇ? ಇತರ ಪ್ರಮುಖ ಸುದ್ದಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ10 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ11 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ16 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ24 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 days ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌