Viral Video: ಬಸ್ ಚಾಲಕನ ಸೀಟಿನಲ್ಲಿ ಕುಳಿತು ಚಾಲಕನಿಗೇ ಬೇರೆ ಸೀಟ್‌ನಲ್ಲಿ ಕೂರಲು ಹೇಳಿದ ಮಹಿಳೆ, ವಿಡಿಯೊ ವೈರಲ್‌ - Vistara News

ವೈರಲ್ ನ್ಯೂಸ್

Viral Video: ಬಸ್ ಚಾಲಕನ ಸೀಟಿನಲ್ಲಿ ಕುಳಿತು ಚಾಲಕನಿಗೇ ಬೇರೆ ಸೀಟ್‌ನಲ್ಲಿ ಕೂರಲು ಹೇಳಿದ ಮಹಿಳೆ, ವಿಡಿಯೊ ವೈರಲ್‌

ಬಸ್ಸಿನ ಚಾಲಕನ ಸೀಟಿನಲ್ಲಿ ಕುಳಿತ ಮಹಿಳೆ ಚಾಲಕನಿಗೇ ಬೇರೆ ಸೀಟಲ್ಲಿ ಕುಳಿತುಕೊಳ್ಳಲು ಸೂಚಿಸುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಎಂತೆಂಥಾ ವಿಡಿಯೊಗಳು ವೈರಲ್‌ ಆಗುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ಮಹಿಳೆಯೊಬ್ಬಳು ಬಸ್ಸಿನ ಚಾಲಕನ ಸೀಟಿನಲ್ಲಿ ಕುಳಿತು, ಚಾಲಕನೊಂದಿಗೇ ಜಗಳವಾಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Viral Video: ಚಲಿಸುತ್ತಿದ್ದ ಕಾರಿನಲ್ಲಿ ಕುಳಿತು ರಸ್ತೆಗೆ ಹಣ ಎಸೆದ ಯುವಕ​; ವೆಬ್ ಸಿರೀಸ್​ ದೃಶ್ಯ ಮರು ಸೃಷ್ಟಿಸಿದವ ಅರೆಸ್ಟ್​
ಮಹಿಳೆಯೊಬ್ಬಳು ಬಸ್ಸಿನ ಚಾಲಕನ ಸೀಟಿನಲ್ಲಿ ಕುಳಿತಿದ್ದಾಳೆ. ಬಸ್ಸಿನ ಬಳಿ ಬಂದ ಚಾಲಕ, ಆಕೆಗೆ ಆ ಸೀಟಿನಿಂದ ಇಳಿಯಲು ಹೇಳಿದರೂ ಆಕೆ ಒಪ್ಪದೆ ಚಾಲಕನೊಂದಿಗೆ ಜಗಳಕ್ಕೆ ನಿಲ್ಲುತ್ತಾಳೆ. ಅದೇ ಸೀಟಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆ ಮಹಿಳೆಯ ಅತ್ತೆಯೂ ಕೂಡ ಜಗಳದಲ್ಲಿ ಭಾಗಿಯಾಗುತ್ತಾಳೆ. ತನಗೆ ಆ ಸೀಟು ಏಕೆ ಬೇಕೆಂದು ಚಾಲಕ ಹೇಳಲು ಯತ್ನಿಸಿದರೂ ಕೇಳದ ಮಹಿಳೆ ಚಾಲಕನಿಗೆ ಬೇರೆ ಸೀಟಲ್ಲಿ ಕೂರುವುದಕ್ಕೆ ಹೇಳುತ್ತಾಳೆ. ಸಾಕಷ್ಟು ಸಮಯ ಜಗಳ ಆಡಿದ ನಂತರ ಮಹಿಳೆ ಮಣಿದು, ಚಾಲಕನ ಸೀಟಿನಿಂದ ಕೆಳಗಿಳಿಯುತ್ತಾಳೆ.


ಈ ದೃಶ್ಯವಿರುವ ವಿಡಿಯೊವನ್ನು ಟ್ವಿಟರ್‌ ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊಗೆ ನೆಟ್ಟಿಗರು ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವುದಕ್ಕೆಂದು ಮಾಡಿರುವ ವಿಡಿಯೊ ಎಂದು ಜನರು ಹೇಳಲಾರಂಭಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Forest Bathing: ಬೆಂಗಳೂರಿನಲ್ಲಿ ಕಂಪನಿಯೊಂದು ಕೊಟ್ಟ ಆಫರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ನೆಟ್ಟಿಗರ ಬ್ಯಾಕ್‌ ಟು ಬ್ಯಾಕ್‌ ಕಾಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ . ಇಷ್ಟಕ್ಕೂ ಕಂಪನಿ ಕೊಟ್ಟ ಆಫರ್‌ ಏನು ಅಂತೀರಾ ಇಲ್ಲಿದೆ ನೋಡಿ ಡಿಟೈಲ್ಸ್‌.

VISTARANEWS.COM


on

By

Forest bathing activity begins at Cubbon Park
Koo

ಬೆಂಗಳೂರು : ಬೆಂಗಳೂರಿಗರ ನೆಚ್ಚಿನ ಉದ್ಯಾನವನದಲ್ಲಿ ಕಬ್ಬನ್‌ಪಾರ್ಕ್‌ (Cubbon park) ಕೂಡ ಒಂದು. ಜನರ ನೆಚ್ಚಿನ ತಾಣವಾದ ಕಬ್ಬನ್‌ ಪಾರ್ಕ್‌ನಲ್ಲಿ ಮರ ತಬ್ಬಿಕೊಳ್ಳಲು 1500 ರೂ. ಶುಲ್ಕ ಕೊಡಬೇಕು. ಅರೇ ಸರ್ಕಾರ ಯಾವಾಗ ಈ ರೂಲ್ಸ್‌ ತಂದಿದೆ ಅಂತ ಅಂದುಕೊಂಡ್ರಾ? ಖಂಡಿತ ಇಲ್ಲ, ಇದು ಕಂಪೆನಿಯೊಂದು ಶುರು ಮಾಡಿರುವ (Forest Bathing) ಫಾರೆಸ್ಟ್‌ ಬಾಥಿಂಗ್‌.. ಟ್ರೋವ್ ಹೆಸರಿನ ಸಂಸ್ಥೆಯೊಂದು (Trove Experinces) ಫಾರೆಸ್ಟ್‌ ಬಾಥಿಂಗ್‌ ಚಟುವಟಿಕೆಯನ್ನು ಆಯೋಜಿಸಿದೆ. ಇದೇ ಏಪ್ರಿಲ್ 28ರಂದು ನಡೆಯಲಿರುವ ಈವೆಂಟ್‌ಗೆ ಎಂಟ್ರಿ ಫೀಸ್‌ ಕೂಡ ಇದೆ. ಈ ಫಾರೆಸ್ಟ್‌ ಬಾಥಿಂಗ್‌ ಅನುಭವ ಪಡೆಯಲು ಬರೋಬ್ಬರಿ 1,500 ರೂ. ಟಿಕೆಟ್‌ ಬೆಲೆಯನ್ನು ನಿಗಧಿ ಮಾಡಲಾಗಿದೆ.

ಜೋಳದ ರೊಟ್ಟಿ (Jolad rotti) ಎಂಬ ಎಕ್ಸ್‌ ಅಕೌಂಟ್‌ನಲ್ಲಿ ಅಜಯ್‌ (Ajayawhy) ಎಂಬುವವರು ಫಾರೆಸ್ಟ್‌ ಬಾಥಿಂಗ್‌ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೊ ಅಡಿಬರಹದಲ್ಲಿ ಮಾರ್ಕೆಟ್‌ನಲ್ಲಿ ಹೊಸ ಸ್ಕ್ಯಾಮ್‌ ಬಂದಿದೆ ನೋಡಿ ಎಂದು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಪಾಸ್‌ ಆಗುತ್ತಿದ್ದು, ಬಹುತೇಕರು ಕಬ್ಬನ್‌ ಪಾರ್ಕ್‌ನಲ್ಲಿ ಉಚಿತವಾಗಿಯೇ ಮರಗಳನ್ನು ಒಪ್ಪಿಕೊಳ್ಳಬಹುದು, ಈ ಚಟುವಟಿಕೆಗೆ ಹಣ ಕೊಡುವ ಅಗತ್ಯ ಏನಿದೆ. ಇದೆಲ್ಲ ಹಣ ಮಾಡುವ ಹೊಸ ಸ್ಕ್ಯಾಮ್‌ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಹೈಕೋರ್ಟ್‌ ಹಿಂಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದಿ ಹೀಲಿಂಗ್‌ ಪವರ್‌ ಆಫ್‌ ಫಾರೆಸ್ಟ್‌ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಫಾರೆಸ್ಟ್‌ ಬಾಥಿಂಗ್‌ ಅನುಭವವನ್ನು ಪಡೆದು ಒತ್ತಡವನ್ನು ದೂರ ಮಾಡಿ ಎಂದು ಪೋಸ್ಟ್‌ ಹಾಕಲಾಗಿದೆ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

ಇನ್ನೂ ನೆಟ್ಟಿಗರಿಂದ ಪರ-ವಿರೋಧದದ ಪ್ರತಿಕ್ರಿಯೆಗಳು ಬಂದಿವೆ. ದೈನಂದಿನ ಜೀವನದಲ್ಲಿ ಮನೆ- ಕಚೇರಿಗೆ ಸೀಮಿತವಾಗಿದ್ದರೆ, ಕಬ್ಬನ್ ಪಾರ್ಕ್ ಖಂಡಿತವಾಗಿಯೂ ಕಾಡಿನಂತೆ ಭಾಸವಾಗುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಂದಿಷ್ಟು ಜನ ಫಾರೆಸ್ಟ್‌ ಬಾಥಿಂಗ್‌ ಅಂದರೇನು ಎಂದು ಪ್ರಶ್ನೆ ಕೇಳಿದ್ದು ಮಾತ್ರವಲ್ಲದೇ ಕಬ್ಬನ್‌ಪಾರ್ಕ್‌ಗೆ ಹೋಗಲು ಸಾವಿರಾರು ರೂಪಾಯಿ ಕೊಡಬೇಕಾ ಎಂದು ಕಾಲೆಳೆದಿದ್ದಾರೆ.

Forest Bathing

ಅರಣ್ಯ ಸ್ನಾನದ ಕಲ್ಪನೆಗೆ ನನ್ನ ವಿರೋಧವಿಲ್ಲ. ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ನನಗೆ ಖಾತ್ರಿಯಿದೆ. ಆದರೆ ಸ್ಥಳ ಮತ್ತು ಶುಲ್ಕ 18% ಜಿಎಸ್‌ಟಿ ಬಗ್ಗೆ ನನ್ನ ತಕಾರರು ಇದೆ. ಕಬ್ಬನ್‌ ಪಾರ್ಕ್‌ ಒಳಗೆ ಹೋಗಲು ಓಡಾಡಲು ಈ ದುಬಾರಿ ಶುಲ್ಕ ಯಾಕೆ ಎಂದಿದ್ದಾರೆ. ಕಬ್ಬನ್‌ ಪಾರ್ಕ್‌ ಕಾಡಲ್ಲ, ಮತ್ಯಾಕೆ ಫಾರೆಸ್ಟ್‌ ಬಾಥಿಂಗ್‌ ಹೆಸರಿನಲ್ಲಿ ಮೋಸ ಎಂದು ಕಿಡಿಕಾರಿದ್ದಾರೆ.

https://x.com/AJayAWhy/status/1780167988504625242

ಏನಿದು ಫಾರೆಸ್ಟ್‌ ಬಾಥಿಂಗ್‌?

ಅಂದಹಾಗೇ ಫಾರೆಸ್ಟ್‌ ಬಾಥಿಂಗ್‌ ಎಂಬ ಪರಿಕಲ್ಪನೆಯು ನಮ್ಮ ದೇಶದಲ್ಲ, ಬದಲಿಗೆ ಜಪಾನಿನಲ್ಲಿ ಹೆಚ್ಚು ಸಕ್ರಿಯವಾಗಿದೆ. ಜಪಾನಿನಲ್ಲಿ ಶಿನ್ರಿನ್-ಯೋಕು (shinrin-yoku) ಎಂದೂ ಕರೆಯಲ್ಪಡುವ ಈ ಫಾರೆಸ್ಟ್‌ ಬಾಥಿಂಗ್‌ ಅಥವಾ ಅರಣ್ಯ ಸ್ನಾನವು ಪ್ರಕೃತಿ ಜತೆಗಿನ ಒಡನಾಟದೊಂದಿಗೆ ಒತ್ತಡವನ್ನು ದೂರ ಮಾಡಲು ಥೆರಪಿಯಂತೆ ಬಳಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Viral Video ಸೆಕೆಯ ಕಿರಿಕಿರಿಗೆ ಕೋಪ ಕೂಡ ಹೆಚ್ಚಾಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಪ್ರಯಾಣಿಕನೊಬ್ಬ ರೈಲಿನಲ್ಲಿ ತಾನು ಕಾಯ್ದಿರಿಸಿದ ಎಸಿ ಕೋಚ್ ಹತ್ತಲು ಸಾಧ್ಯವಾಗದೇ ಕೋಪಗೊಂಡು ರೈಲಿನ ಬಾಗಿಲಿನ ಗಾಜನ್ನೆ ಒಡೆದು ಹಾಕಿದ ಘಟನೆ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ.

VISTARANEWS.COM


on

Viral Video
Koo

ಬೆಂಗಳೂರು: ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ಸಹಿಸಲಾಗದೇ ಜನರು ಕಂಗಾಲಾಗಿದ್ದಾರೆ. ಫ್ಯಾನ್, ಕೂಲರ್ ಗಾಳಿ ಮೈಗೆ ತಟ್ಟದ ಕಾರಣ ಸಾಲವಾದರೂ ಪರ್ವಾಗಿಲ್ಲ ಎಸಿ ಹಾಕೋಣ ಅನ್ನುವ ಮಟ್ಟಿಗೆ ಈ ವರ್ಷದ ಬಿಸಿಲು ಚುರುಕು ಮುಟ್ಟಿಸಿದೆ. ಬಸ್, ರೈಲು, ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇತರ ಯಾವುದೇ ಸ್ಥಳಕ್ಕೆ ಹೋಗುವಾಗ ಜನರು ಎಸಿ ಇದೆಯಾ ಎಂದು ಮೊದಲು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಮೊದಲೇ ಬಿಸಿಲಿನ ತಾಪ ತಾಳಲಾರದೇ ಮಂಡೇ ಬಿಸಿಯಾಗಿರುತ್ತದೆ. ಇದರ ಮಧ್ಯೆ ತಾನು ಆಯ್ಕೆ ಮಾಡಿದ ಎಸಿ ರೂಂಗಳು ಸಿಗದೇ ಹೋದರೆ ವ್ಯಕ್ತಿಯ ಪರಿಸ್ಥಿತಿ ಹೇಗಾಗಿರಬಹುದು ಹೇಳಿ? ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ತಾನು ಆಯ್ಕೆ ಮಾಡಿದ ಎಸಿ ಕೋಚ್ ಸಿಗದ ಕಾರಣ ವ್ಯಕ್ತಿಯೊಬ್ಬ ಮಾಡಿದ ಅವಾಂತರದ ವಿಡಿಯೋ ಈಗ ಎಲ್ಲೆಡೆ ವೈರಲ್ (Viral Video) ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡಿದೆ.

ಸೆಕೆಯ ಹೊಡೆತಕ್ಕೆ ಸಿಕ್ಕ ವ್ಯಕ್ತಿಯೊಬ್ಬ ರೈಲಿನಲ್ಲಿ ತಾನು ಕಾಯ್ದಿರಿಸಿದ ಎಸಿ ಕೋಚ್ ಹತ್ತಲು ಸಾಧ್ಯವಾಗದೇ ಕೋಪಗೊಂಡು ರೈಲಿನ ಬಾಗಿಲಿನ ಗಾಜನ್ನೆ ಒಡೆದು ಹಾಕಿದ ಘಟನೆ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ.

ವ್ಯಕ್ತಿ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ಎಸಿ 3 ಕೋಚ್ ನಲ್ಲಿ ಸೀಟ್ ಬುಕ್ ಮಾಡಿದ್ದ. ಆದರೆ ಟಿಕೆಟ್ ಇಲ್ಲದ ಪ್ರಯಾಣಿಕರು ಅವರನ್ನು ಒಳಗೆ ಪ್ರವೇಶಿಸಲು ನಿರಾಕರಿಸಿದರು, ಇದರಿಂದ ಕೋಪಗೊಂಡ ವ್ಯಕ್ತಿ ರೈಲಿನ ಬಾಗಿಲಿನ ಗಾಜನ್ನು ಒಡೆದು ಪುಡಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 32 ಸೆಕೆಂಡುಗಳ ಈ ವಿಡಿಯೊ ಕ್ಲಿಪ್ ಗೆ 2 ಮಿಲಿಯನ್ ವೀವ್ಸ್ ಸಿಕ್ಕಿದೆ.

ವಿಡಿಯೊದಲ್ಲಿ ಕಂಡುಬಂದಂತೆ ಕೋಚ್ ಬಾಗಿಲಿನ ಮುಂಭಾಗದಲ್ಲಿ ನೆಲದ ಮೇಲೆ ಕುಳಿತಿರುವ ಜನರಿಂದ ತುಂಬಿತ್ತು. ಆ ವೇಳೆ ಒಬ್ಬ ಪ್ರಯಾಣಿಕ ಬಾಗಿಲನ್ನು ತೆರೆಯಲು ಜನರನ್ನು ಕೇಳಿದಾಗ ಅಲ್ಲಿದ್ದ ವ್ಯಕ್ತಿಯೊಬ್ಬ “ಅಲ್ಲಿ ಜಾಗವಿಲ್ಲ” ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕ ರೈಲಿನ ಬಾಗಿಲಿನ ಗಾಜನ್ನು ಒಡೆದುಹಾಕಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ರೈಲಿನ ಪ್ರಯಾಣದ ಕುರಿತಾದ ವಿಡಿಯೋಗಳು ಹರಿದಾಡುತ್ತಿದ್ದು, ಈ ಹಿಂದೆ ಕಾಶಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಭೀಕರ ಸ್ಥಿತಿಯನ್ನು ತೋರಿಸಿದೆ. ಕೋಚ್ ನಲ್ಲಿ ಎಸಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಆಹಾರ ಮತ್ತು ನೀರು ನೀಡಲಾಗಿಲ್ಲ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

ಹಾಗೇ ಭಾರತೀಯ ರೈಲ್ವೆಗೆ ಸಂಬಂಧಿಸಿದ ಮತ್ತೊಂದು ವಿಡಿಯೊದಲ್ಲಿ ಮಹಿಳೆಯೊಬ್ಬಳು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದು, ಈ ಬಗ್ಗೆ ತನ್ನ ಸಹ ಪ್ರಯಾಣಿಕರೊಂದಿಗೆ ಜಗಳವಾಡುತ್ತಿರುವ ಘಟನೆ ನಡೆದಿದೆ.

Continue Reading

ವೈರಲ್ ನ್ಯೂಸ್

Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವೈರಲ್ ಆದ ವಿಡಿಯೊ

Viral Video ಕೋಳಿ ಅಂಗಡಿಗೆ ಹೋದ ಮಹಿಳೆಯರಿಬ್ಬರು ಮಾಲೀಕನ ಕಣ್ತಪ್ಪಿಸಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ.

VISTARANEWS.COM


on

Viral Video
Koo

ಮುಂಬೈ: ಇತ್ತೀಚಿನ ದಿನಗಳಲ್ಲಿ ಗೃಹಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿ ಕೋಳಿ ಮೊಟ್ಟೆ ಕೂಡ ಒಂದು. ಈ ಹಿಂದೆ 5 ರೂಪಾಯಿಗಳಿಗೆ ಸಿಗುತ್ತಿದ್ದ ಕೋಳಿ ಮೊಟ್ಟೆಯ ಬೆಲೆ ಈಗ 7 ರೂಪಾಯಿ ಆಗಿದೆ. ಹಾಗಾಗಿ ಕೋಳಿ ಮೊಟ್ಟೆ ಪ್ರಿಯರು ಮೊಟ್ಟೆಗಳಿಗಾಗಿ ಪರದಾಡುವಂತಾಗಿದೆ. ದುಡ್ಡು ಕೊಟ್ಟು ಮೊಟ್ಟೆ (Egg) ತೆಗೆದುಕೊಳ್ಳುವುದಕ್ಕೆ ಆಗದವರು ಈಗ ಮೊಟ್ಟೆಯನ್ನು ಕದಿಯುವ ಪರಿಸ್ಥಿತಿ ಬಂದಿರುವುದು ಮಾತ್ರ ಖೇದಕರ ಸಂಗತಿ. ಇಂತಹದೊಂದು ಘಟನೆ ಮುಂಬೈನ ಕೋಳಿ ಅಂಗಡಿಯೊಂದರಲ್ಲಿ ನಡೆದಿದೆ. ಮಹಿಳೆಯೊಬ್ಬಳು ಕೋಳಿ ಅಂಗಡಿಯಲ್ಲಿ ಮೊಟ್ಟೆ ಕದಿಯುತ್ತಿರುವ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಇಬ್ಬರು ಮಹಿಳೆಯರು ಕೋಳಿ ಅಂಗಡಿಯೊಳಗೆ ನಿಂತಿರುವುದನ್ನು ಕಾಣಬಹುದು. ಅಂಗಡಿ ಮಾಲೀಕನು ಇನ್ನೊಂದು ಕಡೆ ಮುಖ ಮಾಡಿ ಕೋಳಿ ಕತ್ತರಿಸುವುದರಲ್ಲಿ ನಿರತರಾಗಿದ್ದಾಗ ಆತನಿಗೆ ತಿಳಿಯದಂತೆ ಆತನ ಬೆನ್ನ ಹಿಂದೆ ಮಹಿಳೆ ಮೊಟ್ಟೆಗೆ ಕನ್ನ ಹಾಕಿದ್ದಾಳೆ.

ಮಹಿಳೆಯ ವರ್ತನೆ ಅನುಮಾನಾಸ್ಪಾದವಾಗಿ ಕಂಡುಬಂದ ಹಿನ್ನಲೆಯಲ್ಲಿ ಮಾಲೀಕ ಅವಳ ಬ್ಯಾಗ್ ಅನ್ನು ಪರಿಶಿಲಿಸಿದ್ದಾನೆ. ಆಗ ಆಕೆಯ ಬ್ಯಾಗ್ ನಲ್ಲಿ ಮೊಟ್ಟೆಗಳು ಕಂಡುಬಂದಿವೆ. ಆದರೆ ಮಹಿಳೆಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಕೂಡ ತಾವು ಮೊಟ್ಟೆ ಕದ್ದಿಲ್ಲ ಎಂದೇ ವಾದಿಸುತ್ತಿದ್ದರು. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ನೋಡಿ ನಂತರ ಅಂಗಡಿಯ ಬಳಿ ನಿಂತಿದ್ದವರನ್ನು ಕರೆದಿದ್ದಾನೆ.

ಈ ವಿಡಿಯೊ ಕಂಡು ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವಳು ಮೊಟ್ಟೆಗಳನ್ನು ಕದ್ದರು ನಂತರ ಕದ್ದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆ. ಇದು ನಾಚಿಕೆಗೇಡಿನ ಸಂಗತಿ ಎಂದು ಒಬ್ಬರು ತಿಳಿಸಿದರೆ, ಇನ್ನೊಬ್ಬರು ಕ್ಯಾಮರಾ ಇಲ್ಲದಿದ್ದರೆ ಅಂಗಡಿಯವನಿಗೆ ಹೊಡೆತ ಬೀಳುತ್ತಿತ್ತು ಎಂದು ಬರೆದಿದ್ದಾರೆ.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಅಂಗಡಿ, ಶಾಪಿಂಗ್ ಮಾಲ್ ಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳು ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ಯಾವುದೇ ಘಟನೆಗಳನ್ನು ಮರುಪರಿಶೀಲನೆ ಮಾಡಬಹುದು. ಈ ಸಿಸಿಟಿವಿಗಳಿಂದ ಹಲವು ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತಿದೆ.

Continue Reading

ವೈರಲ್ ನ್ಯೂಸ್

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Viral news: ಲೋಕಸಭೆ ಚುನಾವಣೆಗೂ ಮುನ್ನ 1.9 ಮಿಲಿಯನ್ ಇವಿಎಂಗಳನ್ನು ಕಳವು ಮಾಡಲಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳವಾಗಿರುವ ಇವಿಎಂ ಗಳು ಎಲ್ಲಿ ಹೋಗಿವೆ ? ಈ ಸುದ್ದಿ ಎಲ್ಲಿಂದ ಬಂತು ಗೊತ್ತೇ ?

VISTARANEWS.COM


on

By

Viral news
Koo

ನವದೆಹಲಿ: ಲೋಕಸಭಾ ಚುನಾವಣೆ- 2024ರ (Lok sabha election-2024) ಮೊದಲ ಹಂತದ ಮತದಾನ ಪ್ರಕ್ರಿಯೆಗಳು ಶುಕ್ರವಾರ ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ. ಮತದಾನ ಪ್ರಾರಂಭಕ್ಕೂ ಮೊದಲು 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಕಾಣೆಯಾಗಿವೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ (social media) ಸಂದೇಶ ಹರಡಿದ್ದು (viral news) ಇದು ಸುಳ್ಳು ಎಂದು ತಿಳಿದು ಬಂದಿದೆ.

ಏಪ್ರಿಲ್ 19ರಂದು 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗುವ ಮೊದಲು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು ಕಾಣೆಯಾಗಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕ ಬಳಕೆದಾರರು ಹೇಳಿಕೊಂಡಿದ್ದರು.

ಈ ಕುರಿತು ತನಿಖೆ ನಡೆಸಿದ ವಿಶ್ವಸ್ ನ್ಯೂಸ್ ಈ ಹೇಳಿಕೆ ಸುಳ್ಳು ಎಂದು ಪತ್ತೆ ಹಚ್ಚಿದೆ. ಚುನಾವಣಾ ಆಯೋಗವೂ ಕೂಡ ಇದೊಂದು ನಕಲಿ ಸುದ್ದಿ ಎಂದು ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡ ಇವಿಎಂ ನಾಪತ್ತೆಯಾಗಿರುವ ಆರೋಪಗಳನ್ನು ತಳ್ಳಿಹಾಕಿತ್ತು.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!


ಸುಳ್ಳು ಸುದ್ದಿ

ಸಾಮಾಜಿಕ ಮಾಧ್ಯಮ ಬಳಕೆದಾರ ನಿಹಾಲ್ ಸಿಂಗ್ ನಿಗಮ್ ಅವರು, 1.9 ಮಿಲಿಯನ್ ಇವಿಎಂ ಯಂತ್ರಗಳನ್ನು ಕಳವು ಮಾಡಲಾಗಿದೆ ಮತ್ತು ಈ ಬಗ್ಗೆ ಯಾವುದೇ ಕುರುಹು ಕಂಡು ಬಂದಿಲ್ಲ ಎನ್ನುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ ಈ ಪೋಸ್ಟ್ ಭಾರೀ ವೈರಲ್ ಆಗಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.


ತನಿಖೆಯಲ್ಲೇನಿದೆ?

ದಿ ಎಕನಾಮಿಕ್ ಟೈಮ್ಸ್ ನ ಮಾರ್ಚ್ 15 ವರದಿಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು 2016 ಮತ್ತು 2019 ರ ನಡುವೆ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ 1.9 ಮಿಲಿಯನ್ ಇವಿಎಂಗಳು ನಾಪತ್ತೆಯಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿತ್ತು. 1.9 ಮಿಲಿಯನ್ ಇವಿಎಂಗಳು ಕಾಣೆಯಾಗಿದೆ ಎಂದು ಐಎನ್‌ಸಿ ಹೇಳಿರುವುದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

2019ರಲ್ಲಿಯೂ ನಾಪತ್ತೆಯಾದ ಇವಿಎಂಗಳ ವರದಿಗಳು ಬಂದಿದ್ದವು. ಫ್ರಂಟ್‌ಲೈನ್ ಮತ್ತು ಟಿವಿ9 ಭಾರತ ವರ್ಷ್ ಈ ಕುರಿತು ವರದಿಗಳನ್ನು ಪ್ರಕಟಿಸಿತ್ತು. ಇದನ್ನೂಚುನಾವಣಾ ಆಯೋಗವು ಆಧಾರ ರಹಿತ ಎಂದು ಹೇಳಿ ಟ್ವಿಟ್ ಮಾಡಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ FAQ ವಿಭಾಗದಲ್ಲಿಯೂ ಈ ಸಮಸ್ಯೆಯನ್ನು ಉಲ್ಲೇಖಿಸಲಾಗಿದೆ. ವೈರಲ್ ಹಕ್ಕು ಕುರಿತು ಚುನಾವಣಾ ಆಯೋಗದ ಅಧಿಕಾರಿಗಳನ್ನು ಸಂಪರ್ಕಿಸಿರುವ ವಿಶ್ವಸ್ ನ್ಯೂಸ್ ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಷಯದ ಕುರಿತು ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.

Continue Reading
Advertisement
Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 mins ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

tiger attack
ಚಾಮರಾಜನಗರ4 mins ago

Tiger Attack : ಮರಿಯಾನೆ ಕೊಂದ ಹುಲಿ; ಶವ ಬಿಟ್ಟು ಕದಲದ ತಾಯಿ ಆನೆ ರೋಧನೆ

PBKS vs GT
ಕ್ರೀಡೆ24 mins ago

PBKS vs GT: ಗುಜರಾತ್​ ವಿರುದ್ಧವಾದರೂ ಪಂಜಾಬ್​ಗೆ ಒಲಿದೀತೇ ಗೆಲುವಿನ ಅದೃಷ್ಟ?

CJI Chandrachud
ದೇಶ36 mins ago

CJI Chandrachud: ಹೊಸ ಕಾನೂನುಗಳ ಜಾರಿ ಐತಿಹಾಸಿಕ; ಸಿಜೆಐ ಡಿ.ವೈ.ಚಂದ್ರಚೂಡ್‌ ಬಣ್ಣನೆ

Forest bathing activity begins at Cubbon Park
ಬೆಂಗಳೂರು38 mins ago

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Modi in Karnataka HD Deve Gowda attack on Congess
Lok Sabha Election 202438 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Lok Sabha Election 2024
ಕರ್ನಾಟಕ42 mins ago

Lok Sabha Election 2024: ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು: ಡಿಕೆಶಿ

Job Alert
ಉದ್ಯೋಗ43 mins ago

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Viral Video
ವೈರಲ್ ನ್ಯೂಸ್48 mins ago

Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Vinay Gowda Lunch With Kichcha Sudeep
ಸಿನಿಮಾ51 mins ago

Vinay Gowda: ಕಿಚ್ಚ ಸುದೀಪ್‌ ಜತೆ ವಿನಯ್‌ ಗೌಡ ಭರ್ಜರಿ ಭೋಜನ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 mins ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 202438 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ4 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ5 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌