ವೈರಲ್ ನ್ಯೂಸ್
ಪತ್ನಿಯರಿಬ್ಬರಿಗೆ ತನ್ನನ್ನು ಹಂಚಿದ ಪತಿ!; 3 ದಿನ ಒಬ್ಬಳಿಗೆ, ಮತ್ತೆ ಮೂರು ದಿನ ಇನ್ನೊಬ್ಬಳಿಗೆ, ಭಾನುವಾರ ಫ್ರೀ!
ದಂಪತಿಯ ಕೇಸ್ ತಮ್ಮ ಬಳಿ ಬರುತ್ತಿದ್ದಂತೆ ಹರೀಶ್ ದೇವನ್ ಅವರು ಮೊದಲಿಗೆ ಸಮಸ್ಯೆಯ ಸ್ವರೂಪವನ್ನು ತಿಳಿದುಕೊಂಡರು. ಮೊದಲ ಪತ್ನಿ ಬೇಡ ಎನ್ನುತ್ತಿದ್ದ ಪತಿಗೆ, ಕಾನೂನು ತೊಡಕುಗಳ ಬಗ್ಗೆ ವಿವರಿಸಿದರು.
ಮದುವೆ ಎನ್ನುವುದು ಜೀವನದ ಒಂದು ಸುಂದರ ಹಂತ. ಆದರೆ ಕೆಲವರು ಅದೇ ವಿಷಯದಲ್ಲಿ ಕಷ್ಟವನ್ನು ಮೈಮೇಲೆ ಎಳೆದುಕೊಂಡುಬಿಡುತ್ತಾರೆ. ಇಲ್ನೋಡಿ, ನೊಯ್ಡಾದ 28ವರ್ಷದ ಇಂಜಿನಿಯರ್ವೊಬ್ಬ ಒಂದು ಸಾಲದ್ದಕ್ಕೆ, ಮತ್ತೊಂದು ಮದುವೆಯಾಗಿ ಪೇಚಾಟಕ್ಕೆ ಸಿಲುಕಿ, ಅಂತೂ ಕೊನೆಗೊಂದು ದಾರಿ ಕಂಡುಕೊಂಡು ಪಾರಾಗಿದ್ದಾರೆ. ಇಬ್ಬರು ಹೆಂಡತಿಯರು ಮತ್ತು ಪತಿಯ ಮಧ್ಯೆ ಒಂದು ವಿಚಿತ್ರ ಒಪ್ಪಂದವಾಗಿ, ಇವರ ವೈವಾಹಿಕ ಜೀವನ ಸುಖಾಂತ್ಯ ಕಂಡಿದೆ. ಒಪ್ಪಂದದ ಅನ್ವಯ ಈ ಇಂಜಿನಿಯರ್ ವಾರದ ಮೊದಲ ಮೂರು ದಿನ ಒಬ್ಬಳು ಹೆಂಡತಿಯೊಂದಿಗೆ, ಮತ್ತೆ ಮೂರು ದಿನ ಇನ್ನೊಬ್ಬಳು ಪತ್ನಿಯೊಂದಿಗೆ ಕಾಲ ಕಳೆಯಬೇಕು. ಭಾನುವಾರ ಅವನ ‘ಪತಿ’ ಜವಾಬ್ದಾರಿಗೆ ರಜೆ..!
ಎಂಥಾ ಕತೆಯಿದು?
ನೊಯ್ಡಾ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಈತ. ಗುರುಗ್ರಾಮದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 2018ರ ಮೇ ತಿಂಗಳಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನ ಯುವತಿಯನ್ನು ಮದುವೆಯಾದ. 2020ರಲ್ಲಿ ಆಕೆ ಗರ್ಭಿಣಿಯಾದರು. ಅಷ್ಟೇ ಹೊತ್ತಿಗೆ ಕೊರೊನಾ ಸೋಂಕು ಬಂತು. ಆಕೆ ಗರ್ಭಿಣಿಯಾಗಿದ್ದರಿಂದ, ತುಂಬ ಎಚ್ಚರಿಕೆಯಿಂದ ಇರಬೇಕು ಎಂಬ ಕಾರಣಕ್ಕೆ ಸಾಫ್ಟವೇರ್ ಇಂಜಿಯರ್ ತನ್ನ ಪತ್ನಿಯನ್ನು ಗ್ವಾಲಿಯರ್ನಲ್ಲಿರುವ ತವರು ಮನೆಯಲ್ಲಿ ಬಿಟ್ಟ. ಲಾಕ್ಡೌನ್ ಆದ ಮೇಲಂತೂ ಪ್ರಯಾಣವೆಲ್ಲ ನಿರ್ಬಂಧಗೊಂಡಿತು. ಹೀಗಾಗಿ ಆಕೆ ತವರು ಮನೆಯಲ್ಲೇ ಇರುವಂತಾಯಿತು. ಗಂಡುಮಗುವಿಗೆ ಜನ್ಮವನ್ನೂ ಕೊಟ್ಟಳು. ಇನ್ನು ತಾನು ಗುರುಗ್ರಾಮದಲ್ಲೇ ಉಳಿದು, ತನ್ನ ಕೆಲಸ ಮುಂದುವರಿಸಿದ್ದ ಈತ ಒಮ್ಮೆಯೂ ಗ್ವಾಲಿಯರ್ಗೆ ಹೋಗಿರಲಿಲ್ಲ. ಅದಾಗಲೇ ಅವನಿಗೆ ತನ್ನ ಕಂಪನಿಯಲ್ಲೇ ಕೆಲಸ ಮಾಡುವ ಸಹೋದ್ಯೋಗಿಯೊಬ್ಬಳೊಂದಿಗೆ ಪ್ರೀತಿ ಬೆಳೆದಿತ್ತು. ಅವಳನ್ನು ಮದುವೆಯನ್ನೂ ಮಾಡಿಕೊಂಡ. 2021ರ ಜುಲೈನಲ್ಲಿ ಆ ಯುವತಿ (ಎರಡನೇ ಪತ್ನಿ) ಹೆಣ್ಣುಮಗುವಿಗೆ ಜನ್ಮ ನೀಡಿದಳು. ಅಲ್ಲಿಗೆ ಆತ ಎರಡನೇ ಬಾರಿಗೆ ಅಪ್ಪನಾದ. ಇತ್ತ ಮೊದಲ ಪತ್ನಿ, ಒಮ್ಮೆಯೂ ತನ್ನ ಗಂಡ ಗ್ವಾಲಿಯರ್ಗೆ ಬರಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿದ್ದಳು. ವಾಪಸ್ ಬರುವಂತೆ ಕೇಳುತ್ತಿದ್ದಳು. ಆದರೆ ಅವನು ಮಾತ್ರ ಆಕೆಗೆ ಒಂದಲ್ಲ ಒಂದು ನೆಪ ಹೇಳುತ್ತಲೇ ಇದ್ದ. ಅಲ್ಲಿಗೆ ಹೋಗುತ್ತಿರಲಿಲ್ಲ.
2022ನೇ ಇಸ್ವಿಯೆಲ್ಲ ಹೀಗೇ ಕಳೆದು ಹೋಯಿತು. ಆದರೆ 2023ರ ಜನವರಿಯಲ್ಲಿ ಇಂಜಿನಿಯರ್ನ ಮೊದಲ ಪತ್ನಿ, ಏನಾದರೂ ಆಗಲಿ ಎಂದು ತನ್ನ ಪತಿ ಇದ್ದಲ್ಲಿಗೆ ಅಂದರೆ ನೊಯ್ಡಾಕ್ಕೆ ಆಗಮಿಸಿದಳು. ಆದರೆ ಆಕೆಗೆ ದಿಗಿಲು ಕಾದಿತ್ತು. ಪತಿ ಇನ್ನೊಬ್ಬ ಮಹಿಳೆಯೊಟ್ಟಿಗೆ ವಾಸಿಸುತ್ತಿದ್ದ. ಒಂದು ಮಗುವೂ ಕಣ್ಣೆದುರು ಇತ್ತು. ಅದನ್ನು ನೋಡಿ ಕೆಂಡಾಮಂಡಲಳಾದ ಮೊದಲ ಪತ್ನಿ, ಪತಿಯೊಂದಿಗೆ ವಾಗ್ವಾದಕ್ಕೆ ಇಳಿದಳು. ಇಬ್ಬರ ನಡುವೆಯೂ ದೊಡ್ಡಮಟ್ಟದ ಜಗಳವೇ ನಡೆಯಿತು. ಆಕೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ದಾಖಲಿಸಿದಳು. ಆದರೆ ಎಫ್ಐಆರ್ ದಾಖಲಾಗಲಿಲ್ಲ. ಅದೇ ಜನವರಿ ತಿಂಗಳಲ್ಲೇ ಮೊದಲ ಪತ್ನಿ ಗ್ವಾಲಿಯರ್ನಲ್ಲಿರುವ ಒಂದು ಕೌಟುಂಬಿಕ ಕೋರ್ಟ್ನಲ್ಲಿ ಪತಿ ವಿರುದ್ಧ ದೂರು ದಾಖಲಿಸಿ, ಜೀವನಾಂಶಕ್ಕೆ ಬೇಡಿಕೆ ಇಟ್ಟಳು. ಕೋರ್ಟ್ ತನ್ನ ನಿಯಮದಂತೆ ದಂಪತಿಗೆ ಕೌನ್ಸಿಲಿಂಗ್ನ್ನು ಶಿಫಾರಸು ಮಾಡಿತು ಮತ್ತು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೂ ಮೊದಲು, ದಂಪತಿ ಮಧ್ಯೆ ರಾಜಿ ಮಾಡಿಸಲು ಯತ್ನಿಸುವಂತೆ ವಕೀಲ/ಕೌನ್ಸಿಲರ್ ಹರೀಶ್ ಧವನ್ ಎಂಬುವರಿಗೆ ಸೂಚಿಸಿತು.
ಕೌನ್ಸಿಲರ್ ಕೊಟ್ಟ ಸಲಹೆ ಏನು?
ದಂಪತಿಯ ಕೇಸ್ ತಮ್ಮ ಬಳಿ ಬರುತ್ತಿದ್ದಂತೆ ಹರೀಶ್ ದೇವನ್ ಅವರು ಮೊದಲಿಗೆ ಸಮಸ್ಯೆಯ ಸ್ವರೂಪವನ್ನು ತಿಳಿದುಕೊಂಡರು. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆ. ‘ಇಬ್ಬರು ಪತ್ನಿಯರು ಮತ್ತು ಪತಿಯನ್ನು ಕೂರಿಸಿಕೊಂಡು ವಿಚಾರಿಸಿದೆ. ಮೊದಲ ಪತ್ನಿಗೆ ತನ್ನ ಪತಿ ಜೈಲಿಗೆ ಹೋಗುವುದು ಬೇಕಾಗಿರಲಿಲ್ಲ. ತನ್ನ ಮಗನಿಗೆ ಜೀವನಾಂಶ ಬೇಕು ಎಂಬುದೇ ಆಕೆಯ ಪ್ರಮುಖ ಬೇಡಿಕೆಯಾಗಿತ್ತು. ಇನ್ನು ಎರಡನೇ ಪತ್ನಿಯಂತೂ, ತಾನು ತನ್ನ ಅಕ್ಕನ ಜತೆ ಅಂದರೆ, ಪತಿಯ ಮೊದಲ ಹೆಂಡತಿಯೊಂದಿಗೆ ಬದುಕಲು ಸಿದ್ಧಳಿದ್ದೇನೆ ಎಂದು ಹೇಳಿದಳು. ಆದರೆ ಆ ಪತಿಗೆ ತನ್ನ ಮೊದಲ ಪತ್ನಿಯೊಂದಿಗೆ ಜೀವಿಸಲು ಇಷ್ಟವೇ ಇರಲಿಲ್ಲ.
ಭಾರತದಲ್ಲಿ ಕಾನೂನು ಪ್ರಕಾರ, ಮೊದಲ ಪತ್ನಿಯೊಂದಿಗೆ ಡಿವೋರ್ಸ್ ಆಗದೆ, ಎರಡನೇ ಮದುವೆಯಾಗುವುದು ಊರ್ಜಿತವಲ್ಲ. ಆದರೆ ತುಂಬ ಕೇಸ್ಗಳಲ್ಲಿ ಇದಾಗುತ್ತಿದೆ. ಹೀಗಾದಾಗ ಪರಸ್ಪರ ಅರ್ಥ ಮಾಡಿಕೊಂಡು ಅನ್ಯೋನ್ಯತೆಯಿಂದ ಬದುಕಲು ಒಂದು ಅವಕಾಶವಿದೆಯಷ್ಟೇ. ಅದಾಗದೆ ಇದ್ದಾಗ ಕಾನೂನು ಕ್ರಮ ಅನಿವಾರ್ಯ ಎಂದು ಹೇಳಿರುವ ಹರೀಶ್ ದೇವನ್ ತಾವು ಈ ಕೇಸ್ ಬಗೆಹರಿಸಿದ ರೀತಿಯನ್ನು ಹೇಳಿಕೊಂಡಿದ್ದಾರೆ.
‘ಮೊದಲ ಪತ್ನಿ ಬೇಡ ಎಂದು ಹೇಳಿದ ಇಂಜಿನಿಯರ್ಗೆ ನಾನು ಮೊದಲು ದ್ವಿಪತ್ನಿತ್ವ ಕಾನೂನು ಪ್ರಕಾರ ಹೇಗೆ ತಪ್ಪು ಎಂಬುದನ್ನು ವಿವರಿಸಿದೆ. ಅವರು ಮೂರು ಜನ ಕುಳಿತು, ಸಮಸ್ಯೆ ಇತ್ಯರ್ಥ ಮಾಡಿಕೊಂಡು ಬದುಕುವ ಅನಿವಾರ್ಯತೆಯನ್ನೂ ಹೇಳಿದೆ. ಆಗ ಒಂದು ಒಪ್ಪಂದಕ್ಕೆ ಬರಲು ಆತ ಒಪ್ಪಿದ ಎಂದು ಹೇಳಿದ್ದಾರೆ.
ಇದನ್ನೂ ಓದಿ: Swara Bhaskar: ನಟಿ ಸ್ವರಾ ಭಾಸ್ಕರ್-ಫಹಾದ್ ಪುನರ್ ವಿವಾಹ; ಇನ್ವಿಟೇಶನ್ ಕಾರ್ಡ್ ವೈರಲ್!
ಏನಿದು ವಿಚಿತ್ರ ಒಪ್ಪಂದ?
ಈ ಸಾಫ್ಟ್ವೇರ್ ಇಂಜಿನಿಯರ್ಗೆ ತಿಂಗಳಿಗೆ 1.5ಲಕ್ಷ ರೂಪಾಯಿ ಸಂಬಳ ಬರುತ್ತದೆ. ಅದರಲ್ಲಿ ಸರಿಯಾಗಿ ಅರ್ಧರ್ಧ ಮಾಡಿ ಇಬ್ಬರೂ ಪತ್ನಿಯರಿಗೆ ಆತ ಕೊಡಬೇಕು. ಅವನಿಗೆ ಎರಡು ಫ್ಲ್ಯಾಟ್ಗಳಿದ್ದು, ಅದರಲ್ಲಿ ಒಂದನ್ನು ಮೊದಲ ಪತ್ನಿಗೆ, ಮತ್ತೊಂದನ್ನು ಎರಡನೇ ಪತ್ನಿಗೆ ನೀಡಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ಅವನನ್ನೇ ಅವನು ಇಬ್ಬರು ಪತ್ನಿಯರಿಗೆ ಹಂಚಬೇಕು. ಅಂದರೆ ವಾರದಲ್ಲಿ ಸೋಮವಾರದಿಂದ ಬುಧವಾರದವರೆಗೆ ಮೊದಲ ಪತ್ನಿಯೊಂದಿಗೆ, ಗುರುವಾರದಿಂದ-ಶನಿವಾರದವರೆಗೆ ಎರಡನೇ ಪತ್ನಿಯೊಂದಿಗೆ ಕಾಲಕಳೆಯಬೇಕು. ಭಾನುವಾರ ಒಂದಿನ ಅವನು ಫ್ರೀ ಆಗಿ ಇರಬಹುದು. ಅಂದರೆ ಆತನ ಮನಸಿಗೆ ಬಂದಂತೆ ಮಾಡಬಹುದು. ಅವತ್ತು ಆತ ಇಬ್ಬರು ಹೆಂಡತಿಯರಲ್ಲಿ, ತನಗಿಷ್ಟ ಬಂದವರ ಜತೆ ಇರಬಹುದು ಎಂಬುದು ಒಪ್ಪಂದದ ಸಾರಾಂಶ. ಹಾಗೊಮ್ಮೆ, ಒಪ್ಪಂದವನ್ನು ಪತಿ ಮುರಿದಿದ್ದೇ ಆದಲ್ಲಿ, ಮೊದಲ ಪತ್ನಿ ಆತನ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದೂ ಅಗ್ರಿಮೆಂಟ್ನಲ್ಲಿ ಹೇಳಲಾಗಿದೆ. ಇಷ್ಟವೋ-ಕಷ್ಟವೋ ಒಪ್ಪಂದಕ್ಕೆ ಆತ ಅಸ್ತು ಅಂದಿದ್ದಾನೆ. ಇಬ್ಬರು ಪತ್ನಿಯರೂ ಒಕೆ ಅಂದಿದ್ದಾರೆ. ತಪ್ಪಿದರೆ ಇಂಜಿನಿಯರ್ಗೆ ಜೈಲು ಶಿಕ್ಷೆ ಗ್ಯಾರೆಂಟಿ..!
ದೇಶ
Viral Video: ಭಾರತದಲ್ಲಿ ವಿಶ್ವದಲ್ಲೇ ಎತ್ತರದ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ, ಇಲ್ಲಿದೆ ವಿಡಿಯೊ
Viral Video: ವಿಶ್ವದಲ್ಲೇ ಅತಿ ಎತ್ತರದ ರೈಲು ಎಂದೇ ಖ್ಯಾತಿಯಾದ ದೆಹಲಿ-ಜೈಪುರ-ಅಜ್ಮೇರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಕೈಗೊಳ್ಳಲಾಗಿದೆ. ಇದರ ವಿಡಿಯೊ ಇಲ್ಲಿದೆ.
ಜೈಪುರ: ಕೇಂದ್ರ ಸರ್ಕಾರದ ಪ್ರಯತ್ನದ ಫಲವಾಗಿ ದೇಶದಲ್ಲಿ ರೈಲುಗಳು ಹಾಗೂ ರೈಲು ನಿಲ್ದಾಣಗಳು ಆಧುನೀಕರಣಗೊಂಡಿವೆ. ಇದರ ಭಾಗವಾಗಿ ಇಂದು ದೇಶದ ಹಲವೆಡೆ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಕರ್ಯಗಳುಳ್ಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಆರಂಭವಾಗಿದೆ. ಇದರ ಬೆನ್ನಲ್ಲೇ, ಭಾರತೀಯ ರೈಲ್ವೆಯು ಮತ್ತೊಂದು ಸಾಧನೆ ಮಾಡಿದೆ. ವಿಶ್ವದಲ್ಲೇ ಅತಿ ಎತ್ತರದ ರೈಲು ಎಂದೇ ಖ್ಯಾತಿಯಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ರೈಲು ಸಂಚಾರದ ವಿಡಿಯೊ (Viral Video) ಈಗ ವೈರಲ್ ಆಗಿದೆ.
7.2 ಮೀಟರ್ ಎತ್ತರದ ದೆಹಲಿ-ಜೈಪುರ-ಅಜ್ಮೇರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವು ಜೈಪುರದಲ್ಲಿ ನಡೆದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲು ಸಂಚಾರದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಶ್ವಿನಿ ವೈಷ್ಣವ್ ಟ್ವೀಟ್
ಭಾರತೀಯ ರೈಲ್ವೆಯು ದೆಹಲಿ-ಜೈಪುರ ಮಾರ್ಗದಲ್ಲಿ ಹೊಸ ಸೆಮಿ-ಹೈಸ್ಪೀಡ್ ರೈಲನ್ನು ನವೀಕರಿಸಿದೆ. ಅಲ್ಲದೆ, ಅಶ್ವಿನಿ ವೈಷ್ಣವ್ ಅವರ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಡಬಲ್ ಡೆಕ್ಕರ್ ಆಗಿ ಪರಿವರ್ತನೆ ಆಗಲಿವೆ. ಇದಕ್ಕಾಗಿ ವಿದ್ಯುತ್ ವೈರ್‌ಗಳನ್ನು ಎತ್ತರಿಸುವ ಯೋಜನೆ ಅವರ ಮುಂದಿದೆ.
ದೆಹಲಿ-ಜೈಪುರ-ಅಜ್ಮೇರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾರ್ಚ್ 28ರಂದು ಪ್ರಾಯೋಗಿಕ ಸಂಚಾರ ಕೈಗೊಂಡಿದೆ. ದೆಹಲಿ-ಜೈಪುರ ಮಾರ್ಗದಲ್ಲಿ ಇದೇ ವರ್ಷದ ಏಪ್ರಿಲ್‌ನಲ್ಲಿ ಸಂಚಾರ ಆರಂಭಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ದೇಶದಲ್ಲಿ ಸಂಚಾರ ಆರಂಭಿಸಿದ 11ನೇ ವಂದೇ ಭಾರತ್ ರೈಲು ಎಂಬ ಖ್ಯಾತಿಗೆ ಭಾಜನವಾಗಲಿದೆ. ಸದ್ಯ, ದೇಶದಲ್ಲಿ 10 ವಂದೇ ಭಾರತ್ ರೈಲುಗಳು ಓಡಾಟ ನಡೆಸುತ್ತಿವೆ.
ಇದನ್ನೂ ಓದಿ: Namma Metro : ಕೆ.ಆರ್.ಪುರಂ-ವೈಟ್‌ಫೀಲ್ಡ್ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭ
ವೈರಲ್ ನ್ಯೂಸ್
Viral News : ಹತ್ತೇ ಸೆಕೆಂಡುಗಳಲ್ಲಿ ಈ ಎರಡು ಚಿತ್ರಗಳಲ್ಲಿ ಆರು ವ್ಯತ್ಯಾಸ ಕಂಡುಹಿಡಿಯಿರಿ!
ಎರಡು ಒಂದೇ ರೀತಿಯ ಚಿತ್ರಗಳಲ್ಲಿ ವ್ಯತ್ಯಾಸಗಳನ್ನು ಹುಡುಕುವ ಸವಾಲೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ. ಈ ಸವಾಲಲ್ಲಿ ನೀವೂ ಪಾಲ್ಗೊಳ್ಳಿ.
ಬೆಂಗಳೂರು: ಸಾಮಾಜಿಕ ಜಾಲತಾಣಗಳು ಒಂದು ರೀತಿಯಲ್ಲಿ ಮನೋರಂಜನೆಯ ತಾಣಗಳೂ ಹೌದು. ಹಾಗೆಯೇ ಸುಸ್ತಾದ ಮೆದುಳಿಗೆ ಕೆಲ ಕಾಲ ಶಾಂತವಾಗಿರಿಸಲು ಸಹಕರಿಸುವ ಸ್ಥಳವೂ ಹೌದು. ಅದಕ್ಕೆಂದೇ ಹಲವು ಮೈಂಡ್ ಗೇಮ್‌ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಒಂದು ಗೇಮ್ ವೈರಲ್ (Viral News) ಆಗಿದ್ದು, ನಿಮ್ಮ ದೃಷ್ಟಿಗೇ ಸವಾಲನ್ನು ಎಸೆಯುತ್ತಿದೆ.
ಇದನ್ನೂ ಓದಿ: Viral News : ಮಾರ್ಕ್ಸ್ ಕಾರ್ಡ್‌ನಲ್ಲಿ ಶಿಕ್ಷಕರು ಹೀಗಾ ರಿಮಾರ್ಕ್ ಬರೆಯೋದು! ಸಿಟ್ಟಾದ ನೆಟ್ಟಿಗರು
ಇಲ್ಲಿ ಎರಡು ಚಿತ್ರಗಳನ್ನು ಕೊಡಲಾಗಿದೆ. ಎರಡೂ ಚಿತ್ರಗಳು ಒಂದೇ ರೀತಿಯಲ್ಲಿವೆ. ಆದರೆ ಇದರಲ್ಲಿ ಆರು ಸಣ್ಣ ಸಣ್ಣ ವ್ಯತ್ಯಾಸಗಳಿವೆ. ಅವುಗಳನ್ನು ನೀವು ಕಂಡುಹಿಡಿಯಬೇಕು. ಹಾಗೆಂದ ಮಾತ್ರಕ್ಕೆ ಗಂಟೆಯ ಕಾಲ ಕುಳಿತುಕೊಂಡು ಹುಡುಕುವುದಲ್ಲ. ಕೇವಲ 10 ಸೆಕೆಂಡುಗಳಲ್ಲಿ ಎಲ್ಲ ವ್ಯತ್ಯಾಸಗಳನ್ನು ಹುಡುಕಿದರೆ ನೀವು ಸವಾಲನ್ನು ಗೆದ್ದಂತೆ.
ಇಂತದ್ದೊಂದು ಫೋಟೋವನ್ನು ಊಬರ್‌ಫ್ಯಾಕ್ಟ್ಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೂಲವಾಗಿ ಈ ಚಿತ್ರವನ್ನು ಜಾರ್ಜ್ಲೆ ದುದಾಸ್ ಹೆಸರಿನ ಲೇಖಕ ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಚಿತ್ರ ಇದೀಗ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು, ವೈರಲ್ ಆಗಿದೆ. ಅನೇಕರು ಈ ಸವಾಲನ್ನು ಸ್ವೀಕರಿಸಿಕೊಂಡು ಉತ್ತರಗಳನ್ನು ಕೊಡಲಾರಂಭಿಸಿದ್ದಾರೆ. ಇನ್ನೂ ಅನೇಕರು ಈ ರೀತಿಯ ಸವಾಲುಗಳು ತಮಗೆ ಇಷ್ಟವೆಂದೂ ಹೇಳಿಕೊಂಡಿದ್ದಾರೆ.
ಈ ಚಿತ್ರಗಳಲ್ಲಿರುವ ಆರು ವ್ಯತ್ಯಾಸಗಳು ಈ ಕೆಳಗಿನಂತಿವೆ
ವೈರಲ್ ನ್ಯೂಸ್
Viral News : ಮಾರ್ಕ್ಸ್ ಕಾರ್ಡ್‌ನಲ್ಲಿ ಶಿಕ್ಷಕರು ಹೀಗಾ ರಿಮಾರ್ಕ್ ಬರೆಯೋದು! ಸಿಟ್ಟಾದ ನೆಟ್ಟಿಗರು
ಅಂಕಪಟ್ಟಿಯಲ್ಲಿ ಶಿಕ್ಷಕರೇ ತಪ್ಪಾಗಿ ರಿಮಾರ್ಕ್ ಬರೆದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.
ಬೆಂಗಳೂರು: ಪ್ರಾಥಮಿಕ ಶಾಲೆಗಳ ಅಂಕ ಪಟ್ಟಿ(ಮಾರ್ಕ್ಸ್ ಕಾರ್ಡ್) ನಿಮಗೆ ನೆನಪಿರಬಹುದು. ಎಲ್ಲ ವಿಷಯಗಳಿಗೆ ವಿದ್ಯಾರ್ಥಿ ತೆಗೆದುಕೊಂಡ ಅಂಕ ಬರೆಯುವ ಶಿಕ್ಷಕರು ಅದರ ಜತೆ ವಿದ್ಯಾರ್ಥಿಯ ಬಗ್ಗೆ ಒಂದೆರೆಡು ಪದಗಳಲ್ಲಿ ಬರೆದುಕೊಡುತ್ತಿದ್ದರು. ಇದೀಗ ಅದೇ ರೀತಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯ ಅಂಕ ಪಟ್ಟಿಗೆ ಬರೆದ ರಿಮಾರ್ಕ್ ಎಲ್ಲೆಡೆ ಭಾರೀ ವೈರಲ್ (Viral News) ಆಗಿದೆ.
ಇದನ್ನೂ ಓದಿ: Viral Video: ತರಗತಿಯಲ್ಲೇ ವಿದ್ಯಾರ್ಥಿಗಳ ಹೊಡಿಬಡಿ; ನಗರ ಪೊಲೀಸರಿಗೆ ಟ್ಯಾಗ್ ಮಾಡಿದ ವಿಡಿಯೊ ವೈರಲ್
ವಿದ್ಯಾರ್ಥಿನಿಯೊಬ್ಬಳ ಅಂಕಪಟ್ಟಿಯಲ್ಲಿ ಶಿಕ್ಷಕರು ಎಲ್ಲ ವಿಷಯಗಳ ಪರೀಕ್ಷೆಯಲ್ಲಿ ಆಕೆ ತೆಗೆದುಕೊಂಡ ಅಂಕಗಳನ್ನು ಬರೆದಿದ್ದಾರೆ. ಒಟ್ಟು ಎಷ್ಟು ಅಂಕಗಳಿಗೆ ಎಷ್ಟು ಅಂಕ ಬಂದಿವೆ, ಆಕೆ ತರಗತಿಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದಾಳೆ ಎನ್ನುವ ಎಲ್ಲ ಮಾಹಿತಿ ಅದರಲ್ಲಿದೆ. ಕೊನೆಯಲ್ಲಿ ವಿದ್ಯಾರ್ಥಿನಿಯ ಬಗ್ಗೆ ರಿಮಾರ್ಕ್ ಅನ್ನೂ ಕೂಡ ಬರೆಯಲಾಗಿದೆ. ಅಲ್ಲಿ ಶಿಕ್ಷಕರು, “She has passed away” ಎಂದು ಬರೆದಿದ್ದಾರೆ.
ಪಾಸಡ್, ಪಾಸಡ್ ಔಟ್ ಎನ್ನುವ ಪದಗಳು ತೇರ್ಗಡೆಯಾಗಿದ್ದಾರೆ ಎಂದು ಅರ್ಥ ಕೊಡುತ್ತದೆ. ಆದರೆ ಪಾಸಡ್ ಅವೇ ಎನ್ನುವ ಪದ ಸಾವನ್ನಪ್ಪಿದ್ದಾರೆ ಎನ್ನುವ ಅರ್ಥ ಕೊಡುತ್ತದೆ. ಹಾಗಾಗಿ ಈ ಅಂಕಪಟ್ಟಿಯಲ್ಲಿರುವ ರಿಮಾರ್ಕ್ ಫೋಟೋ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. ಇದು 2019ರ ಅಂಕಪಟ್ಟಿಯಾಗಿದ್ದು ಆಗ ಕೂಡ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಈಗಲೂ ಮತ್ತೊಮ್ಮೆ ಈ ಅಂಕಪಟ್ಟಿ ಫೋಟೋ ವೈರಲ್ ಆಗುತ್ತಿದೆ.
ಬೇಜವಾಬ್ದಾರಿತನದಿಂದ ತಪ್ಪು ಅರ್ಥ ಬರುವ ರಿಮಾರ್ಕ್ ಬರೆದ ಶಿಕ್ಷಕರಿಗೆ ನೆಟ್ಟಿಗರು ಬೈಯಲಾರಂಭಿಸಿದ್ದಾರೆ. ಇನ್ನೂ ಕೆಲವರು ಶಿಕ್ಷಕರಿಗೇ ಪಾಠ ಹೇಳಿಕೊಡಬೇಕಾದ ಕಾಲ ಬಂದಿದೆ ಎಂದು ಹೇಳಲಾರಂಭಿಸಿದ್ದಾರೆ.
ದೇಶ
Corruption Case: ಪ್ರಾಮಾಣಿಕತೆಗಾಗಿ ಪ್ರಶಸ್ತಿ ಪಡೆದಿದ್ದ ಮಹಿಳಾ ಎಸ್ಐ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದರು! ವಿಡಿಯೊ ನೋಡಿ
Corruption Case: ಕಳೆದ ಗಣರಾಜ್ಯೋತ್ಸವದ ದಿನ, ತಮ್ಮ ಪ್ರಾಮಾಣಿಕತೆ, ದಕ್ಷತೆಯ ಕಾರ್ಯನಿರ್ವಹಣೆಗಾಗಿ ಪ್ರಶಸ್ತಿ ಸ್ವೀಕರಿಸಿದ್ದ ಮಹಿಳಾ ಎಸ್ಐ ಒಬ್ಬರು ಈಗ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹಿಸಾರ್, ಹರ್ಯಾಣ: ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಶಸ್ತಿ ಪಡೆದಿದ್ದ ಮಹಿಳಾ ಎಸ್ಐ (Woman SI) ಒಬ್ಬರು ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅತ್ಯುತ್ತಮ ಕಾರ್ಯನಿರ್ವಹಣೆ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಎಸ್ಐ ಮುನ್ನಿದೇವಿ ಅವರಿಗೆ ಗಣರಾಜ್ಯೋತ್ಸವ ದಿನ ಪ್ರಶಸ್ತಿ ನೀಡಿ, ಸನ್ಮಾನ ಮಾಡಲಾಗಿತ್ತು! ಅದೇ ಎಸ್ಐ ಈಗ, ಮಹಿಳೆಯೊಬ್ಬರಿಂದ 5000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ(Corruption Case)!
ಮುನ್ನಿ ದೇವಿ ಅವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಹಿಸಾರ್‌ನ ಬವಾನಿ ಖೇಡಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Corruption Case: ಮಹಿಳಾ ಎಸ್ಐ ಎಸಿಬಿ ಬಲೆಗೆ ಬಿದ್ದ ವಿಡಿಯೋ ಟ್ವೀಟ್ ಮಾಡಿರುವ ಎನ್‌ಸಿಐಬಿ
ವಸೂಲಾತಿ ಪ್ರಕರಣವೊಂದರಲ್ಲಿ ಎಸ್ಐ ಮುನ್ನಿದೇವಿ ಅವರು ತನಿಖಾಧಿಕಾರಿಯಾಗಿದ್ದರು. ಈ ವೇಳೆ, ಸಂತ್ರಸ್ತ ಮಹಿಳೆಯೊಬ್ಬರ ಕೆಲಸ ಮಾಡಿಕೊಡಲು ಲಂಚಕ್ಕೆ ಮುನ್ನಿದೇವಿ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ ಮಹಿಳೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಬಳಿಕ ಎಸಿಬಿ ಅಧಿಕಾರಿಗಳ ತಂಡವನ್ನು ರಚಿಸಿತ್ತು. ಮಹಿಳೆಯು, ಎಸ್ಐಗೆ ಐದು ಸಾವಿರ ರೂ. ಲಂಚ ನೀಡುವಾಗ ದಾಳಿ ಮಾಡಿದ ಎಸಿಬಿ ಅಧಿಕಾರಿಗಳ ತಂಡವು, ಮಹಿಳಾ ಎಸ್ಐಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಿತು. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Neharu Olekar: ಭ್ರಷ್ಟಾಚಾರ ಪ್ರಕರಣ; ಹಾವೇರಿ ಬಿಜೆಪಿ ಶಾಸಕ, ಇಬ್ಬರು ಪುತ್ರರಿಗೆ ಜೈಲು ಶಿಕ್ಷೆ
ಏತನ್ಮಧ್ಯೆ, ಎಸಿಬಿ ಕಾರ್ಯಾಚರಣೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ. ಈ ವಿಡಯೋ ಸಾಕಷ್ಟು ವೈರಲ್ ಆಗಿದೆ. ಸಾಕಷ್ಟು ಜನರು ಮಹಿಳಾ ಎಸ್ಐ ಲಂಚ ಪ್ರವೃತ್ತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಕರ್ನಾಟಕ12 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ16 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ11 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?