Viral Video | ಅಟ್ಟಿಸಿಕೊಂಡು ಬಂದ ಕರಡಿಯಿಂದ ಪಾರಾಗಲು ಮರವೇರಿ ಕುಳಿತ; ಮುಂದೇನಾಯ್ತು? - Vistara News

ವೈರಲ್ ನ್ಯೂಸ್

Viral Video | ಅಟ್ಟಿಸಿಕೊಂಡು ಬಂದ ಕರಡಿಯಿಂದ ಪಾರಾಗಲು ಮರವೇರಿ ಕುಳಿತ; ಮುಂದೇನಾಯ್ತು?

ಕರಡಿಗೆ ಮರ ಏರಲು ಬರುತ್ತದೆ ಎಂಬುದನ್ನು ಈ ವ್ಯಕ್ತಿ ಮರೆತಿದ್ದ ಅಥವಾ ಅವನಿಗೆ ಗೊತ್ತಿರಲಿಲ್ಲ. ಹಾಗಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮರ ಏರಿ ಕುಳಿತಿದ್ದ. ಈ ವಿಡಿಯೊ ನೋಡಿ ಶಾಕ್​ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video Man Climbs Tree To Save Himself From Black Bear
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಾರಿಯಲ್ಲಿ ಹೋಗುತ್ತಿದ್ದಾಗ ಒಂದು ಬೀದಿ ನಾಯಿ ಅಟ್ಟಿಸಿಕೊಂಡು ಬಂದರೇ ನಮ್ಮ ಜೀವ ಬಾಯಿಗೆ ಬಂದ ಹಾಗೇ ಆಗುತ್ತಿರುತ್ತದೆ, ಅಂಥದ್ದರಲ್ಲಿ ಯಾವುದಾದರೂ ಕಾಡು ಪ್ರಾಣಿ ದಾಳಿ ಮಾಡಲು ಅಟ್ಟಿಸಿಕೊಂಡು ಬಂದರೆ ಏನಾಗಬೇಡ !. ಆಯುಷ್ಯ ಗಟ್ಟಿ ಇದ್ದರೆ ಮಾತ್ರ ಪ್ರಾಣ ಉಳಿಯುತ್ತದೆ ಎನ್ನಬೇಕಷ್ಟೇ. ಆದರೆ ಈ ವ್ಯಕ್ತಿ ಅದೇನಾದನೋ ಗೊತ್ತಿಲ್ಲ, ಕರಡಿಯಿಂದ ತಪ್ಪಿಸಿಕೊಳ್ಳಲು ಮರವೇರಿಯಂತೂ ಕುಳಿತಿದ್ದ, ಕರಡಿಯೂ ಮರ ಹತ್ತಿ, ಆತನಿಗಿಂತ ಸ್ವಲ್ಪ ಕೆಳಗೆ ಕುಳಿತಿತ್ತು..!

ಕರಡಿಗಳು ಬುದ್ಧಿವಂತ ಪ್ರಾಣಿಗಳು ಎಂದು ಅನೇಕ ವನ್ಯಜೀವಿ ಜೀವಶಾಸ್ತ್ರಜ್ಞರೇ ಹೇಳಿದ್ದಾರೆ. ಕರಡಿಗಳು ಮರ ಕೂಡ ಏರಬಲ್ಲವು. ಮಾನವರಿಗೆ ಅಷ್ಟು ಬೇಗ ಹಾನಿ ಮಾಡುವುದಿಲ್ಲವಾದರೂ, ಅವುಗಳ ದಾಳಿ ಮಾರಣಾಂತಿಕವೇ ಸೈ. ಕರಡಿ ದಾಳಿಯಿಂದ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವೊಂದು ವೈರಲ್ ಆಗಿದೆ. ಕರಡಿಯೊಂದು ವ್ಯಕ್ತಿಯೊಬ್ಬನನ್ನು ಟಾರ್ಗೆಟ್​ ಮಾಡಿದೆ. ಆತ ಅದರಿಂದ ತಪ್ಪಿಸಿಕೊಳ್ಳಲು ಒಂದು ಮರ ಏರಿದ್ದಾನೆ. ಆದರೆ ಕರಡಿಯಿಂದ ಪಾರಾಗಲು ಮರ ಏರುವುದು ವ್ಯರ್ಥ. ಯಾಕೆಂದರೆ ಕರಡಿಯೂ ಕೂಡ ಅದೇ ಮರ ಹತ್ತಿ, ‘ನಿನ್ನನ್ನು ಬಿಡುವುದಿಲ್ಲ’ ಎಂಬ ಭಾವದಲ್ಲಿ ಕುಳಿತಿದೆ. ಮುಖ್ಯ ರಸ್ತೆಯ ಪಕ್ಕದ ಕಾಡಿನಲ್ಲಿ ಇದು ನಡೆದದ್ದು. ಆ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕನೊಬ್ಬನ ಮೊಬೈಲ್​​ನಲ್ಲಿ ದೃಶ್ಯ ಸೆರೆಯಾಗಿದೆ. ಅದೀಗ ವೈರಲ್ ಆಗಿದೆ.

ವಿಡಿಯೊ ಅತ್ಯಂತ ಚಿಕ್ಕದಾಗಿದ್ದು ಆ ವ್ಯಕ್ತಿ ಮುಂದೇನಾದ? ಕರಡಿಯಿಂದ ಹೇಗೆ ತಪ್ಪಿಸಿಕೊಂಡ? ಎಂಬುದು ಗೊತ್ತಾಗಿಲ್ಲ. ವಿಡಿಯೊ ಮಾಡಿದವ ಆ ದೃಶ್ಯವನ್ನು ನೋಡಿಯೂ ಮುಂದೆ ಚಲಿಸಿದ್ದು ಗೊತ್ತಾಗುತ್ತದೆ. ವಿಡಿಯೊಕ್ಕೆ 1.6 ಮಿಲಿಯನ್​​ಗಳಷ್ಟು ವೀವ್ಸ್ ಬಂದಿದೆ. ದೃಶ್ಯ ಶಾಕ್​ ತರುವಂತಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಶ್ವಾನದ ಜತೆ ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಯ ವೇಳೆ ಹಲ್ಲೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

Viral News: ಸಾಕು ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜತೆಗೆ ವ್ಯಕ್ತಿಯನ್ನು ರಕ್ಷಿಸಲು ಬಂದ ಮನೆಯವರಿಗೂ ಹೊಡೆತ ಬಿದ್ದಿದೆ. ಸದ್ಯ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದೆ. ಹೈದರಾಬಾದ್‌ನ ರಹಮತ್‌ನಗರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಗುಂಪು ದೊಣ್ಣೆ ತೆಗೆದುಕೊಂಡು ಹಲ್ಲೆ ನಡೆಸುವ ದೃಶ್ಯ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ.

VISTARANEWS.COM


on

Viral News
Koo

ಹೈದರಾಬಾದ್‌: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ನಾಯಿ ದಾಳಿಯಿಂದ ಮಕ್ಕಳು ಬಲಿಯಾಗಿರುವ ಘಟನೆಯೂ ಅಲ್ಲಲ್ಲಿ ವರದಿಯಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ರಸ್ತೆಯಲ್ಲಿ ಓಡಾಡುವಾಗ ನಾಯಿ ಕಂಡರೆ ಬೆಚ್ಚಿ ಬೀಳುವಂತಾಗಿದೆ. ಈ ಮಧ್ಯೆ ಸಾಕು ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜತೆಗೆ ವ್ಯಕ್ತಿಯನ್ನು ರಕ್ಷಿಸಲು ಬಂದ ಮನೆಯವರಿಗೂ ಹೊಡೆತ ಬಿದ್ದಿದೆ. ಸದ್ಯ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದೆ (Viral News).

ಹೈದರಾಬಾದ್‌ನ ರಹಮತ್‌ನಗರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಗುಂಪು ದೊಣ್ಣೆ ತೆಗೆದುಕೊಂಡು ಹಲ್ಲೆ ನಡೆಸುವ ದೃಶ್ಯ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ವಿವಿಧ ಸೆಕ್ಷನ್‌ ಅಡಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೇ 8ರಂದು ಮಧು, ಆತನ ಸಹೋದರ ಶ್ರೀನಾಥ್‌ ಮತ್ತು ಆತನ ಸ್ನೇಹಿತ ತಮ್ಮ ನೆಚ್ಚಿನ ಸಾಕು ನಾಯಿ ಸೈಬೇರಿಯನ್‌ ಹಸ್ಕಿ ಜತೆ ವಾಕಿಂಗ್‌ ಹೊರಟಿದ್ದರು. ಈ ವೇಳೆ ನಾಯಿ ತಮ್ಮ ಮೇಲೆ ದಾಳಿ ನಡೆಸಿದೆ ಎಂದು ನೆರೆಮನೆಯ ಧನಂಜಯ್‌ ಮತ್ತು ಆತನ ಮನೆಯವರು ಆರೋಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಎರಡೂ ಕಡೆಯವರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಘಟನೆ ವಿವರ

ಶ್ರೀನಾಥ್ ಅವರು ತಮ್ಮ ನಾಯಿಯನ್ನು ಕರೆದುಕೊಂಡು ವಾಕಿಂಗ್‌ ಹೋಗಿದ್ದರು. ಇದೇ ಸಮಯದಲ್ಲಿ ಧನಂಜಯ್ ಮತ್ತು ಆತನ ಇಬ್ಬರು ಸ್ನೇಹಿತರೂ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಈ ವೇಳೆ ಶ್ರೀನಾಥ್ ನಾಯಿಯ ಹಗ್ಗವನ್ನು ಬಿಗಿಯಾಗಿ ಹಿಡಿದಿರುವುದು ಕಂಡು ಬಂದಿದೆ. ಜತೆಗೆ ನಾಯಿ ಧನಂಜಯ್‌ ಮೇಲೆ ದಾಳಿ ನಡೆಸಲು ಮುಂದಾಗಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ. ಬಳಿಕ ಆತ ಅಲ್ಲಿಂದ ಆಚೆ ಬರುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಧನಂಜಯ್‌ ಮತ್ತು ಇತರರು ದೊಣ್ಣೆ ಹಿಡಿದುಕೊಂಡು ಶ್ರೀನಾಥ್‌ ಬಳಿಗೆ ಬರುತ್ತಾರೆ. ನಂತರ ಹಲ್ಲೆ ನಡೆಸುತ್ತಾರೆ. ಶ್ರೀನಾಥ್‌ ನೆಲದ ಮೇಲೆ ಬಿದ್ದಾಗಲೂ ಸುಮ್ಮನಾಗದ ಧನಂಜಯ್‌ ಮತ್ತು ತಂಡ ಮತ್ತೂ ಹೊಡೆಯುತ್ತಾರೆ. ಇದೇ ವೇಳೆ ಶ್ರೀನಾಥ್‌ ಮನೆಯವರು ಆತನ ನೆರವಿಗೆ ಧಾವಿಸುತ್ತಾರೆ. ಧಾವಿಸಿ ಬಂದ ಶ್ರೀನಾಥ್‌ ಕುಟುಂಬದ ಮಹಿಳೆಗೂ ಹೊಡೆತ ಬೀಳುತ್ತದೆ.

ಸ್ವಲ್ಪ ಹೊತ್ತೆನಲ್ಲೇ ನೆರೆಹೊರೆಯವರೆಲ್ಲ ಗುಂಪುಗೂಡುತ್ತಾರೆ. ಬಳಿಕ ಹಲ್ಲೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗುತ್ತಾರೆ. ಗಾಯಗೊಂಡ ಶ್ರೀನಾಥ್‌ ಮತ್ತು ಆತನ ಮನೆಯವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಗೊಳಗಾದ ನಾಯಿಗೂ ಚಿಕಿತ್ಸೆ ನೀಡಲಾಗಿದೆ. ದೂರುಗಳ ಆಧಾರದ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆ ನೆಟ್ಟಿಗರ ಗಮನ ಸೆಳೆದಿದ್ದು ತೀವ್ರ ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: Viral News: ಪಿಟ್‌ಬುಲ್‌ ದಾಳಿಯಿಂದ ಬಾಲಕನ್ನು ರಕ್ಷಿಸಿದ ಬೀದಿ ನಾಯಿಗಳು; ವಿಡಿಯೊ ಇಲ್ಲಿದೆ

Continue Reading

ಕ್ರಿಕೆಟ್

Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

Viral Video: ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ಪಾಕಿಸ್ತಾನ ಮಾಜಿ ನಾಯಕ ಸಯೀದ್ ಅನ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

VISTARANEWS.COM


on

viral video
Koo

ಕರಾಚಿ: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಕೇಸ್​ ಹೆಚ್ಚಳವಾಗಲು(Rising divorce rate) ಪ್ರಮುಖ ಕಾರಣ ಏನೆಂಬುದನ್ನು ಪಾಕಿಸ್ತಾನ ಮಾಜಿ ಆಟಗಾರ ಮತ್ತು ನಾಯಕ ಸಯೀದ್ ಅನ್ವರ್(Saeed Anwar) ವಿವರಿಸಿದ್ದಾರೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ವಿಚ್ಛೇದನ ಹೆಚ್ಚಳಕ್ಕೆ ಕಾರಣ ಎಂದು ಹೇಳಿದ್ದಾರೆ. ಅವರು ನೀಡಿರುವ ಈ ಹೇಳಿಕೆ ಇದೀಗ ಭಾರೀ ವಿವಾದ ಮತ್ತು ವೈರಲ್(Viral Video) ಆಗಿದೆ.

ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರ ದುಡಿಯಲು ಆರಂಭಿಸಿದ ಕಾರಣ ಅವರು ಕೂಡ ಆರ್ಥಿಕವಾಗಿ ಸಧೃಡವಾಗಿದ್ದಾರೆ. ಹೀಗಾಗಿ ಅವರು ಮನೆಯ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾರೆ. ಬೈಗುಳ ಕೇಳಿ ನರಕದಲ್ಲಿ ಜೀವನ ಮಾಡುವುದಕ್ಕಿಂತ, ನಾನೇ ಸಂಪಾದಿಸಬಲ್ಲೆ. ನಾನು ಸ್ವಂತವಾಗಿ ಸಂಸಾರ ನಡೆಸಬಲ್ಲೆ ಎಂಬ ಬಲವಾದ ನಂಬಿಕೆ ಬರುತ್ತದೆ. ಇದೇ ಕಾರಣದಿಂದ ವಿಚ್ಛೇದನ ಪ್ರಮಾಣ ಹೆಚ್ಚಾಗಿದೆ ಎಂದು ಅನ್ವರ್ ಹೇಳಿದರು.

“1.05 ನಿಮಿಷಗಳ ವಿಡಿಯೊದಲ್ಲಿ ಮಾತನಾಡಿದ ಅನ್ವರ್, ನಾನು ಜಗತ್ತಿನ ಹಲವು ರಾಷ್ಟ್ರಗಳಿಗೆ ಪ್ರಯಾಣಿಸಿದ್ದೇನೆ. ನಾನು ಈಗಷ್ಟೇ ಆಸ್ಟ್ರೇಲಿಯಾ, ಯುರೋಪ್‍ನಿಂದ ಹಿಂತಿರುಗುತ್ತಿದ್ದೇನೆ. ಅಲ್ಲಿ ಯುವಕರು ನರಳುತ್ತಿದ್ದಾರೆ. ಕುಟುಂಬಗಳು ಕೆಟ್ಟ ಸ್ಥಿತಿಯಲ್ಲಿವೆ. ದಂಪತಿಗಳು ಜಗಳವಾಡುತ್ತಿದ್ದಾರೆ. ವ್ಯವಹಾರದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನ್ಯೂಜಿಲ್ಯಾಂಡ್​ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅನ್ವರ್ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಅನ್ವರ್ ಹೇಳಿಕೆಗೆ ಅನೇಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲಭೂತವಾಗಿ ನೀವು ಮಹಿಳೆಯರನ್ನು ಗುಲಾಮರನ್ನಾಗಿ ಮಾಡಬೇಕೆಂದು ಹೇಳುತ್ತಿದ್ದೀರಿ. ಮಹಿಳೆಯರಿಗೂ ರೆಕ್ಕೆಗಳನ್ನು ಬಿಚ್ಚಿ ಹಾರಾಡುವ ಅಕಾಶ ನೀಡಬೇಕು. ಆದರೆ ನೀವು ಅವರನ್ನು ಸಾಕುಪ್ರಾಣಿಗಳಂತೆ ಪುರುಷರಿಗೆ ಸೇವೆ ಸಲ್ಲಿಸಬೇಕೆಂಬ ಮನಸ್ಥಿತಿ ಹೊಂದಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

“ಮಹಿಳೆಯರು ಕೆಲಸ ಮಾಡಲು ಮತ್ತು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸುರಕ್ಷಿತ ವಾತಾವರಣವನ್ನು ಕೇಳುವ ಬದಲು, ಅವರು ಮಹಿಳೆಯರನ್ನು ಮನೆಯಲ್ಲಿಯೇ ಇರಲು ಕೇಳುತ್ತಿದ್ದಾರೆ. ಸಿದ್ಧಾಂತದಲ್ಲಿ ಏನೋ ತಪ್ಪಾಗಿದೆ” ಎಂದು ಮತ್ತೊಬ್ಬ ಮಹಿಳೆ ಕಮೆಂಟ್​ ಮಾಡಿದ್ದಾರೆ. “ ಜಗತ್ತು ಮತಾಂತರಗೊಳ್ಳಬೇಕೆಂದು ಬಯಸುವ ನಿಮ್ಮಿಂದ ಇನ್ನೇನು ನಿರೀಕ್ಷಿಸಬಹುದು. “ಇದು ಮಹಿಳೆಯರಿಗೆ ತುಂಬಾ ಅವಮಾನಕರವಾಗಿದೆ” ಹೀಗೆ ಹಲವು ಮಹಿಳೇಯರು ಅನ್ವರ್​ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Viral Video:ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ಪನ್ನೀರ್‌ ಬಿರಿಯಾನಿಯಲ್ಲಿ ಚಿಕನ್‌ ತುಂಡುಗಳು ಪತ್ತೆಯಾಗಿರುವ ಬಗ್ಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಶುಕ್ಲಾ ಮಹಾರಾಷ್ಟ್ರದ ಪುಣೆ ಕರವೇನಗರದ ನಿವಾಸಿ. ಅವರು ಜೊಮ್ಯಾಟೊದಲ್ಲಿ ಪಿಕೆ ಬಿರಿಯಾನಿ ಹೌಸ್‌ನಿಂದ ಪನ್ನೀರ್‌ ಬಿರಿಯಾನಿ ಆರ್ಡರ್‌ ಮಾಡಿದ್ದರು. ಆರ್ಡರ್‌ ಬಂದಂತೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪನ್ನೀರ್‌ ಜೊತೆಗೆ ಚಿಕನ್‌ ಪೀಸ್‌ಗಳೂ ಮಿಕ್ಸ್‌ ಆಗಿದ್ದು ಕಂಡು ಬಂದಿದೆ. ತಕ್ಷಣ ಅವರು ಈ ಬಗ್ಗೆ ಜೊಮ್ಯಾಟೊಗೆ ದೂರು ನೀಡಿದ್ದು, ಅವರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

VISTARANEWS.COM


on

Viral video
Koo

ಪುಣೆ: ಹಸಿರು ಸಮವಸ್ತ್ರದ ಮೂಲಕ ವಿವಾದಕ್ಕೀಡಾಗಿದ್ದ ಜೊಮ್ಯಾಟೊ(Zomato) ಇದೀಗ ಮತ್ತೆ ಸುದ್ದಿಯಲ್ಲಿದೆ. ಜೊಮ್ಯಾಟೊದಿಂದ ಆರ್ಡರ್‌ ಮಾಡಲಾಗಿದ್ದ ಪನೀರ್‌ ಬಿರಿಯಾನಿ(Paneer Biriyani)ಯಲ್ಲಿ ಚಿಕನ್‌ ಪೀಸ್‌ ಸಿಕ್ಕಿದ್ದು, ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ ಎಂದು ಗ್ರಾಹಕರೊಬ್ಬರು ಆರೋಪಿಸಿರುವ ಘಟನೆ ವರದಿಯಾಗಿದೆ. ಪುಣೆ ಮೂಲದ ಪಂಕಜ್‌ ಶುಕ್ಲಾ ಎಂಬ ವ್ಯಕ್ತಿ ಎಕ್ಸ್‌ನಲ್ಲಿ ವಿಡಿಯೋ ಸಮೇತ ಪೋಸ್ಟ್‌ವೊಂದನ್ನು ಮಾಡಿದ್ದು, ಇದೀಗ ಈ ವಿಚಾರ ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ಶುಕ್ಲಾ ಆರೋಪ ಏನು?

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ತುಂಡುಗಳು ಪತ್ತೆಯಾಗಿರುವ ಬಗ್ಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಶುಕ್ಲಾ ಮಹಾರಾಷ್ಟ್ರದ ಪುಣೆ ಕರವೇನಗರದ ನಿವಾಸಿ. ಅವರು ಜೊಮ್ಯಾಟೊದಲ್ಲಿ ಪಿಕೆ ಬಿರಿಯಾನಿ ಹೌಸ್‌ನಿಂದ ಪನೀರ್‌ ಬಿರಿಯಾನಿ ಆರ್ಡರ್‌ ಮಾಡಿದ್ದರು. ಆರ್ಡರ್‌ ಬಂದಂತೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪನೀರ್‌ ಜೊತೆಗೆ ಚಿಕನ್‌ ಪೀಸ್‌ಗಳೂ ಮಿಕ್ಸ್‌ ಆಗಿದ್ದು ಕಂಡು ಬಂದಿದೆ. ತಕ್ಷಣ ಅವರು ಈ ಬಗ್ಗೆ ಜೊಮ್ಯಾಟೊಗೆ ದೂರು ನೀಡಿದ್ದು, ಅವರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

ಇದಾದ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ನನಗೆ ಪೂರ್ತಿ ಹಣ ರೀಫಂಡ್‌ ಆಗಿದೆಯಾದರೂ ಇದರಿಂದ ನನ್ನ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ನಾನು ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿರುವ ಕಾರಣ ಇದು ಪಾಪ ಕೃತ್ಯ ಆದಂತಾಗಿದೆ. ಜೊಮ್ಯಾಟೊದ ಎಡವಟ್ಟಿನಿಂದಾಗಿ ನನ್ನ ಧಾರ್ಮಿಕ ಭಾವನೆಗೆ ನೋವುಂಟಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಪೋಸ್ಟ್‌ಗೆ ತಕ್ಷಣ ರಿಯಾಕ್ಟ್‌ ಮಾಡಿರುವ ಜೊಮ್ಯಾಟೊ, ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ನಿಮ್ಮ ಆರ್ಡರ್ನ ಡಿಟೇಲ್ಸ್‌ ಕಳುಹಿಸಿ. ನಾವು ಚೆಕ್‌ ಮಾಡುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ:Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

ಇನ್ನು ಪಂಕಜ್‌ ಶುಕ್ಲಾ ಟ್ವೀಟ್‌ಗೆ ಅನೇಕ ನೆಟ್ಟಿಗರು ಪರ ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ಶುದ್ಧ ಸಸ್ಯಹಾರಿ ಆಗಿರುವ ನೀವು ಏಕೆ ಮಾಂಸಾಹಾರ ಹೊಟೇಲ್‌ನಿಂದ ಆರ್ಡರ್‌ ಮಾಡಿದ್ದೀರಿ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೂ ಕೆಲವರು ಶುದ್ಧ ಸಸ್ಯಹಾರಿ ಹೊಟೇಲ್‌ಗಳಿಂದಲೇ ಆರ್ಡರ್‌ ಮಾಡಿ. ಇಲ್ಲವಾದರೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

Viral Video:ಅಹ್ಮದಾಬಾದ್‌ನಿಂದ ಮುಂಬೈಗೆ SUV ಕಾರಿನಲ್ಲಿ ರೋಡ್‌ ಟ್ರಿಪ್‌ ಹೊರಟಿದ್ದ ಐವರು ಯುವಕರು ಕಾರು ಚಲಾಯಿಸುತ್ತಲೇ ಇನ್‌ಸ್ಟಾಗ್ರಾಂ ಲೈವ್‌ ಹೋಗಿದ್ದಾರೆ. ಒಂದು ಅತೀ ವೇಗದ ಕಾರು ಚಾಲನೆ ಅದರ ಜೊತೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಹೀಗೆ ಎದುರಿಗೆ ಬರುತ್ತಿದ್ದ ಒಂದೊಂದೆ ವಾಹಗಳನ್ನು ಓವರ್‌ಟೇಕ್‌ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಫುಲ್‌ ಎಂಜಾಯ್‌ ಮೂಡ್‌ನಲ್ಲಿದ್ದ ಯುವಕರ ಹುಚ್ಚಾಟದಿಂದ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಬಲಿಯಾಗಿದ್ದಾರೆ.

VISTARANEWS.COM


on

Viral Video
Koo

ಗುಜರಾತ್‌: ಮೋಜಿಗೆಂದು ವೇಗವಾಗಿ ವಾಹನ ಚಲಾಯಿಸಿ(Rash Driving) ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಬಗ್ಗೆ ದಿನಾ ಒಂದಿಲ್ಲೊಂದು ಘಟನೆ ವರದಿ ಆಗುತ್ತಲೇ ಇರುತ್ತದೆ. ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌(Gujarat Accident)ನಲ್ಲಿ ನಡೆದಿದ್ದು, ಐವರು ಯುವಕರು ಇನ್‌ಸ್ಟಾ ಗ್ರಾಂ ಲೈವ್‌(Viral Video) ಹೋಗುತ್ತಾ ಕಾರನ್ನು ಪ್ರತಿ ಗಂಟೆಗೆ 160 ಕಿಲೋಮೀಟರ್‌ ವೇಗದಲ್ಲಿ ಚಲಾಯಿಸಿ ಕೊನೆಗೆ ಭೀಕರ ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಅಸುನೀಗಿದರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ:

ಗುಜರಾತ್‌ನ ಕಛ್‌ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಹ್ಮದಾಬಾದ್‌ನಿಂದ ಮುಂಬೈಗೆ SUV ಕಾರಿನಲ್ಲಿ ರೋಡ್‌ ಟ್ರಿಪ್‌ ಹೊರಟಿದ್ದ ಐವರು ಯುವಕರು ಕಾರು ಚಲಾಯಿಸುತ್ತಲೇ ಇನ್‌ಸ್ಟಾಗ್ರಾಂ ಲೈವ್‌ ಹೋಗಿದ್ದಾರೆ. ಒಂದು ಅತೀ ವೇಗದ ಕಾರು ಚಾಲನೆ ಅದರ ಜೊತೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಹೀಗೆ ಎದುರಿಗೆ ಬರುತ್ತಿದ್ದ ಒಂದೊಂದೆ ವಾಹಗಳನ್ನು ಓವರ್‌ಟೇಕ್‌ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಫುಲ್‌ ಎಂಜಾಯ್‌ ಮೂಡ್‌ನಲ್ಲಿದ್ದ ಯುವಕರ ಹುಚ್ಚಾಟದಿಂದ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಬಲಿಯಾಗಿದ್ದಾರೆ. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುವುದಕ್ಕೂ ಮುನ್ನ ನಡೆದ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೋರಾಗಿ ಮ್ಯೂಸಿಕ್‌ ಹಾಕಿಕೊಂಡು ಯುವಕನೋರ್ವ “ನೋಡಿ ನಮ್ಮ ಕಾರು ಎಷ್ಟು ವೇಗವಾಗಿ ಹೋಗುತ್ತಿದೆ” ಎಂದು ಹೇಳುತ್ತಾ ಸ್ಪೀಡೋ ಮೀಟರ್‌ ಅನ್ನು ತೋರಿಸುತ್ತಾನೆ. ಅದು ಪ್ರತಿಗಂಟೆಗೆ 160 ಕಿ.ಮೀ ವೇಗ ತೋರಿಸುತ್ತಿತ್ತು. ಅಷ್ಟು ಹೊತ್ತಿಗೆ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿ ಒಂದೊಂದೆ ವಾಹನಗಳನ್ನು ಹಿಂದಿಕ್ಕಲು ಶುರು ಮಾಡುತ್ತಾರೆ. ಆಗ ಮತ್ತೊರ್ವ ಯುವಕ ಯೆಸ್‌…ಒನ್‌ ಮೋರ್‌ ಎಂದು ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

ಈ ಘಟನೆ ಮೇ 2ರಂದು ಅದಾಸ್‌ ಪ್ರದೇಶದಲ್ಲಿ ಬೆಳಗ್ಗಿನ ಜಾವ 3.30 ಮತ್ತು 4.30ರ ನಡುವೆ ನಡೆದಿದ್ದು, ಮೃತರನ್ನು ಅಮನ್‌ ಮೆಹಬೂಬ್‌ ಭಾಯ್‌ ಶೇಖ್‌ ಮತ್ತು ಚಿರಾಗ್‌ ಕುಮಾರ್‌ ಕೆ ಪಟೇಲ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾರು ಚಲಾಯಿಸುತ್ತಿದ್ದ ಮುಸ್ತಾಫಾ ಅಲಿಯಾಸ್‌ ಶಹಬಾದ್‌ ಖಾನ್‌ ಪಠಾಣ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Advertisement
Sunil Chhetri
ಕ್ರೀಡೆ14 mins ago

Sunil Chhetri: ಭಾರತದ ಕಾಲ್ಚೆಂಡಿನ ಮಾಂತ್ರಿಕ ಸುನೀಲ್ ಚೆಟ್ರಿ ಸಾಧನೆಯೇ ರೋಚಕ

Fire Accident
ದೇಶ14 mins ago

Fire Accident: ಬಿಜೆಪಿ ಕಚೇರಿಯಲ್ಲಿ ಭಾರಿ ಅಗ್ನಿ ಅವಘಡ; ಅಗ್ನಿಶಾಮಕ ಸಿಬ್ಬಂದಿ ದೌಡು

XVU300
ಆಟೋಮೊಬೈಲ್16 mins ago

Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

Namrata Gowda Holiday Look in Red Ruffle Layered Maxi Dress
ಫ್ಯಾಷನ್22 mins ago

Namratha Gowda: ರೆಡ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ನಟಿ ನಮ್ರತಾ ಗೌಡ ಹಾಲಿಡೇ ಲುಕ್‌!

Viral News
ವೈರಲ್ ನ್ಯೂಸ್22 mins ago

Viral News: ಶ್ವಾನದ ಜತೆ ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಯ ವೇಳೆ ಹಲ್ಲೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

Karnataka Weather Forecast
ಮಳೆ35 mins ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

BMW X3 xDrive20d
ಪ್ರಮುಖ ಸುದ್ದಿ49 mins ago

BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

Most costly medicine
ಆರೋಗ್ಯ51 mins ago

Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

Cannes 2024 Fashion celebrities trend
ಫ್ಯಾಷನ್57 mins ago

Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

PM Narendra Modi
ದೇಶ1 hour ago

PM Narendra Modi:”ಅಬ್ಬಾ.. ಎಂಥಾ ಮೇಕಪ್!”- ಮತ್ತೆ ಗಮನ ಸೆಳೆದ ಮೋದಿ; ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ35 mins ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Suspicious Case
ಬೆಂಗಳೂರು6 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ3 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

ಟ್ರೆಂಡಿಂಗ್‌