Viral Video : ವಧುವಿಗೆ ಮಾಲೆ ಹಾಕುತ್ತಿದ್ದಂತೆಯೇ ಹೌಹಾರಿದ ವರ! ತರ್ಲೆ ಸ್ನೇಹಿತರಿದ್ದರೆ ಹೀಗೇ ಆಗುವುದು - Vistara News

ವೈರಲ್ ನ್ಯೂಸ್

Viral Video : ವಧುವಿಗೆ ಮಾಲೆ ಹಾಕುತ್ತಿದ್ದಂತೆಯೇ ಹೌಹಾರಿದ ವರ! ತರ್ಲೆ ಸ್ನೇಹಿತರಿದ್ದರೆ ಹೀಗೇ ಆಗುವುದು

ಮದುವೆ ಮನೆಯಲ್ಲಿ ವರನು ವಧುವಿಗೆ ಮಾಲೆ ಹಾಕಿದ ತಕ್ಷಣ ಪಟಾಕಿ ಸದ್ದಿಗೆ ಹೌಹಾರಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮದುವೆ ಕಾರ್ಯಕ್ರಮ ಎಂದ ಮೇಲೆ ಅಲ್ಲಿ ನಗು, ಸಂತೋಷ ಇರಲೇಬೇಕು. ಹೊಸ ಬಾಳಿಗೆ ಕಾಲಿಡಲು ಸಿದ್ಧರಾದ ವಧು ವರರ ಹಾಸ್ಯಮಯ ವಿಡಿಯೊಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಅದೇ ರೀತಿ ಇದೀಗ ಮತ್ತೊಂದು ವಿಡಿಯೊ ವೈರಲ್‌ (Viral Video) ಆಗಿದೆ. ವಧುವಿಗೆ ಮಾಲೆ ಹಾಕಿದ ವರ ಹೆದರಿ ಹೌಹಾರಿದ ವಿಡಿಯೊ ಎಲ್ಲರಲ್ಲೂ ನಗು ತರಿಸಲಾರಂಭಿಸಿದೆ.

ಇದನ್ನೂ ಓದಿ: Viral Video: ವಿಶ್ವದಲ್ಲೇ ಉದ್ದದ ನಾಲಗೆ ಈತನದ್ದು; ಗಿನ್ನಿಸ್‌ ದಾಖಲೆಗೆ ಭಾಜನ
ಅದು ಉತ್ತರ ಭಾರತದಲ್ಲಿ ನಡೆದ ಮದುವೆ. ವಧು ಮೊದಲಿಗೆ ವರನಿಗೆ ಮಾಲೆ ಹಾಕುತ್ತಾಳೆ. ಅದಾದ ತಕ್ಷಣ ವರ ಕೂಡ ವಧುವಿಗೆ ಮಾಲೆ ಹಾಕುತ್ತಾನೆ. ಅದೇ ಹೊತ್ತಿಗೆ ವರನ ಹಿಂದಿನಿಂದ ಜೋರಾದ ಪಟಾಕಿ ಸದ್ದು ಕೇಳಿಸುತ್ತದೆ. ಇದ್ದಕ್ಕಿದ್ದಂತೆ ವರ ಹೆದರಿ ಅಕ್ಕ ಪಕ್ಕ ನೋಡಲಾರಂಭಿಸುತ್ತಾನೆ. ಯಾರೋ ಬಂದೂಕು ತಂದು ಗುಂಡನ್ನೇ ಹಾರಿಸಿದರು ಎನ್ನುವಷ್ಟು ಭಯವನ್ನು ವರನ ಮುಖದಲ್ಲಿ ಕಾಣಬಹುದಾಗಿದೆ. ಈ ದೃಶ್ಯ ಕಂಡು ಅಲ್ಲಿ ಪಟಾಕಿ ಹಚ್ಚಿದ ಸ್ನೇಹಿತರು ಹಾಗೂ ಮದುವೆಗೆ ಬಂದಿದ್ದ ಬಂಧು ಬಳಗದವರೆಲ್ಲರೂ ಜೋರಾಗಿ ನಗಲಾರಂಭಿಸುತ್ತಾರೆ.


ಈ ವಿಡಿಯೊವನ್ನು ನಾಟಿ ಫ್ಯಾಮಿಲಿ ಹೆಸರಿನ ಇನ್‌ಸ್ಟಾಗ್ರಾಂ ಹೆಸರಿನಲ್ಲಿ ಹಂಚಿಕೊಳ್ಳಲಾಗಿದೆ. ಫೆಬ್ರವರಿ 18ರಂದು ಹಂಚಿಕೊಳ್ಳಲಾದ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಹಾಗೆಯೇ 4.95 ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. “ಈ ರೀತಿಯ ತಮಾಷೆಗಳು ಇದ್ದರೆ ಮಾತ್ರವೇ ಮದುವೆ ಕಾರ್ಯಕ್ರಮ ವರ್ಣಮಯವಾಗುವುದು”, “ವರನ ಮುಖ ನೋಡಿ ನಕ್ಕು ನಕ್ಕು ಸಾಕಾಯಿತು” ಎನ್ನುವಂತಹ ಹಲವಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Viral Video : ಮೊಸಳೆಯನ್ನೇ ಅಪ್ಪಿಕೊಳ್ಳಲು ಹೋದ ಅಜ್ಜ, ಮುಂದೇನಾಯ್ತು ನೋಡಿ
ಇನ್ನೂ ಹಲವರು “ಈ ರೀತಿ ತಮಾಷೆ ಮಾಡುವ ಅನೇಕ ಸ್ನೇಹಿತರಿರುತ್ತಾರೆ” ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗೆಯೇ ಅನೇಕರು ತಮ್ಮ ಮದುವೆಗಳಲ್ಲಿ ನಡೆದ ಹಾಸ್ಯಮಯ ಘಟನೆಗಳನ್ನೂ ಕಾಮೆಂಟ್‌ ಮೂಲಕ ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral Video: ಚಲಿಸುತ್ತಿದ್ದ ರೈಲಿನ ಹೊರಗೆ ಜೋಷ್‌‌ನಿಂದ ನೇತಾಡಿದ ಯುವಕ; ಏನಾಯಿತು ನೋಡಿ

Viral Video: ಯುವಕನೊಬ್ಬ ರೈಲಿನ ಬಾಗಿಲು ಮುಚ್ಚಿದ್ದರೂ ಕೂಡ ಬಾಗಿಲಿನ ಹೊರಗೆ ನೇತಾಡುತ್ತಿದ್ದ. ಹಾಗೇ ತನ್ನ ಕೈಯನ್ನು ಸ್ವಲ್ಪ ಹೊರಗೆ ಚಾಚಿದ್ದಾನೆ. ಆ ವೇಳೆ ಆತ ಇದ್ದಕ್ಕಿದ್ದಂತೆ ಅಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರರು ಭಯಭೀತರಾದರು. ಈ ಭಯಾನಕ ಅಪಘಾತವನ್ನು ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ

VISTARANEWS.COM


on

Viral Video
Koo


ಮುಂಬೈ: ಯುವಕರಿಗೆ ಚಲಿಸುತ್ತಿದ್ದ ವಾಹನಗಳ ಹಿಂದೆ ಓಡಿ ಅದನ್ನು ಹತ್ತುವ ಶೋಕಿ. ನಾವು ಹೆಚ್ಚಾಗಿ ಈ ದೃಶ್ಯವನ್ನು ಬಸ್ಸು, ರೈಲುಗಳನ್ನು ಹತ್ತುವಾಗ ಯುವಕರ ಈ ಸರ್ಕಸ್ ಅನ್ನು ಕಾಣುತ್ತೇವೆ. ಹಾಗೇ ಬಸ್ಸು ಅಥವಾ ರೈಲಿನ ಬಾಗಿಲಿನಲ್ಲಿ ನಿಂತು ನೇತಾಡುತ್ತಾ ಸಾಗುತ್ತಾರೆ. ಆದರೆ ಇದರಿಂದ ಅನೇಕರು ಅಪಾಯಕ್ಕೆ ಒಳಗಾಗಿದ್ದಾರೆ. ಇದನ್ನು ತಿಳಿದರೂ ಕೂಡ ಇನ್ನೂ ನಮ್ಮ ಯುವಕರು ಇಂತಹ ಸರ್ಕಸ್ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ಚಲಿಸುತ್ತಿದ್ದ ರೈಲಿನಿಂದ ಹೊರಗೆ ನೇತಾಡಿದ ಯುವಕನೊಬ್ಬ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಯುವಕನೊಬ್ಬ ರೈಲಿನ ಬಾಗಿಲು ಮುಚ್ಚಿದ್ದರೂ ಕೂಡ ಬಾಗಿಲಿನ ಹೊರಗೆ ನೇತಾಡುತ್ತಿದ್ದ. ಹಾಗೇ ತನ್ನ ಕೈಯನ್ನು ಸ್ವಲ್ಪ ಹೊರಗೆ ಚಾಚಿದ್ದಾನೆ. ಆ ವೇಳೆ ಆತ ಇದ್ದಕ್ಕಿದ್ದಂತೆ ಅಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರರು ಭಯಭೀತರಾದರು. ಈ ಭಯಾನಕ ಅಪಘಾತವನ್ನು ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ. ಹಾಗೇ ಘಟನೆಯ ಸಮಯ ಮತ್ತು ಸ್ಥಳ ತಿಳಿದುಬಂದಿಲ್ಲ.

ಆದರೆ ಈ ಘಟನೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯವನ್ನು ಕಳುಹಿಸಲಾಗಿದೆ. ವಿಲಕ್ಷಣ ಅಪಘಾತದಿಂದ ಆ ಯುವಕ ಬದುಕುಳಿದಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಹಿಂದೆ ಕೂಡ ಮುಂಬೈನ ಉಪನಗರ ಸ್ಥಳೀಯ ರೈಲು ಚಲಿಸುವಾಗ ಅಪಾಯಕಾರಿ ಸ್ಟಂಟ್ ಮಾಡಿದ ಆರೋಪದ ಮೇಲೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌) ಪತ್ತೆ ಹಚ್ಚಿದ್ದರು. ಆತ ಫರ್ಹತ್ ಅಜಮ್ ಶೇಖ್ ಎಂಬುದಾಗಿ ತಿಳಿದುಬಂದಿದ್ದು, ಈ ಯುವಕ ಇಂತಹ ಸ್ಟಂಟ್‌ಗಳನ್ನು ಮಾಡಿ ಅಪಾಯಕ್ಕೆ ಒಳಗಾಗಿದ್ದಕ್ಕೆ ಗಂಭೀರ ಉದಾಹರಣೆಯಾಗಿದ್ದಾನೆ.

ಇದನ್ನೂ ಓದಿ: ಊಟದ ಪಾರ್ಸೆಲ್‌‌ನಲ್ಲಿ ಉಪ್ಪಿನಕಾಯಿ ಹಾಕಲು ಮರೆತ ಹೋಟೆಲ್‌‌; 35,000 ರೂ. ದಂಡ ಹಾಕಿದ ಕೋರ್ಟ್‌!

ಈತ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಒಂದು ಕೈ ಮತ್ತು ಕಾಲನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ ಶೇಖ್ ಈಗ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಆಗದೆ ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಕೇಂದ್ರ ರೈಲ್ವೆ ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡದಂತೆ ಕಠಿಣ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Indo-Pak Romance: ಪಾಕಿಸ್ತಾನದ ಮೆಹ್ವಿಶ್ ಎಂಬ ಮಹಿಳೆ ಗಡಿಯನ್ನು ದಾಟಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಬಾಳಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಆಗಮಿಸಿದ್ದಾರೆ. ವಿಶೇಷ ಎಂದರೆ ಮೆಹ್ವಿಶ್ ಮತ್ತು ರೆಹಮಾನ್‌ಗೆ ಈಗಾಗಲೇ ಬೇರೆ ಬೇರೆ ಮದುವೆಯಾಗಿದ್ದು ತಲಾ ಇಬ್ಬರು ಮಕ್ಕಳಿದ್ದಾರೆ. ಈ ಪೈಕಿ ಮೆಹ್ವಿಶ್ ವಿಚ್ಛೇಧನ ಪಡೆದುಕೊಂಡಿದ್ದರೆ ಸದ್ಯ ರೆಹಮಾನ್‌ ಪತ್ನಿ ಠಾಣೆ ಮೆಟ್ಟಿಲೇರಿದ್ದಾರೆ.

VISTARANEWS.COM


on

Indo-Pak Romance
Koo

ಜೈಪುರ: ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತಿದೆ. ಜತೆಗೆ ಗಡಿಯ ಹಂಗೂ ಇಲ್ಲ. ಈಗಾಗಲೇ ಎರಡು ದೇಶಗಳ ಪ್ರೇಮಿಗಳು ಭಾಷೆ, ಧರ್ಮದ ಗಡಿಯನ್ನು ಮೀರಿ ಒಂದಾಗಿರುವುದನ್ನು ನೋಡಿದ್ದೇನೆ. ಬಹುತೇಕ ಸಂದರ್ಭದಲ್ಲಿ ಇದಕ್ಕೆ ಸೋಷಿಯಲ್‌ ಮೀಡಿಯಾವೇ ತಳಹದಿ ಎನ್ನುವುದು ವಿಶೇಷ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಪಾಕಿಸ್ತಾನದ ಮಹಿಳೆ, ಎರಡು ಮಕ್ಕಳ ತಾಯಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಪ್ರಿಯತಮನ್ನು ಹುಡುಕಿಕೊಂಡು ರಾಜಸ್ಥಾನಕ್ಕೆ ಆಗಮಿಸಿದ್ದಾರೆ (Indo-Pak Romance). ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಆನ್‌ಲೈನ್‌ ಪಬ್‌ ಜಿ ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದರು. ಇದು ಕೂಡ ಅದನ್ನೇ ಹೋಲುವ ಘಟನೆ. ಇದೀಗ ಭಾರತಕ್ಕೆ ಬಂದ ಮಹಿಳೆಯ ಹೆಸರು 25 ವರ್ಷದ ಮೆಹ್ವಿಶ್. ಮೆಹ್ವಿಶ್ ಗಡಿಯನ್ನು ದಾಟಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಬಾಳಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಬಂದಿರುವುದು ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಲಾಹೋರ್‌ ಮೂಲದ ಮೆಹ್ವಿಶ್ ಮಾಧ್ಯಮಗಳೊಂದಿಗೆ ತಮ್ಮ ಲವ್‌ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಮೆಹ್ವಿಶ್‌ಗೆ 2 ವರ್ಷ ತುಂಬುವಷ್ಟರಲ್ಲಿ ತಾಯಿ ನಿಧನ ಹೊಂದಿದ್ದರು. 10ನೇ ವರ್ಷದಲ್ಲಿ ಅವರು ತಂದೆಯನ್ನು ಕಳೆದುಕೊಂಡರು. ಬಳಿಕ ಅವರು ಇಸ್ಲಾಮಾಬಾದ್‌ಗೆ ತೆರಳಿ ಸಹೋದರಿ ಶಹಿಮಾ ಅವರೊಂದಿಗೆ ವಾಸಿಸತೊಡಗಿದರು. ಬ್ಯೂಟಿ ಪಾರ್ಲರ್‌ ಕೋರ್ಸ್‌ ಮಾಡಿರುವ ಅವರು ಕಳೆದ ಒಂದು ದಶಕದಿಂದ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ಇಬ್ಬರು ಮಕ್ಕಳು

ಅಚ್ಚರಿ ಎಂದರೆ ಮೆಹ್ವಿಶ್‌ ವಿವಾಹಿತೆ. ಬಾದಮಿ ಬಾಘ್‌ ಎನ್ನುವವರನ್ನು ಅವರು ಕೆಲವು ವರ್ಷಗಳ ಹಿಂದೆ ವರಿಸಿದ್ದರು. ಈ ದಂಪತಿಗೆ 12 ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. 2018ರಲ್ಲಿ ಈ ದಂಪತಿ ವಿಚ್ಚೇಧನ ಪಡೆದುಕೊಂಡಿದ್ದು, ಬಾದಮಿ ಬಾಘ್‌ ಮರುಮದುವೆಯಾಗಿದ್ದಾರೆ. ಬಳಿಕ ಮೆಹ್ವಿಶ್‌ಗೆ ಫೇಸ್‌ಬುಕ್‌ನಲ್ಲಿ ರೆಹಮಾನ್‌ ಪರಿಚಯವಾಗಿತ್ತು. 2022ರಂದು ಮೆಹ್ವಿಶ್‌ ತನ್ನ ಸಹೋದರಿಯೊಂದಿಗೆ ಚರ್ಚೆ ನಡೆಸಿ ಕುವೈತ್‌ನಲ್ಲಿ ಕೆಲಸ ಮಾಡುವ ರೆಹಮಾನ್‌ ಬಳಿ ಮದುವೆಯ ಪ್ರಸ್ತಾವ ಇಟ್ಟಿದ್ದರು. 2022ರ ಮಾರ್ಚ್‌ 16ರಂದು ಇಬ್ಬರು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿವಾಹಿತರಾಗಿದ್ದರು. ನಂತರ ಅವರು 2023ರಲ್ಲಿ ಉಮ್ರಾ ತೀರ್ಥಯಾತ್ರೆಯ ಸಮಯದಲ್ಲಿ ಮೆಕ್ಕಾದಲ್ಲಿ ಭೇಟಿಯಾಗಿ ತಮ್ಮ ಮದುವೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು.

ಸ್ವಾಗತ

ಮೆಹ್ವಿಶ್ ಜುಲೈ 25ರಂದು ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್‌ನಿಂದ ವಾಘಾ ಗಡಿಗೆ ಆಗಮಿಸಿದರು. ಪಾಕಿಸ್ತಾನ ಮತ್ತು ಭಾರತೀಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ ನಂತರ 45 ದಿನಗಳ ಪ್ರವಾಸಿ ವೀಸಾದಲ್ಲಿ ಅವರು ಭಾರತ ಪ್ರವೇಶಿಸಿದ್ದರು. ರೆಹಮಾನ್ ಕುಟುಂಬವು ಆಕೆಯನ್ನು ಪಿಥಿಸರ್ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿದೆ.

ಮೆಹ್ವಿಶ್ ಆಗಮನವು ಎಲ್ಲೆಡೆ ಸುದ್ದಿಯಾದ ಹಿನ್ನೆಲೆಯಲ್ಲಿ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ತನಿಖೆ ನಡೆಸುತ್ತಿವೆ. ಸ್ಥಳೀಯ ಪೊಲೀಸರು ಕೂಡ ಪ್ರಶ್ನಿಸಿದ್ದಾರೆ ಹಾಗೂ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ಪರಿಶೀಲಿಸಿದ್ದಾರೆ. ರೆಹಮಾನ್‌ 2011ರಲ್ಲಿ ಭದ್ರಾ ಮೂಲದ ಫರೀದಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಫರೀದಾ ತನ್ನ ಮಕ್ಕಳೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಕಾನೂನು ಪ್ರಕಾರ ಇವರು ವಿಚ್ಛೇಧನ ಪಡೆದುಕೊಂಡಿಲ್ಲ. ಇದೀಗ ತನ್ನ ಗಂಡನ ಪ್ರಿಯತಮೆ ಪಾಕಿಸ್ತಾನದಿಂದ ಬಂದಿರುವುದನ್ನು ತಿಳಿದು ಫರೀದಾ ಆಕೆಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮೆಹ್ವಿಶ್ ಗೂಢಚಾರಿಯಾಗಿರಬಹುದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಿನಿಮಾ ಕಥೆಯನ್ನು ಹೋಲುತ್ತದೆ ಎಂದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: Seema Haider: ಮತ್ತೆ ಸುದ್ದಿಯಾದ ಸೀಮಾ ಹೈದರ್‌; ಇದು ಗಡಿಯಾಚೆಗಿನ ಪ್ರೇಮ ಕಥೆಯೋ ಅಥವಾ ಪಾಕ್‌ ಗೂಢಚಾರಿಕೆಯೋ?

Continue Reading

Latest

Anant Ambani Marriage: ಅನಂತ್ ಅಂಬಾನಿ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್; ಕುಣಿದು ಕುಪ್ಪಳಿಸಿದ ಹಾರ್ದಿಕ್ ,ರಣವೀರ್ ಸಿಂಗ್!

Anant Ambani Marriage ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಇತ್ತೀಚೆಗೆ ಮುಂಬೈನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇದೀಗ ಅನಂತ್ ಅಂಬಾನಿ ಮದುವೆ ಆಚರಣೆಯ ಹೊಸ ವಿಡಿಯೊಂದು ಹೊರಬಿದ್ದಿದೆ ಈ ವಿಡಿಯೊದಲ್ಲಿ ಮದುವೆಯ ಆಚರಣೆಯ ಅಂಗವಾದ ಅರಿಶಿನ ಶಾಸ್ತ್ರದಲ್ಲಿ ಅನಂತ್ ಮತ್ತು ರಾಧಿಕಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆದಿದ್ದಾರೆ, ಇದರಲ್ಲಿ ಎಲ್ಲರಿಗೂ ಅರಿಶಿನವನ್ನು ಹಚ್ಚಲಾಗಿದೆ. ಅರಿಶಿನದೊಂದಿಗೆ ಓಕುಳಿಯಾಡುತ್ತಾ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ.

VISTARANEWS.COM


on

Anant Ambani Marriage
Koo


ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Marriage ) ಮತ್ತು ರಾಧಿಕಾ ಮರ್ಚಂಟ್‌ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆಗೆ ಹಲವು ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು. ಇದೀಗ ಅನಂತ್ ಅಂಬಾನಿ ಮದುವೆ ಆಚರಣೆಯ ಹೊಸ ವಿಡಿಯೊಂದು ಹೊರಬಿದ್ದಿದೆ ಈ ವಿಡಿಯೊದಲ್ಲಿ ಮದುವೆಯ ಆಚರಣೆಯ ಅಂಗವಾದ ಅರಿಶಿನ ಶಾಸ್ತ್ರದಲ್ಲಿ ಅನಂತ್ ಮತ್ತು ರಾಧಿಕಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆದಿದ್ದಾರೆ, ಇದರಲ್ಲಿ ಎಲ್ಲರಿಗೂ ಅರಿಶಿನವನ್ನು ಹಚ್ಚಲಾಗಿದೆ. ಅರಿಶಿನದೊಂದಿಗೆ ಓಕುಳಿಯಾಡುತ್ತಾ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ.

ಈ ವಿಡಿಯೊದಲ್ಲಿ, ಅನಂತ್ ಅವರು ತನ್ನ ಸುತ್ತಲಿನ ಎಲ್ಲರ ಮೇಲೆ ಬಕೆಟ್‌ನಲ್ಲಿ ಅರಿಶಿನವನ್ನು ಎಸೆದು ಖುಷಿಪಟ್ಟಿದ್ದಾರೆ.ಹಾಗೇ ತಮ್ಮ ತಾಯಿ ನೀತಾ ಅಂಬಾನಿ ಅವರ ಮೇಲೂ ಅರಶಿನದ ನೀರನ್ನು ಸುರಿದಿದ್ದಾರೆ. ನೀತಾ ಅಂಬಾನಿ ಕೂಡ ನಗು ನಗುತ್ತಾ ಮಗನ ಮದುವೆ ದಿನವನ್ನು ಸಂಭ್ರಮಿಸಿದ್ದಾರೆ. ಅನಂತ್ ತನ್ನ ತಂದೆಯ ಕೆನ್ನೆಗೂ ಅರಿಶಿನವನ್ನು ಹಚ್ಚಿದ್ದಾರೆ ಹಾಗೂ ರಾಧಿಕಾಗೂ ಕೂಡ ಅರಿಶಿನ ಹಚ್ಚಿದ್ದಾರೆ. ರಾಧಿಕಾ ಅವರ ತಂದೆ ವೀರೇನ್ ಮರ್ಚೆಂಟ್ ಕೂಡ ತನ್ನ ಮಗಳ ಮದುವೆ ಆಚರಣೆ ಕಂಡು ಸಂತೋಷಗೊಂಡಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ನಟ ರಣವೀರ್ ಸಿಂಗ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ಈ ಅರಿಶಿನದ ಆಚರಣೆಯಲ್ಲಿ ಭಾಗವಹಿಸಿದ್ದರು. ಅವರಿಬ್ಬರೂ ಅರಿಶಿನದಲ್ಲಿ ಒದ್ದೆಯಾಗಿ ರಾತ್ರಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರ ಅಭಿಮಾನಿಗಳು ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. “ಹಾರ್ದಿಕ್ ಮತ್ತು ರಣವೀರ್ ಸಿಂಗ್ ತಮ್ಮ ಸ್ವಂತ ಮದುವೆಯಲ್ಲಿ ಆನಂದಿಸಲು ಸಾಧ್ಯವಾಗದ ರೀತಿಯಲ್ಲಿ ಆನಂದಿಸುತ್ತಿದ್ದಾರೆ” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. “ರಣವೀರ್ ಸಿಂಗ್ ಫುಲ್ ಪೈಸಾ ವಸೂಲ್ ಪ್ರದರ್ಶನ ನೀಡುತ್ತಿದ್ದಾರೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

“ರಣವೀರ್ ಇಲ್ಲದಿದ್ದರೆ ಈ ಮದುವೆ ನೀರಸ ಮದುವೆಯಾಗುತ್ತಿತ್ತು” ಎಂದು ಇನ್ನೊಬ್ಬರು ಹೇಳಿದ್ದಾರೆ. ಇತರರು ನೀತಾ ಅಂಬಾನಿ ಕೂಡ ಅಲ್ಲಿ ಉಲ್ಲಾಸದಿಂದ ಸಂಭ್ರಮಿಸಿದ್ದನ್ನು ನೋಡಿ ಸಂತೋಷಪಟ್ಟರು. “ನೀತಾ ಅಂಬಾನಿ ಅವರ ಕ್ರೇಜಿ ಲುಕ್ ಅನ್ನು ಹಿಂದೆಂದೂ ನೋಡಿಲ್ಲ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ಅವರು ನಿಜವಾಗಿಯೂ ಈ ಆಚರಣೆಗೆ ಚಂದನ್ (ಶ್ರೀಗಂಧ) ಪೇಸ್ಟ್ ಬಳಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಚ್ಛೇದನ ಸಿಕ್ಕಿದ ಖುಷಿಗೆ ʼಡಿವೋರ್ಸ್‌ ಪಾರ್ಟಿʼ ಮಾಡಿ ಕುಣಿದು ಕುಪ್ಪಳಿಸಿದ ಯುವತಿ! ವಿಡಿಯೊ ನೋಡಿ

ಜುಲೈ 12 ರಂದು ಭವ್ಯ ಸಮಾರಂಭದೊಂದಿಗೆ ಅನಂತ್-ರಾಧಿಕಾ ಅವರ ವಿವಾಹ ಮಹೋತ್ಸವ ಪ್ರಾರಂಭವಾಯಿತು, ನಂತರ ಜುಲೈ 13 ರಂದು ಶುಭ ಆಶೀರ್ವಾದ್ ಸಮಾರಂಭ ನಡೆಯಿತು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಸಿದ್ಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಜುಲೈ 14 ರಂದು ನಡೆದ ಭವ್ಯ ಆರತಕ್ಷತೆಯಲ್ಲಿ ಮನರಂಜನಾ ಉದ್ಯಮದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.

Continue Reading

ವೈರಲ್ ನ್ಯೂಸ್

Viral Video: ಶೇ. 100ರಷ್ಟು ಆದಾಯ ತೆರಿಗೆಯನ್ನು ಹೀಗೂ ಉಳಿಸಬಹುದಂತೆ ನೋಡಿ!

ಕೇಂದ್ರ ಬಜೆಟ್ 2024 ಅನ್ನು ಮಂಡಿಸಿದ ಬಳಿಕ ಶ್ರೀನಿಧಿ ಹಂದೆ ಎಂಬುವರು ವಿಡಂಬನಾತ್ಮಕ ವಿಡಿಯೋವನ್ನು (Viral Video) ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಉದ್ಯೋಗದಾತರಿಗೆ ಹುಲ್ಲು ಬೆಳೆದು ಮಾರಾಟ ಮಾಡುವ ಮೂಲಕ ಶೇ. 100ರಷ್ಟು ಆದಾಯ ತೆರಿಗೆಯನ್ನು ಹೇಗೆ ಉಳಿಸಬಹುದು ಎಂಬುದನ್ನು ವಿವರಿಸಿದ್ದಾರೆ.

VISTARANEWS.COM


on

By

Viral Video
Koo

ಸಂಬಳ ಪಡೆಯುವ ತೆರಿಗೆದಾರರಿಗೆ ತಮ್ಮ ಆದಾಯದಲ್ಲಿ ಶೇ. 100ರಷ್ಟು ಉಳಿತಾಯ ಮಾಡುವ ದಾರಿಯನ್ನು ಕನ್ನಡಿಗನೊಬ್ಬ ಸರಳವಾಗಿ ತೋರಿಸಿದ್ದಾನೆ. ಆದಾಯ ತೆರಿಗೆ ಉಳಿಸುವ (save income tax) ಬಗ್ಗೆ “ಹಣಕಾಸಿನ ಸಲಹೆ” (financial advice) ನೀಡಿದ ಶ್ರೀನಿಧಿ ಹಂದೆ ಅವರ ವಿಡಿಯೋ ಇನ್‌‌ಸ್ಟಾಗ್ರಾಮ್ ನಲ್ಲಿ ( Instagram) ಹಂಚಿಕೊಳ್ಳಲಾಗಿದ್ದು, ಇದು ಭಾರಿ ವೈರಲ್ (Viral Video) ಆಗಿದೆ.

ಜುಲೈ 23ರಂದು ಕೇಂದ್ರ ಬಜೆಟ್ 2024 ಅನ್ನು ಮಂಡಿಸಿದ ಬಳಿಕ ಶ್ರೀನಿಧಿ ಹಂದೆ ಅವರು ವಿಡಂಬನಾತ್ಮಕ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಉದ್ಯೋಗದಾತರಿಗೆ ಹುಲ್ಲು ಬೆಳೆದು ಮಾರಾಟ ಮಾಡುವ ಮೂಲಕ ಶೇ. 100ರಷ್ಟು ಆದಾಯ ತೆರಿಗೆಯನ್ನು ಹೇಗೆ ಉಳಿಸಬಹುದು ಎಂಬುದನ್ನು ವಿವರಿಸಿದ್ದಾರೆ.

ಈ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಂದೆ ಅವರ ವಿಡಿಯೋವನ್ನು ಚಾರ್ಟರ್ಡ್ ಅಕೌಂಟೆಂಟ್ ಅಖಿಲ್ ಪಚೋರಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಎಕ್ಸ್ ನಲ್ಲಿಯೂ ವೇಗವಾಗಿ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಬಳಕೆದಾರರು ಇದಕ್ಕೆ ನಗುವಿನ ಇಮೋಜಿ ಕಳುಹಿಸಿದ್ದಾರೆ.

ಈ ವಿಡಿಯೋದಲ್ಲಿ ಶ್ರೀನಿಧಿ ಹಂದೆ ಅವರು ಹೀಗೆ ಹೇಳಿದ್ದಾರೆ. ಆದಾಯ ತೆರಿಗೆಯಲ್ಲಿ ಶೇ. 100ರಷ್ಟು ಉಳಿಸುವುದು ಹೇಗೆ ಎಂದು ನಾನು ನಿಮಗೆ ಹೇಳುತ್ತೇನೆ. ಇದು ಅತ್ಯಂತ ಸುಲಭ, ಕಾನೂನು ಮತ್ತು ಸರಳ ಪ್ರಕ್ರಿಯೆಯ ಮೂರು ಹಂತಗಳನ್ನು ಒಳಗೊಂಡಿದೆ.

ಮೊದಲನೇ ಹಂತದಲ್ಲಿ ನೀವು ನಿಮ್ಮ ಮನೆಯಲ್ಲಿ ಅಥವಾ ಬಾಲ್ಕನಿ ಅಥವಾ ನಿಮ್ಮ ಟೆರೇಸ್ ನಲ್ಲಿ ಹುಲ್ಲು ಬೆಳೆಯಬೇಕು. ಇದು ತುಂಬಾ ಕಾನೂನು ಪ್ರಕ್ರಿಯೆಯಾಗಿದೆ. ಈಗ ಹೆಚ್ ಆರ್ ಗೆ ಹೋಗಿ ನಿಮಗೆ ಯಾವುದೇ ಸಂಬಳ ಬೇಡ ಎಂದು ಹೇಳಿ. ಅವರು ನಿಮ್ಮ ಸಂಬಳಕ್ಕೆ ತಕ್ಕುದಾಗಿ ಕಂಪೆನಿಯು 50,000 ರೂ. ನ ಹುಲ್ಲು ಖರೀದಿಸಬೇಕು ಎಂದು ಹೇಳಿ. ಕಾನೂನು ಪ್ರಕ್ರಿಯೆಯಂತೆ ಅವರು ಖರೀದಿ ಮಾಡಿದ ಹುಲ್ಲಿಗೆ ನಿಮಗೆ ಹಣ ಪಾವತಿ ಮಾಡಿದರೆ ನೀವು ಆದಾಯ ತೆರಿಗೆಯಿಂದ ಮುಕ್ತರಾಗುತ್ತೀರಿ.

ಸಂಬಳದಿಂದ ಬರುವ ಆದಾಯ ಶೂನ್ಯವಾಗುತ್ತದೆ ಮತ್ತು ಭಾರತದಲ್ಲಿ ತೆರಿಗೆಗೆ ಒಳಪಡದ ಕೃಷಿ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ನೀವು ಹೊಂದಿರುತ್ತೀರಿ. ಈ ಮೂಲಕ ಶೇ. 100ರಷ್ಟು ತೆರಿಗೆಯನ್ನು ಉಳಿಸಬಹುದು. ಆದಾಯ ತೆರಿಗೆ, ಟಿಡಿಎಸ್ ಅಥವಾ ಹೂಡಿಕೆಯ ಬಗ್ಗೆ ಚಿಂತಿಸಬೇಕಾಗಿಲ್ಲ.


ಭಾರತೀಯರು ನಿಜವಾಗಿಯೂ ಎಲ್ಲದಕ್ಕೂ ಒಂದಲ್ಲ ಒಂದು ತಂತ್ರ ಹೊಂದಿರುತ್ತಾರೆ ಎಂಬುದು ಈ ವಿಡಿಯೋ ವೈರಲ್ ಆದ ಅನಂತರ ಕಾಮೆಂಟ್‌ಗಳ ವಿಭಾಗದಲ್ಲಿ ಸಾಕಷ್ಟು ಮಂದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಅಪಘಾತವಾದ ಲಾರಿಯಿಂದ ಜ್ಯೂಸ್‌ ಪ್ಯಾಕ್‌ ಎತ್ತಿಕೊಂಡ ಐಫೋನ್‌ಧಾರಿ! ದೊಡ್ಡವರ ಸಣ್ಣತನ ಎಂದ ನೆಟ್ಟಿಗರು

ಕೇಂದ್ರ ಬಜೆಟ್ 2024 ರಲ್ಲಿ ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ 75,000 ಮಾಸಿಕ ಆದಾಯ ಪಡೆಯುವವರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಈ ಹಿಂದೆ ೫೦,೦೦೦ ರೂ. ಆಗಿತ್ತು. ರೀ ಬಾರಿಯ ಬಜೆಟ್ ನಲ್ಲಿ 25,000 ರೂ. ನಷ್ಟು ಹೆಚ್ಚಿಸಲಾಗಿದೆ.

Continue Reading
Advertisement
BJP-JDS Padayatra
ಕರ್ನಾಟಕ11 mins ago

BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ

Manu Bhaker
ಪ್ರಮುಖ ಸುದ್ದಿ19 mins ago

Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

Women's Asia Cup
ಪ್ರಮುಖ ಸುದ್ದಿ43 mins ago

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

karnataka weather Forecast
ಮಳೆ1 hour ago

Karnataka Weather : ಕೂಲ್‌ ಆದ ಬೆಂಗಳೂರು; ನಾಳೆಗೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

HD Kumaraswamy
ಪ್ರಮುಖ ಸುದ್ದಿ1 hour ago

HD Kumaraswamy: ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Decline of Vultures
ಆರೋಗ್ಯ2 hours ago

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

KRS Dam
ಕರ್ನಾಟಕ2 hours ago

KRS Dam: ಕೆಆರ್‌ಎಸ್, ಕಬಿನಿ ಜಲಾಶಯ ಭರ್ತಿ ಹಿನ್ನೆಲೆ ನಾಳೆ ಸಿಎಂ ಬಾಗಿನ ಅರ್ಪಣೆ

Sugar Vs Jaggery In Tea
ಆರೋಗ್ಯ2 hours ago

Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

Manu Bhaker
ಪ್ರಮುಖ ಸುದ್ದಿ3 hours ago

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ6 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ7 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ1 day ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌