ವೈರಲ್ ನ್ಯೂಸ್
Viral Video: ಮದುವೆ ವೇಳೆ ವಧುವಿಗೆ 3 ಕೋಟಿ ರೂ. ಬಹುಮಾನವಾಗಿ ಕೊಟ್ಟ ಕುಟುಂಬ, ಇಲ್ಲಿದೆ ವಿಡಿಯೊ
ರಾಜಸ್ಥಾನದಲ್ಲಿ ವಧುವಿನ ಕುಟುಂಬ ವಧುವಿಗೆ ಬರೋಬ್ಬರಿ ಮೂರು ಕೋಟಿಗೂ ಅಧಿಕ ಹಣವನ್ನು ಉಡುಗೊರೆಯಾಗಿ ಕೊಟ್ಟಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗಿದ್ದು, ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
ಜೈಪುರ: ಮದುವೆ ಎಂದರೆ ಅಲ್ಲಿ ಉಡುಗೊರೆ ಇದ್ದೇ ಇರುತ್ತದೆ. ಎಷ್ಟೋ ಮದುವೆಗಳಲ್ಲಿ ಲಕ್ಷಗಟ್ಟಲೆ ಹಣ ಉಡುಗೊರೆ ರೂಪದಲ್ಲಿ ಬರುವುದೂ ಉಂಟು. ಆದರೆ ರಾಜಸ್ಥಾನದಲ್ಲಿ ವಧು ಒಬ್ಬಳಿಗೆ ಆಕೆಯ ಚಿಕ್ಕಪ್ಪಂದಿರೇ ಬರೋಬ್ಬರಿ 3 ಕೋಟಿಗೂ ಅಧಿಕ ರೂಪಾಯಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ರೀತಿ ಭಾರಿ ಪ್ರಮಾಣದ ಉಡುಗೊರೆ ಕೊಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ. ಈ ಬಗ್ಗೆ ಪರ ಮತ್ತು ವಿರೋಧದ ಭಾರಿ ಚರ್ಚೆಯೂ ನಡೆಯುತ್ತಿದೆ.
ಇದನ್ನೂ ಓದಿ: Viral Video: ವಿಶ್ವದಲ್ಲೇ ಉದ್ದದ ನಾಲಗೆ ಈತನದ್ದು; ಗಿನ್ನಿಸ್ ದಾಖಲೆಗೆ ಭಾಜನ
ರಾಜಸ್ಥಾನದ ಬುರ್ಡಿ ಗ್ರಾಮದ ಭನ್ವರ್‌ಲಾಲ್ ಗರ್ವಾ ಅವರಿಗೆ ಹರೇಂದ್ರ, ರಾಜೇಂದ್ರ, ರಾಮೇಶ್ವರ ಮತ್ತು ಭನ್ವರ್‌ಲಾಲ್ ಪೊಟಾಲಿಯಾ ಹೆಸರಿನ ನಾಲ್ವರು ಜನ ಗಂಡು ಮಕ್ಕಳಿದ್ದಾರೆ. ಅದರಲ್ಲಿ ಭನ್ವರ್‌ಲಾಲ್ ಪೊಟಾಲಿಯಾ ಮತ್ತು ಘೇವರಿ ದೇವಿ ದಂಪತಿಗೆ ಅನುಷ್ಕಾ ಹೆಸರಿನ ಹೆಣ್ಣು ಮಕ್ಕಳಿದ್ದಾರೆ. ಆಕೆಯ ಮದುವೆ ಮಾರ್ಚ್ 15ರಂದು ಅದ್ಧೂರಿಯಾಗಿ ಜರುಗಿದೆ. ಆ ಕಾರ್ಯಕ್ರಮದಲ್ಲಿ ಆಕೆಯ ಮೂರು ಜನ ಚಿಕ್ಕಪ್ಪಂದಿರು ಅನುಷ್ಕಾಳಿಗೆ ಮೂರು ಕೋಟಿಗೂ ಅಧಿಕ ರೂ. ನಗದು ಕೊಟ್ಟಿದ್ದಾರೆ. ಅದಷ್ಟೇ ಅಲ್ಲದೆ ಪ್ಲಾಟ್ ಪೇಪರ್, ಒಂದು ಟ್ರ್ಯಾಕ್ಟರ್, ಚಿನ್ನಾಭರಣಗಳನ್ನೂ ಆಕೆಗೆ ಉಡುಗೊರೆಯಾಗಿ ಕೊಡಲಾಗಿದೆ. ಈ ರೀತಿ ವಧುವಿಗೆ ಆಕೆಯ ಕುಟುಂಬದವರು ಉಡುಗೊರೆ ನೀಡುವುದು ರಾಜಸ್ಥಾನದ ಮೈರಾ ಸಂಪ್ರದಾಯವಾಗಿದೆ.
ಅನುಷ್ಕಾಳ ಚಿಕ್ಕಪ್ಪಂದಿರು ಚೀಲದಲ್ಲಿ ತಂದಿದ್ದ ಹಣವನ್ನು ತಟ್ಟೆಗೆ ಜೋಡಿಸುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. “ಈ ಮೈರಾಗೂ ವರದಕ್ಷಿಣೆಗೂ ಏನು ವ್ಯತ್ಯಾಸವಿದೆ? ಹಣ ಕೊಡುವ ರೀತಿ ಬೇರೆ ಇರಬಹುದು ಅಷ್ಟೇ” ಎಂದು ವಿಡಿಯೊದೊಂದಿಗೆ ಬರೆಯಲಾಗಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರಿ ವೈರಲ್ ಆಗಿದೆ. ಅನೇಕರು ಮೈರಾ ಮತ್ತು ವರದಕ್ಷಿಣೆ ನಡುವೆ ಇರುವ ವ್ಯತ್ಯಾಸವನ್ನು ಹೇಳಲಾರಂಭಿಸಿದ್ದಾರೆ. “ವರದಕ್ಷಿಣೆಯನ್ನು ವರನ ಕುಟುಂಬವೇ ಕೇಳಿ, ಒತ್ತಾಯಿಸಿ ಪಡೆದುಕೊಳ್ಳುತ್ತದೆ. ಆದರೆ ಮೈರಾ ಹಾಗಲ್ಲ. ವಧುವಿನ ಕುಟುಂಬ ತಮ್ಮ ಮಗಳಿಗೆ ಪ್ರೀತಿಯಿಂದ ಕೊಡುವ ಉಡುಗೊರೆಯದು” ಎಂದು ಜನರು ಹೇಳಿದ್ದಾರೆ. ಇನ್ನೂ ಕೆಲವರು ಈ ಪ್ರಮಾಣದಲ್ಲಿ ಹಣ ಕೊಟ್ಟಿರುವ ಬಗ್ಗೆ ಆಕ್ಷೇಪವನ್ನೂ ಹೊರಹಾಕಿದ್ದಾರೆ.
ಅಂದ ಹಾಗೆ ಈ ಪ್ರಮಾಣದಲ್ಲಿ ಹಣ ಕೊಟ್ಟಿದ್ದಕ್ಕೆ ಕಾರಣವನ್ನೂ ಕುಟುಂಬ ನೀಡಿದೆ. ನಾಲ್ವರು ಅಣ್ಣ ತಮ್ಮಂದಿರ ಕುಟುಂಬದಲ್ಲಿ ಹುಟ್ಟಿರುವ ಏಕೈಕ ಹೆಣ್ಣು ಮಗಳು ಅನುಷ್ಕಾ. ಅನುಷ್ಕಾಳಿಗೆ ಬಿಟ್ಟು ಬೇರಿನ್ನಾರಿಗೂ ತಾವು ಮೈರಾ ಕೊಡಲು ಸಾಧ್ಯವಿಲ್ಲವಾದ್ದರಿಂದ ಎಲ್ಲರೂ ಆಕೆಗೇ ಭಾರಿ ಉಡುಗೊರೆ ಕೊಟ್ಟಿರುವುದಾಗಿ ಕುಟುಂಬ ಹೇಳಿಕೊಂಡಿದೆ.
ಕರ್ನಾಟಕ
Viral video: ಪ್ರವಾಸಿಗರ ವಾಹನ ಅಡ್ಡಗಟ್ಟಿ ನಿಂತ ಆನೆ; ಗಣಪತಿ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟನಾ ಗಜರಾಜ!
Viral video: ಪ್ರವಾಸಕ್ಕೆಂದು ಹೊರಟಿದ್ದ ಅವರಿಗೆ ಮಾರ್ಗ ಮಧ್ಯೆ ಕಾಡಾನೆಯೊಂದು ಎದುರಾಯಿತು. ಕೂಗಳತೆ ದೂರದಲ್ಲಿದ್ದ ಆನೆಯು ಕಾರಿನತ್ತ ಓಡೋಡಿ ಬಂದಿತ್ತು. ಕಾರಿನಲ್ಲಿದ್ದವರೆಲ್ಲರೂ ಇನ್ನೇನು ಸಾವೇ ಹತ್ತಿರ ಬರುತ್ತಿದೆ ಎಂದು ನಡುಗಿದ್ದರು. ಆದರೆ, ಮುಂದೆ ಆಗಿದ್ದೇ ಬೇರೆ!
ಚಿಕ್ಕಮಗಳೂರು: ಪ್ರವಾಸಿಗರ ವಾಹನಕ್ಕೆ ಅಡ್ಡಗಟ್ಟಿನಿಂತ ಕಾಡಾನೆಯೊಂದು ಗಣಪತಿ ಸೇರಿದಂತೆ ನಾನಾ ದೇವರ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟು ಕೊಟ್ಟ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದೆ.
ಪ್ರವಾಸಕ್ಕೆಂದು ಕಾರಿನಲ್ಲಿ ಐದಾರು ಮಂದಿ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾಡಾನೆಯೊಂದು ಅಡ್ಡಗಟ್ಟಿ ನಿಂತಿತ್ತು. ಕೂಗಳತೆ ದೂರದಲ್ಲಿದ್ದ ಕಾಡಾನೆಯನ್ನು ಕಂಡೊಂಡನೆ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಆದರೂ ಬಿಡದ ಕಾಡಾನೆಯು ಕಾರಿನತ್ತ ಓಡೋಡಿ ಬಂದಿತ್ತು. ಕಾರಿನಲ್ಲಿದ್ದವರೆಲ್ಲರೂ ಇನ್ನೇನು ನಾವೆಲ್ಲ ಆನೆ ತುಳಿತಕ್ಕೆ ಸತ್ತು ಹೋಗುತ್ತೇವೆ ಎಂದು ನಡುಗಿದ್ದರು.
ಕಾರಿನಲ್ಲಿದ್ದ ಮಹಿಳೆಯರೆಲ್ಲ ಗಾಬರಿಯಾಗಿ ಆನೆ ಬಂದೇ ಬಿಡ್ತು.. ಕೃಷ್ಣಾ ವಾಸುದೇವಾ.. ಎನ್ನುತ್ತಾ ಜೀವ ಕೈಲಿ ಹಿಡಿದು ಕುಳಿತಿದ್ದರು. ಕಾಡಾನೆ ಸಮೀಪ ಬಂದೊಡನೆ ಆತಂಕಕ್ಕೆ ಒಳಗಾಗಿ ಸಾಮೂಹಿಕವಾಗಿ ಗಣಪತಿ ಮಂತ್ರ ಹೇಳಲು ಶುರು ಮಾಡಿದರು. ಕಾರು ಹಿಂದೆ ಹೋದಂತೆಲ್ಲ ಆನೆ ಕೂಡಾ ಮುಂದೆ ಮುಂದೆ ಬರುತ್ತಿತ್ತು.
ಈ ವೇಳೆ ವಿಘ್ನ ವಿನಾಶಕನ ಮಂತ್ರವನ್ನು ಜಪಿಸುತ್ತಿದ್ದಂತೆಯೇ ಸಮಾಧಾನಗೊಂಡಂತೆ ಕಂಡ ಕಾಡಾನೆ, ಕಾರಿನಿಂದ ಪಕ್ಕಕ್ಕೆ ಸರಿದಿದೆ. ಮಾತ್ರವಲ್ಲದೆ ಮುಂದೆ ಹೋಗುತ್ತಿದ್ದಂತೆ ಸೊಂಡಿಲು ಎತ್ತಿ ಆಶೀರ್ವಾದ ಮಾಡಿದೆ! ಇದರಿಂದ ಗಜರಾಜನ ಆಶೀರ್ವಾದ ಸಿಕ್ತು ಎಂದು ಪ್ರವಾಸಿಗರು ಖುಷಿ ಆಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ
14 ತಿಂಗಳು ಮೂತ್ರ ವಿಸರ್ಜನೆ ಸಾಧ್ಯವಾಗದೆ ಪರಿತಪಿಸಿದ ಮಹಿಳೆ; ವರ್ಷದ ಬಳಿಕ ಗೊತ್ತಾಯ್ತು ಈ ಅಪರೂಪದ ಕಾಯಿಲೆ ಹೆಸರು
ಯುವತಿಯ ವಿಚಾರದಲ್ಲಿ ಸಮಸ್ಯೆಯೇ ಆಯಿತು. 2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್ನಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಹೋದರು. ಸ್ಕ್ಯಾನ್ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್ ಮೂತ್ರ ತುಂಬಿದೆ ಎಂದು ಹೇಳಿದರು.
ಯುನೈಟೆಡ್ ಕಿಂಗ್ಡಮ್ನ, 30ವರ್ಷದ ಎಲ್ಲೆ ಆಡಮ್ಸ್ ಎಂಬ ಮಹಿಳೆಗೆ 14 ತಿಂಗಳುಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಿಯೇ ಇಲ್ಲವಂತೆ..! ಅಂದರೆ ಆಕೆ ಒಂದೂವರೆ ವರ್ಷಗಳ ಕಾಲ ಮೂತ್ರವನ್ನು ವಿಸರ್ಜಿಸಲೇ ಇಲ್ಲ. ಅದೆಷ್ಟೇ ನೀರು, ಜ್ಯೂಸ್ ಏನೇ ಕುಡಿಯಲಿ, ಆಕೆಗೆ ಮೂತ್ರ ಹೊರಹೋಗುತ್ತಿರಲಿಲ್ಲ. ಮೂತ್ರಕ್ಕೆ ಹೋಗಬೇಕು ಎಂದು ಆಕೆಗೆ ಅನ್ನಿಸಿದರೂ, ಮಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಈ ಬಗ್ಗೆ ಆಕೆಯೇ ತನ್ನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆರೋಗ್ಯವಾಗಿಯೇ ಇದ್ದೆ. 2020ರ ಅಕ್ಟೋಬರ್ನಲ್ಲಿ ಒಂದು ದಿನ ಬೆಳಗ್ಗೆ ಎದ್ದೆ. ಅಂದು ಮೂತ್ರ ಮಾಡಲು ಆಗಲಿಲ್ಲ. ದಿನವೆಲ್ಲ ಹಾಗೇ ಕಳೆದೆ. ನನಗೆ ವಿಚಿತ್ರ ಎನ್ನಿಸಿತು. ಆತಂಕವಾಯಿತು. ವೈದ್ಯರ ಬಳಿ ಹೋದಾಗಲೇ ಗೊತ್ತಾಯಿತು ನನಗೆ ‘ಫೌಲರ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆ ಬಂದಿದ್ದು. ಈ ಕಾಯಿಲೆ ನನ್ನ ಜೀವನವನ್ನು ಸಂಪೂರ್ಣವಾಗಿಯೇ ಬದಲಿಸಿಬಿಟ್ಟಿತು. ಹಾಸಿಗೆಯೇ ಮೇಲೆ ಜೀವನ ಕಳೆವಂತಾಯ್ತು. ಎದ್ದು ಟಾಯ್ಲೆಟ್ಗೂ ಹೋಗದ ಸ್ಥಿತಿ ತಲುಪಿದೆ’ ಎಂದು ಎಲ್ಲೆ ಬರೆದುಕೊಂಡಿದ್ದಾರೆ.
ಅಂದಹಾಗೇ ಈ ಫೌಲರ್ ಸಿಂಡ್ರೋಮ್ ಯಾಕೆ ಉಂಟಾಗುತ್ತದೆ ಎಂಬುದಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಮೂತ್ರಕೋಶದ ತುದಿಯಲ್ಲಿರುವ ಸ್ನಾಯುಗಳು ತೆರೆಯುವುದು ಮತ್ತು ಬಂದ್ ಆಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಹೀಗಾದಾಗ ಮೂತ್ರ ಅದರಷ್ಟಕ್ಕೇ ಹೊರಹೋಗುವುದಿಲ್ಲ. ಇದು ಸಾಮಾನ್ಯವಾಗಿ ಯುವತಿಯರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಹೆಚ್ಚಾಗಿ ಹೆರಿಗೆಯಾದ ಬಳಿಕ, ಕೆಲವು ಸರ್ಜರಿ ನಂತರ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನಲಾಗಿದ್ದರೂ, ಅದರ ಹೊರತಾಗಿ ಯಾಕೆ ತೊಂದರೆಯಾಗುತ್ತದೆ ಎಂದು ಗೊತ್ತಿಲ್ಲ.
ಈ ಯುವತಿಯ ವಿಚಾರದಲ್ಲಿ ಸಮಸ್ಯೆಯೇ ಆಯಿತು. 2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್ನಲ್ಲಿರುವ ಸೇಂಟ್ ಥಾಮಸ್ ಆಸ್ಪತ್ರೆಗೆ ಹೋದರು. ಸ್ಕ್ಯಾನ್ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್ ಮೂತ್ರ ತುಂಬಿದೆ ಎಂದು ಹೇಳಿ, ಅದನ್ನು ಟ್ಯೂಬ್ ಹಾಕಿ ಹೊರತೆಗೆದು, ಕಳಿಸಿದರು. ಆದರೆ ಮರುದಿನವೂ ಅದೇ ಸಮಸ್ಯೆಯಾಯಿತು. ಈ ಸಮಸ್ಯೆಗೆ ಕಾರಣ ಗೊತ್ತಾಗಲಿಲ್ಲ. ಹಲವು ತಪಾಸಣೆಗಳು, ಔಷಧಗಳು, ಚಿಕಿತ್ಸೆಯ ಬಳಿಕವೂ ಅದೇನು ರೋಗ ಗೊತ್ತಾಗಲಿಲ್ಲ. ನಂತರ ಎಲ್ಲೆ, ಮನೆಯಲ್ಲೇ ಮೂತ್ರವನ್ನೂ ಸ್ವಯಂ ಆಗಿ ತೆಗೆಯುವುದನ್ನು ಕಲಿತರು.
ಇದನ್ನೂ ಓದಿ: Harrassment : ಕಾಫಿ ತೋಟದೊಳಗೆ ಎಳೆದೊಯ್ದು ಯುವತಿಯ ಅತ್ಯಾಚಾರ ಯತ್ನ; ಒಬ್ಬ ಆರೋಪಿ ಸೆರೆ, ಇನ್ನಿಬ್ಬರು ಪರಾರಿ
ಹೀಗೆ ಒಂದು ವರ್ಷಕ್ಕೂ ಅಧಿಕ ಕಾಲದ ಬಳಿಕ 2021ರ ಡಿಸೆಂಬರ್ನಲ್ಲಿ ಅವರಿಗೆ ಫೌಲರ್ ಸಿಂಡ್ರೋಮ್ ಇರುವುದು ಪತ್ತೆಯಾಯಿತು. ನೀವು ಜೀವನ ಪರ್ಯಂತ ಹೀಗೆ ತೂರುನಳಿಕೆಯ ಮೂಲಕವೇ ಮೂತ್ರವನ್ನು ಹೊರಗೆ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಇದೇ ಜನವರಿಯಲ್ಲಿ ಎಲ್ಲೆ ಆಡಮ್ಸ್ ಒಂದು ಸರ್ಜರಿಗೂ ಒಳಗಾಗಿದ್ದಾರೆ. ಅದಾದ ಮೇಲೆ ಆಕೆ ತೂರು ನಳಿಕೆ ಬಳಕೆ ಕಡಿಮೆ ಮಾಡಿದ್ದಾರೆ. ಶೇ.50ರಷ್ಟು ಸಮಸ್ಯೆ ಸರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕ್ರೈಂ
Viral News : ಪ್ರಿಯತಮನೊಂದಿಗೆ ಸೇರಿ ಇಬ್ಬರು ಮಕ್ಕಳನ್ನೇ ಕೊಂದ ತಾಯಿ!
ತಾಯಿಯೊಬ್ಬಳು ತನ್ನ ಪ್ರಿಯತಮನ ಜತೆ ಸೇರಿಕೊಂಡು ಮಕ್ಕಳನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಲಖನೌ: ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಮಾತಿದೆ. ಆದರೆ ಎಷ್ಟೋ ಬಾರಿ ಅದೇ ತಾಯಿಯಂದಿರೇ ಕೆಟ್ಟವರಾಗಿ ಮಕ್ಕಳಿಗೆ ಹಿಂಸಿಸುವ ಘಟನೆಗಳು ವರದಿಯಾಗುತ್ತಿರುತ್ತವೆ. ಅದೇ ರೀತಿ ಇದೀಗ ಉತ್ತರ ಪ್ರದೇಶದ ಮೀರತ್‌ನಲ್ಲಿ ತಾಯಿಯೊಬ್ಬಳು ತನ್ನ ಪ್ರಿಯತಮನೊಂದಿಗೆ ಸೇರಿಕೊಂಡು ತನ್ನಿಬ್ಬರು ಮಕ್ಕಳನ್ನೇ ಕೊಂದ ಘೋರ ಘಟನೆ (Viral News) ವರದಿಯಾಗಿದೆ.
ಇದನ್ನೂ ಓದಿ: Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ
ಇದೇ ತಿಂಗಳ 22ನೇ ತಾರೀಕಿನಿಂದು ಈ ಘಟನೆ ನಡೆದಿದೆ. ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯತಮನೊಂದಿಗೆ ಸೇರಿಕೊಂಡು ತನ್ನ 10 ವರ್ಷದ ಮಗ ಹಾಗೂ 6 ವರ್ಷದ ಮಗಳನ್ನೇ ಕೊಲೆ ಮಾಡಿದ್ದಾಳೆ. ನಂತರ ಅವರ ದೇಹವನ್ನು ನೀರಿನ ಕಾಲುವೆಗೆ ಎಸೆದಿದ್ದಾಳೆ. ಈ ಕೊಲೆಗೆ ಕೆಲವು ಸ್ಥಳೀಯರೂ ಸಹಾಯ ಮಾಡಿದ್ದಾಗಿ ಹೇಳಲಾಗಿದೆ.
ಮಕ್ಕಳು ಕಾಣೆಯಾದ ವಿಚಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಈ ಕೊಲೆಯ ವಿಚಾರ ತಿಳಿದುಬಂದಿದೆ. ಮಹಿಳೆಗೆ ಸೌದ್ ಹೆಸರಿನ ಪ್ರಿಯತಮನಿದ್ದಾನೆ. ಆತ ಆ ಊರಿನ ಕೌನ್ಸಿಲರ್ ಆಗಿರುವುದರಿಂದಾಗಿ ಊರವರ ಬೆಂಬಲ ಆತನಿಗಿದೆ. ಹಾಗಾಗಿ ಊರಿನವರ ಸಹಾಯದಿಂದ ಮಹಿಳೆಯ ಮಗಳನ್ನು ಮನೆಯಲ್ಲೇ ಕೊಲೆ ಮಾಡಲಾಗಿದೆ. ಮಗನನ್ನು ಪಕ್ಕದ ಮನೆಯಲ್ಲಿ ಕೊಲೆ ಮಾಡಿ, ಅವರ ದೇಹವನ್ನು ಕಾಲುವೆಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್ ದಾಖಲಿಸಿದ ಪುತ್ರಿ!
ಈ ಸಂಬಂಧ ಪೊಲೀಸರು ಮೂರು ಮಹಿಳೆಯರು ಮತ್ತು ಮೂರು ಪುರುಷರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾಲುವೆಗೆ ಎಸೆಯಲಾದ ಮಕ್ಕಳ ದೇಹ ಇನ್ನೂ ಸಿಕ್ಕಿಲ್ಲ.
South Cinema
Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ
Viral Video: ಆರ್‌ಆರ್‌ಆರ್ ಸಿನಿಮಾದ ಕಥೆಯನ್ನು ಹೇಳುವಂತಹ ಪುಸ್ತಕವೊಂದನ್ನು ಜಪಾನ್‌ನಲ್ಲಿ ತಾಯಿಯೊಬ್ಬರು ತಮ್ಮ ಮಗನಿಗಾಗಿ ಸಿದ್ಧ ಮಾಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟೋಕಿಯೊ: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ವಿಶ್ವಾದ್ಯಂತ ಭಾರಿ ಸದ್ದು ಮಾಡಿದೆ. ಅದರಲ್ಲೂ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ಮೇಲಂತೂ ಸಿನಿಮಾದ ಖ್ಯಾತಿ ಇನ್ನಷ್ಟು ಹೆಚ್ಚಿದೆ ಎಂದೇ ಹೇಳಬಹುದು. ವಿದೇಶಗಳಲ್ಲೂ ಆರ್‌ಆರ್‌ಆರ್ ಹವಾ ಭಾರಿ ಪ್ರಮಾಣದಲ್ಲಿದೆ. ವಿದೇಶದಲ್ಲಿನ ಆರ್‌ಆರ್‌ಆರ್ ಪ್ರೀತಿಯನ್ನು ಬಿಂಬಿಸುವಂತಹ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್ ದಾಖಲಿಸಿದ ಪುತ್ರಿ!
ಜಪಾನ್‌ನಲ್ಲಿ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾಗಿ ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಅನೇಕರು ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಅಲ್ಲಿ ಏಳು ವರ್ಷದ ಮಗನ ತಾಯಿಯೊಬ್ಬರು ಕೂಡ ವಿಶೇಷ ರೀತಿಯಲ್ಲಿ ಮಗನಿಗೆ ಆರ್‌ಆರ್‌ಆರ್ ಕಥೆ ಹೇಳಿದ್ದಾರೆ. ಮಗನಿಗೆ ಮೂರು ತಾಸು ಕುಳಿತು ಸಿನಿಮಾ ನೋಡುವುದು ಕಷ್ಟವೆನ್ನುವ ಕಾರಣಕ್ಕೆ ಅವರು ಆರ್‌ಆರ್‌ಆರ್ ಸಿನಿಮಾ ಕಥೆಯ ಪುಸ್ತಕವನ್ನೇ ಸಿದ್ಧ ಮಾಡಿದ್ದಾರೆ. ಅದರಲ್ಲಿ ಸಿನಿಮಾದ ದೃಶ್ಯಗಳನ್ನೂ ಕೂಡ ಚಿತ್ರವಾಗಿ ಬಳಸಿಕೊಳ್ಳಲಾಗಿದೆ.
ಈ ಪುಸ್ತಕದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಎರಡು ತಿಂಗಳ ಹಿಂದೆಯೇ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಲೈಕ್ ಮಾಡಿದ್ದಾರೆ. “ನಮ್ಮ ದಕ್ಷಿಣ ಭಾರತದ ಸಿನಿಮಾಗಳು ವಿದೇಶದಲ್ಲೂ ರಾರಾಜಿಸುತ್ತಿವೆ” ಎಂದು ಅನೇಕರು ಕಾಮೆಂಟ್ ಮೂಲಕ ಹೇಳಿಕೊಂಡಿದ್ದಾರೆ. ಮಗನಿಗೆ ಕಥೆ ಹೇಳಿಕೊಡಲು ತಾಯಿ ಮಾಡಿದ ಪ್ರಯತ್ನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ21 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ21 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ22 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ19 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ19 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಅಂಕಣ16 hours ago
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!