Viral Video: ಹೃದಯಾಘಾತದಿಂದ ಕೆಳಗ್ಗೆ ಬಿದ್ದು ಒದ್ದಾಡುತ್ತಿದ್ದವನ ಪಾಲಿಗೆ ದೇವರಂತೆ ಬಂದ್ಳು! ಈ ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್‌ - Vistara News

ವೈರಲ್ ನ್ಯೂಸ್

Viral Video: ಹೃದಯಾಘಾತದಿಂದ ಕೆಳಗ್ಗೆ ಬಿದ್ದು ಒದ್ದಾಡುತ್ತಿದ್ದವನ ಪಾಲಿಗೆ ದೇವರಂತೆ ಬಂದ್ಳು! ಈ ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್‌

Viral Video: ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ಅಲ್ಲೇ ಇದ್ದ ಮಹಿಳೆ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಮಹಿಲೆ ಮೂಲತಃವೈದ್ಯಯಾಗಿರುವ ಕಾರಣ ತಕ್ಷಣ ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದರು. ಸುಮಾರು ಐದು ನಿಮಿಷಗಳ ಕಾಲ ಆತನ ಎದೆಗೆ ಪಂಪ್‌ ಮಾಡುವ ಮಾಡುವ ಪ್ರಜ್ಞೆ ತಪ್ಪಿದ್ದ ಆತನನ್ನು ಮತ್ತೆ ಪ್ರಜ್ಞೆ ಬರುವಂತೆ ಮಾಡಿದರು. ಇದಾದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಇತ್ತೀಚೆಗೆ ಸಣ್ಣ ಸಣ್ಣ ವಯಸ್ಸಿನ ಯುವಕರೇ ಹೃದಯಾಘಾತಕ್ಕೀಡಾಗಿ (Heart Attack) ಕ್ಷಣ ಮಾತ್ರದಲ್ಲಿ ಜೀವ ಕಳೆದುಕೊಳ್ಳುವ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಜಿಮ್‌ ನಲ್ಲಿ ವರ್ಕೌಟ್‌ ಮಾಡುವಾಗ, ಆಟ ಆಡುವಾಗ ಒಮ್ಮೆಲೇ ಹೃದಯ ನಿಂತು ಬಿಡುವುದು ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ನೋಡ ನೋಡ್ತಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪುವ ಘಟನೆಗಳು ಆಗಾಗ ವರದಿ ಆಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ಘಟನೆ ದಿಲ್ಲಿ ವಿಮಾನ ನಿಲ್ದಾಣ(Delhi Airport)ದಲ್ಲಿ ನಡೆದಿದೆ. ಹೃದಯಾಘಾತದಿಂದ ಕುಸಿದು ಬಿದ್ದಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ (Viral Video)ಆಗುತ್ತಿದ್ದು, ಮಹಿಳೆಯ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ಅಲ್ಲೇ ಇದ್ದ ಮಹಿಳೆ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಮಹಿಲೆ ಮೂಲತಃವೈದ್ಯಯಾಗಿರುವ ಕಾರಣ ತಕ್ಷಣ ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿದರು. ಸುಮಾರು ಐದು ನಿಮಿಷಗಳ ಕಾಲ ಆತನ ಎದೆಗೆ ಪಂಪ್‌ ಮಾಡುವ ಮಾಡುವ ಪ್ರಜ್ಞೆ ತಪ್ಪಿದ್ದ ಆತನನ್ನು ಮತ್ತೆ ಪ್ರಜ್ಞೆ ಬರುವಂತೆ ಮಾಡಿದರು. ಇದಾದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಇನ್ನು ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಎರಡು ದಿನಗಳ ಹಿಂದೆ ಬಾಂಗ್ಲಾದೇಶದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ಚೆಸ್​ ಆಡುತ್ತಿರುವಾಗಲೇ ದಿಢೀರ್​ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ರಾಷ್ಟ್ರೀಯ ಚಾಂಪಿಯನ್‌ಶಿಪ್ 12ನೇ ಸುತ್ತಿನ ಪಂದ್ಯದಲ್ಲಿ ಆಡುತ್ತಿದ್ದ ವೇಳೆ ಜಿಯಾವುರ್ ರೆಹಮಾನ್ ಕುಸಿದು ಬಿದ್ದು ನಿಧನರಾದರು ಎಂದು ಬಾಂಗ್ಲಾದೇಶ ಚೆಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯಾದ ಶಹಾಬ್ ಉದ್ದೀನ್ ಶಮಿಮ್ ಮಾಹಿತಿ ಹಂಚಿಕೊಂಡಿದ್ದಾರೆ.

ರೆಹಮಾನ್ ತನ್ನ ಎದುರಾಳಿ ಇನಾಮುಲ್ ಹೊಸೈನ್ ವಿರುದ್ಧ ಪಂದ್ಯವಾಡುತ್ತಿದ್ದಾಗ ದಿಢೀರ್​​ ಕುಸಿದುಬಿದ್ದರು. ತಕ್ಷಣವೇ ಅವರನ್ನು ಢಾಕಾದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು ಎಂಬುದನ್ನು ವೈದ್ಯರು ಧೃಡಪಡಿಸಿದರು ಎಂದು ಶಮಿಮ್ ಹೇಳಿದ್ದಾರೆ.

ಕಳೆದ ವಾರ ಇಂಡೋನೇಷ್ಯಾದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯೊಂದರಲ್ಲಿ ಪಂದ್ಯ ಆಡುತ್ತಿದ್ದಾಗಲೇ ಕುಸಿದುಬಿದ್ದು ಆಟಗಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಸಂಭಿಸಿತ್ತು. ಆಟಗಾರ ಬ್ಯಾಡ್ಮಿಂಟನ್​ ಕೋರ್ಟ್​ನಲ್ಲಿಯೇ ಬಿದ್ದು ನರಳಾಟ ಮಾಡಿದ ವಿಡಿಯೊ ವೈರಲ್​ ಆಗಿತ್ತು. 17 ವರ್ಷದ ಚೀನ ಆಟಗಾರ ಝಾಂಕ್‌ ಝಿಜಿಯೆ(Zhang Zhijie) ಸಾವನ್ನಪ್ಪಿದ ಆಟಗಾರ.

ಇದನ್ನೂ ಓದಿ: Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Passenger Arrest: ವಿಮಾನದಲ್ಲಿ ಗಗನಸಖಿ ನೀಡಿದ ನೀರು, ಆಹಾರ ಸೇವಿಸದ ಪ್ರಯಾಣಿಕನ ಬಂಧನ! ಕಾರಣ ಕುತೂಹಲಕರ!

Passenger Arrest: ಜೆಡ್ಡಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಪ್ರಯಾಣಿಕನೊಬ್ಬನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಏರ್ ಹೋಸ್ಟೆಸ್ ಪ್ರಯಾಣಿಕರಿಗೆ ನೀರು, ಚಹಾ ಮತ್ತು ಆಹಾರ ಸೇರಿದಂತೆ ಉಪಾಹಾರವನ್ನು ನೀಡುತ್ತಿದ್ದಾಗ ಆರೋಪಿ ಐದೂವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ಅವೆಲ್ಲವನ್ನೂ ನಿರಾಕರಿಸಿದ್ದಾನೆ. ಆತ ಆಹಾರವನ್ನು ನಿರಂತರವಾಗಿ ನಿರಾಕರಿಸಿದ್ದರಿಂದ ಶಂಕೆಗೊಂಡ ಏರ್ ಹೋಸ್ಟೆಸ್ ಕ್ಯಾಪ್ಟನ್‌ಗೆ ಮಾಹಿತಿ ನೀಡಿದಳು. ವಿಮಾನ ಇಳಿದಾದ ಬಳಿಕ ಅಧಿಕಾರಿಗಳು ಆತನನ್ನು ವಿಚಾರಿಸಿದಾಗ ಅಕ್ರಮ ಚಿನ್ನ ಕಳ್ಳ ಸಾಗಾಣಿಗೆ ಬೆಳಕಿಗೆ ಬಂತು.

VISTARANEWS.COM


on

Passenger Arrest
Koo

ನವದೆಹಲಿ: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಜನರು ಅನೇಕ ರೀತಿಯಲ್ಲಿ ನಾನಾ ರೀತಿಯಲ್ಲಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಅಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಜೆಡ್ಡಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಎಐ 992ರಲ್ಲಿ ಗುದದ್ವಾರದಲ್ಲಿ ಚಿನ್ನವಿಟ್ಟುಕೊಂಡು ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು (Passenger Arrest) ಅಧಿಕಾರಿಗಳು ಬಂಧಿಸಿದ್ದಾರೆ.

ಏರ್ ಹೋಸ್ಟೆಸ್ ಪ್ರಯಾಣಿಕರಿಗೆ ನೀರು, ಚಹಾ ಮತ್ತು ಆಹಾರ ಸೇರಿದಂತೆ ಉಪಾಹಾರವನ್ನು ನೀಡುತ್ತಿದ್ದಾಗ ಆರೋಪಿ ಐದೂವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ಅವೆಲ್ಲವನ್ನು ನಿರಾಕರಿಸಿದ್ದಾನೆ. ಆತ ಆಹಾರವನ್ನು ನಿರಂತರವಾಗಿ ನಿರಾಕರಿಸಿದ್ದರಿಂದ ಅನುಮಾನಗೊಂಡ ಏರ್ ಹೋಸ್ಟೆಸ್ ಕ್ಯಾಪ್ಟನ್‍ಗೆ ಮಾಹಿತಿ ನೀಡಿದಳು. ಅವರು ಏರ್ ಟ್ರಾಫಿಕ್ ಕಂಟ್ರೋಲ್ ಮೂಲಕ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದರು. ವಿಮಾನದಿಂದ ಇಳಿದ ನಂತರ ಆರೋಪಿಯ ಮೇಲೆ ಕಣ್ಗಾವಲು ಇಡಲಾಗಿತ್ತು.

ಕಸ್ಟಮ್ಸ್ ಕ್ಲಿಯರೆನ್ಸ್ ಮೂಲಕ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ ಅಧಿಕಾರಿಗಳು ಅವನನ್ನು ತಡೆದರು. ನಂತರ ಆತನನ್ನು ವಿಚಾರಿಸಿದಾಗ ಪ್ರಯಾಣಿಕನು ತನ್ನ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ಅನ್ನು ಅಡಗಿಸಿಟ್ಟಿದ್ದಾನೆ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ, ಅದನ್ನು ಅವನು ನಾಲ್ಕು ಅಂಡಾಕಾರದ ಕ್ಯಾಫ್ಸುಲ್‍ಗಳ ರೂಪದಲ್ಲಿ ಹೊರಗೆ ತೆಗೆದಿದ್ದಾನೆ ಎನ್ನಲಾಗಿದೆ. ಆ ಮೂಲಕ ಸುಮಾರು 69,16,169 ರೂ ಮೌಲ್ಯದ ಸುಮಾರು 1096.76 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಜೆಡ್ಡಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಪ್ರಯಾಣಿಕ ಒಪ್ಪಿಕೊಂಡಿದ್ದು, ಕಸ್ಟಮ್ಸ್ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಏರ್ ಹೋಸ್ಟೆಸ್ ಆಹಾರ ಅಥವಾ ಪಾನೀಯಗಳನ್ನು ನೀಡುತ್ತಾರೆ. ಒಂದು ವೇಳೆ ಪ್ರಯಾಣಿಕರು ಪದೇ ಪದೇ ಅದನ್ನು ನಿರಾಕರಿಸಿದರೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾಕೆಂದರೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೆಲವು ವೇಳೆ ಹೊರದೇಶಗಳಿಗೆ ಕಳ್ಳಸಾಗಾಣಿಕೆಗಳು ಮಾಡುತ್ತಿರುತ್ತಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ವಿಮಾನಯಾನ ಸಂಸ್ಥೆಗಳು ಮತ್ತು ಅಧಿಕಾರಿಗಳು ಪ್ರಯಾಣಿಕರ ಮೇಲೆ ಕಣ್ಗಾವಲು ಇಟ್ಟಿರುತ್ತಾರೆ.

Continue Reading

Latest

Anant Radhika Wedding: ಅನಂತ್‌-ರಾಧಿಕಾಗೆ ಗುಜರಾತ್‌ ಜನತೆಯಿಂದ ಅದ್ಧೂರಿ ಸ್ವಾಗತ; ವಿಡಿಯೊ ನೋಡಿ

Anant Radhika Wedding: ದೇಶದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹವು ಬಹಳ ಸಂಭ್ರಮಾಚರಣೆಯಿಂದ ನಡೆಯಿತು. ನವವಿವಾಹಿತ ವಧು ವರರನ್ನು ಗುಜರಾತ್‌ನ ಜಾಮ್‌ನಗರದಲ್ಲಿನ ನಿವಾಸಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಹೂವಿನ ದಳಗಳು, ಆರತಿ ಮತ್ತು ಗುಲಾಬಿ ಕಾರ್ಪೆಟ್‌ನೊಂದಿಗೆ ಜನ ದಂಪತಿಗೆ ಸ್ವಾಗತ ಕೋರಿದರು.ಜನರ ಈ ಆತಿಥ್ಯ ಕಂಡು ಅನಂತ್ ಮತ್ತು ರಾಧಿಕಾ ಇಬ್ಬರೂ ಸಂತೋಷದಿಂದ ಅವರಿಗೆ ಕೈಮುಗಿದು ವಂದಿಸಿದರು.

VISTARANEWS.COM


on

Anant Radhika Wedding
Koo


ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ (Anant Radhika Wedding) ಮರ್ಚಂಟ್‌ ಅವರ ವಿವಾಹ ಸಮಾರಂಭ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದೀಗ ನವವಿವಾಹಿತ ವಧು ವರರನ್ನು ಗುಜರಾತ್‍ನ ಜಾಮ್‍ನಗರದಲ್ಲಿ ಅಲ್ಲಿನ ನಿವಾಸಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

Anant Radhika Wedding

ಬುಧವಾರ ನಗರಕ್ಕೆ ಆಗಮಿಸಿದ ಅವರನ್ನು ಭಾರಿ ಜನಸಮೂಹ, ಹೂವಿನ ದಳಗಳು, ಆರತಿ ಮತ್ತು ಗುಲಾಬಿ ಕಾರ್ಪೆಟ್‍ನೊಂದಿಗೆ ಸ್ವಾಗತಿಸಿದ್ದಾರೆ. ಅವರನ್ನು ಹೃತ್ಪೂರ್ವಕ ಆತಿಥ್ಯದಿಂದ ಸ್ವಾಗತಿಸುವುದನ್ನು ತೋರಿಸುವ ಹಲವಾರು ವಿಡಿಯೊಗಳು ಮತ್ತು ಫೋಟೋಗಳು ಆನ್‍ಲೈನ್‍ನಲ್ಲಿ ವೈರಲ್ ಆಗಿವೆ.

ವಿಡಿಯೊದಲ್ಲಿ, ಸೀರೆ ಉಟ್ಟ ಮಹಿಳೆಯರು ನವದಂಪತಿಗೆ ಆರತಿ ಮಾಡಿದರು ಮತ್ತು ದಂಪತಿಯ ಮೇಲೆ ಗುಲಾಬಿ ದಳಗಳನ್ನು ಎಸೆಯುತ್ತಾ ಆದರದಿಂದ ಸ್ವಾಗತಿಸಿದರು. ಜನರ ಈ ಆತಿಥ್ಯ ಕಂಡು ಅನಂತ್ ಮತ್ತು ರಾಧಿಕಾ ಇಬ್ಬರೂ ಸಂತೋಷದಿಂದ ಅವರಿಗೆ ಕೈಮುಗಿದು ವಂದಿಸಿದರು.

Anant Radhika Wedding

ಹಾಗೇ ಮತ್ತೊಂದು ವಿಡಿಯೊದಲ್ಲಿ ದಂಪತಿ ತಮ್ಮ ಕಾರಿನಿಂದ ಜನರನ್ನು ನಗುತ್ತಾ ಸ್ವಾಗತಿಸುವುದನ್ನು ಚಿತ್ರಿಸಲಾಗಿದೆ. ದೊಡ್ಡ ಜನಸಮೂಹವು ಬೀದಿಗಳಲ್ಲಿ ಜಮಾಯಿಸಿ, ಹೂವಿನ ದಳಗಳನ್ನು ಅವರ ಮೇಲೆ ಸುರಿಸುತ್ತಿರುವುದು ಕಂಡುಬಂದಿದೆ.

ಆ ವೇಳೆ ರಾಧಿಕಾ ಗುಲಾಬಿ ಬಣ್ಣದ ಸೂಟ್ ಧರಿಸಿದ್ದರೆ, ಅನಂತ್ ಕೆಂಪು ಕುರ್ತಾ ಧರಿಸಿದ್ದರು. ಅಲ್ಲದೇ ಇನ್ನೊಂದು ವಿಡಿಯೊದಲ್ಲಿ, ಅವರು ಬರುವ ವಿಮಾನ ನಿಲ್ದಾಣದ ಹೊರಗಿನ ರಸ್ತೆಯನ್ನು ಗುಲಾಬಿ ದಳಗಳಿಂದ ಮುಚ್ಚಲಾಗಿತ್ತು, ಅವರ ಆಗಮನದ ನಿರೀಕ್ಷೆಯಲ್ಲಿ, ಹಲವಾರು ಜನರು ಡ್ರಮ್ ಗಳನ್ನು ನುಡಿಸುತ್ತಿದ್ದರು. ಈ ಮೂಲಕ ಅಂಬಾನಿ ಮನೆತನದ ಅನಂತ್ ಮತ್ತು ರಾಧಿಕಾಗೆ ಜಾಮ್‍ನಗರದ ನಿವಾಸಿಗಳು ವಿಶೇಷ ಮಹತ್ವವನ್ನು ನೀಡಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ವಿವಾಹಪೂರ್ವ ಸಮಾರಂಭಗಳು ಮಾರ್ಚ್ 2024ರಲ್ಲಿ ಜಾಮ್‍ನಗರದಲ್ಲಿ ನಡೆದಿತ್ತು. ಅಲ್ಲದೇ ಅನಂತ್ ಅವರ ಅಜ್ಜಿ ಕೋಕಿಲಾಬೆನ್ ಅಂಬಾನಿ ಜಾಮ್‍ನಗರದಲ್ಲಿ ಜನಿಸಿದರು, ಅಲ್ಲಿಯೇ ಅವರ ಅಜ್ಜ ಧೀರೂಭಾಯಿ ಅಂಬಾನಿ ಮತ್ತು ತಂದೆ ಮುಖೇಶ್ ಅಂಬಾನಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಹಾಗಾಗಿ ಜಾಮ್‍ನಗರ ಅಂಬಾನಿ ಮನೆತನಕ್ಕೆ ತುಂಬಾ ಮುಖ್ಯವಾದುದು ಎನ್ನಬಹುದು.

Anant Radhika Wedding

ಇದನ್ನೂ ಓದಿ: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಎನ್ಕೋರ್ ಹೆಲ್ತ್ಕೇರ್ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ಜುಲೈ 12ರಂದು ಮುಂಬೈನಲ್ಲಿ ನಡೆದಿತ್ತು.

Anant Radhika Wedding

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಭಾರತದಲ್ಲಿ ನಡೆದ ಅತ್ಯಂತ ಅದ್ಧೂರಿ ವಿವಾಹಗಳಲ್ಲಿ ಒಂದು ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

Viral Video: ಡಿಸಿ ಆಫೀಸ್‌ನಲ್ಲಿ ಗೋಳಾಡುತ್ತಾ ನೆಲದಲ್ಲಿ ಹೊರಳಾಡಿದ ರೈತ; ವೈರಲಾಗ್ತಿದೆ ಈ ವಿಡಿಯೋ

Viral Video: ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಶಂಕರಲಾಲ್, ”ಭೂಮಾಫಿಯಾದಿಂದ ನನಗೆ ತೊಂದರೆಯಾಗಿದೆ, ತಹಸೀಲ್ದಾರ್ ತಪ್ಪು ಮಾಡುತ್ತಾರೆ, ರೈತರು ಅನುಭವಿಸುತ್ತಾರೆ, ಅವರು ತಪ್ಪು ಮಾಡುತ್ತಾರೆ, ಅದರ ಪರಿಣಾಮವನ್ನು ನಾನು ಅನುಭವಿಸುತ್ತೇನೆ, ನನಗೆ ಸರ್ಕಾರ ಮತ್ತು ಆಡಳಿತದ ಬಗ್ಗೆ ಅಸಮಾಧಾನವಿದೆ. ಇಲ್ಲಿ ನಾವು ಭ್ರಷ್ಟರಾಗಿದ್ದೇವೆ… ರೈತರಿಗೆ ವಂಚನೆಯಾಗುತ್ತಿದೆ ಎಂದು ಕೈ ಮುಗಿದು ನೆಲದಲ್ಲಿ ಹೊರಳಾಡಿದ್ದಾನೆ.

VISTARANEWS.COM


on

Viral Video
Koo

ಭೋಪಾಲ್‌: ಹರಿದ ಧೋತಿ ತೊಟ್ಟು, ದಯಮಾಡಿ ಪರಿಹಾರ ನೀಡಿ ಎಂದು ಬೇಡುತ್ತಾ ವೃದ್ಧನೋರ್ವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉರುಳಾಡುತ್ತಾ ಗೋಳಾಡುತ್ತಿರುವ ದೃಶ್ಯ ಎಂಥವರ ಮನಸ್ಸು ಕರಗುವಂತೆ ಮಾಡಿತ್ತು. ಈ ದೃಶ್ಯ ಕಂಡು ಬಂದಿದ್ದು ಮಧ್ಯಪ್ರದೇಶ(Madhya Pradesh)ದ ಮಂಡ್‌ಸೌರ್‌ನಲ್ಲಿ. ಸ್ಥಳೀಯ ಭೂ ಮಾಫಿಯಾಗೆ ಬಳಿಯಾಗಿ ಭೂಮಿ ಕಳೆದುಕೊಂಡು ರೈತ ಗೋಳಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ(Viral Video).

ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರೈತ ಶಂಕರಲಾಲ್‌ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ತೆರಳಿ ಗಮನ ಸೆಳೆದರು. ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಶಂಕರಲಾಲ್, ”ಭೂಮಾಫಿಯಾದಿಂದ ನನಗೆ ತೊಂದರೆಯಾಗಿದೆ, ತಹಸೀಲ್ದಾರ್ ತಪ್ಪು ಮಾಡುತ್ತಾರೆ, ರೈತರು ಅನುಭವಿಸುತ್ತಾರೆ, ಅವರು ತಪ್ಪು ಮಾಡುತ್ತಾರೆ, ಅದರ ಪರಿಣಾಮವನ್ನು ನಾನು ಅನುಭವಿಸುತ್ತೇನೆ, ನನಗೆ ಸರ್ಕಾರ ಮತ್ತು ಆಡಳಿತದ ಬಗ್ಗೆ ಅಸಮಾಧಾನವಿದೆ. ಇಲ್ಲಿ ನಾವು ಭ್ರಷ್ಟರಾಗಿದ್ದೇವೆ… ರೈತರಿಗೆ ವಂಚನೆಯಾಗುತ್ತಿದೆ ಎಂದು ಕೈ ಮುಗಿದು ನೆಲದಲ್ಲಿ ಹೊರಳಾಡಿದ್ದಾನೆ.

ಘಟನೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ದಿಲೀಪ್ ಯಾದವ್, ‘ಸಾರ್ವಜನಿಕ ವಿಚಾರಣೆಯಲ್ಲಿ ಬರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ಮಂಗಳವಾರ ನಡೆದ ವಿಚಾರಣೆಗೆ ಹಲವು ಮಂದಿ ಹಾಜರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಪರಿಹರಿಸಲಾಗಿದೆ ಎಂದ ಅವರು, ಹಿಂದಿನ ಸಾರ್ವಜನಿಕ ವಿಚಾರಣೆಗಳ ಪ್ರಕರಣಗಳನ್ನೂ ಪರಿಶೀಲಿಸಲಾಗಿದೆ ಎಂದರು.

ದೂರುದಾರರು ವಿವಾದಿತ ಭೂಮಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ. ಸದ್ಯ ಶಂಕರ್ ಮತ್ತು ಅವರ ಕುಟುಂಬದವರು ಜಮೀನು ಹೊಂದಿದ್ದಾರೆ. ಈ ಹಿಂದೆ ಷೇರುದಾರರು ಮಾರಾಟ ಮಾಡಿದ ಅರ್ಧದಷ್ಟು ಭೂಮಿಯನ್ನು ಖರೀದಿದಾರರು ಸ್ವಾಧೀನಪಡಿಸಿಕೊಂಡಿಲ್ಲ. ಸ್ಥಳೀಯ ಆಡಳಿತ ನೀಡಿದ ದಾಖಲೆಗಳ ಆಧಾರದ ಮೇಲೆ ತಹಸೀಲ್ದಾರ್ ಸಲ್ಲಿಸಿದ ತನಿಖಾ ವರದಿ ಪ್ರಕಾರ, ಸುಖದ್ ಗ್ರಾಮದಲ್ಲಿ ವಿಸ್ತೀರ್ಣ ಸಂಖ್ಯೆ 604 ರಲ್ಲಿ 2.5 ಹೆಕ್ಟೇರ್ ಜಮೀನು ಇದ್ದು, ಸರ್ವೆ ಸಂಖ್ಯೆ 625 ರಲ್ಲಿ 1.01 ಹೆಕ್ಟೇರ್ ಇದೆ.

2010 ರ ಡಿಸೆಂಬರ್ 31 ರಂದು ಮಾರಾಟ ಪತ್ರದ ಪ್ರಕಾರ ಈ ಭೂಮಿಯನ್ನು ಮಂದಸೌರ್ ನಿವಾಸಿ ನಾರಾಯಣ ರಾವ್ ಅವರ ಮಗ ಅಶ್ವಿನ್ ಎಂಬುವವರಿಗೆ ಮಾರಾಟ ಮಾಡಲಾಗಿದೆ. ಈ ಭೂಮಿಯನ್ನು ಹಸ್ತಾಂತರಿಸಲು ಅಂದಿನ ತಹಸೀಲ್ದಾರ್ ಸೀತಾಮೌ ಅವರು 2010 ರಲ್ಲಿ ಅನುಮೋದನೆ ನೀಡಿದರು. ಆದಾಗ್ಯೂ, ಮಾರಾಟವಾದ ಭೂಮಿ ಕರು ಲಾಲ್, ರಾಮಲಾಲ್, ಪ್ರಭು ಲಾಲ್, ಮಂಗಿ ಬಾಯಿ ಮತ್ತು ಪಾರ್ವತಿ ಬಾಯಿ ಅವರ ಸ್ವಾಧೀನದಲ್ಲಿ ಉಳಿದಿದೆ, ಅವರು ಅದನ್ನು ಅಶ್ವಿನ್‌ಗೆ ಹಸ್ತಾಂತರಿಸಲು ಸಿದ್ಧರಿಲ್ಲ.

ಇದನ್ನೂ ಓದಿ: Muharram 2024: ಏಕತೆಯ ಸಂದೇಶ ಸಾರುವ ಮುಹರ್ರಮ್ ಆಚರಣೆ

Continue Reading

ವೈರಲ್ ನ್ಯೂಸ್

Viral Video: 300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್‌, ಕಾರು ಸ್ಟಂಟ್‌; ಹುಚ್ಚಾಟ ಮೆರೆದ ಯುವಕರಿಗೆ ಆಗಿದ್ದೇನು ಗೊತ್ತಾ?

Viral Video: ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Viral Video
Koo

ಜೈಪುರ: ಇತ್ತೀಚೆಗೆ ಯುವಕರ ರೀಲ್ಸ್‌(Reels) ಹುಚ್ಚು ಎಂತೆಂಥಾ ಅಪಾಯವನ್ನು ತಂದೊಡ್ಡುತ್ತದೆ ಎಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲ. ಪ್ರಾಣವನ್ನೂ ಲೆಕ್ಕಿಸದೇ ರೀಲ್ಸ್‌ಗಾಗಿ ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಟ ಮೆರೆಯುತ್ತಿರುತ್ತಾರೆ. ಅಂತಹದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಬರೋಬ್ಬರಿ 300 ಮೊಸಳೆಗಳ ಅಭಯಾರಣ್ಯದ(Crocodile Lake) ಕೆರೆಯಲ್ಲಿ ಅಪಾಯಕಾರಿ ಬೈಕ್‌, ಕಾರು ಸ್ಟಂಟ್‌ ಮಾಡುವ ಮೂಲಕ ಯುವಕರು ಹುಚ್ಚಾಟ ಮೆರೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ (Viral Video) ಆಗಿದ್ದು, ಪೊಲೀಸರು 20 ಮಂದಿ ಯುವಕರನ್ನು ಅರೆಸ್ಟ್‌ ಮಾಡಿದ್ದಾರೆ. ರಾಜಸ್ಥಾನದ ಆಲ್ವಾರ್‌ ಜಿಲ್ಲೆಯಲ್ಲಿರುವ ಸಿಲಿಸೆಹ್ರ್‌ ಮೊಸಳೆ ಪಾರ್ಕ್‌ನಲ್ಲಿ ಯುವಕರು ಹುಚ್ಚಾಟ ಮೆರೆದಿದ್ದಾರೆ.

ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಗುರುಮೇಲ್ ಸಿಂಗ್ (28), ಯೋಗೇಶ್ (23), ಕೃಷ್ಣ (23), ಪುನೀತ್ (19), ಸಚಿನ್ (27), ಶಿವಚರಣ್ (29), ಎಲ್ಲರೂ ಸೊರ್ಖಾ ಕಾಲಾ ಗ್ರಾಮದ ನಿವಾಸಿಗಳು ಮತ್ತು ಉದಯ್ (18) ಬರೋಡಾದಿಂದ ಏಳು ವ್ಯಕ್ತಿಗಳನ್ನು ಅರೆಸ್ಟ್‌ ಮಾಡಲಾಗಿತ್ತು. ಮರುದಿನ 13 ಇತರರನ್ನು ಬಂಧಿಸಲಾಯಿತು.

ಅಲ್ವಾರ್ ಪೊಲೀಸ್ ಅಧೀಕ್ಷಕ ಆನಂದ್ ಶರ್ಮಾ ಅವರು, ಸಿಲಿಸೆರ್ಹ್ ಸರೋವರ ಮತ್ತು ನಟ್ನಿ ಕಾ ಬಾರಾದಂತಹ ಪ್ರವಾಸಿ ಸ್ಥಳಗಳ ಬಳಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ಯಾರಾದರೂ ತಮ್ಮನ್ನು ಅಥವಾ ವನ್ಯಜೀವಿಗಳಿಗೆ ಅಪಾಯವನ್ನುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಅಜಾಗರೂಕ ಕೃತ್ಯಗಳು ಭಾಗಿಯಾಗಿರುವವರ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತೊಂದರೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಅಲ್ವಾರ್ ಪೊಲೀಸರು ಈ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಿದ್ದಾರೆ ಮತ್ತು ಪ್ರವಾಸಿಗರು ಮತ್ತು ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ. ಕೆರೆಗೆ ಹೋಗುವ ಅನಧಿಕೃತ ರಸ್ತೆಗಳನ್ನೂ ಅಧಿಕಾರಿಗಳು ಮುಚ್ಚಿದ್ದಾರೆ. ಸಾಮಾಜಿಕ ಮಾಧ್ಯಮದ ಜನಪ್ರಿಯತೆಗಾಗಿ ಯುವಕರು ಇಂತಹ ಅಪಾಯಕಾರಿ ನಡವಳಿಕೆಯಿಂದ ದೂರವಿರಬೇಕು ಎಂದು ಪೊಲೀಸರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral Video: ಸಫಾರಿಯಲ್ಲಿ ಪ್ರವಾಸಿಗರ ಎದುರೇ ಸಿಂಹಗಳ ಕಾಮಕೇಳಿ!

Continue Reading
Advertisement
Virat kohli
ಪ್ರಮುಖ ಸುದ್ದಿ1 hour ago

Virat Kohli : ವಿರಾಟ್​ ಕೊಹ್ಲಿಯನ್ನು ಅವಮಾನಿಸಿದ ಅಮಿತ್​ ಮಿಶ್ರಾ ಬೆಂಡೆತ್ತಿದ ಯಶ್​ ದಯಾಳ್​

PM Narendra Modi
ದೇಶ1 hour ago

PM Narendra Modi: ಚುನಾವಣೆಯಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ರಾ ಮೋದಿ? ನಾಳೆ ಕಾರ್ಯಕರ್ತರ ದಿಢೀರ್ ಸಭೆ?

Jay Shah
ಪ್ರಮುಖ ಸುದ್ದಿ1 hour ago

Jay Shah : ಜಯ್​ ಶಾ ಮುಂದಿನ ಐಸಿಸಿ ಅಧ್ಯಕ್ಷ; ಕೊಲೊಂಬೊ ಸಭೆಯಲ್ಲಿ ತೀರ್ಮಾನ ಸಾಧ್ಯತೆ

Oil Tanker Capsizes
ವಿದೇಶ1 hour ago

Oil Tanker Capsizes:ತೈಲ ತುಂಬಿದ್ದ ಹಡಗು ಮುಳುಗಡೆ; ಕಣ್ಮರೆಯಾಗಿದ್ದ 8 ಭಾರತೀಯರು ಸೇರಿ ಒಟ್ಟು 9 ನಾವಿಕರ ರಕ್ಷಣೆ

ಪ್ರಮುಖ ಸುದ್ದಿ2 hours ago

Travel Influencer : ರೀಲ್ಸ್​ ಮಾಡುತ್ತಲೇ ಜಲಪಾತದ ಕಮರಿಗೆ ಬಿದ್ದು ಪ್ರಾಣಬಿಟ್ಟ 26 ವರ್ಷದ ಯುವತಿ

Viral Video
ವೈರಲ್ ನ್ಯೂಸ್2 hours ago

Viral Video: ಹೃದಯಾಘಾತದಿಂದ ಕೆಳಗ್ಗೆ ಬಿದ್ದು ಒದ್ದಾಡುತ್ತಿದ್ದವನ ಪಾಲಿಗೆ ದೇವರಂತೆ ಬಂದ್ಳು! ಈ ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್‌

Mosquitoes Bite
ಆರೋಗ್ಯ3 hours ago

Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

Actress Hina Khan
Latest3 hours ago

Actress Hina Khan: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

Naxalites Killed
ದೇಶ3 hours ago

Naxalites Killed: 6 ಗಂಟೆ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 12 ನಕ್ಸಲರ ಎನ್‌ಕೌಂಟರ್

Walking Benefits
ಆರೋಗ್ಯ3 hours ago

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌