ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ! - Vistara News

ವೈರಲ್ ನ್ಯೂಸ್

ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ!

2020ರಲ್ಲಿ ಪತಿ ವಿರಾಜ್​ ಕೋಲ್ಕತ್ತಕ್ಕೆ ಹೋಗಿದ್ದ. ಅಲ್ಲಿಂದ ಬಂದ ಮೇಲೆ ಪತ್ನಿ ಶೀತಲ್​​ಗೆ ಸತ್ಯ ಹೇಳಿದ್ದ. ಅಷ್ಟಲ್ಲದೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಈ ಬಗ್ಗೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM


on

wife finds out that husband
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 40 ವರ್ಷದ ಮಹಿಳೆಯೊಬ್ಬರು ಮದುವೆಯಾಗಿ ಎಂಟು ವರ್ಷದ ಬಳಿಕ ತನ್ನ ಪತಿಯ ನಿಜ ಸ್ವರೂಪ ತಿಳಿದು ದಂಗಾಗಿಹೋಗಿದ್ದಾರೆ. ಗುಜರಾತ್​​ನ ವಡೋದರಾದ ಮಹಿಳೆಯೊಬ್ಬರು ಅಲ್ಲಿನ ಗೋತ್ರಿ ಪೊಲೀಸ್​ ಠಾಣೆಯಲ್ಲಿ ತನ್ನ ಪತಿಯ ವಿರುದ್ಧ ದೂರು ನೀಡಿದ್ದು, ಎಫ್​ಐಆರ್​ ಕೂಡ ದಾಖಲಾಗಿದೆ. ತಾನು ಪಕ್ಕಾ ಮೋಸ ಹೋದೆ ಎಂಬುದು ಆ ಮಹಿಳೆಯ ದೊಡ್ಡ ಅಳಲು ಮತ್ತು ನಿರಾಸೆ.

ಅಂದಹಾಗೇ, ಈ ಮಹಿಳೆ ಹೆಸರು ಶೀತಲ್​. ಈಕೆಯ ಪತಿ 2011ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ 14 ವರ್ಷದ ಪುತ್ರಿಯೂ ಇದ್ದಳು. ಬದುಕು ಮುನ್ನಡೆಯಬೇಕಲ್ಲ..ಶೀತಲ್​ ಇನ್ನೊಂದು ಮದುವೆಯಾಗಲು ನಿರ್ಧಾರ ಮಾಡಿದರು. ಹಾಗಾಗಿ ಮ್ಯಾಟ್ರಿಮೊನಿಯಲ್​ ವೆಬ್​ಸೈಟ್​ ಮೂಲಕ ಸಂಗಾತಿ ಹುಡುಕಾಟ ಶುರು ಮಾಡಿದ್ದರು. ಆಗ ಅದರಲ್ಲಿ ಪರಿಚಯ ಆದವರು ವಿರಾಜ್​ ವರ್ಧನ್​. ಇವರಿಬ್ಬರೂ 2014ರಲ್ಲಿ ಮದುವೆ ಮಾಡಿಕೊಂಡರು. ಇಬ್ಬರ ಕುಟುಂಬದವರೂ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು-ವರರನ್ನು ಹಾರೈಸಿದರು.

ವಿವಾಹದ ಬಳಿಕ ದಂಪತಿ ಹನಿಮೂನ್​​ಗೆಂದು ಕಾಶ್ಮೀರಕ್ಕೆ ಕೂಡ ಹೋಗಿದ್ದರು. ಆದರೆ ವಿರಾಜ್​ ಲೈಂಗಿಕ ಸಂಪರ್ಕಕ್ಕೆ ಒಪ್ಪುತ್ತಿರಲಿಲ್ಲ. ಶೀತಲ್​​ ಒತ್ತಾಯ ಮಾಡಿದರೂ ಆಗೋದಿಲ್ಲ ಎಂದೇ ಹೇಳುತ್ತಿದ್ದ. ಅದಕ್ಕೆ ಕಾರಣ ಕೇಳಿದಾಗ ‘ನನಗೆ ಕೆಲ ವರ್ಷಗಳ ಹಿಂದೆ ರಷ್ಯಾದಲ್ಲಿ ಒಂದು ಅಪಘಾತವಾಯಿತು. ಆಗ ಆಗಿದ್ದ ಏಟಿನಿಂದಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ. ಚೇತರಿಸಿಕೊಳ್ಳಲು ಐದಾರು ವರ್ಷಗಳೇ ಬೇಕು ಎಂದು ವೈದ್ಯರು ಹೇಳಿದ್ದರು. ನಾನು ಸಂಪೂರ್ಣ ಗುಣಮುಖ ಆಗುವವರೆಗೂ ನೀನು ಸಹಕರಿಸು’ ಎಂದು ವಿರಾಜ್​ ಹೇಳಿಕೊಂಡಿದ್ದ. ಹೀಗೆ ಮುಂದುವರಿದುಕೊಂಡೇ ಬಂದಿತ್ತು.

ಆದರೆ 2020ರಲ್ಲಿ ತಾನು ತೂಕ ಕಡಿಮೆ ಮಾಡಿಕೊಳ್ಳುವ ಸರ್ಜರಿಗೆ ಒಳಗಾಗುತ್ತೇನೆ ಎಂದು ಹೇಳಿ ವಿರಾಜ್​ ಕೋಲ್ಕತ್ತಕ್ಕೆ ಹೋಗಿದ್ದ. ಅಲ್ಲಿಂದ ಬಂದ ಬಳಿಕ, ‘ತಾನು ಎಂಟು ವರ್ಷದ ಹಿಂದೆ ನಿನ್ನನ್ನು ಮದುವೆಯಾಗುವುದಕ್ಕೂ ಮುನ್ನ ಒಬ್ಬ ಮಹಿಳೆಯೇ ಆಗಿದ್ದೆ. ನಂತರ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ’ ಎಂಬ ಸತ್ಯವನ್ನು ನನಗೆ ಹೇಳಿದ. ಹಾಗೇ, ತನ್ನ ಹೆಸರು ವಿಜೇತಾ ಎಂದಾಗಿತ್ತು ಎಂಬುದನ್ನೂ ತಿಳಿಸಿದ. ಅಲ್ಲಿಂದ ಬಂದ ಬಳಿಕ ಅಸಹಜ ಲೈಂಗಿಕ ಕ್ರಿಯೆಗೆ ನನ್ನನ್ನು ಒತ್ತಾಯಿಸುತ್ತಿದ್ದ. ತೀರ ಅಸಹ್ಯವಾಗುತ್ತಿದೆ. ಆದರೆ 2020ರಲ್ಲಿ ಕೋಲ್ಕತ್ತದಲ್ಲಿ ಯಾವ ಸರ್ಜರಿ ನಡೆಯಿತು ಎಂಬುದು ನನಗೆ ಗೊತ್ತಾಗಲಿಲ್ಲ’ ಎಂದು ಶೀತಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ನಾನು ಅವನಲ್ಲ ಅವಳು ಎಂದ ಎಲಾನ್ ಮಸ್ಕ್‌ ಕುಡಿ! ಲಿಂಗ ಪರಿವರ್ತನೆಗೆ ಮುಂದಾಗಿರೋದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Zameer Ahmed Khan‌: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್‌ ಪೀಸ್; ಇಲ್ಲಿದೆ ವಿಡಿಯೊ

Zameer Ahmed Khan‌: ಗೋಕಾಕ್ ನಗರದಲ್ಲಿ‌ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಜಮೀರ್‌ ಅಹ್ಮದ್‌ ಅವರು ಭಾಷಣ ಮಾಡುತ್ತಿದ್ದಾಗ, ಡಯಾಸ್‌ ಮೇಲೆ ಗುದ್ದಿ ಗಾಜನ್ನು ಪುಡಿಪುಡಿ ಮಾಡಿದ್ದಾರೆ.

VISTARANEWS.COM


on

Zameer Ahmed Khan‌
Koo

ಬೆಳಗಾವಿ: ರೋಷಾವೇಶವಾಗಿ ಭಾಷಣ ಮಾಡುವ ವೇಳೆ ಸಚಿವ ಜಮೀರ್ ಅಹ್ಮದ್‌ ಅವರು ಕೈಯಿಂದ ಗುದ್ದಿ ಡಯಾಸ್‌ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಗೋಕಾಕ್ ನಗರದಲ್ಲಿ‌ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಕೈ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಜಮೀರ್‌ ಅಹ್ಮದ್‌ (Zameer Ahmed Khan‌) ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಾ ಡಯಾಸ್‌ ಮೇಲೆ ಗುದ್ದಿದ್ದರಿಂದ ಗಾಜು ಪುಡಿಪುಡಿಯಾಗಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗೋಕಾಕ್‌ ಕೆಜಿಎನ್ ಹಾಲ್‌ ಶನಿವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಘಟನೆ ನಡೆದಿದೆ. ಭಾಷಣದ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಜಮೀರ್‌ ಅಹ್ಮದ್‌ ಅವರು, ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಎದೆಗೆ ಗುಂಡು ತಿಂದು ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಆದರೆ, ಬಿಜೆಪಿಯವರು ಕೋಮು ದ್ವೇಷ ಬಿತ್ತಲು ಮುಂದಾಗುತ್ತಾರೆ ಎಂದು ಆರೋಪಿಸಿದರು.

ಸಾರೇ ಜಹಾಂಸೇ ಅಚ್ಚಾ, ನಾವೆಲ್ಲ ಒಂದು, ದೇಶ ಹಮಾರಾ ಹೈ ಹಮಾರಾ ಹೈ ಎನ್ನುತ್ತಾ ಜಮೀರ್ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್‌ಗೆ ಅಳವಡಿಸಿದ ಗಾಜು ಒಡೆದು ಚೂರು ಚೂರಾಗಿದೆ. ಈ ವೇಳೆ ಅಲ್ಲೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದರು. ಗಾಜು ಒಡೆದರೂ ಸಚಿವರು ಮಾತ್ರ ತಮ್ಮ ಭಾಷಣ ಮುಂದುವರೆಸಿದ್ದು ಕಂಡುಬಂತು.

ಇವ್ರು ನಮ್ಮ ಪ್ರಧಾನಿ ಮೋದಿ ಅಲ್ಲ; ಪಾನಿಪುರಿ ಮಾರೋ ಈ ಮೋದಿ ಫುಲ್‌ ಫೇಮಸ್‌

ಗುಜರಾತ್‌: ದೇಶಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ. ಅಬ್ಬರದ ಪ್ರಚಾರ, ಪ್ರತಿಪಕ್ಷಗಳಿಗೆ ಟಾಂಗ್‌ ಕೊಡುತ್ತಾ ಒಂದೆಡೆ ಪ್ರಧಾನಿ ಮೋದಿ ಬ್ಯುಸಿ ಆಗಿದ್ದರೆ, ಮತ್ತೊಂದೆಡೆ ಗುಜರಾತ್‌ನಲ್ಲೊಬ್ಬ ಮೋದಿ ಪಾನಿಪುರಿ(Viral video) ಮಾರುತ್ತಾ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಒಂದು ಕ್ಷಣ ನೋಡೋರಿಗೆ ಪ್ರಧಾನಿ ಮೋದಿಯೇ ಪಾನಿಪುರಿ ಮಾರುತ್ತಿದ್ದಾರೋ ಅಂತ ಅನಿಸೋದು ಪಕ್ಕಾ! ಗುಜರಾತ್‌ನ ಆನಂದ್‌ನಲ್ಲಿ ಪಾನಿಪುರಿ ಅಂಗಡಿ(Pani puri seller) ನಡೆಸುತ್ತಿರುವ ಅನಿಲ್‌ ಭಾಯಿ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿ(Narendra Modi) ಯಂತೆ ಉಡುಪು ತೊಟ್ಟು, ಕನ್ನಡಕ ಧರಿಸಿ, ಹೇರ್‌ಸ್ಟೈಲ್‌ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಮೋದಿ ಎಂದೇ ಫುಲ್‌ ಫೇಮಸ್‌ ಆಗಿದ್ದಾರೆ.

ಬಿಳಿ ಗಡ್ಡ, ಕೇಶ ವಿನ್ಯಾಸ ಆತನ ಹಾವಭಾವ ಪ್ರಧಾನಿ ಮೋದಿಗೆ ಹೋಲುತ್ತಿರುವ ಠಕ್ಕರ್‌, ಮೂಲತಃ ಜುನಾಗಢ್‌ ನಿವಾಸಿ. ಅವರು ತಮ್ಮ 18ನೇ ವಯಸ್ಸಿನಿಂದಲೂ ತುಳಸಿ ಪಾನಿ ಪುರಿ ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಅಂಗಡಿಯನ್ನು ಅವರ ತಾತ ಶುರು ಮಾಡಿದ್ದರು ಎಂಬುದು ವಿಶೇಷ. ಇನ್ನು ಮೋದಿಯಂತೆ ಕಾಣುತ್ತಿರುವ ಠಕ್ಕರ್‌ ಅವರ ವಿಶೇಷ ಲುಕ್‌ಗೆ ಮನಸೋತಿರುವ ಗ್ರಾಹಕರು ಅವರ ಬಳಿ ಬಂದು ಪಾನಿಪುರಿ ತಿಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.

ಸುಮಾರು 71 ವರ್ಷದ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿ. ಅವರ ಸ್ವಚ್ಛ ಭಾರತ ಅಭಿಯಾನದಿಂದ ಬಹಳಷ್ಟು ಸ್ಫೂರ್ತಿಗೊಂಡಿರುವ ಠಕ್ಕರ್‌ ತಮ್ಮ ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ವಿಶೇಷ ಲುಕ್‌ ಬಗ್ಗೆ ಪ್ರತಿಕ್ರಿಯಿಸಿರುವ ಠಕ್ಕರ್‌, ನನ್ನ ಪ್ರಧಾನಿ ಮೋದಿಯ ಲುಕ್‌ ಬಗ್ಗೆ ಜನ ಅತ್ಯಂತ ಪ್ರೀತಿ ತೋರುತ್ತಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರು ನನ್ನ ಬಳಿ ಬಂದು ಸೆಲ್ಫಿ ತೆಗೆದುಕೊಂಡು ಹೋಗುವುದು ಬಹಳ ಸಂತೋಷ ಕೊಡುತ್ತಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mamata Banerjee: ಹೆಲಿಕಾಪ್ಟರ್‌ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ

ಇನ್ನು ಠಕ್ಕರ್‌ ಮಾತ್ರವಲ್ಲ ಮುಂಬೈನಲ್ಲೂ ಮತ್ತೋರ್ವ ವ್ಯಕ್ತಿಯೂ ಪ್ರಧಾನಿ ಮೋದಿಯಂತೆ ತನ್ನ ಸ್ಟೈಲ್‌ ಅನ್ನು ಬದಲಿಸಿಕೊಂಡು ಫುಲ್‌ ಫೇಮಸ್‌ ಆಗಿದ್ದಾನೆ. ಮುಂಬೈನ ವಿಕಾಸ್‌ ಮಹಂತೆ ಎಂಬಾತ ಗರ್ಬಾ ಡಾನ್ಸ್‌ ಮಾಡುತ್ತಿರುವ ವಿಡಿಯೋ ಫೇಮಸ್‌ ಆಗಿತ್ತು. ಇದು ಪ್ರಧಾನಿ ಮೋದಿಯ ಡೀಪ್‌ ಫೇಕ್‌ ವಿಡಿಯೋ ಎನ್ನಲಾಗಿತ್ತು. ಆದಾದ ಬಳಿಕ ಸ್ವತಃ ವಿಕಾಸ್‌ ಮಹಾಂತೆ ವಿಡಿಯೋದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ತಾವೊಬ್ಬ ಪ್ರಧಾನಿ ಮೋದಿಯ ಅಭಿಯಾನಿ. ಆ ವಿಡಿಯೋ ಸ್ವತಃ ತನ್ನದೇ ಎಂದು ಹೇಳಿದ್ದರು. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಆಗಾಗ ಜೂನಿಯರ್‌ ಮೋದಿಗಳು ಗಮನ ಸೆಳೆಯುತ್ತಿರುತ್ತಾರೆ. ಆದರೆ ಇದೀಗ ಪಾನಿಪುರಿ ಮಾರುತ್ತಿರುವ ಮೋದಿಯನ್ನು ಕಂಡು ಜನಕ್ಕೆ ಖುಷಿಯೋ ಖುಷಿ.





Continue Reading

ವೈರಲ್ ನ್ಯೂಸ್

Viral News: ಅಪ್ರಾಪ್ತ ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ

Viral News: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂದು ಹುಡುಗಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಸ್ಥಳೀಯರು ತಕ್ಕ ಪಾಠ ಕಲಿಸಿದ್ದಾರೆ. ಮೊಬೈಲ್‌ ಅಂಗಡಿ ಇಟ್ಟುಕೊಂಡಿರುವ ಆರೋಪಿ ಅಥರುದ್ದೀನ್‌ ರೀಚಾರ್ಜ್‌ಗಾಗಿ ತನ್ನ ಬಳಿಗೆ ಬರುವ ಹಿಂದು ಹುಡುಗಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಈ ಬಗ್ಗೆ ಸಂತ್ರಸ್ತ ಅಪ್ರಾಪ್ತ ಬಾಲಕಿಯೊಬ್ಬರ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಇನ್ನು ಈತನ ವರ್ತನೆ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು ಅಂಗಡಿಗೆ ದಾಳಿ ನಡೆಸಿ ಆತನಿಗೆ ಥಳಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Viral News
Koo

ಡೆಹ್ರಾಡೂನ್: ಒಂದಷ್ಟು ಜನರ ಗುಂಪು ಮೊಬೈಲ್‌ ಅಂಗಡಿಯಾತನನ್ನು ರಸ್ತೆಗೆಳೆದು ಸರಿಯಾಗಿ ಥಳಿಸುತ್ತಾರೆ. ಮಹಿಳೆಯರೂ ಆತನಿಗೆ ಧರ್ಮದೇಟು ನೀಡುತ್ತಾರೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಈ ಘಟನೆಯ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟಕ್ಕೂ ಜನರ ಗುಂಪು ಯಾಕೆ ಮೊಬೈಲ್‌ ಅಂಗಡಿಯಾತನನ್ನು ಥಳಿಸಿದ್ದು? ಏನಿದು ಘಟನೆ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Viral News).

ಘಟನೆಯ ಹಿಂದೆ ಲವ್‌ ಜಿಹಾದ್‌ನ ಶಂಕೆ ವ್ಯಕ್ತವಾಗುತ್ತಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವ ಲವ್‌ ಜಿಹಾದ್‌ಗೆ ಪ್ರಯತ್ನಿಸುತ್ತಿದ್ದ. ಅದನ್ನು ರೆಡ್‌ ಹ್ಯಾಂಡಾಗಿ ಹಿಡಿದ ಸ್ಥಳೀಯರು ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ (ಏಪ್ರಿಲ್ 25) ಈ ಘಟನೆ ನಡೆದಿದೆ.

ಅನಿಲ್ ಶರ್ಮಾ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 1.39 ನಿಮಿಷಗಳ ಈ ವಿಡಿಯೊ ಹಂಚಿಕೊಂಡಿದ್ದಾರೆ. “ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಘಟನೆ ಇದು. ಹಿಂದೂಗಳು ಮುಸ್ಲಿಮರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ಬಳಿಕ ಮುಸ್ಲಿಮರು ಲವ್‌ ಜಿಹಾದ್‌ ಆರಂಭಿಸುತ್ತಾರೆ. ಇಲ್ಲೂ ಆಗಿದ್ದು ಅದೇ. ಮೊಬೈಲ್ ಅಂಗಡಿಯನ್ನು ನಡೆಸುತ್ತಿದ್ದ ಆರೋಪಿ ಅಥರುದ್ದೀನ್‌ ರೀಚಾರ್ಜ್‌ಗಾಗಿ ತನ್ನ ಬಳಿಗೆ ಬರುವ ಹಿಂದು ಹುಡುಗಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ” ಎಂದು ಅವರು ಬರೆದುಕೊಂಡಿದ್ದಾರೆ.

ಘಟನೆಯ ವಿವರ

ಈ ಪ್ರಕರಣವು ಹಲ್ದ್ವಾನಿಯ ಕೊಟ್ವಾಲಿಯಲ್ಲಿ ನಡೆದಿದೆ. ಅಲ್ಲಿ ವಾಸಿಸುವ ಮಹಿಳೆಯೊಬ್ಬರು ಏಪ್ರಿಲ್ 25ರಂದು ಪೊಲೀಸರಿಗೆ ದೂರು ನೀಡಿದ್ದು, ತನ್ನ 17 ವರ್ಷದ ಮಗಳು ಕೆಲವು ದಿನಗಳ ಹಿಂದೆ ಮೊಬೈಲ್ ಫೋನ್ ರೀಚಾರ್ಜ್ ಮಾಡಲು ಅಥರುದ್ದೀನ್‌ನ ‘ದೆಹಲಿ ಮೊಬೈಲ್ ಶಾಪ್’ ತೆರಳಿದ್ದಳು. ಬಳಿಕ ಆತ ಮಗಳ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ ಕಳುಹಿಸಲು ಆರಂಭಿಸಿದ್ದ ಎಂದು ಆರೋಪಿಸಿದ್ದರು. ಜತೆಗೆ ಮೆಸೇಜ್‌ನ ಸ್ಕ್ರೀನ್‌ ಶಾಟ್‌ ಒದಗಿಸಿದ್ದರು.

ಅಪ್ರಾಪ್ತ ಬಾಲಕಿ ಸಂದೇಶಗಳಲ್ಲಿ ಅಥರುದ್ದೀನ್‌ನನ್ನು ಪದೇ ಪದೆ ‘ಸಹೋದರ’ ಎಂದೇ ಕರೆದಿರುವುದು ಕಂಡು ಬಂದಿದೆ. ಆದಾಗ್ಯೂ ಅವನು ಆಕೆ ಸಹೋದರ ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಮಾತ್ರವಲ್ಲ ತನ್ನೊಂದಿಗೆ ಸ್ನೇಹ ಬೆಳೆಸಲು ಒತ್ತಾಯಿಸಿದ್ದ. ತನ್ನ ಕನಸಿನಲ್ಲಿ ನಿನ್ನನ್ನು ನೋಡಿದ್ದೇನೆ ಎಂದೂ ಪೂಸಿ ಹೊಡೆದಿದ್ದ. ತನ್ನನ್ನು ಸಿಖ್ ಎಂದು ಉಲ್ಲೇಖಿಸುವ ಮೂಲಕ ಅಪ್ರಾಪ್ತ ಬಾಲಕಿಯನ್ನು ಮೋಸಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲಿಗೇ ಮುಗಿದಿಲ್ಲ

ಅಥರುದ್ದೀನ್‌ ಕಿರುಕುಳ ಅಲ್ಲಿಗೆ ನಿಂತಿರಲಿಲ್ಲ. ಆತ ಅವಳನ್ನು ಕಾಲೇಜು ನಿಲ್ದಾಣದವರೆಗೂ ಹಿಂಬಾಲಿಸಿದ್ದ. ಜತೆಗೆ ದಾರಿಯಲ್ಲಿ ಅವಳ ಕೈಯನ್ನು ಹಿಡಿಯಲು ಪ್ರಯತ್ನಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತನ ಕಿರುಕುಳದಿಂದ ಮಗಳು ಭಯಗೊಂಡಿದ್ದಾಳೆ ಮತ್ತು ಮಾನಸಿಕ ಖಿನ್ನತೆಗೆ ಜಾರಿದ್ದಾಳೆ. ಸರಿಯಾಗಿ ಊಟವನ್ನೂ ಮಾಡುತ್ತಿಲ್ಲ ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ. ದೂರಿನಲ್ಲಿ ಮುಸ್ಲಿಂ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಅಥರುದ್ದೀನ್‌ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭವಾಗಿದೆ.

ಇದನ್ನೂ ಓದಿ: Love jihad? : ಮೆಸೇಜ್‌ನಲ್ಲೇ ಹಿಂದು ಯುವತಿಯರನ್ನು ಸೆಳೆಯುತ್ತಿದ್ದ ಖದೀಮ ಫಯಾಜ್‌ಗೆ ಗೂಸಾ!

ಇತರರೊಂದಿಗೂ ಇದೇ ವರ್ತನೆ

ಘಟನೆ ಬಗ್ಗೆ ಬಜರಂಗ ದಳದ ಕಾರ್ಯಕರ್ತ ಜೋಗಿಂದರ್‌ ಸಿಂಗ್‌ ರಾಣಾ ಹೆಚ್ಚಿನ ಮಾಹಿತಿ ನೀಡಿದ್ದಾರೆ. ʼʼಆರೋಪಿ ಅಥರುದ್ದೀನ್‌ ಹಲ್ದ್ವಾನಿಯ ಮಖಾನಿ ರಸ್ತೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಈತ ಸಂತ್ರಸ್ತೆಗಿಂತ 10 ವರ್ಷ ಹಿರಿಯವನು. ತನ್ನ ತಂಗಿಯ ವಯಸ್ಸಿನ ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ್ದಾನೆʼʼ ಎಂದು ಹೇಳಿದ್ದಾರೆ. ʼʼಅಲ್ಲದೆ ಅಂಗಡಿ ನಡೆಸಲು ಆತನ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಅಲ್ಲದೆ ಆತನ ಮೊಬೈಲ್‌ನಲ್ಲಿ ಇನ್ನೂ ಅನೇಕ ಹಿಂದೂ ಹುಡುಗಿಯರ ಸಂಖ್ಯೆಗಳು ಕಂಡು ಬಂದಿವೆ. ಅವರೊಂದಿಗೆ ಅಶ್ಲೀಲವಾಗಿ ಚಾಟ್‌ ನಡೆಸಿರುವುದು ಕೂಡ ತಿಳಿದು ಬಂದಿದೆʼʼ ಎಂದು ಜೋಗಿಂದರ್‌ ಸಿಂಗ್‌ ರಾಣಾ ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದು 2 ಕಿ.ಮೀ. ಎಳೆದೊಯ್ದ ಪಿಕ್‌ಅಪ್‌; ಶಾಕಿಂಗ್‌ ವಿಡಿಯೊ ಇಲ್ಲಿದೆ

Viral News: ಆಘಾತಕಾರಿ ಘಟನೆಯೊಂದರಲ್ಲಿ ಅತೀ ವೇಗವಾಗಿ ಸಾಗಿದ ಪಿಕ್‌ಅಪ್‌ ವಾಹನವೊಂದು ಸೈಕಲ್‌ ಸವಾರಿಗೆ ಗುದ್ದಿ ದೇಹವನ್ನು ಸುಮಾರು 2 ಕಿ.ಮೀ.ಯಷ್ಟು ದೂರು ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಹರಿಯಾಣದ ರಾಷ್ಟ್ರೀಯ ಹೆದ್ದಾರಿ 9ರ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪಿಕ್‌ಅಪ್‌ ಚಾಲಕನಿಗೆ ಸ್ಥಳೀಯರು ಥಳಿಸಿದ್ದು, ಆತನ ವಿರುದ್ಧ ದೂರು ದಾಖಲಾಗಿದೆ.

VISTARANEWS.COM


on

Viral News
Koo

ಚಂಡಿಗಢ: ಆಘಾತಕಾರಿ ಘಟನೆಯೊಂದರಲ್ಲಿ ಅತೀ ವೇಗವಾಗಿ ಸಾಗಿದ ಪಿಕ್‌ಅಪ್‌ ವಾಹನವೊಂದು ಸೈಕಲ್‌ ಸವಾರಿಗೆ ಗುದ್ದಿ ದೇಹವನ್ನು ಸುಮಾರು 2 ಕಿ.ಮೀ.ಯಷ್ಟು ದೂರು ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಹರಿಯಾಣದ ರಾಷ್ಟ್ರೀಯ ಹೆದ್ದಾರಿ 9ರ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಿಕ್‌ಅಪ್‌ನ ಹಿಂದಿದ್ದ ವಾಹನವೊಂದರಲ್ಲಿದ್ದ ವ್ಯಕ್ತಿಗಳು ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಪಿಕ್‌ ಅಪ್‌ ಅನ್ನು ನಿಲ್ಲಿಸಿ ಚಾಲಕ ಮತ್ತು ಸಹಾಯಕನಿಗೆ ಥಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಕರ್ಮ್ಘರ್ ಗ್ರಾಮದ 50 ವರ್ಷದ ಗುರ್‌ನಾಮ್‌ ಸಿಂಗ್ ಎಂದು ಗುರುತಿಸಲಾಗಿದೆ. ಪನ್ನಿವಾಲಾ ಮೋಟಾದಿಂದ ತನ್ನ ಗ್ರಾಮಕ್ಕೆ ಸೈಕಲ್‌ನಲ್ಲಿ ಹಿಂದಿರುಗುತ್ತಿದ್ದಾಗ ಹೆದ್ದಾರಿಯ ಪೊಲೀಸ್ ಚೆಕ್‌ ಪಾಯಿಂಟ್‌ ಬಳಿ ಪಿಕ್‌ಅಪ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ವಾಹನದ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದರು. ಬಳಿಕ ಪಿಕ್‌ಅಪ್‌ ಅವರನ್ನು ಎಳೆದುಕೊಂಡು ವೇಗವಾಗಿ ಸಾಗಿದೆ. ಪಿಕ್‌ಅಪ್‌ನ ಹಿಂದಿನ ಟ್ರಕ್ ಚಾಲಕ ಸಿಗ್ನಲ್ ಮಾಡಿದರೂ ನಿಲ್ಲಿಸಿಲ್ಲ.

ಅಂತಿಮವಾಗಿ ಟ್ರಕ್ ಚಾಲಕ ಪಿಕ್‌ಅಪ್‌ ಮುಂದೆ ಅಡ್ಡಲಾಗಿ ನಿಲ್ಲಿಸಬೇಕಾಯಿತು. ಈ ಮೂಲಕ ಪಿಕ್‌ಅಪ್‌ ಅನ್ನು ತಡೆಯುವಲ್ಲಿ ಯಶಸ್ವಿಯಾದರು. ನಂತರ ಅವರು ಗಾಯಗೊಂಡ ಸೈಕಲ್‌ ಸವಾರನನ್ನು ಪಿಕ್‌ಅಪ್‌ ಅಡಿಯಿಂದ ಹೊರಗೆ ಎಳೆದರು. ಈ ವೇಳೆ ಗುರ್‌ನಾಮ್‌ ಸಿಂಗ್ ವೈಯೆಲ್ಲ ರಕ್ಷಸಿಕ್ತವಾಗಿತ್ತು. ಏತನ್ಮಧ್ಯೆ ಸ್ಥಳದಲ್ಲಿದ್ದವರು ಕೋಪಗೊಂಡ ಪಿಕ್‌ಅಪ್‌ ಚಾಲಕ ಹೊಡೆದಿದ್ದಾರೆ. ಈ ದೃಶ್ಯಗಳೆಲ್ಲ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಗುರ್‌ನಾಮ್‌ ಸಿಂಗ್ ಅವರನ್ನು ಆಂಬ್ಯುಲೆನ್ಸ್‌ ಮೂಲಕ ಸಮೀಪದ ಆಸ್ಪತ್ರಗೆ ದಾಖಲಿಸಲಾಯಿತು. ಆದರೆ ಅವರ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗುರ್‌ನಾಮ್‌ ಸಿಂಗ್ ಅವರ ಸಂಬಂಧಿಕರ ಹೇಳಿಕೆ ಆಧಾರದಲ್ಲಿ ಪಿಕ್‌ಅಪ್‌ ಚಾಲಕನ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Road Accident : ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ ಆಂಬ್ಯುಲೆನ್ಸ್‌ ಚಾಲಕ; ಸರಣಿ ಅಪಘಾತಕ್ಕೆ ಕಾರುಗಳು ಜಖಂ, ಗರ್ಭಿಣಿ ಸೇಫ್

ಹೈದರಾಬಾದ್‌ನಲ್ಲಿಯೂ ನಡೆದಿತ್ತು

ಕೆಲವು ದಿನಗಳ ಹಿಂದೆ ಇಂತಹದ್ದೇ ಘಟನೆ ಹೈದರಾಬಾದ್‌ನಲ್ಲಿಯೂ ನಡೆದಿತ್ತು. ಬೈಕ್‌ ಸವಾರ ಅತ್ಯಂತ ಸಾಹಸಿಕವಾಗಿ ಅಂದು ಪಾರಾಗಿದ್ದ. ಆ ಘಟನೆಯ ವಿಡಿಯೊ ಕೂಡ ವೈರಲ್‌ ಆಗಿತ್ತು. ಅಂದು ವೇಗವಾಗಿ ಚಲಿಸುತ್ತಿದ್ದ ಲಾರಿ ಜನನಿಬಿಡ ರಸ್ತೆಯಲ್ಲಿ ತನ್ನ ಮುಂಭಾಗದ ಟೈರ್ ಕೆಳಗೆ ಮೋಟಾರ್ ಸೈಕಲ್ ಅನ್ನು ಎಳೆದುಕೊಂಡು ಹೋಗುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿತ್ತು. ಅದೃಷ್ಟವಶಾತ್‌ ಬೈಕ್‌ ಸವಾರ ಪಾರಾಗಿ ಲಾರಿಯ ಸ್ಟೆಪ್‌ನಲ್ಲಿ ನಿಂದುಕೊಂಡಿದ್ದ. ವೇಗವಾಗಿ ಸಾಗುತ್ತಿದ್ದ ಲಾರಿ ಬೈಕ್‌ ಅನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿತ್ತು. ಈ ವೇಳೆ ಬೈಕ್‌ ಮತ್ತು ರಸ್ತೆಯ ಘರ್ಷಣೆಯಿಂದ ಬೆಂಕಿ ಹತ್ತಿಕೊಳ್ಳುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿತ್ತು. ಬಳಿಕ ಬೈಕ್‌ ಚೂರು ಚೂರಾಗಿತ್ತು. ಹಾಗಿದ್ದರೂ ಚಾಲಕ ಲಾರಿಯನ್ನು ನಿಲ್ಲಿಸಿರಲಿಲ್ಲ. ಲಾರಿಯ ಹಿಂದಿನಿಂದ ಬರುತ್ತಿದ್ದ ಪ್ರಯಾಣಿಕರು ವಿಡಿಯೊವನ್ನು ಸೆರೆ ಹಿಡಿದಿದ್ದರು. ಕೊನೆಗೆ ಲಾರಿ ಚಾಲಕ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

Continue Reading

ದೇಶ

Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

Road Accident: ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

VISTARANEWS.COM


on

car accident USA
Koo

ನ್ಯೂಯಾರ್ಕ್‌: ಅಮೇರಿಕಾದಲ್ಲಿ (US) ನಡೆದ ಭೀಕರ ಕಾರು ಅಪಘಾತ ಒಂದರಲ್ಲಿ (Road Accident) ಗುಜರಾತ್‌ನ ಮೂವರು ಮಹಿಳೆಯರು (Women killed) ಸಾವನ್ನಪ್ಪಿದ್ದಾರೆ. ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಅವರು ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ನಡೆದ ಅಪಘಾತದಲ್ಲಿ (Car accident) ಮೃತಪಟ್ಟವರು.

ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ಅವರು ವೇಗವಾಗಿ ಎಸ್‌ಯುವಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

“ಅವರು ನಿಗದಿಪಡಿಸಲಾದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ತಿಳಿಸಿದರು. ಬೇರೆ ಯಾವುದೇ ಕಾರುಗಳು ಅಪಘಾತದಲ್ಲಿ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೂರುಗಳು ಚೆಲ್ಲಿದ್ದು, ಡಿಕ್ಕಿ ಹೊಡೆದ ವೇಗಕ್ಕೆ ಸಾಕ್ಷಿಯಾಗಿದೆ.

“ರಸ್ತೆಮಾರ್ಗವನ್ನು ಅತಿ ವೇಗದಲ್ಲಿ ಬಿಟ್ಟು ಜಿಗಿಯುವ ವಾಹನಗಳು ವಿರಳ. ಇದು 4-6 ಲೇನ್ ಟ್ರಾಫಿಕ್ ಅನ್ನು ದಾಟಿದೆ ಮತ್ತು ಸುಮಾರು 20 ಅಡಿ ಎತ್ತರದ ಮರಗಳ ಮೇಲೆ ಕೂತಿದೆ. ವಾಹನವು ಹಲವು ಲೇನ್ ಟ್ರಾಫಿಕ್ ಅನ್ನು ಹಾರಿದಾಗ, ಅದು ಬಹುಶಃ ನೆಲದಿಂದ ಕನಿಷ್ಠ 20 ಅಡಿಗಳಷ್ಟು ಎತ್ತರದಲ್ಲಿ ಮರಗಳಿಗೆ ಡಿಕ್ಕಿ ಹೊಡೆದಿದೆ” ಎಂದು ಎಲ್ಲಿಸ್‌ ತಿಳಿಸಿದರು.

ದಕ್ಷಿಣ ಕೆರೊಲಿನಾ ಹೈವೇ ಪೆಟ್ರೋಲ್, ಗ್ಯಾಂಟ್ ಫೈರ್ ಮತ್ತು ಪಾರುಗಾಣಿಕಾ ತಂಡಗಳು ಮತ್ತು ಗ್ರೀನ್‌ವಿಲ್ಲೆ ಕೌಂಟಿ ಇಎಂಎಸ್ ಘಟಕಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಅನಿಶ್ಚಿತವಾಗಿದೆ. ವಾಹನದ ಪತ್ತೆ ವ್ಯವಸ್ಥೆಯು ಅಪಘಾತದ ಬಗ್ಗೆ ಕೆಲವು ಕುಟುಂಬ ಸದಸ್ಯರಿಗೆ ಅಲಾರ್ಮ್‌ ನೀಡಿತು. ನಂತರ ಅವರು ದಕ್ಷಿಣ ಕೆರೊಲಿನಾದ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

Continue Reading
Advertisement
Lok Sabha Election 2024
ರಾಜಕೀಯ57 seconds ago

Yogi Adityanath:”ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರಿಗೆ ಬೀಫ್‌ ಸೇವನೆ ಹಕ್ಕು”- ಮತ್ತೆ ಗುಡುಗಿದ ಯೋಗಿ

Drinks for Summer
ಆರೋಗ್ಯ1 hour ago

Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Fire Accident
ಪ್ರಮುಖ ಸುದ್ದಿ1 hour ago

Fire Accident : ಬೆಂಗಳೂರು ನಗರ ವಲಯದಲ್ಲಿ ಅರಣ್ಯಕ್ಕೆ ಬೆಂಕಿ, ಭಾರೀ ಹಾನಿ

karnataka weather forecast
ಮಳೆ2 hours ago

Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Narendra modi
ದೇಶ2 hours ago

Narendra Modi : ಇಂದು, ನಾಳೆ ರಾಜ್ಯದಲ್ಲಿ ಮೋದಿಯಿಂದ ಅಬ್ಬರದ ಪ್ರಚಾರ; ಬಹಿರಂಗ ಭಾಷಣದ ವಿವರ ಇಲ್ಲಿದೆ

Summer Food Tips
ಆರೋಗ್ಯ2 hours ago

Summer Food Tips: ಬೇಸಿಗೆಯಲ್ಲಿ ಈ 8 ಆಹಾರಗಳಿಂದ ದೂರ ಇರಿ!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Swiggy fined
ಬೆಂಗಳೂರು8 hours ago

Swiggy fined: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲ; ಸ್ವಿಗ್ಗಿಗೆ 5000 ರೂ. ದಂಡ ವಿಧಿಸಿದ ಕೋರ್ಟ್!

Vistara Editorial
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕರ್ನಾಟಕ9 hours ago

Modi in Karnataka: ಬೆಳಗಾವಿ ಹೋಟೆಲ್‌ನಲ್ಲಿ 36 ಬಗೆಯ ಭಕ್ಷ್ಯ ಭೋಜನ ಇದ್ರೂ ಎಳನೀರು ಮಾತ್ರ ಸೇವಿಸಿದ ಮೋದಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202416 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ20 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ3 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ಟ್ರೆಂಡಿಂಗ್‌