ಕ್ರೀಡೆ
VISTARA TOP 10 NEWS : ಕರ್ನಾಟಕಕ್ಕೆ ಮತ್ತೆ ಕಾವೇರಿ ಬರೆ, ಹಳೆಯ ಸಂಸತ್ ಭವನಕ್ಕೆ ವಿದಾಯ, ಮಹಿಳಾ ಮೀಸಲಿಗೆ ಮುನ್ನುಡಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು
VISTARA TOP 10 NEWS: ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News
1. ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲು CWMA ಆದೇಶ!
ನವ ದೆಹಲಿ: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಮೊದಲೇ ನೀರಿಲ್ಲ ಎಂದು ಪರಿತಪಿಸುತ್ತಿರುವ ಹೊತ್ತಿನಲ್ಲಿ ಮತ್ತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶಿಸಿದೆ. ಮುಂದಿನ 15 ದಿನಗಳ ವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕಾವೇರಿ ಸಂಬಂಧ ಯಾವುದೇ ಕಾರಣಕ್ಕೂ ಮೋದಿಯನ್ನು ಭೇಟಿಯಾಗಲ್ಲವೆಂದ ಎಚ್.ಡಿ. ದೇವೇಗೌಡ
2. 75 ವರ್ಷಗಳ ಸಂಸತ್ ಹಾದಿ ನೆನೆದ ಪ್ರಧಾನಿ, ನೆಹರೂ ಹೊಗಳುತ್ತಲೇ ಕಾಂಗ್ರೆಸ್‌ಗೆ ಕುಟುಕಿದ ಮೋದಿ
ನವದೆಹಲಿ: ಹಳೆಯ ಸಂಸತ್ ಸಂಸತ್ ಭವನದಲ್ಲಿ (Special Parliament Session) ಸೋಮವಾರ ಕೊನೆಯ ಅಧಿವೇಶನದ ದಿನವಾದ ಕಾರಣ ನರೇಂದ್ರ ಮೋದಿ ಅವರು ಹಲವರಿಗೆ ಧನ್ಯವಾದ ತಿಳಿಸಿದರು. ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಅವರು ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸೇರಿ ಹಲವು ವ್ಯಕ್ತಿಗಳನ್ನು ಸ್ಮರಿಸಿದರು. ಹಿಂದಿನ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ ಅವರ ಕಾರ್ಯವನ್ನು ಶ್ಲಾಘಿಸುತ್ತಲೇ, ತುರ್ತು ಪರಿಸ್ಥಿತಿ ಜಾರಿಯಾಗಿದ್ದೂ ಇದೇ ಸಂಸತ್‌ನಲ್ಲಿ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕುಟುಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಸಂಸತ್ತಿನ ಮೆಟ್ಟಿಲಿಗೆ ನಾನೇಕೆ ನಮಿಸಿದೆ? ಭಾವುಕರಾದ ಮೋದಿ ಹೇಳಿದ್ದಿಷ್ಟು…
3. ವಿಶೇಷ ಸಂಸತ್ ಅಧಿವೇಶನಲ್ಲಿ ಮಹಿಳಾ ಮೀಸಲು ವಿಧೇಯಕ ಮಂಡನೆ! ಸಂಪುಟ ಸಭೆಯಲ್ಲಿ ನಿರ್ಧಾರ?
ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯಕವನ್ನು (Women Reservation Bill) ಕೇಂದ್ರ ಸರ್ಕಾರವು ವಿಶೇಷ ಸಂಸತ್ ಅಧಿವೇಶನ ಮಂಡಿಸುವ ಬಗ್ಗೆ, ಸೋಮವಾರ ಸಂಜೆ ನಡೆದ ಸಚಿವ ಸಂಪುಟದಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸಚಿವ ಸಂಪುಟ ಸಭೆ ನಡೆದ ಸಾಮಾನ್ಯವಾಗಿ ಕೇಂದ್ರ ಸಚಿವರು, ಸಂಪುಟ ತೀರ್ಮಾನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ, ಸೋಮವಾರ ಆ ರೀತಿಯ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿಲ್ಲ. ಇದರೊಂದಿಗೆ ವಿಶೇಷ ಸಂಸತ್ ಅಧಿವೇಶನದ ಅಜೆಂಡಾ ಬಗೆಗಿರುವ ಕುತೂಹಲವನ್ನು ಹಾಗೆ ಕಾಯ್ದಿಟ್ಟುಕೊಳ್ಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಈ ಡೀಲ್ ನನಗೆ ಮೊದಲೇ ಗೊತ್ತಿತ್ತು ಎಂದ ಚಕ್ರವರ್ತಿ ಸೂಲಿಬೆಲೆ, ಹಾಗಿದ್ರೆ ಅವರ‍್ಯಾಕೆ ತಡೆದಿಲ್ಲ?
ಬೆಂಗಳೂರು: ʻʻಹೌದು, ಈ ವಿಷಯ ನನಗೆ ಮೊದಲೇ ಗೊತ್ತಿತ್ತುʼʼ ಎಂದು ಗೋವಿಂದ ಪೂಜಾರಿ (Govinda Poojari) ವಂಚನೆ ಪ್ರಕರಣದ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಚಕ್ರವರ್ತಿ ಸೂಲಿಬೆಲೆ (Chakravarty Soolibele). ನನಗೆ ಉದ್ಯಮಿ ಗೋವಿಂದ ಪೂಜಾರಿ ಅವರು ಚೆನ್ನಾಗಿ ಗೊತ್ತು, ನನ್ನ ಆತ್ಮೀಯರು ಅವರು. ಈ ರೀತಿಯ ವ್ಯವಹಾರ ಯಾಕೆ ಮಾಡಿದಿರಿ ಎಂದು ನಾನೇ ಅವರಿಗೆ ಬೈದಿದ್ದೆ ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಚೈತ್ರಾ ವಂಚನೆ ಸಿ.ಟಿ. ರವಿಗೆ ಮೊದಲೇ ಗೊತ್ತಿತ್ತಾ? ಸೂಲಿಬೆಲೆ ಹೇಳಿದಾಗ ಪ್ರತಿಕ್ರಿಯೆ ಏನಿತ್ತು?
ಮೂರುವರೆ ದಿನಗಳ ಚೈತ್ರಾ ನಾಟಕ ಬಂದ್, ಆಸ್ಪತ್ರೆಯಿಂದ ಡಿಸ್ಚಾರ್ಜ್; ಇನ್ನು ಸಿಸಿಬಿ ಗ್ರಿಲ್ ಶುರು!
5. ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ರಿಲೀಫ್; ಸಂಸದ ಸ್ಥಾನಕ್ಕೆ ಚ್ಯುತಿಯಿಲ್ಲ, ಚುನಾವಣೆ ಸ್ಪರ್ಧೆಗೂ ಅಡ್ಡಿಇಲ್ಲ
ಬೆಂಗಳೂರು: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ (Parlimament Elections 2019) ಕಣಕ್ಕಿಳಿಯುವ ವೇಳೆ ಚುನಾವಣಾ ಆಯೋಗಕ್ಕೆ (Election Commission) ಸುಳ್ಳು ಮಾಹಿತಿ (False Information) ನೀಡಿದ್ದಾರೆಂಬ ಆರೋಪ ಹೊತ್ತು ಸಂಸತ್ ಸ್ಥಾನದಿಂದ ಅನರ್ಹರಾಗಿದ್ದ (Disqaulification from parliament Membership) ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassana MP Prajwal Revanna) ಅವರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ (Supreme Court big relief) ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಇಂಡಿಯಾ ಒಕ್ಕೂಟದಲ್ಲಿ ಬಿಕ್ಕಟ್ಟು; ಟಿಎಂಸಿ, ಕಾಂಗ್ರೆಸ್ ಜತೆ ಮೈತ್ರಿಗೆ ಸಿಪಿಎಂ ನಕಾರ
ಸನಾತನ ಧರ್ಮದ (Sanatana Dharma) ನಿರ್ಮೂಲನೆ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ವಿಚಾರದಲ್ಲಿ ಇಂಡಿಯಾ ಒಕ್ಕೂಟದಲ್ಲಿ (INDIA Bloc) ಭಿನ್ನಾಭಿಪ್ರಾಯ ಮೂಡಿದ ಬೆನ್ನಲ್ಲೇ, ಮೈತ್ರಿ ವಿಚಾರಕ್ಕೂ ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ಹಾಗೂ ಟಿಎಂಸಿ ಜತೆ ಮೈತ್ರಿ ಮಾಡಿಕೊಳ್ಳಲು ಸಿಪಿಎಂಗೆ ಆಸಕ್ತಿ ಇಲ್ಲ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಬಿಜೆಪಿ ಜತೆ ಎಐಎಡಿಎಂಕೆ ದೋಸ್ತಿ ಖತಂ! ಇದಕ್ಕೆಲ್ಲಾ ಅಣ್ಣಾಮಲೈ ಕಾರಣ
8. ಯಮ ನಿಮಗಾಗಿ ಕಾಯುತ್ತಿರುತ್ತಾನೆ; ಕ್ರಿಮಿನಲ್‌ಗಳಿಗೆ ಯೋಗಿ ಖಡಕ್ ವಾರ್ನಿಂಗ್
9. ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಐವರು ಪ್ರವಾಸಿಗರ ರಕ್ಷಣೆ
10. ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ತಂಡ ಪ್ರಕಟ; ಯಾರಿಗೆಲ್ಲ ಸಿಕ್ಕಿತು ಚಾನ್ಸ್?
ಕ್ರಿಕೆಟ್
ICC World Cup: ಪಾಕಿಸ್ತಾನ ತಂಡಕ್ಕೆ ವೀಸಾ ಸಮಸ್ಯೆ; ಭಾರತ ಪ್ರಯಾಣ ವಿಳಂಬ
ಭಾರತಕ್ಕೆ ಪ್ರಯಾಣಿಸಲು ವೀಸಾಗಳನ್ನು(visa) ಪಡೆಯಲು ವಿಳಂಬವಾದ ಕಾರಣ ಪಾಕ್ ತಂಡದ ದುಬೈ ಭೇಟಿ ರದ್ದುಗೊಂಡಿದೆ ಎಂದು ವರದಿಯಾಗಿದೆ.
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್(ICC World Cup) ಆರಂಭಕ್ಕೂ ಮುನ್ನವೇ ಪಾಕಿಸ್ತಾನ(Pakistan’s World Cup 2023) ತಂಡಕ್ಕೆ ಹಿನ್ನಡೆಯಾಗಿದೆ. ಭಾರತಕ್ಕೆ ಪ್ರಯಾಣಿಸಲು ವೀಸಾಗಳನ್ನು(visa) ಪಡೆಯಲು ವಿಳಂಬವಾದ ಕಾರಣ ಪಾಕ್ ತಂಡದ ದುಬೈ ಭೇಟಿ ರದ್ದುಗೊಂಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ತಂಡ ವಿಶ್ವಕಪ್ ಪಂದ್ಯಗಳನ್ನು ಆಡುವ ಮುನ್ನ ದುಬೈನಲ್ಲಿ ಪೂರ್ವ ತಯಾರಿ ನಡೆಸುವ ಯೋಜನೆಯಲ್ಲಿತ್ತು. ಆದರೆ ವೀಸಾ ಸಮಸ್ಯೆಯಿಂದ ಈ ಯೋಜನೆಗೆ ಅಡ್ಡಿಯುಂಟಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಭಾರತ ಪ್ರಯಾಣ ವಿಳಂಬವಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್ನಲ್ಲಿ ಸೆಪ್ಟೆಂಬರ್ 29 ರಂದು ಕಿವೀಸ್ ವಿರುದ್ಧ ಆಡಲಿದೆ. ಕ್ರಿಕ್ಇನ್ಫೋ ವರದಿಯ ಪ್ರಕಾರ, ಪಾಕಿಸ್ತಾನ ತಂಡವು ಈ ಪಂದ್ಯಕ್ಕೂ ಮುನ್ನ ಅಭ್ಯಾಸಕ್ಕಾಗಿ ಮುಂದಿನ ವಾರದ ಆರಂಭದಲ್ಲಿ ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ ವೀಸಾ ಪಡೆಯುವ ಪ್ರಕ್ರಿಯೆಯಲ್ಲಿ ವಿಫಲವಾದ ಕಾರಣ ಪಾಕ್ ತಂಡದ ದುಬೈ ಪ್ರವಾಸ ಮೊಟಕುಗೊಂಡಿದೆ.
ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನ ತಂಡ ಬುಧವಾರ ಮುಂಜಾನೆ ಲಾಹೋರ್ನಿಂದ ದೆಹಲಿಗೆ ಆಗಮಿಸಿ ಆ ಬಳಿಕ ಹೈದಾರಾಬಾದ್ಗೆ ಪ್ರಯಾಣಿಸಲಿದೆ ಎಂದು ವರದಿಯಾಗಿದೆ. ಏಷ್ಯಾಕಪ್ ನಡೆಯುತ್ತಿದ್ದ ವೇಳೆಯೇ ಪಾಕ್ ಕ್ರಿಕೆಟ್ ಮಂಡಳಿ ವೀಸಾ ಪಡೆಯಲು ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಕೆಲ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲವಾದ ಕಾರಣ ವಿಳಂಬವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ ICC World Cup 2023: ಭಾರತ ಬಿಟ್ಟು ವಿಶ್ವಕಪ್ ಗೆಲ್ಲುವ ತಂಡ ಹೆಸರಿಸಿದ ಗಂಭೀರ್
ಪಾಕ್ ತಂಡಕ್ಕೆ ಮಾತ್ರ ಸಮಸ್ಯೆ
ರಾಜತಾಂತ್ರಿಕವಾಗಿಯೂ ಭಾರತ ಮತ್ತು ಪಾಕ್ ಸಂಬಂಧ ಮೊದಲಿನಿಂದಲೇ ಸರಿಯಿಲ್ಲ. ಹೀಗಾಗಿ ಉಭಯ ದೇಶಗಳ ಪ್ರಯಾಣಕ್ಕೆ ವೀಸಾ ಪಡೆಯಲು ಕೂಡ ಹಲವು ನಿರ್ಭಂದ ಮತ್ತು ಅನೇಕ ಪ್ರಕ್ರಿಯೆಗಳು ಕೂಡ ಇವೆ. ಈಗಾಗಲೇ ಭಾರತದಲ್ಲಿ ವಿಶ್ವಕಪ್ ಆಡಲಿರುವ 10 ತಂಡಗಳ ಪೈಕಿ 9 ದೇಶಗಳಿಗೆ ವೀಸಾ ಲಭಿಸಿದೆ. ಆದರೆ ಪಾಕ್ ತಂಡಕ್ಕೆ ಮಾತ್ರ ವೀಸಾ ಸಿಗಬೇಕಿದೆ.
ಪ್ರೇಕ್ಷಕರಿಲ್ಲದೆ ಪಂದ್ಯ
ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಣ ಅಭ್ಯಾಸ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಇದಕ್ಕೆ ಕಾರಣ ಇಲ್ಲಿ ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿರುವುದು. ಈಗಾಗಲೇ ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಪಾಕ್ ಈ ಮಹತ್ವದ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಯುವ ವೇಗಿ ನಸೀಮ್ ಶಾ ಅವರು ಏಷ್ಯಾಕಪ್ನಲ್ಲಿ ಗಾಯಗೊಂಡ ಕಾರಣ ಈ ಟೂರ್ನಿಯಿಂದ ಹೊರಬಿದ್ದಾರೆ.
ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ. ಮೀಸಲು ಆಟಗಾರು: ಅಬ್ರಾರ್ ಅಹ್ಮದ್, ಜಮಾನ್ ಖಾನ್ ಹಾಗೂ ಮೊಹಮ್ಮದ್ ಹ್ಯಾರಿಸ್.
ಕ್ರಿಕೆಟ್
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
Varanasi Stadium: ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ನಿರ್ಮಿಸಿರುವ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನು ಶಿವನಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗುತ್ತಿದ್ದು, ಸ್ಟೇಡಿಯಂನ ವೈಶಿಷ್ಟ್ಯ ಇಲ್ಲಿದೆ.
ವಾರಾಣಸಿ: ವಿಶ್ವನಾಥನ ಸನ್ನಿಧಿಯಾಗಿರುವ ವಾರಾಣಸಿಯಲ್ಲಿ ಭವ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳುಳ್ಳ ಕ್ರಿಕೆಟ್ ಸ್ಟೇಡಿಯಂ (Varanasi Stadium) ನಿರ್ಮಿಸಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ದೇವರ ನಗರಿ ಎಂದೇ ಖ್ಯಾತಿಯಾಗಿರುವ ವಾರಾಣಸಿಯ ಕ್ರೀಡಾಂಗಣವೂ ಶಿವನಿಂದ ಸ್ಫೂರ್ತಿಗೊಂಡು ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣದ ಪ್ರತಿಯೊಂದು ವಿಭಾಗದಲ್ಲೂ ಶಿವನ ಛಾಯೆ ಇದೆ. ಹಾಗಾಗಿ, ವಾರಾಣಸಿ ಕ್ರೀಡಾಂಗಣವು ವಿಶೇಷವಾಗಿದೆ. ಇದರ ಎಲ್ಲ ವೈಶಿಷ್ಟ್ಯಗಳು, ಶಿವನ ಛಾಯೆ ಸೇರಿ ಹಲವು ಮಾಹಿತಿ ಇಲ್ಲಿದೆ.
ತ್ರಿಶೂಲ, ಡಮರು, ಶಿವತಾಂಡವ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣದ ವಿನ್ಯಾಸವು ಶಿವನಿಂದ ಸ್ಫೂರ್ತಿಗೊಂಡಿದೆ. ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಿಸಲಿರುವ ಮಾಧ್ಯಮ ಕೇಂದ್ರ (Media Centre) ಶಿವನ ಕೈಯಲ್ಲಿರುವ ಡಮರುಗದಂತೆ ಇರಲಿದೆ.
ಅಷ್ಟೇ ಅಲ್ಲ, ಸ್ಟೇಡಿಯಂ ಚಾವಣಿಯು ಚಂದ್ರನ ಆಕಾರದಲ್ಲಿ, ಪ್ರವೇಶ ದ್ವಾರವು ಬಿಲ್ವಪತ್ರೆ ಹಾಗೂ ಹೊನಲು ಬೆಳಕಿನ ಪಂದ್ಯದ ವೇಳೆ ಝಳಪಿಸುವ ಫ್ಲಡ್‌ಲೈಟ್ ತ್ರಿಶೂಲದ ಆಕಾರದಲ್ಲಿ ಇರಲಿವೆ. ಹಾಗಾಗಿ, ಇಡೀ ಸ್ಟೇಡಿಯಂ ಶಿವನಿಂದ ಸ್ಫೂರ್ತಿಗೊಂಡಂತೆ ನಿರ್ಮಾಣವಾಗಲಿದೆ.
ಸ್ಟೇಡಿಯಂನಲ್ಲಿ ಏನೆಲ್ಲ ಇರಲಿದೆ?
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣವಾಗಿದೆ. ಇದರಲ್ಲಿ 30 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ರಾಜಾತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ಇದನ್ನು ನಿರ್ಮಿಸಲಾಗಿದ್ದು, ಏಳು ಪಿಚ್‌ಗಳು ಇರಲಿವೆ.
ಪಂದ್ಯದ ವೇಳೆ ಮಳೆ ಬಂದರೆ ಕ್ಷಿಪ್ರವಾಗಿ ನೀರು ಹೀರಿಕೊಳ್ಳುವ, ಅತ್ಯಾಧುನಿಕ ಸೌಕರ್ಯಗಳುಳ್ಳ ಡ್ರೆಸ್ಸಿಂಗ್ ರೂಮ್‌ಗಳು, ಮೂರು ಪ್ರಾಕ್ಟೀಸ್ ಪಿಚ್‌ಗಳು ಸೇರಿ ಹಲವು ಸೌಲಭ್ಯಗಳಿವೆ. 2025ರ ಡಿಸೆಂಬರ್‌ನಲ್ಲಿ ಕ್ರೀಡಾಂಗಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ICC World Cup: ಶೀಘ್ರದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಸ್ಪರ್ಶ
ಕಾಶಿ ವಿಶ್ವನಾಥನ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂಗೆ ಸುಮಾರು 451 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು 121 ಕೋಟಿ ರೂ. ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 330 ಕೋಟಿ ರೂ. ವಿನಿಯೋಗಿಸಲಿದೆ.
ಕ್ರಿಕೆಟ್
MS Dhoni: ತಂಡಕ್ಕಾಗಿ ಧೋನಿ ಬ್ಯಾಟಿಂಗ್ ‘ತ್ಯಾಗ’ ಮಾಡಿಲ್ಲ; ಮಾಜಿ ಬೌಲರ್ ಶಾಕಿಂಗ್ ಹೇಳಿಕೆ
MS Dhoni: ಭಾರತ ಕ್ರಿಕೆಟ್ ತಂಡಕ್ಕಾಗಿ ಮಹೇಂದ್ರ ಸಿಂಗ್ ಧೋನಿ ದೊಡ್ಡ ತ್ಯಾಗ ಮಾಡಿದ್ದಾರೆ. ಅವರು ಬ್ಯಾಟಿಂಗ್ ಕ್ರಮಾಂಕವನ್ನೇ ಬಿಟ್ಟುಕೊಟ್ಟಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದರು. ಇದಕ್ಕೆ ಮಾಜಿ ವೇಗಿ ಎಸ್. ಶ್ರೀಶಾಂತ್ ಪ್ರತಿಕ್ರಿಯಿಸಿದ್ದಾರೆ.
ತಿರುವನಂತಪುರಂ: “ಭಾರತೀಯ ಕ್ರಿಕೆಟ್ ತಂಡದ (Indian Cricket Team) ಗೆಲುವಿಗಾಗಿ ಮಹೇಂದ್ರ ಸಿಂಗ್ ಧೋನಿಯು (MS Dhoni) ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಿದ್ದಾರೆ” ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೆಯನ್ನು ಮಾಜಿ ವೇಗಿ ಎಸ್. ಶ್ರೀಶಾಂತ್ (S Sreesanth) ಅಲ್ಲಗಳೆದಿದ್ದಾರೆ. ಅಲ್ಲದೆ, “ದೇಶದ ತಂಡಕ್ಕಾಗಿ ಧೋನಿ ಅವರು ತ್ಯಾಗ ಮಾಡಿಲ್ಲ” ಎಂದು ಕೂಡ ಸಂದರ್ಶನವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಖಂಡಿತವಾಗಿಯೂ ಭಾರತ ಕ್ರಿಕೆಟ್ ತಂಡವು ಎರಡು ವಿಶ್ವಕಪ್ ಗೆದ್ದ ಶ್ರೇಯಸ್ಸು ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲಬೇಕು. ಕೆಲ ದಿನಗಳ ಹಿಂದಷ್ಟೇ ಧೋನಿಯು ಮೂರನೇ ಕ್ರಮಾಂಕದಲ್ಲಿ ಆಡಿದ್ದರೆ ಇನ್ನಷ್ಟು ರನ್ ಗಳಿಸಬಹುದಿತ್ತು. ಅವರು ತಂಡಕ್ಕಾಗಿ ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಿದರು ಎಂದಿದ್ದಾರೆ. ಆದರೆ, ಧೋನಿ ಯಾವಾಗಲೂ ಕೊನೆಯ ಕ್ರಮಾಂಕದಲ್ಲಿ ಆಡಿ ತಂಡಕ್ಕೆ ಗೆಲುವು ತಂದುಕೊಡಲು ಯೋಚಿಸುತ್ತಿದ್ದರು. ಕೊನೆಯ ಕ್ರಮಾಂಕದಲ್ಲಿ ಆಡುವುದೇ ಧೋನಿಯ ಶಕ್ತಿಯಾಗಿತ್ತು. ಹಾಗಾಗಿ, ಅವರು ಬ್ಯಾಟಿಂಗ್ ಕ್ರಮಾಂಕ ತ್ಯಾಗ ಮಾಡಿದ್ದಾರೆ ಎಂದು ಅನಿಸುವುದಿಲ್ಲ” ಎಂಬುದಾಗಿ ಶ್ರೀಶಾಂತ್ ತಿಳಿಸಿದ್ದಾರೆ.
He didn't sacrifice position: Sreesanth on Gambhir's remark on MSD
— Sushreeta Edu (@sushreetaedu) September 22, 2023
Reacting to Gautam Gambhir's statement that MS Dhoni would have scored more runs had he batted at number three, ex-India pacer S Sreesanth said, "Dhoni didn't sacrifice his batting position." "Dhoni worked out a… pic.twitter.com/KNxT1B3jEC
“ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದ ಪ್ರತಿಯೊಬ್ಬ ಆಟಗಾರರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಗೊತ್ತಿತ್ತು. ಹಾಗಾಗಿ, ಅವರು ಯಾರನ್ನು ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕು ಎಂಬುದು ಗೊತ್ತಿತ್ತು. ಅವರಿಗೆ ತಮ್ಮ ಸಾಮರ್ಥ್ಯದ ಬಗ್ಗೆಯೂ ಅರಿವಿತ್ತು. ಹಾಗಾಗಿ, ಅವರು ಕೆಳ ಕ್ರಮಾಂಕದಲ್ಲಿ ಆಟವಾಡಿದರು. ಆ ಮೂಲಕ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು” ಎಂದು ಶ್ರೀಸಾಂತ್ ಹೇಳಿದರು.
ಇದನ್ನೂ ಓದಿ: MS Dhoni : ಇದೆಂಥಾ ಅಚ್ಚರಿ; ಅಪರೂಪಕ್ಕೆ ಧೋನಿಯನ್ನು ಹೊಗಳಿದ ಗೌತಮ್ ಗಂಭೀರ್!
ಗೌತಮ್ ಗಂಭೀರ್ ಹೇಳಿದ್ದೇನು?
“ನಾಯಕತ್ವದ ಜವಾಬ್ದಾರಿಯಿಂದಾಗಿ ಧೋನಿಗೆ ಬ್ಯಾಟರ್ ಆಗಿ ಸಾಧಿಸಬಹುದಾದದ್ದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಬಹಳಷ್ಟು ಬಾರಿ ನಾಯಕನಾಗಿ ನೀವು ತಂಡವನ್ನು ಮೊದಲ ಸ್ಥಾನದಲ್ಲಿರಿಸಬೇಕಾಗುತ್ತದೆ. ಎಂಎಸ್ ಧೋನಿ ನಾಯಕನಾಗದಿದ್ದರೆ ಅವರು 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದಿತ್ತು. ಅವರು ಹಲವಾರು ಏಕದಿನ ದಾಖಲೆಗಳನ್ನು ಮುರಿಯಬಹುದಾಗಿತ್ತು ಎಂಬುದು ನನಗೆ ಖಾತ್ರಿಯಿದೆ. ಅವರು ಸಾಕಷ್ಟು ಟ್ರೋಫಿಗಳನ್ನು ಗೆದ್ದಿದ್ದಾರೆ ಆದರೆ ವೈಯಕ್ತಿಕವಾಗಿ ಅವರು ಟ್ರೋಫಿಗಳಿಗಾಗಿ ತಮ್ಮ ಅಂತಾರಾಷ್ಟ್ರೀಯ ರನ್ಗಳನ್ನು, ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಿದ್ದಾರೆ” ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದ್ದರು.
ಧೋನಿಯ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಳ್ಳದೇ ಹೋಗಿದ್ದರೆ ಹಲವಾರು ವೈಯಕ್ತಿಕ ದಾಖಲೆ ಮಾಡಬಹುದಾಗಿತ್ತು. ಅವರ ಜವಾಬ್ದಾರಿಗಳು ವೈಯಕ್ತಿಕ ಬ್ಯಾಟಿಂಗ್ ಸಾಧನೆಗಳನ್ನು ಮರೆ ಮಾಡಿವೆ ಎಂದು ಗಂಭೀರ್ ಹೇಳಿದ್ದರು. ಧೋನಿ ನಾಯಕತ್ವದಲ್ಲಿರದಿದ್ದರೆ ಅವರು ಹಲವಾರು ಏಕದಿನ ದಾಖಲೆಗಳನ್ನು ಸೃಷ್ಟಿಸಬಹುದಾಗಿತ್ತು ಎಂದಿದ್ದರು. ಯಾವಾಗಲೂ ಮಹೇಂದ್ರ ಸಿಂಗ್ ಧೋನಿ ಅವರನ್ನು ಟೀಕಿಸುತ್ತಿದ್ದ ಗೌತಮ್ ಗಂಭೀರ್, ಅಚ್ಚರಿ ಎಂಬಂತೆ ಹೊಗಳಿದ್ದರು.
ಕ್ರಿಕೆಟ್
ind vs aus : 21ನೇ ಶತಮಾನದಲ್ಲಿ ಭಾರತ ಕ್ರಿಕೆಟ್ ತಂಡದ ವಿಶೇಷ ದಾಖಲೆ, ಮೊಹಾಲಿ ಕ್ರೀಡಾಂಗಣವೇ ಸಾಕ್ಷಿ
ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ (ind vs aus) ಪಂದ್ಯದಲ್ಲಿ ಟೀಂ ಇಂಡಿಯಾ 21ನೇ ಶತಮಾನದಲ್ಲಿ ಮೂಲಕ ಮೊದಲ ಗೆಲುವು ದಾಖಲಿಸಿದೆ.
ಮೊಹಾಲಿ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ (ind vs aus) ಮೊದಲ ಪಂದ್ಯದಲ್ಲಿ ಭಾರತ ಜಯ ಸಾಧಿಸಿದೆ. ಇದು 21ನೇ ಶತಮಾನದಲ್ಲಿ ಟೀಂ ಇಂಡಿಯಾಗೆ ಮೊಹಾಲಿ ಸ್ಟೇಡಿಯಮ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಭಿಸಿದ ಮೊದಲ ಗೆಲವು. ಕಳೆದ 27 ವರ್ಷಗಳಿಂದ ಭಾರತ ತಂಡ ಈ ಸ್ಟೇಡಿಯಮ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿರಲಿಲ್ಲ. ಪ್ರತಿ ಬಾರಿಯೂ ಆಸೀಸ್ ತಂಡಕ್ಕೆ ಜಯ ದೊರಕುತ್ತಿತ್ತು. ಹಂಗಾಮಿ ನಾಯಕ ಕೆ. ಎಲ್ ರಾಹುಲ್ ನೇತೃತ್ವದಲ್ಲಿ ಭಾರತ ತಂಡ ಹೊಸ ಸಾಧನೆ ಮಾಡಿ.
ಮೊಹಮ್ಮದ್ ಶಮಿ ಅವರ ಐದು ವಿಕೆಟ್ ಸಾಧನೆಯ ನಂತರ, ಇಬ್ಬರು ಯುವ ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ ಮತ್ತು ಋತುರಾಜ್ ಗಾಯಕ್ವಾಡ್, ಹಂಗಾಮಿ ನಾಯಕ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ನಾಲ್ವರು ಭಾರತೀಯ ಬ್ಯಾಟರ್ಗಳ ಅರ್ಧಶತಕಗಳ ಸಹಾಯದಿಂದ ಈ ಜಯ ಹಾಗೂ ದಾಖಲೆ ಮಾಡಲು ಸಾಧ್ಯವಾಯಿತು. ಸರಣಿಯಲ್ಲೂ 1-0 ಮುನ್ನಡೆ ಪಡೆಯಿತು.
277 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ಶುಬ್ಮನ್ ಗಿಲ್ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮವಾಘಿ ಇನ್ನಿಂಗ್ಸ್ ಆರಂಭಿಸಿದರು. ಮೊದಲ 10 ಓವರ್ ಗಳಲ್ಲಿ ಭಾರತ 66/0 ಸ್ಕೋರ್ ಮಾಡಿತ್ತು. ಅವರು ಸ್ಟ್ರೈಕ್ ಅನ್ನು ಮುಂದುವರಿಸಿದರು. ಮೊದಲು ಗಿಲ್ ಅರ್ಧಶತಕ ಗಳಿಸಿದರು ಹಾಗೂ ಬಳಿಕ ಗಾಯಕ್ವಾಡ್ ತಮ್ಮ ಅರ್ಧ ಶತಕವನ್ನು ಬಾರಿಸಿದರು.
ಗಿಲ್ ಮತ್ತು ಗಾಯಕ್ವಾಡ್ ಇಬ್ಬರೂ ಆಸ್ಟ್ರೇಲಿಯಾದಿಂದ ಪಂದ್ಯವನ್ನು ಕಸಿದುಕೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಂದುಕೊಳ್ಳುತ್ತಿದ್ದ ವೇಳೆ ಪ್ರವಾಸಿ ತಂಡ ಕೇವಲ ಒಂಬತ್ತು ರನ್ಗಳ ಅಂತರದಲ್ಲಿ ಮೂರು ವಿಕೆಟ್ಗಳನ್ನು ಉರುಳಿಸದಿರು. ಗಿಲ್ ಮತ್ತು ಗಾಯಕ್ವಾಡ್ ಇಬ್ಬರನ್ನೂ ಆಡಮ್ ಜಂಪಾ ಎಸೆತಕ್ಕೆ ಔಟಾದರು. ಶ್ರೇಯಸ್ ಅಯ್ಯರ್ ಅಗ್ಗವಾಗಿ ರನ್ ಔಟ್ ಆದರು. ಇಶಾನ್ ಸ್ವಲ್ಪ ಹೊತ್ತು ಆಡಿದರೆ ರಾಹುಲ್ ಮತ್ತು ಸೂರ್ಯ 80 ರನ್ ಗಳ ಜೊತೆಯಾಟವನ್ನು ಆಡಿದರು.
ರಾಹುಲ್ ಸಿಕ್ಸರ್ನೊಂದಿಗೆ ಪಂದ್ಯವನ್ನು ಮುಗಿಸಿದರು, ಭಾರತವು ಎಂಟು ಎಸೆತಗಳು ಬಾಕಿ ಇರುವಾಗ ಗುರಿಯನ್ನು ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಭಾರತ ನಂ.1 ತಂಡ ಎನಿಸಿಕೊಂಡಿದೆ.
ಇದಕ್ಕೂ ಮುನ್ನ ಮೊಹಮ್ಮದ್ ಶಮಿ ಅವರು ತಂಡಕ್ಕೆ ನೆರವಾದರು. ಮೊದಲ ಓವರ್ನಲ್ಲಿಯೇ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದರು ಮತ್ತು ಸ್ಟೀವ್ ಸ್ಮಿತ್ ಅವರ ದೊಡ್ಡ ವಿಕೆಟ್ ಪಡೆಯಲು ಮತ್ತೆ ಮರಳಿದರು. ಶಮಿ ಇನ್ನೂ ಮೂರು ವಿಕೆಟ್ಗಳನ್ನು ಪಡೆದರು,
-
ಪ್ರಮುಖ ಸುದ್ದಿ20 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಗ್ಯಾಜೆಟ್ಸ್23 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ22 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕರ್ನಾಟಕ16 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ19 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ22 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ20 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ