ವಿಸ್ತಾರ ಸಂಪಾದಕೀಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ; ವೇಗದ ಜತೆಗೆ ಸುರಕ್ಷತೆಯೂ ಇರಲಿ Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ; ವೇಗದ ಜತೆಗೆ ಸುರಕ್ಷತೆಯೂ ಇರಲಿ

ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿ ಮಾರ್ಚ್‌ 11ರಂದು ಉದ್ಘಾಟನೆಯಾಗಲಿದೆ. ಅತಿ ವೇಗವಾಗಿ ಸಾಗುವ ಈ ಹೆದ್ದಾರಿಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವುದೂ ಮುಖ್ಯ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು ಹಾಗೂ ಮೈಸೂರು (Bangalore-Mysore Express Highway) ನಗರಗಳ ಜನತೆ ಕಾತರದಿಂದ ಕಾಯುತ್ತಿದ್ದ, ಉಭಯ ನಗರಗಳ ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿ ಮಾರ್ಚ್‌ 11ರಂದು ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮೈಸೂರು ಸಂಸದರು ತಿಳಿಸಿದ್ದಾರೆ. ಸುಮಾರು 8000 ಕೋಟಿ ರೂ. ವೆಚ್ಚವಾಗಿರುವ, ಮೂರು ಗಂಟೆಗಳ ಪ್ರಯಾಣದ ಅವಧಿಯನ್ನು ಒಂದೂವರೆ ಗಂಟೆಗೆ ಇಳಿಸಿರುವ ಈ ದಶಪಥ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೇ ಸಂದರ್ಭದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೂ ಭೂಮಿ ಪೂಜೆ ನೆರವೇರಲಿದೆ ಎಂದು ಗೊತ್ತಾಗಿದೆ.

ಮೈಸೂರು ಹಾಗೂ ಬೆಂಗಳೂರುಗಳನ್ನು ಅವಳಿ ನಗರಗಳೆಂದೇ ಕರೆಯಬಹುದು. ಅಂಥ ವಾಣಿಜ್ಯ, ಸಾಂಸ್ಕೃತಿಕ, ಸಾಮಾಜಿಕ ಸಂಬಂಧ ಉಭಯ ಪಟ್ಟಣಗಳಿಗೆ ಇದೆ. ಈಗ ಎಕ್ಸ್‌ಪ್ರೆಸ್‌ವೇ ಮೂಲಕ ಇವುಗಳ ನಡುವಿನ ಅಂತರ ಇನ್ನಷ್ಟು ಕಡಿಮೆಯಾಗುತ್ತಿದೆ. ಎರಡು ನಗರಗಳ ನಡುವೆ ಕಡಿಮೆ ಅವಧಿಯಲ್ಲಿ ತಲುಪುವ ಪ್ರಯಾಣಿಕರ ಕನಸು ನನಸಾಗಿದೆ. ಇದು ಇನ್ನಷ್ಟು ಚಟುವಟಿಕೆಗೂ, ಬೆಳವಣಿಗೆಗೂ ಕಾರಣವಾಗಲಿದೆ.

ಒಂದು ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗುವುದು ಎಂದರೆ ಅದರ ಸುತ್ತಮತ್ತ ಹಲವಾರು ಬಗೆಯ ವಾಣಿಜ್ಯ ಚಟುವಟಿಕೆಗಳು ಬೆಳೆಯುತ್ತವೆ; ಸುತ್ತಲಿನವರ ಬದುಕು ಕೂಡ ವಿಕಸಿತಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಆದರೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇ ವಿಷಯದಲ್ಲಿ ಇದನ್ನು ಎಷ್ಟರಮಟ್ಟಿಗೆ ಹೇಳಬಹುದೋ ಗೊತ್ತಿಲ್ಲ. ಯಾಕೆಂದರೆ ಉಭಯ ನಗರಗಳ ನಡುವೆ ಹಲವಾರು ಪಾರಂಪರಿಕ ತಾಣಗಳಿವೆ; ಸಾಂಪ್ರದಾಯಿಕ ಗುಡಿಕೈಗಾರಿಕೆಗಳಿವೆ; ಸ್ಥಳೀಯ ಆಹಾರೋದ್ಯಮವಿದೆ. ಉದಾಹರಣೆಗೆ, ದೇಶದಲ್ಲೇ ಹೆಸರಾದ ಚನ್ನಪಟ್ಟಣದ ಗೊಂಬೆ ತಯಾರಿಕೆ ಉದ್ಯಮ. ಪ್ರಸ್ತುತ ಎಕ್ಸ್‌ಪ್ರೆಸ್‌ವೇ ಚನ್ನಪಟ್ಟಣವನ್ನು ಸ್ಪರ್ಶಿಸದೆ ಹಾದುಹೋಗುವುದರಿಂದ ವೇಗವಾಗಿ ಪ್ರಯಾಣಿಸುವವರ್ಯಾರೂ ಇಲ್ಲಿ ನಿಲ್ಲಿಸುವುದಿಲ್ಲ. ಹೀಗಾಗಿ ಈ ಉದ್ಯಮಕ್ಕೆ ಧಕ್ಕೆಯಾಗುವ ಸಂಭವವಿದೆ. ಇಂಥ ಸನ್ನಿವೇಶದಲ್ಲಿ ಇವುಗಳನ್ನು ಉಳಿಸಲು ಏನು ಮಾಡಬಹುದು ಎಂದು ಚಿಂತಿಸಿ, ಆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಕಳೆದ ಮಳೆಗಾಲದಲ್ಲಿ ನಾವು ನೋಡಿದಂತೆ, ಕೆಲವು ಕಡೆಗಳಲ್ಲಿ ಹೆದ್ದಾರಿ ಕಾಮಗಾರಿಯಿಂದಾಗಿ ನೀರು ನಿಂತು ವಾಹನಗಳೇ ಮುಳುಗಿಹೋಗಿವೆ. ಮುಂದಿನ ಮಳೆಯ ವೇಳೆಗೆ ಇಂಥ ದೋಷಗಳು ಇಲ್ಲದಂತೆ ಪರಿಶೀಲಿಸುವುದು ಅಗತ್ಯ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭಿಕ್ಷಾಟನೆಗೆ ಮಕ್ಕಳ ಬಳಕೆ ಅಪಾಯಕಾರಿ

ಎಕ್ಸ್‌ಪ್ರೆಸ್‌ವೇ ಮುಕ್ತವಾದೊಡನೆಯೇ ಪ್ರಯಾಣಿಕರಿಂದ ಅದಕ್ಕೆ ಸುಂಕ ವಸೂಲಿ ಮಾಡುವುದೂ ಆರಂಭವಾಗುತ್ತದೆ. ಇದನ್ನೂ ವೈಜ್ಞಾನಿಕವಾಗಿ, ನಿತ್ಯ ಓಡಾಡುವವರಿಗೆ ಹೊರೆಯೆನಿಸದಂತೆ ನಿಗದಿಪಡಿಸುವುದು ಅಗತ್ಯ. ಸ್ಥಳೀಯರಿಂದ ಟೋಲ್‌ ಪಡೆಯುವಾಗ ವಿವೇಚನೆ ಅನುಸರಿಸದಿದ್ದರೆ ಅದು ಭವಿಷ್ಯದಲ್ಲಿ ಆಕ್ರೋಶ ಹೆಪ್ಪುಗಟ್ಟಲು ಕಾರಣವಾಗುತ್ತದೆ. ಇಂಥ ಹೆದ್ದಾರಿಗಳಲ್ಲಿ ಮುಕ್ತ ಓಡಾಟಕ್ಕೆ ಆಸ್ಪದವಿರುವುದಿಲ್ಲ ಎಂಬುದು ನಿಜವಾದರೂ, ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಹೊಲ, ಜಮೀನು, ಮನೆ ಹೊಂದಿರುವ ರೈತರ, ಹೆದ್ದಾರಿ ಹಾದುಹೋದ ಪುಟ್ಟ ಪಟ್ಟಣಗಳ ಜನರ ಓಡಾಟಕ್ಕೆ ಖಂಡಿತವಾಗಿಯೂ ತೊಂದರೆ ಆಗಿಯೇ ಆಗಿರುತ್ತದೆ. ಜನ ದಾಟಬೇಕಾದಂಥ ಕೆಲವು ಪ್ರಮುಖ ಸ್ಥಳಗಳಲ್ಲಿ ಅಂಡರ್ ಪಾಸ್ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆ ಇನ್ನೂ ಈಡೇರಿಲ್ಲ. ಹೀಗಾಗಿ ಜನ, ಜಾನುವಾರುಗಳು ಹೆದ್ದಾರಿಯ ಮಧ್ಯೆ ಬಂದುಬಿಡಬಹುದು; ನಿಧಾನವಾಗಿ ಚಲಿಸುವ ವಾಹನಗಳು ವೇಗವಾಗಿ ಹೋಗುವ ವಾಹನಗಳಿಗೆ ತಡೆಯೊಡ್ಡಬಹುದು. ಈ ರಸ್ತೆಯಲ್ಲಿ ಅತಿ ವೇಗವಾಗಿ ವಾಹನಗಳು ಸಾಗುವುದರಿಂದ ಎಲ್ಲರ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಸ್ಥಳೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಿಕ್ಷಾ, ಬೈಕ್ ಇತ್ಯಾದಿ ಲಘು ವಾಹನಗಳು, ಸ್ಥಳೀಯರ ವಾಹನಗಳು ಸರಾಗವಾಗಿ ಸಂಚರಿಸಲು ಸರ್ವಿಸ್ ರಸ್ತೆ ನಿರ್ಮಾಣ ಬೇಗ ಆಗಬೇಕು. ಟೋಲ್‌ ಪ್ಲಾಜಾಗಳ ಜತೆಜತೆಗೇ ರೆಸ್ಟ್‌ ರೂಮ್‌ಗಳು, ವಾಹನ ಬದಿಗೆ ನಿಲ್ಲಿಸಲು ಬೇ ಏರಿಯಾಗಳು ನಿರ್ಮಾಣವಾಗಬೇಕು.

ಎಕ್ಸ್‌ಪ್ರೆಸ್‌ವೇಗಳ ಮುಖ್ಯ ಗುಣವೆಂದರೆ ವೇಗ. ಅದು ಬದುಕಿಗೆ ತರಾತುರಿಯನ್ನು ತಂದುಬಿಡುತ್ತದೆ. ಇದರ ಜೊತೆಜೊತೆಗೇ ಸುರಕ್ಷತೆಯನ್ನೂ ಖಾತ್ರಿಪಡಿಸಿಕೊಳ್ಳಲು ಸಾಧ್ಯವಾದರೆ ಮಾತ್ರ ಅದು ಸುಸ್ಥಿರ ಅಭಿವೃದ್ಧಿ ಎನಿಸಿಕೊಳ್ಳುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

Raja Marga Column : ಚೆನ್ನಾಗಿದ್ದ ಸಂಬಂಧಗಳು ಕೆಡೋದ್ಯಾಕೆ? ಇಲ್ಲಿವೆ 12 ಕಾರಣಗಳು

Raja Marga Column : ತುಂಬಾ ಚೆನ್ನಾಗಿರುತ್ತದೆ ಸಂಬಂಧ. ಆದರೆ, ಒಮ್ಮಿಂದೊಮ್ಮೆಗೆ ಹದಗೆಡುತ್ತದೆ. ಯಾಕೆ ಅಂತಾನೇ ಗೊತ್ತಾಗಲ್ಲ.. ಹೀಗೆ ಆಗುವುದಕ್ಕೆ ಕಾರಣ ಇಲ್ಲಿದೆ.

VISTARANEWS.COM


on

Healthy relationship
Koo
RAJAMARGA

ಉತ್ತಮ ಸಂಬಂಧವನ್ನು (Good Realationship) ಪ್ರತಿಯೊಬ್ಬರೂ ಹೊಂದಲು ಆಸೆ ಪಡುತ್ತಾರೆ. ಆರೋಗ್ಯಪೂರ್ಣ ಸಂಬಂಧಗಳು (Healthy Relationship) ನಮ್ಮೆಲ್ಲರ ಬದುಕನ್ನು ಸುಂದರವಾಗಿ ಮಾಡುತ್ತವೆ. ಆದರೆ ಒಂದು ಸದೃಢವಾದ ದೋಣಿಯಲ್ಲಿ ಸಣ್ಣ ಬಿರುಕು ಉಂಟಾದ ಹಾಗೆ, ಒಂದು ತೊಟ್ಟು ಹುಳಿಯು ಒಂದು ಪಾತ್ರೆ ಹಾಲನ್ನು ಕೆಡಿಸಿದ ಹಾಗೆ, ಒಂದು ಬಿಂದು ವಿಷವು ನಮ್ಮನ್ನು ಪೂರ್ತಿ ಸಾಯಿಸುವ ಹಾಗೆ ಒಮ್ಮೆ ಸಣ್ಣ ಅಪನಂಬಿಕೆಯು ಉಂಟಾದರೆ ಆ ಸಂಬಂಧಗಳು ನಿಧಾನವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದ ನಮ್ಮ ಬದುಕು ಅರ್ಥಹೀನ ಆಗುತ್ತದೆ. ಉತ್ತಮ ಸಂಬಂಧವನ್ನು ಕದಡುವ ಈ ಕೆಳಗಿನ ಅಂಶಗಳು ನಮ್ಮ ಗಮನದಲ್ಲಿ ಇರಲಿ (Raja Marga Column).

1. ಫೇಕ್ ವ್ಯಕ್ತಿತ್ವ ಸಂಬಂಧಗಳಿಗೆ ಕೊಡಲಿ ಏಟು (Fake Personality)

ನಮ್ಮ ನಡೆ, ನುಡಿಯಲ್ಲಿ ಅಗಾಧವಾದ ವ್ಯತ್ಯಾಸಗಳು ನಮ್ಮ ಸಂಬಂಧಗಳಿಗೆ ಕೊಡಲಿಯ ಏಟು ಆಗುತ್ತವೆ. ನಮ್ಮ ನಡೆ, ನುಡಿ ಮತ್ತು ಭಾವನೆಗಳು ಒಂದೇ ಆಗಿಸುವ ಪ್ರಯತ್ನವನ್ನು ಮಾಡಿ ನೋಡಿ. ಅದೆಷ್ಟು ಕಷ್ಟ ಎಂದು ನಮ್ಮ ಗಮನಕ್ಕೆ ಬರುತ್ತವೆ. ಮುಖವಾಡ ಹಾಕಿದ ಬದುಕು ದೀರ್ಘ ಕಾಲ ಉಳಿಯಲು ಸಾಧ್ಯವೇ ಇಲ್ಲ!

Relationships

2. ಬೇಜವಾಬ್ದಾರಿತನದಿಂದ ನಿರ್ಲಕ್ಷ್ಯ ಮಾಡ್ತೀರಾ? (Irresponsible Behaviour)

ತನ್ನ ಪ್ರೀತಿ ಪಾತ್ರರನ್ನು ಪದೇಪದೆ ನಿರ್ಲಕ್ಷ್ಯ ಮಾಡುವ, ಅವರ ಭಾವನೆಗಳನ್ನು ಅವಗಣನೆ ಮಾಡುವ ನಮ್ಮ ವರ್ತನೆಗಳು ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಇರಿಸುವ ಕೆಲಸವೂ ತುಂಬಾ ಮುಖ್ಯ. ಈ ವಿಷಯದಲ್ಲಿ ಮೈ ಮರೆವು ಖಂಡಿತ ಸಮರ್ಥನೀಯ ಅಲ್ಲ!

3. ವಿಪರೀತವಾದ ಇಗೋವನ್ನು ಯಾರು ಒಪ್ತಾರೆ? (Ego kills relationship)

ಊಟದ ರುಚಿಗೆ ತಕ್ಕ ಉಪ್ಪು ಇರುವ ಹಾಗೆ ಇಗೋ ಇಲ್ಲದೆ ನಾವ್ಯಾರೂ ಬದುಕಲು ಸಾಧ್ಯ ಇಲ್ಲ. ಆದರೆ ಬೇರೆ ಯಾರನ್ನೂ ಒಪ್ಪದೇ ಇರುವ ಮನಸ್ಥಿತಿಯು ತುಂಬಾ ಅಪಾಯಕಾರಿ. ನಾನು ಹೇಳಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಮೈಂಡ್ ಸೆಟ್ ನಮ್ಮನ್ನು ಅಪಾಯದ ಅಂಚಿಗೆ ದೂಡಬಲ್ಲದು.

Relationship

4. ಸಂಬಂಧಗಳ ಅಸ್ಪಷ್ಟತೆ ಗೊಂದಲಕ್ಕೆ ತಳ್ಳುತ್ತದೆ (Conflict in relationship)

ನಾವು ಯಾರ ಜೊತೆಗಾದರೂ ಎರಡೇ ರೀತಿಯ ಸಂಬಂಧ ಹೊಂದಿರುವುದು ಸಾಧ್ಯ ಇದೆ. ಒಂದು ಆಫಿಷಿಯಲ್ ಮತ್ತು ಇನ್ನೊಂದು ಭಾವನಾತ್ಮಕ! ಯಾರ ಜೊತೆ ಯಾವ ಸಂದರ್ಭದಲ್ಲೆಲ್ಲಾ ಆಫಿಶಿಯಲ್ ಆಗಿರಬೇಕು ಮತ್ತು ಯಾವ ಸಂದರ್ಭದಲ್ಲಿ ಎಮೋಷನಲ್ ಆಗಿರಬೇಕು ಎಂದು ನಿರ್ಧಾರ ಮಾಡುವವರು ನಾವೇ! ಇಲ್ಲಿ ಎಡವಿದರೆ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ.

5. ತಪ್ಪುಗಳ ಸಮರ್ಥನೆ ಮಾಡುವುದು ಡೇಂಜರ್‌ (Mistakes and argument)

ತಪ್ಪು ಮಾಡುವುದು ಅತ್ಯಂತ ಸಹಜ. ತಪ್ಪನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ ತಪ್ಪನ್ನು ಒಪ್ಪಿಕೊಳ್ಳದೆ ಸಮರ್ಥನೆ ಮಾಡಲು ಹೊರಡುವುದು ಅಥವಾ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದು ಅಥವಾ ತಪ್ಪುಗಳನ್ನು ರಿಪೀಟ್ ಮಾಡುವುದು ನಮ್ಮ ಸಂಬಂಧಗಳನ್ನು ತೇಪೆ ಹಾಕಲೂ ಆಗದಷ್ಟು ಕೆಡಿಸಿಬಿಡುತ್ತವೆ. ಒಮ್ಮೆ ಕ್ಷಮೆಯನ್ನು ಕೇಳುವುದರಿಂದ ನಮ್ಮ ಸಂಬಂಧಗಳು ಉಳಿಯುತ್ತವೆ ಅಂತಾದರೆ ನಾನು ತಪ್ಪು ಮಾಡದಿದ್ದರೂ ಎಷ್ಟೋ ಬಾರಿ ಸಾರಿ ಕೇಳಿ ನಮ್ಮ ಸಂಬಂಧ ಉಳಿಸಿಕೊಂಡಿದ್ದೇನೆ.

relationship meter

6. ವಿಪರೀತ ಮೋಹ ಮತ್ತು ಅವಲಂಬನೆ ಬೇಕಾ? (Over Possessiveness)

ತಾನು ಪ್ರೀತಿಸುವವರು ತನ್ನನ್ನು ಮಾತ್ರ ಪ್ರೀತಿಸಬೇಕು ಎನ್ನುವ ಮೋಹ ಮತ್ತು ಭಾವನಾತ್ಮಕ ಅವಲಂಬನೆಯು ನಮ್ಮ ಸಂಬಂಧಗಳಿಗೆ ಅಪಾಯಕಾರಿ. ವಿಪರೀತ ಎನಿಸುವ ಅವಲಂಬನೆಯು ನಮ್ಮನ್ನು ದೂರ ಮಾಡುತ್ತದೆ.

7. ಕೃತಘ್ನತೆಯಿಂದ ಬೀಳುತ್ತೆ ಹೊಡೆತ (Ingratitude perosonality)

ನಮ್ಮ ಜೀವನದಲ್ಲಿ ಸಣ್ಣ ಸಣ್ಣ ಸಹಾಯ ಮಾಡಿದವರು ಮತ್ತು ಕೊಡುಗೆಗಳನ್ನು ನೀಡಿದವರು ನಮ್ಮ ಭಾವಕೋಶದಲ್ಲಿ ಶಾಶ್ವತ ಸ್ಥಾನ ಪಡೆಯಬೇಕು. ನಮಗೆ ಐದು ನಿಮಿಷ ಹ್ಯಾಪಿನೆಸನ್ನು ಕೊಟ್ಟವರು ಕೂಡ ನಮ್ಮ ಪ್ರೀತಿಯ ಹಕ್ಕುದಾರರು ಆಗಿರಬೇಕು. ಅಂತವರನ್ನು ಮರೆತರೆ ಸಂಬಂಧ ಬಿರುಕು ಬಿಡುವುದು ಖಂಡಿತ.

8. ಪದೇಪದೆ ಬದಲಾಗುವ ನಿಷ್ಠೆಯಿಂದ ಅಪಾಯ (Loyalty must)

ನಮ್ಮ ಆದ್ಯತೆಗಳು ಪದೇಪದೆ ಬದಲಾಗುತ್ತ ಹೋದಂತೆ ನಮ್ಮ ಸಂಬಂಧಗಳ ಒಳಗೆ ಒಡಕು ಉಂಟಾಗಬಹುದು. ತುಂಬಾ ಪ್ರೀತಿಪಾತ್ರರಿಗೆ ನಾವು ಕೊಡುವ ಸಮಯ, ಪ್ರೀತಿ ಮತ್ತು ಭಾವನೆಗಳಲ್ಲಿ ಕೊರತೆ ಉಂಟಾದಾಗ ಉತ್ತಮ ಸಂಬಂಧಗಳು ನಮ್ಮಿಂದ ದೂರ ಆಗುತ್ತವೆ.

Relationship problems

9. ಸಂವಹನದ ಕೊರತೆ ಮಾಡಿಕೊಳ್ಳಬೇಡಿ (Communication problem)

ನಮ್ಮಲ್ಲಿ ಎಷ್ಟೋ ತಪ್ಪು ಕಲ್ಪನೆ ಉಂಟಾಗಲು ಕಾರಣ ಸಂವಹನದ ಕೊರತೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ಉತ್ತಮ ಸಂವಹನ ನಡೆಯದೆ ಹೋದರೆ ತಪ್ಪು ಕಲ್ಪನೆಗಳು ಉಂಟಾಗಿ ಸಂಬಂಧಗಳು ಅರ್ಥವನ್ನೇ ಕಳೆದುಕೊಳ್ಳುತ್ತವೆ. ಪ್ರೀತಿ ಪಾತ್ರರೊಂದಿಗೆ ಮನಸು ಬಿಚ್ಚಿ ಮಾತಾಡುವ ಸಮಯ ಮತ್ತು ಸಂದರ್ಭಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು.

10. ಸುಳ್ಳು ಹೇಳಿದರೆ ಸಾವಿರ ಸಂಕಷ್ಟ (Lies prove dangerous)

ಪದೇಪದೆ ಸುಳ್ಳು ಹೇಳುವವರಿಗೆ ಹೆಚ್ಚು ಮೆಮೊರಿಯ ಪವರ್ ಇರಬೇಕು ಅನ್ನುತ್ತದೆ ಒಂದು ಚೈನೀಸ್ ಗಾದೆ! ಒಂದೆರಡು ಸುಳ್ಳುಗಳು ನಮ್ಮನ್ನು ಆ ಕಾಲಕ್ಕೆ ಸೇಫ್ ಮಾಡಬಹುದು. ಆದರೆ ಮುಂದೆ ಅದೇ ಸುಳ್ಳುಗಳು ಬಯಲಾಗುತ್ತ ಹೋದಂತೆ ನಮ್ಮ ವಿಶ್ವಾಸಾರ್ಹತೆಯು ಕಡಿಮೆ ಆಗುತ್ತದೆ. ನಾವು ಸವಕಲು ನಾಣ್ಯ ಆಗಿಬಿಡುತ್ತೇವೆ.

11. ವಿಪರೀತ ಸಿಟ್ಟು ಮತ್ತು ಸಿಡುಕುವುದು (Anger Management)

ಸಿಟ್ಟು ಎಷ್ಟೋ ಬಾರಿ ಒಳ್ಳೆಯ ಉದ್ದೇಶಕ್ಕೆ ಬಂದರೂ ಕೆಟ್ಟದಾದ ಪರಿಣಾಮವನ್ನು ಬಿಟ್ಟು ಹೋಗುತ್ತದೆ. ನಮ್ಮ ಪ್ರೀತಿ ನಿಜ ಎಂದಾದರೆ, ನಮ್ಮಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಎಂದಾದರೆ, ನಾವು ಅವರ ಸ್ಥಳದಲ್ಲಿ ಕುಳಿತು ಯೋಚನೆ ಮಾಡುತ್ತೇವೆ ಅಂತಾದರೆ ನಮಗೆ ಸಿಟ್ಟು ಬರಲು ಸಾಧ್ಯವೇ ಇಲ್ಲ!

ಇದನ್ನೂ ಓದಿ: Raja Marga : ಜಗತ್ತು ನೆನಪಿಡುವುದು ಮೊದಲಿಗರನ್ನು ಮಾತ್ರ! ನಿಮಗೂ ಹಲವು ಕ್ಷೇತ್ರಗಳು ಕಾದಿವೆ

12. ವಿಪರೀತವಾದ ನಿರೀಕ್ಷೆ ಇಟ್ಟುಕೊಳ್ತೀರಾ? (Over Expectations)

ನಮ್ಮ ಪ್ರೀತಿಯ ವ್ಯಕ್ತಿಗಳ ಬಗ್ಗೆ ನಮ್ಮ ಅತಿಯಾದ ನಿರೀಕ್ಷೆಗಳು ಎಲ್ಲ ಬಣ್ಣ ಮಸಿ ನುಂಗಲು ಕಾರಣ ಆಗುತ್ತದೆ. ನಾವು ನಿರೀಕ್ಷೆ ಮಾಡಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಹಠ ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ಬದಲಾವಣೆ ಮಾಡಲು ಹೋಗದೆ ಹಾಗೆಯೇ ಪ್ರೀತಿಸುವುದು ಉತ್ತಮ ನಿರ್ಧಾರ. ನಮ್ಮದಾದ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರುವುದು ಖಂಡಿತ ಸರಿ ಅಲ್ಲ.

ಉತ್ತಮವಾದ ಆರೋಗ್ಯಪೂರ್ಣ ಸಂಬಂಧಗಳು ನಮ್ಮನ್ನು ಖಂಡಿತವಾಗಿ ಬೆಳೆಸುತ್ತವೆ ಅನ್ನುವುದು ನೂರಕ್ಕೆ ನೂರು ನಿಜ. ನಮ್ಮನ್ನು ಪ್ರೀತಿ ಮಾಡುವವರ ಬಗ್ಗೆ ಸ್ವಾರ್ಥ ಇಲ್ಲದ ಪ್ರೀತಿ, ಒಂದು ಹಿಡಿಯಷ್ಟು ಕಾಳಜಿ, ಸದಾ ಜಾಗೃತವಾದ ನಂಬಿಕೆ ಮತ್ತು ಅವುಗಳ ಜೊತೆಗೆ ಒಂದಿಷ್ಟು ಕೊರತೆ ಆಗದ ಗೌರವವೂ ಇದ್ದರೆ ನಮಗೆ ಅಪರಿಮಿತವಾದ ಯಶಸ್ಸು ದೊರೆಯುವುದು ಖಂಡಿತ. ಏನಂತೀರಿ?

ಈ ಲೇಖನದ ಬಗ್ಗೆ ನಿಮಗೆ ಏನನಿಸುತ್ತದೆ? ಕಮೆಂಟ್‌ ಮಾಡಿ ತಿಳಿಸಿ

Continue Reading

ದೇಶ

Assembly Election Result 2023: ಮತಗಟ್ಟೆ ಸಮೀಕ್ಷೆಗಳು ಹೇಳಿದ್ದೇನು?

ಮತಗಟ್ಟೆ ಸಮೀಕ್ಷೆಗಳು (Exit poll 2023) ನೀಡಿರುವ ಫಲಿತಾಂಶ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಮಿಶ್ರಫಲ ನೀಡಿವೆ. ಮತಗಣನೆ ನಡೆದು ರಿಸಲ್ಟ್‌ ಘೋಷಣೆ (Assembly Election Result 2023) ಆಗುವ ಮುನ್ನ ಎಕ್ಸಿಟ್‌ ಪೋಲ್‌ಗಳ ಬಗ್ಗೆ ಒಂದು ನೋಟ ಇಲ್ಲಿದೆ.

VISTARANEWS.COM


on

Exit Poll_Vist
Koo

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ (Lok Sabha Election) ಮುಂಚೆ ನಡೆಯುತ್ತಿರುವ ಐದು ರಾಜ್ಯಗಳ ಎಲೆಕ್ಷನ್‌ನಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಈ ಕಾತರವನ್ನು ಮತಗಟ್ಟೆ ಸಮೀಕ್ಷೆಗಳು (Exit Polls Result 2023) ಕೊಂಚ ಮಟ್ಟಿಗೆ ತಗ್ಗಿಸಿವೆ. ಮಧ್ಯ ಪ್ರದೇಶದಲ್ಲಿ (Madhya Pradesh) ಬಿಜೆಪಿ ಮತ್ತು ಕಾಂಗ್ರೆಸ್ (Congress Party) ಮಧ್ಯೆ ಫೋಟೋ ಫಿನಿಶ್ ರಿಸಲ್ಟ್‌ ನಿರೀಕ್ಷಿಸಲಾಗುತ್ತಿದೆ. ಛತ್ತೀಸ್‌ಗಢದಲ್ಲಿ (Chhattisgarh) ಅಧಿಕಾರ ಉಳಿಸಿಕೊಳ್ಳುವ ಕಾಂಗ್ರೆಸ್, ಹೆಚ್ಚುವರಿಯಾಗಿ ತೆಲಂಗಾಣದಲ್ಲಿ (Telangana) ಪವರ್ ಪಡೆಯಲಿದೆ. ಇನ್ನು ರಾಜಸ್ಥಾನದಲ್ಲಿ (Rajasthan) ಇತಿಹಾಸ ಮರುಕಳಿಸಲಿದ್ದು, ಈ ಬಾರಿ ಬಿಜೆಪಿಗೆ (BJP Party) ಆಶೀರ್ವಾದ ಮಾಡಿದ್ದಾರೆ ಎಂಬುದು ಸಮೀಕ್ಷೆಗಳ ಸಾರಾಂಶ.

ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿತವಾಗಿರುವ ಈ ಐದು ರಾಜ್ಯಗಳ ಚುನಾವಣೆಯು ಫಲಿತಾಂಶವು ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಲಾಗುತ್ತಿದೆ. ಕಳೆದ ಎರಡು ಅವಧಿಯಲ್ಲಿ ಭರ್ಜರಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಮೂರನೇ ಅವಧಿಯಲ್ಲಿ ಅದನ್ನೇ ರಿಪೀಟ್ ಮಾಡುವ ಉತ್ಸಾಹದಲ್ಲಿದೆ. ಆದರೆ, ಈ ಐದು ರಾಜ್ಯಗಳ ಫಲಿತಾಂಶವು ಬಿಜೆಪಿಗೆ ನಿರಾಸೆ ಮೂಡಿಸಿದರೆ, ರಣತಂತ್ರದಲ್ಲಿ ಬದಲಾವಣೆ ಕಾಣಬಹುದು. ಹಾಗೆಯೇ, ಪ್ರತಿಪಕ್ಷಗಳಿಗೆ ಭೀಮ ಬಲ ಬರುವುದರಲ್ಲಿ ಸಂಶಯವೇ ಇಲ್ಲ. ಇಂಡಿಯಾ ಕೂಟ ಮತ್ತಷ್ಟು ಬಲಿಷ್ಠವಾಗುವುದರ ಜತೆಗೆ, ಕಾಂಗ್ರೆಸ್‌ ನೇತೃತ್ವಕ್ಕೆ ಉಳಿದ ಪಕ್ಷಗಳು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಈ ಚುನಾವಣೆಯಲ್ಲಿ ಉಚಿತ ಕೊಡುಗೆಗಳು ಭಾರೀ ಪರಿಣಾಮ ಬೀರಿರುವ ಸಾಧ್ಯತೆಯನ್ನು ಕಾಣಬಹುದು. ಇನ್ನೂ ವಾಸ್ತವಿಕ ಫಲಿತಾಂಶ ಪ್ರಕಟವಾಗಿಲ್ಲವಾದರೂ, ಎಕ್ಸಿಟ್ ಪೋಲ್‌ಗಳಲ್ಲಿ ಅಂಶಗಳನ್ನು ಗುರುತಿಸಬಹುದಾಗಿದೆ. ವಿಶೇಷವಾಗಿ ತೆಲಂಗಾಣ, ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಘೋಷಿಸಿರುವ ಉಚಿತ ಕೊಡುಗೆಗಳು ಹೆಚ್ಚಿನ ಸದ್ದು ಮಾಡಿದ್ದವು. ಹಾಗಾಗಿ, ಮತದಾರರು ಯಾರ ಕೊಡುಗೆಗಳಿಗೆ ಹೆಚ್ಚು ಮನ್ನಣೆ ನೀಡಿದ್ದಾರೆಂದು ಕಾದು ನೋಡಬೇಕು.

ತೆಲಂಗಾಣದಲ್ಲಿ ಕೆಸಿಆರ್‌ಗೆ ಟ್ರಬಲ್, ಕಾಂಗ್ರೆಸ್‌ಗೆ ಪವರ್

2014ರಲ್ಲಿ ಅಖಂಡ ಆಂಧ್ರ ಪ್ರದೇಶ ವಿಭಜನೆಯಾಗಿ ತೆಲಂಗಾಣ(Telangana Assembly Election) ಹೊಸ ರಾಜ್ಯವಾಗಿ ಉದಯಿಸಿತು. ಅಂದಿನಿಂದ ಇಂದಿಗೂ ಅಂದರೆ, ಸುಮಾರು ಹತ್ತು ವರ್ಷಗಳ ಅವಧಿಗೆ ಭಾರತ್ ರಾಷ್ಟ್ರ ಸಮಿತಿ-ಬಿಆರ್‌ಎಸ್ (ಈ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ- ಟಿಆರ್‌ಎಸ್) ಅಧಿಕಾರದಲ್ಲಿದೆ. ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ನೇತಾರ ಕೆ ಸಿ ಚಂದ್ರಶೇಖರ್ (KC Chandrashekhar Rao) ಅವರು ಜನಪ್ರಿಯ ಮುಖ್ಯಮಂತ್ರಿಯಾಗಿದ್ದು, ಜನಮಾನಸದಲ್ಲಿದ್ದಾರೆ. ಆದರೆ, 2023ರ ಚುನಾವಣೆಯಲ್ಲಿ ಅವರಿಗೆ ಆಘಾತ ಕಾದಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು(Telangana Exit Poll) ಭವಿಷ್ಯ ನುಡಿದಿವೆ. ಮತ್ತೊಂದೆಡೆ, ಸಂಪೂರ್ಣವಾಗಿ ನೆಲ ಕಚ್ಚಿದ್ದ ಕಾಂಗ್ರೆಸ್ ಪಕ್ಷ (Congress Party) ಪುಟಿದೇಳುವ ಭರವಸೆಯನ್ನು ಸಮೀಕ್ಷೆಯಲ್ಲಿ ಕಾಣಬಹುದು(Exit Polls Resutl 2023).

telangana exit poll

ತೆಲಂಗಾಣವು ಒಟ್ಟು 119 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 60 ಸ್ಥಾನಗಳನ್ನು ಗೆಲ್ಲಬೇಕು. ಈ ಹಿಂದಿನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಆರ್‌ಎಸ್‌ಗೆ ಈ ಭಾರಿ ಸೋಲು ಎಂದು ಬಹಳಷ್ಟು ಸಮೀಕ್ಷೆಗಳು ಹೇಳುತ್ತಿವೆ. ಮುಖ್ಯಮಂತ್ರಿ ಕೆಸಿಆರ್‌ ಈಗಲೂ ಜನಪ್ರಿಯ ನಾಯಕ. ಅವರ ಬಗ್ಗೆ ಜನರಲ್ಲಿ ಯಾವುದೇ ಅಸಮಾಧಾನವಿಲ್ಲ. ಆದರೆ, ಬಿಆರ್‌ಎಸ್‌ನ ಬಹುತೇಕ ಶಾಸಕರಿಗೆ ಆಡಳಿತ ವಿರೋಧಿ ಅಲೆ ಇದೆ. ಹಾಗಿದ್ದೂ, ಕೆಸಿಆರ್ ಹಾಲಿ ಶಾಸಕರಿಗೆ ಮಣೆ ಹಾಕಿರುವುದು ಉರುಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅಸಲಿಗೆ, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಚ್ಚರಿಯ ಗೆಲುವಿನ ಭವಿಷ್ಯ ನುಡಿದಿವೆ. ಬಹುಶಃ ಕರ್ನಾಟಕದ ರಿಸಲ್ಟ್ ತೆಲಂಗಾಣದಲ್ಲೂ ಪ್ರಭಾವ ಬೀರಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜತೆಗೆ, ಕಾಂಗ್ರೆಸ್ ಘೋಷಿಸಿರುವ 6 ಗ್ಯಾರಂಟಿಗಳು ತೆಲಂಗಾಣ ಮತದಾರರನ್ನು ಸೆಳೆಯುವ ಸಾಧ್ಯತೆಗಳನ್ನು ಸಮೀಕ್ಷೆಗಳು ತಿಳಿಸಿವೆ. ಆದರೆ, ಅಂತಿಮವಾಗಿ ಮತದಾರ ಯಾರಿಗೆ ಒಲಿದಿದ್ದಾನೆ ಎಂಬುದನ್ನು ಕಾದು ನೋಡಬೇಕು. ಡಿಸೆಂಬರ್ 3ರಂದು ರಿಸಲ್ಟ್ ಪ್ರಕಟವಾಗಲಿದೆ.

ಎಕ್ಸಿಟ್ ಪೋಲ್‌ಗಳು ಹೇಳೋದೇನು?

ಸಿಎನ್​​ಎನ್​ ಸಮೀಕ್ಷೆ: ಕಾಂಗ್ರೆಸ್: 56, ಬಿಆರ್​ಎಸ್​: 48, ಬಿಜೆಪಿ: 10: ಎಐಎಂಐಎಂ: 5
ಜನ್ ಕಿ ಬಾತ್ : ಕಾಂಗ್ರೆಸ್: 48-64, ಬಿಆರ್​ಎಸ್​: 40-55, ಬಿಜೆಪಿ: 7-13, ಎಐಎಂಐಎಂ: 4-7 ಸ್ಥಾನ
ಇಂಡಿಯಾ ಟಿವಿ- ಸಿಎನ್ಎಕ್ಸ್ ಬಿಆರ್​ಎಸ್​ 31-47, ಕಾಂಗ್ರೆಸ್: 63-79, ಬಿಜೆಪಿ 2-4,ಎಐಎಂಐಎಂ 5-7
ಜನ್ ಕಿ ಬಾತ್ ಬಿಆರ್​ಎಸ್​ 40-55, ಕಾಂಗ್ರೆಸ್ 48-64,ಬಿಜೆಪಿ 7-13,ಎಐಎಂಐಎಂ 4-7
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್​- ಆರ್​ಎಸ್​ 46-56.ಕಾಂಗ್ರೆಸ್ 58-68, ಬಿಜೆಪಿ 4-9,ಎಐಎಂಐಎಂ 5-7
ಟಿವಿ 9 ಭಾರತ್ ವರ್ಷ್ – ಪೋಲ್ಸ್ಟ್ರಾಟ್ ಬಿಆರ್​ಎಸ್​48-58,ಕಾಂಗ್ರೆಸ್ 49-59,ಬಿಜೆಪಿ 5-10,ಎಐಎಂಐಎಂ 6-8

ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳಲಿರುವ ಕಾಂಗ್ರೆಸ್, ಬಿಜೆಪಿಗೆ ನಿರಾಸೆ

ಉತ್ತರ ಭಾರತದ ಹಿಂದಿ ಬೆಲ್ಟ್‌ನ ಪ್ರಮುಖ ರಾಜ್ಯವಾಗಿರುವ ಛತ್ತೀಸ್‌ಗಢ ರಾಜ್ಯದಲ್ಲಿ (Chhattisgarh Assembly Election) ಕಾಂಗ್ರೆಸ್ ಪಕ್ಷವು (Congress Party) ಅಧಿಕಾರ ಉಳಿಸಿಕೊಂಡರೆ, ಭಾರತೀಯ ಜನತಾ ಪಾರ್ಟಿಗೆ (BJP Party) ನಿರಾಸೆ ಕಾದಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ಒಟ್ಟಾರೆ ಸಾರಾಂಶ. ಬಹುತೇಕ ಎಕ್ಸಿಟ್ ಪೋಲ್‌ಗಳು ಭಾರತೀಯ ಜನತಾ ಪಾರ್ಟಿಗಿಂತ ಆಡಳಿತಾರೂಢ ಕಾಂಗ್ರೆಸ್ ಮುಂದಿದೆ ಎಂಬುದನ್ನು ಸೂಚಿಸಿವೆ(Exit Polls Result 2023).

chattisgarh exit poll

ಛತ್ತೀಸ್‌ಗಢ ವಿಧಾನಸಭೆಯ ಎಲ್ಲಾ 90 ಸದಸ್ಯರನ್ನು ಆಯ್ಕೆ ಮಾಡಲು ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 48 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ 15 ಸ್ಥಾನಗಳನ್ನು ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಉತ್ತಮ ಅಂತರದಿಂದ ಸೋಲಿಸಿ 3 ಚುನಾವಣೆಗಳ ನಂತರ ಅಧಿಕಾರಕ್ಕೆ ಬಂದಿತು.

ಈಗಿನ ಎಕ್ಸಿಟ್ ಪೋಲ್‌ಗಳ ಪ್ರಕಾರ, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ಪಕ್ಷದ ನಾಯಕ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದರು. ಛತ್ತೀಸ್‌ಗಢದಲ್ಲೂ ಉಚಿತ ಕೊಡುಗೆಗಳು ಪರಿಣಾಮ ಬೀರಿರುವ ಸಾಧ್ಯತೆಗಳಿವೆ.

2023 ರ ವಿಧಾನಸಭಾ ಚುನಾವಣೆಯಲ್ಲಿ, 18,833 ಮತಗಟ್ಟೆಗಳಲ್ಲಿ 81,41,624 ಪುರುಷರು, 81,72,171 ಮಹಿಳೆಯರು ಮತ್ತು 684 ತೃತೀಯ ಲಿಂಗಿಗಳು ಸೇರಿದಂತೆ 1,63,14,479 ಮತದಾರರು ಮತ ಚಲಾಯಿಸಿದದರು. ಕಾಂಗ್ರೆಸ್ ನ ಪ್ರಮುಖ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಮತ್ತು ವಿಧಾನಸಭಾ ಸ್ಪೀಕರ್ ಚರಣ್ ದಾಸ್ ಮಹಂತ್ ಸೇರಿದ್ದಾರೆ.

ಎಕ್ಸಿಟ್ ಪೋಲ್‌ಗಳು ಹೇಳೋದೇನು?

ಎಬಿಪಿ ನ್ಯೂಸ್-ಸಿ ವೋಟರ್: ಬಿಜೆಪಿ 36-48, ಕಾಂಗ್ರೆಸ್​ 41-53, ಬಿಎಸ್​ಪಿ 0, ಇತರ 0-4
ದೈನಿಕ್ ಭಾಸ್ಕರ್: ಬಿಜೆಪಿ 35-45, ಕಾಂಗ್ರೆಸ್​ 46-55, ಬಿಎಸ್​ಪಿ 0, ಇತರ 0-10
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ: ಬಿಜೆಪಿ 36-46,ಕಾಂಗ್ರೆಸ್​ 40-50, ಬಿಎಸ್​ಪಿ 0,ಇತರ 1-5
ಇಂಡಿಯಾ ಟಿವಿ- ಸಿಎನ್ಎಕ್ಸ್: ಬಿಜೆಪಿ 30-40,ಕಾಂಗ್ರೆಸ್​ 46-56,ಬಿಎಸ್​ಪಿ 0,ಇತರ 3-5
ಜನ್ ಕಿ ಬಾತ್: ಬಿಜೆಪಿ 34-45,ಕಾಂಗ್ರೆಸ್​ 42-53,ಬಿಎಸ್​ಪಿ 0,ಇತರ 3
ನ್ಯೂಸ್ 24-ಟುಡೇಸ್ ಚಾಣಕ್ಯ: ಬಿಜೆಪಿ 33.ಕಾಂಗ್ರೆಸ್​ 57, ಬಿಎಸ್​ಪಿ 0,ಇತರ 0
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್: ಬಿಜೆಪಿ 34-42, ಕಾಂಗ್ರೆಸ್​ 44-52,ಬಿಎಸ್​ಪಿ 0,ಇತರ 00-02
ಟೈಮ್ಸ್ ನೌ-ಇಟಿಜಿ: ಬಿಜೆಪಿ 32-40, ಕಾಂಗ್ರೆಸ್​ 48-56,ಬಿಎಸ್​ಪಿ 0,ಇತರ 2-4
ಟಿವಿ 9 ಭಾರತ್ ವರ್ಷ್ – ಪೋಲ್ಸ್ಟ್ರಾಟ್: ಬಿಜೆಪಿ 35-45,ಕಾಂಗ್ರೆಸ್​ 40-50,ಬಿಎಸ್​ಪಿ 0,ಇತರ 0-3

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಕನಿಷ್ಠ 31% ಮತದಾರರು ಕಾಂಗ್ರೆಸ್​ನ ಭೂಪೇಶ್ ಬಘೇಲ್ ಅವರನ್ನು ಆಯ್ಕೆ ಮಾಡಿದರೆ, 21% ಬಿಜೆಪಿಯ ರಮಣ್ ಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ.

ರಾಜಸ್ಥಾನದಲ್ಲಿ ಹಿಸ್ಟರಿ ರಿಪೀಟ್! ಬಿಜೆಪಿಗೆ ಅಧಿಕಾರ, ಕಾಂಗ್ರೆಸ್‌ಗೆ ತಿರಸ್ಕಾರ!

200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ (Rajasthan Exit Poll) ಅಧಿಕಾರಕ್ಕೆ ಏರಲು 100 ಕ್ಷೇತ್ರಗಳನ್ನು ಗೆಲ್ಲಬೇಕು. ರಾಜಸ್ಥಾನದ ವಿಷಯದಲ್ಲಿ ರಾಜಕಾರಣ ಬೇರೆಯದ್ದೇ ರೀತಿಯಲ್ಲಿ ನಡೆಯುತ್ತಿದೆ. ಇಲ್ಲಿ ಒಂದು ಅವಧಿಗೆ ಆಯ್ಕೆಯಾದವರು ಮತ್ತೊಂದು ಅವಧಿಗೆ ಆಯ್ಕೆಯಾಗುವುದಿಲ್ಲ. ಹಾಗಾಗಿ, ಈಗ ಪ್ರಕಟವಾಗಿರುವ ಎಕ್ಸಿಟ್‌ ಪೋಲ್‌ಗಳು ಕೂಡ ಇದೇ ಟ್ರೆಂಡ್ ಊಹಿಸಿವೆ. ಕಾಂಗ್ರೆಸ್ ಪಕ್ಷಕ್ಕೆ (Congress Party) ಅಧಿಕಾರ ನಷ್ಟವಾಗಲಿದ್ದು, ಭಾರತೀಯ ಜನತಾ ಪಾರ್ಟಿ ಲಾಭವಾಗಲಿದೆ(BJP Party). ಬಹುತೇಕ ಎಕ್ಸಿಟ್ ಪೋಲ್‌ಗಳು ಇದೇ ಟ್ರೆಂಡ್ ಅನ್ನು ಗಮನಿಸಿವೆ(Exit Polls Result 2023).

rajasthan exit poll

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿಗೆ ಅಧಿಕಾರವನ್ನು ನೀಡಿವೆ. ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ವಂಚಿತವಾಗಲಿದೆ. ಇಟಿಜಿ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್: 56-72; ಬಿಜೆಪಿ: 108-128; ಇತರರು: 13-21 ಸ್ಥಾನಗಳನ್ನು ಗೆಲ್ಲಲಿದ್ದರೆ, ಪಿಎಂಎಆರ್​ಕ್ಯೂ ಪ್ರಕಾರ, ಕಾಂಗ್ರೆಸ್: 69-81 ಬಿಜೆಪಿ: 105-125; ಇತರರು: 5-15 ಹಾಗೂ ಟಿವಿ 9 ಭಾರತ್ ವರ್ಷ್​ -ಪೋಲ್ಸ್ಟ್ರಾಟ್ ಸಮೀಕ್ಷೆಯು ಬಿಜೆಪಿ 100-110 ಕಾಂಗ್ರೆಸ್ +: 90-110; ಇತರರು: 05-15 ಸ್ಥಾನಗಳನ್ನು ಗೆಲ್ಲಲಿದ್ದಾರೆಂದು ಹೇಳಿದೆ.

ಅದೇ ರೀತಿ ಜನ್ ಕಿ ಬಾತ್ ಸಮೀಕ್ಷೆಯು ಬಿಜೆಪಿ: 100-122 ಕಾಂಗ್ರೆಸ್: 62-85 ಇತರರು: 14-15 , ಸಿಎನ್​ಎನ್​​ 18 ಸಮೀಕ್ಷೆಯು, ಬಿಜೆಪಿ: 111, ಕಾಂಗ್ರೆಸ್: 74 ,ಇತರೆ: 14 ಹಾಗೂ ಸಟ್ಟಾ ಬಜಾರ್ ಬಿಜೆಪಿ- 115, ಕಾಂಗ್ರೆಸ್- 68 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

ಬಹುತೇಕ ಸಮೀಕ್ಷೆಗಳ ಪ್ರಕಾರ ಈ ಬಾರಿ ಮತ್ತೆ ಭಾರತೀಯ ಜನತಾ ಪಾರ್ಟಿ ಅಧಿಕಾರ ಪಡೆಯುವುದು ಖಚಿತ. ಆಡಳಿತಾರೂಢ ಕಾಂಗ್ರೆಸ್ ಸೋಲಲಿದೆ. ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ಅವರು ಮರಳಿ ಅಧಿಕಾರ ಪಡೆಯುವುದಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಉಚಿತ ಕೊಡುಗೆಗಳು ಜನರನ್ನು ಸೆಳೆದಿದ್ದರೂ, ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರ ವಿರುದ್ಧದ ಆಡಳಿತ ವಿರೋಧಿ ಅಲೆ ಕೆಲಸ ಮಾಡಿರುವುದನ್ನು ಸಮೀಕ್ಷೆಗಳು ಗಮನಿಸಿವೆ. ಹಾಗಾಗಿ, ಗೆಹ್ಲೋಟ್ ಅವರ ಬಗ್ಗೆ ಒಳ್ಳೆಯ ಭಾವನೆ ಇದ್ದರೂ, ಅದನ್ನು ಬಹುಮತವಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಸಮೀಕ್ಷೆಗಳಲ್ಲಿ ಗಮನಿಸಬಹುದು.

199 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5,25,38,105 ಮತದಾರರಲ್ಲಿ 1,88,27,294 ಮಹಿಳೆಯರು, 2,03,83,757 ಪುರುಷರು ಮತ್ತು 348 ತೃತೀಯ ಲಿಂಗಿ ಮತದಾರರು ಸೇರಿದಂತೆ 3,92,11,399 ಮತದಾರರು ಮತ ಚಲಾಯಿಸಿದ್ದಾರೆ. ಶಿಕ್ಷಣ, ಮಹಿಳಾ ಸುರಕ್ಷತೆ ರಾಜಸ್ಥಾನ ಚುನಾವಣೆಯ ಪ್ರಮುಖ ಕಾರ್ಯಸೂಚಿಗಳಾಗಿದ್ದವು.

ಮಧ್ಯಪ್ರದೇಶದಲ್ಲಿ ‘ಕೈ’ನತ್ತ ವಾಲುತ್ತಿದ್ದ ಮತದಾರರನ್ನು ಸೆಳೆದ ಬಿಜೆಪಿ!

230 ಕ್ಷೇತ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ (Madhya Pradesh Election) ಅಧಿಕಾರಕ್ಕೇರಲು 116 ಸ್ಥಾನ ಗೆಲ್ಲಬೇಕು. ಆದರೆ, ಈಗ ಪ್ರಕಟವಾಗಿರುವ ಮತಗಟ್ಟೆ ಸಮೀಕ್ಷೆಗಳ ಪ್ರಕಾರ(Exit Polls Result 2023) ಫೋಟೋ ಫಿನಿಷ್ (Photo Finish) ಆಗುವ ಸಾಧ್ಯತೆಗಳಿವೆ. ಚುನಾವಣೆ ಘೋಷಣೆ ಮುನ್ನ ಕಾಂಗ್ರೆಸ್ (Congress Party) ಎಲ್ಲ ರೀತಿಯಿಂದಲೂ ಮುಂದಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಭಾರತೀ ಜನತಾ ಪಾರ್ಟಿ (BJP Party) ಪ್ರಕಟಿಸಿದ ಕೆಲವು ಯೋಜನೆಗಳು ಆಚೆ ಹೋಗುತ್ತಿದ್ದ ಮತದಾರರನ್ನು ಸೆಳೆಯಲು ಯಶಸ್ವಿಯಾಗಿದೆ ಎಂಬುದು ವೇದ್ಯವಾಗುತ್ತಿದೆ(MP Exit Poll).

mp election exit poll

ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 95ರಿಂದ 115 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ಗೆ 105ರಿಂದ 120 ದೊರೆಯಲಿವೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 102ರಿಂದ 125 ಮತ್ತು ಬಿಜೆಪಿ100ರಿಂದ 123 ಹಾಗೂ ರಿಪಬ್ಲಿಕ್ ಟಿವಿಯ ಪ್ರಕಾರ, ಕಾಂಗ್ರೆಸ್ 97ರಿಂದ 107 ಮತ್ತು ಬಿಜೆಪಿ 118ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ. ಟಿವಿ9 ಭರತವರ್ಷದ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 106ರಿಂದ 116 ಮತ್ತು ಕಾಂಗ್ರೆಸ್ 111ರಿಂದ 117ಕ್ಷೇತ್ರಗಳನ್ನು ಗೆಲ್ಲಲಿದೆ.

ಈವರೆಗೆ ಪ್ರಕಟವಾಗಿರುವ ಎಕ್ಸಿಟ್‌ ಪೋಲ್ಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಿವೆ. 15 ವರ್ಷಕ್ಕೂ ಹೆಚ್ಚು ಅವಧಿಗೆ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ತಟ್ಟಿರುವ ಸಂಗತಿ ವ್ಯಕ್ತವಾಗಿದೆ. ಹಾಗಂತ, ಬಿಜೆಪಿಯ ವಿರುದ್ಧ ಮತದಾರರು ಸಂಪೂರ್ಣ ತಿರಾಸ್ಕಾರವನ್ನು ತೋರಿಲ್ಲ ಎಂಬುದು ಗೊತ್ತಾಗುತ್ತದೆ. ಮತದಾರರು ಗೊಂದಲದಲ್ಲಿರುವುದು ಪಕ್ಕಾ ಆಗಿದೆ. ಹಾಗಾಗಿ, ಭಾನುವಾರ ಫಲಿತಾಂಶದ ದಿನ ಒಂಚೂರು ಅಚ್ಚರಿಯನ್ನು ನಿರೀಕ್ಷಿಸಬಹುದಾಗಿದೆ.

ಮಧ್ಯ ಪ್ರದೇಶದಲ್ಲಿ ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಈ ಬಾರಿ ತುಸು ಹಿನ್ನಡೆಗೆ ಸರಿಸಿದ್ದು, ಕೂಡ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಚುನಾವಣೆ ನಡೆಯುವ ಆರು ತಿಂಗಳ ಮುಂಚೆ ಮತದಾರರು ಸಂಪೂರ್ಣ ಒಲವು ಕಾಂಗ್ರೆಸ್ ಪರವಾಗಿತ್ತು ಎನ್ನಲಾಗಿದೆ. ಕೊನೆ ಗಳಿಗೆಯಲ್ಲಿ ಎಂಪಿ ಸಿಎಂ ಪ್ರಕಟಿಸಿದ ಉಚಿತ ಕೊಡುಗೆಗಳು ಮತದಾರರನ್ನು ಬಿಜೆಪಿಯತ್ತ ಎಳೆದು ತಂದಿರುವ ಸಾಧ್ಯತೆ ಇದೆ. ಅದರಲ್ಲೂ ಮಹಿಳಾ ಮತದಾರರನ್ನು ಸೆಳೆಯಲು ಕಾರಣವಾಗಿದ್ದೇ, ಫೋಟೋ ಫಿನಿಶ್ ಫಲಿತಾಂಶಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Assembly Elections 2023: ಪಂಚರಾಜ್ಯ Result ಬಳಿಕ ರೆಸಾರ್ಟ್‌ ಪಾಲಿಟಿಕ್ಸ್?‌ ರೆಡಿ ಎಂದ ಡಿಕೆಶಿ

Continue Reading

ದೇಶ

Election Results 2023: ನಾಲ್ಕೂ ರಾಜ್ಯಗಳಲ್ಲಿ ಪೈಪೋಟಿ ಹೇಗಿದೆ? ಯಾರಿಗೆ ವಿಜಯಮಾಲೆ?

Election Results 2023: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದೇಶಾದ್ಯಂತ ಕುತೂಹಲ ಹೆಚ್ಚಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದೆ.

VISTARANEWS.COM


on

Assembly Election Results 2023 Live
Koo

ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Election 2024) ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ (Election Results 2023) ಕ್ಷಣಗಣನೆ ಆರಂಭವಾಗಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಭಾನುವಾರ (ಡಿಸೆಂಬರ್‌ 3) ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಲಿದೆ. ಇದಕ್ಕಾಗಿ ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಮಧ್ಯಾಹ್ನದ ವೇಳೆಗೆ ನಾಲ್ಕೂ ರಾಜ್ಯಗಳ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಮತಗಟ್ಟೆ ಸಮೀಕ್ಷೆ, ಆಂತರಿಕ ವರದಿಗಳನ್ನು ಗಮನಿಸಿರುವ ರಾಜಕೀಯ ಪಕ್ಷಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿವೆ.

ಮಧ್ಯಪ್ರದೇಶ

ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾಂಗ್ರೆಸ್‌ಅನ್ನು ಬಿಜೆಪಿ ಓವರ್‌ಟೇಕ್‌ ಮಾಡಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್‌ ಇನ್ನಿಲ್ಲದ ರಣತಂತ್ರ ರೂಪಿಸಿದೆ. ಮತ್ತೊಂದೆಡೆ, ಕಳೆದ ಬಾರಿ ಸಾಧಿಸದ ಬಹುಮತವನ್ನು ಈ ಬಾರಿ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿದೆ. ರಾಜ್ಯದಲ್ಲಿ ಶೇ.71ರಷ್ಟು ಮತದಾನವಾಗಿದೆ.

ಒಟ್ಟು ಸ್ಥಾನ 230
ಮ್ಯಾಜಿಕ್‌ ನಂಬರ್‌ 116

shivaraj singh chouhan

ರಾಜಸ್ಥಾನ

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಶೋಕ್‌ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, 2018ರಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯು ಈ ಬಾರಿ ಗೆದ್ದು, ಮತ್ತೆ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಹಾಗಾಗಿಯೇ, ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿಯು ಜನರಿಗೆ ಉಚಿತ ಕೊಡುಗೆಗಳ ಮಹಾಪೂರವೇ ಹರಿಸಿವೆ. ಹಾಗಾಗಿ, ಈ ಬಾರಿ ಮತದಾರನ ಒಲವು ಯಾರ ಪರ ಇದೆ ಎಂಬುದು ಕುತೂಹಲ ಕೆರಳಿಸಿದೆ. ರಾಜಸ್ಥಾನದಲ್ಲಿ ಶೇ.75ರಷ್ಟು ಮತದಾನ ನಡೆದಿದೆ.

ಒಟ್ಟು ಕ್ಷೇತ್ರ: 200
ಮ್ಯಾಜಿಕ್‌ ನಂಬರ್‌: 101

Ashok Gehlot

ಛತ್ತೀಸ್‌ಗಢ

ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್‌ ಇದ್ದರೆ, ಮರಳಿ ಗದ್ದುಗೆ ಪಡೆಯುವ ಉತ್ಸಾಹ ಬಿಜೆಪಿಯಲ್ಲಿದೆ. ಸ್ಥಳೀಯ ಪಕ್ಷಗಳು ಕೂಡ ಪೈಪೋಟಿ ನೀಡಲು ಸಜ್ಜಾಗಿವೆ. ಇದರಿಂದಾಗಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಫಲಿತಾಂಶವು ಕುತೂಹಲ ಕೆರಳಿಸಿದೆ. ‌ಛತ್ತೀಸ್‌ಗಢದಲ್ಲಿ ಶೇ.68ರಷ್ಟು ಮತದಾನ ದಾಖಲಾಗಿದೆ.

ಒಟ್ಟು ಕ್ಷೇತ್ರ: 90
ಮ್ಯಾಜಿಕ್‌ ನಂಬರ್‌: 46

Bhupesh Baghel

ಇದನ್ನೂ ಓದಿ: Deepfake: ಚುನಾವಣೆ ಗೆಲ್ಲಲು ಕಾಂಗ್ರೆಸ್‌ನಿಂದ ಡೀಪ್‌ಫೇಕ್‌ ಬಳಕೆ; ದೂರು ದಾಖಲು

ತೆಲಂಗಾಣ

ತೆಲಂಗಾಣದಲ್ಲೂ ಸರ್ಕಾರ ರಚನೆಗೆ ಹಲವು ಕಸರತ್ತು ನಡೆಸಲಾಗಿದ್ದು, ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. ತೆಲಂಗಾಣದಲ್ಲಿ ಬಿಆರ್‌ಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಫೈಟ್‌ ಇದೆ. ಅತ್ತ, ಸಿಎಂ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಹ್ಯಾಟ್ರಿಕ್‌ ಕನಸು ಚಿಗುರೊಡೆದಿದ್ದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸುವ ನಿರೀಕ್ಷೆ ಇದೆ.

ಒಟ್ಟು ಕ್ಷೇತ್ರ 119
ಮ್ಯಾಜಿಕ್‌ ನಂಬರ್‌ 60

brs poll manifesto, Free insurance, rss 400 lpg cylinder and many more scheme

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷದ ಷಷ್ಠಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavihsya
Koo

ಚಂದ್ರನು ಸಿಂಹ ರಾಶಿಯಿಂದ ಭಾನುವಾರ ರಾತ್ರಿ 10:50ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಅನಗತ್ಯವಾಗಿ ಮಾನಸಿಕ ಒತ್ತಡವನ್ನು ತಂದುಕೊಳ್ಳುವುದು ಬೇಡ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ಸಿಂಹ ರಾಶಿಯವರು ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ವಿಚಲಿತರಾಗುವಂತೆ ಮಾಡಬಹುದು. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (3-12-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ.
ತಿಥಿ: ಷಷ್ಠಿ 19:26 ವಾರ: ರವಿವಾರ
ನಕ್ಷತ್ರ:ಆಶ್ಲೇಷಾ 21:34 ಯೋಗ: ಇಂದ್ರ 20:54
ಕರಣ: ವಣಿಜ 19:26 ಅಮೃತಕಾಲ: ರಾತ್ರಿ 7:49 ರಿಂದ 9:36ರವರೆಗೆ
ದಿನದ ವಿಶೇಷ: ವಿಶ್ವ ಅಂಗವಿಕಲ ದಿನ, ತಲಕಾಡು ವೈದ್ಯೇಶ್ವರ ರಥ, ನಂಜನಗೂಡು ಅಷ್ಟತೀರ್ಥ

ಸೂರ್ಯೋದಯ : 06:53  ಸೂರ್ಯಾಸ್ತ : 05:39

ರಾಹುಕಾಲ : ಸಾಯಂಕಾಲ 4.30 ರಿಂದ 6.00
ಗುಳಿಕಕಾಲ: ಸಾಯಂಕಾಲ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಅನಗತ್ಯವಾಗಿ ಮಾನಸಿಕ ಒತ್ತಡವನ್ನು ತಂದುಕೊಳ್ಳುವುದು ಬೇಡ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಉತ್ಸಾಹದಿಂದ ಕಾಲ ಕಳೆಯುವಿರಿ. ಯಾರಾದರೂ ಆರ್ಥಿಕ ಸಹಾಯವನ್ನು ಕೇಳಬಹುದು. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ‌ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಅನಾವಶ್ಯಕ ವಿಚಾರಗಳಿಂದ ಮಾನಸಿಕವಾಗಿ ವಿಚಲಿತರಾಗುವುದು ಬೇಡ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಕೌಟುಂಬಿಕವಾಗಿ ಉತ್ತಮ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಅನೇಕ ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುರಿ. ಸಂಗಾತಿಯೊಂದಿಗೆ ಪ್ರಮುಖ ಯೋಜನೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ವಿಚಲಿತರಾಗುವಂತೆ ಮಾಡಬಹುದು. ಕುಲ ದೇವರ ಆರಾಧನೆ, ಕ್ಷೇತ್ರ ದರ್ಶನದಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಜವಾಬ್ದಾರಿ ಹೆಚ್ಚಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬ ಸದಸ್ಯರ ಬೆಂಬಲ ದೊರೆಯಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಮಾನಸಿಕ ಒತ್ತಡದಿಂದ ದೂರವಿರಲು ಯೋಗ, ಪ್ರಾಣಾಯಾಮ, ಧ್ಯಾನ ಮಾಡಿ. ಆರ್ಥಿಕ ಸಹಾಯವನ್ನು ಪಡೆಯಬೇಕಾಗಬಹುದು. ಆಪ್ತರೊಂದಿಗೆ ಸಮಯ ಕಳೆಯಲು ಅವಕಾಶವಿದು. ಕುಟುಂಬದವರ ಸಹಕಾರ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ಅನಿರೀಕ್ಷಿತ ಪ್ರಯಾಣ ಮಾಡುವಿರಿ. ದೇಹದ ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಒತ್ತಡದಿಂದ ಮನಸ್ಸಿನ ಹತೋಟಿ ತಪ್ಪುವ ಸಾಧ್ಯತೆ ಇದೆ, ಹೀಗಾಗಿ ತಾಳ್ಮೆವಹಿಸಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದ್ದು, ಆರ್ಥಿಕವಾಗಿ ಬಲಿಷ್ಠರಾಗುವಿರಿ. ಆದಾಯದ ಮೂಲಗಳು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರೋಗ್ಯದ ಕಡೆಗೆ ಹೆಚ್ಚು ಗಮನ ಇರಲಿ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಕುಟುಂಬದ ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಆಪ್ತರೊಂದಿಗೆ ಸಮಯ ಕಳೆಯವಿರಿ. ಅನೇಕ ಭಿನ್ನಾಭಿಪ್ರಾಯಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು, ಮಾನಸಿಕ ಆರೋಗ್ಯಕ್ಕಾಗಿ ದತ್ತಾತ್ರೇಯ ಗುರುಗಳ ಆರಾಧನೆ ಮಾಡಿ. ಆರೋಗ್ಯ ಮಾಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಉತ್ತಮ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಕೀರ್ತಿ ಸಿಗಲಿದೆ. ಅನಾವಶ್ಯಕವಾಗಿ ಒತ್ತಡಕ್ಕೆ ಒಳಗಾಗುವುದು ಬೇಡ. ಆರ್ಥಿಕ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತರಿಂದ ಉಡುಗೊರೆ ಸಿಗುವುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ದೈಹಿಕ ಆರೋಗ್ಯ ಉತ್ತಮವಾಗಿರಲಿದ್ದು, ಮಾನಸಿಕ ಆರೋಗ್ಯಕ್ಕಾಗಿ ಹಿಂದೆ ನಡೆದ ಘಟನೆ ನೆನಪಿಸಿ ಕೊರಗುವುದು ಬೇಡ. ಸಂಗಾತಿಯ ಮಾತುಗಳು ಅಹಿತಕರ ಎನಿಸಬಹುದು. ಕುಟುಂಬದ ಸದಸ್ಯರ ಅಡ್ಡಿಯ ಕಾರಣದಿಂದ ನಿಮ್ಮ ದಿನ ಸ್ವಲ್ಪ ಏರುಪೇರಾಗಬಹುದು. ಆಪ್ತರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

Continue Reading
Advertisement
Rain disrupted for two more days
ಉಡುಪಿ18 mins ago

Karnataka Weather: ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಮಳೆಯಾಟ!

Healthy relationship
ಅಂಕಣ23 mins ago

Raja Marga Column : ಚೆನ್ನಾಗಿದ್ದ ಸಂಬಂಧಗಳು ಕೆಡೋದ್ಯಾಕೆ? ಇಲ್ಲಿವೆ 12 ಕಾರಣಗಳು

Exit Poll_Vist
ದೇಶ38 mins ago

Assembly Election Result 2023: ಮತಗಟ್ಟೆ ಸಮೀಕ್ಷೆಗಳು ಹೇಳಿದ್ದೇನು?

Assembly Election Results 2023 Live
ದೇಶ43 mins ago

Election Results 2023: ನಾಲ್ಕೂ ರಾಜ್ಯಗಳಲ್ಲಿ ಪೈಪೋಟಿ ಹೇಗಿದೆ? ಯಾರಿಗೆ ವಿಜಯಮಾಲೆ?

Girl Child
ಕರ್ನಾಟಕ1 hour ago

ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Dina Bhavihsya
ಪ್ರಮುಖ ಸುದ್ದಿ2 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Assembly Election Results 2023
Live News7 hours ago

Election Results 2023 Live: ಕೆಲವೇ ಕ್ಷಣಗಳಲ್ಲಿ 4 ರಾಜ್ಯಗಳ ಚುನಾವಣೆ ಫಲಿತಾಂಶ; ಇಲ್ಲಿದೆ ಕ್ಷಣಕ್ಷಣದ ಅಪ್‌ಡೇಟ್ಸ್

Kapil Sharma And Sunil Grover
ಕಿರುತೆರೆ/ಒಟಿಟಿ7 hours ago

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

women seriously injured
ಕರ್ನಾಟಕ7 hours ago

Kalaburagi News: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರಿಗೆ ಗಂಭೀರ ಗಾಯ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Dina Bhavihsya
ಪ್ರಮುಖ ಸುದ್ದಿ2 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ14 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

ಟ್ರೆಂಡಿಂಗ್‌