ವಿಸ್ತಾರ ಸಂಪಾದಕೀಯ: ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದಿದೆ ಸಂಶೋಧನಾ ವರದಿ, ಇನ್ನಾದರೂ ಕೇಂದ್ರ ಸ್ಪಷ್ಟ ನಿರ್ಧಾರಕ್ಕೆ ಬರಲಿ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದಿದೆ ಸಂಶೋಧನಾ ವರದಿ, ಇನ್ನಾದರೂ ಕೇಂದ್ರ ಸ್ಪಷ್ಟ ನಿರ್ಧಾರಕ್ಕೆ ಬರಲಿ

ಬೆಂಗಳೂರಿನ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ ಕೈಗೊಂಡ ಸಂಶೋಧನೆಯು, ಅಡಿಕೆ ಸೇವನೆ ಆರೋಗ್ಯ ಹಾನಿಕಾರವಲ್ಲ ಎಂದು ಸ್ಪಷ್ಟವಾಗಿ ಸಾರಿದೆ. ಅಡಿಕೆ ಔಷಧೀಯ ಗುಣಗಳು ಹೊಂದಿವೆ ಎಂದೂ ತಿಳಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ದ್ವಂದ್ವ ನಿಲುವು ಬಿಟ್ಟು ಅಡಿಕೆ ಬೆಳೆಗಾರರ ಪರ ನಿಲುವು ತಳೆಯಬೇಕು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಅಡಿಕೆ ಸೇವನೆಯು ಯಾವುದೇ ರೀತಿಯಲ್ಲೂ ಆರೋಗ್ಯಕ್ಕೆ ಮಾರಕವಲ್ಲ ಮತ್ತು ಇದರಲ್ಲಿ ಔಷಧೀಯ ಗುಣಗಳಿವೆ ಎಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ ಕೈಗೊಂಡ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಹಿಂದೆ ಕೆಲವು ಆಧಾರ ರಹಿತ ವರದಿಗಳು ಅಡಿಕೆ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದ್ದವು. ಹಾಗಾಗಿ, ಈ ಹೊಸ ಸಂಶೋಧನಾ ವರದಿಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ಜತೆಗೆ, ರಾಜ್ಯದ ಅಡಿಕೆ ಕೃಷಿ ಬೆಳೆಗಾರರಿಗೆ ಇದು ಖುಷಿ ಕೊಡುವ ಸಂಗತಿಯಾಗಿದೆ. ಅಡಿಕೆಯು ಆರೋಗ್ಯಕ್ಕೆ ಹಾನಿಕರವೇ, ಆರೋಗ್ಯಕಾರಕವೇ ಎಂಬ ಕುರಿತು ಹಲವು ವರ್ಷಗಳಿಂದಲೂ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತಲೇ ಇದೆ. ಈಗ ಅಡಿಕೆ ಆರೋಗ್ಯಕಾರಕ ಎಂದು ಸಂಗತಿ ‘ಸತ್ಯ’ವಾಗಿದ್ದು, ಬೆಳೆಗಾರರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರವು ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಹಾಗಾಗಿ, ಬೆಂಗಳೂರಿನ ಎಂ ಎಸ್ ರಾಮಯ್ಯ ವಿಶ್ವವಿದ್ಯಾಲಯಕ್ಕೆ ಈ ಬಗ್ಗೆ ಸಂಶೋಧನೆ ಕೈಗೊಳ್ಳುವಂತೆ ವರ್ಷದ ಹಿಂದೆ ಕೇಳಿಕೊಳ್ಳಲಾಗಿತ್ತು. ಈಗ ಸಂಶೋಧನೆಯ ವರದಿಯು ಕೈ ಸೇರಿದ್ದು, ಅಡಿಕೆ ಬಗೆಗಿನ ಎಲ್ಲ ಆರೋಪಗಳು ಸುಳ್ಳಾಗಿವೆ. ಅಡಿಕೆ ಹಾನಿಕಾರವಲ್ಲ ಎಂದು ಸಾಬೀತಾಗಿದೆ.

ಈಗ ಪ್ರಾಥಮಿಕ ವರದಿಯಷ್ಟೇ ಬಂದಿದ್ದು, ಇನ್ನೂ ವಿವರವಾದ ವರದಿ ಕೈಸೇರಲಿದೆ ಎಂದು ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಬಿ.ಪಿ, ಡಯಾಬಿಟಿಸ್ ನಿಯಂತ್ರಣಕ್ಜೆ, ಹೊಟ್ಟೆ ನೋವು ನಿವಾರಣೆಗೆ ಅಡಿಕೆ ಔಷಧ ರೀತಿಯಲ್ಲಿ ಕೆಲಸ ಮಾಡುತ್ತದೆ. ಜತೆಗೆ, ಗಾಯ ಗುಣಪಡಿಸುವ ಗುಣವೂ ಇದರಲ್ಲಿದೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಹಾಗಾಗಿ, ಈ ಹೊಸ ಸಂಶೋಧನಾ ವರದಿಯು ಭಾರತದ ಅಡಿಕೆ ಕೃಷಿಗೆ ಹೊಸ ದಿಕ್ಕು, ಹೊಸ ಆಯಾಮ ಕಲ್ಪಿಸಲಿದೆ.

ಈವರೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಿಥ್ಯವನ್ನೇ ಬಹುತೇಕರು ನಂಬಿದ್ದರಿಂದ, ಅಡಿಕೆ ಕೃಷಿಗೆ ತುಸು ಹಿನ್ನಡೆಯಾಗಿತ್ತು. ನೆರೆ ಪ್ರವಾಹ, ಹಿಂಗಾರು ಒಣಗುವ ರೋಗ, ಹಿಂಗಾರು ತಿನ್ನುವ ಹುಳು, ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗ ಹೀಗೆ ನಾನಾ ಸಂಕಷ್ಟಗಳ ನಡುವೆ ಅಡಿಕೆಯನ್ನು ಬೆಳೆದು, ಮಾರುಕಟ್ಟೆಗೆ ಪೂರೈಸುವಷ್ಟರಲ್ಲಿ ಧಾರಣೆ ಕುಸಿದು, ಬೆಳಗಾರರಿಗೆ ನಷ್ಟವೇ ಆಗುತ್ತಿತ್ತು. ಜತೆಗೆ, ಸರ್ಕಾರವೇ ಮುಂದೆ ನಿಂತು, ಆರೋಗ್ಯಕ್ಕೆ ಹಾನಿಕಾರ ಎಂದು ಆಧಾರ ರಹಿತವಾಗಿ ಹೇಳಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿತ್ತು. ಬಹುಶಃ ಮುಂದಿನ ದಿನಗಳಲ್ಲಿ ಮಿಥ್ಯಾರೋಪಗಳಿಗೆಲ್ಲ ಅಂತ್ಯ ದೊರೆಯಲಿದೆ.

ಭಾರತದಲ್ಲಿ ಸುಮಾರು 4.45 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ 7.29 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ಈ ಪೈಕಿ ಕರ್ನಾಟಕದಲ್ಲೇ ಅತಿ ಹೆಚ್ಚು ಅಂದರೆ, 2.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 4.57 ಲಕ್ಷ ಟನ್‌ ಉತ್ಪಾದಿಸಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಕೇರಳ ಮತ್ತು ಮೂರನೇ ಸ್ಥಾನದಲ್ಲಿ ಅಸ್ಸಾಂ ರಾಜ್ಯಗಳಿವೆ. ಅಂದರೆ, ಅಡಿಕೆ ಕೃಷಿಯಿಂದ ಲಾಭವಾಗಲೀ, ನಷ್ಟವಾಗಲೀ ಅದು ನಮ್ಮ ರಾಜ್ಯಕ್ಕೆ ಹೆಚ್ಚು ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಹೊರ ಬಿದ್ದಿರುವ ಸಂಶೋಧನಾ ವರದಿಯು ಹೆಚ್ಚು ಮಹತ್ವದ ಪಡೆದುಕೊಂಡಿದೆ. ನಮ್ಮ ರಾಜ್ಯ ಸರ್ಕಾರ ಹಾಗೂ ರಾಜ್ಯದ ಅಡಿಕೆ ಟಾಸ್ಕ್‌ ಫೋರ್ಸ್‌, ಕೇಂದ್ರ ಸರ್ಕಾರಕ್ಕೆ ಅಡಿಕೆ ಹಾನಿಕಾರಕವಲ್ಲ ಎಂಬ ಕುರಿತು ಸಾಕ್ಷ್ಯಗಳು, ವರದಿಗಳ ಸಮೇತ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಬೇಕು.

ಇದನ್ನೂ ಓದಿ: Areca News: ಅಡಿಕೆ ಆರೋಗ್ಯಕ್ಕೆ ಮಾರಕವಲ್ಲ, ಔಷಧೀಯ ಗುಣವಿದೆ: ರಾಮಯ್ಯ ವಿವಿ ಸಂಶೋಧನೆ

ಕರ್ನಾಟಕದ ಅಡಿಕೆ ಬೆಳೆಗಾರರು ಆತಂಕ ಪಡಲು ಇನ್ನೂ ಹಲವು ಕಾರಣಗಳಿವೆ. ಈ ಪೈಕಿ ಅಡಿಕೆ ಧಾರಣೆ ಮತ್ತು ಆಮದು. ಕಳೆದ ಅಕ್ಟೋಬರ್‌ನಲ್ಲಿ, ಭೂತಾನ್‌ನಿಂದ ಕೇಂದ್ರ ಸರ್ಕಾರವು ಕನಿಷ್ಠ ಆಮದು ಬೆಲೆ (ಎಂಐಪಿ)ಯಲ್ಲಿ ಯಾವುದೇ ಷರತ್ತು ಇಲ್ಲದೆಯೇ 17,000 ಮೆಟ್ರಿಕ್‌ ಟನ್‌ ಹಸಿ ಅಡಿಕೆಯನ್ನು ಮುಕ್ತವಾಗಿ ಆಮದು ಮಾಡಲು ಅವಕಾಶ ನೀಡಿತ್ತು. ಸಹಜವಾಗಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ಕರ್ನಾಟಕ ರೈತರ ಮೇಲೆ ಇದು ದುಷ್ಪರಿಣಾಮ ಬೀರಿತು. ಈ ಬಗ್ಗೆ ಸರ್ಕಾರವನ್ನು ಗಮನ ಸೆಳೆಯುವ ಕೆಲಸವೂ ನಡೆಯಿತು. ಹಾಗೆಯೇ, ಅಡಿಕೆ ಧಾರಣೆಯನ್ನು ಸುಸ್ಥಿರಗೊಳಿಸುವ ಪ್ರಯತ್ನವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು, ಯಾವೆಲ್ಲ ದಾರಿಗಳನ್ನು ಹುಡುಕಬಹುದು ಎಂಬ ಕುರಿತು ಮತ್ತಷ್ಟು ಅಧ್ಯಯನಗಳನ್ನು ಕೈಗೊಂಡು, ಅವುಗಳನ್ನು ಜಾರಿಗೆ ಪ್ರಯತ್ನಿಸಬೇಕು. ಜತೆಗೆ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಆಮದು ಮೇಲಿನ ಸುಂಕವನ್ನು ಇನ್ನಷ್ಟು ಹೆಚ್ಚಿಸಿ, ದೇಶೀಯ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡಲು ಮುಂದಾಗಬೇಕು. ಈ ಯಾವ ಕೆಲಸಗಳೂ ಅಸಾಧ್ಯವಲ್ಲ. ರಾಜಕೀಯ ಇಚ್ಛಾಶಕ್ತಿ ಬೇಕಷ್ಟೇ. ಆ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಆಶಿಸೋಣ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

VISTARANEWS.COM


on

ದೇಶದ ಜನತೆಯ ಗಮನ ಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ (ಮೇ.4) ಹೊರಬೀಳಲಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ನಾಳೆ (ಮೇ.4) ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಬಹುತೇಕ ಮಧ್ಯಾಹ್ನ 2 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ.

ಯಾರಿಗೆ ಪಶ್ಚಿಮ ಬಂಗಾಳ?
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎಂಬುದು ನಾಳೆ ಮತಎಣಿಕೆಯ ನಂತರ ಗೊತ್ತಾಗಲಿದೆ. ರಾಜ್ಯದಲ್ಲಿ ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಮುಂದಾಗಿರುವ ಟಿಎಂಸಿಗೆ ಈ ಚುನಾವಣೆ “ಮಾಡು ಇಲ್ಲವೇ ಮಡಿ” ಎಂಬಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲೇಬೇಕೆಂದು ಪಣತೊಟ್ಟಿದ್ದ ಬಿಜೆಪಿ ನಾಯಕರು ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದರು. ಈ ಬಾರಿ ಪಶ್ಚಿಮ ಬಂಗಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಮತದಾನ ನಡೆದಿರುವುದು ಫಲಿತಾಂಶದ ಪರಿಣಾಮ ಬೀರಿರುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ ಯಾವುದೇ ಪಕ್ಷ 148 ಸ್ಥಾನಗಳನ್ನು ಪಡೆಯಬೇಕು. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

ದ್ರಾವಿಡ ಕೋಟೆಯ ಅಧಿಪತಿ ಯಾರು..?
ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆ ದೇಶಾದ್ಯಂತ ಭಾರಿ ಕುತೂಹಲವನ್ನೇ ಮೂಡಿಸಿದೆ. ಇದುವರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ನೇರ ಸ್ಪರ್ಧೆ ಇರುತ್ತಿತ್ತು. ಈ ಬಾರಿ ಚಿತ್ರನಟ ವಿಜಯ್‌ ಅವರ ಟಿವಿಕೆ ಪಕ್ಷ ಕಣದಲ್ಲಿದ್ದು, ಯಾರಿಗೆ ದ್ರಾವಿಡ ಕೋಟೆ ಒಲಿಯಲಿದೆ ಎನ್ನುವ ಪ್ರಶ್ನೆಗೆ ನಾಳೆಯ ಫಲಿತಾಂಶದ ಮೂಲಕ ಉತ್ತರ ಸಿಗಲಿದೆ. ಕೆಲವು ಮತದಾನೋತ್ತರ ಸಮೀಕ್ಷೆಗಳು ಆಡಳಿತಾರೂಢ ಡಿಎಂಕೆ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿವೆ. ಇದರ ನಡುವೆ ಆಶ್ಚರ್ಯ ಎಂಬಂತೆ ಕೆಲವು ಸಮೀಕ್ಷೆಗಳು ವಿಜಯ್‌ ನೇತೃತ್ವದ ಟಿವಿಕೆ ಬಹುಮತ ಪಡೆಯಲಿದೆ ಎಂದಿವೆ. ವಿಜಯ್‌ ಕಿಂಗ್‌ಮೇಕರ್‌ ಆಗುವ ಸಾಧ್ಯತೆಯ ಬಗ್ಗೆಯೂ ಕೆಲ ಸಮೀಕ್ಷೆಗಳು ಸುಳಿವು ನೀಡಿವೆ. ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತ ಪಡೆಯಲು 148 ಸ್ಥಾನಗಳ ಅಗತ್ಯವಿದೆ.

ಕೇರಳದಲ್ಲಿ ಜಯ ಯಾರಿಗೆ?
ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಈ ಬಾರಿ ಅಧಿಕಾರ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಪ್ರಯತ್ನ ನಡೆಸಿದ್ರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸಹ ಈ ಬಾರಿಯ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡಿದೆ. ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಯುಡಿಎಫ್‌ ಜಯಭೇರಿ ಸಾಧಿಸುವ ಸಾಧ್ಯತೆ ಕಂಡುಬಂದಿದೆ. ಕೇರಳದಲ್ಲಿ ಒಟ್ಟು 140 ಸ್ಥಾನಗಳಿದ್ದು, ಸರಳ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ.

ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾ ಬಿಜೆಪಿ?
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳ ಪೈಕಿ ಸರಳ ಬಹುಮತಕ್ಕೆ 64 ಸ್ಥಾನಗಳು ಬೇಕು. ಸತತ ಎರಡು ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈ ಬಾರಿ ಗೆಲುವು ಸಾಧಿಸಿದರೆ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಲಿದೆ.

ಪುದುಚೇರಿ ಯಾರಿಗೆ?
ಪುದುಚೇರಿ ವಿಧಾನಸಭೆ ಚುನಾವಣಾ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಪುನಃ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಬಹುದೆಂದು ಅಂದಾಜಿಸಲಾಗಿದೆ. ರಾಜ್ಯದ ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ 15ರಿಂದ 20 ಸ್ಥಾನಗಳನ್ನು ಪಡೆದು ಎರಡನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯಬಹುದೆಂದು ಹೇಳಲಾಗುತ್ತಿದೆ.

Continue Reading

Latest

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

VISTARANEWS.COM


on

ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷೆಯ ಟ್ರೆಂಡ್‌ ಪಕ್ಕದ ಬಾಂಗ್ಲಾದೇಶಕ್ಕೆ ಆತಂಕ ಉಂಟುಮಾಡಿದೆ. ಎಂಟು ಎಕ್ಸಿಟ್‌ ಪೋಲ್‌ಗಳ ಪೈಕಿ ಆರು ಸಮೀಕ್ಷೆಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮುನ್ಸೂಚನೆ ನೀಡಿವೆ. ಈ ಮುನ್ಸೂಚನೆಯೇ ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಸಂಸದ ಆಖ್ತರ್‌ ಹೊಸೈನ್‌ ಈ ವಿಷಯವನ್ನು ಅಲ್ಲಿನ ಸಂಸತ್ತಿನಲ್ಲಿ ಎತ್ತಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಅಲ್ಲಿನ ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟುತ್ತದೆ. ಇದು ಬಾಂಗ್ಲಾದೇಶದಲ್ಲಿ ಅತಿದೊಡ್ಡ ಮಾನವೀಯ, ಅರ್ಥಿಕ ಹಾಗೂ ನಿರಾಶ್ರಿತರ ಬಿಕ್ಕಟ್ಟನ್ನು ಸೃಷ್ಟಿಸಲಿದೆ. ಇದು ನಮ್ಮ ಅತಿದೊಡ್ಡ ಆತಂಕಕ್ಕೆ ಕಾರಣವಾಗಿದೆʼʼ ಎಂದು ಹೇಳಿದ್ದಾರೆ.
ಗಡಿದಾಟಿ ಭಾರತಕ್ಕೆ ಬಂದಿರುವ ಅಕ್ರಮ ಬಾಂಗ್ಲಾ ದೇಶಿ ನುಸುಳುಕೋರರನ್ನು ಬಿಜೆಪಿ ಹೊರಗಟ್ಟಿದರೆ ಅವರಿಗೆ ಹೊಸ ನೆಲೆ ಕಲ್ಪಿಸುವುದು ಹೇಗೆ ಎಂಬ ಚಿಂತೆ ಬಾಂಗ್ಲಾದೇಶವನ್ನು ಕಾಡುತ್ತಿದೆ. ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಸಮಸ್ಯೆಯೇ ಪಶ್ಚಿಮ ಬಂಗಾಳದ ಅತಿದೊಡ್ಡ ಚುನಾವಣಾ ವಿಷಯವಾಗಿತ್ತು. ಅಧಿಕಾರಕ್ಕೇರಿದ ತಕ್ಷಣವೇ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವುದಾಗಿ ಬಿಜೆಪಿ ಹೇಳಿತ್ತು.

Continue Reading

Latest

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

VISTARANEWS.COM


on

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌
ಐದು ರಾಜ್ಯಗಳ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದ್ದಿದೆ. ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಯುಡಿಎಫ್‌, ಪುದುಚೇರಿಯಲ್ಲಿ ಎನ್‌ಡಿಎ ಜಯಭೇರಿ ಬಾರಿಸಲಿದೆ ಎಂದು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಆದರೆ, ಪ.ಬಂಗಾಳ ಮತ್ತು ತಮಿಳುನಾಡು ಮತದಾನೋತ್ತರ ಸಮೀಕ್ಷೆಗಳು ಮಾತ್ರ ಭಿನ್ನ ಫಲಿತಾಂಶ ನೀಡಿವೆ.
ಅಸ್ಸಾಂನಲ್ಲಿ ಕಮಲ ಕಿಲಕಿಲ:
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆಯನ್ನು ಎಲ್ಲಾ ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಹಿಮಂತ ಬಿಸ್ವ ಶರ್ಮಾ ಎರಡನೇ ಅವಧಿಗೆ ಸಿಎಂ ಆಗುವ ಸಾಧ್ಯತೆ ಹೆಚ್ಚಿವೆ. ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ ಮತ್ತು ಚಾಣಕ್ಯ ಸ್ಟ್ರಾಟಜಿಸ್‌ ಬಿಜೆಪಿ ಭಾರೀ ಬಹುಮತ ದಾಖಲಿಸಲಿದೆ ಎಂದು ಭವಿಷ್ಯ ನುಡಿದಿವೆ. ಕಾಂಗ್ರೆಸ್‌ ಪ್ರತಿಪಕ್ಷಕ್ಕೆ ಸೀಮಿತಗೊಳ್ಳಲಿದೆ.
ಕೇರಳಂನಲ್ಲಿ ಯುಡಿಎಫ್‌ಗೆ ಅಧಿಕಾರ?:
ಕೇರಳಂ ವಿಧಾನಸಭೆಯ ಬಲ 140. ಬಹುಮತಕ್ಕೆ 71 ಸೀಟುಗಳು ಬೇಕು. ಕೇರಳಂನಲ್ಲಿ ಹ್ಯಾಟ್ರಿಕ್‌ ದಾಖಲಿಸುವ ಎಲ್‌ಡಿಎಫ್‌ ಕನಸು ನುಚ್ಚುನೂರಾಗುವ ಸಾಧ್ಯತೆಗಳಿವೆ. ಈ ಸಲ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಾಟಿಕ್‌ ಫ್ರಂಟ್‌ – ಯುಡಿಎಫ್‌, ಜಯಭೇರಿ ಬಾರಿಸಲಿದೆ ಎಂದು ಆಕ್ಸಿಸ್‌ ಮೈ ಇಂಡಿಯಾ, ಪಿ-ಮಾರ್ಕ್‌, ಮಾಟ್ರಿಜ್‌, ಮನೋರಮಾ ನ್ಯೂಸ್‌ ಸಿವೋಟರ್ಸ್‌ ಮತ್ತು ಜೆವಿಸಿ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಕೇರಳಂನಲ್ಲಿ ಮೂರರಿಂದ ಏಳು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.
ಪುದುಚೇರಿಯಲ್ಲಿ ಎನ್‌ಡಿಎ?:
ಪುದುಚೇರಿ ವಿಚಾರದಲ್ಲಿ ಎಕ್ಸಿಟ್‌ ಪೋಲ್‌ ಏಜೆನ್ಸಿಗಳಿಗೆ ಯಾವುದೇ ಅನುಮಾನ ಇಲ್ಲ. 30 ಸದಸ್ಯಬಲದ ಪುದುಚೇರಿ ಅಸೆಂಬ್ಲಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದಿಗ್ವಿಜಯ ಬಾರಿಸಲಿದೆ ಎಂದು ಎಲ್ಲಾ ಚುನಾವಣೋತ್ತರ ಭವಿಷ್ಯ ನುಡಿದಿವೆ.
ಪ. ಬಂಗಾಳದಲ್ಲಿ ದೀದಿಯೋ, ಮೋದಿಯೋ?
ಪಶ್ಚಿಮ ಬಂಗಾಳದ ಎಕ್ಸಿಟ್‌ ಪೋಲ್‌ನಲ್ಲಿ ಏಕಮತ ಇಲ್ಲ. 6 ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, 4 ಸಮೀಕ್ಷೆಗಳು ಬಿಜೆಪಿ ಗೆಲುವಿನ ಭವಿಷ್ಯ ನುಡಿದಿವೆ. 2 ಸಮೀಕ್ಷೆಗಳು ಟಿಎಂಸಿಯೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿವೆ. ಪಿ-ಮಾರ್ಕ್‌, ಮಾಟ್ರಿಜ್‌, ಜೆವಿಸಿ, ಚಾಣಕ್ಯ ಈ ನಾಲ್ಕು ಸಮೀಕ್ಷೆಗಳಲ್ಲಿ ಬಿಜೆಪಿ ಸರಿಸುಮಾರು 150ಕ್ಕೂ ಅಧಿಕ ಸೀಟು ಗಳಿಸುವ ಸಾಧ್ಯತೆಗಳಿವೆ ಎಂದು ಹೇಳಿವೆ. ಪೀಪಲ್ಸ್‌ ಪಲ್ಸ್‌, ಜನಮತ ಪೋಲ್ಸ್‌ ಈ ಎರಡೂ ಸಮೀಕ್ಷೆಗಳ ಪ್ರಕಾರ ಟಿಎಂಸಿ 170ರಿಂದ 200 ಸೀಟು ಗೆದ್ದು ಅಧಿಕಾರದಲ್ಲಿ ಮುಂದುವರಿಯಲಿದೆ. ಅಂದ ಹಾಗೆ, 294 ಸದಸ್ಯ ಬಲದ ಪ.ಬಂಗಾಳ ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 147 ಸೀಟುಗಳನ್ನು ಗೆಲ್ಲಲೇ ಬೇಕು.
ದ್ರಾವಿಡ ದಂಗಲ್‌ನಲ್ಲಿ ಅಚ್ಚರಿ ಫಲಿತಾಂಶ?:
ತಮಿಳುನಾಡಿನಲ್ಲಿ ಬಹುತೇಕ ಎಲ್ಲಾ ಎಕ್ಸಿಟ್‌ ಪೋಲ್‌ಗಳು ಡಿಎಂಕೆ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿವೆ. ಎಐಎಡಿಎಂಕೆ ನೇತೃತ್ವದ ಎನ್‌ಡಿಎ 50 ರಿಂದ 80 ಸ್ಥಾನಗಳನ್ನು ಗಳಿಸುವ ಸಾಧ್ಯತೆಗಳಿವೆ. ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ. ಆಕ್ಸಿಸ್‌ ಮೈ ಇಂಡಿಯಾ ಮಾತ್ರ ವಿಜಯ್‌ ನೇತೃತ್ವದ ಟಿವಿಕೆಗೆ ಬಹುಮತ ಸಿಗಲಿದೆ ಎಂದು ಹೇಳಿದೆ. ದಳಪತಿ ವಿಜಯ್‌ ನೇತೃತ್ವದ ಟಿವಿಕೆ ತನ್ನ ಚೊಚ್ಚಲ ಯತ್ನದಲ್ಲೇ 98ರಿಂದ 120 ಸ್ಥಾನ ಗಳಿಸುವ ಸಾಧ್ಯತೆಗಳಿವೆ ಎಂದು ಆಕ್ಸಿಸ್‌ ಮೈ ಇಂಡಿಯಾ ಹೇಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 117 ಸೀಟುಗಳು ಬೇಕು.

Continue Reading

Latest

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

VISTARANEWS.COM


on

ದ್ರಾವಿಡ ದಂಗಲ್‌ನಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆಯೊಂದನ್ನು ಎಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಟಿಸಿದೆ. ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆ ನಾಯಕ ವಿಜಯ್‌ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ತಮಿಳುನಾಡಿನ ಎಲ್ಲಾ ಸಮೀಕ್ಷೆಗಳು ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿರುವಾಗಲೇ, ಆಕ್ಸಿಸ್‌ ಮೈ ಇಂಡಿಯಾ ಮಾತ್ರ ಈ ಸಲ ವಿಜಯ್‌ ನಿಜವಾದ ಜನನಾಯಗನ್‌ ಎಂದಿದೆ.
ತಮಿಳುನಾಡಿನ ಸಾರಥ್ಯ ವಿಜಯ್‌ಗೆ?
ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಟಿವಿಕೆಗೆ 98 ರಿಂದ 120 ಸೀಟುಗಳು ಸಿಗಲಿವೆ. ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ 92ರಿಂದ 110 ಹಾಗೂ 22ರಿಂದ 32 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ. 234 ಸದಸ್ಯಬಲದ ತಮಿಳುನಾಡು ಅಸೆಂಬ್ಲಿಯಲ್ಲಿ 117 ಸೀಟು ಗೆಲ್ಲುವ ಪಕ್ಷದ ನಾಯಕ ಮುಖ್ಯಮಂತ್ರಿ ಆಗ್ತಾರೆ. ಸಮೀಕ್ಷೆ ಪ್ರಕಾರ ಟಿವಿಕೆ ಗರಿಷ್ಠ 120 ಸೀಟು ಗೆಲ್ಲುವ ಸಾಧ್ಯತೆಗಳಿವೆ.̇̇̇
ವೋಟ್‌ ಶೇರ್‌ನಲ್ಲೂ ಟಿವಿಕೆ ದಿಗ್ವಿಜಯ?
ಆಕ್ಸಿಸ್‌ ಮೈ ಇಂಡಿಯಾ ವೋಟ್‌ ಶೇರ್‌ ಸಮೀಕ್ಷೆಯನ್ನೂ ಪ್ರಕಟಿಸಿದೆ. ಅದರ ಪ್ರಕಾರ ಟಿವಿಕೆಗೆ ಶೇಕಡಾ 35ರಷ್ಟು ಮತ ಸಿಗಲಿದೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೂ ಶೇ. 35ರಷ್ಟು ವೋಟ್‌ ಶೇರ್‌ ಸಿಗಲಿದೆ. ಎನ್‌ಡಿಎಗೆ 23 ಶೇಕಡಾ ಮತ ಸಿಗುವ ಸಾಧ್ಯತೆಗಳಿವೆ.
ಸಿಎಂ ಸ್ಥಾನಕ್ಕೆ ವಿಜಯ್‌ ಬೆಸ್ಟ್‌?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬ ಪ್ರಶ್ನೆಯನ್ನೂ ಆಕ್ಸಿಸ್‌ ಮೈ ಇಂಡಿಯಾ ಜನರ ಮುಂದಿಟ್ಟಿದೆ. ಅದರ ಪ್ರಕಾರ ಶೇ. 37ರಷ್ಟು ಮತದಾರರು ವಿಜಯ್‌ ಪರ ಒಲವು ತೋರಿದ್ದಾರೆ. ಶೇ. 35ರಷ್ಟು ಮಂದಿ ಮಾತ್ರ ಸ್ಟಾಲಿನ್‌ ಬೆಸ್ಟ್‌ ಅಂದಿದ್ದಾರೆ.
ವಿಜಯ್‌ಗೆ ಯುವ ಸಮೂಹದ ಬೆಂಬಲ
ಸರ್ವೇ ಪ್ರಕಾರ ಶೇ. 68ರಷ್ಟು ಹೊಸ ವೋಟರ್ಸ್‌ ವಿಜಯ್‌ಗೆ ಬೆಂಬಲ ನೀಡಿದ್ದಾರೆ. 20ರಿಂದ 29 ವಯೋಮಾನದ ಶೇ. 59ರಷ್ಟು ಯುವಕರು ಟಿವಿಕೆಗೆ ಜೈ ಎಂದಿದ್ದಾರೆ. 30-39 ವಯೋಮಾನದ ಶೇ. 45 ಮಂದಿ ದಳಪತಿಯನ್ನು ದಡಮುಟ್ಟಿಸಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

Continue Reading
Advertisement
Latest51 minutes ago

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ

Latest1 hour ago

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

Latest2 hours ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

Latest1 day ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest1 day ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

Latest2 days ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest3 days ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest3 days ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest3 days ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest3 days ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌