ಸಂಪಾದಕೀಯ | ಮತ್ತೆ ಕೋವಿಡ್ ಉಲ್ಬಣ ಸಾಧ್ಯತೆ: ಆತಂಕ ಬೇಡ, ಎಚ್ಚರ ವಹಿಸಿ - Vistara News

ಪ್ರಮುಖ ಸುದ್ದಿ

ಸಂಪಾದಕೀಯ | ಮತ್ತೆ ಕೋವಿಡ್ ಉಲ್ಬಣ ಸಾಧ್ಯತೆ: ಆತಂಕ ಬೇಡ, ಎಚ್ಚರ ವಹಿಸಿ

ಕಳೆದ ಬಾರಿಯ ಪಾಠ, ಅನುಭವ ನಮ್ಮೊಂದಿಗಿದೆ. ಸರಕಾರ ಕೂಡ ಕಳೆದ ಬಾರಿಯ ಲೋಪಗಳಿಂದ ಪಾಠ ಕಲಿತು ಪ್ರಮಾದ ಆಗದಂತೆ ಈ ರೋಗವನ್ನು ನಿಭಾಯಿಸಬೇಕು. ಕೈಗಳ ಸ್ವಚ್ಛತೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಇತ್ಯಾದಿ ಸರಳ ನಿಯಮ ಪಾಲನೆ ಮೂಲಕ ನಾವು ಈ ಸಾಂಕ್ರಾಮಿಕ ರೋಗದಿಂದ ದೂರ ಇರಲು ಸಾಧ್ಯವಿದೆ.

VISTARANEWS.COM


on

Coronavirus
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊರೊನಾ ಎಂಬ ಸಾಂಕ್ರಾಮಿಕ ಕಾಯಿಲೆಯನ್ನು ಮರೆತು ಮುಂದೆ ಹೋಗೋಣ ಎಂದು ನಾವೆಲ್ಲ ಅಂದುಕೊಳ್ಳುತ್ತಿರುವಾಗಲೇ ಅದು ಮತ್ತೆ ಅವತರಿಸಿದೆ. ಚೀನಾದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಭೀಕರವಾಗಿದೆ ಎಂದು ಇದುವರೆಗಿನ ವರದಿಗಳಿಂದ ತಿಳಿದುಬಂದಿದೆ. ಇದುವರೆಗೆ ಅಲ್ಲಿ 3.86 ಲಕ್ಷ ಜನರಿಗೆ ಕೊರೊನಾ ತಗುಲಿದೆ. ಈ ಅಲೆಯಲ್ಲಿ 5,241 ಜನ ಇದುವರೆಗೆ ಮೃತಪಟ್ಟಿದ್ದಾರೆ. ಅಕ್ಟೋಬರ್‌ನಿಂದಲೇ ಅಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಕಳೆದ ಒಂದು ವಾರದಿಂದ ಏಕಾಏಕಿ ಏರಿಕೆ ಪ್ರಮಾಣ ಹೆಚ್ಚಾಗಿದೆ. ನಿತ್ಯ 1 ಸಾವಿರದಿಂದ 5 ಸಾವಿರದವರೆಗೆ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇದು ಜಾಗತಿಕವಾಗಿ ಲಭ್ಯವಾದ ಮಾಹಿತಿಯಾದರೂ, ಅಲ್ಲಿನ ವಾಸ್ತವ ಸ್ಥಿತಿ ಯಾರಿಗೂ ಗೊತ್ತಿಲ್ಲ. ಇದರಿಂದ ಇತರ ದೇಶಗಳೂ ಬೆಚ್ಚಿಬಿದ್ದಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಭಾರತದಲ್ಲೂ ಮೂವರಿಗೆ ಓಮಿಕ್ರಾನ್‌ ಉಪತಳಿ ದೃಢಪಟ್ಟಿದ್ದು, ಆತಂಕ ಹೆಚ್ಚಾಗಿದೆ. ಗುಜರಾತ್‌ನ ವಡೋದರಾದಲ್ಲಿ ಇಬ್ಬರಿಗೆ ಹಾಗೂ ಒಡಿಶಾದಲ್ಲಿ ಒಬ್ಬರಿಗೆ ಬಿಎಫ್‌.7 ಉಪತಳಿ ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರು ತುರ್ತು ಸಭೆ ನಡೆಸಿದ್ದು, ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ಭಾರತದ ವಿಮಾನ ನಿಲ್ದಾಣಗಳಿಗೆ ಆಗಮಿಸುವ ವಿದೇಶಿ ಪ್ರಯಾಣಿಕರ ತಪಾಸಣೆಗೆ ಸೂಚಿಸಲಾಗಿದೆ.

ಚೀನಾದ ಕೊರೊನಾ ಪರಿಸ್ಥಿತಿ ಬಗ್ಗೆ ವೈರಾಣು ತಜ್ಞರು ನೀಡಿರುವ ವರದಿಯಲ್ಲಿ, ಅಲ್ಲಿ ಮುಂದಿನ ಮೂರು ತಿಂಗಳಲ್ಲಿ ಶೇ.60ರಷ್ಟು ಜನರಿಗೆ ಸೋಂಕು ತಗುಲಲಿದೆ. ಹಾಗೆಯೇ, ಸುಮಾರು 9.6 ಲಕ್ಷ ಜನ ಸೋಂಕಿಗೆ ಬಲಿಯಾಗಲಿದ್ದಾರೆ. ತೀವ್ರತರ ಪ್ರಸರಣದಿಂದಾಗಿ ಜಗತ್ತಿನ ಶೇ.10ರಷ್ಟು ಜನರನ್ನು ಸೋಂಕು ಬಾಧಿಸಲಿದೆ ಎಂದು ಎಚ್ಚರಿಸಿದ್ದಾರೆ. ಇದು ಆತಂಕದ ಮೂಲ. ಚೀನಾದ ವುಹಾನ್‌ನಲ್ಲಿ ಪತ್ತೆಯಾದ ಒಂದೇ ಒಂದು ಕೋವಿಡ್‌ ವೈರಸ್‌ ರಕ್ತಬೀಜಾಸುರನಂತೆ ಬೆಳೆದು ಇಡೀ ಜಗತ್ತನ್ನೇ ಕಂಗೆಡಿಸಿದ್ದನ್ನು ನಾವು ಕಂಡಿದ್ದೇವೆ. ಹೀಗಾಗಿ ಈಗ ಯಾವುದೇ ಎಚ್ಚರಿಕೆಯನ್ನು ಕಡೆಗಣಿಸುವಂತೆಯೇ ಇಲ್ಲ. ಭಾರತದಲ್ಲಿ ಸದ್ಯದ ಕೊರೊನಾ ಪ್ರಕರಣಗಳ ನಿಯಂತ್ರಣದಲ್ಲಿವೆ. ಹಾಗೆಂದು ಮೈಮರೆಯುವಂತೆಯೂ ಇಲ್ಲ. ದೇಶದಲ್ಲಿ ಸದ್ಯ 3,490 ಸಕ್ರಿಯ ಪ್ರಕರಣಗಳಿವೆ. ಇವುಗಳಲ್ಲಿ ಕರ್ನಾಟಕದಲ್ಲಿ 1,275 ಹಾಗೂ ಕೇರಳದಲ್ಲಿ 1,448 ಸಕ್ರಿಯ ಕೇಸ್‌ಗಳಿವೆ. ಕಳೆದ 24 ಗಂಟೆಗಳಲ್ಲಿ 69 ಹೊಸ ಕೇಸ್‌ ದಾಖಲಾಗಿವೆ. ಇದೀಗ ಚೀನಾದ ಹಿನ್ನೆಲೆಯಲ್ಲಿ, ಹೆಚ್ಚಿನ ಜನ ಸೇರುವ ಪ್ರದೇಶದಲ್ಲಿ ಮಾಸ್ಕ್‌ ಧರಿಸಬೇಕು, ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ.

ಹೋಲಿಸಿ ನೋಡಿದರೆ ಚೀನಾಕ್ಕಿಂತಲೂ ಭಾರತ ಕೊರೊನಾವನ್ನು ವ್ಯವಸ್ಥಿತವಾಗಿ ಎದುರಿಸಿದೆ. ಚೀನಾದ ಎರಡನೇ ಅಲೆಯ ಸಂದರ್ಭದಲ್ಲಿ ತೀವ್ರಗತಿಯ ಏರಿಕೆಯಿಂದಾಗಿ ಆರೋಗ್ಯ ವ್ಯವಸ್ಥೆ ತುಸು ಏರುಪೇರಾಗಿದ್ದು ನಿಜ. ಆದರೆ ಇದು ಅಮೆರಿಕದಂಥ ಸರ್ವಾಧುನಿಕ ದೇಶಗಳಲ್ಲೂ ಸಂಭವಿಸಿದೆ. ಈ ಹಿಂದಿನ ಅಲೆಗಳನ್ನು ಕಠಿಣ ಲಾಕ್‌ಡೌನ್‌ ಮೂಲಕ ಎದುರಿಸಿದ ಚೀನಾ ಕಡೆಗೂ ಈ ವೈರಸ್‌ ಅನ್ನು ಎದುರಿಸಬೇಕಾಗಿ ಬಂದಿದೆ; ಪ್ರತೀ ವ್ಯಕ್ತಿಯೂ ಈ ವೈರಸ್‌ ಅನ್ನು ಎದುರಿಸಲೇಬೇಕಾಗಿದೆ ಎಂಬುದೇ ಇದರ ಅರ್ಥ. ಜನಸಮೂಹದಲ್ಲಿ ಬೆಳೆಯುವ ಪ್ರತಿಕಾಯಗಳೇ ಈ ವೈರಸ್ಸನ್ನು ಶಾಶ್ವತವಾಗಿ ಎದುರಿಸುವ ಅಸ್ತ್ರ. ನಮ್ಮಲ್ಲಿ ಬಹುತೇಕ ಜನ ಎರಡು ಲಸಿಕೆ ಹಾಕಿಕೊಂಡಿದ್ದಾರೆ. ಕೆಲವರು ಇದರ ಜತೆಗೆ ಬೂಸ್ಟರ್ ಡೋಸ್ ಕೂಡ ಹಾಕಿಕೊಂಡಿದ್ದಾರೆ. ಹಾಗಾಗಿ ನಮ್ಮಲ್ಲಿ ಆತಂಕ ಪಡಬೇಕಿಲ್ಲ. ಕಳೆದ ಬಾರಿಯ ಪಾಠ, ಅನುಭವ ನಮ್ಮೊಂದಿಗಿದೆ. ಸರಕಾರ ಕೂಡ ಕಳೆದ ಬಾರಿಯ ಲೋಪಗಳಿಂದ ಪಾಠ ಕಲಿತು ಪ್ರಮಾದ ಆಗದಂತೆ ಈ ರೋಗವನ್ನು ನಿಭಾಯಿಸಬೇಕು. ಆಕ್ಸಿಜನ್‌ ಪೂರೈಕೆಯ ಕೊರತೆಯಾಗದಂತೆ, ಹಿರಿಯ ನಾಗರಿಕರು ಕ್ಷೇಮವಾಗಿರುವಂತೆ ನೋಡಿಕೊಳ್ಳಬೇಕು. ವಿದೇಶಿ ಪ್ರವಾಸಿಗರನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಬೇಕು. ಲಾಕ್‌ಡೌನ್, ಶಾಲೆ ಬಂದ್ ಇತ್ಯಾದಿ ಕ್ರಮ ಜಾರಿ ಮಾಡುವಾಗ ಆತುರ ಮಾಡದೆ, ಅವು ಜನತೆಯ ಜೀವ ಹಿಂಡುವಂತಾಗದೆ, ಎಲ್ಲ ಕೋನಗಳಿಂದ ಪರಿಶೀಲನೆ ನಡೆಸಬೇಕು. ಅಂದೇ ನಾವು ಕಲಿತಿರುವ ಕೈಗಳ ಸ್ವಚ್ಛತೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಇತ್ಯಾದಿ ಸರಳ ನಿಯಮ ಪಾಲನೆಗಳ ಮೂಲಕ ನಾವು ಈ ಸಾಂಕ್ರಾಮಿಕ ರೋಗದಿಂದ ದೂರ ಇರಲು ಸಾಧ್ಯವಿದೆ. ಆತಂಕ ಹಬ್ಬಿಸುವ ಕೆಲಸವನ್ನಂತೂ ಯಾರೂ ಮಾಡಲೇಬಾರದು.

ಇದನ್ನೂ ಓದಿ | ಸಂಪಾದಕೀಯ | ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊಗಳು

Virat kohli: ಹ್ಯಾರಿಸ್ ರವೂಫ್ 5 ನೇ ಓವರ್​ನಲ್ಲಿ ಆಕ್ರಮಣ ಮುಂದಾದರು. ಆದರೆ ಮೊದಲ ಓವರ್​ನಲ್ಲಿ 17 ರನ್​ ನೀಡಿದ ಕಾರಣ ಅವರಿಗೆ ಉತ್ತಮ ಆರಂಭ ಸಿಗಲಿಲ್ಲ. ಆದಾಗ್ಯೂ, ನಂತರ ಅದ್ಭುತ ಪುನರಾಗಮನ ಮಾಡಿದರು. ತಮ್ಮ ವೇಗದಿಂದ ಇಂಗ್ಲೆಂಡ್ ಬ್ಯಾಟರ್​ಗಳಿಗೆ ತೊಂದರೆ ನೀಡಿದರು.

VISTARANEWS.COM


on

Virat kohli
Koo

ಬೆಂಗಳೂರು: ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಇಂಗ್ಲೆಂಡ್ ವಿರುದ್ಧ ಟಿ20 ಐ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಉಭಯ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟಿ 20 ಐ ಸರಣಿಯ ಎರಡನೇ ಪಂದ್ಯ ಶನಿವಾರ (ಮೇ 25) ಬರ್ಮಿಂಗ್​ಹ್ಯಾಮ್​ನ ಎಜ್​ಬಾಸ್ಟನ್​ನಲ್ಲಿ ನಡೆಯಿತು. ದೀರ್ಘಕಾಲದ ಗಾಯದ ನಂತರ ಪಾಕಿಸ್ತಾನ ತಂಡಕ್ಕೆ ಮರಳಿದ ಹ್ಯಾರಿಸ್ ರವೂಫ್, ಚೆಂಡಿನೊಂದಿಗೆ ತಂಡಕ್ಕೆ ಪ್ರಮುಖ ಪಾತ್ರ ವಹಿಸಿದರು ಮತ್ತು ತಮ್ಮ ತಂಡದ ಪರವಾಗಿ ನಿರ್ಣಾಯಕ ವಿಕೆಟ್​ಗಳನ್ನು ಪಡೆದರು. ಆದಾಗ್ಯೂ, ಬರ್ಮಿಂಗ್​ಹ್ಯಾಮ್​ನ ಎಜ್​ಬಾಸ್ಟನ್​ನಲ್ಲಿ ನಡೆದ ಪಂದ್ಯ ಗೆಲ್ಲಲು ಅವರು ತಮ್ಮ ತಂಡಕ್ಕೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರಿಗೆ ಕೊಹ್ಲಿ (Virat kohli) ಕಾಡಿದರು.

ಹ್ಯಾರಿಸ್ ರವೂಫ್ 5 ನೇ ಓವರ್​ನಲ್ಲಿ ಆಕ್ರಮಣ ಮುಂದಾದರು. ಆದರೆ ಮೊದಲ ಓವರ್​ನಲ್ಲಿ 17 ರನ್​ ನೀಡಿದ ಕಾರಣ ಅವರಿಗೆ ಉತ್ತಮ ಆರಂಭ ಸಿಗಲಿಲ್ಲ. ಆದಾಗ್ಯೂ, ನಂತರ ಅದ್ಭುತ ಪುನರಾಗಮನ ಮಾಡಿದರು. ತಮ್ಮ ವೇಗದಿಂದ ಇಂಗ್ಲೆಂಡ್ ಬ್ಯಾಟರ್​ಗಳಿಗೆ ತೊಂದರೆ ನೀಡಿದರು.

ಹ್ಯಾರಿಸ್ ರವೂಫ್ ತಮ್ಮ ಎರಡನೇ ಸ್ಪೆಲ್​ನಲ್ಲಿ ಆಕ್ರಮಣಕ್ಕೆ ಬಂದಾಗ, ಅವರಿಗೆ ಪ್ರೇಕ್ಷಕರಿಂದ ಉತ್ತಮ ಸ್ವಾಗತ ಸಿಗಲಿಲ್ಲ. ವೇಗಿ ಎರಡನೇ ಓವರ್​ನ ಮೊದಲ ಎಸೆತವನ್ನು ಎಸೆಯುತ್ತಿದ್ದಂತೆ ಅಭಿಮಾನಿಗಳು “ಕೊಹ್ಲಿ ಕೊಹ್ಲಿ” ಎಂದು ಕೂಗಿದರು. ಹ್ಯಾರಿಸ್ ರವೂಫ್ ಅವರನ್ನು ಕೆಲವು ಸಮಯದಿಂದ “ಕೊಹ್ಲಿ ಕೊಹ್ಲಿ” ಎಂದು ಕರೆಯಲಾಗುತ್ತದೆ. ಏಕೆಂದರೆ 2022 ರ ಟಿ 20 ವಿಶ್ವಕಪ್​​ನಲ್ಲಿ ಎಂಸಿಜಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ ಕೊಹ್ಲಿ ರವೂಫ್​ಗೆ ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ: Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ 20 ಐ ಪಂದ್ಯದಲ್ಲಿ, ಹ್ಯಾರಿಸ್ ರೌಫ್ 34 ರನ್​ಗಳಿಗೆ 2 ವಿಕೆಟ್​ ಪಡೆದರು. ಎದುರಾಳಿಯನ್ನು ಒಟ್ಟು 200 ಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ತಮ್ಮ ತಂಡಕ್ಕೆ ಸಹಾಯ ಮಾಡಿದರು. ಇವರಲ್ಲದೆ, ಶಾಹೀನ್ ಅಫ್ರಿದಿ ಮತ್ತು ಇಮಾದ್ ವಾಸಿಮ್ ಎರಡು ವಿಕೆಟ್ ಪಡೆದು ಎದುರಾಳಿಗಳನ್ನು 183 ರನ್​ಗಳಿಗೆ ನಿಯಂತ್ರಿಸಿದರು.

ಇದು ಪಾಕಿಸ್ತಾನದಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಫಖರ್ ಜಮಾನ್ 45 ರನ್ ಗಳಿಸಿದರೆ ನಾಯಕ ಬಾಬರ್ ಅಜಮ್ 32 ರನ್ ಗಳಿಸಿದರು. ಆದಾಗ್ಯೂ ಕೇವಲ 160 ರನ್​ಗಳಿಗೆ ಆಲೌಟ್ ಆದರು ಮತ್ತು ಪಂದ್ಯವನ್ನು 23 ರನ್ ಗಳಿಂದ ಕಳೆದುಕೊಂಡರು.

ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಎರಡನೇ ಟಿ 20 ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಇದು ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ ಎಂದು ಅವರು ಒಪ್ಪಿಕೊಂಡರು. ಆದರೆ ಬ್ಯಾಟಿಂಗ್​ನಲ್ಲಿ ವಿಫಲಗೊಂಡೆವು ಎಂದು ಹೇಳಿದ್ದಾರೆ.

ಇದು ಸಾಧಾರಣ ಸ್ಕೋರ್ ಆಗಿತ್ತು, ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದವು. ದೊಡ್ಡ ಜತೆಯಾಟ ಮೂಡಿ ಬರಲಿಲ್ಲ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ತಿಳಿದಿದ್ದಾರೆ. ನಾವು ಪ್ರತಿಯೊಬ್ಬ ಆಟಗಾರನ ಪಾತ್ರವನ್ನು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Hardik Pandya : ಹಾರ್ದಿಕ್ ಪಾಂಡ್ಯ ಕೆಲವು ವರ್ಷಗಳ ಹಿಂದೆ ತಮ್ಮ ವೃತ್ತಿಪರ ಕ್ರಿಕೆಟ್ ಪ್ರಯಾಣ ಪ್ರಾರಂಭಿಸಿದ ಬಳಿಕ ಕೆಟ್ಟ ಕಾರಣಗಳಿಗೋಸ್ಕರವೇ ಆಗಾಗ ಸುದ್ದಿಯಾಗುತ್ತಾರೆ. ಜನರು ಅವರ ವೈಯಕ್ತಿಕ ಜೀವನದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ನತಾಶಾ ಅವರನ್ನು ಮದುವೆಯಾಗುವ ಮೊದಲು ಮಗುವಾಗಿದ್ದೆಲ್ಲ ಘಟನೆಗಳು ನಡೆದಿದೆ.

VISTARANEWS.COM


on

Hardik Pandya
Koo

ನವದೆಹಲಿ: ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ಈಗ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಕ್ರಿಕೆಟ್​ ಕಾರಣಕ್ಕೆ ಅಲ್ಲ. ಬದಲಾಗಿ ಅವರ ವೈವಾಹಿಕ ಜೀವನದ ಕಾರಣಕ್ಕೆ. ಅವರ ಪತ್ನಿ ನತಾಶಾ ಸ್ಟಾಂಕೊವಿಕ್ ಅವರನ್ನು ತೊರೆದು ಹೋಗಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಹೀಗಾಗಿ ಅವರ ಪರ್ಸನಲ್ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಅವರು ಆರಂಭದಲ್ಲಿಯೂ ಒಂದು ಬಾರಿ ಲವ್​ ಬ್ರೇಕ್ ಅಪ್​ ಮಾಡಿಕೊಂಡಿದ್ದರು ಎಂಬ ಸುದ್ದಿಯೊಂದು ಇದೀಗ ಮತ್ತೆ ತಲೆ ಎತ್ತಿದೆ. ಅವರು ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದ ಕೆಲವು ವರ್ಷಗಳ ನಂತರ, ಬಾಲಿವುಡ್ ನಟಿ ಎಲಿ ಅವ್ರಾಮ್ ಅವರೊಂದಿಗೆ ಸಣ್ಣ ಅವಧಿಯಲ್ಲಿ ಡೇಟಿಂಗ್ ಮಾಡುತ್ತಿದ್ದರು. ಆದಾಗ್ಯೂ, ಪಾಂಡ್ಯ ಅವರ ವಿವಾದಾತ್ಮಕ ಟಿವಿ ಶೋನಲ್ಲಿ (ಕಾಫಿ ವಿತ್ ಕರಣ್​​) ಕಾಣಿಸಿಕೊಂಡ ನಂತರ ಅವರ ಕುತೂಹಲಕಾರಿ ಪ್ರೇಮಕಥೆ ಅಂತ್ಯಗೊಂಡಿತ್ತು.

ಹಾರ್ದಿಕ್ ಪಾಂಡ್ಯ ಕೆಲವು ವರ್ಷಗಳ ಹಿಂದೆ ತಮ್ಮ ವೃತ್ತಿಪರ ಕ್ರಿಕೆಟ್ ಪ್ರಯಾಣ ಪ್ರಾರಂಭಿಸಿದ ಬಳಿಕ ಕೆಟ್ಟ ಕಾರಣಗಳಿಗೋಸ್ಕರವೇ ಆಗಾಗ ಸುದ್ದಿಯಾಗುತ್ತಾರೆ. ಜನರು ಅವರ ವೈಯಕ್ತಿಕ ಜೀವನದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ನತಾಶಾ ಅವರನ್ನು ಮದುವೆಯಾಗುವ ಮೊದಲು ಮಗುವಾಗಿದ್ದೆಲ್ಲ ಘಟನೆಗಳು ನಡೆದಿದೆ. ಹಾರ್ದಿಕ್ ಪಾಂಡ್ಯ ಅವರು ಸ್ಟಾಂಕೋವಿಕ್ ಅವರನ್ನು ಮದುವೆಯಾಗುವ ಮೊದಲು, ಬಾಲಿವುಡ್ ನಟಿ ಎಲಿ ಅವ್ರಾಮ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದರು.

ಹಲವಾರು ಊಹಾಪೋಹಗಳು, ಸುದ್ದಿಗಳ ನಂತರ ಇಬ್ಬರೂ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದರು. ಹಾರ್ದಿಕ್ ಅವರ ಹಿರಿಯ ಸಹೋದರ ಕೃನಾಲ್ ಪಾಂಡ್ಯ ಅವರ ಮದುವೆಯ ವೇಳೆ ಎಲಿ ಕಾಣಿಸಿಕೊಂಡಿದ್ದರು. ಅಲ್ಲೆಲ್ಲ ಓಡಾಡಿದ್ದರು.ಅವರ ಬೇಟಿಯ ಉದ್ದಕ್ಕೂ, ಹಾರ್ದಿಕ್ ಅಥವಾ ಎಲಿ ಇಬ್ಬರ ನಡುವೆ ಪ್ರಣಯ ಸಂಬಂಧವಿದೆ ಎಂಬ ವದಂತಿಗಳನ್ನು ದೃಢಪಡಿಸಲಿಲ್ಲ ಅಥವಾ ನಿರಾಕರಿಸಿರಲಿಲ್ಲ.

ಎಲಿ ಅವ್ರಾಮ್ ಜತೆ ಬ್ರೇಕ್​ಅಪ್​​

ಟಿವಿ ಶೋ ‘ಕಾಫಿ ವಿತ್ ಕರಣ್’ ನಲ್ಲಿ ಹಾರ್ದಿಕ್ ಅವರ ವಿವಾದಾತ್ಮಕ ಹೇಳಿಕೆಯೂ ಅವರಿಬ್ಬರ ಬ್ರೇಕ್​ಅಪ್​ಗೆ ಕಾರಣ ಎನ್ನಲಾಗಿದೆ. ಅಲ್ಲಿ ಕ್ರಿಕೆಟಿಗ ಮಹಿಳೆಯರ ಬಗ್ಗೆ ಕೆಲವು ಆಕ್ಷೇಪಾರ್ಹ ಕಾಮೆಂಟ್​ಗಳನ್ನು ಮಾಡಿದ್ದರು. ಈ ಕಾರಣಕ್ಕೆ ಬಿಸಿಸಿಐನಿಂದ ದಂಡನೆಯನ್ನೂ ಎದುರಿಸಿದ್ದರು.

ಇದನ್ನೂ ಓದಿ: Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

ವಿವಾದ ಭುಗಿಲೆದ್ದ ನಂತರ ಎಲಿ ಅವ್ರಾಮ್ ತನ್ನ ಆಘಾತ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಹಾರ್ದಿಕ್ ಅವರನ್ನು ವೈಯಕ್ತಿಕವಾಗಿ ಬಲ್ಲೆ ಮತ್ತು ಇತರ ಹೆಣ್ಣಿನ ಬಗ್ಗೆ ಇಷ್ಟು ಅಸಹ್ಯಕರ ರೀತಿಯಲ್ಲಿ ಮಾತನಾಡಿದ ಅವರ ಲಜ್ಜೆಯಿಲ್ಲ. ಅವರಿಗೆ ಟೀಕೆ ಮಾಡಲಾಗುತ್ತಿರುವುದು ಸರಿಯಾದ ಕ್ರಮ ಎಂದಿದ್ದರು.

ಎಲಿ ಜತೆ ಬ್ರೇಕಪ್ ಆದ ನಂತರ ಹಾರ್ದಿಕ್ ಪಾಂಡ್ಯ ಮತ್ತೊಬ್ಬ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಮತ್ತೆ ಪ್ರೀತಿಯನ್ನು ಕಂಡುಕೊಂಡರು. ಇವರಿಬ್ಬರು 2020 ರಲ್ಲಿ ವಿವಾಹವಾದರು ಮತ್ತು ಕೆಲವು ತಿಂಗಳ ನಂತರ ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದ್ದರು.

Continue Reading

ಕರ್ನಾಟಕ

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Siddaramaiah: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಮನ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ನಿರ್ಬಂಧವನ್ನು ವಿಧಿಸಲಾಗಿತ್ತು. ಮೊದಲೇ ಸಾಲುಗಟ್ಟಿ ನಿಂತಿದ್ದ ಭಕ್ತರಿಗೆ ಮತ್ತೆ ಕಾಯುವುದು ಶಿಕ್ಷೆಯಾಗಿ ಪರಿಣಮಿಸಿತು. ಸಿಎಂ, ಡಿಸಿಎಂ ಬರಲು ಸಾಕಷ್ಟು ಸಮಯ ಇದ್ದರೂ ಅವಧಿಗೆ ಮುನ್ನವೇ ಭಕ್ತರನ್ನು ತಡೆಯಲಾಗಿತ್ತು. ಕಾದು ಕಾದು ಸುಸ್ತಾಗಿದ್ದ ಭಕ್ತರ ಸಿಟ್ಟು ನೆತ್ತಿಗೇರಿತ್ತು. ರಾಜಕಾರಣಿಗಳ ಕಾರಣದಿಂದಾಗಿ ದೇವರ ದರ್ಶನಕ್ಕೂ ಇಷ್ಟು ಕಾಯಬೇಕಲ್ಲ ಎಂದು ಹಿಡಿಶಾಪ ಹಾಕಿದ್ದು ಕೂಡ ಕಂಡುಬಂತು.

VISTARANEWS.COM


on

Siddaramaiah
Koo

ಮಂಗಳೂರು: ಲೋಕಸಭೆ ಚುನಾವಣೆ ಪ್ರಚಾರದ ಭರಾಟೆ ಮುಗಿದು, ತುಸು ನಿರಾಳರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಶನಿವಾರ (ಮೇ 25) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ತೆರಳಿ, ದೇವರ ಆಶೀರ್ವಾದ ಪಡೆದರು. ಅಲ್ಲದೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿಯಾದರು. ಇದೇ ವೇಳೆ, ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ನೀಡುವ ತೀರ್ಮಾನದ ಕುರಿತು ಸಿದ್ದರಾಮಯ್ಯ ಅವರಿಗೆ ಹಲವು ಹೆಣ್ಣುಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಸಿದ್ದರಾಮಯ್ಯ ಅವರೇ ಪೋಸ್ಟ್‌ ಮಾಡಿದ್ದಾರೆ.

ಧರ್ಮಸ್ಥಳ ಭೇಟಿ, ಮಹಿಳೆಯರ ಮೆಚ್ಚುಗೆ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರು ಫೋಟೊಗಳ ಸಮೇತ ಪೋಸ್ಟ್‌ ಮಾಡಿದ್ದಾರೆ. “ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕೆಲವು ಮಹಿಳೆಯರು ನಗುಮೊಗದಲ್ಲಿ ನನ್ನ ಬಳಿ ಬಂದು ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿಯಿಂದ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ, ನೀವು ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ನಾವು ದೂರದ ಊರಿನಿಂದ ದೇವರ ದರ್ಶನಕ್ಕೆ ಬರಲು ಅನುಕೂಲ ಆಗಿದೆ, ನಿಮಗೆ ಮಂಜುನಾಥ ಸ್ವಾಮಿ ದೀರ್ಘ ಆಯಸ್ಸು, ಆರೋಗ್ಯ ನೀಡಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗುವಂತಹ ಕಾರ್ಯಕ್ರಮಗಳು ನಿಮ್ಮಿಂದ ಜಾರಿಯಾಗಲಿ ಎಂದು ಆಶೀರ್ವದಿಸಿದರು. ಈ ದಿನ ದೇವರ ದರ್ಶನ ಭಾಗ್ಯದ ಜೊತೆಗೆ ಹತ್ತಾರು ತಾಯಂದಿರ ಆಶೀರ್ವಾದ ಪಡೆದ ಧನ್ಯತಾಭಾವ ನನ್ನದು” ಎಂಬುದಾಗಿ ಅವರು ಪೋಸ್ಟ್‌ ಮಾಡಿದ್ದಾರೆ.

ಸಿಎಂಗೆ ಪೂರ್ಣಕುಂಭ ಸ್ವಾಗತ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಧರ್ಮಸ್ಥಳದ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಸಿಕ್ಕಿತು. ವಾದ್ಯ ಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಪರವಾಗಿ ಧರ್ಮಸ್ಥಳ ಧರ್ಮದರ್ಶಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತಿಸಿದರು.

ವಿಶೇಷ ಪೂಜೆ, ಡಾ. ವೀರೇಂದ್ರ ಹೆಗ್ಗಡೆ ಭೇಟಿ

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಕೆಲ ಹೊತ್ತು ಚರ್ಚೆ ನಡೆಸಿದರು.

ಧರ್ಮಸ್ಥಳ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, “ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. “ನಾನು ಹಾಗೂ ಮುಖ್ಯಮಂತ್ರಿಗಳು ಮಂಜುನಾಥನ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: CM Siddaramaiah: ಸಿದ್ದು, ಡಿಕೆಶಿ ಧರ್ಮಸ್ಥಳ ದೇವಸ್ಥಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಜೈಶ್ರೀರಾಮ್‌, ಮೋದಿ ಕೀ ಜೈ ಘೋಷಣೆ!

Continue Reading

ಪ್ರಮುಖ ಸುದ್ದಿ

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Shikhar Dhawan

VISTARANEWS.COM


on

Shikhar Dhawan
Koo

ಬೆಂಗಳೂರು: ಎಡಗೈ ಬ್ಯಾಟರ್​ ಶಿಖರ್ ಧವನ್ (Shikhar Dhawan) ಭಾರತ ಕ್ರಿಕೆಟ್​ ತಂಡ ನೋಡಿದ ಅತ್ಯುತ್ತಮ ಆರಂಭಿಕ ಬ್ಯಾಟರ್​ಗಳಲ್ಲಿ ಒಬ್ಬರು. ಆದರೆ ಅವರ ವೈಯಕ್ತಿಕ ಜೀವನವು ಸ್ವಲ್ಪ ಮಟ್ಟಿಗೆ ಕ್ಲಿಷ್ಟಕರವಾಗಿದೆ. ಅವರ ಜೀವನ ಕತೆಯು ಪ್ರಕ್ಷುಬ್ಧತೆಯಿಂದ ತುಂಬಿಕೊಂಡಿದೆ. ಕಳೆದ ವರ್ಷ ಪರಸ್ಪರ ಒಪ್ಪಿಗೆಯೊಂದಿಗೆ ಪತ್ನಿ ಆಯೆಷಾ ಮುಖರ್ಜಿ ಅವರಿಂದ ಬೇರ್ಪಟ್ಟ ಬಳಿಕ ನಾನಾ ಘಟನೆಗಳು ಸಂಭವಿಸಿವೆ. 2023 ರ ಅಕ್ಟೋಬರ್​ನಲ್ಲಿ 11 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಲು ಪತ್ನಿ ಮತ್ತು ಅವರ ನಡುವಿನ ಹೊಂದಾಣಿಕೆ ಕೊರತೆಯೇ ಕಾರಣ. ಇದೇ ಹಿನ್ನೆಲೆಯಲ್ಲಿ ದೆಹಲಿಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನಕ್ಕೆ ಒಪ್ಪಿತ್ತು. ಆಗಸ್ಟ್ 8, 2020 ರಿಂದ ಧವನ್ ಮತ್ತು ಆಯೆಷಾ ಗಂಡ ಮತ್ತು ಹೆಂಡತಿಯಾಗಿ ಜತೆಗಿಲ್ಲ.

ಧವನ್ ತನ್ನ ಮಗ ಜೊರಾವರ್ ನಿಂದ ದೂರವಾಗಿರುವ ಬಗ್ಗೆ ಬೇಸರ ಹೊಂದಿದ್ದಾರೆ. ಪುತ್ರ ಆಸ್ಟ್ರೇಲಿಯಾದ ಪ್ರಜೆಯಾಗಿದ್ದು, ತನ್ನ ತಾಯಿಯೊಂದಿಗೆ ಮೆಲ್ಬೋರ್ನ್​ನಲ್ಲಿ ಇದ್ದಾನೆ. ಸಮಸ್ಯೆ ಹೊರತಾಗಿಯೂ ಧವನ್​ ಪುತ್ರನಿಗಾಗಿ ಹಂಬಲಿಸುತ್ತಿರುತ್ತಾರೆ. ಆತನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಆಗಾಗ ಹೇಳುತ್ತಿರುತ್ತಾರೆ. ಏತನ್ಮಧ್ಯೆ ಶಿಖರ್ ಧವನ್​ ಭಾರತ ಮಹಿಳಾ ತಂಡದ ಲೆಜೆಂಡ್​​ ಮಿಥಾಲಿ ರಾಜ್ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಮಿಥಾಲಿ ಜೊತೆ ಧವನ್ ಹೆಸರು ಲಿಂಕ್?

ಕೆಲವು ದಿನಗಳ ಹಿಂದೆ ಧವನ್ ಬಾಲಿವುಡ್ ನಟಿ ಹುಮಾ ಖುರೇಷಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದರು. ಆದರೆ ಅವರಲ್ಲಿ ಇಬ್ಬರೂ ಮಸಾಲಾ ಸುದ್ದಿಗೆ ಪ್ರತಿಕ್ರಿಯಿಸಿರಲಿಲ್ಲ. ಅದು ಹಾಗೆಯೇ ಅಂತ್ಯಗೊಂಡಿತು. ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರೊಂದಿಗೆ ಭಾರತೀಯ ಕ್ರಿಕೆಟಿಗನ ಹೆಸರು ತಳುಕು ಹಾಕಿಕೊಂಡಿದೆ.

ಮಿಥಾಲಿ ಇನ್ನೂ ಅವಿವಾಹಿತರಾಗಿದ್ದು, ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ವೀಕ್ಷಕವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಕೂಡ ಆಗಿದ್ದಾರೆ. ಏತನ್ಮಧ್ಯೆ, ಧವನ್ ಇತ್ತೀಚೆಗೆ ಟಾಕ್ ಶೋವೊಂದರಲ್ಲಿ ಮಾತನಾಡುವಾಗ ಮಿಥಾಲಿ ಅವರೊಂದಿಗೆ ಡೇಟಿಂಗ್ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.

ಇದನ್ನೂ ಓದಿ: Natasa Stankovic : ಡೈವೋರ್ಸ್​ ಗಾಸಿಪ್​ ನಡುವೆಯೇ ಬೇರೊಬ್ಬರ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ ಪತ್ನಿ

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಜಿಯೋ ಸಿನೆಮಾದ ‘ಧವನ್ ಕರೆಂಗೆ’ ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ್ದರು. ಈ ವೇಳೆ ಅವರು ಮಿಥಾಲಿ ಅವರನ್ನು ಮದುವೆಯಾಗುವ ವದಂತಿ ಬಗ್ಗೆ ಮಾತನಾಡಿದ್ದಾರೆ. ಇದೊಂದು ಅತ್ಯಂತ ಶಾಕಿಂಗ್ ಘಟನೆ ಎಂದಿದ್ದಾರೆ. ನಿಮಗಾದ ಶಾಕಿಂಗ್​ ನ್ಯೂಸ್​ ಯಾವುದು ಎಂದು ಕೇಳಿದ್ದಕ್ಕೆ, , “ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂಬ ವಿಷಯ ಎಂದ ಹೇಳಿದ್ದಾರೆ.

ರಿಷಭ್ ಪಂತ್​ಗೆ ಶ್ಲಾಘನೆ

15 ತಿಂಗಳ ಸವಾಲಿನ ಅವಧಿಯ ನಂತರ ಕ್ರಿಕೆಟ್​ಗೆ ಮರಳಿದ್ದ ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಧವನ್ ಶ್ಲಾಘಿಸಿದರು. ಡಿಸೆಂಬರ್ 2022 ರಲ್ಲಿ, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಪಂತ್ ಗಾಯಗೊಂಡಿದ್ದರು. ಈ ಘಟನೆಯ ನಂತರ, ಪಂತ್ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ನಂತರ ಎನ್​​ಸಿಎನಲ್ಲಿ ಪುನಶ್ಚೇತನ ಮಾಡಿದ್ದಾರೆ. ಅವರ ಆತ್ಮಸ್ಥೈರ್ಯವನ್ನು ಧವನ್ ಹೊಗಳಿದ್ದಾರೆ.

Continue Reading
Advertisement
Virat kohli
ಪ್ರಮುಖ ಸುದ್ದಿ1 min ago

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊಗಳು

Union Minister Pralhad Joshi latest statement about channagiri case
ಕರ್ನಾಟಕ4 mins ago

Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್‌ ಜೋಶಿ

childrens summer camp closing ceremony at yallapur
ಉತ್ತರ ಕನ್ನಡ1 hour ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ1 hour ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ1 hour ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Shikhar Dhawan
ಪ್ರಮುಖ ಸುದ್ದಿ2 hours ago

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Union Minister Pralhad Joshi statement about Prajwal revanna case
ಕರ್ನಾಟಕ2 hours ago

Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

opposition of the girl friend family to the marriage Suicide of a offended lover
ಕ್ರೈಂ2 hours ago

Self Harming: ಮದುವೆಗೆ ಪ್ರೇಯಸಿ ಕುಟುಂಬಸ್ಥರ ವಿರೋಧ; ನೊಂದ ಪ್ರಿಯಕರ ಆತ್ಮಹತ್ಯೆ

International Suryamitra Annual Award Ceremony on 27th May
ಕರ್ನಾಟಕ2 hours ago

Selco India: ಬೆಂಗಳೂರಿನಲ್ಲಿ ಮೇ 27ರಂದು ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

Engineers suspended
ಕರ್ನಾಟಕ2 hours ago

Engineers Suspended: ಸರ್ಕಾರಿ ಐಬಿಯಲ್ಲಿ ಕುಡಿದು ಮಜಾ ಮಾಡಿದ್ದ ಐವರು ಜಿಪಂ ಎಂಜಿನಿಯರ್‌ಗಳ ಅಮಾನತು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌