Fraud case: ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ನಟ! - Vistara News

ಪ್ರಮುಖ ಸುದ್ದಿ

Fraud case: ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ನಟ!

Fraud case: ಆ ಲಿಂಕ್ ಒತ್ತಿ ಇಷ್ಟು ಹಣ ಕಳೆದುಕೊಂಡರು, ಈ ಲಿಂಕ್ ಬ್ಯಾಂಕ್ ಬ್ಯಾಲೆನ್ಸ್ ಪೂರ್ತಿ ಕಳೆದುಕೊಂಡರು ಎಂಬ ಸುದ್ದಿ ದಿನ ಕೇಳುತ್ತೇವೆ. ಆದರೂ ಮತ್ತೆ ಮತ್ತೆ ಮೋಸ ಹೋಗುತ್ತಾ ಇರುತ್ತೇವೆ. ದಾದರ್‌ನಲ್ಲಿ ನಟನೊಬ್ಬ ಫೋನ್‌ನಲ್ಲಿ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಹೋಗಿ ವಂಚಕನಿಂದ ಟೋಪಿ ಹಾಕಿಸಿಕೊಂಡ ಘಟನೆ ನಡೆದಿದೆ.

VISTARANEWS.COM


on

Fraud case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮುಂಬೈ: ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ (Digital) ನಿಂದ ಆಗುತ್ತಿದೆ. ಒಂದು ಪ್ಯಾಕೆಟ್‌ ಬಿಸ್ಕೇಟ್‌ ನಿಂದ ಹಿಡಿದು ಹಾಕುವ ಬಟ್ಟೆವರೆಗೂ ಫೋನ್‌ ಮೂಲಕ ವ್ಯವಹಾರ ನಡೆಸುತ್ತೇವೆ. ಪರ್ಸ್‌ ಮರೆತರೂ ಪರ್ವಾಗಿಲ್ಲ, ಮೊಬೈಲ್‌ ಹಾಗೂ ಆನ್‌ಲೈನ್‌ ಬ್ಯಾಂಕಿಂಗ್‌ನ ಪಾಸವರ್ಡ್‌ ನೆನಪಿದ್ದರೆ ಸಾಕು ಎನ್ನುವವರೇ ಹೆಚ್ಚು. ಜನರು ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್ ನಲ್ಲಿಯೇ ಮಾಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ (Cyber Crime) ಘಟನೆಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ, ಮೆಸೇಜ್ ಗಳನ್ನು ಕಳುಹಿಸುವ ಮೂಲಕ ಅವರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ದಾಖಲಾಗಿದೆ. ದಾದರ್‌ನಲ್ಲಿ ನಟನೊಬ್ಬ ಫೋನ್ ನಲ್ಲಿ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಹೋಗಿ ವಂಚಕನಿಂದ (Fraud case) ತನ್ನ ಬ್ಯಾಂಕ್ ಖಾತೆಯಿಂದ 77,000 ರೂ ಕಳೆದುಕೊಂಡಿದ್ದಾನೆ.

ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಆಜಾದ್ (59) ವಂಚನೆಗೆ ಒಳಗಾದ ಸಂತ್ರಸ್ತ. ಈತ ಗೂಗಲ್ ನಲ್ಲಿ ಮೂಳೆ ವೈದ್ಯರ ಫೋನ್ ನಂಬರ್ ಅನ್ನು ಹುಡುಕಿ ಜೂನ್ 6ರಂದು ಅವರಿಗೆ ಕರೆ ಮಾಡಿದ್ದಾನೆ. ಆ ಕಡೆ ಕರೆ ಸ್ವೀಕರಿಸಿದ ವ್ಯಕ್ತಿ ವೈದ್ಯರೊಂದಿಗೆ ಮಾತನಾಡುವ ಮೊದಲು 10 ರೂ ಪಾವತಿಸಿ ನೊಂದಾಯಿಸಿಕೊಳ್ಳಲು ಹೇಳಿದ್ದಾನೆ. ಹಾಗೇ ಆತ ಆಜಾದ್ ಗೆ ಎರಡು ಬಾರಿ ಲಿಂಕ್ ಕಳುಹಿಸಿದನು. ಆದರೆ ಆಜಾದ್ ಆ ಲಿಂಕ್ ಗೆ ಮೊತ್ತವನ್ನು ಕಳುಹಿಸಲು ವಿಫಲನಾದನು. ಆದರೂ ಅವರ ಖಾತೆಯಿಂದ 77,000 ರೂ. ಲೂಟಿಯಾಗಿದೆ.

ಆಜಾದ್‌ಗೆ ಅನುಮಾನ ಬಂದು ತಕ್ಷಣ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಎಚ್ಚರಿಕೆ ನೀಡಿದರೂ ಕೂಡ ವಂಚಿತನ ಲಿಂಕ್ ಟ್ಯಾಪ್ ಮಾಡಿದ ನಾಲ್ಕು ದಿನಗಳ ನಂತರ ಅವನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಬ್ಯಾಂಕ್ ಹಣ ಕಡಿತಗೊಂಡ ಬಗ್ಗೆ ಸೋಮವಾರ ಆಜಾದ್ ಮೊಬೈಲ್‌ಗೆ ನಾಲ್ಕು ಮಸೇಜ್ ಬಂದಿದೆ. ಹಾಗಾಗಿ ಆತ ತಕ್ಷಣ ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿದರೂ ಕೂಡ ಅವನಿಗೆ ಅವನ ಹಣ ಮರಳಿ ಸಿಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಆಜಾದ್ ಪ್ರಕರಣ ದಾಖಲಿಸಿದ್ದು, 420(ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: Free Bus Problem: ನಮಗೆ ಫ್ರೀ ಬಸ್‌ ಬೇಡ, ವಿದ್ಯೆ ಬೇಕು! ಈ ವಿದ್ಯಾರ್ಥಿನಿ ಮಾತಿನ ವಿಡಿಯೊ ನೋಡಿ

ಹಾಗಾಗಿ ಜನರು ಆನ್‌ಲೈನ್ ನಲ್ಲಿ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದಿರಿ. ನಿಮಗೆ ತಿಳಿಯದ ಯಾವುದೇ ಲಿಂಕ್‌ಗಳನ್ನು ಓಪನ್ ಮಾಡಲು ಹೋಗಬೇಡಿ. ಇದರಿಂದ ನೀವು ಸೈಬರ್ ಅಟ್ಯಾಕ್‌ಗಳಿಂದ ತಪ್ಪಿಸಿಕೊಳ್ಳಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ಪ್ರಮುಖ ಸುದ್ದಿ

ಅಗ್ನಿ ಪರೀಕ್ಷೆ ಗೆದ್ದ ‘ವಿಜಯ್‌‌‌’, ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟ

VISTARANEWS.COM


on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್​ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಅಸೆಂಬ್ಲಿಯಲ್ಲಿ ವಿಜಯ್​ ನೇತೃತ್ವದ ಟಿವಿಕೆಗೆ 144 ಸದಸ್ಯರ ಬೆಂಬಲ ಸಿಕ್ಕಿದೆ. 22 ಶಾಸಕರು ವಿಶ್ವಾಸ ಮತದ ವಿರುದ್ಧ ಮತ ಚಲಾಯಿಸಿದ್ದರು. ಐವರು ಶಾಸಕರು ಮತದಾನದಿಂದ ದೂರ ಉಳಿದಿದ್ದರು. ಎಐಡಿಎಂಕೆಯ ಒಂದು ಬಣ ಅಸೆಂಬ್ಲಿಯಲ್ಲಿ ಟಿವಿಕೆ ಪರ ಮತ ಚಲಾಯಿಸಿದೆ. ವಿರೋಧಪಕ್ಷ ಡಿಎಂಕೆ ಸಭಾತ್ಯಾಗ ಮಾಡಿತ್ತು. 108 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯ್ ನೇತೃತ್ವದ ಟಿವಿಕೆ ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊಮ್ಮಿತ್ತು. ವಿಜಯ್ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದರು.


ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟ, 30 ಶಾಸಕರಿಂದ ಟಿವಿಕೆಗೆ ಮತ
ವಿಜಯ್ ವಿಶ್ವಾಸ ಮತ ಯಾಚನೆ ವೇಳೆ 30 ಎಐಎಡಿಎಂಕೆ ಶಾಸಕರು ಟಿವಿಕೆ ಪರ ಮತಚಲಾಯಿಸಿದ್ದು, ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಇದರೊಂದಿಗೆ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಡಿಎಂಕೆಯಲ್ಲಿ ಈಗ ಅತಿ ದೊಡ್ಡ ಆಂತರಿಕ ಸಂಘರ್ಷ ಏರ್ಪಟ್ಟಿದೆ. ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ 47 ಶಾಸಕರನ್ನು ಹೊಂದಿದೆ. ಇದರಲ್ಲಿ 30 ಶಾಸಕರು ಟಿವಿಕೆ ಪರ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಪಕ್ಷದ ವಿಪ್​​ ಹೊರತಾಗಿಯೂ, ಈ ಶಾಸಕರು ವಿಜಯ್​​ಗೆ ಜೈ ಎಂದಿದ್ದಾರೆ. ವಿಜಯ್​ ಪರ ಮತ ಚಲಾಯಿಸಿದ ಎಐಎಡಿಎಂಕೆ ಶಾಸಕರು ಪಕ್ಷಾಂತರ ನಿಷೇಧ ಕಾಯಿದೆ ತೂಗು ಕತ್ತಿಯಿಂದ ಪಾರಾಗ್ತಾರಾ ಅನ್ನೋದು ಸದ್ಯದ ಕುತೂಹಲವಾಗಿದೆ.

Continue Reading

Latest

ಪ್ರಶ್ನೆ ಪತ್ರಿಕೆ ಸೋರಿಕೆ : ನೀಟ್‌ ಪರೀಕ್ಷೆ ರದ್ದು, ಮರುಪರೀಕ್ಷೆಗೆ ಆದೇಶ

VISTARANEWS.COM


on

ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ NTA 2026ನೇ ಸಾಲಿನ ನೀಟ್‌-ಯುಜಿ, ಪರೀಕ್ಷೆಯನ್ನು ರದ್ದುಗೊಳಿಸಿದೆ.
ಮೇ ಮೂರರಂದು ದೇಶಾದ್ಯಂತ ನೀಟ್‌ ಪರೀಕ್ಷೆ ನಡೆದಿತ್ತು. ರಾಜಾಸ್ಥಾನದಲ್ಲಿ ನೀಟ್‌ ಪ್ರಶ್ನೆ ಪತ್ರಿಕೆಗಳು ಲೀಕ್‌ ಆದ ಹಿನ್ನೆಲೆಯಲ್ಲಿ ಎನ್‌ಟಿಎ ಈ ಆದೇಶ ಹೊರಡಿಸಿದೆ. ಪ್ರಶ್ನೆ ಪತ್ರಿಕೆ ಲೀಕ್‌ ಆಗಿರುವುದನ್ನು ಎನ್‌ಟಿಎ ಸೇರಿ ವಿವಿಧ ಏಜೆನ್ಸಿಗಳು ದೃಢಪಡಿಸಿರುವ ಹಿನ್ನೆಲೆಯಲ್ಲಿ ಎನ್‌ಟಿಎ ನೀಟ್‌-ಯುಜಿ ಪರೀಕ್ಷೆಯನ್ನು ರದ್ದು ಪಡಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ ಮತ್ತೊಮ್ಮೆ ನೀಟ್‌ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಸದ್ಯದಲ್ಲೇ ಅದರ ದಿನಾಂಕ ಪ್ರಕಟಿಸಲಿದೆ. ಇದೇ ವೇಳೆ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರನ್ನು ಪತ್ತೆ ಹಚ್ಚಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ, ಸಿಬಿಐ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸಲಿದೆ.
ಮೇ 3ರಂದು ದೇಶವ್ಯಾಪಿ ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ 22.79 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಏನಿದು ಪ್ರಕರಣ?:
ಮೇ ಮೂರರ ನೀಟ್‌ ಪರೀಕ್ಷೆಯಲ್ಲಿ ರಾಜಾಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳು ಹರಿದಾಡಿದ್ದವು. ರಾಜಸ್ಥಾನ ಸ್ಪೆಷಲ್‌ ಆಪರೇಷನ್‌ ಗ್ರೂಪ್‌ ಸಂಸ್ಥೆ ಈ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆ ವೇಳೆ ಅಸಲಿ ನೀಟ್‌ ಪರೀಕ್ಷೆಯ 120 ಪ್ರಶ್ನೆಗಳು ಸಲಹೆ ಪತ್ರಿಕೆ ಅಂದರೆ ಸಜೆಶನ್‌ ಪೇಪರ್‌ನ ಪ್ರಶ್ನೆಗಳ ಜೊತೆ ತಾಳೆಯಾಗಿದ್ದುದ್ದು ಬಹಿರಂಗವಾಗಿತ್ತು. ಹಾಗಾಗಿ, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಅನುಮಾನ ದೃಢಪಟ್ಟಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾದ ಕಾರಣ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಸಿಬಿಐ ತನಿಖೆಗೆ ಆದೇಶಿಸಿದೆ.

Continue Reading

Latest

ಸಿಎಂ ವಿಜಯ್‌ ಮೊದಲ ಭಾಷಣ : “8 ಕೋಟಿ ಜನರೂ ನನ್ನವರೇ” ಎಂದ ವಿಜಯ್‌

VISTARANEWS.COM


on

ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಪದಗ್ರಹಣದ ಬಳಿಕ ತಮ್ಮ ಮೊದಲ ಭಾಷಣದಲ್ಲಿ ಜನತೆಗೆ ತಾನು ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಸ್ಪಷ್ಟಪಡಿಸಿದರು.

“ನಾನು ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ. ತಮಿಳುನಾಡಿನ 8 ಕೋಟಿ ಜನರೂ ನನ್ನವರೇ. ನಾನು ನಿಮ್ಮಲ್ಲೊಬ್ಬ., ನಿಮ್ಮ ಕುಟುಂಬದ ಸದಸ್ಯ, ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ” ಎಂದು ವಿಜಯ್‌ ಹೇಳಿದರು.

“ಇಲ್ಲಿರುವುದು ಒಂದೇ ಪವರ್‌ ಸೆಂಟರ್‌. ಆ ಕಡೆ ಒಂದು, ಈ ಕಡೆ ಒಂದು ಪವರ್‌ ಸೆಂಟರ್‌ ಇಲ್ಲ. ತಮಿಳುನಾಡಿನಲ್ಲಿ ಹೊಸ ಯುಗಾರಂಭ ಆಗಿದೆ” ಎಂದು ಅವರು ಘೋಷಿಸಿದರು.

ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಗಳ ಜನರ ಹಿತ ಕಾಪಾಡುವುದಾಗಿ ಹೇಳಿದ ವಿಜಯ್‌, “ನಿಜವಾದ ಜಾತ್ಯಾತೀತ ಹಾಗೂ ಸಮಾಜವಾದಿ ಆಡಳಿತ ಆರಂಭವಾಗಿದೆ” ಎಂದು ತಿಳಿಸಿದರು.

ತಮ್ಮ ಸರ್ಕಾರ ರಚನೆಗೆ ಬೆಂಬಲ ನೀಡಿದ ಕಾಂಗ್ರೆಸ್‌, ವಿಸಿಕೆ ಹಾಗೂ ಎಡಪಕ್ಷಗಳಿಗೆ ಧನ್ಯವಾದ ಅರ್ಪಿಸಿದ ವಿಜಯ್‌, “ನನ್ನ ಸಹೋದರ ರಾಹುಲ್‌ ಗಾಂಧಿಗೆ ವಿಶೇಷ ಧನ್ಯವಾದ” ಎಂದರು.

“ನನ್ನ ಜನರ ಹಣ ಲೂಟಿ ಮಾಡಲು ನಾನು ಬಿಡುವುದಿಲ್ಲ” ಎಂದು ಭ್ರಷ್ಟಾಚಾರ ವಿರುದ್ಧ ಕಠಿಣ ನಿಲುವು ತಾಳುವುದಾಗಿ ಸಿಎಂ ವಿಜಯ್‌ ಸ್ಪಷ್ಟಪಡಿಸಿದರು.

Continue Reading

Latest

ತಮಿಳುನಾಡು ಸಿಎಂ ಆಗಿ ವಿಜಯ್‌ ಪದಗ್ರಹಣ

VISTARANEWS.COM


on

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್‌ ವಿಜಯ್‌ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಚೆನ್ನೈನ ನೆಹರೂ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ದೇವರ ಹೆಸರಿನಲ್ಲಿ ವಿಜಯ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಿದರು.

ಟಿವಿಕೆ ಪಕ್ಷ ಕಾಂಗ್ರೆಸ್‌, ವಿಸಿಕೆ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದೆ. ಸಚಿವ ಸಂಪುಟದಲ್ಲಿ ಎನ್‌. ಆನಂದ್‌, ಆಥವ್‌ ಅರ್ಜುನ್‌, ಡಾ. ಅರುಣ್‌ ರಾಜ್‌, ಕೆ.ಎ. ಸೆಂಗೋಟ್ಟಿಯ್ಯನ್‌, ಪಿ. ವೆಂಕಟರಮಣನ್‌, ಆರ್‌. ನಿರ್ಮಲ್‌ ಕುಮಾರ್‌, ಎ.ರಾಜ್‌ ಮೋಹನ್‌, ಟಿ.ಕೆ. ಪ್ರಭು, ಸೆಲ್ವಿ ಎಸ್‌. ಕೀರ್ತನಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಚಿತ್ರನಟಿ ತ್ರಿಶಾ, ವಿಜಯ್‌ ತಂದೆತಾಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿಜಯ್‌ ಪದಗ್ರಹಣ ಸಮಾರಂಭಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು.

Continue Reading
Advertisement
ಅವಿಭಾಗೀಕೃತ1 hour ago

ಬೆಂಗಳೂರಿಗೆ ʼಆರನೇ ಗ್ಯಾರಂಟಿʼ – ʼನನ್ನ ಖಾತೆ ನನ್ನ ಹಕ್ಕುʼ

ಪ್ರಮುಖ ಸುದ್ದಿ4 hours ago

ಅಗ್ನಿ ಪರೀಕ್ಷೆ ಗೆದ್ದ ‘ವಿಜಯ್‌‌‌’, ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟ

ಸಿನಿಮಾ4 hours ago

ನಟ, ನಿರ್ಮಾಪಕ ದಿಲೀಪ್‌ ರಾಜ್‌ ಇನ್ನಿಲ್ಲ

Latest1 day ago

ನೀಟ್‌ ಪರೀಕ್ಷೆ ರದ್ದು: ಕೇಂದ್ರ ಸರ್ಕಾರವೇ ಹೊಣೆ- ಡಾ.ಎಂ.ಸಿ.ಸುಧಾಕರ್‌

Latest1 day ago

ಪ್ರಶ್ನೆ ಪತ್ರಿಕೆ ಸೋರಿಕೆ : ನೀಟ್‌ ಪರೀಕ್ಷೆ ರದ್ದು, ಮರುಪರೀಕ್ಷೆಗೆ ಆದೇಶ

Latest1 day ago

ಅಸ್ಸಾಂ ಸಿಎಂ ಆಗಿ ಹಿಮಂತ್‌ ಬಿಸ್ವಾ ಪದಗ್ರಹಣ

Latest2 days ago

ಸಿಎಂ ಆದ ಮರುದಿನವೇ ಮಾಜಿ ಸಿಎಂ ಸ್ಟಾಲಿನ್‌ ಭೇಟಿಯಾದ ವಿಜಯ್‌

Latest3 days ago

ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್‌ ಕಡ್ಡಿ ಪತ್ತೆ

ಚಿತ್ರದುರ್ಗ3 days ago

ಡಿ. ಸುಧಾಕರ್‌ ನಿಧನ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ: ಸಿಎಂ ಸಿದ್ದರಾಮಯ್ಯ

Latest3 days ago

ಸಿಎಂ ವಿಜಯ್‌ ಮೊದಲ ಭಾಷಣ : “8 ಕೋಟಿ ಜನರೂ ನನ್ನವರೇ” ಎಂದ ವಿಜಯ್‌

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌