ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆ ವಾಪಸ್‌; ರಾಜ್ಯಪಾಲರು ಮರುಪರಿಶೀಲಿಸಲಿ ಎಂದ ಡಿಕೆಶಿ - Vistara News

ಪ್ರಮುಖ ಸುದ್ದಿ

ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆ ವಾಪಸ್‌; ರಾಜ್ಯಪಾಲರು ಮರುಪರಿಶೀಲಿಸಲಿ ಎಂದ ಡಿಕೆಶಿ

Kannada Name Board: ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

DK Shivakumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ (Kannada Name Board) ಇರಬೇಕು ಎಂದು ಹೊರಡಿಸಿದ್ದ ಸುಗ್ರಿವಾಜ್ಞೆಯನ್ನು ರಾಜ್ಯಪಾಲರು ಸಹಿ ಹಾಕದೆ ಏಕೆ ವಾಪಸ್ಸು ಕಳುಹಿಸಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯಪಾಲರು ವಿಧಾನಸಭೆ ಅಧಿವೇಶನ ನಡೆಯುವ ತನಕ ಕಾಯಬಾರದಿತ್ತು. ಈಗಲೇ ಸಹಿ ಮಾಡಬಹುದಿತ್ತು. ಕನ್ನಡ ನಾಮಫಲಕ ಕಡ್ಡಾಯದ ಕುರಿತ ಸುಗ್ರೀವಾಜ್ಞೆ ವಾಪಸ್ ಕಳುಹಿಸಿರುವ ಬಗ್ಗೆ‌ ರಾಜ್ಯಪಾಲರು ಪುನರ್ ಪರಿಶೀಲನೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿರುವ ವಿಚಾರವಾಗಿ ವಿಧಾನಸೌಧದ ಬಳಿ ಬುಧವಾರ ಪ್ರತಿಕ್ರಿಯಿಸಿದ ಅವರು, ಕನ್ನಡ ಭಾಷೆಯು ಭಾವಾನಾತ್ಮಕ ವಿಚಾರ. ಕರ್ನಾಟಕದಲ್ಲಿ ಇದ್ದೀರಿ, ನಮ್ಮ ರಾಜ್ಯಪಾಲರಾಗಿದ್ದೀರಿ. ಸರ್ಕಾರದ ಇಂತಹ ನೀತಿಯಲ್ಲಿ ತಪ್ಪು ಕಂಡು ಹಿಡಿಯಬಾರದು. ನಾಗರಿಕರು, ಇತರೇ ಪಕ್ಷದವರು ಈ ವಿಚಾರದಲ್ಲಿ ತಪ್ಪುಗಳಿವೆ ಎಂದು ಅವರ ಗಮನಕ್ಕೆ ತಂದಿದ್ದಾರೆಯೇ? ಯಾರೂ ಆಕ್ಷೇಪ ಸಲ್ಲಿಸಿಲ್ಲ. ಆದ ಕಾರಣ ಮತ್ತೊಮ್ಮೆ ಆದೇಶ ಪರಿಶೀಲಿಸುವಂತೆ ಸರ್ಕಾರದ ಪರವಾಗಿ ರಾಜ್ಯಪಾಲರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ | Congress Guarantee: ಕಾಂಗ್ರೆಸ್‌ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲ; ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ

ದೇಶದ ರಕ್ಷಣೆಯ ವಿಚಾರದಲ್ಲಿ ನಮ್ಮ ಸರ್ಕಾರಗಳು ಬದ್ಧವಾಗಿರುವಂತೆ, ರಾಜ್ಯದ ಗೌರವದ ವಿಚಾರದಲ್ಲೂ ನಾವು ಬದ್ಧವಾಗಿದ್ದೇವೆ. ನಾಮ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಎಂದು ಸುಗ್ರಿವಾಜ್ಞೆ ಹೊರಡಿಸಲಾಗಿತ್ತು. ಕನ್ನಡ ಭಾಷೆ, ಅಸ್ಮಿತೆ ಮತ್ತು ಸಂಸ್ಕೃತಿ ರಕ್ಷಣೆ ಎಂಬುದಾಗಿ ಇದನ್ನು ಕರೆಯುತ್ತೇವೆ ಎಂದು ಹೇಳಿದರು.

ಕನ್ನಡದ ವಿಚಾರವಾಗಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದವು. ಇದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಕನ್ನಡಪರ ತೀರ್ಮಾನ ತೆಗೆದುಕೊಂಡಿದ್ದೆವು ಎಂದು ತಿಳಿಸಿದರು.

ಅಧಿವೇಶನದಲ್ಲಿ ಮಂಡನೆ

ನಾಮಫಲಗಳಲ್ಲಿ ಶೇ. 60 ಕನ್ನಡ ಇರಬೇಕು ಎನ್ನುವ ವಿಧೇಯಕವನ್ನು ವಿಧಾನಸಭೆ ಅಧಿವೇಶನಲ್ಲಿ ಮಂಡಿಸಿ ಜಾರಿಗೆ ತರುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು 10-15 ದಿನಗಳಲ್ಲಿ ಅಧಿವೇಶನ ಆರಂಭವಾಗಲಿದ್ದು, ಈ ವಿಧೇಯಕ ಮಂಡನೆಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಬಾಲಕೃಷ್ಣ ಹೇಳಿಕೆಯನ್ನು ತಿರುಚಲಾಗಿದೆ

ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳು ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದು ಎಂಬ ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಬಾಲಕೃಷ್ಣ ಅವರು ಈ ರೀತಿ ಹೇಳಿಕೆ ಕೊಟ್ಟಿಲ್ಲ. ಲೋಕಸಭೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಶಾಸಕ ಬಾಲಕೃಷ್ಣ ಹೇಳಿಕೆ ರಾಜ್ಯದ ಜನರಿಗೆ ಅವಮಾನ ಮಾಡಿದಂತೆ ಎನ್ನುವ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಬಿಜೆಪಿಯವರಿಗೆ ಉತ್ತರ ನೀಡಲು ನಾನು ತಯಾರಿಲ್ಲ ಎಂದರು.

ಇದನ್ನೂ ಓದಿ | Congress Guarantee Scheme: ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಮಂಗಳೂರಲ್ಲಿ ಫೆ.17 ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಮಂಗಳೂರಿನಲ್ಲಿ ಫೆ.17 ರಂದು ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

The Great Khali : ರಾಹುಲ್ ಗಾಂಧಿ ಸುಳ್ಳ ಎಂದು ಕರೆದ ಬಿಜೆಪಿ ನಾಯಕ ದಿ ಗ್ರೇಟ್ ಖಲಿ, ಇಲ್ಲಿದೆ ವಿಡಿಯೊ

The Great Khali: 2000ನೇ ಇಸವಿಯಲ್ಲಿ ಕುಸ್ತಿಗೆ ಪದಾರ್ಪಣೆ ಮಾಡಿದ ಖಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. “ಪ್ರಧಾನಿ ಮೋದಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಬಡವರಿಗೆ ಅದರ ಲಾಭ ಸಿಕ್ಕಿದೆ. ಶ್ರೀಮಂತರ ಖಾತೆಗೆ ಏನೂ ಹೋಗಿಲ್ಲ. ಆದಾಗ್ಯೂ ಅವರು ಮೋದಿ ಮಾಡಿದ ಕೆಲವನ್ನು ಒಪ್ಪಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.

VISTARANEWS.COM


on

The Great Khal
Koo

ನವದೆಹಲಿ: ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಮತ್ತು ಈಗ ಬಿಜೆಪಿ ಮುಖಂಡ ದಲೀಪ್ ಸಿಂಗ್ ರಾಣಾ ಅಲಿಯಾಸ್ ‘ದಿ ಗ್ರೇಟ್ ಖಲಿ’ (The Great Khal) ಭಾನುವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ‘ಸುಳ್ಳು ಭರವಸೆ ನೀಡುವವ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ ಸ್ವತಃ ಸುಳ್ಳ. ಅವರು ಅನೇಕ ಬಾರಿ ವಿಫಲರಾಗಿರುವುದರಿಂದ ಏನು ಮಾಡಬೇಕೆಂದು ಅವರಿಗೆ ತಿಳಿಯುತ್ತಿಲ್ಲ ಎಂದು 2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ ಖಲಿ ರಾಜಸ್ಥಾನದ ಬಾರ್ಮರ್​​ನಲ್ಲಿ ಹೇಳಿಕೆ ನೀಡಿದ್ದಾರೆ.

ಅವರು (ರಾಹುಲ್) ಸಂಪೂರ್ಣವಾಗಿ ವಿಫಲರಾದಾಗ, ಕಾಂಗ್ರೆಸ್ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿತು. ಗಾಂಧಿ ವಿಫಲವಾದ ಕಾರಣ, ಖರ್ಗೆ ಅವರನ್ನು ಅವಮಾನವನ್ನು ಎದುರಿಸಲು ಮುಂದೆ ತರಲಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

ಬಾರ್ಮರ್ ನ ಹಾಲಿ ಸಂಸದ ಕೈಲಾಶ್ ಚೌಧರಿ ಅವರು ಕಾಂಗ್ರೆಸ್ ಅಭ್ಯರ್ಥಿ ಉಮ್ಮೇಡಾ ರಾಮ್ ಬೆನಿವಾಲ್ ಮತ್ತು ಸ್ವತಂತ್ರ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ ಅವರನ್ನು ಎದುರಿಸಲಿದ್ದಾರೆ.

ಮೋದಿಯ ಶ್ಲಾಘನೆ

2000ನೇ ಇಸವಿಯಲ್ಲಿ ಕುಸ್ತಿಗೆ ಪಾದಾರ್ಪಣೆ ಮಾಡಿದ ಖಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. “ಪ್ರಧಾನಿ ಮೋದಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಬಡವರಿಗೆ ಅದರ ಲಾಭ ಸಿಕ್ಕಿದೆ. ಶ್ರೀಮಂತರ ಖಾತೆಗೆ ಏನೂ ಹೋಗಿಲ್ಲ. ಆದಾಗ್ಯೂ ಅವರು ಮೋದಿ ಮಾಡಿದ ಕೆಲವನ್ನು ಒಪ್ಪಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.

“ಜನರು ಯೋಚಿಸದ ಕೆಲಸಗಳನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಬಡತನವನ್ನು ನೋಡಿದವರು ಮಾತ್ರ ಅಷ್ಟೊಂದು ಕೆಲಸ ಮಾಡಬಹುದು ” ಎಂದು ಬಿಜೆಪಿ ನಾಯಕ ಹೇಳಿದರು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಏಪ್ರಿಲ್ 19 ರಂದು ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಅವರ ರ್ಯಾಲಿಯಲ್ಲಿ ‘ದಿ ಗ್ರೇಟ್ ಖಲಿ’ ಇತ್ತೀಚೆಗೆ ಉಧಂಪುರದಲ್ಲಿ ಕಾಣಿಸಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

IPL 2024 : ಗುಜರಾತ್​ ತಂಡಕ್ಕೆ3 ವಿಕೆಟ್​ ವಿಜಯ, ಪಂಜಾಬ್​ಗೆ ಬಿಡದ ಸೋಲಿನ ನಂಟು

IPL 2024 : ಇಲ್ಲಿನ ಮಲ್ಲಾನ್​ಪುರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಂಜಾಬ್​ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿಕೊಂಡಿತು. ಅಂತೆಯೇ ತಮ್ಮ ನಿಗದಿತ ಓವರ್​ನ ಕೊನೇ ಎಸೆತದಲ್ಲಿ 142 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ಇನ್ನೂ ಐದು ಎಸೆತಗಳು ಬಾಕಿ ಇರುವಾಗ 7 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
Koo

ಮಲ್ಲಾನ್​ಪುರ: ಪಂಜಾಬ್​ ಕಿಂಗ್ಸ್​ ತಂಡ ಮತ್ತೊಂದು ಸೋಲಿಗೆ ಒಳಗಾಗಿದೆ. ಗುಜರಾತ್​​ ವಿರುದ್ಧದ ಐಪಿಎಲ್​​ 2024ರ (IPL 2024) ಪಂದ್ಯದಲ್ಲಿ 3 ವಿಕೆಟ್​ ಪರಾಭವಕ್ಕೆ ಒಳಗಾಗಿದೆ. ಇದು ಪಂಜಾಬ್​ ತಂಡಕ್ಕೆ ಸತತ ನಾಲ್ಕು ಹಾಗೂ ಒಟ್ಟು ಆರನೇ ಸೋಲಾಗಿದೆ. ಏತನ್ಮಧ್ಯೆ ಗುಜರಾತ್​ ತಂಡ ನಾಲ್ಕನೇ ಗೆಲುವು ಪಡೆದಿದೆ. ಅದರಲ್ಲೂ ಸತತ ಎರಡು ಸೋಲುಗಳ ಬಳಿಕ ಗೆಲುವಿನ ಹಾದಿಗೆ ಮರಳಿದೆ.

ಇಲ್ಲಿನ ಮಲ್ಲಾನ್​ಪುರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಂಜಾಬ್​ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿಕೊಂಡಿತು. ಅಂತೆಯೇ ತಮ್ಮ ನಿಗದಿತ ಓವರ್​ನ ಕೊನೇ ಎಸೆತದಲ್ಲಿ 142 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ಇನ್ನೂ ಐದು ಎಸೆತಗಳು ಬಾಕಿ ಇರುವಾಗ 7 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಗೆಲುವು ಸಾಧಿಸಿತು. ತೆವಾಟಿಯಾ 36 ರನ್ ಬಾರಿಸಿ ಮಿಂಚಿದರು.

ಇದನ್ನೂ ಓದಿ: Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್​ ತಂಡವೂ ಉತ್ತಮವಾಗಿ ಆಡಿಲ್ಲ. ವೃದ್ಧಿಮಾನ್ ಸಾಹ 13 ರನ್​ಗೆ ಔಟಾದರು. ಶುಭ್​ಮನ್ ಗಿಲ್ ನಿಧಾನಗತಿಯಲ್ಲಿ 35 ರನ್ ಬಾರಿಸಿದರು. ಬಳಿಕ ಸಾಯಿ ಸುದರ್ಶನ್​ ಕೂಡ 34 ಎಸೆತಕ್ಕೆ 31 ರನ್ ಬಾರಿಸಿ ತಂಡಕ್ಕೆ ನೆರವಾದರು. ಡೇವಿಡ್​ ಮಿಲ್ಲರ್​ 4 ರನ್ ಹಾಗೂ ಅಜ್ಮತುಲ್ಲಾ ಒಮರ್ಜೈ 13 ರನ್​ಗೆ ಔಟಾಗುವುದರೊಂದಿಗೆ ಗುಜರಾತ್ ತಂಡದ ಮೇಲೆ ಒತ್ತಡ ಬಿತ್ತು. ಕೊನೆಯಲ್ಲಿ ಆಪದ್ಭಾಂದವ ರಾಹುಲ್ ತೆವಟಿಯಾ 18 ಎಸೆತಕ್ಕೆ 36 ರನ್ ಬಾರಿಸಿದರು.

ಪಂಜಾಬ್​ ಏಕಾಏಕಿ ಕುಸಿತ

ಸ್ಯಾಮ್ ಕರ್ರನ್​ ಹಾಗೂ ಪ್ರಭ್​ ಸಿಮ್ರಾನ್ ಸಿಂಗ್​​ ಪಂಜಾಬ್ ಪರ ಇನಿಂಗ್ಸ್ ಆರಂಭಿಸಿದರು. ಇವರು ಮೊದಲ ವಿಕೆಟ್​​ಗೆ 52 ರನ್ ಬಾರಿಸಿದರು. ಆದರೆ ಆ ಬಳಿಕ ಪಂಜಾಬ್ ತಂಡದ ಬ್ಯಾಟಿಂಗ್ ಏಕಾಏಕಿ ಕುಸಿಯಿತು. ರೀಲಿ ರೊಸ್ಸೊ 9 ರನ್​ಗೆ ಔಟಾದರೆ, ಜಿತೇಶ್​ ಶರ್ಮಾ 13 ರನ್​ಗೆ ವಿಕೆಟ್ ಒಪ್ಪಿಸಿದರು. ಲಿವಿಂಗ್​ಸ್ಟನ್ 6 ಹಾಗೂ ಶಶಾಂಕ ಸಿಂಗ್​ 8 ರನ್​ಗೆ ಔಟಾದರು. ಅಶುತೋಷ್​ 3 ರನ್ ಬಾರಿಸಿ ಈ ಬಾರಿ ವೈಫಲ್ಯ ಕಂಡರು. ಆದರೆ ಕೊನೆಯಲ್ಲಿ ಹರ್ಪ್ರೀತ್ ಬ್ರಾರ್​ 29 ರನ್ ಬಾರಿಸಿ ತಂಡಕ್ಕೆ ಸಮಾಧಾನಕರ ಮೊತ್ತ ಪೇರಿಸಲು ನೆರವಾದರು.

Continue Reading

ಕ್ರೀಡೆ

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

Sportsmanship: ಈ ಸ್ಪರ್ಧೆಗಿಂತ ಹೆಚ್ಚಾಗಿ, ಶಹಜೈಬ್ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆ ವಿಷಯವಾಯಿತು. ಯಾಕೆಂದರೆ ತಾವು ಗೆದ್ದ ಬಳಿಕ ಅವರು ತಮ್ಮ ದೇಶದ್ದು ಮಾತ್ರವಲ್ಲದೆ ಭಾರತದ ತ್ರಿವರ್ಣಧ್ವಜವನ್ನೂ ಎತ್ತಿ ಹಿಡಿದಿದ್ದರು. ಇದು ಅಲ್ಲಿದ್ದವರೆಲ್ಲರನ್ನೂ ಅಚ್ಚರಿಗೆ ಒಳಗಾಗಿಸಿತು. ಪಂದ್ಯದ ನಿರೂಪಕ ಕೂಡ ಅವರ ನಡೆಯ ಹಿಂದಿನ ಕಾರಣವನ್ನು ಕೇಳದೆ ಇರಲು ಸಾಧ್ಯವಾಗಲಿಲ್ಲ.

VISTARANEWS.COM


on

Sportsmanship
Koo

ಬೆಂಗಳೂರು: ಕ್ರೀಡಾ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಧೆಗಳು ಅಪರೂಪ. ಆದರೆ ಉಭಯ ರಾಷ್ಟ್ರಗಳ ಕ್ರೀಡಾಪಟುಗಳು ಪರಸ್ಪರ ಭೇಟಿಯಾದಾಗಲೆಲ್ಲಾ ತೀವ್ರ ಸ್ಪರ್ಧೆ ಏರ್ಪಡುತ್ತದೆ. ಶನಿವಾರ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾರತದ ರಾಣಾ ಸಿಂಗ್ ಮತ್ತು ಪಾಕಿಸ್ತಾನದ ಶಹಜೈಬ್ ರಿಂಧ್ ಪರಸ್ಪರ ಮುಖಾಮುಖಿಯಾದಾಗ ಇದೇ ಸನ್ನಿವೇಶವಿತ್ತು. ತೀವ್ರವಾದ ಹೋರಾಟದಲ್ಲಿ ಪಾಕಿಸ್ತಾನದ ಅಥ್ಲೀಟ್ 2-1 ಅಂತರದಿಂದ ವಿಜಯಶಾಲಿಯಾಗಿ ಹೊರಹೊಮ್ಮಿದರು. ಗೆಲುವಿನ ಬಳಿಕ ಗೆದ್ದವರು ಸಂಭ್ರಮಿಸುವುದು ಮಾಮೂಲಿ. ಅದಲ್ಲೂ ಇಂಥ ಸ್ಪರ್ಧೆಗಳಲ್ಲಿ ಇನ್ನಷಟು ಜಿದ್ದು ಇರುತ್ತದೆ. ಆದರೆ ಈ ಪಂದ್ಯದ ಬಳಿಕ ಕ್ರೀಡಾಸ್ಫೂರ್ತಿಯ (Sportsmanship)ಪ್ರಸಂಗ ನಡೆಯಿತು.

ಈ ಸ್ಪರ್ಧೆಗಿಂತ ಹೆಚ್ಚಾಗಿ, ಶಹಜೈಬ್ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆ ವಿಷಯವಾಯಿತು. ಯಾಕೆಂದರೆ ತಾವು ಗೆದ್ದ ಬಳಿಕ ಅವರು ತಮ್ಮ ದೇಶದ್ದು ಮಾತ್ರವಲ್ಲದೆ ಭಾರತದ ತ್ರಿವರ್ಣಧ್ವಜವನ್ನೂ ಎತ್ತಿ ಹಿಡಿದಿದ್ದರು. ಇದು ಅಲ್ಲಿದ್ದವರೆಲ್ಲರನ್ನೂ ಅಚ್ಚರಿಗೆ ಒಳಗಾಗಿಸಿತು. ಪಂದ್ಯದ ನಿರೂಪಕ ಕೂಡ ಅವರ ನಡೆಯ ಹಿಂದಿನ ಕಾರಣವನ್ನು ಕೇಳದೆ ಇರಲು ಸಾಧ್ಯವಾಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಹಜೈಬ್, “ಈ ಸ್ಪರ್ಧೆಯು ಶಾಂತಿಗಾಗಿತ್ತು. ನಾವು ಶತ್ರುಗಳಲ್ಲ, ಒಟ್ಟಿಗೆ ಇದ್ದೇವೆ. ಒಟ್ಟಾಗಿ ನಾವು ಏನು ಬೇಕಾದರೂ ಮಾಡಬಹುದು. ಈ ಹೋರಾಟವು ಪಾಕಿಸ್ತಾನ ಮತ್ತು ಭಾರತದ ಸ್ನೇಹಕ್ಕಾಗಿ ಮತ್ತು ಹತ್ತಿರವಾಗಲು” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

ಇಲ್ಲಿಗೆ ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಸಲ್ಮಾನ್ ಖಾನ್ ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಸೂಪರ್ ಸ್ಟಾರ್. ನಾನು ಬಾಲ್ಯದಿಂದಲೂ ನಿಮ್ಮ ಚಲನಚಿತ್ರಗಳನ್ನು ನೋಡುತ್ತಿದ್ದೇನೆ. ನಿಮ್ಮ ಮುಂದೆ ಹೋರಾಡಲು ಸಂತೋಷವಾಗಿದೆ. ಧನ್ಯವಾದಗಳು, “ಎಂದು ಅವರು ಹೇಳಿದರು. ಈ ಸ್ಪರ್ಧೆಯ ವೇಳೆ ಸಲ್ಮಾನ್ ಖಾನ್ ಅಲ್ಲಿ ಹಾಜರಿದ್ದರು.

ನಂತರ ಶಹಜೈಬ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಮಾತುಕತೆ ನಡೆಸುವ ಅವಕಾಶವನ್ನು ಪಡೆದರು. ಅವರು ಕ್ರೀಡಾಪಟುವಿನ ಅದ್ಭುತ ನಡೆಗಾಗಿ ಅವರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Continue Reading

ಕೃಷಿ

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

ಅಡಿಕೆ ಬೆಳೆ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಒಂದೇ ದಾರಿ ಅಂದರೆ ಕ್ಯಾಲ್ಸಿಯಂ ಕೃಷಿ ಸುಣ್ಣವನ್ನು pH ಮಟ್ಟಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಬಳಸುವುದು. ಇದಿಷ್ಟು ಅನೇಕ ನುರಿತ ಪ್ರಗತಿಪರ ಕೃಷಿಕರ ಅನುಭವದಿಂದ, ಒಂದಿಷ್ಟು ಜನ ವಿಜ್ಞಾನಿಗಳಿಂದ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳ ಸಾರ. ಅಡಿಕೆ ಬೆಳೆಗಾರರಿಗೆ ಉಪಯುಕ್ತವಾಗುವ ಮಾಹಿತಿ ಇಲ್ಲಿದೆ.

VISTARANEWS.COM


on

soil
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ
ಬಿಸಿಲಿನ ಕಾವಿಗೆ ಲಿಂಬೆ ರಸ, ಬೆಲ್ಲ ಬೆರೆಸಿದ ಪಾನಕ ಕುಡಿದರೆ ಕುಡಿಯುತ್ತಾ ಇರೋಣ ಅನಿಸುತ್ತೆ. ಲಿಂಬೆ-ಬೆಲ್ಲದ ಪಾನಕವನ್ನು ಎಷ್ಟು ಕುಡಿದರೂ ಏನೂ ಆಗುವುದಿಲ್ಲ. ಮತ್ತೆರಡು ಬಾರಿ ನೇಚರ್ ಕಾಲ್‌ಗೆ ಹೋಗಬೇಕಾಗಬಹುದು ಅಷ್ಟೆ! ಅಷ್ಟು ಪಾನಕ ಕುಡಿದರೂ ಏನೂ ಆಗದೇ ಇರುವುದಕ್ಕೆ ಒಂದು ಮುಖ್ಯ ಕಾರಣ ಪಾನಕದಲ್ಲಿ ಬಳಸಿದ ಬೆಲ್ಲದಲ್ಲಿರುವ ಸುಣ್ಣದ ಅಂಶ! ಯಾವಾಗಲೂ ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ರೆ, ಜೆಲುಸಿಲ್ MPS ಅನ್ನುವ (ಅಥವಾ ಅದೇ ತರಹದ ಡೈಜಿನ್ ಮಾತ್ರೆ) ಒಂದು ಲೈಟ್ ಪಿಂಕ್ ಬಣ್ಣದ, ದಪ್ಪ ಸಿರಪ್ ಕೊಡ್ತಾ ಇದ್ರು. ಶುಂಠಿ ಪೆಪ್ಪರ್‌ಮೆಂಟಿನ ಪರಿಮಳದ ಅದರಲ್ಲಿ ಅಲ್ಯುಮಿನಿಯಂ ಹೈಡ್ರಾಕ್ಸೈಡ್ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್ ಮೆಯಿನ್ ಇಂಗ್ರೀಡಿಯಂಟ್ಸ್. ಈ ಅಲ್ಯುಮಿನಿಯಂ ಮತ್ತು ಮೆಗ್ನೀಶಿಯಂ ಹೈಡ್ರಾಕ್ಸೈಡ್‌ಗಳು ಹೊಟ್ಟೆಯ ಮತ್ತು ದೇಹದ ಆ್ಯಸಿಡಿಟಿ pH ಮಟ್ಟವನ್ನು ಅಗತ್ಯದ 7.35ಗೆ ಬರುವಂತೆ ಮಾಡುತ್ತದೆ.

ಗ್ಯಾಸ್ಟಿಕ್ ಸಮಸ್ಯೆ ನಿಧಾನವಾಗಿ ನಾರ್ಮಲ್‌ಗೆ ಬರುತ್ತದೆ. (ಈಗ ಹೆಚ್ಚಾಗಿ ಈ ಸಿರಪ್ ಕೊಡುವುದು ಕಡಿಮೆ, ಪೆಂಟಾಪ್ರಸೋಲ್, ರ‌ನ್ಯಾನಿಟಡಿನ್ ಮಾತ್ರೆಗಳನ್ನು ಕೊಡುತ್ತಾರೆ. ಹೋಟೆಲ್ ಅಥವಾ ಊಟದ ಮನೆಗೆ ಹೋಗುವವರೂ ATM ಸ್ಮಾರ್ಟ್ ಕಾರ್ಡ್ ಜತೆ ಪಾಕೇಟ್‌ನಲ್ಲಿ ಒಂದು ಪೆಂಟಾಪ್ರೆಸೋಲ್ ಮಾತ್ರೆ ಇಟ್ಕೊಂಡು ಹೋಗುವವರೂ ಇದ್ದಾರೆ!

ಮನುಷ್ಯನ ರಕ್ತದಲ್ಲಿ pH ಮಟ್ಟ 7.35 to 7.45 ಇರಬೇಕು. 7.35ಗಿಂತ ಕಡಿಮೆ ಇದ್ದರೆ ಅದು ಅಸಿಡಿಕ್. ಅಸಿಡಿಕ್‌ಗೆ ಕಾರಣ ಹೆಚ್ಚಾಗಿ ಸೇವಿಸುವ ಕಾಫಿ, ಸ್ವೀಟು, ಕೆಲವು ಜ್ಯೂಸ್‌ಗಳು, ಕರಿದ ತಿಂಡಿಗಳು, ಕೆಮಿಕಲ್ ಮಿಶ್ರಿತ ಆಹಾರ, ಸೋಡಾ ಬೆರೆಸಿದ ವಡೆ/ಮೆಣಸಿನ ಕಾಯಿ ಬಜ್ಜಿ, ಜೆಂಕ್ ಫುಡ್‌ಗಳು, ಪ್ರಿಸರ್ವೆಟಿವ್, ಟೇಸ್ಟಿಂಗ್, ಪೌಡರ್, ವಿನೇಗರ್, ಕಲ್ಮಶ ವಾತಾವರಣ, ಹೈಪರ್‌ಟೆನ್ಷನ್ ಇತ್ಯಾದಿ. ಇದೆಲ್ಲದರ ಪರಿಣಾಮ ಗ್ಯಾಸ್ಟ್ರಿಕ್ ಎಂಬ ರೋಗವಲ್ಲದ ರೋಗದ ನಿತ್ಯ ಬಾಧೆ! ಗ್ಯಾಸ್ಟ್ರಿಕ್ ಅಂದ್ರೆ ವ್ಯತ್ಯಾಸ ಆದ pH ಮಟ್ಟ. ಗ್ಯಾಸ್ಟ್ರಿಕ್ ಆದಾಗ ದೇಹದ ಚಟುವಟಿಕೆ ಕ್ಷೀಣಿಸುತ್ತದೆ. ಬೇರೆ ಕಾಯಿಲೆಗಳಿಗೆ ಆಹ್ವಾನ ಆಗುತ್ತದೆ.

ಮನುಷ್ಯರಂತೆ ಮಣ್ಣು, ನೀರು, ವಾತಾವರಣ ಮತ್ತು ಸಸ್ಯಗಳ pH ವ್ಯತ್ಯಾಸ ಆದಾಗ ಅವುಗಳೂ ಅನಾರೋಗ್ಯದಿಂದ ಬಳಲುತ್ತವೆ. ಪ್ರಕೃತಿಯಲ್ಲಿ ಚೇತನ-ಚಟುವಟಿಕೆಗಳು ಕಮ್ಮಿಯಾಗುತ್ತವೆ. ಅನೇಕ ಗಿಡ ಮರಗಳ ಬೆಳವಣಿಗೆ ಕುಂಠಿತವಾಗುತ್ತವೆ.

ಮಣ್ಣಿನ pH ತುಂಬಾ ಕಮ್ಮಿಯಾದರೆ ಏನಾಗುತ್ತದೆ?

ಯಾವಾಗ ಮಣ್ಣಿನ pH ತುಂಬ ಕಮ್ಮಿಯಾಗುತ್ತದೆ (ಅಂದರೆ ಆ್ಯಸಿಡಿಕ್ ಆಗುತ್ತದೆ) ಆಗ ಗಿಡ ಮರಗಳು ತಮ್ಮ ಬೇರುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಷ್ಟವಾಗುತ್ತದೆ. ಯಾವಾಗ ಗಿಡ ಮರಗಳಿಗೆ ಪೋಷಕಾಂಶಗಳು ಕಡಿಮೆಯಾಗುತ್ತವೆ ಪರಿಣಾಮ ಗಿಡ ಮರಗಳ ಬೆಳವಣಿಗೆ ಕಮ್ಮಿಯಾಗುತ್ತವೆ, ಸೊರಗುತ್ತವೆ ಮತ್ತು ರೋಗ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಅದರ ಪರಿಣಾಮ ಹೂ ಬಿಡುವುವುದು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಮೇಲ್ಮೈ ಮಣ್ಣು ಹೆಚ್ಚು ಅ್ಯಸಿಡಿಕ್ ಆಗುವುದರಿಂದ ಗಿಡಗಳು ಹೂ ಬಿಡುವುದು ಕಡಿಮೆ. (‘ಮಳೆ ಜಾಸ್ತಿಯಾಗಿ ಮಳೆಗಾಲದಲ್ಲಿ ದೇವರಿಗೂ ಹೂವಿಲ್ಲ’ ಅನ್ನುವ ಮಾತು ನೆನಪಿಸಿಕೊಳ್ಳಿ). pH ಮಟ್ಟ ಕಡಿಮೆಯಾದಾಗ (ಅ್ಯಸಿಡಿಕ್ ಆದಾಗ) ಫಲ ಬಿಡುವ, ಬಿಟ್ಟ ಫಲ ಪಕ್ವವಾಗುವ (ಬೆಳೆಯುವ) ಗತಿಯೂ ನಿಧಾನವಾಗುತ್ತದೆ. ಮಣ್ಣಿನ pH ಮಟ್ಟ ಕಡಿಮೆಯಾದ ಕಾರಣ ಹಿಂಬೆಳಸು ಅಥವಾ ಅಡಿಕೆ ಕೊನೆ ತೆಗೆಯುವ ದಿನಗಳು ಮುಂದಕ್ಕೆ ಹೋಗುತ್ತವೆ. ಗಮನಿಸಿ ನವರಾತ್ರಿಗೆ ಅಡಿಕೆ ಕೊನೆ ತೆಗೆಯುತ್ತಿದ್ದವರು ದೀಪಾವಳಿ ಮುಗಿದು ಪಕ್ಷ ಕಳೆದರೂ ‘ಕೊನೆ ಬಂದಿಲ್ಲ ಅಂತಿರುತ್ತಾರೆ. ಇದಕ್ಕೆ ಬೇರೆ ಕಾರಣಗಳೂ (ಉಷ್ಣತೆ, ಚಳಿ, ಹ್ಯುಮಿಡಿಟಿ ಇತ್ಯಾದಿ) ಇರಬಹುದು. ಅದರ ಜತೆಗೆ ಮಣ್ಣಿನ pH ಕಡಿಮೆಯಾದ ಕಾರಣವೂ ಇರಬಹುದು ಎನ್ನುವ ಅಭಿಪ್ರಾಯ ಇದೆ.

ಎಲೆ ಚುಕ್ಕಿ ರೋಗ

ನಿರಂತರ ಸರಿ ಸುಮಾರು ಏಳು ತಿಂಗಳಿಗೂ ಹೆಚ್ಚು ಸುರಿದ ಮಳೆ ನೀರಿನಿಂದ ಮಣ್ಣಿನ pH ಮಟ್ಟ ತೀವ್ರವಾಗಿ ಕಡಿಮೆಯಾಗಿ ಅಡಿಕೆ ಮರಗಳು ಶಕ್ತಿಗುಂದಿ ಎಲೆ ಚುಕ್ಕಿ ರೋಗ, ಅಡಿಕೆ ಅಂಡೊಡಕು, ಅಡಿಕೆ ಬೆಳವಣಿಗೆ ಕಮ್ಮಿಯಾಗಿರುವುದು, ಅಡಿಕೆ ಹಡ್ಳು ಹಳದಿಯಾಗುವುದು, ಎಳೆ ಅಡಿಕೆಗಳು ಉದುರುವುದು, ಉದುರುವಾಗಲೂ ಚಿಗುರು ಅಡಿಕೆ ಹಳದಿ ಬಣ್ಣಕ್ಕೆ ತಿರುಗಿ ಉದುರುವುದು, ಕೊಳೆ ರೋಗ ಎಲ್ಲ ಕಾಣಿಸಬಹುದು.

ಸರ್ವೇಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಕ್ಯಾಲ್ಸಿಯಂ ಸುಣ್ಣ, ಡೋಲೋಮೇಟ್ ಸುಣ್ಣ ಬಳಕೆಗೆ ವಿಜ್ಞಾನಿಗಳು ಶಿಫಾರಸು ಮಾಡುತ್ತಾರೆ. (ಮನುಷ್ಯರ ದೇಹದ pH ವ್ಯತ್ಯಾಸದ ಗ್ಯಾಸ್ಟ್ರಿಕ್‌ ಸರಿಪಡಿಸಲು ಕೊಡುವ ಔಷಧಿಯಂತೆ)
ಅನೇಕರು ಏಪ್ರಿಲ್-ಮೇ ತಿಂಗಳಲ್ಲಿ ತೋಟಕ್ಕೆ ಸುಣ್ಣ ಕೊಟ್ಟಿದ್ದರೂ, ಮಳೆಯ ತೀವ್ರತೆ ಮತ್ತು ಮಳೆ ದೀರ್ಘಕಾಲ ಬಿದ್ದ ಪರಿಣಾಮವಾಗಿ ಮಣ್ಣಿನ pH ಕಮ್ಮಿಯಾಗಿರಬಹುದು.

ಸಾಂಪ್ರದಾಯಿಕ ಬೇಸಾಯ ಪದ್ಧತಿ ಮಾಯ

ಸಾಂಪ್ರದಾಯಿಕ ಬೇಸಾಯ ಪದ್ಧತಿ ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರ ಬಳಸುವಿಕೆಯಿಂದಲೂ ಮಣ್ಣಿನ pH ಕಡಿಮೆಯಾಗಿರಬಹುದು. (ನಮಗೂ ಯಾವುದೇ ಔಷಧಿ ಕೊಟ್ಟರೂ ಅವುಗಳ ಜೊತೆ ದಿನಕ್ಕೆ ಒಂದರಂತಾದರೂ ಗ್ಯಾಸ್ಟ್ರಿಕ್‌ ಅಥವಾ ಆ್ಯಸಿಡಿಕ್ ಆಗದಂತೆ ಮಾತ್ರೆ ಕೊಡುವುದು ಸರ್ವೇಸಾಮಾನ್ಯ). ಅದೇ ರೀತಿ ಮೇಲೆ NPK ಕೆಮಿಕಲ್ ರಸಗೊಬ್ಬರಗಳೂ ಮಣ್ಣಿನ pH ಮಟ್ಟ ಇಳಿಸಿ, ಅಸಿಡಿಕ್ ಮಾಡುತ್ತವೆ ಎಂದಾಯ್ತು.

ಅಂತರ್ಜಾಲದಲ್ಲಿ ಏನಿದೆ ಉತ್ತರ?

ಅಂತರ್ಜಾಲದಲ್ಲಿ ಮಣ್ಣಿನ pH ಸಮಸ್ಯೆಗಳನ್ನು ಕೇಳಿದರೆ ಅದು ಕೊಡುವ ಉತ್ತರ: “Early identification of soil pH problems is important as it can be both costly and difficult to correct long-term nutrient deficiencies” ಎಂದು.

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ, ಮಣ್ಣಿನ ನಿರಂತರ pH ಸಮತೋಲನ(6 ರಿಂದ 7.5) ವನ್ನು ಕಾಪಾಡಿಕೊಳ್ಳುವಲ್ಲಿ ನಾವು ಹೆಚ್ಚಿನ ಶ್ರಮ ವಹಿಸುವುದು ಈಗ ಇನ್ನೂ ಹೆಚ್ಚು ಅಗತ್ಯ ಅನಿಸುತ್ತದೆ. ಮೊದಲೇ ಹೇಳಿದಂತೆ, ಆರೊಗ್ಯವಂತ ಮನುಷ್ಯರಿಗೆ ರಕ್ತದ pH 7.35 to 7.45 ಇರಬೇಕು. 7.35 ಗಿಂತ ಕಡಿಮೆ ಇದ್ದರೆ ಅದು ಅ್ಯಸಿಡಿಕ್. ಅದೇ ರೀತಿ ಮಣ್ಣಿನ pH ಸಮತೋಲನ 6 ರಿಂದ 7.5 ಕಾಪಾಡಿಕೊಳ್ಳುವುದು, ಆ ಮೂಲಕ ಮಣ್ಣು ಅ್ಯಸಿಡಿಕ್ ಆಗದಂತೆ ನೋಡಿಕೊಳ್ಳುವುದು ಅನಿವಾರ್ಯ.

ಮಣ್ಣಿನ pH ಸಮತೋಲನ (6 ರಿಂದ 7.5) ಮಾಡುವುದು ಹೇಗೆ?

ಇದಕ್ಕಿರುವುದು ಒಂದೇ ದಾರಿ ಅಂದರೆ ಕ್ಯಾಲ್ಸಿಯಂ ಕೃಷಿ ಸುಣ್ಣವನ್ನು pH ಮಟ್ಟಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಬಳಸುವುದು. ಇದಿಷ್ಟು ಅನೇಕ ನುರಿತ ಪ್ರಗತಿಪರ ಕೃಷಿಕರ ಅನುಭವದಿಂದ, ಒಂದಿಷ್ಟು ಜನ ವಿಜ್ಞಾನಿಗಳಿಂದ ಮತ್ತು ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳ ಸಂಕ್ಷಿಪ್ತ ರೂಪ.

ಅತಿಯಾದ ಮಳೆಯಿಂದ, ತೇವಾಂಶದ ಆರ್ದ್ರತೆಯಿಂದ ಮಣ್ಣು ಮಾತ್ರ ಅಲ್ಲ, ತೋಟದ ವಾತಾವರಣ, ಗಿಡ ಮರಗಳ ಒಳ ಭಾಗದ pH ಮಟ್ಟವೂ ಅ್ಯಸಿಡಿಕ್ ಆಗಬಹುದು ಎನ್ನುವುದು ಕೆಲವರ ಅಭಿಪ್ರಾಯ. ನೈಟ್ರೋಜನ್ ರಸಗೊಬ್ಬರ ಬಳಕೆಯೂ ಮಣ್ಣಿನ pH ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಈ ಬಗ್ಗೆಯೂ ಹೆಚ್ಚಿನ ಗಮನ ಅಗತ್ಯ. ಇದು ಹೌದಾದರೆ ಮುಂಗಾರು ಮುನ್ನ ರಸಗೊಬ್ಬರ ಬೇಸಾಯವೂ ಮರು ಚಿಂತನೆ ಮಾಡಬೇಕು. ಈ ಎಲ್ಲಾ ಕಾರಣಗಳಿಂದ ಮಾಹಿತಿಗಳಿಂದ ಒಂದಂತು ಸ್ಪಷ್ಟ, ಎಲೆ ಚುಕ್ಕಿ ರೋಗ (ಮತ್ತಿತರ ರೋಗಗಳಾದ, ಅಡಿಕೆ ಅಂಡೊಡಕು, ಅಡಿಕೆ ಉದುರುವಿಕೆ, ಹಳದಿ ಎಲೆ ಇತ್ಯಾದಿಗಳು ಕೂಡ) ಹೆಚ್ಚುತ್ತಿರುವುದಕ್ಕೆ ಮಣ್ಣಿನ pH ಮಟ್ಟ ಇಳಿದು ಮಣ್ಣು ಅ್ಯಸಿಡಿಕ್ ಆಗುತ್ತಿರುವುದೂ ಒಂದು ಕಾರಣ. pH ಮಾತ್ರ ಕಾರಣ ಅಲ್ಲದಿರಬಹುದು, ಆದರೆ ಅದೂ ಒಂದು ಪ್ರಬಲವಾದ ಕಾರಣ. ಜತೆಗೆ ಫಂಗಸ್ ಬೆಳವಣಿಗೆ, ಪೌಷ್ಟಿಕಾಂಶ ಕೊರತೆಗೂ pH ಕಾರಣವಂತೂ ನಿಜ. ಇದಿಷ್ಟು ಮಣ್ಣಿನ pH ವಿಚಾರದ ಬೇಸಿಕ್ ವಿಚಾರಗಳು.

ಮಣ್ಣಿನ pH ವಿಚಾರದಲ್ಲಿ ಸರಕಾರ, ಇಲಾಖೆಗಳು, ಕೃಷಿ ವಿಜ್ಞಾನಿಗಳು ಏನು ಮಾಡಬೇಕು?

pH ನಿಯಂತ್ರಣದ ಸುಣ್ಣ ಬಳಕೆಯ ಮತ್ತು ಇತರ ಅಗತ್ಯ ವಿಚಾರದಲ್ಲಿ ಸರಕಾರ, ಅದರ ಇಲಾಖೆಗಳು ಮತ್ತು ಕೃಷಿ ವಿಜ್ಞಾನಿಗಳು ಹೆಚ್ಚಿನ ಗಮನ ಕೊಡಬೇಕಾಗಿದೆ:

  • ಸಾಮಾನ್ಯವಾಗಿ ಸಣ್ಣ ರೈತರು, ಅತಿ ಸಣ್ಣ ರೈತರು ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ pH ತಿಳಿಯುವ ಕ್ರಮಕ್ಕೆ ಮುಂದಾಗುವುದಿಲ್ಲ.
    ಇಲಾಖೆಗಳು ರೈತರರಿಗೆ ಈ ಬಗ್ಗೆ ಮಾರ್ಗದರ್ಶನ ಮಾಡಬೇಕಿದೆ. (ಹಿಂದೆ ಆಕಾಶವಾಣಿಯ ಮೂಲಕ, ಹಳ್ಳಿಗಳಲ್ಲಿ ಕೃಷಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ, ಗೋಡೆ ಬರಹಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು. ಈಗ ಅವೆಲ್ಲ ನಿಂತು ಹೋಗಿವೆ.)
  • ತೋಟಗಾರಿಕೆ ಅಥವಾ ಕೃಷಿ ಇಲಾಖೆಗಳು ಮಣ್ಣಿನ ಯಾವ pH ಮಟ್ಟಕ್ಕೆ ಎಷ್ಟು ಸುಣ್ಣ ಬಳಸಬೇಕು ಎಂದು ನೇರವಾಗಿ ರೈತರಿಗೆ ತಿಳಿಸುವ ಪ್ರಯತ್ನ ಮಾಡುವುದಿಲ್ಲ. ಕೆಲವು ಕಡೆ, ಜನರಲ್ ಆಗಿ ಎಕರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ 5 ಕ್ವಿಂಟಾಲ್ ಸುಣ್ಣ ಬಳಸಿ ಎಂದು ಶಿಫಾರಸ್ ಮಾಡುತ್ತಾರೆ. ಇದು ವೈಜ್ಞಾನಿಕ ಕ್ರಮ ಅಲ್ಲ.
  • ಸಬ್ಸಿಡಿ ದರದಲ್ಲಿ (ಒಂದು ಕೆ.ಜಿ. ಸುಣ್ಣಕ್ಕೆ 70 ಪೈಸೆ ದರದಲ್ಲಿ) ಕೃಷಿ ಇಲಾಖೆಯಿಂದ ಅಗ್ರಿ ಲೈಮ್ ಕೊಡಲಾಗುತ್ತಿತ್ತು. ಈಗ ಮೂರು ವರ್ಷಗಳಿಂದ ಹಾಗೆ ರಿಯಾಯ್ತಿಯಲ್ಲಿ ಸುಣ್ಣ ಕೊಡುವ ಕ್ರಮ ನಿಂತು ಹೋಗಿದೆ.
  • ಸುಣ್ಣ ಬಳಸುವ ಸಮಯವಾಗಿ ಸಾಮಾನ್ಯ ಏಪ್ರಿಲ್-ಮೇ‌ನಲ್ಲಿ ಬಳಸಲು ಶಿಫಾರಸ್ಸು ಮಾಡಲಾಗುತ್ತದೆ. ವಿಪರೀತ ಮಳೆ, ದೀರ್ಘಕಾಲದ ಮಳೆಯ ಕಾರಣ ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ಸುಣ್ಣ ಬಳಸಬಹುದಾ? ಹೌದಾದರೆ ಎಷ್ಟು ಪ್ರಮಾಣ? ಎಷ್ಟು ಸಮಯದ ಅಂತರದಲ್ಲಿ ಬಳಸಬೇಕು? ಈ ಬಗ್ಗೆ ಮಾಹಿತಿಗಳು ಇರುವುದಿಲ್ಲ.
  • ಅಗ್ರಿ ಲೈಮ್ ಮತ್ತು ಹರಳು ರೂಪದ ಡೋಲೋಮೇಟ್ (ಕ್ಯಾಲ್ಸಿಯಂ+ ಮೆಗ್ನೀಸಿಯಂ ಇರುವಂತಹದು) ಯಾವುದನ್ನು ಯಾವಾಗ ಬಳಸಬೇಕು ಎಂದು ಕ್ಲಿಯರ್ ಮಾಹಿತಿ ರೈತರಿಗೆ ತಿಳಿಸುವ ಪ್ರಯತ್ನ ಇಲ್ಲ. ಮಣ್ಣಿನ ಪರೀಕ್ಷೆಯ ವರದಿ ಮತ್ತು ಕಾಲಮಾನ, ಹವಾಮಾನಕ್ಕೆ ಅನುಗುಣವಾಗಿ ಇವುಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ.
  • ಸುಣ್ಣ ಬಳಸುವಾಗ ಅಡಿಕೆ ಮರದ ಬುಡ, ಪಟದ ಮಧ್ಯ, ಕಪ್ಪು ಎಲ್ಲಾ ಕಡೆ ಬಳಸಬೇಕಾ? ಈ ಬಗ್ಗೆ ಕೇಸ್ ಟು ಕೇಸ್ ಬೇಸಿಸ್ ಮಾಹಿತಿ ಕೊಡಬೇಕಾದ ಅಗತ್ಯ ಇಲಾಖೆಗಳದ್ದಾಗಬೇಕು.
  • ಸುಣ್ಣ ಎಷ್ಟು ಸಮಯದವರೆಗೆ ಮಣ್ಣಿನ pH ನಿಯಂತ್ರಣ ಮಾಡುತ್ತದೆ? ಅಗತ್ಯಕ್ಕಿಂತ ಹೆಚ್ಚು ಸುಣ್ಣದಿಂದ ಯಾವ ಯಾವ ಬೆಳೆಗೆ ಹೇಗೆ ತೊಂದರೆ ಆಗಬಹುದು? ಸುಣ್ಣ ಬಳಸುವಾಗಣ್ಣಿನಲ್ಲಿ ತೇವಾಂಶ ಹೇಗಿರಬೇಕು? ಬೇಸಿಗೆಯಲ್ಲಿ ಸುಣ್ಣ ಬಳಸಿದ ಮೇಲೆ ಯಾವಾಗ ನೀರು ಕೊಡಬೇಕು?….. ಹೀಗೆ ಉದ್ಭವಿಸುವ ಪ್ರಶ್ನೆಗಳಿಗೆ ವಿಜ್ಞಾನಿಗಳು, ಇಲಾಖೆಗಳು ಸುಲಭವಾಗಿ ಆಯಾಯ ಪ್ರದೇಶಗಳಲ್ಲಿ ರೈತರಿಗೆ ಮಾಹಿತಿ ಸಿಗುವಂತೆ ಮಾಡಬೇಕು.
  • ಸುಣ್ಣದ ಜೊತೆ ರಸಗೊಬ್ಬರ/ಸಾವಯವ ಗೊಬ್ಬರ ಒಟ್ಟಾಗಿ ಬಳಸಬಹುದಾ? ಮನುಷ್ಯನಿಗೆ ‘ರಾಸಾಯನಿಕ’ ಔಷಧಿ ಜೊತೆ ಅ್ಯಸಿಡಿಕ್ ಕಮ್ಮಿಯಾಗುವ ಮಾತ್ರೆ ಕೊಡುವಂತೆ, ಮಣ್ಣಿಗೂ ರಾಸಾಯನಿಕಗಳ ಜೊತೆ ಸುಣ್ಣ ಕೊಡಬೇಕಾಗಬಹುದಾ?
  • ಮಣ್ಣಿಗೆ ಸುಣ್ಣ ಬಳಸಿದಾಗ ಸೊಳ್ಳೆ, ನುಸಿ ತರಹದ ಕೀಟಗಳು ಕಮ್ಮಿಯಾಗುತ್ತವೆ. ಅದೇ ರೀತಿ ಕೆಲವು ಫಂಗಸ್‌ಗಳು ನಾಶವಾಗುತ್ತವೆ (ಮನೆಯ ಅಂಗಳದಲ್ಲಿ ಪಾಚಿ ಕಟ್ಟಿದಾಗ ಸುಣ್ಣ ಬಳಸಿ ಸರಿಪಡಿಸಲಾಗುತ್ತದೆ. ಪಾಚಿಯೂ ಒಂದು ರೀತಿ ಫಂಗಸ್ಸೇ ಅಲ್ವಾ?) ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಹಿತಿ ಸಿಗುವಂತಾಗಬೇಕು. ಸುಣ್ಣದಿಂದ ಉಪಯೋಗಕರ ಶಿಲೀಂಧ್ರಗಳು ನಾಶವಾಗುತ್ತವಾ? ಎರೆಹುಳುಗಳಿಗೆ ಸುಣ್ಣ ಅಪಾಯಕಾರಿಯಾ? ಉಪಯೋಗಕಾರಿಯಾ? ಎಂಬಂತಹ ಪ್ರಶ್ನೆಗಳಿಗೆ ಉತ್ತರದ ಮಾಹಿತಿಗಳು ಇಲಾಖೆಯ ಸಂಶೋಧನಾ ಪುಸ್ತಕಗಳಲ್ಲಿ ಇರಬಹುದು. ಆದರೆ, ಅವುಗಳು ರೈತರಿಗೆ ತಲುಪುತ್ತಿಲ್ಲ, ಅದಾಗಬೇಕು.
  • ಅಡಿಕೆ ಕೊಳೆ ರೋಗಕ್ಕೆ ಕಾಪರ್ ಸಲ್ಫೇಟ್ ಬಳಸುವಾಗ 1% ಸುಣ್ಣ ಬಳಸಬೇಕು ಅಥವಾ ಬೋರ್ಡೋ ದ್ರಾವಣದ pH ಮಟ್ಟ +7 ಆಗಲು ಅಗತ್ಯ ಸುಣ್ಣ ಬಳಸಬೇಕು ಎಂದು ಶಿಫಾರಸ್‌ನಲ್ಲಿ ಹೇಳಲಾಗುತ್ತದೆ. ಆದರೆ ಬೇರೆ ಯಾವ ಔಷಧಿಗಳ ಸ್ಪ್ರೇಗೆ ಸುಣ್ಣದ ಬಳಕೆ ಶಿಫಾರಸ್ ಮಾಡುವುದಿಲ್ಲ. ಅದರರ್ಥ ಬೇರೆ ಎಲ್ಲ ಔಷಧಿಗಳ pH ಮಟ್ಟ ಸಮಸ್ಥಿತಿಯಲ್ಲಿದೆ ಎಂದಾಗುವುದೆ? ಅಥವಾ pH ಸಮಸ್ಥಿತಿಗೆ ತರಲಾಗಿದೆ ಎಂದು ಅರ್ಥವೆ?
  • pH ತಕ್ಷಣ ನಿಯಂತ್ರಣಕ್ಕೆ ಬರೀ ಸುಣ್ಣವನ್ನು ದ್ರವ ರೂಪದಲ್ಲಿ ಮಣ್ಣಿಗೆ ಸ್ಪ್ರೇ ಮಾಡಬಹುದಾ?
  • ಬೋರ್ಡೋ ದ್ರಾವಣದಲ್ಲಿ ಶಿಫಾರಸ್ ಮಾಡಿದ್ದಕ್ಕಿಂತ ಹೆಚ್ಚು ಸುಣ್ಣ ಬಳಸುವ ಪದ್ದತಿ ಮಲೆನಾಡಿನ ಅನೇಕ ರೈತರಲ್ಲಿದೆ. ಹೆಚ್ಚು ಸುಣ್ಣ ಬಳಸಿದ ಪರಿಣಾಮವೇ, ಸುಣ್ಣದ ಪಾರ್ಟಿಕಲ್‌‌ಗಳೇ ನಿರ್ಧಿಷ್ಟ ಸಮಯದ ನಂತರ ಅಡಿಕೆ ಮತ್ತು ಎಲೆಗಳ ಮೇಲೆ ಶೇಕರಣೆಯಾಗಿ, ಪಾಚಿ ಕಟ್ಟಿ, ಫಂಗಸ್ ಬೆಳೆಯುವುದಕ್ಕೆ ಆ ಮೂಲಕ ಕೊಳೆ ರೋಗ ಹೆಚ್ಚುವುದಕ್ಕೆ ಕಾರಣವಾಗಬಹುದು ಎಂದು ಕೆಲವರ ಅಭಿಪ್ರಾಯ ಇದೆ. ಈ ಬಗ್ಗೆ ಸಂಶೋಧನಾ ಮಾಹಿತಿಗಳು ಇಲಾಖೆಗಳಲ್ಲಿ ವಿಜ್ಞಾನಗಳಲ್ಲಿ ಇರಬಹುದಾ?
  • ಮನುಷ್ಯರಿಗೆ ಆಪರೇಷನ್ ಆಗಬೇಕಾದರೆ BP, ಶುಗರ್ ಮತ್ತು ರಕ್ತದ pH ನಾರ್ಮಲ್ ಇರಬೇಕು. ಅದೇರೀತಿ ಅಡಿಕೆ ಗಿಡ ನೆಡುವಾಗ, ಬೇಸಾಯ ಮಾಡುವಾಗ, ಬೇಸಾಯದ ಉಳುಮೆ ಮಾಡುವಾಗ, ಬಹುಶಃ ಮರದಿಂದ ಫಸಲು ಕಿತ್ತು ತೆಗೆಯುವಾಗ(?), ರೋಗ ನಿಯಂತ್ರಣದ ಸಂಧರ್ಭಗಳಲ್ಲಿ, ಮರ ಮತ್ತು ಮಣ್ಣಿನ pH ಸಮತೋಲನ ಕಾಪಾಡುವುದು ಒಂದು ಅಗತ್ಯ ಪ್ರಕ್ರಿಯೆ ಅಲ್ವಾ? ಈ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ಕೊಡುವಂತಾಗಬೇಕು.
  • ಮಣ್ಣಿನ pH ಬಗ್ಗೆ ಒಂದಿಷ್ಟು ಮಾಹಿತಿಗಳಿವೆ ಆದರೆ, ಅಡಿಕೆ ಮರದಲ್ಲಿ ರೋಗ ಲಕ್ಷಣಗಳು ಕಂಡು ಬಂದಾಗ, ಅಡಿಕೆ ಮರದ pH ಕಡೆಗೆ ಒಂದಿಷ್ಟು ಗಮನ ಕೊಟ್ಟು, ಅಧ್ಯಯನ ಮಾಡಲಾಗಿದೆಯಾ? ಇಲಾಖೆಗಳಲ್ಲಿ ವರದಿ ಇರಬಹುದಾ?

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಎಲೆಚುಕ್ಕಿ ರೋಗ; ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಹೇಳಿಕೆಗಳೇ ಬೋಗಸ್‌! ಇಲ್ಲಿದೆ ಪುರಾವೆ

ಡಿವಿಜಿಯವರ ಒಂದು ಕಗ್ಗದ ಮುಕ್ತಕ ಹೀಗಿದೆ

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ?। ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ॥ ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು। ಗುಣಕೆ ಕಾರಣವೊಂದೆ? – ಮಂಕುತಿಮ್ಮ ॥
ಅಂದರೆ, ಭೂಮಿಯಲ್ಲಿ ಚಿಗುರುವ ಹುಲ್ಲಿಗೆ ಆ ಹಸಿರುಬಣ್ಣ ಎಲ್ಲಿದ ಬಂತು? ಬೇರಿನದೋ ? ಭೂಮಿಯದೋ? ಬೆಳಕ ನೀಡುವ ಸೂರ್ಯನದೋ? ಚಂದ್ರನದೋ? ಪೂರಕವಾದ ನೀರಿನದೋ? ಅದನ್ನು ಬೆಳೆಸಿದ ನಿನ್ನದೋ? ಅಥವಾ ತಂಪ ಕಾಣುವ ನಿನ್ನ ಕಣ್ಣಿನ ಪುಣ್ಯದ್ದೋ? ಆ ಹುಲ್ಲಿನ ಹಸಿರಿನ ಗುಣಕ್ಕೆ ಕಾರಣ ಒಂದೇ ಅಲ್ಲ. ಅನೇಕ ಕಾರಣಗಳಿವೆ ಎಂದು ಮುಕ್ತಕದ ಅರ್ಥ. ಆ ಅನೇಕದಲ್ಲಿ pH ಕೂಡ ಒಂದು ಪ್ರಮುಖವಾದುದು. ಗೊಬ್ಬರ, ಪೋಶಕಾಂಶಗಳಿಗಿಂತ ಹೆಚ್ಚಿನ ಮಹತ್ವವನ್ನು ಮಣ್ಣಿನ pH (ರಸಸಾರ) ಬಗ್ಗೆ ಕೊಡಬೇಕು.
ಗ್ಯಾಸ್ಟ್ರಿಕ್ ಆ್ಯಸಿಡಿಟಿ ಇದ್ದಾಗ ಯಾವ ಒಳ್ಳೆಯ ಊಟವೂ ಸೇರುವುದಿಲ್ಲ. ತಿಂದರೆ ಜೀರ್ಣವೂ ಆಗುವುದಿಲ್ಲ. ಇದು ಕೃಷಿಗೂ ಅನ್ವಯ. ಮಣ್ಣಿನ ಆ್ಯಸಿಡಿಟಿ ಸರಿ ಮಾಡಿಕೊಂಡು, ಬೇಸಾಯದ ಊಟ ಬಡಿಸಬೇಕು.

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Continue Reading
Advertisement
Pralhad Joshi
ಕರ್ನಾಟಕ2 hours ago

Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

Lok Sabha Election 2024
ಕರ್ನಾಟಕ2 hours ago

Lok Sabha Election: ಮೋದಿಯಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು, ನಾವು ಗ್ಯಾರಂಟಿ ಮೂಲಕ ಸ್ಪಂದಿಸಿದ್ದೇವೆ: ಸಿಎಂ

The Great Khal
ಪ್ರಮುಖ ಸುದ್ದಿ3 hours ago

The Great Khali : ರಾಹುಲ್ ಗಾಂಧಿ ಸುಳ್ಳ ಎಂದು ಕರೆದ ಬಿಜೆಪಿ ನಾಯಕ ದಿ ಗ್ರೇಟ್ ಖಲಿ, ಇಲ್ಲಿದೆ ವಿಡಿಯೊ

IPL 2024
ಪ್ರಮುಖ ಸುದ್ದಿ3 hours ago

IPL 2024 : ಗುಜರಾತ್​ ತಂಡಕ್ಕೆ3 ವಿಕೆಟ್​ ವಿಜಯ, ಪಂಜಾಬ್​ಗೆ ಬಿಡದ ಸೋಲಿನ ನಂಟು

belagavi Airport
ಕರ್ನಾಟಕ3 hours ago

Indigo Airlines: ಪ್ರಯಾಣಿಕರ ಲಗೇಜ್‌ ಬೆಂಗಳೂರಲ್ಲೇ ಬಿಟ್ಟು ಬೆಳಗಾವಿಗೆ ಬಂದ ವಿಮಾನ; ಮಾಜಿ ಸಿಎಂ ಬ್ಯಾಗ್‌ ಕೂಡ ಮಿಸ್ಸಿಂಗ್!‌

Viral News
ವೈರಲ್ ನ್ಯೂಸ್3 hours ago

Viral News: ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್‌ ವಿಡಿಯೊ ನೋಡಿ

Sportsmanship
ಕ್ರೀಡೆ3 hours ago

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

DK Suresh
ಬೆಂಗಳೂರು4 hours ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ4 hours ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ4 hours ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ21 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20242 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ2 days ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ2 days ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌