Vistara Top 10 News : ರಾಜ್ಯದೆಲ್ಲೆಡೆ ಹನುಮಧ್ವಜದ ಕಿಚ್ಚು, ಪೌರತ್ವ ತಿದ್ದುಪಡಿ ಕಾಯ್ದೆ ಶೀಘ್ರ ಜಾರಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು - Vistara News

ಪ್ರಮುಖ ಸುದ್ದಿ

Vistara Top 10 News : ರಾಜ್ಯದೆಲ್ಲೆಡೆ ಹನುಮಧ್ವಜದ ಕಿಚ್ಚು, ಪೌರತ್ವ ತಿದ್ದುಪಡಿ ಕಾಯ್ದೆ ಶೀಘ್ರ ಜಾರಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Vistara Top 10 News : ಇಡೀ ದಿನ ದೇಶ, ವಿದೇಶಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತು ನೋಟವೇ ವಿಸ್ತಾರ ಟಾಪ್‌ 10 ನ್ಯೂಸ್‌

VISTARANEWS.COM


on

Top 10 news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. ರಾಜ್ಯಾದ್ಯಂತ ಹರಡಿದ ಹನುಮ ಧ್ವಜದ ಕಿಚ್ಚು;‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೇಸರಿ ಪಡೆ ಆಕ್ರೋಶ
ಬೆಂಗಳೂರು: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ದಂಗಲ್ ಕಿಚ್ಚು ರಾಜ್ಯಾದ್ಯಂತ ವ್ಯಾಪಿಸಿದ್ದು, ಹಲವು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ರಸ್ತೆಗಳಿದು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಕೆರಗೋಡು ಗ್ರಾಮದಲ್ಲಿ ಪೊಲೀಸರು ಹನುಮ ಧ್ವಜ ತೆರವು ಮಾಡಿರುವುದು ಖಂಡನೀಯ. ಕಾಂಗ್ರೆಸ್‌ ಸರ್ಕಾರವು ಹಿಂದುಗಳ ಭಾವನೆಗೆ ಧಕ್ಕೆ ತಂದು, ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Hanuman Flag : ಮಂಡ್ಯದಲ್ಲಿ ಹಿಂಸಾತಾಂಡವ; ಜನಾಕ್ರೋಶಕ್ಕೆ ಗುರಿಯಾದ ಕಾಂಗ್ರೆಸ್‌ ಶಾಸಕ ರವಿ ಗಣಿಗ
ಈ ಸುದ್ದಿಯನ್ನೂ ಓದಿ : Hanuman Flag : ಕೆರಗೋಡು ಹನುಮ ವಿವಾದ; ಫೆ. 9ರಂದು ಮಂಡ್ಯ ಬಂದ್‌ಗೆ ಬಿಜೆಪಿ ಕರೆ
ಇದನ್ನೂ ಓದಿ : CM Siddaramaiah: ಬಿಜೆಪಿ-ಆರ್‌ಎಸ್‌ಎಸ್‌ನವರು ಸುಳ್ಳೋತ್ಪಾದಕರು; ಸಿಎಂ ಸಿದ್ದರಾಮಯ್ಯ ಕಿಡಿ

2. ದೇಶಾದ್ಯಂತ ಒಂದೇ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಕೇಂದ್ರ ಮಹತ್ವದ ಘೋಷಣೆ
ಕೋಲ್ಕೊತಾ: ಲೋಕಸಭೆ ಚುನಾವಣೆಯ (Lok Sabha Election 2024) ನಂತರವೇ ಕೇಂದ್ರ ಸರ್ಕಾರವು (Central Government) ಪೌರತ್ವ ತಿದ್ದುಪಡಿ ಕಾಯ್ದೆ (Citizenship (Amendment) Act) ಜಾರಿಗೊಳಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆಯೇ ಕೇಂದ್ರ ಸಚಿವ ಶಂತನು ಠಾಕೂರ್‌ (Shantanu Thakur) ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ದೇಶಾದ್ಯಂತ 7 ದಿನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA Implementation) ಜಾರಿಗೆ ಬರಲಿದೆ” ಎಂದು ಹೇಳಿದ್ದಾರೆ. ಇವರ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

3. ಇನ್ನು 15 ದಿನದಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ? ಅವಧಿ ವಿಸ್ತರಣೆಗೆ ಹಿಂದುಳಿದ ಆಯೋಗ ಮನವಿ
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಮತ್ತು ಸದಸ್ಯರ ಅವಧಿ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹದಿನೈದು ದಿನಗಳ ಕಾಲ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ. ಕಾರಣ, ಅಷ್ಟರಲ್ಲಿ ಜಾತಿ ಗಣತಿ ವರದಿಯನ್ನು (Caste Census Report) ಸರ್ಕಾರ ಸ್ವೀಕಾರ ಮಾಡಿ ಬಹಿರಂಗಪಡಿಸಲು ಹೆಚ್ಚಿನ ಆಸಕ್ತಿಯನ್ನು ತೋರಿದೆ. ಹೀಗಾಗಿ ಇನ್ನು 15 ದಿನದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

4. ಮಕ್ಕಳ ಭವಿಷ್ಯ; ಪೋಷಕರಿಗೆ ಮೋದಿ ಹೇಳಿದ 10 ಕಿವಿಮಾತುಗಳೇನು?
ನವದೆಹಲಿ: ನರೇಂದ್ರ ಮೋದಿ ಅವರು (Narendra Modi) ಪರೀಕ್ಷಾ ಪೇ ಚರ್ಚಾ (Pariksha Pe Charcha 2024) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವುದು ಹೇಗೆ, ಆತ್ಮವಿಶ್ವಾಸದಿಂದ ಬರೆಯುವುದು ಹೇಗೆ ಎಂಬುದರ ಕುರಿತು ಸಲಹೆ ನೀಡುವ ಜತೆಗೆ ಪೋಷಕರಿಗೂ (Parents) ಕಿವಿಮಾತುಗಳನ್ನು ಹೇಳಿದರು. ಮಕ್ಕಳು ಪರೀಕ್ಷೆಯಲ್ಲಿ ಯಶಸ್ವಿಯಾಗಲು ಪೋಷಕರ ಪಾತ್ರ ಎಷ್ಟು ಮಹತ್ವ ಎಂಬುದನ್ನು ಕೂಡ ತಿಳಿಸಿದರು. ಮೋದಿ ಹೇಳಿದ ಟಾಪ್‌ 10 ಕಿವಿಮಾತುಗಳು ಇಲ್ಲಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Pariksha Pe Charcha 2024: ಪರೀಕ್ಷೆಗೆ ಮುನ್ನ 10 ನಿಮಿಷ ನಕ್ಕುಬಿಡಿ, ಜೋಕ್‌ ಮಾಡಿ: ಮಕ್ಕಳಿಗೆ ಪ್ರಧಾನಿ ಮೋದಿ ಕಿವಿಮಾತು

5. ಕರ್ನಾಟಕದ 4 ಸೇರಿ ರಾಜ್ಯಸಭೆ 56 ಸ್ಥಾನಗಳಿಗೆ ಫೆ.27ಕ್ಕೆ ಚುನಾವಣೆ
ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮಧ್ಯೆಯೇ ಚುನಾವಣೆ ಆಯೋಗವು ರಾಜ್ಯಸಭೆ ಚುನಾವಣೆ (Rajya Sabha Election) ದಿನಾಂಕ ಘೋಷಿಸಿದೆ. 15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸಲು ಆಯೋಗವು (Election Commission Of India) ತೀರ್ಮಾನಿಸಿದೆ. ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Voting) ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಇದನ್ನೂ ಓದಿ : Rajya Sabha Election: ಕಾಂಗ್ರೆಸ್‌ನ 3, ಬಿಜೆಪಿಯ 1 ರಾಜ್ಯಸಭಾ ಸ್ಥಾನಕ್ಕೆ ಫೆ.27ಕ್ಕೆ ಚುನಾವಣೆ: ಶುರುವಾಗಿದೆ ರಾಜಕೀಯ ಲೆಕ್ಕಾಚಾರ!

6. ರಾಮಮಂದಿರ, ನಿತೀಶ್‌ ವಾಪಸ್; ‘ಹಿಂದಿ’ ರಾಜ್ಯಗಳಲ್ಲಿ ಹೆಚ್ಚಿದ ಬಿಜೆಪಿ ಪ್ರಾಬಲ್ಯ, ‘ಲೋಕ’ ಸಮರಕ್ಕೆ ಬಲ
ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಎಲ್ಲ ಪಕ್ಷಗಳು, ಮೈತ್ರಿಕೂಟಗಳು, ನಾಯಕರು ಇನ್ನಿಲ್ಲದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆಯೇ, ಬಿಹಾರದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಮೈತ್ರಿಕೂಟ (NDA Alliance) ಸೇರಿದ್ದಾರೆ. ಇತ್ತೀಚೆಗೆ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ ಗೆಲುವು, ನಿತೀಶ್‌ ಕುಮಾರ್‌ (Nitish Kumar) ಅವರು ‘ಘರ್‌ ವಾಪ್ಸಿ’ ಆಗಿರುವುದು ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಇಮ್ಮಡಿಗೊಳಿಸಿವೆ. ಸಹಜವಾಗಿಯೇ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು (BJP) ಇದರ ಲಾಭ ಪಡೆಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

7. ಮಹಿಳಾ ಉದ್ಯೋಗಿಗಳಿಗೆ ಇನ್ನಷ್ಟು ಸಂಬಳಸಹಿತ ರಜೆ; ಬಜೆಟ್‌ನಲ್ಲಿ ಏನಿದೆ ನಿರ್ಮಲಾ ಕೊಡುಗೆ?
ಹೊಸದಿಲ್ಲಿ: ಮಹಿಳಾ ಉದ್ಯೋಗಿಗಳಿಗೆ ಇನ್ನಷ್ಟು ಸಂಬಳಸಹಿತ ರಜೆ (Paid Leave), ಮಹಿಳಾ ಉದ್ಯಮಿಗಳಿಗೆ (women Entrepreneurs) ತೆರಿಗೆ ಸಡಿಲಿಕೆಗಳು ಸೇರಿದಂತೆ ಧಮಾಕಾ ಘೋಷಣೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Finance minister Nirmala Sitharaman) ಅವರು ಈ ಸಲದ ಕೇಂದ್ರ ಬಜೆಟ್‌ನಲ್ಲಿ (Budget 2024) ಮಾಡುವ ಸಾಧ್ಯತೆ ಇದೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

8. ಎರಡನೇ ಟೆಸ್ಟ್​ಗೆ ನಾಲ್ಕು ಬಲಿಷ್ಠ ಆಟಗಾರರೇ ಇಲ್ಲ, ಭಾರತ ತಂಡ ಗೆಲ್ಲುವುದು ಹೇಗೆ?
ಬೆಂಗಳೂರು: ಭಾರತ ಕ್ರಿಕೆಟ್​ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (ind vs eng) 28 ಸೋಲಿಗೆ ಒಳಗಾಗಿದೆ. 198 ರನ್​ಗಳ ಮುನ್ನಡೆಯನ್ನು ಪಡೆದುಕೊಂಡಿದ್ದ ಹೊರತಾಗಿಯೂ ಎರಡನೇ ಇನಿಂಗ್ಸ್​ನಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದಿಂದಾಗಿ ಭಾರತ ತಂಡ ಮುಖಭಂಗ ಅನುಭವಿಸಿದೆ. ಭಾರತ ತಂಡಕ್ಕೆ ಸರಣಿಯಲ್ಲಿ ಇನ್ನು ನಾಲ್ಕು ಪಂದ್ಯಗಳು ಬಾಕಿ ಇವೆ. ಹೀಗಾಗಿ ಸರಣಿ ಗೆಲ್ಲಬೇಕಾದರೆ ಅದರಲ್ಲಿ ಕನಿಷ್ಠ ಪಕ್ಷ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೆ, ಭಾರತ ತಂಡಕ್ಕೆ ಸೋಲಿನ ನಡುವೆ ಇನ್ನೊಂದು ಆಘಾತಕಾರಿ ಸುದ್ದಿ ಬಂದಿದೆ. ಮುಂದಿನದ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ನಾಲ್ವರು ಆಟಗಾರರು ಇರುವುದಿಲ್ಲ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಇದನ್ನೂ ಓದಿ : ಹಣ್ಣು ಎಸೆದು ಬೌಲಿಂಗ್​ ಮಾಡುತ್ತಿದ್ದ ಜೋಸೆಫ್​ ಈಗ ವಿಶ್ವದ ಡೆಡ್ಲಿ ಬೌಲರ್​; ಇಲ್ಲಿದೆ ರೋಚಕ ಕಥೆ

9. 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ: ರಣಬೀರ್ ಅತ್ಯುತ್ತಮ ನಟ, ಆಲಿಯಾ ಅತ್ಯುತ್ತಮ ನಟಿ!
ನವದೆಹಲಿ: ‘ಗುಜರಾತ್​​ ಪ್ರವಾಸೋದ್ಯಮ ಇಲಾಖೆ’ (Gujarat Tourism) ಸಹಯೋಗದೊಂದಿಗೆ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ (69th Filmfare Awards) ಕಾರ್ಯಕ್ರಮ ಗುಜರಾತ್​ನ ಗಾಂಧಿನಗರದ ಮಹಾತ್ಮ ಮಂದಿರ್​ ಕನ್ವೆನ್ಷನ್​ ಮತ್ತು ಎಕ್ಸಿಬ್ಯುಷನ್​ ಸೆಂಟರ್​ನಲ್ಲಿ ಜ.27 ಹಾಹೂ ಜ.28ರಂದು ಅದ್ಧೂರಿಯಾಗಿ ನಡೆದಿದೆ. ಜನವರಿ 27ರಂದು ಬಾಲಿವುಡ್​ (Bollywood) ಸಿನಿಮಾಗಳ ಹಲವು ತಾಂತ್ರಿಕ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿತ್ತು. ಜ.28ರಂದು ಉಳಿದ ವಿಭಾಗಗಳಿಗೆ ಪ್ರಶಸ್ತಿ ನೀಡಲಾಯಿತು. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.

10. 49 ವರ್ಷದ ಮಹಿಳೆ ಜತೆ 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಮದುವೆ; ಹುಣಸೆ ಮುಪ್ಪಾದರೆ!
ಭೋಪಾಲ್‌: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿದೆ. ಆಧುನಿಕ ಕಾಲಘಟ್ಟದಲ್ಲಿ ಮದುವೆಯಾಗಲು ಕೂಡ ವಯಸ್ಸಿನ ಹಂಗಿಲ್ಲ ಎಂಬಂತಾಗಿದೆ. 60 ವರ್ಷ ದಾಟಿದವರೂ ಇತ್ತೀಚೆಗೆ ಮದುವೆಯಾಗುತ್ತಿದ್ದಾರೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಸ್ವಾತಂತ್ರ್ಯ ಹೋರಾಟಗಾರರೊಬ್ಬರು (Freedom Fighter) ತಮ್ಮ 103ನೇ ವಯಸ್ಸಿನಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. 103 ವರ್ಷದ ಹಬೀಬ್‌ ನಜರ್‌ (Habib Nazar) ಅವರು 49 ವರ್ಷದ ಫಿರೋಜ್‌ ಜಹಾನ್‌ (Firoz Jahan) ಎಂಬುವರನ್ನು ವರಿಸಿದ್ದಾರೆ. ಇವರ ಮದುವೆಯ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

7th Pay Commission: ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಹಳೇ ಪಿಂಚಣಿ ಯೋಜನೆ, ಆರೋಗ್ಯ ಯೋಜನೆ ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ನೌಕರರ ಸಂಘವು ಜುಲೈ 23ರಂದು ಪ್ರಮುಖ ಸಭೆ ನಡೆಸಲು ತೀರ್ಮಾನಿಸಿದೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಉಳಿದ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ತಿಳಿದುಬಂದಿದೆ.

VISTARANEWS.COM


on

7th Pay Commission
Koo

ಬೆಂಗಳೂರು: ಕರ್ನಾಟಕದಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ (7th Pay Commission) ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಪ್ರಸಕ್ತ ವರ್ಷದ ಆಗಸ್ಟ್‌ 1ರಿಂದಲೇ ಶಿಫಾರಸುಗಳು ಜಾರಿಗೆ ಬರಲಿವೆ. ಇದರಿಂದ ಲಕ್ಷಾಂತರ ನೌಕರರ (Karnataka Government Employees) ವೇತನವು ಶೇ.27.5ರಷ್ಟು ಏರಿಕೆಯಾಗಲಿದೆ. ಇನ್ನು, ರಾಜ್ಯ ಸರ್ಕಾರವು ಆಯೋಗದ ಶಿಫಾರಸುಗಳ ಜಾರಿ ಕುರಿತು ಸರ್ಕಾರದ ತೀರ್ಮಾನವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸ್ವಾಗತಿಸಿದೆ. ಇದರ ಬೆನ್ನಲ್ಲೇ, ಹಳೇ ಪಿಂಚಣಿ ಯೋಜನೆ (ಒಪಿಎಸ್)‌, ಆರೋಗ್ಯ ಯೋಜನೆ ಬೇಡಿಕೆಗಳ ಈಡೇರಿಕೆಗೆ ಸಂಘವು ಒತ್ತಾಯಿಸಿದೆ.

ರಾಜ್ಯ ಸರ್ಕಾರದ ತೀರ್ಮಾನದ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಸಮಾಧಾನಕರ ಸಂಗತಿಯಾಗಿದೆ. ಇದಕ್ಕಾಗಿ ನೌಕರರ ಸಂಘ ಸೇರಿ ಎಲ್ಲ ಸಂಘಗಳು ಹಾಗೂ ನೌಕರರ ಪರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಜುಲೈ 23ರಂದು ಪ್ರಮುಖ ಸಭೆ

ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಇತರ ಬೇಡಿಕೆಗಳ ಈಡೇರಿಕೆಗಾಗಿ ನೌಕರರ ಸಂಘವು ಜುಲೈ 23ರಂದು ಪ್ರಮುಖ ಸಭೆ ನಡೆಸಲು ತೀರ್ಮಾನಿಸಿದೆ. “ಹಳೇ ಪಿಂಚಣಿ ಯೋಜನೆ, ನೌಕರರಿಗೆ ಆರೋಗ್ಯ ಯೋಜನೆ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಬಾಕಿ ಇದೆ. ಇಷ್ಟೆಲ್ಲ ವಿಚಾರಗಳ ಕುರಿತು ಚರ್ಚಿಸಲು ರಾಜ್ಯದ ಸರ್ಕಾರಿ ನೌಕರರ ಸಂಘಗಳ ಎಲ್ಲ ವೃಂದಗಳು, ರಾಜ್ಯ ಕೇಡರ್‌ ಅಸೋಸಿಯೇಷನ್‌ ಹಾಗೂ ಎಕ್ಸಿಕ್ಯೂಟಿವ್‌ ಸಭೆಯನ್ನು ಜುಲೈ 23ರಂದು ಕರೆಯಲಾಗಿದೆ. ಸಭೆಯಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಸಿ.ಎಸ್.ಷಡಾಕ್ಷರಿ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಇತರ ಬೇಡಿಕೆಗಳು

1) ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು: ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತೀಸ್‌ ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್.
ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.

2) ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಯನ್ನು ಜಾರಿಗೆ ತರಲು ಈ ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ದಿನಾಂಕ: 05-09-2022 ರಂದು ಸರ್ಕಾರಿ ಆದೇಶ ಹೊರಡಿಸಿರುತ್ತದೆ. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ಚಿಕಿತ್ಸೆ ಪಡೆಯಲು ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವುದು.

ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ಜಾರಿ; ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಪಟ್ಟಿ

Continue Reading

ಕ್ರಿಕೆಟ್

Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

Jasprit Bumrah : ಚಿಕ್ಕ ಮಕ್ಕಳು ಜಸ್ಪ್ರೀತ್ ಬುಮ್ರಾ ಅವರ ಕ್ರಮವನ್ನು ನಕಲು ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ನ ಮಕ್ಕಳು ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಅನುಕರಿಸುವ ವೀಡಿಯೊ ವೈರಲ್ ಆಗಿತ್ತು. ಬುಮ್ರಾ ಅವರ ವಿಶೇಷ ಬೌಲಿಂಗ್ ಶೈಲಿಯನ್ನು ಬೇರೆ ಬೇರೆ ರೀತಿಯಲ್ಲಿ ಅನುಕರಿಸುವುದಕ್ಕೆ ಕಾರಣ ಅವರ ಯಶಸ್ಸು. ಯಾಕೆಂದರೆ ಅವರು ಬೌಲಿಂಗ್​ನಲ್ಲಿ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆಯುವ ಕಾರಣ ಮಕ್ಕಳು ಅದರ ಕಡೆಗೆ ಆಕರ್ಷಿತರಾಗಿದ್ದಾರೆ.

VISTARANEWS.COM


on

Jasprit Bumrah
Koo

ಬೆಂಗಳೂರು: ಮುಂಬೈ ಇಂಡಿಯನ್ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಆಧುನಿಕ ಯುಗದ ಅತ್ಯುತ್ತಮ ವೇಗದ ಬೌಲರ್. ಅವರು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್​​ನಲ್ಲಿದ್ದಾರೆ. 2024 ರ ಟಿ 20 ವಿಶ್ವಕಪ್​​ನಲ್ಲಿ ಬುಮ್ರಾ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸಾಬೀತುಪಡಿಸಿದ್ದಾರೆ. ಅಲ್ಲಿ ಅವರು ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. ಮುಕ್ತಾಯಗೊಂಡ ಆ ಆವೃತ್ತಿಯಲ್ಲಿ ಜಸ್ಪ್ರೀತ್ 15 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಬುಮ್ರಾ ಅವರ ಕ್ರೇಜ್ ಮತ್ತು ಜನಪ್ರಿಯತೆ ವೇಗವಾಗಿ ಬೆಳೆಯುತ್ತಿದೆ ಮತ್ತು ಅವರ ಅಭಿಮಾನಿ ಬಳಗವೂ ದೇಶದ ಗಡಿಗಳನ್ನು ದಾಟುತ್ತಿದೆ. ಬುಮ್ರಾ ಅವರ ಪ್ರಭಾವದ ಇತ್ತೀಚಿನ ಉದಾಹರಣೆಯನ್ನು ಪಾಕಿಸ್ತಾನದಲ್ಲಿ ಕಾಣಬಹುದು. ಅಲ್ಲಿ ಚಿಕ್ಕ ಮಗುವೊಂದು ಗಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಬುಮ್ರಾ ಶೈಲಿಯನ್ನು ಅನುಕರಿಸಿದೆ. ಆ ವಿಡಿಯೊ ವೈರಲ್ ಆಗಿದೆ.

ಚಿಕ್ಕ ಮಕ್ಕಳು ಜಸ್ಪ್ರೀತ್ ಬುಮ್ರಾ ಅವರ ಕ್ರಮವನ್ನು ನಕಲು ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಏಕೆಂದರೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ನ ಮಕ್ಕಳು ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಅನುಕರಿಸುವ ವೀಡಿಯೊ ವೈರಲ್ ಆಗಿತ್ತು. ಬುಮ್ರಾ ಅವರ ವಿಶೇಷ ಬೌಲಿಂಗ್ ಶೈಲಿಯನ್ನು ಬೇರೆ ಬೇರೆ ರೀತಿಯಲ್ಲಿ ಅನುಕರಿಸುವುದಕ್ಕೆ ಕಾರಣ ಅವರ ಯಶಸ್ಸು. ಯಾಕೆಂದರೆ ಅವರು ಬೌಲಿಂಗ್​ನಲ್ಲಿ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆಯುವ ಕಾರಣ ಮಕ್ಕಳು ಅದರ ಕಡೆಗೆ ಆಕರ್ಷಿತರಾಗಿದ್ದಾರೆ.

2022ರಲ್ಲಿ ಬುಮ್ರಾ ಕಷ್ಟದ ದಿನಗಳನ್ನು ಕಂಡಿದ್ದರು. ಅವರು ಬೆನ್ನುನೋವಿನಿಂದಾಗಿ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದರು. ಆ ಸಮಯದಲ್ಲಿ, ಹಲವಾರು ಪಂಡಿತರು ಮತ್ತು ಅಭಿಮಾನಿಗಳು ಅವರ ಬೌಲಿಂಗ್ ಕ್ರಮವನ್ನು ಟೀಕಿಸಿದ್ದರು. ಏಕೆಂದರೆ ಅದನ್ನು ಗಾಯದ ಸಾಧ್ಯತೆ ಎಂದು ಪರಿಗಣಿಸಿದ್ದಾರೆ. ಆದಾಗ್ಯೂ, ಬಲಗೈ ವೇಗಿ ತನ್ನ ಪುನರಾಗಮನದೊಂದಿಗೆ ತನ್ನ ಟೀಕಾಕಾರ ಬಾಯಿ ಮುಚ್ಚಿಸಿದ್ದಾರೆ. ಈ ಬಾರಿ ಪಂಡಿತರು ಅವರ ವಿಶೇಷ ಬೌಲಿಂಗ್ ಶೈಲಿಯೇ ಅವರಿಗೆ ವರದಾನ ಎಂದು ಹೇಳಿದ್ದಾರೆ.

ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಜಸ್​ಪ್ರೀತ್​ ಬುಮ್ರಾ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah)​ ಅವರು ಜೂನ್ ತಿಂಗಳ ಐಸಿಸಿ ಆಟಗಾರ(ICC Player Of The Month Award) ಗೌರವಕ್ಕೆ ಭಾಜನರಾಗಿದ್ದಾರೆ. ಇದೇ ವೇಳೆ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಐಸಿಸಿ ಮಹಿಳಾ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Virat kohli : ಕೊಹ್ಲಿ ಜತೆಗಿನ ಮುನಿಸು ಕೊನೆಗೊಳಿಸಿದ್ದೇ ಗಂಭೀರ್​; ವಿರಾಟ್ ಅಹಂ ಬಿಡಲಿಲ್ಲ ಎಂದ ಮಾಜಿ ಸ್ಪಿನ್ನರ್​​

ಜೂನ್​ ತಿಂಗಳ ಐಸಿಸಿ ಆಟಗಾರ ಪಟ್ಟಿಯಲ್ಲಿ ಜಸ್​ಪ್ರೀತ್​ ಬುಮ್ರಾ ಜತೆ ರೋಹಿತ್ ಶರ್ಮಾ ಹಾಗೂ ಅಫಘಾನಿಸ್ತಾನದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಕೂಡ ರೇಸ್​ನಲ್ಲಿದ್ದರು. ಆದರೆ ಇವರನ್ನು ಬುಮ್ರಾ ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದಾರೆ.

30 ವರ್ಷದ ಬುಮ್ರಾ ಟಿ20 ವಿಶ್ವಕಪ್​ ಟೂರ್ನಿಯಲ್ಲಿ 8.26ರ ಸರಾಸರಿಯಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದರು. ಐರ್ಲೆಂಡ್ (3/6), ಪಾಕಿಸ್ತಾನ (3/14), ಇಂಗ್ಲೆಂಡ್ (2/12), ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ (2/18) ವಿಕೆಟ್​ ಕಿತ್ತಿದ್ದರು. ಫೈನಲ್​ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರದೇ ಹೋಗಿದ್ದರೆ ಭಾರತ ಕಪ್​ ಗೆಲ್ಲುವುದು ಕೂಡ ಅಸಾಧ್ಯ ಎನ್ನುವಂತಿತ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಬುಮ್ರಾ ಬೆನ್ನು ನೋವಿನ ಕಾರಣದಿಂದ ಆಡಿರಲಿಲ್ಲ.

Continue Reading

ಪ್ರಮುಖ ಸುದ್ದಿ

Virat kohli : ಕೊಹ್ಲಿ ಜತೆಗಿನ ಮುನಿಸು ಕೊನೆಗೊಳಿಸಿದ್ದೇ ಗಂಭೀರ್​; ವಿರಾಟ್ ಅಹಂ ಬಿಡಲಿಲ್ಲ ಎಂದ ಮಾಜಿ ಸ್ಪಿನ್ನರ್​​

Virat kohli: ಗೌತಮ್​ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಜಗಳವನ್ನು ಕೊನೆಗೊಳಿಸಿದ್ದಾರೆ. ಐಪಿಎಲ್ 2023 ರ ಋತುವಿನಲ್ಲಿ ಆರ್​ಸಿಬಿ ಮತ್ತು ಎಲ್ಎಸ್​​ಜಿ ಲಖನೌ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮುಖಾಮುಖಿಯಾದಾಗ ಗಂಭೀರ್ ಮತ್ತು ಕೊಹ್ಲಿ ಮೈದಾನದಲ್ಲೇ ವಾಗ್ವಾದದಲ್ಲಿ ತೊಡಗಿದ್ದರು.

VISTARANEWS.COM


on

Virat Kohli
Koo

ಬೆಂಗಳೂರು: ವಿರಾಟ್ ಕೊಹ್ಲಿ (Virat kohli) ಹಾಗೂ ಗೌತಮ್ ಗಂಭೀರ್ ನಡುವಿನ ಕೋಳಿ ಜಗಳ ವಿಶ್ವ ವಿಖ್ಯಾತಿ ಪಡೆದುಕೊಂಡಿದೆ. ಹಲವಾರು ಬಾರಿ ಜಗಳವಾಡಿಕೊಂಡಿದ್ದ ಅವರ ಕೋಪ ಇನ್ನೂ ಮುಂದುವರಿದಿರಬಹುದು ಎಂದು ಹೇಳಲಾಗುತ್ತಿದೆ. ಇದೀಗ ಗಂಭೀರ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹೀಗಾಗಿ ಕೊಹ್ಲಿ ಮತ್ತು ಅವರ ನಡುವೆ ಶೀತಲ ಸಮರ ನಡೆಯಬಹುದು ಎಂಬುದಾಗಿ ಹೇಳಲಾಗುತ್ತಿದೆ. ಆದರೆ ಕೊಹ್ಲಿ ಮತ್ತು ಗಂಭೀರ್​ ನಡುವಿನ ಗಲಾಟೆ ಮುಗಿದ ಅಧ್ಯಾಯ ಎಂಬುದಾಗಿ ಭಾರತ ತಂಡದ ಮಾಜಿ ಸ್ಪಿನ್ನರ್ ಅಮಿತ್​ ಮಿಶ್ರಾ ಹೇಳಿದ್ದಾರೆ.

ಗೌತಮ್​ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಜಗಳವನ್ನು ಕೊನೆಗೊಳಿಸಿದ್ದಾರೆ. ಐಪಿಎಲ್ 2023 ರ ಋತುವಿನಲ್ಲಿ ಆರ್​ಸಿಬಿ ಮತ್ತು ಎಲ್ಎಸ್​​ಜಿ ಲಖನೌ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮುಖಾಮುಖಿಯಾದಾಗ ಗಂಭೀರ್ ಮತ್ತು ಕೊಹ್ಲಿ ಮೈದಾನದಲ್ಲೇ ವಾಗ್ವಾದದಲ್ಲಿ ತೊಡಗಿದ್ದರು. ಇಬ್ಬರೂ ನವೀನ್-ಉಲ್-ಹಕ್ ವಿಷಯಕ್ಕೆ ತೀವ್ರ ವಾಗ್ವಾದದಲ್ಲಿ ಭಾಗಿಯಾಗಿದ್ದರು. ಮೂವರೂ ಬಿಸಿಸಿಐನಿಂದ ಛೀಮಾರಿ ಹಾಕಿಸಿಕೊಂಡಿದ್ದರು.

ಐಪಿಎಲ್ 2024 ರ ಋತುವಿನಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ಎಲ್ಲವೂ ಬಗೆಹರಿದಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯದ ಸಮಯದಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದರ. ಪಂದ್ಯಕ್ಕೆ ಮುಂಚಿತವಾಗಿ ಕೋಲ್ಕತ್ತಾದಲ್ಲಿ ನಡೆದ ರಿವರ್ಸ್ ಪಂದ್ಯದ ವೇಳೆಯೂ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್, ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳಿಸಲು ಗಂಭೀರ್ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೆಕೆಆರ್​​ನ ಮಾಜಿ ಮೆಂಟರ್ ಗಂಭೀರ್​, ಕೊಹ್ಲಿಯ ಜತೆ ಅವರ ಕುಟುಂಬದ ಆರೋಗ್ಯ ವಿಚಾರಿಸಿದ್ದರು. ಅವರು ಅಜಗಳವನ್ನು ಕೊನೆಗೊಳಿಸಿದ್ದರು. ಹೀಗಾಗಿ ಅವರಿಬ್ಬರ ನಡುವಿನ ಜಗಳವನ್ನು ಗಂಭೀರ್ ಮುಕ್ತಾಯಗೊಳಿಸಿದ್ದಾರೆ ಎಮದು ಹೇಳಿದ್ದಾರೆ. ಇದೇ ವೇಳೆ ಅಮಿತ್ ಮಿಶ್ರಾ, ಈ ಕೆಲಸವನ್ನು ಕೊಹ್ಲಿ ಮೊದಲು ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024: ಮೊಟ್ಟಮೊದಲ ಒಲಿಂಪಿಕ್ಸ್ ಕ್ರೀಡಾಕೂಟದ 10 ಕುತೂಹಲಕರ ಸಂಗತಿಗಳಿವು

ನಾನು ಅಂದು ಗೌತಮ್ ವಿಚಾರದಲ್ಲಿ ಒಳ್ಳೆಯ ವಿಷಯವನ್ನು ನೋಡಿದೆ. ವಿರಾಟ್ ಕೊಹ್ಲಿ ಗೌತಮ್​ ಕಡೆಗೆ ಹೋಗಲಿಲ್ಲ, ಗೌತಮ್ ಅವರ ಕಡೆಗೆ ಹೋದರು. ಅವರೆಏ ಹೋಗಿ ‘ಹೇಗಿದ್ದೀರಿ, ನಿಮ್ಮ ಕುಟುಂಬ ಹೇಗಿದೆ’ ಎಂದು ಕೇಳಿದರು. ಈ ಮೂಲಕ ಜಗಳ ಕೊನೆಗೊಳಿಸಿದ್ದು ಗೌತಮ್ ಹೊರತು ಕೊಹ್ಲಿ ಅಲ್ಲ” ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.

“ಗೌತಮ್ ಆ ಸಮಯದಲ್ಲಿ ತಮ್ಮ ವಿಶಾಲ ಹೃದಯ ತೋರಿಸಿದರು. ಕೊಹ್ಲಿ ಹೋಗಿ ಜಗಳವನ್ನು ಕೊನೆಗೊಳಿಸಬೇಕಿತ್ತು. ಅವರೇ ಹೋಗಿ ‘ಗೌತಮ್​. ಇದನ್ನು ಕೊನೆಗೊಳಿಸೋಣ’ ಎಂದು ಹೇಳಬೇಕಿತ್ತು” ಎಂದು ಅಮಿತ್ ಮಿಶ್ರಾ ಹೇಳಿದರು.

ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರ ಬಳಿಗೆ ಹೋಗಿ ಅವರನ್ನು ತಬ್ಬಿಕೊಳ್ಳುವ ಮೂಲಕ ಅವರೊಂದಿಗಿನ ದ್ವೇಷ ಕೊನೆಗೊಳಿಸಿದರು/ ಆ ಮೂಲಕ ಅವರ ವಿಶಾಲ ಹೃದಯ ತೋರಿಸಿದರು. ಆದಾಗ್ಯೂ, ಕೊಹ್ಲಿ ಇದನ್ನು ಮಾಡಬೇಕಾಗಿತ್ತು, ಏಕೆಂದರೆ ಅವರು ಸಮಸ್ಯೆಯನ್ನು ದೊಡ್ಡದಾಗಿ ಮಾಡಿದರು ಮತ್ತು ಅದನ್ನು ಎಳೆದರು, ಎಂದು ಅವರು ಹೇಳಿದ್ದಾರೆ.

ಕೊಹ್ಲಿ ಮತ್ತು ಗಂಭೀರ್ ಒಟ್ಟಿಗೆ ಕೆಲಸ ಮಾಡಲು ಸಜ್ಜು


ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್​ ನೇಮಕಗೊಂಡಿದ್ದರಿಂದ ಕೊಹ್ಲಿ ಮತ್ತು ಗಂಭೀರ್ ಈಗ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ. ರಾಹುಲ್ ದ್ರಾವಿಡ್ ಬದಲಿಗೆ ಗಂಭೀರ್ ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದೊಂದಿಗೆ ತಮ್ಮ ಅಧಿಕಾರಾವಧಿಯನ್ನು ಆರಂಭಿಸಲಿದ್ದಾರೆ.

Continue Reading

ಕರ್ನಾಟಕ

7th Pay Commission: 7ನೇ ವೇತನ ಆಯೋಗ ಜಾರಿ; ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಪಟ್ಟಿ

7th Pay Commission: ಕರ್ನಾಟಕದಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಇದರಿಂದ ರಾಜ್ಯದ ಲಕ್ಷಾಂತರ ನೌಕರರ ಸಂಬಳವು ಹೆಚ್ಚಾಗಲಿದೆ. ಹಾಗಾದರೆ, ಏಳನೇ ವೇತನ ಆಯೋಗದ ಅನ್ವಯ ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

7th Pay Commission
Koo

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (Karnataka Government Employees) ಬಹುದಿನಗಳ ಕನಸು ನನಸಾಗಿದೆ. ನೌಕರರ ಬೇಡಿಕೆಯಂತೆ ರಾಜ್ಯದಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳ (7th Pay Commission) ಜಾರಿಗೆ ರಾಜ್ಯ ಸರ್ಕಾರವು (Karnataka Government) ತೀರ್ಮಾನ ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಆಗಸ್ಟ್‌ 1ರಿಂದಲೇ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿವೆ.

ವೇತನ ಹೆಚ್ಚಳದ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗ ಮಾರ್ಚ್ 16ರಂದು ಅಂತಿಮ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದ್ದ ಆಯೋಗ, ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರ ಸಂಬಳವನ್ನು ಶೇ.17ರಷ್ಟು ಹೆಚ್ಚಳ ಮಾಡಿದ್ದರು. ಈಗ ಏಳನೇ ವೇತನ ಆಯೋಗದ ಶಿಫಾರಸಿನಂತೆ ಇನ್ನೂ ಶೇ.10.5ರಷ್ಟು ಸೇರಿ ಒಟ್ಟು ಶೇ.27.5ರಷ್ಟು ಆಗುವಂತೆ ವೇತನವನ್ನು ಹೆಚ್ಚಿಸಲಾಗುತ್ತದೆ. ಹಾಗಾದರೆ, ಏಳನೇ ವೇತನ ಆಯೋಗದ ಜಾರಿಯಿಂದ ರಾಜ್ಯ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಇಲ್ಲಿದೆ ವಿಭಾಗವಾರು ವೇತನದ ವ್ಯತ್ಯಾಸ

ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ. 31 (5,270 ರೂ.) ಹಾಗೂ ಶೇ.27.50 (4,675 ರೂ. ) ಫಿಟ್ಮೆಂಟ್‌ ಸೇರಿ ಒಟ್ಟು 26,945 ಸಿಗುತ್ತಿತ್ತು. ಇನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27,000 ಇದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 (01-01-2024ಕ್ಕೆ) ರೂ. ಸಿಗಲಿದೆ. 6ನೇ ವೇತನ ಆಯೋಗದಲ್ಲಾದರೆ ಒಟ್ಟು 29,005 ರೂ. ಸಿಗುತ್ತಿತ್ತು. ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ.

ಅದೇ ರೀತಿ ಎ ವಲಯದಲ್ಲಿ ಕಾರ್ಯ ನಿರ್ವಹಿಸುವ ಎ ಮತ್ತು ಬಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು 17,000 ರೂ. ವೇತನ ಇದ್ದರೆ, ಶೇ. 31 ತುಟ್ಟಿ ಭತ್ಯೆ (5270 ರೂ.), ಫಿಟ್ಮೆಂಟ್‌ ಶೇ.27.50 (4675 ರೂ.) ಸೇರಿ ಒಟ್ಟು 26945 ರೂ ವೇತನ ಸಿಗುತ್ತಿತ್ತು. ಆದರೆ, 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27000 ಇದ್ದರೆ, ತುಟ್ಟಿ ಭತ್ಯೆ ಶೇ.8.5 (2298 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5400 ರೂ.), ನಗರ ಪರಿಹಾರ ಭತ್ಯೆ(ಸಿಸಿಎ) 900 ಸೇರಿ ಒಟ್ಟು 35,595 ವೇತನ ಸಿಗಲಿದೆ. ಇದು 6ನೇ ವೇತನ ಆಯೋಗದ ಅವಧಿಯಲ್ಲಿ 27,545 ರೂ. ಆಗಿದೆ. ಪರಿಷ್ಕೃತ ವೇತನದಲ್ಲಿ 8,050 ರೂ. ಹೆಚ್ಚಳವಾಗಲಿದೆ.

ವೇತನ ರಚನೆ ಮತ್ತು ವ್ಯತ್ಯಾಸದ ಪಟ್ಟಿ ಇಲ್ಲಿದೆ

ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗದ‌ ಶಿಫಾರಸು ಜಾರಿಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್; ನೌಕರರಿಗೆ ಗುಡ್‌ ನ್ಯೂಸ್

Continue Reading
Advertisement
7th Pay Commission
ಕರ್ನಾಟಕ3 mins ago

7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

Viral Video
ವೈರಲ್ ನ್ಯೂಸ್8 mins ago

Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

Jasprit Bumrah
ಕ್ರಿಕೆಟ್9 mins ago

Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

Round table meeting on June 16 in Bengaluru
ಕರ್ನಾಟಕ11 mins ago

Round table meeting: ಶಿಕ್ಷಣ ಗುಣಮಟ್ಟ ಸುಧಾರಿಸಲು ಜು.16ರಂದು ದುಂಡು ಮೇಜಿನ ಸಭೆ

Emergency Operations Center opened for public assistance says DC Lakshmipriya
ಉತ್ತರ ಕನ್ನಡ22 mins ago

Uttara Kannada News: ಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಾಚರಣೆ ಕೇಂದ್ರ ಸ್ಥಾಪನೆ: ಡಿಸಿ

district level various departments officials Meeting by DC MS Diwakar
ವಿಜಯನಗರ25 mins ago

Vijayanagara News: ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು: ಡಿಸಿ ಎಂ.ಎಸ್.ದಿವಾಕರ್‌ ಸೂಚನೆ

Assembly Session Government is making sincere efforts to solve the problems in the Survey Department says Minister Krishna Byre Gowda
ಕರ್ನಾಟಕ27 mins ago

Assembly Session: ಸರ್ವೆ ಇಲಾಖೆ ಸಮಸ್ಯೆಗಳ ಪರಿಹಾರಕ್ಕೆ ಚುರುಕಿನ ಕ್ರಮ: ಸಚಿವ ಕೃಷ್ಣ ಬೈರೇಗೌಡ

Grassroot Boxing match in Bengaluru
ಬೆಂಗಳೂರು37 mins ago

Grassroot Boxing: ಬೆಂಗಳೂರಿನಲ್ಲಿ ರೋಮಾಂಚನಗೊಳಿಸಿದ ಬಾಕ್ಸಿಂಗ್‌ ಪಂದ್ಯ

Virat Kohli
ಪ್ರಮುಖ ಸುದ್ದಿ37 mins ago

Virat kohli : ಕೊಹ್ಲಿ ಜತೆಗಿನ ಮುನಿಸು ಕೊನೆಗೊಳಿಸಿದ್ದೇ ಗಂಭೀರ್​; ವಿರಾಟ್ ಅಹಂ ಬಿಡಲಿಲ್ಲ ಎಂದ ಮಾಜಿ ಸ್ಪಿನ್ನರ್​​

Cleanliness programme in Shira Public Health Center premises
ತುಮಕೂರು42 mins ago

Shira News: ಶಿರಾದಲ್ಲಿ ʼಪರೋಪಕಾರಂʼ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಅಭಿಯಾನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ6 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ12 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ17 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌