HD Devegowda: ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ; ಕೇಂದ್ರಕ್ಕೆ ಕೈಜೋಡಿಸಿ ಮನವಿ ಮಾಡಿದ ಎಚ್‌.ಡಿ. ದೇವೇಗೌಡ - Vistara News

ಪ್ರಮುಖ ಸುದ್ದಿ

HD Devegowda: ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ; ಕೇಂದ್ರಕ್ಕೆ ಕೈಜೋಡಿಸಿ ಮನವಿ ಮಾಡಿದ ಎಚ್‌.ಡಿ. ದೇವೇಗೌಡ

HD Devegowda: ಕೇಂದ್ರ ಸರ್ಕಾರವು 30 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕೋರಿದ್ದಾರೆ.

VISTARANEWS.COM


on

HD Devegowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ (ರಾಜ್ಯಸಭೆ): ಕರ್ನಾಟಕದಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಬೇಕು. ಈ ವಿಷಯದಲ್ಲಿ ಪ್ರಧಾನಿಗಳು ದಯಮಾಡಿ ಮಧ್ಯಪ್ರವೇಶ ಮಾಡಬೇಕು, ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹಾರ ಮಾಡಬೇಕು ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಅವರು ಮನವಿ ಮಾಡಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮಿಳುನಾಡು ಸ್ನೇಹಿತರು ಅನ್ಯತಾ ಭಾವಿಸಬಾರದು ಎನ್ನುತ್ತಲೇ ರಾಜ್ಯದ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಮಾಜಿ ಪ್ರಧಾನಿಗಳು, ಕೇಂದ್ರ ಸರ್ಕಾರವು 30 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.

ಸುಪ್ರೀಂ ಕೋರ್ಟ್ʼನಲ್ಲಿ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲರೇ ಮೆಟ್ಟೂರು ಜಲಾಶಯಕ್ಕೆ ಮೇಲ್ಭಾಗದಲ್ಲಿ ಕರ್ನಾಟಕ ಜಲಾಶಯ ನಿರ್ಮಾಣ ಮಾಡಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ದಯಮಾಡಿ ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕು, ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹಾರ ಮಾಡಬೇಕು. ಇದಷ್ಟೇ ಎಲ್ಲರಿಗೂ ನನ್ನ ಪ್ರಾರ್ಥನೆ ಎಂದು ಮಾಜಿ ಪ್ರಧಾನಿಗಳು ಕೈ ಜೋಡಿಸಿ ಮನವಿ ಮಾಡಿದರು.

ಇದನ್ನೂ ಓದಿ | Congress Protest: ರಾವಣ ತಲೆಗಳ ಕಾಂಗ್ರೆಸ್‌ಗೆ ಮೈಯೆಲ್ಲ ರಾಜಕೀಯ: ಕೈ ಪ್ರತಿಭಟನೆಗೆ ಎಚ್‌ಡಿಕೆ ಕಿಡಿ

ʼಸೋ ಕಾಲ್ಡ್‌ ಗ್ಯಾರಂಟಿಗಳುʼ; ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಕಳವಳ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ʼಸೋ ಕಾಲ್ಡ್‌ ಗ್ಯಾರಂಟಿಗಳುʼ ಎಂದು ಕಟುವಾಗಿ ಟೀಕಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ಅನಗತ್ಯ ವೆಚ್ಚದ ಅನುತ್ಪಾದಕ, ಅಲ್ಪಾವಧಿ ಲಾಭದ ಗ್ಯಾರಂಟಿಗಳು ಇವಾಗಿವೆ ಎಂದು ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆ ದೇಶದ ಜನರ ಗಮನ ಸೆಳೆದ ಅವರು, ಕಾಂಗ್ರೆಸ್‌ ಪಕ್ಷದ ಸದಸ್ಯರ ಆಕ್ಷೇಪಣೆ, ಗದ್ದಲದ ನಡುವೆಯೂ ತಮ್ಮ ಮಾತುಗಳನ್ನು ಮುಂದುವರಿಸಿದರು. ಜಂತರ್‌ಮಂತರ್‌ನಲ್ಲಿ ಕಾಂಗ್ರೆಸ್‌ನವರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಅವರು ನನ್ನನ್ನೂ ಸೇರಿ ಎಲ್ಲರನ್ನೂ ಬರುವಂತೆ ಕರೆದಿದ್ದಾರೆ. ಈ ದೇಶದ ರಾಜಕೀಯ ಪರಿಸ್ಥಿತಿ ಹೇಗಾಗಿದೆ ಎಂದರೆ, ರಾಜಕೀಯ ಲಾಭಕ್ಕಾಗಿ ಅನಗತ್ಯ ವೆಚ್ಚದ ಅನುತ್ಪಾದಕ ವೆಚ್ಚಗಳನ್ನು ಯಥೇಚ್ಛವಾಗಿ ಮಾಡಲಾಗುತ್ತಿದೆ. ನಾನೆಂದೂ ಇಂಥದ್ದನ್ನು ಮಾಡಿಲ್ಲ ಎಂದರು.

ಮೋದಿ ಗ್ಯಾರಂಟಿ ವಿಭಿನ್ನ, ನನಗೆ ಗೊತ್ತಿದೆ

ಕಾಂಗ್ರೆಸ್‌ ಸದಸ್ಯರೊಬ್ಬರು ಮೋದಿ ಗ್ಯಾರಂಟಿಗಳ ಬಗ್ಗೆ ಏನು ಹೇಳುತ್ತೀರಿ ಎಂದಾಗ, “ನಾನು ಹೇಳುತ್ತಿರುವುದು ಕರ್ನಾಟಕ ಸರ್ಕಾರದ ಗ್ಯಾರಂಟಿಗಳ ಬಗ್ಗೆ. ಮೋದಿ ಗ್ಯಾರಂಟಿಗಳು ಬಹಳ ವಿಭಿನ್ನವಾಗಿವೆ. ಅವುಗಳ ಬಗ್ಗೆ ನನಗೆ ಗೊತ್ತಿದೆ” ಎಂದು ಗುಡುಗಿದರು. ಅಲ್ಲದೆ; “ನಾನು ತಪ್ಪು ಮಾಹಿತಿ ಹೇಳಿದ್ದರೆ ಕ್ಷಮೆ ಕೇಳುತ್ತೇನೆ. ಯಾರಿಗೂ, ಯಾವುದಕ್ಕೂ ಅಪಖ್ಯಾತಿ ತರುವ ಉದ್ದೇಶ ನನ್ನದಲ್ಲ. ಕರ್ನಾಟಕ ಸರ್ಕಾರ ಒಳ್ಳೆಯದು ಮಾಡಿದರೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನನಗೆ ಅದರಿಂದ ಏನೂ ಆಗಬೇಕಿಲ್ಲ” ಎಂದರು.

ಹಣ ಇಲ್ಲ, ಪ್ರತಿಭಟನೆ ಮಾಡುತ್ತೇವೆ ಎಂದು ನಮ್ಮನ್ನೆಲ್ಲ ಕರೆಯುತ್ತಾರೆ. ಆದರೆ, ಕೇರಳದಲ್ಲಿ ಇದೇ ಉದ್ದೇಶಕ್ಕೆ ಅಲ್ಲಿನ ಎಲ್‌ಡಿಎಫ್ ಸರ್ಕಾರ ಕರೆದರೆ ಕಾಂಗ್ರೆಸ್‌ನವರು ಬಹಿಷ್ಕಾರ ಹಾಕುತ್ತಾರೆ. ಇದು ರಾಜಕೀಯ ಪರಿಸ್ಥಿತಿ ಎಂದು ಅವರು ಬೇಸರಿಸಿದರು.

ಮನ ಕಲಕುವ ಘಟನೆ ವಿವರಿಸಿದ ಮಾಜಿ ಪ್ರಧಾನಿಗಳು

ಗ್ಯಾರಂಟಿಗಳ ಹೆಸರಿನಲ್ಲಿ ಕರ್ನಾಟಕದಲ್ಲಿ ಏನಾಗಿದೆ? ಒಂದು ಘಟನೆ ಬಗ್ಗೆ ವಿವರಿಸುತ್ತೇನೆ. “ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರ್ಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ್ದ ಟ್ವೀಟ್‌ʼನ ಒಂದು ತುಣುಕನ್ನು ಓದಿದರು ಹಾಗೂ ಆ ಬಗ್ಗೆ ವರದಿ ಮಾಡಿದ್ದ ಪತ್ರಿಕೆಯ ತುಣುಕನ್ನು ಪ್ರದರ್ಶಿಸಿದರು.

“ಆ ಯುವಕ ಕೆಲಸಕ್ಕಾಗಿ ತಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾನೆ. ಟಿಕೆಟ್ ಇಲ್ಲದ ಕಾರಣಕ್ಕೆ ಅವರಿಬ್ಬರನ್ನು ಧಾರವಾಡದ ಬಳಿ ಕೆಳಗಿಳಿಸಲಾಗುತ್ತದೆ. ಅಲ್ಲಿ ತಾಯಿ ಮತ್ತು ತನಗೆ ಊಟಕ್ಕಾಗಿ ಆ ಯುವಕ ಅಲೆಯುತ್ತಾನೆ. ಕೆಲಸ ಹುಡುಕುತ್ತಾನೆ. ಸಿಗುವುದಿಲ್ಲ. ಕೊನೆಗೆ ಆ ನತದೃಷ್ಟ ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು, ಕರ್ನಾಟಕದ ಗ್ಯಾರಂಟಿಗಳ ನೈಜಸ್ಥಿತಿ” ಎಂದು ಮಾಜಿ ಪ್ರಧಾನಿಗಳು ಅತೀವ ಬೇಸರ ವ್ಯಕ್ತಪಡಿಸಿದರು.

ನಾನು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಒಬ್ಬ ಶಾಸಕರನ್ನೂ ನಿಗಮ ಮಂಡಳಿಗಳಿಗೆ ನೇಮಕ ಮಾಡಲಿಲ್ಲ. ಜನರ ತೆರಿಗೆ ಹಣದ ಪ್ರತಿ ಪೈಸೆಯನ್ನೂ ನೀರಾವರಿ ಯೋಜನೆಗಳಿಗೆ ತೆಗೆದಿಟ್ಟೆ. ಜನರನ್ನು ದುಡ್ಡಿನಲ್ಲಿ ಒಂದು ಪೈಸೆಯನ್ನೂ ಅನಗತ್ಯವಾಗಿ ವೆಚ್ಚ ಮಾಡಲಿಲ್ಲ. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಹಾಗೆಯೇ ಕೆಲಸ ಮಾಡಿದ್ದೇನೆ ಎಂದು ಅವರು ಸದನದಲ್ಲಿ ಒತ್ತಿ ಹೇಳಿದರು.

ಕಾಡುಗೊಲ್ಲ ಸಮುದಾಯದ ಬಗ್ಗೆ ಪ್ರಸ್ತಾಪ

ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಹತ್ತು ವರ್ಷ ಪೂರೈಸಿದ್ದಾರೆ. ನಾನು ಕೇವಲ ಹತ್ತು ತಿಂಗಳು ಮಾತ್ರ ಆ ಹುದ್ದೆಯಲ್ಲಿದ್ದೆ. ಆದರೆ, ನಾನು ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ. ನನ್ನ ಅರವತ್ತು ವರ್ಷಗಳ ಸಾರ್ವಜನಿಕ ಜೀವನದ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ, ಅಷ್ಟೇ. ಕರ್ನಾಟಕದಲ್ಲಿ ಕಳೆದ ಏಳು ತಿಂಗಳಿಂದ ರಾಜ್ಯ ಸರ್ಕಾರ ಹಲವಾರು ವಿಚಾರಗಳನ್ನು ಮುಂಚೂಣಿಗೆ ತಂದಿದೆ. ಮೀಸಲಾತಿ ಬಗ್ಗೆ ನಾನು ಯಾರನ್ನೂ ದೂರುವುದಿಲ್ಲ. ಅನೇಕ ಮೀಸಲಾತಿ ವರದಿಗಳ ಬಗ್ಗೆ ನನಗೆ ಗೊತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಕಾಂತರಾಜು ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಡುಗೊಲ್ಲ ಸಮುದಾಯ ಮೀಸಲು ಸೌಲಭ್ಯದಿಂದ ವಂಚಿತರಾಗಿ ಅನ್ಯಾಯಕ್ಕಾಗಿ ತುತ್ತಾಗಿದೆ. 2014ರಿಂದಲೂ ಇವರನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಪ್ರಸ್ತಾವನೆ ಇತ್ತು. ಈಗ 2024. ಪ್ರಧಾನಮಂತ್ರಿಗಳು ನಾಳೆ ಸದನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಅವರ ಗಮನ ಸೆಳೆಯುವುದಕ್ಕಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ ಎಂದು ದೇವೇಗೌಡರು ಹೇಳಿದರು.

ಈ ಸಮುದಾಯದ ಪರವಾಗಿ ನೂತನ ಸಂಸತ್ ಭವನದಲ್ಲಿ ಪ್ರಧಾನಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೆ. ನನ್ನ ಬಗ್ಗೆ ಅವರು ಅತೀವ ಪ್ರೀತಿ ವಾತ್ಸಲ್ಯ ತೋರಿದರು. ನನಗೀಗ 91 ವರ್ಷ ವಯಸ್ಸು. ಹಿಂದೆ ಅನೇಕ ಪ್ರಧಾನಿಗಳನ್ನು ನೋಡಿದ್ದೇನೆ, ಭೇಟಿಯಾಗಿದ್ದೇನೆ. ಯಾರೂ ನನ್ನ ಬಗ್ಗೆ ಇಷ್ಟೊಂದು ಪ್ರೀತಿ ತೋರಿಸಿರಲಿಲ್ಲ. ಅಂದು ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ಸೇರಿಸಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೆ. ತಕ್ಷಣವೇ ಅವರು ಹೇಳಿದರು, ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು. 2022-2023ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೂ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕರ್ನಾಟಕದ 13 ಜಿಲ್ಲೆಗಳಲ್ಲಿರುವ ಕಾಡುಗೊಲ್ಲ ಸಮುದಾಯದ ಹಿತಕ್ಕಾಗಿ ಪ್ರಧಾನಿಗಳು ನಿರ್ಧಾರ ಪ್ರಕಟಿಸಬೇಕು ಎಂದು ಸದನದ ಮೂಲಕ ಮನವಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಇದನ್ನೂ ಓದಿ | Congress Protest: ನಾಳೆ ಕೇಂದ್ರದ ವಿರುದ್ಧ ಕರ್ನಾಟಕದ ಶಕ್ತಿ ಪ್ರದರ್ಶನ; ದೆಹಲಿಗೆ ಹಾರಿದ ಕೈಪಡೆ!

ಮಾಲಿನ್ಯ ನಿಯಂತ್ರಣ ಮಸೂದೆಗೆ ಸ್ವಾಗತ

ಸದನದಲ್ಲಿ ಮಂಡಿಸಲಾಗಿದ್ದ ಮಾಲಿನ್ಯ ನಿಯಂತ್ರಣ ಮಸೂದೆಯನ್ನು ಸ್ವಾಗತಿಸಿದ ಮಾಜಿ ಪ್ರಧಾನಿಗಳು, ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತಮ್ಮ ಸ್ವಾರ್ಥಕ್ಕಾಗಿ, ಸ್ವಹಿತಕ್ಕಾಗಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮುಖ್ಯಮಂತ್ರಿ ಆಗಿದ್ದ ನನಗೆ ಚನ್ನಾಗಿ ಗೊತ್ತಿದೆ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Amit Shah: ಬಿಜೆಪಿ ಗೆದ್ದರೆ ಮುಸ್ಲಿಮರ ಮೀಸಲಾತಿ ಒಬಿಸಿಗೆ; ಅಮಿತ್‌ ಶಾ ಘೋಷಣೆ

Amit Shah: ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ಬಿಜೆಪಿ ರದ್ದುಗೊಳಿಸುತ್ತದೆ ಎಂಬುದಾಗಿ ಅವರು ಸುಳ್ಳು ಹೇಳುತ್ತಿದ್ದಾರೆ. ಮೋದಿ ಅವರು ಮೀಸಲಾತಿಯ ಬೆಂಬಲಿಗರಾಗಿದ್ದಾರೆ ಎಂದು ಅಮಿತ್‌ ಶಾ ಹೇಳಿದ್ದಾರೆ.

VISTARANEWS.COM


on

Amit Shah
Koo

ಲಖನೌ:‌ ಕರ್ನಾಟಕ, ತೆಲಂಗಾಣದಲ್ಲಿ ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ (Muslims Reservation) ನೀಡಿರುವ ವಿಚಾರವು ಲೋಕಸಭೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ಮೀಸಲಾತಿ ವಿಷಯವು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಮಧ್ಯೆ ತೀವ್ರ ವಾಗ್ವಾದ, ಟೀಕೆ, ಆಕ್ರೋಶಗಳಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ, “ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಿರುವ ಶೇ.4ರಷ್ಟು ಒಬಿಸಿ ಮೀಸಲಾತಿಯನ್ನು (OBC Reservation) ಮತ್ತೆ ಒಬಿಸಿಗೇ ನೀಡಲಾಗುವುದು” ಎಂದು ಅಮಿತ್‌ ಶಾ (Amit Shah) ಪುನರುಚ್ಚರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಬಿಜೆಪಿಯು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂಬುದಾಗಿ ರಾಹುಲ್‌ ಗಾಂಧಿ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ. ಸುಳ್ಳುಗಳಲ್ಲೇ ರಾಹುಲ್‌ ಗಾಂಧಿ ಅವರು ಚುನಾವಣೆ ಮುಗಿಸುತ್ತಿದ್ದಾರೆ. ಆದರೆ, ಒಂದು ನೆನಪಿರಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅಷ್ಟೇ ಅಲ್ಲ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ಬಿಜೆಪಿ ರದ್ದುಗೊಳಿಸಲ್ಲ ಹಾಗೂ ಬೇರೆಯವರಿಗೂ ಬಿಡಲ್ಲ. ಇದು ಮೋದಿ ಅವರ ಗ್ಯಾರಂಟಿಯಾಗಿದೆ” ಎಂಬುದಾಗಿ ಅಮಿತ್‌ ಶಾ ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿಯನ್ನು ಬೆಂಬಲಿಸುತ್ತಾರೆ. ನರೇಂದ್ರ ಮೋದಿ ಸರ್ಕಾರ 400 ಕ್ಷೇತ್ರಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಿರುವ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗೆ ನೀಡಲಾಗುತ್ತದೆ. ಇದು ಮೋದಿ ಅವರ ಗ್ಯಾರಂಟಿಯಾಗಿದೆ. ರಾಹುಲ್‌ ಗಾಂಧಿ ಅವರಿಗೆ ವಾಸ್ತವದ ಅರಿವಿಲ್ಲ. ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಬಿಜೆಪಿಯೇ ಬಹುಮತದ ಸರ್ಕಾರ ರಚಿಸಿ, ಆಡಳಿತ ನಡೆಸಿದೆ ಎಂಬುದರ ಅರಿವಿಲ್ಲ. ಎರಡು ಅವಧಿ ಆಡಳಿತ ನಡೆಸಿದರು ಬಿಜೆಪಿಯು ಮೀಸಲಾತಿಯನ್ನು ತೆಗೆದಿಲ್ಲ” ಎಂದು ತಿಳಿಸಿದರು.

ಮೀಸಲಾತಿ ಕುರಿತ ಚರ್ಚೆಯ ಮಧ್ಯೆಯೇ, ಆರ್‌ಎಸ್‌ಎಸ್‌ ಮೀಸಲಾತಿಯನ್ನು ಬೆಂಬಲಿಸುತ್ತದೆ ಎಂದು ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್‌ ಮೀಸಲಾತಿಯನ್ನು ವಿರೋಧಿಸುತ್ತದೆ ಎಂದು ಹೇಳಿರುವ ವಿಡಿಯೊ ಹರಿದಾಡುತ್ತಿದೆ. ಆದರೆ, ಸಂಘ ಪರಿವಾರವು ಮೊದಲಿನಿಂದಲೂ ಮೀಸಲಾತಿಯನ್ನು ಬೆಂಬಲಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲೂ ಆರ್‌ಎಸ್‌ಎಸ್‌ ಮೀಸಲಾತಿಯನ್ನು ಬೆಂಬಲಿಸುತ್ತದೆ. ಸಮುದಾಯಗಳಿಗೆ ಎಲ್ಲಿಯವರೆಗೆ ಮೀಸಲಾತಿಯ ಅವಶ್ಯಕತೆ ಇದೆಯೋ, ಅಲ್ಲಿಯವರೆಗೆ ಮೀಸಲಾತಿಯನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Mohan Bhagwat: ಆರ್‌ಎಸ್‌ಎಸ್‌ ಮೀಸಲಾತಿ ಪರ; ಮೋಹನ್‌ ಭಾಗವತ್‌ ದಿಢೀರನೆ ಹೀಗೆ ಹೇಳಿದ್ದೇಕೆ?

Continue Reading

ದೇಶ

Mohan Bhagwat: ಆರ್‌ಎಸ್‌ಎಸ್‌ ಮೀಸಲಾತಿ ಪರ; ಮೋಹನ್‌ ಭಾಗವತ್‌ ದಿಢೀರನೆ ಹೀಗೆ ಹೇಳಿದ್ದೇಕೆ?

Mohan Bhagwat: ಸಾಂವಿಧಾನಿಕವಾಗಿ ನೀಡಿರುವ ಎಲ್ಲ ಮೀಸಲಾತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಬೆಂಬಲಿಸುತ್ತಿದೆ. ಮೊದಲು ಕೂಡ ಬೆಂಬಲಿಸಿದೆ. ಈಗಲೂ ಬೆಂಬಲ ನೀಡುತ್ತದೆ ಎಂಬುದಾಗಿ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಮೀಸಲಾತಿ ಕುರಿತು ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ತಿಕ್ಕಾಟ ಶುರುವಾಗಿರುವ ಮಧ್ಯೆಯೇ ಮೋಹನ್‌ ಭಾಗವತ್‌ ಹೇಳಿಕೆ ಪ್ರಾಮುಖ್ಯ ಪಡೆದಿದೆ.

VISTARANEWS.COM


on

Mohan Bhagwat
Koo

ಹೈದರಾಬಾದ್: ಕರ್ನಾಟಕದಲ್ಲಿ ಇತರೆ ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ರಾಜ್ಯ ಸರ್ಕಾರವು ಮುಸ್ಲಿಮರಿಗೆ ನೀಡಿರುವುದು ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದು ಲೋಕಸಭೆ ಚುನಾವಣೆಯ (Lok Sabha Election 2024) ಪ್ರಮುಖ ಚರ್ಚೆಯ ವಿಷಯವಾಗಿದೆ. ಮೀಸಲಾತಿ ಕುರಿತು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಮಧ್ಯೆ ತೀವ್ರ ವಾಗ್ವಾದ ನಡೆಯುತ್ತಿದೆ. ಇದರ ಬೆನ್ನಲ್ಲೇ, “ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಮೀಸಲಾತಿಯನ್ನು (Reservation) ಬೆಂಬಲಿಸುತ್ತದೆ” ಎಂಬುದಾಗಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್‌ ಮೀಸಲಾತಿಯನ್ನು ವಿರೋಧಿಸುತ್ತದೆ ಎಂದು ಹೇಳಿರುವ ವಿಡಿಯೊ ಹರಿದಾಡುತ್ತಿದೆ. ಆದರೆ, ಸಂಘ ಪರಿವಾರವು ಮೊದಲಿನಿಂದಲೂ ಮೀಸಲಾತಿಯನ್ನು ಬೆಂಬಲಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲೂ ಆರ್‌ಎಸ್‌ಎಸ್‌ ಮೀಸಲಾತಿಯನ್ನು ಬೆಂಬಲಿಸುತ್ತದೆ. ಸಮುದಾಯಗಳಿಗೆ ಎಲ್ಲಿಯವರೆಗೆ ಮೀಸಲಾತಿಯ ಅವಶ್ಯಕತೆ ಇದೆಯೋ, ಅಲ್ಲಿಯವರೆಗೆ ಮೀಸಲಾತಿಯನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ.

“ಆರ್‌ಎಸ್‌ಎಸ್‌ ಕುರಿತು ಜನರಿಗೆ ತಪ್ಪು ಕಲ್ಪನೆಗಳಿವೆ. ಆರ್‌ಎಸ್‌ಎಸ್‌ ಮೀಸಲಾತಿಯನ್ನು ವಿರೋಧಿಸುತ್ತದೆ. ಆದರೆ, ಹೊರಗಡೆ ಆ ಕುರಿತು ಹೇಳುವುದಿಲ್ಲ ಅಷ್ಟೆ ಎಂಬಂತೆ ಬಿಂಬಿಸಲಾಗುತ್ತಿದೆ. ಸಾಂವಿಧಾನಿಕವಾಗಿ ನೀಡಲಾಗಿರುವ ಮೀಸಲಾತಿಯನ್ನು ನಾವು ಬೆಂಬಲಿಸುತ್ತೇವೆ. ಇದರಿಂದ ಸಮುದಾಯಗಳಿಗೆ ಅಗತ್ಯ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ, ಯಾರೂ ಆರ್‌ಎಸ್‌ಎಸ್‌ ಕುರಿತು ತಪ್ಪು ಮಾಹಿತಿಯನ್ನು ಹರಡಬಾರದು” ಎಂಬುದಾಗಿ ಮೋಹನ್‌ ಭಾಗವತ್‌ ಮನವಿ ಮಾಡಿದರು.

ಕೆಲ ದಿನಗಳ ಹಿಂದಷ್ಟೇ ರಾಹುಲ್‌ ಗಾಂಧಿ ಅವರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶದ ವೈವಿಧ್ಯತೆಯನ್ನು ಹಾಳು ಮಾಡುತ್ತವೆ. ಸಂವಿಧಾನವನ್ನು ಬದಲಾಯಿಸುವುದು ಬಿಜೆಪಿಯ ಕುತಂತ್ರವಾಗಿದೆ. ಜನ ಧರ್ಮ, ಸಮುದಾಯಗಳ ಆಚರಣೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಸಂಘರ್ಷ ಉಂಟುಮಾಡಿದೆ” ಎಂದು ವಯನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Lok Sabha Election 2024 ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಸತ್ಯ; ನಮ್ಮ ಬಳಿ ದಾಖಲೆ ಇದೆ ಎಂದ ಪ್ರಲ್ಹಾದ್‌ ಜೋಶಿ

Continue Reading

Lok Sabha Election 2024

PM Narendra Modi: ಬಾಂಬರ್‌ಗಳಿಗೆ ಕಾಂಗ್ರೆಸ್ ಕುಮ್ಮಕ್ಕು; ನಾವು NIA ಮೂಲಕ ದೇಶದ್ರೋಹಿಗಳನ್ನು ಬಗ್ಗುಬಡಿಯುತ್ತಿದ್ದೇವೆ ಎಂದ ಮೋದಿ

PM Narendra Modi: ಬರೀ ವೋಟಿನ ರಾಜಕಾರಣ ಮಾಡುವ ಕಾಂಗ್ರೆಸ್‌ನಿಂದ ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿವೆ ಕೆಲವು ಮತಾಂಧ ಸಂಘಟನೆಗಳನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ನ ಸಂಪ್ರದಾಯವಾಗಿದೆ. ಆದರೆ, ಬಿಜೆಪಿ ನಾಯಕರು ಯಾವತ್ತೂ ಈ ರೀತಿ ಆತಂಕಕಾರಿ ರಾಜಕಾರಣ ಮಾಡಲ್ಲ. ಹಿಂದೂಸ್ಥಾನ ಅಂದರೆ, ಭಯೋತ್ಪಾದನೆಯ ಮಾತು ಬಂದರೆ, ಅಂಥವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

VISTARANEWS.COM


on

Congress instigates bombers We are crushing traitors through NIA PM Narendra Modi
Koo

ಶಿರಸಿ (ಉತ್ತರ ಕನ್ನಡ): ಕಾಂಗ್ರೆಸ್‌ ಬಾಂಬರ್‌ಗಳಿಗೆ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ರಾಮೇಶ್ವರಂ ಕೆಫೆ ಸ್ಫೋಟವನ್ನು (Rameswaram cafe blast) ಮೊದಲು ಸಿಲಿಂಡರ್ ಸ್ಫೋಟವೆಂದು ಕಾಂಗ್ರೆಸ್ ಸರ್ಕಾರದವರು ಹೇಳಿದ್ದರು. ಆದರೆ, ಎನ್ಐಎ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಘಟನೆ ಬಗ್ಗೆ ಗರಂ ಆಗಿ ಮಾತನಾಡಿದರು.

ಬರೀ ವೋಟಿನ ರಾಜಕಾರಣ ಮಾಡುವ ಕಾಂಗ್ರೆಸ್‌ನಿಂದ ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿವೆ ಕೆಲವು ಮತಾಂಧ ಸಂಘಟನೆಗಳನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ನ ಸಂಪ್ರದಾಯವಾಗಿದೆ. ಆದರೆ, ಬಿಜೆಪಿ ನಾಯಕರು ಯಾವತ್ತೂ ಈ ರೀತಿ ಆತಂಕಕಾರಿ ರಾಜಕಾರಣ ಮಾಡಲ್ಲ. ಹಿಂದೂಸ್ಥಾನ ಅಂದರೆ, ಭಯೋತ್ಪಾದನೆಯ ಮಾತು ಬಂದರೆ, ಅಂಥವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ಈ ಹಿಂದೆ ಮಂಗಳೂರಲ್ಲಿ ಸ್ಫೋಟ, ಬೆಂಗಳೂರಲ್ಲಿ ಸ್ಫೋಟ, ದೆಹಲಿಯಲ್ಲಿ ಸ್ಫೋಟ, ಸೂರತ್‌ನಲ್ಲಿ ಸ್ಫೋಟ ಹೀಗೆ ದೇಶದ ಎಲ್ಲ ಕಡೆ ಸ್ಫೋಟ.. ಸ್ಫೋಟವೆಂದು ನ್ಯೂಸ್ ಬರುತ್ತಿತ್ತು. ಆದರೆ, ಈಗ ಅಂದ್ರೆ 2014ರ ನಂತರ ಬಾಂಬ್‌ ಸ್ಫೋಟದ ಪ್ರಕರಣಗಳು ಆಗುತ್ತಾ ಇದೆಯಾ? ಕಾಂಗ್ರೆಸ್‌ ಪಕ್ಷದಿಂದ ಆ್ಯಂಟಿ ಸೋಷಿಯಲ್ ಹಾಗೂ ಆ್ಯಂಟಿ ನ್ಯಾಷನಲ್ ಕಾರ್ಯ ನಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.

ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಎಕ್ಸ್‌ರೇ ಮಾಡುತ್ತಾರಂತೆ. ನಿಮ್ಮ ಆಸ್ತಿ, ನಿಮ್ಮ ಜಮೀನು, ನಿಮ್ಮ ಚಿನ್ನವನ್ನು ಸರ್ವೆ ಮಾಡ್ತಾರಂತೆ. ಮಹಿಳೆಯರ ಮಂಗಳ ಸೂತ್ರವನ್ನು ಸರ್ವೆ ಮಾಡುತ್ತಾರಂತೆ. ಕಾಂಗ್ರೆಸ್ ಪಕ್ಷದವರು ಹಾಗೆ ಸರ್ವೆ ಮಾಡ್ತೀನಿ ಅಂತಾ ಹೋದರೆ ಸುಮ್ಮನೆ ಬಿಡುತ್ತೇನಾ? ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ವೆ, ಎಕ್ಸ್‌ರೇ ಕಾರ್ಯವನ್ನು ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಮ್ಮ ಸೇವೆ ಮಾಡುವುದಕ್ಕಾಗಿಯೇ ಪರಮಾತ್ಮ ನರೇಂದ್ರ ಮೋದಿಯನ್ನು ಕಳುಹಿಸಿದ್ದಾನೆ. ನಿಮ್ಮ ಕನಸೇ ಮೋದಿ ಸಂಕಲ್ಪ ಅಂತಾ ಇಡೀ ಜನಸಮೂಹಕ್ಕೆ ಭರವಸೆ ನೀಡುತ್ತೇನೆ. ನನ್ನ ಪ್ರತಿ ಕ್ಷಣವನ್ನೂ ದೇಶಕ್ಕಾಗಿ, ದೇಶದ ಜನರಿಗಾಗಿ ಮೀಸಲಿಟ್ಟು ಶ್ರಮಿಸುತ್ತೇನೆ. ದಿನದ 24 ಗಂಟೆಯೂ ಕೆಲಸ ಮಾಡುತ್ತಾ 2047ರ ವಿಕಸಿತ ಭಾರತಕ್ಕಾಗಿ ನನ್ನ ಸೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಮುಸ್ಲಿಂ ದೊರೆಗಳ ದೌರ್ಜನ್ಯ ಹಾಗೂ ಅತ್ಯಾಚಾರಗಳ ಬಗ್ಗೆ ಕಾಂಗ್ರೆಸ್ ಸೊಲ್ಲಿಲ್ಲ. ವೋಟ್‌ ಬ್ಯಾಂಕ್ ಹಾಗೂ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ರಾಜಕಾರಣ ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕದಂಬ ವಂಶಸ್ಥರು ಆಡಳಿತ ನಡೆಸಿ ಅಪಾರ ಕೊಡುಗೆ ನೀಡಿದ್ದಾರೆ. ಕದಂಬ ವಂಶಸ್ಥರು ಕನ್ನಡ ಅಭಿವೃದ್ಧಿಗೆ ನೀಡಿದ ಒತ್ತನ್ನು ಯಾರೂ ಮರೆಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.

ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಅಡಿಕೆ (Arecanut), ಸಿರಿಧಾನ್ಯ (Millet) ಹಾಗೂ ಮೀನುಗಾರಿಕೆ (Fishing) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಿಮ್ಮ ಅಡಿಕೆ ಬೆಳೆಗೆ ಜಿಐ ಟ್ಯಾಗ್‌ (GI Tag) ಅನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಿದ್ದು ನಮ್ಮ ಎನ್‌ಡಿಎ ಸರ್ಕಾರವಾಗಿದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕರ್ನಾಟಕದಲ್ಲಿ ಸಿರಿ ಧಾನ್ಯಗಳಿಗೆ ಬೇಡಿಕೆ ಹಾಗೂ ಹೂಡಿಕೆ ಹೆಚ್ಚುವಂತೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಪ್ರಸ್ತಾಪ ಮಾಡಿದರು.

ಕರ್ನಾಟಕದ ಸಿರಿಧಾನ್ಯಕ್ಕೆ ಪ್ರೋತ್ಸಾಹ ಮಾಡಿ ಉತ್ತೇಜನ ಮಾಡಿದ್ದು ಎನ್‌ಡಿಎ ಸರ್ಕಾರವಾಗಿದೆ. ಸಿರಿ ಧಾನ್ಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ದಿನ ಮಾಡಿದ್ದು ನಮ್ಮದೇ ಸರ್ಕಾರ. ಸಿರಿ ಅನ್ನವೆಂದು ಸಿರಿ ಧಾನ್ಯ ಬಳಕೆ ಉತ್ತೇಜಿಸಲು ಕೇಂದ್ರದಿಂದಲೇ ಅಭಿಯಾನ ಮಾಡಿದ್ದೆವು. ಅಮೆರಿಕದ ಸಮಾರಂಭವೊಂದರಲ್ಲಿ ಆಹಾರದ ಮೆನುವಿನಲ್ಲಿ ಸಿರಿಧಾನ್ಯ ಫುಡ್ ಅನ್ನು ಹಾಕಲಾಗಿದೆ. ಕರ್ನಾಟಕ ಹಾಗೂ ಭಾರತದ ಅಸ್ಮಿತೆಯನ್ನು ಇಷ್ಟೆಲ್ಲ ಪ್ರಚಾರ ಮಾಡಿದ್ದೇ ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೀನುಗಾರರಿಗೂ ಮೊದಲ ಬಾರಿಗೆ ಕಿಸಾನ್ ಕಾರ್ಡ್‌ ಕೊಡಿಸುದ್ದು ನಮ್ಮ ಸರ್ಕಾರವಾಗಿದೆ. 20 ಸಾವಿರ ಕೋಟಿ ರೂಪಾಯಿ ಕೊಟ್ಟು ಮತ್ಸ್ಯ ಸಂಪದ ಯೋಜನೆಯನ್ನು ರೂಪಿಸಿ ಎಲ್ಲ ರೀತಿ ಪ್ರೋತ್ಸಾಹವನ್ನು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಕಾಂಗ್ರೆಸ್‌ ಶ್ರೀರಾಮನ ವಿರೋಧಿಯಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನವರು ಕಾಂಗ್ರೆಸ್‌ ನಾಯಕರ ಮನೆ ಬಾಗಿಲಿಗೆ ಹೋಗಿ ಆಹ್ವಾನ ನೀಡಿದರೂ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ಪ್ರಭು ರಾಮನ ಪ್ರತಿಷ್ಠಾಪನೆ ಮಾಡಲು 500 ವರ್ಷಗಳ ಕಾಲ ಹೋರಾಟ ನಡೆಸಿದರು. ಆದರೆ, ನಿಮ್ಮ ಎನ್‌ಡಿಎ ಸರ್ಕಾರ ಇಷ್ಟು ವರ್ಷಗಳ ಹೋರಾಟಕ್ಕೆ ಫಲ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಿಮ್ಮೆಲ್ಲರ ಮತಗಳಿಂದ ಮಾತ್ರ ಸಾಧ್ಯವಾಗಿದೆ. ಇದರಿಂದ ಈ ದೇಶಕ್ಕೆ ಪುಣ್ಯ ಸಿಗುವುದಿಲ್ಲವೇ? ಈ ಪುಣ್ಯದ ಹಕ್ಕುದಾರರು ಯಾರು? ನಮಗೆ ಮತಹಾಕಿದ ನೀವೇ ಇದಕ್ಕೆ ಹಕ್ಕುದಾರರಾಗಿದ್ದೀರಿ. ಹೀಗಾಗಿ ಇದರ ಪುಣ್ಯ ನಿಮಗೇ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಈ ರಾಮಮಂದಿರವನ್ನು ಸರ್ಕಾರದ ಖಜಾನೆಯಿಂದ ನಿರ್ಮಾಣ ಮಾಡಿದ್ದಲ್ಲ, ದೇಶದ ನಾಗರಿಕರ ತೆರಿಗೆ ಹಣದಿಂದ ಕಟ್ಟಿದ್ದಲ್ಲ. ಇದು ಹಿಂದುಸ್ತಾನದ ಪ್ರತಿಯೊಬ್ಬ ರಾಮ ಭಕ್ತ ನೀಡಿದ ದೇಣಿಗೆಯಿಂದ ಕಟ್ಟಲಾಗಿದೆ. ಇದಕ್ಕಾಗಿ ಕೆಲವರು 5 ರೂ., 100 ರೂ, ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ ಆದರೆ, ಕಾಂಗ್ರೆಸ್‌ ಪಕ್ಷ ಹಾಗೂ ಅವರ ಮಿತ್ರ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. 70 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದರು. ಆದರೆ, ರಾಮಮಂದಿರ ಟ್ರಸ್ಟಿಗಳು ಅವರ ಈ ಎಲ್ಲ ಪಾಪಗಳನ್ನು ಕ್ಷಮಿಸಿ, ಅವರ ಮನೆಗಳಿಗೆ ಹೋಗಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಬನ್ನಿ ಎಂದು ಆಹ್ವಾನವನ್ನು ಕೊಟ್ಟರು. ಆದರೆ, ಅವರು ಮಾಡಿದ್ದೇನು? ಕಾರ್ಯಕ್ರಮಕ್ಕೆ ಬರಲು ನಿರಾಕರಣೆ ಮಾಡಿದರು ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಶಿರಸಿಯ ಮೋದಿ ಸಮಾವೇಶದ ಲೈವ್‌ ವಿಡಿಯೊ ಇಲ್ಲಿದೆ

ವಿಕಸಿತ ಕರ್ನಾಟಕ ಹಾಗೂ ವಿಕಸಿತ ಭಾರತಕ್ಕೋಸ್ಕರ ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಬಂದಿದ್ದೇನೆ. ನನಗೆ ಇಲ್ಲಿ ಬಂದ ಮೇಲೆ ಇಷ್ಟು ಪ್ರಮಾಣದಲ್ಲಿ ಮಾತೆಯರು ಸೇರಿರುವುದನ್ನು ನೋಡಿದರೆ ನನಗೆ ತಿಳಿಯುತ್ತಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಅವಶ್ಯವಾಗಿ ಇದೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನನ್ನ ಸಂಪುಟದ ಸದಸ್ಯರಾದ ಪ್ರಲ್ಹಾದ್‌ ಜೋಶಿ ಅವರನ್ನು ಭಾರಿ ಅಂತರದಿಂದ ನೀವು ಗೆಲ್ಲಿಸಲಿದ್ದೀರಿ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಮಗೆ ಮನೆ, ವಿದ್ಯುತ್‌, ನೀರಿನ ಸಂಪರ್ಕ ಕೊಡಲು ಎನ್‌ಡಿಎ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಧಾರವಾಡದಲ್ಲಿ ಐಐಟಿ ಮಾಡಿದ್ದೇವೆ, ಬಹುದೊಡ್ಡ ಸುಸಜ್ಜಿತ ರೈಲ್ವೆ ನಿಲ್ದಾಣವನ್ನು ಮಾಡಲಾಗಿದೆ. ಅಮೆರಿಕದಲ್ಲಿ ಸಹ ಭಾರತಕ್ಕೆ ಜೈಕಾರ ಸಿಗುತ್ತಿದೆ. ಯುರೋಪ್‌ನಲ್ಲಿ ಸಹ ಭಾರತಕ್ಕೆ ಗೌರವ ಸಿಗುತ್ತಿದೆ. ಹಿಂದುಸ್ತಾನದ ಯಾರು ವಿದೇಶದ ಯಾವುದೇ ಮೂಲೆಗೆ ಹೋದರೂ ಭಾರತವನ್ನು ಗುರುತಿಸುತ್ತಾರೋ ಇಲ್ಲವೋ? ಇದೆಲ್ಲ ಆಗಿದ್ದು ಯಾರಿಂದ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ಈ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲ. ಇದನ್ನು ನಿಮ್ಮ ಪ್ರತಿ ಮತವು ಮಾಡಿದೆ. ಕಳೆದ 10 ವರ್ಷದಲ್ಲಿ ನೀವು ನೀಡಿದ ಮತಗಳು ಇದೆಲ್ಲವನ್ನೂ ಮಾಡಿವೆ. ನಿಮ್ಮ ಏಕೈಕ ಮತಗಳ ಶಕ್ತಿಯಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಯಿತು. 140 ಕೋಟಿ ಭಾರತೀಯರು ನನ್ನ ಹಿಂದೆ ನಿಂತಿದ್ದೇ ಹೌದಾದರೆ ನಾವು ಏನನ್ನಾದರೂ ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೇಹಾ ಕೊಲೆ ಪ್ರಕರಣ ಉಲ್ಲೇಖ

ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ಕೊಲೆ ಪ್ರಕರಣ ನಡೆದಿದೆ. ಹೆಣ್ಣು ಮಕ್ಕಳಿಗೆ ಈ ರಾಜ್ಯದಲ್ಲಿ ಈಗ ರಕ್ಷಣೆಯೇ ಇಲ್ಲವೇ? ಕರ್ನಾಟಕದಲ್ಲಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಹೆಣ್ಣು ಮಗಳ ರಕ್ಷಣೆಯ ಭಯ ಕಾಡುತ್ತಿದೆ. ಈ ಕಾಂಗ್ರೆಸ್‌ನಿಂದ ನಿಮ್ಮ ಮಗಳನ್ನು ರಕ್ಷಣೆ ಮಾಡಲು ಆಗುವುದಿಲ್ಲವೇ? ಕರ್ನಾಟಕದಲ್ಲಿ ಈ ಸರ್ಕಾರದಿಂದ ಮಹಿಳೆಯರ ರಕ್ಷಣೆ ಗಂಭೀರ ಸವಾಲಾಗಿದೆ. ಕೆಟ್ಟ ಸರ್ಕಾರದ ಸಲುವಾಗಿ ಈ ರೀತಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಇದನ್ನೂ ಓದಿ: PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ

ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಬಾಂಬ್‌ ಸ್ಫೋಟ!

2014ರ ನಂತರ ಬೆಂಗಳೂರಲ್ಲಿ, ದಿಲ್ಲಿಯಲ್ಲಿ, ಗಾಂಧಿನಗರದಲ್ಲಿ, ಸೂರತ್‌ನಲ್ಲಿ, ಮುಂಬೈ ರೇಲ್ವೆ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ ಆಯಿತು ಎಂಬ ಸುದ್ದಿಯನ್ನು ನೀವು ಕೇಳಿದ್ದೀರಾ? ಆದರೆ, ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಯಿತು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಯಿತು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಬಾಂಬರ್‌ಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲ ಕಡೆ ಕಟ್ಟೆಚ್ಚರವನ್ನು ವಹಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Continue Reading

Lok Sabha Election 2024

PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

PM Narendra Modi: ಕರ್ನಾಟಕದ ಸಿರಿಧಾನ್ಯಕ್ಕೆ ಪ್ರೋತ್ಸಾಹ ಮಾಡಿ ಉತ್ತೇಜನ ಮಾಡಿದ್ದು ಎನ್‌ಡಿಎ ಸರ್ಕಾರವಾಗಿದೆ. ಸಿರಿ ಧಾನ್ಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ದಿನ ಮಾಡಿದ್ದು ನಮ್ಮದೇ ಸರ್ಕಾರ. ಸಿರಿ ಅನ್ನವೆಂದು ಸಿರಿ ಧಾನ್ಯ ಬಳಕೆ ಉತ್ತೇಜಿಸಲು ಕೇಂದ್ರದಿಂದಲೇ ಅಭಿಯಾನ ಮಾಡಿದ್ದೆವು. ಅಮೆರಿಕದ ಸಮಾರಂಭವೊಂದರಲ್ಲಿ ಆಹಾರದ ಮೆನುವಿನಲ್ಲಿ ಸಿರಿಧಾನ್ಯ ಫುಡ್ ಅನ್ನು ಹಾಕಲಾಗಿದೆ. ಕರ್ನಾಟಕ ಹಾಗೂ ಭಾರತದ ಅಸ್ಮಿತೆಯನ್ನು ಇಷ್ಟೆಲ್ಲ ಪ್ರಚಾರ ಮಾಡಿದ್ದೇ ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

VISTARANEWS.COM


on

PM Narendra Modi proposing arecanut millets and fisheries
Koo

ಶಿರಸಿ (ಉತ್ತರ ಕನ್ನಡ): ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ಪ್ರಚಾರ ಕಾರ್ಯವನ್ನು ಆರಂಭ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕದ ಅಡಿಕೆ (Arecanut), ಸಿರಿಧಾನ್ಯ (Millet) ಹಾಗೂ ಮೀನುಗಾರಿಕೆ (Fishing) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಿಮ್ಮ ಅಡಿಕೆ ಬೆಳೆಗೆ ಜಿಐ ಟ್ಯಾಗ್‌ (GI Tag) ಅನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಿದ್ದು ನಮ್ಮ ಎನ್‌ಡಿಎ ಸರ್ಕಾರವಾಗಿದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಪರವಾಗಿ ಮತಯಾಚನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕರ್ನಾಟಕದಲ್ಲಿ ಸಿರಿ ಧಾನ್ಯಗಳಿಗೆ ಬೇಡಿಕೆ ಹಾಗೂ ಹೂಡಿಕೆ ಹೆಚ್ಚುವಂತೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಪ್ರಸ್ತಾಪ ಮಾಡಿದರು.

ಕರ್ನಾಟಕದ ಸಿರಿಧಾನ್ಯಕ್ಕೆ ಪ್ರೋತ್ಸಾಹ ಮಾಡಿ ಉತ್ತೇಜನ ಮಾಡಿದ್ದು ಎನ್‌ಡಿಎ ಸರ್ಕಾರವಾಗಿದೆ. ಸಿರಿ ಧಾನ್ಯ ಪ್ರಚಾರಕ್ಕೆ ಅಂತಾರಾಷ್ಟ್ರೀಯ ದಿನ ಮಾಡಿದ್ದು ನಮ್ಮದೇ ಸರ್ಕಾರ. ಸಿರಿ ಅನ್ನವೆಂದು ಸಿರಿ ಧಾನ್ಯ ಬಳಕೆ ಉತ್ತೇಜಿಸಲು ಕೇಂದ್ರದಿಂದಲೇ ಅಭಿಯಾನ ಮಾಡಿದ್ದೆವು. ಅಮೆರಿಕದ ಸಮಾರಂಭವೊಂದರಲ್ಲಿ ಆಹಾರದ ಮೆನುವಿನಲ್ಲಿ ಸಿರಿಧಾನ್ಯ ಫುಡ್ ಅನ್ನು ಹಾಕಲಾಗಿದೆ. ಕರ್ನಾಟಕ ಹಾಗೂ ಭಾರತದ ಅಸ್ಮಿತೆಯನ್ನು ಇಷ್ಟೆಲ್ಲ ಪ್ರಚಾರ ಮಾಡಿದ್ದೇ ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೀನುಗಾರರಿಗೂ ಮೊದಲ ಬಾರಿಗೆ ಕಿಸಾನ್ ಕಾರ್ಡ್‌ ಕೊಡಿಸುದ್ದು ನಮ್ಮ ಸರ್ಕಾರವಾಗಿದೆ. 20 ಸಾವಿರ ಕೋಟಿ ರೂಪಾಯಿ ಕೊಟ್ಟು ಮತ್ಸ್ಯ ಸಂಪದ ಯೋಜನೆಯನ್ನು ರೂಪಿಸಿ ಎಲ್ಲ ರೀತಿ ಪ್ರೋತ್ಸಾಹವನ್ನು ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಕಾಂಗ್ರೆಸ್‌ ಶ್ರೀರಾಮನ ವಿರೋಧಿಯಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನವರು ಕಾಂಗ್ರೆಸ್‌ ನಾಯಕರ ಮನೆ ಬಾಗಿಲಿಗೆ ಹೋಗಿ ಆಹ್ವಾನ ನೀಡಿದರೂ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ಪ್ರಭು ರಾಮನ ಪ್ರತಿಷ್ಠಾಪನೆ ಮಾಡಲು 500 ವರ್ಷಗಳ ಕಾಲ ಹೋರಾಟ ನಡೆಸಿದರು. ಆದರೆ, ನಿಮ್ಮ ಎನ್‌ಡಿಎ ಸರ್ಕಾರ ಇಷ್ಟು ವರ್ಷಗಳ ಹೋರಾಟಕ್ಕೆ ಫಲ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಿಮ್ಮೆಲ್ಲರ ಮತಗಳಿಂದ ಮಾತ್ರ ಸಾಧ್ಯವಾಗಿದೆ. ಇದರಿಂದ ಈ ದೇಶಕ್ಕೆ ಪುಣ್ಯ ಸಿಗುವುದಿಲ್ಲವೇ? ಈ ಪುಣ್ಯದ ಹಕ್ಕುದಾರರು ಯಾರು? ನಮಗೆ ಮತಹಾಕಿದ ನೀವೇ ಇದಕ್ಕೆ ಹಕ್ಕುದಾರರಾಗಿದ್ದೀರಿ. ಹೀಗಾಗಿ ಇದರ ಪುಣ್ಯ ನಿಮಗೇ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಈ ರಾಮಮಂದಿರವನ್ನು ಸರ್ಕಾರದ ಖಜಾನೆಯಿಂದ ನಿರ್ಮಾಣ ಮಾಡಿದ್ದಲ್ಲ, ದೇಶದ ನಾಗರಿಕರ ತೆರಿಗೆ ಹಣದಿಂದ ಕಟ್ಟಿದ್ದಲ್ಲ. ಇದು ಹಿಂದುಸ್ತಾನದ ಪ್ರತಿಯೊಬ್ಬ ರಾಮ ಭಕ್ತ ನೀಡಿದ ದೇಣಿಗೆಯಿಂದ ಕಟ್ಟಲಾಗಿದೆ. ಇದಕ್ಕಾಗಿ ಕೆಲವರು 5 ರೂ., 100 ರೂ, ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ ಆದರೆ, ಕಾಂಗ್ರೆಸ್‌ ಪಕ್ಷ ಹಾಗೂ ಅವರ ಮಿತ್ರ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. 70 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದರು. ಆದರೆ, ರಾಮಮಂದಿರ ಟ್ರಸ್ಟಿಗಳು ಅವರ ಈ ಎಲ್ಲ ಪಾಪಗಳನ್ನು ಕ್ಷಮಿಸಿ, ಅವರ ಮನೆಗಳಿಗೆ ಹೋಗಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಬನ್ನಿ ಎಂದು ಆಹ್ವಾನವನ್ನು ಕೊಟ್ಟರು. ಆದರೆ, ಅವರು ಮಾಡಿದ್ದೇನು? ಕಾರ್ಯಕ್ರಮಕ್ಕೆ ಬರಲು ನಿರಾಕರಣೆ ಮಾಡಿದರು ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಶಿರಸಿಯ ಮೋದಿ ಸಮಾವೇಶದ ಲೈವ್‌ ವಿಡಿಯೊ ಇಲ್ಲಿದೆ

ವಿಕಸಿತ ಕರ್ನಾಟಕ ಹಾಗೂ ವಿಕಸಿತ ಭಾರತಕ್ಕೋಸ್ಕರ ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಬಂದಿದ್ದೇನೆ. ನನಗೆ ಇಲ್ಲಿ ಬಂದ ಮೇಲೆ ಇಷ್ಟು ಪ್ರಮಾಣದಲ್ಲಿ ಮಾತೆಯರು ಸೇರಿರುವುದನ್ನು ನೋಡಿದರೆ ನನಗೆ ತಿಳಿಯುತ್ತಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಅವಶ್ಯವಾಗಿ ಇದೆ. ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನನ್ನ ಸಂಪುಟದ ಸದಸ್ಯರಾದ ಪ್ರಲ್ಹಾದ್‌ ಜೋಶಿ ಅವರನ್ನು ಭಾರಿ ಅಂತರದಿಂದ ನೀವು ಗೆಲ್ಲಿಸಲಿದ್ದೀರಿ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಮಗೆ ಮನೆ, ವಿದ್ಯುತ್‌, ನೀರಿನ ಸಂಪರ್ಕ ಕೊಡಲು ಎನ್‌ಡಿಎ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಧಾರವಾಡದಲ್ಲಿ ಐಐಟಿ ಮಾಡಿದ್ದೇವೆ, ಬಹುದೊಡ್ಡ ಸುಸಜ್ಜಿತ ರೈಲ್ವೆ ನಿಲ್ದಾಣವನ್ನು ಮಾಡಲಾಗಿದೆ. ಅಮೆರಿಕದಲ್ಲಿ ಸಹ ಭಾರತಕ್ಕೆ ಜೈಕಾರ ಸಿಗುತ್ತಿದೆ. ಯುರೋಪ್‌ನಲ್ಲಿ ಸಹ ಭಾರತಕ್ಕೆ ಗೌರವ ಸಿಗುತ್ತಿದೆ. ಹಿಂದುಸ್ತಾನದ ಯಾರು ವಿದೇಶದ ಯಾವುದೇ ಮೂಲೆಗೆ ಹೋದರೂ ಭಾರತವನ್ನು ಗುರುತಿಸುತ್ತಾರೋ ಇಲ್ಲವೋ? ಇದೆಲ್ಲ ಆಗಿದ್ದು ಯಾರಿಂದ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ಈ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲ. ಇದನ್ನು ನಿಮ್ಮ ಪ್ರತಿ ಮತವು ಮಾಡಿದೆ. ಕಳೆದ 10 ವರ್ಷದಲ್ಲಿ ನೀವು ನೀಡಿದ ಮತಗಳು ಇದೆಲ್ಲವನ್ನೂ ಮಾಡಿವೆ. ನಿಮ್ಮ ಏಕೈಕ ಮತಗಳ ಶಕ್ತಿಯಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಯಿತು. 140 ಕೋಟಿ ಭಾರತೀಯರು ನನ್ನ ಹಿಂದೆ ನಿಂತಿದ್ದೇ ಹೌದಾದರೆ ನಾವು ಏನನ್ನಾದರೂ ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೇಹಾ ಕೊಲೆ ಪ್ರಕರಣ ಉಲ್ಲೇಖ

ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ಕೊಲೆ ಪ್ರಕರಣ ನಡೆದಿದೆ. ಹೆಣ್ಣು ಮಕ್ಕಳಿಗೆ ಈ ರಾಜ್ಯದಲ್ಲಿ ಈಗ ರಕ್ಷಣೆಯೇ ಇಲ್ಲವೇ? ಕರ್ನಾಟಕದಲ್ಲಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಹೆಣ್ಣು ಮಗಳ ರಕ್ಷಣೆಯ ಭಯ ಕಾಡುತ್ತಿದೆ. ಈ ಕಾಂಗ್ರೆಸ್‌ನಿಂದ ನಿಮ್ಮ ಮಗಳನ್ನು ರಕ್ಷಣೆ ಮಾಡಲು ಆಗುವುದಿಲ್ಲವೇ? ಕರ್ನಾಟಕದಲ್ಲಿ ಈ ಸರ್ಕಾರದಿಂದ ಮಹಿಳೆಯರ ರಕ್ಷಣೆ ಗಂಭೀರ ಸವಾಲಾಗಿದೆ. ಕೆಟ್ಟ ಸರ್ಕಾರದ ಸಲುವಾಗಿ ಈ ರೀತಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.

ಇದನ್ನೂ ಓದಿ: PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ

ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಬಾಂಬ್‌ ಸ್ಫೋಟ!

2014ರ ನಂತರ ಬೆಂಗಳೂರಲ್ಲಿ, ದಿಲ್ಲಿಯಲ್ಲಿ, ಗಾಂಧಿನಗರದಲ್ಲಿ, ಸೂರತ್‌ನಲ್ಲಿ, ಮುಂಬೈ ರೇಲ್ವೆ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ ಆಯಿತು ಎಂಬ ಸುದ್ದಿಯನ್ನು ನೀವು ಕೇಳಿದ್ದೀರಾ? ಆದರೆ, ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಯಿತು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಯಿತು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಬಾಂಬರ್‌ಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲ ಕಡೆ ಕಟ್ಟೆಚ್ಚರವನ್ನು ವಹಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Continue Reading
Advertisement
ದೇಶ5 seconds ago

Trinmool Congress: ಟಿಎಂಸಿ ಕಾರ್ಯಕರ್ತನ ಭೀಕರ ಹತ್ಯೆ; ಬಿಜೆಪಿ ನಾಯಕಿ ಮೇಲೆ ಡೆಡ್ಲಿ ಅಟ್ಯಾಕ್‌!

Crime News
ವೈರಲ್ ನ್ಯೂಸ್6 mins ago

ನೆಚ್ಚಿನ ಶ್ವಾನ ಮರಿ ನಾಪತ್ತೆಯಾದ ಕೊರಗಿನಿಂದ ಆತ್ಮಹತ್ಯೆಗೆ ಶರಣಾದ 12 ವರ್ಷದ ಬಾಲಕಿ

Pakistan Cricket
ಕ್ರಿಕೆಟ್11 mins ago

Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್ ಪಾಕ್​ ತಂಡಕ್ಕೆ ನೂತನ ಕೋಚ್​

Amit Shah
ದೇಶ13 mins ago

Amit Shah: ಬಿಜೆಪಿ ಗೆದ್ದರೆ ಮುಸ್ಲಿಮರ ಮೀಸಲಾತಿ ಒಬಿಸಿಗೆ; ಅಮಿತ್‌ ಶಾ ಘೋಷಣೆ

Samantha Ruth Prabhu announces new film Bangaram
ಟಾಲಿವುಡ್31 mins ago

Samantha Ruth Prabhu: ಜನ್ಮದಿನದಂದೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟಿ ಸಮಂತಾ!

Aamir Khan talks about power of namaste
ಬಾಲಿವುಡ್35 mins ago

Aamir Khan: ನಾನು ಮುಸ್ಲಿಮನಾಗಿರುವುದರಿಂದ ʻನಮಸ್ತೆʼ ಹೇಳುವ ಅಭ್ಯಾಸವಿರಲಿಲ್ಲ ಎಂದ ಆಮೀರ್‌ ಖಾನ್‌!

IPL 2024
ಕ್ರೀಡೆ41 mins ago

IPL 2024: 41ನೇ ವಯಸ್ಸಿನಲ್ಲೂ ದಾಖಲೆ ಬರೆದ ಅಮಿತ್ ಮಿಶ್ರಾ

Mohan Bhagwat
ದೇಶ1 hour ago

Mohan Bhagwat: ಆರ್‌ಎಸ್‌ಎಸ್‌ ಮೀಸಲಾತಿ ಪರ; ಮೋಹನ್‌ ಭಾಗವತ್‌ ದಿಢೀರನೆ ಹೀಗೆ ಹೇಳಿದ್ದೇಕೆ?

Congress instigates bombers We are crushing traitors through NIA PM Narendra Modi
Lok Sabha Election 20241 hour ago

PM Narendra Modi: ಬಾಂಬರ್‌ಗಳಿಗೆ ಕಾಂಗ್ರೆಸ್ ಕುಮ್ಮಕ್ಕು; ನಾವು NIA ಮೂಲಕ ದೇಶದ್ರೋಹಿಗಳನ್ನು ಬಗ್ಗುಬಡಿಯುತ್ತಿದ್ದೇವೆ ಎಂದ ಮೋದಿ

Election Commission
ದೇಶ1 hour ago

Election Commission: ಎಎಪಿಯ ಪ್ರಚಾರ ಗೀತೆಗೆ ಬದಲಾವಣೆ ಸೂಚಿಸಿದ ಚುನಾವಣಾ ಆಯೋಗ; ಕಾರಣವೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra Modi in Sirsi
Lok Sabha Election 20242 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ7 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202424 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಟ್ರೆಂಡಿಂಗ್‌