ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ
ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದಿರುವುದು ಗಮನಾರ್ಹ.
ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿಯಾಗುವ ದೇಶಗಳಲ್ಲಿ ಭಾರತ ನಂ.1 ಆಗಿ ಹೊರಹೊಮ್ಮಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ ಭಾರತವು ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ್ದು, ಇಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಜಾಗತಿಕವಾಗಿ ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪ್ರಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಗಮನಾರ್ಹ ಸಾಧನೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಅದರ ಪರಿಣಾಮವೇ ಈಗಿನ ಈ ಸಾಧನೆ. ನೋಟ್ ಬ್ಯಾನ್ ಮಾಡಿದ ಬಳಿಕವಂತೂ ದೇಶದಲ್ಲಿ ಪರೋಕ್ಷವಾಗಿ ಡಿಜಿಟಲ್ ಕ್ರಾಂತಿಯೇ ಶುರುವಾಗಿತ್ತು. ದೊಡ್ಡ ಮೊತ್ತದ ಕರೆನ್ಸಿ ನೋಟುಗಳು ಮರೆಗೆ ಸರಿದಾಗ ಸಹಜವಾಗಿಯೇ ದೊಡ್ಡ ಮೊತ್ತದ ವ್ಯಾಪಾರ ವಹಿವಾಟುಗಳು ಡಿಜಿಟಲ್ ಮೂಲಕ ಆಗತೊಡಗಿದವು. ಇದರ ಜತೆಗೆ ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ವ್ಯವಸ್ಥೆಯೂ ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿತು. ಕರೆನ್ಸಿ ವಹಿವಾಟಿನ ಮೂಲಕ ಯಾವುದೆಲ್ಲ ತೆರಿಗೆ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿತ್ತೋ ಅದೆಲ್ಲವೂ ಡಿಜಿಟಲ್ ಪಾವತಿಯಿಂದಾಗಿ ತೆರಿಗೆ ವ್ಯಾಪ್ತಿಯೊಳಗೆ ಬಂದವು. ಇದು ದೇಶದ ತೆರಿಗೆ ಸಂಗ್ರಹಕ್ಕೂ ಗಣನೀಯ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ.
ಇದೇನೂ ಸುಲಭದ ನಡಿಗೆಯಾಗಿರಲಿಲ್ಲ. ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದರು. ಎಳನೀರು ಮಾರುವವರು, ಚಪ್ಪಲಿ ಹೊಲಿಯುವವರು, ರಸ್ತೆ ಬದಿ ತರಕಾರಿ ಮಾರುವವರೂ ಈಗ QR ಕೋಡ್ ಬಳಸಿ ಡಿಜಿಟಲ್ ಮೂಲಕವೇ ವ್ಯವಹರಿಸುತ್ತಿದ್ದಾರೆ. ಡಿಜಿಟಲ್ ಪಾವತಿಯಿಂದ ಅನುಕೂಲಗಳು ಸಾಕಷ್ಟಿವೆ. ಇದು ಸುಲಭ ಹಾಗೂ ಬಹುದೂರದಲ್ಲಿರುವವರ ಪಾವತಿಯನ್ನೂ ಇದರಿಂದ ಮಾಡಬಹುದು. ಇದರಲ್ಲಿ ಭದ್ರತೆ ಹೆಚ್ಚು. ಸರ್ಕಾರಿ ಯೋಜನೆಗಳು ಫಲಾನುಭವಿಗಳನ್ನು ನೇರವಾಗಿ ತಲುಪುತ್ತಿರುವುದು ಈ ಪಾವತಿ ಮೂಲಕವೇ ಆಗಿವೆ. ತೆರಿಗೆ ವಂಚನೆ ತಡೆಗಟ್ಟಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಎಲ್ಲ ಹಣದ ವಹಿವಾಟುಗಳೂ ಡಿಜಿಟಲ್ ಆಗಿಬಿಡುವ ಸಂಭವ ಇರುವುದರಿಂದ, ನಾವು ಆ ಹಾದಿಯಲ್ಲಿ ಶೀಘ್ರ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು.
ಆದರೆ ಇದರಲ್ಲಿರುವ ಕೆಲವು ಅನನುಕೂಲಗಳು ಮತ್ತು ವಂಚನೆಯ ಸಾಧ್ಯತೆಗಳೂ ಇದ್ದು, ಇವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಆನ್‌ಲೈನ್ ವ್ಯವಹಾರದಲ್ಲಿ ಪರಿಣತರಲ್ಲದವರನ್ನು ಇದರಲ್ಲಿ ಮೋಸಗೊಳಿಸಬಹುದಾಗಿದೆ. ಹಾಗೆಯೇ ಡಿಜಿಟಲ್ ಪಾವತಿಯ ಮೇಲೆ ಸೇವಾ ಶುಲ್ಕ ವಿಧಿಸುತ್ತಿರುವುದು ಕೂಡ ಸರಿಯಲ್ಲ. ಒಂದು ಕಡೆ ನಗದಿನ ಬದಲು ಡಿಜಿಟಲ್ ವಹಿವಾಟು ಉತ್ತೇಜಿಸುವ ಸರ್ಕಾರ, ಇನ್ನೊಂದು ಕಡೆ ಶುಲ್ಕದ ಬರೆ ಹಾಕುವುದು ಸರಿಯಲ್ಲ. ಡಿಜಿಟಲ್ ಪಾವತಿಯನ್ನು ಸರ್ಕಾರ ಶುಲ್ಕ ಮುಕ್ತಗೊಳಿಸಬೇಕು. ಡಿಜಿಟಲ್ ಪಾವತಿ ಒದಗಿಸುವ ಮಧ್ಯವರ್ತಿಗಳನ್ನು ಬೇಕಿದ್ದರೆ ನಿಯಂತ್ರಿಸುವ ಕಾಯಿದೆಗಳನ್ನು ರೂಪಿಸಲಿ, ಆದರೆ ಸಣ್ಣ ಪ್ರಮಾಣದ ಡಿಜಿಟಲ್ ಪಾವತಿಗೂ ಶುಲ್ಕ ತೆರುವಂತಾದರೆ ಅದು ಸಾಮಾನ್ಯನಿಗೆ ದುಬಾರಿಯಾಗುತ್ತದೆ.
ಕ್ರೀಡೆ
Asian Games : ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಅನ್ನುರಾಣಿ
ಅನ್ನು ರಾಣಿಯ ಚಿನ್ನದ ಪದಕದೊಂದಿಗೆ ಭಾರತದ ಒಟ್ಟಾರೆ ಚಿನ್ನದ ಪದಕದ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.ಬೆಳ್ಳಿ, ಕಂಚು ಸೇರಿ 69 ಪದಕಗಳೊಂದಿಗೆ (Asian Games ) ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಹ್ಯಾಂಗ್ಜೌ: ಭಾರತದ ಜಾವೆಲಿನ್ ಎಸೆತಗಾರ್ತಿ ಅನ್ನುರಾಣಿ ಏಷ್ಯನ್ ಗೇಮ್ಸ್ನಲ್ಲಿ (Asian Games) ಹೊಸ ದಾಖಲೆ ಬರೆದ್ದಾರೆ. ಅವರು ಖಂಡಾಂತರ ಕ್ರೀಡಾಕೂಟದ ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಮೊಟ್ಟ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಮಂಗಳವಾರ ಸಂಜೆ ನಡೆಸ ಸ್ಪರ್ಧೆಯಲ್ಲಿ ಅತ್ಯುತ್ತಮ 62.92 ಮೀಟರ್ ದೂರಕ್ಕೆ ಜಾವೆಲಿನ್ ಎಸೆತ ಅನ್ನು ರಾಣಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಅಂದ ಹಾಗೆ ಅನ್ನು ರಾಣಿ 2014ರಲ್ಲಿ ನಡೆದಿದ್ದ ಏಷ್ಯನ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು ಇದೀಗ ಅವರು ಪ್ರದರ್ಶನದಲ್ಲಿ ಸುಧಾರಣೆ ಮಾಡಿಕೊಂಡು ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದರು.
ಅನ್ನು ರಾಣಿ ಅವರ ಚಿನ್ನದ ಪದಕದ ಸಾಧನೆಯೊಂದಿಗೆ ಭಾರತದ ಬಂಗಾರದ ಗಳಿಕೆ 15ಕ್ಕೆ ಏರಿಕೆಯಾಗಿದೆ. 26 ಬೆಳ್ಳಿ ಹಾಗೂ 28 ಕಂಚಿನ ಪದಕದ ಸಾಧನೆಯೊಂದಿಗೆ ಒಟ್ಟಾರೆ 69 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿಸಿದೆ.
ಮಂಗಳವಾರ ಸಂಜೆ ಪಾರುಲ್ ಚೌಧರಿ, ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಓಟದ ಅಂತಿಮ ಕ್ಷಣದಲ್ಲಿ ವೇಗ ಹೆಚ್ಚಿಸಿದ ಅವರು ಅವರು 15:14.75 ಸೆಕೆಂಡುಗಳಲ್ಲಿ ಗುರಿ ತಲುಪಿ ಜಪಾನ್ ನ ರಿರಿಕಾ ಹಿರೊನಾಕಾ ಅವರನ್ನು ಹಿಂದಿಕ್ಕಿದರು.
ಮಹಿಳೆಯರ 400 ಮೀಟರ್ ಓಟದ ಫೈನಲ್ನಲ್ಲಿ ವಿಥ್ಯಾ ರಾಮರಾಜ್ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕ (100), ರಿಂಕು ಸಿಂಗ್ ಅವರ ಅದ್ಭುತ ಶತಕ (37*) ಮತ್ತು ಬೌಲರ್ಗಳ ಅಬ್ಬರದಿಂದಾಗಿ ಭಾರತ ಕ್ರಿಕೆಟ್ ತಂಡವು ತಂಡವು ನೇಪಾಳ ವಿರುದ್ಧ 23 ರನ್ಗಳ ವಿಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಭಾರತ ಪುರುಷರ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.
ಭಾರತ ಪುರುಷರ ಕಬಡ್ಡಿ ತಂಡವು ಪಂದ್ಯಾವಳಿಯಲ್ಲಿ 55-18 ಅಂಕಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದರೆ, ಮಹಿಳಾ ಹಾಕಿ ತಂಡವು ಹಾಂಗ್ ಕಾಂಗ್ ವಿರುದ್ಧ 13-0 ಅಂತರದಿಂದ ಗೆಲುವು ಸಾಧಿಸಿತು. ಅರ್ಚರಿಯಲ್ಲಿ ಭಾರತೀಯರು ಪ್ರಾಬಲ್ಯ ಮೆರೆದಿದ್ದು, ಪುರುಷರ ವಿಭಾಗದಲ್ಲಿ ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಶರ್ಮಾ ಅಖಿಲ ಭಾರತ ಫೈನಲ್ ತಲುಪಿದರೆ, ಜ್ಯೋತಿ ಸುರೇಖಾ ವೆನ್ನಮ್ ಕೂಡ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಇದನ್ನೂ ಓದಿ : Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್
ಬ್ಯಾಡ್ಮಿಂಟರ್ನಲ್ಲಿ ಭಾರತದ ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ 16ನೇ ಸುತ್ತಿಗೆ ತಲುಪಿದ್ದಾರೆ. ಮಹಿಳೆಯರ 800 ಮೀಟರ್ ಓಟದಲ್ಲಿ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್ ಅಂತಿಮ ಸ್ಥಾನಗಳನ್ನು ಗಳಿಸಿದರೆ. ಭಾರತವು 4×400 ಮೀಟರ್ ತಂಡ ಪುರುಷರ ಸ್ಪರ್ಧೆಯಲ್ಲಿ ಫೈನಲ್ಗೆ ಅರ್ಹತೆ ಪಡೆಯಿತು.
ಪುರುಷರ ಡೆಕಾಥ್ಲಾನ್ನಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಗುರಿಯನ್ನು ತೇಜಸ್ವಿನ್ ಶಂಕರ್ ಹೊಂದಿದ್ದಾರೆ. 2014ರ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದ ಮಹಿಳಾ ಜಾವೆಲಿನ್ ಸ್ಪರ್ಧಿ ಅನ್ನು ರಾಣಿ ಇನ್ನೊಂದು ಪದಕದ ಮೇಲೆ ಗುರಿಯಿಟ್ಟಿದ್ದಾರೆ.
ಕರ್ನಾಟಕ
Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ
Old Pension Scheme : ರಾಜ್ಯದಲ್ಲೇ ಸದ್ಯವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಮೈಸೂರು: ರಾಜ್ಯದಲ್ಲಿ ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ (Old Pension Scheme) ಜಾರಿಯಾಗಲಿದೆ. ಈ ಮೂಲಕ ಸದ್ಯವೇ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ (Good News for Govt Employees) ಸಿಗಲಿದೆ ಎಂದು ಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ (Congress manifesto) ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿ ಮಾಡುವುದಾಗಿ ಹೇಳಿತ್ತು. ಅದರಂತೆ ನಡೆದುಕೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೊಸ ಪಿಂಚಣಿ ವ್ಯವಸ್ಥೆಯ (New Pension Scheme) ವಿರುದ್ಧ ದೊಡ್ಡ ಮಟ್ಟದ ಆಕ್ರೋಶವಿದೆ. ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಆಗಾಗ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲೇ ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ ಮಂಡಿಸಿದ್ದರು. ಬಿಜೆಪಿ ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವನ್ನು ತಳೆದಿರಲಿಲ್ಲ. ಆದರೆ, ಕಾಂಗ್ರೆಸ್ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಾಗಿ ಪ್ರಕಟಿಸಿತ್ತು. ಇದೀಗ ಪಕ್ಷ ಗೆಲುವು ಸಾಧಿಸಿದ್ದರಿಂದ ಅದು ಆ ಬೇಡಿಕೆಯನ್ನು ಈಡೇರಿಸಲಿದೆ ಎಂದು ಮಧು ಬಂಗಾರಪ್ಪ ಶಿಕ್ಷಕರಿಗೆ ಭರವಸೆ ನೀಡಿದ್ದಾರೆ.
ಮುಂದಿನ ವರ್ಷದಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್
ರಾಜ್ಯದಲ್ಲಿ ಮುಂದಿನ ವರ್ಷದಿಂದ 600 ಹೊಸ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ತೆರೆಯಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಅವರು ಸೋಮವಾರ ವಿಶ್ವನಾಥಪುರದಲ್ಲಿ ಹೇಳಿದರು. ಜಿಲ್ಲಾಡಳಿತ ಮತ್ತು ಜಿಪಂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೆಪಿಎಸ್ ಶಾಲೆಯ ಆವರಣದಲ್ಲಿ ʻನನ್ನ ಶಾಲೆ ನನ್ನ ಕೊಡುಗೆʼಯಡಿಯಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಮಾದರಿ ಸರಕಾರಿ ಶಾಲೆ ಯೋಜನೆ ಉದ್ಘಾಟನೆ ಮತ್ತು ನೂತನ ಶಾಲಾ ಕೊಠಡಿಗಳು ಹಾಗೂ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಎಸ್‌ಆರ್ ಅನುದಾನದಡಿಯಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರದ ಪ್ರಯತ್ನಗಳು ಕಾರ್ಯರೂಪದಲ್ಲಿದೆ. 1 ರಿಂದ 12 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲು ಹಾಗೂ ಮೂಲ ಸೌಲಭ್ಯಗಳನ್ನು ಒಳಗೊಂಡ 600 ಕೆ.ಪಿ.ಎಸ್ ಶಾಲೆಗಳನ್ನು ಮುಂದಿನ ವರ್ಷದ ವೇಳೆಗೆ ರಾಜ್ಯಾದ್ಯಂತ ಪ್ರಾರಂಭ ಮಾಡಲಾಗುವುದು. ಮುಂದಿನ 5 ವರ್ಷಗಳಲ್ಲಿಎರಡು ಗ್ರಾಮಗಳಿಗೆ ಒಂದರಂತೆ 2000 ಕೆ.ಪಿ.ಎಸ್ ಶಾಲೆಗಳನ್ನು ನಿರ್ಮಿಸಲು ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿ: Shivamogga Violence : ನಾವು ತ್ರಿಶೂಲ ಹಿಡ್ಕೊಳಲ್ವಾ? ಹಾಗೆ ಅವರು ತಲ್ವಾರ್ ಹಿಡಿದಿದ್ದಾರೆ ಅಷ್ಟೆ; ಮಧು ಬಂಗಾರಪ್ಪ
ಸರ್ಕಾರಿ ಶಾಲೆಗಳಲ್ಲಿಮೂಲಸೌಲಭ್ಯ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ . ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಶ್ರಮಿಸುತ್ತಿದ್ದು, ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರಕ್ಕೆ 2 ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಈ ವರ್ಷ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ 2 ಪೂರಕ ಪರೀಕ್ಷೆಗಳನ್ನು ನಡೆಸಿದ್ದೆವು. ಇದರ ಪ್ರತಿಫಲವಾಗಿ 4200 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ವಿವರಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ 13,500 ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪ್ರಮುಖ ಸುದ್ದಿ
Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ
Bed Bugs: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದಲ್ಲಿ ತಿಗಣೆ ಕಾಟ ವಿಪರೀತವಾಗಿದ್ದು, ಈ ಕುರಿತಾದ ಫೋಟೋ, ವಿಡಿಯೋಗಳನ್ನು ಜನರು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುತ್ತಿದ್ದಾರೆ.
ಪ್ಯಾರಿಸ್: ಫ್ರಾನ್ಸ್ (France) ರಾಜಧಾನಿ ಪ್ಯಾರಿಸ್ (Paris City) ತನ್ನ ಐಫೆಲ್ ಟವರ್, ಚಾಂಪ್ಸ್-ಎಲಿಸೀಸ್ ಮತ್ತು ಲೌವ್ರೆ ಮ್ಯೂಸಿಯಂ ಸೇರಿದಂತೆ ಇನ್ನ ಅನೇಕ ಐತಿಹಾಸಿಕ ಹೆಗ್ಗುರುತಗಳಿಗಾಗಿ ಪ್ರಸಿದ್ಧಿಯಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಪ್ಯಾರಿಸ್ ಬೇರೆ ಕಾರಣಕ್ಕೆ ಸುದ್ದಿಯಲ್ಲಿದೆ. ಈ ನಗರದಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿರುವ ತಿಗಣೆಗಳಿಂದ (Bed Bugs) ಜನರು ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ, ತಿಗಣೆಗಳ ನಿರ್ಮೂಲನಕ್ಕಾಗಿ ಫ್ರಾನ್ಸ್ ಸರ್ಕಾರವು (France Government) ಸಮರವನ್ನೇ ಸಾರಿದೆ(Viral News).
ಹೈಸ್ಪೀಡ್ ರೈಲುಗಳು, ಬಸ್‌ಗಳು, ಸಿನಿಮಾ ಥಿಯೇಟರ್‌ಗಳು, ಚಾರ್ಲ್ಸ್ ಡೇ ಗೌಲ್ ವಿಮಾನ ನಿಲ್ದಾಣ ಸೇರಿದಂತೆ ನಗರದ ಬಹುತೇಕ ತಿಗಣೆ ಕಾಟದ ಫೋಟೋಗಳು ಮತ್ತು ವಿಡಿಯೋಗಳನ್ನು ಪ್ಯಾರಿಸ್ ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಫ್ರಾನ್ಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bed bugs seen crawling over seats on Paris trains and buses as France battles a bed bug invasion. pic.twitter.com/XnwcrQgVax
— Project TABS (@ProjectTabs) October 2, 2023
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಫ್ರಾನ್ಸ್ ಸರ್ಕಾರ ಈಗ ತಿಗಣೆ ಸಂಹಾರಕ್ಕೆ ಮುಂದಾಗಿದೆ. ಫ್ರಾನ್ಸ್ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಅವರು, ಸಾರ್ವಜನಿಕ ಸಾರಿಗೆ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಲಿದ್ದೇನೆ. ಈ ವೇಳೆ, ತಿಗಣೆಗಳ ಸಮಸ್ಯೆಯನ್ನು ಬಗೆಹರಿಸುವ ಕುರಿತು ಚರ್ಚಿಸಲಾಗುವುದು. ಅಲ್ಲದೇ, ಪ್ರಯಾಣಿಕರಿಗೆ ತಿಗಣೆ ಕಾಟದಿಂದ ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಫ್ರಾನ್ಸ್ ಸರ್ಕಾರ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ ಎಂದು ಫ್ರಾನ್ಸ್ 24 ವರದಿ ಮಾಡಿದೆ.
ತಿಗಣೆ ಸಂವಹಾರ ಮಾಡುವುದಕ್ಕಾಗಿಯೇ ಮೀಸಲಾದ ಕಾರ್ಯಪಡೆಯನ್ನು ರಚಿಸುವ ಮೂಲಕ ಜನರ ನೆರವಿಗೆ ಧಾವಿಸಬೇಕು ಎಂದು ಪ್ಯಾರಿಸ್ ಸಿಟಿ ಹಾಲ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಒತ್ತಾಯಿಸಿದೆ. ಫ್ರೆಂಚ್ ಸಾರಿಗೆ ಪೂರೈಕೆದಾರರು ಇತ್ತೀಚೆಗೆ ಈ ತಿಗಣೆಗಳು ಕಂಡು ಬಂದಿಲ್ಲ ವಾಸ್ತವದ ನಡುವೆಯೂ ಅವುಗಳ ಬಗ್ಗೆ ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: 163 ಇಲಿ ಹಿಡಿಯಲು 69 ಲಕ್ಷ ರೂ. ವೆಚ್ಚ ಮಾಡಿದ ರೈಲ್ವೆ ಇಲಾಖೆ! ಭ್ರಷ್ಟಾಚಾರ ಎಂದು ಕಿಡಿಕಾರಿದ ಕಾಂಗ್ರೆಸ್
ಪ್ಯಾರಿಸ್ ಮೆಟ್ರೋ ಕಾರ್ಯನಿರ್ವಹಣೆ ಮಾಡುವ ಆರ್‌ಎಟಿಪಿ, ಪ್ರತಿಯೊಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಕಳೆದ ಕೆಲವು ದಿನಗಳಿಂದ ನಮ್ಮ ಉಪಕರಣಗಳಲ್ಲಿ ತಿಗಣೆಗಳ ಕುರಿತಾದ ಯಾವುದೇ ಸಾಬೀತಾದ ಪ್ರಕರಣಗಳು ದಾಖಲಾಗಿಲ್ಲ ಎಂದು ಸಿಎನ್ಎನ್‌ಗೆ ತಿಳಿಸಿದೆ.
ಮನೆಗಳಲ್ಲಿ ತಿಗಣೆ ಹೆಚ್ಚಾಗುವ ಸಂಭವಗಳಿವೆ. ತ್ವರಿತಗತಿಯಲ್ಲಿ ತಿಗಣೆಗಳು ಹೆಚ್ಚಾಗುತ್ತಿರುವ ಕುರಿತು ಅಗತ್ಯವಿರುವ ಎಲ್ಲ ಸಂಗತಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಪ್ರಯಾಣ, ಹಂಚಿಕೊಳ್ಳುವ ವಸತಿ ವ್ಯವಸ್ಥೆ ಸೇರಿದಂತೆ ಕೆಲವು ಸಂಗತಿಗಳು ತಿಗಣೆಗಳ ಸಮಸ್ಯೆ ಕಾರಣವಾಗಿರಬಹುದು ಎಂದು ANSESನ ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಸಮಾಜ ವಿಭಾಗದ ಉಪ ನಿರ್ದೇಶಕರಾದ ಕರೀನ್ ಫಿಯೋರ್ ಅವರು ತಿಳಿಸಿದ್ದಾರೆ.
ಕ್ರೀಡೆ
Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್
ಪಾರುಲ್ ಅವರ ಚಿನ್ದದ ಪದಕದೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಹ್ಯಾಂಗ್ಜೌ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games) ಸೋಮವಾರ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಾರುಲ್ ಚೌಧರಿ, ಮಂಗಳವಾರ ನಡೆದ ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಓಟದ ಅಂತಿಮ ಕ್ಷಣದಲ್ಲಿ ವೇಗ ಹೆಚ್ಚಿಸಿದ ಅವರು ಅವರು 15:14.75 ಸೆಕೆಂಡುಗಳಲ್ಲಿ ಗುರಿ ತಲುಪಿ ಜಪಾನ್ ನ ರಿರಿಕಾ ಹಿರೊನಾಕಾ ಅವರನ್ನು ಹಿಂದಿಕ್ಕಿದರು. ಈ ಮೂಲಕ ಭಾರತದ ಒಟ್ಟು ಚಿನ್ನದ ಪದಕಗಳ ಸಂಕೆಯ 14ಕ್ಕೆ ಏರಿಕೆಯಾಗಿದೆ ಹಾಗೂ ಒಟ್ಟಾರೆಯಾಗಿ 65 ಪದಕಗಳನ್ನು ಗೆದ್ದುಕೊಂಡಿದೆ.
Powerhouse Parul grabs a #GloriousGold🥇in Women's 5000m 🥳
— SAI Media (@Media_SAI) October 3, 2023
Second time around, she proves that charm and determination pay off, securing her remarkable second medal at #AsianGames2022.
Clocking 15:14.75, Parul's performance is absolutely 🔥!
Heartiest congratulations champ!… pic.twitter.com/NRfxSBJXwH
ಮಹಿಳೆಯರ 400 ಮೀಟರ್ ಓಟದ ಫೈನಲ್ನಲ್ಲಿ ವಿಥ್ಯಾ ರಾಮರಾಜ್ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕ (100), ರಿಂಕು ಸಿಂಗ್ ಅವರ ಅದ್ಭುತ ಶತಕ (37*) ಮತ್ತು ಬೌಲರ್ಗಳ ಅಬ್ಬರದಿಂದಾಗಿ ಭಾರತ ಕ್ರಿಕೆಟ್ ತಂಡವು ತಂಡವು ನೇಪಾಳ ವಿರುದ್ಧ 23 ರನ್ಗಳ ವಿಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಭಾರತ ಪುರುಷರ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.
ಭಾರತ ಪುರುಷರ ಕಬಡ್ಡಿ ತಂಡವು ಪಂದ್ಯಾವಳಿಯಲ್ಲಿ 55-18 ಅಂಕಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದರೆ, ಮಹಿಳಾ ಹಾಕಿ ತಂಡವು ಹಾಂಗ್ ಕಾಂಗ್ ವಿರುದ್ಧ 13-0 ಅಂತರದಿಂದ ಗೆಲುವು ಸಾಧಿಸಿತು. ಅರ್ಚರಿಯಲ್ಲಿ ಭಾರತೀಯರು ಪ್ರಾಬಲ್ಯ ಮೆರೆದಿದ್ದು, ಪುರುಷರ ವಿಭಾಗದಲ್ಲಿ ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಶರ್ಮಾ ಅಖಿಲ ಭಾರತ ಫೈನಲ್ ತಲುಪಿದರೆ, ಜ್ಯೋತಿ ಸುರೇಖಾ ವೆನ್ನಮ್ ಕೂಡ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಬ್ಯಾಡ್ಮಿಂಟರ್ನಲ್ಲಿ ಭಾರತದ ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ 16ನೇ ಸುತ್ತಿಗೆ ತಲುಪಿದ್ದಾರೆ. ಮಹಿಳೆಯರ 800 ಮೀಟರ್ ಓಟದಲ್ಲಿ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್ ಅಂತಿಮ ಸ್ಥಾನಗಳನ್ನು ಗಳಿಸಿದರೆ. ಭಾರತವು 4×400 ಮೀಟರ್ ತಂಡ ಪುರುಷರ ಸ್ಪರ್ಧೆಯಲ್ಲಿ ಫೈನಲ್ಗೆ ಅರ್ಹತೆ ಪಡೆಯಿತು.
ಪುರುಷರ ಡೆಕಾಥ್ಲಾನ್ನಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಗುರಿಯನ್ನು ತೇಜಸ್ವಿನ್ ಶಂಕರ್ ಹೊಂದಿದ್ದಾರೆ. 2014ರ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದ ಮಹಿಳಾ ಜಾವೆಲಿನ್ ಸ್ಪರ್ಧಿ ಅನ್ನು ರಾಣಿ ಇನ್ನೊಂದು ಪದಕದ ಮೇಲೆ ಗುರಿಯಿಟ್ಟಿದ್ದಾರೆ.
ಭಾರತದ ಪದಕಗಳ ಪಟ್ಟಿ-
- ಚಿನ್ನ: 14
- ಬೆಳ್ಳಿ: 24
- ಕಂಚು: 26
10ನೇ ದಿನದಲ್ಲಿ ಭಾರತದ ಫಲಿತಾಂಶಗಳು
ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ.
ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ವಿಥ್ಯಾ ರಾಮ್ರಾಜ್ ಕಂಚಿನ ಪದಕ ಗೆದ್ದಿದ್ದಾರೆ.
ಮಹಿಳೆಯರ 54 ಕೆಜಿ ಬಾಕ್ಸಿಂಗ್ನಲ್ಲಿ ಪ್ರೀತಿ ಪವಾರ್ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ ಕ್ಯಾನೋ ಡಬಲ್ 1000 ಮೀಟರ್ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ ಕ್ರಿಕೆಟ್: ನೇಪಾಳವನ್ನು 23 ರನ್ ಗಳಿಂದ ಮಣಿಸಿದ ಭಾರತ ಸೆಮಿಫೈನಲ್ ಗೆ
ಕಬಡ್ಡಿ: ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ 55-18, ಮಹಿಳಾ ತಂಡ ದಕ್ಷಿಣ ಕೊರಿಯಾ ವಿರುದ್ಧ 56-23 ಅಂತರದಲ್ಲಿ ಜಯ ಸಾಧಿಸಿತು.
ಇದನ್ನೂ ಓದಿ : Asian Games 2023: ಸೆಮಿಯಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟ ಪ್ರೀತಿ ಪವಾರ್
ಮಹಿಳಾ ಹಾಕಿ: ಹಾಂಕಾಂಗ್ ವಿರುದ್ಧ ಭಾರತಕ್ಕೆ 13-0 ಅಂತರದ ಗೆಲುವು
ಆರ್ಚರಿ (ಕಾಂಪೌಂಡ್): ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಅಖಿಲ ಭಾರತ ಅಂತಿಮ ವೈಯಕ್ತಿಕ ಪುರುಷರ ಸ್ಪರ್ಧೆಯನ್ನು (ಅಕ್ಟೋಬರ್ 7 ರಂದು ಫೈನಲ್) ಸ್ಥಾಪಿಸಿದರು; ಮಹಿಳಾ ಫೈನಲ್ನಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಕಂಚಿನ ಪದಕಕ್ಕಾಗಿ ಅದಿತಿ ಸೆಣಸಲಿದ್ದಾರೆ (ಇಬ್ಬರೂ ಅಕ್ಟೋಬರ್ 7 ರಂದು)
ಆರ್ಚರಿ (ರಿಕರ್ವ್): ಅತನು ದಾಸ್ ಮತ್ತು ಧೀರಜ್ ಬೊಮ್ಮದೇವರ ಕ್ವಾರ್ಟರ್ ಫೈನಲ್ನಲ್ಲಿ ನಿರ್ಗಮನ.
ಬ್ಯಾಡ್ಮಿಂಟನ್: ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ನಲ್ಲಿ 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಹಿಳೆಯರ 800 ಮೀಟರ್ ಓಟ: ಫೈನಲ್ಗೆ ಅರ್ಹತೆ ಪಡೆದ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್
ಪುರುಷರ 4*400 ಮೀಟರ್: ಫೈನಲ್ಸ್ ಅರ್ಹತೆ ಪಡೆದ ಭಾರತ
ಸ್ಕ್ವಾಷ್: ಪುರುಷರ ಸಿಂಗಲ್ಸ್ನಲ್ಲಿ ಸೌರವ್ ಘೋಷಾಲ್, ಮಿಶ್ರ ಡಬಲ್ಸ್ನಲ್ಲಿ ಅಭಯ್-ಅನಾಹತ್ ಮತ್ತು ದೀಪಿಕಾ-ಹರಿಂದರ್ಪಾಲ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
-
ದೇಶ19 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ14 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ದೇಶ23 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ಟಾಪ್ 10 ನ್ಯೂಸ್21 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ20 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್22 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ10 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕ್ರೈಂ11 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?