Most powerful Indians: ದೇಶದ ಪ್ರಭಾವಿಗಳ ಪಟ್ಟಿಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಜಯ್​ ಶಾ - Vistara News

ಪ್ರಮುಖ ಸುದ್ದಿ

Most powerful Indians: ದೇಶದ ಪ್ರಭಾವಿಗಳ ಪಟ್ಟಿಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಜಯ್​ ಶಾ

ದೇಶದ ಪ್ರಭಾವಿ ನಾಯಕರ (Most powerful Indians) ಪಟ್ಟಿಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ವಿರಾಟ್​ ಕೊಹ್ಲಿಗಿಂತ(Virat Kohli) ಉನ್ನತ ಸ್ಥಾನ ಪಡೆದಿದ್ದಾರೆ.

VISTARANEWS.COM


on

virat kohli and jay shah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದ ಪ್ರಭಾವಿ ನಾಯಕರ (Most powerful Indians) ಪಟ್ಟಿಯೊಂದನ್ನು ಅಗ್ರಗಣ್ಯ ದೈನಿಕ ಇಂಡಿಯನ್‌ ಎಕ್ಸ್‌ಪ್ರೆಸ್‌ (Indian Express) ಬಿಡುಗಡೆ ಮಾಡಿದೆ. ವಿವಿಧ ಕೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಿಂದ ಒಟ್ಟು 4 ಮಂದಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅಲಂಕರಿಸಿದ್ದಾರೆ.

ಅಚ್ಚರಿ ಎಂದರೆ ವಿರಾಟ್​ ಕೊಹ್ಲಿಗಿಂತ(Virat Kohli) ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಈ ಪಟ್ಟಿಯಲ್ಲಿ ಮುಂದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರ ಮೇಲೆ ಲೈಗಿಂಕ ಕಿರುಕುಳದ ಆರೋಪ ಮಾಡಿ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ಮಾಡಿದ ಕುಸ್ತಿಪಟು ವಿನೇಶ್​ ಫೋಗಟ್​ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಕೊನೆಯ 100ನೇ ಸ್ಥಾನ ಸಿಕ್ಕಿದೆ.

ಜಯ್​ ಶಾ(35ನೇ ಸ್ಥಾನ)


ಬಿಸಿಸಿಐ ಕಾರ್ಯದರ್ಶಿ, ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರಿಕೆಟ್‌ಗೆ ಹಲವು ಮಾನ್ಯತೆ ತಂದುಕೊಟ್ಟ ಮತ್ತು ಒಲಿಂಪಿಕ್ಸ್‌ಗೆ ಕ್ರಿಕೆಟ್​ ಸೇರ್ಪಡೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಯ್​ ಶಾ ಅವರು ಪ್ರಭಾವಿ ನಾಯಕರ ಪಟ್ಟಿಯಲ್ಲಿ 35ನೇ ಸ್ಥಾನ ಪಡೆದಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಯೂ ಜಯ್​ ಶಾ ಅವರದ್ದಾಗಿದೆ. ಲಿಂಗ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ಪದ್ಧತಿಯನ್ನು ಕೂಡ ಇವರ ಕಾರ್ಯವಧಿಯಲ್ಲಿ ಜಾರಿಗೆ ತರಲಾಗಿತ್ತು.


ವಿರಾಟ್​ ಕೊಹ್ಲಿ( 38ನೇ ಸ್ಥಾನ)


ವಿಶ್ವ ಕ್ರಿಕೆಟ್​ನ ಖ್ಯಾತ ಬ್ಯಾಟರ್​ ಭಾರತ ತಂಡದ ವಿರಾಟ್​ ಕೊಹ್ಲಿ ಅವರು ಈ ಪಟ್ಟಿಯಲ್ಲಿ 38ನೇ ಸ್ಥಾನ ಪಡೆದಿದ್ದಾರೆ. ಈಗಾಗಲೇ ಕ್ರಿಕೆಟ್​ನಲ್ಲಿ ಹಲವು ವಿಶ್ವ ದಾಖಲೆ ಬರೆದ ಖ್ಯಾತಿ ಕೊಹ್ಲಿಯದ್ದಾಗಿದೆ. ಕಳೆದ ವರ್ಷ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ ಅವರು ಸಚಿನ್​ ತೆಂಡೂಲ್ಕರ್(49 ಶತಕ)​ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್​ನ ಶತಕದ ದಾಖಲೆಯನ್ನು ಮುರಿದಿದ್ದರು. ಕೊಹ್ಲಿ 50 ಶತಕ ಬಾರಿಸಿದ್ದಾರೆ. ಕೊಹ್ಲಿ ಇನ್​ಸ್ಟಾಗ್ರಾಮ್​ನಲ್ಲಿ 266 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.


ನೀರಜ್​ ಚೋಪ್ರಾ(46ನೇ ಸ್ಥಾನ)


ಭಾರತದ ಸ್ಟಾರ್​ ಜಾವೆಲಿನ್‌ ಎಸೆತಗಾರ, ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ(Neeraj Chopra) ಅವರಿಗೆ ಈ ಪಟ್ಟಿಯಲ್ಲಿ 4ನೇ ಸ್ಥಾನ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದೇ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಸಿದ್ಧತೆ ಆರಂಭಿಸಿರುವ ನೀರಜ್​ ಇಲ್ಲಿಯೂ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಗೆದ್ದರೆ ಸತತ 2ನೇ ಒಲಿಂಪಿಕ್ಸ್​ ಚಿನ್ನ ಗೆದ್ದ ಸಾಧಕರಾಗಲಿದ್ದಾರೆ.

ಇದನ್ನೂ ಓದಿ PM Narendra Modi: ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿಯೇ ನಂಬರ್‌ 1; ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಎಲ್ಲಿದ್ದಾರೆ ನೋಡಿ!


ಮಹೇಂದ್ರ ಸಿಂಗ್​ ಧೋನಿ(58ನೇ ಸ್ಥಾನ)


ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ, ಏಕದಿನ ಮತ್ತು ಟಿ20 ವಿಶ್ವಕಪ್​ ಗೆದ್ದ ನಾಯಕ, ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದರೂ ಕೂಡ ಅವರಿಗಿರುವ ಅಭಿಮಾನಿಗಳ ಕ್ರೇಜ್​ ಮಾತ್ರ ಇನ್ನೂ ಕಿಂಚಿತ್ತು ಕಡಿಮೆಯಾಗಿಲ್ಲ. ಈ ಬಾರಿಯ ಐಪಿಎಲ್​ ಟೂರ್ನಿಯ ಬಳಿಕ ಧೋನಿ ಎಲ್ಲ ಮಾದರಿಯ ಕ್ರಿಕೆಟ್​ಗೆ ಗುಡ್​ಬೈ ಹೇಳಲಿದ್ದಾರೆ.


ವಿನೇಶ್​ ಫೋಗಟ್​(100ನೇ ಸ್ಥಾನ)


ಬ್ರಿಜ್​ ಭೂಷಣ್​ ಶರಣ್​ ಸಿಂಗ್(Brij Bhushan Sharan Singh)​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಒಲಿಂಪಿಯನ್​ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat)​ ಅವರಿಗೆ ಈ ಪಟ್ಟಿಯಲ್ಲಿ 100ನೇ ಸ್ಥಾನ ನೀಡಲಾಗಿದೆ. ಬ್ರಿಜ್​ ಭೂಷಣ್ ಅವರ ಆಪ್ತ ಸಂಜಯ್​ ಸಿಂಗ್​ ಅವರನ್ನು ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದದ್ದನ್ನು ಖಂಡಿಸಿ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು  ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

HD Revanna Bail: ಇಂದು ರೇವಣ್ಣ ಅವರು ಪರಪ್ಪನ ಅಗ್ರಹರ ‌ಜೈಲಿನಿಂದ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ, ಜೆಡಿಎಸ್ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲು ಬಳಿ ಸೇರುವ‌ ಸಾಧ್ಯತೆ ಇದೆ. ಹೀಗಾಗಿ ಜೈಲಿನ ರಸ್ತೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

VISTARANEWS.COM


on

HD Revanna Bail
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಹಾಗೂ ಅಪಹರಣ (Kidnap case) ಪ್ರಕರಣದಲ್ಲಿ ಆರು ದಿನಗಳಿಂದ ಪರಪ್ಪನ ಅಗ್ರಹಾರ ಜೈಲುವಾಸಿಯಾಗಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna jailed) ಅವರಿಗೆ ನಿನ್ನೆ ಜಾಮೀನು (HD Revanna Bail) ದೊರೆತಿದೆ. ಆದರೆ ಇಂದು ಸಂಜೆಯವರೆಗೂ ಅವರು ಜೈಲಿನಲ್ಲಿರಬೇಕಾಗಿದೆ.

ಕಿಡ್ನಾಪ್ ಕೇಸ್‌ನಲ್ಲಿ ಜೈಲು ಸೇರಿದ್ದ ಎಚ್.ಡಿ.ರೇವಣ್ಣನವರಿಗೆ ಇಂದು ಸೆರೆವಾಸ ಅಂತ್ಯವಾಗಲಿದೆ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಅವರು ಬಿಡುಗಡೆಯಾಗಲಿದ್ದಾರೆ. ಆದರೆ ಮೊದಲಿಗೆ ಜಾಮೀನಿನ ಶೂರಿಟಿ ಪ್ರಕ್ರಿಯೆಯನ್ನು ಕೋರ್ಟಿನಲ್ಲಿ ಮುಗಿಸಬೇಕು. ಬೇಲ್ ಕಾಪಿ ಜೈಲಿನ ಅಧಿಕಾರಿಗಳಿಗೆ ಮುಖತಃ ಬರಬೇಕು. ಬೇಲ್ ಕಾಪಿ ಬಂದ ಬಳಿಕ ಸಂಜೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ನಿನ್ನೆ ಸಂಜೆ ಜಾಮೀನು ಸಿಕ್ಕ ಖುಷಿಯಲ್ಲಿದ್ದ ರೇವಣ್ಣ ರಾತ್ರಿ 12 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಎದ್ದು ಕೆಲ ಹೊತ್ತು ಬ್ಯಾರಕ್‌ನಲ್ಲಿ ವಾಕಿಂಗ್ ಮಾಡಿದ್ದಾರೆ. ಕೊಠಡಿಯಲ್ಲಿದ್ದ ದೇವರ ಪೋಟೋಗೆ ಪೂಜೆ ಮಾಡಿದ್ದಾರೆ. ಜೈಲು ಸಿಬ್ಬಂದಿ ನೀಡಿದ ಚಹಾವನ್ನು ಕುಡಿದು ರಿಲ್ಯಾಕ್ಸ್ ಆಗಿದ್ದು, ದಿನಪತ್ರಿಕೆ ಓದಿ ವಿದ್ಯಮಾನಗಳ ಕಡೆ ಕಣ್ಣಾಡಿಸಿದ್ದಾರೆ.

ಜೈಲಿಗೆ ಬಂದ ದಿನದಿಂದ ಮೌನಕ್ಕೆ ಜಾರಿದ್ದ ರೇವಣ್ಣ, ಆಪ್ತರ ಭೇಟಿ ವೇಳೆ ಕಣ್ಣೀರು ಹಾಕಿ ನೋವನ್ನು ಹೇಳಿಕೊಳ್ಳುತ್ತಿದ್ದರು. ಆರು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸಿರುವ ಅವರಿಗೆ ನ್ಯಾಯಾಲಯ ಕೊನೆಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಇಂದು ರೇವಣ್ಣ ಅವರು ಪರಪ್ಪನ ಅಗ್ರಹರ ‌ಜೈಲಿನಿಂದ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ, ಜೆಡಿಎಸ್ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲು ಬಳಿ ಸೇರುವ‌ ಸಾಧ್ಯತೆ ಇದೆ. ಹೀಗಾಗಿ ಜೈಲಿನ ರಸ್ತೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಇಬ್ಬರು ಎಸಿಪಿ, 6 ಜನ ಇನ್ಸ್ಪೆಕ್ಟರ್, 15 ಜನ‌ ಸಬ್ ಇನ್ಸ್ಪೆಕ್ಟರ್ ಸೇರಿ 200 ಸಿಬ್ಬಂದಿಯಿಂದ‌ ಭದ್ರತೆ ಒದಗಿಸಲಾಗಿದೆ. 12 ಗಂಟೆ ಒಳಗೆ ಕೋರ್ಟ್ ‌ಜಾಮೀನು ಪ್ರಕ್ರಿಯೆ ಮುಗಿಸಿ ರೇವಣ್ಣ ಪರ ವಕೀಲರು ಜಾಮೀನು ‌ಪ್ರತಿ ಪಡೆಯಲಿದ್ದು, 1‌ ಗಂಟೆಯೊಳಗೆ ಜಾಮೀನು ‌ಪ್ರತಿಯನ್ನು ಜೈಲು ತಲುಪಿಸುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ.

ಎಚ್.ಡಿ. ರೇವಣ್ಣಗೆ ಜಾಮೀನು ಸಿಗುವುದಕ್ಕೆ ಕಾರಣಗಳೇನು?

  • ರೇವಣ್ಣ ಅವರೇ ಕಿಡ್ನ್ಯಾಪ್ ಮಾಡಿಸಿದ್ದು ಎನ್ನುವುದಕ್ಕೆ ಸಾಕ್ಷಿ ಇಲ್ಲ.
  • ಸಿಆರ್‌ಪಿಸಿ ಅಡಿ ಸಂತ್ರಸ್ತೆ ನೀಡಿದ್ದ ಹೇಳಿಕೆಯಲ್ಲೂ ಪ್ರಸ್ತಾಪ ಇಲ್ಲ.
  • ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಸಾಕ್ಷಿ ಒದಗಿಸಲು ಎಸ್‌ಐಟಿ ವಿಫಲವಾಗಿದೆ.
  • ಎಚ್‌.ಡಿ. ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್ ಅನ್ನಲು ಸಾಕ್ಷಿ ಇಲ್ಲ.

ರೇವಣ್ಣ ಅವರಿಗೆ ಏಕೆ ಜಾಮೀನು ಕೊಡಲಾಗುತ್ತಿದೆ ಎಂಬುದಾಗಿ ಈ ಮೇಲಿನ ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಧೀಶರು ಸ್ಪಷ್ಟವಾಗಿ ಆದೇಶಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

8 ಷರತ್ತುಗಳನ್ನು ವಿಧಿಸಿ ಬೇಲ್ ಕೊಟ್ಟ ಕೋರ್ಟ್!

  1. 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್‌ ಕೊಡಬೇಕು
  2. ಇಬ್ಬರ ಶ್ಯೂರಿಟಿಯನ್ನು ಒದಗಿಸಿಕೊಡಬೇಕು
  3. ಯಾವ ಕಾರಣಕ್ಕೂ ದೇಶ ಬಿಟ್ಟು ಹೋಗಬಾರದು
  4. ಕೇಸ್ ಆಗಿರುವ ಕೆ.ಆರ್.ನಗರಕ್ಕೆ ಹೋಗಬಾರದು
  5. ಎಸ್‌ಐಟಿ ತನಿಖೆಗೆ ಸೂಕ್ತ ಸಹಕಾರ ನೀಡಲೇಬೇಕು
  6. ಯಾವುದೇ ರೀತಿಯ ಸಾಕ್ಷ್ಯ ನಾಶ ಮಾಡಬಾರದು
  7. ಪಾಸ್ ಪೋರ್ಟ್ ಅನ್ನು ಕೋರ್ಟ್‌ಗೆ ಸಲ್ಲಿಸಬೇಕು.
  8. ನ್ಯಾಯಾಲಯದ ಅನುಮತಿ ಇಲ್ಲದೇ ರಾಜ್ಯದಿಂದ ಹೊರಹೋಗುವಂತಿಲ್ಲ.

ಸಂತ್ರಸ್ತೆ ಹೇಳಿಕೆಯ ವಿಡಿಯೊ ಪ್ರಸ್ತಾಪ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ವಾದ – ಪ್ರತಿವಾದಗಳು ನಡೆದಿವೆ. ಕಲಾಪ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೋ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದರು.

ಮೊದಲು ತನಿಖಾ ವರದಿ ಕೊಡಿ ಎಂದ ನ್ಯಾಯಾಧೀಶರು

ಈ ವೇಳೆ ಮಧ್ಯಪ್ರವೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯ ಇನ್‌ವೆಸ್ಟಿಗೇಷನ್‌ ರಿಪೋರ್ಟ್ ಅನ್ನು ಮೊದಲು ಸಲ್ಲಿಸಿ. ಕಿಡ್ನ್ಯಾಪ್ ಕೇಸ್‌ ಸಂಬಂಧ ಏನೇನು ವಿಚಾರಗಳು ನಡೆದಿವೆ ಎಂಬುದನ್ನು ತಿಳಿಯಬೇಕು ಎಂದು ಎಸ್‌ಪಿಪಿಗೆ ಸೂಚಿಸಿದರು. ಆಗ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್‌, ತನಿಖಾ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ಇನ್‌ವೆಸ್ಟಿಗೇಷನ್ ರಿಪೋರ್ಟ್‌ ಅನ್ನು ಸಲ್ಲಿಸಲಾಯಿತು. ಇದಕ್ಕೆ ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ರಿಂದ ಆಕ್ಷೇಪ ವ್ಯಕ್ತವಾಯಿತು. ಬಳಿಕ ತಮಗೂ ಒಂದು ಕಾಪಿ ನೀಡಲು ಕೇಳಿದ್ದು, ಅವರಿಗೂ ಒಂದು ಪ್ರತಿಯನ್ನು ನೀಡಲಾಯಿತು.

ಸಿ.ವಿ.ನಾಗೇಶ್ ವಾದ

ಇಬ್ಬರೂ ಎಸ್‌ಪಿಪಿಗಳ ವಾದ ಮಂಡನೆ ನಂತರ ಸಿ.ವಿ. ನಾಗೇಶ್ ವಾದವನ್ನು ಆರಂಭಿಸಿದರು. ಏಪ್ರಿಲ್ 29ಕ್ಕೆ ಕಿಡ್ನ್ಯಾಪ್ ಮಾಡಿದರೆ, ದೂರು ಕೊಡಲು ತಡ ಯಾಕೆ ಮಾಡಿದರು? ಸಂತ್ರಸ್ತ ಮಹಿಳೆ ಎಚ್.ಡಿ.ರೇವಣ್ಣ ಅವರ ಸಂಬಂಧಿಯಾಗಿದ್ದಾರೆ. ಸುಮಾರು ವರ್ಷ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿದ್ದವರನ್ನು ಯಾಕೆ ಕಿಡ್ನ್ಯಾಪ್ ಮಾಡಬೇಕು? ಮನೆ ಕೆಲಸ ಮಾಡುತ್ತಿದ್ದರಲ್ಲ, ಕರೆದುಕೊಂಡು ಬನ್ನಿ ಅಂದಿರಬಹುದು. ಇಲ್ಲಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ರೇವಣ್ಣ ಅರೆಸ್ಟ್ ಆದ ದಿನವೇ ಸಂತ್ರಸ್ತೆ ಮಹಿಳೆ ಹುಣಸೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆ ಆಗಿದ್ದರು. ಸಂತ್ರಸ್ತ ಮಹಿಳೆ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರ ಆರೋಪಿಸಿದ್ದಾರೆ. ರೇವಣ್ಣ ವಿರುದ್ಧ ಸಂತ್ರಸ್ತೆ ಮಹಿಳೆ ಯಾವುದೇ ಆರೋಪವನ್ನು ಮಾಡಿಲ್ಲ ಎಂದು ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.

ಸಂತ್ರಸ್ತ ಮಹಿಳೆಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಆರೋಪದ ಬಗ್ಗೆ ವಾದ ಮಂಡಿಸಿದ ಸಿ.ವಿ. ನಾಗೇಶ್‌, ಸಂತ್ರಸ್ತೆಯು ಸಿಆರ್‌ಪಿಸಿ 161 ಅಡಿಯಲ್ಲಿ ಹೇಳಿಕೆ ನೀಡುವಾಗ, ಕೇವಲ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಅಂತಾ ಆರೋಪ ಮಾಡಿದ್ದಾಳೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಎರಡು ರಿಮ್ಯಾಂಡ್‌ ಅರ್ಜಿ ಸಲ್ಲಿಕೆಯಾಗಿದೆ. ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಮಹಿಳೆಯ ಮಗನಿಗೆ ಹೇಗೆ ಗೊತ್ತಾಯ್ತು? ಅದು ಊಹೆಯಷ್ಟೇ. ಸಂತ್ರಸ್ತೆಯ ಮಗನಿಗೆ ಯಾರೂ ಕಾಲ್ ಮಾಡಿ ಡಿಮ್ಯಾಂಡ್ ಮಾಡಿಲ್ಲ. ಇನ್ನು ಸಂತ್ರಸ್ತ ಮಹಿಳೆಯನ್ನು ಅಂದು ಹುಣಸೂರಿನ ಬಳಿ ರಕ್ಷಣೆ ಮಾಡಲಾಗಿದೆ. ಆಪ್ತ ಸಮಾಲೋಚನೆ ಮಾಡಿ, ಆಕೆಯನ್ನು ಸುರಕ್ಷಿತ ಕೊಠಡಿಯಲ್ಲಿಡಲಾಗಿದೆ. ಈ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಲ್ಲ ಏಕೆ? ಇಲ್ಲಿಯ ತನಕ ರೇವಣ್ಣ ವಿರುದ್ಧ ಯಾವುದೇ ಸಾಕ್ಷಿಯನ್ನೂ ಸಂಗ್ರಹಿಸಿಲ್ಲ, ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಿಲ್ಲ. ಸಂತ್ರಸ್ತ ಮಹಿಳೆಯನ್ನು ಕೇವಲ ಆಪ್ತ ಸಮಾಲೋಚನೆಯಲ್ಲಿ ಇರಿಸಿದ್ದಾರೆ ಎಂದು ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಸಂತ್ರಸ್ತ ಮಹಿಳೆಯನ್ನು ಹುಣಸೂರಿನ ತೋಟದಿಂದ ರಕ್ಷಣೆ ಮಾಡಿದರಾ? ಎಸ್‌ಐಟಿ ಎಲ್ಲಿಂದ ಮಹಿಳೆಯನ್ನು ಕರೆತಂದರು? ಅವರ ಸಂಬಂಧಿಕರ ಮನೆಯಿಂದ ಸಂತ್ರಸ್ತೆಯನ್ನು ಕರೆ ತಂದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಎರಡು ಕಡೆ ರೆಕಾರ್ಡ್ ಆಗಿದೆ. ಒಂದು ಕಡೆ ಫೋಟೋ ಶಾಪ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆ ತರಕಾರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ. ಅನುಮತಿ ನೀಡಿದರೆ ಸೆರೆಯಾಗಿರುವ ದೃಶ್ಯವನ್ನು ತೋರಿಸಲು ನಾವು ಸಿದ್ಧ. ಈಗ ನ್ಯಾಯಾಲಯದಲ್ಲಿಯೇ ಪ್ಲೇ ಮಾಡುತ್ತೇವೆ. ಸ್ಪೆಷಲ್ ಇನ್‌ವೆಸ್ಟಿಗೇಷನ್ ಟೀಮ್ ವಿರುದ್ಧವೇ ಸಿ.ವಿ. ನಾಗೇಶ್ ಆರೋಪಿಸಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿಯವರೇ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಆದರೆ, ಎಸ್‌ಪಿಪಿಯವರು ಸಂತ್ರಸ್ತೆ ಹೇಳಿಕೆಯನ್ನು ಟ್ಯಾಂಪರಿಂಗ್ ಆಗಿದೆ ಎಂದು ಹೇಳಿದ್ದಾರೆ. ವೈರಲ್ ಆದ ಸ್ಪಷ್ಟನೆ ವಿಡಿಯೊದಲ್ಲಿ ಸಂತ್ರಸ್ತೆಯೇ ಹೇಳಿಕೊಂಡಿದ್ದಾರೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದಿದ್ದಾರೆ. ನಮ್ಮ ಕುಟುಂಬಕ್ಕೆ ತೊಂದರೆಯಾದರೆ ಅವರೇ ಹೊಣೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಬಂಧಿಕರ ಮನೆಯಲ್ಲಿದ್ದೇನೆ. ಬೇಗ ಬರುತ್ತೇನೆ ಎಂದೂ ಹೇಳಿದ್ದಾರೆ. ಯಾರೂ ಬೆದರಿಕೆ ಹಾಕಿಲ್ಲ, ಬಲವಂತವಾಗಿಯೂ ಕರೆದೊಯ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗೆಲ್ಲಾ ಸಂತ್ರಸ್ತೆಯೇ ವಿಡಿಯೊ ಮೂಲಕ ಹೇಳಿದ್ದಾರೆ. ಹಾಗಾಗಿ ಕಿಡ್ನ್ಯಾಪ್ ಹೇಗೆ ಆಗುತ್ತದೆ. ಈ ಕಾರಣಕ್ಕಾಗಿ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಸಿ.ವಿ. ನಾಗೇಶ್‌ ಕೋರಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಚುನಾವಣಾ ತಕರಾರು ಅರ್ಜಿ ತರುವುದು ಬೇಡ. ಎಸ್‌ಪಿಪಿ ವಾದದ ಅಂಶಗಳನ್ನು ಆಕ್ಷೇಪಿಸಿ ರೇವಣ್ಣ ಪರ ವಕೀಲರು ವಾದ ಮಂಡಿಸಿದರು. ಎಚ್.ಡಿ.ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾಗಿಲ್ಲ. ಹಿಂದಿನ ಕೇಸ್‌ಗಳು ಸಾಬೀತಾಗಿದ್ದರೆ ಯಾಕೆ ಎಲ್ಲವೂ ಬಿ ರಿಪೋರ್ಟ್ ಆಗುತ್ತಿತ್ತು? ಎಂದು ಪ್ರಶ್ನೆ ಮಾಡಿದರು.

ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಲೋಪವೆಸಗಿದೆ. ಅದರಲ್ಲಿ ಸಂತ್ರಸ್ತೆಯ ಹೇಳಿಕೆ ಒಂದು ಪ್ಯಾರಾ ಇದೆ. ಅದು ಬಿಟ್ಟು ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಆರೋಪಿ ಹೇಳಿಕೆಯೇ ಇದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಒಂದು ಪ್ಯಾರಾ ಬಿಟ್ಟರೆ ಬೇರೆ ಇಲ್ಲವೇ ಇಲ್ಲ. ಯಾವಾಗಲೂ ಹೇಳಿಕೆ ದಾಖಲು ಮಾಡಿಕೊಳ್ಳುವುದೇ ಎಸ್‌ಐಟಿ ಕೆಲಸನಾ? ಸಂತ್ರಸ್ತೆ ಏನು ಹೇಳ್ತಾರೆ? ಏನು ಹೇಳಲ್ಲ ಅಂತಾ ಹೇಳಿಕೆ ದಾಖಲಾಗಬೇಕು. ಆಕೆ ಎಸ್‌ಐಟಿ ಸುಪರ್ದಿಯಲ್ಲಿರುವಾಗ ಏನನ್ನೂ ಮಾಡಿಲ್ಲ. ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿರುವಂತೆ ಯಾವುದೇ ಸಾಕ್ಷಿ ಸಂಗ್ರಹಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ ಎಂದು ನಾಗೇಶ್ ಹೇಳಿದರು.

ಇದನ್ನೂ ಓದಿ: Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Continue Reading

ಪ್ರಮುಖ ಸುದ್ದಿ

Hoarding Collapse: ಹೋರ್ಡಿಂಗ್‌ ಕುಸಿತದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿಕೆ, ಇನ್ನಷ್ಟು ಜನ ಅದರಡಿಯಲ್ಲಿ

Hoarding Collapse: ಮುಂಬಯಿ ಮಹಾನಗರಪಾಲಿಕೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಜಾಹೀರಾತು ಫಲಕ ಹಾಕಲಾಗಿದೆ ಎಂದು ಬಿಎಂಸಿ ಹೇಳಿದೆ. ಮುಂಬೈ ಪೊಲೀಸರು ಐಪಿಸಿ 304, 338, 337, ಮತ್ತು 34ರ ಅಡಿಯಲ್ಲಿ ಮಾಲೀಕ ಭವೇಶ್ ಭಿಡೆ ಮತ್ತು ಇತರರ ವಿರುದ್ಧ ಪಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

VISTARANEWS.COM


on

mumbai hoarding collapse
Koo

ಮುಂಬಯಿ: ಮಂಗಳವಾರ ಮುಂಜಾನೆ ಮುಂಬಯಿಯಲ್ಲಿ ಬೃಹತ್ ಹೋರ್ಡಿಂಗ್ ಕುಸಿದ (Mumbai Hoarding Collapse) ಪರಿಣಾಮ ಅದರಡಿಗೆ ಸಿಕ್ಕಿ ಸತ್ತವರ ಸಂಖ್ಯೆ (Death toll) 14ಕ್ಕೆ ಏರಿದೆ. ಸಿಕ್ಕಿಬಿದ್ದವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸುತ್ತಿದೆ. ಘಟನೆಯಲ್ಲಿ ಕನಿಷ್ಠ 74 ಜನರು ಗಾಯಗೊಂಡಿದ್ದಾರೆ.

ಕುಸಿದ ಜಾಹೀರಾತು ಫಲಕದ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ನಾಲ್ಕು ಶವಗಳು ಅವಶೇಷಗಳೊಳಗೆ ಇವೆ ಎಂದು NDRF ಇನ್ಸ್‌ಪೆಕ್ಟರ್ ಗೌರವ್ ಚೌಹಾಣ್ ತಿಳಿಸಿದ್ದಾರೆ. “ನಾವು ಶವಗಳನ್ನು ಪತ್ತೆ ಮಾಡಿದ್ದೇವೆ. ಆದರೆ ಅಡಿಯಲ್ಲಿ ಪೆಟ್ರೋಲ್ ಬಂಕ್‌ ಇರುವುದರಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಪರಿಸ್ಥಿತಿ ಅಪಾಯಕಾರಿಯಾಗಬಹುದು” ಎಂದು ಅವರು ಹೇಳಿದರು.

ಮುಂಬೈನ ಘಾಟ್‌ಕೋಪರ್‌ನಲ್ಲಿ ನಡೆದ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಸಂತಾಪ ಸೂಚಿಸಿದ್ದು, ಹೋರ್ಡಿಂಗ್ ಕುಸಿತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಮುಂಬಯಿಯಲ್ಲಿ ಏನಾಯಿತು?

ಮುಂಬೈನ ಘಾಟ್‌ಕೋಪರ್‌ನಲ್ಲಿ ಸೋಮವಾರ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಿಂದಾಗಿ 70 ಮೀಟರ್ ಎತ್ತರದ ಜಾಹೀರಾತು ಫಲಕ ಕುಸಿದಿದೆ. ಘಾಟ್‌ಕೋಪರ್‌ನ ಚೆಡ್ಡಾನಗರ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಅಕ್ರಮ ಹೋರ್ಡಿಂಗ್ ಬಿದ್ದಿದೆ. ಸೋಮವಾರ ಸಂಜೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, 64 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಲ್ಲಿ ಇನ್ನೂ ಸಿಲುಕಿರುವ ದೇಹಗಳನ್ನು ಹೊರತೆಗೆಯಲು ಎನ್‌ಡಿಆರ್‌ಎಫ್ ರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ಅಗೆಯುವ ಯಂತ್ರಗಳೊಂದಿಗೆ ನಡೆಸಿತು.

ಇನ್ನೂ 20ರಿಂದ 30 ಜನರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ ಎಂದು ಬಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಪೆಟ್ರೋಲ್ ಪಂಪ್‌ನಲ್ಲಿ ಸಂಭವಿಸಿದ ಕುಸಿತದಿಂದಾಗಿ ಅವಶೇಷಗಳನ್ನು ತೆಗೆದುಹಾಕುವಲ್ಲಿ NDRF ಸಮಸ್ಯೆಗಳನ್ನು ಎದುರಿಸುತ್ತಿದೆ, ಇದು ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಬಹುದು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮೃತರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದಾಗಿ ಘೋಷಿಸಿದರು. ಪಾಲಿಕೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಜಾಹೀರಾತು ಫಲಕ ಹಾಕಲಾಗಿದೆ ಎಂದು ಬಿಎಂಸಿ ಹೇಳಿದೆ. ಮುಂಬೈ ಪೊಲೀಸರು ಐಪಿಸಿ 304, 338, 337, ಮತ್ತು 34ರ ಅಡಿಯಲ್ಲಿ ಮಾಲೀಕ ಭವೇಶ್ ಭಿಡೆ ಮತ್ತು ಇತರರ ವಿರುದ್ಧ ಪಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜೀವಹಾನಿಗೆ ಸಂತಾಪ ಸೂಚಿಸಿರುವ ರಾಷ್ಟ್ರಪತಿ ಮುರ್ಮು, “ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಹೋರ್ಡಿಂಗ್ ಕುಸಿದು ಹಲವಾರು ಸಾವುನೋವುಗಳ ಸುದ್ದಿ ಅತ್ಯಂತ ದುಃಖಕರವಾಗಿದೆ. ನಾನು ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಗಾಯಗೊಂಡವರ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಯಶಸ್ಸಿಗೆ ಹಾರೈಸುತ್ತೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Dust Storm : ಧೂಳು ಗಾಳಿಗೆ ಹೋರ್ಡಿಂಗ್ ಕುಸಿದು ಮೂವರ ಸಾವು, 59 ಮಂದಿಗೆ ಗಾಯ

Continue Reading

ಅಂಕಣ

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

ಧವಳ ಧಾರಿಣಿ ಅಂಕಣ: ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು.

VISTARANEWS.COM


on

king dasharatha dhavala dharini
Koo

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

dhavala dharini by Narayana yaji

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

dhavala dharini king dasharatha

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Continue Reading

ದೇಶ

Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಮೇ 14ರಂದು ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಮೊದಲು ಅಂದರೆ ಸೋಮವಾರ (ಮೇ 13) ಸಂಜೆ ವಾರಾಣಸಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿದರು. ಆ ಮೂಲಕ ತಮ್ಮ ಲೋಕಸಭೆ ಕ್ಷೇತ್ರದಲ್ಲಿ ಮೋದಿ ಅವರು ಶಕ್ತಿ ಪ್ರದರ್ಶನ ಮಾಡಿದರು. ಇನ್ನು, ಮಂಗಳವಾರ ಮೋದಿ ಅವರು ವಾರಾಣಸಿಯಲ್ಲಿ ಯಾವೆಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ? ಇಲ್ಲಿದೆ ಮಾಹಿತಿ.

VISTARANEWS.COM


on

Narendra Modi
Koo

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ (Varanasi) ಲೋಕಸಭೆ ಕ್ಷೇತ್ರದಿಂದ ಸತತ ಮೂರನೇ ಬಾರಿ ಸ್ಪರ್ಧಿಸುತ್ತಿರುವ (Lok Sabha Election) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ (ಮೇ 14) ನಾಮಪತ್ರ ಸಲ್ಲಿಸಲಿದ್ದಾರೆ. ಸೋಮವಾರ (ಮೇ 13) ಬೃಹತ್‌ ರೋಡ್‌ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿರುವ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಕೆ ಜತೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಬೆಳಗ್ಗೆ 10.45ಕ್ಕೆ ಕಾಲಭೈರವ ದೇಗುಲಕ್ಕೆ ಭೇಟಿ

ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೂ ಮೊದಲು ಬೆಳಗ್ಗೆ 10.45ಕ್ಕೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಮೋದಿ ಅವರು ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ಗೆಲುವು, ಪಕ್ಷ ಸಂಘಟನೆ ಸೇರಿ ಹಲವು ವಿಷಯಗಳ ಕುರಿತು ನಾಯಕರು ಹಾಗೂ ಕಾರ್ಯಕರ್ತರ ಜತೆ ಮೋದಿ ಚರ್ಚಿಸಲಿದ್ದಾರೆ.

ವಾರಾಣಸಿಯಲ್ಲಿ ಮೋದಿ ರೋಡ್‌ ಶೋ ಝಲಕ್

11.40ಕ್ಕೆ ನಾಮಪತ್ರ ಸಲ್ಲಿಕೆ

ಮಂಗಳವಾರ ಬೆಳಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದೆ. ಇದು ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅವರು ಸೋಮವಾರ ರೋಡ್‌ ಶೋ ನಡೆಸಿ ಜನರ ಗಮನ ಸೆಳೆದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿಯ ಕೆಲ ನಾಯಕರು ಮೋದಿ ಅವರಿಗೆ ಸಾಥ್‌ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರೋಡ್‌ ಶೋ ಬಳಿಕ ಅವರು ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಇದನ್ನೂ ಓದಿ: Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Continue Reading
Advertisement
Prajwal Revanna Case Devaraje Gowda
ಕ್ರೈಂ10 mins ago

Prajwal Revanna Case: ವಕೀಲ ದೇವರಾಜೇಗೌಡ ಇಂದು ಪೊಲೀಸ್‌ ಕಸ್ಟಡಿಗೆ

Federation Cup
ಕ್ರೀಡೆ17 mins ago

Federation Cup: ಫೆಡರೇಷನ್ ಕಪ್‌ ಫೈನಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ನೀರಜ್ ಚೋಪ್ರಾ

Israel-Hamas Conflict
ವಿದೇಶ24 mins ago

Israel-Hamas Conflict: ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

IPL 2024 Points Table
ಕ್ರೀಡೆ41 mins ago

IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

jayanagar murder case
ಕ್ರೈಂ45 mins ago

Murder Case: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ

Viral News
ದೇಶ1 hour ago

Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

HD Revanna Bail
ಪ್ರಮುಖ ಸುದ್ದಿ2 hours ago

HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Kalki 2898 AD
ಸಿನಿಮಾ2 hours ago

Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

mumbai hoarding collapse
ಪ್ರಮುಖ ಸುದ್ದಿ2 hours ago

Hoarding Collapse: ಹೋರ್ಡಿಂಗ್‌ ಕುಸಿತದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿಕೆ, ಇನ್ನಷ್ಟು ಜನ ಅದರಡಿಯಲ್ಲಿ

Vertigo Problem
ಆರೋಗ್ಯ3 hours ago

Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ15 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ15 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ15 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ16 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ16 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ22 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌