Kalki 2898 AD: ಮೇ 22ಕ್ಕೆ ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ; ಕಲ್ಕಿ ಚಿತ್ರದ 5ನೇ ಸೂಪರ್ ಸ್ಟಾರ್ ಯಾರು? - Vistara News

ಪ್ರಮುಖ ಸುದ್ದಿ

Kalki 2898 AD: ಮೇ 22ಕ್ಕೆ ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ; ಕಲ್ಕಿ ಚಿತ್ರದ 5ನೇ ಸೂಪರ್ ಸ್ಟಾರ್ ಯಾರು?

Kalki 2898 AD: ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ, ಯಂಗ್ ರೆಬೆಲ್‌ ಸ್ಟಾರ್ ಪ್ರಭಾಸ್‌ ಅಭಿನಯದ ‘ಕಲ್ಕಿ 2898 AD’ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

VISTARANEWS.COM


on

Kalki 2898 AD
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾನ್‍ ಇಂಡಿಯಾ ಸೂಪರ್‌ ಸ್ಟಾರ್‌ ಪ್ರಭಾಸ್‍ (Actor Prabhas) ಅಭಿನಯದ ಕಲ್ಕಿ 2898 AD’ (Kalki 2898 AD) ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ. ಈಗ ಚಿತ್ರದ ಐದನೇ ಸೂಪರ್‌ ಸ್ಟಾರ್ ಅನ್ನು ಮೇ 22ರಂದು ಅನಾವರಣಗೊಳಿಸುವುದಾಗಿ ಚಿತ್ರತಂಡ ಘೋಷಿಸಿದೆ.

ಈ ಐದನೇ ಸೂಪರ್‌ ಸ್ಟಾರ್‌ ಯಾರು? ಈ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯನಂತೆ. ಈ ಗೆಳೆಯನ ಕುರಿತು ಯುಟ್ಯೂಬ್‍ನ ವೈಜಯಂತಿ ನೆಟ್‍ವರ್ಕ್ ಚಾನಲ್‍ನಲ್ಲಿ ಹೊಸ ವೀಡಿಯೊ ಬಿಡುಗಡೆ ಮಾಡಲಾಗಿದೆ.

‘From Skratch: Building A Superstar’ ಹೆಸರಿನ ಈ ವಿಡಿಯೊದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ.

ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡಪ್‍ ನೀಡಲಾಗಿದ್ದು, ಈ ಐದನೇ ಸೂಪರ್‌ ಸ್ಟಾರ್ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವಿಡಿಯೊದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇಷ್ಟಕ್ಕೂ ಬುಜ್ಜಿ ಯಾರು? ಉತ್ತರಕ್ಕಾಗಿ ಮೇ 22ರವರೆಗೂ ಕಾಯಬೇಕು.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‌ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಇದನ್ನೂ ಓದಿ | Kalki 2898 AD: ಪ್ರಭಾಸ್‌ ಜೀವನದಲ್ಲಿ ಎಂಟ್ರಿ ಆದ ವ್ಯಕ್ತಿ ಇವರೇನಾ? ಏನದು ʻಬುಜ್ಜಿʼ?

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

Kalki 2898 AD
Kalki 2898 AD

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ʼಕಲ್ಕಿ 2898 ಎಡಿʼ (Kalki 2898 AD) ಕೂಡ ಒಂದು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಇದು ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇವರ ಜತೆಗೆ ಘಟಾನುಘಟಿ ಕಲಾವಿದರಾದ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ (Amitabh Bachchanಮತ್ತು ಕಮಲ್‌ ಹಾಸನ್‌ (Kamal Haasan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್‌ ಹೊರ ಬಿದ್ದಿದ್ದು, ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆ ಸ್ವತಃ ಡಬ್‌ ಮಾಡಲಿದ್ದಾರೆ ಎನ್ನಲಾಗಿದೆ.

ವಿವಿಧ ಭಾಷೆಗಳಲ್ಲಿ ʼಕಲ್ಕಿ 2898 ಎಡಿʼ ಸಿನಿಮಾ ತೆರೆಗೆ ಬರಲಿದೆ. ಈ ಪೈಕಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ದೀಪಿಕಾ ಅವರೇ ಡಬ್‌ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2006ರಲ್ಲಿ ತೆರೆಕಂಡ ಉಪೇಂದ್ರ ಅಭಿನಯದ ಕನ್ನಡದ ʼಐಶ್ವರ್ಯಾʼ ಚಿತ್ರದ ಮೂಲಕ ದೀಪಿಕಾ ಬಣ್ಣದ ಲೋಕ ಪ್ರವೇಶಿಸಿದ್ದರು. ಅದರ ಬಳಿಕ ಅವರು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರು ಕನ್ನಡದಲ್ಲಢ ಡಬ್‌ ಮಾಡಿರುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಜೂನ್‌ 27ರಂದು ಬಿಡುಗಡೆ

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಬಹು ತಾರಾಗಣ ಹೊಂದಿರುವ ಚಿತ್ರ ಜೂನ್ 27ರಂದು ತೆರೆಗೆ ಬರಲಿದೆ. ಮೊದಲಿಗೆ ಮೇ 9ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಚುನಾವಣೆಯ ಕಾರಣ ಸಿನಿಮಾ ರಿಲೀಸ್‌ ಡೇಟ್‌ವನ್ನು ಮುಂದೂಡಲಾಗಿತ್ತು. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯದಲ್ಲಿ ನಿರತವಾಗಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ಮೊದಲೇ ಒಪ್ಪಂದ ಮಾಡಿಕೊಂಡಂತೆ ಈ ತಿಂಗಳಲ್ಲಿ ಪ್ರೊಮೊಷನ್‌ ನಡೆಸಿಕೊಂಡಲಿದ್ದಾರೆ. ಅದರ ಭಾಗವಾಗಿ ವಿವಿಧ ಮಾಧ್ಯಮಗಳು ಅವರ ಸಂದರ್ಶನವನ್ನು ಚಿತ್ರೀಕರಿಸಲು ತಯಾರಿ ನಡೆಸಿವೆ ಎನ್ನಲಾಗಿದೆ. ಇದರ ಜತೆಗೆ ಡಬ್ಬಿಂಗ್‌ ಅನ್ನೂ ಅವರು ಪೂರ್ಣಗೊಳಿಸಲಿದ್ದಾರೆ. ಸೆಪ್ಟಂಬರ್‌ನಲ್ಲಿ ಮಗು ಜನಿಸುವ ನಿರೀಕ್ಷೆ ಇದ್ದು, ಬಾಕಿ ಇರುವ ಸಿನಿಮಾ ಚಟುವಟಿಕೆಗಳನ್ನೆಲ್ಲ ನಡೆಸಿ ದೀಪಿಕಾ ಜೂನ್‌ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಅಶ್ವತ್ಥಾಮನಾಗಿ ಗಮನ ಸೆಳೆದ ಅಮಿತಾಭ್‌

ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿರುವ ʼಕಲ್ಕಿ 2898 ಎಡಿʼ ಚಿತ್ರದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಲುಕ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಏ. 21ರಂದು ಚಿತ್ರತಂಡ ಅಮಿತಾಭ್‌ ಅವರ ಪಾತ್ರವನ್ನು ರಿವೀಲ್‌ ಮಾಡಿದೆ. ಜತೆಗೆ ಶಿವರಾತ್ರಿಯಂದು ಪ್ರಭಾಸ್‌ ಅವರ ಫಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿತ್ತು. ಇದು ಕೂಡ ಅಭಿಮಾನಿಗಳನ್ನು ಆಕರ್ಷಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Kalki 2898 – AD: ʻಪ್ರಾಜೆಕ್ಟ್‌ ಕೆʼ ಸಿನಿಮಾ ಟೈಟಲ್‌ ರಿವೀಲ್‌; ಪ್ರಭಾಸ್‌, ದೀಪಿಕಾ, ಅಮಿತಾಭ್‌ ಲುಕ್‌ ಔಟ್‌!

ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

CM Siddaramaiah: ವಿನಾಕಾರಣ ಕೇಂದ್ರವನ್ನು ದೂರಬೇಡಿ: ರಾಜ್ಯ ಸಂಸದರ ಸಭೆಯಲ್ಲಿ ಸಿಎಂಗೆ ಎನ್‌ಡಿಎ ಪಾಠ

CM Siddaramaiah: ನಿನ್ನೆ ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದಿಂದ ನೂತನವಾಗಿ ಆಯ್ಕೆಯಾದ ಲೋಕಸಭೆ ಹಾಗೂ ರಾಜ್ಯಸಭೆ ಸಂಸದರ ಸಭೆ ನಡೆಸಲಾಯಿತು.

VISTARANEWS.COM


on

mp meet cm siddaramaiah
Koo

ಹೊಸದಿಲ್ಲಿ: ʼಕೇಂದ್ರ ಸರ್ಕಾರ (Central Govt) ರಾಜ್ಯಕ್ಕೆ ಏನೂ ಮಾಡಿಲ್ಲ, ಬಿಜೆಪಿ (BJP) ನಮಗೆ ಸಹಾಯ ಮಾಡ್ತಿಲ್ಲ, ರಾಜ್ಯದ ಬಗ್ಗೆ ನಮ್ಮ ರಾಜ್ಯದ ಬಿಜೆಪಿ ಸಂಸದರಿಗೇ ಕಾಳಜಿ ಇಲ್ಲ ಅನ್ನುವ ಮಾತುಗಳನ್ನು ಪದೇ ಪದೆ ಆಡುವುದನ್ನು ಬಿಡಿʼ ಎಂದು ಎನ್‌ಡಿಎ (NDA) ಸಂಸದರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪಾಠ ಹೇಳಿದ್ದಾರೆ.

ನಿನ್ನೆ ಹೊಸದಿಲ್ಲಿಯಲ್ಲಿ ಸಿಎಂ ನೇತೃತ್ವದಲ್ಲಿ ನಡೆದ, ರಾಜ್ಯದ ನೂತನ ಸಂಸದರ ಸಭೆಯಲ್ಲಿ ಈ ಕುರಿತು ಮಾತುಗಳು ವಿನಿಮಯಗೊಂಡವು. ರಾಜ್ಯದ ಅಭಿವೃದ್ಧಿಗೆ ನಾವು ಬದ್ದರಿದ್ದೇವೆ. ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ನಾವು ಸಹ ಸಹಕಾರ ನೀಡ್ತೇವೆ. ಹಾಗಂತ ಎಲ್ಲಾ ವಿಚಾರಗಳಿಗೂ ಸಹ ಕೇಂದ್ರ ಸರ್ಕಾರದ ತಪ್ಪು ಎನ್ನುವುದು ಸರಿ ಅಲ್ಲ. ಒಂದು ಯೋಜನೆ ಯಶಸ್ವಿಯಾಗಿ ಜಾರಿ ಆಗ್ಬೇಕು ಅಂದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಬ್ಬರೂ ಸಹಕರಿಸಬೇಕು. ನೀವು ಏನೂ ಮಾಡದೆ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು NDA ಸಂಸದರು ಕಾಂಗ್ರೆಸ್‌ಗೆ ಚಾಟಿ ಬೀಸಿದರು.

ರೈಲ್ವೆ ಯೋಜನೆ ಬಾಕಿ ಇದೆ, ರಾಷ್ಟ್ರೀಯ ಹೆದ್ದಾರಿಗಳು ಆಗಿಲ್ಲ ಅಂತ ಹೇಳುವ ಮೊದಲು ಅದಕ್ಕೆ ಬೇಕಾದ ಸಹಕಾರ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ನೀಡಿದೆ ಎಂಬುದನ್ನು ಹೇಳಿ. ಸುಖಾ ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಇಲ್ಲಾ ಸಲ್ಲದ ಆರೋಪ ಮಾಡಬೇಡಿ. ಬದಲಾಗಿ, ರಾಜ್ಯಕ್ಕೆ ಬೇಕಾದ ಅನುದಾನದ ಬಗ್ಗೆ ಫಾಲೋ ಅಪ್ ಮಾಡುವ ಕೆಲಸ ಮಾಡಿ. ನಾವು ನಿಮ್ಮೊಂದಿಗೇ ಇದ್ದೇವೆ, ರಾಜ್ಯದ ಹಿತಾಸಕ್ತಿಗೇ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಸಂಸದರು ಹಾಗೂ ಸಚಿವರು ಹೇಳಿದ್ದಾರೆ.

ಯಾವುದೇ ಬಾಕಿ ಉಳಿಸಿಲ್ಲ: ನಿರ್ಮಲಾ

ಕೇಂದ್ರ ಸರಕಾರ ಬಾಕಿ ಹಣ ನೀಡಿಲ್ಲ ಎಂಬ ಸಿಎಂ ಆರೋಪಕ್ಕೆ ಸಿಎಂ ನೇತೃತ್ವದ ಸಭೆಯಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ವಿವರಣೆ ನೀಡಿದರು. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ, ನಮ್ಮ ಹಣ ನಮಗೆ ನೀಡಿಲ್ಲ, GST ದುಡ್ಡು ನಮಗೆ ಸೇರಿಲ್ಲ ಅಂತ ಎಲ್ಲರೂ ಹೇಳಿದ್ದೀರಿ. ಬರ ಪರಿಹಾರದ ಹಣ ನೀಡಿಲ್ಲ ಅಂತ ಮಾಧ್ಯಮದ ಮುಂದೆ ದಿನಂಪ್ರತಿ ಹೇಳಿದ್ದೀರಿ. ಆದರೆ ನಾವು ಯಾವುದೇ ಹಣ ಬಾಕಿ ಉಳಿಸಿಲ್ಲ. ರಾಜ್ಯಕ್ಕೆ ಪೂರಕವಾಗಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ನಿರ್ಮಲಾ ಹೇಳಿದರು.

ಬರ ಪರಿಹಾರ ಅಂತ 18 ಸಾವಿರ ಕೋಟಿ ಕೇಳಿದಾಗಲೂ ಸಹ ನಾವು ಅಗತ್ಯ ಹಣ ಬಿಡುಗಡೆ ಮಾಡಿದ್ದೇವೆ. GST ಹಣ ಸಹಿತ ನಾವು ನೀಡಿದ್ದೇವೆ. ನಿಮಗೆ ಪಕ್ಕಾ ಅಂಕಿ ಅಂಶ ಬೇಕಾದರೆ, ನಮ್ಮ ಜೊತೆ ಚರ್ಚೆಗೆ ಬನ್ನಿ. ಎಲ್ಲಾ ಅಂಕಿ ಅಂಶ ಸಮೇತ ನಾನು ನೀಡಬಲ್ಲೆ. ಅನವಶ್ಯಕವಾಗಿ ಕೇಂದ್ರದ ಮೇಲೆ ವಾಗ್ದಾಳಿ ಮಾಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯದ ಸಹಕಾರವೇ ಪ್ರಮುಖ: ಜೋಶಿ

ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದದ್ದು ಬಹಳಷ್ಟಿದೆ ಅಂತ ಯಾವಾಗಲೂ ಹೇಳೋದು ಸರಿಯಲ್ಲ. ರೈಲ್ವೆ ಯೋಜನೆ ಬಾಕಿ ಇದೆ ಅಂತ ಆರೋಪ ಮಾಡೋದು ಒಳ್ಳೇದಲ್ಲ. ಅದಕ್ಕೆ ಬೇಕಾದ ಸೌಕರ್ಯ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ವರ್ಷದ ಬಜೆಟ್‌ನಲ್ಲಿ 7524 ಕೋಟಿ ರೂ.ಗಳನ್ನ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಮೀಸಲು ಇಡಲಾಗಿದೆ. ಹುಬ್ಬಳ್ಳಿ -ಅಂಕೋಲಾ , ತುಮಕೂರು – ಚಿತ್ರದುರ್ಗ, ಧಾರವಾಡ- ಬೆಳಗಾವಿ ಸೇರಿದಂತೆ ಹಲವು ಯೋಜನೆ ಬಾಕಿ ಇದೆ. ಈ ಯೋಜನೆಗಳು ಬಾಕಿ ಉಳಿಯುವುದಕ್ಕೆ ಕೇವಲ ಕೇಂದ್ರ ಸರ್ಕಾರ ಮಾತ್ರ ಕಾರಣ ಅಲ್ಲ ಎಂದು ಸಂಸದ ಪ್ರಹ್ಲಾದ್‌ ಜೋಶಿ (Prahlad Joshi) ಗುಡುಗಿದರು.

ರೈಲ್ವೆ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಸಹ ಪ್ರಮುಖವಾಗಿರಲಿದೆ. ರಾಜ್ಯ ಸರ್ಕಾರ ಫಾರೆಸ್ಟ್ ಕ್ಲಿಯರೆನ್ಸ್, ಲ್ಯಾಂಡ್ ಅಕ್ವಿಸಿಶನ್ ನೀಡಿದ್ರೆ ಮಾತ್ರ ಇವೆಲ್ಲಾ ಸಾಧ್ಯ. ಆದ್ರೆ ರಾಜ್ಯ ಸರ್ಕಾರ ಈ ಬಗ್ಗೆ ಪ್ರಸ್ತಾಪ ಮಾಡುವುದೇ ಇಲ್ಲ. ರೈಲ್ವೆ ಯೋಜನೆ ಬಂದಿಲ್ಲ, ಹೈವೇ ಆಗಿಲ್ಲ ಅಂತ ಹೇಳುವ ಕೆಲಸ ಮಾಡ್ತಿದೆ. ಈ ಎಲ್ಲಾ ಯೋಜನೆ ಸಂಪೂರ್ಣವಾಗಿ ರಾಜ್ಯಕ್ಕೆ ದೊರೆಯಬೇಕು ಅಂದ್ರೆ ನಿಮ್ಮ ಸಹಕಾರ ಸಹ ಅಗತ್ಯ. ನೀವು ನಮ್ಮೊಂದಿಗೆ ಕೆಲಸ ಮಾಡಿದರೆ, ಖಂಡಿತವಾಗಿಯೂ ರಾಜ್ಯದ ಹಿತಾಸಕ್ತಿ ನಾವು ಕಾಪಾಡಬಹುದು ಎಂದು ಪ್ರಹ್ಲಾದ್ ಜೋಶಿ ನುಡಿದಿದ್ದಾರೆ.

ಇದನ್ನೂ ಓದಿ: Kempegowda Jayanti: ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ; ಸಿದ್ದರಾಮಯ್ಯ

Continue Reading

ಭವಿಷ್ಯ

Dina Bhavishya : ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರ ವಹಿಸಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಸಪ್ತಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಮೀನ ರಾಶಿಯಿಂದ ಶುಕ್ರವಾರ ಮೇಷ ರಾಶಿಯನ್ನು 04:52ಕ್ಕೆ ಪ್ರವೇಶಿಸುತ್ತಾನೆ. ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಆರ್ಥಿಕ ಜೀವನದಲ್ಲಿ ಇಂದು ಸಂತೋಷ ಉಳಿದಿರುತ್ತದೆ. ಇದರೊಂದಿಗೆ ನೀವು ಇಂದು ಸಾಲಗಳಿಂದ ಮುಕ್ತರಾಗಬಹುದು. ನಿಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಹೊಸ ಹಣ ಗಳಿಕೆ ವಿಚಾರಗಳಿಂದ ಲಾಭ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಿಥುನ ರಾಶಿಯವರು ಉದ್ಯೋಗಿಗಳಿಗೆ ಆಪ್ತರಿಂದ ಸಲಹೆ ಸೂಚನೆಗಳು ಸಿಗಲಿದೆ. ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರಿಕೆ ವಹಿಸಿ. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (28-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ತಿಥಿ: ಸಪ್ತಮಿ 16:26 ವಾರ: ಶುಕ್ರವಾರ
ನಕ್ಷತ್ರ: ಪೂರ್ವ ಭಾದ್ರಪದ 10:09 ಯೋಗ: ಸೌಭಾಗ್ಯ 21:37
ಕರಣ: ಭವ 16:26 ಅಮೃತಕಾಲ: ಬೆಳಗಿನ ಜಾವ 04:17 ರಿಂದ 05:48
ದಿನದ ವಿಶೇಷ: ಹರಿಪುರ ಉತ್ಸವ

ಸೂರ್ಯೋದಯ : 05:58   ಸೂರ್ಯಾಸ್ತ : 06:50

ರಾಹುಕಾಲ: ಬೆಳಗ್ಗೆ 10:46 ರಿಂದ 12:23
ಗುಳಿಕಕಾಲ: ಬೆಳಗ್ಗೆ 07:33
ರಿಂದ 09:10
ಯಮಗಂಡಕಾಲ: ಮಧ್ಯಾಹ್ನ 03:36 ರಿಂದ 05:13

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಆರ್ಥಿಕ ಜೀವನದಲ್ಲಿ ಇಂದು ಸಂತೋಷ ಉಳಿದಿರುತ್ತದೆ. ಇದರೊಂದಿಗೆ ನೀವು ಇಂದು ಸಾಲಗಳಿಂದ ಮುಕ್ತರಾಗಬಹುದು. ನಿಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಹೊಸ ಹಣ ಗಳಿಕೆ ವಿಚಾರಗಳಿಂದ ಲಾಭ ತೆಗೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಅದ್ಭುತ ದಿನವಾಗಿದೆ. ನೀವು ದೀರ್ಘಕಾಲದ ಪ್ರಯೋಜನಗಳನ್ನು ಹೊಂದಿರುವ ಯೋಜನೆಗಳ ಮೇಲೆ ಕೆಲಸ ಮಾಡುವ ಸಾಧ್ಯತೆ ಇದೆ. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಏರಿಳಿತಗಳ ನಂತರ, ಇಂದು ಪರಸ್ಪರ ನಿಮ್ಮ ಪ್ರೀತಿಯನ್ನು ಆಸ್ವಾದಿಸುವ ಸುವರ್ಣ ದಿನ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಉದ್ಯೋಗಿಗಳಿಗೆ ಶುಭ. ಅದೃಷ್ಟ ಸಂಖ್ಯೆ: 8

Horoscope Today

ಮಿಥುನ: ಉದ್ಯೋಗಿಗಳಿಗೆ ಆಪ್ತರಿಂದ ಸಲಹೆ ಸೂಚನೆಗಳು ಸಿಗಲಿದೆ. ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರಿಕೆ ವಹಿಸಿ. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಸಭಲತೆ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಕಟಕ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕವಾಗಿ ಸದೃಢ ಇರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಗಳಿಸುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಜನರು ಇಂದು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ತಾಳ್ಮೆಯಿಂದ ಇರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ಸಿಂಹ: ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ನಿಮ್ಮ ಸರ್ವಾಧಿಕಾರಿ ಧೋರಣೆಯಿಂದಾಗಿ ನಿಮ್ಮ ಸಹೋದ್ಯೋಗಿಗಳಿಂದ ಟೀಕೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ. ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಆರ್ಥಿಕವಾಗಿ ಬಳಲುವ ಸಾಧ್ಯತೆ ಇದ್ದು, ಅನಗತ್ಯ ಖರ್ಚುಗಳ ಬಗೆಗೆ ಹಿಡಿತವಿರಲಿ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಅನಗತ್ಯ ಒತ್ತಡದಿಂದ ಹೊರಬರಲು ನಿಮ್ಮ ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯಿರಿ. ಅತಿಥಿಗಳ ಆಗಮನದಿಂದಾಗಿ ಕೊಂಚಮಟ್ಟಿಗೆ ಸಮಾಧಾನ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಕೊಂಚಮಟ್ಟಿಗೆ ನಿಧಾನವಾದರೂ ಪ್ರಯತ್ನವನ್ನು ಬಿಡಬೇಡಿ. ಮುಂದೊಂದು ದಿನ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ನಿಮಗೆ ಇನ್ನಷ್ಟೂ ಆತ್ಮವಿಶ್ವಾಸ ತರಲಿದೆ. ಒಬ್ಬ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಆರ್ಥಿಕವಾಗಿ ಸಾಧಾರಣ ಫಲ. ಉದ್ಯೋಗಿಗಳಿಗೆ ಮಿಶ್ರಫಲ. ಕೌಟುಂಬಿಕವಾಗಿ ಸಂತೋಷದ ವಾತಾವರಣ. ಅದೃಷ್ಟ ಸಂಖ್ಯೆ: 9

Horoscope Today

ವೃಶ್ಚಿಕ : ನೆರೆಹೊರೆಯವರೊಂದಿಗೆ ಜಗಳವಾಗುವ ಸಾಧ್ಯತೆ ಇದ್ದು, ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಕುಟುಂಬದ ಸದಸ್ಯನ ಆರೋಗ್ಯ ಹದಗೆಡವ ಕಾರಣ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತೆರೆದಿಡುತ್ತದೆ. ಉದ್ಯೋಗಿಗಳಿಗೆ ಹೆಚ್ಚಿದ ಕಿರಿಕಿರಿ. ಸಂಗಾತಿಯಿಂದ ಸಲಹೆ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ದೃಢ ವಿಶ್ವಾಸದ ನಿರ್ಧಾರದಿಂದಾಗಿ ಸುದೀರ್ಘವಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸ್ನೇಹಿತರಿಂದ ಆರ್ಥಿಕ ಸಹಾಯದ ಬೇಡಿಕೆ, ಆಲೋಚಿಸಿ ಸಹಾಯ ಮಾಡಿ. ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದ ಕಾರ್ಯಗಳು ಯಶಸ್ಸನ್ನು ತಂದುಕೊಡಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಪ್ರಶಂಸೆ, ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 8

Horoscope Today

ಮಕರ: ಇಂದು ನೀವು ಹಲವಾರು ಒತ್ತಡಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು, ಇದು ನಿಮಗೆ ಕಿರಿಕಿರಿ ಹಾಗೂ ಆತಂಕದ ಭಾವನೆಗಳನ್ನು ಉಂಟುಮಾಡಬಹುದು. ಕುಟುಂಬದವರ ಬೆಂಬಲ ಪ್ರೋತ್ಸಾಹದಿಂದಾಗಿ ಕೊಂಚಮಟ್ಟಿಗೆ ನಿರಾಳವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಲಿದೆ. ಖರ್ಚಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ದಿನದ ಮಟ್ಟಿಗೆ ಮಾಡುವುದು ಬೇಡ. ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಸ್ನೇಹಿತರ ಜತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮ ಲಾಭ ಇರಲಿದೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 6

Horoscope Today

ಮೀನ: ಹೂಡಿಕೆಯಲ್ಲಿ ಲಾಭಾಂಶ ಕಡಿಮೆ ಇರಲಿದೆ. ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ಪ್ರೀತಿ ಪಾತ್ರರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ ನೀಡಲಿದೆ. ಅದೃಷ್ಟ ಸಂಖ್ಯೆ: 3

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಕ್ರೀಡೆ

IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

IND vs ENG Semi Final: ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಂಡಿತು. ಅಂದು ಅಡಿಲೇಡ್‌ ಓವಲ್‌ನಲ್ಲಿ ನಡೆದಿದ್ದ ಸೆಮಿ ಪಂದ್ಯದಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಭರ್ಜರಿಯಾಗಿ ರೋಹಿತ್‌ ಪಡೆಯನ್ನು ಮಗುಚಿ ಫೈನಲ್​ ಪ್ರವೇಶಿಸಿತ್ತು.

VISTARANEWS.COM


on

IND vs ENG Semi Final
Koo

ಪ್ರೊವಿಡೆನ್ಸ್‌: ಅಕ್ಷರ್​ ಪಟೇಲ್​(23ಕ್ಕೆ 3), ಕುಲ್​ದೀಪ್​ ಯಾದವ್​(19ಕ್ಕೆ 3) ಜೋಡಿಯ ಸ್ಪಿನ್​ ದಾಳಿ ಹಾಗೂ ರೋಹಿತ್​ ಶರ್ಮ(57) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ(IND vs ENG Semi Final) ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 68 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದೆ. ಜತೆಗೆ 2022ರ ಸೆಮಿಫೈನಲ್​ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ. ಶನಿವಾರ ಬಾರ್ಬಡೋಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಇಲ್ಲಿನ ಪ್ರೊವಿಡೆನ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ರೋಹಿತ್​ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು. ಈ ಸೋಲಿನಿಂದಿಗೆ ಹಾಲಿ ಚಾಂಪಿಯನ್​ ಆಗಿದ್ದ ಇಂಗ್ಲೆಂಡ್​ ಈಗ ಮಾಜಿ ಆಯಿತು.

ಅಕ್ಷರ್​-ಕುಲ್​ದೀಪ್​ ಸ್ಪಿನ್​ ಮೋಡಿ

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್​ಗೆ ನಾಯಕ ಜಾಸ್​ ಬಟ್ಲರ್​ ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಒಂದು ಹಂತದಲ್ಲಿ ಅವರ ಬ್ಯಾಟಿಂಗ್ ನೋಡುವಾಗ 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯವೊಮ್ಮೆ ಕಣ್ಣ ಮುಂದೆ ಬಂದಿತು. ಅಬ್ಬರದ ಬ್ಯಾಟಿಂಗ್​ ಮೂಲಕ ಮುನ್ನುಗ್ಗುತ್ತಿದ್ದ ಇವರನ್ನು ಕೊನೆಗೂ ಎಡಗೈ ಸ್ಪಿನ್ನರ್​ ಅಕ್ಷರ್​ ಪಟೇಲ್​ ಕಟ್ಟಿಹಾಕಿದರು. ತಾನೆಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಎಗರಿಸಿ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ರಿವರ್ಸ್​ ಸ್ವೀಪ್​ ಮಾಡುವ ಯತ್ನದಲ್ಲಿ ಕೀಪರ್​ ರಿಷಭ್​ ಪಂತ್​ಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದರು. ಬಟ್ಲರ್​ 4 ಬೌಂಡರಿ ನೆರವಿನಿಂದ 23 ರನ್​ ಬಾರಿಸಿದರು.

2ನೇ ಓವರ್​ನಲ್ಲಿ ಅಕ್ಷರ್ ಮತ್ತೊಂದು ದೊಡ್ಡ ವಿಕೆಟ್​ ಬೇಟೆಯಾಡಿದರು.​ ಅಪಾಯಕಾರಿ ಬ್ಯಾಟರ್​ ಜಾನಿ ಬೇರ್​ಸ್ಟೋ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್​ಗೆ ಅಟ್ಟಿದರು. ಈ ವಿಕೆಟ್​ ಪತನಕ್ಕೂ ಮುನ್ನ ಜಸ್​ಪ್ರೀತ್​ ಬುಮ್ರಾ ತಮ್ಮ ಯಾರ್ಕರ್​ ದಾಳಿಯಿಂದ ಫಿಲ್​ ಸಾಲ್ಟ್ ಅವರನ್ನು ಕ್ಲೀನ್​ ಬೌಲ್ಟ್​ ಮಾಡಿದ್ದರು.​

35 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್​ಗೆ ಆ ಬಳಿಕ ಬಂದ ಬ್ಯಾಟರ್​ಗಳು ಕೂಡ ಆಸರೆಯಾಗುವಲ್ಲಿ ವಿಫಲರಾದರು. ಮೊಯಿನ್​ ಅಲಿ(8) ಕ್ರೀಸ್​ ಬಿಟ್ಟು ಸಿಕ್ಸರ್​ ಬಾರಿಸುವ ಯತ್ನದಲ್ಲಿ ರಿಷಭ್​ ಪಂತ್​ ಅವರ ಮಿಂಚಿನ ವೇಗದ ಸ್ಟಂಪ್​ ಬಲೆಗೆ ಬಿದ್ದರು. ಈ ವಿಕೆಟ್​ ಕೂಡ ಅಕ್ಷರ್​ ಪಾಲಾಯಿತು. ಆ ಬಳಿಕ ಆಡಲಿಳಿದ ಆಲ್​ರೌಂಡರ್​ ಸ್ಯಾಮ್​ ಕರನ್(2)​ ಅವರನ್ನು ಕುಲ್​ದೀಪ್​ ಯಾದವ್​ ತಮ್ಮ ಮೊದಲ ಓವರ್​ನಲ್ಲಿಯೇ ಎಲ್​ಬಿಡಬ್ಲ್ಯು ಬಲೆಗೆ ಬೀಳಿಸಿದರು. 5ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಹ್ಯಾರಿ ಬ್ರೂಕ್​ ಸಣ್ಣ ಮಟ್ಟದ ಬ್ಯಾಟಿಂಗ್​ ಹೋರಾಟವನ್ನು ಸಂಘಟಿಸಿದರೂ ಕೂಡ 25 ರನ್​ಗೆ ಇವರ ವಿಕೆಟ್​ ಕೂಡ ಪತನಗೊಂಡಿತು. ಇಲ್ಲಿಗೆ ಇಂಗ್ಲೆಂಡ್​ ಸೋಲು ಕೂಡ ಖಚಿತಗೊಂಡಿತು. ಅಂತಿಮ ಹಂತದಲ್ಲಿ ವೇಗಿ ಜೋಫ್ರಾ ಆರ್ಚರ್​ 1 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಸಿ 21 ರನ್​ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಭಾರತ ಪರ ಕುಲ್​ದೀಪ್​ ಯಾದವ್​ ಮತ್ತು ಅಕ್ಷರ್​ ಪಟೇಲ್ ತಲಾ ಮೂರು ವಿಕೆಟ್​ ಕಿತ್ತರೆ, ಜಸ್​ಪ್ರೀತ್​ ಬುಮ್ರಾ 2 ವಿಕೆಟ್​ ಉರುಳಿಸಿದರು.

ಸೇಡು ತೀರಿಸಿಕೊಂಡ ಭಾರತ


ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಂಡಿತು. ಅಂದು ಅಡಿಲೇಡ್‌ ಓವಲ್‌ನಲ್ಲಿ ನಡೆದಿದ್ದ ಸೆಮಿ ಪಂದ್ಯದಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಭರ್ಜರಿಯಾಗಿ ರೋಹಿತ್‌ ಪಡೆಯನ್ನು ಮಗುಚಿ ಫೈನಲ್​ ಪ್ರವೇಶಿಸಿತ್ತು. ಈ ಬಾರಿ ಭಾರತ ತಂಡ ಇಂಗ್ಲೆಂಡ್​ ಮಣಿಸಿ ಫೈನಲ್​ ಪ್ರವೇಶಿಸಿತು. ಅಲ್ಲಿಗೆ ಲೆಕ್ಕ ಚುಕ್ತಾ ಗೊಂಡಿತು.

ಇದನ್ನೂ ಓದಿ Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

ಮಳೆಯಿಂದ ಟಾಸ್​ ಪ್ರಕ್ರಿಯೆ ಕೂಡ ವಿಳಂಬಗೊಂಡಿತು. ಪಂದ್ಯ ಆರಂಭವಾಗಿ ಭಾರತ 8 ಓವರ್​ಗೆ 2 ವಿಕೆಟ್​ ನಷ್ಟಕ್ಕೆ 65 ರನ್​ ಗಳಿಸಿದ್ದ ವೇಳೆ ಮತ್ತೆ ಮಳೆ ಸುರಿದು ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತು. ಆದರೆ, ಈ ಪಂದ್ಯಕ್ಕೆ ಮೀಸಲು ದಿನ ಇರದ ಕಾರಣ ಹೆಚ್ಚುವರಿ 250 ನಿಮಿಷ ನೀಡಲಾಗಿತ್ತು. ಹೀಗಾಗಿ ಮಳೆ ನಿಂತ ಬಳಿಕ ಓವರ್​ ಕಡಿತವಿಲ್ಲದೇ ಪಂದ್ಯವನ್ನು ಮುಂದುವರಿಸಲಾಯಿತು.

ರೋಹಿತ್​-ಸೂರ್ಯ ಉತ್ತಮ ಜತೆಯಾಟ

ಮಳೆ ನಿಂತ ಬಳಿಕ ರೋಹಿತ್ ಶರ್ಮ ಜತೆ ಸೂರ್ಯಕುಮಾರ್​ ಕೂಡ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟರು. ಉಭಯ ಆಟಗಾರರು ಸೇರಿಕೊಂಡು ಮೂರನೇ ವಿಕೆಟ್ 73​ ಜತೆಯಾಟ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 5 ರನ್​ ಗಳಿಸಿದ್ದ ವೇಳೆ ಫಿಲ್ ಸಾಲ್ಟ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದ ರೋಹಿತ್, ಇದರ ಸಂಪೂರ್ಣ ಲಾಭವೆತ್ತಿದರು. 33 ಎಸೆತಗಳಿಂದ ಅರ್ಧಶತಕ ಬಾರಿಸಿ ಮಿಂಚಿದರು. ಇದು ರೋಹಿತ್​ ಅವರ 32ನೇ ಅಂತಾರಾಷ್ಟ್ರೀಯ ಟಿ20 ಅರ್ಧಶತಕ. ಅಂತಿಮವಾಗಿ 6 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 57 ರನ್​ ಗಳಿಸಿ ಆದೀಲ್​ ರಶೀದ್​ ಓವರ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ವಿಕೆಟ್​ ಪತನಗೊಂಡು 11 ರನ್​ ಅಂತರದಲ್ಲಿ ಸೂರ್ಯಕುಮಾರ್​ ವಿಕೆಟ್​ ಕೂಡ ಬಿತ್ತು. ಸೂರ್ಯಕುಮಾರ್​ 47(4 ಬೌಂಡರಿ, 2ಸಿಕ್ಸರ್​) ರನ್​ ಬಾರಿಸಿದರು.

ಉತ್ತಮ ಸ್ಥಿತಿಯಲ್ಲಿದ್ದ ಭಾರತ, ಸೂರ್ಯಕುಮಾರ್​ ಮತ್ತು ರೋಹಿತ್​ ವಿಕೆಟ್​ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಶಿವಂ ದುಬೆ(0) ಗೋಲ್ಡನ್​ ಡಕ್​ ಸಂಕಷ್ಟಕ್ಕೆ ಸಿಲುಕಿದರೆ, ಅಕ್ಷರ್​ ಪಟೇಲ್​ 10 ರನ್​ಗೆ ಆಟ ಮುಗಿಸಿದರು. ಅಂತಿಮವಾಗಿ ಜಡೇಜಾ ಅಜೇಯ 17(9 ಎಸೆತ, 2 ಬೌಂಡರಿ) ಮತ್ತು ಹಾರ್ದಿಕ್​ ಪಾಂಡ್ಯ 23(13 ಎಸೆತ, 2 ಸಿಕ್ಸರ್​, 1 ಬೌಂಡರಿ) ರನ್ ಬಾರಿಸಿದ ಪರಿಣಾಮ ತಂಡ 150ರ ಗಡಿ ದಾಟಿತು. ಇಂಗ್ಲೆಂಡ್​ ಪರ ಕ್ರಿಸ್​ ಜೋರ್ಡನ್​ 37 ರನ್​ ಬಿಟ್ಟುಕೊಟ್ಟು 3 ವಿಕೆಟ್​ ಉರುಳಿಸಿದರು.

ದಾಖಲೆ ಬರೆದ ರೋಹಿತ್​


ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ನಿರ್ಮಿಸಿಸಿದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(111 ಬೌಂಡರಿ) ಹೆಸರಿನಲ್ಲಿತ್ತು. 37 ರನ್​ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಕ ಕ್ರಿಕೆಟ್​ ಸೇರಿ 5 ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್​ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್​(11207) ದ್ವಿತೀಯ ಸ್ಥಾನಿಯಾಗಿದ್ದಾರೆ.  

ಕೊಹ್ಲಿ ಮತ್ತೆ ವಿಫಲ


ವಿರಾಟ್​ ಕೊಹ್ಲಿ(Virat Kohli) ಅವರ ಬ್ಯಾಟಿಂಗ್​ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. 9 ಎಸೆತಕ್ಕೆ 9 ರನ್​ಗಳಿಸಿ ರೀಸ್‌ ಟೋಪ್ಲಿ ಎಸೆತಕ್ಕೆ ಕ್ಲೀನ್​ ಬೌಲ್ಟ್​ ಆದರು. ಈ ಮೂಲಕ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಒಂದಂಕಿಗೆ ಸೀಮಿತರಾದರು. ಇದಕ್ಕೂ ಮುನ್ನ ಕೊಹ್ಲಿ ಆಡಿದ ಎಲ್ಲ ಸೆಮಿಫೈನಲ್​ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದರು. ರಿಷಭ್​ ಪಂತ್​ ಕೂಡ ಅವಸರದ ಆಟವಾಡಲು ಮುಂದಾಗಿ ಕೇವಲ 4 ರನ್​ಗೆ ವಿಕೆಟ್​ ಕೈಚೆಲ್ಲಿದರು.

Continue Reading

ದೇಶ

Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Abhyas Trial: ಒಡಿಶಾದ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ITR) ಗುರುವಾರ (ಜೂನ್‌ 27) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯು ಸಂಸ್ಥೆಯು (DRDO) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಅಭ್ಯಾಸ್‌ ಹೆಸರಿನ ಗುರಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ ಎಂಬುದಾಗಿ ಡಿಆರ್‌ಡಿಒ ತಿಳಿಸಿದೆ.

VISTARANEWS.COM


on

Abhyas Trial
Koo

ಭುವನೇಶ್ವರ: ಭಾರತದ ಕ್ಷಿಪಣಿ ವ್ಯವಸ್ಥೆಗೆ ಹೆಚ್ಚಿನ ಬಲವನ್ನು ತುಂಬುವ, ದೇಶದ ಸೇನೆಗೂ ಭಾರಿ ಪ್ರಮಾಣದಲ್ಲಿ ಸಹಕಾರಿಯಾಗುವ, ಯಾವುದೇ ತುರ್ತು ಸಂದರ್ಭದಲ್ಲಿ ಪ್ರತ್ಯುತ್ತರ ನೀಡುವಾಗ ನಿರ್ಣಾಯಕ ಪಾತ್ರ ನಿರ್ವಹಿಸುವ ಹೈ-ಸ್ಪೀಡ್‌ ಎಕ್ಸ್‌ಪೆಂಡೇಬಲ್‌ ಏರಿಯಲ್‌ ಟಾರ್ಗೆಟ್‌ (HEAT) ಆದ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆಯು (Abhyas Trial) ಯಶಸ್ವಿಯಾಗಿದೆ. ಒಡಿಶಾದ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ITR) ಗುರುವಾರ (ಜೂನ್‌ 27) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯು ಸಂಸ್ಥೆಯು (DRDO) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

ಅಭ್ಯಾಸ್‌ ಹೆಸರಿನ ಗುರಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ ಎಂಬುದಾಗಿ ಡಿಆರ್‌ಡಿಒ ತಿಳಿಸಿದೆ. ಅದರಲ್ಲೂ, ಕೇವಲ 30 ನಿಮಿಷಗಳಲ್ಲಿ ಸತತವಾಗಿ ಎರಡು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಪ್ರಯೋಗದ ಸಮಯದಲ್ಲಿ ಬೂಸ್ಟರ್‌ನ ಸುರಕ್ಷಿತ ಬಿಡುಗಡೆ, ಲಾಂಚರ್‌ ಕ್ಲಿಯರೆನ್ಸ್‌ ಹಾಗೂ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇದೇ ಎಂಬುದನ್ನು ಡಿಆರ್‌ಡಿಒ ವಿಜ್ಞಾನಿಗಳು ಪರೀಕ್ಷೆ ವೇಳೆ ದೃಢಪಡಿಸಿಕೊಂಡರು.

ಕ್ಷಿಪಣಿಗಳಿಗೆ ಹೇಗೆ ಇವು ಸಹಕಾರಿ?

ಅಭ್ಯಾಸ್‌ ಗುರಿಗಳು ದೇಶದ ಕ್ಷಿಪಣಿ ವ್ಯವಸ್ಥೆಯನ್ನು ಬಲಪಡಿಸಲು, ಕ್ಷಿಪಣಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ಕ್ಷಿಪಣಿಗಳ ಪರೀಕ್ಷೆ ಹಾಗೂ ಅಭ್ಯಾಸಗಳ ವೇಳೆ ಗುರಿಗಳನ್ನು ಬಳಸಿ, ಅವುಗಳ ಸಮರ್ಥ ಕಾರ್ಯನಿರ್ವಹಣೆಯನ್ನು ಒರೆಗೆ ಹಚ್ಚುತ್ತವೆ. ಆಟೋ ಪೈಲಟ್‌ ಮೂಲಕ ಹಾರಾಡುವ, ಲ್ಯಾಪ್‌ ಆಧಾರಿತವಾಗಿ ಭೂಮಿಯಿಂದಲೇ ನಿಯಂತ್ರಣ ಮಾಡಬಹುದಾದ, ರೇಡಾರ್‌ ಗ್ರಹಿಕೆಗೆ ಸಿಗದಿರುವುದು ಸೇರಿ ಹಲವು ಅತ್ಯಾಧುನಿಕ ಸಾಮರ್ಥ್ಯವನ್ನು ಇವು ಹೊಂದಿವೆ.

ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷೆ ಮಾಡುತ್ತಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಭಿನಂದನೆ ಸಲ್ಲಿಸಿದರು. ಡಿಆರ್‌ಡಿಒ ವಿಜ್ಞಾನಿಗಳು, ಸಶಸ್ತ್ರ ಪಡೆಗಳ ಪ್ರಯತ್ನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಭ್ಯಾಸ್‌ ಗುರಿಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನಲ್ಲಿರುವ ಡಿಆರ್‌ಡಿಒದ ಏರೋನಾಟಿಕಲ್‌ ಡೆವಲಪ್‌ಎಸ್ಟಾಬ್ಲಿಶ್‌ಮೆಂಟ್‌ ಇವುಗಳ ವಿನ್ಯಾಸ ಮಾಡಿದೆ. ಪ್ರೊಡಕ್ಷನ್‌ ಏಜೆನ್ಸೀಸ್‌-ಹಿಂದುಸ್ಥಾನ ಏರೋನಾಟಿಕ್ಸ್‌ ಲಿಮಿಟೆಡ್‌, ಲಾರ್ಸೆನ್‌ & ಟರ್ಬೊ ಇವುಗಳನ್ನು ಅಭಿವೃದ್ಧಿಪಡಿಸಿವೆ.

ಇದನ್ನೂ ಓದಿ: SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

Continue Reading
Advertisement
Kalki 2898 AD Box Office Day Prabhas Film Indian Opener Earns 180 Crore
ಟಾಲಿವುಡ್4 mins ago

Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

mp meet cm siddaramaiah
ಪ್ರಮುಖ ಸುದ್ದಿ16 mins ago

CM Siddaramaiah: ವಿನಾಕಾರಣ ಕೇಂದ್ರವನ್ನು ದೂರಬೇಡಿ: ರಾಜ್ಯ ಸಂಸದರ ಸಭೆಯಲ್ಲಿ ಸಿಎಂಗೆ ಎನ್‌ಡಿಎ ಪಾಠ

Seeds For Weight Loss
ಆರೋಗ್ಯ21 mins ago

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

Top 5 Engineering Courses
ಶಿಕ್ಷಣ21 mins ago

Top 5 Engineering Courses: ಇವು ಬಹು ಬೇಡಿಕೆಯ ಟಾಪ್ 5 ಎಂಜಿನಿಯರಿಂಗ್ ಕೋರ್ಸ್‌ಗಳು

Vastu Tips
ಧಾರ್ಮಿಕ51 mins ago

Vastu Tips: ಈ ವಾಸ್ತು ನಿಯಮ ಪಾಲಿಸಿದರೆ ವ್ಯವಹಾರದಲ್ಲಿ ವೃದ್ಧಿ

haveri Accident
ಕರ್ನಾಟಕ1 hour ago

Haveri Accident: ಹಾವೇರಿಯಲ್ಲಿ ಭಯಾನಕ ಅಪಘಾತ: ಲಾರಿಗೆ ಟಿಟಿ ಡಿಕ್ಕಿ, 13 ಜನರ ಸಾವು

Weight Loss Tips
ಆರೋಗ್ಯ1 hour ago

Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

Indian Origin Crow
ವಿದೇಶ2 hours ago

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

karnataka weather Forecast
ಮಳೆ2 hours ago

Karnataka Weather : ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌; ತಿಂಗಳಾಂತ್ಯದವರೆಗೆ ಮೀನುಗಾರರಿಗೆ ನಿರ್ಬಂಧ

World's Newest Countries
ವಿದೇಶ2 hours ago

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ13 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ15 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು16 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ20 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌