Karnataka Media Academy: ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ನೇಮಕ - Vistara News

ಪ್ರಮುಖ ಸುದ್ದಿ

Karnataka Media Academy: ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ನೇಮಕ

Karnataka Media Academy: ಇದೇ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ವೃತ್ತಿಪರತೆ ಕಾಪಾಡಿಕೊಂಡು ಬಂದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳಾ ಪ್ರತಿನಿಧಿಯೊಬ್ಬರು ಅಲಂಕರಿಸುತ್ತಿದ್ದಾರೆ.

VISTARANEWS.COM


on

Karnataka Media Academy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ (Ayesha Khanum) ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಅಕಾಡೆಮಿ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಎಂ.ಎನ್‌. ಅಹೋಬಲಪತಿ, ಕೆ.ನಿಂಗಪ್ಪ, ಛಾಯಾಗ್ರಾಹಕ ಕೆ.ವೆಂಕಟೇಶ್ ಅವರು ನೇಮಕವಾಗಿದ್ದಾರೆ. ಅಧ್ಯಕ್ಷರು, ಸದಸ್ಯರ ನೇಮಕದಲ್ಲಿ ಸಾಮಾಜಿಕ ನ್ಯಾಯದ ಜತೆಗೆ ಸೇವಾ ಹಿರಿತನ, ಅರ್ಹತೆ, ಸಾಮರ್ಥ್ಯಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಪತ್ರಿಕಾ ಛಾಯಾಗ್ರಾಹಕರನ್ನೂ ಮಾಧ್ಯಮ‌ ಅಕಾಡೆಮಿ ಸದಸ್ಯ ಸ್ಥಾನಕ್ಕೆ ಪರಿಗಣಿಸಿರುವುದೂ ಕೂಡ ಇದೇ ಮೊದಲಾಗಿದೆ.

ಈವರೆಗೂ ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಗಳೂ ನೇಮಿಸಿರಲಿಲ್ಲ. ಈ ಕೊರತೆಯನ್ನು ಸಿಎಂ ಸಿದ್ದರಾಮಯ್ಯ ನೀಗಿಸಿದಂತಾಗಿದೆ. ಜತೆಗೆ ಆಯೇಷಾ ಅವರು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರಾಗಿರುವುದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ಸಮಾನತೆಗೂ ಮಾನ್ಯತೆ ಕೊಟ್ಟಂತಾಗಿದೆ.

ಹಾಗೆಯೇ ಜನಪರ ಹೋರಾಟದಿಂದಲೇ ಪತ್ರಿಕೋದ್ಯಮಕ್ಕೆ ಪ್ರವೇಶಿಸಿ ಸಾಮಾಜಿಕ ಕಾಳಜಿಗಳನ್ನಿಟ್ಟುಕೊಂಡು ವೃತ್ತಿಯಲ್ಲಿ ತೊಡಗಿರುವ ಚಿತ್ರದುರ್ಗದ ಅಹೋಬಲಪತಿ ಅವರ ಜೊತೆಗೆ ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕರಾದ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ ಅವರನ್ನು ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿದ್ದು. ಇಲ್ಲೂ ಕೂಡ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಲಾಗಿದೆ.

ಈ ಬಾರಿ ಯಾರನ್ನು ನೇಮಿಸಬೇಕು ಎನ್ನುವ ಚರ್ಚೆ ಬಂದಾಗ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಆಯೇಷಾ ಖಾನಂ ಅವರ ಹೆಸರನ್ನು ಸೂಚಿಸಿ ಇವರನ್ನೇ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು. ಈ ಅಭಿಪ್ರಾಯಕ್ಕೆ ಸಂಪೂರ್ಣ ಮನ್ನಣೆ ನೀಡಿದ ಮುಖ್ಯಮಂತ್ರಿಗಳು ಇತರೆ ಹಲವು ಅರ್ಹರ ಹೆಸರುಗಳ ನಡುವೆ ಆಯೇಷಾ ಅವರ ಹೆಸರನ್ನು ಅಂತಿಮ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ | Pension Under NPS:‌ ಎನ್‌ಪಿಎಸ್‌ ಅಡಿಯಲ್ಲಿ ಕೇಂದ್ರ ನೌಕರರಿಗೆ ವೇತನದ ಅರ್ಧದಷ್ಟು ಪಿಂಚಣಿ; ಶೀಘ್ರವೇ ಆದೇಶ?

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಯೇಷಾ ಖಾನಂ ಅವರು 26 ವರ್ಷ ಸೇವೆ ಸಲ್ಲಿಸಿದ್ದು, ಈ ಹಿಂದೆ ಏಷ್ಯನ್ ಏಜ್, ಆಜ್‌ತಕ್‌, ಸ್ಟಾರ್ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದಾರೆ. ಇವರು ಡಿಡಿ ನ್ಯೂಸ್ ದಕ್ಷಿಣ ಭಾರತದ ಮುಖ್ಯ ವರದಿಗಾರ್ತಿ, ಸ್ಟಾರ್ ನ್ಯೂಸ್ ಪ್ರಾದೇಶಿಕ ಸುದ್ದಿ ವರದಿಗಾರ್ತಿ (ದಕ್ಷಿಣ), ಆಜ್ ತಕ್ ಪ್ರಧಾನ ವರದಿಗಾರ್ತಿ, ಏಷ್ಯನ್ ಏಜ್ ಶಿಕ್ಷಣ ವರದಿಗಾರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಸೇವೆಗೆ ಹಲವು ಪ್ರಶಸ್ತಿಗಳು ಸಂದಿದ್ದು, ನಿಷ್ಪಕ್ಷಪಾತ ವರದಿಗಾಗಿ ಟಿಪ್ಪು ಸುಲ್ತಾನ್ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ವರ್ಷದ ಅತ್ಯುತ್ತಮ ವರದಿಗಾರ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಹಿರಿಯ ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿಯಾಗಿರುವ ಆಯೇಷಾ ಖಾನಂ ಅವರು ದೂರದರ್ಶನ ದಕ್ಷಿಣ ಭಾರತದ ಮುಖ್ಯ ವರದಿಗಾರರಾಗಿದ್ದರು. ಜು.9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

KHIR City: ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ‘ನಾಲೆಡ್ಜ್, ಹೆಲ್ತ್, ಇನ್ನೋವೇಶನ್ ಆಂಡ್ ರೀಸರ್ಚ್ ಸಿಟಿ’; ಆ.23ರಂದು ಉದ್ಘಾಟನೆ

KHIR City: ಬೆಂಗಳೂರು ನಗರದಿಂದ 60 ಕಿ.ಮೀ. ದೂರದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಟ್ಟು 2,000 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ ಒಂದು ಸಾವಿರ ಎಕರೆ ಜಾಗದಲ್ಲಿ ಯೋಜನೆ ತಲೆ ಎತ್ತಲಿದೆ. ಒಟ್ಟು ಎರಡೂ ಹಂತಗಳಲ್ಲಿ 40 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚು ಹೂಡಿಕೆ ಆಗಲಿದ್ದು, 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಆ.23 ರಂದು ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೆಎಚ್ಐಆರ್ ಸಿಟಿಗೆ ಚಾಲನೆ ಸಿಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

VISTARANEWS.COM


on

KHIR City project Launch on August 23 at bengaluru says Minister MB Patil
Koo

ಬೆಂಗಳೂರು: ದೇಶದಲ್ಲೇ ಪ್ರಪ್ರಥಮ ಎನ್ನಲಾದ, ಬಹು ಮಹತ್ತ್ವಾಕಾಂಕ್ಷೆಯ `ನಾಲೆಡ್ಜ್, ಹೆಲ್ತ್, ಇನ್ನೋವೇಶನ್ ಮತ್ತು ರೀಸರ್ಚ್ ಸಿಟಿʼ (ಕೆಎಚ್ಐಆರ್ ಸಿಟಿ) ಯೋಜನೆಯ (KHIR City) ಮೊದಲನೇ ಹಂತಕ್ಕೆ ಆ.23ರಂದು ಶುಕ್ರವಾರ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, ನಗರದಿಂದ 60 ಕಿ.ಮೀ. ದೂರದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಟ್ಟು 2,000 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ ಒಂದು ಸಾವಿರ ಎಕರೆ ಜಾಗದಲ್ಲಿ ಯೋಜನೆ ತಲೆ ಎತ್ತಲಿದೆ. ಒಟ್ಟು ಎರಡೂ ಹಂತಗಳಲ್ಲಿ 40 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚು ಹೂಡಿಕೆ ಆಗಲಿದ್ದು, 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. 23 ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೆಎಚ್ಐಆರ್ ಸಿಟಿಗೆ ಚಾಲನೆ ಸಿಗಲಿದೆʼ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಉದ್ಯಮ ವಲಯದ ಪ್ರಮುಖರು ಕೂಡ ಭಾಗವಹಿಸಲಿದ್ದು, ಹೆಸರುಗಳು ಅಂತಿಮವಾಗುತ್ತಿವೆ ಎಂದರು.

ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ವಿಶೇಷ ನಗರಗಳ ಪರಿಕಲ್ಪನೆ ಇದೆ. ಕೇಂದ್ರ ಸರ್ಕಾರ ಕೂಡ ಇದೇ ಮಾದರಿಯನ್ನು ಅನುಸರಿಸುತ್ತದೆ. ಆದರೆ, ಕೆಎಚ್ಐಆರ್ ಸಿಟಿಯಲ್ಲಿ ನಾಲ್ಕೂ ವಲಯಗಳಲ್ಲಿನ ಜಾಗತಿಕ ಮಟ್ಟದ ಅತ್ಯುನ್ನತ ಕಂಪನಿಗಳು ನೆಲೆಯೂರಲಿವೆ. ಇದಕ್ಕೆ ಬೇಕಾದ ಜಮೀನು, ವಿದ್ಯುತ್, ನೀರು, ರಸ್ತೆ ಮತ್ತಿತರ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಇದರಿಂದ ಆರ್ಥಿಕ ವರಮಾನ ಹೆಚ್ಚಳದ ಜತೆಗೆ ರಫ್ತು ವಹಿವಾಟು ಕೂಡ ವೃದ್ಧಿಸಲಿದೆ. ಇದರಿಂದಾಗಿ ಬೆಂಗಳೂರು ನಗರವು ಇನ್ನೊಂದು ಸ್ತರ ಮೇಲೇರಲಿದೆ ಎಂದು ಅವರು ಹೇಳಿದ್ದಾರೆ.

ಜಾಗತಿಕವಾಗಿ ಉತ್ಕೃಷ್ಟ ಮಟ್ಟದ ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಮೆಡಿಕಲ್ ಟೂರಿಸಂ, ಸಂಶೋಧನೆ, ಚಿಕಿತ್ಸೆ, ನಾವೀನ್ಯತೆ ಇವುಗಳಿಗೆ ಉದ್ದೇಶಿತ ಸಿಟಿಯಲ್ಲಿ ಆದ್ಯತೆ ನೀಡಲಾಗುವುದು. ಜತೆಗೆ ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ನವೋದ್ಯಮಗಳು, ವೈಮಾಂತರಿಕ್ಷ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಜೀವವಿಜ್ಞಾನಗಳು ಮತ್ತು ಆಧುನಿಕ ತಂತ್ರಜ್ಞಾನ ವಲಯಗಳ ಕಂಪನಿಗಳು ಕೂಡ ಇಲ್ಲಿ ಬರಲಿವೆ.

ಮುಖ್ಯವಾಗಿ ಒಟ್ಟಾರೆ ಯೋಜನೆಯಿಂದ ಅಪಾರ ಸಂಖ್ಯೆಯ ಪರೋಕ್ಷ ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಇದಕ್ಕಾಗಿ ಸರ್ಕಾರವು ಸ್ಪಷ್ಟ ರೂಪುರೇಷೆಯನ್ನು ಈಗಾಗಲೇ ಆಖೈರುಗೊಳಿಸಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಆ.4ರಂದು ʼರಣಧುರಂಧರʼ ಗ್ರಂಥ ಲೋಕಾರ್ಪಣೆ

ಕೆಎಚ್ಐಆರ್ ಸಿಟಿಯಲ್ಲಿ ಆರಂಭವಾಗಲಿರುವ ಉದ್ದಿಮೆಗಳಿಗೆ ಸಕಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗುವುದು. ರಾಜ್ಯದಲ್ಲೇ ನೆಲೆ ಹೊಂದಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಉದ್ದಿಮೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೂ ಇಲ್ಲಿ ಅವಕಾಶವಿರಲಿದೆ. ಈ ಮೂಲಕ ನಮ್ಮಲ್ಲಿನ ಸಂಸ್ಥೆಗಳು ಕೂಡ ಜಾಗತಿಕ ಗುಣಮಟ್ಟದ ಎತ್ತರಕ್ಕೆ ಬೆಳೆಯಲು ಅವಕಾಶ ಒದಗಿಸಲಾಗುವುದು. ಒಟ್ಟಿನಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಬೇಕು ಎನ್ನುವುದು ಇದರ ಹಿಂದಿನ ಆಶಯಗಳಲ್ಲಿ ಒಂದಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ

IND vs SL ODI : ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಿಧಾನಗತಿಯ ಮೇಲ್ಮೈಯಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಥುಮ್ ನಿಸ್ಸಾಂಕಾ 75 ಎಸೆತಗಳಲ್ಲಿ 56 ರನ್ ಗಳಿಸಿದ್ದರು. ಇತರ ಬ್ಯಾಟರ್​ಗಳು ಕ್ಲಿಷ್ಟಕರ ಮೇಲ್ಮೈಗೆ ಒಗ್ಗಿಕೊಳ್ಳಲು ವಿಫಲರಾದರು. ಭಾರತೀಯ ಸ್ಪಿನ್ನರ್​ಗಳು ಮಧ್ಯಮ ಕ್ರಮಾಂಕದಲ್ಲಿ ಆತಿಥೇಯರ ಮೇಲೆ ಮೇಲುಗೈ ಸಾಧಿಸಿದರು. 5 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದ್ದ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ದುನಿತ್ ವೆಲ್ಲಾಲಗೆ, ವನಿಂದು ಹಸರಂಗ ಮತ್ತು ಅಕಿಲಾ ಧನಂಜಯ ಅವರ ಬೆಂಬಲ ಪಡೆದ ಲಂಕಾ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

VISTARANEWS.COM


on

IND vs SL ODI
Koo

ಕೊಲಂಬೊ: ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಗಸ್ಟ್ 4 ರಂದು ಶ್ರೀಲಂಕಾ ಮತ್ತು ಭಾರತ ನಡುವಿನ (IND vs SL ODI) ಎರಡನೇ ಏಕದಿನ ಪಂದ್ಯ ನಡೆಯಲಿದೆ. ಮೊದಲ ಏಕದಿನ ಪಂದ್ಯವು ರೋಚಕ ಮುಖಾಮುಖಿಯಾಗಿ ಪರಿಣಮಿಸಿತ್ತು. ಅಂತಿಮವಾಗಿ ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿತು. ಭಾನುವಾರ ಇದೇ ರೀತಿಯ ಥ್ರಿಲ್ಲರ್ ಅನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಿಧಾನಗತಿಯ ಮೇಲ್ಮೈಯಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಥುಮ್ ನಿಸ್ಸಾಂಕಾ 75 ಎಸೆತಗಳಲ್ಲಿ 56 ರನ್ ಗಳಿಸಿದ್ದರು. ಇತರ ಬ್ಯಾಟರ್​ಗಳು ಕ್ಲಿಷ್ಟಕರ ಮೇಲ್ಮೈಗೆ ಒಗ್ಗಿಕೊಳ್ಳಲು ವಿಫಲರಾದರು. ಭಾರತೀಯ ಸ್ಪಿನ್ನರ್​ಗಳು ಮಧ್ಯಮ ಕ್ರಮಾಂಕದಲ್ಲಿ ಆತಿಥೇಯರ ಮೇಲೆ ಮೇಲುಗೈ ಸಾಧಿಸಿದರು. 5 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದ್ದ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ದುನಿತ್ ವೆಲ್ಲಾಲಗೆ, ವನಿಂದು ಹಸರಂಗ ಮತ್ತು ಅಕಿಲಾ ಧನಂಜಯ ಅವರ ಬೆಂಬಲ ಪಡೆದ ಲಂಕಾ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಪ್ರತಿಯಾಗಿ ಬ್ಯಾಟ್ ಮಾಡಿದ ಭಾಋತ ಪರ ನಾಯಕ ರೋಹಿತ್ ಶರ್ಮಾ 47 ಎಸೆತಗಳಲ್ಲಿ 58 ರನ್ ಗಳಿಸಿ ಭಾರತಕ್ಕೆ ಉತ್ತಮ ಆರಂಭ ನೀಡಿದರು. 35 ಎಸೆತಗಳಲ್ಲಿ 16 ರನ್ ಗಳಿಸಿದ್ದ ಶುಬ್ಮನ್ ಗಿಲ್ 13ನೇ ಓವರ್​ನಲ್ಲಿ ಔಟಾದರು. ಈ ವೇಳೆ ಭಾರತ 75 ರನ್ ಗಳಿಸಿತ್ತು. ಬಳಿಕ ಭಾರತದ ಮೂರು ವಿಕೆಟ್ ಗಳು ತ್ವರಿತವಾಗಿ ಬಿದ್ದವು. ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ 43 ರನ್​ಗಳ ಜೊತೆಯಾಟ ನೀಡಿದರು. ಆದಾಗ್ಯೂ, ಶ್ರೀಲಂಕಾ ಮತ್ತೆ ಚೇತರಿಸಿಕೊಂಡಿತು.

ಅಕ್ಷರ್ ಪಟೇಲ್ ಮತ್ತು ಕೆಎಲ್ ರಾಹುಲ್ ಎಚ್ಚರಿಕೆಯಿಂದ ಆಡಿ 92 ಎಸೆತಗಳಲ್ಲಿ 57 ರನ್​ ಸೇರಿಸಿ ಭಾರತವನ್ನು ಮುನ್ನಡೆಸಿದರು. ಆದಾಗ್ಯೂ, ಪಂದ್ಯ ಟೈನಲ್ಲಿ ಕೊನೆಗೊಂಡಿತು. ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಸತತ ಎಸೆತಗಳಲ್ಲಿ ಶಿವಂ ದುಬೆ ಮತ್ತು ಅರ್ಶ್​ದೀಪ್ ಅವರನ್ನು ಔಟ್ ಮಾಡಿದರು.

ಲಂಕಾಗೆ ಬಲ

ಈ ಪಂದ್ಯವು ಶ್ರೀಲಂಕಾದ ನೈತಿಕ ಸ್ಥೈರ್ಯ ಹೆಚ್ಚಿಸುತ್ತದೆ ಎಂದು ಕ್ರಿಕೆಟ್​ ತಜ್ಞರು ಹೇಳಿದ್ದಾರೆ. ಭಾರತವು ಗೆಲುವಿನ ಹಾದಿಗೆ ಮರಳಲು ತಮ್ಮ ಪ್ರಾಬಲ್ಯ ಬಯಸಲಿದೆ. ಆಟದ ವಿಧಾನವನ್ನು ಉತ್ತಮವಾಗಿ ಯೋಜಿಸಲು ಬಯಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತದ ಮೂವರು ಬ್ಯಾಟರ್​ಗಳು ಸ್ವೀಪ್ ಶಾಟ್​ಗಳಿಗೆ ಬಲಿಯಾದರು. ಟರ್ನಿಂಗ್ ಟ್ರ್ಯಾಕ್​ಗಳಲ್ಲಿ ಬಳಸಲು ಇದು ಸುಲಭವಾದ ತಂತ್ರವಾಗಿದ್ದರೂ ಭಾರತೀಯ ಬ್ಯಾಟರ್​ಗಳು ಈ ಬಗ್ಗೆ ಎಚ್ಚರಿಕೆ ವಹಿಸಲಿದ್ದಾರೆ ಶ್ರೀಲಂಕಾದ ಶಕ್ತಿ ಅವರ ಸ್ಪಿನ್-ಬೌಲಿಂಗ್/ ಅನುಕೂಲಕರ ಪರಿಸ್ಥಿತಿಗಳಲ್ಲಿ ಭಾರತೀಯ ಬ್ಯಾಟರ್​ಗಳ ಮೇಲೆ ಸಾಧ್ಯವಾದಷ್ಟು ಒತ್ತಡ ಹೇರಲು ಬಯಸುತ್ತಾರೆ.

ಮೊದಲ ಏಕದಿನ ಪಂದ್ಯವನ್ನು ಸ್ವಲ್ಪ ಸಮಯದವರೆಗೆ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರಿಂದ ಭಾರತಕ್ಕೆ ಭಯವೇನೂ ಇಲ್ಲ. ಅವರ ಸಂಯೋಜನೆಯು ಪರಿಸ್ಥಿತಿಗಳಿಗೆ ಸಾಕಷ್ಟು ಸ್ಥಿರವಾಗಿದೆ ಎಂದು ತೋರುತ್ತದೆ. ಭಾರತೀಯ ಬ್ಯಾಟರ್​ಗಳು ಲಂಕಾ ಬೌಲರ್​ಗಳನ್ನು ಒತ್ತಡದಲ್ಲಿ ಸಿಲುಕಿಸಬಹುದು.

ಶ್ರೀಲಂಕಾದ ಮುಂಚೂಣಿ ವೇಗಿಗಳಾದ ದುಷ್ಮಂತ ಚಮೀರಾ, ಬಿನುರಾ ಫರ್ನಾಂಡೊ, ಮಥೀಶಾ ಪತಿರಾನಾ, ನುವಾನ್ ತುಷಾರಾ ಮತ್ತು ದಿಲ್ಶಾನ್ ಮಧುಶಂಕಾ ಗಾಯಗೊಂಡಿದ್ದಾರೆ. ಬಲಿಷ್ಠ ಭಾರತೀಯ ಬ್ಯಾಟಿಂಗ್ ಲೈನ್ಅಪ್ ವಿರುದ್ಧ ಹೆಜ್ಜೆ ಇಡುವ ಜವಾಬ್ದಾರಿ ಅಸಿತಾ ಫರ್ನಾಂಡೊ ಮತ್ತು ಮೊಹಮ್ಮದ್ ಶಿರಾಜ್ ಅವರ ಮೇಲಿದೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದಿದ್ದರು. ಸ್ಪಿನ್ ಸ್ನೇಹಿ ಪರಿಸ್ಥಿತಿಗಳನ್ನು ಪರಿಗಣಿಸಿ, ಶಿರಾಜ್ ಬದಲಿಗೆ ಮಹೀಶ್ ದೀಕ್ಷಾ ಅವರನ್ನು ಕರೆತರಲು ಶ್ರೀಲಂಕಾ ಪ್ರಚೋದಿಸಬಹುದು.

ಆರ್ ಪ್ರೇಮದಾಸ ಕ್ರೀಡಾಂಗಣದ ಪಿಚ್ ವರದಿ

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಈ ಸ್ಥಳದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಹೆಚ್ಚು ಅನುಕೂಲಕರ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡಗಳು ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್​ಗಳು ಪ್ರಭಾವ ಬೀರಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ. ಪಂದ್ಯ ಮುಂದುವರಿದಂತೆ ಬ್ಯಾಟಿಂಗ್ ಕಠಿಣವಾಗುತ್ತದೆ. ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ಒಲವು ತೋರುತ್ತಾನೆ.

ಇದನ್ನೂ ಓದಿ: National Cricket Academy : ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ 45 ಪಿಚ್​ಗಳಿರುವ ಬೃಹತ್​​ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ

ಸಂಭಾವ್ಯ ಪ್ಲೇಯಿಂಗ್ ಇಲೆವೆನ್


ಶ್ರೀಲಂಕಾ: ಪಥುಮ್ ನಿಸ್ಸಾಂಕಾ, ಅವಿಷ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್ (ವಿಕೆ), ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ (ಸಿ), ಜನಿತ್ ಲಿಯಾನಗೆ, ದುನಿತ್ ವೆಲ್ಲಾಲಗೆ, ವನಿಂದು ಹಸರಂಗ, ಅಕಿಲಾ ಧನಂಜಯ, ಮೊಹಮ್ಮದ್ ಶಿರಾಜ್ / ಮಹೇಶ್ ತೀಕ್ಷಾನಾ, ಅಸಿತಾ ಫರ್ನಾಂಡೊ.

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ವಾಷಿಂಗ್ಟನ್ ಸುಂದರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಿವಂ ದುಬೆ, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಪಂದ್ಯದ ವಿವರಗಳು

  • ಭಾರತ-ಶ್ರೀಲಂಕಾ 2ನೇ ಏಕದಿನ ಪಂದ್ಯ
  • ಸ್ಥಳ: ಆರ್ ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ
  • ದಿನಾಂಕ ಮತ್ತು ಸಮಯ ಭಾನುವಾರ, ಆಗಸ್ಟ್ 4, ಮಧ್ಯಾಹ್ನ 2:30

ಮುಖಾಮುಖಿ ದಾಖಲೆಗಳು

  • ಪಂದ್ಯಗಳು- 169
  • ಶ್ರೀಲಂಕಾ ಗೆಲುವು- 57
  • ಭಾರತ ಗೆಲುವು- 99
  • ಸಮಬಲ 02
  • ಫಲಿತಾಂಶ ಇಲ್ಲ 11
  • ಮೊದಲ ಪಂದ್ಯ: ಜೂನ್ 16, 1979
  • ಇತ್ತೀಚಿನ ಪಂದ್ಯ- ಆಗಸ್ಟ್ 2, 2024
Continue Reading

ದೇಶ

Yamini Krishnamurthy: ಪದ್ಮವಿಭೂಷಣ ಪುರಸ್ಕೃತ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಇನ್ನಿಲ್ಲ

Yamini Krishnamurthy: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿವರಾದ ಯಾಮಿನಿ ಕೃಷ್ಣಮೂರ್ತಿ ಅವರ ನಿಧನಕ್ಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. ಇವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿವೆ.

VISTARANEWS.COM


on

Yamini Krishnamurthy
Koo

ನವದೆಹಲಿ: ದೇಶದ ಖ್ಯಾತ ಭರತನಾಟ್ಯ ಕಲಾವಿದೆ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಯಾಮಿನಿ ಕೃಷ್ಣಮೂರ್ತಿ (84) (Yamini Krishnamurthy) ಅವರು ಶನಿವಾರ (ಆಗಸ್ಟ್‌ 3) ಸಂಜೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ದೆಹಲಿಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ (Apollo Hospital) ಕೊನೆಯುಸಿರೆಳೆದಿದ್ದಾರೆ. “ಯಾಮಿನಿ ಕೃಷ್ಣಮೂರ್ತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಕಳೆದ 7 ತಿಂಗಳಿಂದಲೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ” ಎಂದು ಯಾಮಿನಿ ಕೃಷ್ಣಮೂರ್ತಿ ಅವರ ಮ್ಯಾನೇಜರ್‌ ಗಣೇಶ್‌ ಅವರು ಪಿಟಿಐಗೆ ತಿಳಿಸಿದ್ದಾರೆ.

ಯಾಮಿನಿ ಕೃಷ್ಣಮೂರ್ತಿ ಅವರ ಪಾರ್ಥಿವ ಶರೀರವನ್ನು ಅಪೋಲೊ ಆಸ್ಪತ್ರೆಯಿಂದ ಭಾನುವಾರ (ಆಗಸ್ಟ್‌ 4) ಬೆಳಗ್ಗೆ 9 ಗಂಟೆಗೆ ಅವರ ಯಾಮಿನಿ ಸ್ಕೂಲ್‌ ಆಫ್‌ ಡಾನ್ಸ್‌ ಇನ್‌ಸ್ಟಿಟ್ಯೂಟ್‌ಗೆ ತರಲಾಗುತ್ತದೆ. ಅಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಅವರ ಅಂತ್ಯಸಂಸ್ಕಾರದ ಕುರಿತು ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಯಾಮಿನಿ ಅವರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಗಣ್ಯರ ಸಂತಾಪ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿವರಾದ ಯಾಮಿನಿ ಕೃಷ್ಣಮೂರ್ತಿ ಅವರ ನಿಧನಕ್ಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. “ಭರತನಾಟ್ಯ ಹಾಗೂ ಕೂಚಿಪುಡಿಯಲ್ಲಿ ಪರಿಣತಿ ಸಾಧಿಸಿದ್ದ, ಖ್ಯಾತಿ ಗಳಿಸಿದ್ದ ಯಾಮಿನಿ ಕೃಷ್ಣಮೂರ್ತಿ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಮಾಜಿ ಸಿಎಂ ಪೋಸ್ಟ್‌ ಮಾಡಿದ್ದಾರೆ. ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಂಗೀತ ನಾಟಕ ಅಕಾಡೆಮಿ ಕೂಡ ಸಂತಾಪ ವ್ಯಕ್ತಪಡಿಸಿದೆ.

ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯದಲ್ಲಿ ಪ್ರಖ್ಯಾತಿ ಗಳಿಸಿದ್ದ ಯಾಮಿನಿ ಕೃಷ್ಣಮೂರ್ತಿ ಅವರಿಗೆ 1968ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಹಾಗೂ 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಎ ಪ್ಯಾಷನ್‌ ಫಾರ್‌ ಡಾನ್ಸ್‌ ಎಂಬ ಕೃತಿಯನ್ನೂ ರಚಿಸಿದ್ದಾರೆ. ದೆಹಲಿಯಲ್ಲಿ ಯಾಮಿನಿ ಸ್ಕೂಲ್‌ ಆಫ್‌ ಡಾನ್ಸ್‌ ಇನ್‌ಸ್ಟಿಟ್ಯೂಟ್‌ ತೆರೆದು ಸಾವಿರಾರು ಮಕ್ಕಳಿಗೆ ನೃತ್ಯ ತರಬೇತಿ ನೀಡಿದ್ದಾರೆ. ಇವರು ತಿರುಮಲ ತಿರುಪತಿ ದೇವಸ್ಥಾನದ ಆಸ್ಥಾನದ ನರ್ತಕಿಯಾಗಿಯೂ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: Alur Nagappa: ‘ಸಾವಿರ ಹಾಡುಗಳ ಸರದಾರ’ ಖ್ಯಾತಿಯ ಜಾನಪದ ಹಾಡುಗಾರ, ಸಾಹಿತಿ ಆಲೂರು ನಾಗಪ್ಪ ಇನ್ನಿಲ್ಲ

Continue Reading

ಪ್ರಮುಖ ಸುದ್ದಿ

Namma Metro: ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ; ಹಸಿರು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ

Namma Metro: ಬೆಂಗಳೂರು ನಗರದ ದೊಡ್ಡಕಲ್ಲಸಂದ್ರ ಬಳಿ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

VISTARANEWS.COM


on

Namma Metro
Koo

ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಪದೇಪದೆ ಅವಘಡಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು, ಸಿಬ್ಬಂದಿ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಮೊನ್ನೆ ಮೆಟ್ರೋ ಟ್ರ್ಯಾಕ್‌ಗೆ 4 ವರ್ಷದ ಮಗು ಬಿದ್ದ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ದೊಡ್ಡಕಲ್ಲಸಂದ್ರ ಬಳಿ ಶನಿವಾರ ಸಂಜೆ ನಡೆದಿದೆ.

ಸಂಜೆ 5:45 ಸುಮಾರಿಗೆ ದೊಡ್ಡಕಲ್ಲಸಂದ್ರ ಬಳಿ ಘಟನೆ‌ ನಡೆದಿದೆ. ಇದರಿಂದ ಯಲಚೇನಹಳ್ಳಿ- ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಕೊಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟ ವ್ಯಕ್ತಿ ಯಾರು?, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

Self Harming

ಆ. 1ರಂದು ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ 2ರಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದ ಘಟನೆ ನಡೆದಿತ್ತು. ತಕ್ಷಣ ಭದ್ರತಾ ಸಿಬ್ಬಂದಿ ತುರ್ತು ರೈಲು ನಿಲುಗಡೆ ವ್ಯವಸ್ಥೆಯನ್ನು ಬಳಸುವ ಮೂಲಕ ರೈಲು ಸಂಚಾರವನ್ನು ನಿಲ್ಲಿಸಿದ್ದರು. ಬಳಿಕ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು.

ಉಕ್ಕಿ ಹರಿಯುವ ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಶರಣು

Self Harming
Self Harming

ಚಿಕ್ಕೋಡಿ: ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಅಂಕಲಿ – ನಸಲಾಪೂರ ಗ್ರಾಮದ ಮಧ್ಯದ ಸೇತುವೆ ಬಳಿ ಆತ್ಮಹತ್ಯೆ (Krishna River) ಮಾಡಿಕೊಂಡಿದ್ದಾರೆ. ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಬಾಬುರಾವ ಸಂಭಾಜಿ ಭಾಸ್ಕರ (40) ಆತ್ಮಹತ್ಯೆಗೆ ಶರಣಾದವರು.

ಇದನ್ನೂ ಓದಿ: Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಅಂಕಲಿ ಹಾಗೂ ನಸಲಾಪೂರ ಗ್ರಾಮಗಳ ಮಧ್ಯೆ ನಿರ್ಮಿಸಲಾಗಿರುವಂತಹ ಸೇತುವೆ ಮೇಲೆ ನಿಂತು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗಾಗಲೇ ಅಂಕಲಿ ಪೋಲಿಸರು ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಂಕಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Continue Reading
Advertisement
Union Minister Pralhad Joshi latest statement at Mysore Chalo Padayatra
ಕರ್ನಾಟಕ4 mins ago

BJP-JDS Padayatra: ವಾಲ್ಮೀಕಿ ನಿಗಮ, ಮುಡಾ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೇರ್ ಹೋಲ್ಡರ್: ಪ್ರಲ್ಹಾದ್‌ ಜೋಶಿ ಆರೋಪ

Farmer dies after falling under power tiller wheel in Moralli village
ಉತ್ತರ ಕನ್ನಡ5 mins ago

Farmer Death: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ದಾರುಣ ಸಾವು

KHIR City project Launch on August 23 at bengaluru says Minister MB Patil
ಕರ್ನಾಟಕ8 mins ago

KHIR City: ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ‘ನಾಲೆಡ್ಜ್, ಹೆಲ್ತ್, ಇನ್ನೋವೇಶನ್ ಆಂಡ್ ರೀಸರ್ಚ್ ಸಿಟಿ’; ಆ.23ರಂದು ಉದ್ಘಾಟನೆ

IND vs SL ODI
ಪ್ರಮುಖ ಸುದ್ದಿ9 mins ago

IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ

Indian Organ Donation Day program inauguration by Minister Dinesh Gundurao at Belagavi
ಕರ್ನಾಟಕ15 mins ago

Belagavi News: ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳಿಗೆ ಗೌರವ; ದಿ‌ನೇಶ್ ಗುಂಡೂರಾವ್

Minister MB Patil statement in janandolana programme by congress party at ramanagara
ಕರ್ನಾಟಕ22 mins ago

MB Patil: ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ, ಜೆಡಿಎಸ್ ಷಡ್ಯಂತ್ರ; ಎಂ‌.ಬಿ. ಪಾಟೀಲ ಆರೋಪ

Wayanad Tragedy
Latest24 mins ago

Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

Yamini Krishnamurthy
ದೇಶ50 mins ago

Yamini Krishnamurthy: ಪದ್ಮವಿಭೂಷಣ ಪುರಸ್ಕೃತ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಇನ್ನಿಲ್ಲ

Namma Metro
ಪ್ರಮುಖ ಸುದ್ದಿ52 mins ago

Namma Metro: ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ; ಹಸಿರು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ

New National Cricket Academy
ಪ್ರಮುಖ ಸುದ್ದಿ1 hour ago

National Cricket Academy : ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ 45 ಪಿಚ್​ಗಳಿರುವ ಬೃಹತ್​​ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ9 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌