ವಿಸ್ತಾರ Explainer | ರಾಷ್ಟ್ರ ಲಾಂಛನ ವಿವಾದದ ಸಿಂಹ ಗರ್ಜನೆ! ಪ್ರತಿಪಕ್ಷಗಳ ಆರೋಪ ನಿಜವೇ? - Vistara News

EXPLAINER

ವಿಸ್ತಾರ Explainer | ರಾಷ್ಟ್ರ ಲಾಂಛನ ವಿವಾದದ ಸಿಂಹ ಗರ್ಜನೆ! ಪ್ರತಿಪಕ್ಷಗಳ ಆರೋಪ ನಿಜವೇ?

ನವ ದೆಹಲಿಯ ಶಕ್ತಿಕೇಂದ್ರದಲ್ಲಿ ನೂತನ ಸಂಸತ್‌ ಭವನದ ಕಟ್ಟಡದ ಮೇಲೆ ಅನಾವರಣಗೊಂಡಿರುವ ಭವ್ಯ ರಾಷ್ಟ್ರೀಯ ಲಾಂಛನಕ್ಕೂ ವಿವಾದದ ಗಾಳಿ ಬೀಸಿದೆ. ವಿವಾದದ “ಸಿಂಹ ಗರ್ಜನೆʼ ಆಗಿದ್ದೇಕೆ? ಇಲ್ಲಿದೆ ಸಮಗ್ರ ವಿವರ.

VISTARANEWS.COM


on

National Emblem 1
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸಂಸತ್‌ ಭವನದ ನೂತನ ಕಟ್ಟಡದ ಮೇಲೆ ಅಳವಡಿಸಿರುವ ರಾಷ್ಟ್ರ ಲಾಂಛನ ಇದೀಗ ವಿವಾದ ಸೃಷ್ಟಿಸಿದೆ. ರಾಷ್ಟ್ರ ಲಾಂಛನದಲ್ಲಿ ಹಲವು ನ್ಯೂನತೆಗಳನ್ನು ಪಟ್ಟಿ ಮಾಡಿರುವ ಕಾಂಗ್ರೆಸ್‌, ಇದರಿಂದ ಲಾಂಛನದ ಗೌರವಕ್ಕೆ ಚ್ಯುತಿಯಾಗಿದೆ ಎಂದು ಆರೋಪಿಸಿದೆ. ಆದರೆ ಕೇಂದ್ರ ಸರ್ಕಾರ ಈ ಎಲ್ಲ ಅಪವಾದಗಳನ್ನು ತಳ್ಳಿ ಹಾಕಿದೆ. ಹಾಗಾದರೆ ಏನಿದು ವಿವಾದ? ತಿಳಿಯೋಣ ಬನ್ನಿ.

ಪ್ರಧಾನಿ ನರೇಂದ್ರ ಮೋದಿಯಿಂದ ಅನಾವರಣ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸೋಮವಾರ (ಜುಲೈ ೧೧, ೨೦೨೨) ನವ ದೆಹಲಿಯ ಸೆಂಟ್ರಲ್‌ ವಿಸ್ಟಾದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಂಸತ್‌ ಭವನ ಕಟ್ಟಡದ ಮೇಲ್ಭಾಗದಲ್ಲಿ ಭವ್ಯವಾದ ರಾಷ್ಟ್ರ ಲಾಂಛನವನ್ನು ಅನಾವರಣಗೊಳಿಸಿದ್ದರು. ನೂತನ ಸಂಸತ್‌ ಭವನ ಕಟ್ಟಡದ ಕೇಂದ್ರ ಭಾಗದ ಚಾವಣಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ಈ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. “”ಲಾಂಛನದಲ್ಲಿನ ನಾಲ್ಕು ಸಿಂಹಗಳನ್ನು ಗರ್ಜಿಸುತ್ತಿರುವಂತೆ ಕೆತ್ತನೆ ಮಾಡಲಾಗಿದ್ದು, ಇದು ಸಂವಿಧಾನದ ಉಲ್ಲಂಘನೆಯಾಗಿದೆ. ರಾಷ್ಟ್ರೀಯ ಘನತೆ ಮತ್ತು ಗೌರವಕ್ಕೆ ಈ ಮೂಲಕ ಮಸಿ ಬಳಿಯಲಾಗಿದೆʼʼ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಏನಿದು ರಾಷ್ಟ್ರ ಲಾಂಛನ?

ಸಾರನಾಥದ ಅಶೋಕಸ್ತಂಭದ ಸಿಂಹಗಳ ಮುಖ

ರಾಷ್ಟ್ರದ ಅಸ್ಮಿತೆಯನ್ನು ಬಿಂಬಿಸುವ ಪ್ರಮುಖ ಚಿಹ್ನೆಗಳಲ್ಲಿ ರಾಷ್ಟ್ರ ಲಾಂಛನವೂ ಒಂದು. ಇದನ್ನು ಭಾರತದ ರಾಷ್ಟ್ರ ಮುದ್ರೆಯಾಗಿ ಬಳಸಲಾಗುತ್ತದೆ. ಉತ್ತರಪ್ರದೇಶದ ವಾರಾಣಸಿಯಿಂದ ೧೦ ಕಿ.ಮೀ ದೂರದಲ್ಲಿರುವ ಐತಿಹಾಸಿಕ ಸಾರನಾಥದಲ್ಲಿ ಮೌರ್ಯ ವಂಶದ ಚಕ್ರವರ್ತಿ ಅಶೋಕ ಕಟ್ಟಿಸಿದ ಬೌದ್ಧ ಸ್ತೂಪದಲ್ಲಿ ನಾಲ್ಕು ಸಿಂಹಗಳನ್ನು ಒಳಗೊಂಡಿರುವ ಸ್ತಂಭ ಇದೆ. ಇದನ್ನು ಅಶೋಕ ಸ್ತಂಭ ಎಂದೂ ಕರೆಯುತ್ತಾರೆ. ನಾಲ್ಕು ಸಿಂಹಗಳು ಮತ್ತು ಧರ್ಮಚಕ್ರವನ್ನು ( ಬೌದ್ಧ ನೀತಿಗಳನ್ನು ಪ್ರತಿನಿಧಿಸುವ ಚಕ್ರ) ಒಳಗೊಂಡಿದೆ. ಸ್ತೂಪದ ಈ ಭಾಗವನ್ನು ಸಾರನಾಥದ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಸಂರಕ್ಷಿಸಿಡಲಾಗಿದೆ. ಅಶೋಕಸ್ತಂಭದ ಈ ಲಾಂಛನದಲ್ಲಿ ಮೂರು ಭಾಗಗಳನ್ನು ಕಾಣಬಹುದು. ತಳ ಭಾಗದಲ್ಲಿರುವ ತಲೆ ಕೆಳಗಾಗಿರುವ ತಾವರೆಯ ರಚನೆ ಇದೆ. ಅದರ ಮೇಲೆ ನಾಲ್ಕು ದಿಕ್ಕುಗಳಿಗೆ ನಾಲ್ಕು ಚಕ್ರಗಳು ಇವೆ. ಪ್ರತಿ ಚಕ್ರದಲ್ಲೂ ೨೪ ಗೆರೆಗಳಿದ್ದು, ಬೌದ್ಧರ ಆಚರಣೆಗಳ ಸಂಕೇತವಾಗಿದೆ. ಪ್ರತಿ ಎರಡು ಚಕ್ರದ ಮಧ್ಯೆ ತಲಾ ಒಂದು ಕುದುರೆ, ಎತ್ತು, ಆನೆ, ಸಿಂಹದ ಕೆತ್ತನೆಗಳನ್ನು ಕಾಣಬಹುದು. ತುದಿಯಲ್ಲಿ ನಾಲ್ಕು ದಿಕ್ಕುಗಳಿಗೆ ನಾಲ್ಕು ಸಿಂಹಗಳು ಮುಖ ಮಾಡಿವೆ. ಪ್ರತಿ ಸಿಂಹವೂ ಮೂರು ಅಡಿ ಎತ್ತರವಿದೆ. ಇದನ್ನು ಆಧರಿಸಿ ರಾಷ್ಟ್ರ ಲಾಂಛನವನ್ನು ೧೯೫೦ರ ಜನವರಿ ೨೬ರಂದು ಅಂಗೀಕರಿಸಲಾಯಿತು. ಇದಕ್ಕೆ ಮಂಡೂಕ ಉಪನಿಷತ್ತಿನಲ್ಲಿರುವ “ಸತ್ಯಮೇವ ಜಯತೇʼ ಸಾಲನ್ನೂ ಸೇರಿಸಲಾಯಿತು.

ಮೂಲ ವಿನ್ಯಾಸ ರಚನೆಯಾಗಿದ್ದು ಎಂದು? ಸಾರನಾಥದಲ್ಲಿ ಕ್ರಿಸ್ತಪೂರ್ವ ೨೫೦ರಲ್ಲಿ ಅಶೋಕ ಸ್ತಂಭದ ಮೂಲ ವಿನ್ಯಾಸ ಆಗಿತ್ತು. ಇದೇ ಸಾರನಾಥದಲ್ಲಿ ಗೌತಮ ಬುದ್ಧ ಮೊದಲ ಸಲ ಅಷ್ಟ ಮಾರ್ಗಗಳ ಬಗ್ಗೆ ಉಪನ್ಯಾಸವನ್ನು ನೀಡಿದ್ದ. ೧೯೦೫ರಲ್ಲಿ ಫ್ರೆಡಿಚ್‌ ಆಸ್ಕರ್‌ ಓರ್ಟೆಲ್‌ ಈ ಸ್ತಂಭವನ್ನು ಉತ್ಖನನದ ಮೂಲಕ ಬೆಳಕಿಗೆ ತಂದರು. ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ ನಾಯಕರು ರಾಷ್ಟ್ರ ಲಾಂಛನದ ಅಗತ್ಯವನ್ನು ಮನಗಂಡು ಹುಡುಕಾಟ ಆರಂಭಿಸಿದರು. ಆಗ ನಾಗರಿಕ ಸೇವಾ ಅಧಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬದ್ರುದ್ದೀನ್‌ ತ್ಯಾಬ್ಜಿ ಮತ್ತು ಅವರ ಪತ್ನಿ ಸುರಯ್ಯಾ ತ್ಯಾಬ್ಜಿ ಅವರು ಸಿಂಹದ ಮುಖವಿರುವ ಅಶೋಕಸ್ತಂಭದ ಗುರುತನ್ನು ಲಾಂಛನವಾಗಿ ಬಳಸಬಹುದು ಎಂದು ಪ್ರಸ್ತಾಪಿಸಿದ್ದರು.

ಲಾಂಛನದ ಚಿತ್ರ ರಚಿಸಿದ್ದು ಯಾರು?

ಹಿರಿಯ ಕಲಾವಿದ ದೀನನಾಥ್‌ ಭಾರ್ಗವ

ಸಂವಿಧಾನ ಕರಡು ರಚನೆಯ ಸಂದರ್ಭ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ದೀನನಾಥ್‌ ಭಾರ್ಗವ ಅವರಿಗೆ ರಾಷ್ಟ್ರ ಲಾಂಛನದ ವಿನ್ಯಾಸವನ್ನು ಸಿದ್ಧಪಡಿಸುವಂತೆ ತಿಳಿಸಲಾಯಿತು. ಸಂವಿಧಾನದ ದಾಖಲೆಗಳಲ್ಲಿ ವಿನ್ಯಾಸಗಳನ್ನು ರಚಿಸಿದ್ದ ಕಲಾವಿದ ನಂದನ್‌ಲಾಲ್‌ ಅವರ ಸಲಹೆಗಳನ್ನು ಪಡೆದು ದೀನ ನಾಥ್‌ ಭಾರ್ಗವ ಅವರು ಲಾಂಛನದ ವಿನ್ಯಾಸವಿರುವ ಚಿತ್ರವನ್ನು ರಚಿಸಿದರು.

ರಾಜಕೀಯ ವಿವಾದವೇನು? ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರ ಲಾಂಛನದ ‘ಸ್ವರೂಪ’ವನ್ನು ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ಮೂಲ ಲಾಂಛನದಲ್ಲಿ ಸಿಂಹಗಳ ಮುಖ ಸೌಮ್ಯವಾಗಿದ್ದರೆ, ಸಂಸತ್‌ ಭವನದ ಮೇಲೆ ರೂಪಿಸಲಾಗಿರುವ ಹೊಸ ಲಾಂಛನದಲ್ಲಿ ಗರ್ಜಿಸುತ್ತಿರುವಂತೆ ಉಗ್ರ ಸ್ವರೂಪವನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ” ಸಾರನಾಥದ ಅಶೋಕ ಸ್ತಂಭದಲ್ಲಿರುವ ಸಿಂಹಗಳ ಮುಖ ಭಾವಕ್ಕೂ, ಹೊಸ ಲಾಂಛನಕ್ಕೂ ಭಾರಿ ವ್ಯತ್ಯಾಸ ಇದೆ. ಇದು ಭಾರತದ ಲಾಂಛನಕ್ಕೆ ಮಾಡಿರುವ ಅಗೌರವವಾಗಿದೆʼʼ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ದೂರಿದ್ದಾರೆ.

ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ: ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, “ಸೌಂದರ್ಯ ಎನ್ನುವುದು ನೋಡುಗನ ದೃಷ್ಟಿಯಲ್ಲಿರುತ್ತದೆ ಎಂಬ ಮಾತಿದೆ, ಮುಖದ ಶಾಂತತೆ ಹಾಗೂ ಉಗ್ರತೆ ಕೂಡ ಹಾಗೆಯೇ. ಈಗ ಅನಾವರಣಗೊಳಿಸಿರುವ ರಾಷ್ಟ್ರ ಲಾಂಛನವು ಮೂಲ ಸಾರನಾಥ ಸಿಂಹ ಲಾಂಛನದಂತೆ ಇದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲʼʼ ಎಂದು ಸಮಜಾಯಿಷಿ ನೀಡಿದ್ದಾರೆ.

ಲಾಂಛನವನ್ನು ರಚಿಸಿದ ಶಿಲ್ಪಿ ಏನೆನ್ನುತ್ತಾರೆ?

ರಾಷ್ಟ್ರ ಲಾಂಛನದ ಶಿಲ್ಪಿ ಸುನಿಲ್‌ ಡಿಯೋರ್

ಹೊಸ ಲಾಂಛನವನ್ನು ನಿರ್ಮಿಸಿದ ಶಿಲ್ಪಿ ಸುನಿಲ್‌ ಡಿಯೋರ್‌ “ನಾವು ಮೂಲ ಸಾರನಾಥ ಲಾಂಛನವನ್ನು ಸಮಗ್ರವಾಗಿ, ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಬಳಿಕವೇ ಈ ಲಾಂಛನವನ್ನು ರೂಪಿಸಿದ್ದೇವೆ. ಥೇಟ್‌ ಸಾರನಾಥ ಲಾಂಛನದಲ್ಲಿರುವ ಸಿಂಹಗಳಂತೆಯೇ ಇದನ್ನೂ ಕೆತ್ತಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ” ಈ ಲಾಂಛನ ನಿರ್ಮಾಣ ವಿಚಾರದಲ್ಲಿ ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ. ಮೂಲ ಲಾಂಛನ ಸ್ವತಃ ಅಧ್ಯಯನ ಮಾಡಿದ್ದೇನೆʼ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಮೂಲ ಲಾಂಛನಕ್ಕೂ, ಸಂಸತ್‌ ಭವನದ ಮೇಲೆ ನಿರ್ಮಾಣವಾಗುತ್ತಿರುವ ಲಾಂಛನಕ್ಕೂ ಯಾವುದೇ ವ್ಯತ್ಯಾಸ ಆಗಬಾರದು ಎಂಬುದನ್ನು ನಾವು ಗಮನದಲ್ಲಿ ಇಟ್ಟುಕೊಂಡು, ಅದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ರೂಪಿಸಿದ್ದೇವೆ. ಸಾರನಾಥ ಲಾಂಛನದ ಅಳತೆ 3×3.5 ಅಡಿ ಎತ್ತರವಿದೆ. ಆದರೆ ನಾವು ಈಗ ನಿರ್ಮಿಸಿದ ಲಾಂಛನ 21.3 ಎತ್ತರ ಇದೆ ಎಂದು ತಿಳಿಸಿದ್ದಾರೆ.

ಕೆಳಗಿಂದ ಫೋಟೋ ತೆಗೆಯಲಾಗಿದೆ : ಲಾಂಛನದ ಫೋಟೋವನ್ನು ವಿವಿಧ ಆಯಾಮಗಳಿಂದ ಸೆರೆ ಹಿಡಿದಾಗ ಬೇರೆಬೇರೆ ಸ್ವರೂಪದಲ್ಲಿ ಗೋಚರಿಸುತ್ತದೆ. ಈಗ ಲಾಂಛನವನ್ನು ಕೆಳಭಾಗದಿಂದ ಫೋಟೋ ತೆಗೆದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ. ಕೆಳಭಾಗದಿಂದ ಸೆರೆ ಹಿಡಿಯಲಾದ ಫೋಟೋದಲ್ಲಿ ಸಹಜವಾಗಿಯೇ ಸಿಂಹಗಳ ಬಾಯಿ ದೊಡ್ಡದಾಗಿ ಕಾಣುತ್ತದೆ ಮತ್ತು ಅವು ವ್ಯಘ್ರ ಸ್ವರೂಪ ತಳೆದಂತೆ ಅನಿಸುತ್ತಿದೆ ಎಂದು ಶಿಲ್ಪಿ ಸುನಿಲ್‌ ಡಿಯೋರ್‌ ಹೇಳಿದ್ದಾರೆ.

೯,೫೦೦ ಕೆ.ಜಿ ತೂಕದ ಭವ್ಯ ಲಾಂಛನ

national emblem

ನೂತನ ಸಂಸತ್‌ ಭವನ ಕಟ್ಟಡದ ಕೇಂದ್ರ ಭಾಗದ ಚಾವಣಿಯ ಮೇಲೆ ಪ್ರತಿಷ್ಠಾಪನೆಯಾಗಿರುವ ಕಂಚಿನ ರಾಷ್ಟ್ರ ಲಾಂಛನ ೬.೫ ಮೀಟರ್‌ ಎತ್ತರ ಮತ್ತು ೪.೪ ಮೀಟರ್‌ ಅಗಲವಿದ್ದು, ೯,೫೦೦ ಕೆ.ಜಿ ತೂಕವಿದೆ. ರಾಷ್ಟ್ರ ಲಾಂಛನಕ್ಕೆ ಪೂರಕವಾಗಿ ಉಕ್ಕಿನಿಂದ ತಯಾರಿಸಿದ ೬,೫೦೦ ಕೆ.ಜಿ ತೂಕದ ರಚನೆಯನ್ನೂ ಅಳವಡಿಸಲಾಗಿದೆ. ಒಟ್ಟು ಎಂಟು ಹಂತಗಳಲ್ಲಿ ಈ ಲಾಂಛನವನ್ನು ನಿರ್ಮಿಸಲಾಗಿದೆ. ಮಣ್ಣಿನ ಮಾದರಿ, ಕಂಪ್ಯೂಟರ್‌ ಗ್ರಾಫಿಕ್‌, ಕಂಚಿನ ಲೋಹದಿಂದ ತಯಾರಿಕೆ, ಪಾಲಿಷಿಂಗ್‌ ಸೇರಿ ಎಂಟು ಹಂತಗಳಲ್ಲಿ ಸಿದ್ಧಪಡಿಸಲಾಗಿದೆ. ಈ ಬೃಹತ್‌ ಲಾಂಛನವನ್ನು ೧೫೦ ಬಿಡಿ ಭಾಗಗಳಾಗಿ ವಿಂಗಡಿಸಿ, ಚಾವಣಿಯಲ್ಲಿ ಜೋಡಿಸಿ ಅಳವಡಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಈ ಕೆಲಸ ಆರಂಭವಾಗಿ ಪೂರ್ಣವಾಗಲು ಎರಡು ತಿಂಗಳಿನ ಸಮಯ ತೆಗೆದುಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

CM Siddaramaiah: ‘ಗ್ಯಾರಂಟಿ’ ಹೆಸರಲ್ಲಿ ನಮಗೆ ಗೊತ್ತಿಲ್ಲದಂತೆಯೇ ಜೇಬು ಖಾಲಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮಾಡುತ್ತಿರುವ ಬೆಲೆ ಏರಿಕೆಗಳನ್ನು, ಇಷ್ಟರಲ್ಲಿಯೇ ಮಾಡಲಿರುವ ಬೆಲೆಯೇರಿಕೆಗಳನ್ನು ಗಮನಿಸಿ ಈ ಮಾತು ಆಡಲಾಗುತ್ತಿದೆ. ಒಂದು ಕಡೆಯಿಂದ ಕೊಟ್ಟಂತೆ ನಟಿಸುತ್ತಿರುವ ಸರಕಾರ, ಇನ್ನೊಂದು ಕಡೆಯಿಂದ ಅದರ ದುಪ್ಪಟ್ಟು ಹಣ ನಮ್ಮ ಕಿಸೆಯಿಂದ ಪೀಕುತ್ತಿದೆ!

VISTARANEWS.COM


on

cm siddaramaiah price hikes
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್‌ ಸರಕಾರ (Congress government) ರಾಜ್ಯದಲ್ಲಿ ಬಂದ ಕೂಡಲೇ ಚುನಾವಣೆ (Assembly Election) ಸಂದರ್ಭದಲ್ಲಿ ನೀಡಿದ ʼಗ್ಯಾರಂಟಿ ಯೋಜನೆʼಗಳನ್ನು (Guarantee schemes) ಜಾರಿ ಮಾಡಿತು. ಇದಕ್ಕಾಗಿ ಮುಂದೆ ಯಾವ ಬೆಲೆ ತೆರಬೇಕಾಗಲಿದೆಯೋ ಎಂಬ ಆತಂಕ ಆಗಲೇ ರಾಜ್ಯದ ಜನತೆಯನ್ನು ಕಾಡಿತ್ತು. ಅದು ಈ ನಿಜವಾಗುತ್ತಿದೆ. ಒಂದು ಕಡೆಯಿಂದ ಕೊಟ್ಟಂತೆ ನಟಿಸುತ್ತಿರುವ ಸರಕಾರ, ಇನ್ನೊಂದು ಕಡೆಯಿಂದ ಅದರ ದುಪ್ಪಟ್ಟು ಹಣ ನಮ್ಮ ಕಿಸೆಯಿಂದ ಪೀಕುತ್ತಿದೆ!

ಹೌದು, ಈ ಲೆಕ್ಕಾಚಾರ ನೋಡಿದರೆ ನೀವು ಖಂಡಿತಾ ಬಾಯಿ ಬಾಯಿ ಬಡಿದುಕೊಳ್ಳುತ್ತೀರಿ. ‘ಗ್ಯಾರಂಟಿ’ ಹೆಸರಲ್ಲಿ ನಮಗೆ ಗೊತ್ತಿಲ್ಲದಂತೆಯೇ ಜೇಬು ಖಾಲಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮಾಡುತ್ತಿರುವ ಬೆಲೆ ಏರಿಕೆಗಳನ್ನು, ಇಷ್ಟರಲ್ಲಿಯೇ ಮಾಡಲಿರುವ ಬೆಲೆಯೇರಿಕೆಗಳನ್ನು ಗಮನಿಸಿ ಈ ಮಾತು ಆಡಲಾಗುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ (Petrol price hike) ಏರಿಸಲಾಗಿದೆ; ಹಾಲು ದರವೂ (milk price hike) ಹೆಚ್ಚಿತು. ಮುಂದೆ ಕುಡಿಯವ ಕಾವೇರಿ ನೀರು (Kaveri Water Price hike) ಮತ್ತು ಆಲ್ಕೋಹಾಲ್‌ ದರಕ್ಕೂ (Liquor rates) ಸರಕಾರ ಕೈಹಾಕಲಿದೆ. ಶೀಘ್ರದಲ್ಲೇ ಟೀ- ಕಾಫಿ ರೇಟ್‌ ಏರಿಕೆಯೂ ಆಗಬಹುದು. ಮೆಡಿಕಲ್‌ ಸೀಟು ಶುಲ್ಕಗಳು ಹೆಚ್ಚಲಿವೆ, ಆಟೋ ದರ (Auto Fare) ಅಧಿಕವಾಗಲಿದೆ.

ಈಗ ಲೆಕ್ಕಾಚಾರ ತುಸು ನೋಡೋಣ. ಮೊದಲಿಗೆ ಸರಕಾರ ಏನು ಕೊಟ್ಟಿದೆ ಎಂಬ ಲೆಕ್ಕ.

ಗ್ಯಾರಂಟಿ ಯೋಜನೆಗಳು

ಗೃಹಲಕ್ಷ್ಮೀ – 2,000 ರೂ.
ಯುವನಿಧಿ – ಡಿಪ್ಲೊಮಾ 1500/- ಪದವೀಧರರಿಗೆ 3000/-
ಶಕ್ತಿಯೋಜನೆ – ಮಹಿಳೆಯರಿಗೆ ಸರ್ಕಾರಿ ಬಸ್​​ನಲ್ಲಿ ಉಚಿತ ಪ್ರಯಾಣ
ಅನ್ನಭಾಗ್ಯ – 5ಕೆಜಿ ಅಕ್ಕಿ & 170 ರೂಪಾಯಿ
ಗೃಹಜ್ಯೋತಿ – 200 ಯೂನಿಟ್​​ವರೆಗೆ ಉಚಿತ ವಿದ್ಯುತ್​​

ಇನ್ನು ಬೆಲೆ ಏರಿಕೆಗಳು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಪೆಟ್ರೋಲ್ – 3 ರೂಪಾಯಿ ಏರಿಕೆ
ಡೀಸೆಲ್ – 3.50 ರೂ. ಏರಿಕೆ
ಪೆಟ್ರೋಲ್ ಸದ್ಯದ ದರ – 103 ರೂ.
ಡೀಸೆಲ್ ಸದ್ಯದ ದರ – 89.20 ರೂ.
1 ದ್ವಿಚಕ್ರ ವಾಹನ – ದಿನಕ್ಕೆ 1 ಲೀಟರ್ ಬಳಕೆ
ತಿಂಗಳಿಗೆ ​ಬಳಕೆ ಸರಾಸರಿ ಹೆಚ್ಚಳ 30 ಲೀಟರ್​​ – ತಿಂಗಳಿಗೆ 100 ರೂ. ಹೆಚ್ಚಳ

ಹಾಲಿನ ದರ ಹೆಚ್ಚಳ

ಹಾಲಿನ ದರ – ವರ್ಷದಲ್ಲಿ 2 ಬಾರಿ ಏರಿಕೆ
ಮೊದಲು ಲೀಟರ್​​ಗೆ ಹೆಚ್ಚಾಗಿದ್ದು – 3 ರೂಪಾಯಿ
ಇದೀಗ ಲೀಟರ್​ಗೆ ಹೆಚ್ಚಾಗಿದ್ದು – 2 ರೂಪಾಯಿ
ಲೀಟರ್ ಹಾಲಿನ ಸದ್ಯದ ದರ – 44 ರೂ. (ನೀಲಿ ಪ್ಯಾಕೆಟ್)
1 ಕುಟುಂಬದಿಂದ ಹಾಲು ಬಳಕೆ – 1 ಲೀಟರ್
ತಿಂಗಳಿಗೆ ಕುಟುಂಬದಿಂದ ಬಳಕೆ – 30 ಲೀಟರ್
ಹಾಲಿನ ದರ ಹೆಚ್ಚಳದಿಂದ ಹೊರೆ – 150 ರೂ.

ತರಕಾರಿ ದರ ಏರಿಕೆ

ಹಣ್ಣು, ತರಕಾರಿ, ಸೊಪ್ಪು ಬೆಲೆ ನಿರಂತರ ಏರಿಕೆ
ಹಣ್ಣು, ತರಕಾರಿ ಏರಿಕೆಯಿಂದ ಹೆಚ್ಚುವರಿ ಹೊರೆ
ಟ್ರಾನ್ಸ್​ಪೋರ್ಟ್ ಚಾರ್ಜಸ್ ಸೇರಿ ವಿವಿಧ ಚಾರ್ಜಸ್
ಪ್ರತಿ ತಿಂಗಳಿಗೆ ಜನರಿಗೆ ಅಂದಾಜು 500 ರೂ. ಹೊರೆ

ದಿನಸಿ ವಸ್ತುಗಳ ಬೆಲೆ ಏರಿಕೆ

ದಿನಸಿ ವಸ್ತುಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆ
ಅಕ್ಕಿ, ಬೇಳೆ, ಡಿಟರ್ಜೆಂಟ್​​ ಸೇರಿ ವಸ್ತುಗಳ ಬೆಲೆ ಗಗನಕ್ಕೆ
ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ
ತಿಂಗಳಿಗೆ ಅಂದಾಜು 700 ರೂಪಾಯಿಯಷ್ಟು ಜನರಿಗೆ ಹೊರೆ

ಮಾಂಸಪ್ರಿಯರಿಗೂ ಶಾಕ್

ರಾಜ್ಯದಲ್ಲಿ ಮಾಂಸದ ಬೆಲೆಯಲ್ಲೂ ಹೆಚ್ಚಳ
ಮಾಂಸದ ಬೆಲೆ ಹೆಚ್ಚಳದಿಂದ ಹೆಚ್ಚುವರಿ ಹೊರೆ
ಜನರಿಗೆ ತಿಂಗಳಿಗೆ ಅಂದಾಜು 300 ರೂಪಾಯಿ ಹೆಚ್ಚಳ

ಮದ್ಯಪ್ರಿಯರಿಗೆ ಬಿಗ್ ಶಾಕ್

2023ರ ಜುಲೈನಲ್ಲಿ ಬಿಯರ್ 10%, ಮದ್ಯ 20% ಏರಿಕೆ
3 ತಿಂಗಳ ಹಿಂದೆ ಬಿಯರ್ 10%, ಮದ್ಯ 25% ದರ ಹೆಚ್ಚಳ
ಜುಲೈ 1ರಿಂದ ಮತ್ತೆ ಅಬಕಾರಿ ದರ ಹೆಚ್ಚಳಕ್ಕೆ ನಿರ್ಧಾರ?

ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ಶಾಕ್!?

ಉಚಿತ ವಿದ್ಯುತ್​ ಮಧ್ಯೆಯೂ ವಾಣಿಜ್ಯ ಬಳಕೆ ವಿದ್ಯುತ್​ ದರ ಏರಿಕೆ
ಕೈಗಾರಿಕೆ ಸೇರಿ ವಾಣಿಜ್ಯ ಬಳಕೆಯ ವಿದ್ಯುತ್​ ದರ ಹೆಚ್ಚಳ
ವಿದ್ಯುತ್ ದರ ಹೆಚ್ಚಳದಿಂದ ವಸ್ತುಗಳ ಮೇಲೆ ಪರಿಣಾಮ
ಅಂದಾಜು 300 ರೂಪಾಯಿಯಷ್ಟು ಹೊರೆ ಬೀಳುವ ಸಾಧ್ಯತೆ

ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್?

ಉಚಿತ ಪ್ರಯಾಣದ ನಡುವೆ ಬಸ್ ಟಿಕೆಟ್ ದರ ಏರಿಕೆ ಚಿಂತನೆ
ಗಂಡಸರ ಪ್ರಯಾಣದ ದರ ಹೆಚ್ಚಿಸಲು ಸರ್ಕಾರದ ಚಿಂತನೆ
ಶೀಘ್ರದಲ್ಲೇ ಸರ್ಕಾರಿ ಬಸ್​ಗಳ ಪ್ರಯಾಣದ ದರ ಏರಿಕೆ ಸಾಧ್ಯತೆ
ಖಾಸಗಿ ಬಸ್‌ಗಳ ದರವೂ ದುಬಾರಿಯಾಗುವ ಸಾಧ್ಯತೆ
ಟಿಕೆಟ್ ದರ ಏರಿಕೆಯಿಂದ ಪ್ರತಿ ಕುಟುಂಬಕ್ಕೂ ಹೆಚ್ಚುವರಿ ಹೊರೆ
1 ಕುಟುಂಬಕ್ಕೆ ಅಂದಾಜು 200 ರೂಪಾಯಿಯಷ್ಟು ಹೆಚ್ಚು ಹೊರೆ

ಜನರಿಗೆ ಜಲ‘ಶಾಕ್’!
ರಾಜ್ಯದ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ
ಹೆಚ್ಚು ಟ್ಯಾಂಕರ್ ನೀರು ಅವಲಂಬಿಸಿರುವ ಜನರು
ಟ್ಯಾಂಕರ್​ ಮೂಲಕ ನೀರು ತರಿಸಿಕೊಳ್ತಿರುವ ಜನರು
ಒಂದು ಟ್ಯಾಂಕರ್​​ ನೀರಿನ ಬೆಲೆ ಸುಮಾರು ₹2000

ತಿಂಗಳಿಗೆ 1 ಕುಟುಂಬಕ್ಕೆ ಅಂದಾಜು ಹೊರೆ

ಹಾಲು 30 ಲೀಟರ್ ಬಳಕೆ – 150 ರೂ.
ಪೆಟ್ರೋಲ್, ಡೀಸೆಲ್ 30 ಲೀ. – 90 ರೂ.
ತರಕಾರಿ – 500 ರೂಪಾಯಿ
ಮದ್ಯ – 500 ರೂಪಾಯಿ
ವಿದ್ಯುತ್ ವಾಣಿಜ್ಯ ಬಳಕೆ – 300 ರೂ.
ಬಸ್ ಟಿಕೆಟ್ ದರ – 200 ರೂ.
ದಿನಸಿ – 700 ರೂ.
ಮಾಂಸ – 300 ರೂ.
ಟ್ಯಾಂಕರ್ ನೀರು – 2,000 ರೂ.
ಒಟ್ಟು ಅಂದಾಜು ಹೊರೆ – 4740

ವರ್ಷಕ್ಕೆ ಎಷ್ಟು ಹೊರೆ?

ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಅಧಿಕ ಹೊರೆ

ವರ್ಷಕ್ಕೆ ಎಷ್ಟು ಹೆಚ್ಚುವರಿ ಹೊರೆ?

ಕುಟುಂಬಕ್ಕೆ ಸರ್ಕಾರ ಕೊಡೋದು ವರ್ಷಕ್ಕೆ 24 ಸಾವಿರಕ್ಕೂ ಹೆಚ್ಚು
ಆದರೆ ಪ್ರತಿ 1 ಕುಟುಂಬಕ್ಕೆ ವರ್ಷಕ್ಕೆ 56,880 ರೂ. ಹೊರೆ
ಸರ್ಕಾರ ಕೊಟ್ಟ 24 ಸಾವಿರ ಬಿಟ್ಟರೆ 32,880 ರೂ. ಹೆಚ್ಚುವರಿ ಹೊರೆ
ಪ್ರತಿ 1 ಕುಟುಂಬಕ್ಕೆ ತಿಂಗಳಿಗೆ 4740 ರೂ. ಅಧಿಕ ಹೊರೆ
ಸರ್ಕಾರ ಕೊಡುವ 2 ಸಾವಿರ ಹೊರತುಪಡಿಸಿದರೆ 2740 ರೂ. ಹೆಚ್ಚುವರಿ ಹೊರೆ

ಇದನ್ನೂ ಓದಿ: CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್‌ ಟಿಕೆಟ್‌ ದರ ಏರಿಕೆ ಗ್ಯಾರಂಟಿ

Continue Reading

Latest

Members of Parliament: ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ? ಜೈಲಿನಲ್ಲಿದ್ದವರ ಕತೆಯೇನು?

ಲೋಕ ಸಭಾ ಚುನಾವಣೆ ಬಳಿಕ ಸಂಸದರಾಗಿ (Members of Parliament) ಆಯ್ಕೆಯಾಗುವವರು ಯಾವ ರೀತಿ ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಂಸದೀಯ ಪಾತ್ರವನ್ನು ಪೂರೈಸುವಲ್ಲಿ ಪ್ರಮಾಣ ವಚನ ಸ್ವೀಕಾರವು ಮೊದಲ ಮತ್ತು ಪ್ರಮುಖ ಹೆಜ್ಜೆಯಾಗಿದೆ. ಆದರೂ ಕೆಲವು ಸಂಸದರು ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗದೇ ಇದ್ದರೆ ಮುಂದಿನ ನಡೆ ಹೇಗಿರುತ್ತದೆ ಎಂಬಿತ್ಯಾದಿ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

By

Members of Parliament
Koo

18ನೇ ಲೋಕಸಭೆಯ (loksabha election) ಮೊದಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಹೊಸದಾಗಿ ಚುನಾಯಿತರಾದ ಸಂಸತ್ ಸದಸ್ಯರು (Members of Parliament) ಸೋಮವಾರದಿಂದ ಪ್ರಮಾಣ ವಚನ (taking oath) ಸ್ವೀಕರಿಸಲು ಆರಂಭಿಸಿದ್ದಾರೆ. ಎರಡು ದಿನಗಳಲ್ಲಿ ಕೆಳಮನೆಯ (lower house) 543 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 26ರಂದು ನೂತನ ಲೋಕಸಭಾ ಸ್ಪೀಕರ್ (Speaker) ಆಯ್ಕೆ ನಡೆಯಲಿದೆ.

ಪ್ರಮಾಣ ವಚನ ಬೋಧಿಸುವವರು ಯಾರು?

ಸಂಸದೀಯ ಪದ್ಧತಿಗಳ ಪ್ರಕಾರ ಪ್ರತಿ ಸಾರ್ವತ್ರಿಕ ಚುನಾವಣೆಯ ಅನಂತರ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಪ್ರಮಾಣ ವಚನ ಸ್ವೀಕರಿಸುವ ಹೊಣೆ ನಿರ್ವಹಿಸುತ್ತಾರೆ. ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಯನ್ನು ನಡೆಸುವ ಜವಾಬ್ದಾರಿ ಕೂಡ ಈ ಹಂಗಾಮಿ ಸ್ಪೀಕರ್‌ದೇ ಆಗಿರುತ್ತದೆ.

ಸಂವಿಧಾನದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಂಸದೀಯ ಪಾತ್ರವನ್ನು ಪೂರೈಸುವಲ್ಲಿ ಪ್ರಮಾಣ ವಚನ ಸ್ವೀಕಾರವು ಮೊದಲ ಹೆಜ್ಜೆಯಾಗಿದೆ. ಆದರೂ ಕೆಲವು ಸಂಸದರು ಅನಾರೋಗ್ಯದ ಕಾರಣ ಅಥವಾ ಅವರ ಸ್ಥಳದಿಂದ ತೆರಳಲು ಸಾಧ್ಯವಾಗದ ಕಾರಣ ಪ್ರಮಾಣ ವಚನ ಸ್ವೀಕರಿಸದಿರುವ ಸಾಧ್ಯತೆಯಿದೆ.

ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ?

1. ಮೊದಲ ದಿನ ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡದ ಚುನಾಯಿತ ಸಂಸದರು ಸದನದ ಅಧಿವೇಶನದ ಪ್ರಾರಂಭದಲ್ಲಿ ಅದೇ ಅಧಿವೇಶನದಲ್ಲಿ ಅಥವಾ ಅನಂತರದ ಅಧಿವೇಶನದಲ್ಲಿ ಯಾವುದೇ ನಂತರದ ದಿನದಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು.

2. ಸಂಸದರ ಕೋರಿಕೆಯ ಮೇರೆಗೆ ಸಭಾಧ್ಯಕ್ಷರ ಚೇಂಬರ್‌ನಲ್ಲಿ ಮಧ್ಯಂತರ ಅವಧಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಗುತ್ತದೆ.

3. ಅನಾರೋಗ್ಯದಿಂದ ಬಳಲುತ್ತಿರುವವರು, ಸದನಕ್ಕೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಅವರು ಬಯಸಿದಲ್ಲಿ ಪ್ರಮಾಣ ಅಥವಾ ದೃಢೀಕರಣವನ್ನು ಮಾಡಬಹುದು. ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಯು ಸದಸ್ಯರಿಗೆ ಸಂಬಂಧಿತ ಪ್ರಮಾಣ ಅಥವಾ ದೃಢೀಕರಣ ಕಾರ್ಡ್ ಅನ್ನು ನೀಡುತ್ತಾರೆ.

4. ಸಂವಿಧಾನದ ಪ್ರಕಾರ ಚುನಾಯಿತ ಸಂಸದರು 60 ದಿನಗಳವರೆಗೆ ಸಂಸತ್ತಿಗೆ ಹಾಜರಾಗದಿದ್ದರೆ ಅವರ ಸ್ಥಾನವನ್ನು ಖಾಲಿ ಎಂದು ಘೋಷಿಸಬಹುದು. ಇದೇ ಆಧಾರದಲ್ಲಿ ನ್ಯಾಯಾಲಯಗಳು ಜೈಲಿನಲ್ಲಿರುವ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸುವುದಕ್ಕಾಗಿ ಸಂಸತ್‌ಗೆ ಬರಲು ಅವಕಾಶ ನೀಡಬಹುದು. ಆದರೆ ಪ್ರಮಾಣ ವಚನ ಸ್ವೀಕರಿಸಿದ ಅನಂತರ ಅವರು ಮತ್ತೆ ಜೈಲಿಗೆ ಮರಳಬೇಕಾಗುತ್ತದೆ.

5. ದೃಷ್ಟಿ ಸಮಸ್ಯೆಯಿಂದ ಸದಸ್ಯರಿಗೆ ಸಹಿ ಮಾಡಲು, ಪ್ರಮಾಣ ಪತ್ರ ಓದಲು ಸಾಧ್ಯವಾಗದೇ ಇದ್ದರೆ ಇನ್ನೊಬ್ಬ ಸದಸ್ಯರು ಇವರಿಗೆ ಓದಿ ಹೇಳಬಹುದಾಗಿದೆ.

6. ನ್ಯಾಯಾಲಯದ ಆದೇಶದ ಪರಿಣಾಮವಾಗಿ ಒಬ್ಬ ವ್ಯಕ್ತಿಯು ಸದಸ್ಯರಾಗುವುದನ್ನು ತಡೆದರೆ ಮತ್ತು ಅವರ ಸ್ಥಾನದಲ್ಲಿ ಇನ್ನೊಬ್ಬರು ಚುನಾಯಿತರೆಂದು ಘೋಷಿಸಲ್ಪಟ್ಟರೆ ಮತ್ತೆ ಹೊಸದಾಗಿ ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಬೇಕು.

7. ಮೊದಲ ಸುತ್ತಿನಲ್ಲಿ ಪ್ರಮಾಣವಚನಕ್ಕೆ ಹಾಜರಾಗದ ಸದಸ್ಯರ ಹೆಸರನ್ನು ಕೊನೆಯಲ್ಲಿ ಮತ್ತೆ ಕರೆಯಲಾಗುತ್ತದೆ.

ಯಾವ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂವಿಧಾನದ ಮೂರನೇ ಶೆಡ್ಯೂಲ್ ಸಂಸತ್ತಿನ ಪ್ರಮಾಣ ವಚನದ ಪಠ್ಯವನ್ನು ಒಳಗೊಂಡಿದೆ. ಅದು ಹೀಗೆ ಹೇಳುತ್ತದೆ: ನಾನು…. ಚುನಾಯಿತನಾದ ಅಥವಾ ನಾಮನಿರ್ದೇಶನಗೊಂಡ ಸದಸ್ಯರ ಸಂಸತ್‌ ಸದಸ್ಯನಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ನಾನು ಕಾನೂನಿನ ಮೂಲಕ ಸ್ಥಾಪಿಸಿದಂತೆ ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುತ್ತೇನೆ ಎಂದು ಸ್ಪಷ್ಟವಾಗಿ ದೃಢಪಡಿಸುತ್ತೇನೆ. ನಾನು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ. ನನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ.

ಪ್ರಮಾಣ ವಚನ ಏಕೆ ಮಹತ್ವದ್ದಾಗಿದೆ?

ಲೋಕಸಭೆಯಲ್ಲಿ ಚರ್ಚೆ ಮತ್ತು ಮತ ಚಲಾಯಿಸುವ ಅಧಿಕಾರವನ್ನು ಪಡೆಯಲು ಸಂವಿಧಾನದಲ್ಲಿ (ಆರ್ಟಿಕಲ್ 99) ಸೂಚಿಸಿದಂತೆ ಸಂಸದರು ಪ್ರಮಾಣ ವಚನ ಸ್ವೀಕರಿಸಬೇಕು.

ಕೇವಲ ಚುನಾವಣೆಯಲ್ಲಿ ಗೆದ್ದು ಅವಧಿಯನ್ನು ಪ್ರಾರಂಭಿಸುವುದರಿಂದ ಅವರು ಸದನದ ಕಲಾಪಗಳಲ್ಲಿ ಭಾಗವಹಿಸಲು ಸ್ವಯಂಚಾಲಿತವಾಗಿ ಸಾಧ್ಯವಾಗುವುದಿಲ್ಲ.

ಹೇಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ?

ಸಂಸದರು ಮೊದಲು ತಮ್ಮ ಚುನಾವಣಾ ಪ್ರಮಾಣಪತ್ರವನ್ನು ಲೋಕಸಭೆಯ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ. 1957ರಲ್ಲಿ ನಡೆದ ಘಟನೆಯ ಅನಂತರ ಸಂಸತ್ತು ಈ ಸುರಕ್ಷತೆಯನ್ನು ಸೇರಿಸಿತು. ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯೊಬ್ಬರು ಸಂಸದರೆಂದು ಪೋಸ್ ನೀಡಿ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು!

ಪ್ರಮಾಣಪತ್ರದ ಜೊತೆಗೆ ಸಂಸದರು ಪ್ರಮಾಣ ವಚನ ಅಥವಾ ದೃಢೀಕರಣವನ್ನು ಮಾಡಲು ಬಯಸಿದ ಭಾಷೆಯನ್ನು ಸಹ ನಮೂದಿಸಬೇಕು.

ಸದಸ್ಯರು ಪ್ರಮಾಣ ವಚನ ಮಾಡುವಾಗ ಹಂಗಾಮಿ ಸ್ಪೀಕರ್ ಜೊತೆ ಹಸ್ತಲಾಘವ ಮಾಡುತ್ತಾರೆ. ಅನಂತರ ಅವರು ಸದನದಲ್ಲಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಸದಸ್ಯರಿಗೆ ಸ್ಪೀಕರ್‌ ಅನುಮತಿ ನೀಡುತ್ತಾರೆ. ಸದಸ್ಯರು ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡುತ್ತಾರೆ.

ಯಾವ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು?

ಸಂಸದರು ಇಂಗ್ಲಿಷ್ ಅಥವಾ ಅಸ್ಸಾಮಿ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು.. ಹೀಗೆ 22 ಭಾಷೆಗಳಲ್ಲಿ ಪ್ರಮಾಣವಚನವನ್ನು ಸ್ವೀಕರಿಸಬಹುದು.

ಅರ್ಧದಷ್ಟು ಸಂಸದರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಹಿಂದಿನ ಎರಡು ಲೋಕಸಭೆಯಲ್ಲಿ ಸಂಸ್ಕೃತವು ಜನಪ್ರಿಯ ಭಾಷೆಯಾಗಿ ಮಾರ್ಪಟ್ಟಿದ್ದು, ಹಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Bansuri Swaraj: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ

ಯಾವಾಗ ಸದನದ ಸದಸ್ಯರಾಗುತ್ತಾರೆ?

ಒಬ್ಬ ವ್ಯಕ್ತಿಯು ಚುನಾವಣಾ ಅಧಿಕಾರಿಯಿಂದ ಚುನಾಯಿತರೆಂದು ಘೋಷಿಸಲ್ಪಟ್ಟ ದಿನಾಂಕದಿಂದ ಸದನದ ಸದಸ್ಯರಾಗುತ್ತಾರೆ. ಸದನವನ್ನು ರಚಿಸುವ ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಅವರು ಸಂಸದರಾಗಿ ಸಂಬಳವನ್ನು ಸ್ವೀಕರಿಸಲು ಪ್ರಾರಂಭಿಸುತ್ತಾರೆ. ಸಂಸದರು ಸದನದ ಅಧಿವೇಶನಗಳಿಗೆ ಗೈರುಹಾಜರಿಯನ್ನು ಕೇಳಬಹುದಾಗಿದೆ.

Continue Reading

ದೇಶ

Rushikonda Palace: 500 ಕೋಟಿಯ ಋಷಿಕೊಂಡ ಅರಮನೆ; 12 ಬೆಡ್‌ರೂಮ್‌, ವಾಶ್‌ರೂಮ್‌ ಒಂದು ಮನೆಯಷ್ಟು!

ವಿಶಾಖಪಟ್ಟಣದ ಋಷಿಕೊಂಡ ಬೆಟ್ಟದ ಬಳಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ 500 ಕೋಟಿ ರೂ. ವೆಚ್ಚದಲ್ಲಿ ಅರಮನೆಯನ್ನು (Rushikonda Palace Issue) ನಿರ್ಮಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ವೈಎಸ್‌ಆರ್‌ಸಿ ಆಡಳಿತದಲ್ಲಿ ನಿರ್ಮಿಸಿರುವ ಈ ಯೋಜನೆಯ ಬಗ್ಗೆ ತನಿಖೆ ನಡೆಸುವುದಾಗಿ ಈಗಿನ ಸರ್ಕಾರ ಹೇಳಿದೆ. ಏನಿದು ವಿವಾದ? ಇಲ್ಲಿದೆ ವಿಸ್ತೃತ ಮಾಹಿತಿ.

VISTARANEWS.COM


on

By

Rushikonda Palace Issue
Koo

ಆಂಧ್ರಪ್ರದೇಶದ ಋಷಿಕೊಂಡ ಬೆಟ್ಟದ ಬಳಿ (andrapradesh) ಈ ಹಿಂದೆ ಮುಖ್ಯಮಂತ್ರಿಯಾಗಿದ್ದ (former CM) ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) 500 ಕೋಟಿ ರೂ. ವೆಚ್ಚದಲ್ಲಿ ʼರಾಜಾ ಮಹಲ್‌ʼ ಹೆಸರಿನಲ್ಲಿ ಅರಮನೆಯನ್ನು (Rushikonda Palace) ನಿರ್ಮಿಸಿದ್ದರು. ಈಗ ಜಗನ್‌ ಸರ್ಕಾರ ಅಧಿಕಾರ ಕಳೆದುಕೊಂಡು ಟಿಡಿಪಿಯ ಎನ್‌ ಚಂದ್ರಬಾಬು ನಾಯ್ಡು ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೀಗ ಈ ಅರಮನೆ ಭಾರೀ ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿದೆ.

ಭಾರಿ ಭ್ರಷ್ಟಾಚಾರದ ಮೂಲಕ ರಾಜ್ಯ ಸರ್ಕಾರದ ಹಣವನ್ನು ಈ ಹಿಂದಿನ ಮುಖ್ಯಮಂತ್ರಿ ಜಗನ್‌ ರೆಡ್ಡಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ತೆಲುಗು ದೇಶಂ ಪಕ್ಷ (TDP), ವಿಶಾಖಪಟ್ಟಣಂನ (Vishakhapatnam) ಋಷಿಕೊಂಡದ ಮೇಲೆ ನಿರ್ಮಿಸಲಾದ ಕಟ್ಟಡಗಳ ಡ್ರೋನ್ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಮೂಲಕ ಇದನ್ನು ಸಾರ್ವಜನಿಕರ ಗಮನಕ್ಕೆ ತಂದಿದೆ.

ಹಿಂದಿನ ವೈಎಸ್‌ಆರ್‌ಸಿ ಆಡಳಿತದಲ್ಲಿ ಋಷಿಕೊಂಡ ಮೇಲೆ ನಿರ್ಮಿಸಲಾದ ಕಟ್ಟಡಗಳಿಗೆ ಭೀಮಿಲಿ ಶಾಸಕ ಗಂಟಾ ಶ್ರೀನಿವಾಸ ರಾವ್ ಭೇಟಿ ನೀಡಿದಾಗ ಋಷಿಕೊಂಡ ಅರಮನೆ ವಿವಾದ ಭುಗಿಲೆದ್ದಿತು. ಟಿಡಿಪಿ ನಾಯಕರು ಈ ಯೋಜನೆಯ ಸ್ವರೂಪ ಮತ್ತು ಪ್ರಕೃತಿಯ ಮೇಲೆ ಇದರ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿರುವ ಟಿಡಿಪಿ ನಾಯಕರು, ‘ಋಷಿಕೊಂಡ ಅರಮನೆ’ ಎಂದು ಕರೆಯಲ್ಪಡುವ ಈ ಅರಮನೆಯನ್ನು ಅಕ್ರಮವಾಗಿ ಮತ್ತು ರಹಸ್ಯವಾಗಿ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ. ಭೀಮಿಲಿ ಶಾಸಕ ಗಂಟಾ ಶ್ರೀನಿವಾಸ ರಾವ್ ಅವರು ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿ) ಆಡಳಿತದಿಂದ ಋಷಿಕೊಂಡದ ಮೇಲೆ ನಿರ್ಮಿಸಲಾದ ಕಟ್ಟಡಗಳಿಗೆ ಭೇಟಿ ನೀಡಿದ ಈ ವಿಷಯ ಹೆಚ್ಚು ಚರ್ಚೆಗೆ ಕಾರಣವಾಯಿತು. ಈ ಕಟ್ಟಡಗಳನ್ನು ‘ರಾಜ ಮಹಲ್’ ಎಂದು ಬಣ್ಣಿಸಿರುವ ಟಿಡಿಪಿ ನಾಯಕ ನಾರಾ ಲೋಕೇಶ್, ಸಾರ್ವಜನಿಕ ನಿಧಿಯ ದುರುಪಯೋಗದ ಬಗ್ಗೆ ದನಿ ಎತ್ತಿದ್ದಾರೆ.

ಋಷಿಕೊಂಡ ನಿರ್ಮಾಣ

ಸಚಿವ ನಾರಾ ಲೋಕೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ತಮ್ಮ ಕಳವಳವನ್ನು ವ್ಯಕ್ತಪಡಿಸಿ, “ಬಡವರು ತಮ್ಮ ಮಕ್ಕಳ ತಲೆಯ ಮೇಲೆ ಸೂರು ನಿರ್ಮಿಸಲು ಹೆಣಗಾಡುತ್ತಿದ್ದರೆ, ಅವರ ಹಣದಲ್ಲಿ ಜಗನ್‌ ಅರಮನೆಯನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಲಾಗುವುದುʼʼ ಎಂದಿದ್ದಾರೆ. 9.88 ಎಕರೆ ಜಮೀನಿನಲ್ಲಿ ಕಟ್ಟಡವು 5 ಎಕರೆಯಲ್ಲಿ ಇರಬೇಕು, ಉಳಿದ ಪ್ರದೇಶವು ಭೂದೃಶ್ಯ ಮತ್ತು ಪಾರ್ಕಿಂಗ್ ಪ್ರದೇಶವಾಗಿರಬೇಕು ಎಂದು ಹೇಳಲಾಗಿತ್ತು. ಆದರೆ ಬೆಟ್ಟವನ್ನು 15 ಎಕರೆ ಹೆಚ್ಚುವರಿಯಾಗಿ ಅಗೆದಿರುವುದು ದೊಡ್ಡ ಉಲ್ಲಂಘನೆಯಾಗಿದೆ ಎಂದವರು ತಿಳಿಸಿದ್ದಾರೆ.


ಇದನ್ನೂ ಓದಿ: UGC-NET: ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿರುವ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಕೆ ತಡೆಯುತ್ತಿಲ್ಲ? ರಾಹುಲ್‌ ಗಾಂಧಿ ವ್ಯಂಗ್ಯ

ಜಗನ್‌ ಪಕ್ಷದ ಪ್ರತಿಪಾದನೆ ಏನು?

ವಿಶಾಖಪಟ್ಟಣಂನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನು ಈ ಪುನರಾಭಿವೃದ್ಧಿ ಯೋಜನೆ ಹೊಂದಿದೆ ಎಂದು ಜಗನ್ ನೇತೃತ್ವದ ಪಕ್ಷವು ಪ್ರತಿಪಾದಿಸಿದೆ. ಈ ಆಸ್ತಿ ಸರ್ಕಾರಿ ಸ್ವಾಮ್ಯದಲ್ಲಿದೆ, ಖಾಸಗಿಯಲ್ಲ ಎಂದು ಹೇಳಿರುವ ಪಕ್ಷದ ಪ್ರಮುಖರು, ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿ ವಿಶಾಖಪಟ್ಟಣಕ್ಕೆ ಭೇಟಿ ನೀಡಿದಾಗ ಇದನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈ ನಡುವೆಯೇ ಯೋಜನೆಯು ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳನ್ನು ಉಲ್ಲಂಘಿಸಿದ ಕಾರಣದಿಂದ ಪರಿಸರವಾದಿಗಳಿಂದಲೂ ವ್ಯಾಪಕ ವಿರೋಧವನ್ನು ಎದುರಿಸುತ್ತಿದೆ.

ಹೇಗಿದೆ ಈ ಅರಮನೆ?

9.88 ಎಕರೆ ಸಮುದ್ರಾಭಿಮುಖ ಸೈಟ್‌ನಲ್ಲಿ ಹರಡಿರುವ ಋಷಿಕೊಂಡ ಅರಮನೆಯು ಒಟ್ಟು 1,41,433 ಚದರ ಮೀಟರ್‌ಗಳ ನಿರ್ಮಾಣ ಪ್ರದೇಶದೊಂದಿಗೆ 12 ಬೆಡ್‌ ರೂಮ್‌ಗಳನ್ನು ಹೊಂದಿದೆ. ಮೂರು ಮಹಲುಗಳನ್ನು ರಚಿಸಲು ರಮಣೀಯವಾದ ಋಶಿಕೊಂಡ ಬೆಟ್ಟಗಳನ್ನು ಧ್ವಂಸಪಡಿಸಲಾಗಿದೆ. ಕೆಲವು ವಾಶ್‌ರೂಮ್‌ಗಳಂತೂ 480 ಚದರ ಅಡಿ ದೊಡ್ಡದಾಗಿದೆ. ಮೀಟಿಂಗ್ ಹಾಲ್‌ಗಳು 7,266 ಚದರ ಮೀಟರ್‌ ವ್ಯಾಪಿಸಿದೆ!

ಆಮದು ಮಾಡಿದ ದುಬಾರಿ ಮಾರ್ಬಲ್‌ಗಳನ್ನು ಬಳಸಿದ್ದು, ವಿಶಾಲವಾದ ಕಾರಿಡಾರ್‌ಗಳನ್ನು ಒಳಗೊಂಡಿದೆ. ವಾಲ್-ಟು-ವಾಲ್ ಸ್ಕ್ರೀನ್ ಹೊಂದಿರುವ ಹೋಮ್ ಥಿಯೇಟರ್ ಬ್ಲಾಕ್‌ ಇದರ ಮತ್ತೊಂದು ಪ್ರಮುಖ ಅಂಶವಾಗಿದೆ. ಸರ್ಕಾರವು ಲ್ಯಾಂಡ್‌ಸ್ಕೇಪಿಂಗ್‌ನಲ್ಲಿ 50 ಕೋಟಿ ರೂ. ಮತ್ತು ಒಳಾಂಗಣ ಅಲಂಕಾರಕ್ಕಾಗಿ 33 ಕೋಟಿ ರೂ. ವೆಚ್ಚ ಮಾಡಿದೆ ಎನ್ನಲಾಗಿದೆ. ರೆಸ್ಟ್ ರೂಮ್ಗ‌ಳನ್ನು ಒಳಗೊಂಡಂತೆ ಸಂಪೂರ್ಣ ಸಂಕೀರ್ಣದ ಉದ್ದಕ್ಕೂ ಸೆಂಟ್ರಲ್‌ ಹವಾನಿಯಂತ್ರಣವಿದೆ. ಸಮುದ್ರದ ನೋಟವನ್ನು ಹೊಂದಿರುವ ಡೈನಿಂಗ್ ಹಾಲ್, ಪ್ರತಿ ಮಲಗುವ ಕೋಣೆಯಲ್ಲಿ 12 ಹಾಸಿಗೆಗಳಿವೆ. ಸ್ಪಾ ಸೇವೆಗಳೊಂದಿಗೆ ಸ್ನಾನಗೃಹಗಳು ವಿಶೇಷ ವೈಶಿಷ್ಟ್ಯಗಳಿಂದ ಕೂಡಿದೆ.

Continue Reading

ದೇಶ

New Criminal Laws: ಹೊಸ ಕ್ರಿಮಿನಲ್ ಕಾನೂನು ಜು.1ರಿಂದ ಜಾರಿ; ಯಾವ ಕಾನೂನು? ಏನು ಬದಲಾವಣೆ? Complete Details!

New criminal laws: ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟು ರಾಷ್ಟ್ರಪತಿಗಳಿಂದ ಒಪ್ಪಿಗೆಯನ್ನು ಪಡೆದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ ಒಂದರಿಂದ ಜಾರಿಗೆ ಬರಲಿವೆ. ಅವುಗಳ ಅನುಷ್ಠಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ನಡೆಯುತ್ತಿದೆ. ಮೂರು ಹೊಸ ಕಾನೂನುಗಳ ರೂಪುರೇಷೆಗಳೇನು? ಬದಲಾವಣೆಗಳು ಏನೇನು? ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

New criminal laws
Koo

ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು (New criminal laws) ಜುಲೈ 1ರಿಂದ ಜಾರಿಗೆ ಬರಲಿವೆ. ಅವುಗಳ ಅನುಷ್ಠಾನಕ್ಕೆ ಅಗತ್ಯ ತರಬೇತಿ ಈಗಾಗಲೇ ನಡೆಯುತ್ತಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ (Union law and justice ministe) ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಈ ಬಗ್ಗೆ ವಿವರ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ (Kolkata) “ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಆಡಳಿತದಲ್ಲಿ ಭಾರತದ ಪ್ರಗತಿಪರ ಹಾದಿ” ಎಂಬ ಸಮ್ಮೇಳನದಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆಯ (UCC) ರಾಷ್ಟ್ರವ್ಯಾಪಿ ಅನುಷ್ಠಾನದ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದ್ದಾರೆ.

ಜುಲೈ 1ರಿಂದ ಎಲ್ಲಾ ಮೂರು ಕಾನೂನುಗಳು – ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆಗಳು ಈ ಹಿಂದಿನ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸುತ್ತವೆ. ಈಗಿರುವ ಕಾಯಿದೆಗಳಿಗೆ ಹೋಲಿಸಿದರೆ ಈ ಮೂರು ಹೊಸ ಕಾನೂನುಗಳಲ್ಲಿ ಹಲವು ವಿನೂತನ ಉದ್ದೇಶಗಳಿವೆ.

ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು. ಆದರೆ, ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು.

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್‌ಡಿ) ಈ ಹೊಸ ಕಾನೂನುಗಳಿಗೆ ತರಬೇತಿಯನ್ನು ನೀಡುತ್ತಿದೆ. ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು ಸಹ ತರಬೇತಿಯನ್ನು ನೀಡುತ್ತಿವೆ. ನ್ಯಾಯಾಧೀಶರಿಗೂ ನ್ಯಾಯಾಂಗ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ.

ಇದನ್ನೂ ಓದಿ: Opposition Leader: 10 ವರ್ಷ ಬಳಿಕ ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ! ಇವರಿಗೆ ಸಿಗುವ ಸವಲತ್ತುಗಳೇನು?

ಹೊಸ ಕ್ರಿಮಿನಲ್ ಕಾನೂನುಗಳು ಯಾವವು?

ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಮತ್ತು ಭಾರತೀಯ ಸಾಕ್ಷಿ ಕಾಯಿದೆಯು (Indian Evidence Act) ಜುಲೈ 1ರಿಂದ ಜಾರಿಗೆ ಬರಲಿವೆ. ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ.


ಭಯೋತ್ಪಾದಕರ ಆಸ್ತಿ ಮುಟ್ಟುಗೋಲು

ಭಯೋತ್ಪಾದನೆಯನ್ನು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113 (1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಾಮಾನ್ಯ ಸಾರ್ವಜನಿಕರನ್ನು ಅಥವಾ ಅದರ ಒಂದು ಭಾಗವನ್ನು ಬೆದರಿಸಲು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಈ ಕಾನೂನಿನ ಅಡಿಯಲ್ಲಿ ಇದೆ. ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳನ್ನು ಮರಣದಂಡನೆ ಅಥವಾ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿದೆ. ‘ಆಸ್ತಿಗೆ ಹಾನಿ, ಅಥವಾ ಕರೆನ್ಸಿಯ ತಯಾರಿಕೆ ಅಥವಾ ಕಳ್ಳಸಾಗಣೆಯನ್ನು ಇದು ಒಳಗೊಂಡಿದೆ.

ದೇಶದ್ರೋಹ ಎಂಬುದು ರದ್ದು

ಭಾರತೀಯ ದಂಡ ಸಂಹಿತೆ1860ರ ದೇಶದ್ರೋಹದ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ಕ್ಕೆ ಬದಲಾಯಿಸಲಾಗಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ವಿಭಾಗಗಳನ್ನು ಪರಿಚಯಿಸಲಾಗಿದೆ.

ಅತ್ಯಾಚಾರ ಮಾಡಿದರೆ ಮರಣ ದಂಡನೆ

ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು ಪರಿಹರಿಸಲು ‘ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು’ ಎಂಬ ಅಧ್ಯಾಯವನ್ನು ಪರಿಚಯಿಸಿದೆ. ಇದಲ್ಲದೆ, ಸಂಹಿತೆ 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡುತ್ತಿದೆ.

ಅಪ್ರಾಪ್ತ ವಯಸ್ಸಿನ ಮಹಿಳೆಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ)ಗೆ ಅನುಗುಣವಾಗಿ ಮಾಡಲಾಗಿದೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ.

ಅತ್ಯಾಚಾರ ಎಸಗುವವರಿಗೆ ಕಾನೂನಿನ ಪ್ರಕಾರ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇದು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೆ ಸಹ ಹೊಣೆಗಾರರಾಗಬೇಕಾಗುತ್ತದೆ.

ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಇದಲ್ಲದೆ ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಯಾವುದೇ ಆಮಿಷದ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

ಮೊದಲ ಬಾರಿಗೆ ಸಂಘಟಿತ ಅಪರಾಧದ ವ್ಯಾಖ್ಯಾನ

ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ 111 (1) ಅಡಿಯಲ್ಲಿ ಪದವನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನವು ಸಶಸ್ತ್ರ ದಂಗೆ, ವಿಧ್ವಂಸಕ ಕಾರ್ಯಾಚರಣೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಒಳಗೊಂಡಿದೆ. ಶಿಕ್ಷೆಯು ವಿವಿಧ ಅಪರಾಧಗಳಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ, ದಂಡ ಅಥವಾ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ.

ಗುಂಪು ಹತ್ಯೆಗೆ ಶಿಕ್ಷೆಯ ಹೆಚ್ಚಳ

ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯಿದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆಯನ್ನು ನೀಡಲು ಬಯಸುತ್ತದೆ.

ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ

“ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳಿಗೆ” ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ.

ಯಾರಾದರೂ ಉದ್ದೇಶಪೂರ್ವಕವಾಗಿ ಪದಗಳಲ್ಲಿ ಮಾತನಾಡುವ ಅಥವಾ ಬರೆಯುವ ಅಥವಾ ಚಿಹ್ನೆಗಳ ಮೂಲಕ, ಅಥವಾ ಗೋಚರ ಪ್ರಾತಿನಿಧ್ಯದಿಂದ, ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸಿನ ಅರ್ಥದ ಬಳಕೆಯಿಂದ ಅಥವಾ ಬೇರೆ ಬೇರೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕವನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ಕಾದಿದೆ. ಅಕ್ರಮ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.

ತ್ವರಿತ ವಿಚಾರಣೆ ಮತ್ತು ನ್ಯಾಯ

ಹೊಸ ಕಾನೂನುಗಳ ಪ್ರಕಾರ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಮತ್ತು ಪರಿಸ್ಥಿತಿಯನ್ನು ನೋಡಿ ನ್ಯಾಯಾಲಯವು ಇನ್ನೂ 90 ದಿನಗಳವರೆಗೆ ಅನುಮತಿ ನೀಡಬಹುದು. ತನಿಖೆಯನ್ನು 180 ದಿನಗಳಲ್ಲಿ ಮುಗಿಸಿ ವಿಚಾರಣೆಗೆ ಕಳುಹಿಸಬೇಕು.

ಇದಲ್ಲದೆ, ಪೊಲೀಸರು 90 ದಿನಗಳಲ್ಲಿ ಪ್ರಕರಣದ ಸ್ಥಿತಿಯನ್ನು ಅಪ್‌ಡೇಟ್‌ ಮಾಡಬೇಕಾಗುತ್ತದೆ. ವಿಚಾರಣೆಯ ಅನಂತರ 30 ದಿನಗಳಲ್ಲಿ ತೀರ್ಪು ನೀಡಬೇಕಾಗುತ್ತದೆ. ಒಂದು ವಾರದೊಳಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಮೂರು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ ಸಾಮಾನ್ಯ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‌ಗಳಲ್ಲಿನ ಪ್ರಕರಣಗಳು ಶೇ. 40ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‌ಐಆರ್ ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಎಲ್ಲೇ ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‌ಐಆರ್‌ ದಾಖಲಿಸಬಹುದು.

ಸಂತ್ರಸ್ತರ ಮಾಹಿತಿ ಹಕ್ಕನ್ನು ಬಲಪಡಿಸಲಾಗಿದೆ. ಎಫ್‌ಐಆರ್‌ನ ಉಚಿತ ಪ್ರತಿಯನ್ನು ಪಡೆಯುವ ಹಕ್ಕು ಬಲಿಪಶುವಿಗೆ ಇದೆ. 90 ದಿನಗಳಲ್ಲಿ ತನಿಖೆಯ ಸ್ಥಿತಿಯನ್ನು ಸಂತ್ರಸ್ತರಿಗೆ ತಿಳಿಸಲು ಅವಕಾಶವಿದೆ. ಹೊಸ ಸಂಹಿತೆಯು ಕ್ರಿಮಿನಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ.

ಇತರ ನಿಬಂಧನೆಗಳು

ಹೊಸ ಕಾನೂನಿನ ಪ್ರಕಾರ ‘ಆರ್ಥಿಕ ಅಪರಾಧಗಳನ್ನು’ ಹೊರತುಪಡಿಸಿ ಘೋರ ಅಪರಾಧಿಗಳಿಗೆ ಮಾತ್ರ ಕೈಕೋಳವನ್ನು ಬಳಸಲಾಗುವುದು. ಅಂಗವೈಕಲ್ಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪರಾಧ ಕಾರ್ಯಗಳಿಗೆ ಕಠಿಣ ದಂಡವನ್ನು ಪರಿಚಯಿಸಲಾಗಿದೆ.

ಶಿಕ್ಷೆ ಮನ್ನಾಗೊಳಿಸಲು ಕಾನೂನುಗಳಲ್ಲಿ ಹೊಸ ನಿಬಂಧನೆಯನ್ನು ಮಾಡಲಾಗಿದೆ. ಮರಣದಂಡನೆಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬಹುದು. ಏಳು ವರ್ಷಗಳ ಒಳಗಿನ ಸೆರೆವಾಸ ಮತ್ತು ಜೀವಾವಧಿ ಶಿಕ್ಷೆಯನ್ನು ಮಾತ್ರ ಕ್ಷಮಿಸಬಹುದು.

Continue Reading
Advertisement
Dina Bhavishya
ಭವಿಷ್ಯ53 mins ago

Dina Bhavishya : ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರ ವಹಿಸಿ

IND vs ENG Semi Final
ಕ್ರೀಡೆ4 hours ago

IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

Abhyas Trial
ದೇಶ6 hours ago

Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Congress Protest
ಕರ್ನಾಟಕ6 hours ago

ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

NEET Aspirant
ದೇಶ7 hours ago

NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Tata Motors has taken the lead in the SUV market with Nexon Punch
ಕರ್ನಾಟಕ7 hours ago

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Rohit Sharma
ಕ್ರೀಡೆ7 hours ago

Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

virat kohli
ಕ್ರೀಡೆ8 hours ago

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

DCM DK Shivakumar latest statement about CM change issue
ಪ್ರಮುಖ ಸುದ್ದಿ8 hours ago

DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

roopantara Movie First Look Poster released
ಕರ್ನಾಟಕ8 hours ago

Kannada New Movie: ‘ರೂಪಾಂತರ’ಗೊಂಡ ರಾಜ್ ಬಿ. ಶೆಟ್ಟಿ! ಮತ್ತೊಂದು ವಿಭಿನ್ನ ಚಿತ್ರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ12 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು14 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ18 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌