Liquor Theft : ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ - Vistara News

ಪ್ರಮುಖ ಸುದ್ದಿ

Liquor Theft : ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

Liquor theft: :

VISTARANEWS.COM


on

Liquor theft:
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯಚೂರು : ಡಾಬಾವೊಂದಕ್ಕೆ ನುಗ್ಗಿ ಪ್ರತಿನಿತ್ಯ ಲೋಕಲ್ ಎಣ್ಣೆ ಕದಿಯುತ್ತಿದ್ದ ವ್ಯಕ್ತಿಯೊಬ್ಬನ ಮುಖ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯ ಕುರಿತು ಡಾಬಾ ಮಾಲೀಕರು ಮುದ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಣ್ಣೆ ಆಸೆಗೆ ಬಂದಿದ್ದ ಆತ ಮುಖಕ್ಕೆ ಮುಸುಕು ಧರಿಸಿರಲಿಲ್ಲ. ಹೀಗಾಗಿ ಕ್ಯಾಮೆರಾದಲ್ಲಿ ಆತನ ಚಹರೆ ಸಂಪೂರ್ಣವಾಗಿ ಸೆರೆಯಾಗಿದೆ. ಹೀಗಾಗಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುವ ಸಾಧ್ಯತೆಗಳಿವೆ.

ಆರೋಪಿಗೆ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಇದ್ದರೂ ಅದನ್ನು ಮುಟ್ಟೇ ಕೇವಲ ಒಟಿ, ಚಾಯ್ಸ್ ಸೇರಿದಂತೆ ಲೋಕಲ್ ಬ್ರಾಂಡ್​ನ ಮದ್ಯ ಎತ್ತಿಕೊಂಡು ಪರಾರಿಯಾಗುತ್ತಿದ್ದ. ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Chikkodi News : ಒಮ್ಮೆ ಶಾಸಕರಿಂದ ಮತ್ತೊಮ್ಮೆ ಸಂಸದರಿಂದ; ಒಂದೇ ಗ್ರಾಮ ಪಂಚಾಯಿತಿ ಕಟ್ಟಡ ಎರಡೆರಡು ಬಾರಿ ಉದ್ಘಾಟನೆ!

ಬಾಗಿಲಿ ಮುರಿಯುತ್ತಿರಲಿಲ್ಲ

ಆರೋಪಿಯು ಎಣ್ಣೆ ಕದಿಯಲು ಬರುವಾಗ ಡಾಬಾದ ಬಾಗಿಲು ಅಥವಾ ಬೀಗ ಮುರಿಯುತ್ತಿರಲಿಲ್ಲ. ಟಿನ್ ಶೀಟ್ ಹಾಕಿದ್ದ ಡಾಬಾದಲ್ಲಿ ಸಂದಿಯಿಂದ ನುಗ್ಗಿಕೊಂಡು ಬರುತ್ತಿದ್ದ. ಎಣ್ಣೆಯ ಆಸೆ ಶುರುವಾದ ತಕ್ಷಣ ಹಾವಿನಂತೆ ಸಂದಿಯಲ್ಲಿ ನುಗ್ಗಿ ಡಾಬಾಗೆ ಪ್ರವೇಶ ಪಡೆಯುತ್ತಿದ್ದ. ಬಳಿಕ ಅಲ್ಲಿನ ಡ್ರಾಯರ್​ಗಳನ್ನು ತೆರೆದು ಎಣ್ಣೆ ತೆಗೆದುಕೊಂಡು ಪರಾರಿಯಾಗುತ್ತಿದ್ದ ಎಂದು ಮಾಲೀಕರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

TNIT Media Award : ವಿಸ್ತಾರ ನ್ಯೂಸ್​​ಗೆ ಟಿಎನ್​ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ಸ್​​ನ 3 ಪ್ರಶಸ್ತಿಗಳ ಗರಿ

TNIT Media Awards : ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ‌ ಕಳೆದ 7 ವರ್ಷಗಳಿಂದ ಪತ್ರಕರ್ತರನ್ನು ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಅಂತೆಯೇ ವಿಸ್ತಾರ ನ್ಯೂಸ್‌ನ ಸಿಒಒ ಡಿ‌ ಪರಶುರಾಮಪ್ಪ ಅವರಿಗೆ ‘ಬೆಸ್ಟ್ ಎಡಿಟೋರಿಯಲ್ ಪ್ರಶಸ್ತಿ’, ನಿರೂಪಕ ವಾಸುದೇವ್ ಮಾರ್ನಾಡ್ ಅವರಿಗೆ ‘ಬೆಸ್ಟ್ ಪ್ರಾಮಿಸಿಂಗ್ ಫೇಸ್ ಪ್ರಶಸ್ತಿ’ ಹಾಗು ಮೆಟ್ರೋ ಬ್ಯೂರೋ ಮುಖ್ಯಸ್ಥ ಬಿ ವಿ ಅಭಿಷೇಕ್ ಅವರಿಗೆ ‘ಬೆಸ್ಟ್ ಮೆಟ್ರೋ ರಿಪೋರ್ಟರ್’ ಪ್ರಶಸ್ತಿ ನೀಡಿ ಗೌರವಿಸಿದೆ.

VISTARANEWS.COM


on

TNIT Media Awards
Koo

ಬೆಂಗಳೂರು : ಕನ್ನಡ ಸುದ್ದಿ ಮಾಧ್ಯಮಗಳ ಪೈಕಿ ತನ್ನದ್ದೇ ರೀತಿಯಲ್ಲಿ ಛಾಪು ಮೂಡಿಸಿರುವ ವಿಸ್ತಾರ ನ್ಯೂಸ್‌, ದಿ ನ್ಯೂ ಇಂಡಿಯನ್​ ಟೈಮ್ಸ್ ನೀಡುವ ಟಿಎನ್​ಐಟಿ ಸೌತ್​ ಇಂಡಿಯಾ ಮೀಡಿಯಾ ಅವಾರ್ಡ್​​​ನ (TNIT Media Award) ಮೂರು ವಿಭಾಗದಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಶನಿವಾರ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್​​ನ ಪ್ರಶಸ್ತಿ ವಿಜೇತರು ಪ್ರಶಸ್ತಿ ಸ್ವೀಕರಿಸಿದರು.

ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ‌ ಕಳೆದ 7 ವರ್ಷಗಳಿಂದ ಪತ್ರಕರ್ತರನ್ನು ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಅಂತೆಯೇ ವಿಸ್ತಾರ ನ್ಯೂಸ್‌ನ ಸಿಒಒ ಡಿ‌ ಪರಶುರಾಮಪ್ಪ ಅವರಿಗೆ ‘ಬೆಸ್ಟ್ ಎಡಿಟೋರಿಯಲ್ ಪ್ರಶಸ್ತಿ’, ನಿರೂಪಕ ವಾಸುದೇವ್ ಮಾರ್ನಾಡ್ ಅವರಿಗೆ ‘ಬೆಸ್ಟ್ ಪ್ರಾಮಿಸಿಂಗ್ ಫೇಸ್ ಪ್ರಶಸ್ತಿ’ ಹಾಗೂ ಮೆಟ್ರೋ ಬ್ಯೂರೋ ಮುಖ್ಯಸ್ಥ ಬಿ ವಿ ಅಭಿಷೇಕ್ ಅವರಿಗೆ ‘ಬೆಸ್ಟ್ ಮೆಟ್ರೋ ರಿಪೋರ್ಟರ್’ ಪ್ರಶಸ್ತಿ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ನಮ್ಮನ್ನಗಲಿದೆ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಅವರಿಗೆ ಮರೆಯಲಾರದ ನಿರೂಪಕಿ ಎಂಬ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅವರ ಪತಿ ನಾಗರಾಜ್ ವಸ್ತಾರೆ ಆ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಿನಿ ಲೋಕದ ಗಣ್ಯರಾದ ನೆನಪಿರಲಿ ಪ್ರೇಮ್, ಅನಿರುದ್, ವಿಜಯ ರಾಘವೇಂದ್ರ, ತಾರಾ ಅನುರಾಧ, ಮಾಲಾಶ್ರೀ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು. ಶತಾಯುಷಿ ಸಾಲು ಮರದ ತಿಮ್ಮಕ್ಕ ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡು ಸ್ಪೂರ್ತಿ ತುಂಬಿದರು.

ವಿಸ್ತಾರ ನ್ಯೂಸ್​ನ ಸಿಒಒ ಡಿ‌ ಪರಶುರಾಮಪ್ಪ ಅವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿಸ್ತಾರ ನ್ಯೂಸ್​ಗೆ ಗೌರವ ನೀಡಿದ್ದಕ್ಕೆ ಧನ್ಯವಾದಗಳು. ಈ ಪ್ರಶಸ್ತಿ ನಮ್ಮ ತಂಡಕ್ಕೆ ಸಲ್ಲಬೇಕಾಗಿರುವುದು. ಇದು ಎಡಿಟೋರಿಯಲ್​ ತಂಡದ ಶ್ರಮದಿಂದ ದೊರಕಿದ ಪ್ರಶಸ್ತಿ ಎಂದು ಹೇಳಿದರು.

ನಿರೂಪಕ ವಾಸುದೇವ್​ ಮಾರ್ನಾಟ್ ಮಾತನಾಡಿ, ಹಳ್ಳಿಯಿಂದ ಬಂದು ಇಂಥದ್ದೊಂದು ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ಖುಷಿ ಎನಿಸುತ್ತಿದೆ. ಈ ಕಾರಣಕ್ಕೆ ನಾನು ನನ್ನ ತಂದೆ, ತಾಯಿಗೆ ಧನ್ಯವಾದಗಳನ್ನು ಹೇಳುವೆ. ಜತೆಗೆ ನನ್ನ ಏಳು ಬೀಳುಗಳಲ್ಲಿ ಜತೆಯಾಗಿರುವ ಗೆಳೆಯರಿಗೂ ಧನ್ಯವಾದ ತಿಳಿಸುವೆ. ಇದು ವಿಸ್ತಾರ ನ್ಯೂಸ್​​ನ ಪ್ರತಿಯೊಬ್ಬರ ಶ್ರಮದಿಂದ ನನಗೆ ದೊರಕಿದ ಪ್ರಶಸ್ತಿ ಎಂದು ಅವರು ಹೇಳಿದರು.

ಇದನ್ನೂ ಓದಿ: Rishabh Pant : ರಿಷಭ್​ ಪಂತ್​ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ

ಮೆಟ್ರೋ ಬ್ಯೂರೋ ಮುಖ್ಯಸ್ಥ ಬಿ ವಿ ಅಭಿಷೇಕ್ ಮಾತನಾಡಿ, ಈ ಪ್ರಶಸ್ತಿಗೆ ನನ್ನ ವೃತ್ತಿಯ ಆರಂಭದಿಂದಲೂ ಜತೆಗಿದ್ದ ಎಲ್ಲರಿಗೂ ಸಲ್ಲುತ್ತದೆ. ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

Continue Reading

ಭವಿಷ್ಯ

Dina Bhavishya: ಈ ರಾಶಿಯವರಿಗೆ ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಕುಂಭ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಕಟಕ, ತುಲಾ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಭಾವನಾತ್ಮಕವಾಗಿ ನೀವಿಂದು ಸ್ಥಿರವಾಗಿರುವುದಿಲ್ಲ. ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರಿಕೆ ಇರಲಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರ ಜತೆಗೆ ಪುರಸ್ಕಾರ ಸಿಗುವ ಸಾಧ್ಯತೆ ಇದೆ. ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡುವಂತೆ ಮಾಡುವುದು. ಆತುರದ ತೀರ್ಮಾನ, ಮಾತುಗಳು ಅಪಾಯ ತಂದಿತು ಎಚ್ಚರಿಕೆ ಇರಲಿ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (18-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಚತುರ್ದಶಿ 27:04 29:50 ವಾರ: ಭಾನುವಾರ
ನಕ್ಷತ್ರ: ಉತ್ತರಾಷಾಡ 10:13 ಯೋಗ: ಆಯುಷ್ಮಾನ್ 07:49 /ಸೌಭಾಗ್ಯ 28:26
ಕರಣ: ಗರಜ 16:30 ಅಮೃತಕಾಲ: ರಾತ್ರಿ 10:40ರಿಂದ 12:08

ಸೂರ್ಯೋದಯ : 06:08   ಸೂರ್ಯಾಸ್ತ : 06:39

ರಾಹುಕಾಲ: ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ:ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಭಾವನಾತ್ಮಕವಾಗಿ ನೀವಿಂದು ಸ್ಥಿರವಾಗಿರುವುದಿಲ್ಲ. ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರಿಕೆ ಇರಲಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರ ಜತೆಗೆ ಪುರಸ್ಕಾರ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಕುಟುಂಬದ ಸದಸ್ಯರಿಗೆ ಸಂಬಂಧಿಗಳಿಂದ ಸುದ್ದಿ ಬರುವುದು. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ಮಾಡುವಿರಿ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡುವಂತೆ ಮಾಡುವುದು. ಆತುರದ ತೀರ್ಮಾನ, ಮಾತುಗಳು ಅಪಾಯ ತಂದಿತು ಎಚ್ಚರಿಕೆ ಇರಲಿ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಮನೆಯವರ ಧೈರ್ಯದ ಮಾತುಗಳು ಮನಸ್ಸಿಗೆ ಸಂತೋಷ ನೆಮ್ಮದಿ ತರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸೂಕ್ತ ವ್ಯಕ್ತಿಗಳ ಬೆಂಬಲದಿಂದ ಹೂಡಿಕೆ ವ್ಯವಹಾರದಲ್ಲಿ ತೊಡುಗುವ ಸಾಧ್ಯತೆ ಇದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ. ಸಂಗಾತಿ ನಿಮ್ಮ ಮನಸ್ಸಿಗೆ ಮುದ ನೀಡುವಳು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ವರ್ತನೆಯಲ್ಲಿ ಬದಲಾವಣೆಯಾಗಲಿದ್ದು, ಹಿರಿಯರ ಆಶೀರ್ವಾದದ ಬಲದಿಂದ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಭೇಟಿ ಮಾಡಿ ಸ್ವಾಂತನ ಹೇಳಬಹುದು. ಧೀಡಿರ್ ಪ್ರಯಾಣ ಬೆಳಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವುದು.ಕುಟುಂಬದ ಸದಸ್ಯರ ಅವಶ್ಯಕತೆಗಾಗಿ ಅನಗತ್ಯ ಖರ್ಚು ಮಾಡುವಿರಿ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇದರ ಮಧ್ಯೆ ಕುಟುಂಬದ ಸದಸ್ಯರು ನಿಮ್ಮ ಮುಂದೆ ಸಮಸ್ಯೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಕೈಗೊಂಡ ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಸಮಾಧಾನ ತರುವುದು. ಅಗತ್ಯಕ್ಕೆ ತಕ್ಕಂತೆ ಖರ್ಚು ಇರಲಿದೆ. ಕುಟುಂಬದ ಸದಸ್ಯರಿಂದ ರಹಸ್ಯ ಸುದ್ದಿ ಅಚ್ಚರಿ ತರುವುದು, ಕೋಪದಲ್ಲಿ ಮಾತಿಗೆ ಇಳಿಯುವುದರಿಂದ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡುವುದು. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ:ಕಠಿಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುವಿರಿ. ಭಾವನಾತ್ಮಕ ನಿರ್ಧಾರ ಕೈಗೊಳ್ಳುವ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು ಬೇಡ. ಅಜಾಗೃತ ಕಾರ್ಯ ನಿಮಗೆ ಆರ್ಥಿಕ ನಷ್ಟ ಉಂಟು ಮಾಡಬಹುದು. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕುಟುಂಬ ಸದಸ್ಯರ ವರ್ತನೆಯಿಂದ ಕೋಪಗೊಳ್ಳುವ ಸಾಧ್ಯತೆ ಇದೆ. ಸಂಬಂಧಿಕರಿಂದ ವ್ಯಾಜ್ಯ ಉಂಟಾಗುವ ಸಾಧ್ಯತೆ ಇದೆ. ಆತುರದ ಮಾತುಗಳು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಕರ: ಜೀವನದಲ್ಲಿ ಹೊಸ ಪಾಠ ಕಲಿಯುವಿರಿ. ಕೌಟುಂಬಿಕ ಒತ್ತಡ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಕೋಪದಲ್ಲಿ ಆಡಿದ ಮಾತುಗಳ ಮನವರಿಕೆ ಆಗುವುದು. ಆರೋಗ್ಯದ ಕಡೆಗೆ ಗಮನ ಹರಿಸಿ. ವೈದ್ಯರ ಸಲಹೆ ಪಡೆಯುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ,ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳನ್ನು ಹಂಚಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮೀನ: ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ಸಮಾಧಾನದ ಮಾತುಗಳು ಸೂಕ್ತ ವ್ಯಕ್ತಿಗಳಿಂದ ಸಿಗಲಿವೆ. ನಿಮ್ಮ ವರ್ತನೆಯಿಂದ ಕುಟುಂಬದ ಸದಸ್ಯರು ಕೋಪಗೊಳ್ಳವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅವಶ್ಯಕ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ:4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Murder Case : ದಲಿತನಿಗೆ ಕ್ಷೌರ ಮಾಡಲು ನಿರಾಕರಣೆ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

Murder case :

VISTARANEWS.COM


on

Murder case
Koo

ಕೊಪ್ಪಳ: ಕ್ಷೌರ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ದಲಿತರೊಬ್ಬರನ್ನು ಕೊಲೆ ಮಾಡಿರುವ (Murder Case) ಘಟನೆ ಯಲಬುರ್ಗಾದ ಸಂಗನಾಳದಲ್ಲಿ ನಡೆದಿದೆ. ಕ್ಷೌರಿಕ ಮುದುಕಪ್ಪ ಹಡಪದ ಕೊಲೆ ಆರೋಪಿಯಾಗಿದ್ದು, ಯಮನೂರಸ್ವಾಮಿ ಬಂಡಿಹಾಳ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ತನ್ನ ಕ್ಷೌರ ಮಾಡಲು ಹೇಳಿದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಯಮನೂರಸ್ವಾಮಿ ತಮ್ಮ ಕ್ಷೌರ ಮಾಡಲು ಮುದುಕಪ್ಪ ಅವರಿಗೆ ಹೇಳಿದ್ದ. ಆದರೆ ಜಾತಿ ಕಾರಣಕ್ಕೆ ಆ ಕೆಲಸ ಮಾಡಲು ನಿರಾಕರಿಸಿದ್ದ. ಈ ವಿಚಾರದಲ್ಲಿ ಪರಸ್ಪರ ವಾಗ್ವಾದ ನಡೆದಿತ್ತು. ಜಗಳ ತಾರಕಕ್ಕೇರಿ ಮುದುಕಪ್ಪ ಕೊಲೆ ಮಾಡಿದ್ದಾನೆ.

ಜಾತಿ ನಿಂದನೆ, ಕೊಲೆ

ಯಮನೂರ ಕ್ಷೌರ ಮಾಡಿಸಿಕೊಳ್ಳುವುದಕ್ಕೆ ಹೋಗಿದ್ದಾಗ ಮುದುಕಪ್ಪ ಮೊದಲು ಹಣ ಕೊಡುವಂತೆ ಕೇಳಿದ್ದಾನೆ. ಆದರೆ ಯಮನೂರ ಸ್ವಲ್ಪ ಹೊತ್ತು ಬಿಟ್ಟು ದುಡ್ಡು ಕೊಡುವುದಾಗಿ ಹೇಳಿದ್ದರು. ಮಾದಿಗರಿಗೆ ಕ್ಷೌರ ಮಾಡುವುದು ಕಷ್ಟ. ಅಂಥದ್ದರಲ್ಲಿ ಹಣ ಕೊಡದೇ ಕ್ಷೌರ ಮಾಡುವುದು ಹೇಗೆ ಎಂದು ಮುದುಕಪ್ಪ ಪ್ರಶ್ನಿಸಿದ್ದಾರೆ. ಈ ಮಾತಿಗೆ ಯಮನೂರ ಆಕ್ಷೇಪ ವ್ಯಕ್ತಪಡಿಸಿದ್ದು ಜಾತಿ ನಿಂದನೆ ಮಾಡಬಾರದಾಗಿ ಎಚ್ಚರಿಕೆ ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಮುದುಕಪ್ಪ ಯಮನೂರ ಅವರ ಶರ್ಟ್​ ಹಿಡಿದು ಎಳೆದಾಡಿದ್ದ. ಈ ವೇಳೆ ಗಲಾಟೆ ನಡೆದಿದ್ದು ಆರೋಪಿ ತನ್ನ ಕೆಲಸ ಮಾಡುವ ಕತ್ತರಿಯಿಂದಲೇ ಹೊಕ್ಕಳ ಕೆಳಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: Accident News : ನರಗುಂದಲ್ಲಿ ಭೀಕರ ಅಫಘಾತ; ಸಾರಿಗೆ ಬಸ್​ ಗುದ್ದಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ

ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

ರಾಯಚೂರು : ಡಾಬಾವೊಂದಕ್ಕೆ ನುಗ್ಗಿ ಪ್ರತಿನಿತ್ಯ ಲೋಕಲ್ ಎಣ್ಣೆ ಕದಿಯುತ್ತಿದ್ದ ವ್ಯಕ್ತಿಯೊಬ್ಬನ ಮುಖ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯ ಕುರಿತು ಡಾಬಾ ಮಾಲೀಕರು ಮುದ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಣ್ಣೆ ಆಸೆಗೆ ಬಂದಿದ್ದ ಆತ ಮುಖಕ್ಕೆ ಮುಸುಕು ಧರಿಸಿರಲಿಲ್ಲ. ಹೀಗಾಗಿ ಕ್ಯಾಮೆರಾದಲ್ಲಿ ಆತನ ಚಹರೆ ಸಂಪೂರ್ಣವಾಗಿ ಸೆರೆಯಾಗಿದೆ. ಹೀಗಾಗಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುವ ಸಾಧ್ಯತೆಗಳಿವೆ.

ಆರೋಪಿಗೆ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಇದ್ದರೂ ಅದನ್ನು ಮುಟ್ಟೇ ಕೇವಲ ಒಟಿ, ಚಾಯ್ಸ್ ಸೇರಿದಂತೆ ಲೋಕಲ್ ಬ್ರಾಂಡ್​ನ ಮದ್ಯ ಎತ್ತಿಕೊಂಡು ಪರಾರಿಯಾಗುತ್ತಿದ್ದ. ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Continue Reading

ಪ್ರಮುಖ ಸುದ್ದಿ

Accident News : ನರಗುಂದಲ್ಲಿ ಭೀಕರ ಅಫಘಾತ; ಸಾರಿಗೆ ಬಸ್​ ಗುದ್ದಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ

Accident News: ಗದಗ ಜಿಲ್ಲೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಮೃತಪಟ್ಟವರಾಗಿದ್ದಾರೆ. ಬಸ್​​ ಇಳಕಲ್​ನಿಂದ ಹುಬ್ಬಳ್ಳಿ ಗೆ ಹೊರಟ್ಟಿತ್ತು. ಕಾರು ಹಾವೇರಿಯಿಂದ ಕಲ್ಲಾಪೂರ ಕಡೆಗೆ ಸಾಗುತ್ತಿತ್ತು.

VISTARANEWS.COM


on

Accident News:
Koo

ಗದಗ : ಭಾನುವಾರ ಮುಂಜಾನೆ ವೇಳೆ ಸಾರಿಗೆ ಬಸ್​ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ (Accident News ) ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ದೇಹಗಳು ಛಿದ್ರಗೊಂಡಿವೆ. ಮೃತಪಟ್ಟವರೆಲ್ಲರೂ ದೇವಸ್ಥಾನಕ್ಕೆ ಹೊರಟಿದ್ದರು. ನೇರವಾದ ರಸ್ತೆಯಲ್ಲಿ ಎರಡೂ ವಾಹನಗಳು ಪರಸ್ಪರ ಅಪ್ಪಳಿಸಿದ್ದು ಸಣ್ಣ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಗದಗ ಜಿಲ್ಲೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಮೃತಪಟ್ಟವರಾಗಿದ್ದಾರೆ. ಬಸ್​​ ಇಳಕಲ್​ನಿಂದ ಹುಬ್ಬಳ್ಳಿ ಗೆ ಹೊರಟ್ಟಿತ್ತು. ಕಾರು ಹಾವೇರಿಯಿಂದ ಕಲ್ಲಾಪೂರ ಕಡೆಗೆ ಸಾಗುತ್ತಿತ್ತು. ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಕುಟುಂಬವು ಹೊರಟಿತ್ತು. ಕೊಣ್ಣೂರು ಬಳಿಕ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಘಾತಕ್ಕೆ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರು ಸಂಪೂರ್ಣ ನಜ್ಜುಗುಜ್ಜು

ಅಫಘಾತಕ್ಕೆ ಯಾರ ನಿಲ್ಷಕ್ಷ್ಯ ಎಂಬುದು ಪ್ರಾಥಮಿಕ ಅವಲೋಕನದಲ್ಲಿ ತಿಳಿದುಬಂದಿಲ್ಲ. ಆದರೆ, ಬಸ್​​ನ ಆಘಾತಕ್ಕೆ ಕಾರಿನ ರೂಫ್​ ಸಂಪೂರ್ಣವಾಗಿ ಹಾರಿ ಹೋಗಿದೆ. ಅದರೊಳಗೆ ಇದ್ದ ಪ್ರಯಾಣಿಕರು ಸಂಪೂರ್ಣವಾಗಿ ಜರ್ಜರಿತಗೊಂಡು ಮೃತಪಟ್ಟಿದ್ದಾರೆ. ಕಾರಿನ ಮುಂಭಾಗದಲ್ಲಿ ಸೀಟಿನಲ್ಲಿ ದುದ್ರಪ್ಪ ಹಾಗೂ ಪುತ್ರ ವಿಜಯ್ ಕುಳಿತಿದ್ದರೆ, ಹಿಂದಿನ ಸೀಟಿನಲ್ಲಿ ರಾಜೇಶ್ವರಿ ಹಾಗೂ ಐಶ್ವರ್ಯಾ ಕುಳಿತಿದ್ದು. ಎಲ್ಲರೂ ಕುಳಿತಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಭೀಕರತೆಗೆ ಸಾಕ್ಷಿಯಾಗಿದೆ.

ಹಳ್ಳಕ್ಕೆ ಇಳಿದ ಬಸ್​​: ಅಪಘಾತದ ಬಳಿಕ ಬಸ್​​ ನಿಯಂತ್ರಣ ಪಡೆದುಕೊಳ್ಳದೆ ಹಳ್ಳವೊಂದಕ್ಕೆ ಇಳಿದಿದೆ. ನೇರ ರಸ್ತೆಯಲ್ಲಿ ಎರಡೂ ವಾಹನಗಳು ಗರಿಷ್ಠ ವೇಗದಲ್ಲಿ ಸಾಗುತ್ತಿದ್ದ ಸಾಧ್ಯತೆಗಳು ಕಾಣಿಸುತ್ತಿದೆ. ಕಾರಿಗೆ ಗುದ್ದಿದ ಬಸ್​ನ ಮುಂಭಾಗದಲ್ಲಿ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಜಾರಿ ಹಳ್ಳಕ್ಕೆ ಇಳಿದಿದೆ. ಬಸ್​ನಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬ ಕುರಿತು ಮಾಹಿತಿ ಲಭ್ಯವಿಲ್ಲ. ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಮೃತದೇಹಗಳನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.

ಇದನ್ನೂ ಓದಿ: Liquor Theft : ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

ಬೆಚ್ಚಿದ ಸ್ಥಳೀಯರು

ಭಾನುವಾರ ಮುಂಜಾನೆ ನಡೆದ ಅಪಘಾತಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬೆಳಗ್ಗೆದ್ದು ಶುಭ ವಾರ್ತೆಯನ್ನು ನಿರೀಕ್ಷಿಸಿದ್ದ ಸ್ಥಳೀಯ ನಿವಾಸಿಗಳು ಅಪಘಾತದ ದೃಶ್ಯಗಳನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಒಂದೇ ಕುಟುಂಬದ ಎಲ್ಲರೂ ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಯಾರ ತಪ್ಪು ಹೆಚ್ಚಿದೆ ಎಂಬುದರ ಬಗ್ಗೆಯೂ ಅವರೆಲ್ಲೂ ಚರ್ಚೆ ನಡೆಸುತ್ತಿದ್ದಾರೆ. ಅಪಘಾತದ ಬಳಿಕ ಬಸ್​ ನ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸ್ಥಳಕ್ಕೆ ನರಗುಂದ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading
Advertisement
Physical abuse
ಬೆಂಗಳೂರು8 mins ago

Physical Abuse : ಕೋರಮಂಗಲದ ಪಬ್‌ನಿಂದ ಮನೆಗೆ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

P Susheela hospitalized Legendary playback singer
ಸ್ಯಾಂಡಲ್ ವುಡ್8 mins ago

P Susheela: ಖ್ಯಾತ ಗಾಯಕಿ ಪಿ. ಸುಶೀಲಾ ಆಸ್ಪತ್ರೆಗೆ ದಾಖಲು

Gold Rate Today
ಚಿನ್ನದ ದರ25 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

Bigg boss Hindi list of contestants
ಬಿಗ್ ಬಾಸ್32 mins ago

Bigg boss Hindi: ಬಿಗ್ ಬಾಸ್ 18ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಯಾವಾಗಿಂದ ಶುರು? 

karnataka weather Forecast
ಮಳೆ41 mins ago

Karnataka Weather : ಭಾರಿ ಮಳೆ ಹಿನ್ನೆಲೆ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

TNIT Media Awards
ಕರ್ನಾಟಕ43 mins ago

TNIT Media Award : ವಿಸ್ತಾರ ನ್ಯೂಸ್​​ಗೆ ಟಿಎನ್​ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ಸ್​​ನ 3 ಪ್ರಶಸ್ತಿಗಳ ಗರಿ

ಕ್ರೀಡೆ52 mins ago

WTC 2025: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಬೇಕಿದ್ದರೆ ಭಾರತಕ್ಕೆ ಇನೆಷ್ಟು ಗೆಲುವು ಬೇಕು?

Doctors Strike
ದೇಶ56 mins ago

Doctors Strike: ನಾವು ಮುಂದಿನ ಸಂತ್ರಸ್ತರಾಗಲು ಬಯಸುವುದಿಲ್ಲ; ಪ್ರತಿಭಟನಾನಿರತ ವೈದ್ಯರ ಕಿಡಿನುಡಿ

Dina Bhavishya
ಭವಿಷ್ಯ1 hour ago

Dina Bhavishya: ಈ ರಾಶಿಯವರಿಗೆ ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರ

Murder case
ಪ್ರಮುಖ ಸುದ್ದಿ2 hours ago

Murder Case : ದಲಿತನಿಗೆ ಕ್ಷೌರ ಮಾಡಲು ನಿರಾಕರಣೆ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌