ವಿಸ್ತಾರ ಸಂಪಾದಕೀಯ: ವೈದ್ಯಕೀಯ ನಿರ್ಲಕ್ಷ್ಯಕ್ಕೂ ತಕ್ಕ ಶಿಕ್ಷೆ ಅಗತ್ಯ Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ವೈದ್ಯಕೀಯ ನಿರ್ಲಕ್ಷ್ಯಕ್ಕೂ ತಕ್ಕ ಶಿಕ್ಷೆ ಅಗತ್ಯ

ನಮ್ಮಲ್ಲಿ ವೈದ್ಯರ ಮೇಲಿನ ಹಲ್ಲೆ ತಡೆಯಲು ಕಠಿಣ ಕಾನೂನುಗಳಿವೆ. ವೈದ್ಯರ ಸಂರಕ್ಷಣೆಗೆ ಇದು ಅಗತ್ಯ ಕೂಡ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಆಗುವ ಹಾನಿಯ ಸಂತ್ರಸ್ತರಿಗೂ ನ್ಯಾಯ ದೊರೆಯಬೇಕಲ್ಲವೇ?

VISTARANEWS.COM


on

Medical Negligence
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೈದ್ಯಕೀಯ ನಿರ್ಲಕ್ಷ್ಯ ತೋರಿದ ಧಾರವಾಡದ ಪ್ರಸೂತಿ ತಜ್ಞೆಯೊಬ್ಬರಿಗೆ ಗ್ರಾಹಕ ನ್ಯಾಯಾಲಯ 11 ಲಕ್ಷ ರೂ. ದಂಡ ವಿಧಿಸಿದೆ. ಈ ಪ್ರಕರಣ ವೈದ್ಯಕೀಯ ನಿರ್ಲಕ್ಷ್ಯದಿಂದ ಬವಣೆ ಅನುಭವಿಸುವ ಸಾಮಾನ್ಯ ಜನರ ಪಾಲಿಗೆ ಆಶಾಕಿರಣವಾಗಿದೆ. ಏಕೆಂದರೆ, ಅಲ್ಲಲ್ಲಿ ವೈದ್ಯ ನಿರ್ಲಕ್ಷ್ಯದಿಂದ ಜೀವಹಾನಿ, ಅಂಗಾಂಗ ಶಾಶ್ವತ ಊನ ಇತ್ಯಾದಿ ಪ್ರಕರಣ ನಡೆಯುತ್ತಲೇ ಇರುತ್ತದೆ. ಆದರೆ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ.

ಈ ಪ್ರಕರಣದಲ್ಲಿ, ನರ್ಸಿಂಗ್ ಹೋಮ್ ಒಂದರಲ್ಲಿ ಗರ್ಭಿಣಿಯೊಬ್ಬರ ತಪಾಸಣೆ ನಡೆಸಲಾಗಿತ್ತು. ಹೊಟ್ಟೆಯಲ್ಲಿರುವ ಶಿಶು ಆರೋಗ್ಯದಿಂದಿದೆ ಎಂದು ವರದಿ ನೀಡಲಾಗಿತ್ತು. ಐದು ಬಾರಿ ಸ್ಕ್ಯಾನ್ ಮಾಡಿದಾಗಲೂ ಮಗು ಆರೋಗ್ಯದಿಂದಿದೆ ಎಂದೇ ವರದಿ ನೀಡಲಾಗಿತ್ತು. ಆದರೆ ಅದು ಅಂಗವಿಕಲ ಮಗುವಾಗಿತ್ತು ಎಂದು ಹೆರಿಗೆ ಆದಾಗ ಗೊತ್ತಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾ ಸೌಂಡ್ ಸ್ಕ್ಯಾನ್ ನಿಯಮಾವಳಿ ಪ್ರಕಾರ, 18ರಿಂದ 20 ವಾರಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಆರೋಗ್ಯ ಮತ್ತು ಅದರ ಅಂಗಾಂಗಗಳ ಸುಸ್ಥಿತಿ ತಿಳಿಯುತ್ತದೆ. ಆದರೆ ಈ ಪ್ರಕರಣದಲ್ಲಿ 5 ಬಾರಿ ಸ್ಕ್ಯಾನ್ ನಡೆಸಿದಾಗಲೂ ಮಗುವಿನ ನೈಜ ಸ್ಥಿತಿಯನ್ನು ವೈದ್ಯರು ಸರಿಯಾಗಿ ಹೇಳಿರಲಿಲ್ಲ. ಹೀಗಾದರೆ ಆ ಅಂಗವಿಕಲ ಮಗುವಿನ ಕರಾಳ ಭವಿಷ್ಯಕ್ಕೆ ಯಾರು ಹೊಣೆ? ಈ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯ ನರ್ಸಿಂಗ್ ಹೋಮ್ ಮತ್ತು ಪ್ರಸೂತಿ ತಜ್ಞೆಗೆ ದೊಡ್ಡ ಮೊತ್ತದ ದಂಡ ವಿಧಿಸಿದೆ. ಈ ಹಣವನ್ನು ಆ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಮೀಸಲಿಡಬೇಕು ಎಂದಿದೆ. ಇದೊಂದು ವೈದ್ಯಲೋಕದ ಕಣ್ಣು ತೆರೆಸುವ ಮತ್ತು ಮಾನವೀಯತೆಯ ಹಿನ್ನೆಲೆಯಲ್ಲಿ ಮಹತ್ವದ ತೀರ್ಪಾಗಿದೆ.

ನಮ್ಮಲ್ಲಿ ವೈದ್ಯರ ಮೇಲಿನ ಹಲ್ಲೆಗಳನ್ನು ತಡೆಯಲು ಕಠಿಣ ಕಾನೂನುಗಳು ಇವೆ. ನಿರ್ಲಕ್ಷ್ಯದಿಂದ ರೋಗಿ ಮೃತಪಟ್ಟಾಗ, ಅಥವಾ ಕೆಲವೊಂದು ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಹೀಗಾಯಿತು ಎಂಬ ತಪ್ಪು ಕಲ್ಪನೆಯಿಂದ ರೋಗಿಯ ಕಡೆಯವರು ಆಕ್ರೋಶದಿಂದ ವೈದ್ಯರ ಮೇಲೆ ಹಲ್ಲೆ ನಡೆಸುವುದು ಹೆಚ್ಚಾಗಿದೆ. ಇಂಥ ಹಲ್ಲೆಗಳನ್ನು ತಡೆಯಲು ಸರ್ಕಾರ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಇಂಥ ಕೃತ್ಯಗಳು ಮೂರು ತಿಂಗಳಿಂದ ಐದು ವರ್ಷದವರೆಗೆ ಜೈಲು ಮತ್ತು ಒಂದು ಲಕ್ಷ ರೂ. ದಂಡಕ್ಕೆ ಅರ್ಹ. ವೈದ್ಯರ ಸಂರಕ್ಷಣೆಗೆ ಇದು ಅಗತ್ಯವೇ ಅನ್ನೋಣ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಆಗುವ ಹಾನಿ ಸಂತ್ರಸ್ತರಿಗೂ ನ್ಯಾಯ ದೊರೆಯಬೇಕಲ್ಲವೇ?

ಆ ದೃಷ್ಟಿಯಿಂದ, 1995ರಲ್ಲಿ ಸುಪ್ರೀಂ ಕೋರ್ಟ್, ವೈದ್ಯಕೀಯವನ್ನು ‘ಸೇವೆ’ ಎಂದು ಪರಿಗಣಿಸಿ, ಈ ಸೇವೆಯಲ್ಲಿ ಆಗುವ ನ್ಯೂನತೆಗೆ ತಕ್ಕ ಶಿಕ್ಷೆಯನ್ನು ನೀಡುವ ಅಧಿಕಾರವನ್ನು ಗ್ರಾಹಕ ನ್ಯಾಯಾಲಯಕ್ಕೆ ನೀಡಿತು. ಹೀಗೆ ಇಂದು ಸೇವಾನ್ಯೂನತೆಗೆ ಒಳಗಾದವರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಪಡೆಯಬಹುದಾಗಿದೆ. ಇದೇ ರೀತಿ ರೋಗಿಗಳ ಅಥವಾ ಗರ್ಭಿಣಿಯರ ಚಿಕಿತ್ಸೆ, ತಪಾಸಣೆ, ಸಲಹೆಯ ಸಂದರ್ಭದಲ್ಲಿ ವೈದ್ಯರು ನಿರ್ಲಕ್ಷ್ಯ ಎಸಗಿದ ಸಂದರ್ಭದಲ್ಲಿ ದಂಡನೆಗೆ ಒಳಪಡಿಸುವ ಕಠಿಣ ಕಾಯಿದೆಯನ್ನೂ ಸರ್ಕಾರ ರೂಪಿಸುವುದು ಅಗತ್ಯ. ಏಕೆಂದರೆ ವೈದ್ಯಕೀಯವು ಪ್ರಾಣ ಉಳಿಸುವ ಅಥವಾ ತೆಗೆಯುವ ಸಾಧ್ಯತೆಯುಳ್ಳ ವೃತ್ತಿ ಆಗಿರುವುದರಿಂದ ಇದರ ಹೊಣೆಗಾರಿಕೆ ಹೆಚ್ಚು. ಈಗ ಇರುವ ಕಾಯಿದೆಗಳು ವೈದ್ಯಕೀಯ ನಿರ್ಲಕ್ಷ್ಯವನ್ನು ಸರಿಯಾಗಿ ವ್ಯಾಖ್ಯಾನಿಸುವ, ಅಪರಾಧವನ್ನು ಗುರುತಿಸುವ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಸಾಕಷ್ಟು ಬಲಿಷ್ಠತೆಯನ್ನು ಹೊಂದಿಲ್ಲ. ಉದಾಹರಣೆಗೆ, ದಂಡ ಸಂಹಿತೆಯ ಸೆಕ್ಷನ್ 304ಎಯ ವೈದ್ಯಕೀಯ ನಿರ್ಲಕ್ಷ್ಯದ ವ್ಯಾಖ್ಯಾನವನ್ನು ಕೋರ್ಟ್‌ನಲ್ಲಿ ಬಹು ಸುಲಭವಾಗಿ ವೈದ್ಯರು ತಳ್ಳಿಹಾಕಬಹುದಾಗಿದೆ. ಹಾಗೂ ಶಿಕ್ಷೆಯ ಪ್ರಮಾಣ ಕೂಡ ಅಲ್ಪವಾದುದಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಲ್ಪಸಂಖ್ಯಾತರ ಹಿತರಕ್ಷಣೆಯಲ್ಲಿ ಭಾರತ ನಂ.1

ಸಂವಿಧಾನದ 21ನೇ ಆರ್ಟಿಕಲ್‌ನಲ್ಲಿ ದತ್ತವಾಗಿರುವ ಪ್ರಜೆಯ ಬದುಕುವ ಹಕ್ಕು, ಸರಿಯಾದ ಆರೋಗ್ಯ ಸೇವೆಯ ಖಾತ್ರಿ ಇಲ್ಲವೆಂದಾದರೆ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಬಾರದು. ಹೆಚ್ಚು ನಿಖರವಾದ ಮತ್ತು ಗ್ರಾಹಕಸ್ನೇಹಿ ಕಾಯಿದೆ ಇದ್ದಾಗ ವೈದ್ಯರು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸುವಂತಾಗುತ್ತದೆ. ಮತ್ತು, ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಅಥವಾ ಜೀವಮಾನವಿಡೀ ಬವಣೆ ಅನುಭವಿಸುವುದು ತಪ್ಪುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Lakshmi Hebbalkar : ಜಾರಕಿಹೊಳಿ ಆಪ್ತನಿಗೆ ಹೆಬ್ಬಾಳ್ಕರ್‌ ಸೋದರನ ಗ್ಯಾಂಗ್‌ನಿಂದ ಚೂರಿ ಇರಿತ

Lakshmi Hebbalkar : ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್‌ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಇದನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಸೋದರನ ಗ್ಯಾಂಗ್‌ ನಡೆಸಿದೆ ಎಂದು ಆರೋಪಿಸಲಾಗಿದೆ.

VISTARANEWS.COM


on

Prtithvi singh attacked
ಗಾಯಗೊಂಡಿರುವ ಪೃಥ್ವಿ ಸಿಂಗ್‌
Koo

ಬೆಳಗಾವಿ: ಬೆಳಗಾವಿಯ ಬಿಜೆಪಿ ಮುಖಂಡ (Belagavi BJP Leader), ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್‌ (55) (Attack on Prithvi singh) ಅವರ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಸಹೋದರ ಚನ್ನರಾಜ ಹಟ್ಟಿಹೊಳಿಯ (Channaraja Hattiholi) ಆಪ್ತರು ಹಲ್ಲೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ಪೃಥ್ವಿ ಸಿಂಗ್‌ ಅವರು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarakiholi) ಅವರ ಅತ್ಯಾಪ್ತರಲ್ಲಿ ಒಬ್ಬರು.

ಚನ್ನರಾಜ್‌ ಹಟ್ಟಿಹೊಳಿ ಅವರ ಗ್ಯಾಂಗ್‌ ಪೃಥ್ವಿ ಸಿಂಗ್‌ ಅವರ ಮನೆಗೇ ಹೋಗಿ ಹಲ್ಲೆ ಮಾಡಿದೆ ಎಂದು ಆಪಾದಿಸಲಾಗಿದೆ. ಈ ಬಗ್ಗೆ ವಿಡಿಯೊ ದಾಖಲೆಯನ್ನೂ ನೀಡಿರುವ ಪೃಥ್ವಿ ಸಿಂಗ್‌ ಅವರು, ಪ್ರಸಕ್ತ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದಾರೆ.

Prtithvi singh attacked
ಹಲ್ಲೆಗೊಳಗಾದ ಪೃಥ್ವಿ ಸಿಂಗ್

ಚನ್ನರಾಜ್‌ ಹಟ್ಟಿಹೊಳಿ ಅವರ ಬಾಡಿಗಾರ್ಡ್‌ಗಳು ಮತ್ತು ಆಪ್ತರಾದ ಸದ್ದಾಂ, ಸುಜಯ್‌ ಜಾಧವ್‌ ಅವರ ಪೃಥ್ವಿ ಸಿಂಗ್‌ ಮನೆಗೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ತಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಪೃಥ್ವಿ ಸಿಂಗ್‌. ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆಗೆ ಮಾತನಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಪೊಲೀಸರಿಗೆ ನೀಡಲಾಗಿದೆ.

Prtithvi singh attacked
ಪೃಥ್ವಿ ಸಿಂಗ್‌ ಕೈಗೆ ಗಾಯವಾಗಿರುವುದು

ಕೈಗಳಿಗೆ ಚಾಕು ಇರಿತ

ಬೆಳಗಾವಿಯ ಜಯ ನಗರದಲ್ಲಿ ನಿವಾಸದ ಬಳಿಯಲ್ಲಿ ಘಟನೆ ನಡೆದಿದೆ. ಪೃಥ್ವಿ ಸಿಂಗ್ ಕೈ ಹಾಗೂ ಬೆನ್ನಿನ ಭಾಗಕ್ಕೆ ಚೂರಿಯಿಂದ ಇರಿಯಲಾಗಿದೆ. ಅವರನ್ನು ಅವರ ಪುತ್ರ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ಹೋಗುವ ಮುನ್ನ ಪೃಥ್ವಿ ಸಿಂಗ್‌ ಅವರು ವಿಡಿಯೊ ಒಂದನ್ನು ಬಿಡುಗಡೆ ಮಾತನಾಡಿ, ಚನ್ನರಾಜ್‌ ಹಟ್ಟಿಹೊಳಿ ಅವರ ತಂಡ ತನಗೆ ಹಲ್ಲೆ ಮಾಡಿದೆ ಎಂದು ಆಪಾದಿಸಿದ್ದಾರೆ.

ಇದನ್ನೂ ಓದಿ: ವಿಶೇಷಚೇತನರ ಬೇಡಿಕೆ ಶೀಘ್ರ ಈಡೇರಿಕೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಆಸ್ಪತ್ರೆಗೆ ದೌಡಾಯಿಸಿದ ಬಿಜೆಪಿ ನಾಯಕರು

ಈ ನಡುವೆ, ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿರುವ ಬಿಜೆಪಿ ನಾಯಕರು ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿ ಪೃಥ್ವಿ ಸಿಂಗ್‌ ಅವರ ಆರೋಗ್ಯ ವಿಚಾರಿಸಿದ್ದಾರೆ. ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಅವರು ಪೃಥ್ವಿ ಸಿಂಗ್‌ ಅವರಿಗೆ ಧೈರ್ಯ ತುಂಬಿದ್ದಾರೆ ಮತ್ತು ಹಲ್ಲೆಕೋರರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಯಾರೇ ಹಲ್ಲೆ ಮಾಡಿದರೂ ಕಠಿಣ ಕ್ರಮ ಎಂದ ಪರಮೇಶ್ವರ್‌

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರನ ಆಪ್ತರು ಪೃಥ್ವಿ ಸಿಂಗ್‌ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು, ʻʻಏನೇ ಇದ್ದರೂ ನಮ್ಮ‌ ಪೊಲೀಸರು ನೋಡಿಕೊಳ್ತಾರೆ.. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಾರೆ.. ನಾನು ಈಗಷ್ಟೇ ಅಧಿವೇಶನ‌ ಮುಗಿಸಿ ಬಂದಿದ್ದೇನೆ ನೋಡ್ತೀನಿʼʼ ಎಂದು ಪರಮೇಶ್ವರ್ ಹೇಳಿದರು.

ದುರುದ್ದೇಶಪೂರ್ವಕ ಆರೋಪ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಪೃಥ್ವಿ ಸಿಂಗ್ ಹಲ್ಲೆ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್‌ ಹಾಕಿದ್ದು ಸೆರೆಯಾಗಿದೆ. ಆದರೆ ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದು ಪತ್ತೆ ಹಚ್ಚಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಚನ್ನರಾಜ್‌ ಹಟ್ಟಿಹೊಳಿ ಆಪ್ತರು ಪೃಥ್ವಿ ಸಿಂಗ್‌ ಮನೆಗೆ ಬಂದಿರುವ ದೃಶ್ಯ

Continue Reading

ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ! ಬಿತ್ತು ಲೀತು ಗ್ರಾಮದಲ್ಲಿ 13 ಜನರ ಹೆಣ

Manipur Violence: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೇ 3ರಿಂದ ಎರಡು ಸಮುದಾಯಗಳ ಮಧ್ಯೆ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ ಕನಿಷ್ಠ 182 ಜನರು ಮೃತಪಟ್ಟಿದ್ದಾರೆ.

VISTARANEWS.COM


on

Fresh violence in Manipur and 13 people found dead in village
Koo

ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದ (Manipur Violence) ತೆಂಗ್ನೌಪಾಲ್ ಜಿಲ್ಲೆಯಲ್ಲಿ (Tengnoupal district) ಸೋಮವಾರ ಮಧ್ಯಾಹ್ನ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು (Fresh violence), ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ತೆಂಗ್ನೌಪಾಲ್ ಜಿಲ್ಲೆಯ ಸೈಬೋಲ್ ಬಳಿಯ ಲೀತು ಗ್ರಾಮದಲ್ಲಿ ಮಧ್ಯಾಹ್ನದ ಸುಮಾರಿಗೆ ಎರಡು ಗುಂಪುಗಳ ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದೆ (Encounter) ಎಂದು ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರ ನಡೆದ ಸ್ಥಳದಿಂದ ಭದ್ರತಾ ಪಡೆಗಳು ಕೇವಲ 10 ಕಿ.ಮೀ ದೂರದಲ್ಲಿದ್ದವು. ನಮ್ಮ ಪಡೆಗಳು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಲೀತು ಗ್ರಾಮದಲ್ಲಿ 13 ಶವಗಳ ಬಿದ್ದಿದ್ದವು. ಆದರೆ, ಅಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಕಂಡ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರೆಲ್ಲರೂ ಲೀತು ಗ್ರಾಮದಲ್ಲವರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅವರು ಬೇರೆ ಸ್ಥಳದಿಂದ ಬಂದು ಇಲ್ಲಿನ ಸ್ಥಳೀಯ ಪ್ರತ್ಯೇಕತಾ ಗುಂಪುಗಳ ಜತೆಗೆ ಸಂಘರ್ಷ ನಡೆಸಿರಬಹುದು. ಆಗ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದೆಡೆ, ಮೃತಪಟ್ಟವರ ಗುರುತು ಪತ್ತೆಯನ್ನು ಪೊಲೀಸರಲಾಗಲೀ, ಭದ್ರತಾ ಪಡೆಗಳಾಗಲೇ ಖಚಿತಪಡಿಸಿಲ್ಲ.

ಈಗಾಗಲೇ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಮತ್ತು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಮೇ 3ರಿಂದ ಸಂಘರ್ಷ ನಡೆಯುತ್ತಿದೆ. ಎರಡೂ ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಇದವರೆಗೆ ಕನಿಷ್ಠ 182 ಜನರು ಮೃತಪಟ್ಟು, 50 ಸಾವಿರಕ್ಕೂ ಅಧಿಕ ಜನರು ನಿರ್ಗತಿಕರಾಗಿದ್ದಾರೆ.

ಹಿಂಸಾಚಾರಪೀಡಿತ ಮಣಿಪುರ ರಾಜ್ಯದ ಗಡಿ ಪ್ರದೇಶಗಳನ್ನು ಹೊರತುಪಡಿಸಿ ಕೆಲವು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಅಧಿಕಾರಿಗಳು ಭಾನುವಾರ ಮಾತ್ರ ಹಿಂತೆಗೆದುಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಮತ್ತೆ ಗುಂಡಿನ ಚಕಮಕಿ ನಡೆದಿದೆ, ಹಿಂಸಾಚಾರ ಭುಗಿಲೆದ್ದಿದೆ.

ಹಿಂಸಾಚಾರಪೀಡಿತ ಕೆಲವು ಜಿಲ್ಲೆಗಳಲ್ಲಿನ ಪ್ರದೇಶಗಳು ಮೈತೈ ಅಥವಾ ಕುಕಿಗಳ ಪ್ರಾಬಲ್ಯವನ್ನು ಹೊಂದಿವೆ ಮತ್ತು ಕಳೆದ ಏಳು ತಿಂಗಳುಗಳಲ್ಲಿ ಹೆಚ್ಚಿನ ಹಿಂಸಾಚಾರ, ಗುಂಡಿನ ಚಕಮಕಿ, ಬೆಂಕಿ ಹಚ್ಚುವುದು ಮತ್ತು ಅಪಹರಣಗಳಿಗೆ ಈ ಪ್ರದೇಶವು ಸಾಕ್ಷಿಯಾಗಿದೆ. ಕೇಂದ್ರ ಮತ್ತು ಮಣಿಪುರ ಸರ್ಕಾರವು, ರಾಜ್ಯದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫೋರ್ಸ್ (ಯುಎನ್‌ಎಲ್‌ಎಫ್) ನೊಂದಿಗೆ ದಿಲ್ಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ದಿನಗಳ ನಂತರ, ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: Manipur Violence: ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಸೇನಾಧಿಕಾರಿಗೆ ಮಣಿಪುರ ಹಿಂಸಾಚಾರ ತಡೆಯುವ ಹೊಣೆ!

Continue Reading

ಕ್ರಿಕೆಟ್

Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್​

Ravi Bishnoi : ರವಿ ಬಿಷ್ಳೋಯಿ ಟಿ20 ಕ್ರಿಕೆಟ್​ ಮಾದರಿಯಲ್ಲಿ ಇದುವರೆಗೆ 34 ವಿಕೆಟ್​ಗಳನ್ನು ಉರುಳಿಸಿದ್ದಾರೆ.

VISTARANEWS.COM


on

Ravi Bishnoi
Koo

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 03) ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 6 ರನ್​ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 154 ರನ್ ಗಳಿಸಲಷ್ಟೇ ಶಕ್ತಗೊಂಡು ಸೋಲೊಪ್ಪಿಕೊಂಡಿತು. ಇದರೊಂದಿಗೆ ಸರಣಿ 4-1 ಅಂತರದಿಂದ ಭಾರತದ ಪಾಲಾಯಿತು. ವಿಶ್ವ ಕಪ್​ನಲ್ಲಿ ಭಾರತ ತಂಡ ಸೋತಿದ್ದ ಹಿನ್ನೆಲೆಯಲ್ಲಿ ಈ ಸರಣಿ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನವನ್ನು ಉಂಟು ಮಾಡಿತು.

ಭಾರತದ ಪರ ಸರಣಿಯಲ್ಲಿ ಹಲವರು ಮಿಂಚಿದ್ದಾರೆ. ಅವರಲ್ಲಿ ಪ್ರಮುಖರು ಮಣಿಕಟ್ಟು ಸ್ಪಿನ್ನರ್ ರವಿ ಬಿಷ್ಣೋಯ್. ಐದು ಪಂದ್ಯಗಳಿಂದ 9 ವಿಕೆಟ್ ಪಡೆಯುವ ಮೂಲಕ ಸರಣಿಯ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು. ಐದನೇ ಟಿ 20 ಐನಲ್ಲಿ ಬಿಷ್ಣೋಯ್ ಮತ್ತೊಮ್ಮೆ ನಾಲ್ಕು ಓವರ್​ಗಳ ಸ್ಪೆಲ್​ನಲ್ಲಿ 29 ರನ್​ಗೆ 2 ವಿಕೆಟ್​ ಪಡೆದರು. ಸರಣಿಯಲ್ಲಿ ಅವರ ಅದ್ಭುತ ಪ್ರದರ್ಶನದ ಬಗ್ಗೆ ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಿಷ್ಣೋಯ್​ ಇತರರಿಗಿಂತ ವೇಗವಾಗಿ ಬೌಲಿಂಗ್ ಮಾಡುವ ಅವರ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೊಸ ಪೀಳಿಗೆಯ ಬೌಲರ್​

“ಭಾರತವು ಯಾವಾಗಲೂ ಆಯಾಯ ಪೀಳಿಗೆಯಲ್ಲಿ ಉತ್ತಮ ಸ್ಪಿನ್ ಬೌಲರ್​ಗಳನ್ನು ಸೃಷ್ಟಿಸುತ್ತದೆ. ಅನಿಲ್ ಕುಂಬ್ಳೆಯಿಂದ ಹಿಡಿದು ರವಿ ಅಶ್ವಿನ್ ವರೆಗೆ ಈಗ ಬಂದಿರುವ ಯುವ ಆಟಗಾರರೆಲ್ಲರೂ ಇದಕ್ಕೆ ಸಾಕ್ಷಿ. ಆದರೆ ಬಿಷ್ಣೋಯ್ ಇತರ ಲೆಗ್ ಸ್ಪಿನ್ನರ್​​ಗಳಿಗಿಂತ ಭಿನ್ನರಾಗಿದ್ದಾರೆ. ಅವರು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಮತ್ತು ಅವರು ಚೆಂಡನ್ನು ಸಾಕಷ್ಟು ಸ್ಲೈಡ್ ಮಾಡುತ್ತಾರೆ. ಅಕ್ಷರ್ ಪಟೇಲ್​ ಕೂಡ ತುಂಬಾ ವೇಗ ಹಾಗೂ ನಿಖರ ಬೌಲಿಂಗ್ ಮಾಡುತ್ತಾರೆ. ಅವರು ಚೆಂಡನ್ನು ಹೆಚ್ಚು ತಿರುಗಿಸುವುದಿಲ್ಲ. ಅದೇ ರೀತಿ ವಾಷಿಂಗ್ಟನ್​ ಕೂಡ ಒಂದೇ ರೀತಿ ಇದ್ದಾರೆ ನಿಖರ ಮತ್ತು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಎಂದು ಮುರಳೀಧರನ್ ಜಿಯೋ ಸಿನೆಮಾ ಮಾತುಕತೆಯಲ್ಲಿ ಹೇಳಿದರು.

ಇದನ್ನೂ ಓದಿ : Amazon Prime : ಅಮೆಜಾನ್ ಪ್ರೈಮ್​ನಲ್ಲಿ ನೋಡಬಹುದು ಟಿ20 ವಿಶ್ವ ಕಪ್

ಟಿ20 ಕ್ರಿಕೆಟ್​ನಲ್ಲಿ 34 ವಿಕೆಟ್ ಪಡೆದ ಬಿಷ್ಣೋಯ್​

2022ರ ಫೆಬ್ರವರಿಯಲ್ಲಿ ಈಡನ್ ಗಾರ್ಡನ್ಸ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ 23ರ ಹರೆಯದ ಬಿಷ್ಣೋಯ್​​ 21 ಪಂದ್ಯಗಳಿಂದ 17.38ರ ಸರಾಸರಿಯಲ್ಲಿ 34 ವಿಕೆಟ್​​ಗಳನ್ನು ಕಬಳಿಸಿದ್ದಾರೆ. ರಾಜಸ್ಥಾನ ಮೂಲದ ಸ್ಪಿನ್ನರ್ 2022 ರ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸ್ಪರ್ಧೆಯಲ್ಲಿದ್ದರು. ಆದಾಗ್ಯೂ, ಮತ್ತೊಬ್ಬ ಮಣಿಕಟ್ಟು ಸ್ಪಿನ್ನರ್ ಯಜುವೇಂದ್ರ ಚಹಲ್ ಈಗಾಗಲೇ ತಂಡದಲ್ಲಿ ಇರುವುದರಿಂದ ಆಯ್ಕೆದಾರರು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಮುಂದುವರಿಯಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಟಿ 20 ಐ ಸರಣಿಗೆ ಚಹಲ್ ತಂಡದಲ್ಲಿ ಇಲ್ಲದಿರುವುದರಿಂದ, ಬಿಷ್ಣೋಯ್ ತಮ್ಮ ಗಮನಾರ್ಹ ಫಾರ್ಮ್ ಅನ್ನು ಮುಂದುವರಿಸುವ ಅವಕಾಶ ಹೊಂದಿದ್ದಾರೆ. ಆ ಮೂಲಕ ಮುಂದಿನ ವರ್ಷದ ಟಿ 20 ವಿಶ್ವಕಪ್​​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶ ಪಡೆಯಲಿದ್ದಾರೆ.

Continue Reading

ಕರ್ನಾಟಕ

HD Devegowda : ಕಾಂಗ್ರೆಸ್‌ ನಮ್ಮನ್ನು ದಬ್ಬಿದಾಗ ಮೋದಿ, ಶಾ ಕೈಹಿಡಿದರು ಎಂದ ದೇವೇಗೌಡ್ರು

HD Devegowda : ಕಾಂಗ್ರೆಸ್‌ ನಮ್ಮನ್ನು ಹೊರತಳ್ಳಿದಾಗ ಬಂದು ಆಧರಿಸಿದ್ದು ಮೋದಿ ಮತ್ತು ಅಮಿತ್‌ ಶಾ. ಹಾಗಾಗಿ ಅವರೊಂದಿಗೆ ಮೈತ್ರಿ ಮಾಡಿಕೊಂಡೆವು ಎಂದು ಹೇಳಿದ್ದಾರೆ ಎಚ್‌.ಡಿ ದೇವೇಗೌಡರು.

VISTARANEWS.COM


on

Devegowda PM Narendra Modi
Koo

ಹಾಸನ: ಕಾಂಗ್ರೆಸ್‌ ನೇತೃತ್ವದಲ್ಲಿ ನಲವತ್ತಾರು ಪಕ್ಷಗಳು ಸೇರಿ I.N.D.I.A ಕೂಟ (INDIA BLOCK) ರಚನೆ ಮಾಡಿದಾಗ ನಮ್ಮನ್ನು ಹೊರದಬ್ಬಿದರು. ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅಮಿತ್‌ ಶಾ (Amit Shah) ನಮ್ಮನ್ನು ಕೈ ಹಿಡಿದರು ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ (HD Devegowda) ಅವರು ಬಿಜೆಪಿ ಮತ್ತು ಜೆಡಿಎಸ್‌ (BJP-JDS Coalition) ನಡುವಿನ ಮೈತ್ರಿ ಯಾಕಾಯಿತು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಜೆಡಿಎಸ್‌ ಬಗ್ಗೆ, ನಮ್ಮ ಬಗ್ಗೆ ಅವಹೇಳನದ ಭಾವವನ್ನೇ ಹೊಂದಿದ್ದಾರೆ. ಅದೇ ಮೋದಿಯವರು ಪ್ರಧಾನ ಮಂತ್ರಿಯಾಗಿ. ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ ಎಂದರು.

ʻʻಎನ್‌ಡಿಎಗೆ ಪರ್ಯಾಯವಾಗಿ INDIA ರಚನೆ ಆಗಿದೆ. ಸುಮಾರು 46 ಪ್ರಾದೇಶಿಕ ಪಕ್ಷಗಳ ಕೂಟಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಿದೆ. ದೇಶವನ್ನು ಆಳಿದಂಥ ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮುಂದಾಳತ್ವ ವಹಿಸಿದೆ. ಕುಮಾರಸ್ವಾಮಿ ಅವರು 2018ರಲ್ಲಿ ಮುಖ್ಯಮಂತ್ರಿ ಆದಾಗ ಬಿಜೆಪಿ ಬಿಟ್ಟು ರಾಷ್ಟ್ರದ ಸೆಕ್ಯೂಲರ್ ಪಾರ್ಟಿಗಳ ಎಲ್ಲಾ ಮುಖಂಡರು ಭಾಗಿಯಾಗಿದ್ದರು. ಆದರೆ, INDIA ಕೂಟ ರಚನೆಯಾದಾಗ ನಮ್ಮನ್ನು ಹೊರಗಿಡಲೇಬೇಕು ಎಂದು ತೀರ್ಮಾನ ಮಾಡಿದವರು ಯಾರು? ಕುಮಾರಸ್ವಾಮಿ ಸರ್ಕಾರ ತೆಗಿಲೇಬೇಕು ಎಂದು ತೀರ್ಮಾನ ಮಾಡಿದವರು ಯಾರು?ʼʼ ಎಂದು ಪ್ರಶ್ನಿಸಿದರು ದೇವೇಗೌಡರು.

ನಾವು ನಿತೀಶ್‌ ಕುಮಾರ್‌ ಅವರ ಮೂಲಕ I.N.D.I.A ಸೇರಬೇಕು ಎಂದು ಪ್ರಯತ್ನ ಮಾಡಿದಾಗ ಜೆಡಿಎಸ್‌ ಸೇರ್ಪಡೆಯನ್ನು ನಾವು ಖಂಡತುಂಡವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು. ಹೀಗೆ ನಮ್ಮನ್ನು ದೂರ ಮಾಡಿದಾಗ ಮೋದಿಯವರು, ಅಮಿತ್ ಶಾ ಅವರು ನಮ್ಮನ್ನು ವೆಲ್ ಕಮ್ ಮಾಡಿದ್ರು ಎಂದು ದೇವೇಗೌಡರು ಹೇಳಿದರು. ಕಾಂಗ್ರೆಸ್ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮೋದಿ ಮತ್ತು ಶಾ ಅವರು ನಮ್ಮನ್ನು ವೆಲ್ ಕಮ್ ಮಾಡಿದರು ಎಂದು ದೇವೇಗೌಡರು ಹೇಳಿದರು.

ಮುಂದಿನ ದಿನಗಳಲ್ಲಿ ಜೆಡಿಎಸ್‌ ಇರೋದೇ ಇಲ್ಲ. ಅದು‌ ಆಟಕ್ಕಿಲ್ಲ, ಲೆಕ್ಕಕ್ಕೂ ಇಲ್ಲ ಎಂದು ಈಗಲೂ ಬಹಳ ಲಘುವಾಗಿ ಮಾತನಾಡುತ್ತಿದ್ದಾರೆ. ಮುಂದೆ ಕರ್ನಾಟಕದಲ್ಲಿ ಬಿಜೆಪಿ, ಮೋದಿ, ಶಾ ಅವರ ಒಟ್ಟಿಗೆ ಹೋಗ್ತೇವೆ. ಬಿಜೆಪಿಯೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಮುಕ್ತವನ್ನಾಗಿಸಲು ಹೋರಾಟ ಮಾಡೋದು ನಮ್ಮ ಗುರಿ ಎಂದು ಹೇಳಿದರು ದೇವೇಗೌಡರು.

ಮುಗಿಸಿಯೇ ತೀರುತ್ತೇವೆ ಎಂದಾಗ ಉಳಿಸಿಕೊಳ್ಳಬೇಕಲ್ಲ?

ನಮ್ಮ ಪಕ್ಷವನ್ನು ಮುಗಿಸಿಯೇ ತೀರುತ್ತೇವೆ ಎಂದು ಕೆಲವರು ಹಠ ತೊಟ್ಟಿರುವಾಗ ನಮಗೂ ನಮ್ಮ ಪಕ್ಷ ಉಳಿಯಬೇಕು ಎಂದು ಇರುತ್ತದೆ ಅಲ್ವಾ? ರೈತರ, ಬಡವರ, ಗ್ರಾಮೀಣ ಜನರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ನಮ್ಮ ಪಕ್ಷ ನಿಂತಿದೆ. ಅವರೆಲ್ಲ ಸೇರಿ ಪಕ್ಷವನ್ನು ಮುಗಿಸಿಯೇ ಬಿಡುತ್ತೇವೆ ಅಂದಾಗ ಮೋದಿಯವರು ನಮಗೆ ಒಂದು ಅವಕಾಶ ಮಾಡಿಕೊಟ್ಟರು ಎಂದು ದೇವೇಗೌಡರು ಹೇಳಿದರು.

ಮುಂದಿನ ವಾರ ಚುನಾವಣಾ ಮೈತ್ರಿ ಮಾತುಕತೆ ಎಂದ ದೇವೇಗೌಡರು

ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮುಂದಿನ ವಾರ ಮೈತ್ರಿ ಮಾತುಕತೆ ನಡೆಯಲಿದೆ. ಅಮಿತ್‌ ಶಾ ಅವರು ಲೋಕಸಭಾ ಚುನಾವಣೆ ಸಂಬಂಧ ಮಾತುಕತೆಗೆ ಕರೆಯಬಹುದು. ಕುಮಾರಸ್ವಾಮಿಯವರು ಹೋಗಿ ಮಾತನಾಡಿಕೊಂಡು ಬರ್ತಾರೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡುತ್ತಾರೆ. ಅಂತಿಮವಾಗಿ ಕಸಭಾ ಚುನಾವಣೆ ಬಗ್ಗೆ ನಿರ್ಣಯ ಮಾಡ್ತಾರೆ. ನಾವು 28 ಸ್ಥಾನ ಗಳಿಗೆ ಸ್ಪರ್ಧೆ ಮಾಡಲು ಐಕ್ಯತೆಯಿಂದ ಒಮ್ಮತದ ನಿರ್ಧಾರಕ್ಕೆ ಬರ್ತೇವೆ ಎಂದರು ದೇವೇಗೌಡರು ತಿಳಿಸಿದರು.

ಇದನ್ನೂ ಓದಿ: Bhavani Revanna : ಅದು ನಮ್ಮ ಕಾರಲ್ಲ ಫ್ರೆಂಡ್‌ದು ಎಂದ ರೇವಣ್ಣ; ಭವಾನಿ ತಪ್ಪಿಗೂ ಕ್ಷಮೆ ಕೇಳಿದ್ರು!

ತೆಲಂಗಾಣ ಚುನಾವಣೆಯಲ್ಲಿ ರಾಜ್ಯದ ಹಣ ಬಳಕೆಯಾಗಿದೆ ಎಂದು ಆರೋಪಿಸಿದ ಮಾಜಿ ಪ್ರದಾನಿ ದೇವೇಗೌಡರು, ʻʻತೆಲಂಗಾಣದಲ್ಲಿ ಚುನಾವಣೆ ಗೆಲ್ಲಲು ಎಷ್ಟು ಹಣ ಇಲ್ಲಿಂದ‌ ಹೋಗಿದೆ? ಚುನಾವಣಾ ಆಯೋಗ ಎಷ್ಟು ಹಣ ಸೀಝ್ ಮಾಡಿದೆ? ತೆಲಂಗಾಣದಲ್ಲಿ ಕಾಂಗ್ರೆಸ್ ಕರ್ನಾಟಕದ ಹಣ ಹಂಚಿ ಗೆದ್ದಿದೆʼʼ ಎಂದು ಪ್ರಶ್ನಿಸಿದರು.

ಭವಾನಿಗೆ ಆರೋಗ್ಯ ಸರಿಯಿಲ್ಲ ಏನೇನೋ ಮಾತನಾಡಬೇಡಿ

ಭವಾನಿ ರೇವಣ್ಣ ಅವರು ಕಾರಿಗೆ ಬೈಕ್‌ ಡಿಕ್ಕಿಯಾದ ಪ್ರಕರಣ ಮತ್ತು ಅವರ ರೌದ್ರಾವತಾರದ ಬಗ್ಗೆ ಕೇಳಿದಾಗ, ಪಾಪ ಅವರಿಗೆ ಅರೋಗ್ಯ ಸರಿಯಿಲ್ಲ. ಅವರಿಗೆ ಎರಡೂ ಮಂಡಿ ಆಪರೇಷನ್ ಆಗಿದೆ. ಅವರ ಬಗ್ಗೆ ಸುಮ್ಮನೆ ಏನೇನೊ ಮಾತಾಡುತ್ತಾರೆ ಎಂದರು ದೇವೇಗೌಡರು.

Continue Reading
Advertisement
Prtithvi singh attacked
ಕರ್ನಾಟಕ3 mins ago

Lakshmi Hebbalkar : ಜಾರಕಿಹೊಳಿ ಆಪ್ತನಿಗೆ ಹೆಬ್ಬಾಳ್ಕರ್‌ ಸೋದರನ ಗ್ಯಾಂಗ್‌ನಿಂದ ಚೂರಿ ಇರಿತ

Youth Sports
ಕ್ರೀಡೆ16 mins ago

Football Tournament : ರಿಲಯನ್ಸ್ ಫೌಂಡೇಶನ್ ಟ್ರೋಫಿ ಗೆದ್ದ ಸೇಂಟ್​ ಜೋಸೆಫ್ಸ್​​ ಕಾಲೇಜು

labourers trapped
ಕರ್ನಾಟಕ19 mins ago

ಗೋದಾಮಿನಲ್ಲಿ ಯಂತ್ರ ಕುಸಿತ; ಜೋಳದ ಮೂಟೆಗಳಡಿ ಸಿಲುಕಿದ 10 ಕಾರ್ಮಿಕರು

Fresh violence in Manipur and 13 people found dead in village
ದೇಶ24 mins ago

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ! ಬಿತ್ತು ಲೀತು ಗ್ರಾಮದಲ್ಲಿ 13 ಜನರ ಹೆಣ

Ravi Bishnoi
ಕ್ರಿಕೆಟ್52 mins ago

Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್​

Lawyers celebrate
ಕರ್ನಾಟಕ53 mins ago

ಪೊಲೀಸರು ಹಾಕಿದ್ದ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ; ಕಾಫಿನಾಡಿನಲ್ಲಿ ವಕೀಲರ ಸಂಭ್ರಮ

Devegowda PM Narendra Modi
ಕರ್ನಾಟಕ57 mins ago

HD Devegowda : ಕಾಂಗ್ರೆಸ್‌ ನಮ್ಮನ್ನು ದಬ್ಬಿದಾಗ ಮೋದಿ, ಶಾ ಕೈಹಿಡಿದರು ಎಂದ ದೇವೇಗೌಡ್ರು

Vijayapura News Promotion process of physical education teachers of the district to start immediately Primary School Teachers Association Demand
ಕರ್ನಾಟಕ1 hour ago

Teachers Promotion: ದೈಹಿಕ ಶಿಕ್ಷಕರ ಬಡ್ತಿ ಪ್ರಕ್ರಿಯೆ ಆರಂಭಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ

India Bloc Meeting
ದೇಶ1 hour ago

ಕಾಂಗ್ರೆಸ್‌ಗೆ ಸೋಲು; ಇಂಡಿಯಾ ಕೂಟದಲ್ಲಿ ತಳಮಳ! ನಾಯಕತ್ವಕ್ಕೆ ಹಲವರ ಗಾಳ!

Neeraj Chopra
ಕ್ರೀಡೆ1 hour ago

Neeraj Chopra: ಬುಮ್ರಾಗೆ ಬೌಲಿಂಗ್ ಟಿಪ್ಸ್ ಕೊಟ್ಟ ಚಿನ್ನದ ಹುಡುಗ ನೀರಜ್​ ಚೋಪ್ರಾ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ15 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌