Ayanuru Manjunath : ನೈರುತ್ಯ ಪದವೀಧರ ಕ್ಷೇತ್ರ; ಕಾಂಗ್ರೆಸ್​ನಿಂದ ಆಯನೂರು ಮಂಜುನಾಥ್​​ಗೆ ಟಿಕೆಟ್​​ - Vistara News

ಪ್ರಮುಖ ಸುದ್ದಿ

Ayanuru Manjunath : ನೈರುತ್ಯ ಪದವೀಧರ ಕ್ಷೇತ್ರ; ಕಾಂಗ್ರೆಸ್​ನಿಂದ ಆಯನೂರು ಮಂಜುನಾಥ್​​ಗೆ ಟಿಕೆಟ್​​

Ayanuru Manjunath : ಲೋಕ ಸಭಾ ಚುನಾವಣೆಯ ಟಿಕೆಟ್​ ಅಂತಿಮಗೊಳಿಸುವ ನಡುವೆ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದೆ.

VISTARANEWS.COM


on

Ayanur Manjunath to get Congress ticket from Shivamogga opposed from District Congress Karnataka Election 2023 updates
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ವಿಧಾನ ಪರಿಷತ್​ನ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಗುರುವಾರ ರಾತ್ರಿ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ಹಿರಿಯ ಮುಖಂಡ ಆಯನೂರು ಮಂಜುನಾಥ್ (Ayanuru Manjunath)​ ಅವರಿಗೆ ಹೈಕಮಾಂಡ್​ ಮಣೆ ಹಾಕಿದೆ. ಈ ಮೂಲಕ ಕಾಂಗ್ರೆಸ್​ನ ಇನ್ನೊಬ್ಬರ ಆಕಾಂಕ್ಷಿ ಎಸ್​. ಪಿ ದಿನೇಶ್ ಅವರಿಗೆ ಹಿನ್ನಡೆಯಾಗಿದೆ. ದಿನೇಶ್ ಅವರು ಹಿಂದಿನ ಎರಡು ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಆ ವೇಳೆ ಬಿಜೆಪಿಯಲ್ಲಿದ್ದ ಆಯನೂರು ವಿರುದ್ಧ ಸೋತಿದ್ದರು. ಇದೀಗ ಕಾಂಗ್ರೆಸ್​ನಿಂದ ಆಯನೂರು ಕಣಕ್ಕೆ ಇಳಿದಿದ್ದಾರೆ.

ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಡುವೆ ಪ್ರಕಟಿಸಿ ಸಿದ್ಧತೆ ಆರಂಭಿಸಿದೆ ಕಾಂಗ್ರೆಸ್​.

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕೊಡಗಿನ ಕೆ.ಕೆ.ಮಂಜುನಾಥ್‌ಗೆ ಕೆಪಿಸಿಸಿ ಅವಕಾಶ ಕೊಟ್ಟಿತ್ತು. ಆದರೆ, ಪದವೀಧರ ಕ್ಷೇತ್ರಕ್ಕೆ ಉಳಿಸಿಕೊಂಡಿತ್ತು. ಲೋಕಸಭೆ ಚುನಾವಣೆ ಅಬ್ಬರ ಆರಂಭಗೊಂಡ ನಂತರ ಪರಿಷತ್ ಚುನಾವಣೆಗೆ ಗೌಣವಾಗುತ್ತದೆ ಎಂಬ ಕಾರಣಕ್ಕೆ ತಕ್ಷಣವೇ ಅಭ್ಯರ್ಥಿಗಳನ್ನು ಘೋಷಿಸಿ ಎಂಬುದು ಆಕಾಂಕ್ಷಿಗಳ ಬೇಡಿಕೆಯಾಗಿತ್ತು. ಆದರೆ, ತೀವ್ರ ಪೈಪೋಟಿ ಇದ್ದ ಕಾರಣ ಅಂತಿಮ ಲೆಕ್ಕಾಚಾರ ಹಾಕಿ ಆಯನೂರು ಅವರಿಗೆ ಟಿಕೆಟ್ ಕೊಟ್ಟಿದೆ.

ಎಸ್.ಪಿ.ದಿನೇಶ್ ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್​ನಿಂದ ಅವಕಾಶ ಪಡೆದುಕೊಂಡು ಪರಾಭವಗೊಂಡಿದ್ದರೂ, ಈ ಬಾರಿ ಉತ್ತಮ ವಾತಾವರಣವಿರುವುದರಿಂದ ಮತ್ತೊಂದು ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಆಯನೂರು ಮಂಜುನಾಥ್​ ಕಾಂಗ್ರೆಸ್ ಸೇರುವಾಗಲೇ ಟಿಕೆಟ್ ಬೇಡಿಕೆ ಇಟ್ಟಿದ್ದರು. ಹೀಗಾಗಿ ಟಿಕೆಟ್ ಅವರಿಗೇ ಕೊಡಲಾಗಿದೆ.

ಇದನ್ನೂ ಓದಿ : Congress Candidate List : ಕಾಂಗ್ರೆಸ್​ನ 3ನೇ ಪಟ್ಟಿ ಬಿಡುಗಡೆ; 57 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ

ನೈಯತ್ಯ ಪದವೀಧರ ಕ್ಷೇತ್ರ ಅಸ್ತಿತಕ್ಕೆ ಬಂದಾಗಿನಿಂದಲೂ ಬಿಜೆಪಿ ಇಲ್ಲಿ ಪಾರಮ್ಯ ಸಾಧಿಸಿದೆ. ಆಯನೂರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹೊರತಾಗಿಯೂ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷ ತೊರೆದು ಹೋಗಿದ್ದ ಆಯನೂರು ಜೆಡಿಎಸ್​ ಸೇರಿದ್ದರು ಅಲ್ಲಿ ಪರಾಭವಗೊಂಡು ಬಳಿಕ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದರು. ಇದೀಗ ಬಿಜೆಪಿ ವಿರುದ್ಧವೇ ತೊಡೆ ತಟ್ಟಿದ್ದಾರೆ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ(ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕು ಮಾತ್ರ) ಸೇರಿಕೊಂಡು ಒಟ್ಟಾರೆ 5 ಲೋಕಸಭೆ, 30 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Hasan Pen Drive Case: ಎಲ್ಲೂ ಕಾಣದ ಪ್ರಜ್ವಲ್‌, ಇಂದು ಎಚ್‌ಡಿ ರೇವಣ್ಣ ಹೈಕೋರ್ಟ್‌ ಮೊರೆ

Hasan Pen Drive Case: ಅಶ್ಲೀಲ ವಿಡಿಯೋ ‌ಪೆನ್‌ಡ್ರೈವ್ ಸೋಶಿಯಲ್‌ ಮೀಡಿಯಾ ಮೂಲಕ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಅಗತ್ಯ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ. ಕೆಲ ಪೆನ್‌ ಡ್ರೈವ್‌ಗಳನ್ನು ಹೊಳೆನರಸೀಪುರ ಪೊಲೀಸರು ವಶಕ್ಕೆ ‌ಪಡೆದಿದ್ದಾರೆ. ಪೆನ್‌ಡ್ರೈವ್‌ಗಳನ್ನು ಎಸ್‌ಐಟಿ‌ ತಂಡಕ್ಕೆ‌ ಹೊಳೆನರಸೀಪುರ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.

VISTARANEWS.COM


on

hd revanna prajwal revanna
Koo

ಹಾಸನ: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS leader) ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ (Hasan Pen Drive Case) ಇನ್ನೊಬ್ಬ ಆರೋಪಿಯಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿರುವ ಜೆಡಿಎಸ್‌ ಮುಖಂಡ ಹೆಚ್. ಡಿ ರೇವಣ್ಣ (HD Revanna) ಅವರು ಇಂದು ಹೈಕೋರ್ಟ್ (High Court) ಮೊರೆ ಹೋಗುವ ಸಾಧ್ಯತೆ ಇದೆ. ಹಗರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಕೂಡ ನೂತನವಾಗಿ ರಚನೆಯಾಗಿರುವ ಎಸ್‌ಐಟಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಕೆ ಸಿಂಗ್‌ ನೇತೃತ್ವದಲ್ಲಿ ನಿನ್ನೆ ಎಸ್‌ಐಟಿ ರಚನೆಯ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಅದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಎಸ್‌ಐಟಿಗೆ ಎಫ್‌ಐಆರ್ ವರ್ಗಾವಣೆ ಸಾಧ್ಯತೆ ಇದೆ. ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರ ಮೇಲೂ ಎಫ್‌ಐಆರ್ ದಾಖಲಿಸಲಾಗಿದೆ.

ಮನೆಕೆಲಸದಾಕೆಯೇ ನೀಡಿರುವ ದೂರು ಇದಾಗಿದೆ. ಸಂಸದ ಪ್ರಜ್ವಲ್‌ ರೇವಣ್ಣ ಅವರು ದೇಶ ತೊರೆದು ಜರ್ಮನಿಗೆ ಹೋಗಿದ್ದಾರೆ ಎನ್ನಲಾಗಿದೆ. ಹೆಚ್. ಡಿ ರೇವಣ್ಣ ಇಂದು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಲೈಂಗಿಕ ಕಿರುಕುಳ ಪ್ರಕರಣ ಗಂಭೀರ ಸ್ವರೂಪದ್ದಾದ್ದರಿಂದ, ಎಫ್‌ಐಆರ್‌ಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸಂಭಾವ್ಯ ಬಂಧನ ತಪ್ಪಿಸಲು ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಅಶ್ಲೀಲ ವಿಡಿಯೋ ‌ಪೆನ್‌ಡ್ರೈವ್ ಸೋಶಿಯಲ್‌ ಮೀಡಿಯಾ ಮೂಲಕ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಅಗತ್ಯ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ. ಕೆಲ ಪೆನ್‌ ಡ್ರೈವ್‌ಗಳನ್ನು ಹೊಳೆನರಸೀಪುರ ಪೊಲೀಸರು ವಶಕ್ಕೆ ‌ಪಡೆದಿದ್ದಾರೆ. ಪೆನ್‌ಡ್ರೈವ್‌ಗಳನ್ನು ಎಸ್‌ಐಟಿ‌ ತಂಡಕ್ಕೆ‌ ಹೊಳೆನರಸೀಪುರ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.

ಇನ್ನು ಎಫ್‌ಎಸ್‌ಎಲ್‌ ಪರಿಶೀಲನೆಗೆ ವಿಡಿಯೋ ರೆಕಾರ್ಡ್ ಮಾಡಿರುವ ಮಾಸ್ಟರ್ ಡಿವೈಸ್ ಬೇಕಿರುವ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣ ಅವರ ಫೋನ್‌ ವಶಕ್ಕೆ ಪಡೆಯಬೇಕಿದೆ. ಈ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಇದಕ್ಕಾಗಿ ಪ್ರಜ್ವಲ್ ರೇವಣ್ಣ ಅವರ ಫೋನ್ ಅನ್ನು ಎಸ್ಐಟಿ ತಂಡ ವಶಕ್ಕೆ ಪಡೆಯಲಿದೆ. ಆದರೆ ಈಗಾಗಲೆ ಪ್ರಜ್ವಲ್ ರೇವಣ್ಣ ನಾಟ್‌ ರೀಚಬಲ್‌ ಆಗಿದ್ದು, ತಮ್ಮ ಮೊಬೈಲ್ ಬದಲಾವಣೆ ಮಾಡಿದ್ದಾರೆ ಎಂಬ ಶಂಕೆ ಇದೆ. ಹೀಗಾಗಿ ವಿಡಿಯೋ ರೆಕಾರ್ಡ್ ಆದ‌‌ ಸಂದರ್ಭದ ಫೋನ್‌ ಐಎಂಇಐ ನಂಬರ್ ಕೂಡ ಎಸ್‌ಐಟಿ ಟ್ರ್ಯಾಕ್ ಮಾಡಲಿದೆ.

ಮಹಿಳೆಯಿಂದ ಲೈಂಗಿಕ ದೌರ್ಜನ್ಯ ದೂರು

ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಮಹಿಯೊಬ್ಬರು ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ತಂದೆ-ಮಗ ಇಬ್ಬರ ಮೇಲೂ ಮನೆ ಕೆಲಸದಾಕೆಯೇ ದೂರು ನೀಡಿದ್ದಾಳೆ.

ದೂರಿನಲ್ಲಿ ಏನಿದೆ?

47 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ದೂರುದಾರೆಗೆ ಭವಾನಿ ರೇವಣ್ಣ ಸೋದರತ್ತೆ ಮಗಳು. ಎಚ್‌.ಡಿ. ರೇವಣ್ಣ ಶಾಸಕರಾಗಿದ್ದಾಗ ನಾಗಲಾಪುರ ಹಾಲಿನ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. 2015ರಲ್ಲಿ ರೇವಣ್ಣ ಅವರ ಮನೆಯಲ್ಲೇ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಒಟ್ಟು 6 ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳಿಗೆ ಕೊಠಡಿಗೆ ಬರುವಂತೆ ರೇವಣ್ಣ ಆಹ್ವಾನಿಸಿದ್ದರು.

ಇನ್ನು ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಿದ್ದಾಗ ಎಚ್.ಡಿ. ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸ್ಟೋರ್ ರೂಮ್‌ನಲ್ಲಿ ಹಣ್ಣು ಕೊಡೋ ನೆಪದಲ್ಲಿ ಕೈ ಹಿಡಿದು ಎಳೆದಾಡಿದ್ದರು. ಅದೇ ರೀತಿ ಅಡುಗೆ ಮನೆಯಲ್ಲಿ ಇದ್ದಾಗ ಪ್ರಜ್ವಲ್ ರೇವಣ್ಣ ಹಿಂಬದಿಯಿಂದ ಬಂದು ಮೈ‌ಮುಟ್ಟಿ ಹೊಟ್ಟೆ ಜಿಗುಟುತ್ತಿದ್ದರು. ಜೊತೆಗೆ ಎಣ್ಣೆ ಹಚ್ಚಲು ಪದೇ ಪದೇ ಕರೆದು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮನೆಯಲ್ಲಿದ್ದಾಗ ವಿಡಿಯೋ ಕಾಲ್ ಮಾಡಿ ನನ್ನ ಮಗಳ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದರು. ಇದಕ್ಕೆ ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಕೂಡ ಮಾಡಿದ್ದಳು. ಇದರಿಂದ‌ ಮನೆ ಕೆಲಸ ಬಿಟ್ಟು ಹೊರಗಡೆ ಬಂದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ.

ಈಗ ಕೆಲ ವಿಡಿಯೊಗಳು ವೈರಲ್ ಆಗುತ್ತಿದ್ದು, ನನ್ನ ಗಂಡ ಶೀಲ ಶಂಕಿಸುತ್ತಿದ್ದಾನೆ. ಇದರಿಂದ ಮನನೊಂದು ದೂರು ನೀಡುತ್ತಿರೋದಾಗಿ 47 ವರ್ಷದ ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಮಹಿಳೆ ದೂರಿನನ್ವಯ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ಇಬ್ಬರ ಮೇಲೂ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ | Hassan Pen Drive Case: ಹಾಸನ ಅಶ್ಲೀಲ ವಿಡಿಯೊ ಪ್ರಕರಣ; ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆ

Continue Reading

ಕ್ರೀಡೆ

Kane Williamson : ನ್ಯೂಜಿಲ್ಯಾಂಡ್ ವಿಶ್ವ ಕಪ್​ ತಂಡಕ್ಕೆಕೇನ್​ ವಿಲಿಯಮ್ಸನ್​ ನಾಯಕ

Kane Williamson: ನ್ಯೂಜಿಲ್ಯಾಂಡ್​​ನ ಆಯ್ಕೆದಾರ ಸ್ಯಾಮ್ ವೆಲ್ಸ್ ಬಹಿರಂಗಪಡಿಸಿದ ಅಧಿಕೃತ ತಂಡದ ಪ್ರಕಟಣೆಯಲ್ಲಿ, ಕೇನ್ ವಿಲಿಯಮ್ಸನ್ ನಾಯಕನಾಗಿ ತಮ್ಮ ನಾಲ್ಕನೇ ಟಿ 20 ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಅವರ ಒಟ್ಟು ಆರು ಬಾರಿ ಆಡಿದ್ದಾರೆ. ಅವರ ನಾಯಕತ್ವದ ಗುಣಗಳು ಮತ್ತು ಅನುಭವವು ನ್ಯೂಜಿಲ್ಯಾಂಡ್​ಗೆ ಅಮೂಲ್ಯ ಆಸ್ತಿ ಎಂದು ಹೇಳಿದ್ದಾರೆ.

VISTARANEWS.COM


on

Kane Williamson
Koo

ನವದೆಹಲಿ: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ಜೂನ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್​​ನಲ್ಲಿ ಅನುಭವ ಹೊಂದಿರುವ ನ್ಯೂಜಿಲ್ಯಾಂಡ್​ ತಂಡವನ್ನು ನಾಲ್ಕನೇ ಟಿ20 ವಿಶ್ವ ಕಪ್​ನಲ್ಲಿ ಮುನ್ನಡೆಸಲಿದ್ದಾರೆ.

ನ್ಯೂಜಿಲ್ಯಾಂಡ್​​ನ ಆಯ್ಕೆದಾರ ಸ್ಯಾಮ್ ವೆಲ್ಸ್ ಬಹಿರಂಗಪಡಿಸಿದ ಅಧಿಕೃತ ತಂಡದ ಪ್ರಕಟಣೆಯಲ್ಲಿ, ಕೇನ್ ವಿಲಿಯಮ್ಸನ್ ನಾಯಕನಾಗಿ ತಮ್ಮ ನಾಲ್ಕನೇ ಟಿ 20 ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಅವರ ಒಟ್ಟು ಆರು ಬಾರಿ ಆಡಿದ್ದಾರೆ. ಅವರ ನಾಯಕತ್ವದ ಗುಣಗಳು ಮತ್ತು ಅನುಭವವು ನ್ಯೂಜಿಲ್ಯಾಂಡ್​ಗೆ ಅಮೂಲ್ಯ ಆಸ್ತಿ ಎಂದು ಹೇಳಿದ್ದಾರೆ.

ಟಿ 20 ವಿಶ್ವಕಪ್ ತಂಡದ ಅನುಭವಿಗಳ ಸಾಲಿನಲ್ಲಿ ವಿಲಿಯಮ್ಸನ್ ಒಬ್ಬರೇ ಅಲ್ಲ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಿಮ್ ಸೌಥಿ ಆಡಲಿದ್ದಾರೆ ಅವರು ಜಾಗತಿಕ ಟೂರ್ನಿಗೆ ಏಳನೇ ಬಾರಿಗೆ ಆಯ್ಕೆಯಾಗಿದ್ದಾರೆ. ಟ್ರೆಂಟ್ ಬೌಲ್ಟ್ ಐದು ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಅನುಭವಿ ಎಡಗೈ ಬೌಲರ್ ಸೇರಿದಂಥೆ ಮೂವರು ನ್ಯೂಜಿಲೆಂಡ್ ತಂಡದ ಪ್ರಬಲ ಶಕ್ತಿಯಾಗಿದ್ದಾರೆ.

ಟಿ 20 ವಿಶ್ವ ಕಪ್​ನಲ್ಲಿ ಹೊಂದಾಣಿಕೆ ಕೀಲಿ

ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿನ ವೈವಿಧ್ಯಮಯ ಆಟದ ಪರಿಸ್ಥಿತಿಗಳನ್ನು ಗುರುತಿಸಿ, ಆಯ್ಕೆದಾರರು ಹೊಂದಾಣಿಕೆಗೆ ಆದ್ಯತೆ ನೀಡಿದ್ದಾರೆ. ಆಯ್ಕೆಯಾದ ಹದಿನೈದು ಆಟಗಾರರಲ್ಲಿ ಹದಿಮೂರು ಮಂದಿ 2022 ರಲ್ಲಿ ತಂಡದ ಇತ್ತೀಚಿನ ವೆಸ್ಟ್ ಇಂಡೀಸ್ ಪ್ರವಾಸದ ಭಾಗವಾಗಿದ್ದರು, ಇದು ಅವರಿಗೆ ನೆರವಾಗಲಿದೆ.

ಇದನ್ನೂ ಓದಿ:

ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ 20 ಯಲ್ಲಿ ಆರು ಆಟಗಾರರು ಸ್ಪರ್ಧಿಸಿದ್ದಾರೆ. ಇದು ಕೆರಿಬಿಯನ್ ಪಿಚ್​ಗಳ ಬಗ್ಗೆ ಅವರ ಜ್ಞಾನ ಮತ್ತಷ್ಟು ಹೆಚ್ಚಿಸಿದೆ.

ಅನುಭವವು ಪ್ರಮುಖ ಅಂಶವಾಗಿದ್ದರೂ, ತಂಡವು ಹೊಸ ಮುಖಗಳನ್ನು ಸ್ವಾಗತಿಸಲಿದೆ. ಭರವಸೆಯ ಬೌಲರ್ ಮ್ಯಾಟ್ ಹೆನ್ರಿ ಮತ್ತು ಬ್ಯಾಟಿಂಗ್ ಆಲ್ರೌಂಡರ್ ರಚಿನ್ ರವೀಂದ್ರ ಮಾತ್ರ ಟಿ20 ವಿಶ್ವಕಪ್ ತಂಡದಲ್ಲಿದ್ದಾರೆ. ಅವರ ಸೇರ್ಪಡೆಯು ಯುವ ಪ್ರತಿಭೆಗಳನ್ನು ಪೋಷಿಸುವ ಬ್ಲ್ಯಾಕ್ ಕ್ಯಾಪ್ಸ್ ನ ಬದ್ಧತೆಯಾಗಿದೆ.

Continue Reading

ಕರ್ನಾಟಕ

PM Narendra Modi: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

PM Narendra Modi: ನರೇಂದ್ರ ಮೋದಿ ಅವರು ಸೋಮವಾರ ಬಾಗಲಕೋಟೆಯಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಬಾಗಲಕೋಟೆಯ ನವನಗರದಲ್ಲಿ 100 ಎಕರೆ ಪ್ರದೇಶದಲ್ಲಿ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ. ಹಾಗೆಯೇ, ಭದ್ರತಾ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ.

VISTARANEWS.COM


on

PM Narendra Modi
Koo

ಬಾಗಲಕೋಟೆ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಭಾನುವಾರ (ಏಪ್ರಿಲ್‌ 28) ಕರ್ನಾಟಕದ (Karnataka) ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ವಿಜಯನಗರ ಜಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರವೂ (ಏಪ್ರಿಲ್‌ 29) ಬಾಗಲಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಬಾಗಲಕೋಟೆಯ ನವನಗರದಲ್ಲಿ 100 ಎಕರೆ ಪ್ರದೇಶದಲ್ಲಿ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ನರೇಂದ್ರ ಮೋದಿ ಅವರು ಬಾಗಲಕೋಟೆಗೆ ಆಗಮಿಸಲಿದ್ದಾರೆ. ಮೋದಿ ಭಾಷಣಕ್ಕಾಗಿ 90/100 ಅಡಿ ಮುಖ್ಯ ವೇದಿಕೆ ಪೆಂಡಾಲು ಹಾಕಲಾಗಿದೆ. 60/40 ಅಡಿಯ ಮುಖ್ಯ ವೇದಿಕೆಯಲ್ಲಿ, 32 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಾದ ಕಾರಣ ವೇದಿಕೆ ಹವಾನಿಯಂತ್ರಿತವಾಗಿ ಇರಲಿದೆ. ಇನ್ನು ಸಾರ್ವಜನಿಕರಿಗೆ 400 ಅಡಿ ಅಗಲ, 600 ಅಡಿ ಉದ್ದದ ಬೃಹತ್ ಪೆಂಡಾಲ್ ವೇದಿಕೆ ನಿರ್ಮಿಸಲಾಗಿದೆ. ಜರ್ಮನ್ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗಿದೆ.

ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್‌ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ್‌ ಜಿಗಜಿಣಗಿ ಪರವಾಗಿ ಪ್ರಧಾನಿ ಮತಯಾಚನೆ ಮಾಡಲಿದ್ದಾರೆ. ಒಟ್ಟು 70ರ ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ 1,100ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಮೂವರು ಎಸ್‌ಪಿ, ನಾಲ್ವರು ಎಎಸ್‌ಪಿ, 12 ಡಿಎಸ್‌ಪಿ, 32 ಸಿಪಿಐ, 88 ಪಿಎಸ್‌ಐ, 1,049 ಪೊಲೀಸ್‌ ಪೇದೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ವೇದಿಕೆ ಬಲಭಾಗ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

ಮೋದಿ ಅವರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಸುಮಾರು 2 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಿದ ನರೇಂದ್ರ ಮೋದಿ ಅವರು ಹೊಸಪೇಟೆಯಲ್ಲಿಯೇ ಉಳಿದುಕೊಂಡಿದ್ದಾರೆ. ಪ್ರಚಾರದುದ್ದಕ್ಕೂ ಕೇಂದ್ರ ಸರ್ಕಾರದ ಸಾಧನೆ ಜತೆಗೆ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

Continue Reading

ಪ್ರಮುಖ ಸುದ್ದಿ

PM Narendra Modi: ಸಂಪತ್ತು ಮರುಹಂಚಿಕೆಯ ರಾಹುಲ್ ಗಾಂಧಿ ಐಡಿಯಾ ನಗರ ನಕ್ಸಲ್ ಚಿಂತನೆ: ಪಿಎಂ ಮೋದಿ

PM Narendra Modi: “ಅವರ ಪ್ರಕಾರ ಎಕ್ಸ್-ರೇ ಎಂದರೆ ಪ್ರತಿ ಮನೆಯ ಮೇಲೆ ದಾಳಿ ಮಾಡುವುದು. ಯಾವುದೇ ಮಹಿಳೆ ಧಾನ್ಯಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರೆ, ಅದನ್ನು ಕೂಡ ಎಕ್ಸ್-ರೇ ಮಾಡಲಾಗುವುದು. ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗುವುದು. ಭೂ ದಾಖಲೆಗಳನ್ನು ಪರಿಶೀಲಿಸಲಾಗುವುದು. ಮತ್ತು ಅವುಗಳನ್ನು ಮರುಹಂಚಿಕೆ ಮಾಡಲಾಗುವುದು” ಎಂದು ಪಿಎಂ ಮೋದಿ ಆಪಾದಿಸಿದ್ದಾರೆ.

VISTARANEWS.COM


on

PM Not OBC Said by Rahul Gandhi and BJP hits back to him
Koo

ಹೊಸದಿಲ್ಲಿ: ಸಂಪತ್ತಿನ ಮರು ಹಂಚಿಕೆಯ (wealth redistribution) ಕುರಿತು ರಾಹುಲ್‌ ಗಾಂಧಿಯವರ ಐಡಿಯಾ ʼನಗರ ನಕ್ಸಲ್‌ʼ (Urban naxal) ಚಿಂತನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಿಡಿ ಕಾರಿದ್ದಾರೆ. ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ (PM Modi interview) ಅವರು ಇದನ್ನು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ (Congress manifesto) ಉಲ್ಲೇಖಿಸಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು (social-economic survey) ಸಮರ್ಥಿಸಿಕೊಂಡಿದ್ದು, ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. “ಅವರ ಪ್ರಕಾರ ಎಕ್ಸ್-ರೇ ಎಂದರೆ ಪ್ರತಿ ಮನೆಯ ಮೇಲೆ ದಾಳಿ ಮಾಡುವುದು. ಯಾವುದೇ ಮಹಿಳೆ ಧಾನ್ಯಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರೆ, ಅದನ್ನು ಕೂಡ ಎಕ್ಸ್-ರೇ ಮಾಡಲಾಗುವುದು. ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗುವುದು. ಭೂ ದಾಖಲೆಗಳನ್ನು ಪರಿಶೀಲಿಸಲಾಗುವುದು. ಮತ್ತು ಅವುಗಳನ್ನು ಮರುಹಂಚಿಕೆ ಮಾಡಲಾಗುವುದು. ಈ ಮಾವೋವಾದಿ ಸಿದ್ಧಾಂತವು ಜಗತ್ತಿಗೆ ಎಂದಿಗೂ ಸಹಾಯ ಮಾಡಿಲ್ಲ. ಇದು ಸಂಪೂರ್ಣವಾಗಿ ‘ಅರ್ಬನ್ ನಕ್ಸಲ್’ ಚಿಂತನೆ” ಎಂದು ಪ್ರಧಾನಿ ಹೇಳಿದರು.

“ಸಾಮಾನ್ಯವಾಗಿ ಮಾತನಾಡುತ್ತಲೇ ಇರುವ ಜಮಾತ್ 10 ದಿನಗಳ ನಂತರವೂ ಪ್ರಣಾಳಿಕೆಯ ಬಗ್ಗೆ ಮೌನವಾಗಿದೆ. ಏಕೆಂದರೆ ಅದು ಅವರಿಗೆ ಸಹಾಯ ಮಾಡುತ್ತದೆ. ಕಾಂಗ್ರೆಸನ್ನು ರಕ್ಷಿಸಲು ಅವರು ಮೌನವಾಗಿದ್ದಾರೆ. ಕಾಂಗ್ರೆಸ್‌ನವರು ನಿಮ್ಮನ್ನು ಲೂಟಿ ಮಾಡಲು ಯೋಜಿಸುತ್ತಿದ್ದಾರೆ ಎಂದು ದೇಶವನ್ನು ಜಾಗೃತಗೊಳಿಸುವುದು ನನ್ನ ಜವಾಬ್ದಾರಿ. ಅವರ ಕಾರ್ಯಯೋಜನೆಯ ಮುಂದಿನ ಭಾಗವೆಂದರೆ, ದೇಶದ ಸಂಪನ್ಮೂಲಗಳ ಮೊದಲ ಹಕ್ಕು ಯಾರಿಗೆ ಇದೆ ಎಂದು ಡಾ.ಮನಮೋಹನ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ” ಎಂದಿದ್ದಾರೆ ಪಿಎಂ.

“ವಿವಾದಿತ ಪಿತ್ರಾರ್ಜಿತ ತೆರಿಗೆಯನ್ನು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ ಮತ್ತು ಬಿಜೆಪಿ ಅದನ್ನು ಜಾರಿಗೊಳಿಸುವ ಅಥವಾ ಪರಿಗಣಿಸುವ ಯಾವುದೇ ಯೋಜನೆ ಹೊಂದಿಲ್ಲ. ಅವರ ಮಹಾಶಯರೊಬ್ಬರು (ರಾಹುಲ್‌ ಗಾಂಧಿ) ಅಮೇರಿಕಾದಲ್ಲಿ ಸಂದರ್ಶನವನ್ನು ನೀಡಿದಾಗ ಅವರು ಪಿತ್ರಾರ್ಜಿತ ತೆರಿಗೆಯ ವಿಷಯವನ್ನು ಪ್ರಸ್ತಾಪಿಸಿದರು. ನಿಮ್ಮ ಆಸ್ತಿಯ ಮೇಲೆ ಸುಮಾರು 55 ಪ್ರತಿಶತ ತೆರಿಗೆ ವಿಧಿಸಲಾಗುತ್ತದೆ. ಈಗ ನಾನು ಅಭಿವೃದ್ಧಿ ಮತ್ತು ಪರಂಪರೆಯ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಅವರು ಆ ಪರಂಪರೆಯನ್ನು ಲೂಟಿ ಮಾಡುವ ಮಾತನಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಮಾಡುವುದೇ ಅವರ ಇಂದಿನ ಇತಿಹಾಸ. ದೇಶವನ್ನು ಆ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ದೇಶವಾಸಿಗಳಿಗೆ ತಿಳಿಸುವುದು ನನ್ನ ಜವಾಬ್ದಾರಿಯಾಗಿದೆ. ನೀವು ಅವರ ಜೊತೆ ಹೋಗಬೇಕೆ ಅಥವಾ ಬೇಡವೇ ಎಂದು ಈಗ ನೀವು ನಿರ್ಧರಿಸಿ” ಎಂದು ಮೋದಿ ನುಡಿದರು.

ಪಿತ್ರಾರ್ಜಿತ ತೆರಿಗೆ (Inheritance tax) ಕುರಿತು ಬಿಜೆಪಿ ನಿಲುವನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. “ಭಾರತೀಯ ಜನತಾ ಪಕ್ಷ ಏನು ಮಾಡಲು ಯೋಜಿಸಿದೆ ಎಂಬುದನ್ನು ನಮ್ಮ ಪ್ರಣಾಳಿಕೆಯಲ್ಲಿ ಬರೆಯಲಾಗಿದೆ. ಅವರ ಯೋಜನೆಯನ್ನು ನಾವು ಮುಂದುವರಿಸುವುದಿಲ್ಲ. ನಾವು ನಮ್ಮ ಪ್ರಣಾಳಿಕೆ ಮತ್ತು ಕೆಲಸಗಳೊಂದಿಗೆ ದೇಶದ ಮುಂದೆ ಹೋಗುತ್ತೇವೆ. ದಯವಿಟ್ಟು ಅವರ ಆಲೋಚನೆಗಳನ್ನು ನಮ್ಮ ಮೇಲೆ ಹೇರಬೇಡಿ” ಎಂದು ಅವರು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದರು.

ಕಾಂಗ್ರೆಸ್‌ನ ಸಾಗರೋತ್ತರ ವಿಭಾಗದ ಅಧ್ಯಕ್ಷ ಪಿತ್ರೋಡಾ ಅವರು ಸಂಪತ್ತಿನ ಮರುಹಂಚಿಕೆಯ ಕುರಿತು ಮಾತನಾಡುತ್ತ, ಯುಎಸ್‌ನಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆಯ ಬಗ್ಗೆ ಉಲ್ಲೇಖಿಸಿ ವಿವಾದವನ್ನು ಹುಟ್ಟುಹಾಕಿದ್ದರು. ಈ ಮಾತುಗಳು ಬಿಜೆಪಿಗೆ ಮೇವು ಒದಗಿಸಿದ್ದು, ಕಾಂಗ್ರೆಸ್‌ ಕಂಗಾಲಾಗಿದೆ. ಉತ್ತರಾಧಿಕಾರ ತೆರಿಗೆಯು, ಮೃತ ವ್ಯಕ್ತಿಯ ಹಣ ಮತ್ತು ಆಸ್ತಿಯ ಒಟ್ಟು ಮೌಲ್ಯದ ಮೇಲೆ ವಿಧಿಸುವ ತೆರಿಗೆಯಾಗಿದ್ದು, ಅದನ್ನು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವಿತರಿಸಲಾಗುತ್ತದೆ. ಭಾರತದಲ್ಲಿ ಅಂತಹ ವ್ಯವಸ್ಥೆ ಇಲ್ಲ.

“ನಾನು ಮೊದಲ ದಿನವೇ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಕಾಮೆಂಟ್ ಮಾಡಿದ್ದೆ. ಪ್ರಣಾಳಿಕೆ ನೋಡಿದ ಮೇಲೆ ಅದರಲ್ಲಿ ಮುಸ್ಲಿಂ ಲೀಗ್‌ನ ಮುದ್ರೆ ಇದೆ ಎಂದು ಅನಿಸುತ್ತಿದೆ. ಮಾಧ್ಯಮದವರು ಬೆಚ್ಚಿ ಬೀಳುತ್ತಾರೆ ಎಂದುಕೊಂಡೆ. ಆದರೆ ಅವರು ಕಾಂಗ್ರೆಸ್ ಪ್ರಸ್ತುತಪಡಿಸಿದ್ದನ್ನು ಹೇಳುತ್ತಲೇ ಇದ್ದಾರೆ. ಪ್ರಣಾಳಿಕೆಯಲ್ಲಿನ ಕೆಡುಕುಗಳನ್ನು ಯಾರಾದರೂ ಹೊರತರುತ್ತಾರೆ ಎಂದು ನಾನು 10 ದಿನಗಳವರೆಗೆ ಕಾಯುತ್ತಿದ್ದೆ. ಏಕೆಂದರೆ ಅದನ್ನು ಪಕ್ಷಪಾತವಿಲ್ಲದ ರೀತಿಯಲ್ಲಿ ಹೊರತಂದರೆ ಒಳ್ಳೆಯದು. ಅಂತಿಮವಾಗಿ ನಾನು ಈ ಸತ್ಯಗಳನ್ನು ಹೊರತರಲೇಬೇಕಾಯಿತು” ಎಂದು ಪಿಎಂ ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

Continue Reading
Advertisement
hd revanna prajwal revanna
ಪ್ರಮುಖ ಸುದ್ದಿ3 mins ago

Hasan Pen Drive Case: ಎಲ್ಲೂ ಕಾಣದ ಪ್ರಜ್ವಲ್‌, ಇಂದು ಎಚ್‌ಡಿ ರೇವಣ್ಣ ಹೈಕೋರ್ಟ್‌ ಮೊರೆ

ವಿದೇಶ14 mins ago

Stab wound: ಗರ್ಲ್‌ಫ್ರೆಂಡ್‌ನ ಚುಚ್ಚಿ ಕೊಲ್ಲೋ ಮುನ್ನ ಗೂಗಲ್‌ ಸರ್ಚ್‌ ಮಾಡಿದ್ದ ಹಂತಕ!

Actress Haripriya Vasishta Simha Buys A Swanky New SUV Car
ಸ್ಯಾಂಡಲ್ ವುಡ್45 mins ago

Actress Haripriya: ಐಷಾರಾಮಿ ಕಾರು ಖರೀದಿಸಿದ ʻಸಿಂಹಪ್ರಿಯಾʼ! ಬೆಲೆ ಎಷ್ಟು?

Kane Williamson
ಕ್ರೀಡೆ46 mins ago

Kane Williamson : ನ್ಯೂಜಿಲ್ಯಾಂಡ್ ವಿಶ್ವ ಕಪ್​ ತಂಡಕ್ಕೆಕೇನ್​ ವಿಲಿಯಮ್ಸನ್​ ನಾಯಕ

PM Narendra Modi
ಕರ್ನಾಟಕ46 mins ago

PM Narendra Modi: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

PM Not OBC Said by Rahul Gandhi and BJP hits back to him
ಪ್ರಮುಖ ಸುದ್ದಿ1 hour ago

PM Narendra Modi: ಸಂಪತ್ತು ಮರುಹಂಚಿಕೆಯ ರಾಹುಲ್ ಗಾಂಧಿ ಐಡಿಯಾ ನಗರ ನಕ್ಸಲ್ ಚಿಂತನೆ: ಪಿಎಂ ಮೋದಿ

ವೈರಲ್ ನ್ಯೂಸ್1 hour ago

Viral Video: ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು; ವಿಡಿಯೋ ವೈರಲ್‌

tomato price rise
ಕರ್ನಾಟಕ2 hours ago

Tomato Price: ಗ್ರಾಹಕನ ಜೇಬು ಸುಡಲು ಟೊಮ್ಯಾಟೊ ಸಜ್ಜು, ಬಾಕ್ಸ್‌ಗೆ 400 ರೂಪಾಯಿಗೆ ಬೆಲೆ ಏರಿಕೆ

srinivasa prasad
ಪ್ರಮುಖ ಸುದ್ದಿ2 hours ago

Srinivasa Prasad passes away‌: 7 ಬಾರಿ ಸಂಸದರಾಗಿದ್ದ ಸ್ವಾಭಿಮಾನಿ, ದಕ್ಷಿಣ ಕರ್ನಾಟಕದ ʼದಲಿತ ಸೂರ್ಯʼ

ಕರ್ನಾಟಕ2 hours ago

Srinivas Prasad: ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಧಿವಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ5 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202417 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202419 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202421 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202421 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌